ಐಪಿಎಲ್ 19 ನೇ ಸೀಸನ್ನ ಉದ್ಘಾಟನಾ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯವು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಆರ್‌ಸಿಬಿ ಹಾಲಿ ಚಾಂಪಿಯನ್ ಆಗಿರುವುದರಿಂದ ಈ ಪಂದ್ಯವನ್ನು ಗೆದ್ದು ಗೆಲುವಿನ ಆರಂಭವನ್ನು ಪಡೆಯಲು ಪ್ರಯತ್ನಿಸುತ್ತದೆ. ಹಾಗಾದರೆ, ನಾಯಕನಾಗಿ ಇಶಾನ್ ಕಿಶನ್ ತಮ್ಮ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವಲ್ಲಿ ಯಶಸ್ವಿಯಾಗುತ್ತಾರೆಯೇ? ಎಂಬುದನ್ನು ಕಾದು ನೋಡೋಣ.
ವಾಷಿಂಗ್ಟನ್, ಮಾರ್ಚ್ 28: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಸೋತವರೊಂದಿಗೆ ಸುತ್ತಾಡಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ. ಏಕೆಂದರೆ ಯಶಸ್ವಿ ಜನರು ತಮ್ಮ ಸಾಧನೆಗಳ ಬಗ್ಗೆ ಮಾತನಾಡುವುದನ್ನು ಕೇಳಲು ಅವರಿಗೆ ಇಷ್ಟವಾಗುವುದಿಲ್ಲವಂತೆ. ಇಂದು ಮಿಯಾಮಿಯಲ್ಲಿ ನಡೆದ ಭವಿಷ್ಯದ ಹೂಡಿಕೆ ಉಪಕ್ರಮದಲ್ಲಿ ಮಾತನಾಡಿದ ಟ್ರಂಪ್,”ನಾನು ಯಾವಾಗಲೂ ಸೋತವರೊಂದಿಗೆ ಇರಲು ಇಷ್ಟಪಡುತ್ತೇನೆ. ಏಕೆಂದರೆ ಅದು ನನಗೆ ಉತ್ತಮ ಭಾವನೆ ನೀಡುತ್ತದೆ. ನಾನು ತುಂಬಾ ಯಶಸ್ವಿ ವ್ಯಕ್ತಿಗಳನ್ನು ದ್ವೇಷಿಸುತ್ತೇನೆ. ಅವರ ಜೊತೆಗಿದ್ದರೆ ನೀವು ಅವರ ಯಶಸ್ಸಿನ ಕಥೆಗಳನ್ನು ಕೇಳಬೇಕಾಗುತ್ತದೆ. ಆದರೆ, ನನ್ನ ಯಶಸ್ಸನ್ನು ಕೇಳಲು ಇಷ್ಟಪಡುವ ಜನರನ್ನು ಮಾತ್ರ ನಾನು ಇಷ್ಟಪಡುತ್ತೇನೆ” ಎಂದು ಹೇಳಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮೆಗಾಸ್ಟಾರ್ ಚಿರಂಜೀವಿ (Chiranjeevi), ತೆಲುಗು ಚಿತ್ರರಂಗ ಮಾತ್ರವಲ್ಲ, ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ನಟರುಗಳಲ್ಲಿ ಒಬ್ಬರು. ಈಗಲೂ ಸಹ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಚಿರಂಜೀವಿ ಅವರು ಸಿನಿಮಾ ನಟನೆಯ ಜೊತೆಗೆ ತಮ್ಮ ಅಪಾರ ಸಮಾಜ ಸೇವೆಯಿಂದಲೂ ಗುರುತಿಸಿಕೊಂಡಿದ್ದಾರೆ. ಚಿರಂಜೀವಿ ಬ್ಲಡ್ ಬ್ಯಾಂಕ್, ಐ ಬ್ಯಾಂಕ್ ಈಗಾಗಲೇ ಲಕ್ಷಾಂತರ ಜನರ ಜೀವ ಉಳಿಸಿವೆ. ಹಲವಾರು ಸಮಾಜ ಸೇವಾ ಕಾರ್ಯಕ್ರಗಳಲ್ಲಿ ತೊಡಗಿಕೊಂಡಿರುವ ನಟ ಚಿರಂಜೀವಿ, ಇದೀಗ ತಮ್ಮ ಮಗ, ಸೂಪರ್ ಸ್ಟಾರ್ ರಾಮ್ ಚರಣ್ ಹುಟ್ಟುಹಬ್ಬದಂದು ಹಲವಾರು ಮಂದಿಗೆ ಊಟ ಹಾಕಿಸಿದ ಜೊತೆಗೆ ಹತ್ತು ಲಕ್ಷ ರೂಪಾಯಿ ಹಣವನ್ನು ಸಮಾಜ ಸೇವೆಗೆಂದು ಉಚಿತವಾಗಿ ನೀಡಿದ್ದಾರೆ.
ನಿನ್ನೆಯಷ್ಟೆ ರಾಮ್ ಚರಣ್ ಅವರು ತಮ್ಮ ಹುಟ್ಟುಹಬ್ಬ ಆಚರಣೆ ಮಾಡಿಕೊಂಡರು. ತಮ್ಮ ಪುತ್ರ ರಾಮ್ ಚರಣ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಹಲವು ಸಾಮಾಜಿಕ ಸಂಸ್ಥೆಗಳಿಗೆ ಬೆಂಬಲ ನೀಡುವ ಮೂಲಕ ಈ ದಿನವನ್ನು ಅರ್ಥಪೂರ್ಣವಾಗಿಸಿದ್ದಾರೆ ಮೆಗಾಸ್ಟಾರ್ ಚಿರಂಜೀವಿ. ಇತ್ತೀಚೆಗಷ್ಟೆ ಮೆಗಾಸ್ಟಾರ್ ಚಿರಂಜೀವಿ ಅವರು ಚಿತ್ರರಂಗಕ್ಕೆ ನೀಡಿರುವ ಅಭೂತಪೂರ್ವ ಕೊಡುಗೆಯನ್ನು ಗುರುತಿಸಿ ಎನ್ಟಿಆರ್ ಪ್ರಶಸ್ತಿಯನ್ನು ಅವರಿಗೆ ನೀಡಲಾಯ್ತು. ಈ ಪ್ರಶಸ್ತಿಯು, ಫಲಕದ ಜೊತೆಗೆ 10 ಲಕ್ಷ ರೂಪಾಯಿ ನಗದು ಹಣವನ್ನು ಸಹ ಒಳಗೊಂಡಿತ್ತು. ಆ ಹಣವನ್ನು ಚಿರಂಜೀವಿ ಅವರು ವೃದ್ಧಾಶ್ರಮಗಳು, ದೃಷ್ಟಿ ವಿಕಲಚೇತನರ ಸಂಸ್ಥೆಗಳು ಮತ್ತು ಅನಾಥ ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಫೌಂಡೇಶನ್‌ಗಳಿಗೆ ಹಂಚಿಕೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ಬಾಲಕಿಯೊಬ್ಬಳ ವೈದ್ಯಕೀಯ ವೆಚ್ಚಕ್ಕೂ ಅವರು ಸಹಾಯ ಹಸ್ತ ಚಾಚಿದ್ದಾರೆ.
ಕೇವಲ ದೇಣಿಗೆ ನೀಡುವುದಷ್ಟೇ ಅಲ್ಲದೆ, ಚಿರಂಜೀವಿ ಅವರು ವೈಯಕ್ತಿಕವಾಗಿ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಸಂಭ್ರಮಾಚರಣೆಗೆ ವೃದ್ಧರನ್ನು ಆಹ್ವಾನಿಸಿ, ಅವರಿಗೆ ಅನ್ನದಾನ ಮಾಡಿ ಹೊಸ ಬಟ್ಟೆಗಳನ್ನು ವಿತರಿಸಿದರು. ಈ ಮಾನವೀಯ ಕಾರ್ಯವು ಅನೇಕರ ಮೊಗದಲ್ಲಿ ಮಂದಹಾಸ ಮೂಡಿಸಿತು. ಕುಟುಂಬದ ಸಂಭ್ರಮವನ್ನು ಸಮಾಜಸೇವೆಯಾಗಿ ಪರಿವರ್ತಿಸುವ ಮೂಲಕ, ನಿಜವಾದ ಯಶಸ್ಸು ಇತರರೊಂದಿಗೆ ಸಂತೋಷವನ್ನು ಹಂಚಿಕೊಳ್ಳುವುದರಲ್ಲಿ ಅಡಗಿದೆ ಎಂದು ಚಿರಂಜೀವಿ ತೋರಿಸಿಕೊಟ್ಟಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ ಅವರು ಈ ರೀತಿಯ ಅನೇಕ ಸಮಾಜ ಮುಖಿ ಕಾರ್ಯಗಳನ್ನು ಮಾಡಿದ್ದಾರೆ. ಒಂದು ಸಮಯದಲ್ಲಿ ಇಡೀ ದೇಶದಲ್ಲೇ ಅತಿ ಹೆಚ್ಚು ಅಭಿಮಾನಿ ಸಂಘಗಳನ್ನು ಹೊಂದಿದ್ದ ನಟ ಮೆಗಾಸ್ಟಾರ್ ಚಿರಂಜೀವಿ. ತಮ್ಮ ಅಭಿಮಾನಿಗಳನ್ನು ಸಾಮಾಜಿಕ ಕಾರ್ಯಗಳನ್ನು ಮಾಡಲು ಬಳಕೆ ಮಾಡಿಕೊಂಡರು. ಆ ಮೂಲಕ ಇತರೆ ಸ್ಟಾರ್ ನಟರುಗಳಿಗೆ ಮಾದರಿ ಆದರು. ಚಿರಂಜೀವಿ ಸ್ಥಾಪಿಸಿದ ಬ್ಲಾಡ್ ಬ್ಯಾಂಕ್ ಲಕ್ಷಾಂತರ ಜನರ ಜೀವಗಳನ್ನು ಉಳಿಸಿದೆ. ಚಿರಂಜೀವಿ ಅವರು ಹಲವಾರು ಸಿನಿಮಾ ನಟ-ನಟಿಯರಿಗೆ ಸಹ ಅವರ ಕಷ್ಟಕಾಲದಲ್ಲಿ ಸಹಾಯ ಮಾಡಿದ್ದಾರೆ. ಕೋವಿಡ್ ಸಮಯದಲ್ಲಿ ಆಕ್ಸಿಜನ್ ಬ್ಯಾಂಕ್ ಅನ್ನು ಸಹ ಚಿರಂಜೀವಿ ಮಾಡಿದ್ದರು. ಈಗಲೂ ಸಹ ಆ ಕಾರ್ಯವನ್ನು ಮುಂದುವರೆಸಿದ್ದಾರೆ.
ಬ್ಯಾಂಕಾಕ್: ಸೌಂದರ್ಯ ಸ್ಪರ್ಧೆ ಎಂದರೆ ಅಲ್ಲಿ ಕೇವಲ ರೂಪವಷ್ಟೇ ಅಲ್ಲ, ಸಮಯಪ್ರಜ್ಞೆ ಮತ್ತು ಆತ್ಮವಿಶ್ವಾಸವೂ ಅತಿ ಮುಖ್ಯ. ಆದರೆ ಥೈಲ್ಯಾಂಡ್‌ನಲ್ಲಿ ಇತ್ತೀಚೆಗೆ ನಡೆದ ‘ಮಿಸ್ ಗ್ರ್ಯಾಂಡ್ ಥೈಲ್ಯಾಂಡ್’ ಸೌಂದರ್ಯ ಸ್ಪರ್ಧೆಯ ನೇರ ಪ್ರಸಾರ (Live Round) ನಡೆಯುತ್ತಿದ್ದಾಗಲೇ ಸುಂದರಿಯೊಬ್ಬಳ ಹಲ್ಲುಗಳು ಕಳಚಿ ಬಿದ್ದ ಅಪರೂಪದ ಮತ್ತು ಮುಜುಗರದ ಪ್ರಸಂಗವೊಂದು ಜರುಗಿದೆ.
ಘಟನೆಯ ವಿವರ ಹೀಗಿದೆ, ಕಮಲವಾನ್ ಚನಾಗೋ ಎಂಬ ಸುಂದರಿ ತೀರ್ಪುಗಾರರ ಮುಂದೆ ನಿಂತು, ಆತ್ಮವಿಶ್ವಾಸದಿಂದ ಮಾತನಾಡಲು ಬಾಯಿ ತೆರೆದಿದ್ದಾರೆ. ಆದರೆ ಮಾತನಾಡಲು ಶುರುಮಾಡುತ್ತಿದ್ದಂತೆಯೇ ಆಕೆಯ ಬಾಯಲ್ಲಿದ್ದ ಹಲ್ಲುಗಳು ವೇದಿಕೆಯ ಮೇಲೆ ಉದುರಿ ಬಿದ್ದಿವೆ. ಈ ದೃಶ್ಯವನ್ನು ಕಂಡ ಪ್ರೇಕ್ಷಕರು ಮತ್ತು ತೀರ್ಪುಗಾರರು ಒಂದು ಕ್ಷಣ ಸ್ತಬ್ಧರಾಗಿದ್ದಾರೆ. ಇಪ್ಪತ್ತರ ಹರೆಯದ ಈ ಸುಂದರಿ ಆಗಲೇ ಹಲ್ಲುಸೆಟ್ಟು (Dentures) ಹಾಕಿಸಿಕೊಂಡಿದ್ದಾಳೆಯೇ ಎಂದು ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ. ಆದರೆ ಅಸಲಿ ವಿಷಯವೇನೆಂದರೆ, ಸೌಂದರ್ಯ ಹೆಚ್ಚಿಸಿಕೊಳ್ಳಲು ಅವರು ತಮ್ಮ ಹಲ್ಲುಗಳಿಗೆ ‘ವೆನಿಯರ್ಸ್’ (Veneers) ಎಂಬ ಕೃತಕ ಹಲ್ಲಿನ ಕವಚವನ್ನು ಅಳವಡಿಸಿಕೊಂಡಿದ್ದರು. ಸರಿಯಾಗಿ ಫಿಕ್ಸ್ ಆಗದ ಕಾರಣ, ಆಕೆ ಮಾತನಾಡಲು ಹೋದಾಗ ಆ ಕವಚಗಳು ಕೆಳಗೆ ಬಿದ್ದಿದೆ.
ಪ್ರತಿ ಐಪಿಎಲ್ನಂತೆ ಈ ಐಪಿಎಲ್ನಲ್ಲೂ ಆಟಗಾರರ ಇಂಜುರಿ ಸಮಸ್ಯೆ ಎಲ್ಲಾ ತಂಡಗಳನ್ನು ಕಾಡಲಾರಂಭಿಸಿದೆ. ಇದಕ್ಕೆ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಹೊರತಾಗಿಲ್ಲ. ಅದರಲ್ಲೂ ತಂಡದ ಜೀವಾಳ ಎನಿಸಿಕೊಂಡಿರುವ ಮಹೇಂದ್ರ ಸಿಂಗ್ ಧೋನಿ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಎರಡು ವಾರ ಕ್ರಿಕೆಟ್ನಿಂದ ದೂರ ಉಳಿಯಲಿದ್ದಾರೆ.
ಇದು ಸಿಎಸ್ಕೆ ತಂಡಕ್ಕೆ ದೊಡ್ಡ ಆಘಾತ ಎಂದರೆ ತಪ್ಪಾಗಲಾರದು. ಏಕೆಂದರೆ ತಂಡದಲ್ಲಿ ಯುವ ಆಟಗಾರರೇ ಹೆಚ್ಚಿದ್ದು, ಅವರಿಗೆ ಧೋನಿಯ ಉಪಸ್ಥಿತಿ ಅಗತ್ಯವಾಗಿತ್ತು. ಆದರೆ ಧೋನಿ ಗಾಯಕ್ಕೆ ತುತ್ತಾಗಿದ್ದು, ಎರಡು ವಾರ ಆಟದಿಂದ ದೂರ ಉಳಿಯಲಿದ್ದಾರೆ. ಧೋನಿಯ ಅಲಭ್ಯತೆಯೊಂದಿಗೆ ಸಿಎಸ್ಕೆ ಕೂಡ ಕಳೆದ 16 ವರ್ಷಗಳ ಐಪಿಎಲ್ ಪಯಣದಲ್ಲಿ ಈ ಇಬ್ಬರು ದಿಗ್ಗಜರಿಲ್ಲದೆ ತಂಡವನ್ನು ಕಣಕ್ಕಿಳಿಸಬೇಕಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೊದಲ ಪಂದ್ಯ ಮಾರ್ಚ್ 30 ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆಯಲಿದೆ. ಆದಾಗ್ಯೂ, ಮಾಜಿ ಚೆನ್ನೈ ನಾಯಕ ಮತ್ತು ಅಭಿಮಾನಿಗಳ ನೆಚ್ಚಿನ ಧೋನಿ ಈ ಪಂದ್ಯದಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಈ ಪಂದ್ಯ ಮಾತ್ರವಲ್ಲದೆ, ಧೋನಿ ತಂಡದ ಮೊದಲ ಮೂರು ಪಂದ್ಯಗಳಲ್ಲಿ ಆಡಲು ಸಾಧ್ಯವಾಗುವುದಿಲ್ಲ.
ಧೋನಿಯ ಈ ಗಾಯ ಅಭಿಮಾನಿಗಳನ್ನು ನಿರಾಶೆಗೊಳಿಸಿದರೆ, ಇತ್ತ ಐಪಿಎಲ್ನಲ್ಲಿ ಇದುವರೆಗೆ ಸಂಭವಿಸದ ಘಟನೆಯೊಂದು ಸಂಭವಿಸಲಿದೆ. ವಾಸ್ತವವಾಗಿ, ಚೆನ್ನೈ ಸೂಪರ್ ಕಿಂಗ್ಸ್ ಗುವಾಹಟಿಯಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಮೈದಾನಕ್ಕಿಳಿದಾಗ, ಫ್ರಾಂಚೈಸಿಯ ಇತಿಹಾಸದಲ್ಲಿ ಧೋನಿ ಅಥವಾ ಸುರೇಶ್ ರೈನಾ ಇಬ್ಬರೂ ಸಿಎಸ್ಕೆ ಪ್ಲೇಯಿಂಗ್ XI ನಲ್ಲಿ ಇರುವುದಿಲ್ಲ. ಕಳೆದ 16 ಸೀಸನ್ಗಳಲ್ಲಿ ಇದು ಹಿಂದೆಂದೂ ಸಂಭವಿಸಿರಲಿಲ್ಲ.
ರೈನಾ 2021 ರವರೆಗೆ ಸಿಎಸ್ಕೆ ತಂಡದ ಭಾಗವಾಗಿದ್ದರು, ಮತ್ತು ಈ ಅವಧಿಯಲ್ಲಿ, ಧೋನಿ ಆಡದ ಕೆಲವೇ ಪಂದ್ಯಗಳಲ್ಲಿ ಅವರು ತಂಡದ ನಾಯಕತ್ವ ವಹಿಸಿದ್ದರು. ರೈನಾ ನಿರ್ಗಮನದ ನಂತರ, ಕಳೆದ ನಾಲ್ಕು ಆವೃತ್ತಿಗಳಲ್ಲಿ ಧೋನಿ ತಂಡದ ಪರ ಪ್ರತಿಯೊಂದು ಪಂದ್ಯವನ್ನು ಆಡಿದ್ದರು.
ಒಟ್ಟಾರೆಯಾಗಿ ಸಿಎಸ್ಕೆ ಕಳೆದ 16 ಆವೃತ್ತಿಗಳಲ್ಲಿ 253 ಪಂದ್ಯಗಳನ್ನು ಆಡಿದೆ. ಈ ಪ್ರತಿಯೊಂದು ಪಂದ್ಯಗಳಲ್ಲಿ, ಧೋನಿ ಅಥವಾ ರೈನಾ ತಂಡದ ಭಾಗವಾಗಿದ್ದರು. ಆದರೀಗ ಈ ಇಬ್ಬರು ಇಲ್ಲದ ತಂಡವನ್ನು ಸಿಎಸ್ಕೆ ಕಣಕ್ಕಿಳಿಸಬೇಕಾಗಿದೆ. ಹೀಗಾಗಿ, ಇದು ಐದು ಬಾರಿ ಚಾಂಪಿಯನ್ ಆಗಿರುವ ತಂಡಕ್ಕೆ ಮುಂಬರುವ ಬದಲಾವಣೆಯ ಸಂಕೇತವಾಗಿದೆ.
ಬೆಂಗಳೂರಿನ, ಮಾ.28: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಐಪಿಎಲ್ ಪಂದ್ಯಕ್ಕೆ ಭರಪೂರ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕ್ರಿಕೆಟ್ ಪ್ರೇಕ್ಷಕರು ಮತ್ತು ಆರ್‌ಸಿಬಿ ಅಭಿಮಾನಿಗಳಲ್ಲಿ ಹೆಚ್ಚಿನ ಉತ್ಸಾಹ ಕಂಡುಬರುತ್ತಿದ್ದು, ಪಂದ್ಯ ಆರಂಭಕ್ಕೂ ಗಂಟೆಗಳ ಮುಂಚೆಯೇ ಕ್ರೀಡಾಂಗಣದತ್ತ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಭದ್ರತಾ ದೃಷ್ಟಿಯಿಂದ ಹಲವಾರು ಹೊಸ ವ್ಯವಸ್ಥೆಗಳನ್ನು ಜಾರಿಗೆ ತರಲಾಗಿದೆ. ಪಂದ್ಯಕ್ಕೆ ಒಟ್ಟು 2000ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಕ್ರೀಡಾಂಗಣದ ಒಳಗೆ ಹಾಗೂ ಹೊರಗೆ ನಿಯೋಜಿಸಲಾಗಿದೆ. ಐದು ಡಿಸಿಪಿಗಳು ಮತ್ತು ಜಂಟಿ ಸಿಪಿ ನೇತೃತ್ವದಲ್ಲಿ ಇಡೀ ಬಂದೋಬಸ್ತ್‌ಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಇದು ಕ್ರೀಡಾಂಗಣದಲ್ಲಿ ಸುವ್ಯವಸ್ಥೆ ಮತ್ತು ಜನಸಂದಣಿಯನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಪ್ರವೇಶ ದ್ವಾರಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಈ ಬಾರಿ ಕಬ್ಬನ್ ರೋಡ್ ಕಡೆಯಿಂದ ಗರಿಷ್ಠ ಗೇಟ್‌ಗಳನ್ನು ತೆರೆಯಲಾಗಿದ್ದು, ಕ್ವೀನ್ಸ್ ರೋಡ್ ಕಡೆಯಿಂದ ಸಾರ್ವಜನಿಕರ ಪ್ರವೇಶವನ್ನು ಬಹುತೇಕ ನಿಲ್ಲಿಸಲಾಗಿದೆ. ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಕಬ್ಬನ್ ರೋಡ್ ಮತ್ತು ಲಿಂಕ್ ರೋಡ್ ಬಳಸಿಕೊಂಡು ಕ್ರೀಡಾಂಗಣವನ್ನು ಪ್ರವೇಶಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಜನದಟ್ಟಣೆ ತಪ್ಪಿಸಲು, ಹಿಂದಿನ ವರ್ಷಗಳಿಗಿಂತ ನಾಲ್ಕು ಗಂಟೆಗಳ ಮೊದಲೇ ಗೇಟ್‌ಗಳನ್ನು ತೆರೆಯಲಾಗುತ್ತಿದೆ. ಪ್ರತಿ ಗೇಟ್‌ನಲ್ಲಿ ಒಂದೇ ಸಮಯದಲ್ಲಿ ಐದರಿಂದ ಆರು ಜನರನ್ನು ಒಳಗೆ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ.
ಇದು ಫುಟ್‌ಪಾತ್‌ಗಳಲ್ಲಿ ಜನಸಂದಣಿಯಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ. ಭದ್ರತಾ ಕ್ರಮಗಳ ಭಾಗವಾಗಿ, ಎಲ್ಲಾ ಗೇಟ್‌ಗಳಲ್ಲಿ ಪಿಎ (ಪಬ್ಲಿಕ್ ಅಡ್ರೆಸ್) ಸಿಸ್ಟಮ್‌ಗಳನ್ನು ಅಳವಡಿಸಲಾಗಿದೆ. ಇದರ ಮೂಲಕ ಜನರಿಗೆ ನಿರಂತರವಾಗಿ ಅಗತ್ಯ ಮಾಹಿತಿಯನ್ನು ನೀಡಲಾಗುತ್ತಿದೆ. ಅಲ್ಲದೆ, ಕಳೆದ ಒಂದು ವಾರದಿಂದ ಪೊಲೀಸ್ ಇಲಾಖೆ, ತಂಡದ ಆಡಳಿತ ಮಂಡಳಿ ಮತ್ತು ಕ್ರೀಡಾಂಗಣದ ವತಿಯಿಂದ ಸಾಮಾಜಿಕ ಮಾಧ್ಯಮಗಳ ಮೂಲಕವೂ ಮಹತ್ವದ ಮಾಹಿತಿಗಳನ್ನು ಹಂಚಿಕೊಳ್ಳಲಾಗುತ್ತಿದೆ. ಟಿಕೆಟ್ ಕುರಿತು ಪ್ರಮುಖ ಎಚ್ಚರಿಕೆಗಳನ್ನು ನೀಡಲಾಗಿದೆ. ಈ ವರ್ಷ ಯಾವುದೇ ರೀತಿಯ ಭೌತಿಕ ಟಿಕೆಟ್‌ಗಳ ಮಾರಾಟವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಕ್ರೀಡಾಂಗಣದ ಸುತ್ತಮುತ್ತ ಅಥವಾ ಅಧಿಕೃತವಲ್ಲದ ಮೂಲಗಳಿಂದ ಟಿಕೆಟ್‌ಗಳು ಲಭ್ಯವಿವೆ ಎಂಬ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ಯಾವುದೇ ವದಂತಿಗಳನ್ನು ನಂಬದಂತೆ ಅಭಿಮಾನಿಗಳಿಗೆ ಸೂಚಿಸಲಾಗಿದೆ. ಟಿಕೆಟ್‌ಗಳು ಮುಗಿದು ಮೂರು ದಿನಗಳಾಗಿವೆ. ಅಧಿಕೃತ ಟಿಕೆಟಿಂಗ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಮಾತ್ರ ಟಿಕೆಟ್‌ಗಳನ್ನು ಪಡೆಯಬೇಕು ಎಂದು ತಿಳಿಸಲಾಗಿದೆ. ಟಿಕೆಟ್ ಇಲ್ಲದ ಕ್ರಿಕೆಟ್ ಪ್ರೇಮಿಗಳು ಕ್ರೀಡಾಂಗಣದ ಬಳಿಗೆ ಬರದಂತೆ, ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಮನೆಯಲ್ಲೇ ಪಂದ್ಯವನ್ನು ವೀಕ್ಷಿಸುವಂತೆ ಮನವಿ ಮಾಡಲಾಗಿದೆ. ಇದರಿಂದ ವಂಚನೆಗೆ ಒಳಗಾಗುವುದು ತಪ್ಪುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೇಸಿಗೆಯಲ್ಲಿನ (summer) ಉರಿ ಬಿಸಲು, ಸೆಕೆಯ ಅಬ್ಬರಕ್ಕೆ ಜನ ಹೈರಾಣಾಗುತ್ತಿದ್ದಾರೆ. ಅನೇಕ ಜನರು ಬಿಸಿಲ ಬೇಗೆ ಹಾಗೂ ಸೆಕೆಯಿಂದ ತಪ್ಪಿಸಿಕೊಳ್ಳಲು ಮನೆಯೊಳಗೆ ಹಗಲು ರಾತ್ರಿ ಎಸಿ, ಕೂಲರ್ ಆನ್ ಮಾಡಿಯೇ ಇಟ್ಟು ಬಿಡುತ್ತಾರೆ. ಇದರಿಂದ ಭಾರೀ ವಿದ್ಯುತ್ ಖರ್ಚು ಆಗುತ್ತೆ ಜೊತೆಗೆ ಕರೆಂಟ್ ಬಿಲ್ ಕೂಡ ಜಾಸ್ತಿ ಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕೆಲವೊಂದು ಸ್ಮಾರ್ಟ್ ಟಿಪ್ಸ್‌ಗಳನ್ನು ಪಾಲಿಸುವ ಮೂಲಕ ಎಸಿ, ಕೂಲರ್ ಇಲ್ಲದೆಯೂ ಈ ಸುಡು ಬೇಸಿಗೆಯಲ್ಲಿ ಮನೆಯನ್ನು ಕೂಲ್ ಆಗಿ ಇಟ್ಟುಕೊಳ್ಳಬಹುದು. ಎಸಿ ಇಲ್ಲದೆಯೂ ಮನೆಯನ್ನು ನೈಸರ್ಗಿಕವಾಗಿ ತಂಪಾಗಿರಿಸಿಕೊಳ್ಳುವುದು ಹೇಗೆ ಎಂಬ ಸರಳ ಸಲಹೆ ಇಲ್ಲಿದೆ.
ಎಸಿ, ಕೂಲರ್ ಇಲ್ಲದೆಯೂ ಮನೆಯನ್ನು ಕೂಲ್ ಆಗಿ ಇಡುವುದೇಗೆ?
ಸರಿಯಾದ ಸಮಯದಲ್ಲಿ ಕಿಟಕಿ ತೆರೆದಿಡಿ: ಹೊರಗಿನಿಂದ ಚೆನ್ನಾಗಿ ಗಾಳಿ ಬರುತ್ತದೆ ಎಂಬ ಕಾರಣಕ್ಕೆ ಹೆಚ್ಚಿನವರು ದಿನದ ಎಲ್ಲಾ ಸಮಯದಲ್ಲಿಯೂ ಕಿಟಕಿ ಬಾಗಿಲುಗಳನ್ನು ತೆರೆದೇ ಇಡುತ್ತಾರೆ. ಈ ರೀತಿ ಮಾಡುವುದರಿಂದ ಹೊರಗಿನ ಬಿಸಿ ಗಾಳಿ ಒಳಗೆ ಬರಲು ಅನುವು ಮಾಡಿಕೊಡುತ್ತದೆ. ಆದ್ದರಿಂದ ಮನೆಯನ್ನು ತಂಪಾಗಿಡಲು, ಬೆಳಿಗ್ಗೆ 8 ಗಂಟೆಯ ಮೊದಲು ಮತ್ತು ಸಂಜೆ ಸೂರ್ಯಾಸ್ತದ ನಂತರ ಮಾತ್ರ ಕಿಟಕಿಗಳನ್ನು ತೆರೆಯಿರಿ. ಮಧ್ಯಾಹ್ನದ ಸಮಯದಲ್ಲಿ ಕಿಟಕಿಗಳನ್ನು ಮುಚ್ಚಿಡುವುದು ಮತ್ತು ದಪ್ಪ ಪರದೆಗಳನ್ನು ಹಾಕುವುದರಿಂದ ನೇರ ಸೂರ್ಯನ ಬೆಳಕು ಒಳಗೆ ಬರುವುದನ್ನು ತಡೆಯಬಹುದು.
ಒಳಾಂಗಣ ಸಸ್ಯಗಳು ನೈಸರ್ಗಿಕ ಗಾಳಿಯನ್ನು ಒದಗಿಸುತ್ತವೆ: ಮನೆಯಲ್ಲಿ ಸ್ನೇಕ್ ಪ್ಲಾಂಟ್, ಅಲೋವೆರಾ, ಮನಿ ಪ್ಲಾಂಟ್ ಅಥವಾ ಅರೇಕಾ ಪಾಮ್ ನಂತಹ ಒಳಾಂಗಣ ಸಸ್ಯಗಳನ್ನು ಇಡುವುದರಿಂದ ಮನೆಯಲ್ಲಿ ಆಮ್ಲಜನಕದ ಅಂಶ ಹೆಚ್ಚಾಗುತ್ತದೆ ಮತ್ತು ವಾತಾವರಣವು ತಂಪಾಗಿರುತ್ತದೆ. ಈ ಸಸ್ಯಗಳು ನೈಸರ್ಗಿಕವಾಗಿ ಗಾಳಿಯನ್ನು ಶುದ್ಧೀಕರಿಸುತ್ತವೆ ಮತ್ತು ಶಾಖವನ್ನು ಹೀರಿಕೊಳ್ಳಲು ಕೆಲಸ ಮಾಡುತ್ತವೆ. ಆದ್ದರಿಂದ, ಮನೆಯ ಸುತ್ತಲೂ ಅಥವಾ ಮನೆಯ ಒಳ ಭಾಗದಲ್ಲಿ ಈ ಗಿಡಗಳನ್ನು ನೆಡುವ ಮೂಲಕ ನೀವು ಶಾಖದಿಂದ ರಕ್ಷಣೆ ಪಡೆಯಬಹುದು.
ವಿದ್ಯುತ್ ಉಪಕರಣಗಳ ಕಡಿಮೆ ಬಳಕೆ: ಮನೆಯಲ್ಲಿ ಚಾಲನೆಯಲ್ಲಿರುವ ಎಲೆಕ್ಟ್ರಾನಿಕ್ ಉಪಕರಣಗಳು ಸಹ ಶಾಖವನ್ನು ಉತ್ಪಾದಿಸುತ್ತವೆ. ಹಾಗಾಗಿ ಮಧ್ಯಾಹ್ನದ ಸಮಯದಲ್ಲಿ ಲೈಟ್, ಟಿವಿ ಅಥವಾ ಕಂಪ್ಯೂಟರ್ ಅನ್ನು ಆಫ್ ಮಾಡಿ. ವಿಶೇಷವಾಗಿ ಹಳೆಯ ಬಲ್ಬ್‌ಗಳ ಬದಲಿಗೆ ಎಲ್‌ಇಡಿ ಬಲ್ಬ್‌ಗಳನ್ನು ಬಳಸಿ, ಏಕೆಂದರೆ ಅವು ಕಡಿಮೆ ಶಾಖವನ್ನು ಉತ್ಪಾದಿಸುತ್ತವೆ. ಅಡುಗೆಮನೆಯಲ್ಲಿ ಎಕ್ಸಾಸ್ಟ್ ಫ್ಯಾನ್ ಅನ್ನು ಚಾಲನೆಯಲ್ಲಿ ಇರಿಸಿ ಇದರಿಂದ ಅಡುಗೆಯಿಂದ ಬರುವ ಶಾಖ ಹೊರಗೆ ಹೋಗುತ್ತವೆ.
ಮೇಲ್ಛಾವಣಿಯ ಮೇಲೆ ಬಿಳಿ ಸುಣ್ಣ ಅಥವಾ ಶಾಖ ಪ್ರತಿಫಲಿತ ಬಣ್ಣ ಹಚ್ಚಿ: ಮೇಲ್ಛಾವಣಿಯ ಮೇಲೆ ಬಿಳಿ ಸುಣ್ಣ ಅಥವಾ ವಿಶೇಷ ಶಾಖ ಪ್ರತಿಫಲಿತ ಬಣ್ಣವನ್ನು ಹಚ್ಚುವುದರಿಂದ ಸೂರ್ಯನ ಕಿರಣಗಳು ಪ್ರತಿಫಲಿಸುತ್ತದೆ, ಇದರಿಂದಾಗಿ ಮನೆಯೊಳಗಿನ ತಾಪಮಾನವು ಕಡಿಮೆಯಾಗುತ್ತದೆ. ಪರಿಣಾಮವಾಗಿ, ಕೊಠಡಿಗಳು ತುಲನಾತ್ಮಕವಾಗಿ ತಂಪಾಗಿರುತ್ತವೆ, ಫ್ಯಾನ್‌ಗಳು ಅಥವಾ ಏರ್ ಕೂಲರ್‌ಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.
ತಿಳಿ ಬಣ್ಣದ ಪರದೆಗಳನ್ನು ಬಳಸಿ: ಗಾಢ ಬಣ್ಣದ ಕಿಟಕಿ ಪರದೆಗಳು ಶಾಖವನ್ನು ಬೇಗನೆ ಹೀರಿಕೊಳ್ಳುತ್ತವೆ, ಇದರಿಂದಾಗಿ ಕೋಣೆ ಬೇಗನೆ ಬಿಸಿಯಾಗುತ್ತದೆ. ಆದ್ದರಿಂದ, ಕಿಟಕಿಗಳು ಮತ್ತು ಬಾಗಿಲುಗಳಿಗೆ ತಿಳಿ ಬಣ್ಣದ ಹಾಗೂ ಪರದೆಗಳನ್ನು ಅಳವಡಿಸಬೇಕು. ಏಕೆಂದರೆ ತಿಳಿ ಬಣ್ಣಗಳು ಸೂರ್ಯನ ಬೆಳಕನ್ನು ಪ್ರತಿಫಲಿಸುತ್ತವೆ, ಹೀಗಾಗಿ ಕೋಣೆಯ ಉಷ್ಣತೆಯನ್ನು ಕಡಿಮೆಯಾಗುತ್ತದೆ.
ಈ ಸಣ್ಣ ವಿಷಯಗಳನ್ನು ಪಾಲಿಸುವ ಮೂಲಕ ಮನೆಯನ್ನು ತಂಪಾಗಿಟ್ಟುಕೊಳ್ಳುವುದು ಮಾತ್ರವಲ್ಲ ವಿದ್ಯುತ್ ಕೂಡ ಉಳಿಸಬಹುದು.
ದಾವಣಗೆರೆ, ಮಾರ್ಚ್ 28: ಸಚಿವ ಜಮೀರ್ ಅಹ್ಮದ್ರನ್ನು ಪ್ರಚಾರಕ್ಕೆ ಬರುವಂತೆ ಆಹ್ವಾನಿಸಿದ್ದೇನೆ. ಇದೀಗ ಅವರು ಕೇರಳ ಚುನಾವಣಾ ಪ್ರಚಾರಕ್ಕೆ ಹೋಗಿದ್ದಾರೆ. ಚುನಾವಣಾ ಪ್ರಚಾರಕ್ಕೆ ಬರದಿದ್ದರೂ ಒಳ್ಳೆಯದೇ ಎಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಮಲ್ಲಿಕಾರ್ಜುನ ಹೇಳಿದ್ದಾರೆ. ದಾವಣಗೆರೆ ದಕ್ಷಿಣ ಉಪಚುನಾವಣೆ ಹಿನ್ನೆಲೆ ಇಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನಗರದ ವೆಂಕಾಭೋವಿ ಕಾಲೋನಿಯಲ್ಲಿರುವ ಸಾದಿಕ್ ಪೈಲ್ವಾನ್ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲವೂ ಸರಿ ಹೋಗಿದೆ, ನಾವು ಸಾದಿಕ್ ಪೈಲ್ವಾನ್ ಎಲ್ಲಾ ಒಂದೇ. ಎಲ್ಲಾ ಒಂದಾಗಿ ಚುನಾವಣೆ ಮಾಡುತ್ತೇವೆ. ಯಾರು ಕೂಡ ಇಲ್ಲ ಸಲ್ಲದ ಹೇಳಿಕೆಯನ್ನು ಕೊಡುವುದು ಬೇಡ. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸ ಕರಿಯಪ್ಪ ಸಹ ಪರಿಚಯಸ್ಥರೇ ಎಂದಿದ್ದಾರೆ.
ಬೆಂಗಳೂರು , ಮಾ.28 : ರಾಜಧಾನಿಯ ಹೊರವಲಯದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮನುಷ್ಯಕುಲವೇ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿದೆ. ಗುರುವಾರ ಸಂಜೆ ಕಾಣೆಯಾಗಿದ್ದ ಅಸ್ಸಾಂ ಮೂಲದ ಅಪ್ರಾಪ್ತ ಬಾಲಕಿಯ ಶವ ಶನಿವಾರ (ಮಾ.28) ಬೋಳುಗುಟ್ಟದ ನೀಲಗಿರಿ ತೋಪಿನಲ್ಲಿ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಅಸ್ಸಾಂ ಮೂಲದ ಈ ಬಾಲಕಿ ವಿಟ್ಟಸಂದ್ರ ಸಮೀಪದ ಶೆಡ್ ಒಂದರಲ್ಲಿ ತನ್ನ ಪೋಷಕರ ಜೊತೆ ವಾಸವಿದ್ದಳು. ಗುರುವಾರ ಸಂಜೆ ಮನೆ ಬಳಿ ಆಟವಾಡುತ್ತಿದ್ದ ಬಾಲಕಿ ದಿಢೀರ್ ಕಾಣೆಯಾಗಿದ್ದಳು. ಪೋಷಕರು ಸುತ್ತಮುತ್ತ ಎಲ್ಲಾ ಕಡೆ ಹುಡುಕಾಡಿದರೂ ಮಗು ಪತ್ತೆಯಾಗಿರಲಿಲ್ಲ. ಈ ಸಂಬಂಧ ಶುಕ್ರವಾರ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ದೂರು ದಾಖಲಿಸಲಾಗಿತ್ತು.
ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾಗ, ಇಂದು ಸಂಜೆ ಬೋಳುಗುಟ್ಟದ ನಿರ್ಜನ ಪ್ರದೇಶದ ನೀಲಗಿರಿ ತೋಪಿನಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಶವವು ಸಂಪೂರ್ಣ ನಗ್ನ ಸ್ಥಿತಿಯಲ್ಲಿದ್ದು, ಕಿರಾತಕರು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ನಂತರ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅಷ್ಟೇ ಅಲ್ಲದೆ, ಮಗುವಿನ ಗುರುತು ಪತ್ತೆಯಾಗಬಾರದೆಂಬ ಉದ್ದೇಶದಿಂದ ಮುಖವನ್ನು ಕಲ್ಲಿನಿಂದ ಜಜ್ಜಿ ವಿಕೃತವಾಗಿ ಹತ್ಯೆ ಮಾಡಲಾಗಿದೆ.
ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿ ಬಲೆ ಬೀಸಿದ್ದಾರೆ.
ನಯಾಗಢ, ಮಾರ್ಚ್ 28: ಒಡಿಶಾದಲ್ಲಿ ಪ್ರವಾಸಿ ಬಸ್ ರಸ್ತೆಬದಿಯ ಬಂಡೆಗೆ ಡಿಕ್ಕಿ ಹೊಡೆದ ಪರಿಣಾಮದಿಂದ 5 ಜನ ಸಾವನ್ನಪ್ಪಿದ್ದಾರೆ, 40ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಒಡಿಶಾದ (Odisha News) ನಯಾಗಢ ಜಿಲ್ಲೆಯಲ್ಲಿ ಶುಕ್ರವಾರ ತಡರಾತ್ರಿ ಪ್ರವಾಸಿ ಬಸ್ ರಸ್ತೆಬದಿಯ ದೊಡ್ಡ ಬಂಡೆಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮಹಿಳೆಯರು ಸೇರಿದಂತೆ 5 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದಾರೆ.
ಮೃತರೆಲ್ಲರೂ ಬೆರ್ಹಾಂಪುರ್ ನಿವಾಸಿಗಳಾಗಿದ್ದು, ಚಾಲಕ ಕೂಡ ಸಾವನ್ನಪ್ಪಿದ್ದಾರೆ. ವರದಿಗಳ ಪ್ರಕಾರ, ಬೆರ್ಹಾಂಪುರ್‌ನಿಂದ ಹರಿಶಂಕರ್‌ಗೆ ಪ್ರಯಾಣಿಸುತ್ತಿದ್ದ ಖಾಸಗಿ ಬಸ್ 60ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು. ಹನುಮಾನ್ ಘಾಟಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ರಸ್ತೆಬದಿಯಲ್ಲಿದ್ದ ದೈತ್ಯ ಬಂಡೆಗೆ ಡಿಕ್ಕಿ ಹೊಡೆದು ಬಸ್ ಪಲ್ಟಿಯಾದಾಗ ಈ ಅಪಘಾತ ಸಂಭವಿಸಿದೆ.
ಅಪಘಾತದ ಪರಿಣಾಮದಿಂದ ಹಲವಾರು ಪ್ರಯಾಣಿಕರು ಬಸ್‌ನಿಂದ ಹೊರಗೆ ಬಿದ್ದಿದ್ದಾರೆ. 10ಕ್ಕೂ ಹೆಚ್ಚು ಜನರು ಬಸ್‌ನ ಕೆಳಗೆ ಸಿಲುಕಿಕೊಂಡಿದ್ದಾರೆ. ಇದರಿಂದ ಅವರಲ್ಲಿ ಅನೇಕರು ಹೊರಬರಲಾಗದೆ ಒದ್ದಾಡಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಅಗ್ನಿಶಾಮಕ ದಳ ಮತ್ತು ಆಂಬ್ಯುಲೆನ್ಸ್ ಸ್ಥಳಕ್ಕೆ ಆಗಮಿಸಿದವು. ಬಸ್ಸಿನೊಳಗೆ ಸಿಲುಕಿದ್ದ ಪ್ರಯಾಣಿಕರನ್ನು ಗ್ಯಾಸ್ ಕಟ್ಟರ್ ಬಳಸಿ ರಕ್ಷಿಸಲಾಯಿತು.
ಗಾಯಗೊಂಡ ಪ್ರಯಾಣಿಕರನ್ನು ದಸ್ಪಲ್ಲಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಯಿತು. ಕೆಲವರನ್ನು ಜಿಲ್ಲಾ ಕೇಂದ್ರದ ಆಸ್ಪತ್ರೆಗಳಿಗೆ ಕಳುಹಿಸಲಾಯಿತು. “ಚಾಲಕ ಬಸ್ ಅನ್ನು ಅತಿ ವೇಗದಲ್ಲಿ ಓಡಿಸುತ್ತಿದ್ದ. ಅತಿ ವೇಗವೇ ಅಪಘಾತಕ್ಕೆ ಕಾರಣ” ಎಂದು ಪ್ರಯಾಣಿಕ ಆರಿಯಾ ಪಾತ್ರ ಹೇಳಿದ್ದಾರೆ.
ಅಪಘಾತದ ಕಾರಣವನ್ನು ಕಂಡುಹಿಡಿಯಲು ಅಧಿಕಾರಿಗಳು ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ