ಇಂಡಿಯನ್ ಪ್ರೀಮಿಯರ್ ಲೀಗ್‌ನ 19 ನೇ ಸೀಸನ್ನ (IPL 2026) ಮೊದಲ ಪಂದ್ಯ ಮಾರ್ಚ್ 28 ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs SRH) ನಡುವೆ ನಡೆಯಲಿದೆ. ಒಂದೆಡೆ ಆರ್‌ಸಿಬಿ ಹಾಲಿ ಚಾಂಪಿಯನ್ ಆಗಿದ್ದರೆ, ಮತ್ತೊಂದೆಡೆ ಸನ್‌ರೈಸರ್ಸ್ ಹೈದರಾಬಾದ್ ಕಳೆದ ಆವೃತ್ತಿಯಲ್ಲಿ 5ನೇ ಸ್ಥಾನಕ್ಕೆ ತೃಪ್ತಿಪಡೆದುಕೊಂಡಿತ್ತು. ಆದಾಗ್ಯೂ ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನು ಹೊಂದಿರುವ ಎಸ್‌ಆರ್‌ಎಚ್ ತಂಡವನ್ನು ಕಡಿಮೆ ಅಂದಾಜು ಮಾಡುವಂತಿಲ್ಲ. ಇತ್ತ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿ ಸಮತೋಲನದಿಂದ ಕೂಡಿರುವ ಆರ್‌ಸಿಬಿ ಮೈಮರೆಯುವಂತಿಲ್ಲ. ಇನ್ನು ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳ ಮುಖಾಮುಖಿ ದಾಖಲೆಯನ್ನು ನೋಡುವುದಾದರೆ..
ಹೆಡ್ ಟು ಹೆಡ್ ದಾಖಲೆ
ಅಂಕಿಅಂಶಗಳ ಪ್ರಕಾರ ಸನ್‌ರೈಸರ್ಸ್ ಹೈದರಾಬಾದ್, ಆರ್‌ಸಿಬಿ ವಿರುದ್ಧ ಮೇಲುಗೈ ಸಾಧಿಸಿರುವುದನ್ನು ಗಮಿನಸಬಹುದು. ಐಪಿಎಲ್ ಇತಿಹಾಸದಲ್ಲಿ ಈ ಎರಡೂ ತಂಡಗಳ ನಡುವೆ ಒಟ್ಟು 26 ಪಂದ್ಯಗಳು ನಡೆದಿವೆ. ಇದರಲ್ಲಿ ಸನ್‌ರೈಸರ್ಸ್ ಹೈದರಾಬಾದ್ 13 ಪಂದ್ಯಗಳನ್ನು ಗೆದ್ದಿದ್ದರೆ, ಆರ್‌ಸಿಬಿ 11 ಪಂದ್ಯಗಳನ್ನು ಗೆದ್ದಿದೆ. ಎರಡು ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ. ಇನ್ನು ಕಳೆದ ಆವೃತ್ತಿಯಲ್ಲಿ ರಜತ್ ಪಾಟಿದಾರ್ ನಾಯಕತ್ವದಲ್ಲಿ, ಆರ್‌ಸಿಬಿ ಅದ್ಭುತ ಪ್ರದರ್ಶನ ನೀಡಿತ್ತಾದರೂ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋತಿತ್ತು. ಇದರ ಹೊರತಾಗಿಯೂ, ಆರ್‌ಸಿಬಿ ಐಪಿಎಲ್ 2025 ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಕಳೆದ 5 ಪಂದ್ಯಗಳ ಫಲಿತಾಂಶ
ಇನ್ನು ಆರ್‌ಸಿಬಿ ಹಾಗೂ ಎಸ್‌ಆರ್‌ಹೆಚ್ ನಡುವಿನ ಕಳೆದ ಐದು ಪಂದ್ಯಗಳ ಮುಖಾಮುಖಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಎರಡು ಪಂದ್ಯಗಳನ್ನು ಗೆದ್ದಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೂರರಲ್ಲಿ ಗೆದ್ದಿದೆ . ಇತ್ತೀಚಿನ ದಿನಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ಸಿಬಿ ಉತ್ತಮ ದಾಖಲೆಯನ್ನು ಹೊಂದಿದೆ ಎಂದು ಅಂಕಿಅಂಶಗಳು ತೋರಿಸುತ್ತವೆ. ಆದಾಗ್ಯೂ, ಹೊಸ ಆವೃತ್ತಿಯ ಆರಂಭಿಕ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿರುತ್ತದೆ.
ಮುಂಬೈ, ಮಾರ್ಚ್ 27: ಈಗಿನ ಕಾಲದಲ್ಲಿ ಓದಿಕೊಂಡವರು ಕಾರ್ಪೊರೇಟ್ ಉದ್ಯೋಗಗಳತ್ತ (Corporate job) ಆಸಕ್ತಿ ತೋರಿಸುತ್ತಾರೆ. ಸ್ವ ಉದ್ಯೋಗಕ್ಕೆ ಕೈ ಹಾಕುವುದು ಕಡಿಮೆಯೇ. ಆದರೆ, ಸ್ವಂತ ದುಡಿಮೆಯಿಂದಲೂ ಲಕ್ಷಾನುಗಟ್ಟಲೆ ದುಡಿಯಬಹುದು ಅನೇಕರಿಗೆ ತಿಳಿದೇ ಇಲ್ಲ. ಆದರೆ ಮುಂಬೈ (Mumbai) ಆಟೋಚಾಲಕರೊಬ್ಬರ ದಿನದ ಸಂಪಾದನೆ ಕೇಳಿದ್ರೆ ನೀವು ಶಾಕ್ ಆಗ್ತೀರಾ. ದಿನಕ್ಕೆ 2500 ರೂ ಸಂಪಾದಿಸುವ ಈ ಆಟೋಚಾಲಕ ತಿಂಗಳಿಗೆ 75,000 ರೂ ಸಂಪಾದನೆ ಮಾಡ್ತಾರಂತೆ. ಈ ವಿಡಿಯೋ ಕಾರ್ಪೊರೇಟ್ ಸಂಬಳದ ಕುರಿತು ಚರ್ಚೆಯನ್ನು ಹುಟ್ಟುಹಾಕಿದೆ.
@uvichar_ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಮುಂಬೈ ಹೇಗೆ ದುಬಾರಿ ನಗರ ಎಂಬುದರ ಬಗ್ಗೆ ಚಾಲಕನೊಂದಿಗೆ ಮಾತನಾಡುತ್ತಿದ್ದೇನೆ ಎಂದು ವರ್ಮಾ ಹೇಳುವುದರೊಂದಿಗೆ ಈ ವೀಡಿಯೊ ಪ್ರಾರಂಭವಾಗುತ್ತದೆ. ಮಾತಿಗಿಳಿದ ಈ ಆಟೋ ಚಾಲಕ, ಸಾಕಷ್ಟು ಹಣವನ್ನು ಗಳಿಸಬೇಕು. ಆದರೆ ಸರಿಯಾದ ಅವಕಾಶವನ್ನು ಕಂಡುಹಿಡಿಯುವುದು ಒಂದೇ ಸವಾಲು. ದೈನಂದಿನ ಗಳಿಕೆಯು ಖರ್ಚು ವೆಚ್ಚಗಳನ್ನು ಕಳೆದು ಸುಮಾರು 2,500 ರೂ ಆಗುತ್ತದೆ ಎಂದು ಹೇಳುವುದನ್ನು ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ
ವರ್ಮಾರವರು ದಿನದ ಗಳಿಕೆಯ ಆಧಾರದ ಮೇಲೆ ಮಾಸಿಕ ಆದಾಯವು ಸರಿಸುಮಾರು 75,000 ರೂ ಆಗುತ್ತದೆ ಎನ್ನುವುದನ್ನು ಗಮನಿಸಿದ್ದಾರೆ. ಈ ಮುಂಬೈನಲ್ಲಿ ಆಟೋ ಓಡಿಸುವುದರಿಂದ ದೈನಂದಿನ ಸಂವಹನ ಮತ್ತು ನೆಟ್‌ವರ್ಕಿಂಗ್ ಅವಕಾಶಗಳ ಜೊತೆಗೆ ಉತ್ತಮ ಆದಾಯದ ಗಳಿಸಬಹುದು ಎಂದು ಸೂಚಿಸುತ್ತಾರೆ. ತಿಂಗಳಿಗೆ ಸರಾಸರಿ 75,000. ನೀವು ಸ್ವಲ್ಪ ಕಷ್ಟಪಟ್ಟು ಕೆಲಸ ಮಾಡಿದರೆ, ನೀವು ಸುಮಾರು 1 ಲಕ್ಷ ರೂ ಗಳಿಸಬಹುದು. ಕನಿಷ್ಠ 60,000 ರೂ ಎಂದು ಅವರು ವೀಡಿಯೊದಲ್ಲಿ ಹೇಳಿದ್ದಾರೆ.
ಈ ವಿಡಿಯೋ ಅಧಿಕ ವೀಕ್ಷಣೆಗಳೊಂದಿಗೆ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರ ಯಾವುದೇ ದುಡಿಮೆ ಹೇಳುವಷ್ಟು ಸುಲಭವಲ್ಲ, ಕಷ್ಟ ಪಟ್ಟು ದುಡಿದರೆ ಮಾತ್ರ ಹಣ ಎಂದು ಹೇಳಿದ್ದಾರೆ. ಇನ್ನೊಬ್ಬರು, ಈ ಸಂಬಳದೊಂದಿಗೆ ನೀವು ಹೊಸಬರ ಸಂಬಳವನ್ನು ಹೇಗೆ ಹೋಲಿಸಬಹುದು?. ನೀವು ಆರಂಭಿಕ ವರ್ಷಗಳಲ್ಲಿ ಸಾಕಷ್ಟು ಕೆಲಸ ಮಾಡಿದರೆ 2 ವರ್ಷಗಳ ನಂತರ ನಿಮಗೆ ಸುಲಭವಾಗಿ ಹೆಚ್ಚಳ ಸಿಗುತ್ತದೆ. ನೀವು ಗಳಿಸುವ ಈಗಿನಕ್ಕಿಂತ ಕನಿಷ್ಠ ಎರಡು ಅಥವಾ ಮೂರು ಪಟ್ಟು ಹೆಚ್ಚಾಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಆಟೋ ತಿಂಗಳಿಗೆ ಹೆಚ್ಚು ಸಂಬಳ ಗಳಿಸಬಹುದು. ದಿನವಿಡೀ ಬಿಸಿಲಿನಲ್ಲಿ ಸಂಚಾರ, ಅನಿಶ್ಚಿತತೆ, ನಿಗದಿತ ಸಮಯವಿಲ್ಲದೆ ಇರುತ್ತಾನೆ. 20–30 ಸಾವಿರ ಸಂಬಳದ ಕೆಲಸವು ಸಾಮಾನ್ಯವಾಗಿ ಸ್ಥಿರತೆ, ದಿನಚರಿ ಮತ್ತು ಸ್ವಲ್ಪ ಹೆಚ್ಚು ಸೌಕರ್ಯದೊಂದಿಗೆ ಬರುತ್ತದೆ. ವಿಭಿನ್ನ ಜೀವನ, ವಿಭಿನ್ನ ವಿನಿಮಯಗಳು ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಆದಿತ್ಯ ಧರ್ (Aditya Dhar) ನಿರ್ದೇಶನ ಮಾಡಿರುವ ‘ಧುರಂಧರ್ 2’ ಸಿನಿಮಾ ಸೂಪರ್ ಹಿಟ್ ಆಗಿದೆ. ಮೊದಲ ಭಾಗದ ರೀತಿಯೇ ಈ ಸೀಕ್ವೆಲ್ ಕೂಡ ಧೂಳೆಬ್ಬಿಸುತ್ತಿದೆ. ವಿಶ್ವಾದ್ಯಂತ ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಈಗಾಗಲೇ ಸಾವಿರ ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಪಾಕಿಸ್ತಾನದಲ್ಲಿ ‘ಧುರಂಧರ್ 2’ (Dhurandhar 2) ಸಿನಿಮಾ ಬಿಡುಗಡೆ ಆಗಿಲ್ಲ. ಹಾಗಿದ್ದರೂ ಕೂಡ ಅಲ್ಲಿನ ಜನರು ಈ ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾರೆ. ಯಾಕೆಂದರೆ, ಈ ಚಿತ್ರದ ಕಥೆ ನಡೆಯುವುದೇ ಪಾಕಿಸ್ತಾನದಲ್ಲಿ. ಈಗ ಪಾಕ್ (Pakistan) ಮಂದಿ ಒಂದು ಬೇಡಿಕೆ ಇಟ್ಟಿದ್ದಾರೆ. ಸಿನಿಮಾದ ಕಲೆಕ್ಷನ್ನಲ್ಲಿ ಪಾಲು ಕೇಳುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ವೈರಲ್ ಆಗಿದೆ. ಪಾಕಿಸ್ತಾನದ ಲಿಯಾರಿ ನಗರದ ಕೆಲವು ಯುವಕರು ಮಾಧ್ಯಮವೊಂದಕ್ಕೆ ಈ ರೀತಿ ಹೇಳಿಕೆ ನೀಡಿದ್ದಾರೆ. ‘ಲಿಯಾರಿಗೆ 2 ಅಥವಾ 3 ಕೋಟಿ ರೂಪಾಯಿ ಸಿಗಬೇಕು. ಇಲ್ಲಿನ ರಸ್ತೆ ಸರಿ ಮಾಡಲು ಹಣ ಬೇಕು’ ಎಂದು ಯುವಕನೊಬ್ಬ ಹೇಳಿದ್ದಾನೆ. ಆದರೆ ಇನ್ನೊಬ್ಬ ಯುವಕ 500 ಕೋಟಿ ರೂಪಾಯಿ ಬೇಕು ಎಂದಿದ್ದಾನೆ.
‘ಧುರಂಧರ್ 2 ಸಿನಿಮಾಗೆ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದರೆ ಲಿಯಾರಿ ಜನರಿಗೆ 500 ಕೋಟಿ ರೂಪಾಯಿ ನೀಡಿ. ಅರ್ಧ ಕಲೆಕ್ಷನ್ ಆದಿತ್ಯ ಧರ್ ಇಟ್ಟುಕೊಳ್ಳಲಿ. ಅವರು ನಮಗೆ ಕೊಡುವ ಹಣದಲ್ಲಿ ನಮ್ಮ ರಸ್ತೆ ನಿರ್ಮಾಣ ಆಗಲಿ’ ಎಂದು ಲಿಯಾರಿ ಯುವಕ ಹೇಳಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ನೋಡಿದ ನೆಟ್ಟಿಗರು ಬಿದ್ದು ಬಿದ್ದು ನಗುತ್ತಿದ್ದಾರೆ.
Pakistani delulu aawam is saying that Aditya Dhar will earn 1000 Crore from #Dhurandhar2TheRevenge , he should return back 500 crore to Lyari because we don’t have good roads here pic.twitter.com/kBdtGYvPla
ರಣವೀರ್ ಸಿಂಗ್, ಸಾರಾ ಅರ್ಜುನ್, ಸಂಜಯ್ ದತ್, ಅರ್ಜುನ್ ರಾಮ್ಪಾಲ್, ರಾಕೇಶ್ ಬೇಡಿ, ಆರ್. ಮಾಧವನ್ ಮುಂತಾದವರು ‘ಧುರಂಧರ್ 2’ ಸಿನಿಮಾದಲ್ಲಿ ನಟಿಸಿದ್ದಾರೆ. ಲಿಯಾರಿ ಪಟ್ಟಣದಲ್ಲಿ ಇದ್ದ ಮಾಫಿಯಾ ಮತ್ತು ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ಈ ಸಿನಿಮಾದಲ್ಲಿ ತೋರಿಸಲಾಗಿದೆ. ಹಾಗಾಗಿ ಪಾಕಿಸ್ತಾನದ ಮಂದಿ ಈ ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾರೆ.
ಪಾಕಿಸ್ತಾನ ಹಾಗೂ ಮಧ್ಯಪ್ರಾಚ್ಯ ದೇಶಗಳಲ್ಲಿ ‘ಧುರಂಧರ್ 2’ ಸಿನಿಮಾ ಬಿಡುಗಡೆ ಆಗಿಲ್ಲ. ಇನ್ನುಳಿದ ಕಡೆಗಳಲ್ಲಿ ಈ ಸಿನಿಮಾ ತೆರೆಕಂಡು ಭರ್ಜರಿ ಕಮಾಯಿ ಮಾಡುತ್ತಿದೆ. ಭಾರತದ ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಒಟ್ಟು 1500 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ. ಎರಡನೇ ವೀಕೆಂಡ್ನಲ್ಲಿ ಈ ಸಿನಿಮಾದ ಗಳಿಕೆ ಸಖತ್ ಹೆಚ್ಚಲಿದೆ.
ರಿಷಬ್ ಶೆಟ್ಟಿ (Rishab Shetty), ಕರ್ನಾಟಕದ ಪ್ಯಾನ್ ಇಂಡಿಯಾ ಸ್ಟಾರ್ ನಟ. ‘ಕಾಂತಾರ’ ಮತ್ತು ‘ಕಾಂತಾರ ಚಾಪ್ಟರ್ 1’ ಸಿನಿಮಾದ ಬಳಿಕ ರಿಷಬ್ರ ಖ್ಯಾತಿ ದೇಶದೆಲ್ಲೆಡೆ ಹರಡಿದೆ. ‘ಕಾಂತಾರ ಚಾಪ್ಟರ್ 1’ ಬಳಿಕ ಅವರಿಗೆ ತೆಲುಗು, ಬಾಲಿವುಡ್ನಿಂದಲೂ ಆಫರ್ಗಳು ಬರುತ್ತಿದ್ದು, ಇದೀಗ ರಿಷಬ್ ಅವರು ತೆಲುಗಿನ ‘ಜೈ ಹನುಮಾನ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಹೊಸ ಸಿನಿಮಾದ ತಯಾರಿಯಲ್ಲಿ ತೊಡಗಿರುವ ಸುಳಿವನ್ನೂ ಸಹ ಸಾಮಾಜಿಕ ಜಾಲತಾಣದ ಮೂಲಕ ನೀಡಿದ್ದಾರೆ.
‘ಕಾಂತಾರ: ಚಾಪ್ಟರ್ 2’ ಸಿನಿಮಾದ ಬಳಿಕ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ನಡುವೆ ವೈಮನಸ್ಯ ಮೂಡಿತೇ ಎಂಬ ಅನುಮಾನ ಶುರುವಾಗಿತ್ತು. ಅದಕ್ಕೆ ಮುಖ್ಯ ಕಾರಣವಾಗಿದ್ದು, ರಿಷಬ್ ಅವರು ಕೆಲ ವಾರದ ಹಿಂದಷ್ಟೆ ಹೊಂಬಾಳೆ ಫಿಲಮ್ಸ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಅನ್ಫಾಲೋ ಮಾಡಿದ್ದರು. ಇದು ದೊಡ್ಡ ಸುದ್ದಿಯೇ ಆಯ್ತು. ಇದೀಗ ರಿಷಬ್ ಶೆಟ್ಟಿ, ತಮ್ಮ ಗೆಳೆಯ ರಾಜ್ ಬಿ ಶೆಟ್ಟಿ ಮತ್ತು ‘ಕಾಂತಾರ’ ನಾಯಕಿ ರುಕ್ಮಿಣಿ ವಸಂತ್ ಅವರನ್ನೂ ಅನ್ಫಾಲೋ ಮಾಡಿದ್ದಾರೆ ಎನ್ನಲಾಗುತ್ತಿದೆ.
ಇನ್ಸ್ಟಾಗ್ರಾಂನಲ್ಲಿ ರಿಷಬ್ ಶೆಟ್ಟಿ ಅವರು 140ಕ್ಕೂ ಹೆಚ್ಚು ಮಂದಿ ಸಿನಿಮಾ ಸೆಲೆಬ್ರಿಟಿಗಳು, ಕೆಲವು ರಾಜಕಾರಣಿಗಳನ್ನು ಫಾಲೋ ಮಾಡುತ್ತಾರೆ. ರಕ್ಷಿತ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಜೆಪಿ ತುಮ್ಮಿನಾಡ್ ಇನ್ನೂ ಹಲವರನ್ನು ರಿಷಬ್ ಶೆಟ್ಟಿ ಫಾಲೋ ಮಾಡುತ್ತಾರೆ. ಆದರೆ ಅವರು ಫಾಲೋ ಮಾಡುವವರ ಪಟ್ಟಿಯಲ್ಲಿ ರಾಜ್ ಬಿ ಶೆಟ್ಟಿ ಅವರ ಹೆಸರಿಲ್ಲ. ರಿಷಬ್ ಶೆಟ್ಟಿ ಅವರು ರಾಜ್ ಬಿ ಶೆಟ್ಟಿ ಅವರನ್ನು ಅನ್ಫಾಲೋ ಮಾಡಿದ್ದಾರೆ ಎನ್ನಲಾಗುತ್ತಿದೆ. ಅಂತೆಯೇ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ನಾಯಕಿ ರುಕ್ಮಿಣಿ ವಸಂತ್ ಅವರನ್ನೂ ಫಾಲೋ ಮಾಡುತ್ತಿಲ್ಲ ಅಥವಾ ರಿಷಬ್ ಅವರು ರುಕ್ಮಿಣಿ ವಸಂತ್ ಅವರನ್ನು ಅನ್ಫಾಲೋ ಮಾಡಿದ್ದಾರೆ.
ರಿಷಬ್ ಶೆಟ್ಟಿ ಅವರ ಸಿನಿಮಾ ಇನ್ನಿತರೆ ವಿಷಯಗಳಲ್ಲಿ ಜೊತೆಯಾಗಿಯೇ ಇರುವ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯವಾಗಿರುವ ಪ್ರಗತಿ ಶೆಟ್ಟಿ ಅವರೂ ಸಹ ರಾಜ್ ಬಿ ಶೆಟ್ಟಿ ಅವರನ್ನು ಅನ್ಫಾಲೋ ಮಾಡಿದಂತಿದೆ. ಆದರೆ ಪ್ರಗತಿ ಶೆಟ್ಟಿ ಅವರು ಈಗಲೂ ರುಕ್ಮಿಣಿ ವಸಂತ್ ಅವರನ್ನು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡುತ್ತಿದ್ದಾರೆ. ಪ್ರಗತಿ ಶೆಟ್ಟಿ ಅವರೂ ಸಹ ಹೊಂಬಾಳೆಯನ್ನು ಅನ್ಫಾಲೋ ಮಾಡಿದ್ದಾರೆ.
ರಾಜ್ ಬಿ ಶೆಟ್ಟಿ ಅವರು ‘ಕಾಂತಾರ ಚಾಪ್ಟರ್ 1’ ಸಿನಿಮಾದ ಯಾವೊಂದು ಅಪ್ಡೇಟ್ ಅನ್ನು ಹಂಚಿಕೊಂಡಿರಲಿಲ್ಲ. ಅಲ್ಲದೆ, ‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕೂ ತಮಗೆ ಸಂಬಂಧವಿಲ್ಲ, ನನಗೆ ಆ ಸಿನಿಮಾಕ್ಕೆ ಕೆಲಸ ಮಾಡುವ ಮನಸ್ಸಿಲ್ಲ’ ಎಂದು ಹಿಂದೆ ಸಂದರ್ಶನದಲ್ಲಿ ಹೇಳಿದ್ದರು. ಆದರೆ ಅವರು ‘ಕಾಂತಾರ’ ಸಿನಿಮಾದ ಕೆಲ ಭಾಗಗಳ ನಿರ್ದೇಶನ ಮಾಡಿದ್ದರು. ಮೊದಲ ‘ಕಾಂತಾರ’ ಸಿನಿಮಾ ಬಿಡುಗಡೆ ಆದ ಬಳಿಕ ಇಬ್ಬರ ನಡುವೆ ಮನಸ್ಥಾಪ ಶುರುವಾಗಿತ್ತು ಎನ್ನಲಾಗಿತ್ತು. ಇದೀಗ ಅದಕ್ಕೆ ಮತ್ತೊಂದು ಸಾಕ್ಷ್ಯ ದೊರೆಕಿದಂತಾಗಿದೆ.
ಪಾಟ್ನಾ, ಮಾರ್ಚ್ 27: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್(Nitish Kumar) ಮಾರ್ಚ್ 30ರಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಮಾರ್ಚ್ 16 ರಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಗೆಲುವು ಸಾಧಿಸಿದ್ದರು.ಒಬ್ಬ ವ್ಯಕ್ತಿಯು ಏಕಕಾಲದಲ್ಲಿ ಎರಡು ಸದನಗಳ ಸದಸ್ಯತ್ವವನ್ನು ಹೊಂದಲು ಸಾಧ್ಯವಿಲ್ಲ, ಇದು 14 ದಿನಗಳಲ್ಲಿ ಒಂದು ಸ್ಥಾನವನ್ನು ತ್ಯಜಿಸುವುದು ಕಡ್ಡಾಯ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ, ಆದರೆ ಅವರು ತಮ್ಮ ಸ್ಥಾನವನ್ನು ತ್ಯಜಿಸಿಲ್ಲ. ಎರಡು ದಶಕಗಳ ಕಾಲ ಅಧಿಕಾರದ ಚುಕ್ಕಾಣಿ ಹಿಡಿದಿರುವ ನಿತೀಶ್, ಕೇಂದ್ರ ರಾಜಕೀಯಕ್ಕೆ ಮರಳಲು ನಿರ್ಧರಿಸಿದ್ದಾರೆ. ರಾಜ್ಯಸಭೆಗೆ ಹೋಗುತ್ತಿರುವಾಗ, ಬಿಹಾರದಲ್ಲಿ ತಮ್ಮ ರಾಜಕೀಯ ಹಿಡಿತವನ್ನು ದುರ್ಬಲಗೊಳಿಸಲು ಅವರು ಬಯಸುವುದಿಲ್ಲ.
ಪರಿಣಾಮವಾಗಿ, ನಿತೀಶ್ ಬಿಹಾರದ ವಿವಿಧ ಜಿಲ್ಲೆಗಳಿಗೆ ಪ್ರಯಾಣಿಸುತ್ತಿದ್ದಾರೆ ಮತ್ತು ಅಭಿವೃದ್ಧಿ ಯೋಜನೆಗಳನ್ನು ತ್ವರಿತಗತಿಯಲ್ಲಿ ಉದ್ಘಾಟಿಸುತ್ತಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ ನೀಡಿದ ನಂತರ, ಬಿಹಾರದಲ್ಲಿ ಬಿಜೆಪಿ ನೇತೃತ್ವದ ಹೊಸ ಸರ್ಕಾರ ರಚನೆಯಾಗಲಿದೆ .
ನಿತೀಶ್ ಕುಮಾರ್ ತಮ್ಮ ರಾಜಕೀಯ ಪ್ರಯಾಣದಲ್ಲಿ ಹೊಸ ಅಧ್ಯಾಯ ಆರಂಭಿಸಲಿದ್ದಾರೆ. 21 ವರ್ಷಗಳ ಹಿಂದೆ ಸಂಸತ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವಾಗ ಅವರು ಬಿಹಾರದ ಮುಖ್ಯಮಂತ್ರಿಯಾದರು ಮತ್ತು ಈಗ ರಾಜ್ಯಸಭೆಗಾಗಿ ತಮ್ಮ ಸ್ಥಾನವನ್ನು ತ್ಯಜಿಸುತ್ತಿದ್ದಾರೆ.ತಮ್ಮ ಮಗ ನಿಶಾಂತ್ ಅವರ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸುವುದರ ಜೊತೆಗೆ, ನಿತೀಶ್ ಕುಮಾರ್ ಬಿಹಾರದ ವಿವಿಧ ಪ್ರದೇಶಗಳಲ್ಲಿ ವ್ಯಾಪಕವಾಗಿ ಪ್ರವಾಸ ಮಾಡುತ್ತಿದ್ದಾರೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯಸಭೆಗೆ ಪ್ರವೇಶಿಸಲು ನಿರ್ಧರಿಸಿದ್ದಾರೆ ಮತ್ತು ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಅವರು ಬಿಹಾರದಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತಾ ಮುಖ್ಯಮಂತ್ರಿ ಸ್ಥಾನದಲ್ಲಿಯೇ ಇನ್ನೂ ಉಳಿದಿದ್ದಾರೆ. ಬಿಜೆಪಿ ಬಿಹಾರದ ಮುಖ್ಯಮಂತ್ರಿಯಾದರೆ, ಜೆಡಿಯು ಉಪಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಲಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಅವರನ್ನು ಉಪಮುಖ್ಯಮಂತ್ರಿಯಾಗಿ ನೇಮಿಸಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ಬೆಂಗಳೂರು, ಮಾರ್ಚ್ 27:ಐಪಿಎಲ್ ಪಂದ್ಯಗಳ ಸುರಕ್ಷತೆ ಮತ್ತು ಟಿಕೆಟ್ ವಿತರಣೆ ಕುರಿತು ರಾಜ್ಯ ಸರ್ಕಾರಕ್ಕೆ ವಿಧಾನಸೌಧದಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಎಚ್ಚರಿಕೆ ನೀಡಿದ್ದಾರೆ. ಹಿಂದಿನ ಐಪಿಎಲ್ ಪಂದ್ಯದ ಸಂದರ್ಭ ಸಂಭವಿಸಿದ ಕಾಲ್ತುಳಿತದಲ್ಲಿ 11 ಅಮಾಯಕರು ಮೃತಪಟ್ಟಿದ್ದನ್ನು ಉಲ್ಲೇಖಿಸಿದ ಅವರು, ರಾಜ್ಯ ಸರ್ಕಾರದ ಬೇಜವಾಬ್ದಾರಿ ಹಾಗೂ ಅಧಿಕಾರಿಗಳ ನಡೆ ಈ ದುರಂತಕ್ಕೆ ಕಾರಣ ಎಂದು ಆರೋಪಿಸಿದ್ದಾರೆ. ಅಲ್ಲದೆ ಮುಂಬರುವ ಐಪಿಎಲ್ ಪಂದ್ಯಗಳು ಸುಗಮವಾಗಿ ನಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಯಾವುದೇ ಅಹಿತಕರ ಘಟನೆ ಸಂಭವಿಸಿದಲ್ಲಿ ರಾಜ್ಯ ಸರ್ಕಾರವೇ ನೇರ ಹೊಣೆಗಾರರಾಗಲಿದೆ ಎಂಬ ಎಚ್ಚರಿಕೆಯನ್ನೂ ಇದೇ ವೇಳೆ ನೀಡಿದ್ದಾರೆ. ಐಪಿಎಲ್ ಟಿಕೆಟ್ ಹಂಚಿಕೆ ಕುರಿತೂ ಮಾತನಾಡಿದ ಅಶೋಕ್, ತಮಗೆ ಬರುವ ಟಿಕೆಟ್‌ಗಳನ್ನು ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರಿಗೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಸ್ಥಳೀಯ ಕ್ರಿಕೆಟ್ ಕ್ಲಬ್‌ಗಳು ಮತ್ತು ಸಾಮಾನ್ಯ ಜನರಿಗೆ ಟಿಕೆಟ್‌ಗಳು ಲಭ್ಯವಾಗುವಂತೆ ಮಾಡುವ ದೃಷ್ಟಿಯಿಂದ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳ ಶಾಸಕರು ಕನಿಷ್ಠ ಮೂರ್ನಾಲ್ಕು ಟಿಕೆಟ್‌ಗಳನ್ನು ಪಡೆಯುವ ವ್ಯವಸ್ಥೆಯಾಗಬೇಕೆಂದು ಒತ್ತಾಯಿಸಿದ್ದಾರೆ.
ಸಂಬಲ್ಪುರ, ಮಾರ್ಚ್ 27: ಒಡಿಶಾದ ಕತರ್ಬಗಾ ಪೊಲೀಸ್ ವ್ಯಾಪ್ತಿಯ ಪದನ್ಪಲಿಯಲ್ಲಿ 2021 ರಲ್ಲಿ ನಡೆದ ವ್ಯಕ್ತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಲ್ಪುರದ ಸೆಷನ್ಸ್ ನ್ಯಾಯಾಲಯವು ಗುರುವಾರ 7 ಜನರಿಗೆ ಜೀವಾವಧಿ ಶಿಕ್ಷೆ (life imprisonment) ವಿಧಿಸಿದೆ ಮತ್ತು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಒಬ್ಬ ಆರೋಪಿಯನ್ನು ಖುಲಾಸೆಗೊಳಿಸಿದೆ. ನ್ಯಾಯಾಲಯದ ಆದೇಶಗಳ ಪ್ರಕಾರ ಶಿಕ್ಷೆಗಳನ್ನು ಏಕಕಾಲದಲ್ಲಿ ಜಾರಿಗೊಳಿಸಲು ನಿರ್ದೇಶಿಸಲಾಗಿದೆ.
ಕತರ್ಬಗಾ ಪೊಲೀಸ್ ವ್ಯಾಪ್ತಿಯ ಗುಲಾಮಾಲ್ ಗ್ರಾಮದಲ್ಲಿ 2021ರಲ್ಲಿ ನಡೆದ ಪ್ರಕಾಶ್ ಪ್ರಧಾನ್ ಅವರ ಸಂಚಲನ ಮೂಡಿಸಿದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಲ್ಪುರದ ಜಿಲ್ಲಾ ನ್ಯಾಯಾಲಯವು 7 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಪ್ರಗ್ಯಾನ್ ಪಾಣಿಗ್ರಾಹಿ 23 ಸಾಕ್ಷಿಗಳ ಸಾಕ್ಷ್ಯಗಳನ್ನು ಪರಿಶೀಲಿಸಿದ ನಂತರ ತೀರ್ಪು ನೀಡಿದ್ದಾರೆ. ನ್ಯಾಯಾಲಯವು 7 ಆರೋಪಿಗಳಾದ ರುಕ್ಮಾನ್ ಪ್ರಧಾನ್ (52), ಭೋಜರಾಜ್ ಪ್ರಧಾನ್ (55), ಗಜರಾಜ್ ಪ್ರಧಾನ್ (50), ಅಶೋಕ್ ಪ್ರಧಾನ್ (52), ದುಷ್ಮಂತ ಭೋಯಿ (50), ಭೀಷ್ಮಜಿತ್ ಭೋಯಿ (50), ಮತ್ತು ಭೀಷ್ಮದೇವ್ ಪ್ರಧಾನ್ (41) ಅವರನ್ನು ಅಪರಾಧಿಗಳೆಂದು ಘೋಷಿಸಿದೆ.
ಆದರೆ, ಮತ್ತೊಬ್ಬ ಆರೋಪಿ ಬಿರಾಂಚಿ ಬಿಸ್ವಾಲ್ ಅವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಖುಲಾಸೆಗೊಳಿಸಲಾಯಿತು.
ಈ ಘಟನೆ ಸೆಪ್ಟೆಂಬರ್ 16, 2021ರ ರಾತ್ರಿ 8 ಗಂಟೆ ಸುಮಾರಿಗೆ ಪ್ರಧಾನ್‌ಪಾಲಿ-ಗುಲಾಮಲ್ ಪ್ರದೇಶದಲ್ಲಿ ಸಂಭವಿಸಿದೆ. ಮೃತ ಪ್ರಕಾಶ್ ಪ್ರಧಾನ್ ಮತ್ತು ಅವರ ಸ್ನೇಹಿತ ಅಜಯ್ ಬಾರಿಕ್ ವಿಶ್ವಕರ್ಮ ಪೂಜೆಗೆ ವಸ್ತುಗಳನ್ನು ಖರೀದಿಸಲು ಮಾರುಕಟ್ಟೆಗೆ ಹೋಗಿದ್ದರು. ಅವರು ಹಿಂತಿರುಗುತ್ತಿದ್ದಾಗ ಕಬ್ಬಿಣದ ರಾಡ್, ಹರಿತವಾದ ಆಯುಧಗಳು ಮತ್ತು ಕೊಡಲಿಗಳನ್ನು ಬಳಸಿ ದಾಳಿ ನಡೆಸಲಾಗಿತ್ತು.
ಈ ದಾಳಿಯಲ್ಲಿ ಪ್ರಕಾಶ್ ಪ್ರಧಾನ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಧನಂಜಯ ಬೆಹೆರಾ ಮತ್ತು ಅಜಯ್ ಬಾರಿಕ್ ಗಂಭೀರವಾಗಿ ಗಾಯಗೊಂಡಿದ್ದರು. ಈ ಘಟನೆಯ ನಂತರ ಮೃತರ ಕುಟುಂಬವು ಕತರ್ಬಗಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ನಂತರ ಆರೋಪಿಗಳನ್ನು ಬಂಧಿಸಿ ಆರೋಪಪಟ್ಟಿ ಸಲ್ಲಿಸಿದರು. ದೀರ್ಘ ವಿಚಾರಣೆಯ ನಂತರ ನ್ಯಾಯಾಲಯ ಗುರುವಾರ ತೀರ್ಪು ಪ್ರಕಟಿಸಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮಾರ್ಚ್ 27: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸಬಾರದು ಮತ್ತು ಅಂಕ ಪಟ್ಟಿಯಿಂದ ಹೊರಗಿಡುವಂತೆ ಇತ್ತೀಚೆಗೆ ವಿವಿಧ ಕನ್ನಡ ಪರ ಸಂಘಟನೆಗಳು ಸರ್ಕಾರಕ್ಕೆ ಒತ್ತಾಯಿಸಿದ್ದವು. ಇದರ ಬೆನ್ನಲ್ಲೇ ಎಸ್ಎಸ್ಎಲ್ಸಿ ಪರೀಕ್ಷೆಗೆ 525 ಅಂಕಗಳು ನಿಗದಿ ಮಾಡಲಾಗಿದೆ. ತೃತೀಯ ಭಾಷೆಯ ಅಂಕಕ್ಕೆ ಕೊಕ್ ನೀಡಲಾಗಿದೆ. ಆ ಮೂಲಕ ಕರ್ನಾಟಕದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಮಹತ್ವದ ಸುದ್ದಿ ನೀಡಿದೆ.
ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಶಿಕ್ಷಣ ಇಲಾಖೆ ಎಸ್ಎಸ್ಎಲ್ಸಿ ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆಗೆ ಮುಂದಾಗಿದೆ. ಇನ್ನು ಮುಂದೆ ತೃತೀಯ ಭಾಷೆಯ (ಹಿಂದಿ, ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು ಮತ್ತು ಮರಾಠಿ) ಅಂಕಗಳನ್ನು ಒಟ್ಟು ಅಂಕಗಳಿಗೆ ಪರಿಗಣಿಸಲಾಗುವುದಿಲ್ಲ. ಬದಲಿಗೆ ತೃತೀಯ ಭಾಷೆ ಪರೀಕ್ಷೆಯ ಅಂಕವನ್ನು ಗ್ರೇಡ್ ಮೂಲಕ ನೀಡಲಾಗುತ್ತದೆ. ಇದರಿಂದ ಒಟ್ಟು ಅಂಕಗಳು 625ರಿಂದ 525 ಇಳಿಕೆ ಆಗಲಿದೆ.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಿಷ್ಟು
ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯ ಕೆಆರ್. ವೃತ್ತದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ. ಈ ನಿಯಮವು ಹೊಸ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರಲಿದೆ. ಉಳಿದ ತರಗತಿಗಳ ಕುರಿತು ಮುಂದಿನ ದಿನಗಳಲ್ಲಿ ಶಿಕ್ಷಣ ಇಲಾಖೆ ತೀರ್ಮಾನಿಸಲಿದೆ ಎಂದು ಹೇಳಿದ್ದಾರೆ.
SSLC ಪರೀಕ್ಷೆ ಒಟ್ಟು 625 ಅಂಕಗಳಿಗೆ ನಡೆಯುತ್ತಿತ್ತು. ಆದರೆ, ಇನ್ನು ಮುಂದೆ ಹಿಂದಿ ವಿಷಯದ 100 ಅಂಕಗಳನ್ನು ಫಲಿತಾಂಶದಲ್ಲಿ ಹೊರಗಿಟ್ಟಿರಲಿದ್ದು, ಇವುಗಳನ್ನು ಪರೀಕ್ಷೆ ಅಂಕಗಳಲ್ಲಿ ಒಳಪಡಿಸಲಾಗುವುದಿಲ್ಲ. ವಿದ್ಯಾರ್ಥಿಗಳ ಫಲಿತಾಂಶವನ್ನು ಕೇವಲ 525 ಅಂಕಗಳ ಮೇಲೆ ಮಾತ್ರ ಪರಿಗಣಿಸಲಾಗುವುದು. ಈ ಬದಲಾವಣೆಗಳಿಂದ ಶೈಕ್ಷಣಿಕ ಒತ್ತಡವನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ.
ಹಿಂದಿ ಪರೀಕ್ಷೆ ಮುಂದೂಡಿಕೆ
2025-26ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಮಾರ್ಚ್ 18ರಿಂದ ಆರಂಭವಾಗಿವೆ. ಮಾ.30ರಂದು ನಡೆಯಬೇಕಿದ್ದ ಹಿಂದಿ ಪರೀಕ್ಷೆಯನ್ನು ಮಹಾವೀರ ಜಯಂತಿ ಹಿನ್ನೆಲೆ ಮಾ. 31ಕ್ಕೆ ಪರೀಕ್ಷೆ ಮುಂದೂಡಲಾಗಿದೆ. ಇನ್ನು ಇದೆಲ್ಲದರ ಮಧ್ಯೆ ಇದೀಗ ಶಿಕ್ಷಣ ಇಲಾಖೆ ಎಸ್ಎಸ್ಎಲ್ಸಿ ಪರೀಕ್ಷೆಗೆ 525 ಅಂಕಗಳನ್ನು ನಿಗದಿ ಮಾಡಿದೆ. ಆ ಮೂಲಕ ತೃತೀಯ ಭಾಷೆಯ ಅಂಕವನ್ನು ಕೈಬಿಡಲಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನ 19 ನೇ ಸೀಸನ್ (IPL2026 ) ಮಾರ್ಚ್ 28 ರಿಂದ ಪ್ರಾರಂಭವಾಗುತ್ತಿದೆ. ಮೊದಲಿಗೆ ಕೇವಲ 20 ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಿದ್ದ ಬಿಸಿಸಿಐ (BCCI), ಟೂರ್ನಿ ಆರಂಭಕ್ಕೆ ಎರಡು ದಿನಗಳಿರುವಾಗ ಉಳಿದ 50 ಪಂದ್ಯಗಳನ್ನು ಪ್ರಕಟಿಸಿತು. ಇದರರ್ಥ ಈ ಬಾರಿಯ ಐಪಿಎಲ್ನ ಪೂರ್ಣ ವೇಳಾಪಟ್ಟಿ ಪ್ರಕಟವಾಗಿದೆ. ಈ ಆವೃತ್ತಿಯಲ್ಲಿ ಒಟ್ಟು 12 ಡಬಲ್ ಹೆಡರ್ ಪಂದ್ಯಗಳು ನಡೆಯಲಿದ್ದು, 12 ನಗರಗಳು ಈ ಟೂರ್ನಿಗೆ ಆತಿಥ್ಯವಹಿಸುತ್ತಿವೆ.
ಲೀಗ್‌ನ ಮೊದಲ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವೆ ಬೆಂಗಳೂರಿನಲ್ಲಿ ನಡೆದರೆ, ಲೀಗ್‌ನ ಕೊನೆಯ ಪಂದ್ಯ ಮೇ 24 ರಂದು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೆಕೆಆರ್ ನಡುವೆ ನಡೆಯಲಿದೆ. ಇದಾದ ಬಳಿಕ ಪ್ಲೇ ಅಫ್ ಸುತ್ತು ಶುರುವಾಗಲಿದೆ. ಲೀಗ್ ಸುತ್ತು ಆರಂಭಕ್ಕೂ ಮುನ್ನ ಈ ಪಂದ್ಯಾವಳಿಯನ್ನು ಟಿವಿಯಲ್ಲಿ ಯಾವ ಚಾನೆಲ್‌ನಲ್ಲಿ ವೀಕ್ಷಿಸಬಹುದು? ಹಾಗೆಯೇ ಮೊಬೈಲ್ನಲ್ಲಿ ಉಚಿತವಾಗಿ ವೀಕ್ಷಿಸುವುದು ಹೇಗೆ? ಪಂದ್ಯಗಳು ಎಷ್ಟು ಗಂಟೆಗೆ ಶುರುವಾಗಲಿವೆ ಎಂಬುದನ್ನು ನೋಡುವುದಾದರೆ..
ಯಾವ ಚಾನೆಲ್‌ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ?
ಐಪಿಎಲ್ 2026 ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ವಿವಿದ ಚಾನೆಲ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಕನ್ನಡಿಗರು ಸ್ಟಾರ್ ಸ್ಪೋರ್ಟ್ಸ್ ಕನ್ನಡದಲ್ಲಿ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ. ಹಾಗೆಯೇ ಪಂದ್ಯಗಳ ನೇರ ಪ್ರಸಾರವನ್ನು ಮೊಬೈಲ್ನಲ್ಲಿ, ಜಿಯೋಹಾಟ್‌ಸ್ಟಾರ್ ಅಪ್ಲಿಕೇಶನ್ನಲ್ಲಿ ವೀಕ್ಷಿಸಬಹುದಾಗಿದೆ. ಇದಲ್ಲದೆ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಮಲೇಷ್ಯಾ ಮತ್ತು ಇತರ ಹಲವು ದೇಶಗಳಲ್ಲಿ YuppTV ಯಲ್ಲಿಯೂ ನೇರ ಪ್ರಸಾರವು ಲಭ್ಯವಿರುತ್ತದೆ.
ಐಪಿಎಲ್ ಪಂದ್ಯಗಳು ಎಷ್ಟು ಗಂಟೆಗೆ ಆರಂಭವಾಗುತ್ತವೆ?
ಐಪಿಎಲ್ 2026 ರಲ್ಲಿ, ಮಧ್ಯಾಹ್ನದ ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 3:30 ಕ್ಕೆ ಪ್ರಾರಂಭವಾಗುತ್ತವೆ. ಸಂಜೆಯ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 7:30 ಕ್ಕೆ ಪ್ರಾರಂಭವಾಗುತ್ತವೆ.
ಬೆಂಗಳೂರು/ದಾವಣಗೆರೆ, (ಮಾರ್ಚ್ 27): ದಾವಣಗೆರೆ ದಕ್ಷಿಣ ವಿಧಾನಸಭೆ ಉಪಚುನಾವಣೆ ರಂಗೇರಿದ್ದು, ಇನ್ನೊಂದೆಡೆ ಕಾಂಗ್ರೆಸ್ಗೆ ಮುಸ್ಲಿಂ ಮತಗಳ ಆತಂಕ ಕಾಡುತ್ತಿದೆ. ಯಾಕಂದ್ರೆ ತಮ್ಮ ಸಮುದಾಯಕ್ಕೆ ಟಿಕೆಟ್ ಕೈತಪ್ಪಿದ್ದರಿಂದ ಮುಸ್ಲಿಮರು ಕಾಂಗ್ರೆಸ್ ವಿರುದ್ಧ ಸಿಡಿದೆದ್ದಿದ್ದು, ಬರೋಬ್ಬರಿ 14 ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅದರಲ್ಲೂ ಮುಖ್ಯವಾಗಿ ಸಾಧಿಕ್ ಪೈಲ್ವಾನ್ ಪ್ರಮುಖರಾಗಿದ್ದು, ಕಾಂಗ್ರೆಸ್ ವೋಟ್ ಬ್ಯಾಂಕ್ ಒಡೆಯುತ್ತಾರೆ ಎನ್ನುವ ಭಯ ಇತ್ತು. ಆದ್ರೆ, ಇದೀಗ ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ ಸಂಧಾನ ಯಶಸ್ವಿಯಾಗಿದ್ದು, ಪೈಲ್ವಾನ್ ಬಂಡಾಯ ಶಮನ ಮಾಡುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಆದ್ರೆ, ಪೈಲ್ವಾನ್ ಹೆಸರು ಮಾತ್ರ ಕಣದಲ್ಲಿ ಇರುತ್ರೆ.
ಶಾಸಕರಾದ ರಿಜ್ವಾನ್ ಅರ್ಷದ್, ಸಲೀಂ ಅಹ್ಮದ್ ನಿನ್ನೆ (ಮಾರ್ಚ್ 27) ದಾವಣಗೆರೆಯಲ್ಲಿ ಸಾಧಿಕ್ ಪೈಲ್ವಾನ್ ನಿವಾಸಕ್ಕೆ ತೆರಳಿ ನಾಮಪತ್ರ ಹಿಂಪಡೆಯುವಂತೆ ಮನವಿ ಮಾಡಿದ್ದರು. ಆದ್ರೆ, ಅದು ಸಾಧ್ಯವಾಗಿಲ್ಲ. ಹೀಗಾಗಿ ಸಾಧಿಕ್ ಅವರನ್ನು ಸಿಎಂ ಬಳಿಕ ಕರೆತಂದು ಬಂಡಾಯ ಶಮನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ, ಸಾಧಿಕ್ ಪೈಲ್ವಾನ್ ಈ ಬಗ್ಗೆ ಯಾವುದೇ ಮಾತನಾಡದೇ ಸಂಜೆ ಹೇಳುತ್ತೇನೆಂದು ಮೌನವಾಗಿ ತೆರಳಿದ್ದಾರೆ.
ಸಂಧಾನ ಸಭೆ ಬಳಿಕ ಮಾಧ್ಯಗಳಿಗೆ ರಿಜ್ವಾನ್ ಅರ್ಷದ್ ಪ್ರತಿಕ್ರಿಯಿಸಿ, ನಾವು ಸಲೀಂ ಅಹ್ಮದ್ ಅವರು ಹೋಗಿ ಭೇಟಿ ಮಾಡಿ ಬಂದಿದ್ವಿ. ಸಾಧಿಕ್ ಪೈಲ್ವಾನ್ ಸಮೇತ ಸಿಎಂ ಸಿದ್ದರಾಮಯ್ಯ ಜೊತೆ ಚರ್ಚೆ ಮಾಡಿದ್ದೇವೆ. ಇಷ್ಟು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ಜೊತೆ ಒಡನಾಟ ಇಟ್ಟುಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಬಿಜೆಪಿ ಗೆ ಲಾಭ ಆಗಬಾರದು. ಇದೇ ವಿಚಾರವಾಗಿ ಅವರು ಸಿಎಂ ಜೊತೆ ಮಾತಾಡಿದ್ದಾರೆ. ಸಂಜೆ 4 ಗಂಟೆಗೆ ಅವರು ಕೆಪಿಸಿಸಿ ತೆರಳಿ ತಮ್ಮ ಮನಸ್ಸಿನ ಮಾತುಗಳನ್ನ ಹಂಚಿಕೊಳ್ಳುತ್ತಾರೆ. ಸಾಧಿಕ್ ಒಪ್ಪಿಕೊಂಡಿದ್ದಾರೆ. ಶಮನ ಆಗುತ್ತೆ ಎಂದು ನಿನ್ನೆಯೇ ಹೇಳಿದ್ವಿ. ನಾವು ಹೇಳಿದ್ಮೇಲೆ ಒಪ್ಪಿಕೊಂಡು ಇಲ್ಲಿಗೆ ಬಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಜೊತೆ ಇವರದ್ದು 40 ವರ್ಷ ಸಂಬಂಧ. ಡಿಸಿಎಂ, ಸುರ್ಜೇವಾಲಾ ಜೊತೆಗೂ ಮಾತಾಡುತ್ತಾರೆ ಎಂದರು.