Headlines

nagaraj11081993

ವಿಕ್ಟೋರಿಯಾ ಆಸ್ಪತ್ರೆ ಮೇಲೆ ಲೋಕಾ ದಿಢೀರ್ ದಾಳಿ! ಐಸಿಯು ಅವ್ಯವಸ್ಥೆ ಬಯಲು

ಬೆಂಗಳೂರು, ಮಾರ್ಚ್​ 28: ಕರ್ನಾಟಕ ಲೋಕಾಯುಕ್ತ ತಂಡದ ಏಕಾಏಕಿ ಭೇಟಿ ವೇಳೆ ಶಾಂತವೇರಿ ಗೋಪಾಲ ಗೌಡ ಆಸ್ಪತ್ರೆಯ (ವಿಕ್ಟೋರಿಯಾ ಆಸ್ಪತ್ರೆ) ಟ್ರಾಮಾ ಕೇರ್ ಸೆಂಟರ್‌ನಲ್ಲಿ ಗಂಭೀರ ಅವ್ಯವಸ್ಥೆಗಳು ಬೆಳಕಿಗೆ ಬಂದಿವೆ. ಐಸಿಯುನಲ್ಲಿ ಅವಧಿ ಮೀರಿದ ಔಷಧಿಗಳು ಪತ್ತೆಯಾಗಿದ್ದು, ಖಾಲಿ ಹಾಸಿಗೆಗಳಿದ್ದರೂ ತುರ್ತು ರೋಗಿಗೆ ದಾಖಲಾತಿ ನಿರಾಕರಿಸಿರುವುದು ಗಮನಕ್ಕೆ ಬಂದಿದೆ. ಹಾಸಿಗೆಗಳಿದ್ದರೂ ರೋಗಿಗಳಿಗೆ ದಾಖಲಾತಿ ಇಲ್ಲ! ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ್ , ವೆಂಟಿಲೇಟರ್ ದೋಷದಿಂದ ಹಾಸಿಗೆಗಳು ಬಳಸಿಲ್ಲ ಎಂದು ಹೇಳಿರುವುದು ಆಸ್ಪತ್ರೆಯ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದಿದ್ದಾರೆ….

Read More

PSLನ ಬಿಗ್ ಆಫರ್ ತ್ಯಜಿಸಿ IPLಗೆ ಬಂದ ಆಸ್ಟ್ರೇಲಿಯನ್ ವೇಗಿ..!

ಪಾಕಿಸ್ತಾನ್ ಸೂಪರ್ ಲೀಗ್ (PSL 2026) ತ್ಯಜಿಸಿ ಇಂಡಿಯನ್ ಪ್ರೀಮಿಯರ್ ಲೀಗ್​ಗೆ (IPL 2026) ಆಗಮಿಸುತ್ತಿರುವ ಆಟಗಾರರ ಪಟ್ಟಿ ಬೆಳೆಯುತ್ತಿದೆ. ಇದೀಗ ಈ ಪಟ್ಟಿಗೆ ಹೊಸ ಸೇರ್ಪಡೆ ಆಸ್ಟ್ರೇಲಿಯಾ ವೇಗಿ ಸ್ಪೆನ್ಸರ್ ಜಾನ್ಸನ್. ಸ್ಪೆನ್ಸರ್ ಈ ಬಾರಿಯ ಐಪಿಎಲ್​ಗೆ ಆಯ್ಕೆಯಾಗಿರಲಿಲ್ಲ. ಇತ್ತ ಐಪಿಎಲ್​ನಲ್ಲಿ ಚಾನ್ಸ್ ಸಿಗದ ಕಾರಣ ಸ್ಪೆನ್ಸರ್ ಜಾನ್ಸನ್ ಪಾಕಿಸ್ತಾನ್ ಸೂಪರ್​ ಲೀಗ್​​ಗೆ ಹೆಸರು ನೀಡಿದ್ದಾರೆ. ಅದರಂತೆ ಅವರನ್ನು ಕ್ವೆಟ್ಟಾ ಗ್ಲಾಡಿಯೇಟರ್ಸ್ ಫ್ರಾಂಚೈಸಿಯು ಆಸ್ಟ್ರೇಲಿಯಾ ವೇಗಿಯನ್ನು ₹1.88 ಕೋಟಿ ರೂ.ಗೆ (PKR) ಖರೀದಿಸಿತ್ತು. ಆದರೆ ಇದೀಗ…

Read More

ಸಂಜನಾ ಬುರ್ಲಿ ಮದುವೆಯ ಫೋಟೋಗಳು ಎಷ್ಟು ಸುಂದರವಾಗಿವೆ ನೋಡಿ

ಸಂನಾ ಬುರ್ಲಿ ಅವರು ಸಮರ್ಥ್ ಚೆನ್ನಗಿರಿ ಜೊತೆ ವಿವಾಹ ಆಗಿದ್ದಾರೆ. ಅವರ ವಿವಾಹದ ಮುದ್ದಾದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿವೆ.  ಸಂಜನಾ ಬುರ್ಲಿ ಅವರು ಹಲವು ವರ್ಷಗಳಿಂದ ಕಿರುತೆರೆಯಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ನಟಿಸಿದ್ದರು. ಆ ಬಳಿಕ ‘ಕಲರ್ಸ್ ಕನ್ನಡ’ಕ್ಕೆ ಬಂದರು.  ಸಂಜನಾ ಬುರ್ಲಿ ಅವರು ‘ಶ್ರೀ ಗಂಧದ ಗುಡಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ವಿವಾಹ ಕಾರಣದಿಂದ ಅವರು ಧಾರಾವಾಹಿಯನ್ನು ಅರ್ಧಕ್ಕೆ ತೊರೆದಿದ್ದರು.  ಈಗ ಸಂಜನಾ ಬುರ್ಲಿ ಅವರು ಸಮರ್ಥ ಚೆನ್ನಗಿರಿ ಅವರನ್ನು…

Read More

Girl Child as Lakshmi: ಹೆಣ್ಣು ಮಗು ಜನಿಸಿದರೆ ಮನೆಯ ಅದೃಷ್ಟವೇ ಬದಲಾಗುತ್ತದೆಯೇ? ಶಾಸ್ತ್ರಗಳು ಹೇಳುವುದೇನು?

ಭಾರತೀಯ ಪರಂಪರೆಯಲ್ಲಿ ಹೆಣ್ಣು ಮಗುವಿನ ಜನನವು ಕೇವಲ ಒಂದು ಕುಟುಂಬದ ವಿಸ್ತರಣೆಯಲ್ಲ, ಅದು ಸಾಕ್ಷಾತ್ ಲಕ್ಷ್ಮಿ ದೇವಿಯ ಆಗಮನವೆಂದೇ ಶತಶತಮಾನಗಳಿಂದ ನಂಬಿಕೊಂಡು ಬರಲಾಗಿದೆ. ಮನೆಯ ಅಂಗಳದಲ್ಲಿ ಹೆಣ್ಣು ಮಗುವಿನ ನಗು ಕೇಳಿಸಿದರೆ ಅಲ್ಲಿ ದಾರಿದ್ರ್ಯ ಸುಳಿಯುವುದಿಲ್ಲ ಎಂಬ ಮಾತು ಕೇವಲ ಭಾವನಾತ್ಮಕ ನುಡಿಯಲ್ಲ, ಅದರ ಹಿಂದೆ ಆಳವಾದ ಆಧ್ಯಾತ್ಮಿಕ ಮತ್ತು ಜ್ಯೋತಿಷ್ಯ ಶಾಸ್ತ್ರದ ಕಾರಣಗಳಿವೆ. ಹೆಣ್ಣು ಮಗು ಜನಿಸಿದಾಗ ಆಕೆಯ ಜಾತಕದಲ್ಲಿರುವ ಗ್ರಹಗತಿಗಳು ಇಡೀ ಕುಟುಂಬದ ಅದೃಷ್ಟವನ್ನೇ ಬದಲಿಸುವ ಶಕ್ತಿ ಹೊಂದಿರುತ್ತವೆ ಎಂದು ಶಾಸ್ತ್ರಗಳು ಉಲ್ಲೇಖಿಸುತ್ತವೆ. ಜ್ಯೋತಿಷ್ಯ…

Read More

ನೇಪಾಳ: ಬಲೆನ್ ಶಾ ಅಧಿಕಾರ ಸ್ವೀಕಾರ ಬೆನ್ನಲ್ಲೇ ಮಾಜಿ ಪ್ರಧಾನಿ ಕೆಪಿ ಶರ್ಮಾ ಒಲಿ ಬಂಧನ

ಕಾಠ್ಮಂಡು, ಮಾರ್ಚ್ 28: ನೇಪಾಳ (Nepal) ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ನೂತನ ಪ್ರಧಾನಿಯಾಗಿ ಬಾಲೆನ್ ಶಾ ಹಾಗೂ ಸಂಪುಟ ಸಚಿವರು ಪ್ರಮಾಣವಚನ ಸ್ವೀಕರಿಸಿದ ಮರುದಿನವೇ ಮಾಜಿ ಪ್ರಧಾನಿ ಕೆಪಿ ಶರ್ಮಾ ಒಲಿ (KP Sharma Oli) ಅವರನ್ನು ಬಂಧಿಸಲಾಗಿದೆ. ಕಳೆದ ವರ್ಷ ನಡೆದ ಭ್ರಷ್ಟಾಚಾರ ವಿರೋಧಿ ‘ಜೆನ್ ಜಿ (Gen Z)’ ಪ್ರತಿಭಟನೆಯ ವೇಳೆ ಕನಿಷ್ಠ 77 ಜನರ ಸಾವಿಗೆ ಕಾರಣವಾದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಒಲಿ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ. ಒಲಿ ಅವರೊಂದಿಗೆ ಮಾಜಿ ಗೃಹ…

Read More

ರಿಲೀಸ್ ಆಗಿ ಕೆಲವೇ ವಾರಕ್ಕೆ ಒಟಿಟಿಗೆ ಬರ್ತಿದೆ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ

ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಇತ್ತೀಚೆಗೆ ಥಿಯೇಟರ್​ ಅಲ್ಲಿ ಬಿಡುಗಡೆ ಕಂಡಿತು. ಮಾರ್ಚ್ 19ರಂದ ಸಿನಿಮಾ ‘ಧುರಂಧರ್ 2’ ಎದುರು ರಿಈಸ್ ಆಗಿ, 100 ಕೋಟಿ ರೂಪಾಯಿ ಗಳಿಸಲು ಒದ್ದಾಡುತ್ತಿದೆ. ಮಾಸ್ ಆ್ಯಕ್ಷನ್ ಎಂಟರ್ಟೈನರ್ ಆಗಿರುವ ಈ ಚಿತ್ರದಲ್ಲಿ ಶ್ರೀಲೀಲಾ ನಾಯಕಿ. ರಾಶಿ ಖನ್ನಾ ಕೂಡ ಮತ್ತೊಂದು ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಕಾಲಿವುಡ್ ನಟ ಪಾರ್ಥಿಬನ್ ಈ ಚಿತ್ರದಲ್ಲಿ ಖಳನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರ ರಿಲೀಸ್ ಆದ ಕೆಲವೇ ವಾರದಲ್ಲಿ ಒಟಿಟಿಗೆ ಬರುತ್ತಿದೆ. ಪವನ್ ಕಲ್ಯಾಣ್ ಅವರ…

Read More

IPL 2026: CSK ಅಭಿಮಾನಿಗಳಿಗೆ ಬಿಗ್ ಶಾಕ್: ಎಂಎಸ್​ ಧೋನಿ ಅಲಭ್ಯ..!

IPL 2026:  ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೂ ಮುನ್ನವೇ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಪ್ರಮುಖ ಆಟಗಾರ ಮಹೇಂದ್ರ ಸಿಂಗ್ ಧೋನಿ (MS Dhoni) ಐಪಿಎಲ್​ನ ಆರಂಭಿಕ ಪಂದ್ಯಗಳಿಂದ ಹೊರಗುಳಿಯುವುದು ಖಚಿತವಾಗಿದೆ. ಎಂ.ಎಸ್. ಧೋನಿ ಅವರು ಸ್ನಾಯು ಸೆಳೆತದ ಸಮಸ್ಯೆಯಿಂದ  ಬಳಲುತ್ತಿದ್ದು, ಈ ಕಾರಣದಿಂದ ಐಪಿಎಲ್​ನ ಮೊದಲ ಎರಡು ವಾರಗಳ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ. ಅಂದರೆ ರಾಜಸ್ಥಾನ್ ರಾಯಲ್ಸ್, ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯಗಳಿಗೆ ಧೋನಿ…

Read More

‘ನೀವೆಲ್ಲಾ ಟೆರರಿಸ್ಟ್​ಗಳು’: ಮುಸ್ಲಿಮ್ ವಿದ್ಯಾರ್ಥಿಗೆ ಕ್ಲಾಸ್​ನಲ್ಲೇ ಅವಮಾನಿಸಿದ ಪ್ರೊಫೆಸರ್!

ಬೆಂಗಳೂರು, ಮಾರ್ಚ್​ 28: ಪಿಇಎಸ್ ವಿಶ್ವವಿದ್ಯಾಲಯನಲ್ಲಿ ಪ್ರೊಫೆಸರ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಬನಶಂಕರಿ ರಿಂಗ್ ರೋಡ್‌ನಲ್ಲಿರುವ ಕ್ಯಾಂಪಸ್‌ನಲ್ಲಿ ಪಾಠ ಮಾಡುತ್ತಿದ್ದ ವೇಳೆ ಕೋಪಗೊಂಡ ಪ್ರೊಫೆಸರ್ ಡಾ. ಮೂರಳಿಧರ ದೇಶಪಾಂಡೆ ತರಗತಿಯಲ್ಲಿದ್ದ ಮುಸ್ಲಿಂ ವಿದ್ಯಾರ್ಥಿಯನ್ನು ‘ಭಯೋತ್ಪಾದಕ’ ಎಂದು ಕರೆದು ಅವಮಾನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಘಟನೆ ಎರಡು ದಿನಗಳ ಹಿಂದೆ ನಡೆದಿದೆ. ಪಾಠದ ಮಧ್ಯದಲ್ಲಿ ಮಕ್ಕಳ ಗಲಾಟೆಯಿಂದಲೋ ಏನೋ ದೇಶಪಾಂಡೆ ಗರಂ ಆಗಿದ್ದು, ನೀವೆಲ್ಲಾ ಭಯೋತ್ಪಾದಕರು ಎಂದೆಲ್ಲಾ ನಿಂದಿಸಿದ್ದಾರೆ. ಇದೇ ವೇಳೆ ತರಗತಿಯಲ್ಲಿ ಕುಳಿತಿದ್ದ ವಿದ್ಯಾರ್ಥಿಗಳು ತಮ್ಮ…

Read More

Viral: ಇದು ರೈತನ ವಿಭಿನ್ನ ರಾಮನವಮಿ ಸೆಲೆಬ್ರೇಶನ್; ಹೂಕೋಸಿನಲ್ಲಿ ಮೂಡಿ ಬಂದ ರಾಮ, ಸೀತೆ, ಹನುಮಂತ

ಮರ್ಯಾದಾ ಪುರುಷ, ಪುರುಷೋತ್ತಮ ಭಗವಾನ್ ಶ್ರೀ ರಾಮನ (Shri Rama) ಜನ್ಮದಿನವನ್ನು ದೇಶದೆಲ್ಲೆಡೆ ಶ್ರದ್ಧಾಭಕ್ರಿಯಿಂದ ಆಚರಿಸಲಾಗಿದೆ. ಹಿಂದೂಗಳಿಗೆ ಯುಗಾದಿ (Ugadi festival) ವರುಷದ ಮೊದಲ ಹಬ್ಬವಾದರೆ, ತದನಂತರ ಬರುವುದೇ ಈ ರಾಮನವಮಿ (Rama Navami). ಈ ಹಬ್ಬದಂದು ಕೋಟ್ಯಾಂತರ ಭಕ್ತರು ರಾಮನನ್ನು ಪೂಜಿಸಿ, ಆರಾಧಿಸುತ್ತಾರೆ. ಆದರೆ ಇಲ್ಲೊಬ್ಬ ರೈತನು ತಾನು ಬೆಳೆದ ಹೂಕೋಸಿನಲ್ಲಿ ರಾಮ, ಸೀತೆ ಹನುಮಂತನ ಚಿತ್ರ ಬಿಡಿಸಿದ ರಾಮನವಮಿಯನ್ನು ಸಂಭ್ರಮಿಸಿದ್ದಾನೆ. ಈ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಮೆಚ್ಚುಗೆಗೆ ಪಾತ್ರವಾಗಿದೆ. ನಂದಿನಿ…

Read More

ರಚಿತಾ ರಾಮ್​ಗೆ ಹಾಡಿನ ಮೂಲಕ ಪ್ರಪೋಸ್ ಮಾಡಿದ ಸಿದ್ದೇಗೌಡ್ರು

‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಸಿದ್ದೇಗೌಡ್ರು ಹೆಸರಿನ ಪಾತ್ರವನ್ನು ಧನಂಜಯ್ ಮಾಡುತ್ತಿದ್ದಾರೆ. ಅವರು ಯುವ ಕಲಾವಿದ. ಈಗ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆ ಮೇಲೆ ರಚಿತಾ ರಾಮ್​​ಗೋಸ್ಕರ ಅವರು ಕವಿಯಾಗಿದ್ದಾರೆ. ಸಾಲುಗಳ ಮೂಲಕ ರಚಿತಾಗೆ ಪ್ರಪೋಸ್ ಮಾಡಿದ್ದಾರೆ. ಈ ವಿಡಿಯೋ ಗಮನ ಸೆಳೆದಿದೆ. ಸಿದ್ದೇಗೌಡ್ರ ಸಾಲುಗಳು ಗಮನ ಸೆಳೆದಿವೆ. ಆ ಸಂದರ್ಭದ ವಿಡಿಯೋ ಮೇಲಿದೆ ನೋಡಿ. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ. Source link

Read More