All posts by nagaraj11081993

ಆಮಿರ್ ಖಾನ್ 3ನೇ ಮದುವೆಗೆ ದಿನಾಂಕ ನಿಗದಿ; ಜುಲೈ 5ರಂದು ಗೌರಿ ಜೊತೆ ವಿವಾಹ? – Kannada News

ಬಾಲಿವುಡ್‌ ನಟ ಆಮಿರ್ ಖಾನ್ (Aamir Khan) ಅವರು ಮತ್ತೆ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ತಮ್ಮ ಬಹುಕಾಲದ ಗೆಳತಿ ಗೌರಿ ಸ್ಪ್ರ್ಯಾಟ್ (Gauri Spratt) ಅವರೊಂದಿಗೆ ಜುಲೈ 5ರಂದು ಆಮಿರ್ ಖಾನ್ ಸರಳವಾಗಿ ಮದುವೆ (Aamir Khan Wedding) ಆಗಲಿದ್ದಾರೆ ಎಂದು ವರದಿಯಾಗಿದೆ. ಕಳೆದ ವರ್ಷ ತಮ್ಮ 60ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಆಮಿರ್ ಖಾನ್ ಅವರು ಗೌರಿ ಸ್ಪ್ರ್ಯಾಟ್ ಜೊತೆಗಿನ ಪ್ರೀತಿಯನ್ನು ಅಧಿಕೃತವಾಗಿ ಮಾಧ್ಯಮಗಳ ಮುಂದೆ ಒಪ್ಪಿಕೊಂಡಿದ್ದರು. ಅದಕ್ಕೂ ಒಂದು ವರ್ಷದ ಮೊದಲಿನಿಂದಲೇ ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದರು.

ವರದಿಗಳ ಪ್ರಕಾರ, ಈ ಜೋಡಿಯು ಯಾವುದೇ ಅದ್ದೂರಿ ವಿವಾಹ ಮಹೋತ್ಸವ ಅಥವಾ ಗ್ರ್ಯಾಂಡ್ ರಿಸೆಪ್ಷನ್ ಹಮ್ಮಿಕೊಳ್ಳುತ್ತಿಲ್ಲ. ಕೇವಲ ಅತ್ಯಾಪ್ತರು ಮತ್ತು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಜುಲೈ 5ರಂದು ಸರಳವಾಗಿ ಕೋರ್ಟ್ ಮ್ಯಾರೇಜ್ ಮಾಡಿಕೊಳ್ಳುವ ಮೂಲಕ ತಮ್ಮ ದಾಂಪತ್ಯ ಜೀವನವನ್ನು ಅಧಿಕೃತಗೊಳಿಸಲಿದ್ದಾರೆ ಎಂದು ವರದಿ ಆಗಿದೆ.

‘ಆಮೀರ್ ಮತ್ತು ಗೌರಿ ಕಳೆದ ಒಂದು ವರ್ಷದಿಂದ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿದ್ದಾರೆ. ಒಟ್ಟಿಗೆ ಖುಷಿಯಾದ ಜೀವನ ನಡೆಸುತ್ತಿರುವ ಇಬ್ಬರು, ಈಗ ಕುಟುಂಬದವರ ಸಮ್ಮುಖದಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ’ ಎಂದು ಆಪ್ತ ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಗೌರಿ ಸ್ಪ್ರ್ಯಾಟ್ ಅವರಿಗೆ ಈಗಾಗಲೇ 7 ವರ್ಷದ ಮಗನಿದ್ದಾನೆ. ಆಮಿರ್ ಖಾನ್ ಮತ್ತು ಗೌರಿ ಅವರು ಕಳೆದ 25 ವರ್ಷಗಳಿಂದ ಒಳ್ಳೆಯ ಸ್ನೇಹಿತರಾಗಿದ್ದರು. ಸುದೀರ್ಘ ಸ್ನೇಹದ ಬಳಿಕ ಇಬ್ಬರ ನಡುವೆ ಪ್ರೀತಿ ಚಿಗುರೊಡೆದು, ಈಗ ಮದುವೆಯ ಹಂತಕ್ಕೆ ಬಂದು ತಲುಪಿದೆ.

ಆಮಿರ್ ಖಾನ್ ಮೊದಲು ರೀನಾ ದತ್ತಾ ಅವರನ್ನು 1986ರಲ್ಲಿ ಮದುವೆಯಾಗಿದ್ದರು. ಈ ದಂಪತಿಗೆ ಜುನೈದ್ ಮತ್ತು ಇರಾ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. 2002ರಲ್ಲಿ ಅವರು ವಿಚ್ಛೇದನ ಪಡೆದರು. ಬಳಿಕ 2005ರಲ್ಲಿ ನಿರ್ದೇಶಕಿ ಕಿರಣ್ ರಾವ್ ಅವರನ್ನು ವಿವಾಹವಾದರು. ಈ ಜೋಡಿಗೆ ಆಜಾದ್ ಎಂಬ ಮಗನಿದ್ದಾನೆ. ಆದರೆ 2021ರಲ್ಲಿ ಇವರಿಬ್ಬರು ಪರಸ್ಪರ ಒಪ್ಪಿಗೆಯಿಂದ ಬೇರೆಯಾದರು. ವಿಚ್ಛೇದನದ ಬಳಿಕವೂ ಮಗನ ಜವಾಬ್ದಾರಿಯನ್ನು ಇಬ್ಬರು ಒಟ್ಟಿಗೆ ನಿಭಾಯಿಸುತ್ತಿದ್ದಾರೆ.

ಇದನ್ನೂ ಓದಿ: ಮಗಳು ಖಂಡಿತಾ 10ನೇ ತರಗತಿ ಫೇಲ್ ಆಗುತ್ತಾಳೆ ಎಂದುಕೊಂಡಿದ್ದ ಆಮಿರ್ ಖಾನ್; ಆದರೆ ಆಗಿದ್ದೇನು?

ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಪ್ರೀತಿಯ ಬಗ್ಗೆ ಮಾತನಾಡಿದ್ದ ಆಮಿರ್ ಖಾನ್, ‘ನನ್ನ ಜೀವನಕ್ಕೆ ಗೌರಿ ಬಂದಿರುವುದು ನನ್ನ ಅದೃಷ್ಟ. ಅವಳ ಜೊತೆ ಇದ್ದರೆ ನನಗೆ ನೆಮ್ಮದಿ ಸಿಗುತ್ತದೆ. ರೀನಾ ಮತ್ತು ಕಿರಣ್ ರಾವ್ ಜೊತೆಗಿನ ನನ್ನ ಸಂಬಂಧವೂ ಆಳವಾಗಿತ್ತು, ಆದರೆ ಕೆಲವು ಕಾರಣಗಳಿಂದ ಅದು ವರ್ಕೌಟ್ ಆಗಲಿಲ್ಲ. ಆದರೆ ಗೌರಿ ನನ್ನ ಜೀವನಕ್ಕೆ ಬಂದ ಮೇಲೆ ನಾನು ಪರಿಪೂರ್ಣನಾಗಿದ್ದೇನೆ ಎನಿಸುತ್ತಿದೆ’ ಎಂದು ಹೇಳಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಚರಂಡಿಗೊಂದು ‘ನೆಟ್’ ಹಾಕಿದ್ರೆ ಸಾಕು; ಬೆಂಗಳೂರಿನಲ್ಲಿ ಮಳೆಯಿಂದ ಆಗುವ ಸಮಸ್ಯೆ ಸಿಕ್ತು ಸೂಪರ್ ಐಡಿಯಾ! – Kannada News

ಬೆಂಗಳೂರು, ಜೂ.3: ಪ್ರತಿ ಮುಂಗಾರು ಮಳೆಯಲ್ಲೂ ದೇಶದ ಮೆಟ್ರೋ ಸಿಟಿಗಳು ಎದುರಿಸುವ ಅತಿ ದೊಡ್ಡ ಸಮಸ್ಯೆಯೆಂದರೆ ರಸ್ತೆಗಳು ಜಲಾವೃತಗೊಳ್ಳುವುದು ಮತ್ತು ಚರಂಡಿಗಳು ಬ್ಲಾಕ್ ಆಗುವುದು. ಬೆಂಗಳೂರಿನ ಮುಳುಗುವ ಅಂಡರ್‌ಪಾಸ್‌ಗಳು, ಮುಂಬೈನ ಕಸದಿಂದ ತುಂಬಿಹೋಗಿರುವ ರಾಜಕಾಲುವೆಗಳು ಮತ್ತು ಚೆನ್ನೈನ ಜಲಾವೃತ ರಸ್ತೆಗಳು ಇದಕ್ಕೆ ಜೀವಂತ ಸಾಕ್ಷಿ. ಈ ಜ್ವಲಂತ ಸಮಸ್ಯೆಗೆ ಯಾವುದೇ ಕೋಟ್ಯಂತರ ರೂಪಾಯಿಗಳ ಬಜೆಟ್ ಅಥವಾ ರಾಕೆಟ್ ಸೈನ್ಸ್ ತಂತ್ರಜ್ಞಾನದ ಅಗತ್ಯವಿಲ್ಲ, ಕೇವಲ ಒಂದು ಸರಳ ‘ನೆಟ್’ (ಜಾಲರಿ) ಮೂಲಕ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು ಎಂಬ ನಾವೀನ್ಯತೆಯ ಐಡಿಯಾವೊಂದು ಈಗ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇದೀಗ ಬಗ್ಗೆ ಪೋಸ್ಟ್​​​ವೊಂದನ್ನು ಬೆಂಗಳೂರು ಪೋಸ್ಟ್​​​ (@Bengaluru Post) ಎಂಬ ಎಕ್ಸ್​​ ಖಾತೆ ಹಂಚಿಕೊಂಡಿದೆ.

ಪ್ರತಿ ವರ್ಷ ನಗರಗಳು ಮಳೆನೀರು ಮತ್ತು ಪ್ಲಾಸ್ಟಿಕ್ ತ್ಯಾಜ್ಯಗಳ ವಿರುದ್ಧ ದೊಡ್ಡ ಯುದ್ಧವನ್ನೇ ನಡೆಸುತ್ತವೆ. ಸಾರ್ವಜನಿಕರು ಮತ್ತು ಪರಿಸರ ಪ್ರೇಮಿಗಳ ಪ್ರಕಾರ, “ಸಮಸ್ಯೆ ಸೃಷ್ಟಿಸುವ ಚರಂಡಿಗಳೇ ಏಕೆ ಪರಿಹಾರದ ಭಾಗವಾಗಬಾರದು?”. ಪ್ರತಿ ಚರಂಡಿಯ ಮುಖದ್ವಾರ ಅಥವಾ ಒಳಗಡೆ ಬಲವಾದ ನೆಟ್‌ಗಳನ್ನು ಅಳವಡಿಸುವುದರಿಂದ, ನೀರು ಸರಾಗವಾಗಿ ಹರಿದು ಹೋಗುತ್ತದೆ ಮತ್ತು ಪ್ಲಾಸ್ಟಿಕ್ ಸೇರಿದಂತೆ ಎಲ್ಲಾ ಘನ ತ್ಯಾಜ್ಯಗಳು ಒಂದೇ ಕಡೆ ಶೇಖರಣೆಯಾಗುತ್ತವೆ. ಇದರಿಂದಾಗಿ ಚರಂಡಿಗಳು ಬ್ಲಾಕ್ ಆಗುವುದು ಸಂಪೂರ್ಣವಾಗಿ ತಪ್ಪುತ್ತದೆ ಮತ್ತು ಕಸವನ್ನು ಸುಲಭವಾಗಿ ವಿಲೇವಾರಿ ಮಾಡಬಹುದು.

ಇದನ್ನೂ ಓದಿ: ಜೊಹೊ ಮುಖ್ಯ ವಿಜ್ಞಾನಿ ಶ್ರೀಧರ್ ವೆಂಬು ಅವರ ಕರುವಿಯಿಂದ ಚೀನೀ ಪವರ್ ಟೂಲ್ಸ್​ಗೆ ಪೈಪೋಟಿ

ಇಲ್ಲಿದೆ ನೋಡಿ ಎಕ್ಸ್​​ ಪೋಸ್ಟ್​​:

ಬೆಂಗಳೂರಿನ ಹೊರವರ್ತುಲ ರಸ್ತೆ ಭಾಗದಲ್ಲಿ ಮಳೆಯಾದರೆ ಸೃಷ್ಟಿಯಾಗುವ ಟ್ರಾಫಿಕ್ ಮತ್ತು ಪ್ರವಾಹದ ಪರಿಸ್ಥಿತಿಯನ್ನು ನಿಯಂತ್ರಿಸಲು ಈ ಸರಳ ಮತ್ತು ಅತ್ಯಂತ ಕಡಿಮೆ ವೆಚ್ಚದ ತಂತ್ರಜ್ಞಾನವನ್ನು ಪ್ರಾಯೋಗಿಕವಾಗಿ ಬಳಸಬಹುದಾಗಿದೆ. ಬೆಂಗಳೂರಿನ ಹೊರವರ್ತುಲ ರಸ್ತೆ ಕಂಪನಿಗಳ ಸಂಘಟನೆ ಈ ನಿಟ್ಟಿನಲ್ಲಿ ಬಿಬಿಎಂಪಿ ಮತ್ತು ನಗರಾಭಿವೃದ್ಧಿ ಮಂಡಳಿಗಳೊಂದಿಗೆ ಕೈಜೋಡಿಸಿ, ಓಆರ್‌ಆರ್ ವ್ಯಾಪ್ತಿಯ ಚರಂಡಿಗಳಲ್ಲಿ ಇಂತಹ ‘ನೆಟ್’ ಅಳವಡಿಸುವ ಪ್ರಾಯೋಗಿಕ ಯೋಜನೆಯನ್ನು ಪರಿಶೀಲಿಸಬೇಕು ಎಂದು ಸಾರ್ವಜನಿಕರು ಸೋಷಿಯಲ್ ಮೀಡಿಯಾ ಮೂಲಕ ಒತ್ತಾಯಿಸುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:51 pm, Wed, 3 June 26

Source link

ಸಿಎಂ ಆಗಿ ಪ್ರಮಾಣವಚನದ ಬೆನ್ನಲ್ಲೇ ರಾಜ್ಯದ ಜನತೆಗೆ ಮಹತ್ವದ ಕರೆ ಕೊಟ್ಟ ಡಿ.ಕೆ. ಶಿವಕುಮಾರ್​​: ಇಲ್ಲಿದೆ ಮಾಹಿತಿ – Kannada News

ರಾಜ್ಯದ ಜನತೆಗೆ ಮಹತ್ವದ ಕರೆ ಕೊಟ್ಟ ಡಿ.ಕೆ. ಶಿವಕುಮಾರ್Image Credit source: DK Shivakumar X Account

ಬೆಂಗಳೂರು, ಜೂನ್​​ 03: ಕರ್ನಾಟಕದ ನೂತನ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಡಿ.ಕೆ. ಶಿವಕುಮಾರ್ (DK Shivakumar)​​ ಭಾವನಾತ್ಮಕವಾಗಿ ಪೋಸ್ಟ್​​ ಮಾಡಿದ್ದಾರೆ. ನನ್ನ ಬದುಕಿನ ಪ್ರತಿಯೊಂದು ಏಳುಬೀಳುಗಳಲ್ಲೂ ಧೈರ್ಯ ತುಂಬಿದ್ದೀರಿ. ನನ್ನನ್ನು ಹೆಗಲ ಮೇಲೆ ಹೊತ್ತು ಮುನ್ನಡೆಸಿದ ಕೋಟ್ಯಂತರ ಜನತೆ ಹಾಗೂ ಕಾರ್ಯಕರ್ತರ ಆಶೀರ್ವಾದದಿಂದ ಸಿಎಂ ಆಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ದೇನೆ. ಈ ಕ್ಷಣದಲ್ಲಿ ನಾನು ನಿಮ್ಮೆಲ್ಲರ ಪ್ರೀತಿ ಹಾಗೂ ವಿಶ್ವಾಸಕ್ಕೆ ತಲೆಬಾಗುತ್ತೇನೆ ಎಂದು ಅವರು ಬರೆದುಕೊಂಡಿದ್ದಾರೆ.

ಡಿಕೆಶಿ ಪೋಸ್ಟ್​​ನಲ್ಲಿ ಏನಿದೆ?

ನನ್ನ ಹೆಗಲ ಮೇಲಿರುವುದು ಕೇವಲ ಮುಖ್ಯಮಂತ್ರಿಯ ಜವಾಬ್ದಾರಿಯಲ್ಲ, ಬದಲಿಗೆ ಕನ್ನಡಿಗರ ಕನಸುಗಳನ್ನು ನನಸು ಮಾಡುವ ಪವಿತ್ರ ಕರ್ತವ್ಯ. ಈ ಅವಕಾಶ ನನಗೆ ಕರುಣಿಸಿದ ಹಿರಿಯರಿಗೆ, ಮಾರ್ಗದರ್ಶಕರಿಗೆ ಹಾಗೂ ನನ್ನ ಶಕ್ತಿಯಾಗಿ ನಿಂತ ಪ್ರತಿಯೊಬ್ಬರಿಗೂ ನನ್ನ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ. ವೇಗವಾಗಿ ಬದಲಾಗುತ್ತಿರುವ ಇಂದಿನ ತಂತ್ರಜ್ಞಾನದ ಯುಗದಲ್ಲಿ, ಹೊಸ ಆಲೋಚನೆಗಳೊಂದಿಗೆ ನಮ್ಮ ಹೆಮ್ಮೆಯ ಕರ್ನಾಟಕವನ್ನು ಅಭಿವೃದ್ಧಿಯ ಅತ್ಯುನ್ನತ ಶಿಖರಕ್ಕೆ ಕೊಂಡೊಯ್ಯಬೇಕಿದೆ. ಈ ಸರ್ವತೋಮುಖ ಪ್ರಗತಿಯ ದಾರಿಯಲ್ಲಿ ರೈತರು, ಶ್ರಮಿಕರು, ಮಹಿಳೆಯರು, ವಿದ್ಯಾರ್ಥಿಗಳು, ಯುವಜನರು ಹಾಗೂ ಪ್ರತಿಯೊಬ್ಬ ನಾಗರಿಕರ ಸಹಭಾಗಿತ್ವ ನಮಗೆ ಮುಖ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆ ಶಿವಕುಮಾರ್​​ರಿಂದ ದೀರ್ಘದಂಡ ನಮಸ್ಕಾರ

‘ಒಬ್ಬ ವ್ಯಕ್ತಿಯಿಂದ ಬದಲಾವಣೆ ಸಾಧ್ಯವಿಲ್ಲ’

ಯಾವುದೇ ಒಬ್ಬ ವ್ಯಕ್ತಿಯಿಂದ ಬದಲಾವಣೆ ಸಾಧ್ಯವಿಲ್ಲ, ಆದರೆ ನಾವೆಲ್ಲರೂ ಕೈಜೋಡಿಸಿದರೆ ಅಸಾಧ್ಯವಾದುದು ಯಾವುದೂ ಇಲ್ಲ. ಹೀಗಾಗಿ ನಮ್ಮ ಭವಿಷ್ಯದ ಪೀಳಿಗೆ ಹೆಮ್ಮೆ ಪಡುವಂತಹ ಸುಂದರ, ಸಮೃದ್ಧ ಮತ್ತು ಪ್ರಗತಿಪರ ಕರ್ನಾಟಕವನ್ನು ಕಟ್ಟೋಣ ಎಂದು ಸಿಎಂ ಡಿ.ಕೆ. ಶಿವಕುಮಾರ್​​ ಕರೆ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ತಮಿಳುನಾಡು ಉಪಚುನಾವಣೆ; ಕಾಂಗ್ರೆಸ್‌ಗೆ ರಾಜ್ಯಸಭಾ ಸ್ಥಾನ ಬಿಟ್ಟುಕೊಟ್ಟ ವಿಜಯ್ ನೇತೃತ್ವದ ಟಿವಿಕೆ – Kannada News

ಚೆನ್ನೈ, ಜೂನ್ 3: ಜೂನ್ 18ರಂದು ನಡೆಯಲಿರುವ ತಮಿಳುನಾಡಿನ ರಾಜ್ಯಸಭಾ ಉಪಚುನಾವಣೆಗೆ ನಟ ವಿಜಯ್ (Vijay) ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷ ತನ್ನ ಪಾಲಿನ ಸೀಟನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಡಲು ನಿರ್ಧರಿಸಿದೆ. ಈ ನಿರ್ಧಾರವು ಮುಂಬರುವ ದಿನಗಳಲ್ಲಿ ತಮಿಳುನಾಡಿನ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸುವ ಸಾಧ್ಯತೆ ಇದೆ. ತಮಿಳುನಾಡಿನಲ್ಲಿ ತೆರವಾಗಿರುವ 1 ರಾಜ್ಯಸಭಾ ಸ್ಥಾನಕ್ಕೆ ಕೇಂದ್ರ ಚುನಾವಣಾ ಆಯೋಗವು ಇತ್ತೀಚೆಗೆ ಉಪಚುನಾವಣೆ ಪ್ರಕಟಿಸಿತ್ತು.

ಜೂನ್ 18ರಂದು ಮತದಾನ ಪ್ರಕ್ರಿಯೆ ನಡೆಯಲಿದ್ದು, ಅಂದೇ ಸಂಜೆ ಫಲಿತಾಂಶ ಹೊರಬೀಳಲಿದೆ. ವಿಧಾನಸಭೆಯಲ್ಲಿನ ಸಂಖ್ಯಾಬಲ ಮತ್ತು ರಾಜಕೀಯ ತಂತ್ರಗಾರಿಕೆಯ ಭಾಗವಾಗಿ ಟಿವಿಕೆ ಈ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದ್ದು, ಕಾಂಗ್ರೆಸ್ ಶೀಘ್ರದಲ್ಲೇ ತನ್ನ ಅಧಿಕೃತ ಅಭ್ಯರ್ಥಿಯನ್ನು ಘೋಷಿಸಲಿದೆ.

ಇದನ್ನೂ ಓದಿ: ತಮಿಳುನಾಡು ರಾಜಕೀಯದಲ್ಲಿ ಹೊಸ ತಿರುವು; ಎಐಎಡಿಎಂಕೆಗೆ ರಾಜೀನಾಮೆ ನೀಡಿ ಟಿವಿಕೆಯತ್ತ ಮುಖ ಮಾಡಿದ 3 ಶಾಸಕರು

ಟಿವಿಕೆ ಪಕ್ಷವು ತಮಿಳುನಾಡಿನ ರಾಜಕೀಯ ರಂಗಕ್ಕೆ ಪ್ರವೇಶಿಸಿದ ನಂತರ ತೆಗೆದುಕೊಳ್ಳುತ್ತಿರುವ ಪ್ರಮುಖ ರಾಜಕೀಯ ನಿರ್ಧಾರ ಇದಾಗಿದೆ. ಈಗಾಗಲೇ ಚುನಾವಣಾ ಅಧಿಸೂಚನೆ ಹೊರಬಿದ್ದಿರುವುದರಿಂದ, ಕಾಂಗ್ರೆಸ್ ಹೈಕಮಾಂಡ್ ತಮಿಳುನಾಡಿನ ಹಿರಿಯ ನಾಯಕರೊಬ್ಬರನ್ನು ಈ ಸ್ಥಾನಕ್ಕೆ ಕಣಕ್ಕಿಳಿಸಲು ಚಿಂತನೆ ನಡೆಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ಆದ ಬಳಿಕ ಡಿಕೆ ಶಿವಕುಮಾರ್ ಬಂಪರ್ ಘೋಷಣೆ: ವಿದ್ಯಾರ್ಥಿಗಳಿಗೆ ಬಸ್ ಪಾಸ್ ಫ್ರೀ! – Kannada News

ಬೆಂಗಳೂರು, (ಜೂನ್ 03): ಡಿಕೆ ಶಿವಕುಮಾರ್ (DK Shivakumar)  ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಮೊದಲ ಸಚಿವ ಸಂಪುಟ ನಡೆಸಿದ್ದು, ವಿದ್ಯಾರ್ಥಿಗಳಿಗೆ ಬಸ್ ಪಾಸ್ ಫ್ರೀ  ಘೋಷಣೆ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆಶಿ,  ರಾಜ್ಯದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಫ್ರೀ ಬಸ್​ ಪಾಸ್​ ನೀಡಲಾಗುವುದು ಎಂದು ಘೋಷಿಸಿದರು.  ಇದರೊಂದಿಗೆ ಬೇರೆ ಊರಿಗೆ ಹೋಗಿ ವ್ಯಾಸಂಗ ಮಾಡುವ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

ಸಂಪುಟ ಸಭೆ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಡಿಕೆ ಶಿವಕುಮಾರ್ಶು ಭ ಗಳಿಗೆ, ಶುಭ ಮುಹೂರ್ತ ಬರುತ್ತೆ ಎಂದು ಹೇಳುತ್ತಿದ್ದ ಇವತ್ತು ಸಂಜೆ 4.15ಕ್ಕೆ ಆ ಶುಭ ಗಳಿಗೆ, ಮುಹೂರ್ತ ಬಂತು. ಇವತ್ತು ಹೊಸ ದಿನ, ಹೊಸ ಕೆಲಸ, ಅವಕಾಶ ಆರಂಭಿಸುವ ದಿನ. ಇನ್ನೆರಡು ವರ್ಷಗಳಲ್ಲಿ ಹೊಸ ಅವಕಾಶ ಹುಡುಕುತ್ತಿದ್ದೇನೆ. ರಾಜ್ಯ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತೇನೆ. ರೈತರು, ಕಾರ್ಮಿಕರು, ಎಲ್ಲ ವರ್ಗದ ಜನರಿಗೆ ಕಳೆದ 6 ತಿಂಗಳಿಂದ ಕಾರ್ಯಕ್ರಮಗಳನ್ನ ರೂಪಿಸಿದ್ದೇನೆ ಎಂದು ಹೇಳಿದರು. ಈ ಮೂಲಕ ಮಹತ್ವದ ಕಾರ್ಯಮಗಳ ಘೋಷಣೆ ಮಾಡುವ ಸುಳಿವು ನೀಡಿದರು.

, ರಾಜ್ಯದ ಜನ ನನ್ನ ಮೇಲೆ ಅಪಾರ ವಿಶ್ವಾಸ, ನಂಬಿಕೆ ಇಟ್ಟಿದ್ದಾರೆ. ಈ ಹಿಂದೆ ನನ್ನ ವಿರುದ್ಧ ಟೀಕೆಗಳು ಕೂಡ ಬಂದಿವೆ. ನನ್ನ ರಾಜಕೀಯ ಅನುಭವ ಬಳಸಿಕೊಂಡು ಕೆಲಸ ಮಾಡುತ್ತೇನೆ. ಅನೇಕ ರಾಜಕೀಯ ತಂತ್ರಗಳಿಗೂ ನಾನು ಸಿಲುಕಿದ್ದೇನೆ. ತಿಹಾರ್​ ಜೈಲಿಗೂ ಸಹ ಹೋಗಿ ಬಂದಿದ್ದೇನೆ ಎಂದರು.

ಈ ಸಿಎಂ ಕುರ್ಚಿ ನನ್ನದಲ್ಲ, ಇದು ನಾಡಿನ ಜನತೆಯದ್ದು. ಹೈಕಮಾಂಡ್​ ನಾಯಕರು ನನಗೆ ಈ ಅವಕಾಶವನ್ನ ಕೊಟ್ಟಿದ್ದಾರೆ. ಸ್ವಲ್ಪ ತಡವಾಯಿತು ಆದರೂ ಶುಭ ಗಳಿಗೆ ಬಂದಿದ್ದು, ಎಲ್ಲರೂ ಜೊತೆಗೆ ಸೇರಿ ಕೆಲಸ ಮಾಡುತ್ತೇವೆ. ನಾನು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟವನು ನಾನು. ನಮ್ಮ ಸಂಪುಟ ಸರ್ವ ಜನಾಂಗದ ಶಾಂತಿಯ ತೋಟ ಇದ್ದಂತೆ ಎಂದು ಹೇಳಿದರು.

ಎಲ್ಲವೂ ಕಲೆಕ್ಟಿವ್ ಡಿಸಿಷನ್ ಆಗಿರುತ್ತೆ

ಹೈಕಮಾಂಡ್ ಹೇಳಿದರೆ, ವರಿಷ್ಠರು ಹೇಳಿದರೆ ಐದು ನಿಮಿಷವೂ ಕಾಯಲ್ಲ ಎಂದು ಸಿದ್ದರಾಮಯ್ಯ ಹೇಳಿದ್ರು. ಅದರಂತೆ ವರಿಷ್ಠರು ಕೊಟ್ಟ ಸೂಚನೆ ಮೇರೆಗೆ ಅವರೂ ಸ್ಥಾನವನ್ನು ನನಗೆ ಬಿಟ್ಟು ಕೊಟ್ಟಿದ್ದಾರೆ. ಗ್ರಾಮೀಣ ಹಾಗೂ ನಗರದ ಜನರ ಸಮಸ್ಯೆ ನನಗೆ ಗೊತ್ತಿದೆ. ನಾನು ಎಲ್ಲ ಸಮಸ್ಯೆಗಳನ್ನು ಬಲ್ಲೆ. ಮುಂದೆ ಏನೇ ನಿರ್ಧಾರ ತೆಗೆದುಕೊಂಡರೂ ಅದು ನನ್ನ ನಿರ್ಧಾರ ಆಗಿರಲ್ಲ. ಬದಲಾಗಿ ನನ್ನ ಇಡೀ ಸಂಪುಟದ ನಿರ್ಧಾರ ಆಗಿರುತ್ತದೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ ಇದೆ. ಎಲ್ಲವೂ ಕಲೆಕ್ಟಿವ್ ಡಿಸಿಷನ್ ಆಗಿರುತ್ತದೆ. ಇವತ್ತು 14 ಜನ ಕ್ಯಾಬಿನೆಟ್ ಗೆ ಸೇರಿದ್ದು, ಸರ್ವ ಜನಾಂಗದ ಶಾಂತಿಯ ತೋಟವನ್ನು ಕ್ಯಾಬಿನೆಟ್ ಬಿಂಬಿಸುತ್ತಿದೆ. ರಾಜ್ಯದಲ್ಲಿ ಉತ್ತಮ ಬಲಿಷ್ಟ ನಾಯಕತ್ವವನ್ನು ಕೊಟ್ಟು ಕೆಲಸ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Source link

ಫಿಟ್ನೆಸ್‌ ಕಾಪಾಡಿಕೊಳ್ಳಲು ಊಟ ಬಿಡುತ್ತಿದ್ದೀರಾ? ಹಾಗಿದ್ರೆ ನೀವು ಈ ಒಂದಿಷ್ಟು ವಿಚಾರಗಳನ್ನು ತಿಳಿದುಕೊಳ್ಳಲೇಬೇಕು – Kannada News

ಇತ್ತೀಚಿನ ದಿನಗಳಲ್ಲಿ ಬೇಗನೆ ತೂಕ ಇಳಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಹಲವರು ಊಟವನ್ನೇ ಬಿಟ್ಟು ಫಿಟ್ನೆಸ್ ಪ್ರಯಾಣ ಆರಂಭಿಸುತ್ತಿದ್ದಾರೆ. ಬೆಳಗಿನ ಉಪಹಾರ ಬಿಡುವುದು, ಮಧ್ಯಾಹ್ನದ ಊಟ ತಡಮಾಡುವುದು ಅಥವಾ ಕೇವಲ ಕಾಫಿ, ಟೀ ಅಥವಾ ಹಣ್ಣಿನ ಜ್ಯೂಸ್ ಕುಡಿದು ದಿನ ಕಳೆಯುತ್ತಾರೆ. ಆದರೆ ಈ ರೀತಿ ಮಾಡುವುದು ಆರೋಗ್ಯಕರ ವಿಧಾನ ಅಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ತೂಕ ಇಳಿಕೆ ಎಂದರೆ ಕೇವಲ ಜಿಮ್‌ನಲ್ಲಿ ವ್ಯಾಯಾಮ ಮಾಡುವುದಲ್ಲ. ಸರಿಯಾದ ಆಹಾರ ಪದ್ಧತಿ, ಉತ್ತಮ ನಿದ್ರೆ, ಒತ್ತಡ ನಿಯಂತ್ರಣ ಮತ್ತು ದೇಹಕ್ಕೆ ಬೇಕಾದ ವಿಶ್ರಾಂತಿ ಕೂಡ ಅಷ್ಟೇ ಮುಖ್ಯವಾಗುತ್ತದೆ. ಹಾಗಾದರೆ ತೂಕ ಇಳಿಸಿಕೊಳ್ಳಲು (Weight Loss) ಊಟ ಬಿಟ್ಟರೆ ಏನಾಗುತ್ತದೆ, ಆರೋಗ್ಯಕರವಾಗಿ ತೂಕ ಕಡಿಮೆ ಮಾಡಿಕೊಳ್ಳಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಊಟ ಬಿಡುವುದರಿಂದ ಏನಾಗಬಹುದು?

ಹಗಲಿನಲ್ಲಿ ಸರಿಯಾಗಿ ಊಟ ಮಾಡದವರು ಸಂಜೆ ವೇಳೆಗೆ ಹೆಚ್ಚು ಹಸಿವಿನಿಂದ ಬಳಲುತ್ತಾರೆ. ಇದರಿಂದ ರಾತ್ರಿ ಸಮಯದಲ್ಲಿ ಅತಿಯಾಗಿ ತಿನ್ನುವುದು ಅಥವಾ ಜಂಕ್ ಫುಡ್‌ಗಳಿಗೆ ಮೊರೆ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ರೀತಿಯ ಅಸಮರ್ಪಕ ಆಹಾರ ಪದ್ಧತಿ ಜೀರ್ಣಕ್ರಿಯೆಯ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ತಜ್ಞರ ಅಭಿಪ್ರಾಯದಂತೆ, ಫಿಟ್ನೆಸ್ ಗೆ ಉಪವಾಸ ಮಾಡುವುದು ಪರಿಹಾರವಲ್ಲ. ಬದಲಿಗೆ ನಿಯಮಿತ ಮತ್ತು ಸಮತೋಲನಯುತ ಜೀವನಶೈಲಿಯೇ ಉತ್ತಮ ಮಾರ್ಗವಾಗಿದೆ.

ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಲು ಏನು ಮಾಡಬೇಕು?

ತಜ್ಞರ ಸಲಹೆ ಪ್ರಕಾರ, ಊಟ ಬಿಡುವ ಬದಲು ಸಮತೋಲನಯುತ ಆಹಾರ ಸೇವನೆ ಮಾಡುವುದು ಬಹಳ ಉತ್ತಮ. ಅದರ ಜೊತೆಗೆ ಆಹಾರದಲ್ಲಿ ಪ್ರೋಟೀನ್, ಫೈಬರ್ (ನಾರು ಪದಾರ್ಥ), ಆರೋಗ್ಯಕರ ಕೊಬ್ಬು, ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್ಸ್ ಇರಬೇಕು. ಇವು ದೇಹಕ್ಕೆ ದಿನಪೂರ್ತಿ ಶಕ್ತಿಯನ್ನು ನೀಡುತ್ತವೆ ಮತ್ತು ವ್ಯಾಯಾಮದ ಸಾಮರ್ಥ್ಯವನ್ನೂ ಹೆಚ್ಚಿಸುತ್ತವೆ.

ಕ್ರ್ಯಾಶ್ ಡೈಟ್‌ಗಳಿಗೆ ಹೇಳಿ ಬೈ!

ತಾತ್ಕಾಲಿಕವಾಗಿ ತೂಕ ಇಳಿಸುವ ಕ್ರ್ಯಾಶ್ ಡೈಟ್‌, ಡಿಟಾಕ್ಸ್ ಟೀ ಮುಂತಾದ ವಿಧಾನಗಳು ದೀರ್ಘಕಾಲದಲ್ಲಿ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶಗಳನ್ನು ನೀಡುವ ಆಹಾರವೇ ನಿಜವಾದ ಫಿಟ್ನೆಸ್‌ಗೆ ದಾರಿಯಾಗಿದೆ. ಸರಿಯಾದ ಸಮಯಕ್ಕೆ ಆಹಾರ ಸೇವಿಸುವುದು, ನಿಯಮಿತ ವ್ಯಾಯಾಮ, ಸಾಕಷ್ಟು ನೀರು ಕುಡಿಯುವುದು ಮತ್ತು ಉತ್ತಮ ನಿದ್ರೆ ಆರೋಗ್ಯಕರ ಜೀವನಶೈಲಿಗೆ ಮುಖ್ಯ. ಹಸಿವು ನಿಯಂತ್ರಿಸುವುದು ಎಂದರೆ ಊಟ ಮಾಡದಿರುವುದಲ್ಲ, ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಸರಿಯಾದ ಸಮಯದಲ್ಲಿ ನೀಡುವುದಾಗಿದೆ. ಹಾಗಾಗಿ ಬೇಗನೆ ತೂಕ ಇಳಿಸಿಕೊಳ್ಳುವ ಆತುರದಲ್ಲಿ ಊಟ ಬಿಟ್ಟು ಆರೋಗ್ಯ ಹಾಳು ಮಾಡಿಕೊಳ್ಳಬೇಡಿ. ದೀರ್ಘಕಾಲದ ಆರೋಗ್ಯ ಮತ್ತು ಫಿಟ್ನೆಸ್‌ಗಾಗಿ ಸಮತೋಲನಯುತ ಆಹಾರ ಹಾಗೂ ನಿಯಮಿತ ಜೀವನಶೈಲಿಯನ್ನೇ ಅನುಸರಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದೆಹಲಿಯ ಬೆಂಕಿ ದುರಂತದಲ್ಲಿ ಬಾಂಗ್ಲಾ, ಅಫ್ಘಾನ್, ಆಫ್ರಿಕಾದ ಪ್ರವಾಸಿಗರೂ ಸಾವು; ಹೋಟೆಲ್ ಮಾಲೀಕ ಪರಾರಿ – Kannada News

ನವದೆಹಲಿ, ಜೂನ್ 3: ದೆಹಲಿಯ ಮಾಳವೀಯ ನಗರದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ (Fire Accident) 21 ಜನರು ಸಜೀವ ದಹನವಾಗಿರುವ ದಾರುಣ ಘಟನೆ ನಡೆದಿದೆ. ಮೃತರ ಪೈಕಿ 18 ಜನರು ವಿದೇಶಿ ಪ್ರಜೆಗಳಾಗಿದ್ದು, ಈ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಳ್ಳುತ್ತಿದ್ದಂತೆ ಹೋಟೆಲ್ ಮಾಲೀಕ ತಲೆಮರೆಸಿಕೊಂಡಿದ್ದು, ಆತನಿಗಾಗಿ ಲುಕೌಟ್ ನೋಟಿಸ್ ಹೊರಡಿಸಲಾಗಿದೆ.

ದಕ್ಷಿಣ ದೆಹಲಿಯ ಮಾಳವೀಯ ನಗರದ ಹೋಟೆಲ್ ಕಟ್ಟಡವೊಂದರಲ್ಲಿ ಈ ದುರಂತ ಸಂಭವಿಸಿದೆ. ಮೃತಪಟ್ಟ 21 ಜನರಲ್ಲಿ ಹೆಚ್ಚಿನವರು ಪ್ರವಾಸಿಗರು ಮತ್ತು ವಿದೇಶಿ ಪ್ರಜೆಗಳಾಗಿದ್ದಾರೆ. ಸಾವನ್ನಪ್ಪಿದ 18 ವಿದೇಶಿಯರು ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಆಫ್ರಿಕಾ ಖಂಡದ ವಿವಿಧ ದೇಶಗಳಿಗೆ ಸೇರಿದವರಾಗಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಉಳಿದ ಮೂವರು ಮೃತರು ಭಾರತೀಯ ಪ್ರಜೆಗಳಾಗಿದ್ದು, ಹೋಟೆಲ್‌ನ ಸಿಬ್ಬಂದಿಯಾಗಿದ್ದರು.

ಈ ದುರಂತದ ಬೆನ್ನಲ್ಲೇ ಮಾಳವೀಯ ನಗರದ ಪೊಲೀಸರು ಹೋಟೆಲ್‌ನ ಸುರಕ್ಷತಾ ಲೋಪಗಳ ವಿರುದ್ಧ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಟ್ಟಡದಲ್ಲಿ ಸೂಕ್ತ ಅಗ್ನಿಶಾಮಕ ಮುನ್ನೆಚ್ಚರಿಕಾ ಕ್ರಮಗಳು ಹಾಗೂ ತುರ್ತು ನಿರ್ಗಮನದ ವ್ಯವಸ್ಥೆ ಇರಲಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಎಫ್‌ಐಆರ್ ದಾಖಲಾಗುತ್ತಿದ್ದಂತೆ ಹೋಟೆಲ್ ಮಾಲೀಕ ಪರಾರಿಯಾಗಿದ್ದಾನೆ. ಆತ ದೇಶ ಬಿಟ್ಟು ಓಡಿಹೋಗದಂತೆ ತಡೆಯಲು ದೆಹಲಿ ಪೊಲೀಸರು ಎಲ್ಲಾ ವಿಮಾನ ನಿಲ್ದಾಣಗಳು ಮತ್ತು ಗಡಿ ತನಿಖಾ ಚೌಕಿಗಳಿಗೆ ‘ಲುಕೌಟ್ ನೋಟಿಸ್’ ಜಾರಿ ಮಾಡಿದ್ದಾರೆ.

ಇದನ್ನೂ ಓದಿ: ಮಾಜಿ ಎಂಎಲ್ಸಿಯನ್ನೇ ಅಪಹರಿಸಿ 2 ಕೋಟಿ ಹಣಕ್ಕೆ ಡಿಮ್ಯಾಂಡ್​​: ದುಷ್ಟರಿಂದ ದಯಾನಂದರೆಡ್ಡಿ ಬಚಾವ್​​ ಆಗಿದ್ದೇ ರೋಚಕ!

ಅಗ್ನಿಶಾಮಕ ದಳದ ಹಲವು ವಾಹನಗಳು ಸ್ಥಳಕ್ಕೆ ಧಾವಿಸಿ ಹರಸಾಹಸ ಪಟ್ಟು ಬೆಂಕಿಯನ್ನು ಹತೋಟಿಗೆ ತಂದಿವೆ. ಗಾಯಗೊಂಡ ಹಲವರನ್ನು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಮೃತಪಟ್ಟವರಲ್ಲಿ ವಿದೇಶಿಗರೇ ಹೆಚ್ಚಾಗಿರುವುದರಿಂದ, ದೆಹಲಿ ಪೊಲೀಸರು ಮತ್ತು ವಿದೇಶಾಂಗ ಸಚಿವಾಲಯವು ಸಂಬಂಧಪಟ್ಟ ದೇಶಗಳ ರಾಯಭಾರ ಕಚೇರಿಗಳಿಗೆ ಮಾಹಿತಿ ರವಾನಿಸಿದೆ. ಮೃತದೇಹಗಳನ್ನು ಗುರುತಿಸುವ ಮತ್ತು ಸ್ವದೇಶಕ್ಕೆ ಕಳುಹಿಸುವ ಪ್ರಕ್ರಿಯೆ ಆರಂಭವಾಗಿದೆ.

ಇದನ್ನೂ ಓದಿ: Delhi Tragedy: ದೆಹಲಿಯ ಹೋಟೆಲ್​ನಲ್ಲಿ ಅಗ್ನಿ ಅವಘಡ, 20 ಮಂದಿ ಸಾವು, ಜೀವ ಉಳಿಸಿಕೊಳ್ಳಲು ಕಟ್ಟಡದಿಂದ ಹಾರಿದ ಜನ

ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು, ಈ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆಗೆ ದೆಹಲಿ ಸರ್ಕಾರ ಆದೇಶಿಸಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ಈ ಪ್ರಕರಣದಲ್ಲಿ ಆರೋಪಿ ಮಾಲೀಕನ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಸಿದ್ದರಾಮಯ್ಯ ಅವಧಿಯ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್

ಬೆಂಗಳೂರು, ಜೂನ್​ 03: ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇಂದಿನಿಂದ ರಾಜ್ಯದಲ್ಲಿ ಡಿಕೆ ಶಿವಕುಮಾರ್​ ದರ್ಬಾರ್ ಶುರುವಾಗಿದೆ. ಇತ್ತ ಸಿಎಂ ಆರ್ಥಿಕ ಸಲಹೆಗಾರರಾಗಿ ನಿವೃತ್ತ ಐಎಎಸ್ ಅಧಿಕಾರಿ ಎಲ್.ಕೆ.ಅತೀಕ್​​ರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಅಧ್ಯಕ್ಷರಾಗಿರುವ ಅತೀಕ್​, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಸಮಾನ ವೇತನ ಸೇರಿದಂತೆ ಇತರೆ ಸೌಲಭ್ಯಗಳನ್ನು ಪಡೆಯಲಿದ್ದಾರೆ.

ಸಿಎಂ ಎಸಿಎಸ್, ಕಾರ್ಯದರ್ಶಿಯಾಗಿ ತುಷಾರ್ ಗಿರಿನಾಥ್ ಮತ್ತು ರಾಜೇಂದ್ರ ಚೋಳನ್ ನೇಮಕ

ಇನ್ನು ಸಿಎಂ ಎಸಿಎಸ್ ಆಗಿ ಐಎಎಸ್​ ಅಧಿಕಾರಿ ತುಷಾರ್ ಗಿರಿನಾಥ್​​ರನ್ನು ನೇಮಕ ಮಾಡಲಾಗಿದ್ದು, ನಗರಾಭಿವೃದ್ಧಿ ಇಲಾಖೆ ಎಸಿಎಸ್ ಹುದ್ದೆ ಹೆಚ್ಚುವರಿ ಹೊಣೆ ನೀಡಲಾಗಿದೆ. ಅದೇ ರೀತಿಯಾಗಿ ಸಿಎಂ ಕಾರ್ಯದರ್ಶಿಯಾಗಿ ಐಎಎಸ್​ ಅಧಿಕಾರಿ ರಾಜೇಂದ್ರ ಚೋಳನ್​ರನ್ನು ನೇಮಕ ಮಾಡಲಾಗಿದ್ದು, ಕೆಪಿಸಿಎಲ್ ಎಂಡಿ ಹುದ್ದೆ ಹೆಚ್ಚುವರಿ ಹೊಣೆ ವಹಿಸಲಾಗಿದೆ. ಸಿಎಂ ಸಚಿವಾಲಯ, ಸಲಹೆಗಾರರ ಆಪ್ತ ಶಾಖೆ ಹಾಗೂ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಕಚೇರಿಯಲ್ಲಿ ಒಪ್ಪಂದ, ಸ್ಥಳ ನಿಯುಕ್ತಿ ಮತ್ತು ಗುತ್ತಿಗೆ ಆಧಾರದಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಕರ್ನಾಟಕ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ, ಬಿಜೆಪಿ ವಿರುದ್ಧ ಒಬಿಸಿ ದಾಳ – Kannada News

ಬೆಂಗಳೂರು, (ಜೂನ್ 03): ಕರ್ನಾಟಕದ ಏಳು ಸ್ಥಾನಗಳಿಗೆ ನಡೆಯುವ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. ಕಾಂಗ್ರೆಸ್ ತನ್ನ ಪಾಲಿನ ನಾಲ್ಕು ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದೆ. ಬಿ.ಕೆ.ಹರಿಪ್ರಸಾದ್, ಪಿ.ವಿ.ಮೋಹನ್, ಶಿವಣ್ಣ ಮಳವಳ್ಳಿ ಹಾಗೂ ತಿಪ್ಪಣ್ಣಪ್ಪ ಕಮಕನೂರು ಹೆಸರುಗಳು ಎಐಸಿಸಿ ಪ್ರಕಟಿಸಿದೆ. ಈ ಮೂಲಕ ಬಿ.ಕೆ.ಹರಿಪ್ರಸಾದ್ ಹಾಗೂ ತಿಪ್ಪಣ್ಣಪ್ಪ ಕಮಕನೂರು ಅವರನ್ನು ಮತ್ತೊಂದು ಅವಧಿಗೆ ಮುಂದುವರೆಸಿದ್ದು, ಇನ್ನುಳಿದ ಎರಡು ಸ್ಥಾನಗಳಿಗೆ ಹೊಸ ಮುಖಕ್ಕೆ ಮಣೆ ಹಾಕಲಾಗಿದೆ. ಇನ್ನು ನಾಲ್ಕು ಸ್ಥಾನಕ್ಕೂ ಒಬಿಸಿ ಸಮುದಾಯದವರಿಗೆ ಮಣೆ ಹಾಕಿರುವುದು ಅಚ್ಚರಿಕೆ ಕಾರಣವಾಗಿದೆ.

Source link

Chanakya Niti: ಎಲ್ಲರೂ ನಿಮ್ಮನ್ನು ಗೌರವಿಸಬೇಕೆಂದರೆ ತಕ್ಷಣವೇ ಈ ಅಭ್ಯಾಸಗಳನ್ನು ತ್ಯಜಿಸಿ – Kannada News

ಆಚಾರ್ಯ ಚಾಣಕ್ಯರು (Acharya Chanakya) ತಮ್ಮ ನೀತಿಶಾಸ್ತ್ರದಲ್ಲಿ ರಾಜಕೀಯ ವಿಷಯಗಳು ಮಾತ್ರವಲ್ಲ ಜೀವನಕ್ಕೆ ಸಂಬಂಧಿಸಿದ ಬಹಳಷ್ಟು ಸಂಗತಿಗಳನ್ನು ವಿವರಿಸಿದ್ದಾರೆ. ಹೌದು ಯಶಸ್ಸು, ಶ್ರೀಮಂತಿಕೆ, ಪತಿ ಪತ್ನಿಯರ ಸಂಬಂಧ, ಸ್ನೇಹ, ಕುಟುಂಬ ಹೀಗೆ ಹಲವಾರು ಸಂಗತಿಗಳ ಬಗ್ಗೆ ಹೇಳಿದ್ದಾರೆ. ಇವರು ನೀಡಿರುವ ಈ ಸಲಹೆಗಳನ್ನು ಪಾಲಿಸುವ ಮೂಲಕ ಒಬ್ಬ ವ್ಯಕ್ತಿ ಯಶಸ್ವಿ ಜೀವನವನ್ನು ಸಾಧಿಸಲು ಸಾಧ್ಯ. ಅದೇ ರೀತಿ ಆಚಾರ್ಯ ಚಾಣಕ್ಯರು ಹೇಳಿರುವ ಈ ಒಂದಷ್ಟು ಸಲಹೆಗಳನ್ನು ಪಾಲಿಸುವ ಮೂಲಕ ಗೌರವನ್ನು ಗಳಿಸಲು ಕೂಡ ಸಾಧ್ಯ. ನಮ್ಮನ್ನು ಎಲ್ಲರೂ ಇಷ್ಟಪಡಬೇಕು, ನಮ್ಮನ್ನು ಎಲ್ಲರೂ ಗೌರವಿಸಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಈ ಗೌರವ ನಿಮಗೆ ಸಿಗಬೇಕೆಂದರೆ ಈ ಕೆಲವು ಅಭ್ಯಾಸಗಳನ್ನು ತ್ಯಜಿಸಿ.

ಗೌರವ ಗಳಿಸಲು ಏನು ಮಾಡಬೇಕು?

ದುರಾಸೆಯನ್ನು ಬಿಟ್ಟುಬಿಡಿ: ಎಂದಿಗೂ ದುರಾಸೆಯಿಂದ ಇರಬಾರದು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ದುರಾಸೆಯು ನಿಮ್ಮನ್ನು ಇತರರಿಂದ ದೂರವಿಡುತ್ತದೆ ಮತ್ತು ನಿಮ್ಮ ಯಶಸ್ಸಿಗೆ ಅಡ್ಡಿಯಾಗುತ್ತದೆ. ದುರಾಸೆಯ ವ್ಯಕ್ತಿಯನ್ನು ಸಮಾಜದಲ್ಲಿ ಅಥವಾ ಕುಟುಂಬದಲ್ಲಿ ಯಾರೂ ಇಷ್ಟಪಡುವುದಿಲ್ಲ, ಅಂತಹವರಿಗೆ ಯಾವ ಗೌರವವವೂ ಇರುವುದಿಲ್ಲ, ಆದ್ದರಿಂದ ನೀವು ದುರಾಸೆಯನ್ನು ಬಿಟ್ಟುಬಿಡಬೇಕು.

ಇತರರನ್ನು ಟೀಕಿಸಬೇಡಿ: ಚಾಣಕ್ಯ ನೀತಿಯ ಪ್ರಕಾರ, ಇತರರನ್ನು ಟೀಕಿಸುವುದು ಒಳ್ಳೆಯ ಗುಣವಲ್ಲ. ಇತರರನ್ನು ಟೀಕಿಸುವ ಜನರಿಗೆ  ಸಮಾಜದಲ್ಲಿ ಕಿಂಚಿತ್ತು ಗೌರವವೂ ಇರುವುದಿಲ್ಲ, ಅಂತಹ ವ್ಯಕ್ತಿಗಳನ್ನು ಯಾರು ಹತ್ತಿರಕ್ಕೂ ಸೇರಿಸಲು ಇಷ್ಟಪಡುವುದಿಲ್ಲ. ಆದ್ದರಿಂದ, ನೀವು ಯಾರನ್ನೂ ಎಂದಿಗೂ ಟೀಕಿಸಬಾರದು. ಜೊತೆಗೆ ಟೀಕಾಕಾರರಿಂದಲೂ ದೂರವಿರಬೇಕು.

ಇದನ್ನೂ ಓದಿ: ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಚಾಣಕ್ಯರ ಮಾತುಗಳನ್ನು ಪಾಲಿಸಿ

ಅಹಂಕಾರ ತ್ಯಜಿಸಿ: ಮನುಷ್ಯನಾದವನಿಗೆ ಅಹಂಕಾರ ಇರಬಾರದು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಅಹಂಕಾರಪಡುವ ಜನರನ್ನು ಯಾರು ಇಷ್ಟಪಡುವುದಿಲ್ಲ, ಅವರಿಗೆ ಯಾವ ಗೌರವವೂ ಇರುವುದಿಲ್ಲ. ಈ ಅಹಂಕಾರ ಗೌರವವನ್ನು ಹಾಳು ಮಾಡುವುದಲ್ಲದೆ, ನಿಮ್ಮ ಯಶಸ್ಸಿಗೂ ಅಡ್ಡಿಯಾಗುತ್ತದೆ. ಆದ್ದರಿಂದ ಎಂದಿಗೂ ಅಹಂಕಾರ ಪಡಬೇಡಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link