All posts by nagaraj11081993

ಬಸ್ ಶೆಲ್ಟರ್ ನಿರ್ಮಾಣಕ್ಕೆ ಜೆಡಿಎಸ್ ಸೇರಿ ಇತರರ ವಿರೋಧ: ಗುದ್ದಲಿ ಪೂಜೆ ಮಾಡದೆ ತೆರಳಿದ ಕಾಂಗ್ರೆಸ್​ ಶಾಸಕ

ಬಸ್ ಶೆಲ್ಟರ್ ನಿರ್ಮಾಣಕ್ಕೆ ಜೆಡಿಎಸ್ ಸೇರಿ ಇತರರ ವಿರೋಧ: ಗುದ್ದಲಿ ಪೂಜೆ ಮಾಡದೆ ತೆರಳಿದ ಕಾಂಗ್ರೆಸ್​ ಶಾಸಕ

ರಾಮನಗರ, ಮಾರ್ಚ್​ 28: ರೇಷ್ಮೆನಗರಿ ರಾಮನಗರ, ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾ ಕೇಂದ್ರ. ಸಿಲಿಕಾನ್ ಸಿಟಿಯಿಂದ ಕೂಗಳತೆ ದೂರದಲ್ಲಿದ್ದರು, ಜಿಲ್ಲಾ ಕೇಂದ್ರದಲ್ಲಿ ಒಂದು ಬಸ್ ಶೆಲ್ಟರ್ (bus shelter) ಇಲ್ಲ. ಹೀಗಾಗಿ ಪ್ರಾಧಿಕಾರದ ವತಿಯಿಂದ ಸುಸಜ್ಜಿತ ಬಸ್ ಶೆಲ್ಟರ್ ಕಾಮಗಾರಿಗೆ ಗುದ್ದಲಿ ಪೂಜೆ ಹಮ್ಮಿಕೊಳ್ಳಲಾಗಿತ್ತು. ಗುದ್ದಲಿಪೂಜೆ ನೆರವೇರಿಸಲು ರಾಮನಗರ ಕ್ಷೇತ್ರದ ಶಾಸಕ ಇಕ್ಬಾಲ್ ಹುಸೇನ್ (MLA Iqbal Hussain)​ ಕೂಡ ಆಗಮಿಸಿದ್ದರು. ಆದರೆ‌ ತಂಗುದಾಣ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು‌. ಹೀಗಾಗಿ ಗುದ್ದಲಿಪೂಜೆ ನೆರವೇರಿಸದೇ ಶಾಸಕರು ವಾಪಾಸ್ ತೆರಳಿದ್ದಾರೆ.

ವಿವಾದಕ್ಕೆ ಕಾರಣವಾದ ನೂತನ ಬಸ್ ಶೆಲ್ಟರ್ ನಿರ್ಮಾಣ 

ಹೌದು. ನೂತನ ಬಸ್ ಶೆಲ್ಟರ್ ನಿರ್ಮಾಣ ವಿಚಾರ ರಾಮನಗರದಲ್ಲಿ ವಿವಾದಕ್ಕೆ ಕಾರಣವಾಗಿದೆ. ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲು ಶಾಸಕ ಇಕ್ಬಾಲ್ ಹುಸೇನ್​ ಆಗಮಿಸಿದ್ದರು. ಸ್ಥಳೀಯರ ವಿರೋಧದ ಹಿನ್ನೆಲೆ ಗುದ್ದಲಿ ಪೂಜೆ ನಡೆಸದೇ ವಾಪಾಸ್ ತೆರಳಿದ ಘಟನೆ ನಡೆದಿದೆ. ಅಂದಹಾಗೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದ ಐಜೂರು ವೃತ್ತದ ಬಳಿ, ರಾಮನಗರ ಪ್ರಾಧಿಕಾರದ ವತಿಯಿಂದ ಬಸ್ ಶೆಲ್ಟರ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು.

ಇದನ್ನೂ ಓದಿ: ರಾಜ್ಯ ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ

ಬೆಂಗಳೂರಿನಿಂದ ಮೈಸೂರು ಕಡೆ ಪ್ರಯಾಣಿಸುವ ಜನರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸುಮಾರು 20 ಲಕ್ಷ ರೂ ವೆಚ್ಚದಲ್ಲಿ ಶೆಲ್ಟರ್ ನಿರ್ಮಾಣಕ್ಕೆ ಮುಂದಾಗಿದ್ದರು. ಇನ್ನು ಪ್ರತಿನಿತ್ಯ ಬಸ್ ಶೆಲ್ಟರ್ ಇಲ್ಲದೆ ಬಿಸಿಲಿನಲ್ಲಿ ನಿಲ್ಲಬೇಕಾಗಿರುವ ಪ್ರಯಾಣಿಕರಿಗೆ ಈ ಯೋಜನೆ ಸಹಾಯಕವಾಗಬೇಕಿತ್ತು. ಹೀಗಾಗಿ ಗುದ್ದಲಿ ಪೂಜೆ ಕಾರ್ಯಕ್ರಮಕ್ಕೂ ಸಕಲ ಸಿದ್ಧತೆ ಮಾಡಲಾಗಿತ್ತು. ಆದರೆ ಕಾಂಪ್ಲೆಕ್ಸ್ ಮಾಲೀಕರು ಹಾಗೂ ಜೆಡಿಎಸ್ ಮುಖಂಡರು, ಶೆಲ್ಟರ್ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ತಮ್ಮ ಅಂಗಡಿಗಳ ಮುಂದೆ ಶೆಲ್ಟರ್ ನಿರ್ಮಾಣವಾದರೆ ವ್ಯಾಪಾರಕ್ಕೆ ತೊಂದರೆಯಾಗಲಿದೆ ಎಂದು ಆಕ್ಷೇಪಿಸಿದರು. ಈ ಹಿನ್ನೆಲೆ ಗುದ್ದಲಿ ಪೂಜೆಗೆ ಆಗಮಿಸಿದ್ದ ಶಾಸಕ ಇಕ್ಬಾಲ್ ಹುಸೇನ್ ಗುದ್ದಲಿ ಪೂಜೆ ನೆರವೇರಿಸದೇ ವಾಪಾಸ್ ತೆರಳಿದ್ದಾರೆ.

ವ್ಯಾಪಾರಕ್ಕೆ ತೊಂದರೆ

ಅಂದಹಾಗೆ ನೂತನ ಬಸ್ ಶೆಲ್ಟರ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡುತ್ತಾರೆ ಎಂಬ ವಿಚಾರ ತಿಳಿದು ಕಾಂಪ್ಲೆಕ್ಸ್ ಮಾಲೀಕರು ಮೊದಲೇ ಜಮಾವಣೆಗೊಂಡಿದ್ದರು. ಈ ವೇಳೆ ಗುದ್ದಲಿ ಪೂಜೆಗೆ ಆಗಮಿಸಿದ ಶಾಸಕ ಇಕ್ಬಾಲ್ ಹುಸೇನ್ ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು. ಪರಿಸ್ಥಿತಿ ತೀವ್ರವಾಗುತ್ತಿದ್ದಂತೆ ಗುದ್ದಲಿ ಪೂಜೆ ನಡೆಸದೇ ಶಾಸಕ ಸ್ಥಳದಿಂದ ವಾಪಾಸ್ ತೆರಳಿದರು. ಇನ್ನು ಈ ಬಗ್ಗೆ ಮಾತನಾಡಿದ ಕಾಂಪ್ಲೆಕ್ಸ್ ಮಾಲೀಕ ಜಯರಾಮ್, ನಮ್ಮ ಕಾಂಪ್ಲೆಕ್ಸ್ ಮುಂಭಾಗ ನಿರ್ಮಾಣ‌ ಮಾಡಿದರೆ, ನಮ್ಮ ವ್ಯಾಪಾರಕ್ಕೆ ತೊಂದರೆ ಆಗಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ತಂಗುದಾಣ ನಿರ್ಮಾಣಕ್ಕೆ ಅವಕಾಶ ಕೊಡಲ್ಲ‌ ಎಂದಿದ್ದಾರೆ.

ಇದನ್ನೂ ಓದಿ: ರೆಸಾರ್ಟ್ ರಾಜಕೀಯ ಶುರು: ಬಿಡದಿಯ ವಂಡರ್ ಲಾ ರೆಸಾರ್ಟ್​ನತ್ತ 14 ಕಾಂಗ್ರೆಸ್ ಶಾಸಕರು!

ಒಟ್ಟಾರೆ ರಾಮನಗರದ ಐಜೂರು ವೃತ್ತದ ಬಳಿ ಬಸ್ ಶೆಲ್ಟರ್ ನಿರ್ಮಾಣ ವಿಚಾರದಲ್ಲಿ ಸ್ಥಳೀಯರ ವಿರೋಧ ವ್ಯಕ್ತವಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಯೋಜನೆ ರೂಪಿಸಿದ್ದರೂ, ವ್ಯಾಪಾರಿಗಳಿಗೆ ಉಂಟಾಗುವ ಸಮಸ್ಯೆಗಳನ್ನು ಉಲ್ಲೇಖಿಸಿ ವಿರೋಧ ವ್ಯಕ್ತವಾಗಿದೆ. ಇದೀಗ ಅಧಿಕಾರಿಗಳು ಮುಂದಿನ ಕ್ರಮ ಏನು ಕೈಗೊಳ್ಳುತ್ತಾರೆ ಎಂಬುದು ಕಾದು ನೋಡಬೇಕಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಒಂದಲ್ಲ ಎರಡು ಐಪಿಎಲ್ ಟಿಕೆಟ್ ಬೇಕು ಎಂದ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ನೀಡಿದ ಉತ್ತರವೇನು?

ಬೆಂಗಳೂರು, ಮಾ.28: ಐಪಿಎಲ್ ಕ್ರೇಜ್ ಈಗ ಕೇವಲ ಮೈದಾನಕ್ಕೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ವಿಧಾನಸಭೆಯಲ್ಲೂ ಪ್ರತಿಧ್ವನಿಸಿದೆ. ಐಪಿಎಲ್ ಪಂದ್ಯಗಳ ವೀಕ್ಷಣೆಗೆ ಶಾಸಕರಿಗೆ ಟಿಕೆಟ್ ನೀಡುವ ವಿಚಾರ ಸದನದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಸುರೇಶ್ ಕುಮಾರ್ ಅವರಂತಹ ಕೆಲವು ಹಿರಿಯ ಶಾಸಕರು ನಮಗೆ ಟಿಕೆಟ್ ಬೇಡ ಎಂದು ಅಸಮಾಧಾನ ವ್ಯಕ್ತಪಡಿಸಿದರೆ, ಇನ್ನು ಕೆಲವರು ಟಿಕೆಟ್‌ಗಾಗಿ ಪಟ್ಟು ಹಿಡಿದಿದ್ದರು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಐಪಿಎಲ್ ಪಂದ್ಯಗಳಿಗಾಗಿ ಶಾಸಕರು ಮತ್ತು ಎಂಎಲ್‌ಸಿಗಳಿಗೆ ನೀಡಲಾಗುತ್ತಿದ್ದ ಟಿಕೆಟ್ ಸಂಖ್ಯೆಯನ್ನು ಹೆಚ್ಚಿಸುವಂತೆ ಕೆಲವರು ಬೇಡಿಕೆ ಇಟ್ಟಿದ್ದರು. ಈ ಹಿಂದೆ ತಲಾ ಒಂದು ಟಿಕೆಟ್ ನೀಡಲಾಗುತ್ತಿತ್ತು, ಈಗ ಎರಡು ಟಿಕೆಟ್ ನೀಡಬೇಕು ಎಂಬ ಚರ್ಚೆ ನಡೆದಿದೆ. ಶಾಸಕರಿಗೆ ಟಿಕೆಟ್ ನೀಡುವುದು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. ಈ ಬಾರಿಯೂ ಅದನ್ನು ಮುಂದುವರಿಸಲಾಗುತ್ತಿದೆ ಎಂದು ಸಿದ್ದರಾಮಯ್ಯ ತಿಳಿಸಿದರು. ತಮಗೂ ಕ್ರಿಕೆಟ್‌ನಲ್ಲಿ ಆಸಕ್ತಿ ಇದೆ, ಆದರೆ ಚುನಾವಣೆ ಮತ್ತು ಕೆಲಸದ ಒತ್ತಡದ ನಡುವೆ ಸಮಯ ಸಿಕ್ಕರೆ ಮಾತ್ರ ಮುಂದಿನ ಪಂದ್ಯಗಳನ್ನು ವೀಕ್ಷಿಸುವುದಾಗಿ ಅವರು ಹೇಳಿದರು. ಏಪ್ರಿಲ್ 9ರವರೆಗೂ ಬಿಡುವಿಲ್ಲದ ಕಾರಣ ಸದ್ಯಕ್ಕೆ ಮೈದಾನಕ್ಕೆ ಹೋಗಲು ಸಾಧ್ಯವಿಲ್ಲ ಎಂದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇರಾನ್ ಯುದ್ಧದ ನಡುವೆ ಸೌದಿ ಕ್ರೌನ್ ಪ್ರಿನ್ಸ್ ಜೊತೆ ಪ್ರಧಾನಿ ಮೋದಿ ಮಾತುಕತೆ

ನವದೆಹಲಿ, ಮಾರ್ಚ್ 28: ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮತ್ತು ಪ್ರಧಾನಿ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ಮಾತನಾಡಿದ್ದಾರೆ. ಇಬ್ಬರೂ ನಾಯಕರು ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷ ಮತ್ತು ಪ್ರಾದೇಶಿಕ ಸ್ಥಿರತೆ ಮತ್ತು ಕಡಲ ಭದ್ರತೆಗೆ ಆ ಯುದ್ಧದ ಪರಿಣಾಮಗಳ ಬಗ್ಗೆ ಚರ್ಚಿಸಿದ್ದಾರೆ. ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ ಪ್ರಧಾನಿ ಮೋದಿ, ಪಶ್ಚಿಮ ಏಷ್ಯಾ ಪ್ರದೇಶದಲ್ಲಿನ ಪ್ರಮುಖ ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವುದಾಗಿ ತಿಳಿಸಿದ್ದಾರೆ.

“ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮತ್ತು ಪ್ರಧಾನಿ ಎಚ್‌ಆರ್‌ಎಚ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ಮಾತನಾಡಿದೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಬಗ್ಗೆ ಚರ್ಚಿಸಿದ್ದೇನೆ. ಪ್ರಾದೇಶಿಕ ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿಗಳನ್ನು ಭಾರತ ಖಂಡಿಸುತ್ತದೆ ಎಂದು ನಾನು ಪುನರುಚ್ಚರಿಸಿದ್ದೇನೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಕೆಲಸ ಮಾಡಿ ಮುಗಿಸುವ ಇಬ್ಬರು ವ್ಯಕ್ತಿಗಳೆಂದರೆ ನಾನು ಮತ್ತು ಮೋದಿ; ಟ್ರಂಪ್ ಅಚ್ಚರಿಯ ಮೆಚ್ಚುಗೆ

“ಹಡಗು ಮಾರ್ಗಗಳು ಮತ್ತು ವ್ಯಾಪಾರ ಮಾರ್ಗಗಳ ಸುರಕ್ಷತೆಯ ಬಗ್ಗೆ ಹೆಚ್ಚುತ್ತಿರುವ ಕಳವಳಗಳ ನಡುವೆ ಈ ಪ್ರದೇಶದಲ್ಲಿ ನಿರಂತರ ಸಮುದ್ರ ಸಂಚಾರದ ಅವಕಾಶದ ಮಹತ್ವವನ್ನು ಎರಡೂ ಕಡೆಯವರು ಒಪ್ಪಿಕೊಂಡಿದ್ದೇವೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇದೇ ವೇಳೆ, ಸೌದಿ ಅರೇಬಿಯಾದಲ್ಲಿ ವಾಸಿಸುವ ಭಾರತೀಯ ಸಮುದಾಯಕ್ಕೆ ನೀಡಿದ ಬೆಂಬಲಕ್ಕಾಗಿ ಪ್ರಧಾನಿ ಮೋದಿ ಸೌದಿ ಕ್ರೌನ್ ಪ್ರಿನ್ಸ್‌ಗೆ ಧನ್ಯವಾದ ಅರ್ಪಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RCB vs SRH: W,W,W.. ಹೇಜಲ್​ವುಡ್ ಸ್ಥಾನ ತುಂಬಿದ ಜಾಕೋಬ್ ಡಫಿ

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 2026 ರ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್​ರೈಸರ್ಸ್​ ಹೈದರಾಬಾದ್ ತಂಡಗಳು ಕಣಕ್ಕಿಳಿದಿವೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡುತ್ತಿರುವ ಎಸ್​ಆರ್​ಹೆಚ್ ತಂಡಕ್ಕೆ ಆರಂಭಿಕ ಆಘಾತ ಎದುರಾಗಿದೆ. ಕೇವಲ 29 ರನ್​ಗಳಿಗೆ ತಂಡದ 3 ಪ್ರಮುಖ ವಿಕೆಟ್​ಗಳು ಪತನವಾಗಿವೆ. ಸನ್​ರೈಸರ್ಸ್​ಗೆ ಈ ಆಘಾತ ನೀಡಿದ್ದು, ಆರ್​ಸಿಬಿ ಪರ ಐಪಿಎಲ್​ಗೆ ಪಾದಾರ್ಪಣೆ ಮಾಡಿರುವ ಕಿವೀಸ್ ವೇಗಿ ಜಾಕೋಬ್ ಡಫಿ

ವಾಸ್ತವವಾಗಿ ಆಸ್ಟ್ರೇಲಿಯಾದ ಅನುಭವಿ ವೇಗದ ಬೌಲರ್ ಜೋಶ್ ಹೇಜಲ್‌ವುಡ್ ಇಂಜುರಿ ಕಾರಣ ಐಪಿಎಲ್​ನ ಆರಂಭಿಕ ಪಂದ್ಯಗಳನ್ನು ಆಡುತಿಲ್ಲ. ಹೀಗಾಗಿ ಅವರ ಬದಲಿಗೆ ಜಾಕೋಬ್ ಡಫಿಗೆ ತಂಡದಲ್ಲಿ ಆಡುವ ಅವಕಾಶ ನೀಡಲಾಯಿತು. ಪಂದ್ಯ ಆರಂಭಕ್ಕೂ ಮುನ್ನ ಡಫಿ, ಹೇಜಲ್‌ವುಡ್ ಸ್ಥಾನ ತುಂಬುತ್ತಾರಾ ಎಂಬ ಪ್ರಶ್ನೆ ಮೂಡಿದ್ದವು. ಆದರೆ ಮೊದಲ ಪಂದ್ಯದಲ್ಲೇ ಡಫಿ, ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

ಆರ್​ಸಿಬಿ ಪರ ಬೌಲಿಂಗ್ ಆರಂಭಿಸಿದ ಡಫಿ, ಮೊದಲ ಓವರ್​ನಲ್ಲಿ 7 ರನ್ ಬಿಟ್ಟುಕೊಟ್ಟರು. ಈ ಓವರ್​ನಲ್ಲಿ ಅಭಿಷೇಕ್ 1 ಭರ್ಜರಿ ಸಿಕ್ಸರ್ ಕೂಡ ಬಾರಿಸಿದರು. ಆ ಬಳಿಕ ಇನ್ನಿಂಗ್ಸ್​ನ ಮೂರನೇ ಓವರ್​ ಬೌಲ್ ಮಾಡಲು ಬಂದ ಡಫಿ, ಓವರ್​ನ ಮೊದಲ ಎಸೆತದಲ್ಲೇ ಅಭಿಷೇಕ್ ಶರ್ಮಾ ವಿಕೆಟ್ ಉರುಳಿಸಿದರು. ನಂತರ ಇದೇ ಓವರ್​ನ ಕೊನೆಯ ಎಸೆತದಲ್ಲಿ ಅಪಾಯಕಾರಿ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ ಅವರನ್ನು ಡಫಿ ಪೆವಿಲಿಯನ್​ಗಟ್ಟಿದರು. ಹೆಡ್ ಕೇವಲ 11 ರನ್ ಗಳಿಸಿ ಔಟಾದರು.

ತಮ್ಮ ಖೋಟಾದ ಮೂರನೇ ಓವರ್​ನಲ್ಲೂ ವಿಕೆಟ್ ಭೇಟೆ ಮುಂದುವರೆಸಿದ ಡಫಿ, ಈ ಬಾರಿ ಎಸ್​ಆರ್​ಹೆಚ್ ಆಲ್​ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರನ್ನು ಬಲಿ ಪಡೆದರು. ರನ್​ಗಳಿಸಲು ಹೆಣಗಾಡುತ್ತಿದ್ದ ನಿತೀಶ್ ಕೇವಲ 1 ರನ್ ಗಳಿಸಿ ಔಟಾದರು. ಈ ಪಂದ್ಯದಲ್ಲಿ 4 ಓವರ್ ಬೌಲ್ ಮಾಡಿದ ಡಫಿ, ಕೇವಲ 22 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದರು. ಈ ಮೂಲಕ ಸನ್​ರೈಸರ್ಸ್​ ತಂಡವನ್ನು ಆರಂಭದಲ್ಲೇ ಕಟ್ಟಿಹಾಕಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭೂಗತ ಲೋಕದಿಂದ ಬೆದರಿಕೆ: ಭಯಾನಕ ಅನುಭವ ಬಿಚ್ಚಿಟ್ಟ ನಟ ವರುಣ್ ಧವನ್

90ರ ದಶಕದಲ್ಲಿ ಬಾಲಿವುಡ್ (Bollywood)​​ ಅನ್ನು ಭೂಗತ ಜಗತ್ತು ಇನ್ನಿಲ್ಲದಂತೆ ಕಾಡಿತ್ತು. ಹಲವಾರು ಸಿನಿಮಾ ನಟ, ನಿರ್ದೇಶಕ, ನಿರ್ಮಾಪಕ, ನಟಿಯರಿಗೆ ಭೂಗತ ಲೋಕದ ದುರುಳರಿಂದ ಬೆದರಿಕೆ ಕರೆಗಳು ಬರುತ್ತಿದ್ದವು. ಟಿ-ಸೀರೀಸ್ ಮಾಲೀಕನ ಕೊಲೆಯನ್ನೂ ಈ ಭೂಗತ ಲೋಕದ ಮಂದಿ ಮಾಡಿದ್ದರು. ಕೆಲವು ನಟರು, ಭಯಗೊಂಡು ಭೂಗತ ಲೋಕದವರ ಪಾರ್ಟಿಗಳಲ್ಲಿ ಸಹ ಕಾಣಿಸಿಕೊಂಡಿದ್ದರು. ಆದರೆ ಕೆಲವರು ಮಾತ್ರ ಧೈರ್ಯವನ್ನು ಅದೆಲ್ಲವನ್ನೂ ಎದುರಿಸಿದ್ದರು. ಇದೀಗ ನಟ ವರುಣ್ ಧವನ್, ತಮ್ಮ ಮನೆಗೆ ಭೂಗತ ಲೋಕದ ಕರೆ ಬಂದಿದ್ದ ಘಟನೆಯನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.

ವರುಣ್ ಧವನ್ ತಂದೆ, ಖ್ಯಾತ ನಿರ್ದೇಶಕ ಡೇವಿಡ್ ಧವನ್ ಅವರಿಗೂ ಭೂಗತ ಲೋಕದ ಇಂತಹ ಕರೆಗಳು ಬರುತ್ತಿದ್ದವಂತೆ. ಈ ಬಗ್ಗೆ ಮಾತನಾಡರುವ ವರುಣ್, ನಮ್ಮ ಮನೆಗೂ ಕರೆಗಳು ಬರುತ್ತಿದ್ದವು, ಆದರೆ ಮನೆಯಲ್ಲಿದ್ದ ಕೆಲಸದ ಸಿಬ್ಬಂದಿಗೆ ಅದು ಅಂಡರ್‌ವರ್ಲ್ಡ್ ಕರೆ ಎಂದು ತಿಳಿದಿರಲಿಲ್ಲ. ಕರೆ ಮಾಡಿದವರ ಜೊತೆ ಸಿಬ್ಬಂದಿ ವಾಗ್ವಾದ ನಡೆಸುತ್ತಿದ್ದರು. ಇದರಿಂದ ನಾವು ತೊಂದರೆಗೆ ಸಿಲುಕಿಕೊಳ್ಳುತ್ತಿದ್ದೇವೆ’ ಎಂದು ಅವರು ಹೇಳಿದ್ದಾರೆ.

ವರುಣ್ ಹೇಳಿರುವಂತೆ, ‘ಒಮ್ಮೆ ಅಂಡರ್ವಲ್ಡ್​​ನವರು ಫೋನ್ ಮಾಡಿದಾಗ ಅವರ ಮನೆಯ ಸಿಬ್ಬಂದಿ ಫೋನ್ ರಿಸೀವ್ ಮಾಡಿ ಕರೆ ಮಾಡಿದ ವ್ಯಕ್ತಿಯ ಜೊತೆಗೆ ಜಗಳ ಆಡಿದ್ದರಂತೆ. ಅಷ್ಟೇ ಅಲ್ಲದೆ, ಅವರಿಗೆ ವರುಣ್ ಧವನ್ ಮನೆಯ ಪೂರ್ಣ ವಿಳಾಸ ನೀಡಿ, ‘ಧೈರ್ಯವಿದ್ದರೆ ಪಕ್ಕದ ಗಾರ್ಡನ್‌ಗೆ ಬಾ, ನಿನಗೆ ಅಲ್ಲೇ ಸರಿಯಾಗಿ ಹೊಡೆಯುತ್ತೇನೆ’ ಎಂದು ಸವಾಲು ಹಾಕಿದ್ದರಂತೆ. ಬಳಿಕ ಚಿತ್ರರಂಗದ ಮತ್ತೊಬ್ಬ ನಟರು ಡೇವಿಡ್ ಧವನ್ ಅವರಿಗೆ ಕರೆ ಮಾಡಿ ಎಚ್ಚರಿಸಿದರು. ಕರೆ ಮಾಡಿದ ವ್ಯಕ್ತಿ ಆಯುಧಗಳೊಂದಿಗೆ ಮನೆಗೆ ಬರುವುದಾಗಿ ಮತ್ತು ನಿಮ್ಮ (ಡೇವಿಡ್ ಧವನ್) ಆಫೀಸ್ ಸಮಯದ ವಿವರಗಳನ್ನು ಕೇಳುತ್ತಿದ್ದಾನೆ ಎಂದು ತಿಳಿಸಿದರಂತೆ. ವಿಷಯದ ಗಂಭೀರತೆ ಅರಿತ ಧವನ್ ಕುಟುಂಬ, ಸುರಕ್ಷತೆಯ ದೃಷ್ಟಿಯಿಂದ ಅಂದು ರಾತ್ರಿಯೇ ತಮ್ಮ ಮನೆ ಬಿಟ್ಟು ಬೇರೆಡೆಗೆ ಹೋಗಿ ಉಳಿದುಕೊಳ್ಳಬೇಕಾಯಿತಂತೆ. ‘ಈಗ ಇದನ್ನು ನೆನೆಸಿಕೊಂಡರೆ ನಗು ಬರಬಹುದು, ಆದರೆ ಆ ಸಮಯದಲ್ಲಿ ಅದು ನಿಜಕ್ಕೂ ಭಯಾನಕವಾಗಿತ್ತು’ ಎಂದು ವರುಣ್ ತಿಳಿಸಿದ್ದಾರೆ.

ವರುಣ್ ಧವನ್ ಇತ್ತೀಚೆಗೆ ‘ಬಾರ್ಡರ್ 2‘ ಚಿತ್ರದಲ್ಲಿ ನಟಿಸಿದ್ದಾರೆ. ಇದು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಯಶಸ್ಸು ಕಂಡಿದೆ. ಸದ್ಯ ಅವರು ತಮ್ಮ ತಂದೆ ಡೇವಿಡ್ ಧವನ್ ನಿರ್ದೇಶನದ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇದರಲ್ಲಿ ಪೂಜಾ ಹೆಗ್ಡೆ ಮತ್ತು ಮೃಣಾಲ್ ಠಾಕೂರ್ ನಾಯಕಿಯರಾಗಿ ನಟಿಸಿದ್ದಾರೆ. ಈ ಚಿತ್ರವು ಜೂನ್ 04 ರಂದು ಬಿಡುಗಡೆ ಆಗಬೇಕಿತ್ತು, ಆದರೆ ಅದೇ ದಿನ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಆಗುತ್ತಿರುವುದರಿಂದ ಬಿಡುಗಡೆ ದಿನಾಂಕ ಮುಂದೂಡಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

2025ನೇ ಸಾಲಿನ ಮುಖ್ಯಮಂತ್ರಿ ಪದಕ ಪ್ರಕಟ: ಪ್ರಜ್ವಲ್ ರೇವಣ್ಣ ಕೇಸ್ ತನಿಖೆ ನಡೆಸಿದ್ದ ಸುಮನ್ ಪನ್ನೇಕರ್‌ ಸೇರಿ 153 ಪೊಲೀಸರು ಆಯ್ಕೆ

ಬೆಂಗಳೂರು, ಮಾ.28: ಪೊಲೀಸ್ ಇಲಾಖೆಯಲ್ಲಿ ಅಸಾಧಾರಣ ಸೇವೆ ಮತ್ತು ದಕ್ಷತೆ ಮೆರೆದ ಒಟ್ಟು 153 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ 2025ನೇ ಸಾಲಿನ ಪ್ರತಿಷ್ಠಿತ ‘ಮುಖ್ಯಮಂತ್ರಿ ಪದಕ’ (Chief Minister’s Medal) ಪ್ರಕಟವಾಗಿದೆ. ಏಪ್ರಿಲ್ 2ರಂದು ಬೆಂಗಳೂರಿನಲ್ಲಿ ನಡೆಯಲಿರುವ ಭವ್ಯ ಸಮಾರಂಭದಲ್ಲಿ ಈ ಪದಕಗಳನ್ನು ಪ್ರದಾನ ಮಾಡಲಾಗುವುದು. ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸಿದ ಎಸ್‌ಐಟಿ (SIT) ತಂಡದಲ್ಲಿದ್ದ ಐಪಿಎಸ್ ಅಧಿಕಾರಿ, ಬಳ್ಳಾರಿ ಎಸ್​ಪಿ ಡಾ. ಸುಮನ್ ಡಿ. ಪನ್ನೇಕರ್ ಅವರಿಗೆ ಈ ಬಾರಿ ಪದಕ ಒಲಿದಿದೆ. ಅತ್ಯಂತ ಸಂಕೀರ್ಣವಾಗಿದ್ದ ಈ ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಹಿಳಾ ಅಧಿಕಾರಿಗಳ ದಕ್ಷತೆಗೆ ಈ ಮೂಲಕ ಮನ್ನಣೆ ಸಿಕ್ಕಂತಾಗಿದೆ.

ಒಟ್ಟು 153 ಮಂದಿಯ ಪಟ್ಟಿಯಲ್ಲಿ 6 ಐಪಿಎಸ್ ಅಧಿಕಾರಿಗಳು ಸ್ಥಾನ ಪಡೆದಿದ್ದಾರೆ. ಬಳ್ಳಾರಿ ಎಸ್​ಪಿ ಡಾ. ಸುಮನ್ ಡಿ. ಪನ್ನೇಕರ್, ಉಡುಪಿ ಎಸ್​ಪಿ ಡಾ. ಕೆ. ಅರುಣ್, ಯಾದಗಿರಿ ಎಸ್​ಪಿ ಪೃಥ್ವಿಕ್ ಶಂಕರ್, ಬೆಂಗಳೂರು ಡಿಸಿಪಿ (ಸಂಚಾರ ದಕ್ಷಿಣ) ಡಾ. ಗೋಪಾಲ ಎಂ. ಬ್ಯಾಕೋಡ, ಹಾಸನ ಎಎಸ್​ಪಿ-1 ಎಂ.ಕೆ. ತಮ್ಮಯ್ಯ, ಶಿವಮೊಗ್ಗ ಎಎಸ್​​ಪಿ-2 ಎಸ್. ರಮೇಶ್ ಕುಮಾರ್. ಇವರಲ್ಲದೆ 12 ಮಂದಿ ಡಿವೈಎಸ್​ಪಿಗಳು ಹಾಗೂ ವಿವಿಧ ಹಂತದ ಸಿಬ್ಬಂದಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಪದಕ ವಿಜೇತರು ನಿಗದಿತ ಸಮವಸ್ತ್ರ ಧರಿಸಿ ಸಮಾರಂಭಕ್ಕೆ ಹಾಜರಾಗುವಂತೆ ಡಿಜಿಪಿ ಡಾ. ಎಂ.ಎ. ಸಲೀಂ ಸೂಚಿಸಿದ್ದಾರೆ.

ಹಿರಿಯ ಐಪಿಎಸ್ ಮತ್ತು ಗೆಜೆಟೆಡ್ ಅಧಿಕಾರಿಗಳು:

ಕ್ರ.ಸಂ ಹೆಸರು ಹುದ್ದೆ ಮತ್ತು ಕಾರ್ಯಸ್ಥಳ
1 ಡಾ. ಸುಮನ್ ಡಿ ಪೆನ್ನೇಕರ್ ಐಪಿಎಸ್, ಎಸ್ಪಿ, ಬಳ್ಳಾರಿ (SIT ಸದಸ್ಯೆ)
2 ಡಾ. ಅರುಣ್ ಕೆ ಐಪಿಎಸ್, ಎಸ್ಪಿ, ಉಡುಪಿ
3 ಪೃಥ್ವಿಕ್ ಶಂಕರ್ ಐಪಿಎಸ್, ಎಸ್ಪಿ, ಯಾದಗಿರಿ
4 ಡಾ. ಗೋಪಾಲ ಎಂ ಬ್ಯಾಕೋಡ ಐಪಿಎಸ್, ಡಿಸಿಪಿ (ಸಂಚಾರ ದಕ್ಷಿಣ), ಬೆಂಗಳೂರು
5 ಶ್ರೀಹರಿಬಾಬು ಬಿ.ಎಲ್. ಐಪಿಎಸ್, ಡಿಸಿಪಿ (ಅಪರಾಧ), ಬೆಂಗಳೂರು
6 ನಜ್ಮಾ ಫಾರೂಕಿ ಎಸಿಪಿ, ಮಂಗಳೂರು

ಎಸಿಪಿ ಮತ್ತು ಡಿವೈಎಸ್‌ಪಿ ಅಧಿಕಾರಿಗಳ ಪಟ್ಟಿ

ಕ್ರ.ಸಂ ಹೆಸರು ಹುದ್ದೆ ಮತ್ತು ಕಾರ್ಯಸ್ಥಳ
1 ಎಂ ಕೆ ತಮ್ಮಯ್ಯ ಅಡಿಷನಲ್ ಎಸ್ಪಿ, ಹಾಸನ
2 ಎಸ್ ರಮೇಶ್ ಕುಮಾರ್ ಅಡಿಷನಲ್ ಎಸ್ಪಿ, ಶಿವಮೊಗ್ಗ
3 ವಾಸು ಆರ್ ಡಿವೈಎಸ್‌ಪಿ, ರಾಜ್ಯ ಗುಪ್ತವಾರ್ತೆ
4 ಸಂತೋಷ್ ದಯಾನಂದ ಎಸಿಪಿ, ಬೆಳಗಾವಿ ನಗರ
5 ನಾರಾಯಣಸ್ವಾಮಿ ವಿ ಎಸಿಪಿ, ಬೆಂಗಳೂರು ನಗರ
6 ತುಳಜಪ್ಪ ಸುಲ್ಪಿ ಡಿವೈಎಸ್‌ಪಿ, ವಿಜಯಪುರ
7 ಸಿದ್ದಲಿಂಗಪ್ಪಗೌಡ ಪಾಟೀಲ್ ಡಿವೈಎಸ್‌ಪಿ, ಕೊಪ್ಪಳ
8 ಎಂ ಹೆಚ್ ಉಮೇಶ್ ಡಿವೈಎಸ್‌ಪಿ, ಸಿಐಡಿ
9 ಪ್ರಭಾಕರ್ ಜಿ ಎಸಿಪಿ, ಸಂಚಾರ ಪ್ಲಾನಿಂಗ್, ಬೆಂಗಳೂರು
10 ಹೆಚ್ ಕೆ ಮಹಾನಂದ ಎಸಿಪಿ, ಸಿಸಿಬಿ, ಬೆಂಗಳೂರು
11 ರಾಘವೇಂದ್ರ ಬಿ ಹವಾಲ್ದಾರ್ ಡಿವೈಎಸ್‌ಪಿ, ರಾಜ್ಯ ಗುಪ್ತವಾರ್ತೆ
12 ನಾಗರಾಜ್ ಕೆ ಕೆನ್ನಿಕರ್ ಎಸಿಪಿ, ಸಿಎಆರ್, ಬೆಂಗಳೂರು
13 ವೆಂಕಟೇಶ್ ಡಿವೈಎಸ್‌ಪಿ, ಸೈಬರ್ ಕ್ರೈಂ, ರಾಯಚೂರು
14 ಕೆ ಬಸವರಾಜು ಡಿವೈಎಸ್‌ಪಿ, ಐಎಸ್‌ಡಿ, ಕಲಬುರಗಿ
15 ಪಾಂಡುರಂಗ ವಿ ಭಂಡಾರಿ ಎಸಿಪಿ, ಬೆಂಗಳೂರು ನಗರ
16 ಡಾ. ಸಂತೋಷ ಚವ್ಹಾಣ ಡಿವೈಎಸ್‌ಪಿ, ಹರಪನಹಳ್ಳಿ
17 ಬಾಳಪ್ಪ ನಂದಗಾವಿ ಡಿವೈಎಸ್‌ಪಿ, ಬಸವನಬಾಗೇವಾಡಿ
18 ಲಕ್ಷ್ಮೀಕಾಂತ್ ಆರ್ ಎಸಿಪಿ, ಸಿಸಿಪಿಎಸ್, ಬೆಂಗಳೂರು

ಪೊಲೀಸ್ ಇನ್ಸ್‌ಪೆಕ್ಟರ್ (PI) ಮತ್ತು ಸಬ್-ಇನ್ಸ್‌ಪೆಕ್ಟರ್ (PSI) ಪಟ್ಟಿ

ಹೆಸರು (PI) ಹೆಸರು (PSI/PI)
ಎಂ ಜಿ ದಯಾನಂದ ಕಿರಣ್ ಕುಮಾರ್ ಬಿ ವಿ (PSI)
ಶಿವರಾಜ್ ಆರ್ ಮುಧೋಳ್ ಕುಮಾರ್ ದುಂಡಪ್ಪ ಹಡ್ಕರ್ (PSI)
ಕೆ ಶರಣು ವರ್ಮ ಶ್ರೀಕಂಠೇಗೌಡ (PSI)
ಉದಯ ರವಿ ಜಿ ಕಳಿಂಗ ಎ (PSI)
ಜಿ ಸೋಮಶೇಖರ್ ಸುರೇಶ್ (PSI)
ಸುರೇಶ್ ಕುಮಾರ್ ಎಸ್ ಡಿ ಸುನೀಲ್ ಪವಾರ್ (PSI)
ಬಿ ಮಲ್ಲಿಕಾರ್ಜುನ ಟಿಪ್ಪುಸುಲ್ತಾನ್ ನಾಯಕ್ವಾಡಿ (PSI)
ಸಿದ್ದೇಶ ಎಂ ಡಿ ರಾಜ್‌ಕುಮಾರ್ ಸಿದ್ರಾಮಪ್ಪ (PSI)
ಸಂತೋಷ್ ಕಶ್ಯಪ್ ಆರ್ ಭೀಮಪ್ಪ ನಾಗಪ್ಪ (PSI)
ಸತೀಶ್ ಕುಮಾರ್ ವೈ ಮಂಜನಗೌಡ ಪಾಟೀಲ್ (PSI)
ಪ್ರಶೀಲಾ ಬಿ ಎಸ್ ಶ್ರೀಕಾಂತ್ ಕಾಂಬ್ಳೆ (PI)
ಸುಶೀಲ್ ಕುಮಾರ್ ಜಯಾನಂದ ಎನ್ (PI)
ಶ್ರೀಶೈಲಕುಮಾರ ಜೆ ನವೀನ ಎಸ್ ನಾಯ್ಕ (PSI)
ಆನಂದ ವಿ ಠಕ್ಕಣನವರ್ ನಯಾಜ್ (PI)
ಮಂಜೇಶ್ ಎಂ ಜೆ ಸುರೇಶ್ ಎಂ ಎನ್ (PI)
ಸೃಜನ ಎಂ ಮಂಜುನಾಥ ಬಿ (PSI)
ರಾಜೇಶ್ ಆರ್ ಕಿಶೋರ್ ಬಿ ಟಿ (PSI)
ಇ ಕೊದಂಡಪಾಣಿ (PSI) ಮಹಾದೇವಪ್ಪ ಡಿ (PI)
ಗ್ಲೋರಿ ಕ್ರಿಸ್ಟಿನಾ ಎ ಬಿ ಜಿ ಕುಮಾರ್ (PI)

ಇತರೆ ಶ್ರೇಣಿಯ ಅಧಿಕಾರಿಗಳು ಮತ್ತು ಸಿಬ್ಬಂದಿ: 

ಹೆಸರು ಶ್ರೇಣಿ ಹೆಸರು ಶ್ರೇಣಿ
ಪ್ರದೀಪ ಹೆಚ್ ಕೆ ಅಸಿಸ್ಟೆಂಟ್ ಕಮಾಂಡೆಂಟ್ ಇರ್ಷಾದ್ ಪಿ HC
ರಾಮನಾಥ ಪಿ ಬಿ PI ಮಹಾಲಿಂಗ ಗಾಣಿಗ HC
ಬಸಣ್ಣ ಎಸ್ RSI ಬಾಹುಬಾಲಿ ಎ ಅನಗಲೆ HC
ಪ್ರದೀಪ್ ನಾಯಕ್ RSI ವಿಜಯ ಕುಮಾರ್ ರೈ HC
ಆರ್ ಸುಬ್ರಮಣಿ RSI ಬೀರಪ್ಪ ಬಿ HC
ಮಂಜುನಾಥ್ RSI ಸುವರ್ಣ PC
ಕಾರ್ತಿಕ್ ಬಿ ಎಸ್ RSI ಷರೀಫ್ ಎಂ PC
ನಿಸಾರ್ ಅಹಮದ್ RSI ಆರೀಫ್ ಮುದನಾಳ್ PC
ಕೆ ಎಂ ಶಿವಶೇಖರ RSI ಪ್ರವೀಣ್ ಬಿಳಗಿಮಠ PC
ಚಂದ್ರಶೆಟ್ಟಿ ASI ರಾಘವೇಂದ್ರ ಹೆಚ್ ಬಿ PC
ಕೃಷ್ಣ ಸಿ ಎನ್ ASI ರವಿ ಜಿ ಎನ್ Follower
ಜೋಷಿ ಕುಟ್ಟಪ್ಪ ASI ರಮೇಶ್ ಎಂ HC
ಮಮತಾ ಎಂ ASI ಹನುಮಂತಪ್ಪ ಶಿರೀಹಳ್ಳಿ PSI
ಸೌಮ್ಯಲತಾ ಡಿ ASI ಅಣ್ಣಪ್ಪ ಎನ್ HC
ರತ್ನಮ್ಮ ಕೆ ASI ಗುರುಸ್ವಾಮಿ ASI
ಬಿ ಎಂ ಹಫೀದುನ್ನೀಸ ASI ಎನ್ ವರದರಾಜು ARSI
ಮಹೇಂದ್ರ ಹೆಚ್ ಪಿ ASI ವಸಂತ್ ಕುಮಾರ್ HC
ಅಶೋಕ ಎಸ್ ಜಿ ASI ಕೆ ಎಂ ಆನಂದ PC
ತಿಲಕ್ ರಾಜ್ ASI ಮಣಿ ಎಂ ಎನ್ HC
ರವಿಕುಮಾರ ASI ಸತೀಶ್ ಹೆಚ್ HC
ಪ್ರಕಾಶ್ ಡಿ ನಾಯಕ್ HC ರಘುರಾಜ್ ಎಸ್ RSI
ನಾಗರಾಜು HC ಮಹಮ್ಮದ್ ಶಬ್ಬಿರ್ HC
ಫ್ರಾಂಕಿ ಎಬಿನೇಚರ್ HC ಜಗದೀಶ್ ಕಾದ್ರೋಳ್ಳಿ HC
ಡಾ. ಸಂತೋಷ್ ಶೆಟ್ಟಿ HC ಗಿರೀಶ್ ಟಿ ಎಸ್ HC
ಜಾಫರ್ ಬಚ್ಚೇರಿ HC ರಾಮನಗೌಡ ಬಿರಾದರ PC
ಸಂತೋಷ್ ಎಂ HC ಚಿದಾನಂದ ಗಿಡಗಂಚಿ PC
ನವೀನ್ ಬಿ ಎಸ್ HC ಗಿರೀಶ ಜಿ ಬಿ PC
ಸುನೀಲ್ ವಿಷ್ಣು ಕಾಂಬ್ಳೆ HC ಅಭಿಷೇಕ್ ಗೌಡ ಎಂ PC
ಪ್ರಸನ್ನ ಕುಮಾರ್ ಬಿ ಎನ್ HC ಪರಶುರಾಮ PSI
ಬಿ ವಿ ಅಶೋಕ HC ಈರಪ್ಪ ಪೂಜಾರಿ HC
ಅಬ್ದುಲ್ ರಜಾಕ್ HC ಡಿ ಎಸ್ ಬಸವರಾಜು Follower
ಗಿರೀಶ್ ಬಿ ಎಸ್ HC ವಿರೇಶ್ ಎ ಜೋಳದ HC
ರಾಮನಾಥ್ ಎಸ್ ಪತ್ತೆಗಾರ್ HC ನಾಗರತ್ನಮ್ಮ ಹೆಚ್ ಎಸ್ HC
ಲಲಿತಾಲಕ್ಷ್ಮಿ HC ರೇವಣ್ಣ HC
ಸುಮಾಲತಾ ಎಸ್ HC ಜಯಕುಮಾರ್ HC
ರಾಘವೇಂದ್ರ ಜಿ HC ರಾಘವೇಂದ್ರ ಎಸ್ ಪಿ HC
ರಾಜಕುಮಾರ್ ಜೆ ಭೋಸಗಿ HC ಮಂಜುನಾಥ ಟಿ HC
ಮಂಜುನಾಥ ಸಿ HC ದಿವಾಕರ ವಿ ಎಂ HC

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿ ನಡೆದಿದ್ದ ಸವಾಲಿನ ಕೆನರಾ ಬ್ಯಾಂಕ್ ಕಳ್ಳತನ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ವಿಜಯಪುರ ಜಿಲ್ಲೆಯ ಐವರು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ 2025ನೇ ಸಾಲಿನ ಪ್ರತಿಷ್ಠಿತ ‘ಮುಖ್ಯಮಂತ್ರಿ ಪದಕ’ ಘೋಷಣೆಯಾಗಿದೆ. ಜಿಲ್ಲೆಯ ಮೂವರು ಹಿರಿಯ ಅಧಿಕಾರಿಗಳು ಹಾಗೂ ಇಬ್ಬರು ಕಾನ್‌ಸ್ಟೇಬಲ್‌ಗಳು ಈ ಗೌರವಕ್ಕೆ ಭಾಜನರಾಗಿದ್ದಾರೆ.

ಇದನ್ನೂ ಓದಿ: ಜಿಬಿಎ ಅಡಿಯಲ್ಲಿನ ಐದು ಪಾಲಿಕೆಗಳ ಬಜೆಟ್ ಮಂಡನೆ; ಬೆಂಗಳೂರಿನ ಅಭಿವೃದ್ಧಿಗೆ 20,213 ಕೋಟಿ ರೂ

2025ರ ಮೇ 25ರಂದು ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್‌ನಲ್ಲಿ ನಡೆದಿದ್ದ ಭಾರಿ ಕಳ್ಳತನ ಪ್ರಕರಣ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿತ್ತು. ಈ ಪ್ರಕರಣವನ್ನು ಬೆನ್ನಟ್ಟಿದ ಈ ಅಧಿಕಾರಿಗಳ ತಂಡ, ಅತ್ಯಂತ ಚಾಕಚಕ್ಯತೆಯಿಂದ ಆರೋಪಿಗಳನ್ನು ಬಂಧಿಸಿ ಮಾಲು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇವರ ಈ ಶ್ಲಾಘನೀಯ ಸೇವೆಯನ್ನು ಗುರುತಿಸಿ ಸರ್ಕಾರ ಈ ಪದಕವನ್ನು ನೀಡಿದೆ. ಈ ಸಾಧನೆಗೆ ವಿಜಯಪುರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ (SP) ಲಕ್ಷ್ಮಣ ನಿಂಬರಗಿ ಅವರು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

 

Source link

IPL 2026: ಅಗಲಿದ 11 ಜೀವಗಳಿಗೆ 1 ನಿಮಿಷದ ಮೌನಾಚರಣೆ; ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿದ ತಂಡಗಳು

2026 ರ ಐಪಿಎಲ್ ಇಂದಿನಿಂದ ಆರಂಭವಾಗಿದೆ. ಲೀಗ್​ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್​ಸಿಬಿ ಹಾಗೂ ಸನ್​ರೈಸರ್ಸ್​ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿವೆ. ತವರಿನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ನಾಯ ರಜತ್ ಪಾಟಿದರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಟಾಸ್ ಜೊತೆಗೆ ಎರಡು ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ. ಅದರಂತೆ ಆರ್​ಸಿಬಿ ಪರ ಇಬ್ಬರು ಆಟಗಾರರು ಐಪಿಎಲ್​ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಪಂದ್ಯ ಆರಂಭಕ್ಕೂ ಮುನ್ನ ಉಭಯ ತಂಡಗಳಿಂದ ಅಗಲಿದ 11 ಅಮಾಯಕ ಜೀವಗಳಿಗೆ ಸಂತಾಪ ಸೂಚಿಸಲಾಯಿತು.

11 ಜೀವಗಳಿಗೆ ಸಂತಾಪ ಸೂಚನೆ

ಟಾಸ್ ಬಳಿಕ ಉಭಯ ತಂಡಗಳು ಕಣಕ್ಕಿಳಿಯುವ ಮುನ್ನ 1 ನಿಮಿಷದ ಮೌನಾಚರಣೆ ನಡೆಸಿ, ಚಿನ್ನಸ್ವಾಮಿ ಮೈದಾನದಲ್ಲಿ ಬಳಿ ಕಳೆದ ವರ್ಷ ನಡೆದಿದ್ದ ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದ 11 ಜೀವಗಳಿಗೆ ಸಂತಾಪ ಸೂಚಿಸಲಾಯಿತು. ಇದರ ಜೊತೆಗೆ ಎರಡು ತಂಡಗಳ ಆಟಗಾರರು ತಮ್ಮ ಕೈಗೆ ಕಪ್ಪು ಬ್ಯಾಂಡ್ ಧರಿಸಿ ಕಣಕ್ಕಿಳಿಯುವ ಮೂಲಕ ಗೌರವ ಸಮರ್ಪಣೆ ಮಾಡಿದ್ದಾರೆ.

11 ಆಸನಗಳು ಖಾಲಿ ಇರಲಿವೆ

ಈ ಪಂದ್ಯಕ್ಕೂ ಮುನ್ನವೇ ಆರ್​ಸಿಬಿ ಆಡಳಿತ ಮಂಡಳಿ ಹಾಗೂ ಕೆಎಸ್​ಸಿಎ ಅಗಲಿದ 11 ಜೀವಗಳ ನೆನಪನ್ನು ಶಾಶ್ವತವಾಗಿರಿಸುವ ನಿಟ್ಟಿನಲ್ಲಿ ಕ್ರೀಡಾಂಗಣದ ಮುಖ್ಯಧ್ವಾರದ ಬಳಿ ಸ್ಮಾರಕವನ್ನು ನಿರ್ಮಾಣ ಮಾಡಿದೆ. ಹಾಗೆಯೇ ಸಾವನ್ನಪ್ಪಿದ್ದ 11 ಜನರ ಸ್ಮರಣಾರ್ಥವಾಗಿ ಮೈದಾನದಲ್ಲಿ 11 ಆಸನಗಳನ್ನು ಖಾಲಿ ಇಡಲು ನಿರ್ಧರಿಸಿದೆ. ಕೇವಲ ಐಪಿಎಲ್​ ಪಂದ್ಯಗಳಿಗೆ ಮಾತ್ರವಲ್ಲದೆ, ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುವ ಅಂತರರಾಷ್ಟ್ರೀಯ ಪಂದ್ಯಗಳ ಸಮಯದಲ್ಲೂ ಆ 11 ಆಸನಗಳು ಖಾಲಿ ಇರಲಿವೆ.

RCB ತಂಡ 18ನೇ ಆವೃತ್ತಿಯ ಐಪಿಎಲ್ ಫೈನಲ್ ಗೆದ್ದು ಚಾಂಪಿಯನ್ ಆದ ಹಿನ್ನಲೆ ತಂಡದ ಆಟಗಾರರು ಬೆಂಗಳೂರಿಗೆ ಬಂದಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಚರಣೆ ನಡೆದಿತ್ತು. ಈ ಸಂಭ್ರಮಾಚರಣೆ ನೋಡಲು ಅಪಾರ ಸಂಖ್ಯೆಯ ಅಭಿಮಾನಿಗಳು ಕ್ರೀಡಾಂಗಣದ ಬಳಿ ಸೇರಿದ್ದ ಪರಿಣಾಮ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿತ್ತು. ಘಟನೆಯಲ್ಲಿ 11 ಮಂದಿ ಆರ್​ಸಿಬಿ ಅಭಿಮಾನಿಗಳು ಮೃತಪಟ್ಟಿದ್ದರೆ, ಹಲವರು ಅಸ್ವಸ್ಥಗೊಂಡಿದ್ದರು.

ಉಭಯ ತಂಡಗಳ ಪ್ಲೇಯಿಂಗ್ 11

ಆರ್​ಸಿಬಿ: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸುಯಾಶ್ ಶರ್ಮಾ, ಜಾಕೋಬ್ ಡಫ್ಫಿ, ಅಭಿನಂದನ್ ಸಿಂಗ್.

ಎಸ್​ಆರ್​ಎಚ್: ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್ (ವಿಕೆಟ್ ಕೀಪರ್/ ನಾಯಕ), ಹೆನ್ರಿಚ್ ಕ್ಲಾಸೆನ್, ಅನಿಕೇತ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಸಲೀಲ್ ಅರೋರಾ, ಹರ್ಷ್ ದುಬೆ, ಹರ್ಷಲ್ ಪಟೇಲ್, ಜಯದೇವ್ ಉನದ್ಕತ್, ಇಶಾನ್ ಮಾಲಿಂಗ.

Source link

ಚಿಕ್ಕಬಳ್ಳಾಪುರ: ಗಂಡನ ಕೈ-ಕಾಲು ಮುರಿದು ವಿಕೃತವಾಗಿ ಕೊಲೆ; ನೌಟಂಕಿ ಪತ್ನಿ ಅರೆಸ್ಟ್​

ಚಿಕ್ಕಬಳ್ಳಾಪುರ, ಮಾರ್ಚ್​ 28: ಮಂಚದ ಮೇಲಿದ್ದ ಗಂಡ (Husband) ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಎಂದು  ಪೊಲೀಸರ ಮುಂದೆ ಕಥೆ ಕಟ್ಟಿ, ಏನು ಗೊತ್ತಿಲ್ಲದಂತೆ ಮಳ್ಳಿಯಂತೆ ನಟಿಸಿದ್ದ ಕಿಲಾಡಿ ಮಹಿಳೆಯೇ ತನ್ನ ಗಂಡನನ್ನು ವಿಕೃತವಾಗಿ ಕೊಲೆ (kill) ಮಾಡಿರುವುದು ಇದೀಗ ಬಯಲಾಗಿದೆ. ಸದ್ಯ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದ ವಿವಿ ಪುರಂ ಬಡಾವಣೆಯಲ್ಲಿ ಘಟನೆ ನಡೆದಿದೆ.

ನಡೆದಿದ್ದೇನು? 

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದ ವಿವಿ ಪುರಂ ಬಡಾವಣೆಯ ಬಾಡಿಗೆ ಮನೆಯಲ್ಲಿದ್ದ ಶಿವಕುಮಾರ್ ಅಲಿಯಾಸ್ ಸಾದೀಕ್ ಪಾಷ, ಮನೆಯ ಮಂಚದ ಮೇಲೆ ಶವವಾಗಿದ್ದರು. ಅವರ ಪತ್ನಿ ರೇಷ್ಮಾ ಪೊಲೀಸರು ಹಾಗೂ ಗಂಡನ ಸಂಬಂಧಿಕರಿಗೆ ಕರೆ ಮಾಡಿ, ಅಯ್ಯಯ್ಯೋ ನನ್ನ ಗಂಡ, ಮುದ್ದು ಗುಂಡ ಮನೆಯಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಗೋಳೋ ಅಂತ ಅತ್ತಿದ್ದಾರೆ.

ಇದನ್ನೂ ಓದಿ: ಸಕಲೇಶಪುರದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಫೋಟೋಗ್ರಾಫರ್‌ಗಳ ಮೇಲೆ ಹಲ್ಲೆ: ಕೈಮುಗಿದರೂ ಬಿಡದ ಕಿಡಿಗೇಡಿಗಳು

ಇತ್ತ ಸ್ಥಳಕ್ಕೆ ಬಂದ ಗೌರಿಬಿದನೂರು ನಗರ ಠಾಣೆ ಪೊಲೀಸರು, ಪರಿಶೀಲನೆ ಮಾಡಿದ್ದಾರೆ. ರೇಷ್ಮಾ ಹೇಳಿರುವುದು ಒಂದಾಗಿದ್ದರೆ, ಅಲ್ಲಿ ನಡೆದಿದ್ದೇ ಇನ್ನೊಂದಾಗಿತ್ತು. ಹೀಗಾಗಿ ಅನುಮಾನ ವ್ಯಕ ಹಿನ್ನೆಲೆ  ಪೊಲೀಸರು ರೇಷ್ಮಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಭಯಾನಕ ಸತ್ಯ ಬಯಲಾಗಿದೆ.

ಪೊಲೀಸರೇ ಶಾಕ್​​

ಇನ್ನು ಪೊಲೀಸರಿಗೆ ಮನೆಯಲ್ಲಿ ಕಂಡದ್ದು ಭಯಾನಕ ದೃಶ್ಯ. ಶಿವಕುಮಾರ್ ಅಲಿಯಾಸ್ ಸಾದೀಕ್ ಪಾಷನ ಕೈ-ಕಾಲು ತಿರುವಲಾಗಿತ್ತು. ಸೊಂಟ ಮುರಿಯಲಾಗಿತ್ತು. ಮೈಮೇಲೆ ರಕ್ತದ ಕಲೆಗಳಿತ್ತು. ಮನೆಯನ್ನು ಆ್ಯಸಿಡ್ ಹಾಕಿ ತೊಳೆಯಲಾಗಿತ್ತು. ಇದರಿಂದ ಅನುಮಾನಗೊಂಡ ಪೊಲೀಸರು, ಮೃತನ ಪತ್ನಿ ರೇಷ್ಮಾಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾಗ ಸತ್ಯ ಬಯಲಾಗಿದ್ದು, ಸ್ವತಃ ಆತನ ಪತ್ನಿ ಹಾಗೂ ಆಕೆಯ ತಮ್ಮ ಶಾರುಕ್ ಸೇರಿದಂತೆ 5 ಜನ ಸೇರಿ ಕೊಲೆ ಮಾಡಿದ್ದು ಬಯಲಾಗಿದೆ. ಗಂಡ ತನಗೆ ಕಿರಕುಳ ಕೊಡುತ್ತಿದ್ದಾನೆಂದು ಆತನ ಹತ್ಯೆ ಮಾಡಗಿದೆ.

ಇದನ್ನೂ ಓದಿ: ತನ್ನ ಕಾಮದಾಟಕ್ಕೆ ಅಡ್ಡಿಯಾಗುತ್ತಿದ್ದ ಪತಿಯನ್ನೇ ಸುಪಾರಿ ನೀಡಿ ಕೊಲೆ ಮಾಡಿಸಿದ ಪತ್ನಿ!

ಇನ್ನೂ ಗೌರಿಬಿದನೂರು ನಗರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ನಿ ರೇಷ್ಮಾಳನ್ನು ಬಂಧಿಸಲಾಗಿದೆ. ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ಕು ಜನರು ಎಸ್ಕೇಪ್ ಆಗಿದ್ದು, ಪೊಲೀಸರು ಎರಡು ತಂಡಗಳನ್ನ ರಚನೆ ಮಾಡಿ ಬಂಧನಕ್ಕೆ ಬಲೆ ಬೀಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಆತ್ಮಹತ್ಯೆ ಮಾಡಿಕೊಂಡ ಮಗನಿಗೆ 23 ವರ್ಷಗಳಿಂದ ಮದುವೆ ಮಾಡುತ್ತಿದ್ದಾರೆ ಅಪ್ಪ-ಅಮ್ಮ!

ಹೈದರಾಬಾದ್, ಮಾರ್ಚ್ 28: ತಾನು ಪ್ರೀತಿಸಿದ ಯುವತಿಯನ್ನು ಮದುವೆಯಾಗಲಾರದೆ ರಾಮ್ ಕೋಟಿ ಎಂಬ ಯುವಕ 23 ವರ್ಷಗಳ ಹಿಂದೆ ಮೃತಪಟ್ಟಿದ್ದರು. ಹೀಗಾಗಿ, ಕಳೆದ 23 ವರ್ಷಗಳಿಂದ ತೆಲಂಗಾಣದಲ್ಲಿ (Telangana) ದಂಪತಿ ಸಾವನ್ನಪ್ಪಿದ ತಮ್ಮ ಮಗನ ಸಾವಿನ ದುಃಖವನ್ನು ಪ್ರಾರ್ಥನೆಗಳು, ಆಚರಣೆಗಳು ಮತ್ತು ಭಕ್ತಿಯಿಂದ ಆಚರಿಸುತ್ತಿದ್ದಾರೆ. ಅಲ್ಲದೆ, ಪ್ರತಿ ವರ್ಷ ಆತ ಮೃತಪಟ್ಟ ದಿನದಂದು ಆತನ ಫೋಟೋಗೆ ಆತ ಪ್ರೀತಿಸಿದ ಯುವತಿಯ ಫೋಟೋದ ಜೊತೆಗೆ ಮದುವೆ ಮಾಡುತ್ತಿದ್ದಾರೆ. ದುಃಖವಾಗಿ ಪ್ರಾರಂಭವಾಗಿದ್ದ ಈ ಸಾವು ಈಗ ಇಡೀ ಗ್ರಾಮವನ್ನು ಒಟ್ಟುಗೂಡಿಸುವ ಸಂಪ್ರದಾಯವಾಗಿ ಬೆಳೆದಿದೆ.

ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯಲ್ಲಿ ಲಾಲು ಮತ್ತು ಸುಕ್ಕಮ್ಮ 2003ರಲ್ಲಿ ಮೃತಪಟ್ಟ ತಮ್ಮ ಮಗ ರಾಮ್ ಕೋಟಿಗಾಗಿ ಪ್ರತಿ ವರ್ಷ ವಿವಾಹ ಸಮಾರಂಭವನ್ನು ನಡೆಸುತ್ತಿದ್ದಾರೆ. ರಾಮ್ ಪ್ರೀತಿಸಿದ ಹುಡುಗಿಯ ಕುಟುಂಬಸ್ಥರು ಅವರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ, ಮನನೊಂದು ರಾಮ್ ಕೋಟಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಸಾವಿನ ಕೆಲವೇ ದಿನಗಳಲ್ಲಿ ಅವರು ಪ್ರೀತಿಸಿದ ಯುವತಿ ಕೂಡ ಆತ್ಮಹತ್ಯೆ ಮಾಡಿಕೊಂಡಳು. ಇಬ್ಬರೂ ಪ್ರೇಮಿಗಳು ಇಹಲೋಕ ತ್ಯಜಿಸಿದರೂ ಅವರ ಕೊನೆಯಾಸೆಯನ್ನು ಈಡೇರಿಸಲು ರಾಮ್ ಅವರ ತಂದೆ-ತಾಯಿ ನಿರ್ಧರಿಸಿದರು.

ಇದನ್ನೂ ಓದಿ: ತೆಲಂಗಾಣದ ದೇವಸ್ಥಾನದ ಜಾತ್ರೆಯಲ್ಲಿ ಜಾತಿ ಸಂಘರ್ಷ; ಕೂದಲೆಳೆದು ಮಹಿಳೆಯರಿಗೆ ಥಳಿತ, ಮಗು ಸಾವು

ಹೀಗಾಗಿ, ಬದುಕಿದ್ದಾಗ ಅವರಿಬ್ಬರ ಮದುವೆ ಮಾಡಲಾಗದ ಕಾರಣದಿಂದ ಅವರ ಸಾವಿನ ದಿನದಂದು ರಾಮ್ ಅವರ ಮದುವೆ ಸಮಾರಂಭವನ್ನು ಏರ್ಪಡಿಸುತ್ತಿದ್ದಾರೆ. 23 ವರ್ಷಗಳಿಂದ ಅವರು ಈ ಸಂಪ್ರದಾಯವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಈ ಮೂಲಕ ತಮ್ಮ ಮಗನ ಸಾವಿನ ದಿನವನ್ನು ಅವರು ಸ್ಮರಣೀಯವಾಗಿಸುತ್ತಿದ್ದಾರೆ.

ಸುಕ್ಕಮ್ಮ ಅವರ ಪ್ರಕಾರ, ರಾಮ್​ನ ಸಾವಿನ ನಂತರ ಆತ ಕನಸಿನಲ್ಲಿ ಕಾಣಿಸಿಕೊಂಡು ದೇವಸ್ಥಾನ ಕಟ್ಟಿಸಿ ಮದುವೆ ಮಾಡುವಂತೆ ಕೇಳಿಕೊಂಡರು. ಇದನ್ನು ನಂಬಿದ ದಂಪತಿಗಳು ತಮ್ಮ ಮನೆಯೊಳಗೆ ಒಂದು ಸಣ್ಣ ದೇವಾಲಯವನ್ನು ನಿರ್ಮಿಸಿದರು. ಅವರು ಅದರಲ್ಲಿ ಮಗ ರಾಮ್ ಮತ್ತು ಆತ ಪ್ರೀತಿಸಿದ ಹುಡುಗಿಯ ಪ್ರತಿಮೆಗಳನ್ನು ಸ್ಥಾಪಿಸಿ, ಅವರನ್ನು ಒಟ್ಟಿಗೆ ಇರಿಸಿದರು.

ಇದನ್ನೂ ಓದಿ: ತನ್ನ ಗೆಳೆಯನ ಜೊತೆ ಸಂಬಂಧದ ಅನುಮಾನ; ಮುಂಬೈ ವಿದ್ಯಾರ್ಥಿನಿಯನ್ನು ಎಳೆದು, ಕೂದಲು ಕತ್ತರಿಸಿದ ಯುವತಿ

ಅಂದಿನಿಂದ, ಪ್ರತಿ ವರ್ಷ ರಾಮ ನವಮಿಯಂದು ಅವರಿಬ್ಬರಿಗೂ ಸಾಂಪ್ರದಾಯಿಕ ವಿವಾಹ ಸಮಾರಂಭವನ್ನು ನಡೆಸುತ್ತಿದ್ದಾರೆ. ಈ ಆಚರಣೆಯನ್ನು ನಿಜವಾದ ವಿವಾಹದಂತೆಯೇ ಸಂಪ್ರದಾಯ, ಪದ್ಧತಿಗಳೊಂದಿಗೆ ನಡೆಸಲಾಗುತ್ತದೆ. ಈ ಸಮಾರಂಭವನ್ನು ವೀಕ್ಷಿಸಲು ಮತ್ತು ಪ್ರಾರ್ಥನೆಗಳಲ್ಲಿ ಭಾಗವಹಿಸಲು ಗ್ರಾಮಸ್ಥರು, ಸಂಬಂಧಿಕರು ಮತ್ತು ಹತ್ತಿರದ ಪ್ರದೇಶಗಳ ಜನರು ಪ್ರತಿ ವರ್ಷ ಅವರ ಮನೆಗೆ ಆಗಮಿಸುತ್ತಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

RCB vs SRH Playing XI: ಟಾಸ್ ಗೆದ್ದ ಆರ್​ಸಿಬಿ; ಮೊದಲ ಪಂದ್ಯಕ್ಕೆ ಇಬ್ಬರ ಪಾದಾರ್ಪಣೆ

2026 ರ ಐಪಿಎಲ್ (IPL 2026) ಸೀಸನ್ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ (RCB vs SRH) ನಡುವಿನ ಪಂದ್ಯದೊಂದಿಗೆ ಆರಂಭವಾಗಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಈ ಪಂದ್ಯಕ್ಕೆ ಆತಿಥ್ಯವಹಿಸಿದೆ. ಸುಮಾರು 10 ತಿಂಗಳ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯವೊಂದು ನಡೆಯುತ್ತಿರುವುದು ಅಭಿಮಾನಿಗಳ ಪಾಲಿಗೆ ಸಂತಸದ ಕ್ಷಣವಾಗಿದೆ. ಆರ್‌ಸಿಬಿ ಹಾಲಿ ಚಾಂಪಿಯನ್ ಆಗಿದ್ದು, ತವರಿನಲ್ಲಿ ಬಲಿಷ್ಠವಾಗಿ ಕಾಣುತ್ತಿದೆ. ಇತ್ತ ಸನ್‌ರೈಸರ್ಸ್ ಹೈದರಾಬಾದ್ ಕೂಡ ಯುವ ನಾಯಕ ಇಶಾನ್ ಕಿಶನ್ ನೇತೃತ್ವದಲ್ಲಿ ಕಣಕ್ಕಿಳಿಯುತ್ತಿದೆ. ಹೀಗಾಗಿ ಉಭಯ ತಂಡಗಳಿಗೂ ಗೆಲುವು ಅತ್ಯಗತ್ಯವಾಗಿದೆ.​

ಟಾಸ್ ಗೆದ್ದ ಆರ್​ಸಿಬಿ

2026 ರ ಆವೃತ್ತಿಯ ಮೊದಲ ಪಂದ್ಯದಲ್ಲೇ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟಿದರ್ ಮೊದಲು ಬ್ಯಾಟಿಂಗ್‌ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಸನ್​ರೈಸರ್ಸ್​ ಹೈದರಾಬಾದ್ ಮೊದಲು ಬ್ಯಾಟಿಂಗ್‌ ಮಾಡಲಿದೆ. ಆರ್​ಸಿಬಿ ಪರ ಇಬ್ಬರು ಆಟಗಾರರು ಐಪಿಎಲ್​ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅದರಲ್ಲಿ ನ್ಯೂಜಿಲೆಂಡ್ ವೇಗಿ ಜಾಕೋಬ್ ಡಫಿ, ಹೇಜಲ್‌ವುಡ್ ಬದಲಿಗೆ ಆಡುತ್ತಿದ್ದರೆ, ಮತ್ತೊಬ್ಬ ಯುವಿ ವೇಗಿ ಅಭಿನಂದನ್ ಸಿಂಗ್, ಯಶ್ ದಯಾಳ್ ಸ್ಥಾನವನ್ನು ತುಂಬಲು ಸಜ್ಜಾಗಿದ್ದಾರೆ.

ಹೆಡ್ ಟು ಹೆಡ್ ದಾಖಲೆ

ಅಂಕಿಅಂಶಗಳ ಪ್ರಕಾರ ಸನ್‌ರೈಸರ್ಸ್ ಹೈದರಾಬಾದ್, ಆರ್‌ಸಿಬಿ ವಿರುದ್ಧ ಮೇಲುಗೈ ಸಾಧಿಸಿರುವುದನ್ನು ಗಮಿನಸಬಹುದು. ಐಪಿಎಲ್ ಇತಿಹಾಸದಲ್ಲಿ ಈ ಎರಡೂ ತಂಡಗಳ ನಡುವೆ ಒಟ್ಟು 26 ಪಂದ್ಯಗಳು ನಡೆದಿವೆ. ಇದರಲ್ಲಿ ಸನ್‌ರೈಸರ್ಸ್ ಹೈದರಾಬಾದ್ 13 ಪಂದ್ಯಗಳನ್ನು ಗೆದ್ದಿದ್ದರೆ, ಆರ್‌ಸಿಬಿ 11 ಪಂದ್ಯಗಳನ್ನು ಗೆದ್ದಿದೆ. ಎರಡು ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ. ಇನ್ನು ಕಳೆದ ಆವೃತ್ತಿಯಲ್ಲಿ ರಜತ್ ಪಾಟಿದಾರ್ ನಾಯಕತ್ವದಲ್ಲಿ, ಆರ್‌ಸಿಬಿ ಅದ್ಭುತ ಪ್ರದರ್ಶನ ನೀಡಿತ್ತಾದರೂ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋತಿತ್ತು. ಇದರ ಹೊರತಾಗಿಯೂ, ಆರ್‌ಸಿಬಿ ಐಪಿಎಲ್ 2025 ಪ್ರಶಸ್ತಿಯನ್ನು ಗೆದ್ದುಕೊಂಡಿತು.

RCB vs SRH Live Score, IPL 2026: ಟಾಸ್ ಗೆದ್ದ ಆರ್​ಸಿಬಿ ಬೌಲಿಂಗ್ ಆಯ್ಕೆ

ಉಭಯ ತಂಡಗಳ ಪ್ಲೇಯಿಂಗ್ 11

ಆರ್​ಸಿಬಿ: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸುಯಾಶ್ ಶರ್ಮಾ, ಜಾಕೋಬ್ ಡಫ್ಫಿ, ಅಭಿನಂದನ್ ಸಿಂಗ್.

ಎಸ್​ಆರ್​ಎಚ್: ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್ (ವಿಕೆಟ್ ಕೀಪರ್/ ನಾಯಕ), ಹೆನ್ರಿಚ್ ಕ್ಲಾಸೆನ್, ಅನಿಕೇತ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಸಲೀಲ್ ಅರೋರಾ, ಹರ್ಷ್ ದುಬೆ, ಹರ್ಷಲ್ ಪಟೇಲ್, ಜಯದೇವ್ ಉನದ್ಕತ್, ಇಶಾನ್ ಮಾಲಿಂಗ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link