Headlines

nagaraj11081993

Weekly Horoscope: ವಾರ ಭವಿಷ್ಯ; ನಿಮ್ಮ ರಾಶಿಗನುಗುಣವಾಗಿ ಈ ವಾರದ ಭವಿಷ್ಯ ತಿಳಿಯಿರಿ

ಇದು 2026ರ ಮಾರ್ಚ್ ನ ಕೊನೆಯ ವಾರ ಹಾಗೂ ಏಪ್ರಿಲ್ ನ ಮೊದಲ ವಾರವಾಗಿದ್ದು ಎಲ್ಲದಕ್ಕೂ ಆರುರಾತುರ ಪಡುವ ಬದಲು ಸಮಯಕ್ಕೆ ಕಾಯಬೇಕು. ಆಗ ಮಾತ್ರ ಬೆಲೆ, ನಿಮಗೂ ವಸ್ತುವಿಗೂ. ಅಡ್ಡದಾರಿ ನಿಮ್ಮನ್ನು ಕೈಬೀಸಿ ಕರೆಯುವುದು. ದುರಭ್ಯಾಸವನ್ನು ಮುಚ್ಚಿಡುವ ಪ್ರಯತ್ನ ಪ್ರಗತಿಯಲ್ಲಿ ಇರಲಿದೆ. ಆದರೂ ಪ್ರಕಟವಾಗುವುದು. ವಿರುದ್ಧ ಸೆಣಸಾಟ ಬರಬಹುದು ಜಾಗರೂಕತೆಯಿಂದ ವಾರವನ್ನು ಕಳೆಯಿರಿ. ಶುಭವಾಗಲಿ. ಮೇಷ ರಾಶಿ : ವೃತ್ತಿಯಲ್ಲಿ ಹೊಸ ಜವಾಬ್ದಾರಿಗಳು ಬರಲಿವೆ. ಆರ್ಥಿಕ ಲಾಭ ಉತ್ತಮವಾಗಿದ್ದರೂ ಖರ್ಚಿನ ಮೇಲೆ ನಿಯಂತ್ರಣವಿರಲಿ. ಕುಟುಂಬದಲ್ಲಿ ಶುಭ…

Read More

ರೇಮಂಡ್ ಗ್ರೂಪ್ ಮಾಜಿ ಛೇರ್ಮನ್ ವಿಜಯಪತ್ ಸಿಂಘಾನಿಯಾ ನಿಧನ; ಅಪರೂಪದ ಉದ್ಯಮಿ ಮತ್ತು ಸಾಹಸಿ

ನವದೆಹಲಿ, ಮಾರ್ಚ್ 29: ರೇಮಂಡ್ ಗ್ರೂಪ್ ಕಟ್ಟಿ ಬೆಳೆಸಿದ್ದ ಮತ್ತು ಅದರ ಮಾಜಿ ಛೇರ್ಮನ್ ಆದ ವಿಜಯಪತ್ ಸಿಂಘಾನಿಯಾ ನಿನ್ನೆ ಶನಿವಾರ ಸಂಜೆ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ರೇಮಂಡ್ ಗ್ರೂಪ್​ನ ಈಗಿನ ಮುಖ್ಯಸ್ಥ ಗೌತಮ್ ಸಿಂಘಾನಿಯಾ ಅವರ ತಂದೆಯಾದ ವಿಜಯಪತ್ ಸಿಂಘಾನಿಯಾ ಅವರ ಅಂತ್ಯಸಂಸ್ಕಾರ ಮುಂಬೈನಲ್ಲಿ ಭಾನುವಾರ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ ತಮ್ಮ ತಂದೆ ಮೃತಪಟ್ಟಿರುವ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಗೌತಮ್ ಸಿಂಘಾನಿಯಾ ಘೋಷಿಸಿದ್ದಾರೆ. ಮುಂಬೈನ ಚಂದನವಾಡಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ತಿಳಿಸಿದ್ದಾರೆ….

Read More

Weekly Horoscope: ವಾರ ಭವಿಷ್ಯ; ಮಾರ್ಚ್ 30 ರಿಂದ ಏಪ್ರಿಲ್ 5 ರ ದ್ವಾದಶ ರಾಶಿಗಳ ಫಲಾಫಲ ಇಲ್ಲಿ ತಿಳಿಯಿರಿ

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿಯವರು ಮಾರ್ಚ್ 30 ರಿಂದ ಏಪ್ರಿಲ್ 5 ರವರೆಗಿನ ವಾರ ಭವಿಷ್ಯವನ್ನು ತಿಳಿಸಿದ್ದಾರೆ. ಈ ವಾರವು ಪರಾಭವನಾಂ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಶುಕ್ಲ ಮತ್ತು ಕೃಷ್ಣ ಪಕ್ಷಗಳನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಸೋಮ ಪ್ರದೋಷ, ನಂಜನಗೂಡು ಜಾತ್ರಾ ಮಹೋತ್ಸವ, ಮಹಾವೀರ ಜಯಂತಿ, ಚೈತ್ರ ಪೌರ್ಣಿಮೆ, ಸಂಕಷ್ಟ ಚತುರ್ಥಿ ಸೇರಿದಂತೆ ಹಲವು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಗ್ರಹಗಳ ಸ್ಥಿತಿಯಲ್ಲಿ ಮಹತ್ವದ ಬದಲಾವಣೆಗಳಿದ್ದು,…

Read More

ತಾಯಿ, ಅಕ್ಕನ ಕೊಂದು ಆತ್ಮಹತ್ಯೆಗೆ ಯುವಕ ಯತ್ನ: ಪೊಲೀಸ್​​ ವರಿಷ್ಠಾಧಿಕಾರಿ ಹೇಳಿದ್ದೇನು?

ಆನೇಕಲ್​​, ಮಾರ್ಚ್​​ 29: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಳೆ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲೇನಹಳ್ಳಿ ಗ್ರಾಮದಲ್ಲಿ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸಾಲದ ಹೊರೆ ತಾಳಲಾರದೆ ಯುವಕನೊಬ್ಬ ತಾಯಿ ಮತ್ತು ಅಕ್ಕನ ಹತ್ಯೆಗೈದು, ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಮೋಹನ್ ಗೌಡ ದೊಡ್ಡ ಮಟ್ಟದಲ್ಲಿ ಚಿಟ್ ಫಂಡ್ ವ್ಯವಹಾರ ನಡೆಸುತ್ತಿದ್ದ. 10 ಲಕ್ಷ, 50 ಲಕ್ಷ, ಒಂದು ಕೋಟಿ ರೂಪಾಯಿಗಳವರೆಗಿನ ಚಿಟ್ ಫಂಡ್‌ಗಳನ್ನು ನಡೆಸಿದ್ದಲ್ಲದೆ,…

Read More

ಕೊಹ್ಲಿಯ ಕಿಸ್​​ಗೆ ನಾಚಿ ನೀರಾದ ಅನುಷ್ಕಾ ಶರ್ಮಾ

ಐಪಿಎಲ್ 2026ರ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜಯ ಸಾಧಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್​ರೈಸರ್ಸ್ ಹೈದರಾಬಾದ್ ತಂಡವು 201 ರನ್​ ಕಲೆಹಾಕಿದರೆ, ಈ ಗುರಿಯನ್ನು ಆರ್​ಸಿಬಿ ಕೇವಲ 15.4 ಓವರ್​ಗಳಲ್ಲಿ ಚೇಸ್ ಮಾಡಿದೆ. ಈ ಚೇಸಿಂಗ್​ನಲ್ಲಿ ವಿರಾಟ್ ಕೊಹ್ಲಿಯ ಕೊಡುಗೆ ಅಜೇಯ 69 ರನ್​ಗಳು. ಅದು ಸಹ ಕೇವಲ 38 ಎಸೆತಗಳಲ್ಲಿ. ಈ ಭರ್ಜರಿ ಬ್ಯಾಟಿಂಗ್ ಮೂಲಕ ಆರ್​ಸಿಬಿ ತಂಡವನ್ನು ಗೆಲುವಿನ ದಡ ಸೇರಿಸಿದ…

Read More

ಸಾಲವಾಗಿ ಕೊಟ್ಟಿರುವ ಹಣ, ಒಡವೆ ವಾಪಸ್ ಕೇಳಿದ್ದಕ್ಕೆ ಮನೆ ಮಾಲೀಕರನ್ನೇ ಕೊಂದ ಕೆಲಸದಾಕೆ

ಗುಜರಾತ್, ಮಾರ್ಚ್​ 29: ಸಾಲವಾಗಿ ಕೊಟ್ಟಿರುವ ಒಡವೆ ಹಾಗೂ ಹಣವನ್ನು ವಾಪಸ್ ಕೇಳಿದ್ದಕ್ಕೆ, ಕೆಲಸದಾಕೆ ಮನೆ ಮಾಲೀಕರನ್ನೇ ಕೊಲೆ(Murder)  ಮಾಡಿರುವ ಘಟನೆ ಗುಜರಾತ್​ನ ಪಾಲನ್​ಪುರದಲ್ಲಿ ನಡೆದಿದೆ. ಶಾಂತಿ ಬೆನ್ ಅಕೇಡಿವಾಲಾ ಮಾರ್ಚ್ 22 ರಿಂದ ಕಾಣೆಯಾಗಿದ್ದರು, ಆದರೆ ಆಕೆಯ ಶವವನ್ನು ಸ್ಥಳೀಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಪ್ರಮುಖ ಆರೋಪಿ ರೇಖಾ ರಾಥೋಡ್​ಗೆ ಶಾಂತಿ ಬೆನ್ ಕುಟುಂಬವು ಕಳೆದ 15 ವರ್ಷಗಳಿಂದ ಪರಿಚಯವಿತ್ತು. ರೇಖಾ ಮೊದಲು ಮನೆ ಸಹಾಯಕಿಯಾಗಿ ಕೆಲಸ ಮಾಡಲು ಪ್ರಾರಂಭಿಸಿದ್ದರು, ಮತ್ತು ನಂತರ ಅವರು ಸ್ನೇಹಿತರಾದರು, ನಂತರ…

Read More

ಇರಾನ್-ಇಸ್ರೇಲ್- ಅಮೆರಿಕ ನಡುವಿನ ಯುದ್ಧವು ಜಾಗತಿಕ ಬಿಕ್ಕಟ್ಟನ್ನು ಸೃಷ್ಟಿಸುತ್ತಿವೆ: ಪ್ರಧಾನಿ ಮೋದಿ

ನವದೆಹಲಿ, ಮಾರ್ಚ್​ 29: ಪ್ರಸ್ತುತ ಇರಾನ್-ಇಸ್ರೇಲ್-ಅಮೆರಿಕ ನಡುವಿನ ಯುದ್ಧವು ಜಾಗತಿಕ ಬಿಕ್ಕಟ್ಟು ಸೃಷ್ಟಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ಇಂದು ಮನ್​ ಕಿ ಬಾತ್​ನ 132ನೇ ಸಂಚಿಕೆಯಲ್ಲಿ ಮಾತನಾಡಿದ ಅವರು, ಯುದ್ಧವನ್ನು ಎದುರಿಸುತ್ತಿರುವ ಈ ದೇಶ ನಮ್ಮ ಇಂಧನ ಅಗತ್ಯಗಳಿಗೆ ಪ್ರಮುಖ ಕೇಂದ್ರವಾಗಿದೆ ಎಂದು ಪ್ರಧಾನಿ ಹೇಳಿದರು. ಇದು ಪೆಟ್ರೋಲ್ ಮತ್ತು ಡೀಸೆಲ್‌ಗೆ ಸಂಬಂಧಿಸಿದಂತೆ ಜಾಗತಿಕ ಬಿಕ್ಕಟ್ಟನ್ನು ಸೃಷ್ಟಿಸುತ್ತಿದೆ. ನಮ್ಮ ಜಾಗತಿಕ ಸಂಬಂಧಗಳು, ವಿವಿಧ ದೇಶಗಳಿಂದ ನಾವು ಪಡೆಯುವ ಸಹಕಾರ ಮತ್ತು ಕಳೆದ ದಶಕದಲ್ಲಿ…

Read More

‘ಧುರಂಧರ್ 2’ ಎದುರು ತೆರೆಕಂಡರೂ ಸೂಪರ್ ಹಿಟ್ ಆದ ‘ಲವ್ ಮಾಕ್ಟೇಲ್ 3’

‘ಧುರಂಧರ್ 2’ ಸಿನಿಮಾದ ಹವಾ ಹೇಗಿದೆ ಎಂಬುದು ಗೊತ್ತೇ ಇದೆ. ಅಂತಹ ದೈತ್ಯ ಸಿನಿಮಾದ ಎದುರು ಚಿಕ್ಕ ಸಿನಿಮಾಗಳು ಪೈಪೋಟಿ ನೀಡುವುದು ಕಷ್ಟ. ಆದರೆ ಕನ್ನಡದ ‘ಲವ್ ಮಾಕ್ಟೇಲ್ 3’ (Love Mocktail 3) ಸಿನಿಮಾ ಪೈಪೋಟಿ ನೀಡಿದೆ. ಕನ್ನಡದ ಪ್ರೇಕ್ಷಕರನ್ನು ಗಮನದಲ್ಲಿ ಇಟ್ಟುಕೊಂಡು ಬಿಡುಗಡೆ ಆದ ಈ ಸಿನಿಮಾ ಸೂಪರ್ ಹಿಟ್ ಆಗಿದೆ. ಆ ಖುಷಿಯನ್ನು ಹಂಚಿಕೊಳ್ಳಲು ಚಿತ್ರತಂಡದವರು ಇತ್ತೀಚೆಗೆ ಸಕ್ಸಸ್ ಮೀಟ್ ಆಯೋಜಿಸಿದ್ದರು. ನಿರ್ದೇಶಕ-ನಟ ಡಾರ್ಲಿಂಗ್ ಕೃಷ್ಣ (Darling Krishna), ಮಿಲನಾ ನಾಗರಾಜ್ ಸೇರಿದಂತೆ…

Read More

ಹಗಲೊಂದೇ ಅಲ್ಲ, ರಾತ್ರಿ ವೇಳೆಯ ಉಷ್ಣತೆಯೂ ಹೆಚ್ಚಳ: ಆರೋಗ್ಯದ ಮೇಲೆ ಗಂಭೀರ ಪರಿಣಾಮದ ಭೀತಿ

ಬೆಂಗಳೂರು, ಮಾರ್ಚ್​​ 29: ರಾಜ್ಯದ ಕೆಲ ಜಿಲ್ಲೆಗಳಲ್ಲಿ ವರುಣನ ಅಬ್ಬರದ ನಡುವೆಯೂ ಬಹುತೇಕ ಕಡೆ ತೀವ್ರ ಸೆಕೆಯ ವಾತಾವರಣ ಮುಂದುವರಿದಿದೆ. ವಿಪರೀತ ಉಷ್ಣತೆಯ ಪರಿಣಾಮ ಜನ ನಾನಾ ಸಮಸ್ಯೆಗಳಿಗೆ ಸಿಲುಕಿದ್ದಾರೆ. ಈ ನಡುವೆ ವರದಿಯೊಂದು ಆಘಾತಕಾರಿ ಅಂಶಗಳನ್ನು ಬಿಚ್ಚುಟ್ಟಿದ್ದು, ಮೂರು ದಶಕಗಳ ಹಿಂದೆ ಇದ್ದುದಕ್ಕಿಂತ ಈಗ ಕನಿಷ್ಠ 9 ರಿಂದ 13 ಹೆಚ್ಚುವರಿ ಉಷ್ಣತೆ ಹೊಂದಿರುವ ರಾತ್ರಿಗಳನ್ನು ಕರ್ನಾಟಕ ಅನುಭವಿಸುತ್ತಿದೆ. ಇದರಿಂದ ಜನರ ಉತ್ಪಾದಕತೆ ಮೇಲೆ ಪರಿಣಾಮ ಉಂಟಾಗುತ್ತಿರುವುದಲ್ಲದೆ, ಗಂಭೀರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತಿದೆ ಎಂದು ತಿಳಿಸಿದೆ….

Read More

‘ನಮಗೆ ಡಿಜಿಪಿನೇ ಮೊಬೈಲ್ ಕೊಟ್ಟಿದ್ದು’: ಪರಪ್ಪನ ಅಗ್ರಹಾರದಲ್ಲಿ ಅಲೋಕ್ ಕುಮಾರ್ ಬಗ್ಗೆ ವಿಡಿಯೋ ಮಾಡಿದ್ದ ಕಿಡಿಗೇಡಿಗಳು!

ಬೆಂಗಳೂರು, ಮಾರ್ಚ್​ 29: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮೊಬೈಲ್ ಪತ್ತೆ, ಡ್ರಗ್ಸ್ ಸಾಗಾಟ ಇವೆಲ್ಲ ಹೊಸದೇನಲ್ಲ. ಆದರೆ ಇತ್ತೀಚಿಗೆ ಡಿಜಿಪಿ ಅಲೋಕ್ ಕುಮಾರ್ (DGP Alok Kumar )ಅವರ ಕಟ್ಟುನಿಟ್ಟಾದ ಕ್ರಮದಿಂದ ಈ ಎಲ್ಲಾ ಅವ್ಯವಹಾರಗಳಿಗೆ ಬ್ರೇಕ್ ಬೀಳುವ ನಿರೀಕ್ಷೆಯಿತ್ತು. ಆದರೆ ಈಗ ಮತ್ತೊಮ್ಮೆ ಜೈಲಿನೊಳಗೇ ಕೈದಿಗಳು ಮೊಬೈಲ್ ಬಳಸಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದು ಬೆಳಕಿಗೆ ಬಂದಿದೆ. ಡ್ರೈನೇಜ್​ನಲ್ಲಿ ಮೊಬೈಲ್ ಫೋನ್​ಗಳು ಪತ್ತೆ ವಿಡಿಯೋದಲ್ಲಿ ಜೈಲಿನಲ್ಲಿ ಮೊಬೈಲ್, ಟಿವಿ ಹಾಗೂ ನೆಟ್‌ಫ್ಲಿಕ್ಸ್‌ನಂತಹ ಸೌಲಭ್ಯಗಳು ಲಭ್ಯವಿವೆ…

Read More