ಮದುವೆ ಮಂಟಪದಲ್ಲಿ ಡ್ಯಾನ್ಸ್ ಬಿಟ್ಟು ಪಂಜ ಕುಸ್ತಿಗಿಳಿದ ವಧು-ವರ – Kannada News
ನವದೆಹಲಿ, ಜೂನ್ 03: ಸಾಮಾನ್ಯವಾಗಿ ಮದುವೆ(Marriage)ಮಂಟಪದಲ್ಲಿ ವಧು-ವರರು ನಾಚಿಕೆಯಿಂದ ನಿಂತಿರುವುದನ್ನು ಅಥವಾ ರೋಮ್ಯಾಂಟಿಕ್ ಆಗಿ ನೃತ್ಯ ಮಾಡುವುದನ್ನು ನಾವು ನೋಡಿರುತ್ತೇವೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ವೈರಲ್ ಆಗುತ್ತಿರುವ ವಿಡಿಯೋವೊಂದರಲ್ಲಿ ವಧು ಇವೆಲ್ಲವನ್ನೂ ಬದಿಗಿಟ್ಟು, ವರನಿಗೆ ನೇರವಾಗಿ ಪಂಜ ಕುಸ್ತಿ ಸವಾಲು ಹಾಕಿ ಸಖತ್ ಮನರಂಜನೆ ನೀಡಿದ್ದಾಳೆ. ಗುಲಾಬಿ ಬಣ್ಣದ ಮದುವೆಯ ಲೆಹೆಂಗಾ ಧರಿಸಿದ್ದ ವಧು, ಮಂಟಪದ ಮಧ್ಯದಲ್ಲಿದ್ದ ಟೇಬಲ್ ಮೇಲಿಟ್ಟು ವರನಿಗೆ ಸವಾಲು ಹಾಕಿದಳು. ನನ್ನೊಂದಿಗೆ ಸ್ಪರ್ಧಿಸಲು ಹುಡುಗಿಯರನ್ನಲ್ಲ, ಹುಡುಗರನ್ನು ಕರೆತನ್ನಿ”ಎಂದು ಆತ್ಮವಿಶ್ವಾಸದಿಂದ ಕೂಗಿದ ವಧುವಿನ…