All posts by nagaraj11081993

ಬೆಳಗಿನ ದಿನಚರಿಯಲ್ಲಿ ಮಾಡುವ ಈ ತಪ್ಪುಗಳು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬಿರಬಹುದು

ಬೆಳಗಿನ ದಿನಚರಿಯಲ್ಲಿ ಮಾಡುವ ಈ ತಪ್ಪುಗಳು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬಿರಬಹುದು

ದಿನವಿಡೀ ಉತ್ಸಾಹಭರಿತ ಮತ್ತು ಸಕಾರಾತ್ಮಕವಾಗಿರಲು ಬೆಳಗಿನ ದಿನಚರಿ (morning routine) ಉತ್ತಮವಾಗಿರಬೇಕು. ಹೌದು ದಿನದ ಆರಂಭ ಚೆನ್ನಾಗಿದ್ದರೆ ಆ ಸಂಪೂರ್ಣ ದಿನವೇ ಸಕಾರಾತ್ಮಕವಾಗಿರುತ್ತದೆ. ಅದಕ್ಕಾಗಿ ಹೆಚ್ಚಿನವರು ಬೆಳಗಿನ ದಿನಚರಿಯಲ್ಲಿ ಯೋಗ, ವ್ಯಾಯಾಮ ಮಾಡುತ್ತಾರೆ, ಆರೋಗ್ಯಕರ ಆಹಾರಗಳನ್ನು ಸೇವನೆ ಮಾಡುತ್ತಾರೆ. ಈ ಸಣ್ಣ ಅಭ್ಯಾಸಗಳು  ನಮ್ಮನ್ನು ಆರೋಗ್ಯವಾಗಿ ಮತ್ತು ಮಾನಸಿಕವಾಗಿ ಸಕಾರಾತ್ಮಕವಾಗಿ ಇರಿಸುತ್ತದೆ. ಅದೇ ರೀತಿ ಬೆಳಗ್ಗೆ ಎದ್ದ ತಕ್ಷಣ ಮಾಡುವಂತಹ ಒಂದಷ್ಟು ತಪ್ಪುಗಳು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಹಾಗಾದ್ರೆ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುವ ಆ ತಪ್ಪುಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಬೆಳಗ್ಗೆ ಎದ್ದ ತಕ್ಷಣ ಈ ತಪ್ಪುಗಳನ್ನು ಮಾಡದಿರಿ:

ದಿನವನ್ನು ಆತುರದಿಂದ ಪ್ರಾರಂಭಿಸುವುದು:  ಅನೇಕ ಜನರು ಬೆಳಿಗ್ಗೆ ಎದ್ದು, ತಮ್ಮ ಅಲಾರಾಂ ಅನ್ನು ಆಫ್ ಮಾಡಿ, ತಕ್ಷಣ ತಮ್ಮ ಫೋನ್ ನೋಡುವುದು ಅಥವಾ ಲ್ಯಾಪ್‌ಟಾಪ್‌ನಲ್ಲಿ ಕೆಲಸವನ್ನು ಮಾಡಲು  ಪ್ರಾರಂಭಿಸುತ್ತಾರೆ. ಇದು ಮೆದುಳನ್ನು ಹೈ ಅಲರ್ಟ್ ಮೋಡ್‌ಗೆ ತರುತ್ತದೆ. ಇದು ದೇಹದಲ್ಲಿ ಒತ್ತಡದ ಹಾರ್ಮೋನುಗಳನ್ನು ಹೆಚ್ಚಿಸಬಹುದು, ಇದು ಕಿರಿಕಿರಿ, ತಲೆನೋವು ಅಥವಾ ಮಾನಸಿಕ ಆಯಾಸಕ್ಕೆ ಕಾರಣವಾಗಬಹುದು.

ಬೆಳಗ್ಗೆ ಎದ್ದ ತಕ್ಷಣ ಮೊಬೈಲ್ ಫೋನ್ ನೋಡುವುದು: ಇತ್ತೀಚಿನ ದಿನಗಳಲ್ಲಿ ಎದ್ದ ತಕ್ಷಣ ಫೋನ್ ನೋಡುವ ತಪ್ಪುಗಳನ್ನು ಎಲ್ಲರೂ ಮಾಡುತ್ತಾರೆ. ಇದು ಮೆದುಳಿನ ಮೇಲೆ ಅನಗತ್ಯ ಒತ್ತಡವನ್ನುಂಟು ಮಾಡುತ್ತದೆ. ಫೋನ್ ಪರದೆಗಳಿಂದ ಹೊರಸೂಸುವ ನೀಲಿ ಬೆಳಕು ಕಣ್ಣುಗಳಿಗೆ ಹಾನಿ ಮಾಡುತ್ತದೆ ಮತ್ತು ಇದು ಬೆಳಗಿನ ತಾಜಾ ಮನಸ್ಥಿತಿಯನ್ನು  ಕಸಿದುಕೊಳ್ಳುತ್ತದೆ.

ಖಾಲಿ ಹೊಟ್ಟೆಯಲ್ಲಿ ಚಹಾ ಅಥವಾ ಕಾಫಿ ಕುಡಿಯುವುದು: ಅನೇಕ ಜನರು ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಚಹಾ ಅಥವಾ ಕಾಫಿ ಕುಡಿಯುತ್ತಾರೆ.  ಇದು ಆಮ್ಲೀಯತೆ ಮತ್ತು ಗ್ಯಾಸ್‌ ಸಮಸ್ಯೆ ಕಾಣಿಸಿಕೊಳ್ಳಲು ಕಾರಣವಾಗಬಹುದು. ಖಾಲಿ ಹೊಟ್ಟೆಯಲ್ಲಿ ಕೆಫೀನ್  ಸೇವನೆ ಮಾಡುವುದರಿಂದ ಇದು ದೇಹದ ಜೀರ್ಣಾಂಗ ವ್ಯವಸ್ಥೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ.

ದೀರ್ಘಕಾಲದವರೆಗೆ ಹಾಸಿಗೆಯಲ್ಲಿ ಮಲಗುವುದು: ಬೆಳಗ್ಗೆ ಎಚ್ಚರವಾದ ನಂತರ ದೀರ್ಘಕಾಲದವರೆಗೆ ಹಾಸಿಗೆಯಲ್ಲಿ ಮಲಗುವುದರಿಂದ ಸೋಮಾರಿತನ ಮತ್ತು ಆಲಸ್ಯ ಹೆಚ್ಚಾಗುತ್ತದೆ. ಇದು ದೇಹದ ಚಟುವಟಿಕೆಯನ್ನು ನಿಧಾನಗೊಳಿಸುತ್ತದೆ ಮತ್ತು ದಿನವಿಡೀ ನಿಮಗೆ ದಣಿವುಂಟು ಮಾಡುತ್ತದೆ. ನೀವು ಎದ್ದ ತಕ್ಷಣ ಸ್ವಲ್ಪ ಸ್ಟ್ರೆಚಿಂಗ್ ಅಥವಾ ವ್ಯಾಯಾಮ ಮಾಡುವುದು ಉತ್ತಮ.

ತಕ್ಷಣವೇ ಭಾರೀ ವ್ಯಾಯಾಮ ಮಾಡುವುದು: ಬೆಳಗ್ಗೆ ಎದ್ದ ತಕ್ಷಣವೇ ಭಾರೀ ವ್ಯಾಯಾಮವನ್ನು ಮಾಡಬೇಡಿ. ಭಾರೀ ವ್ಯಾಯಾಮ ಮಾಡುವುದರಿಂದ ದೇಹದ ಮೇಲೆ ಹಠಾತ್ ಒತ್ತಡ ಉಂಟಾಗುತ್ತದೆ. ಇದು ಸ್ನಾಯುಗಳು ಮತ್ತು ಹೃದಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ ಬೆಳಿಗ್ಗೆ ವಾಕಿಂಗ್‌ ಅಥವಾ ಸ್ಟ್ರೆಚಿಂಗ್ ನಂತಹ ಲಘು ವ್ಯಾಯಾಮವನ್ನು ಮಾಡುವುದು ಉತ್ತಮ.

ಇದನ್ನೂ ಓದಿ: ಬೇಸಿಗೆಯಲ್ಲಿ ದೇಹದ ನೀರಿನಾಂಶ ಕಾಪಾಡಿಕೊಳ್ಳಲು ಹಣ್ಣುಗಳನ್ನು ಪ್ರತಿನಿತ್ಯ ಸೇವನೆ ಮಾಡಿ

ಬಾಯಿ ತೊಳೆಯದೆ ತಿನ್ನುವ ಅಭ್ಯಾಸ: ಬೆಳಿಗ್ಗೆ ಎದ್ದಾಗ ಬಾಯಿಯಲ್ಲಿ ಬ್ಯಾಕ್ಟೀರಿಯಾಗಳು ಸಂಗ್ರಹವಾಗಿರುತ್ತವೆ. ಆದ್ದರಿಂದ ಬ್ರಷ್‌ ಮಾಡದೆ ಏನಾದ್ರೂ ಸೇವನೆ ಮಾಡಿದರೆ ಈ ಬ್ಯಾಕ್ಟೀರಿಯಾಗಳು ಹೊಟ್ಟೆಗೆ ಪ್ರವೇಶಿಸಿ ಅವು  ಜೀರ್ಣಾಂಗ ವ್ಯವಸ್ಥೆಗೆ ಹಾನಿ ಮಾಡುತ್ತವೆ. ಆದ್ದರಿಂದ, ಬೆಳಿಗ್ಗೆ ಮೊದಲು ನಿಮ್ಮ ಬಾಯಿಯನ್ನು ಸ್ವಚ್ಛಗೊಳಿಸುವುದು ಮುಖ್ಯ.

ಬೆಳಗಿನ ದಿನಚರಿ ಹೇಗಿರಬೇಕು?

ನಿಧಾನವಾಗಿ ಎದ್ದೇಳಿ ಮತ್ತು ಕೆಲವು ನಿಮಿಷಗಳ ಕಾಲ ಶಾಂತವಾಗಿ ಕುಳಿತುಕೊಳ್ಳಿ, ಧ್ಯಾನ ಮಾಡಿ.  ಮೊದಲು ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯಿರಿ, ಸ್ವಲ್ಪ ಸೂರ್ಯನ ಬೆಳಕನ್ನು ಪಡೆಯಿರಿ, ಸ್ಟ್ರೆಚಿಂಗ್‌ ಮಾಡಿ ನಂತರ ವ್ಯಾಯಾಮ ಮಾಡಿ. ಅಲ್ಲದೆ, ಎದ್ದ ತಕ್ಷಣ ನಿಮ್ಮ ಫೋನ್ ಬಳಸುವುದನ್ನು ತಪ್ಪಿಸಿ ಮತ್ತು ನಿಮ್ಮ ದಿನವನ್ನು ಸರಳ ಮತ್ತು ಶಾಂತ ಕೆಲಸಗಳೊಂದಿಗೆ ಪ್ರಾರಂಭಿಸಿ. ಇದು ನಿಮ್ಮ ಮನಸ್ಥಿತಿ, ಆರೋಗ್ಯ ಎರಡನ್ನೂ ಸುಧಾರಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸುಟ್ಟ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ: ಎದುರು ಮನೆಯವರಿಂದಲೇ ನಡೀತಾ ಭೀಕರ ಕೊಲೆ?

ಗದಗ, ಮಾರ್ಚ್​​ 29: ಸುಟ್ಟ ಸ್ಥಿತಿಯಲ್ಲಿ ಯುವಕನೊರ್ವನ ಶವ ಗದಗ ತಾಲೂಕಿನ ಹುಯಿಲಗೋಳ ಗ್ರಾಮದಲ್ಲಿ ಪತ್ತೆಯಾಗಿದೆ. ಮೃತ ಯುವಕನನ್ನು ಚಂದ್ರು ಕುರಿ (27) ಎಂದು ಗುರುತಿಸಲಾಗಿದ್ದು, ಮಂಗಳವಾರ ರಾತ್ರಿ ಮನೆಯಿಂದ ಹೊರ ಹೋದ ಚಂದ್ರು ಮೃತದೇಹ ಸೇತುವೆಯೊಂದರ ಕೆಳಭಾಗ ಕಂಡುಬಂದಿದೆ. ಕೊಲೆ ಅನುಮಾನ ವ್ಯಕ್ತವಾಗಿದ್ದು, ಮಗನನ್ನು ಸಾಯಿಸಿ ಬಳಿಕ ದೇಹವನ್ನು ಸುಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮನೆಯ ಹೆಣ್ಣು ಮಕ್ಕಳನ್ನು ನೋಡ್ತಾನೆ ಎಂದು ಆರೋಪಿಸಿ ಎದುರಿನ ಮನೆ ಕುಟುಂಬಸ್ಥರು ಹಲವು ಬಾರಿ ಜಗಳ ತೆಗೆದಿದ್ದರು. ಮೈ ಮೇಲೆ ಬೈಕ್​​ ಹತ್ತಿಸಲೂ ಬಂದಿದ್ದರು. ಹೀಗಾಗಿ ಅವರೇ ಕೃತ್ಯ ಎಸಗಿರಬಹುದೆಂದು ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿದ್ದಾರೆ.

ತಂದೆಯ ಪ್ರತಿಜ್ಞೆ

ಇನ್ನು ಮಗ ಚಂದ್ರುವಿನ ಅನುಮಾನಾಸ್ಪದ ಸಾವಿನ ಬೆನ್ನಲ್ಲೇ ತಂದೆ ಬಸವರಾಜ್​​ ಪ್ರತಿಜ್ಞೆಯೊಂದನ್ನು ಮಾಡಿದ್ದಾರೆ. ಟಿವಿ9 ಜೊತೆ ಮಾತನಾಡಿರುವ ಅವರು, ತನಗೆ ಮೂರು ಎಕರೆ ಹೊಲ ಇದೆ. ಅದನ್ನು ಕಳೆದುಕೊಂಡರೂ ಚಿಂತೆ ಇಲ್ಲ. ಸಾಲ ಮಾಡಿಯಾದರೂ ಹಣ ತರ್ತೀನಿ. ಆದರೆ ಮಗನನ್ನು ಕೊಂದ ಆರೋಪಿಗಳನ್ನು ಮಾತ್ರ ಯಾವುದೇ ಕಾರಣಕ್ಕೂ ಸುಮ್ಮೆನ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಚಂದ್ರು ಬಹಳ ಒಳ್ಳೆಯ ಹುಡುಗ, ಯಾರ ಜೊತೆ ತಂಟೆ-ತಕರಾರು ಮಾಡಿದವನಲ್ಲ. ತಾನಾಯ್ತು, ತನ್ನ ಕೆಲಸವಾಯ್ತು ಎಂಬಂತಿದ್ದ. ನಿತ್ಯ ಕೆಲಸಕ್ಕೆ ಹೋಗುವಾಗ 100 ರೂಪಾಯಿ ನನ್ನ ಕೇಳಿ ಪಡೆಯುತ್ತಿದ್ದ ಎಂದು ಭಾವುಕರಾಗಿದ್ದಾರೆ.

ಇದನ್ನೂ ಓದಿ: ಸಾಲಗಾರರ ಕಾಟಕ್ಕೆ ಒಂದೇ ಕುಟುಂಬದ ಇಬ್ಬರು ಬಲಿ; ಮತ್ತೆರಡು ಮಂದಿ ಸ್ಥಿತಿ ಗಂಭೀರ

ಹಿರಿಯ ಪುತ್ರನಾಗಿದ್ದ ಚಂದ್ರು ಸೇರಿ ಎರಡನೇ ಮಗ ಸುರೇಶ್​​ ಮದುವೆಗೆ ತಂದೆ ಬಸವರಾಜ್​​ ತಯಾರಿ ನಡೆಸಿದ್ದರು. ಬೀರಲಿಂಗೇಶ್ವರ ಜಾತ್ರೆಯ ಬಳಿಕ ಹುಡುಗಿ ನೋಡಬೇಕೆಂದು ನಿರ್ಧರಿಸಿದ್ದರು. ಆದರೆ ಅಷ್ಟರೊಳಗಾಗಲೇ ಮಗನ ಪ್ರಾಣಪಕ್ಷಿ ಹಾರಿಹೋಗಿದೆ. ಮಗನ ಮದುವೆ ಕಣ್ತುಂಬಿಕೊಳ್ಳಬೇಕೆಂದಿದ್ದ ಪೋಷಕರು, ಕರುಳ ಕುಡಿಯ ಅಂತ್ಯ ಸಂಸ್ಕಾರವನ್ನು ತಾವೇ ಮುಂದೆ ನಿಂತು ನೆರವೇರಿಸಬೇಕಾದ ಸ್ಥಿತಿ ಬಂದಿದೆ. ಹೀಗಾಗಿ ಮಗನ ಸಾವಿಗೆ ಸೇಡು ತೀರಿಸಿಕೊಳ್ಳೋದಾಗಿ ಬಸವರಾಜ್​​ ಅವರು ಹೇಳಿದ್ದಾರೆ. ಅಷ್ಟಕ್ಕೂ ಚಂದ್ರುಗೆ ಆಗಿದ್ದೇನು? ಕುಟುಂಬಸ್ಥರು ಹೇಳುವಂತೆ ಇದು ನಿಜಕ್ಕೂ ಕೊಲೆಯಾ? ಅಥವಾ ಘಟನೆ ಹಿಂದೆ ಬೇರೆ ಏನಾದರೂ ಕಾರಣಗಳಿವೆಯಾ? ಎಂಬುದು ಪೊಲೀಸರ ತನಿಖೆ ಬಳಿಕವಷ್ಟೇ ಬಯಲಾಗಬೇಕಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಫಿಲ್ ಸಾಲ್ಟ್ ‘ಕ್ಯಾಚ್’ ಬಗ್ಗೆ ಸುನಿಲ್ ಗವಾಸ್ಕರ್ ಅಪಸ್ವರ

ಇಂಡಿಯನ್ ಪ್ರೀಮಿಯರ್ ಲೀಗ್​ನ ಉದ್ಘಾಟನಾ ಪಂದ್ಯದಲ್ಲಿ ಫಿಲ್ ಸಾಲ್ಟ್ ಹಿಡಿದ ಕ್ಯಾಚ್ ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಆಟಗಾರ ಸಾಲ್ಟ್ ಬೌಂಡರಿ ಲೈನ್​ನಲ್ಲಿ ಅತ್ಯುತ್ತಮ ಕ್ಯಾಚ್ ಹಿಡಿದಿದ್ದರು. ಈ ಕ್ಯಾಚ್ ತೀರ್ಪಿನ ಬಗ್ಗೆ ಟೀಮ್ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಅಸಮಾಧಾನ ಹೊರಹಾಕಿದ್ದಾರೆ.

ಈ ಪಂದ್ಯದಲ್ಲಿ ಎಸ್‌ಆರ್‌ಎಚ್ ತಂಡದ ಬ್ಯಾಟರ್ ಹೆನ್ರಿಕ್ ಕ್ಲಾಸೆನ್ ನೀಡಿದ ಕ್ಯಾಚ್ ಅನ್ನು ಬೌಂಡರಿ ಲೈನ್ ಬಳಿ ಫಿಲ್ ಸಾಲ್ಟ್ ಹಿಡಿದರು. ಈ ಸಮಯದಲ್ಲಿ ಸಾಲ್ಟ್ ಅವರ ಕಾಲು ಅಥವಾ ದೇಹ ಬೌಂಡರಿ ಹಗ್ಗಕ್ಕೆ ತಗುಲಿದೆಯೇ ಎಂಬ ಗೊಂದಲ ಸೃಷ್ಟಿಯಾಯಿತು. ಇದನ್ನು ಪರಿಶೀಲಿಸಿದ ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು.

ಇತ್ತ ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡುತ್ತಿದ್ದಂತೆ ಕಾಮೆಂಟರಿ ಮಾಡುತ್ತಿದ್ದ ಸುನಿಲ್ ಗವಾಸ್ಕರ್ ಅವರು ಅಸಮಾಧಾನ ಹೊರಹಾಕಿದ್ದರು.  ಏಕೆಂದರೆ ಕ್ಯಾಚ್ ಹಿಡಿಯುವ ಭರದಲ್ಲಿ ಫಿಲ್ ಸಾಲ್ಟ್ ಅವರ ದೇಹ ಬೌಂಡರಿ ಹಗ್ಗಕ್ಕೆ ತಗುಲಿದಂತೆ ಕಾಣುತ್ತಿದೆ ಮತ್ತು ಹಗ್ಗ ಸ್ವಲ್ಪ ಸರಿದಿದೆ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದರು.

ರೀಪ್ಲೇಗಳನ್ನು ನೋಡುವಾಗ ಕೆಲವು ಕೋನಗಳಿಂದ ಇದು ಔಟ್ ಎಂದು ಕಂಡರೂ, ಇನ್ನು ಕೆಲವು ಕಡೆಯಿಂದ ಹಗ್ಗ ಸರಿದಿರುವುದು ಸ್ಪಷ್ಟವಾಗಿತ್ತು. ಗವಾಸ್ಕರ್ ಅವರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾ, “ಇದು ಕ್ಲೀನ್ ಕ್ಯಾಚ್ ಹೌದೇ ಎಂಬ ಬಗ್ಗೆ ಅನುಮಾನವಿದೆ” ಎಂದರು.

ಅಲ್ಲದೆ, ಮೂರನೇ ಅಂಪೈರ್ ಕ್ಲಾಸೆನ್ ಅವರ ಕ್ಯಾಚನ್ನು ವಿವಿಧ ಕೋನಗಳಿಂದ ಪರಿಶೀಲಿಸಲು ಹೆಚ್ಚಿನ ಸಮಯವನ್ನು ವಿನಿಯೋಗಿಸಬೇಕಿತ್ತು. ಫಿಲ್ ಸಾಲ್ಟ್ ಅವರು ಬೌಂಡರಿಯನ್ನು ಸ್ಪರ್ಶಿಸಿರುವಂತೆ ಕಂಡುಬರುತ್ತಿತ್ತು. ಇಂತಹ ಸಂದೇಹಾಸ್ಪದ ಸಂದರ್ಭಗಳಲ್ಲಿ, ಇದರ ಲಾಭವು ಬ್ಯಾಟರ್‌ಗೆ ಸಿಗಬೇಕಿತ್ತು. ಆದರೆ ಮೂರನೇ ಅಂಪೈರ್ ಸರಿಯಾಗಿ ಪರಿಶೀಲಿಸದೇ ಬೇಗನೆ ಔಟ್ ನೀಡಿರುವುದು ತಪ್ಪು ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಇತ್ತ ಮೂರನೇ ಅಂಪೈರ್ ರೋಹನ್ ಪಂಡಿತ್ ಅವರು ಲಭ್ಯವಿರುವ ದೃಶ್ಯಗಳನ್ನು ಪರಿಶೀಲಿಸಿ ಅದು ‘ಔಟ್’ ಎಂದು ತೀರ್ಪು ನೀಡುತ್ತಿದ್ದಂತೆ ಹೆನ್ರಿಕ್ ಕ್ಲಾಸೆನ್ ಮೈದಾನದಲ್ಲೇ ಕೋಪಗೊಂಡು ಅಸಮಾಧಾನ ಹೊರಹಾಕಿದ್ದರು. ಇದೀಗ ಈ ಕ್ಯಾಚ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗಳು ಮುಂದುವರೆದಿದೆ.

ಇನ್ನು ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸನ್​ರೈಸರ್ಸ್ ಹೈದರಾಬಾದ್ ತಂಡವು ಇಶಾನ್ ಕಿಶನ್ (8) ಅವರ ಅರ್ಧಶತಕದ ನೆರವಿನೊಂದಿಗೆ  20 ಓವರ್​ಗಳಲ್ಲಿ 201 ರನ್ ಕಲೆಹಾಕಿತು. ಈ ಕಠಿಣ ಗುರಿಯನ್ನು ಆರ್​ಸಿಬಿ ತಂಡ ಕೇವಲ 15.4 ಓವರ್​ಗಳಲ್ಲಿ ಚೇಸ್ ಮಾಡಿ 6 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದೆ.

 

Source link

ಹಾರ್ಮುಜ್ ಜಲಸಂಧಿ, ಖಾರ್ಗ್​ ದ್ವೀಪದ ಮೇಲೆ ದಾಳಿ ಮಾಡುತ್ತಾ ಅಮೆರಿಕ, 3,500 ಸೈನಿಕರನ್ನು ನಿಯೋಜಿಸಿರುವುದೇಕೆ?

ವಾಷಿಂಗ್ಟನ್, ಮಾರ್ಚ್​ 29: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚು ಅಪಾಯಕಾರಿಯಾಗುತ್ತಿದೆ. ಇರಾನ್(Iran), ಇಸ್ರೇಲ್ ಮತ್ತು ಗಲ್ಫ್ ದೇಶಗಳಲ್ಲಿನ ಅಮೆರಿಕದ ಮಿಲಿಟರಿ ನೆಲೆಗಳ ವಿರುದ್ಧ ಬಲವಾದ ಪ್ರತಿದಾಳಿ ನಡೆಸುತ್ತಿದೆ. ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಘರ್ಜನೆಯ ನಡುವೆ, ಈ ಸಂಘರ್ಷವು ಈಗ 30 ನೇ ದಿನಕ್ಕೆ ಪ್ರವೇಶಿಸಿದೆ ಮತ್ತು ಪ್ರದೇಶದಾದ್ಯಂತ ಉದ್ವಿಗ್ನತೆ ಹೆಚ್ಚಾಗಿದೆ.

ಈ ಉಲ್ಬಣಗೊಳ್ಳುತ್ತಿರುವ ಪರಿಸ್ಥಿತಿಯ ನಡುವೆ, ಅಮೆರಿಕ ಈಗ ತನ್ನ ಮಿಲಿಟರಿ ಕಾರ್ಯತಂತ್ರವನ್ನು ಹೆಚ್ಚು ಆಕ್ರಮಣಕಾರಿಯನ್ನಾಗಿ ಮಾಡಿದೆ. ಇದರ ಭಾಗವಾಗಿ, ಅಮೆರಿಕ ತನ್ನ ಬೃಹತ್ ಯುದ್ಧನೌಕೆ ಯುಎಸ್ಎಸ್ ಟ್ರಿಪೋಲಿಯನ್ನು ನಿಯೋಜಿಸಿದೆ, ಇದು ಸುಮಾರು 3,500 ನೌಕಾಪಡೆಗಳೊಂದಿಗೆ ಯುಎಸ್ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಪ್ರದೇಶಕ್ಕೆ ಆಗಮಿಸಿದೆ.

ಆಧುನಿಕ ಶಸ್ತ್ರಾಸ್ತ್ರಗಳು ಮತ್ತು ಯುದ್ಧ ವಿಮಾನಗಳನ್ನು ಹೊಂದಿರುವ ಈ ಹಡಗು ಅಮೆರಿಕದ ಯುದ್ಧ ಸಾಮರ್ಥ್ಯಗಳನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಈ ಹಡಗು ಹೆಲಿಕಾಪ್ಟರ್‌ಗಳು, ಎಂವಿ -22 ಆಸ್ಪ್ರೇ ವಿಮಾನ ಮತ್ತು ಎಫ್ -35 ಬಿ ಜಂಟಿ ಸ್ಟ್ರೈಕ್ ಫೈಟರ್ ಜೆಟ್‌ಗಳನ್ನು ಸಾಗಿಸಬಲ್ಲದು.

ಇರಾನ್ ಹಾರ್ಮುಜ್ ಜಲಸಂಧಿಯನ್ನು ಅಮೆರಿಕ, ಇಸ್ರೇಲ್​ಗೆ ಮುಚ್ಚಿದ್ದು, ಭಾರತ ಸೇರಿ ಐದು ದೇಶಗಳಿಗೆ ಮಾತ್ರ ತೈಲ ಹಡಗುಗಳನ್ನು ಕೊಂಡೊಯ್ಯಲು ಅವಕಾಶ ಮಾಡಿಕೊಟ್ಟಿರುವುದು ದ್ವೇಷವನ್ನು ಮತ್ತಷ್ಟು ಹೆಚ್ಚಿಸಿದೆ.

ಮತ್ತಷ್ಟು ಓದಿ: ಅಮೆರಿಕದ ಎಫ್-18 ಯುದ್ಧವಿಮಾನವನ್ನು ಹೊಡೆದುರುಳಿಸಿದ ವಿಡಿಯೋ ಬಿಡುಗಡೆ ಮಾಡಿದ ಇರಾನ್

ಅಮೆರಿಕ ಈ ಪ್ರದೇಶಕ್ಕೆ 3,500 ಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಿದೆ ಮತ್ತು ಪರಿಸ್ಥಿತಿ ಹದಗೆಡುತ್ತಲೇ ಇದೆ. ಸುಮಾರು 2,500 ನೌಕಾಪಡೆಗಳನ್ನು ಹೊತ್ತ ಆಧುನಿಕ ಯುದ್ಧನೌಕೆ ಯುಎಸ್ಎಸ್ ಟ್ರಿಪೋಲಿ ಮಧ್ಯಪ್ರಾಚ್ಯಕ್ಕೆ ಆಗಮಿಸಿದೆ. ಇದೀಗ ಹಾರ್ಮುಜ್ ಜಲಸಂಧಿ, ಖಾರ್ಗ್​ ದ್ವೀಪದ ಮೇಲೆ ಅಮೆರಿಕ ದಾಳಿ ಮಾಡುವ ಭೀತಿ ಎದುರಾಗಿದೆ.

ಯುಎಸ್ ಸೆಂಟ್ರಲ್ ಕಮಾಂಡ್ ಪ್ರಕಾರ, ಫೆಬ್ರವರಿ 28 ರಂದು ಪ್ರಾರಂಭವಾದ ಆಪರೇಷನ್ ಎಪಿಕ್ ಫ್ಯೂರಿ ಈಗಾಗಲೇ 11,000 ಕ್ಕೂ ಹೆಚ್ಚು ಗುರಿಗಳನ್ನು ಹೊಡೆದುರುಳಿಸಿದೆ.ಹೋರಾಟವು ದೊಡ್ಡ ಪ್ರಮಾಣದಲ್ಲಿ ಉಲ್ಬಣಗೊಳ್ಳುತ್ತಿದೆ ಎಂದು ಸ್ಪಷ್ಟವಾಗಿ ಸೂಚಿಸುತ್ತದೆ.

ಫೆಬ್ರವರಿ 28 ರಿಂದ ಯುಎಸ್ ಪಡೆಗಳು ಇರಾನಿನ ಮಿಲಿಟರಿ ನೆಲೆಗಳ ಮೇಲೆ ದಾಳಿ ಮಾಡಿವೆ. 11,000 ಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು ಹಾರಿಸಲಾಯಿತು ಮತ್ತು 150 ಕ್ಕೂ ಹೆಚ್ಚು ಇರಾನಿನ ಹಡಗುಗಳು ಹಾನಿಗೊಳಗಾದವು. ಅಮೆರಿಕವು ಇರಾನ್‌ನ ಕ್ರಾಂತಿಕಾರಿ ಗಾರ್ಡ್ ಕಾರ್ಪ್ಸ್, ಕ್ಷಿಪಣಿ ತಾಣಗಳು, ನೌಕಾ ಹಡಗುಗಳು ಮತ್ತು ಶಸ್ತ್ರಾಸ್ತ್ರ ಉತ್ಪಾದನಾ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡಿತು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ತಪ್ಪೊಪ್ಪಿಕೊಂಡ ಪ್ರಮುಖ ಆರೋಪಿ ಶಾರೀಕ್!

ಬೆಂಗಳೂರು, ಮಾರ್ಚ್​ 29: ನಾಲ್ಕು ವರ್ಷಗಳ ಹಿಂದೆ ಮಂಗಳೂರಿನಲ್ಲಿ ನಡೆದಿದ್ದ ಕುಕ್ಕರ್ ಬಾಂಬ್ ಸ್ಫೋಟ (Cooker Bomb Blast) ಪ್ರಕರಣದಲ್ಲಿ ಪ್ರಮುಖ ಬೆಳವಣಿಗೆ ಕಂಡುಬಂದಿದೆ. ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಮೊಹಮ್ಮದ್ ಶಾರೀಕ್ ತಪ್ಪೊಪ್ಪಿಕೊಂಡಿದ್ದು, ಆತನ ಅರ್ಜಿಯನ್ನು ಎನ್‌ಐಎ ವಿಶೇಷ ನ್ಯಾಯಾಲಯವು ಅಂಗೀಕರಿಸಿದೆ.

ಶಾರೀಕ್ ಅರ್ಜಿ ಅಂಗೀಕಾರ

ಶಿವಮೊಗ್ಗ ಮೂಲದ 27 ವರ್ಷದ ಶಾರೀಕ್, 2022ರ ನವೆಂಬರ್ 19ರಂದು ಆಟೋರಿಕ್ಷಾದಲ್ಲಿ ಸಾಗಿಸುತ್ತಿದ್ದ ಪ್ರೆಶರ್ ಕುಕ್ಕರ್ ಬಾಂಬ್ ಅವನ ಮಡಿಲಲ್ಲೇ ಸ್ಫೋಟಗೊಂಡ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ. ಟೈಮರ್ ದೋಷದಿಂದ ಸಂಭವಿಸಿದ್ದ ಸ್ಫೋಟದಲ್ಲಿ ಆಟೋ ಚಾಲಕನೂ ಗಂಭೀರವಾಗಿ ಗಾಯಗೊಂಡಿದ್ದ. ನಂತರ ಶಂಕಿತ ಉಗ್ರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ಬಳಿಕ ಎನ್‌ಐಎ (National Investigation Agency) ಅಧಿಕಾರಿಗಳು ಅವನನ್ನು ಬಂಧಿಸಿದ್ದರು.

2024ರ ಏಪ್ರಿಲ್ 20ರಂದು ಪ್ರಕರಣಕ್ಕೆ ಸಂಬಂಧಿಸಿದ ಆರೋಪಗಳ ಕುರಿತು ನ್ಯಾಯಾಲಯ ಪ್ರಶ್ನಿಸಿದಾಗ ಶಾರೀಕ್ ತಾನು ನಿರಪರಾಧಿ ಎಂದು ಹೇಳಿದ್ದ. ಆದರೆ 2025ರ ಡಿಸೆಂಬರ್‌ನಲ್ಲಿ ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 229 ಅಡಿಯಲ್ಲಿ ತಪ್ಪೊಪ್ಪಿಗೆ ಅರ್ಜಿ ಸಲ್ಲಿಸಿ ತನ್ನ ನಿಲುವು ಬದಲಿಸಿದ್ದ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಕಳೆದ ಮಾರ್ಚ್ 26ರಂದು ನ್ಯಾಯಾಲಯ ಈ ಅರ್ಜಿಯನ್ನು ಅಂಗೀಕರಿಸಿದೆ.

ಅರ್ಜಿಯಲ್ಲೇನಿದೆ?

ತನ್ನ ಅರ್ಜಿಯಲ್ಲಿ ಶಾರೀಕ್, ಕುಕ್ಕರ್‌ನಲ್ಲಿ ಐಇಡಿ ಇಟ್ಟು ಸ್ಫೋಟ ಮಾಡಿದ್ದೇನೆ. ನನಗೆ ಪಶ್ಚಾತ್ತಾಪವಾಗಿದೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ ಎಂದು ಹೇಳಿದ್ದಾನೆ. ಮೂರು ತಿಂಗಳ ವಿಚಾರಣೆ ಬಳಿಕ ನ್ಯಾಯಾಲಯವು ಈ ಅರ್ಜಿಯನ್ನು ಮಾನ್ಯಗೊಳಿಸಿದೆ.

ಇದನ್ನೂ ಓದಿ ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್​​ಗೂ, ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟಕ್ಕೂ ಸಾಮ್ಯತೆ ಇಲ್ಲ: ಸಿದ್ದರಾಮಯ್ಯ

ಎನ್​ಐಎ ತನಿಖೆಯಲ್ಲಿ ಬಯಲಾಗಿದ್ದೇನು?

ಎನ್‌ಐಎ ತನಿಖೆಯ ಪ್ರಕಾರ, ಶಾರೀಕ್ ಐಸಿಸ್ ಪ್ರೇರಿತ ಶಿವಮೊಗ್ಗ ಮಾಡ್ಯೂಲ್‌ನ ಸದಸ್ಯನಾಗಿದ್ದು, 2020ರಿಂದ ಹಲವು ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ. 2022ರ ಸೆಪ್ಟೆಂಬರ್‌ನಲ್ಲಿ ಶಿವಮೊಗ್ಗದಲ್ಲಿ ನಡೆದ ಐಇಡಿ ಪರೀಕ್ಷಾ ಪ್ರಕರಣದಲ್ಲೂ ಅವನ ಕೈವಾಡವಿದೆ. ಅದಕ್ಕೂ ಮೊದಲು 2020ರಲ್ಲಿ ಮಂಗಳೂರಿನಲ್ಲಿ ರಾಷ್ಟ್ರ ವಿರೋಧಿ ಗೋಡೆ ಬರಹ ಪ್ರಕರಣದಲ್ಲೂ ಬಂಧನಕ್ಕೊಳಗಾಗಿದ್ದನು.

ಇದೇ ರೀತಿ 2024ರ ಮಾರ್ಚ್ 1ರಂದು ನಡೆದ ಬೆಂಗಳೂರಿನ ರಾಮೇಶ್ವರಂ ಕಫೆ ಬಾಂಬ್ ಸ್ಫೋಟ ಪ್ರಕರಣದಲ್ಲೂ ಈತ ಕೈಜೋಡಿಸಿರಬಹುದೆಂಬ ಶಂಕೆಯಿದೆ. ಸಧ್ಯಕ್ಕೆ ಈತ ಕುಕ್ಕರ್ ಸ್ಫೋಟದ ಪ್ರಕರಣದಲ್ಲಿ ಮಾತ್ರ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Ishan Kishan: ಆ ಒಂದು ವಿಕೆಟ್ ಸಿಕ್ಕಿದಿದ್ರೆ ಏನಾದ್ರು ಮಾಡಬಹುದಿತ್ತು..!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ಗೆ ಚಾಲನೆ ದೊರೆತಿದೆ. ಮೊದಲ ಪಂದ್ಯದಲ್ಲಿ ಬಲಿಷ್ಠ ಸನ್​ರೈಸರ್ಸ್ ಹೈದರಾಬಾದ್ ತಂಡಕ್ಕೆ ಸೋಲುಣಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಶುಭಾರಂಭ ಮಾಡಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಸನ್​ರೈಸರ್ಸ್ ಹೈದರಾಬಾದ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಇದಾಗ್ಯೂ ಎಸ್​ಆರ್​ಹೆಚ್ ಪಡೆ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 201 ರನ್​ ಕಲೆಹಾಕುವಲ್ಲಿ ಯಶಸ್ವಿಯಾಗಿದ್ದರು. ಆದರೆ ಈ ಗುರಿಯನ್ನು ಆರ್​ಸಿಬಿ ತಂಡ ಕೇವಲ 15.4 ಓವರ್​ಗಳಲ್ಲಿ ಚೇಸ್ ಮಾಡಿದೆ. ಈ ಮೂಲಕ ಸನ್​ರೈಸರ್ಸ್ ಹೈದರಾಬಾದ್ ತಂಡವು ಮೊದಲ ಪಂದ್ಯದಲ್ಲೇ ಹೀನಾಯವಾಗಿ ಸೋಲೊಪ್ಪಿಕೊಂಡಿದೆ.

ಈ ಸೋಲಿನ ಬಳಿಕ ಮಾತನಾಡಿದ ಸನ್​ರೈಸರ್ಸ್ ಹೈದರಾಬಾದ್ ತಂಡದ ಹಂಗಾಮಿ ನಾಯಕ ಇಶಾನ್ ಕಿಶನ್, ನಾವು ಆರಂಭಿಕ ವಿಕೆಟ್​ಗಳನ್ನು ಬೇಗನೆ ಕಳೆದುಕೊಂಡಿದ್ದು ಪರಿಣಾಮ ಬೀರಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮೊದಲ 3-4 ಓವರ್‌ಗಳವರೆಗೆ ಆರ್​ಸಿಬಿ ಬೌಲರ್​ಗಳು ಅತ್ಯುತ್ತಮ ದಾಳಿ ಸಂಘಟಿಸಿದ್ದರು.

ಈ ದಾಳಿ ನಡುವೆ ನಾವು ಆರಂಭಿಕ ವಿಕೆಟ್​ಗಳನ್ನು ಕಳೆದುಕೊಂಡಿದ್ದು ದುಬಾರಿಯಾಯಿತು. ಮುಂದಿನ ಬಾರಿ ನಾವು ಈ ತಪ್ಪನ್ನು ಸರಿಪಡಿಸಿಕೊಳ್ಳಬೇಕಿದೆ. ನಾವು ಆರಂಭದಲ್ಲಿ ಎಚ್ಚರದಿಂದ ಆಡಿದ್ದರೆ ಉತ್ತಮ ಮೊತ್ತ ಪೇರಿಸಬಹುದಿತ್ತು. ಏಕೆಂದರೆ, ಎರಡನೇ ಇನ್ನಿಂಗ್ಸ್‌ ನೋಡಿದರೆ, ಬ್ಯಾಟಿಂಗ್ ಮಾಡುವುದು ತುಂಬಾ ಸುಲಭ ಮತ್ತು ಚೆಂಡು ಬ್ಯಾಟ್​ಗೆ ಚೆನ್ನಾಗಿ ಬರುತ್ತಿತ್ತು. ಆದ್ದರಿಂದ ನಮ್ಮ ಆಟಗಾರರು ಮುಂದಿನ ಬಾರಿ ಶಾಟ್ ಆಯ್ಕೆಯಲ್ಲಿ ನಾವು ಸ್ವಲ್ಪ ಬುದ್ಧಿವಂತರಾಗಿರಬೇಕು ಎಂದು ಇಶಾನ್ ಕಿಶನ್ ಹೇಳಿದ್ದಾರೆ.

ಇನ್ನು 202 ರನ್​ಗಳ ಗುರಿ ನೀಡಿರುವುದು ಪಾಸಿಟಿವ್ ವಿಷಯ ಎಂದಿರುವ ಇಶಾನ್ ಕಿಶನ್, ನಾವು ವಿರಾಟ್ ಕೊಹ್ಲಿಯ ವಿಕೆಟ್ ಬೇಗನೆ ಪಡೆದಿದ್ದರೆ ಪಂದ್ಯದ ಮೇಲೆ ಹಿಡಿತ ಸಾಧಿಸಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿರಾಟ್ ಭಾಯ್‌ ಚೇಸಿಂಗ್ ವೇಳೆ ಬ್ಯಾಟಿಂಗ್ ಮಾಡಿದ ರೀತಿ ಮೆಚ್ಚಲೇಬೇಕು. ಇಂತಹ ಮ್ಯಾಚ್​ಗಳಲ್ಲಿ ಬೇಗನೇ ಅವರ ವಿಕೆಟ್ ಪಡೆಯುವುದು ಬಹಳ ಮುಖ್ಯ. ಇಲ್ಲದಿದ್ದರೆ, ಅವರು ಇಡೀ ಪಂದ್ಯದ ಮೇಲೆ ನಿಯಂತ್ರಣ ಸಾಧಿಸಿಬಿಡುತ್ತಾರೆ. ಹೀಗಾಗಿ ಆರಂಭದಲ್ಲೇ ಕೊಹ್ಲಿಯನ್ನು ತಡೆಯಬೇಕಾಗುತ್ತದೆ.

ಒಂದು ವೇಳೆ ವಿರಾಟ್ ಕೊಹ್ಲಿಯ ವಿಕೆಟ್ ಬೇಗನೆ ಸಿಕ್ಕಿದ್ದರೆ ನಮಗೂ ಪಂದ್ಯದಲ್ಲಿ ಚಾನ್ಸ್ ಇರುತ್ತಿತ್ತು. ಆದರೆ ಒಂದು ಬಾರಿ ಅವರು ನೆಲೆಯೂರಿದರೆ ಆ ಬಳಿಕ ಅವರನ್ನು ತಡೆಯುವುದು ಕಷ್ಟ. ಇದಾಗ್ಯೂ ಇದು ಮೊದಲ ಪಂದ್ಯ ಮತ್ತು ಈ ತಪ್ಪುಗಳು ಈಗ ಸ್ವೀಕಾರಾರ್ಹ.

ಇನ್ನೂ ಓದಿ: ಕಿಂಗ್ ಕೊಹ್ಲಿ ಸಿಡಿಲಬ್ಬರಕ್ಕೆ ಪಾಕ್ ದಾಂಡಿಗನ ವಿಶ್ವ ದಾಖಲೆ ಧೂಳೀಪಟ

ನಾವು ಬೌಲಿಂಗ್‌ನಲ್ಲಿ ಇನ್ನೂ ಸ್ವಲ್ಪ ಹೆಚ್ಚು ಜಾಗರೂಕರಾಗಬೇಕಿದೆ. ಈ ಪಂದ್ಯದ ತಪ್ಪುಗಳನ್ನು ತಿದ್ದಿದ್ರೆ ಮುಂದಿನ ಪಂದ್ಯದಿಂದ ನಾವು ಬಲಶಾಲಿಯಾಗಬಹುದು. ಅಲ್ಲದೆ ಮುಂಬರುವ ಪಂದ್ಯಗಳನ್ನು ನಾವು ಗೆದ್ದರೆ, ಪಂದ್ಯಾವಳಿಯಲ್ಲಿ ಮುಂದುವರಿಯುವುದು ನಮಗೆ ತುಂಬಾ ಸುಲಭವಾಗುತ್ತದೆ. ಹೀಗಾಗಿ ಮುಂದಿನ ಮ್ಯಾಚ್​ ಮೂಲಕ ಸನ್​ರೈಸರ್ಸ್ ಹೈದರಾಬಾದ್ ತಂಡ ಕಂಬ್ಯಾಕ್ ಮಾಡುವ ವಿಶ್ವಾಸವಿದೆ ಎಂದು ಇಶಾನ್ ಕಿಶನ್ ಹೇಳಿದ್ದಾರೆ.

 

Source link

ಅಲ್ಲು ಅರ್ಜುನ್ ಹುಟ್ಟುಹಬ್ಬಕ್ಕೆ ಸಿಗಲಿದೆ ಸರ್ಪ್ರೈಸ್? ಹೊಸ ಸಿನಿಮಾ ಟೈಟಲ್ ಮೇಲೆ ಕಣ್ಣು

ಟಾಲಿವುಡ್‌ನ ‘ಐಕಾನ್ ಸ್ಟಾರ್’ ಅಲ್ಲು ಅರ್ಜುನ್ (Allu Arjun) ಅವರ ಅಭಿಮಾನಿಗಳು ಸದ್ಯ ಏಪ್ರಿಲ್ 8ಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಅಂದು ಅಲ್ಲು ಅರ್ಜುನ್ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಈ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಲು ನಿರ್ದೇಶಕ ಅಟ್ಲೀ (Atlee) ಸಜ್ಜಾಗುತ್ತಿದ್ದಾರೆ ಎಂಬ ವದಂತಿಗಳು ಜೋರಾಗಿ ಕೇಳಿಬರುತ್ತಿವೆ. ಅಲ್ಲು ಅರ್ಜುನ್ ಮತ್ತು ಅಟ್ಲೀ ಕಾಂಬಿನೇಶನ್‌ನಲ್ಲಿ ಮೂಡಿಬರುತ್ತಿರುವ ಈ ಬಹುನಿರೀಕ್ಷಿತ ಚಿತ್ರಕ್ಕೆ ಏಪ್ರಿಲ್ 8ರಂದು ಅಧಿಕೃತವಾಗಿ ಶೀರ್ಷಿಕೆಯನ್ನು ಘೋಷಿಸುವ ಸಾಧ್ಯತೆ ದಟ್ಟವಾಗಿದೆ.

ಕೇವಲ ಒಂದು ಪೋಸ್ಟರ್ ಮೂಲಕ ಹೆಸರು ಪ್ರಕಟಿಸುತ್ತಾರೋ ಅಥವಾ ಒಂದು ಭರ್ಜರಿ ವೀಡಿಯೊ ಝಲಕ್ ತೋರಿಸುತ್ತಾರೋ ಎಂಬುದು ಸದ್ಯದ ಸಸ್ಪೆನ್ಸ್. ಅಭಿಮಾನಿಗಳ ನಿರೀಕ್ಷೆಯಂತೆ ಏನಾದರೂ ಕಂಟೆಂಟ್ ನೀಡಲೇಬೇಕು ಎಂದು ಅಟ್ಲೀ ಶ್ರಮಿಸುತ್ತಿದ್ದಾರೆ. ಆದರೆ, ಮೂಲಗಳ ಪ್ರಕಾರ ಈ ವಿಶೇಷ ವೀಡಿಯೊ ಅಥವಾ ಟೈಟಲ್ ಟೀಸರ್ ಸಿದ್ಧಪಡಿಸಲು ಬೇಕಾದ ಕೆಲಸಗಳು ಇನ್ನೂ ಪ್ರಗತಿಯಲ್ಲಿವೆ.

ಹುಟ್ಟುಹಬ್ಬದ ವೇಳೆಗೆ ಕಂಟೆಂಟ್ ಸಂಪೂರ್ಣವಾಗಿ ರೆಡಿಯಾಗುತ್ತದೆಯೇ ಎಂಬ ಬಗ್ಗೆ ಅಟ್ಲೀ ಅವರಿಗೆ ಇನ್ನೂ ಪೂರ್ಣ ಪ್ರಮಾಣದ ಖಾತ್ರಿ ಇಲ್ಲ ಎನ್ನಲಾಗಿದೆ. ಒಂದು ವೇಳೆ ತಾಂತ್ರಿಕ ಕೆಲಸಗಳು ವಿಳಂಬವಾದರೆ ಕೇವಲ ಅಧಿಕೃತ ಘೋಷಣೆಯಷ್ಟೇ ಹೊರಬೀಳಬಹುದು. ಭಾರಿ ಬಜೆಟ್​​ನಲ್ಲಿ ಈ ಸಿನಿಮಾ ಸಿದ್ಧವಾಗುತ್ತಿದೆ. ‘ಪುಷ್ಪ 2’ ಬಳಿಕ ಬರುತ್ತಿರುವ ಸಿನಿಮಾ ಆದ್ದರಿಂದ ನಿರೀಕ್ಷೆ ಹೆಚ್ಚಿದೆ.

ಈ ಚಿತ್ರವನ್ನು ಸುಮಾರು 800 ಕೋಟಿ ರೂ.ಗಳ ಬೃಹತ್ ಬಜೆಟ್‌ನಲ್ಲಿ ನಿರ್ಮಿಸಲಾಗುತ್ತಿದೆ ಎಂದು ವರದಿಯಾಗಿದೆ. ದೀಪಿಕಾ ಪಡುಕೋಣೆ, ರಶ್ಮಿಕಾ ಮಂದಣ್ಣ ಮತ್ತು ಜಾನ್ವಿ ಕಪೂರ್ ಅವರಂತಹ ಸ್ಟಾರ್ ನಟಿಯರು ಈ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಯಿದೆ. ಅಟ್ಲೀ ಅವರು ಈ ಚಿತ್ರಕ್ಕಾಗಿ ಪ್ಯಾರಲಲ್ ಯೂನಿವರ್ಸ್ ಎಂಬ ವಿಭಿನ್ನ ಕಾನ್ಸೆಪ್ಟ್ ಆಯ್ದುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಓಪನ್ ಆಯ್ತು ಅಲ್ಲು ಸಿನಿಮಾಸ್; ಅಲ್ಲು ಅರ್ಜುನ್​ಗೆ ಹಾಲಿವುಡ್ ಸಿನಿಮಾ ಮಾಡಿ ಎಂದ ಸಿಎಂ

ಅಲ್ಲು ಅರ್ಜುನ್ ಅವರು ಚಿತ್ರರಂಗದಲ್ಲಿ 23 ವರ್ಷಗಳನ್ನು ಪೂರ್ಣಗೊಳಿಸಿದ್ದಾರೆ. ಇದು ಅವರ ವೃತ್ತಿಜೀವನದ ಮಹತ್ವದ ಮೈಲಿಗಲ್ಲಾಗಿದೆ. ಭಾರತ ಮಾತ್ರವಲ್ಲದೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೂಡ ಅಭಿಮಾನಿ ಬಳಗವನ್ನು ಅವರು ಹೊಂದಿದ್ದಾರೆ. 23 ವರ್ಷ ಪೂರೈಸಿದ ಈ ವಿಶೇಷ ಸಂದರ್ಭದಲ್ಲಿ, ಅವರ ತಂಡವು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಾಚರಣೆಯ ಪೋಸ್ಟ್ ಹಂಚಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನಿಂತಿದ್ದ ಕಂಟೈನರ್​ಗೆ ಕಾರು ಡಿಕ್ಕಿ: ಬಾಲಕಿ ಸೇರಿ ಇಬ್ಬರು ಸಾವು; ಮೂವರ ಸ್ಥಿತಿ ಗಂಭೀರ

ಉಡುಪಿ, ಮಾರ್ಚ್​​ 29: ನಿಂತಿದ್ದ ಕಂಟೈನರ್​ಗೆ ಡಿಕ್ಕಿಯಾಗಿ ಕಾರಿನಲ್ಲಿದ್ದ ಇಬ್ಬರು ದಾರುಣವಾಗಿ ಮೃತಪಟ್ಟಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾವುಂದd ಬಳಿ ನಡೆದಿದೆ. ಘಟನೆಯಲ್ಲಿ ತಾಯಿ ಮತ್ತು ಮಗಳು ಮೃತಪಟ್ಟಿದ್ದರೆ, ಪತಿ, ಇಬ್ಬರು ಮಕ್ಕಳು ಹಾಗೂ ಕಾರು ಚಾಲಕನಿಗೆ ಗಂಭೀರ ಗಾಯಗಳಾಗಿವೆ. ಮಮತಾ(36) ಹಾಗೂ ಮಗಳು ಧೃತಿಕಾ(14) ಪ್ರಾಣ ಬಿಟ್ಟಿದ್ದು, ಪತಿ ರಾಘು(40), ಮಕ್ಕಳಾದ ಜಾಹ್ನವಿ(12), ಚಾರ್ವಿ(10) ಹಾಗೂ ಕಾರು ಚಾಲಕ ಕಿರಣ್​​ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಘಾತದಲ್ಲಿ ಮೃತಪಟ್ಟವರು ಬೆಂಗಳೂರು ಮೂಲದ ನಿವಾಸಿಗಳು ಎಂಬುದು ತಿಳಿದುಬಂದಿದೆ.

ಬೆಂಗಳೂರನಿಂದ ಪ್ರವಾಸಕ್ಕೆ ಬಂದಿದ್ದ ಕುಟುಂಬ ಉಡುಪಿ ಜಿಲ್ಲೆಯ ಹಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಿತ್ತು. ಬಳಿಕ ಮುರುಡೇಶ್ವರ ಮತ್ತು ಗೋಕರ್ಣ ಕ್ಷೇತ್ರಗಳ ದರ್ಶನದ ಉದ್ದೇಶದಿಂದ ಬೈಂದೂರು ಮಾರ್ಗವಾಗಿ ಪ್ರಯಾಣ ನಡೆಸುತ್ತಿದ್ದರು. ಈ ವೇಳೆ ದುರ್ಘಟನೆ ನಡೆದಿದೆ. ಗಾಯಾಳು ತಂದೆ ಮತ್ತು ಇಬ್ಬರು ಮಕ್ಕಳಿಗೆ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ‌ ಚಿಕಿತ್ಸೆ ನೀಡಲಾಗುತ್ತಿದ್ದರೆ, ಕಾರು ಚಾಲಕ ಕಿರಣ್​​ನ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಹೊಸಕೋಟೆ-ಕೋಲಾರ ಹೆದ್ದಾರಿಯಲ್ಲಿ ಟ್ರಕ್​​​ಗೆ ಗುದ್ದಿ ಹೊತ್ತಿ ಉರಿದ ಕಾರು; ಚಾಲಕ ಬದುಕಿದ್ದೇ ಪವಾಡ!

ಬಸ್​​ ಡಿಕ್ಕಿಯಾಗಿ ಮಹಿಳೆ ಸಾವು

ರಸ್ತೆ ದಾಟುತ್ತಿದ್ದ ಪಾದಾಚಾರಿ ಮಹಿಳೆಗೆ ಬಸ್​​ ಡಿಕ್ಕಿಯಾದ ಪರಿಣಾಮ ಆಕೆ ದಾರುಣವಾಗಿ ಮೃತಪಟ್ಟಿರುವ ಘಟನೆ ಚಿತ್ರದುರ್ಗ ತಾಲೂಕಿನ ಕುಂಚಿಗನಾಳ್ ಬಳಿ ನಡೆದಿದೆ. ಅಪಘಾತದ ತೀವ್ರತೆಗೆ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು, ಮೃತ ಮಹಿಳೆಯ ಗುರುತು ಪತ್ತೆಯಾಗಿಲ್ಲ ಎನ್ನಲಾಗಿದೆ. ಸಂಚಾರಿ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬ್ಯಾಂಕ್ ತಪ್ಪಿನಿಂದ ಮಹಿಳೆಯೊಬ್ಬರ ಅಕೌಂಟ್​ಗೆ 10 ಕೋಟಿ ರೂ. ಜಮಾ, ಆಕೆ ಮಾಡಿದ್ದೇನು?

ಮೈನ್​ಪುರಿ, ಮಾರ್ಚ್​ 29: ಹಣ ಕಂಡ್ರೆ ಹೆಣನೂ ಬಾಯಿ ಬಿಡುತ್ತೆ ಅನ್ನೋ ಕಾಲದಲ್ಲಿ, ತಮ್ಮ ಬ್ಯಾಂಕ್(Bank) ಖಾತೆಗೆ ಏನಾದ್ರೂ ಕೋಟಿ ಕೋಟಿ ಹಣ ಬಂದ್ರೆ ಯಾರಾದ್ರೂ ಸುಮ್ನಿರ್ತಾರಾ, ಮೊದಲು ವಿತ್​ ಡ್ರಾ ಮಾಡುತ್ತಾರೆ. ಆದ್ರೆ ಇಲ್ಲೊಬ್ಬ ಮಹಿಳೆಯ ಖಾತೆಗೆ 10 ಕೋಟಿ ರೂ. ಹಣ ಬಂದಿದೆ. ಆಕೆ ಮಾಡಿದ್ದೇನು ಇಲ್ಲಿದೆ ಮಾಹಿತಿ.

ಬಿಚ್ವಾನ್ ಪ್ರದೇಶದ ದೇವಗಂಜ್ ಗ್ರಾಮದ ನಿವಾಸಿ ಪರಸ್ಭಾನ್ ಬಹೇಲಿಯಾ ಅವರ ಪತ್ನಿ ರೀಟಾ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ.ಕೃಷಿಯ ಮೂಲಕ ಜೀವನೋಪಾಯವನ್ನು ಗಳಿಸುತ್ತಿದ್ದಾರೆ.
ನವರಾತ್ರಿಯ ಸಮಯದಲ್ಲಿ ಅಷ್ಟಮಿಯ ಸಂದರ್ಭದಲ್ಲಿ, ಅವರು ತಮ್ಮ ಸ್ಥಳೀಯ ಬ್ಯಾಂಕ್‌ಗೆ ಹಣ ಬೇಕಿತ್ತೆಂದು ಭೇಟಿ ನೀಡಿದ್ದರು. ಆದರೆ ಶಾಖೆ ಮುಚ್ಚಿದ್ದರಿಂದ ಹಣ ಸಿಗಲಿಲ್ಲ.

ನಂತರ ಅವರು ಹತ್ತಿರದ ಎಟಿಎಂಗೆ ಹೋಗಿ ತಮ್ಮ ಬ್ಯಾಲೆನ್ಸ್ ಪರಿಶೀಲಿಸಿದರು, ಆದರೆ ಅವರು ಕಂಡದ್ದನ್ನು ನೋಡಿ ದಿಗ್ಭ್ರಮೆಗೊಂಡರು. ಬ್ಯಾಂಕ್ ಆಫ್ ಇಂಡಿಯಾದಲ್ಲಿನ ಅವರ ಖಾತೆಯಲ್ಲಿ 9,99,49,588 ರೂ. ಅಂದರೆ ಸುಮಾರು ಹತ್ತು ಕೋಟಿ ರೂಪಾಯಿಗಳ ಬ್ಯಾಲೆನ್ಸ್ ಇತ್ತು.

ಮತ್ತಷ್ಟು ಓದಿ: ರಜೆ ನೀಡದೆ ಸಂಬಳವನ್ನೂ ಕಟ್ ಮಾಡಿದ್ದಕ್ಕೆ ಬ್ಯಾಂಕ್ ಮ್ಯಾನೇಜರ್​ಗೆ ಶೂಟ್ ಮಾಡಿ ಕೊಂದ ಸೆಕ್ಯುರಿಟಿ

ತನ್ನ ಕಣ್ಣುಗಳನ್ನು ನಂಬಲು ಸಾಧ್ಯವಾಗದೆ, ಅವರು ಮತ್ತೊಂದು ಎಟಿಎಂನಲ್ಲಿ ಎರಡನೇ ಬಾರಿಗೆ ಬ್ಯಾಲೆನ್ಸ್ ಪರಿಶೀಲಿಸಿದರು. ವೀಡಿಯೊವನ್ನು ರೆಕಾರ್ಡ್ ಮಾಡಿದರು, ಅದು ಅಂದಿನಿಂದ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ತನ್ನ ಖಾತೆಯಲ್ಲಿ ಅಪಾರ ಮೊತ್ತ ತೋರಿಸುತ್ತಿದ್ದರೂ, ರೀಟಾ ಹಣವನ್ನು ವಿತ್​ ಡ್ರಾ ಮಾಡಲು ಮುಂದಾಗಲಿಲ್ಲ.ರಿಸ್ಥಿತಿಯನ್ನು ಸರಿಯಾಗಿ ವಿವರಿಸುವವರೆಗೆ ಹಣವನ್ನು ಮುಟ್ಟಬೇಡಿ ಎಂದು ಅವಳು ತನ್ನ ಕುಟುಂಬ ಸದಸ್ಯರಿಗೆ ದೃಢವಾಗಿ ಹೇಳಿದ್ದರು. ಎಲ್ಲರೂ ಅವರ ಪ್ರಾಮಾಣೀಕತೆಯನ್ನು ಕೊಂಡಾಡಿದ್ದಾರೆ.

ರೀಟಾ ಮತ್ತು ಅವರ ಕುಟುಂಬ ಈ ವಿಷಯವನ್ನು ವರದಿ ಮಾಡಲು ಬ್ಯಾಂಕಿಗೆ ಹೋದಾಗ, ಸಾರ್ವಜನಿಕ ರಜೆಗಾಗಿ ಶಾಖೆ ಮುಚ್ಚಿತ್ತು. ಬ್ಯಾಂಕ್ ಆಫ್ ಇಂಡಿಯಾದ ಕರೀಮ್‌ಗಂಜ್ ಶಾಖೆಯ ವ್ಯವಸ್ಥಾಪಕ ರಿಷಿಕಾಂತ್ ಪಾಂಡೆ, ಘಟನೆಯು ತಾಂತ್ರಿಕ ದೋಷ ಅಥವಾ ವಹಿವಾಟಿನ ದೋಷದಿಂದ ಉಂಟಾಗಿರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ಈ ಘಟನೆಯು ಪ್ರದೇಶದಾದ್ಯಂತ ಚರ್ಚೆಯ ವಿಷಯವಾಗಿದೆ, ರೀಟಾ ಅವರ ಕುಟುಂಬಕ್ಕೆ ಹಣವನ್ನು ದುರುಪಯೋಗಪಡಿಸಿಕೊಳ್ಳಲು ಎಲ್ಲಾ ಅವಕಾಶಗಳು ಇದ್ದರು ಪ್ರಾಮಾಣೀಕತೆ ತೋರಿದ್ದಕ್ಕಾಗಿ ಎಲ್ಲರೂ ಆಕೆಯನ್ನು ಶ್ಲಾಘಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕಿಂಗ್ ಕೊಹ್ಲಿ ಸಿಡಿಲಬ್ಬರಕ್ಕೆ ಪಾಕ್ ದಾಂಡಿಗನ ವಿಶ್ವ ದಾಖಲೆ ಧೂಳೀಪಟ

Source link