All posts by nagaraj11081993

ಭಾವನಿಂದಲೇ ಬಾಮೈದ ಕೊಲೆ ಕೇಸ್: ನನ್ನ ಮಗನನ್ನ ಅಳಿಯನೇ ಕೊಂದ ಎಂದ ರಂಜಿತ್ ತಾಯಿ

ಭಾವನಿಂದಲೇ ಬಾಮೈದ ಕೊಲೆ ಕೇಸ್: ನನ್ನ ಮಗನನ್ನ ಅಳಿಯನೇ ಕೊಂದ ಎಂದ ರಂಜಿತ್ ತಾಯಿ

ಆನೇಕಲ್, ಮಾರ್ಚ್ 27: ಭಾವನೇ ಬಾಮೈದನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೃತ ರಂಜಿತ್ ತಾಯಿ ಪ್ರತಿಕ್ರಿಯಿಸಿದ್ದು, ಈ ಘಟನೆ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. ತಮ್ಮ ಮಗನನ್ನು ಅಳಿಯ ಶ್ರೀನಿವಾಸ್​ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ತಮ್ಮ ಮಗ ಮತ್ತು ಶ್ರೀನಿವಾಸ್‌ನ ತಂಗಿ ಕೋಮಲ್​ ಇಬ್ಬರು ಓಡಿಹೋಗಿ ಹೈದರಾಬಾದ್‌ನಲ್ಲಿ ಒಂದು ತಿಂಗಳು ಇದ್ದು, ಬಳಿಕ ವಾಪಸ್ ಬಂದಿದ್ದರು. ಕೊಲೆ ನಡೆದ ರಾತ್ರಿ, ನವೀನ್ ಮತ್ತು ಶ್ರೀನಿವಾಸ್ ಸೇರಿದಂತೆ ನಾಲ್ವರು ಬಂದು ಮಗನನ್ನು ಕರೆದುಕೊಂಡು ಹೋಗಿದ್ದಾರೆ ಎಂದು ತಾಯಿ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

IPL 2026: ಚಿನ್ನಸ್ವಾಮಿ ಪಿಚ್ ಯಾರಿಗೆ ಸಹಕಾರಿ? ಪಂದ್ಯದ ದಿನ ಬೆಂಗಳೂರು ಹವಾಮಾನ ಹೇಗಿರಲಿದೆ?

2026 ರ ಐಪಿಎಲ್ (IPL 2026), ಶನಿವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದೊಂದಿಗೆ ಆರಂಭವಾಗಲಿದೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ (RCB vs SRH) ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಸುಮಾರು ಒಂದು ವರ್ಷದ ಬಳಿಕ ಚಿನ್ನಸ್ವಾಮಿ ಮೈದಾನ ಕ್ರಿಕೆಟ್ ಪಂದ್ಯವನ್ನು ಆಯೋಜಿಸುತ್ತಿದೆ. ಹೀಗಾಗಿ ಬೆಂಗಳೂರಿನ ಕ್ರಿಕೆಟ್ ಪ್ರಿಯರು ಕೂಡ ಈ ಪಂದ್ಯಕ್ಕೆ ಕಾತುರದಿಂದ ಕಾದಿದ್ದಾರೆ. ಹೀಗಾಗಿ ಈ ಪಂದ್ಯ ನಡೆಯುವ ಚಿನ್ನಸ್ವಾಮಿ ಮೈದಾನ ಯಾರಿಗೆ ಹೆಚ್ಚು ನೆರವು ನೀಡಲಿದೆ? ಮತ್ತು ಪಂದ್ಯದ ದಿನ ಬೆಂಗಳೂರಿನ ಹವಾಮಾನ ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳುವುದು ಬಹುಮುಖ್ಯ.

ಪಿಚ್ ಯಾರಿಗೆ ಸಹಕಾರಿ?

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಸಾಮಾನ್ಯವಾಗಿ ಸಮತಟ್ಟಾಗಿರುತ್ತದೆ. ಅಂದರೆ ಈ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿರಲಿದೆ. ಚೆಂಡು ಉತ್ತಮ ಬೌನ್ಸ್ ಮತ್ತು ವೇಗದೊಂದಿಗೆ ಬ್ಯಾಟ್‌ಗೆ ಚೆನ್ನಾಗಿ ಬರುತ್ತದೆ. ಮೈದಾನವು ತುಂಬಾ ಚಿಕ್ಕದಾಗಿರುವುದರ ಜೊತೆಗೆ ಔಟ್‌ಫೀಲ್ಡ್ ವೇಗವಾಗಿರುತ್ತದೆ. ಹೀಗಾಗಿ ಈ ಮೈದಾನದಲ್ಲಿ ರನ್ ಮಳೆ ಹರಿಯುವುದು ಖಚಿತ. ಆದಾಗ್ಯೂ, ಈ ಮೈದಾನದಲ್ಲಿ ಇಬ್ಬನಿ ಫಲಿತಾಂಶದ ಮೇಲೆ ಪ್ರಮುಖ ಪಾತ್ರವಹಿಸುತ್ತದೆ. ಸಂಜೆಯ ಇಬ್ಬನಿಯು ಚೇಸಿಂಗ್ ತಂಡಕ್ಕೆ ಅನುಕೂಲಕರವಾಗಿರುತ್ತದೆ, ಆದ್ದರಿಂದ ಟಾಸ್ ಗೆದ್ದ ನಾಯಕ ಮೊದಲು ಬೌಲಿಂಗ್ ಆಯ್ಕೆ ಮಾಡುವುದನ್ನು ನಿರೀಕ್ಷಿಸಬಹುದು.

ಬೆಂಗಳೂರಿನ ಹವಾಮಾನ ಹೇಗಿರಲಿದೆ?

ಮಾರ್ಚ್ 28 ರಂದು ಬೆಂಗಳೂರಿನಲ್ಲಿ ಹವಾಮಾನ ಪಂದ್ಯಕ್ಕೆ ಅನುಕೂಲಕರವಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ಆದಾಗ್ಯೂ ಕಳೆದ ವಾರ ಬೆಂಗಳೂರಿನಲ್ಲಿ ಭರ್ಜರಿ ಮಳೆಯಾಗಿತ್ತು. ಹೀಗಾಗಿ ಬೆಂಗಳೂರಿನಲ್ಲಿ ಯಾವಾಗ ಹವಾಮಾನ ಬದಲಾಗುತ್ತದೆ ಎಂದು ಹೇಳುವುದು ಕಷ್ಟ. ಆದರೆ ಹವಾಮಾನ ವರದಿಯ ಪ್ರಕಾರ, ಪಂದ್ಯದ ದಿನದಂದು ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆಗಳಿಲ್ಲ. ಶನಿವಾರ ಸಂಜೆ ಬೆಂಗಳೂರಿನ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಆರ್ದ್ರತೆಯು ಶೇಕಡಾ 67 ರಷ್ಟಿರಬಹುದು.

IPL 2026: ಆರ್​ಸಿಬಿ- ಎಸ್‌ಆರ್‌ಎಚ್ ಪಂದ್ಯ ಎಷ್ಟು ಗಂಟೆಗೆ ಆರಂಭ? ಉಚಿತವಾಗಿ ವೀಕ್ಷಿಸುವುದು ಹೇಗೆ?

ಏಪ್ರಿಲ್ 5 ರವರೆಗೆ ಮಳೆ ಮುನ್ಸೂಚನೆ

ಏಪ್ರಿಲ್ 5ರ ವರೆಗೆ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ, ದಾವಣಗೆರೆ, ವಿಜಯಪುರ, ಮೈಸೂರು, ವಿಜಯಪುರ, ಮೈಸೂರು, ವಿಜಯಪುರದಲ್ಲಿ ಮಳೆಯ ಮುನ್ಸೂಚನೆ ನೀಡಲಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಶ್ನೆ ಪತ್ರಿಕೆಯಲ್ಲೂ ಕಾಣಿಸಿದ ‘ಧುರಂಧರ್’ ಸಿನಿಮಾದ ಪಾತ್ರಗಳು: ಫೋಟೋ ವೈರಲ್

ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ, ಆದಿತ್ಯ ಧರ್ ನಿರ್ದೇಶನದ ‘ಧುರಂಧರ್: ದಿ ರಿವೆಂಜ್’ (Dhurandhar: The Revenge) ಸಿನಿಮಾ ಸದ್ಯ ಭಾರತೀಯ ಚಿತ್ರರಂಗದಲ್ಲಿ ಸುನಾಮಿ ಎಬ್ಬಿಸಿದೆ. ಚಿತ್ರಮಂದಿರಗಳಲ್ಲಿ ದಾಖಲೆ ಬರೆಯುತ್ತಿರುವ ಈ ಸಿನಿಮಾ ಈಗ ಅನಿರೀಕ್ಷಿತ ಟ್ವಿಸ್ಟ್ ಪಡೆದುಕೊಂಡಿದೆ. ಪ್ರಶ್ನೆ ಪತ್ರಿಕೆಯಲ್ಲಿ ಕೂಡ ‘ಧುರಂಧರ್’ ಸಿನಿಮಾದ ಪಾತ್ರಗಳ ಹೆಸರನ್ನು ಪ್ರಸ್ತಾಪಿಸಲಾಗಿದೆ! ಇದಕ್ಕೆ ಸಂಬಂಧಿಸಿದ ಒಂದು ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಪ್ರಶ್ನೆ ಪತ್ರಿಕೆಯನ್ನು (Accounts Question Paper) ನೋಡಿದ ನೆಟ್ಟಿಗರು ಹತ್ತಾರು ಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಫೋಟೋವೊಂದು ಸಖತ್ ವೈರಲ್ ಆಗುತ್ತಿದೆ. ಅಕೌಂಟ್ಸ್ ವಿಷಯದ ಪ್ರಶ್ನೆಪತ್ರಿಕೆಯಲ್ಲಿ ಶಿಕ್ಷಕರು ಸಿನಿಮಾದ ಪಾತ್ರಗಳನ್ನು ಬಳಸಿ ಲೆಕ್ಕದ ಪ್ರಶ್ನೆಗಳನ್ನು ಸಿದ್ಧಪಡಿಸಿದ್ದಾರೆ. ಇದನ್ನು ಹಂಚಿಕೊಂಡಿರುವ ನೆಟ್ಟಿಗರೊಬ್ಬರು, ‘ಧುರಂಧರ್ ಎಷ್ಟು ವೈರಲ್ ಆಗಿದೆ ಎಂದರೆ, ಅಕೌಂಟ್ಸ್ ಸರ್ ಕೂಡ ಈ ಸಿನಿಮಾದ ಫ್ಯಾನ್ ಆಗಿದ್ದಾರೆ’ ಎಂದು ಕ್ಯಾಪ್ಶನ್ ನೀಡಿದ್ದಾರೆ.

ಸಾಮಾನ್ಯವಾಗಿ ಅಕೌಂಟ್ಸ್ ಪರೀಕ್ಷೆ ಎಂದರೆ ವಿದ್ಯಾರ್ಥಿಗಳಿಗೆ ಸ್ವಲ್ಪ ಒಣ ವಿಷಯ ಎನಿಸುವುದು ಸಹಜ. ಆದರೆ ಇಲ್ಲಿ ಶಿಕ್ಷಕರು ಸಿನಿಮಾದ ಪಾತ್ರಗಳಾದ ಹಮ್ಜಾ ಅಲಿ ಮಜಾರಿ, ರೆಹಮಾನ್ ಡಕಾಯತ್ ಮತ್ತು ಉಜೈರ್ ಬಲೋಚ್ ಅವರ ಹೆಸರುಗಳನ್ನು ಪ್ರಶ್ನೆಗಳಲ್ಲಿ ಬಳಸಿದ್ದಾರೆ. ಒಂದು ಪ್ರಶ್ನೆಯಲ್ಲಿ ‘ರೆಹಮಾನ್ 2025ರ ಡಿಸೆಂಬರ್ 5ರಂದು ನಿಧನರಾದರು’ ಎಂದು ಉಲ್ಲೇಖಿಸಿ ಅದರ ಆಧಾರದ ಮೇಲೆ ಲೆಕ್ಕ ಮಾಡಲು ಹೇಳಲಾಗಿದೆ. ಶಿಕ್ಷಕರ ಈ ಕ್ರಿಯೇಟಿವ್ ಐಡಿಯಾಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ಮಾರ್ಚ್ 19ರಂದು ತೆರೆಕಂಡ ‘ಧುರಂಧರ್: ದಿ ರಿವೆಂಜ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ರಣವೀರ್ ಸಿಂಗ್ ಜೊತೆಗೆ ಆರ್. ಮಾಧವನ್, ಸಂಜಯ್ ದತ್, ಅರ್ಜುನ್ ರಾಮ್ಪಾಲ್, ರಾಕೇಶ್ ಬೇಡಿ, ಸಾರಾ ಅರ್ಜುನ್ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಆದಿತ್ಯ ಧರ್ ಅವರ ನಿರ್ದೇಶನಕ್ಕೆ ಅನೇಕ ಸೆಲೆಬ್ರಿಟಿಗಳು ಫಿದಾ ಆಗಿದ್ದಾರೆ.

ಇದನ್ನೂ ಓದಿ: ‘ಧುರಂಧರ್’ ಸಿನಿಮಾದಲ್ಲಿನ ಹಲವು ತಪ್ಪುಗಳ ಪಟ್ಟಿ ನೀಡಿದ ಪಾಕಿಸ್ತಾನಿ ಪ್ರೇಕ್ಷಕರು

ಕೇವಲ 7 ದಿನಗಳಲ್ಲಿ ಈ ಸಿನಿಮಾ ವಿಶ್ವದಾದ್ಯಂತ ಅಂದಾಜು 1 ಸಾವಿರ ಕೋಟಿ ರೂಪಾಯಿ ಗಳಿಕೆ ಮಾಡುವ ಮೂಲಕ ಇತಿಹಾಸ ನಿರ್ಮಿಸಿದೆ. ಸಿನಿಮಾದ ಚಿತ್ರಕಥೆ ಮತ್ತು ಭರ್ಜರಿ ಆ್ಯಕ್ಷನ್ ದೃಶ್ಯಗಳು ಪ್ರೇಕ್ಷಕರಿಗೆ ಇಷ್ಟ ಆಗಿವೆ. ಶಾಲಾ-ಕಾಲೇಜಿನ ಪರೀಕ್ಷೆಯಲ್ಲೂ ಈ ಸಿನಿಮಾದ ಪಾತ್ರಗಳು ಕಾಣಿಸಿಕೊಳ್ಳುತ್ತಿರುವುದು ಚಿತ್ರದ ಜನಪ್ರಿಯತೆ ಎಷ್ಟರ ಮಟ್ಟಿಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೀನುಗಾರರ ಸಾಲ ಮನ್ನಾ ಹೆಸರಲ್ಲಿ ಕೋಟ್ಯಂತರ ರೂ ವಂಚನೆ: ಮೂಕಾಂಬಿಕಾ ಟ್ರಸ್ಟ್ ವಿರುದ್ಧ ದೂರು ದಾಖಲಿಸಿದ ಇಡಿ

ಮಂಗಳೂರು, ಮಾರ್ಚ್​ 27: ಉಡುಪಿ ಜಿಲ್ಲೆಯ ವಿವಿಧ ಮೀನುಗಾರರ ಸ್ವಸಹಾಯ ಗುಂಪುಗಳ ಹೆಸರಲ್ಲಿ ವಂಚನೆಯಿಂದ ಪಡೆದ ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ, ಮಂಗಳೂರು ಉಪ ವಲಯ ಜಾರಿ ನಿರ್ದೇಶನಾಲಯವು (ED) 2002ರ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ, ಮೂಕಾಂಬಿಕಾ ಗ್ರಾಮೀಣಾಭಿವೃದ್ಧಿ ಟ್ರಸ್ಟ್, ಶ್ರೀಮತಿ ಬೇಬಿ, ಹರೀಶ್, ಪಿ. ರಾಮದಾಸ್ ಮತ್ತು ರಾಮಕೃಷ್ಣ ಪಿ ವಿರುದ್ಧ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಿಸಿದೆ.

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಸಾಲ ಮನ್ನಾ ಯೋಜನೆಯನ್ನು ಬಳಸಿಕೊಂಡು ಅನರ್ಹ ಮೀನುಗಾರರ ಸ್ವಸಹಾಯ ಗುಂಪುಗಳ ಸಾಲ ಮನ್ನಾ ಮಾಡಿದ್ದಕ್ಕಾಗಿ ಶ್ರೀಮತಿ ಬೇಬಿ ಕೊಟಾರಿ, ಹರೀಶ್ ಖಾರ್ವಿ, ರಾಮದಾಸ ಖ್ರಾವಿ ಮತ್ತು ರಾಮಕೃಷ್ಣ ದೇವಾಡಿಗ ವಿರುದ್ಧ ಇತ್ತೀಚೆಗೆ ಉಡುಪಿಯ ಬೈಂದೂರು ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿತ್ತು. ದಾಖಲಾಗಿದ್ದ ಎಫ್‌ಐಆರ್ ಆಧಾರದ ಮೇಲೆ ಇದೀಗ ಇಡಿ ತನಿಖೆ ಆರಂಭಿಸಿದೆ.

ಇ.ಡಿ ಟ್ವೀಟ್​

ಆರೋಪಿಗಳು 2017-18ರ ಹಣಕಾಸು ವರ್ಷದಲ್ಲಿ ಮೂಕಾಂಬಿಕಾ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಮೂಲಕ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ ವಿವಿಧ ಸ್ವಸಹಾಯ ಗುಂಪುಗಳಿಗೆ ಸಾಲ ನೀಡಿದ್ದಾರೆ. ಸಾಲದ ಕಂತಿನ ಮೊತ್ತವನ್ನು ಬ್ಯಾಂಕಿನಲ್ಲಿ ಸಂಗ್ರಹಿಸಿಟ್ಟು ಬಳಿಕ ಮರುಪಾವತಿ ಮಾಡಲು ಸಹಾಯ ಮಾಡಿದ್ದರು ಎಂದು ಇಡಿ ತನಿಖೆಯಿಂದ ತಿಳಿದುಬಂದಿದೆ.

ಇದನ್ನೂ ಓದಿ: ಅಧಿಕಾರಿಗಳಿಗೆ ನಾನು ಬಂಟ್ವಾಳ ಶಾಸಕ ಎಂದೇ ಗೊತ್ತಿಲ್ಲ, ರಮಾನಾಥ್ ರೈರನ್ನೇ ಸಚಿವ ಎಂದೇ ಭಾವಿಸಿದ್ದಾರೆ: ರಾಜೇಶ್ ನಾಯಕ್ ಆಕ್ರೋಶ

ಆದಾಗ್ಯೂ, ಆರೋಪಿಗಳು ಸ್ವಸಹಾಯ ಗುಂಪುಗಳು ನೀಡಿದ ಸಂಪೂರ್ಣ ಮರುಪಾವತಿ ಮೊತ್ತವನ್ನು ಹಾಗೆಯೇ ಠೇವಣಿ ಇಡಲು ವಿಫಲರಾಗಿದ್ದು ಮತ್ತು ಕಂತುಗಳ ಒಂದು ಭಾಗದ ಮೊತ್ತವನ್ನು ವಿವಿಧ ಉದ್ದೇಶಗಳಿಗೆ ಬಳಸಿಕೊಳ್ಳುವ ಮೂಲಕ ಸ್ವಸಹಾಯ ಗುಂಪುಗಳಿಗೆ ಮೋಸ ಮಾಡಿದ್ದರು.

ಇನ್ನು ಈ ಸ್ವಸಹಾಯ ಗುಂಪುಗಳ ವಂಚನೆಯನ್ನು ಮುಚ್ಚಿಹಾಕಲು ಆರೋಪಿಗಳು ಯುಬಿಐ ಬ್ಯಾಂಕ್ ವ್ಯವಸ್ಥಾಪಕ ರಾಮಕೃಷ್ಣ ಪಿ ಸಹಭಾಗಿತ್ವದಲ್ಲಿ, ರಾಜ್ಯ ಸರ್ಕಾರ ಮೀನುಗಾರ ಸ್ವಸಹಾಯ ಗುಂಪುಗಳಿಗಾಗಿ ಪರಿಚಯಿಸಿದ ಸಾಲ ಮನ್ನಾ ಯೋಜನೆಯಡಿಯಲ್ಲಿ, ಸರಿಯಾದ ದಾಖಲೆಗಳಿಲ್ಲದೆ 58 ಅನರ್ಹ ಸ್ವಸಹಾಯ ಗುಂಪುಗಳಿಗೆ ಸಾಲ ಮನ್ನಾ ಅರ್ಜಿ ಸಲ್ಲಿಸಿದ್ದರು. ಆ ಮೂಲಕ ಆರೋಪಿಗಳು 1.66 ಕೋಟಿ ರೂ.ಗಳಷ್ಟು ಅಕ್ರಮ ಆದಾಯ ಗಳಿಸಿದ್ದರು ಮತ್ತು ಇದರ ಒಂದು ಭಾಗವನ್ನು ಅನರ್ಹ ಸ್ವಸಹಾಯ ಗುಂಪುಗಳ ಸಾಲಗಳನ್ನು ವಸೂಲಿ ಮಾಡಲು ಬಳಸಿಕೊಂಡಿದ್ದು, ಉಳಿದ ಹಣವನ್ನು ವಿವಿಧೋದ್ದೇಶಗಳಿಗೆ ಬಳಸಿಕೊಂಡಿದ್ದಾರೆ.

ಇದನ್ನೂ ಓದಿ: ಬಂಟ್ವಾಳ ಸಜಿಪನಡುವಿನಲ್ಲಿ ಮಸೀದಿ ವಿಚಾರಕ್ಕೆ ತಲವಾರು, ರಾಡ್‌ಗಳಿಂದ ಬಡಿದಾಡಿಕೊಂಡ ಗುಂಪು, ಉದ್ವಿಗ್ನ ಪರಿಸ್ಥಿತಿ!

ಸದ್ಯ ಆರೋಪಿಗಳ ವಿರುದ್ಧ 2002ರ ಸೆಕ್ಷನ್ 3ರ ಅಡಿಯಲ್ಲಿ ಮತ್ತು ಸೆಕ್ಷನ್ 4ರ ಅಡಿಯಲ್ಲಿ ಶಿಕ್ಷಾರ್ಹ ಹಣ ವರ್ಗಾವಣೆ ಆರೋಪಕ್ಕೆ ದೂರು ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ರಸ್ತೆಯಲ್ಲಿ ಬೈಕ್ ನಿಲ್ಲಿಸಿದ್ದ ವಕೀಲನಿಗೆ ಹಿಗ್ಗಾಮುಗ್ಗ ಥಳಿಸಿದ ಅಂಗಡಿ ವ್ಯಾಪಾರಿ

ಮೀರತ್​, ಮಾರ್ಚ್ 27: ಮೀರತ್‌ನ ಸರ್ರಾಫಾ ಮಾರುಕಟ್ಟೆಗೆ ಬಂದಿದ್ದ ವಕೀಲರೊಬ್ಬರು ರಸ್ತೆಯಲ್ಲಿ ಬೈಕ್ ನಿಲ್ಲಿಸಿದ್ದರು. ರಸ್ತೆಯಲ್ಲಿ ಬೈಕ್ ನಿಲ್ಲಿಸಿ ಎಲ್ಲರಿಗೂ ತೊಂದರೆ ಕೊಡುತ್ತಿದ್ದೀರಿ ಎಂದು ಜಗಳ ಆರಂಭಿಸಿದ ಅಲ್ಲಿನ ಅಂಗಡಿಯ ವ್ಯಾಪಾರಿಯೊಬ್ಬರು ಬಳಿಕ ಆ ವಕೀಲರಿಗೆ ಕ್ರೂರವಾಗಿ ಥಳಿಸಿದ ಘಟನೆ ನಡೆದಿದೆ. ತಮ್ಮ ಮೇಲಾದ ಹಲ್ಲೆಯನ್ನು ವಕೀಲರು ಪ್ರತಿಭಟಿಸಿದಾಗ ಅವರನ್ನು ಕೆಳಗೆ ಬೀಳಿಸಿ ಥಳಿಸಲಾಯಿತು. ಅವರ ಮೂಗಿನ ಮೂಳೆ ಮುರಿದಿದೆ. ಈ ಇಡೀ ಘಟನೆ ಸಿಸಿಟಿವಿಯಲ್ಲಿ (Viral Video) ಸೆರೆಯಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಧುರಂಧರ್’ ನಿರ್ಮಾಪಕರ ಜೊತೆ ಜೈ ಜೋಡಿಸಿದ ರಾಮ್ ಚರಣ್; ಸಿಕ್ತು ದೊಡ್ಡ ಸುದ್ದಿ

ಮೆಗಾ ಪವರ್ ಸ್ಟಾರ್ ರಾಮ್ ಚರಣ್ (Ram Charan) ಜನ್ಮದಿನದ ಅಂಗವಾಗಿ ಬಿಡುಗಡೆಯಾದ ‘ಪೆದ್ದಿ’ ಸಿನಿಮಾದ ಗ್ಲಿಂಪ್ಸ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದನ್ನು ನೋಡಿದ ಬಳಿಕ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಸೃಷ್ಟಿಯಾಗಿದೆ. ರಾಮ್ ಚರಣ್ ಅವರ ಕಟ್ಟುಮಸ್ತಾದ ಬಾಡಿ ಮತ್ತು ಬುಚ್ಚಿ ಬಾಬು ಸಾನ ಅವರ ಮೇಕಿಂಗ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಈ ಸಂಭ್ರಮದ ನಡುವೆಯೇ ಚಿತ್ರದ ಹಿಂದಿ ವರ್ಷನ್ ವಿತರಣೆ ಬಗ್ಗೆ ದೊಡ್ಡ ಸುದ್ದಿ ಕೇಳಿಬರುತ್ತಿದೆ. ‘ಪೆದ್ದಿ’ ಸಿನಿಮಾ (Peddi) ಜೊತೆ ‘ಜಿಯೋ ಸ್ಟುಡಿಯೋಸ್’ ಸಂಸ್ಥೆ ಕೈ ಜೋಡಿಸಲಿದೆ.

ದೇಶಾದ್ಯಂತ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಹೊಸ ದಾಖಲೆಗಳನ್ನು ಬರೆಯುತ್ತಿರುವ ‘ಧುರಂಧರ್: ದಿ ರಿವೆಂಜ್’ ಸಿನಿಮಾವನ್ನು ‘ಜಿಯೋ ಸ್ಟುಡಿಯೋಸ್’ ಸಂಸ್ಥೆ ನಿರ್ಮಾಣ ಮಾಡಿದೆ. ನಿರ್ಮಾಣ ಸಂಸ್ಥೆಗೆ ಈ ಚಿತ್ರದಿಂದ ಭರ್ಜರಿ ಲಾಭ ಆಗಿದೆ. ಈಗ ರಾಮ್ ಚರಣ್ ಅವರ ‘ಪೆದ್ದಿ’ ಚಿತ್ರದ ಹಿಂದಿ ಅವತರಣಿಕೆಯ ಜವಾಬ್ದಾರಿಯನ್ನು ಇದೇ ಸಂಸ್ಥೆ ಹೊತ್ತುಕೊಂಡಿದೆ.

‘ಜಿಯೋ ಸ್ಟುಡಿಯೋಸ್’ ಮೂಲಕ ‘ಪೆದ್ದಿ’ ಸಿನಿಮಾದ ಹಿಂದಿ ವರ್ಷನ್ ಬಿಡುಗಡೆ ಆಗುವುದು ನಿಜವೇ ಹೌದಾದರೆ ಉತ್ತರ ಭಾರತದ ಮಾರುಕಟ್ಟೆಯಲ್ಲಿ ಈ ಸಿನಿಮಾ ದೊಡ್ಡ ಓಪನಿಂಗ್ ಪಡೆಯಲಿದೆ. ‘ಉಪ್ಪೇನಾ’ ಖ್ಯಾತಿಯ ಬುಚ್ಚಿ ಬಾಬು ಸನಾ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ರಾಮ್ ಚರಣ್ ಅವರಿಗೆ ಜೋಡಿಯಾಗಿ ಬಾಲಿವುಡ್ ಸುಂದರಿ ಜಾನ್ವಿ ಕಪೂರ್ ನಟಿಸುತ್ತಿದ್ದಾರೆ.

ಈ ಸಿನಿಮಾದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ಶಿವರಾಜ್‌ಕುಮಾರ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿರುವುದು ಕನ್ನಡಿಗರಲ್ಲಿ ಕುತೂಹಲ ಹೆಚ್ಚಿಸಿದೆ. ದಿವ್ಯೇಂದು ಶರ್ಮಾ, ಜಗಪತಿ ಬಾಬು, ಬೋಮನ್ ಇರಾನಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಎ.ಆರ್. ರೆಹಮಾನ್ ಅವರ ಸಂಗೀತ ಈ ಚಿತ್ರಕ್ಕಿದೆ.

ಇದನ್ನೂ ಓದಿ: ‘ಪೆದ್ದಿ’ ಟೀಸರ್ ರಿಲೀಸ್: ಕ್ರಿಕೆಟರ್ ಬಳಿಕ ಪೈಲ್ವಾನ್ ಆದ ರಾಮ್ ಚರಣ್

‘ವೃದ್ಧಿ ಸಿನಿಮಾಸ್’ ಬ್ಯಾನರ್ ಅಡಿಯಲ್ಲಿ ವೆಂಕಟ ಸತೀಶ್ ಕಿಲಾರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸ್ಪೋರ್ಟ್ಸ್ ಡ್ರಾಮಾ ಎನ್ನಲಾದ ಈ ಸಿನಿಮಾದಲ್ಲಿ ರಾಮ್ ಚರಣ್ ಒಬ್ಬ ಕುಸ್ತಿಪಟುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಅವರ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಚಿತ್ರದಲ್ಲಿನ ಅವರ ಗೆಟಪ್ ಡಿಫರೆಂಟ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರೈಲ್ವೇ ಪ್ರಯಾಣಿಕರಿಗೆ ಗುಡ್​​ ನ್ಯೂಸ್​​: ಯಲಹಂಕ- ಅರಸೀಕೆರೆ ಮೆಮು ರೈಲು ಸೇವೆ ಆರಂಭ

ಬೆಂಗಳೂರು, ಮಾರ್ಚ್​​ 27:  ತುಮಕೂರು ಮಾರ್ಗವಾಗಿ ಬೆಂಗಳೂರಿನಿಂದ ಅರಸೀಕೆರೆಗೆ ಮೆಮು ರೈಲು ಸೇವೆ ಆರಂಭವಾಗಿದ್ದು, ಯಲಹಂಕದಿಂದ ಯಶವಂತಪುರ ಮಾರ್ಗವಾಗಿ ಮೆಮು ರೈಲು ಸಂಚಾರ ನಡೆಸಲಿದೆ ಎಂದು ರೈಲ್ವೆ ಇಲಾಖೆ ರಾಜ್ಯ ಸಚಿವ ವಿ.ಸೋಮಣ್ಣ ಅವರ ಕಚೇರಿಯಿಂದ ಮಾಹಿತಿ ನೀಡಲಾಗಿದೆ. ಪ್ರಯಾಣಿಕರ ಬಹುದಿನದ ಬೇಡಿಕೆಯನ್ನು ಈಡೇರಿಸಲಾಗಿದ್ದು ಬೆಂಗಳೂರಿನಿಂದ ತುಮಕೂರು ಮಾರ್ಗವಾಗಿ ಅರಸೀಕೆರೆಗೆ ನೂತನ ಮೆಮು ರೈಲಿನ ಸೇವೆಯನ್ನು ಒದಗಿಸಲಾಗಿದೆ ಎಂದು ಕೇಂದ್ರ ಸಚಿವ ಸೋಮಣ್ಣ ಕೂಡ ಎಕ್ಸ್​​ ಪೋಸ್ಟ್​​ ಮಾಡಿ ಮಾಹಿತಿ ನೀಡಿದ್ದಾರೆ.

ಸೋಮಣ್ಣ ಪೋಸ್ಟ್​​ನಲ್ಲಿ ಏನಿದೆ?

ಯಲಹಂಕದಿಂದ, ಯಶವಂತಪುರ ಮಾರ್ಗವಾಗಿ ಹೊರಡುವ ಈ ಮೆಮು ರೈಲು ವಿದ್ಯಾರ್ಥಿಗಳು, ದಿನಗೂಲಿ ಕಾರ್ಮಿಕರು, ಉದ್ಯೋಗಿಗಳು, ರೈತರು, ವ್ಯಾಪಾರಿಗಳು ಸೇರಿದಂತೆ ಮುಂತಾದ ಪ್ರಯಾಣಿಕರಿಗೆ ಕೈಗೆಟುಕುವ ಮತ್ತು ವಿಶ್ವಾಸಾರ್ಹ ಪ್ರಯಾಣದ ಆಯ್ಕೆಯನ್ನು ಒದಗಿಸಲಿದೆ. ಈ ಭಾಗದ ಪ್ರಯಾಣಿಕರು ಈ ನೂತನ ಮೆಮು ರೈಲಿನ ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕೋರುವುದುದಾಗಿ ಸೋಮಣ್ಣ ಮನವಿ ಮಾಡಿದ್ದಾರೆ.

ಇದನ್ನೂ ಓದಿ:  ಗೃಹ ಸಚಿವ ಪರಮೇಶ್ವರ​ ಒಡೆತನದ ಕಾಲೇಜು ಸೇರಿ, RTO ಕಚೇರಿಗಳಿಗೆ ಬಾಂಬ್​​ ಬೆದರಿಕೆ

ರೈಲಿನ ವೇಳಾಪಟ್ಟಿ

ಯಲಹಂಕ-ಅರಸೀಕೆರೆ ಮೆಮು ರೈಲು ಸಂಖ್ಯೆ 66505 ಬೆಳಿಗ್ಗೆ 6.45ಕ್ಕೆ ಯಲಹಂಕದಿಂದ ಹೊರಡಲಿದ್ದು, ಯಶವಂತಪುರ ಮಾರ್ಗವಾಗಿ ಬೆಳಿಗ್ಗೆ 8.58ಕ್ಕೆ ತುಮಕೂರಿಗೆ ತಲುಪಲಿದೆ. 11 ಗಂಟೆಗೆ ಅರಸೀಕರೆಗೆ ತೆರಳಲಿದೆ. ಅದೇ ರೀತಿ ಅರಸೀಕೆರೆಯಿಂದ ಯಲಹಂಕಕ್ಕೆ ಹೊರಡುವ ರೈಲು ಸಂಖ್ಯೆ 66506 ಅರಸೀಕೆರೆಯಿಂದ ಮಧ್ಯಾಹ್ನ 2.15ಕ್ಕೆ ಹೊರಟು ಸಂಜೆ 4.38ಕ್ಕೆ ತುಮಕೂರಿಗೆ, 7.15ಕ್ಕೆ ಯಲಹಂಕಕ್ಕೆ ತಲುಪಲಿದೆ. ಭಾನುವಾರದ ಹೊರತಾಗಿ ವಾರದ ಆರು ದಿನಗಳ ಕಾಲ ಈ ಮೆಮು ರೈಲು ಸೇವೆ ಪ್ರಯಾಣಿಕರಿಗೆ ಲಭ್ಯವಾಗಲಿದೆ ಎಂದು ಸೋಮಣ್ಣ ಮಾಹಿತಿ ನೀಡಿದ್ದಾರೆ.

ಭಾನುವಾರವೂ ರೈಲು ಸಂಚಾರಕ್ಕೆ ಬೇಡಿಕೆ

ಮೆಮು ರೈಲು ಸೇವೆ ಆರಂಭದ ಬಗ್ಗೆ ಸೋಮಣ್ಣ ಅವರು ಹಾಕಿರುವ ಪೋಸ್ಟ್​​ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆ ಪೈಕಿ ಬಹುತೇಕರು ಭಾನುವಾರವೂ ಸೇರಿ ವಾರದ 7 ದಿನಗಳ ಕಾಲವೂ ರೈಲು ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆ ಕೋರಿದ್ದಾರೆ. ತಿಪಟೂರಿಂದ ಭಾನುವಾರಮಧ್ಯಾಹ್ನದ ಮೇಲೆ ಯಾವುದೇ ರೈಲು ಇರುವುದಿಲ್ಲ. ಹೀಗಾಗಿ ಅಂದೂ ಪ್ರಯಾಣಿಕರು ಜಾಸ್ತಿ ಇರುವುದಾಗಿ ಓರ್ವರು ಸಚಿವರ ಗಮನ ಸೆಳೆದಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

IPL 2026: ಆರ್​ಸಿಬಿ- ಎಸ್‌ಆರ್‌ಎಚ್ ಪಂದ್ಯ ಎಷ್ಟು ಗಂಟೆಗೆ ಆರಂಭ? ಉಚಿತವಾಗಿ ವೀಕ್ಷಿಸುವುದು ಹೇಗೆ?

ಐಪಿಎಲ್‌ನ 19 ನೇ ಸೀಸನ್ (IPL 2026) ಮಾರ್ಚ್ 28 ರ ಶನಿವಾರದಿಂದ ಪ್ರಾರಂಭವಾಗುತ್ತಿದೆ. ಈ ಪಂದ್ಯಾವಳಿಯಲ್ಲಿ ಒಟ್ಟು 65 ದಿನಗಳಲ್ಲಿ 74 ಪಂದ್ಯಗಳು ನಡೆಯಲಿವೆ. ಒಟ್ಟು 10 ತಂಡಗಳು ಲೀಗ್ ಹಂತದಲ್ಲಿ 70 ಪಂದ್ಯಗಳನ್ನು ಮತ್ತು ಪ್ಲೇಆಫ್‌ನಲ್ಲಿ 4 ಪಂದ್ಯಗಳನ್ನು ಆಡಲಿವೆ. ಈ ಆವೃತ್ತಿಯ ಆರಂಭಿಕ ಪಂದ್ಯದಲ್ಲಿ, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು (RCB vs SRH) ಎದುರಿಸಲಿದೆ. ಹೀಗಾಗಿ ಈ ಬಾರಿಯೂ, ಆರ್‌ಸಿಬಿ ಅದೇ ಆವೇಗವನ್ನು ಮುಂದುವರೆಸಿ ಗೆಲುವಿನ ಆರಂಭವನ್ನು ಪಡೆದುಕೊಳ್ಳುತದೆಯೇ ಅಥವಾ ಸನ್‌ರೈಸರ್ಸ್ ಹೈದರಾಬಾದ್ ಪಂದ್ಯವನ್ನು ಗೆಲ್ಲುತ್ತದೆಯೇ? ನೋಡುವುದು ಮುಖ್ಯ. ಆದರೆ ಅದಕ್ಕೂ ಮುನ್ನ 19 ನೇ ಸೀಸನ್‌ನ ಮೊದಲ ಪಂದ್ಯದ ಲೈವ್ ಸ್ಟ್ರೀಮಿಂಗ್ ವಿವರವನ್ನೊಮ್ಮೆ ನೋಡುವುದಾದರೆ..

ಆರ್‌ಸಿಬಿ ಹಾಗೂ ಎಸ್‌ಆರ್‌ಎಚ್ ನಡುವಿನ ಮೊದಲ ಪಂದ್ಯ ಯಾವಾಗ ನಡೆಯಲಿದೆ?

ಮಾರ್ಚ್ 28 ರ ಶನಿವಾರದಂದು ಆರ್‌ಸಿಬಿ ಹಾಗೂ ಎಸ್‌ಆರ್‌ಎಚ್ ನಡುವಿನ ಮೊದಲ ಪಂದ್ಯ ನಡೆಯಲಿದೆ.

ಆರ್‌ಸಿಬಿ ಹಾಗೂ ಎಸ್‌ಆರ್‌ಎಚ್ ನಡುವಿನ ಮೊದಲ ಪಂದ್ಯ ಎಲ್ಲಿ ನಡೆಯಲಿದೆ?

ಆರ್‌ಸಿಬಿ ಹಾಗೂ ಎಸ್‌ಆರ್‌ಎಚ್ ನಡುವಿನ ಮೊದಲ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಆರ್‌ಸಿಬಿ ಹಾಗೂ ಎಸ್‌ಆರ್‌ಎಚ್ ನಡುವಿನ ಮೊದಲ ಪಂದ್ಯ ಎಷ್ಟು ಗಂಟೆಗೆ ಪ್ರಾರಂಭವಾಗುತ್ತದೆ?

ಆರ್‌ಸಿಬಿ ಹಾಗೂ ಎಸ್‌ಆರ್‌ಎಚ್ ನಡುವಿನ ಮೊದಲ ಪಂದ್ಯ ಸಂಜೆ 7:30 ಕ್ಕೆ ಪ್ರಾರಂಭವಾಗುತ್ತದೆ. ಟಾಸ್ ಸಂಜೆ 7 ಗಂಟೆಗೆ ನಡೆಯಲಿದೆ.

ಆರ್‌ಸಿಬಿ ಹಾಗೂ ಎಸ್‌ಆರ್‌ಎಚ್ ನಡುವಿನ ಮೊದಲ ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?

ಆರ್‌ಸಿಬಿ ಹಾಗೂ ಎಸ್‌ಆರ್‌ಎಚ್ ನಡುವಿನ ಮೊದಲ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ಟಿವಿಯಲ್ಲಿ ವೀಕ್ಷಿಸಬಹುದು.

ಆರ್‌ಸಿಬಿ ಹಾಗೂ ಎಸ್‌ಆರ್‌ಎಚ್ ನಡುವಿನ ಮೊದಲ ಪಂದ್ಯವನ್ನು ಮೊಬೈಲ್‌ನಲ್ಲಿ ಎಲ್ಲಿ ವೀಕ್ಷಿಸಬಹುದು?

ಆರ್‌ಸಿಬಿ ಹಾಗೂ ಎಸ್‌ಆರ್‌ಎಚ್ ನಡುವಿನ ಮೊದಲ ಪಂದ್ಯವನ್ನು ಮೊಬೈಲ್‌ನಲ್ಲಿ ಜಿಯೋಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.

IPL 2026: ಆರ್​ಸಿಬಿಗೆ ಆರಂಭಿಕ ಆಘಾತ; ಮೊದಲ ಪಂದ್ಯದಲ್ಲಿ ಅಡಲ್ಲ ಸ್ಟಾರ್ ಪ್ಲೇಯರ್

ಉಭಯ ತಂಡಗಳು

ಆರ್​ಸಿಬಿ ಪೂರ್ಣ ತಂಡ: ರಜತ್ ಪಾಟಿದಾರ್, ವಿರಾಟ್ ಕೊಹ್ಲಿ, ದೇವದತ್ತ್ ಪಡಿಕ್ಕಲ್, ರಜತ್ ಪಾಟಿದಾರ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋರ್ಡಾನ್ ಕಾಕ್ಸ್, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಜಾಕೋಬ್ ಬೆಥೆಲ್, ವೆಂಕಟೇಶ್ ಅಯ್ಯರ್, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ವಿಕ್ಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕಾನಿಷ್ಕ್ ಚೌಹಾಣ್, ಜೋಶ್ ಹೇಜಲ್​ವುಡ್, ರಸಿಖ್ ದಾರ್, ಸುಯಶ್ ಶರ್ಮಾ, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ಅಭಿನಂದನ್ ಸಿಂಗ್, ಜಾಕೋಬ್ ಡಫಿ, ಯಶ್ ದಯಾಲ್

ಎಸ್‌ಆರ್‌ಎಚ್ ಪೂರ್ಣ ತಂಡ: ಪ್ಯಾಟ್ ಕಮ್ಮಿನ್ಸ್, ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಹೆನ್ರಿಚ್ ಕ್ಲಾಸೆನ್, ಇಶಾನ್ ಕಿಶನ್, ನಿತೀಶ್ ಕುಮಾರ್ ರೆಡ್ಡಿ, ಲಿಯಾಮ್ ಲಿವಿಂಗ್‌ಸ್ಟೋನ್, ಹರ್ಷಲ್ ಪಟೇಲ್, ಕಮಿಂದು ಮೆಂಡಿಸ್, ಬ್ರೈಡನ್ ಕಾರ್ಸೆ, ಹರ್ಷ್ ದುಬೆ, ಅನಿಕೇತ್ ವರ್ಮಾ, ಸ್ಮರಣ್ ರವಿಚಂದ್ರನ್, ಸಲಿಲ್ ಅರೋರಾ, ಜಯ್‌ದೇವ್ ಉನದ್ಕತ್, ಶಿವಂ ಮಾವಿ, ಜೀಶನ್ ಅನ್ಸಾರಿ, ಎಶಾನ್ ಮಾಲಿಂಗ, ಸಾಕಿಬ್ ಹುಸೇನ್ ಮತ್ತು ಡೇವಿಡ್ ಪೇನ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಶ್ಚಿಮ ಏಷ್ಯಾ ಯುದ್ಧದ ಹಿನ್ನೆಲೆಯಲ್ಲಿ ರಾಜ್ಯಗಳ ಸಿದ್ಧತೆ ಪರಿಶೀಲಿಸಲು ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮೋದಿ ಸಭೆ

ನವದೆಹಲಿ, ಮಾರ್ಚ್ 27: ಇರಾನ್ ಜೊತೆಗಿನ ಇಸ್ರೇಲ್ ಮತ್ತು ಅಮೆರಿಕದ ಸಂಘರ್ಷ ಮತ್ತು ಹಾರ್ಮುಜ್ ಜಲಸಂಧಿಯ ನಿರ್ಬಂಧದಿಂದ ಉಂಟಾದ ಜಾಗತಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತದ ಇಂಧನ ಪೂರೈಕೆಯ ಕುರಿತಾದ ಸಿದ್ಧತೆಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ (PM Modi) ಅವರು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಇಂದು ವರ್ಚುವಲ್ ಆಗಿ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಮಧ್ಯೆ ಅವರ ಸನ್ನದ್ಧತೆ ಮತ್ತು ಯೋಜನೆಗಳನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಪ್ರಸ್ತುತ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತುಕತೆ ನಡೆಸಿದ್ದಾರೆ.

ಈ ಸಭೆಯ ವಿವರಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ಮಾಡಿದಾಗ ಪ್ರಾರಂಭವಾದ ಪಶ್ಚಿಮ ಏಷ್ಯಾ ಸಂಘರ್ಷದ ಕುರಿತು ಪ್ರಧಾನಿ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ್ದು ಇದೇ ಮೊದಲು. ಅಂದಿನಿಂದ ಇರಾನ್ ಇಸ್ರೇಲ್ ಮತ್ತು ಹಲವಾರು ಕೊಲ್ಲಿ ರಾಷ್ಟ್ರಗಳ ಮೇಲೆ ದಾಳಿ ಮಾಡುವ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ.

ಇದನ್ನೂ ಓದಿ: ರಾಮನವಮಿ, ಅಯೋಧ್ಯೆಯಲ್ಲಿ ಬಾಲರಾಮನ ಹಣೆಗೆ ಸೂರ್ಯ ತಿಲಕ, ಕಣ್ತುಂಬಿಕೊಂಡ ಪ್ರಧಾನಿ ಮೋದಿ

ಇಂದಿನ ವಿಡಿಯೋ ಸಭೆಯಲ್ಲಿ ಬಹುತೇಕ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದರು. ಆದರೆ, ಮಾದರಿ ನೀತಿ ಸಂಹಿತೆಯಿಂದಾಗಿ ಮುಂಬರುವ ಚುನಾವಣೆಗಳಿರುವ ರಾಜ್ಯಗಳ ಮುಖ್ಯಮಂತ್ರಿಗಳು ಇಂದಿನ ಸಭೆಯಲ್ಲಿ ಭಾಗವಹಿಸಿಲ್ಲ.

 

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಬಿಕ್ಕಟ್ಟು ಭಾರತಕ್ಕೆ ದೀರ್ಘಕಾಲೀನ ಪರಿಣಾಮಗಳನ್ನು ಬೀರಬಹುದು ಎಂದು ನರೇಂದ್ರ ಮೋದಿ ಎಚ್ಚರಿಸಿದ ಕೆಲವು ದಿನಗಳ ನಂತರ ಈ ಸಭೆ ನಡೆದಿದೆ. 6 ವರ್ಷಗಳ ಹಿಂದಿನ COVID-19 ಸಾಂಕ್ರಾಮಿಕ ರೋಗವನ್ನು ಸಭೆಯಲ್ಲಿ ಉಲ್ಲೇಖಿಸಿದ ಪ್ರಧಾನಿ ಮೋದಿ, ಕೇಂದ್ರ ಮತ್ತು ರಾಜ್ಯಗಳು ಆ ಅವಧಿಯಲ್ಲಿ ಮಾಡಿದಂತೆ ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL: ಅಪ್ಪಿತಪ್ಪಿಯೂ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಬರ್ಬೇಡಿ; ಸೆಕ್ಯುರಿಟಿ ಬಗ್ಗೆ ಕಮಿಷನರ್​ ಹೇಳಿದ್ದಿಷ್ಟು

ಬೆಂಗಳೂರು, ಮಾರ್ಚ್​ 27: ಕ್ರಿಕೆಟ್ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಚಿನ್ನಸ್ವಾಮಿ ಮೈದಾನದಲ್ಲಿ ನಾಳೆ IPL ಉದ್ಘಾಟನಾ ಪಂದ್ಯ ನಡೆಯಲಿದೆ. ಸಕಲ ಭದ್ರತೆ ಕೂಡ ಕೈಗೊಳ್ಳಲಾಗಿದೆ. ಈ ಬಗ್ಗೆ ಬೆಂಗಳೂರು ಕಮಿಷನರ್​ ಸೀಮಂತ್ ಕುಮಾರ್​ ಪ್ರತಿಕ್ರಿಯಿಸಿದ್ದು, ಚಿನ್ನಸ್ವಾಮಿ ಸ್ಟೇಡಿಯಂ ಬಳಿ 3 ಹಂತದ ಸೆಕ್ಯುರಿಟಿ ಇರಲಿದೆ. ಆರ್​ಎಎಫ್​​ ಮತ್ತು ಗರುಡ ಟೀಂ, ಪಿಕಪ್ ಸ್ಕ್ವಾಡ್ ಇದೆ. ಭದ್ರತೆಗೆ 2,500 ಪೊಲೀಸ್​ ಸಿಬ್ಬಂದಿ ನಿಯೋಜಿಸಲಾಗಿದೆ. ಆಫ್​ಲೈನ್ ಟಿಕೆಟ್ ಸಿಗುತ್ತೆ ಎಂದು ಯಾರು ಬರಬಾರದು. ಮೈದಾನ ಬಳಿ ರಸ್ತೆಗೆ ಬಂದು ನಿಲ್ಲುವವರಿಗೆ ಅವಕಾಶ ನೀಡಲ್ಲ. ಟಿಕೆಟ್ ಇಲ್ಲದಿದ್ದರೆ ಮನೆಯಲ್ಲಿ ಕುಳಿತು ಪಂದ್ಯವನ್ನ ನೋಡಿ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link