Headlines

nagaraj11081993

Video: ಬೆಳಗ್ಗೆಯಿಂದ ರಾತ್ರಿ ತನಕ ಬ್ಯುಸಿ, ಆದ್ರೂ ಲೈಫ್‌ನಲ್ಲಿ ಫುಲ್‌ ಹ್ಯಾಪಿ; ಈ ಯುವಕನ ಬ್ಯುಸಿ ಶೆಡ್ಯೂಲ್ ಹೇಗಿದೆ ನೋಡಿ – Kannada News

ನಮ್ಮಲ್ಲಿ ಯಾರನ್ನಾದ್ರೂ ಕೇಳಿದ್ರೆ ಕೆಲಸಕ್ಕೆ (Office) ಹೋಗಿ ಬಂದು ಸುಸ್ತು ಆಗುತ್ತದೆ. ಆಫೀಸ್‌ಗೆ ಹೋಗಿ ಬರುವಷ್ಟರಲ್ಲಿ ಟೈಮ್ ಆಗಿ ಬಿಡುತ್ತದೆ. ಮನೆಗೆ ಬಂದು ಮಲಗಿದ್ರೆ ಸಾಕು ಎಂದು ಹೇಳುವವರೇ ಹೆಚ್ಚು. ಇದೆಲ್ಲದರ ನಡುವೆ ಈ ಯುವಕನ ಬಿಡುವಿಲ್ಲದ ಕೆಲಸ ನೋಡಿದ್ರೆ ನೀವು ಶಾಕ್ ಆಗ್ತೀರಾ. ಈ ಎನರ್ಜಿಟಿಕ್ ಯುವಕನ ಹೆಸರು ದೀಪಕ್ ಪಾಂಡೆ (Deepak Pandey). ಬೆಳಗ್ಗೆ 9 ರಿಂದ 5 ಗಂಟೆ ತನಕ ಆಫೀಸ್ ಕೆಲಸ. ಸಂಜೆ ಆಫೀಸ್‌ ಮುಗಿಸಿ ಬಂದು ರಾತ್ರಿ 11 ಗಂಟೆವರೆಗೆ…

Read More

ಜಮೀರ್ ಅಹ್ಮದ್​ಗೆ ಡಿಕೆ ಶಿವಕುಮಾರ್ ಸಂಪುಟದಲ್ಲಿ ಮುಂದೆಯೂ ಸ್ಥಾನ ಸಿಗೋದು ಅನುಮಾನ! – Kannada News

ಬೆಂಗಳೂರು, ಜೂನ್ 4: ಸಿದ್ದರಾಮಯ್ಯ ಸರ್ಕಾರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಪ್ರಭಾವಿ ಮುಖವಾಗಿದ್ದ ಹಿರಿಯ ಕಾಂಗ್ರೆಸ್ ನಾಯಕ ಜಮೀರ್ ಅಹ್ಮದ್ ಖಾನ್​ಗೆ (Zameer Ahmed Khan) ಡಿಕೆ ಶಿವಕುಮಾರ್ (DK Shivakumar) ನೂತನ ಸಂಪುಟದಲ್ಲಿ ಮೊದಲ ಅವಕಾಶ ಕೈತಪ್ಪಿದೆ. ಸಚಿವ ಸಂಪುಟ ವಿಸ್ತರಣೆ ವೇಳೆಯೂ ಸ್ಥಾನ ತಪ್ಪುವ ಸಾಧ್ಯತೆ ದಟ್ಟವಾಗಿದೆ. ಮುಂದಿನ ದಿನಗಳಲ್ಲೂ ಕಾಂಗ್ರೆಸ್ 2.0 ಸರ್ಕಾರದಲ್ಲಿ ಜಮೀರ್​​ಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳು ಕ್ಷೀಣಿಸಿವೆ ಎಂದು ಉನ್ನತ ಮೂಲಗಳು ತಿಳಿಸಿವೆ. ದಾವಣಗೆರೆ ದಕ್ಷಿಣ ಉಪಚುನಾವಣೆಯ ವೇಳೆ ಉಂಟಾದ…

Read More

ಐಪಿಎಲ್ ಹಗರಣ; ಹಿರಿಯ ರಾಜಕೀಯ ನಾಯಕರ ಹೆಸರು ಬಾಯ್ಬಿಟ್ಟ ಲಲಿತ್ ಮೋದಿ – Kannada News

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಂಸ್ಥಾಪಕ ಮತ್ತು ಮೊದಲ ಅಧ್ಯಕ್ಷ ಲಲಿತ್ ಮೋದಿ ಅವರು 2010ರ ಕೊಚ್ಚಿ ಟಸ್ಕರ್ಸ್ ಕೇರಳ ಫ್ರಾಂಚೈಸಿ ವಿವಾದಕ್ಕೆ ಸಂಬಂಧಿಸಿದಂತೆ ದಶಕದ ಬಳಿಕ ಸ್ಫೋಟಕ ಆರೋಪಗಳನ್ನು ಮಾಡಿದ್ದಾರೆ. ಅಂದಿನ ಯುಪಿಎ ಸರ್ಕಾರದ ಪ್ರಮುಖ ನಾಯಕರು ಮತ್ತು ಬಿಸಿಸಿಐ ಉನ್ನತ ಅಧಿಕಾರಿಗಳು ತಮ್ಮ ಮೇಲೆ ಒತ್ತಡ ಹೇರಿದ್ದರು ಎಂದು ಲಲಿತ್ ಮೋದಿ ಬಹಿರಂಗಪಡಿಸಿದ್ದಾರೆ. ಸೋನಿಯಾ ಗಾಂಧಿ ಬೆಂಬಲ, ನಾಯಕರಿಂದ ಕರೆಗಳು ಸಂದರ್ಶನವೊಂದರಲ್ಲಿ ಅಂದಿನ ಘಟನಾವಳಿಗಳನ್ನು ನೆನಪಿಸಿಕೊಂಡಿರುವ ಲಲಿತ್ ಮೋದಿ, ‘ಅಂದು ಶಶಿ ತರೂರ್ ಅವರಿಗೆ…

Read More

ಭಾರತದ ವಾಯುಸೇನಾ ಬಲದ ಕೊರತೆ ನೀಗಿಸಲಿರುವ 114 ರಫೇಲ್ ಯುದ್ಧವಿಮಾನಗಳು – Kannada News

ನವದೆಹಲಿ, ಜೂನ್ 4: ಭಾರತವು ಫ್ರಾನ್ಸ್‌ನಿಂದ ಸುಮಾರು ₹3.25 ಲಕ್ಷ ಕೋಟಿ ಮೌಲ್ಯದ ಒಪ್ಪಂದದಲ್ಲಿ 114 ದಸ್ಸಾಲ್ಟ್ ರಫೇಲ್ (Dassault Rafale) ಯುದ್ಧವಿಮಾನಗಳನ್ನು ಖರೀದಿಸುವ ವಿನಂತಿಯನ್ನು ಅಂತಿಮಗೊಳಿಸಿದೆ. ಈ ಕುರಿತ ಅಧಿಕೃತ ವಿನಂತಿ ಪತ್ರವನ್ನು (Letter of Request – LoR) ಶೀಘ್ರದಲ್ಲೇ ಕಳುಹಿಸಲಾಗುವುದು. ಇದು ಉಭಯ ದೇಶಗಳ ನಡುವೆ ಅಧಿಕೃತ ಮಾತುಕತೆಗೆ ನಾಂದಿ ಹಾಡಲಿದೆ. ಇದು ಭಾರತದ ಇತಿಹಾಸದಲ್ಲೇ ಅತಿ ದೊಡ್ಡ ಯುದ್ಧವಿಮಾನ ಖರೀದಿ ಒಪ್ಪಂದವಾಗುವ ಸಾಧ್ಯತೆಯಿದೆ. ಭಾರತೀಯ ವಾಯುಸೇನೆಯ ಮುಖ್ಯಸ್ಥರಾದ (Air Chief Marshal)…

Read More

ಅಬುಧಾಬಿಯ ಬಿಎಪಿಎಸ್ ಹಿಂದೂ ಮಂದಿರಕ್ಕೆ ಪ್ರತಿಷ್ಠಿತ ‘ಟಾಲರೆನ್ಸ್​ ಪ್ರಶಸ್ತಿ’ಯ ಗರಿ – Kannada News

ಅಬುಧಾಬಿ, ಜೂನ್ 04: ಯುಎಇ (UAE) ರಾಜಧಾನಿ ಅಬುಧಾಬಿಯಲ್ಲಿರುವ ಪ್ರಸಿದ್ಧ ಬಿಎಪಿಎಸ್ (BAPS) ಹಿಂದೂ ಮಂದಿರಕ್ಕೆ ಅಂತಾರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ “ ಟಾಲರೆನ್ಸ್​ ಪ್ರಶಸ್ತಿ 2026” (Tolerance Award 2026) ಒಲಿದು ಬಂದಿದೆ. ಜಾಗತಿಕವಾಗಿ ಸೌಹಾರ್ದತೆ, ಪರಸ್ಪರ ಗೌರವ ಮತ್ತು ಶಾಂತಿಯುತ ಸಹಬಾಳ್ವೆಯನ್ನು ಉತ್ತೇಜಿಸುವಲ್ಲಿ ಮಂದಿರ ನೀಡುತ್ತಿರುವ ಮಹತ್ತರ ಕೊಡುಗೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ. ಇತ್ತೀಚೆಗೆ ನಡೆದ ‘ಥರ್ಡ್​ ಇಂಟರ್​ನ್ಯಾಷನಲ್ ಡೈಲಾಗ್ ಆಫ್ ಸಿಲಿಲೈಸೇಷನ್ ಆ್ಯಂಡ್ ಟಾಲರೆನ್ಸ್​ ಕಾನ್ಫರೆನ್ಸ್​(IDCT 2026)ನಲ್ಲಿ ಈ ಪ್ರಶಸ್ತಿಯನ್ನು ಅಧಿಕೃತವಾಗಿ ಪ್ರಕಟಿಸಲಾಯಿತು….

Read More

ಕೆಪಿಸಿಸಿ ಅಧ್ಯಕ್ಷ ಸ್ಥಾನ ಸತೀಶ್​​ ಕೈತಪ್ಪಿದ್ಯಾಕೆ? ಜಾರಕಿಹೊಳಿ ಲೆಕ್ಕಾಚಾರ ತಪ್ಪಿದ್ದೇಗೆ?: ಇಲ್ಲಿದೆ ಮಾಹಿತಿ – Kannada News

ಕೆಪಿಸಿಸಿ ಅಧ್ಯಕ್ಷ ಸ್ಥಾನ ಸತೀಶ್​​ ಕೈತಪ್ಪಿದ್ಯಾಕೆ?Image Credit source: Tv9 Kannada ಬೆಂಗಳೂರು, ಜೂನ್​​ 04: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ. ಶಿವಕುಮಾರ್ (DK Shivakumar)​​ ರಾಜೀನಾಮೆ ಬೆನ್ನಲ್ಲೇ ಪಕ್ಷದ ನೂತನ ಸಾರಥಿಯಾಗಿ ಪರಿಷತ್​​ ಸದಸ್ಯ ಬಿ.ಕೆ. ಹರಿಪ್ರಸಾದ್​ ಅವರನ್ನು ಎಐಸಿಸಿ ಘೋಷಣೆ ಮಾಡಿದೆ. ಅಷ್ಟಕ್ಕೂ ಹರಿಪ್ರಸಾದ್​​ ಹೆಸರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್​​ಗೆ ಆದ ಸರ್ಪ್ರೈಸ್​​ ಎಂಟ್ರಿಯಾಗಿತ್ತು. ಅಲ್ಲಿಯವರೆಗೂ ಸತೀಶ್​​ ಜಾರಕಿಹೊಳಿ ಹೆಸರೇ ಮುಂಚೂಣಿಯಲ್ಲಿತ್ತು, ಅವರಿಗೇ ಪಟ್ಟ ಎಂಬದೂ ಬಹುತೇಕ ಫೈನಲ್​​ ಆಗಿತ್ತು. ಆದರೆ ಕೊನೇ…

Read More

Video: ಖಾಲಿ ರಸ್ತೆಯಲ್ಲೂ ಗ್ರೀನ್ ಸಿಗ್ನಲ್ ಬರುವವರೆಗೂ ಕಾದು ನಿಂತ ವ್ಯಕ್ತಿ – Kannada News

ಸಿಂಗಾಪುರ, ಜೂನ್ 04: ಸಂಚಾರಿ ನಿಯಮಗಳನ್ನು (Traffic Rules) ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯ. ಆದರೆ ಕೆಲವರು ಹೈಲ್ಮೆಟ್‌ ಧರಿಸದೆ, ಸೀಟ್‌ ಬೆಲ್ಟ್‌ ಧರಿಸುವುದಿಲ್ಲ, ಗ್ರೀನ್ ಸಿಗ್ನಲ್ ಬರುವವರೆಗೂ ಕಾಯುವುದೇ ಇಲ್ಲ ವಾಹನ ಚಲಾಯಿಸಿ ಟ್ರಾಫಿಕ್‌ ರೂಲ್ಸ್‌ಗಳನ್ನು ಬ್ರೇಕ್‌ ಮಾಡ್ತಾರೆ. ಇದಕ್ಕೆ ವ್ಯತಿರಿಕ್ತವಾಗಿದೆ ಈ ದೃಶ್ಯ. ಸಿಂಗಾಪುರದ (Singapore) ಖಾಲಿ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ಟ್ರಾಫಿಕ್ ನಿಮಯ ಪಾಲಿಸಿದ್ದಾರೆ. ತಡರಾತ್ರಿ 1 ಗಂಟೆಯ ವೇಳೆ ವಾಹನಗಳಿಲ್ಲದ ರಸ್ತೆಯಲ್ಲಿ ಗ್ರೀನ್ ಸಿಗ್ನಲ್ ಬರುವವರೆಗೂ ಕಾದು, ಆ ಬಳಿಕ ರಸ್ತೆ ದಾಟಿದ್ದಾರೆ. ಈ…

Read More

ಚತುರ ರಾಜತಾಂತ್ರಿಕ ನಡೆ: ಸವಾಲುಗಳ ನಡುವೆಯೇ ಹೊಸ ಇತಿಹಾಸ ಸೃಷ್ಟಿಸಲು ಸಜ್ಜಾದ ಶಾಸಕ ರಿತಬ್ರತ ಬ್ಯಾನರ್ಜಿ – Kannada News

ಕೋಲ್ಕತಾ, ಜೂನ್ 04: ಪಶ್ಚಿಮ ಬಂಗಾಳ(West Bengal)ದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲಿ, ಸುಶಿಕ್ಷಿತ ಹಾಗೂ ತೀಕ್ಷ್ಣ ಸಂಭಾಷಣಾ ಚತುರ ನಾಯಕರೆಂದೇ ಗುರುತಿಸಲ್ಪಟ್ಟಿರುವ ರಿತಬ್ರತ ಬ್ಯಾನರ್ಜಿ ಪ್ರಸ್ತುತ ತಮಗಿರುವ ರಾಜಕೀಯ ಕೌಶಲ್ಯ ಮತ್ತು ಬೌದ್ಧಿಕ ಮೌಲ್ಯದ ಮೂಲಕ ಬಂಗಾಳದ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. ವಿದ್ಯಾರ್ಥಿ ನಾಯಕನಾಗಿ ಆರಂಭಗೊಂಡು, ರಾಜ್ಯಸಭಾ ಸಂಸದರಾಗಿ ದೇಶದ ಗಮನ ಸೆಳೆದಿದ್ದ ಇವರು, ಇತ್ತೀಚೆಗೆ ಅಂದರೆ 2026 ರ ಚುನಾವಣೆಯಲ್ಲಿ ಉಲ್ಲುಬೇರಿಯಾ ಪುರ್ಬಾ ಕ್ಷೇತ್ರದಿಂದ ಜಯಗಳಿಸಿ ಮೊದಲ ಬಾರಿಗೆ ಶಾಸಕರಾಗಿ (MLA) ಆಯ್ಕೆಯಾಗುವ…

Read More

Jupiter Transit 2026: ಉಚ್ಚಸ್ಥಾನದಲ್ಲಿ ಗುರು; 12 ರಾಶಿಗಳಲ್ಲಿ ಯಾರಿಗೆಲ್ಲ ಗುರು ಬಲ? – Kannada News

ಉಚ್ಚಸ್ಥಾನದಲ್ಲಿ ಗುರುImage Credit source: Pinterest ಕಾಲವನ್ನು ತಿಳಿಯುವ ಶಾಸ್ತ್ರದ ಪ್ರಕಾರ ಗುರುವು ಅತ್ಯಂತ ಶುಭ ಗ್ರಹ. ಗುರುವು ತನ್ನ ಉಚ್ಛ ರಾಶಿಯಾದ ಕರ್ಕಾಟಕದಲ್ಲಿದ್ದಾನೆ. ಇದು ಅತ್ಯಂತ ಬಲವಾದ ಸ್ಥಿತಿ. ಜೊತೆಗೆ ಚಂದ್ರನ ದ್ರೇಕ್ಕಾಣ ಮತ್ತು ಹೋರೆಯಲ್ಲಿ ಸ್ನೇಹಿತನ ವರ್ಗ, ರವಿಯ ನವಾಂಶಯಲ್ಲಿ ಮಿತ್ರನ ವರ್ಗದಲ್ಲಿದ್ದಾನೆ. ಆದರೆ ಬುಧನ ತ್ರಿಂಶಾಂಶ ಮತ್ತು ದ್ವಾದಶಾಂಶದಲ್ಲಿದ್ದಾನೆ. ಬುಧನು ಗುರುವಿಗೆ ಶತ್ರು/ಸಮ ಭಾವ ಹೊಂದಿದ್ದಾನೆ. ಒಟ್ಟಾರೆಯಾಗಿ ಹೇಳುವುದಾದರೆ, ಗುರುವು ಉಚ್ಛ ಸ್ಥಾನದಲ್ಲಿದ್ದರೂ ವರ್ಗಕುಂಡಲಿಗಳಲ್ಲಿ ಮಿಶ್ರಫಲ ಹೊಂದಿದ್ದಾನೆ. ಈ ವಿಶಿಷ್ಟ ಸ್ಥಿತಿಯ 12…

Read More

Peddi First Half review: ‘ಪೆದ್ದಿ’ ಮೊದಲಾರ್ಧದಲ್ಲಿ ಏನಿದೆ? ಏನಿಲ್ಲ? – Kannada News

ರಾಮ್ ಚರಣ್ (Ram Charan), ಶಿವರಾಜ್ ಕುಮಾರ್ (Shiva Rajkumar), ಜಾನ್ಹವಿ ಕಪೂರ್ ನಟನೆಯ ‘ಪೆದ್ದಿ’ ಸಿನಿಮಾ ಇಂದು (ಜೂನ್ 4) ವಿಶ್ವದಾದ್ಯಂತ ಬಿಡುಗಡೆ ಆಗಿದೆ. ‘ಆರ್​​ಆರ್​​ಆರ್’ ಬಳಿಕ ಸತತ ಸೋಲು ಕಂಡಿರುವ ರಾಮ್ ಚರಣ್​​ ಪಾಲಿಗೆ ಇದು ಬಲು ಮಹತ್ವದ ಸಿನಿಮಾ ಆಗಿದೆ. ಬುಚ್ಚಿಬಾಬು ಸನಾ ನಿರ್ದೇಶಿಸಿರುವ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆಗಳಿದ್ದು, ಸಿನಿಮಾದ ಪ್ರಚಾರವನ್ನು ಚಿತ್ರತಂಡ ಬಲು ಜೋರಾಗಿ ಮಾಡಿದೆ. ‘ಪೆದ್ದಿ’ ಸಿನಿಮಾವು ಗ್ರಾಮೀಣ ಭಾಗದ ಕತೆ ಹೊಂದಿರುವ ಸಿನಿಮಾ ಆಗಿದ್ದು, ಕ್ರೀಡಾಪಟು ಯುವಕನೊಬ್ಬನ…

Read More