All posts by nagaraj11081993

ಬೆಂಗಳೂರು ನಮ್ಮ ಮೆಟ್ರೋ ಸ್ಟೇಷನ್​​ಗೆ ಮತ್ತೊಂದು ಖಾಸಗಿ ಕಂಪನಿ ಹೆಸರು: 40 ಕೋಟಿ ರೂ.ಗೆ ಡೀಲ್

ಬೆಂಗಳೂರು ನಮ್ಮ ಮೆಟ್ರೋ ಸ್ಟೇಷನ್​​ಗೆ ಮತ್ತೊಂದು ಖಾಸಗಿ ಕಂಪನಿ ಹೆಸರು: 40 ಕೋಟಿ ರೂ.ಗೆ ಡೀಲ್

ಬೆಂಗಳೂರು, (ಮಾರ್ಚ್ 29): ಬಯೋಕಾನ್ ಹೆಬ್ಬಗೋಡಿ, ಡೆಲ್ಟಾ ಎಲೆಕ್ಟ್ರಾನಿಕ್ ಸಿಟಿ, ಪ್ರೆಸ್ಟಿಜ್ ಗ್ರೂಪ್ ಬೆಳ್ಳಂದೂರು (90cr) ನಂತರ ಇದೀಗ ಬೆಂಗಳೂರು ನಮ್ಮ ಮೆಟ್ರೋ  (Bengaluru Namma Metro) ನಿಲ್ದಾಣಕ್ಕೆ ಮತ್ತೊಂದು ನಿಲ್ದಾಣಕ್ಕೆ ಖಾಸಗಿ ಕಂಪನಿ ಹೆಸರಿಡಲು ಒಪ್ಪಂದವಾಗಿದೆ. ಹೌದು.. ಹೊರವರ್ತುಲ ರಸ್ತೆಯ (ಔಟರ್ ರಿಂಗ್ ರೋಡ್) ಪ್ರಮುಖ ಮೆಟ್ರೋ ನಿಲ್ದಾಣವೊಂದಕ್ಕೆ ‘ಬಾಗ್ ಮಾನೆ’ (Bag mane) ಹೆಸರಿಡಲು ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಅಧಿಕೃತವಾಗಿ ಬರೋಬ್ಬರಿ 40 ಕೋಟಿ ರೂಪಾಯಿಗೆ ಒಪ್ಪಂದ ಮಾಡಿಕೊಂಡಿದೆ.

40 ಕೋಟಿ ರೂ., 0 ವರ್ಷಕ್ಕೆ ಒಪ್ಪಂದ

ಔಟರ್ ರಿಂಗ್ ರೋಡ್ ನ ‘ಡಿಆರ್‌ಡಿಒ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮೆಟ್ರೋ ಸ್ಟೇಷನ್’ಗೆ (DRDO Sports Complex Metro Station) ಭಾಗ್ ಮನೆ ಹೆಸರಿಡಲು 40 ಕೋಟಿ ರೂಪಾಯಿಗೆ ಒಪ್ಪಂದ ಮಾಡಿಕೊಂಡಿದೆ. ಬಾಗ್ ಮಾನೆ ಡೆವಲಪರ್ಸ್‌ ಪ್ರೈವೆಟ್‌ ಲಿಮಿಟೆಡ್ ಜೊತೆಗೆ ಬಿಎಂಆರ್‌ಸಿಎಲ್‌ 20 ವರ್ಷಗಳ ಅವಧಿಗೆ ಈ ಒಪ್ಪಂದ ಮಾಡಿಕೊಂಡಿದೆ. ಈ ಹೆಸರಿಡುವ ಹಕ್ಕಿಗಾಗಿ ಕಂಪನಿಯು ಒಟ್ಟು 40 ಕೋಟಿ ರೂಪಾಯಿಗಳನ್ನು ಪಾವತಿಸಲಿದ್ದು, ವಿಶೇಷವೆಂದರೆ ಒಪ್ಪಂದಕ್ಕೆ ಸಹಿ ಹಾಕಿದ ಬೆನ್ನಲ್ಲೇ ಕಂಪನಿಯು ಈಗಾಗಲೇ 20 ಕೋಟಿ ರೂಪಾಯಿಗಳನ್ನು ಬಿಎಂಆರ್‌ಸಿಎಲ್‌ಗೆ ಮುಂಗಡವಾಗಿ ಪಾವತಿಸಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ 3ನೇ ಹಂತಕ್ಕಾಗಿ 6,775 ಕೋಟಿ ಸಾಲ: ಜಪಾನ್ ಸಂಸ್ಥೆಯೊಂದಿಗೆ ಬಿಎಂಆರ್​ಸಿಎಲ್​ ಒಪ್ಪಂದ

ಸಿಲ್ಕ್ ಬೋರ್ಡ್‌ನಿಂದ ಕೆ.ಆರ್ ಪುರಂ ಮಾರ್ಗದಲ್ಲಿ (ಔಟರ್ ರಿಂಗ್ ರೋಡ್) ಬರುವ ‘ಡಿಆರ್‌ಡಿಒ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮೆಟ್ರೋ ಸ್ಟೇಷನ್’ (DRDO Sports Complex Metro Station) ಇನ್ನು ಮುಂದೆ ಬಾಗ್ ಮಾನೆ ಹೆಸರನ್ನು ಹೊಂದಲಿದೆ. ಇದು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ 19.75 ಕಿಮೀ ಉದ್ದದ ಪ್ರಮುಖ ಮಾರ್ಗದಲ್ಲಿ ಬರುತ್ತದೆ. ಈ ಮಹತ್ವದ ಒಪ್ಪಂದಕ್ಕೆ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಡಾ. ಜೆ. ರವಿಶಂಕರ್‌ ಹಾಗೂ ಬಾಗ್ಮನೆ ಡೆವಲಪರ್ಸ್‌ ಪರವಾಗಿ ಆದಿತ್ಯ ಬಾಗ್​ ಮಾನೆ ಅವರು ಸಹಿ ಹಾಕಿದರು.

ಖಾಸಗಿ ಕಂಪನಿ ಹೆಸರಿರುವ ಇತರೆ ಸ್ಪೇಷನ್​ಗಳು

ನಮ್ಮ ಮೆಟ್ರೋ ನಿಲ್ದಾಣಗಳಿಗೆ ಈಗಾಗಲೇ ಹಲವು ಖಾಸಗಿ ಸಂಸ್ಥೆಗಳ ಹೆಸರನ್ನು ನಾಮಕರಣ ಮಾಡಲಾಗಿದೆ.
ಬಯೋಕಾನ್ ಹೆಬ್ಬಗೋಡಿ ನಿಲ್ದಾಣ, ಡೆಲ್ಟಾ ಎಲೆಕ್ಟ್ರಾನಿಕ್ ಸಿಟಿ ನಿಲ್ದಾಣ, ಪ್ರೆಸ್ಟಿಜ್ ಗ್ರೂಪ್ ಬೆಳ್ಳಂದೂರು ನಿಲ್ದಾಣ (ಈ ಒಪ್ಪಂದವು ಸುಮಾರು 90 ಕೋಟಿ ರೂ.ಗೆ ನಡೆದಿತ್ತು) ಹೀಗೆ ಮೆಟ್ರೋ ಸ್ಟೇಷನ್ ನಿಲ್ದಾಣಗಳಿಗೆ ಖಾಸಗಿ ಕಂಪನಿಗಳ ಹೆಸರು ಇಡಲಾಗಿದ್ದು, ಇದೀಗ ‘ಡಿಆರ್‌ಡಿಒ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮೆಟ್ರೋ ಸ್ಟೇಷನ್’ಗೆ ಬಾಗ್ ಮಾನೆ ಎಂದು ನಾಮಕರಣ ಮಾಡಲಾಗುತ್ತದೆ.

ಸಿಲ್ಕ್ ಬೋರ್ಡ್‌ನಿಂದ ಕೆ.ಆರ್‌.ಪುರದವರೆಗಿನ ಈ ಮೆಟ್ರೋ ಮಾರ್ಗವು ವೇಗವಾಗಿ ಸಿದ್ಧಗೊಳ್ಳುತ್ತಿದ್ದು, ಈ ವರ್ಷದ ಡಿಸೆಂಬರ್ ವೇಳೆಗೆ ವಾಣಿಜ್ಯ ಸಂಚಾರಕ್ಕೆ ಮುಕ್ತಗೊಳ್ಳುವ ನಿರೀಕ್ಷೆ ಇದೆ. ಇದೇ ಮಾರ್ಗದಲ್ಲಿ ಇನ್ನೂ ಎರಡು ನಿಲ್ದಾಣಗಳಿಗೆ ಖಾಸಗಿ ಕಂಪನಿಗಳ ಹೆಸರಿಡುವ ಕುರಿತು ಮಾತುಕತೆ ನಡೆಯುತ್ತಿದ್ದು, ಶೀಘ್ರದಲ್ಲೇ ಆ ಒಪ್ಪಂದಗಳೂ ಅಂತಿಮಗೊಳ್ಳಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಕ್ರಿಯೆಯಿಂದ ಬಿಎಂಆರ್‌ಸಿಎಲ್‌ಗೆ ಹೆಚ್ಚುವರಿ ಆದಾಯ ಲಭ್ಯವಾಗಲಿದ್ದು, ಮೆಟ್ರೋ ನಿರ್ವಹಣೆಗೆ ಇದು ಸಹಕಾರಿಯಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಶ್ರೀರಾಮನವಮಿ ಅನ್ನಪ್ರಸಾದ ಸೇವಿಸಿದ್ದ ಭಕ್ತರಿಗೆ ವಾಂತಿ, ಭೇದಿ!

ದೇವನಹಳ್ಳಿ, ಮಾರ್ಚ್​ 29: ತಾಲೂಕಿನ ಬೆಟ್ಟೇನಹಳ್ಳಿ ಗ್ರಾಮದಲ್ಲಿ ಶ್ರೀರಾಮನವಮಿ ಅಂಗವಾಗಿ ವಿತರಿಸಿದ ಅನ್ನಪ್ರಸಾದ ಸೇವಿಸಿದ ಭಕ್ತರಲ್ಲಿ ಫುಡ್ ಪಾಯಿಸನ್ ಆಗಿರುವುದು ಕಂಡುಬಂದಿದೆ. ನಿನ್ನೆ (ಮಾರ್ಚ್​ 28) ದೇವಸ್ಥಾನದಲ್ಲಿ ನೀಡಿದ ಪ್ರಸಾದ ಸೇವಿಸಿದ ಬಳಿಕ ಹಲವರಿಗೆ ವಾಂತಿ, ಬೇಧಿ ಸಮಸ್ಯೆ ಕಾಣಿಸಿಕೊಂಡು ಬಹುತೇಕರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರತಿವರ್ಷ ನಡೆಯುವಂತೆ ಈ ವರ್ಷವೂ ಅನ್ನಪ್ರಸಾದ ವಿತರಣೆ ಮಾಡಲಾಗಿತ್ತು. ಆದರೆ ಈ ಬಾರಿ ಪ್ರಸಾದ ಸೇವಿಸಿದ ಅನೇಕ ಭಕ್ತರು ಅಸ್ವಸ್ಥಗೊಂಡಿರುವುದು ಆತಂಕ ಮೂಡಿಸಿದೆ. ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಸಿಬ್ಬಂದಿ ಗ್ರಾಮದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ತೀವ್ರ ಅಸ್ವಸ್ಥರಾದವರನ್ನು ಆಂಬುಲೆನ್ಸ್ ಮೂಲಕ ಸಮೀಪದ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಲಾಗಿದೆ. ಉಳಿದವರಿಗೆ ಬೆಟ್ಟೇನಹಳ್ಳಿಯಲ್ಲೇ ವೈದ್ಯಕೀಯ ಸೇವೆ ಒದಗಿಸಲಾಗಿದೆ.

 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

ಆನ್​ಲೈನ್​ ಟ್ರೇಡಿಂಗ್​ ಇನ್ವೆಸ್ಟ್​ಮೆಂಟ್​ ಹೆಸರಲ್ಲಿ ಕೋಟ್ಯಂತರ ರೂ ವಂಚನೆ: ಹೆಚ್ಚಿನ‌‌ ಲಾಭದ ಆಸೆಗೆ ಮೋಸ ಹೋದ ವ್ಯಕ್ತಿ

ಚಿಕ್ಕಮಗಳೂರು, ಮಾರ್ಚ್​ 29: ಜಗತ್ತಿನಲ್ಲಿ ಮೋಸ ಹೋಗುವವರು ಇರುವವರೆಗೆ ಮೋಸ (Fraud)  ಮಾಡುವವರು  ಇರುತ್ತಾರೆ ಎಂಬ ಮಾತಿಗೆ ಈ ಸ್ಟೋರಿ ಒಂದು ಉದಾಹರಣೆ ಎನ್ನಬಹುದು. ಫೇಸ್​ಬುಕ್ ಜಾಹೀರಾತು ನಂಬಿ ಓರ್ವ ವ್ಯಕ್ತಿ ಬರೋಬ್ಬರಿ 1.28 ಕೋಟಿ ರೂ ಕಳೆದುಕೊಂಡ ಘಟನೆಯೊಂದು ಬೆಳಕಿಗೆ ಬಂದಿದೆ. ಸದ್ಯ ಚಿಕ್ಕಮಗಳೂರಿನ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದದ್ದೇನು?

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ‌ ಶಿವಪುರ ಗ್ರಾಮದ ನಿವಾಸಿ ಕಲ್ಲೇಗೌಡ ಎಂಬುವರಿಗೆ ಖದೀಮರು ಆನ್​ಲೈನ್​ ಟ್ರೇಡಿಂಗ್​ ಇನ್ವೆಸ್ಟ್​ಮೆಂಟ್​ ಹೆಸರಲ್ಲಿ ಕೋಟ್ಯಂತರ ರೂ ಹಣ ವಂಚಿಸಿದ್ದಾರೆ. ‘FYERS’ ಎಂಬ‌ ಟ್ರೇಡಿಂಗ್ ಜಾಹೀರಾತನ್ನು ಫೇಸ್​ಬುಕ್​ನಲ್ಲಿ ನೋಡಿದ ಕಲ್ಲೇಗೌಡರು F8-FYERS ಸೆಕ್ಯೂರಿಟೀಸ್ ವಾಟ್ಸಾಪ್​ ಗ್ರೂಪ್​ ಸೇರಿದ್ದಾರೆ.

ಇದನ್ನೂ ಓದಿ: ಫೇಸ್‌ಬುಕ್‌ ಮೂಲಕ ಕಾರು ಖರೀದಿಸುವ ಮುನ್ನ ಹುಷಾರ್:​ ಅಂತಾರಾಜ್ಯ ಜಾಲ ಪತ್ತೆ

ಆನ್​ಲೈನ್​ ಟ್ರೇಡಿಂಗ್​ ಇನ್ವೆಸ್ಟ್​ಮೆಂಟ್​ ಹೆಸರಲ್ಲಿ ಕಲ್ಲೇಗೌಡಗೆ ವಂಚಕರು ಹೆಚ್ಚಿನ‌‌ ಲಾಭ ಗಳಿಸುವ ಆಸೆ ತೋರಿಸಿದ್ದಾರೆ. ಹಂತ ಹಂತವಾಗಿ 1 ಕೋಟಿ 28 ಲಕ್ಷದ 10 ಸಾವಿರ ರೂ.‌ ಪಡೆದುಕೊಂಡಿದ್ದಾರೆ. ಆದರೆ  ಯಾವುದೇ ರೀತಿಯ ಲಾಭಾಂಶ ನೀಡಿಲ್ಲ. ಹೀಗಾಗಿ ಕಲ್ಲೇಗೌಡರು ಹಣ ವಿತ್​ಡ್ರಾ ಮಾಡಲು ಹೋದಾಗ ವಂಚನೆಗೊಳಗಾಗಿರುವುದು ಬೆಳಕಿಗೆ ಬಂದಿದೆ. ಸದ್ಯ ಕಲ್ಲೇಗೌಡರಿಂದ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

ಎರಡೆರಡು ಮನೆಗಳಿಗೆ ಕನ್ನಾ ಹಾಕಿದ ಖದೀಮರು

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ತಡರಾತ್ರಿ ಎರಡು ಕಡೆ ಮನೆಗಳ್ಳತನ ನಡೆದಿದ್ದು, ಖದೀಮರು ಬೆಳ್ಳಿ, ಚಿನ್ನಾಭರಣ ಮತ್ತು ಹಣವನ್ನು ಕಳ್ಳತನ ಮಾಡಿರುವಂತಹ ಘಟನೆ ನಡೆದಿದೆ. ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಅಪ್ಪಗೆರೆ ಗ್ರಾಮದಲ್ಲಿ ವೃತ್ತಿಯಲ್ಲಿ ವಕೀಲರಾಗಿರುವ ಪ್ರವೀಣ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದ್ದು, 240 ಗ್ರಾಂ ಚಿನ್ನ, ಒಂದು ಕೆಜಿ ಬೆಳ್ಳಿ ಮತ್ತು 20 ಲಕ್ಷ ರೂ ಹಣ ಎಗರಿಸಿದ್ದಾರೆ. ಬೈಕ್​ನಲ್ಲಿ ಬಂದಿದ್ದ ಇಬ್ಬರು ಕಿರಾತಕರಿಂದ ಕೃತ್ಯವೆಸಗಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಹಣದ ಮಳೆ ಸುರಿಸ್ತೀವಿ ಅಂದೋರು ಮಾಡಿದ್ರು ಚೀಟಿಂಗ್; ಲಕ್ಷ ಲಕ್ಷ ಪಂಗನಾಮ

ಮೊದಲಿಗೆ ರಾಮನಗರದ ಭುನೇಶ್ವರಿನಗರದಲ್ಲಿ ನಂಜುಂಡಯ್ಯ ಎಂಬುವವರ ಮನೆಯಲ್ಲಿ ಕಳ್ಳತನ ಮಾಡಿದ್ದಾರೆ. 68 ಗ್ರಾಂ ಚಿನ್ನಾಭರಣ ದೋಚಿ ಪರಾರಿ ಆಗಿದ್ದಾರೆ. ನಂತರ ಮುಖಕ್ಕೆ ಮಾಸ್ಕ್, ಕೈಗೆ ಗ್ಲೋಸ್ ಹಾಕಿಕೊಂಡು ಬಂದು ಚನ್ನಪಟ್ಟಣದಲ್ಲಿ ಕಳ್ಳತನ ಮಾಡಿದ್ದಾರೆ. ಚನ್ನಪಟ್ಟಣ ಗ್ರಾಮಾಂತರ ಹಾಗೂ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬಿಡುಗಡೆಗೆ ಸಜ್ಜಾಗಿದೆ ರಾಯರ ಕುರಿತ ಹೊಸ ಕನ್ನಡ ಸಿನಿಮಾ ‘ಅಮಲಾಮೃತ’

ರಾಘವೇಂದ್ರ ಸ್ವಾಮಿಗಳ ಕುರಿತಾದ ಭಕ್ತಿ ಪ್ರಧಾನ ಕಥೆ ಹೊಂದಿರುವ ‘ಅಮಲಾಮೃತ’ (Amalamrutha) ಸಿನಿಮಾದ ಎಲ್ಲ ಕೆಲಸಗಳು ಮುಗಿದಿವೆ. ‘ಸಿರಿ ಪ್ರೊಡಕ್ಷನ್ಸ್’ ಮೂಲಕ ಈ ಸಿನಿಮಾ ಸಿದ್ಧವಾಗಿದೆ. ಮೈಸೂರು ಮೂಲದ ಗುರುರಾಜ ರಾವ್ ಎಂ.ಎಸ್. ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅಲ್ಲದೇ ಅವರೇ ನಿರ್ದೇಶನ ಕೂಡ ಮಾಡಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಯತಿಗಳು, ಸರ್ಕಾರಿ ಅಧಿಕಾರಿಗಳಿಗೆ ಈ ಸಿನಿಮಾ ವೀಕ್ಷಿಸಿದರು. ಸಿನಿಮಾ ನೋಡಿದ ಜನರ ಪ್ರತಿಕ್ರಿಯೆ ಕಂಡು ಚಿತ್ರತಂಡಕ್ಕೆ ಖುಷಿ ಆಗಿದೆ.

ಕೆ.ಎಸ್. ಗೋವಿಂದರಾಮ ರಾವ್ ಅವರು ‘ಅಮಲಾಮೃತ’ ಸಿನಿಮಾದಲ್ಲಿ ಮುಖ್ಯ ಪಾತ್ರವನ್ನು ಮಾಡಿದ್ದಾರೆ. ಬಾಹ್ಲೀಕರಾಜ, ವ್ಯಾಸರಾಜ ಹಾಗೂ ರಾಘವೇಂದ್ರ ಸ್ವಾಮಿಗಳಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ. ವೀರೇಂದ್ರ ಆಚಾರ್ಯ, ಸುಬ್ಬರಾವ್, ಚೈತ್ರಾ ಭಾರದ್ವಾಜ್, ಮಾಸ್ಟರ್ ಸುಚೇಂದ್ರ, ಯಶಸ್, ಸುಮನ್, ಶ್ರೀಕಾಂತ್, ದೀಪಕ್ ಮುಂತಾದವರು ನಟಿಸಿದ್ದಾರೆ.

‘ಅಮಲಾಮೃತ’ ಚಿತ್ರಕ್ಕಾಗಿ ಹರಿದಾಸರ 8 ಸಾಹಿತ್ಯಕ್ಕೆ ವಿದೂಷಿ ರತ್ನಪ್ರಸಾದ್ ಅವರು ಸಂಗೀತ ಸಂಯೋಜಿಸಿದ್ದಾರೆ. ಪ್ರದೀಪ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಸ್ವಾಮಿ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ಈ ಮೊದಲು ಪುರಂದರದಾಸರು ಮತ್ತು ಶ್ರೀ ಪಾದರಾಜರ ಸಾಕ್ಷಚಿತ್ರ ಸಿದ್ದಪಡಿಸಿದ್ದ ಅನುಭವದ ಮೇಲೆ ನಿರ್ದೇಶಕರು ಈ ಸಿನಿಮಾ ಮಾಡಿದ್ದಾರೆ.

‘ಆ ಅನುಭವದಿಂದಲೇ ನಿರ್ದೇಶನ ಹಾಗೂ ಬಂಡವಾಳ ಹೂಡಿದ್ದೇನೆ. ಅಮಲಾ ಮತ್ತು ಅಮೃತ ಇವರೆಡು ಅ ಅಕ್ಷರದಿಂದ ಕೂಡಿದೆ. ನವ ಭಕುತಿಯ ಜ್ಙಾನಯಘ್ನದ ಫಲಕ್ಕೆ ಅಮಲ ಅಂತಲೂ, ಸಾರಕ್ಕೆ ಅಮೃತ ಎಂದು ಕರೆಯುತ್ತಾರೆ. ನವಭಕುತಿ ಅಂದರೆ ಸಾಕ್ಷಾತ್ ಭಗವಂತನು ವೈಷ್ಣವ ತತ್ವದಲ್ಲಿ ನೀಡಿದ ಆದೇಶ. ಭಕ್ತಿಯಿಂದ 64 ವಿದ್ಯೆಗಳನ್ನು ಕಲಿತವರು ಶ್ರೀ ರಾಘವೇಂದ್ರ ಸ್ವಾಮಿಗಳು. ಅವರು ಪೂರ್ವಪರದಲ್ಲಿ ಐದು ಅವತಾರಗಳಲ್ಲಿ ಕಾಣಿಸಿಕೊಂಡಿದ್ದರು. ಕರ್ಮಜದೇವತೆ, ಭಕ್ತ ಪ್ರಹ್ಲಾದ, ಬಾಹ್ಲೀಕರಾಜ, ವ್ಯಾಸರಾಜ ಕೊನೆಯದಾಗಿ ಗುರುಸಾರ್ವಭೌಮ’ ಎಂದು ಗುರುರಾಜ ರಾವ್ ಎಂ.ಎಸ್. ಹೇಳಿದರು.

ಇದನ್ನೂ ಓದಿ: ಬೆಂಗಳೂರಿನ ರಾಘವೇಂದ್ರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ರಜನಿಕಾಂತ್

‘ಇವೆಲ್ಲವು ಹುಟ್ಟಿಕೊಂಡ ಬಗೆ ಹೇಗೆ ಎಂಬುದರ ವಿವರವನ್ನು ತೋರಿಸಲಾಗಿದೆ. ರಾಯರಲ್ಲಿ ಇರುವ ನಿಷ್ಠೆ ಬೇರೆ ಯಾರಲ್ಲೂ ಕಾಣುವುದಿಲ್ಲ. ಸ್ವಾಮಿಗಳ ತಪಸ್ಸಿನ ಫಲ ಎಲ್ಲ ಜನಾಂಗಕ್ಕೂ ಪುಣ್ಯದ ಫಲ ಸಿಕ್ಕಿದೆ. ಯಾವುದೇ ರೀತಿಯಲ್ಲಿ ಶ್ರದ್ದೆಯಿಂದ ಬೃಂದಾವನಕ್ಕೆ ನಮಸ್ಕಾರ ಮಾಡಿದಾಗ ಮಾತ್ರ ಒಳ್ಳೆಯದಾಗುತ್ತದೆ ಎಂಬ ಸಂದೇಶ ಇರಲಿದೆ’ ಎಂದು ನಿರ್ದೇಶಕರು ಮಾಹಿತಿ ನೀಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಚಾಕೊಲೇಟ್ ಕದ್ದಿದ್ದಾಳೆಂದು 12 ವರ್ಷದ ಮಗಳನ್ನು ದೊಣ್ಣೆಯಿಂದ ಹೊಡೆದು ಕೊಂದ ತಂದೆ

ಬುಲಂದ್​ಶಹರ್, ಮಾರ್ಚ್​ 29: ಮಗಳು ಚಾಕೊಲೇಟರ್ ಕದ್ದಿರಬಹುದು ಎನ್ನುವ ಸಂಶಯದಲ್ಲಿ ತಂದೆಯೊಬ್ಬ ಆಕೆಗೆ ದೊಣ್ಣೆಯಿಂದ ಹೊಡೆದು ಕೊಲೆ(Murder) ಮಾಡಿರುವ ಘಟನೆ ಉತ್ತರ ಪ್ರದೇಶದ ಬುಲಂದ್​ಶಹರ್​​ನಲ್ಲಿ ನಡೆದಿದೆ. ನರೋರಾದ ರತನ್‌ಪುರ ಗ್ರಾಮದಲ್ಲಿ ಗುರುವಾರ ಈ ಘಟನೆ ನಡೆದಿದ್ದು, ಪೂಜಾ ತನ್ನ ಹಣ ನೀಡದೆ ಚಾಕೊಲೇಟ್ ಪ್ಯಾಕೆಟ್ ತೆಗೆದುಕೊಂಡಿದ್ದಾಳೆ ಎಂದು ಅಂಗಡಿಯವ ಹೇಳಿದ ನಂತರ ಆಕೆಯ ಮೇಲೆ ತಂದೆ ಪುಷ್ಪೇಂದ್ರಗೆ ಕೋಪ ಬಂದಿತ್ತು.

ಆರೋಪದಿಂದ ಕೋಪಗೊಂಡ ಆರೋಪಿಗೆ ಮದ್ಯದ ಚಟ ಕೂಡ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಸಂಜೆ ಮನೆಗೆ ಹಿಂತಿರುಗಿದ ಬಳಿಕ ತನ್ನ ಮಗಳಿಗೆ ಮರದ ಕೋಲಿನಿಂದ ಹೊಡೆಯಲು ಶುರು ಮಾಡಿದ್ದ. ಹುಡುಗಿಯ ತಾಯಿ ಆರತಿ ನೀಡಿದ ದೂರಿನ ಪ್ರಕಾರ, ತಾನು ಪದೇ ಪದೇ ಮಧ್ಯಪ್ರವೇಶಿಸಲು ಪ್ರಯತ್ನಿಸಿದರೂ ಆಕೆಗೆ ಹೊಡೆಯುವುದನ್ನು ಬಿಡಲೇ ಇಲ್ಲ.

ತಂದೆ ಕ್ರೂರವಾಗಿ ಆಕೆಗೆ ಥಳಿಸಿದಾಗ ಪೂಜಾಳ ತಲೆಗೆ ಗಂಭೀರವಾದ ಗಾಯವಾಗಿದ್ದು, ಪ್ರಜ್ಞಾಹೀನಳಾಗಿ ಬಿದ್ದಿದ್ದಳು. ಸಹಾಯ ಮಾಡುವ ಬದಲು, ತಂದೆ ಆಕೆಯನ್ನು ಗಂಭೀರ ಸ್ಥಿತಿಯಲ್ಲಿ ಮನೆಯೊಳಗೆ ಬಿಟ್ಟು ಅಲ್ಲಿಂದ ಕಾಲ್ಕಿತ್ತಿದ್ದ, ತಾಯಿಯನ್ನು ಮನೆಯೊಳಗೆ ಕೂಡಿ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
ಕೂಗಾಟದ ನಂತರ ನೆರೆಹೊರೆಯವರು ಸ್ಥಳಕ್ಕೆ ಧಾವಿಸಿ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದರು.

ಮತ್ತಷ್ಟು ಓದಿ: ತನ್ನ ಕಾಮದಾಟಕ್ಕೆ ಅಡ್ಡಿಯಾಗುತ್ತಿದ್ದ ಪತಿಯನ್ನೇ ಸುಪಾರಿ ನೀಡಿ ಕೊಲೆ ಮಾಡಿಸಿದ ಪತ್ನಿ!

ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಆಕೆಯ ದೇಹದ ಮೇಲೆ ತಲೆ ಮುರಿದಿರುವುದು ಸೇರಿದಂತೆ ಸುಮಾರು 10 ರಿಂದ 12 ಗಾಯಗಳ ಗುರುತುಗಳು ಕಂಡುಬಂದಿವೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದು, ಪ್ರಸ್ತುತ ಆತ ಪರಾರಿಯಾಗಿದ್ದಾನೆ. ಕೆಲವು ದಿನಗಳ ಹಿಂದಷ್ಟೇ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಇಂಥದ್ದೇ ಘಟನೆ ನಡೆದಿತ್ತು.

ಕಳ್ಳತನದ ಅನುಮಾನದ ಮೇಲೆ ತಂದೆಯೊಬ್ಬರು ತನ್ನ ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳನ್ನು ಹಿಂಸಿಸಿದ್ದರು , ಘಟನೆಯಲ್ಲಿ ಒಬ್ಬಳು ಮಗಳು ಪ್ರಾಣ ಕಳೆದುಕೊಂಡಿದ್ದಾರೆ.ದಾದು ಹೈಬತ್ ಯಮ್ಗರ್ ಎಂದು ಗುರುತಿಸಲಾದ ಆರೋಪಿ, 10 ವರ್ಷದ ಸಾನಿಕಾ ಮತ್ತು 11 ವರ್ಷದ ಅನುಜಾ ಅವರನ್ನು ಕಟ್ಟಿಹಾಕಿ ಅವರ ಮನೆಯೊಳಗೆ ತಲೆಕೆಳಗಾಗಿ ನೇತುಹಾಕಿದ್ದ ಎಂದು ತಿಳಿದುಬಂದಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ನಟನಿಂದ ಮೋಸ: ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ ಯುವಕ

ನಟರಿಗಾಗಿ ಪ್ರಾಣ ಕೊಡಲು ತಯಾರು ಎನ್ನುವ ಅಭಿಮಾನಿಗಳು ಇರುತ್ತಾರೆ. ಇಲ್ಲೊಬ್ಬ ಯುವಕ, ನಟನಿಂದಲೇ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ ಅದೃಷ್ಟವಶಾತ್ ಬದುಕುಳಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆ ನಡೆದಿರುವುದು ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆ, ಪೂತಲಪಟ್ಟು ಎಂಬಂಲ್ಲಿ. ಪೂತಲಪಟ್ಟು ಬಳಿಯ ಶೇಷಾಪುರಂನ ಲೋಕೇಶ್ ಎಂಬ ಯುವಕ ಆತ್ಮಹತ್ಯೆಗೆ ಯತ್ನಿದ್ದು ‘ಜೆಟ್ಟಿ’ ಸಿನಿಮಾ ಖ್ಯಾತಿಯ ನಟ ಮಾನ್ಯಂ ಮುರಳಿ ಕೃಷ್ಣ ತನ್ನ ಈ ಸ್ಥಿತಿಗೆ ಕಾರಣ ಎಂದು ಲೋಕೇಶ್ ಬರೆದಿರುವ ಡೆತ್ ನೋಟ್ ಈಗ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ.

ಚಿತ್ತೂರು ಜಿಲ್ಲೆಯ ಶೇಷಾಪುರಂ ಗ್ರಾಮದ ಲೋಕೇಶ್ ಎಂಬ ಯುವಕ, ನಟ ಮಾನ್ಯಂ ಮುರಳಿ ಕೃಷ್ಣ ತನಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ರೈಲ್ವೇ ಕಾಂಟ್ರಾಕ್ಟ್ ಕೊಡಿಸುವುದಾಗಿ ನಂಬಿಸಿ ತನ್ನ ಸಂಬಂಧಿಕರು ಮತ್ತು ಸ್ನೇಹಿತರ ಮೂಲಕ ಸುಮಾರು 3.15 ಕೋಟಿ ರೂಪಾಯಿಗಳನ್ನು ನಟನಿಗೆ ಕೊಡಿಸಿದ್ದಾಗಿ ಲೋಕೇಶ್ ತಿಳಿಸಿದ್ದಾರೆ. ಈಗ ಆ ಹಣವನ್ನು ವಾಪಸ್ ಕೇಳಿದರೆ ನಟ ಕಿರುಕುಳ ನೀಡುತ್ತಿದ್ದಾರೆ ಎಂದು ಮನನೊಂದು ಲೋಕೇಶ್ ನಿದ್ರೆ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಇದನ್ನೂ ಓದಿ:ಟಾಲಿವುಡ್​​ಗೂ ಮಾದರಿ ಆಯ್ತು ವಿಜಯಲಕ್ಷ್ಮೀ, ರಮ್ಯಾ ನಿರ್ಧಾರ

ಅಪ್ರಜ್ಞಾವಸ್ಥೆಯಲ್ಲಿದ್ದ ಲೋಕೇಶ್ ಅವರನ್ನು ಚಿತ್ತೂರಿನ ಬಂಗಾರುಪಾಳ್ಯಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಲೋಕೇಶ್ ಸಹ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಪ್ರಾಣಾಪಾಯ ಇಲ್ಲವೆಂದು ಹೇಳಲಾಗುತ್ತಿದೆ.

ಲೋಕೇಶ್ ಬರೆದಿರುವ ಆತ್ಮಹತ್ಯೆ ಪತ್ರ ಇದೀಗ ವೈರಲ್ ಆಗುತ್ತಿದೆ, ‘ನನಗೆ ಇಂತಹ ಪರಿಸ್ಥಿತಿ ಬರುತ್ತದೆ ಎಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ನನ್ನ ಪೋಷಕರು ಮತ್ತು ಹೆಂಡತಿ ಮಕ್ಕಳನ್ನು ಬೀದಿಗೆ ತಂದಿದ್ದೇನೆ. ಸಾಲಗಾರನಾಗಿ ತಲೆ ಎತ್ತಿ ಬದುಕಲು ಸಾಧ್ಯವಾಗುತ್ತಿಲ್ಲ. ನನ್ನ ಸಾವಿಗೆ ನಟ ಮಾನ್ಯಂ ಮುರಳಿ ಕೃಷ್ಣನೇ ಕಾರಣ. ರೈಲ್ವೇ ಕಾಂಟ್ರಾಕ್ಟ್ ಕೊಡಿಸುತ್ತೇನೆ ಎಂದು ಹೇಳಿ 3.15 ಕೋಟಿ ರೂಪಾಯಿ ಹಣ ಪಡೆದು ಮೋಸ ಮಾಡಿದ್ದಾನೆ. ಇದರಲ್ಲಿ ನನ್ನ ಅಣ್ಣ-ತಮ್ಮಂದಿರ ಮತ್ತು ಸಂಬಂಧಿಕರ ಹಣವೂ ಇದೆ. ಮುರಳಿ ಕೃಷ್ಣ ಮತ್ತು ಆತನ ತಮ್ಮ ಸೇರಿ ನಮ್ಮನ್ನು ವಂಚಿಸಿದ್ದಾರೆ. ಹಣ ಕೇಳಿದರೆ ಕೊಡುತ್ತಿಲ್ಲ. ಅಸಹಾಯಕನಾಗಿ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ, ದಯವಿಟ್ಟು ನನ್ನನ್ನು ಕ್ಷಮಿಸಿ’ ಎಂದು ಬರೆದಿದ್ದಾರೆ.

ಸದ್ಯ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ನಟ ಮಾನ್ಯ ಮುರಳಿ ಕೃಷ್ಣಗೂ ನೊಟೀಸ್ ನೀಡುವ ಸಾಧ್ಯತೆ ಇದೆ. ಮಾನ್ಯ ಮುರಳಿ ಕೃಷ್ಣ ‘ಜೆಟ್ಟಿ’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದು, ಹಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕ, ಎಡಿಟರ್, ಸಹಾಯಕ ಎಡಿಟರ್ ಆಗಿ ಕೆಲಸ ಮಾಡಿದ್ದಾರೆ. ಇದೀಗ ವಂಚನೆ ಪ್ರಕರಣದಲ್ಲಿ ಆರೋಪಿ ಆಗಿದ್ದಾರೆ.

ಸಹಾಯವಾಣಿ

ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ. ನಿಮಗೆ ಅಥವಾ ನಿಮ್ಮ ಪರಿಚಯದವರಿಗೆ ಮಾನಸಿಕ ಒತ್ತಡ, ಖಿನ್ನತೆ ಅಥವಾ ಆತ್ಮಹತ್ಯೆಯ ಆಲೋಚನೆಗಳಿದ್ದರೆ, ದಯವಿಟ್ಟು ತಕ್ಷಣವೇ ಈ ಕೆಳಗಿನ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ. ಪರಿಣಿತರು ನಿಮಗೆ ಉಚಿತವಾಗಿ ಮತ್ತು ಗೌಪ್ಯವಾಗಿ ಸಮಾಲೋಚನೆ ನೀಡುತ್ತಾರೆ.

Tele MANAS (ಸರ್ಕಾರಿ ಸಹಾಯವಾಣಿ): 14416 ಅಥವಾ 1800-891-4416 (24×7 ಲಭ್ಯ)

KIRAN (ಕೇಂದ್ರ ಸರ್ಕಾರ): 1800-599-0019

ಆಸ್ರಾ (AASRA): 9820466728

ಸಹಾಯ್ (SAHAI): 080-25497777

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಜೈಲುಪಾಲಾಗಿರುವ ಪುತ್ರ ಪ್ರಜ್ವಲ್ ಗಾಗಿ ತಂದೆ ರೇವಣ್ಣ ವಿಶೇಷ ಪೂಜೆ

ಮಂಡ್ಯ, (ಮಾರ್ಚ್​​ 29): ಜಿಲ್ಲೆಯ ಪಾಂಡವಪುರ ತಾಲೂಕಿನಲ್ಲಿರುವ ಶ್ರೀಕ್ಷೇತ್ರ ಮೇಲುಕೋಟೆಯಲ್ಲಿ ವಿಶ್ವವಿಖ್ಯಾತ ವೈರಮುಡಿ ಬ್ರಹ್ಮೋತ್ಸವ ಅದ್ದೂರಿಯಾಗಿ ಜರುಗಿತು. ಈ ಭವ್ಯ ಉತ್ಸವವನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಭಕ್ತರು ನೆರೆದಿದ್ದರು. ವೈರಮುಡಿ ಬ್ರಹ್ಮೋತ್ಸವದ ಪ್ರಮುಖ ಆಕರ್ಷಣೆಯೆಂದರೆ ಶ್ರೀದೇವಿ ಮತ್ತು ಭೂದೇವಿ ಸಮೇತ ಚಲುವನಾರಾಯಣಸ್ವಾಮಿಯು ರತ್ನಖಚಿತ ವೈರಮುಡಿ ಕಿರೀಟವನ್ನು ಧರಿಸಿ ಭಕ್ತರಿಗೆ ದರ್ಶನ ನೀಡುವುದು. ಈ ವೈರಮುಡಿ ಕಿರೀಟವನ್ನು ದೇವರಿಗೆ ಧಾರಣೆ ಮಾಡುವ ಆ ಕ್ಷಣವು ಅತಿ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಈ ವಿಶಿಷ್ಟ ಸಂದರ್ಭವನ್ನು ಕಣ್ತುಂಬಿಕೊಳ್ಳಲು ದೇಶದ ನಾನಾ ಭಾಗಗಳಿಂದ ಭಕ್ತರು ಮೇಲುಕೋಟೆಗೆ ಆಗಮಿಸಿದ್ದರು. ಇನ್ನು ಅತ್ಯಾಚಾರ ಪ್ರಕಣದಲ್ಲಿ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪರವಾಗಿ ತಂದೆ ಎಚ್​​ಡಿ ರೇವಣ್ಣ ವಿಶೇಷ ಪೂಜೆ ಸಲ್ಲಿಸಿದರು. ರೇವಣ್ಣ ಹಾಗೂ ಪುತ್ರ ಸೂರಜ್ ವೈರಮುಡಿ ಬ್ರಹ್ಮೋತ್ಸವದಲ್ಲಿ ಪ್ರಜ್ವಲ್ ಹೆಸರಿನಲ್ಲಿ ವಿಶೇಷ ಅರ್ಚನೆ ಮಾಡಿಸಿದರು. ಈ ಮೂಲಕ ಆದಷ್ಟು ಬೇಗ ಜೈಲಿನಿಂದ ಆಚೆ ಬರಲಿ ಎಂದು ಬೇಡಿಕೊಂಡರು.

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ.

Source link

ಹೊಸ ತಂಡಕ್ಕೆ ರವಿಚಂದ್ರನ್ ಅಶ್ವಿನ್ ಎಂಟ್ರಿ

Source link

ಮಾರ್ಚ್ ತಿಂಗಳಲ್ಲಿ 27 ದಿನಗಳಲ್ಲಿ 1.14 ಲಕ್ಷ ಕೋಟಿ ರೂ ವಿದೇಶೀ ಹೂಡಿಕೆಗಳ ಹೊರಹರಿವು; ಇದು ಹೊಸ ಮಾಸಿಕ ದಾಖಲೆ

ನವದೆಹಲಿ, ಮಾರ್ಚ್ 29: ಭಾರತದ ಈಕ್ವಿಟಿಗಳಿಂದ ಮಾರ್ಚ್ ತಿಂಗಳಲ್ಲಿ 12.3 ಬಿಲಿಯನ್ ಡಾಲರ್​ನಷ್ಟು ಎಫ್​ಪಿಐಗಳ ಹೂಡಿಕೆಗಳು ಹೊರಹೋಗಿವೆ. ಅಂದರೆ, ಮಾರ್ಚ್​ನಲ್ಲಿ ಈವರೆಗೂ (27, ಶುಕ್ರವಾರ) 1.14 ಲಕ್ಷ ಕೋಟಿ ರೂ ಈಕ್ವಿಟಿಗಳನ್ನು ವಿದೇಶೀ ಹೂಡಿಕೆದಾರರು ಮಾರಿದ್ದಾರೆ. ಇನ್ನೂ ಎರಡು ಟ್ರೇಡಿಂಗ್ ಸೆಷನ್​ಗಳು ಉಳಿದಿದ್ದು, ಮತ್ತಷ್ಟು ಸಾವಿರಾರು ಕೋಟಿ ರೂ ಎಫ್​ಪಿಐಗಳ (FPI- Foreign Portfolio Investors) ಹೊರಹರಿವು ಆಗುವ ನಿರೀಕ್ಷೆ ಇದೆ.

ಯಾವುದೇ ಒಂದು ತಿಂಗಳಲ್ಲಿ ಇಷ್ಟು ಮೊತ್ತದ ವಿದೇಶೀ ಹೂಡಿಕೆಗಳ ಹೊರಹರಿವು ಕಂಡಿದ್ದು ಇದೇ ಮೊದಲು. 2024ರ ಅಕ್ಟೋಬರ್ ತಿಂಗಳಲ್ಲಿ 94,017 ಕೋಟಿ ರೂ ಮೊತ್ತದಷ್ಟು ವಿದೇಶೀ ಹೂಡಿಕೆಗಳು ಹೊರಹೋಗಿದ್ದವು. ಅದು ಇಲ್ಲಿಯವರೆಗಿನ ದಾಖಲೆಯಾಗಿತ್ತು. ಮಾರ್ಚ್ ತಿಂಗಳಲ್ಲಿ ಮೊದಲ ಬಾರಿಗೆ 1 ಲಕ್ಷ ಕೋಟಿ ರೂ ಹೊರಹರಿವಿನ ಮೈಲಿಗಲ್ಲು ಸೃಷ್ಟಿಯಾಗಿದೆ.

ಇದನ್ನೂ ಓದಿ: ಅಬಕಾರಿ ಸುಂಕ ಕಡಿತದಿಂದ ಸರ್ಕಾರಕ್ಕೆ ಎರಡೇ ವಾರದಲ್ಲಿ 7,000 ಕೋಟಿ ರೂ ಆದಾಯನಷ್ಟದ ಅಂದಾಜು

ಮಾರ್ಚ್ ತಿಂಗಳಲ್ಲಿ ಎಫ್​ಪಿಐಗಳು ಸತತವಾಗಿ ಹೂಡಿಕೆಗಳನ್ನು ಹಿಂಪಡೆಯುತ್ತಿದ್ದ ಟ್ರೆಂಡ್ ಇತ್ತು. ಈಕ್ವಿಟಿ ಕ್ಯಾಷ್ ಮಾರ್ಕೆಟ್​ನಲ್ಲಿ ಮಾರ್ಚ್ 27ರವರೆಗೆ ವಿದೇಶೀ ಪೋರ್ಟ್​ಫೋಲಿಯೋ ಹೂಡಿಕೆದಾರರು ಮಾರಿದ ಈಕ್ವಿಟಿಗಳ ಮೌಲ್ಯ 1,13,380 ಕೋಟಿ ರೂ ಎನ್ನಲಾಗಿದೆ.

2026ರಲ್ಲಿ, ಅಂದರೆ ಜನವರಿಯಿಂದ ಈಚೆಗೆ ಎಫ್​ಪಿಐಗಳಿಂದ ಆಗಿರುವ ಹೂಡಿಕೆ ನಿರ್ಗಮನ ಒಟ್ಟು 1.27 ಲಕ್ಷ ಕೋಟಿ ರೂ. ಇದರಲ್ಲಿ ಮಾರ್ಚ್ ತಿಂಗಳದ್ದೇ ಸಿಂಹಪಾಲು. ಫೆಬ್ರುವರಿ ತಿಂಗಳಲ್ಲಿ ವಿಭಿನ್ನ ಟ್ರೆಂಡ್ ಇತ್ತು. ಎಫ್​ಪಿಐಗಳು 22,615 ಕೋಟಿ ರೂನಷ್ಟು ಮೊತ್ತದ ಭಾರತೀಯ ಈಕ್ವಿಟಿಗಳನ್ನು ಖರೀದಿ ಮಾಡಿದ್ದವು. ಕಳೆದ 17 ತಿಂಗಳಲ್ಲೇ ಅತಿಹೆಚ್ಚು ಮಾಸಿಕ ಒಳಹರಿವು ಅದಾಗಿತ್ತು.

ಇದನ್ನೂ ಓದಿ: ರಷ್ಯನ್ ಎಲ್​ಎನ್​ಜಿಯನ್ನು ಖರೀದಿಸಲಿರುವ ಭಾರತ; ಎಲ್​ಪಿಜಿ, ಪಿಎನ್​ಜಿ, ಎಲ್​ಎನ್​ಜಿಗಿರುವ ವ್ಯತ್ಯಾಸಗಳೇನು?

ಇರಾನ್ ಯುದ್ಧದ ಪರಿಣಾಮವು ಮಾರ್ಚ್ ತಿಂಗಳಲ್ಲಿ ಈಕ್ವಿಟಿ ಮಾರುಕಟ್ಟೆ ಮೇಲೆ ತೀವ್ರವಾಗಿ ಬಿದ್ದಿದೆ. ಹಾಗೆಯೇ, ಕಳೆದ 18 ತಿಂಗಳಲ್ಲಿ ಭಾರತದ ಈಕ್ವಿಟಿ ಮಾರುಕಟ್ಟೆಯ ಸಾಧನೆಯು ಇತರ ದೇಶಗಳ ಮಾರುಕಟ್ಟೆಗೆ ಹೋಲಿಸಿದರೆ ದುರ್ಬಲ ಸಾಧನೆ ತೋರಿದೆ. ಹೀಗಾಗಿ, ಎಫ್​ಪಿಐಗಳು ಭಾರತದ ಈಕ್ವಿಟಿಗಳಲ್ಲಿ ಹೂಡಿಕೆ ಕಡಿಮೆ ಮಾಡಿರಬಹುದು. ಇದರ ಜೊತೆಗೆ, ಅಮೆರಿಕದ ಬಾಂಡ್ ಯೀಲ್ಡ್ ಹೆಚ್ಚಿರುವುದು ಮತ್ತು ಜಾಗತಿಕವಾಗಿ ಹಣಕಾಸು ಸ್ಥಿತಿ ಸಂಕುಚಿತಗೊಂಡಿರುವುದು ಕೂಡ ಎಫ್​ಪಿಐಗಳ ಹೊರಹರಿವಿಗೆ ಕಾರಣವಾಗಿರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Job Opportunities: 10ನೇ ತರಗತಿ ಪಾಸಾದ ಯುವಕ/ಯುವತಿಯರಿಗೆ ಗುಡ್​ನ್ಯೂಸ್​; ಇಲ್ಲಿದೆ ಉದ್ಯೋಗವಕಾಶ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ನಿರುದ್ಯೋಗಿ ಯುವಕ-ಯುವತಿಯರಿಗೆ ಕರ್ನಾಟಕ ಸರ್ಕಾರ ಮತ್ತು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ವತಿಯಿಂದ ಒಂದು ಮಹತ್ವದ ಉದ್ಯೋಗಾವಕಾಶ ಲಭಿಸಿದೆ. ಖ್ಯಾತ ಸಂಸ್ಥೆಯಾದ “ಸ್ವಿಗ್ಗಿ ಇನ್‌ಸ್ಟಾ ಮಾರ್ಟ್” (Swiggy Insta Mart) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನವನ್ನು ಆಯೋಜಿಸಲಾಗಿದೆ. ಮಂಗಳೂರಿನಲ್ಲಿ ಕೆಲಸ ಹುಡುಕುತ್ತಿರುವವರಿಗೆ ಇದೊಂದು ಉತ್ತಮ ವೇದಿಕೆಯಾಗಿದೆ.

ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಪಿಕರ್, ಪ್ಯಾಕರ್ ಮತ್ತು ಲೋಡಿಂಗ್ ವಿಭಾಗದ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆಗಳಿಗೆ ಕನಿಷ್ಠ ಎಸ್‌ಎಸ್‌ಎಲ್‌ಸಿ ಅಥವಾ ಅದಕ್ಕಿಂತ ಹೆಚ್ಚಿನ ವಿದ್ಯಾಭ್ಯಾಸ ಹೊಂದಿರುವ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಸಮಾನ ಅವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿಗಳ ವಯಸ್ಸು 18 ರಿಂದ 35 ವರ್ಷದೊಳಗಿರಬೇಕು. ವಿಶೇಷವೆಂದರೆ, ಅಭ್ಯರ್ಥಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಪಾರ್ಟ್ ಟೈಮ್ ಅಥವಾ ಫುಲ್ ಟೈಮ್ ಕೆಲಸದ ಆಯ್ಕೆಯನ್ನು ಮಾಡಿಕೊಳ್ಳಬಹುದು.

ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಉದ್ಯೋಗ ಪಡೆಯುವುದು ಹೇಗೆ? ಅರ್ಹತೆ ಮತ್ತು ಆಯ್ಕೆ ಪ್ರಕ್ರಿಯೆಯ ಸಂಪೂರ್ಣ ಮಾಹಿತಿ ಇಲ್ಲಿದೆ

ನೇರ ಸಂದರ್ಶನ ನಡೆಯುವ ಸ್ಥಳ:

ನೇರ ಸಂದರ್ಶನವು ಏಪ್ರಿಲ್ 02 ರಂದು ಬೆಳಿಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 1:30 ರವರೆಗೆ ನಡೆಯಲಿದೆ. ಆಸಕ್ತರು ಮಂಗಳೂರಿನ ಪಾಂಡೇಶ್ವರದಲ್ಲಿರುವ ಪಿಜ್ಜಾ ಮಾಲ್ ಎದುರಿನ, ಅಲ್ಬುಕರ್ಕ್ ಹೌಸ್‌ನ ಆದಾಯ ತೆರಿಗೆ ಕಚೇರಿ ಕಟ್ಟಡದಲ್ಲಿರುವ “ಸ್ವಿಗ್ಗಿ ಇನ್‌ಸ್ಟಾ ಮಾರ್ಟ್” ಕಚೇರಿಗೆ ನೇರವಾಗಿ ಭೇಟಿ ನೀಡಬಹುದು. ಈ ಸಂದರ್ಶನ ಪ್ರಕ್ರಿಯೆಯು ಸಂಪೂರ್ಣವಾಗಿ ಉಚಿತವಾಗಿದ್ದು, ಅಭ್ಯರ್ಥಿಗಳು ಯಾವುದೇ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ. ಹೆಚ್ಚಿನ ಮಾಹಿತಿಗಾಗಿ 83107 71171 ಸಂಖ್ಯೆಯನ್ನು ಸಂಪರ್ಕಿಸಿ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link