Headlines

nagaraj11081993

ಕೆಲಸ ಮಾಡಿ ಮುಗಿಸುವ ಇಬ್ಬರು ವ್ಯಕ್ತಿಗಳೆಂದರೆ ನಾನು ಮತ್ತು ಮೋದಿ; ಟ್ರಂಪ್ ಅಚ್ಚರಿಯ ಮೆಚ್ಚುಗೆ

ನವದೆಹಲಿ, ಮಾರ್ಚ್ 27: ಇರಾನ್ ಮೇಲೆ ಯುದ್ಧ ಸಾರಿರುವ ಅಮೆರಿಕ ಹಾಗೂ ಇಸ್ರೇಲ್​ಗೆ ಭಾರತ ಬಹಿರಂಗವಾಗಿ ಬೆಂಬಲ ಘೋಷಿಸಿಲ್ಲ. ಇಸ್ರೇಲ್ ಸರ್ಕಾರದ ಜೊತೆ ಮಾತನಾಡಿ ಶಾಂತಿ ಮಾತುಕತೆಗೆ ಕರೆ ನೀಡಿದ್ದ ಪ್ರಧಾನಿ ಮೋದಿ ಅತ್ತ ಇರಾನ್​ಗೂ ವೈದ್ಯಕೀಯ ನೆರವು ಕಳುಹಿಸಿಕೊಟ್ಟಿತ್ತು. ಮೊನ್ನೆಯಷ್ಟೇ ಫೋನ್ ಮಾಡಿದ್ದ ಅಮೆರಿಕದ ಅಧ್ಯಕ್ಷ ಟ್ರಂಪ್​ಗೂ ಈ ಬಿಕ್ಕಟ್ಟನ್ನು ಆದಷ್ಟು ಬೇಗ ಬಗೆಹರಿಸಿಕೊಳ್ಳುವುದು ಉತ್ತಮ ಎಂಬ ಸಂದೇಶ ನೀಡಿದ್ದರು. ಇರಾನ್ ಮೇಲೆ ಇನ್ನೂ ಕತ್ತಿ ಮಸೆಯುತ್ತಲೇ ಇರುವ ಟ್ರಂಪ್ (Donald Trump) ಇದೀಗ ಇದ್ದಕ್ಕಿದ್ದಂತೆ…

Read More

ಫೇಸ್‌ಬುಕ್‌ನಲ್ಲಿ ಐಷಾರಾಮಿ ಕಾರು ಕಂಡೊಡನೆ ಖರೀದಿಸುವ ಮುನ್ನ ಹುಷಾರ್​!

ಮೈಸೂರು, ಮಾರ್ಚ್​ 27: ಫೇಸ್‌ಬುಕ್‌ನಲ್ಲಿ ಐಷಾರಾಮಿ ಕಾರುಗಳ ಫೋಟೋ ನೋಡಿ ಮರುಳಾಗಬೇಡಿ. ಏಕೆಂದರೆ ಸೆಕೆಂಡ್ ಹ್ಯಾಂಡ್ ಕಾರು ಕೊಡಿಸುತ್ತೇವೆ ಅಂತ ನಂಬಿಸಿ ಕೋಟ್ಯಂತರ ರೂ ವಂಚಿಸುತ್ತಿದ್ದ (Luxury Car Scam) ದೊಡ್ಡ ಜಾಲವನ್ನು ಮೈಸೂರು ಪೊಲೀಸರು ಭೇದಿಸಿದ್ದಾರೆ. ಅಸಲಿ ಮಾಲೀಕರಿಗೂ ಇಲ್ಲ, ಇತ್ತ ಖರೀದಿ ಮಾಡುವವರಿಗೂ ಇಲ್ಲ ಎನ್ನುವ ರೀತಿ ವಂಚಿಸುತ್ತಿದ್ದರು. ಈ ಖದೀಮರ ಮೋಸದ ಆಟ ಹೇಗಿತ್ತು ಅಂತಾ ಕೇಳಿದರೆ ಶಾಕ್​ ಆಗುವುದು ಗ್ಯಾರಂಟಿ. ಅಂತಾರಾಜ್ಯ ವಂಚಕರ ಜಾಲ ಪತ್ತೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಈಗ…

Read More

‘ದಿ ರಾಜಾ ಸಾಬ್’ ಸೋಲಿನ ಬಳಿಕ ಹೊಸ ಸಿನಿಮಾ ಘೋಷಿಸಿದ ನಿರ್ದೇಶಕ ಮಾರುತಿ

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ (The Raja Saab) ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆ ಚಿತ್ರಕ್ಕೆ ನಿರ್ದೇಶಕ ಮಾರುತಿ ಅವರು ಆ್ಯಕ್ಷನ್-ಕಟ್ ಹೇಳಿದ್ದರು. ಪ್ರಭಾಸ್ ಅವರ ಮೊದಲ ಹಾರರ್ ಸಿನಿಮಾ ಎಂಬ ಕಾರಣಕ್ಕೆ ಹೈಪ್ ಹೆಚ್ಚಿತ್ತು. ಆದರೆ ಬಾಕ್ಸ್ ಆಫೀಸ್‌ನಲ್ಲಿ ಆ ಸಿನಿಮಾ ಮಕಾಡೆ ಮಲಗಿತು. ‘ದಿ ರಾಜಾ ಸಾಬ್’ ಸಿನಿಮಾದ ಸೋಲನ್ನು ಒಪ್ಪಿಕೊಂಡಿರುವ ನಿರ್ದೇಶಕ ಮಾರುತಿ (Director Maruthi) ಈಗ ತಮ್ಮ ಮುಂದಿನ ಸಿನಿಮಾ ಬಗ್ಗೆ ಮಾಹಿತಿ…

Read More

‘ಧುರಂಧರ್’ ಸಿನಿಮಾದಲ್ಲಿನ ಹಲವು ತಪ್ಪುಗಳ ಪಟ್ಟಿ ನೀಡಿದ ಪಾಕಿಸ್ತಾನಿ ಪ್ರೇಕ್ಷಕರು

ರಣವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್ 2’ ಸಿನಿಮಾ ಬಗ್ಗೆ ಎಲ್ಲ ಕಡೆಗಳಲ್ಲಿ ಚರ್ಚೆ ಆಗುತ್ತಿದೆ. ಪಾಕಿಸ್ತಾನದಲ್ಲಿ ಈ ಸಿನಿಮಾ ಬಿಡುಗಡೆ ಆಗಿಲ್ಲ. ಹಾಗಿದ್ದರೂ ಕೂಡ ಪಾಕ್ ಜನರು ಬೇರೆ ದೇಶಗಳಲ್ಲಿ ಹಾಗೂ ಪೈರಸಿ ಮೂಲಕ ಈ ಸಿನಿಮಾವನ್ನು ವೀಕ್ಷಿಸಿದ್ದಾರೆ. ‘ಧುರಂಧರ್’ (Dhurandhar) ಹೇಗಿದೆ ಎಂದು ಪಾಕ್ ಪ್ರೇಕ್ಷಕರು ವಿಮರ್ಶೆ ನೀಡುತ್ತಿದ್ದಾರೆ. ಅಂಥ ವಿಡಿಯೋಗಳು ಸಖತ್ ಸದ್ದು ಮಾಡುತ್ತಿವೆ. ಈ ಸಿನಿಮಾದಲ್ಲಿ ಯಾವೆಲ್ಲ ತಪ್ಪುಗಳು ಇವೆ ಎಂಬುದರ ಬಗ್ಗೆ ಪಾಕ್ (Pakistan) ಪ್ರಜೆಗಳಿಬ್ಬರು ಮಾತನಾಡಿದ ವಿಡಿಯೋ…

Read More

ತನ್ನ ಗೆಳೆಯನ ಜೊತೆ ಸಂಬಂಧದ ಅನುಮಾನ; ಮುಂಬೈ ವಿದ್ಯಾರ್ಥಿನಿಯನ್ನು ಎಳೆದು, ಕೂದಲು ಕತ್ತರಿಸಿದ ಯುವತಿ

ಮುಂಬೈ, ಮಾರ್ಚ್ 27: ಮುಂಬೈನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ವಿದ್ಯಾರ್ಥಿನಿಯೊಬ್ಬಳು ತನ್ನ ಗೆಳೆಯನೊಂದಿಗೆ ಸಂಬಂಧ ಹೊಂದಿದ್ದಾಳೆಂದು ಶಂಕಿಸಿದ ಮತ್ತೊಬ್ಬಳು ಯುವತಿ ಆಕೆಯನ್ನು ಮನೆಯಿಂದ ಹೊರಗೆ ಎಳೆದುಕೊಂಡು ಬಂದು, ಆಕೆಯ ಕೂದಲು ಕತ್ತರಿಸಿದ್ದಾಳೆ. ಮುಂಬೈನ (Mumbai News) ಉಪನಗರ ಅಪಾರ್ಟ್‌ಮೆಂಟ್‌ನಲ್ಲಿ ನಿನ್ನೆ ತಡರಾತ್ರಿ ಈ ಅಮಾನವೀಯ ಘಟನೆ ನಡೆದಿದೆ. ಈ ಘಟನೆ ಬಳಿಕ ಹಿಂಸಾಚಾರಕ್ಕೆ ಕಾರಣವಾಯಿತು. ಇದು ಕಾಲೇಜು ವಿದ್ಯಾರ್ಥಿನಿಯನ್ನು ಆಘಾತಕ್ಕೀಡು ಮಾಡಿದೆ. ನಿನ್ನೆ 20 ವರ್ಷದ ವಿದ್ಯಾರ್ಥಿನಿಯನ್ನು ಆಕೆಯ ನಿವಾಸದಿಂದ ಹೊರಗೆಳೆದು ಆಕೆಯ ಕೂದಲು ಕತ್ತರಿಸಲಾಗಿದೆ ಎಂದು…

Read More

24 ಗಂಟೆಯಲ್ಲೇ ಬಗೆಹರಿದ ಶಾಸಕರ IPL ಟಿಕೆಟ್ ಜ್ವಲಂತ ಸಮಸ್ಯೆ, ಒಬ್ಬರಿಗೆ ಎಷ್ಟು ಗೊತ್ತಾ?

ಬೆಂಗಳೂರು, (ಮಾರ್ಚ್ 27): ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಮತ್ತು ವಿಪಕ್ಷ ನಾಯಕ ಅಶೋಕ್ , ಐಪಿಎಲ್  ಮ್ಯಾಚ್​ಗಳ ಟಿಕೆಟ್ (IPL Ticket)  ವಿಚಾರವಾಗಿ ಸದನದಲ್ಲಿ ಎತ್ತಿದ ಪ್ರಶ್ನೆ ಈಗ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಟಾಪಟಿಗೆ ವೇದಿಕೆಯಾಗಿದೆ. ಹೌದು..ನಿನ್ನೆ (ಮಾರ್ಚ್ 26) ವಿಧಾನಸಭೆ ಅಧಿವೇಶನದಲ್ಲಿ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಐಪಿಎಲ್​ ಮ್ಯಾಚ್​ಗಳ ಟಿಕೆಟ್​ ಬಗ್ಗೆ ಕೇಳಿದ ಪ್ರಶ್ನೆ ಈಗ ರಾಜಕೀಯ ಜಟಾಪಟಿಗೆ ತಿರುಗಿದೆ. ಏನೋ ಜ್ವಲಂತ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದಂತೆ ಸದನದಲ್ಲಿ ಐಪಿಎಲ್…

Read More

ಒಳ್ಳೆ ಹುಡ್ಗ ಪ್ರಥಮ್ ಬೆಂಗಳೂರು ಬಿಟ್ಟಿದ್ದೇಕೆ? ಅವರೇ ಕೊಟ್ಟರು ಕಾರಣ

ಒಳ್ಳೆ ಹುಡ್ಗ ಪ್ರಥಮ್ (Olle Hudga Pratham) ಅವರು ಬೆಂಗಳೂರು ಬಿಟ್ಟಿದ್ದಾರೆ. ಅವರೀಗ ಬೆಂಗಳೂರಿನಲ್ಲಿಲ್ಲ, ಇದಕ್ಕೆ ಕಾರಣ ಒಬ್ಬ ನಟ ಎಂದೆಲ್ಲ ಸುದ್ದಿಗಳು ಹರಡಿದ್ದವು. ಇದೀಗ ಪ್ರಥಮ್ ಅವರು ಟಿವಿ9 ಮೂಲಕ ಅದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. ತಾವು ಬೆಂಗಳೂರು ಬಿಟ್ಟಿದ್ದೇಕೆ ಎಂಬುದನ್ನು ವಿವರಿಸಿದ್ದಾರೆ. ತಮಗೆ ಬೆಂಗಳೂರು ಸಾಕಷ್ಟು ಕೊಟ್ಟಿದೆ, ಆದರೆ ಬೆಂಗಳೂರು ಬಿಟ್ಟು ಹೋಗಲೇ ಬೇಕಾದ ಸ್ಥಿತಿ ಒದಗಿತ್ತು ಎಂದು ಪ್ರಥಮ್ ಹೇಳಿಕೊಂಡಿದ್ದಾರೆ. ಪ್ರಥಮ್ ಹೇಳಿದ್ದೇನು? ವಿಡಿಯೋ ನೋಡಿ… ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ Source…

Read More

ಬೈ ಎಲೆಕ್ಷನ್​​: BJP ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಬರ್ತಾರಾ ಹೆಚ್​​.ಡಿ. ಕುಮಾರಸ್ವಾಮಿ?

ಬೆಂಗಳೂರು, ಮಾರ್ಚ್​​ 27: ಬೈ ಎಲೆಕ್ಷನ್‌ಗಳಿಗೆ ಸಂಬಂಧಿಸಿದಂತೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಪ್ರಚಾರದ ಬಗ್ಗೆ ವಿಜಯೇಂದ್ರ ಅವರು ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಬಾಗಲಕೋಟೆ ಮತ್ತು ದಾವಣಗೆರೆಗಳಲ್ಲಿ ಜೆಡಿಎಸ್ ಮುಖಂಡರು ಭಾಗವಹಿಸಿದ್ದರು. ತಾವು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು, ಕುಮಾರಸ್ವಾಮಿ ಅವರು ಪ್ರಚಾರಕ್ಕಾಗಿ ಸಮಯ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ವಿಜಯೇಂದ್ರ ದೃಢಪಡಿಸಿದ್ದಾರೆ. ಇದರಿಂದ ಬೈ ಎಲೆಕ್ಷನ್‌ಗಳಲ್ಲಿ ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಜೆಡಿಎಸ್ ನಾಯಕರ ಬೆಂಬಲ ಮತ್ತು ಸಹಭಾಗಿತ್ವ…

Read More

ರಷ್ಯನ್ ಎಲ್​ಎನ್​ಜಿಯನ್ನು ಖರೀದಿಸಲಿರುವ ಭಾರತ; ಎಲ್​ಪಿಜಿ, ಪಿಎನ್​ಜಿ, ಎಲ್​ಎನ್​ಜಿಗಿರುವ ವ್ಯತ್ಯಾಸಗಳೇನು?

ನವದೆಹಲಿ, ಮಾರ್ಚ್ 27: ಇರಾನ್ ಯುದ್ಧದ ಪರಿಣಾಮ ಇಂಧನ ಬಿಕ್ಕಟ್ಟು ಉದ್ಭವವಾಗಿದೆ. ಕಚ್ಛಾ ತೈಲ, ಎಲ್​ಪಿಜಿ, ಎಲ್​ಎನ್​ಜಿಗಳ (LNG – Liquefied Natural Gas) ಪೂರೈಕೆ ವ್ಯತ್ಯಯಗೊಂಡಿದೆ. ಈ ಸಂದರ್ಭದಲ್ಲಿ ಭಾರತಕ್ಕೆ ರಷ್ಯಾ ಆಪದ್ಬಾಂಧವ ಎನಿಸಿದೆ. ರಷ್ಯಾದಿಂದ ಕಚ್ಛಾ ತೈಲದ ಖರೀದಿಯನ್ನು ಭಾರತ ಪುನಾರಂಭಿಸಿದೆ. ಇದೇ ವೇಳೆ ಎಲ್​ಎನ್​ಜಿಯನ್ನೂ ರಷ್ಯಾದಿಂದ ಪಡೆಯಲು ಭಾರತ ಯೋಜಿಸಿದೆ. ಅಮೆರಿಕದ ಅನುಮತಿ ಪಡೆದೇ ಭಾರತವು ರಷ್ಯಾದಿಂದ ತೈಲ ಖರೀದಿ ಮಾಡುತ್ತಿದೆ. ಈಗ ಎಲ್​ಎನ್​ಜಿ ಖರೀದಿಗೂ ಅಮೆರಿಕದ ಅನುಮತಿ ಸಿಗುವ ನಿರೀಕ್ಷೆ ಇದೆ….

Read More

ಯುವಕನ ನೃತ್ಯಕ್ಕೆ ಮರುಳಾದ ಗಜರಾಜ! ಕಾಡಾನೆಯೂ ಹೆಜ್ಜೆ ಹಾಕಿದ ಅಪರೂಪದ ದೃಶ್ಯ

ಒಡಿಶಾ, ಮಾ.27: ಇತ್ತೀಚಿನ ದಿನಗಳಲ್ಲಿ ಮಾನವ ಮತ್ತು ಪ್ರಾಣಿಗಳ ನಡುವಿನ ಸಂಘರ್ಷದ ಸುದ್ದಿಗಳೇ ಹೆಚ್ಚಾಗಿ ಕೇಳಿಬರುತ್ತಿವೆ. ಆದರೆ, ಇದರ ನಡುವೆ ಮನುಷ್ಯ ಮತ್ತು ಆನೆಯ ನಡುವಿನ ಅಚ್ಚರಿಯ ಬಾಂಧವ್ಯವನ್ನು ಸಾರುವ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಯುವಕನೊಬ್ಬನ ನೃತ್ಯವನ್ನು ಕಂಡ ಕಾಡಾನೆಯೊಂದು, ಅಷ್ಟೇ ಪ್ರೀತಿಯಿಂದ ಪ್ರತಿಕ್ರಿಯಿಸಿ ತಾನೂ ಹೆಜ್ಜೆ ಹಾಕಿರುವ ಮನಮೋಹಕ ದೃಶ್ಯವಿದು. ಒಡಿಶಾದ ಕಿಯೋಂಜರ್ ಜಿಲ್ಲೆಯ ಚಂಪುಆ ಎಂಬಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ರಸ್ತೆಯ ಪಕ್ಕದಲ್ಲಿ ನಿಂತಿದ್ದ ಒಂಟಿ ಸಲಗವೊಂದರ…

Read More