All posts by nagaraj11081993

ಕಾಂಗ್ರೆಸ್ ಸರ್ಕಾರ ವರ್ಷದೊಳಗೆ ಪತನಗೊಳ್ಳಲಿದೆ, ಇದು ದೆಹಲಿ ಮಟ್ಟದಿಂದ ಬಂದಿರುವ ಪಕ್ಕಾ ಮಾಹಿತಿ ಎಂದ ಶಾಸಕ ಸಮೃದ್ಧಿ ಮಂಜುನಾಥ್ – Kannada News

ಕೋಲಾರ, ಜೂ.6: ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಅವರು ಕಾಂಗ್ರೆಸ್ ಸರ್ಕಾರ ಕುರಿತು ಗಂಭೀರ ಆರೋಪಗಳನ್ನು ಮಾಡಿದ್ದು, ಮುಂದಿನ ಒಂದು ವರ್ಷದೊಳಗೆ ಸರ್ಕಾರ ಪತನಗೊಳ್ಳಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ದೆಹಲಿಯಿಂದ ಬಂದ ಮಾಹಿತಿ ಬಂದಿದೆ ಎಂದು ಹೇಳಿದ್ದಾರೆ.  ಕಾಂಗ್ರೆಸ್ ಸರ್ಕಾರದಲ್ಲಿ ವಿಕೆಟ್ ಮೇಲೆ ವಿಕೆಟ್ ಉರುಳುತ್ತಿದ್ದು, ಇದು ಸರ್ಕಾರದೊಳಗಿನ ಆಂತರಿಕ ಭಿನ್ನಾಭಿಪ್ರಾಯ ಮತ್ತು ಅಸಮಾಧಾನವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ. ಕೆ.ಎಚ್. ಮುನಿಯಪ್ಪ ಅವರಂತಹ ಹಿರಿಯ ನಾಯಕರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು ಕೂಡ ಕಾಂಗ್ರೆಸ್​​​ನಿಂದ ದೂರು ಹೋಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಈಗಾಗಲೇ ಸಚಿವ ರಾಮಲಿಂಗಾರೆಡ್ಡಿ ಸಹ ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಆಗುತ್ತಿದೆ ಎಂದು ಹೇಳಿಕೆ ನೀಡಿರುವುದನ್ನು ಮಂಜುನಾಥ್ ನೆನಪಿಸಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಹಿರಿಯ ನಾಯಕರಿಗೆ ಸೂಕ್ತ ಮರ್ಯಾದೆ ಸಿಗುತ್ತಿಲ್ಲ, ಅವರಿಗೆ ಅವಮಾನವಾಗುತ್ತಿದೆ ಎಂದು  ಶಾಸಕ ಸಮೃದ್ಧಿ ಮಂಜುನಾಥ್  ಹೇಳಿದ್ದಾರೆ.

ಅನುದಾನ ಹಂಚಿಕೆಯಲ್ಲಿ ತಾರತಮ್ಯ ನಡೆಯುತ್ತಿದೆ. ಕೆಲವರಿಗೆ ಮೆಚ್ಚುಗೆಗಾಗಿ ಅನುದಾನ ನೀಡಲಾಗುತ್ತಿದ್ದು, ಉಳಿದವರನ್ನು ಕಡೆಗಣಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಮತ ಕೇಳಲು ಹೋದರೆ, ಜನ ಮೂರು ವರ್ಷವೂ ಆಗಿಲ್ಲ ಮತ್ತೆ ಚುನಾವಣೆಯೇ ಎಂದು ಪ್ರಶ್ನಿಸುತ್ತಾರೆ.  ಅಭಿವೃದ್ಧಿ ಇಲ್ಲ, ಅನುದಾನ ಇಲ್ಲದ ಕಾರಣ ಜನರು ಬೇಸರಗೊಂಡಿದ್ದಾರೆ ಎಂದು ಮಂಜುನಾಥ್ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಅಧಿಕಾರಕ್ಕೆ ಬಂದ ನಂತರ ಸರ್ಕಾರವು ಅಗ್ನಿಪರೀಕ್ಷೆ ಎದುರಿಸುತ್ತಿದೆ ಎಂದು ಮಂಜುನಾಥ್ ಹೇಳಿದ್ದಾರೆ. ಸರ್ಕಾರದಲ್ಲಿ ಸೀನಿಯರ್ ನಾಯಕರಿಗೆ ಅಗೌರವ ತೋರಲಾಗುತ್ತಿದ್ದು, ಇದನ್ನು ಆದಷ್ಟು ಬೇಗ ನಿಲ್ಲಿಸಬೇಕು. ಇಲ್ಲವಾದಲ್ಲಿ ವಿಕೆಟ್ ಮೇಲೆ ವಿಕೆಟ್ ಬೀಳುತ್ತಾ ಹೋಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ:

ಮುಖ್ಯಾಂಶಗಳು:

ಕಾಂಗ್ರೆಸ್ ಸರ್ಕಾರ ಕುರಿತು ಗಂಭೀರ ಆರೋಪ ಮಾಡಿದ ಶಾಸಕ ಸಮೃದ್ಧಿ ಮಂಜುನಾಥ್

ಒಂದು ವರ್ಷದೊಳಗೆ ಸರ್ಕಾರ ಪತನಗೊಳ್ಳಲಿದೆ ಎಂದು ಭವಿಷ್ಯ

ಕಾಂಗ್ರೆಸ್ ಸರ್ಕಾರದಲ್ಲಿ ಹಿರಿಯ ನಾಯಕರಿಗೆ ಸೂಕ್ತ ಮರ್ಯಾದೆ ಸಿಗುತ್ತಿಲ್ಲ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರಕ್ಕೆ ಬಂದ ನಂತರ ಸರ್ಕಾರಕ್ಕೆ “ಅಗ್ನಿಪರೀಕ್ಷೆ”

ಇದನ್ನೂ ಓದಿ: ಸಿಎಂ ಡಿಕೆ ಶಿವಕುಮಾರ್​​​ ಹೇಳಿದ ಆ ಒಂದು ಮಾತು ನನ್ನ ನಿರ್ಧಾರ ಬದಲಿಸಿದೆ ಎಂದ ರಾಮಲಿಂಗಾರೆಡ್ಡಿ

ಕೋಲಾರ ಜಿಲ್ಲೆಯ ಅಭಿವೃದ್ಧಿ ಕುರಿತು ಮಾತನಾಡಿದ ಸಮೃದ್ಧಿ ಮಂಜುನಾಥ್ , ಜಿಲ್ಲೆಯ ನಾಡಿಮಿಡಿತ ಗೊತ್ತಿಲ್ಲದವರನ್ನು ಉಸ್ತುವಾರಿ ಸಚಿವರನ್ನಾಗಿ ಮಾಡಿದ್ದರಿಂದ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಿದೆ ಎಂದು ಆರೋಪಿಸಿದ್ದಾರೆ. ಕೋಲಾರ ಜಿಲ್ಲೆಗೆ ನ್ಯಾಯ ಸಿಗಬೇಕಾದರೆ, ಜಿಲ್ಲೆಯ ಬಗ್ಗೆ ಸಮಗ್ರ ಅರಿವಿರುವ ಸ್ಥಳೀಯ ಶಾಸಕರೊಬ್ಬರನ್ನು ಸಚಿವರನ್ನಾಗಿ ಮಾಡಬೇಕು ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ ಅವರಿಗೆ ಮನವಿ ಮಾಡಿದ್ದಾರೆ. ಇದು ಕೋಲಾರ ಜಿಲ್ಲೆಯ ಅಭಿವೃದ್ಧಿಗೆ ನಿರ್ಣಾಯಕವಾಗಲಿದೆ ಎಂದು ಅವರು ಒತ್ತಿಹೇಳಿದ್ದಾರೆ. ಹಿಂದೆ ಹೊರಗಿನವರು ಸಚಿವರಾಗಿ ಒನ್‌ ವೇ ರಾಜಕೀಯ ಮಾಡಿದ್ದಾರೆ. ಅದರಿಂದ ಜಿಲ್ಲೆಗೆ ಪ್ರಯೋಜನವಾಗಿಲ್ಲ ಎಂದು ಮಂಜುನಾಥ್ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೋಲಾರ ಜಿಲ್ಲೆಯ ಮೂರು-ನಾಲ್ಕು ಜನ ಸಮರ್ಥ ಶಾಸಕರಲ್ಲಿ ಒಬ್ಬರನ್ನು ಸಚಿವರನ್ನಾಗಿ ಮಾಡಿದರೆ, ಜಿಲ್ಲೆಗೆ ನ್ಯಾಯ ಸಿಕ್ಕಂತಾಗುತ್ತದೆ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

World Food Safety Day 2026: ಉತ್ತಮ ಆರೋಗ್ಯಕ್ಕಾಗಿ ಸೇವಿಸಿ ಶುದ್ಧ, ಸುರಕ್ಷಿತ ಆಹಾರ – Kannada News

ವಿಶ್ವ ಆಹಾರ ಸುರಕ್ಷತಾ ದಿನImage Credit source: vecteezy

ನೀರು, ಗಾಳಿಯಂತೆ ನಮ್ಮ ಬದುಕಿಗೆ ಆಹಾರ (Food) ತುಂಬಾನೇ ಮುಖ್ಯ. ನಾವು ಆಹಾರವೇನೋ ಸೇವನೆ ಮಾಡುತ್ತೇವೆ. ಆದರೆ ಇಂದಿನ ದಿನಗಳಲ್ಲಿ ನಾವುಗಳು ಕಲ್ಮಶ, ರಾಸಯನಿಕಯುಕ್ತ ಹಾಗೂ ಕಳಪೆ ಗುಣಮಟ್ಟದ ಆಹಾರವನ್ನು ಸೇವನೆ ಮಾಡುತ್ತಿದ್ದೇವೆ. ಕಳಪೆ ಗುಣಮಟ್ಟದ ಆಹಾರ ಸೇವನೆಯಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತವೆ. ಆಹಾರದ ವಿಷಯದಲ್ಲಿ ನಾವು ತೋರುವ ಸಣ್ಣ ನಿರ್ಲಕ್ಷ್ಯವೂ ಜೀವಕ್ಕೆ ಮಾರಕವಾಗಬಹುದು. ಹೌದು ಕಳಪೆ ಗುಣಮಟ್ಟದ ಆಹಾರ ಫುಡ್‌ ಪಾಯಿಸನ್‌, ಅತಿಸಾರ ಮತ್ತು ಕ್ಯಾನ್ಸರ್ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಕಾರಣವಾಗಬಹುದು.  ಹಾಗಾಗಿ ಶುದ್ಧ ಮತ್ತು ಆರೋಗ್ಯಕರ ಆಹಾರದ ಮಹತ್ವವನ್ನು ಸಾರಲು, ಆರೋಗ್ಯಕರ ಆಹಾರ ಸೇವನೆ ಎಷ್ಟು ಮುಖ್ಯ ಎಂಬುದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿವರ್ಷ ಜೂನ್‌ 7 ರಂದು ವಿಶ್ವ ಆಹಾರ ಸುರಕ್ಷತಾ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಹಿನ್ನೆಲೆಯೇನು ಎಂಬುದನ್ನು ತಿಳಿಯೋಣ ಬನ್ನಿ.

ವಿಶ್ವ ಆಹಾರ ಸುರಕ್ಷತಾ ದಿನದ ಇತಿಹಾಸವೇನು?

ವಿಶ್ವ ಆಹಾರ ಸುರಕ್ಷತಾ ದಿನವನ್ನು ಮೊದಲು ಜೂನ್ 7, 2019 ರಂದು ಆಚರಿಸಲಾಯಿತು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಡಿಸೆಂಬರ್ 2018 ರಲ್ಲಿ ನಿರ್ಣಯವನ್ನು ಅಂಗೀಕರಿಸುವ ಮೂಲಕ ಈ ದಿನವನ್ನು ಅಧಿಕೃತವಾಗಿ ಗುರುತಿಸಿತು. ಇದು ಜಾಗತಿಕವಾಗಿ ಆಹಾರ ಭದ್ರತೆಯನ್ನು ಉತ್ತೇಜಿಸಲು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (FAO) ಮತ್ತು ವಿಶ್ವ ಆರೋಗ್ಯ ಸಂಸ್ಥೆ (WHO) ಜಂಟಿ ಉಪಕ್ರಮವಾಗಿದೆ. 2019 ರಿಂದ ಈ ದಿನವನ್ನು  ಪ್ರತಿವರ್ಷ ಆಚರಿಸುತ್ತಾ ಬರಲಾಗುತ್ತಿದೆ.

ಇದನ್ನೂ ಓದಿ: ಪರಿಸರವನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ

ವಿಶ್ವ ಆಹಾರ ಸುರಕ್ಷತಾ ದಿನದ ಮಹತ್ವವೇನು?

  • ಸುರಕ್ಷಿತ ಮತ್ತು ಸ್ವಚ್ಛ ಆಹಾರವು ನಮ್ಮ ಆರೋಗ್ಯ ಮತ್ತು ಜೀವನದ ಅಡಿಪಾಯ ಎಂದು ಈ ದಿನ ನಮಗೆ ನೆನಪಿಸುತ್ತದೆ.
  • ವಿಶ್ವ ಆಹಾರ ಸುರಕ್ಷತಾ ದಿನದ ಉದ್ದೇಶ ಎಲ್ಲರಿಗೂ ಸುರಕ್ಷಿತ ಮತ್ತು ಪೌಷ್ಟಿಕ ಆಹಾರ ಲಭ್ಯವಾಗುವಂತೆ ನೋಡಿಕೊಳ್ಳುವುದಾಗಿದೆ.
  • ಬ್ಯಾಕ್ಟೀರಿಯಾ, ವಿಷಕಾರಿ ವಸ್ತುಗಳು, ರಾಸಾಯನಿಕಗಳು ಅಥವಾ ಆಹಾರದಲ್ಲಿನ ಕಲ್ಮಶಗಳು ಫುಡ್‌ ಪಾಯಿಸನ್‌, ಅತಿಸಾರ ಮತ್ತು ಕ್ಯಾನ್ಸರ್ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಕಾರಣವಾಗಬಹುದು. ಉತ್ಪಾದನೆಯಿಂದ ಬಳಕೆಯವರೆಗೆ ಆಹಾರ ಪ್ರಕ್ರಿಯೆಯ ಉದ್ದಕ್ಕೂ ನೈರ್ಮಲ್ಯ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳುವ ಮಹತ್ವದ ಬಗ್ಗೆ ಸರ್ಕಾರಗಳು, ಉತ್ಪಾದನಾ ಕಂಪನಿಗಳು, ವ್ಯಾಪಾರಿಗಳು ಮತ್ತು ಗ್ರಾಹಕರಲ್ಲಿ ಜಾಗೃತಿ ಮೂಡಿಸುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ.
  • ಈ ದಿನವು ಗ್ರಾಹಕರಿಗೆ ಆಹಾರವನ್ನು ಖರೀದಿಸುವಾಗ ಅಥವಾ ತಯಾರಿಸುವಾಗ ನೈರ್ಮಲ್ಯ ಮತ್ತು ಗುಣಮಟ್ಟಕ್ಕೆ ಗಮನ ಕೊಡಲು ಅರಿವು ಮೂಡಿಸುತ್ತದೆ.
  • ವಿಶ್ವ ಆಹಾರ ಸುರಕ್ಷತಾ ದಿನವು ಕೇವಲ ಜಾಗೃತಿಯ ದಿನವಲ್ಲ, ಬದಲಾಗಿ ನಮ್ಮ ಬಗ್ಗೆ, ನಮ್ಮ ಕುಟುಂಬಗಳ ಬಗ್ಗೆ ಮತ್ತು ನಮ್ಮ ಸಮಾಜಕ್ಕೆ ನಮ್ಮ ಜವಾಬ್ದಾರಿಯ ಜ್ಞಾಪನೆಯಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

U-18 Hockey Asia Cup 2026: ಚಿನ್ನ ಗೆದ್ದ ಪುರುಷರ ತಂಡ; ಕಂಚಿಗೆ ಮುತ್ತಿಕ್ಕಿದ ಮಹಿಳಾ ಪಡೆ – Kannada News

ಜಪಾನ್‌ನ ಕಾಕಮಿಗಹರಾದಲ್ಲಿ ನಡೆದ 2026 ರ ಪುರುಷರ 18 ವರ್ಷದೊಳಗಿನವರ ಹಾಕಿ ಏಷ್ಯಾಕಪ್‌ (Hockey U-18 Asia Cup 2026) ಫೈನಲ್‌ ಪಂದ್ಯದಲ್ಲಿ ಭಾರತೀಯ ಜೂನಿಯರ್ ಪುರುಷರ ಹಾಕಿ ತಂಡ ಇತಿಹಾಸ ನಿರ್ಮಿಸಿದೆ. ಭಾರತದ ಯುವ ಹಾಕಿ ಪಡೆ ಅದ್ಭುತ ಪ್ರದರ್ಶನ ನೀಡಿ, ಆತಿಥೇಯ ಜಪಾನ್ ತಂಡವನ್ನು ಅವರದೇ ಅಂಗಳದಲ್ಲಿ 4-1 ಗೋಲುಗಳಿಂದ ಸೋಲಿಸಿ ಪ್ರಶಸ್ತಿಯನ್ನು ಗೆದ್ದು ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ. ತಂಡದ ಈ ಐತಿಹಾಸಿಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಆಶಿಶ್ ತಾನಿ ಪೂರ್ಣಿ, ಫೈನಲ್‌ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಬಾರಿಸಿ ತಂಡವನ್ನು ಚಾಂಪಿಯನ್ ಮಾಡಿದರು.

ಆರಂಭದಲ್ಲೇ ಒತ್ತಡ ಹೇರಿದ ಭಾರತ

ಪಂದ್ಯದ ಆರಂಭದಿಂದಲೂ ಭಾರತ ತಂಡವು ಆತಿಥೇಯರ ಮೇಲೆ ಒತ್ತಡ ಹೇರುತ್ತಲೇ ಇತ್ತು. ಪಂದ್ಯದ ಎರಡನೇ ನಿಮಿಷದಲ್ಲಿ ಭಾರತಕ್ಕೆ ಪೆನಾಲ್ಟಿ ಕಾರ್ನರ್ ಸಿಕ್ಕಿತು, ಅದನ್ನು ಆಶಿಶ್ ತಾನಿ ಪೂರ್ಣಿ (2′) ಅದ್ಭುತವಾಗಿ ಗೋಲಾಗಿ ಪರಿವರ್ತಿಸಿ ಭಾರತಕ್ಕೆ ಆರಂಭದಲ್ಲಿ 1-0 ಮುನ್ನಡೆ ಒದಗಿಸಿದರು. ಮೊದಲ ಕ್ವಾರ್ಟರ್‌ನಲ್ಲಿ ಜಪಾನ್ ಮತ್ತೆ ಚೇತರಿಸಿಕೊಳ್ಳಲು ಪ್ರಯತ್ನಿಸಿತ್ತಾದರೂ ಭಾರತದ ರಕ್ಷಣಾ ಪಡೆ ಪ್ರತಿ ದಾಳಿಯನ್ನು ವಿಫಲಗೊಳಿಸಿತು. ಎರಡನೇ ಕ್ವಾರ್ಟರ್‌ನ ಕೊನೆಯ ನಿಮಿಷಗಳಲ್ಲಿ ಭಾರತ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು.

28ನೇ ನಿಮಿಷದಲ್ಲಿ, ಆಶಿಶ್ ತಾನಿ ಪೂರ್ಣಿ ತಮ್ಮ ಎರಡನೇ ಗೋಲು ಬಾರಿಸಿ ಭಾರತದ ಮುನ್ನಡೆಯನ್ನು 2-0ಕ್ಕೆ ವಿಸ್ತರಿಸಿದರು. ಕೇವಲ ಎರಡು ನಿಮಿಷಗಳ ನಂತರ, ಅಂದರೆ ಪಂದ್ಯದ 30ನೇ ನಿಮಿಷದಲ್ಲಿ ನಾಯಕ ಕೇತನ್ ಕುಶ್ವಾಹ, ಪ್ರಹ್ಲಾದ್ ರಾಜ್‌ಭರ್ ನೀಡಿದ ಅದ್ಭುತ ಪಾಸ್‌ನಲ್ಲಿ ಅದ್ಭುತ ಫೀಲ್ಡ್ ಗೋಲು ಬಾರಿಸಿದರು. ಈ ಮೂಲಕ ಭಾರತ ತಂಡ ಪಂದ್ಯದ ಅರ್ಧಾವಧಿಯಲ್ಲಿ 3-0 ಮುನ್ನಡೆಯನ್ನು ಪಡೆದುಕೊಂಡಿತು. ಮೂರನೇ ಕ್ವಾರ್ಟರ್‌ನಲ್ಲಿಯೂ ಭಾರತದ ಪ್ರಾಬಲ್ಯ ಮುಂದುವರೆಯಿತು. 34ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅನ್ನು ಆಶಿಶ್ (34′) ಗೋಲಾಗಿ ಪರಿವರ್ತಿಸಿದರು, ಇದರಿಂದಾಗಿ ಸ್ಕೋರ್ 4-0ಗೆ ತಲುಪಿತು. ನಾಲ್ಕನೇ ಕ್ವಾರ್ಟರ್‌ನಲ್ಲಿ, ಜಪಾನ್‌ನ ನುಮಾಡಾ ಗಕು (52′) ಪೆನಾಲ್ಟಿ ಸ್ಟ್ರೋಕ್‌ ಮೂಲಕ ತಂಡದ ಪರ ಏಕೈಕ ಗೋಲು ದಾಖಲಿಸಿದರು. ಆದರೆ ಆ ಹೊತ್ತಿಗೆ ಭಾರತದ ಗೆಲುವು ಖಚಿತವಾಗಿತ್ತು.

ಬಹುಮಾನ ಘೋಷಿಸಿದ ಹಾಕಿ ಇಂಡಿಯಾ

ಪುರುಷರ ತಂಡದ ಜೊತೆಗೆ, ಮಹಿಳಾ ತಂಡವೂ ಕಂಚಿನ ಪದಕ ಗೆದ್ದಿತು. ಈ ಅದ್ಭುತ ಪ್ರದರ್ಶನದ ನಂತರ, ಹಾಕಿ ಇಂಡಿಯಾ ಎರಡೂ ತಂಡಗಳಿಗೆ ನಗದು ಬಹುಮಾನವನ್ನು ಘೋಷಿಸಿದೆ. ಚಿನ್ನದ ಪದಕ ಗೆದ್ದ ಭಾರತೀಯ ಅಂಡರ್ -18 ಪುರುಷರ ಹಾಕಿ ತಂಡದ ಪ್ರತಿಯೊಬ್ಬ ಆಟಗಾರನಿಗೆ ತಲಾ 3 ಲಕ್ಷ ಮತ್ತು ಸಹಾಯಕ ಸಿಬ್ಬಂದಿಯ ಪ್ರತಿಯೊಬ್ಬ ಸದಸ್ಯನಿಗೆ ತಲಾ 1.5 ಲಕ್ಷ ನಗದು ಬಹುಮಾನವನ್ನು ನೀಡಿದೆ. ಭಾರತೀಯ ಅಂಡರ್ -18 ಮಹಿಳಾ ಹಾಕಿ ತಂಡದ ಪ್ರತಿಯೊಬ್ಬ ಆಟಗಾರ್ತಿಯರಿಗೆ ತಲಾ 1 ಲಕ್ಷ ಮತ್ತು ಸಹಾಯಕ ಸಿಬ್ಬಂದಿಗೆ ತಲಾ 50,000 ನಗದು ಬಹುಮಾನವನ್ನು ಘೋಷಿಸಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮುಜಾಫರ್‌ಪುರ ಅಗ್ನಿ ದುರಂತ; ಸಾವಿನ ಸಂಖ್ಯೆ 7ಕ್ಕೆ ಏರಿಕೆ, ಆಸ್ಪತ್ರೆ ನೋಂದಣಿ ರದ್ದು, ಮೂವರ ಬಂಧನ – Kannada News

ಮುಜಾಫರ್‌ಪುರ, ಜೂನ್ 6: ಬಿಹಾರದ ಮುಜಾಫರ್‌ಪುರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ (Fire Accident) ಚಿಕಿತ್ಸೆ ಫಲಕಾರಿಯಾಗದೆ ಇಂದು ಮತ್ತೊಬ್ಬ ರೋಗಿ ಮೃತಪಟ್ಟಿದ್ದಾರೆ. ಇದರೊಂದಿಗೆ ದುರಂತದಲ್ಲಿ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಆಸ್ಪತ್ರೆಯ ನೋಂದಣಿಯನ್ನು ತಕ್ಷಣದಿಂದಲೇ ರದ್ದುಗೊಳಿಸಿದ್ದು, ಸುರಕ್ಷತಾ ಲೋಪಗಳ ಆರೋಪದ ಮೇಲೆ ಮೂವರು ಸಿಬ್ಬಂದಿಯನ್ನು ಬಂಧಿಸಿ ತನಿಖೆ ಚುರುಕುಗೊಳಿಸಿದ್ದಾರೆ.

ಇಂದು ಮೃತಪಟ್ಟ ಸಂತ್ರಸ್ತರನ್ನು ಮುಜಾಫರ್‌ಪುರ ಜಿಲ್ಲೆಯ ಪಾರ್ರಿ ಗ್ರಾಮದ ನಿವಾಸಿ ಅಂಜನಿ ಕುಮಾರ್ ಸಿಂಗ್ ಎಂದು ಗುರುತಿಸಲಾಗಿದೆ. ಬುಧವಾರ ರಾತ್ರಿ ‘ಪ್ರಸಾದ್ ಆಸ್ಪತ್ರೆ’ಯ ತೀವ್ರ ನಿಗಾ ಘಟಕದಲ್ಲಿ (ICU) ಬೆಂಕಿ ಕಾಣಿಸಿಕೊಂಡಾಗ ಅಂಜನಿ ಸಿಂಗ್ ಅವರನ್ನು ರಕ್ಷಿಸಲಾಗಿತ್ತು. ಆದರೆ, ಚಿಕಿತ್ಸೆ ಪಡೆಯುತ್ತಿದ್ದಾಗ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬುಧವಾರ ತಡರಾತ್ರಿ ಮುಜಾಫರ್‌ಪುರದ ಪ್ರಸಾದ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿತ್ತು. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅಧಿಕಾರಿಗಳ ಪ್ರಕಾರ, ಬೆಂಕಿ ಕಾಣಿಸಿಕೊಂಡ ತಕ್ಷಣ ಐಸಿಯು ತುಂಬಾ ದಟ್ಟವಾದ ಹೊಗೆ ಆವರಿಸಿಕೊಂಡಿತ್ತು. ಅಲ್ಲಿ ಹಲವು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು. ಗುರುವಾರ ಐವರು ರೋಗಿಗಳು ಮೃತಪಟ್ಟರೆ, ಶುಕ್ರವಾರ ಮತ್ತೊಬ್ಬರು ಸಾವನ್ನಪ್ಪಿದ್ದರು. ಇಂದು ಅಂಜನಿ ಸಿಂಗ್ ಅವರ ಸಾವಿನೊಂದಿಗೆ ಒಟ್ಟು ಮೃತರ ಸಂಖ್ಯೆ 7ಕ್ಕೇರಿದೆ.

ಇದನ್ನೂ ಓದಿ: ದೆಹಲಿಯ ಬೆಂಕಿ ದುರಂತದಲ್ಲಿ ಬಾಂಗ್ಲಾ, ಅಫ್ಘಾನ್, ಆಫ್ರಿಕಾದ ಪ್ರವಾಸಿಗರೂ ಸಾವು; ಹೋಟೆಲ್ ಮಾಲೀಕ ಪರಾರಿ

ಈ ದುರಂತದ ಬೆನ್ನಲ್ಲೇ ಆಸ್ಪತ್ರೆ ಆಡಳಿತ ಮಂಡಳಿಯ ನಿರ್ಲಕ್ಷ್ಯ ಮತ್ತು ಸುರಕ್ಷತಾ ನಿಯಮಗಳ ಉಲ್ಲಂಘನೆ ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಪ್ರಸಾದ್ ಆಸ್ಪತ್ರೆಯ ನೋಂದಣಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ. ಅಲ್ಲದೆ, ಜಿಲ್ಲಾ ಸಿವಿಲ್ ಸರ್ಜನ್ ಅವರು ಆಸ್ಪತ್ರೆ ಆಡಳಿತ ಮಂಡಳಿಗೆ ನೋಟಿಸ್ ನೀಡಿದ್ದು, ಮುಂದಿನ 7 ದಿನಗಳ ಒಳಗಾಗಿ ಸೂಕ್ತ ದಾಖಲೆಗಳು ಮತ್ತು ಸಾಕ್ಷ್ಯಗಳೊಂದಿಗೆ ವಿವರವಾದ ಸ್ಪಷ್ಟೀಕರಣವನ್ನು ನೀಡುವಂತೆ ಆದೇಶಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಆಸ್ಪತ್ರೆಯ ಮೂವರು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಕಿ ಕಾಣಿಸಿಕೊಂಡ ತಕ್ಷಣ ತುರ್ತು ಪ್ರತಿಕ್ರಿಯೆ ಕ್ರಮಗಳಲ್ಲಿ ಏನಾದರೂ ವೈಫಲ್ಯಗಳಾಗಿದ್ದವೇ? ಮತ್ತು ರೋಗಿಗಳನ್ನು ಸ್ಥಳಾಂತರಿಸಲು ಸರಿಯಾದ ಪ್ರಯತ್ನಗಳನ್ನು ಮಾಡಲಾಗಿತ್ತೇ? ಎಂಬಿತ್ಯಾದಿ ಕೋನಗಳಲ್ಲಿ ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ದೆಹಲಿ ಬೆಂಕಿ ದುರಂತ; ಹೋಟೆಲ್ ಮಾಲೀಕ ಬಂಧನ, ನ್ಯಾಯಾಂಗ ತನಿಖೆಗೆ ಆದೇಶ

ಬೆಂಕಿ ಅವಘಡದ ಸಮಯದಲ್ಲಿ ಕೆಲವು ಸಿಬ್ಬಂದಿ ರೋಗಿಗಳನ್ನು ಬಿಟ್ಟು ಆಸ್ಪತ್ರೆಯಿಂದ ಓಡಿಹೋಗಿದ್ದರು ಎಂಬ ಗಂಭೀರ ಆರೋಪಗಳೂ ಕೇಳಿಬಂದಿದ್ದು, ತನಿಖಾಧಿಕಾರಿಗಳು ಈ ಬಗ್ಗೆಯೂ ಪರಿಶೀಲಿಸುತ್ತಿದ್ದಾರೆ. ಈ ದುರಂತವು ಆರೋಗ್ಯ ರಕ್ಷಣಾ ಕೇಂದ್ರಗಳಲ್ಲಿ, ವಿಶೇಷವಾಗಿ ರೋಗಿಗಳು ಸ್ವತಃ ಸ್ಥಳಾಂತರಗೊಳ್ಳಲು ಸಾಧ್ಯವಾಗದ ಐಸಿಯುನಂತಹ ನಿರ್ಣಾಯಕ ವಿಭಾಗಗಳಲ್ಲಿನ ಅಗ್ನಿ ಸುರಕ್ಷತಾ ವ್ಯವಸ್ಥೆಗಳ ಬಗ್ಗೆ ತೀವ್ರ ಕಳವಳ ಮೂಡಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs AFG: ಗಂಭೀರ್ ದಾಖಲೆ ಸರಿಗಟ್ಟಿ, ಧೋನಿ, ಗಂಗೂಲಿ ದಾಖಲೆ ಮುರಿದ ಗಿಲ್

Source link

ಕೇರಳದ ಶಾಲೆಯಲ್ಲಿ 150 ವಿದ್ಯಾರ್ಥಿಗಳಿಗೆ ದಿಢೀರನೆ ಅನಾರೋಗ್ಯ; ಕಾರಣ ನಿಗೂಢ – Kannada News

ಮಲಪ್ಪುರಂ, ಜೂನ್ 6: ಕೇರಳದ ಶಾಲೆಯೊಂದರಲ್ಲಿ ಸುಮಾರು 150 ವಿದ್ಯಾರ್ಥಿಗಳು ಏಕಾಏಕಿ ಅನಾರೋಗ್ಯಕ್ಕೆ ಒಳಗಾದ ಹಿನ್ನೆಲೆಯಲ್ಲಿ ಶಾಲೆಯ ತರಗತಿಗಳನ್ನು 1 ವಾರದ ಕಾಲ ಮುಂದೂಡಲಾಗಿದೆ. ಕೇರಳದ (Kerala) ಮಲಪ್ಪುರಂ ಜಿಲ್ಲೆಯ ಕೀಝಾತ್ತೂರು ಎಂಬಲ್ಲಿನ ಸರ್ಕಾರಿ ಮಾದರಿ ಉನ್ನತ ಪ್ರಾಥಮಿಕ ಶಾಲೆಯಲ್ಲಿ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಶಾಲೆಯ ಸುಮಾರು 150 ವಿದ್ಯಾರ್ಥಿಗಳಲ್ಲಿ ಜ್ವರ, ತಲೆನೋವು, ವಾಂತಿ ಮತ್ತು ಭೇದಿಯಂತಹ ರೋಗಲಕ್ಷಣಗಳು ಕಾಣಿಸಿಕೊಂಡಿವೆ. ಪ್ರಾಥಮಿಕ ತನಿಖೆಯ ಪ್ರಕಾರ, ಇದು ಕಲುಷಿತ ನೀರು ಅಥವಾ ಆಹಾರದ ಸೇವನೆಯಿಂದ ಉಂಟಾದ ಫುಡ್ ಪಾಯ್ಸನಿಂಗ್ ಇರಬಹುದು ಎಂದು ಆರೋಗ್ಯ ಇಲಾಖೆ ಅನುಮಾನ ವ್ಯಕ್ತಪಡಿಸಿದೆ. ಶಾಲೆಯಲ್ಲಿದ್ದ ನೀರಿನ ಮಾದರಿಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಈ ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ, ಮುನ್ನೆಚ್ಚರಿಕಾ ಕ್ರಮವಾಗಿ ಶಾಲೆಯ ತರಗತಿಗಳಿಗೆ 1 ವಾರಗಳ ಕಾಲ ರಜೆ ನೀಡಲು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ನಿರ್ಧರಿಸಿದೆ. ಈ ಅವಧಿಯಲ್ಲಿ ಶಾಲೆಯ ಆವರಣ, ನೀರಿನ ಟ್ಯಾಂಕ್‌ಗಳು ಮತ್ತು ಅಡುಗೆ ಕೋಣೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಹಾಗೂ ಸ್ಯಾನಿಟೈಸ್ ಮಾಡಲು ಸೂಚಿಸಲಾಗಿದೆ.

ಇದನ್ನೂ ಓದಿ: ಕೊನೆಗೂ ಕೇರಳಕ್ಕೆ ಮುಂಗಾರು ಪ್ರವೇಶ: ಕರ್ನಾಟದಲ್ಲಿ 6 ದಿನ ಭಾರೀ ಮಳೆ, ಯೆಲ್ಲೋ- ಆರೇಂಜ್ ಅಲರ್ಟ್

ಅನಾರೋಗ್ಯಕ್ಕೆ ಒಳಗಾದ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಸದ್ಯಕ್ಕೆ ಯಾರ ಪರಿಸ್ಥಿತಿಯೂ ಗಂಭೀರವಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಇಲಾಖೆಯು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಪೋಷಕರು ಆತಂಕ ಪಡದಂತೆ ಧೈರ್ಯ ತುಂಬಿದ್ದಾರೆ. ಅನಾರೋಗ್ಯದ ನಿಖರ ಕಾರಣಗಳ ಬಗ್ಗೆ ತನಿಖೆ ನಡೆಯುತ್ತಿದ್ದು, ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾ ವೈದ್ಯಾಧಿಕಾರಿಗಳು ಪೋಷಕರು ಮತ್ತು ಸಾರ್ವಜನಿಕರಿಗೆ ಧೈರ್ಯ ತುಂಬಿದ್ದು, ಸದ್ಯಕ್ಕೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಮತ್ತು ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಭರವಸೆ ನೀಡಿದ್ದಾರೆ. ವೈದ್ಯಕೀಯ ನೆರವು ಅಗತ್ಯವಿರುವ ವಿದ್ಯಾರ್ಥಿಗಳನ್ನು ನಿರ್ವಹಿಸಲು ಸುಲ್ತಾನ್ ಬತ್ತೇರಿ ತಾಲೂಕು ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ಅನ್ನು ಸ್ಥಾಪಿಸಲಾಗಿದೆ.

ಇದನ್ನೂ ಓದಿ: ಹಣಕೊಡಲಿಲ್ಲವೆಂದು ತಾವೇ ಸರಿಪಡಿಸಿದ್ದ ಬಾಲಕಿಯ ಮೂಳೆಯನ್ನು ಮತ್ತೆ ಮುರಿದು ಕಳುಹಿಸಿದ ವೈದ್ಯರು

ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ಮಕ್ಕಳ ಆರೋಗ್ಯದ ಮೇಲೆ ನಿರಂತರ ನಿಗಾ ಇಟ್ಟಿದ್ದು, ಅಗತ್ಯ ಚಿಕಿತ್ಸೆ ನೀಡುತ್ತಿದ್ದಾರೆ. ಬಹುತೇಕ ವಿದ್ಯಾರ್ಥಿಗಳು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿದ್ಯಾರ್ಥಿಗಳಲ್ಲದೆ, ಅದೇ ಶಾಲೆಯ ಓರ್ವ ಶಿಕ್ಷಕರಿಗೂ ಇಂತಹದೇ ರೋಗಲಕ್ಷಣಗಳು ಕಾಣಿಸಿಕೊಂಡಿದ್ದು, ಅವರ ಮೇಲೂ ನಿಗಾ ಇಡಲಾಗಿದೆ.

ಜೂನ್ 1ರಂದೇ ಕೆಲವು ವಿದ್ಯಾರ್ಥಿಗಳಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದ್ದವು. ಆದರೆ, ಈ ದಿಢೀರ್ ಅನಾರೋಗ್ಯದ ಹಿಂದಿನ ನಿಖರವಾದ ಕಾರಣ ಏನೆಂಬುದು ಇನ್ನೂ ಪತ್ತೆಯಾಗಿಲ್ಲ. ಆರೋಗ್ಯ ಇಲಾಖೆಯ ತಂಡಗಳು ಪ್ರಯೋಗಾಲಯದ ಪರೀಕ್ಷೆಗಾಗಿ ಶಾಲೆಯ ಆವರಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ನೀರಿನ ಹಾಗೂ ಆಹಾರದ ಮಾದರಿಗಳನ್ನು ಸಂಗ್ರಹಿಸಿವೆ. ಈ ಅನಾರೋಗ್ಯವು ಕಲುಷಿತ ಆಹಾರ, ನೀರು, ವೈರಲ್ ಸೋಂಕು ಅಥವಾ ಇನ್ಯಾವುದೇ ಮೂಲದಿಂದ ಉಂಟಾಗಿದೆಯೇ ಎಂಬುದನ್ನು ಪತ್ತೆಹಚ್ಚಲು ಅಧಿಕಾರಿಗಳು ಈಗ ಪರೀಕ್ಷಾ ವರದಿಗಳಿಗಾಗಿ ಕಾಯುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಣ್ಣಾಮಲೈ ಪಕ್ಷದಲ್ಲಿ ಸ್ಥಾನ ಬೇಕೆಂದರೆ ಈ ತರಬೇತಿಯಲ್ಲಿ ಪಾಸ್ ಆಗಬೇಕು! – Kannada News

ಚೆನ್ನೈ, ಜೂನ್ 6: ಭಾರತೀಯ ಜನತಾ ಪಕ್ಷ (ಬಿಜೆಪಿ) ತೊರೆದು ಹೊಸ ಆಂದೋಲನವನ್ನು ಆರಂಭಿಸಿರುವ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ , ತಮ್ಮ ಆಂದೋಲನದ ಮುಂದಿನ ಹೆಜ್ಜೆಗಳು ಮತ್ತು ಪಕ್ಷದ ನಿಲುವುಗಳ ಬಗ್ಗೆ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಬಿಜೆಪಿ ತೊರೆದ ಅಣ್ಣಾಮಲೈ (Annamalai) ನಿನ್ನೆ ಹೊಸ ರಾಜಕೀಯ ಆಂದೋಲನವನ್ನು ಪ್ರಾರಂಭಿಸುವುದಾಗಿ ಘೋಷಿಸಿದರು. ಈ ಆಂದೋಲನ ಪ್ರಾರಂಭವಾದ ಅಲ್ಪಾವಧಿಯಲ್ಲಿಯೇ, ತಮಿಳುನಾಡು ಮಾತ್ರವಲ್ಲದೆ ಭಾರತದಾದ್ಯಂತ 12 ಲಕ್ಷಕ್ಕೂ ಹೆಚ್ಚು ಜನರು ಇದಕ್ಕೆ ಸೇರಿದ್ದಾರೆ. ಮುಂದಿನ 3 ಅಥವಾ 4 ತಿಂಗಳಲ್ಲಿ ಈ ಆಂದೋಲನವನ್ನು ಪೂರ್ಣ ಪ್ರಮಾಣದ ರಾಜಕೀಯ ಪಕ್ಷವಾಗಿ ಪರಿವರ್ತಿಸುವುದಾಗಿ ಅಣ್ಣಾಮಲೈ ನಿನ್ನೆ ಘೋಷಿಸಿದರು.

ಅಂದಹಾಗೆ, ಅಣ್ಣಾಮಲೈ ಹೊಸದಾಗಿ ಆರಂಭಿಸಲಿರುವ ರಾಜಕೀಯ ಪಕ್ಷದಲ್ಲಿ ಸಾಂಪ್ರದಾಯಿಕ ರಾಜಕೀಯ ಶೈಲಿಯನ್ನು ಅನುಸರಿಸದೆ ಹೊಸ ಷರತ್ತು ವಿಧಿಸಿದ್ದಾರೆ. ಅದರಂತೆ, ಅಣ್ಣಾಮಲೈ ಅವರ ಹೊಸ ಪಕ್ಷದಲ್ಲಿ ಸ್ಥಾನ ಪಡೆಯಲು ಬಯಸುವವರು ‘ಕೌಶಲ್ಯ ತರಬೇತಿ’ ಪಡೆದು ಅದರಲ್ಲಿ ಉತ್ತೀರ್ಣರಾಗಬೇಕು. ಇದಕ್ಕಾಗಿ, “ಎಪಿಜೆ ಅಬ್ದುಲ್ ಕಲಾಂ ಸೆಂಟರ್ ಫಾರ್ ಎಥಿಕ್ಸ್ ಆ್ಯಂಡ್ ಪಾಲಿಟಿಕ್ಸ್” ಎಂಬ ಹೊಸ ತರಬೇತಿ ಸಂಸ್ಥೆ ಕೊಯಮತ್ತೂರಿನಲ್ಲಿ ಕಾರ್ಯನಿರ್ವಹಿಸಲಿದೆ.

ಇದನ್ನೂ ಓದಿ: ಅಣ್ಣಾಮಲೈ ರಾಜೀನಾಮೆಯಿಂದ ಪಕ್ಷಕ್ಕೇನೂ ನಷ್ಟವಿಲ್ಲ; ತಮಿಳುನಾಡು ಬಿಜೆಪಿ ಮುಖ್ಯಸ್ಥ ಲೇವಡಿ

ಯಾರು ತರಬೇತಿ ಪಡೆಯಬೇಕು?:

ಪಕ್ಷದ ಸಾಮಾನ್ಯ ಶಾಖೆಯ ಉಸ್ತುವಾರಿಗಳಿಂದ ಹಿಡಿದು ರಾಜ್ಯ ಮಟ್ಟದಲ್ಲಿ ಉನ್ನತ ಹುದ್ದೆಗಳಿಗೆ ಆಯ್ಕೆಯಾದವರವರೆಗೆ ಎಲ್ಲರೂ ಈ ಸಂಸ್ಥೆಯಲ್ಲಿ ತರಬೇತಿ ಪಡೆಯಬೇಕು. ಅಣ್ಣಾಮಲೈ ರಾಜಕೀಯದಲ್ಲಿ ಎಲ್ಲಿಗೆ ಹೋಗಲು ಬಯಸುತ್ತಾರೆ, ತಮಿಳುನಾಡಿನಲ್ಲಿ ಅವರು ಯಾವ ರೀತಿಯ ಬದಲಾವಣೆಗಳನ್ನು ತರಲು ಯೋಜಿಸಿದ್ದಾರೆ ಮತ್ತು ಅವರೊಂದಿಗೆ ಪ್ರಯಾಣಿಸುವ ಕಾರ್ಯನಿರ್ವಾಹಕರು ಯಾವ ಅರ್ಹತೆಗಳನ್ನು ಹೊಂದಿರಬೇಕು ಎಂಬುದನ್ನು ಈ ತರಬೇತಿಯು ವಿವರಿಸುತ್ತದೆ. ಇದರಲ್ಲಿ ಭಾಗವಹಿಸಿ ಅರ್ಹತೆ ಮತ್ತು ಉತ್ತೀರ್ಣತೆಯನ್ನು ಹೊಂದಿದವರಿಗೆ ಮಾತ್ರ ಹೊಸ ಪಕ್ಷದಲ್ಲಿ ಸ್ಥಾನಗಳನ್ನು ನೀಡಲಾಗುವುದು ಎಂದು ಅಣ್ಣಾಮಲೈ ಚಳುವಳಿ ನಿರ್ಧರಿಸಿದೆ.

ಇದನ್ನೂ ಓದಿ: ಅಣ್ಣಾಮಲೈ ನಮ್ಮ ಪಕ್ಷದ ಕಾರ್ಯಕರ್ತರ ಬ್ರೈನ್ ವಾಶ್ ಮಾಡುತ್ತಿದ್ದಾರೆ; ತಮಿಳುನಾಡು ಬಿಜೆಪಿ ಮುಖ್ಯಸ್ಥ ಆರೋಪ

ಅಣ್ಣಾಮಲೈ ಅವರ ಹೊಸ ಚಳುವಳಿ ಅಥವಾ ಪಕ್ಷವು ತಮಿಳುನಾಡಿನ 5 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದೆ. ಬದಲಾಗಿ, ಮುಂದಿನ ಕೆಲವು ತಿಂಗಳುಗಳಲ್ಲಿ ಆಂದೋಲನವನ್ನು ಪಕ್ಷವಾಗಿ ಬಲಪಡಿಸಲು, ಕೌಶಲ್ಯ ತರಬೇತಿಯ ಮೂಲಕ ಅರ್ಹ ಕಾರ್ಯನಿರ್ವಾಹಕರನ್ನು ಆಯ್ಕೆ ಮಾಡಲು ಮತ್ತು ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಅಣ್ಣಾಮಲೈ ಯೋಜಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

IND vs AFG: ಗಂಭೀರ್ ದಾಖಲೆ ಸರಿಗಟ್ಟಿ, ಧೋನಿ, ಗಂಗೂಲಿ ದಾಖಲೆ ಮುರಿದ ಗಿಲ್

Source link

ಬೆಳಗಾವಿಯಲ್ಲಿ ಬಹುಕೋಟಿ ವಂಚನೆ ಕೇಸ್: 6 ಜನರ ವಿರುದ್ಧ FIR; ಸಿಐಡಿಗೆ ಹಸ್ತಾಂತರಿಸಲು ಮುಂದಾದ ಪೊಲೀಸರು – Kannada News

ಆದಿತ್ಯರಾಜ್ ಕ್ಯಾಪಿಟಲ್ ಪ್ರೈ.ಲಿImage Credit source: tv9 kannada

ಬೆಳಗಾವಿ, ಜೂನ್​​ 06: ನಗರದಲ್ಲಿ ಇತ್ತೀಚೆಗಷ್ಟೇ 4500 ಕೋಟಿ ರೂ ವಂಚನೆ ಕೇಸ್​ನಲ್ಲಿ ಶಿವಾನಂದ ನೀಲಣ್ಣನವರ್ ಅಕ್ರಮ ಬಯಲಾಗಿತ್ತು. ಇದಾದ ಬೆನ್ನಲ್ಲೇ, ಮತ್ತೊಂದು ಕಂಪನಿ ಸಾವಿರಾರು ಕೋಟಿ ಹೂಡಿಕೆ (Multi-Crore Scam) ಮಾಡಿರೋದು ಪತ್ತೆಯಾಗಿದೆ. ಬೆಳಗಾವಿಯ (belagavi) ಭಾಗ್ಯ ನಗರದಲ್ಲಿರುವ ಆದಿತ್ಯರಾಜ್ ಕ್ಯಾಪಿಟಲ್ ಪ್ರೈವೆಟ್ ಲಿಮಿಟಿಡ್ ಕಂಪನಿ, 6 ಸಾವಿರ ಜನರಿಂದ ಠೇವಣಿ ರೂಪದಲ್ಲಿ ಸಾವಿರಾರು ಕೋಟಿ ಹಣ ಸಂಗ್ರಹಿಸಿರುವ ಆರೋಪ ಕೇಳಿ ಬಂದಿದೆ. ಕಂಪನಿ ಆರ್​ಬಿಐ ಸೇರಿ ಯಾರಿಂದಲೂ ಹೂಡಿಕೆ ಬಗ್ಗೆ ಅನುಮತಿ ಪಡೆದಿಲ್ಲ. ಬರ್ಡ್ಸ್ ಮತ್ತು ಕೆಪಿಐಡಿ ಕಾಯ್ದೆ ಅನ್ವಯ ಮಾಹಿತಿ ಸಂಗ್ರಹಿಸಿದ ನಗರ ಪೊಲೀಸ್ ಆಯುಕ್ತರು, ಜಿಲ್ಲಾಧಿಕಾರಿಗಳ ಅನುಮತಿ ಮೇರೆಗೆ ದಾಳಿ ನಡೆಸಿದ್ದರು. ಹಲವು ಮಹತ್ವದ ದಾಖಲೆಗಳನ್ನ ಪರಿಶೀಲಿಸಿದ್ದರು. ಆದಿತ್ಯರಾಜ್ ಕ್ಯಾಪಿಟಲ್ ಪ್ರೈವೆಟ್ ಲಿಮಿಟಡ್ ಸೇರಿ 3 ಕಂಪನಿ ಮತ್ತು ಸಿಇಓ ಬಾಲರಾಜ್ ಮಾನೆ ಸೇರಿ 6 ಜನರ ಮೇಲೆ ಎಫ್​​ಐಆರ್​ ದಾಖಲಾಗಿದೆ.

ಮುಖ್ಯಾಂಶಗಳು

  • ಬೆಳಗಾವಿಯಲ್ಲಿ ಆದಿತ್ಯರಾಜ್ ಕ್ಯಾಪಿಟಲ್ ಪ್ರೈ.ಲಿ. ಮೇಲೆ ದಾಳಿ
  • ಆದಿತ್ಯರಾಜ್ ಕ್ಯಾಪಿಟಲ್ ಸಂಸ್ಥೆ ವಿರುದ್ಧ ಎಫ್ಐಆರ್ ದಾಖಲು
  • ತನಿಖೆ ಸಿಐಡಿಗೆ ಹಸ್ತಾಂತರ ಮಾಡಲಾಗುವುದು ಎಂದ ಜಿಲ್ಲಾಧಿಕಾರಿ

4 ಬ್ಯಾಂಕ್ ಅಕೌಂಟ್ ಸೀಜ್: 200 ಕೋಟಿಗೂ ಹೆಚ್ಚು ಹಣ ಫ್ರೀಜ್ 

ಇನ್ನೂ ಆದಿತ್ಯರಾಜ್ ಕ್ಯಾಪಿಟಲ್ ಸಂಸ್ಥೆ 6,500 ಹೆಚ್ಚು ಜನರಿಂದ ಸಾವಿರಾರು ಕೋಟಿ ಹೂಡಿಕೆ ಹಣ ಸಂಗ್ರಹಿಸಿದೆ. ಎಸಿ ದಾಳಿ ವೇಳೆಯಲ್ಲಿ ಕಚೇರಿ ಸಿಬ್ಬಂದಿ ಸರಿಯಾಗಿ ಸ್ಪಂದಿಸಿಲ್ಲ. ಕಂಪ್ಯೂಟರ್ ಮತ್ತು ಲ್ಯಾಪ್ ಟಾಪ್ ಗಳಲ್ಲಿನ ಡಾಟಾ ಡಿಲೀಟ್ ಮಾಡಿದ್ದಾರೆ. ದಾಳಿ ವೇಳೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಗುಂಪು ಕಟ್ಟಿಕೊಂಡು ಬಂದು ಮಾಧ್ಯಮದವರ ಮೇಲೆ ಗೂಂಡಾವರ್ತನೆ ತೋರಿದ್ದರು. ಸಿಇಒ ಬಾಲರಾಜ್ ಮಾನೆ ಬಂಧನಕ್ಕೆ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ. 4 ಬ್ಯಾಂಕ್ ಅಕೌಂಟ್ ಸೀಜ್ ಮಾಡಿ, 200 ಕೋಟಿಗೂ ಹೆಚ್ಚು ಹಣ ಫ್ರೀಜ್ ಮಾಡಿದ್ದಾರೆ.

ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದ್ದಿಷ್ಟು

ಈ ಬಗ್ಗೆ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್​ ಪ್ರತಿಕ್ರಿಯಿಸಿದ್ದು, 2 ದಿನದಿಂದ ಕೆಪಿಐಡಿ, ಬರ್ಡ್ ಆ್ಯಕ್ಟ್ ಅಡಿ ದಾಳಿ ನಡೆಸಿ ಪರಿಶೀಲನೆ ಮಾಡಿದ್ದು, ಆದಿತ್ಯರಾಜ್ ಕ್ಯಾಪಿಟಲ್ ಸಂಸ್ಥೆ ವಿರುದ್ಧ ಎಫ್ಐಆರ್ ದಾಖಲಿಸಿದ್ದೇವೆ. ನನ್ನ ಆದೇಶದ ಮೇರೆಗೆ ಎಸಿ ಶ್ರವಣ್ ನಾಯಕ್ ದಾಳಿ ನಡೆಸಿದ್ದರು. ಆದಿತ್ಯರಾಜ್ ಕ್ಯಾಪಿಟಲ್ ಪ್ರೈ.ಲಿ. 2 ರೀತಿಯ ಕೆಲಸ ಮಾಡಿದೆ. ಯಾವುದೇ ಅನುಮತಿ ಪಡೆಯದೆ ಹಣ ಸಂಗ್ರಹ ಮಾಡಿದ್ದಾರೆ ಮತ್ತು ಹೂಡಿಕೆದಾರರಿಗೆ ಮಾಸಿಕ 5% ಬಡ್ಡಿ ನೀಡುವ ಆಮಿಷವೊಡ್ಡಿದ್ದಾರೆ ಎಂದರು.

ಇದನ್ನೂ ಓದಿ: ಬೆಳಗಾವಿಯಲ್ಲಿ ಮತ್ತೊಂದು ಬಹುಕೋಟಿ ವಂಚನೆ ಪ್ರಕರಣ: ದಾಳಿ ವೇಳೆ ಕಂಪನಿಯ ಸರ್ವರ್​​ ಡೌನ್​​ ಮಾಡಿ ಕಳ್ಳಾಟ?

ಠೇವಣಿದಾರರ ಜತೆ ಎಲ್ಎಫ್ಎ ಅಗ್ರಿಮೆಂಟ್ ಮಾಡಿಕೊಂಡಿದ್ದಾರೆ. ಶೇಕಡಾ 5ರಷ್ಟು ಬಡ್ಡಿ, ಶೇಕಡಾ 5ರಷ್ಟು ಅಸಲು ನೀಡಲು ಒಪ್ಪಂದ ಮಾಡಿಕೊಳ್ಳುವಾಗ ರಿಸ್ಕ್ ಬಗ್ಗೆ ಎಲ್ಲೂ ಉಲ್ಲೇಖಮಾಡಿಲ್ಲ. ಈ ಪ್ರಕರಣ ಪಾಂಜಿ ಸ್ಕೀಮ್​ಗೆ ಮಾದರಿಯಾಗಿದೆ. 7 ಸಾವಿರ ಜನರು ಹೂಡಿಕೆ ಮಾಡಿ ವಂಚನೆಗೆ ಒಳಗಾಗಿದ್ದಾರೆ. ಇದು 50 ಕೋಟಿ ಮೀರಿದ ಪ್ರಕರಣವಾಗಿದ್ದರಿಂದ ಸಿಐಡಿ ತನಿಖೆ ಹಸ್ತಾಂತರ ಮಾಡಲಾಗುವುದು. ಜನರಿಂದ ಪಡೆದ ಹಣ ಎಲ್ಲಿ ಹೂಡಿಕೆ ಮಾಡುತ್ತಾರೆಂದು ಹೇಳಿಲ್ಲ. ಆದಿತ್ಯರಾಜ್ ಕ್ಯಾಪಿಟಲ್ ಸಿಬ್ಬಂದಿ ಹೂಡಿಕೆದಾರರಿಗೆ ಚೆಕ್ ನೀಡಿದ್ದಾರೆ. ಸಿಇಒ ಬಲರಾಮ್ ಮಾನೆ ವಿರುದ್ಧ ಲುಕ್​ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದು, ದೇಶ ತೊರೆಯದಂತೆ ಕ್ರಮಕೈಗೊಳ್ಳಲಾಗಿದ್ದು, ಏರ್​ಪೋರ್ಟ್​ಗಳಿಗೆ ಮಾಹಿತಿ ರವಾನಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಬೆಳಗಾವಿಯಲ್ಲಿ 4,500 ಕೋಟಿ ರೂ. ವಂಚನೆ ಪ್ರಕರಣ: ಹೂಡಿಕೆಗಿಂತ ಹೆಚ್ಚಿನ ಲಾಭ ಪಡೆದವರಿಗೂ ಶುರುವಾಯ್ತು ನಡುಕ

ಸದ್ಯ ಬಹುಕೋಟಿ ಹೂಡಿಕೆ ಕೇಸ್, ಸಿಐಡಿಗೆ ಹಸ್ತಾಂತರಿಸಲು ಪೊಲೀಸರು ಪತ್ರ ಬರೆದಿದ್ದಾರೆ. ಇನ್ನು ಕಂಪನಿಯ ಸಿಇಒ ಪತ್ತೆಗೆ ವಿಶೇಷ ತಂಡ ಹುಡುಕಾಟ ನಡೆಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಪೆದ್ದಿ’: ಜಾನ್ಹವಿ ಕಪೂರ್ ಮಾದಕ ದೃಶ್ಯಗಳಿಗೆ ಕತ್ತರಿ ಹಾಕಲು ನಿರ್ಧಾರ – Kannada News

ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ಜೂನ್ 4 ರಂದು ಬಿಡುಗಡೆ ಆಗಿದ್ದು, ಸಿನಿಮಾದ ಬಗ್ಗೆ ಸಾಕಷ್ಟು ಧನಾತ್ಮಕ ಅಭಿಪ್ರಾಯಗಳು ವ್ಯಕ್ತವಾಗಿವೆ. ಸಿನಿಮಾ ಗ್ರಾಮೀಣ ಭಾಗದ ಕ್ರೀಡಾಪಟುವಿನ ಕತೆಯನ್ನು ಒಳಗೊಂಡಿದೆ. ಯುವಕನೊಬ್ಬ ಕ್ರೀಡೆಯನ್ನು ಬಳಸಿ ಹೇಗೆ ತಮ್ಮ ಹೆಸರಿಲ್ಲದ ಊರಿಗೆ ಗುರುತು ತಂದುಕೊಡುತ್ತಾನೆ ಎಂಬುದು ಸಿನಿಮಾದ ಕತೆ. ಸಿನಿಮಾನಲ್ಲಿ ಸಾಕಷ್ಟು ಧನಾತ್ಮಕ ಅಂಶಗಳು, ಒಳ್ಳೆಯ ಸಂದೇಶಗಳು ಇವೆ. ಆದರೆ ಇವೆಲ್ಲವೂ ಇದ್ದಾಗಿಯೂ ಸಹ ಸಿನಿಮಾನಲ್ಲಿ ನಾಯಕಿಯನ್ನು ತೋರಿಸಿರುವ ರೀತಿಯ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿದೆ. ನಾಯಕಿ ಜಾನ್ಹವಿ ಕಪೂರ್ ಅವರ ‘ಅಂಗಾಂಗ’ಗಳಿಗೆ ಜೂಮ್ ಹಾಕಿ ಅಶ್ಲೀಲವಾಗಿ ಚಿತ್ರಿಸಲಾಗಿದೆ. ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಇದೀಗ ನಿರ್ದೇಶಕರು ನಾಯಕಿಯ ದೃಶ್ಯಗಳನ್ನು ಕತ್ತರಿಸಲು ನಿರ್ಧರಿಸಿದ್ದಾರೆ.

ನಾಯಕಿಯನ್ನು ಅತಿಯಾಗಿ ಗ್ಲಾಮರೈಸ್ ಮಾಡಿರುವ ಬಗ್ಗೆ ತೀವ್ರ ಟೀಕೆ ವ್ಯಕ್ತವಾದ ಬೆನ್ನಲ್ಲೆ ನಿರ್ದೇಶಕ ಬುಚ್ಚಿಬಾಬು ಸನಾ ಸುದೀರ್ಘ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ‘ಒಬ್ಬ ಚಲನಚಿತ್ರ ನಿರ್ದೇಶಕನಾಗಿ, ಸಿನಿಮಾ ಎಂಬುದು ಪ್ರೇಕ್ಷಕರಿಗೆ ಮನರಂಜನೆ ನೀಡಬೇಕು, ಪ್ರೇರಣೆ ನೀಡಬೇಕು ಮತ್ತು ಅವರೊಂದಿಗೆ ಕನೆಕ್ಟ್ ಆಗಬೇಕು ಎಂದು ನಾನು ನಂಬುತ್ತೇನೆ. ಅದು ಯಾರಿಗೂ ಮುಜುಗರ ಉಂಟುಮಾಡಬಾರದು ಅಥವಾ ಗೌರವಕ್ಕೆ ಧಕ್ಕೆ ತರಬಾರದು. ‘ಪೆದ್ದಿ’ ಚಿತ್ರದ ಕೆಲವು ದೃಶ್ಯಗಳ ಬಗ್ಗೆ ಬಂದಿರುವ ಪ್ರತಿಕ್ರಿಯೆಗಳನ್ನು ನಾವು ಕೇಳಿದ್ದೇವೆ ಮತ್ತು ಅದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.

ಮುಂದುವರಿದು, ‘ತೆರೆಯ ಮೇಲೆಯೂ ಮತ್ತು ನಿಜ ಜೀವನದಲ್ಲಿಯೂ ನನಗೆ ಮಹಿಳೆಯರ ಬಗ್ಗೆ ಯಾವಾಗಲೂ ಅಪಾರ ಗೌರವವಿದೆ. ಯಾವುದೇ ಮಹಿಳಾ ಪಾತ್ರವನ್ನು ಕೇವಲ ಭೋಗ ವಸ್ತುವಿನಂತೆ ಬಿಂಬಿಸುವುದು ಅಥವಾ ಗೌರವ ಕಮ್ಮಿ ಮಾಡುವುದು ನಮ್ಮ ಉದ್ದೇಶವಾಗಿರಲಿಲ್ಲ. ಚಿತ್ರದ ಯಾವುದೇ ಭಾಗವನ್ನು ಆ ರೀತಿ ಅರ್ಥೈಸಿಕೊಂಡಿದ್ದರೆ, ನಾವು ಆ ಭಾವನೆಗಳನ್ನು ಗೌರವಿಸುತ್ತೇವೆ, ವ್ಯಕ್ತವಾಗಿರುವ ಕಳಕಳಿಯನ್ನು ಅರ್ಥಮಾಡಿಕೊಳ್ಳುತ್ತೇವೆ ಮತ್ತು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ. ಬಂದಿರುವ ಪ್ರತಿಕ್ರಿಯೆಗಳನ್ನು ಪರಿಶೀಲಿಸಿದ ನಂತರ, ನಾವು ಸಂಬಂಧಪಟ್ಟ ದೃಶ್ಯಗಳಲ್ಲಿ ಬದಲಾವಣೆಗಳನ್ನು ಮಾಡಲು ನಿರ್ಧರಿಸಿದ್ದೇವೆ. ಸಿನಿಮಾ ಬೆಳೆಯುವುದು ಪ್ರೇಕ್ಷಕರೊಂದಿಗಿನ ಸಂಪರ್ಕದಿಂದ. ಕಥೆಗಾರರಾಗಿ, ಬದಲಾಗುತ್ತಿರುವ ದೃಷ್ಟಿಕೋನಗಳು ಮತ್ತು ಸೂಕ್ಷ್ಮತೆಗಳ ಬಗ್ಗೆ ಗಮನ ಹರಿಸುವ ಜವಾಬ್ದಾರಿ ನಮ್ಮ ಮೇಲಿದೆ’ ಎಂದಿದ್ದಾರೆ.

ಇದನ್ನೂ ಓದಿ:ರಾಮ್ ಚರಣ್ ನಟನೆಯ ‘ಪೆದ್ದಿ’ ಚಿತ್ರದ ಬಜೆಟ್ ಮತ್ತು ತಾರಾಗಣದ ಸಂಭಾವನೆ ವಿವರ ಇಲ್ಲಿದೆ

ಜಾನ್ಹವಿ ಕಪೂರ್ ಅವರ ಪಾತ್ರವನ್ನು ಅತಿಯಾಗಿ ಗ್ಲಾಮರೈಸ್ ಮಾಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಮಂದಿ ಟೀಕೆ ವ್ಯಕ್ತಪಡಿಸಿದ್ದಾರೆ. ಕೆಲವು ಸಿನಿಮಾ ಮಂದಿ, ಮಾಜಿ ನಟಿಯರು ಸಹ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಖುದ್ದು ಜಾನ್ಹವಿ ಸಹ, ಇಂಥಹಾ ಒಂದು ಸಾಮಾಜಿಕ ಜಾಲತಾಣ ಪೋಸ್ಟ್​​ಗೆ ಲೈಕ್ ಒತ್ತುವ ಮೂಲಕ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

ಸಿನಿಮಾನಲ್ಲಿ ಜಾನ್ಹವಿ ಕಪೂರ್ ಅವರು ಅಚ್ಚಯ್ಯಮ್ಮ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಮೊದಲಾರ್ಧದಲ್ಲಿ ಜಾನ್ಹವಿಯ ಪಾತ್ರವನ್ನು ಕೇವಲ ಗ್ಲಾಮರ್​​​ಗಾಗಿ ಮಾತ್ರವೇ ಬಳಸಿಕೊಳ್ಳಲಾಗಿದೆ. ಕಡಿಮೆ ಬಟ್ಟೆಗಳನ್ನು ತೊಡಿಸಿರುವುದು, ಎದೆ ಭಾಗ, ಸೊಂಟದ ಭಾಗದ ಮೇಲೆ ಅತಿಯಾಗಿ ಫೋಕಸ್ ಮಾಡಿರುವುದು ಮಾಡಲಾಗಿದೆ. ಸಿನಿಮಾವನ್ನು ಬುಚ್ಚಿಬಾಬು ಸನಾ ನಿರ್ದೇಶಿಸಿದ್ದು, ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 7:54 pm, Sat, 6 June 26

Source link