All posts by nagaraj11081993

ಅಭಿಷೇಕ್ ಶರ್ಮಾ ಜೊತೆ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ ಶುಭ್​ಮನ್ ಗಿಲ್

Source link

Video: ಭಾರತಕ್ಕೆ ಬರುವ ಮುಂಚೆ ಈ ವಿಷ್ಯಗಳನ್ನು ತಿಳಿದುಕೊಳ್ಳಲು ಬಯಸ್ತೇನೆ ಎಂದ ರಷ್ಯನ್ ಮಹಿಳೆ – Kannada News | Russian woman says you should know these things before coming to India

ಯಾರೇ ಆಗಲಿ, ಯಾವುದೇ ಊರು, ದೇಶಕ್ಕೆ ತೆರಳಲಿ ಅಲ್ಲಿನ ಆಚಾರ ವಿಚಾರ, ಆಹಾರ ಪದ್ಧತಿ ಹಾಗೂ ಜೀವನ ಶೈಲಿಯ ಬಗ್ಗೆ ತೆರಳುವ ಮುನ್ನ ತಿಳಿದುಕೊಳ್ಳಲು ಮುಂದಾಗುತ್ತಾರೆ. ರಷ್ಯನ್ ಮಹಿಳೆ (Russian woman) ಕೂಡ ಭಾರತಕ್ಕೆ ಬರುವ ಮೊದಲು ನಾನು ಈ ವಿಷಯಗಳನ್ನು ತಿಳಿದುಕೊಳ್ಳಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಭಾರತದಲ್ಲಿ ನೆಲೆಸುವ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದು, ಈ ಕುರಿತಾದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅನಸ್ತಾಸಿಯಾ ಶರೋವಾ (Anastasia Sharov) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಹಿಂದಿ ಭಾಷೆಯ ಪ್ರಾಮುಖ್ಯತೆ, ಯುಪಿಐ ಪಾವತಿಗಳ ಸುಲಭತೆ ಮತ್ತು ದಿನಸಿ ವಸ್ತುಗಳ ತ್ವರಿತ ವಿತರಣೆಯ ಬಗ್ಗೆ ಉಲ್ಲೇಖಿಸಿದ್ದಾರೆ.

ವೈರಲ್‌ ವಿಡಿಯೋ ಇಲ್ಲಿದೆ ನೋಡಿ

ನನ್ನ ಸುತ್ತಲಿನ ಜನರು ಎಂದಿಗೂ ನೇರವಾಗಿ ಇಲ್ಲ ಎಂದು ಹೇಳುವುದಿಲ್ಲ. ಈ ಸಿಗ್ನಲ್‌ಗಳ ಬಗ್ಗೆ ತಿಳಿದುಕೊಳ್ಳಬೇಕು. ಕಡಿಮೆ ದೂರಕ್ಕೂ ವಾಹನದ ಅಗತ್ಯವಿದೆ ಎಂದು ತಿಳಿಸಿದ್ದಾರೆ. ರಾತ್ರಿಯಲ್ಲಿ ಫ್ಯಾನ್‌ನ ಶಬ್ದಕ್ಕೆ ತಾನು ಒಗ್ಗಿಕೊಂಡಿದ್ದೇನೆ, ಫ್ಯಾನ್ ಇಲ್ಲದೆ ಮಲಗಲು ಸಾಧ್ಯವಿಲ್ಲ ಎಂದು ಹೀಗೆ ಹತ್ತಾರು ವಿಷಯಗಳನ್ನು ಪಟ್ಟಿ ಮಾಡಿರುವುದನ್ನು ನೋಡಬಹುದು.

ಇದನ್ನೂ ಓದಿ:ಗೋಲ್ಗಪ್ಪಾ ಸವಿದು ಮುದ್ದಾಗಿ ರಿಯಾಕ್ಷನ್ ಕೊಟ್ಟ ವಿದೇಶಿ ಮಹಿಳೆ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಇದು ಯಾವುದೇ ಅಪಪ್ರಚಾರವಲ್ಲ, ದ್ವೇಷವಿಲ್ಲದೆ ಭಾರತದ ಬಗ್ಗೆ ಅತ್ಯಂತ ನಿಖರವಾದ ಸಂಗತಿಗಳು ಎಂದು ಹೇಳಿದ್ದಾರೆ. ಮತ್ತೊಬ್ಬರು, ನೀವು ಮುಂಬೈ, ಕೇರಳ, ಅಸ್ಸಾಂ ಮುಂತಾದ ಭಾರತದ ಕರಾವಳಿ ಪ್ರದೇಶಗಳಿಗೆ ಹೋದರೆ, ನೀವು ಮಾನ್ಸೂನ್ ಅನ್ನು ಅನುಭವಿಸುವಿರಿ ಎಂದಿದ್ದಾರೆ. ಇನ್ನೊಬ್ಬರು, ಬದುಕಿನಲ್ಲಿ ಎಲ್ಲಾ ಅನುಭವಗಳಿಗೆ ತೆರೆದುಕೊಳ್ಳಬೇಕು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Christmas 2025: ಕ್ರಿಸ್ಮಸ್‌ ಹಬ್ಬಕ್ಕೆ ಮನೆಯಲ್ಲೇ ಬಲು ಸುಲಭವಾಗಿ ತಯಾರಿಸಿ ಆರೋಗ್ಯಕರ ಡ್ರೈಫ್ರೂಟ್‌ ಕೇಕ್‌ – Kannada News | Christmas 2025: A healthy dry fruit cake recipe that you can make at home for this Christmas

ಡ್ರೈಫ್ರೂಟ್‌ ಕೇಕ್‌Image Credit source: Getty Images

ಕ್ರಿಸ್ಮಸ್‌ (Christmas) ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಪ್ರಪಂಚದಾದ್ಯಂತ ಈ ಹಬ್ಬವನ್ನು ಬಹಳ ಸಂಭ್ರಮದಿಂದ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಜನರು ತಮ್ಮ ತಮ್ಮ ಮನೆಗಳಲ್ಲಿ ಕ್ರಿಸ್‌ಮಸ್‌ ಟ್ರೀ ಇಟ್ಟು ಅದನ್ನು ವರ್ಣರಂಜಿತ ದೀಪಗಳು, ಇತ್ಯಾದಿ ವಸ್ತುಗಳಿಂದ ಅಲಂಕರಿಸುತ್ತಾರೆ. ಜೊತೆಗೆ ವಿಶೇಷ ಖಾದ್ಯಗಳನ್ನೂ ತಯಾರಿಸುತ್ತಾರೆ. ಇನ್ನೂ ಕೇಕ್‌ ಇಲ್ಲದೆ ಈ ಹಬ್ಬ  ಪರಿಪೂರ್ಣ ಆಗೋದೇ ಇಲ್ಲ. ಹೌದು ಈ ದಿನದಂದು, ಹೆಚ್ಚಿನ ಮನೆಗಳಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಣೆಗಳು ನಡೆಯುತ್ತವೆ. ಹೆಚ್ಚಿನವರು ಈ ಕೇಕ್‌ಗಳನ್ನು ಮಾರುಕಟ್ಟೆಯಿಂದ ಖರೀದಿ ಮಾಡುತ್ತಾರೆ. ಇದರ ಬದಲು ಮನೆಯಲ್ಲಿಯೇ ಆರೋಗ್ಯಕರ ರೀತಿಯಲ್ಲಿ ಕೇಕ್‌ ತಯಾರಿಸಬಹುದು. ಇಂದಿನ ಈ ಲೇಖನದಲ್ಲಿ ಸುಲಭವಾಗಿ ಡ್ರೈಫೂರ್ಟ್ಸ್‌ ಕೇಕ್‌ ಹೇಗೆ ತಯಾರಿಸೋದು ಎಂಬುದನ್ನು ನೋಡೋಣ ಬನ್ನಿ.

ಕ್ರಿಸ್‌ಮಸ್‌ ಹಬ್ಬಕ್ಕೆ ಮನೆಯಲ್ಲೇ ತಯಾರಿಸಿ ಡ್ರೈ ಫ್ರೂಟ್ ಕೇಕ್:

ಕ್ರಿಸ್‌ಮಸ್‌ ಹಬ್ಬದಲ್ಲಿ ಪ್ಲಮ್ ಕೇಕ್ ತಯಾರಿಸುವುದು ಬಹಳ ಹಿಂದಿನಿಂದಲೂ ಬಂದಿರುವ ಸಂಪ್ರದಾಯ ಆದರೆ ಈ ಬಾರಿ ಹೊಸ ಕೇಕ್‌ ರೆಸಿಪಿಯನ್ನು ಟ್ರೈ ಮಾಡ್ಬೇಕು ಅಂತಿದ್ರೆ, ಈ ಡ್ರೈಫ್ರೂಟ್‌ ಕೇಕ್‌ ರೆಸಿಪಿಯನ್ನು ತಯಾರಿಸಿ.

ಡ್ರೈಫ್ರೂಟ್ಸ್‌ ಕೇಕ್ ತಯಾರಿಸಲು ಬೇಕಾಗುವ ಸಾಮಾಗ್ರಿಗಳು:

  • ಮೈದಾ ಹಿಟ್ಟು – 1 ಕಪ್
  • ಸಕ್ಕರೆ ಪುಡಿ – ಅರ್ಧ ಕಪ್
  • ಬೆಣ್ಣೆ – ಅರ್ಧ ಕಪ್
  • ಹಾಲು – ಅರ್ಧ ಕಪ್
  • ಅಡುಗೆ ಸೋಡಾ – ಅರ್ಧ ಟೀ ಚಮಚ
  • ಬೇಕಿಂಗ್ ಪೌಡರ್ – ಅರ್ಧ ಟೀಚಮಚ
  • ವೆನಿಲ್ಲಾ ಎಸೆನ್ಸ್ – 1 ಟೀಸ್ಪೂನ್
  • ಮಿಶ್ರ ಒಣ ಹಣ್ಣುಗಳು (ಗೋಡಂಬಿ, ಬಾದಾಮಿ, ಒಣದ್ರಾಕ್ಷಿ, ವಾಲ್ನಟ್ಸ್, ಟುಟ್ಟಿ-ಫ್ರೂಟಿ ಇತ್ಯಾದಿ) – 1 ಕಪ್
  • ದಾಲ್ಚಿನ್ನಿ ಪುಡಿ – ಅರ್ಧ ಟೀಚಮಚ

ಇದನ್ನೂ ಓದಿ: ಆಹಾರಗಳನ್ನು ಸೇವನೆ ಮಾಡುವುದರಿಂದ ಸುಲಭವಾಗಿ ಒತ್ತಡದಿಂದ ಮುಕ್ತಿ ಪಡೆಯಬಹುದು

ಕ್ರಿಸ್‌ಮಸ್ ಸ್ಪೆಷಲ್ ಡ್ರೈ ಫ್ರೂಟ್ಸ್ ಕೇಕ್ ಮಾಡುವುದು ಹೇಗೆ?

  • ಮೊದಲು ಡ್ರೈ ಫ್ರೂಟ್ಸ್ ಅನ್ನು ನುಣ್ಣಗೆ ಕತ್ತರಿಸಿ ಇಟ್ಟುಕೊಳ್ಳಿ.
  • ಈಗ, ಒಂದು ಬಟ್ಟಲಿನಲ್ಲಿ ಬೆಣ್ಣೆ ಮತ್ತು ಸಕ್ಕರೆಯನ್ನು ಸೇರಿಸಿ, ಕೆನೆಯ ವಿನ್ಯಾಸ ಬರುವವರೆಗೆ ಬೀಟ್ ಮಾಡಿ. ಮತ್ತು ಅದಕ್ಕೆ ಹಾಲು ಮತ್ತು ವೆನಿಲ್ಲಾ ಎಸೆನ್ಸ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
  • ಇದರ ನಂತರ, ಹಿಟ್ಟು, ಅಡಿಗೆ ಸೋಡಾ, ಬೇಕಿಂಗ್ ಪೌಡರ್ ಮತ್ತು ದಾಲ್ಚಿನ್ನಿ ಪುಡಿಯನ್ನು ಚೆನ್ನಾಗಿ ಶೋಧಿಸಿ, ಬೆಣ್ಣೆ ಸಕ್ಕರೆ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
  • ಈಗ ಈ ಮಿಶ್ರಣಕ್ಕೆ ಕತ್ತರಿಸಿಟ್ಟ ಡ್ರೈಫ್ರೂಟ್ಸ್‌, ಟುಟ್ಟಿ-ಫ್ರೂಟಿ ಸೇರಿಸಿ.
  • ಇದಾದ ಬಳಿಕ ಕೇಕ್ ಟಿನ್‌ಗೆ ಬೆಣ್ಣೆ ಹಚ್ಚಿ, ತಯಾರಾದ ಕೇಕ್ ಕೇಕ್‌ ಹಿಟ್ಟನ್ನು ಅದರಲ್ಲಿ ಹಾಕಿ ಬೇಕ್‌ ಮಾಡಬೇಕು.
  • ಓವನ್‌ನಲ್ಲಿ ಕೇಕ್‌ ತಯಾರಿಸುತ್ತೀರಿ ಎಂದಾದರೆ ಕೇಕ್‌ ತಯಾರಿಸುವ 10 ನಿಮಿಷಗಳ ಮೊದಲು ಓವನ್‌ನನ್ನು 180 ಡಿಗ್ರಿ ಸೆಲ್ಸಿಯಸ್‌ಗೆ ಪೂರ್ವಭಾವಿಯಾಗಿ ಕಾಯಿಸಿ ನಂತರ 35 ರಿಂದ 40 ನಿಮಿಷಗಳ ಕಾಲ ಕೇಕ್‌ ಬೇಯಿಸಿ.
  • ಕುಕ್ಕರ್‌ನಲ್ಲಿ ತಯಾರಿಸಲು, ಮೊದಲು ಕುಕ್ಕರ್‌ನಲ್ಲಿ ಉಪ್ಪು ಸೇರಿಸಿ 10 ನಿಮಿಷಗಳ ಕಾಲ ಬಿಸಿ ಮಾಡಿ. ನಂತರ ಕೇಕ್ ಟಿನ್ ಅನ್ನು ಕುಕ್ಕರ್‌ನಲ್ಲಿ ಹಾಕಿ 45-50 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಿಸಿ.
  • ಕೇಕ್ ಬೆಂದ ನಂತರ, ಅದನ್ನು ತಣ್ಣಗಾಗಲು ಬಿಡಿ ಮತ್ತು ಅಂತಿಮವಾಗಿ ಒಣ ಹಣ್ಣುಗಳಿಂದ ಅಲಂಕರಿಸಿದರೆ ಕ್ರಿಸ್‌ಮಸ್‌ ಸ್ಪೆಷಲ್‌ ಡ್ರೈಫ್ರೂಟ್‌ ಕೇಕ್‌ ಸವಿಯಲು ಸಿದ್ಧ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಾಮರಾಜನಗರದಲ್ಲಿ 5 ಹುಲಿಗಳು ಪ್ರತ್ಯಕ್ಷ: ನಿಷೇಧಾಜ್ಞೆ ಜಾರಿ, ಹೊರಬರದಂತೆ ಸೂಚನೆ – Kannada News | Chamarajanagar: Five Tigers Sighted; Section 144 Imposed for Capture Operations

ಚಾಮರಾಜನಗರ, ಡಿಸೆಂಬರ್​ 22: ಕಾಡಿನಲ್ಲಿರಬೇಕಿದ್ದ ಹುಲಿಗಳು (Tiger) ನಾಡಿಗೆ ನುಗ್ಗಿವೆ. ಚಾಮರಾಜನಗರ (Chamarajanagar) ತಾಲೂಕಿನ ನಂಜೆದೇವಪುರ ಗ್ರಾಮದ ಬಳಿ ಬರೋಬ್ಬರಿ ಐದು ಹುಲಿಗಳು ಒಟ್ಟಿಗೆ ಪ್ರತ್ಯಕ್ಷವಾಗಿದ್ದು, ಸದ್ಯ ಜನರ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ನಂಜೆದೇವಪುರ ಸೇರಿ ಮೂರು ಗ್ರಾಮಗಳಲ್ಲಿ ಇಂದಿನಿಂದ ನಾಳೆ ಸಂಜೆ 6ರವರೆಗೂ 144 ಸೆಕ್ಷನ್ ಜಾರಿ ಮಾಡಿ ಚಾಮರಾಜನಗರ ತಹಶೀಲ್ದಾರ್​​​ ಗಿರಿಜಾ ಆದೇಶ ಹೊರಡಿಸಿದ್ದಾರೆ.

ನಿಷೇಧಾಜ್ಞೆ ಜಾರಿ

ಈಗಾಗಲೇ 5 ಹುಲಿಗಳಿರುವ ಜಾಗದ ಲೊಕೇಷನ್​​ ಅನ್ನು ಅರಣ್ಯ ಸಿಬ್ಬಂದಿ ಟ್ರ್ಯಾಕ್ ಮಾಡಿದ್ದಾರೆ. ಆದರೆ ಚಾಮರಾಜನಗರ ಜಿಲ್ಲೆಯಲ್ಲಿ ಇರುವುದು ಕೇವಲ ಇಬ್ಬರೇ ಪಶು ವೈದ್ಯರು ಮಾತ್ರ. ಹೀಗಾಗಿ ಹುಲಿಗಳನ್ನು ಸೆರೆ ಹಿಡಿಯಲು ಕಷ್ಟಸಾಧ್ಯ ಎನ್ನುತ್ತಿದ್ದಾರೆ ಅರಣ್ಯ ಸಿಬ್ಬಂದಿ. ಸದ್ಯ ಹುಲಿಗಳ ಸೆರೆ ಕಾರ್ಯಾಚರಣೆ ಹಿನ್ನೆಲೆ  ನಂಜೆದೇವನಪುರ, ವೀರನಪುರ, ಉಡಿಗಾಲ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಆ ಮೂಲಕ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದ್ದು, ಯಾರೂ ಗುಂಪು ಸೇರಬಾರದು, ಮನೆಯಿಂದ ಹೊರಬರದಂತೆ ತಿಳಿಸಲಾಗಿದ್ದು, ಮೂರು ಗ್ರಾಮಗಳ ಜನರು ಸಹಕರಿಸುವಂತೆ ತಹಶೀಲ್ದಾರ್ ಗಿರಿಜಾ ಮನವಿ ಮಾಡಿದ್ದಾರೆ.

ಸ್ಥಳದಲ್ಲೇ ಬೀಡುಬಿಟ್ಟ ಶಾಸಕ ಪುಟ್ಟರಂಗಶೆಟ್ಟಿ

ಇನ್ನು ಸ್ಥಳೀಯ ಶಾಸಕ ಪುಟ್ಟರಂಗಶೆಟ್ಟಿ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯರಿಂದ ಶಾಸಕ ಪುಟ್ಟರಂಗಶೆಟ್ಟಿಗೆ ಅಭಯ ನೀಡಿದ್ದು, ಹೆಚ್ಚಿನ ಆನೆ ಹಾಗೂ ನುರಿತ ಪಶು ವೈದ್ಯರನ್ನ ಕಳಿಸುವ ಆಶ್ವಾಸನೆ ನೀಡಿದ್ದಾರೆ. ನುರಿತ ಪಶು ವೈದ್ಯರ ಕೊರತೆ ಇರುವುದನ್ನು ಶಾಸಕ ಪುಟ್ಟರಂಗಶೆಟ್ಟಿ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಚಾಮರಾಜನಗರ: ಹುಲಿ ಕಾಟದಿಂದ ಸದ್ಯಕ್ಕಿಲ್ಲ ಮುಕ್ತಿ; ವ್ಯಾಘ್ರಗಳನ್ನು ಹಿಡಿಯಲಾಗದೆ ತಲೆ ಮೇಲೆ ಕೈ ಹೊತ್ತು ಕುಳಿತ ಅರಣ್ಯ ಇಲಾಖೆ

ಸದ್ಯ ಶಾಸಕ ಪುಟ್ಟರಂಗಶೆಟ್ಟಿ ಖುದ್ದು ಅರಣ್ಯ ಸಿಬ್ಬಂದಿಯ ಜೊತೆ ಪರಿಶೀಲನೆ ಕಾರ್ಯ ನಡೆಸಿದ್ದಾರೆ. ಅರಣ್ಯ ಸಿಬ್ಬಂದಿಯ ಜೊತೆ ಪರಿಶೀಲನೆ ವೇಳೆ ಡ್ರೋನ್ ಕ್ಯಾಮೆರಾದಲ್ಲಿ ಕಲ್ಲು ಕ್ವಾರಿಯ ಜಾಗದಲ್ಲಿ ತಾಯಿ ಹುಲಿ ಹಾಗೂ ಮರಿಹುಲಿಗಳ ಪಗ್ ಮಾರ್ಕ್ ಪತ್ತೆ ಆಗಿದೆ. ಇದೇ ಕಲ್ಲು ಕ್ವಾರಿಯಲ್ಲಿ 5 ಹುಲಿಗಳು ಬೀಡು ಬಿಟ್ಟಿವೆ.

ಕೂಂಬಿಂಗ್​​ಗೆ ಚಾಲನೆ

ಇನ್ನು ದುಬಾರೆ ಆನೆ ಶಿಬಿರದಿಂದ ಈಗಾಗಲೇ ಈಶ್ವರ ಹಾಗೂ ಲಕ್ಷ್ಮಣ ಆನೆಗಳು ಸ್ಥಳಕ್ಕೆ ಆಗಮಿಸಿದ್ದು, ಕೂಂಬಿಂಗ್​​​ ಕಾರ್ಯಚರಣೆಗೆ ಚಾಲನೆ ನೀಡಲಾಗಿದೆ. ನಂಜೆದೇವಪುರ ಗ್ರಾಮಸ್ಥರು ಗಜಪಡೆಗೆ ಪೂಜೆ ಮಾಡಿ ಸ್ವಾಗತಿಸಿದರು. ಈಶ್ವರನ ಮಾವುತರಾಗಿ ವಿಶ್ವನಾಥ್ ಹಾಗೂ ಮಂಜುನಾಥ್​​​​, ಲಕ್ಷ್ಮಣನ ಮಾವುತರಾಗಿ ಸಂಜು ಹಾಗೂ ಸುರೇಶ ಆಗಮಿಸಿದ್ದಾರೆ. ಲಕ್ಷ್ಮಣನಿಗೆ 45 ವರ್ಷಗಳಾಗಿದ್ದು, 50ಕ್ಕೂ ಹೆಚ್ಚು ಕೂಂಬಿಂಗ್​ನಲ್ಲಿ ಭಾಗಿಯಾಗಿದ್ದಾನೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮಾಸ್ಕೋ: ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು – Kannada News | Senior Russian Military Officer Killed in Moscow Car Bomb Explosion

ರಷ್ಯಾ, ಡಿಸೆಂಬರ್ 22: ಮಾಸ್ಕೋದಲ್ಲಿ ಕಾರೊಳಗೆ ಬಾಂಬ್ ಸ್ಫೋಟಗೊಂಡಿದ್ದು, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್  ಸಾವನ್ನಪ್ಪಿದ್ದಾರೆ. ಈ ಸ್ಫೋಟದ ಹಿಂದೆ ಉಕ್ರೇನ್ ಪಡೆಗಳ ಕೈವಾಡವಿರಬಹುದು ಎಂದು ಅಂದಾಜಿಸಲಾಗಿದೆ. ಫೆಬ್ರವರಿ 2022 ರಲ್ಲಿ ಮಾಸ್ಕೋ ಉಕ್ರೇನ್‌ಗೆ ಸೈನ್ಯವನ್ನು ಕಳುಹಿಸಿದ ನಂತರ, ರಷ್ಯಾ ಮತ್ತು ರಷ್ಯಾ ನಿಯಂತ್ರಿತ ಉಕ್ರೇನಿಯನ್ ಪ್ರದೇಶಗಳಲ್ಲಿ ರಷ್ಯಾದ ಮಿಲಿಟರಿ ಅಧಿಕಾರಿಗಳು ಮತ್ತು ಕ್ರೆಮ್ಲಿನ್ ಪರ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಹಲವಾರು ದಾಳಿಗಳು ನಡೆದಿವೆ.

ಏಪ್ರಿಲ್‌ನಲ್ಲಿ ಮಾಸ್ಕೋ ಬಳಿ ನಡೆದ ಕಾರು ಸ್ಫೋಟದಲ್ಲಿ ಜನರಲ್ ಯಾರೋಸ್ಲಾವ್ ಮೊಸ್ಕಾಲಿಕ್ ಸಾವನ್ನಪ್ಪಿದ್ದರು. ಡಿಸೆಂಬರ್ 2024 ರಲ್ಲಿ, ಮಾಸ್ಕೋದಲ್ಲಿ ಬೂಬಿ-ಟ್ರಾಪ್ಡ್ ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟಗೊಂಡು ರಷ್ಯಾದ ರಾಸಾಯನಿಕ ಮತ್ತು ಜೈವಿಕ ರಕ್ಷಣಾ ಪಡೆಗಳ ಮುಖ್ಯಸ್ಥ ಇಗೊರ್ ಕಿರಿಲೋವ್ ಸಾವನ್ನಪ್ಪಿದ್ದರು.

ಏಪ್ರಿಲ್ 2023 ರಲ್ಲಿ ಸೇಂಟ್ ಪೀಟರ್ಸ್‌ಬರ್ಗ್ ಕೆಫೆಯಲ್ಲಿ ಪ್ರತಿಮೆ ಸ್ಫೋಟಗೊಂಡು ರಷ್ಯಾದ ಮಿಲಿಟರಿ ಬ್ಲಾಗರ್ ಮ್ಯಾಕ್ಸಿಮ್ ಫೋಮಿನ್ ಸಾವನ್ನಪ್ಪಿದ್ದರು. ಮತ್ತು ಆಗಸ್ಟ್ 2022 ರಲ್ಲಿ, ವಿಚಾರವಾದಿ ಅಲೆಕ್ಸಾಂಡರ್ ಡುಗಿನ್ ಅವರ ಮಗಳು ಡೇರಿಯಾ ಡುಗಿನಾ ಕಾರ್ ಬಾಂಬ್ ದಾಳಿಯಲ್ಲಿ ಮೃತಪಟ್ಟಿದ್ದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ! ವೀಡಿಯೋ ವೈರಲ್ – Kannada News | Afzalpur Swamiji Shanthalinga Shivacharya Fires Gun: Viral Video Controversy

ಕಲಬುರಗಿ, ಡಿಸೆಂಬರ್ 22: ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಉಡಚಣ ಗ್ರಾಮದ ಶಂಕರಲಿಂಗೇಶ್ವರ ಸಂಸ್ಥಾನದ ಹಿರೇಮಠದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಗಾಳಿಯಲ್ಲಿ ಗುಂಡು ಹಾರಿಸಿದ್ದು, ವಿಡಿಯೋ ವೈರಲ್ ಆಗಿದೆ. ಕೆಲ ತಿಂಗಳು ಮಠದಿಂದ ದೂರವಾಗಿದ್ದ ಸ್ವಾಮೀಜಿ ಇತ್ತೀಚೆಗೆ ವಾಪಸ್ಸಾಗಿದ್ದರು. ಕುಡಿದು ರಂಪಾಟ ಮಾಡಿದ್ದಕ್ಕೆ ಗ್ರಾಮಸ್ಥರು ಸ್ವಾಮೀಜಿಯನ್ನು ಮಠದಿಂದ ಹೊರಗೆ ಹಾಕಿದ್ದರು. ಮಠಕ್ಕೆ ಹೊಸ ಪೀಠಾಧಿಪತಿ ನೇಮಕ ಚರ್ಚೆ ನಡೆದ ಬೆನ್ನಲ್ಲೇ ವಾಪಸಾದ ಸ್ವಾಮೀಜಿ, ಮಠದ ಆವರಣದಲ್ಲಿ ನಿಂತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ವಿರೋಧಿಗಳನ್ನು ಭಯಪಡಿಸಲು ಗುಂಡು ಹಾರಿಸಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಗಿಲ್ಲಿ ನಟಿಸಿದ್ರೂ ‘ಡೆವಿಲ್’ ಟ್ರೇಲರ್​​ನ ಬಿಗ್ ಬಾಸ್​​ನಲ್ಲಿ ಏಕೆ ಹಾಕಿಲ್ಲ? ಬೇರೆಯದೇ ಕಾರಣ ಕೊಟ್ಟ ರಜತ್ – Kannada News | Why ‘Devil’ Movie Trailer Was NOT Promoted in Bigg Boss Kannada Rajat Explains

ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಹಲವು ಸಿನಿಮಾಗಳ ಪ್ರಮೋಷನ್ ಆಗಿದೆ. ಸುದೀಪ್ ನಟನೆಯ ‘ಮಾರ್ಕ್’ ಚಿತ್ರದ ಟ್ರೇಲರ್ ಪ್ರಸಾರ ಕಂಡಿದೆ. ರಾಶಿಕಾ ಶೆಟ್ಟಿ ಅವರ ‘ಪ್ಯಾರ್’ ಸಿನಿಮಾ ಪ್ರಮೋಷನ್ ಕೂಡ ಆಗಿದೆ. ಆದರೆ, ಗಿಲ್ಲಿ ನಟಿಸಿದ ‘ಡೆವಿಲ್’ ಬಗ್ಗೆ ಯಾವುದೇ ಪೋಸ್ಟರ್ ಆಗಲಿ, ವಿಡಿಯೋ ಆಗಲಿ ಪ್ರಸಾರ ಕಂಡಿಲ್ಲ. ಹೀಗೇಕೆ ಎಂಬ ಪ್ರಶ್ನೆಗೆ ರಜತ್ ಉತ್ತರ ನೀಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಇತ್ತೀಚೆಗೆ ರಜತ್ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಬಂದಿದ್ದಾರೆ. ಅವರು ಒಂದು ತಿಂಗಳ ಕಾಲ ದೊಡ್ಮನೆಯಲ್ಲಿ ಇದ್ದರು. ಕಳೆದ ಸೀಸನ್​ ಅಲ್ಲಿ ಮಿಂಚಿದ್ದ ರಜತ್ ಈ ಬಾರಿಯೂ ಬಿಗ್ ಬಾಸ್ ಅಲ್ಲಿ ಮಿಂಚು ಹರಿಸಿದ್ದರು. ಅವರು ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಇದ್ದಿದ್ದು ಅತಿಥಿಯಾಗಿ. ಅವರಿಗೆ ಈ ಬಾರಿಯ ಬಿಗ್ ಬಾಸ್ ಹೊಸ ರೀತಿಯ ಅನುಭವ ನೀಡಿದೆ. ಎಲ್ಲಾ ಸ್ಪರ್ಧಿಗಳ ಜೊತೆ ಕಿತ್ತಾಡಿಕೊಂಡಿದ್ದ ರಜತ್ ಗಿಲ್ಲಿ ಜೊತೆ ಚೆನ್ನಾಗಿಯೇ ಇದ್ದರು. ಅವರು ಗಿಲ್ಲಿ ನಟಿಸಿದ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

‘ಡೆವಿಲ್’ ಸಿನಿಮಾದ ಟ್ರೇಲರ್​ನ ಏಕೆ ಪ್ರಸಾರ ಮಾಡಿಲ್ಲ ಎಂಬ ಪ್ರಶ್ನೆಯನ್ನು ರಜತ್​​ಗೆ ಕೇಳಲಾಯಿತು. ಇದಕ್ಕೆ ಅವರು ನೇರವಾಗಿ ಉತ್ತರ ನೀಡಿದ್ದಾರೆ. ‘ಸಿನಿಮಾ ತಂಡದವರು ಬಂದು ಅಪ್ರೋಚ್ ಮಾಡಿಲ್ಲ. ಅದಕ್ಕೆ ಬಿಗ್ ಬಾಸ್​ನಲ್ಲಿ ಡೆವಿಲ್ ಟ್ರೇಲರ್ ಹಾಕಿಲ್ಲ’ ಎಂದಿದ್ದಾರೆ ರಜತ್.

ಇದನ್ನೂ ಓದಿ: ಬಿಗ್ ಬಾಸ್ ಗೆಲ್ಲೋದು ಯಾರು? ಗಿಲ್ಲಿ ಹೆಸರು ಹೇಳಿಲ್ಲ ಚೈತ್ರಾ

ಬಿಗ್ ಬಾಸ್ ಮನೆಯಲ್ಲಿ ನಿತ್ಯವೂ ಬೆಳಿಗ್ಗೆ ಹಾಡನ್ನು ಪ್ರಸಾರ ಮಾಡಲಾಗುತ್ತದೆ. ಇದಕ್ಕೆ ವಾಹಿನಿಯವರು ಹಾಡಿನ ಹಕ್ಕಿರೋ ಸಂಸ್ಥೆಯ ಜೊತೆ ಮಾತುಕತೆ ನಡೆಸಿ, ಒಪ್ಪಂದ ಮಾಡಿಕೊಂಡ ಬಳಿಕವೇ ಪ್ರಸಾರ ಮಾಡುತ್ತಾರೆ. ಅದೇ ರೀತಿ ಟಿವಿಯಲ್ಲಿ ಟ್ರೇಲರ್​​ಗಳನ್ನು ಪ್ರಸಾರ ಮಾಡಬೇಕು ಎಂದಾಗ ಅದಕ್ಕೆ ಅದರದ್ದೇ ಆದ ಪ್ರಕ್ರಿಯೆ ಇರುತ್ತದೆ. ಇನ್ನು ತಂಡದವರು ಕೂಡ ಸಂಪರ್ಕಿಸಿಲ್ಲ. ಹೀಗಾಗಿ, ಬಿಗ್ ಬಾಸ್​ ಅಲ್ಲಿ ‘ಡೆವಿಲ್’ ಟ್ರೇಲರ್ ಪ್ರಸಾರ ಕಂಡಿಲ್ಲ.‘ಡೆವಿಲ್’ ಸಿನಿಮಾ ಡಿಸೆಂಬರ್ 11ರಂದು ರಿಲೀಸ್ ಆಗಿದೆ. ಈ ಚಿತ್ರ ಈವರೆಗೆ 27 ಕೋಟಿ ರೂಪಾಯಿಗೂ ಹೆಚ್ಚಿನ ಕಲೆಕ್ಷನ್ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮನೆಗೆ ನುಗ್ಗಿ ಹೊಡೆಯುತ್ತಿದ್ದರು, ಅಂಗಲಾಚಿದರೂ ಯಾರೂ ನೆರವಿಗೆ ಬಂದಿಲ್ಲ: ಗರ್ಭಿಣಿ ಹತ್ಯೆ ಬಗ್ಗೆ ಪತಿ ವಿವೇಕಾನಂದ ಕಣ್ಣೀರ ಮಾತು – Kannada News | Hubli Dharwad Honour Killing Case: Husband Vivekananda Breaks Down, Recalls Harrowing Night

ಗರ್ಭಿಣಿ ಹತ್ಯೆ ಬಗ್ಗೆ ಪತಿ ವಿವೇಕಾನಂದ ಕಣ್ಣೀರ ಮಾತು

ಹುಬ್ಬಳ್ಳಿ, ಡಿಸೆಂಬರ್ 22: ‘ಅವರು ಮನೆಗೆ ನುಗ್ಗಿ ಹೊಡೆಯುತ್ತಿದ್ದರು, ಸಿಕ್ಕ ಸಿಕ್ಕ ವಸ್ತುಗಳಿಂದ ಹಲ್ಲೆ ಮಾಡಿ ಹೊಡೆದು ಬಡಿಯುತ್ತಿದ್ದರು. ಆದರೂ ಅಂಗಲಾಚಿದರೂ ಯಾರೊಬ್ಬರೂ ನಮ್ಮ ನೆರವಿಗೆ ಬರಲಿಲ್ಲ’. ಇದು ಧಾರವಾಡ(Dharawad) ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದ ಮರ್ಯಾದಾ ಹತ್ಯೆ ಬಗ್ಗೆ ಮೃತ ಯುವತಿ ಮಾನ್ಯಾಳ ಪತಿ ವಿವೇಕಾನಂದನ ಕಣ್ಣೀರ ಮಾತು. ಘಟನೆ ಬಗ್ಗೆ ‘ಟಿವಿ9’ ಜತೆ ಮಾತನಾಡಿದ ವಿವೇಕಾನಂದ, ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದೆವು. ಈ ಬಗ್ಗೆ ಕುಟುಂಬದವರಿಂದ ಕಿರುಕುಳ ಅನುಭವಿಸುತ್ತಿದ್ದ ಮಾನ್ಯಾ, ನನ್ನ ಬಳಿ ಆಶ್ರಯ ಪಡೆದಿದ್ದಳು. ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೆವು ಎಂದಿದ್ದಾರೆ.

ಕಳೆದ ಮೇ ತಿಂಗಳಲ್ಲಿ ಓಡಿಹೋಗಿ ಮದುವೆಯಾಗಿದ್ದೆವು. ಹಾವೇರಿಯಲ್ಲಿರುವ ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದೆವು. ಈ ಮಧ್ಯೆ, ಮಾನ್ಯಾ ಪೋಷಕರು ತಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಾವು ಪೊಲೀಸರ ಮುಂದೆ ಹೇಳಿಕೆ ನೀಡಿ, ಇಷ್ಟಪಟ್ಟು ಮದುವೆಯಾಗಿರುವುದಾಗಿ ತಿಳಿಸಿದ್ದೆವು. ಮಾನ್ಯಾ ಏಳು ತಿಂಗಳ ಗರ್ಭಿಣಿಯಾಗಿದ್ದರಿಂದ ನಿಯಮಿತವಾಗಿ ಆಕೆಯನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ಯುತ್ತಿದ್ದೆ. ಪೋಷಕರು ನಮ್ಮನ್ನು ಹುಡುಕುತ್ತಿದ್ದಾರೆ ಎಂದು ಮಾನ್ಯಾ ಪೊಲೀಸರಿಗೆ ತಿಳಿಸಿದ್ದರು. ಆಗ ಪೊಲೀಸರು ಮಾನ್ಯಾ ಪೋಷಕರನ್ನು ವಿಚಾರಿಸಿದಾಗ, ‘ನಾವು ನಮ್ಮ ಮಗಳನ್ನು ಸತ್ತಳು ಎಂದು ಕೈಬಿಟ್ಟಿದ್ದೇವೆ’ ಎಂದು ಹೇಳಿಕೆ ನೀಡಿದ್ದರು ಎಂಬುದಾಗಿ ವಿವೇಕಾನಂದ ತಿಳಿಸಿದ್ದಾರೆ.

ವಿವೇಕಾನಂದ ಕುಟುಂಬದವರ ಮೇಲೆ ಶನಿವಾರವೇ ನಡೆದಿತ್ತು ಹಲ್ಲೆ

ಘಟನೆ ನಡೆದ ಹಿಂದಿನ, ಅಂದರೆ ಶನಿವಾರ ಸಂಜೆ 5 ರಿಂದ 5:30 ರ ಸುಮಾರಿಗೆ, ಹುಬ್ಬಳ್ಳಿಯ ಗಿರಿಯಾಳ ರಸ್ತೆಯಲ್ಲಿರುವ ಸೇತುವೆ ಬಳಿ ವಿವೇಕಾನಂದ ಅವರ ತಂದೆ ಮತ್ತು ಮಾವನವರ ಮೇಲೆ ಟ್ರ್ಯಾಕ್ಟರ್‌ನಿಂದ ದಾಳಿ ಮಾಡಲಾಗಿದೆ. ಈ ವಿಷಯ ತಿಳಿದ ವಿವೇಕಾನಂದ ಘಟನಾ ಸ್ಥಳಕ್ಕೆ ಹೋದಾಗ, ಅವರ ಮೇಲೂ ಪ್ರಕಾಶ್ ಗೌಡ, ಅರುಣ್, ಗುಗ್ಗೂರಪ್ಪ, ಮುದುಕಪ್ಪ, ಗುರುಸಿದ್ಧಗೌಡ ಸೇರಿದಂತೆ ಹಲವು ಜನರ ಗುಂಪು ಕಲ್ಲುಗಳಿಂದ ಹಲ್ಲೆ ಮಾಡಿದೆ. ವಿವೇಕಾನಂದ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದರು. ನಂತರ ಅದೇ ಗುಂಪು ವಿವೇಕಾನಂದ ಅವರ ಮನೆಗೆ ಹೋಗಿ, ಅವರ ತಾಯಿ, ತಂದೆ ಮತ್ತು ದೊಡ್ಡಪ್ಪನವರಿಗೂ ಹಲ್ಲೆ ನಡೆಸಿದೆ. ಈ ದಾಳಿಯಲ್ಲಿ ವಿವೇಕಾನಂದ ಅವರ ತಂದೆ ಮತ್ತು ಮಾವನವರ ಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಅವರ ತಾಯಿಗೂ ರಸ್ತೆಯಲ್ಲೇ ಹೊಡೆದಿದ್ದಾರೆ ಎಂಬ ಆರೋಪ ಇದೆ.

ವಿವೇಕಾನಂದ ಮಾತಿನ ವಿಡಿಯೋ

ಏಳು ತಿಂಗಳ ಗರ್ಭಿಣಿಯಾಗಿದ್ದ ಮಾನ್ಯಾ ನಮ್ಮೊಂದಿಗೆ ಬಹಳ ಚೆನ್ನಾಗಿ ಇದ್ದಳು. ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೆವು. ಯಾವುದೇ ರೀತಿಯಲ್ಲಿ ಕಡಿಮೆ ಮಾಡಿರಲಿಲ್ಲ. ತಮ್ಮ ತಂದೆ-ತಾಯಿ ಕೂಡ ಆಕೆಯನ್ನು ಅಪ್ಪ-ಅಮ್ಮನಂತೆಯೇ ನೋಡಿಕೊಂಡಿದ್ದರು ಎಂದು ವಿವೇಕಾನಂದ ಹೇಳಿದ್ದಾರೆ. ಪತ್ನಿಯನ್ನು ಕೊಂದವರಿಗೆ ಗಲ್ಲುಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ‘ಅಪ್ಪನೇ ಗರ್ಭಿಣಿ ಮಗಳನ್ನು ಕುರಿ ಕಡಿದಂಗೆ ಕಡಿದವ್ನೆ’: ಮರ್ಯಾದಾ ಹತ್ಯೆಯ ಭೀಕರತೆ ಬಿಚ್ಚಿಟ್ಟ ಯುವಕನ ದೊಡ್ಡಮ್ಮ

ಕೊಲೆಯಾದ ಮಾನ್ಯಾ ಶವವನ್ನು ಸದ್ಯ ಹುಬ್ಬಳ್ಳಿ ಕಿಮ್ಸ್ ಶವಾಗಾರಕ್ಕೆ ಸ್ಥಳಾಂತರಿಸಲಾಗಿದ್ದು, ಹುಬ್ಬಳ್ಳಿ ಪೊಲೀಸ್ ಕಮಿಷನರ್ ಶಶಿಕುಮಾರ್ ಮತ್ತು ಎಸ್​ಪಿ ಗುಂಜನ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಿಮ್ಸ್ ಆಸ್ಪತ್ರೆ ಮುಂದೆ ಹೆಚ್ಚಿನ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕುಂಬಳ ಕಾಯಿ ಕಳ್ಳ ಅಂದ್ರೆ..; ಸುದೀಪ್ ಹೇಳಿಕೆಯ ಅಸಲಿ ಅರ್ಥ ಹೇಳಿದ ಚಕ್ರವರ್ತಿ – Kannada News | Sudeep’s War statement Clarified: Chandrachud Explains Piracy Battle

‘ನಮ್ಮ ಸಿನಿಮಾ ರಿಲೀಸ್ ಆಗುವಾಗ ಒಂದು ಪಡೆ ಯುದ್ಧಕ್ಕೆ ಸಿದ್ಧವಾಗುತ್ತಿದೆ’ ಎಂದಿದ್ದರು. ಈ ವಾರ್​ಗೆ ತಾವು ರೆಡಿ ಎಂದು ಕೂಡ ಹೇಳಿದ್ದರು. ಈ ಹೇಳಿಕೆ ಚಿತ್ರರಂಗದಲ್ಲಿ ದೊಡ್ಡ ಕಾಡ್ಗಿಚ್ಚನ್ನೇ ಹಬ್ಬಿಸಿದೆ. ದರ್ಶನ್ (Darshan) ಅಭಿಮಾನಿಗಳು ಇದು ದರ್ಶನ್ ಬಗ್ಗೆ ಹೇಳಿದ್ದು ಎಂದು ಅರ್ಥೈಸಿಕೊಂಡರು. ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಸುದೀಪ್​​ಗೆ (Sudeep) ಕೌಂಟರ್ ಕೊಟ್ಟಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಸುದೀಪ್ ಆಪ್ತ ಚಕ್ರವರ್ತಿ ಚಂದ್ರಚೂಡ್ ಸ್ಪಷ್ಟನೆ ನೀಡಿದ್ದಾರೆ. ಸುದೀಪ್ ಆಡಿದ ಮಾತು ಪೈರಸಿ ಮಾಡುವವರ ಬಗ್ಗೆ ಎಂದಿದ್ದಾರೆ.

‘ಸುದೀಪ್ ಹೇಳಿಕೆ ಬಳಿಕ ಕನ್ನಡ ಚಿತ್ರರಂಗದಲ್ಲಿ ಫ್ಯಾನ್ ವಾರ್, ಸ್ಟಾರ್ ವಾರ್ ನಡೀತಾ ಇದೆ ಎಂದು ಹೇಳುತ್ತಾ ಇದಾರೆ. ಮತ್ತೊಂದು ಪಡೆಗೆ ಟಾಂಗ್ ಕೊಟ್ಟಿದ್ದಾರೆ ಎಂದಿದ್ದಾರೆ. ಭಾರತದ ಸಿನಿಮಾಗಳು ರಿಲೀಸ್ ಆದಾಗ ಅದನ್ನು ನಾಶ ಮಾಡಲು ಸಾಕಷ್ಟು ಪ್ರಯತ್ನ ನಡೆಯುತ್ತವೆ. ಒಂದು ಪಡೆ ಸಿನಿಮಾ ಭಯೋತ್ಪಾದಕರ ರೀತಿ ವರ್ತಿಸುತ್ತದೆ. ಸುದೀಪ್ ಸೇರಿದಂತೆ ಎಲ್ಲರೂ ಅದರ ವಿರುದ್ಧ ಹೋರಾಡಬೇಕಿದೆ. ಸುದೀಪ್ ಅವರು ಹೇಳಿದ್ದು ಇದನ್ನೇ’ ಎಂದಿದ್ದಾರೆ ಕಿಚ್ಚನ ಆಪ್ತ ಚಕ್ರರ್ತಿ.

‘ಪೈರಸಿ ಮಾಡಲು 22ಕ್ಕೂ ಹೆಚ್ಚು ಆ್ಯಪ್​​ಗಳು ಇವೆ. ಕ್ಷಣಮಾತ್ರದಲ್ಲಿ ಸಿನಿಮಾ ಡೌನ್​​ಲೋಡ್ ಆಗುತ್ತದೆ. ಮೊದಲ ಶೋ ಮುಗಿಯುತ್ತಿದ್ದಂತೆ ಸಿನಿಮಾ ಲೀಕ್ ಆಗುತ್ತದೆ. ಮ್ಯಾಕ್ಸ್ ಸಿನಿಮಾ ಸಂದರ್ಭದಲ್ಲಿ ಸಾವಿರಾರು ಲಿಂಕ್​​ಗಳನ್ನು ನಾನು ಡಿಲೀಟ್ ಮಾಡಿಸಿದ್ದೇನೆ. ಸಿನಿಮಾನ ಕಷ್ಟಪಟ್ಟು ಮಾಡಬೇಕು. ಸಿನಿಮಾ ರಿಲೀಸ್ ಆದಮೇಲೆಯೂ ಯುದ್ಧ ಮಾಡೋದು ಕಲಾ ಲೋಕಕ್ಕೆ ಬಂದ ಶಾಪ. ಇದರ ವಿರುದ್ಧ ಸಿಎಂ, ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ’ ಎಂದಿದ್ದಾರೆ ಚಕ್ರವರ್ತಿ.

ಚಕ್ರವರ್ತಿ ವಿಡಿಯೋ

‘ದುಡ್ಡು ಕೊಟ್ಟು ಟಿಕೆಟ್ ಖರೀದಿ ಮಾಡಿದ ಎಲ್ಲರೂ ಸಿನಿಮಾನ ಅಥವಾ ಆ ಕೃತಿಯನ್ನು ವಿಮರ್ಶೆ ಮಾಡುವ ಹಕ್ಕಿರುತ್ತದೆ. ಆದರೆ, ವಿಮರ್ಶೆ ಹೆಸರಲ್ಲಿ ಸಿನಿಮಾನ ಸಾಯಿಸಲಾಗುತ್ತಿದೆ. ಇದಕ್ಕೆ ಒಂದು ಪಡೆ ಇದೆ. ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಹರಿಬಿಡಲು ಒಂದು ಪಡೆ ಇದೆ. ಈ ರೀತಿಯ ಪಡೆಗಳ ವಿರುದ್ಧ ಯುದ್ಧ ಮಾಡುತ್ತೇನೆ ಎಂದು ಸುದೀಪ್ ಹೇಳಿದ್ದಾರೆ. ಇದು ತಪ್ಪಾ? ಕುಂಬಳ ಕಾಯಿ ಕಳ್ಳ ಎಂದರೆ ಹೆಗಲುಮುಟ್ಟಿಕೊಳ್ಳಬಾರದು’ ಎಂದಿದ್ದಾರೆ ಚಕ್ರವರ್ತಿ.

ಇದನ್ನೂ ಓದಿ: ನಾನು ಬಾಯಿ ಮುಚ್ಕೊಂಡು ಇದ್ದೆ, ಯಾಕಂದ್ರೆ; ಹುಬ್ಬಳಿಯಿಂದ ಇಡೀ ರಾಜ್ಯಕ್ಕೆ ಸುದೀಪ್ ಖಡಕ್ ಸಂದೇಶ

‘ಪೈರಸಿ ಎಂಬುದು 45, ಮಾರ್ಕ್​​ಗೆ ಇರುವ ಸವಾಲು. ಡೆವಿಲ್ ಸಿನಿಮಾಗೂ ಇದೇ ಸಮಸ್ಯೆ ಇದೆ. ಅವರಿಗೂ ಪೈರಸಿ ಕಾಟ ತಟ್ಟಿದೆ. ಸುದೀಪ್ ಅವರು ಎಂದಿಗೂ ಒಳ್ಳೆಯದನ್ನು ಬಯಸಿದ್ದಾರೆ’ ಎಂದಿದ್ದಾರೆ ಚಕ್ರವರ್ತಿ. ಈ ಮೂಲಕ ಅದಕ್ಕೆ ಬೇರೆ ಅರ್ಥ ಕಲ್ಪಿಸೋದು ಬೇಡ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 12:56 pm, Mon, 22 December 25

Source link

ವಿಶ್ವಕಪ್​ಗಾಗಿ ತಯಾರಿಯಲ್ಲಿದ್ದ ಗಿಲ್​​ಗೆ ಬಿಗ್ ಶಾಕ್ ನೀಡಿದ ಬಿಸಿಸಿಐ – Kannada News | Shubman Gill was called moments before the PC

ಟಿ20 ವಿಶ್ವಕಪ್​ಗಾಗಿ ಬಲಿಷ್ಠ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ ಶುಭ್​ಮನ್ ಗಿಲ್​ಗೆ ಸ್ಥಾನ ನೀಡಲಾಗಿಲ್ಲ ಎಂಬುದೇ ವಿಶೇಷ. ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡದ ಉಪನಾಯಕನಾಗಿ ಗಿಲ್ ಕಣಕ್ಕಿಳಿದಿದ್ದರು. ಹೀಗಾಗಿ ಅವರು ಮುಂಬರುವ ಟಿ20 ವಿಶ್ವಕಪ್​ನಲ್ಲೂ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದರು. ಅಷ್ಟೇ ಅಲ್ಲದೆ ನ್ಯೂಝಿಲೆಂಡ್ ಸರಣಿ ಹಾಗೂ ಟಿ20 ವಿಶ್ವಕಪ್​ಗಾಗಿ ಮಾನಸಿಕವಾಗಿ ತಯಾರಿಯನ್ನೂ ಸಹ ಆರಂಭಿಸಿದ್ದರು. ಆದರೆ ಭಾರತ ತಂಡದ ಘೋಷಣೆಗೂ ಕೆಲವೇ ನಿಮಿಷಗಳ ಮೊದಲು ಬಿಸಿಸಿಐ ಗಿಲ್​ಗೆ ಬಿಗ್ ಶಾಕ್ ನೀಡಿರುವ ವಿಚಾರ ಇದೀಗ ಬಹಿರಂಗವಾಗಿದೆ.

ಭಾರತ ತಂಡದ ಘೋಷಣೆಗೂ ಮುನ್ನ ಮುಂಬೈನಲ್ಲಿರುವ ಬಿಸಿಸಿಐ ಕಚೇರಿಯಲ್ಲಿ ಸಭೆ ಸೇರಲಾಗಿತ್ತು. ಈ ಸಭೆಯಲ್ಲಿ ಆಯ್ಕೆ ಸಮಿತಿ ಸದಸ್ಯರು ಹಾಗೂ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಭಾಗವಹಿಸಿದ್ದರು. ಈ ವೇಳೆಯೇ ಶುಭ್​ಮನ್ ಗಿಲ್ ಅವರನ್ನು ತಂಡದಿಂದ ಕೈ ಬಿಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.

ಅಂದರೆ ಅದಕ್ಕೂ ಮುನ್ನ ಶುಭ್​ಮನ್ ಗಿಲ್ ಭಾರತ ಟಿ20 ತಂಡದ ಭಾಗವಾಗಿಯೇ ಇದ್ದರು. ಆದರೆ ತಂಡದ ಘೋಷಣೆಗೂ ಕೆಲವೇ ನಿಮಿಷಗಳ ಮೊದಲು ಗಿಲ್ ಅವರನ್ನು ಕೈ ಬಿಟ್ಟು ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಇಶಾನ್ ಕಿಶನ್ ಅವರನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದೆ.

ಅದರಂತೆ ಪತ್ರಿಕಾಗೋಷ್ಠಿಗೂ ನಿಮಿಷಗಳ ಮೊದಲು ಶುಭ್​ಮನ್ ಗಿಲ್​ಗೆ ಕರೆ ಮಾಡಿ ತಂಡದಿಂದ ಕೈ ಬಿಟ್ಟಿರುವ ವಿಚಾರವನ್ನು ತಿಳಿಸಲಾಗಿದೆ. ಅತ್ತ ಗಿಲ್ ಮುಂಬರುವ ನ್ಯೂಝಿಲೆಂಡ್ ವಿರುದ್ಧದ ಸರಣಿಗೆ ಹಾಗೂ ಟಿ20 ವಿಶ್ವಕಪ್​ಗಾಗಿ ಮಾನಸಿಕವಾಗಿ ತಯಾರಿಯಲ್ಲಿದ್ದರು.

ಇದಾಗ್ಯೂ ಅವರಿಗೆ ಪರಿಸ್ಥಿತಿಯನ್ನು ಮನವರಿಕೆ ಮಾಡಲಾಯಿತು. ಈ ಮೂಲಕ ಶುಭ್​ಮನ್ ಗಿಲ್ ಅವರನ್ನು ಭಾರತ ಟಿ20 ತಂಡದಿಂದ ಹೊರಗಿಡಲಾಗಿದೆ. ಹೀಗಾಗಿ ಮುಂಬರುವ ಟಿ20 ಸರಣಿಯಲ್ಲಿ ಶುಭ್​ಮನ್ ಗಿಲ್ ಭಾರತದ ಪರ ಕಣಕ್ಕಿಳಿಯುವುದಿಲ್ಲ. ಹಾಗೆಯೇ ಟಿ20 ವಿಶ್ವಕಪ್​ನಲ್ಲೂ ಕಾಣಿಸಿಕೊಳ್ಳುವುದಿಲ್ಲ.

ಇದನ್ನೂ ಓದಿ: IPL 2026: ಈ ಆಟಗಾರನನ್ನು ಖರೀದಿಸಿದ್ದೇ ಕೆಎಲ್ ರಾಹುಲ್​ಗಾಗಿ..!

ಭಾರತ ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್.

Source link