All posts by nagaraj11081993

KSCA, DNA, RCB ಪದಾಧಿಕಾರಿಗಳ ಸಭೆ ಅಂತ್ಯ: ಶಾಸಕರಿಗೆ 1+1 ಜೊತೆಗೆ ಮತ್ತೊಂದು IPL ಟಿಕೆಟ್ ನೀಡಲು ತೀರ್ಮಾನ

KSCA, DNA, RCB ಪದಾಧಿಕಾರಿಗಳ ಸಭೆ ಅಂತ್ಯ: ಶಾಸಕರಿಗೆ 1+1 ಜೊತೆಗೆ ಮತ್ತೊಂದು IPL ಟಿಕೆಟ್ ನೀಡಲು ತೀರ್ಮಾನ

ಬೆಂಗಳೂರು, (ಮಾರ್ಚ್ 30): IPL ಟಿಕೆಟ್ ನೀಡುವಂತೆ ಸದನದಲ್ಲಿ ಶಾಸಕರು ಬೇಡಿಕೆ ಇಟ್ಟಿರುವ ಸಂಬಂಧ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ಕರಾಜ್ಯ ಕ್ರಿಕೆಟ್ ಅಸೋಸಿಯೇಷನ್ (KSCA), DNA ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮ್ಯಾನೇಜ್ಮೆಂಟ್ ಪದಾಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ್ದು, ಸಭೆಯಲ್ಲಿ ಓರ್ವ ಶಾಸಕನಿಗೆ ಮೂರು ಐಪಿಎಲ್ ಟಿಕೆಟ್ ನೀಡಲು ತೀರ್ಮಾನವಾಗಿದೆ. ಈ ಮೊದಲು 1 ಪ್ಲಸ್ 1 ಒಟ್ಟು ಎರಡು ಉಚಿತ ಟಿಕೆಟ್ ನೀಡಲು ತೀರ್ಮಾನಿಸಲಾಗಿತ್ತು. ಆದ್ರೆ, ಇಂದಿನ ಸಭೆಯಲ್ಲಿ ಇನ್ನೊಂದು ಟಿಕೆಟ್ ಹೆಚ್ಚಳ ಮಾಡಲಾಗಿದ್ದು, ಅಂತಿಮವಾಗಿ ಒಬ್ಬ ಎಂಎಲ್​​ಎಗೆ ಒಟ್ಟು 3 ಟಿಕೆಟ್​​ಗಳನ್ನು ನೀಡಲು ಒಪ್ಪಂದವಾಗಿದೆ.

ಪ್ರತಿ ಮ್ಯಾಚ್​​ಗೆ 3 ಟಿಕೆಟ್ ನೀಡಲು ತೀರ್ಮಾನ

IPL ಟಿಕೆಟ್ ನೀಡುವಂತೆ ಸದನದಲ್ಲಿ ಶಾಸಕರು ಬೇಡಿಕೆ ಇಟ್ಟಿರುವ ಸಂಬಂಧ ಇಂದು (ಮಾರ್ಚ್ 30) ಬೆಂಗಳೂರಿನ ಸದಾಶಿವನಗರದ ಡಿಸಿಎಂ ಡಿಕೆ ಶಿವಕುಮಾರ್​​ ನಿವಾಸದಲ್ಲಿ ಮಹತ್ವದ ಸಭೆ ನಡೆದಿದ್ದು, ಸಭೆಯಲ್ಲಿ ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಮತ್ತು ಆರ್​ಸಿಬಿ ಪದಾಧಿಕಾರಿಗಳು ಭಾಗಿಯಾಗಿದ್ದು, ಐಪಿಎಲ್ ಟಿಕೆಟ್ ಹಾಗೂ ಸ್ಟೇಡಿಯಂ ಬಗ್ಗೆ ಮಹತ್ವದ ಚರ್ಚೆಯಾಗಿದ್ದು, ಚಿನ್ನಸ್ವಾಮಿ ಸ್ಡೇಡಿಯಂನಲ್ಲಿ ನಡೆಯುವ ಪ್ರತಿ ಐಪಿಎಲ್ ಪಂದ್ಯದ ಮುರು ಟಿಕೆಟ್ ಹಾಗೂ ಇಂಟರ್​ ನ್ಯಾಷಲ್ ಮ್ಯಾಚ್​​ಗೆ ಎರಡು ಟಿಕೆಟ್ ನೀಡುವ ತೀರ್ಮಾನವಾಗಿದೆ. ಈ ಹಿಂದಿನ ಸಭೆಯಲ್ಲಿ ಎರಡು ಟಿಕೆಟ್ ನೀಡುವ ಬಗ್ಗೆ ತೀರ್ಮಾನವಾಗಿತ್ತು. ಆದ್ರೆ, ಇದೀಗ ಎರಡರ ಜೊತೆಗೆ ಮತ್ತೊಂದು ಎಕ್ಸ್​ಟ್ರಾ ಟಿಕಟ್ ನೀಡಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: ‘ಐಪಿಎಲ್ ಟಿಕೆಟ್​ಗಳು ಖಂಡಿತಾ ನನಗೆ ಬೇಡ’: ವಿಶೇಷ ಟಿಕೆಟ್ ನಿರಾಕರಿಸಿದ ಶಾಸಕ ಸುರೇಶ್ ಕುಮಾರ್!

ಸಭೆ ಬಳಿಕ ಡಿಕೆಶಿ ಹೇಳಿದ್ದೇನು?

ಇನ್ನು ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಶಾಸಕರಿಗೆ ಐಪಿಎಲ್ ಟಿಕೆಟ್ ನೀಡುವ ಸಂಬಂಧ ನಮ್ಮ ಸ್ಪೀಕರ್ ಬಳಿ ಮಾತಾಡಿದ್ದೆ. ಇಂದಿನ ಸಭೆಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿ ಐಪಿಎಲ್ ಮ್ಯಾಚ್ ಗೆ ಶಾಸಕರೊಬ್ಬರಿಗೆ 3 ಟಿಕೆಟ್ ಕೊಡಲು ಒಪ್ಪಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಟೂರ್ನಿ ಇದ್ದಾಗ ಎರಡು ಟಿಕೆಟ್ ಕೊಡುತ್ತಾರೆ. ಇನ್ನೂ ಹೆಚ್ಚು ಬೇಕಾದರೇ ಬೇರೆ ಮನವಿ ಮಾಡಬೇಕು. ಇಲ್ಲಂದ್ರೆ ಖರೀದಿ ಮಾಡಿ ಎಂದು‌ ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಇನ್ನು ಸ್ಟೇಡಿಯಂ ವಿಚಾರಕ್ಕೆ ಸಂಬಂಧಿಸಿ ಚರ್ಚೆ ಮಾಡಿದ್ದೇವೆ. ಹೆಚ್ಚುವರಿ ಸ್ಟೇಡಿಯಂ ವಿಚಾರಕ್ಕೆ ಚರ್ಚೆ ಆಗಿದೆ. ಅದಕ್ಕೆ ಕೆಎಸ್ಸಿಎ ಅವರು ಇವತ್ತು ಬಂದಿದ್ರು. ಕ್ರೀಡಾಂಗಣದಲ್ಲಿ ಆಸನ ಹೆಚ್ಚಿಸೋ ಚಿಂತನೆ ಇದ್ದು, ಕೆಎಸ್ ಸಿ ಎ ಅವರು ಯೋಚನೆ ಮಾಡಿದ್ದಾರೆ. ಅದಕ್ಕೆ ಸರ್ಕಾರಕ್ಕೆ ವರದಿ ನೀಡಿ ಎಂದಿದ್ದೇನೆ ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಆರ್​ಬಿಐ ಹರಸಾಹಸ ಪಟ್ಟರೂ ನಿಲ್ಲದ ರುಪಾಯಿ ಮೌಲ್ಯ ಕುಸಿತ; ಮೊದಲ ಬಾರಿಗೆ 95ರ ಮೈಲಿಗಲ್ಲು ದಾಟಿದ ಭಾರತೀಯ ಕರೆನ್ಸಿ

ನವದೆಹಲಿ, ಮಾರ್ಚ್ 30: ಭಾರತದ ಕರೆನ್ಸಿಯಾದ ರುಪಾಯಿ ಅಮೆರಿಕದ ಡಾಲರ್ (US dollar vs Indian Rupee) ಎದುರು ಕುಸಿತ ಕಾಣುವುದು ಮುಂದುವರಿದಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ರುಪಾಯಿ ಮೌಲ್ಯವು 95ರ ಗಡಿದಾಟಿ ಕುಸಿತ ಕಂಡಿದೆ. ವಿದೇಶೀ ವಿನಿಮಯ ಮಾರುಕಟ್ಟೆಯಲ್ಲಿ ಸೋಮವಾರ ಡಾಲರ್ ಎದುರು ರುಪಾಯಿ 95.21 ಮಟ್ಟಕ್ಕೆ ಕುಸಿಯಿತು. ಭಾರತದ ಕರೆನ್ಸಿ ಮೌಲ್ಯದ ಕುಸಿತವನ್ನು ತಪ್ಪಿಸಲು ರಿಸರ್ವ್ ಬ್ಯಾಂಕ್ ಕೈಗೊಂಡ ಕೆಲ ಕ್ರಮಗಳು ನಿರೀಕ್ಷಿತ ಫಲ ಕೊಡಲಿಲ್ಲ.

ವಿದೇಶೀ ಹೂಡಿಕೆಗಳ ಹೊರಹರಿವು ಸತತವಾಗಿ ನಡೆಯುತ್ತಿರುವುದು ರುಪಾಯಿ ಮೇಲೆ ಒತ್ತಡ ಹಾಕಿದೆ. ಬ್ಯಾಂಕುಗಳ ವಿದೇಶೀ ವಿನಿಮಯ ಸ್ಥಾನಗಳಿಗೆ ಆರ್​ಬಿಐ ಮಿತಿ ಹಾಕಿದರೂ ಅದರಿಂದ ರುಪಾಯಿ ಮೌಲ್ಯ ಕುಸಿತ ತಡೆಯಲು ಆಗಲಿಲ್ಲ.

ಇದನ್ನೂ ಓದಿ: ಏಪ್ರಿಲ್ 1ರಿಂದ ಚೀನೀ ಸಿಸಿಟಿವಿ ಕ್ಯಾಮರಾಗಳಿಗೆ ನಿರ್ಬಂಧ; ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ ಈ ಕ್ರಮ

ರುಪಾಯಿ ಕುಸಿತಕ್ಕೆ ಏನು ಕಾರಣಗಳು?

ಹಿಂದಿನ ಪ್ಯಾರಾದಲ್ಲೇ ಹೇಳಿದಂತೆ, ವಿದೇಶೀ ಪೋರ್ಟ್​ಫೋಲಿಯೋ ಹೂಡಿಕೆಗಳ ಹೊರಹರಿವು ಮುಂದುವರಿದಿರುವುದು ರುಪಾಯಿ ಕುಸಿತಕ್ಕೆ ಕಾರಣಗಳಲ್ಲಿ ಒಂದು. ಹಾಗೆಯೇ, ತೈಲ ಬೆಲೆ ಹೆಚ್ಚಿರುವುದರಿಂದ ಭಾರತದ ಆಮದು ವೆಚ್ಚ ಹೆಚ್ಚಾಗಿದೆ. ಕರೆನ್ಸಿ ಮೌಲ್ಯ ಕುಸಿತ, ಆಮದು ವೆಚ್ಚದ ಏರಿಕೆ, ಇವೆರಡು ಕೂಡ ರುಪಾಯಿ ಮೇಲೆ ಡಬಲ್ ಎಫೆಕ್ಟ್ ಕೊಟ್ಟಿದೆ.

ಕಚ್ಛಾ ತೈಲ ಬೆಲೆ ಅಧಿಕ ಮಟ್ಟದಲ್ಲಿರುವುದು ಭಾರತದ ಆರ್ಥಿಕತೆಗೂ ಹಿನ್ನಡೆ ತರುವ ಸಾಧ್ಯತೆ ಹೊಂದಿದೆ. ಇವೆಲ್ಲವೂ ಕೂಡ ಈಕ್ವಿಟಿ ಮಾರುಕಟ್ಟೆಯನ್ನೂ ಕೆಳಗೆ ನೂಕುತ್ತಿವೆ.

ಇದನ್ನೂ ಓದಿ: ಯುಪಿಐ ವಹಿವಾಟು ಸೇರಿದಂತೆ ವಿವಿಧ ಬ್ಯಾಂಕುಗಳ ಎಟಿಎಂ ಟ್ರಾನ್ಸಾಕ್ಷನ್ ನಿಯಮಗಳಲ್ಲಿ ಬದಲಾವಣೆ, ಗಮನಿಸಿ

ಡಾಲರ್ ಎದುರು ರುಪಾಯಿ ಕಂಡಿರುವ ಕುಸಿತವು 10 ವರ್ಷದ ಬಾಂಡ್ ಯೀಲ್ಡ್ (Bond Yield) ಅನ್ನು ಹೆಚ್ಚಿಸಿದೆ. ಬಾಂಡ್ ಯೀಲ್ಡ್ ಶೇ. 7ರ ಮಟ್ಟ ದಾಟಿದೆ. 2024ರ ಜುಲೈ ನಂತರ, ಅಂದರೆ ಎರಡು ವರ್ಷದಲ್ಲಿ ಇದು ಅತಿಹೆಚ್ಚಿನ ಬಾಂಡ್ ಯೀಲ್ಡ್ ಮಟ್ಟವಾಗಿದೆ. ಆರ್​ಬಿಐ ತನ್ನ ಮುಂದಿನ ಎಂಪಿಸಿ ಸಭೆಯಲ್ಲಿ ರಿಪೋ ದರವನ್ನು ಹೆಚ್ಚಿಸುವ ಒತ್ತಡಕ್ಕೆ ಸಿಲುಕಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಗಡಿ ಜಿಲ್ಲೆ ಚಾಮರಾಜನಗರದ ರೈತರಿಗೆ ಕಾಡಾನೆ ಕಾಟ: ಬೆಳೆದ ಬೆಳೆ ಕೈಸೇರುವ ಮುನ್ನವೇ ಸರ್ವನಾಶ!

ಚಾಮರಾಜನಗರ, ಮಾರ್ಚ್​​ 30: ಮಾನವ ಕಾಡು ಪ್ರಾಣಿ ಸಂಘರ್ಷಕ್ಕೆ ಕುಖ್ಯಾತು ಪಡೆದ ಜಿಲ್ಲೆಗಳ ಪೈಕಿ ಚಾಮರಾಜನಗರದಲ್ಲಿ ಕಾಡಾನೆಗಳ ಉಪಟಳ ಮತ್ತೆ ಹೆಚ್ಚಾಗಿದೆ. ತಡರಾತ್ರಿ ಹನೂರು ತಾಲೂಕಿನ ಚಿಕ್ಕರಂಗಶೆಟ್ಟಿ ದೊಡ್ಡಿಗೆ ನುಗ್ಗಿ ಒಂಟಿ ಸಲಗ ದಾಂಧಲೆ ನಡೆಸಿದ್ದರೆ, ಮಂಚಹಳ್ಳಿ ಬಳಿ ಕಾಡಾನೆ ಹಿಂಡು ರೈತರು ಕಷ್ಟಪಟ್ಟು ಬೆಳೆದಿದ್ದ ಟೊಮ್ಯಾಟೋ ಬೆಳೆಯನ್ನು ಸರ್ವನಾಶ ಮಾಡಿವೆ. ಮಂಜುನಾಥ್ ಎಂಬುವವರ ಜಮೀನಿನಲ್ಲಿ ಕಟಾವು ಮಾಡಿ ಇಟ್ಟಿದ್ದ ಕ್ವಿಂಟಾಲ್​​ಗಟ್ಟಲೆ ಟೊಮ್ಯಾಟೋವನ್ನ ತಿಂದು ತೇಗಿ ಪರಾರಿಯಾಗಿವೆ. ಹೀಗಾಗಿ ಕತ್ತಲಾದರೆ ಸಾಕು ಮನೆಯಿಂದ ಹೊರಬರಲೂ ಈ ಭಾಗದ ಜನರು ಭಯಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತಾರಣ್ಯ ಸಿಬ್ಬಂದಿಗೆ ತಿಳಿಸಿದರೂ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಕಾಡಾನೆ ಉಪಟಳದಿಂದ ನಮಗೆ ಮುಕ್ತಿ ಕೊಡಿಸಿ ಎಂದು ಗ್ರಾಮಸ್ಥರ ಮನವಿ ಮಾಡಿದ್ದಾರೆ.

ಮತ್ತೊಂದೆಡೆ ದಿನ ನಿತ್ಯ ಕತ್ತಲಾದ್ರೆ ಸಾಕು ಹನೂರು ತಾಲೂಕಿನ ಚಿಕ್ಕರಂಗಶೆಟ್ಟಿ ದೊಡ್ಡಿ ಗ್ರಾಮಕ್ಕೆ ನುಗ್ಗುವ ಒಂಟಿ ಸಲಗ ಪುಂಡಾಟ ಮೆರೆಯುತ್ತದೆ. ಸಿಕ್ಕ ಸಿಕ್ಕ ಕಡೆ ದಾಂಗುಡಿ ಇಡುವುದು ಸಾಲದು ಎಂದು ಜಮೀನಿನಲ್ಲಿ ಬೆಳೆದಿದ್ದ ಜೋಳ, ಕಬ್ಬುಗಳನ್ನ ತಿಂದು ನಾಶ ಪಡಿಸುತ್ತಿದೆ. ದೂರು ನೀಡಿದರೂ ಅರಣ್ಯ ಇಲಾಖೆ ಅಧಿಕಾರಿಗಳ ಸ್ಪಂದಿಸದೇ ಇರೋದು ಒಂದೆಡೆಯಾದರೆ, ಬ್ಯಾರಿಕೇಡ್​​ಗಳನ್ನ ಹಾಕಿದರೂ ಅವು ಪ್ರಯೋಜನಕ್ಕೆ ಬರುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಕೃಷಿಯನ್ನೇ ನಂಬಿ ಬದುಕುತ್ತಿರುವ ಸ್ಥಳೀಯರು, ಕನಿಷ್ಠ ಜಮೀನಿಗೆ ಹೋಗೋದಾದರೂ ಹೇಗೆ? ಬೆಳೆದ ಬೆಳೆಗೆ ನೀರುಣಿಸೋದು ಸಾಧ್ಯವಾ? ಎಂದು ರೈತರು ಅರಣ್ಯ ಇಲಾಖೆಯ ಸಿಬ್ಬಂದಿ ವಿರುದ್ದ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಪ್ರಜ್ಞೆ ತಪ್ಪಿತೆಂದು ಹಿಡಿಯಲು ಹೋದಾಗ ದಿಢೀರ್ ಎದ್ದು ದಾಳಿ ಮಾಡಿದ ಹುಲಿ! ಆಮೇಲಾಗಿದ್ದೇ ಬೇರೆ

ರೈತರಿಂದ ಹೋರಾಟದ ಎಚ್ಚರಿಕೆ

ಕಾಡಾನೆಗಳೂ ಸೇರಿ ಕಾಡು ಪ್ರಾಣಿಗಳ ಉಪಟಳ ದಿನದಿಂದ ದಿನಕ್ಕೆ ಈ ಭಾಗದಲ್ಲಿ ಹೆಚ್ಚಾಗುತ್ತಿರುವ ಕಾರಣ ತುರ್ತಾಗಿ ಸಮಸ್ಯೆ ಬಗೆಹರಿಸದೇ ಇದ್ದಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನೂ ರೈತರು ನೀಡಿದ್ದಾರೆ. ಸಾಲ ಮಾಡಿ ಬೆಳೆದ ಬೆಳೆ ತಮ್ಮ ಕೈಸೇರುವ ಮುನ್ನವೇ ಕಾಡು ಪ್ರಾಣಿಗಳ ಹಾವಳಿಯಿಂದ ನಷ್ಟವಾಗುತ್ತಿರುವ ಕಾರಣ ಅರಣ್ಯ ಇಳಾಖೆ ಶೀಘ್ರ ಈ ಬಗ್ಗೆ ಕ್ರಮ ಕೈಗೊಳ್ಳಲೇ ಬೇಕು ಎಂಬ ಒತ್ತಾಯವೂ ಸ್ಥಳೀಯರಿಂದ ಕೇಳಿಬಂದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮುಸ್ಲಿಂ ಯುವಕನ ಮದುವೆ ಸಂಭ್ರಮದ ವೇಳೆ ದೈವಕ್ಕೆ ಅವಮಾನ? ವಿವಾದಕ್ಕೆ ಕಾರಣವಾಯ್ತು ವರನ ವೇಷ

ಮಡಿಕೇರಿ, ಮಾರ್ಚ್​​ 30: ಮಡಿಕೇರಿ ತಾಲ್ಲೂಕಿನ ಎಮ್ಮೆಮಾಡು ಗ್ರಾಮದಲ್ಲಿ ಮುಸ್ಲಿಂ ಯುವಕನೋರ್ವನ ವಿವಾಹದ ಹಿಂದಿನ ದಿನ ಮಧುಮಗನಿಗೆ ಎಲೆಗಳನ್ನ ಸುತ್ತಿ, ಮುಖಕ್ಕೆ ಬಣ್ಣ ಬಳಿದು ಹಾಡುತ್ತಾ ಎಂಜಾಯ್ ಮಾಡಿರೋದೀಗ ಹೊಸ ವಿವಾದ ಹುಟ್ಟುಹಾಕಿದೆ. ಇದು ದೈವ ನರ್ತನವನ್ನು ಹೋಲುತ್ತಿದ್ದು, ತುಳುನಾಡು ಮತ್ತು ಕೊಡಗಿನ ದೈವ ಸಂಸ್ಕೃತಿಗೆ ಅವಮಾನ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮೈ ತುಂಬಾ ಸೊಪ್ಪು, ಬಾಳೆಕೊನೆ, ಮುಖದ ತುಂಬ ಬಣ್ಣ ಮತ್ತು ಕೈಯಲ್ಲಿ ದೊಣ್ಣೆ ಹಿಡಿದಿರೋ ಯುವಕನ ವಿಡಿಯೋ ವೈರಲ್​​ ಆಗಿರುವ ಬೆನ್ನಲ್ಲೇ ಆಕ್ರೋಶ ಭುಗಿಲೆದ್ದಿದೆ.

ಈ ವಿಚಾರವೀಗ ಶಾಂತವಾಗಿದ್ದ ಕೊಡಗು ಜಿಲ್ಲೆಯಲ್ಲಿ ವಿವಾದದ ಕಿಡಿ ಹೊತ್ತಿಸಿದ್ದು, ಯುವಕರ ಹುಚ್ಚಾಟದ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿದೆ. ದೈವ ನರ್ತನವನ್ನ ಅವಮಾನ ಮಾಡಿದ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿಬಂದಿದ್ದು, ಕೊಡಗು ಜಿಲ್ಲಾ ದೈವ ನರ್ತಕರ ಮತ್ತು ದೈವ ಆರಾಧಕರ ಸಂಘ ಈ ಸಂಬಂಧ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಲಿಖಿತ ದೂರು ನೀಡಿದೆ. ಕೊರಗಜ್ಜ, ಪಂಜುರ್ಲಿ, ಪಾಶಣಮೂರ್ತಿ ಸೇರಿದಂತೆ ಹತ್ತಾರು ಬಗೆಯ ದೈವ ನರ್ತನ ಮತ್ತು ದೈವಾರಾಧನೆ ಜಿಲ್ಲೆಯಲ್ಲಿ ಆಚರಣೆಯಲ್ಲಿದೆ. ದೈವಗಳನ್ನ ನಂಬುವ ಭಕ್ತರ ಮನಸ್ಸಿಗೆ ಘಟನೆಯಿಂದ ಘಾಸಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ.

(ಮಾಹಿತಿ ಅಪ್ಡೇಟ್​​ ಆಗುತ್ತಿದೆ)

Source link

ಏಪ್ರಿಲ್​​ನಲ್ಲಿ ಈ ರಾಶಿಯವರ ಬದುಕು ಬಂಗಾರ: ಕುಬೇರ ಯೋಗ ನಿಮ್ಮದು

ಈ ತಿಂಗಳು ನಿಮ್ಮ ರಾಶ್ಯಾಧಿಪತಿ ಬುಧನ ಸಂಚಾರ ಮತ್ತು ಹಿಮ್ಮುಖ ಚಲನೆಯ ಗುರುವಿನ ಪ್ರಭಾವದಿಂದಾಗಿ ಜೀವನದ ವಿವಿಧ ಕ್ಷೇತ್ರಗಳಲ್ಲಿ ಮಿಶ್ರಫಲಗಳು ಕಂಡುಬರಲಿವೆ. ಏಪ್ರಿಲ್ ಮಾಸದ ಮಿಥುನ ರಾಶಿಯ ಭವಿಷ್ಯದ ಸಮಗ್ರ ನೋಟ ಇಲ್ಲಿದೆ. ಇದರ ಆಧಾರದಲ್ಲಿ ನಿಮ್ಮ ಜೀವನವನ್ನು ರೂಪಿಸಿಕೊಳ್ಳಬಹುದು

​ಉದ್ಯೋಗ ಮತ್ತು ವೃತ್ತಿಜೀವನ

​ಉದ್ಯೋಗ ಕ್ಷೇತ್ರದಲ್ಲಿ ಈ ತಿಂಗಳು ನಿಮಗೆ ಶುಭ ಫಲಗಳು ಹೆಚ್ಚಾಗಿವೆ. ದಶಮ ಸ್ಥಾನದ ಮೇಲೆ ಗ್ರಹಗಳ ಶುಭ ದೃಷ್ಟಿ ಇರುವುದರಿಂದ ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಭಾವ ಹೆಚ್ಚಲಿದೆ. ​ಹೊಸ ಜವಾಬ್ದಾರಿಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ​ಸಹೋದ್ಯೋಗಿಗಳ ಮತ್ತು ಮೇಲಧಿಕಾರಿಗಳ ಸಂಪೂರ್ಣ ಸಹಕಾರ ಸಿಗಲಿದೆ. ​ವೃತ್ತಿಯಲ್ಲಿ ಬಡ್ತಿ ಅಥವಾ ವರ್ಗಾವಣೆಯನ್ನು ನಿರೀಕ್ಷಿಸುತ್ತಿರುವವರಿಗೆ ಈ ತಿಂಗಳು ಸಕಾರಾತ್ಮಕ ಸುದ್ದಿ ಸಿಗುವ ಸಾಧ್ಯತೆ ಇದೆ.

ವಿದ್ಯಾಭ್ಯಾಸ

​ವಿದ್ಯಾರ್ಥಿಗಳಿಗೆ ಈ ತಿಂಗಳು ಮಧ್ಯಮ ಫಲದಾಯಕವಾಗಿದೆ. ​ಬುಧನ ಸ್ಥಾನ ಬದಲಾವಣೆಯಿಂದಾಗಿ ಏಕಾಗ್ರತೆಯಲ್ಲಿ ಸ್ವಲ್ಪ ಏರುಪೇರಾಗಬಹುದು. ​ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವವರು ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ​ತಾಂತ್ರಿಕ ಮತ್ತು ಸಂಶೋಧನಾ ಕ್ಷೇತ್ರದಲ್ಲಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಿದೆ. ಓದಿನ ಕಡೆಗೆ ಹೆಚ್ಚಿನ ಗಮನ ಹರಿಸುವುದು ಒಳಿತು.

ಹಣಕಾಸು ಸ್ಥಿತಿ

​ಹಣಕಾಸಿನ ವಿಚಾರದಲ್ಲಿ ಮಿಥುನ ರಾಶಿಯವರಿಗೆ ಈ ತಿಂಗಳು ಶುಭ ಫಲ ನೀಡಲಿದೆ. ​ಆದಾಯದ ಹೊಸ ಮೂಲಗಳು ತೆರೆದುಕೊಳ್ಳಲಿವೆ. ​ಹಳೆಯ ಹೂಡಿಕೆಗಳಿಂದ ಲಾಭ ಬರುವ ಸಾಧ್ಯತೆ ಇದೆ. ಐಷಾರಾಮಿ ವಸ್ತುಗಳ ಖರೀದಿಗಾಗಿ ಹಣ ವ್ಯಯವಾಗಬಹುದು, ಆದರೆ ಅದು ನಿಮ್ಮ ಆರ್ಥಿಕ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರದು.

ವಿವಾಹ ಮತ್ತು ಕೌಟುಂಬಿಕ ಜೀವನ

​ವಿವಾಹ ಮತ್ತು ವೈಯಕ್ತಿಕ ಜೀವನದಲ್ಲಿ ಮಧ್ಯಮ ಫಲಗಳು ಕಂಡುಬರುತ್ತಿವೆ. ​ವಿವಾಹ ಸಂಬಂಧಗಳಿಗಾಗಿ ಹುಡುಕಾಟ ನಡೆಸುತ್ತಿರುವವರಿಗೆ ಉತ್ತಮ ಪ್ರಸ್ತಾಪಗಳು ಬರಬಹುದು. ​ದಾಂಪತ್ಯ ಜೀವನದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡುವ ಸಾಧ್ಯತೆ ಇರುವುದರಿಂದ, ಸಂಗಾತಿಯೊಂದಿಗೆ ಸಮಾಲೋಚನೆ ನಡೆಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.
​ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಇರಲಿ.

​ವಿದೇಶ ಪ್ರವಾಸ

​ವಿದೇಶಕ್ಕೆ ಹೋಗುವ ಹಂಬಲ ಇರುವವರಿಗೆ ಈ ತಿಂಗಳು ಅತ್ಯಂತ ಆಶಾದಾಯಕವಾಗಿದೆ. ​ವೀಸಾ ಸಂಬಂಧಿತ ಸಮಸ್ಯೆಗಳು ಬಗೆಹರಿಯಲಿವೆ.​ಉದ್ಯೋಗದ ನಿಮಿತ್ತ ಅಥವಾ ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಲು ಬಯಸುವವರಿಗೆ ಗ್ರಹಗತಿಗಳು ಪೂರಕವಾಗಿವೆ. ​ಅನಿರೀಕ್ಷಿತವಾಗಿ ದೂರದ ಪ್ರಯಾಣ ಮಾಡುವ ಸಂದರ್ಭಗಳು ಎದುರಾಗಲಿವೆ.

ಸಾಲ ಮತ್ತು ಶತ್ರು ಬಾಧೆ

​ಸಾಲದ ವಿಚಾರದಲ್ಲಿ ನೀವು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ​ಅನಗತ್ಯ ಸಾಲ ಮಾಡುವುದನ್ನು ಈ ತಿಂಗಳು ತಪ್ಪಿಸಿ. ​ಹಳೆಯ ಸಾಲವನ್ನು ತೀರಿಸಲು ನಿಮಗೆ ಅವಕಾಶಗಳು ಸಿಗುತ್ತವೆ, ಆದರೆ ಹೊಸದಾಗಿ ಯಾರಿಗಾದರೂ ಹಣ ನೀಡುವಾಗ ಜಾಗರೂಕರಾಗಿರಿ.
​ಗುಪ್ತ ಶತ್ರುಗಳ ಬಗ್ಗೆ ನಿಗಾ ಇರಲಿ, ನಿಮ್ಮ ಯೋಜನೆಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಡಿ.

​ಈ ತಿಂಗಳು ನಿಮ್ಮ ಸಂವಹನ ಕಲೆ ನಿಮಗೆ ಶ್ರೀರಕ್ಷೆಯಾಗಲಿದೆ. ಮಾತು ಮತ್ತು ತಾಳ್ಮೆಯಿಂದ ಕಠಿಣ ಪರಿಸ್ಥಿತಿಗಳನ್ನು ನಿಭಾಯಿಸಬಹುದು. ಪ್ರತಿ ಬುಧವಾರ ವಿಷ್ಣು ಸಹಸ್ರನಾಮ ಪಠಿಸುವುದು ಅಥವಾ ಹಸಿರು ಬಣ್ಣದ ಬಟ್ಟೆಯನ್ನು ಧರಿಸುವುದು ನಿಮ್ಮ ರಾಶಿಗೆ ಹೆಚ್ಚಿನ ಶುಭಫಲಗಳನ್ನು ನೀಡಲಿದೆ.

– ಲೋಹಿತ ಹೆಬ್ಬಾರ್

Source link

‘ಧುರಂಧರ್ 2’ ನಟಿ ಸಾರಾ ಅರ್ಜುನ್​ಗೆ ಫ್ಯಾನ್ಸ್ ಮುತ್ತಿಗೆ: ಮಗಳಿಗೆ ಬಾಡಿಗಾರ್ಡ್ ಆದ ತಂದೆ

‘ಧುರಂಧರ್ 2’ (Dhurandhar 2) ಚಿತ್ರದ ಅಭೂತಪೂರ್ವ ಯಶಸ್ಸಿನಿಂದ ನಟಿ ಸಾರಾ ಅರ್ಜುನ್ ಅವರಿಗೆ ಖ್ಯಾತಿ ಹೆಚ್ಚಾಗಿದೆ. ಸಾರಾ ಅರ್ಜುನ್ ಅವರಿಗೆ ಕ್ರಿಕೆಟ್ ಬಗ್ಗೆಯೂ ಕ್ರೇಜ್ ಇದೆ. ಭಾನುವಾರ (ಮಾರ್ಚ್ 29) ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಐಪಿಎಲ್ ಪಂದ್ಯವನ್ನು ವೀಕ್ಷಿಸಲು ಅವರು ಆಗಮಿಸಿದ್ದರು. ಆದರೆ, ಪಂದ್ಯ ಮುಗಿದು ಹೊರಬರುವಾಗ ಸಾರಾ ಅರ್ಜುನ್ (Sara Arjun) ಅವರು ಅಭಿಮಾನಿಗಳ ನಡುವೆ ಸಿಲುಕಿಕೊಂಡ ಘಟನೆ ನಡೆದಿದೆ.

20 ವರ್ಷ ವಯಸ್ಸಿನ ಸಾರಾ ಅರ್ಜುನ್ ಅವರು ಮುಂಬೈ ಇಂಡಿಯನ್ಸ್ ತಂಡದ ಜೆರ್ಸಿ ಧರಿಸಿ, ತಮ್ಮ ಪೋಷಕರಾದ ನಟ ರಾಜ್ ಅರ್ಜುನ್ ಮತ್ತು ತಾಯಿ ಸನ್ಯಾ ಅರ್ಜುನ್ ಅವರೊಂದಿಗೆ ಪಂದ್ಯ ವೀಕ್ಷಿಸಲು ಬಂದಿದ್ದರು. ಕ್ರೀಡಾಂಗಣದಲ್ಲಿ ಪಂದ್ಯವನ್ನು ಪೂರ್ಣವಾಗಿ ಆನಂದಿಸಿದ ನಂತರ ಅವರು ಹೊರಬರುತ್ತಿದ್ದಂತೆ ಅಭಿಮಾನಿಗಳ ಗುಂಪು ಅವರನ್ನು ಸುತ್ತುವರಿಯಿತು.

ಸದ್ಯ ‘ಧುರಂಧರ್ 2’ ಚಿತ್ರದ ಭರ್ಜರಿ ಯಶಸ್ಸಿನಿಂದಾಗಿ ಸಾರಾ ಅವರ ಜನಪ್ರಿಯತೆ ಎಲ್ಲ ಕಡೆಗಳಲ್ಲಿ ಹಬ್ಬಿದೆ. ಸ್ಟೇಡಿಯಂನಿಂದ ಹೊರಬರುತ್ತಿದ್ದ ಸಾರಾ ಅವರನ್ನು ಗುರುತಿಸಿದ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದರು. ಪರಿಸ್ಥಿತಿ ಕೈಮೀರುತ್ತಿದ್ದಂತೆಯೇ ಮಗಳ ರಕ್ಷಣೆಗೆ ನಿಂತ ತಂದೆ ರಾಜ್ ಅರ್ಜುನ್ ಅವರು ಸ್ವತಃ ಬಾಡಿಗಾರ್ಡ್‌ನಂತೆ ಕಾರ್ಯನಿರ್ವಹಿಸಿದರು.

ಅಭಿಮಾನಿಗಳ ಗುಂಪನ್ನು ಸರಿಸುತ್ತಾ, ಸಾರಾ ಅವರನ್ನು ಸುರಕ್ಷಿತವಾಗಿ ಕಾರಿನವರೆಗೆ ಕರೆದೊಯ್ದರು ರಾಜ್ ಅರ್ಜುನ್. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಅಭಿಮಾನಿಗಳ ಜೊತೆ ಮಾತಾಡಬೇಕು ಎಂಬ ಆಸೆ ಸಾರಾ ಅವರಿಗೆ ಇದ್ದಂತೆ ಕಾಣುತ್ತದೆ. ಆದರೆ ತಂದೆಯಾಗಿ ರಾಜ್ ಅರ್ಜುನ್ ಅವರು ಆ ಕ್ಷಣದಲ್ಲಿ ಜಾಗ್ರತೆ ವಹಿಸಿದ್ದು ಕೂಡ ನೆಟ್ಟಿಗರ ಮೆಚ್ಚುಗೆಗೆ ಕಾರಣ ಆಗಿದೆ.

ಇದನ್ನೂ ಓದಿ: ‘ಧುರಂಧರ್ 2’ ಬಗ್ಗೆ ಶಾರುಖ್ ಖಾನ್​ ಮೌನ: ಆದರೂ ರಣವೀರ್ ಸಿಂಗ್ ಜೊತೆ ಪಾರ್ಟಿ

ವಾಂಖೆಡೆ ಸ್ಟೇಡಿಯಂ ಹೊರಗೆ ನಡೆದ ಈ ಗದ್ದಲದ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಮಗಳನ್ನು ರಕ್ಷಿಸಲು ನಟ ರಾಜ್ ಅರ್ಜುನ್ ತೋರಿದ ಕಾಳಜಿಯನ್ನು ಕಂಡ ನೆಟ್ಟಿಗರು, ‘ತಂದೆ ಎಂದರೆ ಹೀಗಿರಬೇಕು’ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ಪಂದ್ಯ ಗೆದ್ದ ಸಂಭ್ರಮದ ನಡುವೆ ಸಾರಾ ಅವರ ಈ ವಿಡಿಯೋಗಳು ಕೂಡ ಗಮನ ಸೆಳೆಯುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸೇತುವೆಯಿಂದ ಹಳ್ಳಕ್ಕೆ ಬಿದ್ದ ಬಸ್‌: ಪ್ರಯಾಣಿಕರು ಬದುಕುಳಿದಿದ್ದೇ ಪವಾಡ

ಶಿವಮೊಗ್ಗ, ಮಾರ್ಚ್​ 30: ಖಾಸಗಿ ಬಸ್​​​ ಒಂದು ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ವೀರಾಪುರ ಗ್ರಾಮದ ಕಾಗೆಹಳ್ಳದಲ್ಲಿ ನಡೆದಿದೆ. ಬಸ್​ನಲ್ಲಿದ್ದ 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸದ್ಯ  ಗಾಯಾಳುಗಳಿಗೆ ಭದ್ರಾವತಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿಯಿಂದ ಭದ್ರಾವತಿಗೆ ಬಸ್ ಹೊರಟ್ಟಿತ್ತು. ಮಾರ್ಗ ಮಧ್ಯೆ ಅವಘಡ ಸಂಭವಿಸಿದೆ. ಭದ್ರಾವತಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಬಿಸಿಲೋ ಬಿಸಿಲು! ಮುಂದಿನ ಒಂದು ವಾರ ಕರ್ನಾಟಕದ ಹವಾಮಾನ ಹೇಗಿರಲಿದೆ? ಮಳೆಯಾಗುವ ಜಿಲ್ಲೆಗಳು ಯಾವುವು?

ಬೆಂಗಳೂರು. ಮಾ.30: ಮುಂದಿನ ಒಂದು ವಾರ ರಾಜ್ಯದಾದ್ಯಂತ ಮಿಶ್ರ ಹವಾಮಾನ ಇರಲಿದ್ದು, ಸುಡು ಬಿಸಿಲಿನ ನಡುವೆಯೇ ವರುಣನ ಸಿಂಚನವಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಮುನ್ಸೂಚನೆಯಂತೆ, ಕರ್ನಾಟಕದಲ್ಲಿ ಮುಂದಿನ ಏಳು ದಿನಗಳ ಕಾಲ ಹವಾಮಾನದಲ್ಲಿ ಗಮನಾರ್ಹ ಬದಲಾವಣೆಗಳು ಕಂಡುಬರಲಿವೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದ್ದು, ಗರಿಷ್ಠ ತಾಪಮಾನದಲ್ಲಿ 2-3°C ಏರಿಕೆಯಾಗುವ ಸಾಧ್ಯತೆಯಿದೆ. ವಿಶೇಷವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಿಸಿಲ ಧಗೆ ಹೆಚ್ಚಿರಲಿದೆ. ಬೆಂಗಳೂರಿನ ಮುಂದಿನ 7 ದಿನ ಬೇಸಿಗೆಯ ತಾಪ ಏರುತ್ತಿದ್ದು, ಬಿಸಿಲಿನ ಬೇಗೆಯ ನಡುವೆಯೇ ಅಲ್ಲಲ್ಲಿ ಮೋಡ ಕವಿದ ವಾತಾವರಣವಿರಲಿದೆ.

ಮಧ್ಯಾಹ್ನದ ನಂತರ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಕಂಡುಬರಲಿದೆ. ಸಂಜೆ ಅಥವಾ ರಾತ್ರಿಯ ಅವಧಿಯಲ್ಲಿ ಅಲ್ಲಲ್ಲಿ ಗುಡುಗು, ಸಿಡಿಲು ಮತ್ತು ಬಿರುಗಾಳಿ (ಗಂಟೆಗೆ 30-40 ಕಿ.ಮೀ ವೇಗ) ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಮಂಗಳೂರು ಹಾಗೂ ಉಡುಪಿಯಲ್ಲಿ ಹವಾಮಾನದ ಸ್ಥಿತಿ ತೇವಾಂಶಭರಿತ ಉಷ್ಣಾಂಶ ಹಾಗೂ ಸೆಖೆ ಹೆಚ್ಚಿರಲಿದ್ದು, ಸಂಜೆ ವೇಳೆಗೆ ಮೋಡ ಕವಿದ ವಾತಾವರಣವಿರಲಿದೆ. ಹುಬ್ಬಳ್ಳಿ ಒಣ ಹವೆ ಇರಲಿದ್ದು, ಬಿಸಿಲು ತೀವ್ರವಾಗಲಿದ್ದು, ಮಧ್ಯಾಹ್ನದ ವೇಳೆ ಬಿಸಿ ಗಾಳಿ ಬೀಸುವ ಸಾಧ್ಯತೆ ಇದೆ. ಚಿಕ್ಕಮಗಳೂರಿನಲ್ಲಿ ಸಾಧಾರಣ ಮಳೆ ಸಾಧ್ಯತೆ ಇದೆ. ಏಪ್ರಿಲ್ 2ರ ನಂತರ ಗುಡುಗು ಸಹಿತ ಹಗುರ ಮಳೆಯಾಗುವ ಮುನ್ಸೂಚನೆ ಇದೆ.

ವಲಯ ನಿರೀಕ್ಷಿತ ಹವಾಮಾನ ಜಿಲ್ಲೆಗಳು
ದಕ್ಷಿಣ ಒಳನಾಡು ಹಗುರ ಮಳೆ / ಗುಡುಗು ಬೆಂಗಳೂರು, ಮೈಸೂರು, ಕೊಡಗು, ಮಂಡ್ಯ, ಹಾಸನ
ಉತ್ತರ ಒಳನಾಡು ಅತಿಯಾದ ಬಿಸಿಲು / ಒಣ ಹವೆ ಕಲಬುರಗಿ, ವಿಜಯಪುರ, ಬಾಗಲಕೋಟೆ, ರಾಯಚೂರು
ಕರಾವಳಿ ಉಷ್ಣಾಂಶ ಮತ್ತು ತೇವಾಂಶ ಹೆಚ್ಚಳ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ
ಮಲೆನಾಡು ಸಾಧಾರಣ ಮಳೆ ಸಾಧ್ಯತೆ ಶಿವಮೊಗ್ಗ, ಚಿಕ್ಕಮಗಳೂರು

ಎಕ್ಸ್​ ಪೋಸ್ಟ್​​ ಇಲ್ಲಿದೆ ನೋಡಿ:

ಬೆಳಗಾವಿಯಲ್ಲಿ ಭಾಗಶಃ ಮೋಡ ಹಾಗೂ ಒಣ ಹವೆ ಇರಲಿದೆ. ಬೆಳಗಾವಿಯ ಕೆಲವು ಭಾಗಗಳಲ್ಲಿ ಏಪ್ರಿಲ್ 4ರ ಸುಮಾರಿಗೆ ಸಿಡಿಲು ಸಹಿತ ಮಳೆಯಾಗಬಹುದು. ಹಾಸನದಲ್ಲಿ ಹಗುರ ಮಳೆ ಬರುವ ಸಾಧ್ಯತೆ ಇದೆ. ಸಂಜೆ ಅಥವಾ ರಾತ್ರಿ ಅವಧಿಯಲ್ಲಿ ಅಲ್ಲಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ಕಲಬುರಗಿ ತೀವ್ರ ಬಿಸಿಲು ಹಾಗೂ ಜಿಲ್ಲೆಯಲ್ಲಿ ತಾಪಮಾನ 41 ಡಿಗ್ರಿ ದಾಟುವ ಸಾಧ್ಯತೆವಿದೆ. ಹಾಸನ, ಚಿಕ್ಕಮಗಳೂರು ಮತ್ತು ಬೆಳಗಾವಿ ಭಾಗದಲ್ಲಿ ಗುಡುಗು ಕೇಳಿಸಿದಾಗ ವಿದ್ಯುತ್ ಉಪಕರಣಗಳಿಂದ ದೂರವಿರಿ ಮತ್ತು ಮರದ ಕೆಳಗೆ ಆಶ್ರಯ ಪಡೆಯಬೇಡಿ ಎಂದು ಹೇಳಲಾಗಿದೆ.

ಇದನ್ನೂ ಓದಿ: ದಾಖಲೆ ಬರೆದ ರಾಜ್ಯದ ವಿದ್ಯುತ್ ಬೇಡಿಕೆ: ಬೆಂಗಳೂರಿನ ಎಸಿ ಅಬ್ಬರಕ್ಕೆ ಬೆವರುತ್ತಿದೆ ಪವರ್ ಗ್ರಿಡ್!

ಕಲಬುರಗಿ ಮತ್ತು ಹುಬ್ಬಳ್ಳಿ ಭಾಗದ ಜನರು ಮಧ್ಯಾಹ್ನ 12 ರಿಂದ ಸಂಜೆ 4 ರವರೆಗೆ ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸಿ. ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ಜಾಗ್ರತೆ ವಹಿಸಿ. ಮಲೆನಾಡು ಮತ್ತು ದಕ್ಷಿಣ ಒಳನಾಡಿನ ರೈತರು ಕಟಾವು ಮಾಡಿದ ಬೆಳೆಗಳನ್ನು ಮಳೆಯಿಂದ ರಕ್ಷಿಸಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಪಘಾತದಲ್ಲಿ ನವ ದಂಪತಿ ಸ್ಥಳದಲ್ಲೇ ದುರ್ಮರಣ: ಆಪ್ತರ ನೋವಿನ ಮಾತು

ಶಿವಮೊಗ್ಗ, (ಮಾರ್ಚ್ 30): ಪ್ರೀತಿಸಿ (Love) ಕೇವಲ ಆರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಜೋಡಿ ದುರಂತ ಸಾವು ಕಂಡಿದೆ. ಹೌದು… ಶಿವಮೊಗ್ಗ (Shivamogga) ಜಿಲ್ಲೆಯ ಭದ್ರಾವತಿ ತಾಲೂಕಿನ ಶಂಕರಘಟ್ಟ ಗ್ರಾಮದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ (Road Accident) ನವ ದಂಪತಿ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಲಾರಿಗೆ ಬೈಕ್​ ಡಿಕ್ಕಿಯಾಗಿದ್ದು, ಬೈಕ್ ನಲ್ಲಿ ಇದ್ದಂತಹ ದಂಪತಿಗಳಾದ ಬಾಬು (30) ಹಾಗೂ ಸಾವಿತ್ರಿ (26) ಸ್ಥಳದಲ್ಲಿ ಸಾವನಪ್ಪಿದ್ದಾರೆ. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಆರು ತಿಂಗಳ ಹಿಂದೆ ಅಷ್ಟೇ ಸಪ್ತಪದಿ ತುಳಿದ್ದರು. ಆದ್ರೆ, ವಿಧಿ ಜೋಡಿಯನ್ನು ಬಾಳಲು ಬಿಟ್ಟಿಲ್ಲ. ಈ ಸಂಬಂಧ ಸಂಬಂಧಿಕ ಆಕ್ರಂದನ ಮುಗಿಲು ಮುಟ್ಟಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೇಸಿಗೆಯಲ್ಲಿ ತುಳಸಿ ಗಿಡ ಒಣಗಿ ಹೋಗದಂತೆ ನೋಡಿಕೊಳ್ಳಲು ಈ ಸಿಂಪಲ್‌ ಸಲಹೆ ಪಾಲಿಸಿ

ಮನೆಗಳಲ್ಲಿ ಬಹುಮುಖ್ಯವಾಗಿ ಇರಲೇಬೇಕಾದ ಸಸ್ಯಗಳಲ್ಲಿ ತುಳಸಿ ಗಿಡವೂ ಒಂದು.  ಧಾರ್ಮಿಕ ಮಹತ್ವ ಮತ್ತು ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿರುವ ಈ ತುಳಸಿ ಗಿಡ ಬಹುತೇಕ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ. ಬೇಸಿಗೆಯ (summer) ವಿಪರೀತ ಶಾಖದ ಕಾರಣದಿಂದಾಗಿ ತುಳಸಿ ಗಿಡ ಬೇಗನೇ ಬಾಡಿ ಅಥವಾ ಒಣಗಿ ಹೋಗುವ ಕಾರಣ ಈ ಸಸ್ಯದ ಬಗ್ಗೆ ಬೇಸಿಗೆಯಲ್ಲಿ ತುಸು ಹೆಚ್ಚೇ ಕಾಳಜಿ ವಹಿಸಬೇಕಾಗುತ್ತದೆ. ನಿಮ್ಮ ಮನೆಯ ತುಳಸಿ ಗಿಡ ಕೂಡ ಈ ಉರಿ ಬಿಸಿಲಿಗೆ ಒಣಗಿ ಹೋಗ್ತಿದ್ಯಾ? ಹಾಗಿದ್ರೆ ಈ ಕೆಲವೊಂದು ತೋಟಗಾರಿಕೆ ಸಲಹೆಗಳನ್ನು ಪಾಲಿಸುವ ಮೂಲಕ ತುಳಸಿ ಗಿಡ ಒಣಗದಂತೆ ನೋಡಿಕೊಳ್ಳಿ. ಬೇಸಿಗೆಯಲ್ಲಿ ತುಳಸಿ ಗಿಡದ ಆರೈಕೆ ಹೇಗಿರಬೇಕು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಬೇಸಿಗೆಯಲ್ಲಿ ತುಳಸಿ ಗಿಡದ ಆರೈಕೆ ಹೀಗಿರಲಿ:

ಸಸ್ಯಕ್ಕೆ ಸರಿಯಾದ ರೀತಿಯಲ್ಲಿ ನೀರು ಹಾಕಿ: ಬೇಸಿಗೆಯಲ್ಲಿ, ಪ್ರತಿದಿನ ಸಸ್ಯಕ್ಕೆ ಸ್ವಲ್ಪ ನೀರು ಹಾಕುವುದು ಮುಖ್ಯ, ಬೆಳಿಗ್ಗೆ ಅಥವಾ ಸಂಜೆ ತುಳಸಿ ಗಿಡಕ್ಕೆ ನೀರು ಹಾಕುವುದು ಸಸ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ, ಏಕೆಂದರೆ ಆ ಸಮಯದಲ್ಲಿ ಸೂರ್ಯನ ಬೆಳಕು ಕಡಿಮೆ ಇರುತ್ತದೆ, ಇದು ಗಿಡ  ನೀರನ್ನು ಉತ್ತಮವಾಗಿ ಹೀರಿಕೊಳ್ಳಲು ಅನುವು ಮಾಡಿಕೊಡುತ್ತದೆ. ಆದರೆ ಒಂದೇ ಬಾರಿಗೆ ಅತಿಯಾಗಿ ನೀರು ಹಾಕುವುದನ್ನು ತಪ್ಪಿಸಿ. ಏಕೆಂದರೆ ಇದು ಬೇರುಗಳಿಗೆ ಹಾನಿ ಮಾಡುತ್ತದೆ.

ಸಾವಯವ ಗೊಬ್ಬರದ ಬಳಕೆ: ತುಳಸಿ ಎಲೆಗಳು ಹಚ್ಚ ಹಸಿರಾಗಿ ಇರಬೇಕು ಮತ್ತು ಒಣಗಬಾರದು ಎಂದು ನೀವು ಬಯಸಿದರೆ, ಕಾಲಕಾಲಕ್ಕೆ ಗಿಡದ ಬುಡಕ್ಕೆ ಸಾವಯವ ಗೊಬ್ಬರವನ್ನು ಸೇರಿಸುವುದು ಮುಖ್ಯ. ನೀವು ಹಸುವಿನ ಸಗಣಿ ಅಥವಾ ವರ್ಮಿಕಾಂಪೋಸ್ಟ್ ಹಾಕಬಹುದು. ಇದು ಮಣ್ಣಿನ ಫಲವತ್ತತೆಯನ್ನು ಸುಧಾರಿಸುತ್ತದೆ ಮತ್ತು ಸಸ್ಯಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದಲ್ಲದೆ ಬೇಸಿಗೆಯಲ್ಲಿ, ಸಣ್ಣ ಕೀಟಗಳು ಹೆಚ್ಚಾಗಿ ತುಳಸಿ ಎಲೆಗಳಿಗೆ ಹಾನಿ ಮಾಡುತ್ತವೆ. ಇದನ್ನು ತಡೆಗಟ್ಟಲು, ಬೇವಿನ ನೀರು ಅಥವಾ ಬೇವಿನ ಎಣ್ಣೆಯನ್ನು ಲಘುವಾಗಿ ಸಿಂಪಡಿಸಿ.

ಸರಿಯಾದ ಪೋಷಣೆ ಅತ್ಯಗತ್ಯ: ತುಳಸಿ ಗಿಡವನ್ನು ಪೋಷಿಸಲು ತಿಂಗಳಿಗೊಮ್ಮೆ ಅಥವಾ ಎರಡು ಬಾರಿ ಮಣ್ಣಿಗೆ ಅಕ್ಕಿ ನೀರು ಅಥವಾ ಮಜ್ಜಿಗೆಯನ್ನು ಸೇರಿಸುವುದು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಇದು ಸಸ್ಯಕ್ಕೆ ನೈಸರ್ಗಿಕ ಪೋಷಕಾಂಶಗಳನ್ನು ಒದಗಿಸುತ್ತದೆ ಮತ್ತು ಮಣ್ಣಿನ ಫಲವತ್ತತೆಯನ್ನು ಸುಧಾರಿಸುತ್ತದೆ. ಅಲ್ಲದೆ ಬಾಳೆಹಣ್ಣಿನ ಸಿಪ್ಪೆಯ ಪುಡಿಯನ್ನು ಮಣ್ಣಿನಲ್ಲಿ ಬೆರೆಸುವುದರಿಂದ ಸಸ್ಯವು ಬಲಗೊಳ್ಳುತ್ತದೆ.

ಮಣ್ಣಿನ ಫಲವತ್ತತೆಯ ಬಗ್ಗೆ ಇರಲಿ ಗಮನ: ಬೇಸಿಗೆಯಲ್ಲಿ, ತುಳಸಿ ಗಿಡದ ಮಣ್ಣಿನ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಮಣ್ಣು ತುಂಬಾ ಗಟ್ಟಿಯಾಗಿದ್ದರೆ, ಅದು ಬೇರುಗಳಿಗೆ ಸರಿಯಾದ ಗಾಳಿ ಮತ್ತು ನೀರಿನ ಹರಿವನ್ನು ತಡೆಯುತ್ತದೆ. ಆದ್ದರಿಂದ, ಕಾಲಕಾಲಕ್ಕೆ ಮಣ್ಣನ್ನು ಸ್ವಲ್ಪ ಸಡಿಲಗೊಳಿಸಿ. ಇದು ಗಾಳಿಯ ಪ್ರಸರಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಬೇರುಗಳನ್ನು ಬಲಪಡಿಸುತ್ತದೆ.

ಇದನ್ನೂ ಓದಿ: ಬೇಸಿಗೆಯಲ್ಲಿ ದೇಹದ ನೀರಿನಾಂಶ ಕಾಪಾಡಿಕೊಳ್ಳಲು ಹಣ್ಣುಗಳನ್ನು ಪ್ರತಿನಿತ್ಯ ಸೇವನೆ ಮಾಡಿ

ಬೇಸಿಗೆಯಲ್ಲಿ ತುಳಸಿ ಒಣಗುವುದನ್ನು ತಡೆಯಲು ಇತರೆ ಸಲಹೆಗಳು:

  • ಬೇಸಿಗೆಯಲ್ಲಿ ತುಳಸಿ ಗಿಡವನ್ನು ಕಾಲಕಾಲಕ್ಕೆ ಕತ್ತರಿಸುತ್ತಿರಿ.
  • ತುಳಸಿ ಗಿಡವನ್ನು ಯಾವಾಗಲೂ ಬಲವಾದ ಸೂರ್ಯನ ಬೆಳಕು ಬೀಳದ ಸ್ಥಳದಲ್ಲಿ ಇರಿಸಿ. ಅಂದರೆ ಬೇಸಿಗೆಯಲ್ಲಿ ತುಳಸಿ ಗಿಡವನ್ನು ನೆರಳಿನ ಪ್ರದೇಶದಲ್ಲಿ ಇಡಬೇಕು.
  • ಬೇಸಿಗೆಯಲ್ಲಿ ನಿಮ್ಮ ತುಳಸಿ ಗಿಡವನ್ನು ಮಣ್ಣಿನ ಮೇಲೆ ಒಣ ಎಲೆಗಳು ಅಥವಾ ತೆಂಗಿನ ಸಿಪ್ಪೆಗಳನ್ನು ಹರಡುವ ಮೂಲಕ ಹಸಿಗೊಬ್ಬರ ಮಾಡಬಹುದು.
  • ಪ್ರತಿ ಕೆಲವು ದಿನಗಳಿಗೊಮ್ಮೆ, ತುಳಸಿ ಗಿಡದಿಂದ ಹಳದಿ ಎಲೆಗಳನ್ನು ತೆಗೆದುಹಾಕುತ್ತಾ ಇರಿ, ಇದರಿಂದ ಹೊಸ ಎಲೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link