Headlines

nagaraj11081993

ವಿಜಯಪುರದಲ್ಲೊಂದು ಮನಕಲಕುವ ಘಟನೆ : ಪುಟ್ಟ ಪುಟ್ಟ 3 ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

ವಿಜಯಪುರ, (ಮಾರ್ಚ್ 27): ಪುಟ್ಟ ಪುಟ್ಟ ಮೂರು ಮಕ್ಕಳೊಂದಿಗೆ ತಾಯಿ (Mother) ಆತ್ಮಹತ್ಯೆ ಮಾಡಿಕೊಂಡಿರುವ ಘನಘೋರ ಘಟನೆ ವಿಜಯಪುರ (Vijayapura) ಜಿಲ್ಲೆಯ ಇಂಡಿ ತಾಲೂಕಿನ ಮಿರಗಿ ಗ್ರಾಮದಲ್ಲಿ ನಡೆದಿದೆ. ಗುರುವಾರ ಸಂಜೆ ರಾಜಶ್ರೀ ಶಂಕ್ರಪ್ಪ ಹಳ್ಳೂರ (28) ಎನ್ನುವ ಮಹಿಳೆ ತನ್ನ ಮೂವರು ಅಪ್ರಾಪ್ತ ಮಕ್ಕಳಾದ ಅನುಶ್ರೀ (6), ತನು (3) ಮತ್ತು ಸಂತೋಷನನ್ನು (1) ಬಾವಿಗೆ ತಳ್ಳಿ ಬಳಿಕ ತಾನೂ ಸಹ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಖಾಸಗಿ ಬಸ್ ಚಾಲಕನಾಗಿರುವ ಪತಿ ಶಂಕರಪ್ಪ ಕೆಲಸಕ್ಕೆ ಹೋಗಿದ್ದಾಗ…

Read More

ಕೋಲಾರದಲ್ಲಿ ಕಲಬೆರಕೆ ಹಾಲು: ವರದಿಯಲ್ಲಿ ಆಘಾತಕಾರಿ ಅಂಶ; ಬೆಚ್ಚಿಬಿದ್ದ ಜನ

ಕೋಲಾರ, ಮಾರ್ಚ್​ 27: ಕಲಬೆರಕೆ ಹಾಲಿನ (Fake Milk Production) ವಿರುದ್ಧ ಸಮರ ಸಾರಿದ್ದ ಜಿಲ್ಲಾಡಳಿತ ಹಲವು ಹಳ್ಳಿಗಳಲ್ಲಿ ದಾಳಿ ನಡೆಸಿ ಹಾಲು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಸದ್ಯ ವರದಿ ಜಿಲ್ಲಾಡಳಿತ ಕೈ ಸೇರಿದ್ದು, 18 ಕಡೆ ಸಂಗ್ರಹಿಸಿದ್ದ ಹಾಲು ಕಲಬೆರಕೆ ಎನ್ನುವ ಆಘಾತಕಾರಿ ವರದಿ ಬಹಿರಂಗವಾಗಿದೆ. ಸದ್ಯ ಈ ವಿಚಾರ ಕೋಲಾರ ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ. ರಾಜ್ಯದಲ್ಲಿ ಕ್ಷೀರಕಾಂತ್ರಿ ಮೂಲಕ ಬಯಲು ಸೀಮೆಯಲ್ಲಿ ಹಾಲಿನ ಹೊಳೆ ಹರಿಸಿದ ಕೀರ್ತಿ ಕೋಲಾರ ಜಿಲ್ಲೆಯ ಹಾಲು ಉತ್ಪಾದಕರಿಗೆ…

Read More

ದಾವಣಗೆರೆ ದಕ್ಷಿಣ ಬೈಎಲೆಕ್ಷನ್​​: ಸಾದಿಕ್ ಪೈಲ್ವಾನ್ ಮನವೊಲಿಸಿದರೂ ಕಾಂಗ್ರೆಸ್​​ಗೆ ತಪ್ಪಲ್ವಾ ಬಂಡಾಯದ ಬಿಸಿ?

ದಾವಣಗೆರೆ, ಮಾರ್ಚ್​​ 27: ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಮುಸ್ಲಿಂ ಸಮುದಾಯಕ್ಕೆ ಸಿಗದೇ ಇರುವುದು ಆ ಸಮಾಜದ ಕಾರ್ಯಕರ್ತರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿನ್ನೆಲೆ ಕಣಕ್ಕೆ ಇಳಿಯೋದಾಗಿ ಈ ಹಿಂದೆ ಸಾದಿಕ್ ಪೈಲ್ವಾನ್ ಘೋಷಿಸಿದ್ದ ಕಾರಣ ಅವರಿಗೆ ಸಮುದಾಯದ ಬೆಂಬಲ ವ್ಯಕ್ತವಾಗಿತ್ತು. ಆದರೀಗ ಅವರು ಆ ನಿರ್ಧಾರದಿಂದ ಹಿಂದೆ ಸರಿಯುತ್ತಿರುವ ಕಾರಣ, ಅವರಿಗೆ ಬೆಂಬಲ ಘೋಷಿಸಿದ್ದ ನಾಯಕರು ಯಾವುದೇ ಕಾರಣಕ್ಕೂ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ…

Read More

Vasthu Tips: ಪೂಜಾ ಕೋಣೆಯಲ್ಲಿ ತಪ್ಪಿಯೂ ಈ ಒಂದು ವಸ್ತು ಇಡಲೇಬೇಡಿ; ಅಪಾಯ ತಪ್ಪಿದ್ದಲ್ಲ!

ಹಿಂದೂ ಸಂಪ್ರದಾಯದಲ್ಲಿ ಮನೆಯ ಪೂಜಾ ಕೋಣೆಯನ್ನು ಅತ್ಯಂತ ಪವಿತ್ರ ಮತ್ತು ಆಧ್ಯಾತ್ಮಿಕ ಶಕ್ತಿಯ ಕೇಂದ್ರವೆಂದು ಪರಿಗಣಿಸಲಾಗುತ್ತದೆ. ಇದು ಕೇವಲ ಪ್ರಾರ್ಥನೆ ಮಾಡುವ ಸ್ಥಳವಲ್ಲ, ಬದಲಾಗಿ ಮನೆಯ ಸಕಾರಾತ್ಮಕ ಶಕ್ತಿಯ ಮೂಲವಾಗಿದೆ. ಈ ಕಾರಣಕ್ಕಾಗಿಯೇ ಅನೇಕರು ಪೂಜಾ ಕೋಣೆಯ ವಿನ್ಯಾಸ ಮತ್ತು ಅಲ್ಲಿನ ವಸ್ತುಗಳ ಜೋಡಣೆಯಲ್ಲಿ ವಾಸ್ತು ಶಾಸ್ತ್ರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಆದರೆ, ನಾವು ದೈನಂದಿನ ಪೂಜೆಯಲ್ಲಿ ಮಾಡುವ ಒಂದು ಸಣ್ಣ ತಪ್ಪು ಮನೆಯ ವಾಸ್ತು ಸಮತೋಲನವನ್ನೇ ಏರುಪೇರು ಮಾಡಬಹುದು ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ. ಬೆಂಕಿಕಡ್ಡಿ…

Read More

ಏಪ್ರಿಲ್​​​ನಲ್ಲಿ ಈ ರಾಶಿಯವರ ಆಹಾರ ವಿಷವಾಗಬಹುದು, ಆರೋಗ್ಯದಲ್ಲಿ ಎಚ್ಚರ ಇರಲಿ

ಏಪ್ರಿಲ್ 2026 ರಲ್ಲಿ ಮೇಷ ರಾಶಿಯಲ್ಲಿ ಉಚ್ಚನಾದ ಸೂರ್ಯ, ಬುಧ, ಸ್ವಸ್ಥಾನವಾದ ವೃಷಭದಲ್ಲಿ ಶುಕ್ರ, ಮಿತ್ರನ‌ ಸ್ಥಾನವಾದ ಮೀನದಲ್ಲಿ ಕುಜ ಈ ಮೂರೂ ಗ್ರಹರೂ ಉತ್ತಮಸ್ಥಾನದಲ್ಲಿಯೇ ಇರುವರು. ಹಾಗಾಗಿ ಶುಭ ಫಲವನ್ನು ಪಡೆಯುವ ಅವಕಾಶ ಈ ತಿಂಗಳು ಅಧಿಕವಾಗಿದೆ. ಅವಕಾಶಗಳನ್ನು ವಂಚಿಸಿಕೊಂಡು ದುಃಖಿಸುವ ಕಾರ್ಯ ಬೇಡ. ಮೇಷ: ಈ ತಿಂಗಳು ನಿಮಗೆ ಮಿಶ್ರಫಲ ನೀಡಲಿದೆ. ರಾಶಿಯಲ್ಲಿ ರವಿಯ ಸಂಚಾರವಿರುವುದರಿಂದ ಕಾರ್ಯಕ್ಷೇತ್ರದಲ್ಲಿ ಅಧಿಕಾರ ಮತ್ತು ಗೌರವ ಹೆಚ್ಚಾಗಲಿದೆ. ಆದರೆ, ಕುಜನ ಪ್ರಭಾವದಿಂದ ಕೋಪದ ಮೇಲೆ ನಿಯಂತ್ರಣವಿರಲಿ. ಹಣಕಾಸಿನ ವಿಚಾರದಲ್ಲಿ…

Read More

SSLC ಹಿಂದಿ ಪರೀಕ್ಷೆ ಕೇಂದ್ರಗಳಿಗೆ ಕನ್ನಡ ಸಂಘಟನೆಗಳಿಂದ ಮುತ್ತಿಗೆ ಎಚ್ಚರಿಕೆ: ಪೊಲೀಸ್ ಮೊರೆ ಹೋದ ಶಿಕ್ಷಣ ಇಲಾಖೆ

ಬೆಂಗಳೂರು, ಮಾರ್ಚ್ 27: ಕರ್ನಾಟಕದಲ್ಲಿ ಮಾರ್ಚ್ 30ರಂದು ನಡೆಯಬೇಕಿದ್ದ ಎಸ್​​ಎಸ್​ಎಲ್​ಸಿ (SSLC) ತೃತೀಯ ಭಾಷೆ ಹಿಂದಿ ಪರೀಕ್ಷೆಯನ್ನು ಮಾರ್ಚ್​​ 31ಕ್ಕೆ ಮುಂದೂಡಲಾಗಿದೆ. ಮಹಾವೀರ ಜಯಂತಿ ಹಿನ್ನೆಲೆ ಪರೀಕ್ಷಾ ದಿನಾಂಕದಲ್ಲಿ ಬದಲಾವಣೆ ಮಾಡಿ ಶಿಕ್ಷಣ ಇಲಾಖೆ ನಿನ್ನೆ ಆದೇಶಿಸಿದೆ. ಇನ್ನೊಂದೆಡೆ ಹಿಂದಿ ಪರೀಕ್ಷಾ ವಿಚಾರವಾಗಿ ಕನ್ನಡ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ವಿದ್ಯಾರ್ಥಿಗಳು ಹಿಂದಿ ಪರೀಕ್ಷೆ ಬರೆಯದೇ ಇದ್ದರೂ ಪಾಸ್ ಮಾಡಬೇಕು ಎಂಬ ಬೇಡಿಕೆ ಮುಂದಿಟ್ಟಿವೆ. ಒಂದು ವೇಳೆ ಹಿಂದಿ ಪರೀಕ್ಷೆ ನಡೆಸಿದರೆ ಕೇಂದ್ರಗಳಿಗೆ ಮುತ್ತಿಗೆ ಹಾಕುವುದಾಗಿದೆ ಎಚ್ಚರಿಕೆ ನೀಡಲಾಗಿದೆ….

Read More

ಮದುವೆಯಾದ ಪುರುಷ ಲಿವ್-ಇನ್ ಸಂಬಂಧ ಇಟ್ಟುಕೊಳ್ಳುವುದು ಅಪರಾಧವಲ್ಲ; ಹೈಕೋರ್ಟ್ ತೀರ್ಪು

ಅಲಹಾಬಾದ್, ಮಾರ್ಚ್ 27: ವಿವಾಹಿತ ಪುರುಷ ಮಹಿಳೆಯೊಂದಿಗೆ ಲಿವ್-ಇನ್ ಸಂಬಂಧದಲ್ಲಿರುವುದು ಕಾನೂನಿನ ಅಡಿಯಲ್ಲಿ ಅಪರಾಧವಲ್ಲ ಎಂದು ಅಲಹಾಬಾದ್ ಹೈಕೋರ್ಟ್ (Allahabad High Court) ಹೇಳಿದೆ. ಆತನಿಗೆ ಮದುವೆಯಾಗಿದೆ ಎಂಬ ವಿಷಯ ತಿಳಿದಿದ್ದರೂ ಮಹಿಳೆ ಆತನೊಂದಿಗೆ ಲಿವ್-ಇನ್ ರಿಲೇಷನ್​ಶಿಪ್​ನಲ್ಲಿದ್ದರೆ ಅದು ತಪ್ಪಲ್ಲ ಎಂದು ಕೋರ್ಟ್ ಹೇಳಿದೆ. ಆ ಮಹಿಳೆಯ ಕುಟುಂಬದಿಂದಲೇ ಬೆದರಿಕೆ ಎದುರಿಸುತ್ತಿರುವ ಲಿವ್-ಇನ್ ದಂಪತಿಗೆ ರಕ್ಷಣೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸಲ್ಲಿಸಲಾಗಿತ್ತು. ಈ ಪ್ರಕರಣವನ್ನು ಆಲಿಸಿದ ನ್ಯಾಯಾಲಯ ವಿವಾಹಿತ ಪುರುಷನು ಪರಸ್ಪರ ಒಪ್ಪಿಗೆಯ ಮೂಲಕ ವಯಸ್ಕ ಮಹಿಳೆಯ…

Read More

ಏಪ್ರಿಲ್​ನಲ್ಲಿ ಗುಡ್​ಫ್ರೈಡೆ, ಬಸವಜಯಂತಿ, ಅಂಬೇಡ್ಕರ್ ಜಯಂತಿ; ಬ್ಯಾಂಕುಗಳಿಗೆ ಒಟ್ಟು 11 ದಿನ ರಜೆ

ಬೆಂಗಳೂರು, ಮಾರ್ಚ್ 27: ಆರ್​ಬಿಐ ಕ್ಯಾಲೆಂಡರ್ ಪ್ರಕಾರ 2026ರ ಏಪ್ರಿಲ್ ತಿಂಗಳಲ್ಲಿ ಬ್ಯಾಂಕುಗಳಿಗೆ ಒಟ್ಟು 11 ದಿನ ರಜೆ (Bank Holidays) ಇದೆ. ಕೆಲ ರಜೆಗಳು ಪ್ರಾದೇಶಿಕವಾಗಿದ್ದು, ಆಯಾ ಪ್ರದೇಶಕ್ಕೆ ಸೀಮಿತವಾಗಿರುತ್ತದೆ. ಮಾರ್ಚ್ ತಿಂಗಳಿಗೆ ಹೋಲಿಸಿದರೆ ಏಪ್ರಿಲ್​ನಲ್ಲಿ ಹಬ್ಬ ಹರಿದಿನಗಳು ಕಡಿಮೆ. ಕ್ರೈಸ್ತರ ಗುಡ್ ಫ್ರೈಡೆ, ಈಸ್ಟರ್ ಹಬ್ಬಗಳು ಎಪ್ರಿಲ್​ನಲ್ಲಿ ಇವೆ. ಈಸ್ಟರ್ ಹಬ್ಬ ಭಾನುವಾರ ಬಂದಿರುವುದರಿಂದ ಬ್ಯಾಂಕ್ ಉದ್ಯೋಗಿಗಳಿಗೆ ಹೆಚ್ಚುವರಿ ರಜೆ ಸಿಗುವುದಿಲ್ಲ. ಅಂಬೇಡ್ಕರ್ ಜಯಂತಿ, ಬಸವ ಜಯಂತಿ ಕೂಡ ಏಪ್ರಿಲ್​ನಲ್ಲೇ ಇವೆ. ನಾಲ್ಕು ಭಾನುವಾರ…

Read More

ಮಧ್ಯಪ್ರಾಚ್ಯದ ವಾರ್​​ ಎಫೆಕ್ಟ್​​: ರೈತರ ಕಣ್ಣಲ್ಲಿ ನೀರು ತರಿಸಿದ ಈರುಳ್ಳಿ; ಪಾತಾಳಕ್ಕಿಳಿದ ಬೆಲೆ

ಬೀದರ್​​, ಮಾರ್ಚ್​​ 27: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ದೇಶ ಸೇರಿದಂತೆ ರಾಜ್ಯದ ಹಲವು ಉದ್ಯಮಗಳು ಈಗಾಗಲೇ ತತ್ತರಿಸಿ ಹೋಗಿವೆ. ಈ ನಡುವೆ ವಾರ್​​ ಎಫೆಕ್ಟ್​​ ಅನ್ನದಾತರ ಕೈಸುಡಲೂ ಆರಂಭಿಸಿದ್ದು, ಬೀದರ್​​ನಲ್ಲಿ ರೈತರು ಬೆಳೆದಿದ್ದ ಈರುಳ್ಳಿ ಬೆಳೆ ಅವರ ಕಣ್ಣಲ್ಲೇ ಈಗ ನೀರು ತರಿಸುತ್ತಿದೆ. ಯುದ್ಧದ ಹಿನ್ನೆಲೆ ಗಲ್ಫ್​​ ರಾಷ್ಟ್ರಗಳಿಗೆ ರಫ್ತಾಗುತ್ತಿದ್ದ ಈರುಳ್ಳಿ ರಫ್ತು ನಿಂತಿರುವ ಕಾರಣ ಬೆಲೆ ಪಾತಾಳಕ್ಕೆ ಕುಸಿದಿದೆ. ಪ್ರತಿ ಕೆ.ಜಿ. ಈರುಳ್ಳಿ 4ರಿಂದ 6 ರೂಪಾಯಿವರೆಗೆ ಮಾರಾಟವಾಗುತ್ತಿರುವ ಕಾರಣ ಬೆಳೆಗಾರರು ಭಾರಿ ನಷ್ಟ…

Read More

‘ರಾಮರಸ’ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್; ಭಿನ್ನ ಪಾತ್ರದಲ್ಲಿ ನಟ

ಕನ್ನಡದ ನಟ ಪ್ರಜ್ವಲ್ ದೇವರಾಜ್ ಅವರು ಹಲವು ಸಿನಿಮಾಗಳಲ್ಲಿ ನಟಿಸಿದವರು. ಅವರು ಈಗ ಕಾರ್ತಿಕ್ ಮಹೇಶ್ ನಟನೆಯ ‘ರಾಮರಸ’ ಸಿನಿಮಾದ ಭಾಗ ಆಗುತ್ತಿದ್ದಾರೆ. ಸಾಕಷ್ಟು ಭಿನ್ನ ಶೈಲಿಯಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ಪ್ರಜ್ವಲ್ ಅವರು ಗುರುಸಿದ್ಧನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಪೋಸ್ಟರ್ ಗಮನ ಸೆಳೆದಿದೆ. ರಾಮನವಮಿ ಪ್ರಯುಕ್ತ ‘ರಾಮರಸ’ ಚಿತ್ರದಲ್ಲಿನ ಪ್ರಜ್ವಲ್ ದೇವರಾಜ್ ಲುಕ್ ಅನಾವರಣಗೊಂಡಿದೆ. ವಿನಯ್ ಗುರೂಜಿ ಅವರು ಈ ಲುಕ್ ಅನಾವರಣ ಮಾಡಿದರು. ಪೋಸ್ಟರ್​ ಅಲ್ಲಿ ಉದ್ದನೆಯ ಕೂದಲು ಬಿಟ್ಟು, ಕತ್ತಲ್ಲಿ…

Read More