ಪೊಲೀಸ್ ಪಬ್ಲಿಕ್ ಪ್ರೆಸ್ ಆರ್ಮಿ ಹೆಸರಿಡಲು ಅಧಿಕಾರ ಕೊಟ್ಟವರ್ಯಾರು? ರೌಡಿಶೀಟರ್ ಅರ್ಜಿ ವಜಾ
ಬೆಂಗಳೂರು, ಏಪ್ರಿಲ್ 01: ರೌಡಿಶೀಟರ್‌ನಿಂದ ಪಬ್ಲಿಕ್ ಪ್ರೆಸ್ ಆರ್ಮಿ ಹೆಸರಿನ ಟ್ರಸ್ಟ್‌ನಡಿ ನೈತಿಕ ಪೊಲೀಸ್‌ಗಿರಿ ಆರೋಪದ ಮೇಲೆ ದಾಖಲಾಗಿದ್ದ ಪ್ರಕರಣ ರದ್ದುಪಡಿಸಲು ನಕಾರ ಎತ್ತಿರುವ ಕರ್ನಾಟಕ ಹೈಕೋರ್ಟ್ (High Court), ತಡೆ ನೀಡಲು ಸಾಧ್ಯವಿಲ್ಲವೆಂದು ಅರ್ಜಿಯನ್ನು ವಜಾಗೊಳಿಸಿ ಬುಧವಾರ ಆದೇಶ ಹೊರಡಿಸಿದೆ. ತುಮಕೂರಿನ ತಿಲಕ್‌ಪಾರ್ಕ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿತ್ತು. ಪ್ರಕರಣ ರದ್ದುಪಡಿಸುವಂತೆ ಕೋರಿ ಮೊಹಮ್ಮದ್ ಖಲಂದರ್, ಗೌಸ್ ಪಾಷಾ ಮತ್ತು ಆಶಿಯಾ ಸಲ್ಲಿಸಿದ್ದ ಅರ್ಜಿಯನ್ನು ಇಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠ ವಿಚಾರಣೆ ಮಾಡಿ ರೌಡಿಶೀಟರ್…