Headlines

nagaraj11081993

ಬ್ಯಾಂಕ್ ತಪ್ಪಿನಿಂದ ಮಹಿಳೆಯೊಬ್ಬರ ಅಕೌಂಟ್​ಗೆ 10 ಕೋಟಿ ರೂ. ಜಮಾ, ಆಕೆ ಮಾಡಿದ್ದೇನು?

ಮೈನ್​ಪುರಿ, ಮಾರ್ಚ್​ 29: ಹಣ ಕಂಡ್ರೆ ಹೆಣನೂ ಬಾಯಿ ಬಿಡುತ್ತೆ ಅನ್ನೋ ಕಾಲದಲ್ಲಿ, ತಮ್ಮ ಬ್ಯಾಂಕ್(Bank) ಖಾತೆಗೆ ಏನಾದ್ರೂ ಕೋಟಿ ಕೋಟಿ ಹಣ ಬಂದ್ರೆ ಯಾರಾದ್ರೂ ಸುಮ್ನಿರ್ತಾರಾ, ಮೊದಲು ವಿತ್​ ಡ್ರಾ ಮಾಡುತ್ತಾರೆ. ಆದ್ರೆ ಇಲ್ಲೊಬ್ಬ ಮಹಿಳೆಯ ಖಾತೆಗೆ 10 ಕೋಟಿ ರೂ. ಹಣ ಬಂದಿದೆ. ಆಕೆ ಮಾಡಿದ್ದೇನು ಇಲ್ಲಿದೆ ಮಾಹಿತಿ. ಬಿಚ್ವಾನ್ ಪ್ರದೇಶದ ದೇವಗಂಜ್ ಗ್ರಾಮದ ನಿವಾಸಿ ಪರಸ್ಭಾನ್ ಬಹೇಲಿಯಾ ಅವರ ಪತ್ನಿ ರೀಟಾ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ.ಕೃಷಿಯ ಮೂಲಕ ಜೀವನೋಪಾಯವನ್ನು ಗಳಿಸುತ್ತಿದ್ದಾರೆ. ನವರಾತ್ರಿಯ ಸಮಯದಲ್ಲಿ…

Read More

ಕಿಂಗ್ ಕೊಹ್ಲಿ ಸಿಡಿಲಬ್ಬರಕ್ಕೆ ಪಾಕ್ ದಾಂಡಿಗನ ವಿಶ್ವ ದಾಖಲೆ ಧೂಳೀಪಟ

ದಾಖಲೆಗಳ ಸರದಾರ ವಿರಾಟ್ ಕೊಹ್ಲಿಯ (Virat Kohli) ಹೆಸರಿಗೆ ಮತ್ತೊಂದು ವಿಶ್ವ ದಾಖಲೆ ಸೇರ್ಪಡೆಯಾಗಿದೆ. ಅದು ಕೂಡ ಟಿ20 ರನ್​ ಸರದಾರರ ಪಟ್ಟಿಯಲ್ಲಿ ಒಂದು ಸ್ಥಾನ ಮೇಲೇರುವ ಮೂಲಕ. ಅಂದರೆ ಟಿ20 ಕ್ರಿಕೆಟ್​ ಇತಿಹಾಸದಲ್ಲೇ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್​ಗಳ ಲಿಸ್ಟ್​ನಲ್ಲಿ ಕಿಂಗ್ ಕೊಹ್ಲಿ ಒಂದು ಸ್ಥಾನ ಮೇಲೇರಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಪರ ಆರಂಭಿಕನಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ 38 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ…

Read More

Bengaluru Air Quality: ಬೆಂಗಳೂರಿನ ವಾಯುಗುಣಮಟ್ಟದಲ್ಲಿ ಸುಧಾರಣೆ

ಬೆಂಗಳೂರು, ಮಾರ್ಚ್​ 29: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಏರ್ ಕ್ವಾಲಿಟಿಯಲ್ಲಿ (Bengaluru Air Quality) ಏರುಪೇರಾಗುತ್ತಲೇ ಇದೆ. ವಾಯು ಗುಣಮಟ್ಟ ಎಲ್​ಲೆಡೆಯೂ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ. ಆದರೆ ಇಂದು ಬೆಂಗಳೂರಿನ ಏರ್ ಕ್ವಾಲಿಟಿ ತಕ್ಕಮಟ್ಟಿಗೆ ಸುಧಾರಣೆ ಕಂಡಿದೆ. 150ಕ್ಕಿಂತ ಜಾಸ್ತಿಯಿದ್ದ AQI ಕಡುಮೆಯಾಗಿದ್ದರೂ, ಇನ್ನೂ ಗುಣಮಟ್ಟ ಅನಾರೋಗ್ಯಕರವಾಗಿಯೇ ಇದೆ ಎಂದು ತಜ್ಞರು ತಿಳಿಸಿದ್ದಾರೆ. ಉಡುಪಿ, ಮಂಗಳೂರು ಸೇರಿದಂತೆ ಇಂದು ಹಲವೆಡೆ ವಾಯು ಗುಣಮಟ್ಟ ಸುಧಾರಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ…

Read More

ವ್ಯಕ್ತಿಯ ಶಿರಚ್ಛೇದ ಮಾಡಿ, ರುಂಡವನ್ನು ಮನೆಯಲ್ಲಿ ಎಸೆದು, ತನ್ನಷ್ಟಕ್ಕೆ ಅಡುಗೆ ಮಾಡಿದ ಆರೋಪಿ

ಬಾರಾಬಂಕಿ, ಮಾರ್ಚ್​ 29: ಐಸ್​ಕ್ರೀಂ ಮಾರಾಟಗಾರನ ಶಿರಚ್ಛೇದ(Behead) ಮಾಡಿ, ರುಂಡವನ್ನು ಮನೆಗೆ ಕೊಂಡೊಯ್ದು ಅಡುಗೆ ಮನೆಯಲ್ಲಿ ಎಸೆದು, ತನ್ನಷ್ಟಕ್ಕೆ ಅಡುಗೆ ಮುಂದುವರೆಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದಿದೆ. ಈ ಘಟನೆ ಬಾರಾಬಂಕಿ ಜಿಲ್ಲೆಯ ಪರ್ಸಾವಲ್ ಗ್ರಾಮದಲ್ಲಿ ನಡೆದಿದೆ, ಮೃತ ವ್ಯಕ್ತಿ ಹೆಸರು ಬಬ್ಲು. ಬೇರೆ ದಿನಗಳಂತೆ ಪರ್ಸಾವಲ್ ಗ್ರಾಮಕ್ಕೆ ಐಸ್ ಕ್ರೀಮ್ ಮಾರಾಟ ಮಾಡಲು ಹೋಗಿದ್ದರು. ತನ್ನ ಕೆಲಸ ನಿರ್ವಹಿಸುತ್ತಿದ್ದಾಗ, ಸ್ಥಳೀಯ ನಿವಾಸಿ ಶಂಕರ್ ಯಾದವ್ ಜೊತೆ ಮಾತಿನ ಚಕಮಕಿ ನಡೆದಿತ್ತು….

Read More

ಕರ್ನಾಟಕ ಹವಾಮಾನ ವರದಿ: ಹಾಸನ ಸೇರಿದಂತೆ ಹಲವೆಡೆ ಇಂದು ಗುಡುಗು ಸಹಿತ ಮಳೆ; 13 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​

ಬೆಂಗಳೂರು, ಮಾರ್ಚ್​ 29: ರಾಜ್ಯದ ಹಲವೆಡೆ ಕಳೆದ ಮೂರು-ನಾಲ್ಕು ದಿನಗಳಿಂದ ಗುಡುಗು ಸಹಿತ ಮಳೆಯಾಗಿದೆ. ಇಂದೂ ಸಹ ಹಲವೆಡೆ ಮಳೆಯಾಗುವ  (Weather Forecast)  ಸೂಚನೆಯಿದ್ದು, ಹವಾಮಾನ ಇಲಾಖೆ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಿದೆ. ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ಕೆಲ ಭಾಗಗಳಲ್ಲಿ ಒಣ ಹವೆಯ ವಾತಾವರಣವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಯಾವೆಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​? ​ ಕಲಬುರ್ಗಿ, ವಿಜಯಪುರ, ಗದಗ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ಹಾವೇರಿ, ಚಿಕ್ಕಮಗಳೂರು,…

Read More

13 ಎಸೆತಗಳಲ್ಲಿ ಭರ್ಜರಿ ದಾಖಲೆ ಬರೆದ ಜೇಕಬ್ ಡಫಿ

ಐಪಿಎಲ್​ ಸೀಸನ್-19 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶುಭಾರಂಭ ಮಾಡಿದೆ. ಈ ಶುಭಾರಂಭಕ್ಕೆ ಮುಖ್ಯ ಕಾರಣ ಆರ್​ಸಿಬಿ ತಂಡದ ನೂತನ ವೇಗಿ ಜೇಕಬ್ ಡಫಿ ಎಂದರೆ ತಪ್ಪಾಗಲಾರದು. ಏಕೆಂದರೆ ಈ ಮ್ಯಾಚ್​ನಲ್ಲಿ ಕರಾರುವಾಕ್ ದಾಳಿ ಸಂಘಟಿಸಿದ ಡಫಿ 4 ಓವರ್​ಗಳಲ್ಲಿ ನೀಡಿದ್ದು ಕೇವಲ 22 ರನ್​ಗಳು ಮಾತ್ರ. ಅಷ್ಟೇ ಅಲ್ಲದೆ ಪಂದ್ಯದ ಆರಂಭದಲ್ಲೇ ಡೇಂಜರಸ್ ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್ ಹಾಗೂ ನಿತೀಶ್ ಕುಮಾರ್ ರೆಡ್ಡಿ ಅವರ ವಿಕೆಟ್ ಕಬಳಿಸುವ ಮೂಲಕ ಆರ್​ಸಿಬಿ ತಂಡಕ್ಕೆ ಅತ್ಯುತ್ತಮ…

Read More

ಹೊಸಕೋಟೆ-ಕೋಲಾರ ಹೆದ್ದಾರಿಯಲ್ಲಿ ಟ್ರಕ್​​​ಗೆ ಗುದ್ದಿ ಹೊತ್ತಿ ಉರಿದ ಕಾರು: ಚಾಲಕ ಬದುಕಿದ್ದೇ ಪವಾಡ!

ದೇವನಹಳ್ಳಿ, ಮಾರ್ಚ್​​ 29: ಯೂಟರ್ನ್ ಪಡೆಯುತ್ತಿದ್ದ ಟ್ರಕ್​​ಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡ ಘಟನೆ ಹೊಸಕೋಟೆ-ಕೋಲಾರ ಹೆದ್ದಾರಿಯ ಹಲಸಹಳ್ಳಿ ಗೇಟ್ ಬಳಿ ನಡೆದಿದೆ. ಡಿಕ್ಕಿಯ ರಬಸಕ್ಕೆ ಕಾರಿನ ಮುಂಭಾಗ ನಜ್ಜುಗುಜ್ಜಾಗಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಸಂಪೂರ್ಣ ಕಾರು ಹಾಗೂ ಟ್ರಕ್​​ನ ಸ್ವಲ್ಪ ಭಾಗ ಸುಟ್ಟು ಕರಕಲಾಗಿದೆ. ಅಪಘಾತದ ಬಳಿಕ ಕಾರಿನಲ್ಲಿ ಸಿಲುಕಿದ್ದ ಚಾಲಕನನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸಿದ್ದು, ಅಪಘಾತವಾಗ್ತಿದ್ದಂತೆ ಟ್ರಕ್ ಚಾಲಕ…

Read More

RCB ದಾಂಡಿಗರ ಆರ್ಭಟಕ್ಕೆ ಟಿ20 ಲೀಗ್​ನ ವಿಶ್ವ ದಾಖಲೆಯೇ ಉಡೀಸ್

IPL 2026: ಟಿ20 ಲೀಗ್​ ಕ್ರಿಕೆಟ್​ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದೆ. ಈ ವರ್ಲ್ಡ್​ ರೆಕಾರ್ಡ್ ನಿರ್ಮಿಸಿರುವುದು ಮತ್ಯಾರೂ ಅಲ್ಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (RCB). ಅದು ಕೂಡ ವಿಸ್ಫೋಟಕ ಬ್ಯಾಟಿಂಗ್​ನೊಂದಿಗೆ 200+ ರನ್​ಗಳನ್ನು ಚೇಸ್ ಮಾಡುವ ಮೂಲಕ ಎಂಬುದು ವಿಶೇಷ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2026ರ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸನ್​ರೈಸರ್ಸ್ ಹೈದರಾಬಾದ್ ತಂಡವು 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 201 ರನ್​ ಕಲೆಹಾಕಿತ್ತು….

Read More

ಧುರಂಧರ್ 2: ಪ್ರೊಪಗಾಂಡ ಸಿನಿಮಾಗಳ ವಿರುದ್ಧ ನಿರ್ದೇಶಕ ವೆಟ್ರಿಮಾರನ್ ಕಿಡಿ; ವಿಡಿಯೋ ವೈರಲ್

ಶ್ರೀಲಂಕಾ ನಾಗರಿಕ ಯುದ್ಧದ ಕಹಿ ಘಟನೆಗಳನ್ನಾಧರಿಸಿದ ‘ನೀಲಿರ’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಖ್ಯಾತ ತಮಿಳು ನಿರ್ದೇಶಕ ವೆಟ್ರಿಮಾರನ್ ಪಾಲ್ಗೊಂಡಿದ್ದರು. ಈ ವೇಳೆ ಅವರು ಸಿನಿಮಾರಂಗದಲ್ಲಿ ಹೆಚ್ಚುತ್ತಿರುವ ಪ್ರೊಪಗಾಂಡ (Propaganda) ಮತ್ತು ದ್ವೇಷ ಬಿತ್ತುವ ಚಿತ್ರಗಳ ಬಗ್ಗೆ ನೇರವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ವೆಟ್ರಿಮಾರನ್ (Vetrimaaran) ಅವರ ಈ ಮಾತುಗಳು ಈಗ ಇಂಟರ್ನೆಟ್‌ನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿವೆ. ಆದಿತ್ಯ ಧರ್ ಮತ್ತು ರಣವೀರ್ ಸಿಂಗ್ ಅವರ ‘ಧುರಂಧರ್ 2’ (Dhurandhar 2) ಚಿತ್ರವನ್ನೇ ಗುರಿಯಾಗಿಸಿಕೊಂಡು ಅವರು ಟೀಕಿಸಿದ್ದಾರೆ…

Read More

Daily Devotional: ಹಾಲಿಲ್ಲದೆ ಪೂಜೆ ಮಾಡಿದರೆ ಅದರಿಂದ ಫಲ ಸಿಗುತ್ತಾ?

ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಹಾಲಿಲ್ಲದೆ ಪೂಜೆ ಮಾಡಿದರೆ ಅದರಿಂದ ಫಲ ಸಿಗುತ್ತಾ ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಯಾವುದೇ ಪೂಜೆ, ಹವನ ಅಥವಾ ಅಭಿಷೇಕಗಳಲ್ಲಿ ಹಾಲು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಅನೇಕ ವಿಧದ ಅಭಿಷೇಕಗಳಲ್ಲಿ, ಪಂಚಾಮೃತ ಅಭಿಷೇಕದಲ್ಲಿಯೂ ಹಾಲಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲಾಗುತ್ತದೆ. ಶುದ್ಧವಾದ ಹಸುವಿನ ಹಾಲನ್ನು ಅಮೃತಕ್ಕೆ ಸಮಾನ ಎಂದು ಪರಿಗಣಿಸಲಾಗುತ್ತದೆ. ಈ ಹಾಲಿನಲ್ಲಿ ಭಗವಂತನ ಶಕ್ತಿಗಳನ್ನು ಆಕರ್ಷಿಸುವ ಅದಮ್ಯ ಶಕ್ತಿ ಅಡಗಿದೆ ಎಂದು ನಂಬಲಾಗಿದೆ. ಪ್ರತಿ ಪೂಜೆಯಲ್ಲಿಯೂ ಮನೆಯಲ್ಲಿ ಕನಿಷ್ಠ ಪಕ್ಷ…

Read More