All posts by nagaraj11081993

Monsoon 2026: ಜೂನ್ 4ರಂದು ಕೇರಳಕ್ಕೆ ಮುಂಗಾರು ಪ್ರವೇಶ; ಕರ್ನಾಟಕದಲ್ಲಿ ಮಳೆಗಾಲ ಯಾವಾಗ ಶುರು? – Kannada News

ನವದೆಹಲಿ, ಜೂನ್ 2: ಕೇರಳಕ್ಕೆ ಈ ಬಾರಿ ಜೂನ್ 26ರಂದೇ ಮುಂಗಾರು ಪ್ರವೇಶವಾಗಲಿದೆ ಎನ್ನಲಾಗಿತ್ತು. ಆದರೆ, ಆ ದಿನಾಂಕದಲ್ಲಿ ಬದಲಾವಣೆಯಾಗಿದ್ದು, ಭಾರತೀಯ ಹವಾಮಾನ ಇಲಾಖೆ ಹೊಸ ದಿನಾಂಕವನ್ನು ಪ್ರಕಟಿಸಿದೆ. ಜೂನ್ 4ರ ವೇಳೆಗೆ ಕೇರಳಕ್ಕೆ ಮುಂಗಾರು ಪ್ರವೇಶಿಸಲಿದೆ. ಭಾರತದ ಕೃಷಿ ವಲಯದ ಜೀವನಾಡಿಯಾಗಿರುವ ನೈಋತ್ಯ ಮುಂಗಾರು (Southwest Monsoon) ಜೂನ್ 4ರಂದು ಅಧಿಕೃತವಾಗಿ ಕೇರಳ ಕರಾವಳಿಯನ್ನು ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಸ್ಪಷ್ಟಪಡಿಸಿದೆ.

ಮುಂಗಾರು ಆರಂಭವಾದ ಬೆನ್ನಲ್ಲೇ ಕೇರಳದಾದ್ಯಂತ ತೀವ್ರ ಬಿರುಗಾಳಿ ಸಹಿತವಾದ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಹವಾಮಾನ ಇಲಾಖೆಯು ಕೇರಳ ರಾಜ್ಯದ ಹಲವು ಜಿಲ್ಲೆಗಳಿಗೆ ಹೈ ಅಲರ್ಟ್ ಘೋಷಿಸಿದೆ. ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ದಕ್ಷಿಣ ಅರೇಬಿಯನ್ ಸಮುದ್ರದಲ್ಲಿ ಮುಂಗಾರು ಮಾರುತಗಳು ತೀವ್ರ ವೇಗವನ್ನು ಪಡೆದುಕೊಂಡಿದ್ದು, ಜೂನ್ 4ರಂದು ಕೇರಳದ ಭೂಭಾಗವನ್ನು ಮುಟ್ಟಲಿವೆ. ಇದರ ಪ್ರಭಾವದಿಂದಾಗಿ ಈಗಾಗಲೇ ಕೇರಳದ ದಕ್ಷಿಣ ಮತ್ತು ಮಧ್ಯ ಭಾಗಗಳಲ್ಲಿ ಮುಂಗಾರು ಪೂರ್ವ ಮಳೆ ಚುರುಕುಗೊಂಡಿದೆ.

ಇದನ್ನೂ ಓದಿ: Karnataka Weather forecast: ಕರ್ನಾಟಕದಲ್ಲಿ ಪೂರ್ವ ಮುಂಗಾರು ಅಬ್ಬರ, 1 ವಾರ ಗುಡುಗು ಸಹಿತ ಭಾರೀ ಮಳೆ

ಕೇರಳದಲ್ಲಿ ಮುಂಗಾರು ಪ್ರವೇಶಕ್ಕೆ ಪೂರಕ ವಾತಾವರಣ ಸೃಷ್ಟಿಯಾಗುತ್ತಿದ್ದು, ಕೇರಳದ ಅಲಪ್ಪುಳ, ಕೊಟ್ಟಾಯಂ, ಎರ್ನಾಕುಲಂ ಮತ್ತು ತ್ರಿಶೂರ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ಇರುವುದರಿಂದ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಈ ವರ್ಷ ‘ಎಲ್ ನಿನೋ’ ಪ್ರಭಾವ ಇರುವುದರಿಂದ ದೇಶಾದ್ಯಂತ ಒಟ್ಟಾರೆ ಮುಂಗಾರು ಮಳೆಯು ಸಾಮಾನ್ಯಕ್ಕಿಂತ ಸ್ವಲ್ಪ ಕಡಿಮೆ ಇರಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂಗಾರು ಕೇರಳಕ್ಕೆ ಪ್ರವೇಶಿಸಿದ ಕೆಲವು ದಿನಗಳಲ್ಲಿ ಮುಂಗಾರು ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗಗಳಿಗೆ ಪ್ರವೇಶಿಸಲಿದೆ.

ಕೇರಳದಲ್ಲಿ ರೆಡ್ ಹಾಗೂ ಆರೆಂಜ್ ಅಲರ್ಟ್:

ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಅಲಪ್ಪುಳ, ಕೊಟ್ಟಾಯಂ, ಪತ್ತನಂತಿಟ್ಟ, ಎರ್ನಾಕುಲಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ತೀವ್ರ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದೆ. ಸಮುದ್ರದಲ್ಲಿ 40 ರಿಂದ 50 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಅಲೆಗಳ ಅಬ್ಬರ ಜೋರಾಗಲಿದೆ. ಹೀಗಾಗಿ, ಯಾವುದೇ ಕಾರಣಕ್ಕೂ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ಕರ್ನಾಟಕಕ್ಕೆ ಯಾವಾಗ ಮುಂಗಾರು ಪ್ರವೇಶ?:

ಸಾಮಾನ್ಯವಾಗಿ ಕೇರಳಕ್ಕೆ ಮುಂಗಾರು ಪ್ರವೇಶಿಸಿದ 3ರಿಂದ 5 ದಿನಗಳ ಒಳಗಾಗಿ ಮಳೆ ಕರ್ನಾಟಕವನ್ನು ತಲುಪುತ್ತದೆ. ಜೂನ್ 4ರಂದು ಕೇರಳಕ್ಕೆ ಮುಂಗಾರು ಪ್ರವೇಶಿಸಿದರೆ, ಜೂನ್ 7 ಅಥವಾ 8ರ ವೇಳೆಗೆ ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಮಲೆನಾಡಿನ ಭಾಗಗಳಿಗೆ ಮುಂಗಾರು ಮಾರುತಗಳು ತಲುಪಲಿವೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.

ಇದನ್ನೂ ಓದಿ: Karnataka Weather Forecast: ಇಡೀ ರಾಜ್ಯದಲ್ಲಿಂದು ಭಾರೀ ಮಳೆ! 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​

ಈ ಬಾರಿ ಜಾಗತಿಕ ಹವಾಮಾನ ಬದಲಾವಣೆಗಳು ಮತ್ತು ‘ಎಲ್ ನಿನೋ’ ವಿದ್ಯಮಾನದ ಪ್ರಭಾವ ಇರುವುದರಿಂದ ದೇಶದಲ್ಲಿ ಒಟ್ಟಾರೆ ಮುಂಗಾರು ಮಳೆಯು ಸಾಮಾನ್ಯಕ್ಕಿಂತ ಕೊಂಚ ಏರುಪೇರಾಗುವ ಸಾಧ್ಯತೆಯಿದೆ. ಆದರೆ ಜೂನ್ ತಿಂಗಳ ಆರಂಭದಲ್ಲಿ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಉತ್ತಮ ಮಳೆಯಾಗಲಿದ್ದು, ಕೃಷಿ ಚಟುವಟಿಕೆಗಳಿಗೆ ಇದು ಪೂರಕವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಭಾರಿ ಮಳೆಯಿಂದಾಗಿ ಉಂಟಾಗಬಹುದಾದ ಪ್ರವಾಹ ಅಥವಾ ಭೂಕುಸಿತದಂತಹ ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಕೇರಳ ಸರ್ಕಾರ ಈಗಾಗಲೇ NDRF ಹಾಗೂ ಸ್ಥಳೀಯ ಆಡಳಿತವನ್ನು ಸನ್ನದ್ಧ ಸ್ಥಿತಿಯಲ್ಲಿಟ್ಟಿದೆ. ತಾತ್ಕಾಲಿಕ ಪರಿಹಾರ ಕೇಂದ್ರಗಳನ್ನು ತೆರೆಯಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಾಜಿ ಎಂಎಲ್ಸಿಯನ್ನೇ ಅಪಹರಿಸಿ 2 ಕೋಟಿ ಹಣಕ್ಕೆ ಡಿಮ್ಯಾಂಡ್​​: ದುಷ್ಟರಿಂದ ದಯಾನಂದರೆಡ್ಡಿ ಬಚಾವ್​​ ಆಗಿದ್ದೇ ರೋಚಕ! – Kannada News

ಮಾಜಿ ಎಂಎಲ್‌ಸಿ ದಯಾನಂದರೆಡ್ಡಿImage Credit source: Tv9 Kannada

ಆನೇಕಲ್​​, ಜೂನ್​​ 02: ವಿಧಾನ ಪರಿಷತ್​​ ಮಾಜಿ ಸದಸ್ಯನನ್ನೇ ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿರುವ ಆಘಾತಕಾರಿ ಘಟನೆ ಬೆಂಗಳೂರು (Bengaluru) ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹುಸ್ಕೂರು ಬಳಿ ನಡೆದಿದೆ. ನಿನ್ನೆ ಮಧ್ಯರಾತ್ರಿ 12.15ರ ಸುಮಾರಿಗೆ ಘಟನೆ ನಡೆದಿದ್ದು, ಮಾಜಿ MLC ದಯಾನಂದರೆಡ್ಡಿಯನ್ನು ದುಷ್ಕರ್ಮಿಗಳು ಅಪಹರಿಸಿದ್ದರು ಎನ್ನಲಾಗಿದೆ. ಈ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

ಮುಖ್ಯಾಂಶಗಳು

  • ಹಣಕ್ಕಾಗಿ ಮಾಜಿ ಎಂಎಲ್ಸಿಯ ಅಪಹರಿಸಿದ ದುಷ್ಕರ್ಮಿಗಳು
  • ಆನೇಕಲ್ ತಾಲೂಕಿನ ಹುಸ್ಕೂರು ಬಳಿ ನಡೆದಿರುವ ಘಟನೆ
  • 2 ಕೋಟಿ ಹಣ ನೀಡುವಂತೆ ಆರೋಪಿಗಳಿಂದ ಡಿಮ್ಯಾಂಡ್​​

ಘಟನೆ ಏನು?

ತಡರಾತ್ರಿ ಗೋಲ್ಡ್ ಕಾಯಿನ್ ಕ್ಲಬ್​ನಿಂದ ದಯಾನಂದರೆಡ್ಡಿ ಹೊರಟಿದ್ದರು. ಈ ವೇಳೆ ಬೈಕ್​ನಲ್ಲಿ ಬಂದು ದಯಾನಂದರೆಡ್ಡಿ ಕಾರು ಅಡ್ಡಗಟ್ಟಿದ್ದ ದುಷ್ಕರ್ಮಿಗಳು ನಿಮಗೆ ಗಿಫ್ಟ್ ಬಂದಿದೆ ಎಂದು ಕಾಟನ್ ಬಾಕ್ಸ್ ತೋರಿಸಿದ್ದರು. ಡೋರ್​ ಲಾಕ್ ಓಪನ್ ಮಾಡುತ್ತಿದ್ದಂತೆ ಕಾರಿಗೆ ನುಗ್ಗಿರುವ ಓರ್ವ ಗನ್ ತೋರಿಸಿ ತಾನು ಹೇಳಿದ ಕಡೆ ಕಾರು ಚಲಾಯಿಸಲು ಸೂಚನೆ ನೀಡಿದ್ದಾನೆ. ಬಳಿಕ ಕೆಂಪು ಬಣ್ಣದ ಕಾರಿನಲ್ಲಿ ಮತ್ತಿಬ್ಬರು ಇವರನ್ನು ಹಿಂಬಾಲಿಸಿದ್ದಾರೆ. ಅತ್ತಿಬೆಲೆ ಕೆಹೆಚ್​ಬಿ ಬಡಾವಣೆ ಬಳಿ ಕರೆದೊಯ್ದು ಕೊಲೆ ಬೆದರಿಕೆ ಹಾಕಲಾಗಿದ್ದು, ನಿನ್ನ ಹತ್ಯೆಗೆ 10 ಕೋಟಿ ಸುಪಾರಿ ಕೊಟ್ಟಿದ್ದಾರೆ ಎಂದು ಮಾಜಿ ಎಂಎಲ್​ಸಿ ದಯಾನಂದರೆಡ್ಡಿ ಕುತ್ತಿಗೆಗೆ ಗನ್ ಇಟ್ಟು ದುಷ್ಕರ್ಮಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಹಾಡಹಗಲೇ ಸಿನಿಮೀಯ ಮಾದರಿ ದರೋಡೆ; ಬಂಗಾರದ ಅಂಗಡಿಗೆ ನುಗ್ಗಿ ಆಭರಣ ದೋಚಿ ಎಸ್ಕೇಪ್​​ ಆದ ಮೂವರು

ಇನ್ನು ಈ ವೇಳೆ ಆ ಹಣವನ್ನು ತಾನೇ ಕೊಡ್ತೇನೆ, ಕೊಲ್ಲಬೇಡಿ ಎಂದು ದಯಾನಂದರೆಡ್ಡಿ ಮನವಿ ಮಾಡಿದ್ದಾರೆ. ಮೊದಲು 3 ಕೋಟಿ ಹಣ ಬೇಡಿಕೆಯಿಟ್ಟಿದ್ದ ಅಪಹರಣಕಾರರ ಗ್ಯಾಂಗ್, ಅಂತಿಮವಾಗಿ 2 ಕೋಟಿಗೆ ಒಪ್ಪಿಕೊಂಡಿದ್ದಾರೆ. ಈಗ ಹಣ ಇಲ್ಲ, ಬೆಳಗ್ಗೆ ಬ್ಯಾಂಕ್ ಓಪನ್ ಟೈಮ್​ಗೆ ನೀಡೋದಾಗಿ ದಯಾನಂದರೆಡ್ಡಿ ಕೇಳಿಕೊಂಡಿದ್ದು, ಹಣ ಡ್ರಾ ಮಾಡಿದ ಬಳಿಕ ಕರೆ ಮಾಡುವಂತೆ ತಿಳಿಸಿ ಅಪಹರಣಕಾರರು ದಯಾನಂದರೆಡ್ಡಿ ಅವರನ್ನು ಬಿಟ್ಟುಕಳುಹಿಸಿದ್ದಾರೆ. ಆ ಬೆನ್ನಲ್ಲೇ ಪೊಲೀಸ್​​ ಠಾಣೆಗೆ ತೆರಳಿ ಘಟನೆ ಸಂಬಂಧ ಮಾಜಿ ಎಂಎಲ್​​ಸಿ ದೂರು ದಾಖಲಿಸಿದ್ದಾರೆ. ಅಪಹರಣ ಗ್ಯಾಂಗ್​​ಗಾಗಿ ಪೊಲೀಸರಿಂದ ಹುಡುಕಾಟ ಮುಂದುವರಿದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪ್ಲಂಬರ್, ಎಲೆಕ್ಟ್ರಿಶಿಯನ್​ಗೂ ತಪ್ಪೋದಿಲ್ಲವಂತೆ ಎಐ ಕಂಟಕ; ಕೃತಕ ಬುದ್ಧಿಮತ್ತೆ ಪ್ಲಂಬಿಂಗ್ ಕೆಲಸ ಹೇಗೆ ಮಾಡುತ್ತೆ? – Kannada News

ನವದೆಹಲಿ, ಜೂನ್ 2: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ನಾವು ಅಂದುಕೊಂಡಿದ್ದಕ್ಕಿಂತ ಅತ್ಯಂತ ವೇಗವಾಗಿ ಉದ್ಯೋಗ ಮಾರುಕಟ್ಟೆಯನ್ನು ಆವರಿಸಿಕೊಳ್ಳುತ್ತಿದೆ. 2023ರಲ್ಲಿ ಬಂದಿದ್ದ ವರದಿಯೊಂದು 2032ರ ವೇಳೆಗೆ ಎಐ ತಂತ್ರಜ್ಞಾನವು ಶೇ. 90ರಷ್ಟು ಉದ್ಯೋಗಗಳ ಮೇಲೆ ಪ್ರಭಾವ ಬೀರಬಹುದು ಎಂದು ಅಂದಾಜಿಸಿತ್ತು. ಕೇವಲ 3 ವರ್ಷಗಳಲ್ಲೇ ಪರಿಸ್ಥಿತಿ ಸಂಪೂರ್ಣ ಬದಲಾಗಿದ್ದು, ಎಐ ಅಂದುಕೊಂಡಿದ್ದಕ್ಕಿಂತ ಮೂರು ಪಟ್ಟು ವೇಗವಾಗಿ ಉದ್ಯೋಗಗಳನ್ನು ಆವರಿಸಿಕೊಳ್ಳುತ್ತಿದೆ. ಇದೇ ವೇಳೆ ಐಟಿ ರಂಗದ ಪ್ರಮುಖ ಸಂಸ್ಥೆಯಾದ ‘ಕಾಗ್ನಿಜೆಂಟ್’ (Cognizant) ಬಿಡುಗಡೆ ಮಾಡಿರುವ ಹೊಸ ಅಧ್ಯಯನದ ವಿವರಗಳು ಆಘಾತಕಾರಿ ಎನಿಸುವಂತಿವೆ.

ಕಾಗ್ನಿಜೆಂಟ್ ವರದಿಯ ಪ್ರಕಾರ, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಶೇ. 93ರಷ್ಟು ಉದ್ಯೋಗಗಳು ಈಗ ಎಐ ಬಳಸುವ ಸಾಮರ್ಥ್ಯ ಹೊಂದಿವೆ (AI-capable). ಇದರಲ್ಲಿ ಶೇ. 30ರಷ್ಟು ಉದ್ಯೋಗಗಳು ಅಸ್ತಿತ್ವದ ಬಿಕ್ಕಟ್ಟನ್ನು (existential change) ಎದುರಿಸುತ್ತಿವೆ. ಅಂದರೆ, ಮುಂದಿನ 9 ವರ್ಷಗಳಲ್ಲಿ ಆಗಬಹುದು ಎಂದುಕೊಂಡಿದ್ದ ಬದಲಾವಣೆ ಕೇವಲ 3 ವರ್ಷಗಳಲ್ಲೇ ಸಂಭವಿಸಿದೆ.

ಪ್ಲಂಬರ್, ಎಲೆಕ್ಟ್ರಿಷಿಯನ್‌ಗಳಿಗೂ ತಪ್ಪದ ಪ್ರಭಾವ

ಸಾಮಾನ್ಯವಾಗಿ ಎಐ ತಂತ್ರಜ್ಞಾನವು ಕೇವಲ ಸಾಫ್ಟ್‌ವೇರ್ ಕೋಡಿಂಗ್ ಅಥವಾ ಆಫೀಸ್ ಕೆಲಸಗಳನ್ನು ಮಾತ್ರ ಕಸಿದುಕೊಳ್ಳುತ್ತದೆ ಎಂಬ ನಂಬಿಕೆ ಇತ್ತು. ಆದರೆ ಕಾಗ್ನಿಜೆಂಟ್ ಸಂಶೋಧನಾ ವಿಭಾಗದ ಮುಖ್ಯಸ್ಥ ಓಲಿ ಓ’ಡೋನೊಘು (Ollie O’Donoghue) ಹೇಳುವ ಪ್ರಕಾರ, “ಇಲ್ಲಿ ಯಾರೂ ಸುರಕ್ಷಿತರಲ್ಲ”. ಪ್ಲಂಬರ್ ಅಥವಾ ಎಲೆಕ್ಟ್ರಿಷಿಯನ್ ಕೆಲಸ ಮಾಡುವವರೂ ಸಹ ಎಐ ಯುಗಕ್ಕೆ ತಕ್ಕಂತೆ ಬದಲಾಗಬೇಕಾಗುತ್ತದೆ.

ಇದನ್ನೂ ಓದಿ: ಇದು ರಿಯಲ್ ಸ್ಟೋರಿ..! ಆಟೋ, ಟೆಂಪೋ ಓಡಿಸುತ್ತಿದ್ದ ವ್ಯಕ್ತಿ ಏರ್ಲೈನ್ಸ್ ಕಂಪನಿಯ ಮಾಲೀಕನಾದ ಕಥೆ

ಪ್ಲಂಬಿಂಗ್ ಕೆಲಸದಲ್ಲಿ ಎಐ ಹೇಗೆ ಕೆಲಸ ಮಾಡುತ್ತದೆ?

ಪೈಪ್ ರಿಪೇರಿ ಮಾಡಲು ಮನುಷ್ಯನೇ ಬೇಕಾಗಬಹುದು, ಆದರೆ ಅದಕ್ಕೂ ಮುನ್ನ ಮಾಡುವ ತಪಾಸಣೆ ಮತ್ತು ರೋಗನಿರ್ಣಯವನ್ನು (Inspection & Diagnosis) ಎಐ ಮಾಡಬಲ್ಲದು. ಉದಾಹರಣೆಗೆ, ಇಂದಿನ ಮಲ್ಟಿಮೋಡಲ್ ಎಐ ಏಜೆಂಟ್‌ಗಳು ಗೋಡೆಯ ಮೇಲಿನ ತೇವಾಂಶವನ್ನು ಗುರುತಿಸಿ, ಪೈಪ್ ಎಲ್ಲಿ ಸೋರುತ್ತಿದೆ ಎಂಬುದನ್ನು ಪತ್ತೆ ಹಚ್ಚಿ, ಅದಕ್ಕೆ ಬೇಕಾಗುವ ಬಿಡಿಭಾಗಗಳ ಪಟ್ಟಿ ಮತ್ತು ಬಿಲ್ (Invoice) ಅನ್ನು ತಾವಾಗಿಯೇ ಸಿದ್ಧಪಡಿಸಬಲ್ಲವು.

ಅಮೆರಿಕ ಒಂದರಲ್ಲೇ ಮಾನವ ಶ್ರಮದಿಂದ ಎಐ ಕಡೆಗೆ ಸುಮಾರು 4.5 ಟ್ರಿಲಿಯನ್ ಡಾಲರ್ (ಅಂದಾಜು 427 ಲಕ್ಷ ಕೋಟಿ ರೂಪಾಯಿ) ಮೌಲ್ಯದ ಉದ್ಯೋಗಗಳು ವರ್ಗಾವಣೆಯಾಗಲಿವೆ ಎಂದು ವರದಿ ಎಚ್ಚರಿಸಿದೆ.

ಈ ವರದಿಯು ಜಾಗತಿಕವಾಗಿ ತಂತ್ರಜ್ಞಾನ ಕಂಪನಿಗಳಲ್ಲಿ ನಡೆಯುತ್ತಿರುವ ಭಾರಿ ಉದ್ಯೋಗ ಕಡಿತದ (Layoffs) ಮಧ್ಯೆ ಹೊರಬಿದ್ದಿದೆ. Meta, Amazon, Oracle ನಂತಹ ದೈತ್ಯ ಕಂಪನಿಗಳು ಈಗಾಗಲೇ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿವೆ. ವರದಿಗಳ ಪ್ರಕಾರ, 2026ರ ಈ ಮೊದಲ ಐದು ತಿಂಗಳಲ್ಲೇ ಸುಮಾರು 1,15,907 ಐಟಿ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: ಎಐ ಅಲೆಯಲ್ಲಿ ಹಿಂದುಳಿದ ಭಾರತ; ಷೇರುಬಜಾರಿನ ಬಲದಲ್ಲಿ 5ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಕುಸಿತ

ಭರವಸೆಯ ಕಿರಣವೇನು?

ಈ ವರದಿ ಆತಂಕ ಮೂಡಿಸಿದರೂ, ಕಾಗ್ನಿಜೆಂಟ್‌ನ ಎಐ ವಿಭಾಗದ ಮುಖ್ಯಸ್ಥ ಸುಶಾಂತ್ ವಾರಿಕೂ ಅವರ ಪ್ರಕಾರ, ಎಐ ಹಳೆಯ ಉದ್ಯೋಗಗಳನ್ನು ಕಸಿದುಕೊಂಡರೂ ಮಾರುಕಟ್ಟೆಯಲ್ಲಿ ಹೊಸ ಆರ್ಥಿಕ ಅವಕಾಶಗಳು ಮತ್ತು ಹೊಸ ರೀತಿಯ ಉದ್ಯೋಗಗಳನ್ನು ಸೃಷ್ಟಿಸಲಿದೆ. ಆದರೆ ಇದಕ್ಕೆ ಕಂಪನಿಗಳು ಮತ್ತು ಉದ್ಯೋಗಿಗಳು ತಮ್ಮ ಕೆಲಸದ ಶೈಲಿಯನ್ನು ಸಂಪೂರ್ಣವಾಗಿ ಬದಲಾಯಿಸಿಕೊಳ್ಳಬೇಕಾಗುತ್ತದೆ.

ಮತ್ತೊಂದೆಡೆ, ಎನ್‌ವಿಡಿಯಾ (Nvidia) ಸಿಇಒ ಜೆನ್ಸನ್ ಹುವಾಂಗ್ ಅವರಂತಹ ಕೆಲವು ತಂತ್ರಜ್ಞಾನದ ಮುಖಂಡರು “ಎಐ ಉದ್ಯೋಗಗಳನ್ನು ಸಂಪೂರ್ಣವಾಗಿ ಕಸಿದುಕೊಳ್ಳುತ್ತದೆ ಎನ್ನುವುದು ಮೂರ್ಖತನದ ವಾದ” ಎಂದು ಹೇಳುವ ಮೂಲಕ ಉದ್ಯೋಗಿಗಳಿಗೆ ಧೈರ್ಯ ತುಂಬುವ ಕೆಲಸವನ್ನೂ ಮಾಡುತ್ತಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬೆಳಗಾವಿ: DySP, ಪಿಎಸ್​ಐ ಹೆಸರು ಬರೆದಿಟ್ಟು ವ್ಯಕ್ತಿ ಸಾವು, ಕಾರಣವೇನು? – Kannada News

ಬೆಳಗಾವಿ, (ಜೂನ್ 02): ವ್ಯಕ್ತಿಯೋರ್ವ DySP, ಪಿಎಸ್​ಐ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ (Belagavi) ಜಿಲ್ಲೆ ಗೋಕಾಕ್ ತಾಲೂಕಿನ ಬೆಂಡಿಗೇರಿ ಗ್ರಾಮದಲ್ಲಿ ನಡೆದಿದೆ. ಬೆಂಡಿಗೇರಿ ಗ್ರಾಮದಲ್ಲಿ ರವೀಂದ್ರ ದಾನವ್ವಗೋಳ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಕೊಟ್ಟ ಸಾಲ ವಾಪಸ್ ಕೊಟ್ಟಿಲ್ಲ ಎಂದು ಮನನೊಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಜೀವ ಬೆದರಿಕೆ ಹಾಕಿದ್ದರಿಂದ ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ರವೀಂದ್ರ ಡೆತ್​​ ನೋಟ್​​ನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ ಪೊಲೀಸರ ಸಹ ಅನ್ಯಾಯ ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದು, ಈ ಪ್ರಕರಣ ಸಂಚಲನ ಮೂಡಿಸಿದೆ.

ಮುಖ್ಯಾಂಶಗಳು

  • ಬೆಳಗಾವಿಯಲ್ಲಿ DySP, ಪಿಎಸ್​ಐ ಹೆಸರು ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ
  • ಬೆಂಡಿಗೇರಿ ಗ್ರಾಮದಲ್ಲಿ ರವೀಂದ್ರ ದಾನವ್ವಗೋಳ ನೇಣಿಗೆ ಶರಣು
  • ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಬೆಂಡಿಗೇರಿ ಗ್ರಾಮದಲ್ಲಿ ಘಟನೆ
  • ನನಗೆ ಜೀವ ಬೆದರಿಕೆ ಇರುವುದರಿಂದ ಆತ್ಮಹತ್ಯೆ ಎಂದು ಉಲ್ಲೇಖ
  • ಡೆತ್​ನೋಟ್​ನಲ್ಲಿ ಹಲವರ ಹೆಸರು ಉಲ್ಲೇಖಿಸಿರುವ ಮೃತ ರವೀಂದ್ರ

ಆತ್ಮಹತ್ಯೆ ಮಾಡಿಕೊಂಡಿರುವ ರವೀಂದ್ರ, ಲಕ್ಷ್ಮಣ್ ಚಂದರಗಿ ಮತ್ತು ಭರಮಪ್ಪ‌ ಪೂಜಾರಿ ಎಂಬುವರಿಗೆ 8 ಲಕ್ಷ ರೂಪಾಯಿ ಸಾಲ ನೀಡಿದ್ದರು. ಆದ್ರೆ, ಈ ಹಣವನ್ನು ಲಕ್ಷ್ಮಣ್ ಚಂದರಗಿ ಮತ್ತು ಭರಮಪ್ಪ‌ ಪೂಜಾರಿ ವಾಪಸ್ ಕೊಟ್ಟಿಲ್ಲ. ಬದಲಾಗಿ ಹಣ ಕೇಳಿದ್ದಕ್ಕೆ ರವೀಂದ್ರಗೆ ಜೀವ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ನ್ಯಾಯ ಕೊಡಿಸಿ ಎಂದು ರವೀಂದ್ರ, ಪಿಎಸ್‌ಐ ಆನಂದ, ಹಿಂದಿನ ಡಿವೈಎಸ್​​ಪಿ ಮುಲ್ಲಾಗೆ ಮನವಿ ಮಾಡಿದ್ದು, ಪೊಲೀಸರು ಸಹ ಇದಕ್ಕೆ ಕ್ಯಾರೇ ಎಂದಿಲ್ಲ. ಅಲ್ಲದೇ ಪೊಲೀಸ ಸಹ ಬೆದರಿಕೆ ಹಾಕಿದ್ದಾರೆ ಎಂದು ರವೀಂದ್ರ ಆತ್ಮಹತ್ಯೆಗೆ ಮುನ್ನ ಡೆತ್​ ನೋಟ್​​ನಲ್ಲಿ ಬರೆದಿಟ್ಟಿದ್ದಾನೆ.

ಘಟನಾ ಸ್ಥಳಕ್ಕೆ ಮೂಡಲಗಿ ಠಾಣಾ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದರು. ಇನ್ನು ಮೃತ ರವೀಂದ್ರ ದಾನವ್ವಗೋಳ ಪತ್ನಿ ದೂರಿನ ಮೇರೆಗೆ 8 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.

ಡೆತ್​​ನೋಟ್​​ನಲ್ಲಿ ಡಿವೈಎಸ್ಪಿ ಹಾಗೂ ಪಿಎಸ್​​ಐ ಹೆಸರು ಉಲ್ಲೇಖಿಸಿ ಗಂಭೀರ ಆರೋಪ ಮಾಡಿದ್ದು, ಸಂಚಲ ಮೂಡಿಸಿದ್ದು, ಈ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸಿ ಇದರ ಸತ್ಯಾಸತ್ಯೆಯನ್ನು ಪತ್ತೆ ಮಾಡಬೇಕಿದೆ.

ಕರ್ನಾಟಕದ ಮ್ತತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 4:17 pm, Tue, 2 June 26

Source link

ಕರಾವಳಿ ಜನರ ಆಸೆಗೆ ತಣ್ಣೀರೆರಚಿದ ರೈಲ್ವೆ ಇಲಾಖೆ!: ಜೂನ್ 3ರ ಬೆಂಗಳೂರು-ಮಂಗಳೂರು ವಂದೇ ಭಾರತ್ ಟ್ರಯಲ್ ರನ್ ದಿಢೀರ್ ಕ್ಯಾನ್ಸಲ್! – Kannada News

ಬೆಂಗಳೂರು-ಮಂಗಳೂರು ವಂದೇ ಭಾರತ್ ಟ್ರಯಲ್ ರನ್ ಕ್ಯಾನ್ಸಲ್Image Credit source: google gemini

ಮಂಗಳೂರು, ಜೂ.2: ಬೆಂಗಳೂರು ಮತ್ತು ಮಂಗಳೂರು ನಡುವೆ ಅತಿ ಶೀಘ್ರದಲ್ಲೇ ಸಂಚರಿಸಲಿದೆ ಎನ್ನಲಾಗಿದ್ದ ಪ್ರೀಮಿಯಂ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲಿನ ಸೇವೆಗೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ. ಜೂನ್ 3ರ ಬುಧವಾರದಂದು ನಿಗದಿಯಾಗಿದ್ದ ರೈಲಿನ ಮೊದಲ ಅಧಿಕೃತ ಪ್ರಾಯೋಗಿಕ ಸಂಚಾರವನ್ನು ನೈಋತ್ಯ ರೈಲ್ವೆ (South Western Railway) ವಲಯವು ಕೊನೆ ಘಳಿಗೆಯಲ್ಲಿ ರದ್ದುಗೊಳಿಸಿದ್ದು, ಕರಾವಳಿ ಜನರಲ್ಲಿ ತೀವ್ರ ನಿರಾಶೆ ಮೂಡಿಸಿದೆ. ನೆನ್ನೆ ಅಂದರೆ ಜೂ.1ಕ್ಕೆ ಈ ಪ್ರಯೋಗ ನಡೆಯಬೇಕಿತ್ತು. ಆದರೆ ಇದನ್ನು ಜೂ.3ಕ್ಕೆ ಅಂದರೆ ನಾಳೆಗೆ ಮುಂದೂಡಲಾಗಿತ್ತು. ಆದರೆ ಇದೀಗ ಅದನ್ನು ರದ್ದು ಮಾಡಲಾಗಿದೆ.

ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಾರಿಗೆ ವ್ಯವಸ್ಥಾಪಕರ ಕಚೇರಿಯು ಮೇ 31 ರಂದು ಅಧಿಕೃತ ಆದೇಶ ಹೊರಡಿಸಿದ್ದು, ಪ್ರಾಯೋಗಿಕ ಸಂಚಾರದ ಪ್ರಸ್ತಾವನೆಯನ್ನು ಹಿಂಪಡೆದಿದೆ. ಆದೇಶ ಸಂಖ್ಯೆ T.454/YPR-MAQ Vande Bharat/2026-27(241) ರ ಪ್ರಕಾರ, ಜೂನ್ 3 ರಂದು ಯಶವಂತಪುರ (YPR) ಮತ್ತು ಮಂಗಳೂರು (MAQ) ನಡುವೆ ನಡೆಯಬೇಕಿದ್ದ ವಂದೇ ಭಾರತ್ ಪ್ರಾಯೋಗಿಕ ಸಂಚಾರವನ್ನು ಅಧಿಕೃತವಾಗಿ ರದ್ದುಗೊಳಿಸಲಾಗಿದೆ. ಇದರ ಬೆನ್ನಲ್ಲೇ, ರೈಲ್ವೆ ನಿಲ್ದಾಣಗಳಲ್ಲಿ ಮಾಡಲಾಗಿದ್ದ ಎಲ್ಲಾ ಕಾರ್ಯಾಚರಣೆಯ ಸಿದ್ಧತೆಗಳನ್ನು ಸ್ಥಗಿತಗೊಳಿಸಲಾಗಿದೆ.

ಘಾಟ್ ಸೆಕ್ಷನ್‌ನಲ್ಲಿ ಪರೀಕ್ಷೆ ನಡೆಯಬೇಕಿತ್ತು:

ಬೆಂಗಳೂರು-ಮಂಗಳೂರು ನಡುವಿನ ಕಠಿಣವಾದ ಶಿರಾಡಿ ಘಾಟ್ ಸೆಕ್ಷನ್‌ನ ಸುರಂಗ ಮಾರ್ಗಗಳು ಮತ್ತು ತಿರುವುಗಳಲ್ಲಿ 8 ಬೋಗಿಗಳ ಈ ಸೆಮಿ-ಹೈಸ್ಪೀಡ್ ರೈಲಿನ ವೇಗ, ಹಳಿಗಳ ಸಾಮರ್ಥ್ಯ ಹಾಗೂ ತಾಂತ್ರಿಕ ಕಾರ್ಯಕ್ಷಮತೆಯನ್ನು ಪರೀಕ್ಷಿಸಲು ಈ ಟ್ರಯಲ್ ರನ್ ಅತ್ಯಂತ ಪ್ರಮುಖವಾಗಿತ್ತು. ರೈಲ್ವೆ ಪ್ರೇಮಿಗಳು ಮತ್ತು ಸಾರ್ವಜನಿಕರು ಈ ಐಷಾರಾಮಿ ರೈಲಿನ ಆಗಮನವನ್ನು ಕಣ್ಣಿಟ್ಟು ಕಾಯುತ್ತಿದ್ದರು. ಆದರೆ ಇದೀಗ ಅವರ ಕಾಯುವಿಕೆಗೆ ತಣ್ಣೀರೆರಚಿದೆ.

ಇದನ್ನೂ ಓದಿ: ರೈಲ್ವೆ ಉದ್ಯೋಗಾಕಾಂಕ್ಷಿಗಳ ಗಮನಕ್ಕೆ: RRB NTPC ಪರೀಕ್ಷಾ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ

ರದ್ದತಿಗೆ ಅಸಲಿ ಕಾರಣವೇನು?:

ಪ್ರಾಯೋಗಿಕ ಸಂಚಾರ ರದ್ದತಿಗೆ ರೈಲ್ವೆ ಇಲಾಖೆಯು ಯಾವುದೇ ಅಧಿಕೃತ ಕಾರಣವನ್ನು ಬಹಿರಂಗಪಡಿಸಿಲ್ಲ. ಆದರೆ ವಂದೇ ಭಾರತ್ ರೈಲಿನ ಪ್ರತ್ಯೇಕ ರೇಕ್ (Rake/ಬೋಗಿಗಳ ಸೆಟ್) ಲಭ್ಯವಿಲ್ಲದಿರುವುದು, ಕಾರ್ಯಾಚರಣೆಯ ಆದ್ಯತೆಗಳು ಮತ್ತು ಕೆಲವು ತಾಂತ್ರಿಕ ಕಾರಣದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ. ಪ್ರಸ್ತುತ ಶಿರಾಡಿ ಘಾಟ್ ಮಾರ್ಗದಲ್ಲಿ ಸರಕು ಸಾಗಣೆ ರೈಲುಗಳ ಸಂಚಾರ ಎಂದಿನಂತೆ ಮುಂದುವರಿದಿರುವುದರಿಂದ, ಮೂಲಸೌಕರ್ಯದ ಯಾವುದೇ ಪ್ರಮುಖ ಸಮಸ್ಯೆಗಳಿಲ್ಲ ಎಂಬುದು ಸ್ಪಷ್ಟವಾಗಿದೆ.

ಮುಂದಿನ ವೇಳಾಪಟ್ಟಿ ಇನ್ನೂ ನಿಗದಿಯಾಗಿಲ್ಲ:

ಬೆಂಗಳೂರು ಮತ್ತು ಮಂಗಳೂರು ನಡುವಿನ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುವ, ಪ್ರವಾಸೋದ್ಯಮ ಮತ್ತು ಉದ್ಯಮಕ್ಕೆ ಬೂಸ್ಟ್ ನೀಡುವ ಈ ವಂದೇ ಭಾರತ್ ಯೋಜನೆಯ ಮುಂದಿನ ಟ್ರಯಲ್ ರನ್ ದಿನಾಂಕವನ್ನು ರೈಲ್ವೆ ಇಲಾಖೆ ಇನ್ನೂ ಪ್ರಕಟಿಸಿಲ್ಲ. ಕರಾವಳಿ ಭಾಗದ ಪ್ರಯಾಣಿಕರು ಮುಂದಿನ ಅಧಿಕೃತ ಅಪ್‌ಡೇಟ್‌ಗಾಗಿ ಕಾತರದಿಂದ ಕಾಯುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:13 pm, Tue, 2 June 26

Source link

ಕೃಷ್ಣಮೃಗ ಬೇಟೆ ಕೇಸ್ ಕುರಿತು ಸಿನಿಮಾ: ಚಿತ್ರತಂಡಕ್ಕೆ ನೋಟಿಸ್ ಕಳಿಸಿದ ಸಲ್ಮಾನ್ ಖಾನ್ – Kannada News

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ (Salman Khan) ಅವರ ತಂಡವು ‘ಕಾಲಾ ಹಿರನ್: ದಿ ಬ್ಯಾಟಲ್ ಫಾರ್ ಲೆಗಸಿ’ ಚಿತ್ರದ ಕಾಸ್ಟಿಂಗ್ ಡೈರೆಕ್ಟರ್ ಅಕ್ಷಯ್ ಪಾಂಡೆ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದೆ. ಸಲ್ಮಾನ್ ಖಾನ್ ಆರೋಪಿ ಆಗಿರುವ ಕೃಷ್ಣಮೃಗ ಬೇಟೆ ಪ್ರಕರಣವನ್ನು ಆಧರಿಸಿ ಈ ಸಿನಿಮಾ ಸಿದ್ಧವಾಗುತ್ತಿದೆ ಎನ್ನಲಾಗಿದೆ. ‘ಕಾಲಾ ಹಿರನ್’ (Kala Hiran: The Battle for Legacy) ಚಿತ್ರದ ಎಲ್ಲಾ ರೀತಿಯ ಸಿದ್ಧತೆ ಮತ್ತು ಪ್ರಚಾರವನ್ನು ತಕ್ಷಣವೇ ನಿಲ್ಲಿಸುವಂತೆ ನೋಟಿಸ್‌ನಲ್ಲಿ ಒತ್ತಾಯಿಸಲಾಗಿದೆ.

ವರದಿಗಳ ಪ್ರಕಾರ, ಏಪ್ರಿಲ್ 24ರಂದು ಈ ಲೀಗಲ್ ನೋಟಿಸ್ ಜಾರಿ ಮಾಡಲಾಗಿದೆ. ಭರತ್ ಶ್ರೀನಾಥ್ ನಿರ್ದೇಶನದ ಹಾಗೂ ಅಮಿತ್ ಜಾನಿ ನಿರ್ಮಾಣದ ಈ ಚಿತ್ರದ ಕಾಸ್ಟಿಂಗ್ ಪ್ರಕ್ರಿಯೆಯ ಭಾಗವಾಗಿ ಅಕ್ಷಯ್ ಪಾಂಡೆ ಅವರು ನಟರನ್ನು ಸಂಪರ್ಕಿಸುತ್ತಿದ್ದರು. ಈ ವೇಳೆ ಚಿತ್ರದ ಸಾರಾಂಶ ಮತ್ತು ಪಾತ್ರಗಳ ಸ್ಕೆಚ್‌ಗಳನ್ನು ಹಂಚಿಕೊಳ್ಳುತ್ತಿದ್ದು, ಅದರಲ್ಲಿ ಸಲ್ಮಾನ್ ಖಾನ್ ಅವರ ಪ್ರಕರಣವನ್ನು ಪ್ರಸ್ತಾಪಿಸಲಾಗಿತ್ತು. ಇದು ಸಲ್ಮಾನ್ ಖಾನ್ ಅವರ ಗಮನಕ್ಕೆ ಬಂದ ತಕ್ಷಣ ಅವರ ವಕೀಲರ ತಂಡ ಕಾನೂನು ಕ್ರಮಕ್ಕೆ ಮುಂದಾಗಿದೆ.

ಸಲ್ಮಾನ್ ಖಾನ್ ಅವರ ಕಾನೂನು ತಂಡವು ನೋಟಿಸ್‌ನಲ್ಲಿ ಪ್ರಮುಖವಾಗಿ ಎರಡು ಅಂಶಗಳನ್ನು ಪ್ರಸ್ತಾಪಿಸಿದೆ. ಮೊದಲನೆಯದಾಗಿ, ಕೃಷ್ಣಮೃಗ ಬೇಟೆ ಪ್ರಕರಣವು ಸದ್ಯ ರಾಜಸ್ಥಾನ ಹೈಕೋರ್ಟ್‌ನಲ್ಲಿ ಬಾಕಿ ಉಳಿದಿದ್ದು, ವಿಚಾರಣೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರಕರಣದ ಸುತ್ತ ಸಿನಿಮಾ ಮಾಡುವುದು ನಡೆಯುತ್ತಿರುವ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಿದಂತಾಗುತ್ತದೆ. ಚಿತ್ರದಲ್ಲಿ ಘಟನೆಯನ್ನು ಅತಿರಂಜಿತವಾಗಿ ಬಿಂಬಿಸುವುದರಿಂದ ಸಲ್ಮಾನ್ ಖಾನ್ ವಿರುದ್ಧ ಸಾರ್ವಜನಿಕರಲ್ಲಿ ಪೂರ್ವಾಗ್ರಹ ಮೂಡಬಹುದು ಮತ್ತು ಇದು ಅವರಿಗೆ ಸಿಗಬೇಕಾದ ನ್ಯಾಯಯುತ ವಿಚಾರಣೆಯ ಹಕ್ಕನ್ನು ಕಸಿದುಕೊಳ್ಳಬಹುದು ಎಂದು ವಾದಿಸಲಾಗಿದೆ.

ಎರಡನೆಯದಾಗಿ, ಈ ಚಿತ್ರವು ಸಲ್ಮಾನ್ ಖಾನ್ ಅವರ ವೈಯಕ್ತಿಕ ಮತ್ತು ವ್ಯಕ್ತಿತ್ವದ ಹಕ್ಕುಗಳನ್ನು ನೇರವಾಗಿ ಉಲ್ಲಂಘಿಸುತ್ತದೆ ಎಂದು ನೋಟಿಸ್‌ನಲ್ಲಿ ಆರೋಪಿಸಲಾಗಿದೆ. ಸಲ್ಮಾನ್ ಖಾನ್ ಅವರ ಹೆಸರು, ವ್ಯಕ್ತಿತ್ವ ಅಥವಾ ಅವರಿಗೆ ಸಂಬಂಧಿಸಿದ ಘಟನೆಗಳನ್ನು ಬಳಸಿಕೊಳ್ಳಲು ಚಿತ್ರತಂಡ ಯಾವುದೇ ಅನುಮತಿ ಅಥವಾ ಒಪ್ಪಿಗೆಯನ್ನು ಪಡೆದಿಲ್ಲ. ಸಲ್ಮಾನ್ ಅವರ ಜನಪ್ರಿಯತೆ ಮತ್ತು ಘನತೆಯನ್ನು ಬಳಸಿಕೊಂಡು ಚಿತ್ರತಂಡ ಲಾಭ ಮಾಡಿಕೊಳ್ಳಲು ಯತ್ನಿಸುತ್ತಿದೆ ಎಂದು ವಕೀಲರು ದೂರಿದ್ದಾರೆ.

ಇದನ್ನೂ ಓದಿ: ಕೊನೆಗೂ ಗೆದ್ದ ಸಲ್ಮಾನ್ ಖಾನ್? ‘ಮಾತೃಭೂಮಿ’ ಚಿತ್ರಕ್ಕೆ ಭರ್ಜರಿ ಪಾಸಿಟಿವ್ ವಿಮರ್ಶೆ

ಸಲ್ಮಾನ್ ಖಾನ್ ಅವರ ಕಾನೂನು ತಂಡವು ಅಕ್ಷಯ್ ಪಾಂಡೆ ಮತ್ತು ಚಿತ್ರಕ್ಕೆ ಸಂಬಂಧಿಸಿದ ಇತರ ಎಲ್ಲಾ ವ್ಯಕ್ತಿಗಳಿಗೆ ಚಿತ್ರದ ನಿರ್ಮಾಣ, ಚಿತ್ರಕಥೆ ಅಭಿವೃದ್ಧಿ ಹಾಗೂ ಪ್ರಚಾರದ ಚಟುವಟಿಕೆಗಳನ್ನು ತಕ್ಷಣವೇ ನಿಲ್ಲಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದೆ. ಜೊತೆಗೆ, ಬೇಷರತ್ ಲಿಖಿತ ಕ್ಷಮಾಪಣೆಗೆ ಒತ್ತಾಯಿಸಿದೆ. ಈ ನೋಟಿಸ್ ತಲುಪಿದ 24 ಗಂಟೆಗಳ ಒಳಗೆ ನಿಯಮಗಳನ್ನು ಪಾಲಿಸದಿದ್ದರೆ ಕೋಟ್ಯಂತರ ರೂಪಾಯಿ ನಷ್ಟ ಪರಿಹಾರ ಹಾಗೂ ಸಿವಿಲ್-ಕ್ರಿಮಿನಲ್ ಕಾನೂನು ಪ್ರಕ್ರಿಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನಾಳೆ ಸಿಎಂ ಆಗಿ ಡಿಕೆಶಿ ಪ್ರಮಾಣವಚನ: ಹೇಗಿರಲಿದೆ ಕಾರ್ಯಕ್ರಮದ ಭದ್ರತೆ? ಪೊಲೀಸ್ ಆಯುಕ್ತರೇ ಕೊಟ್ರು ಮಾಹಿತಿ – Kannada News

ಡಿಕೆಶಿ ಪದಗ್ರಹಣಕ್ಕೆ ಬಿಗಿ ಭದ್ರತೆImage Credit source: Tv9 Kannada

ಬೆಂಗಳೂರು, ಜೂನ್​​ 02: ಸಿಎಂ ಆಗಿ ಡಿ.ಕೆ.ಶಿವಕುಮಾರ್​ (DK Shivakumar) ಪ್ರಮಾಣವಚನ ಸ್ವೀಕಾರ ಹಿನ್ನೆಲೆ ನಾಳಿನ ಕಾರ್ಯಕ್ರಮಕ್ಕೆ ಬಿಗಿ ಪೊಲೀಸ್​​ ಬಂದೋಬಸ್ತ್​​ ಕೈಗೊಳ್ಳಲಾಗಿದೆ. ಈ ಸಂಬಂಧ ಬೆಂಗಳೂರು ನಗರ ಪೊಲೀಸ್​​ ಆಯುಕ್ತ ಸೀಮಂತ್​​ ಕುಮಾರ್​​ ಸಿಂಗ್​ ಎಲ್ಲಾ ವಿಭಾಗದ ಜಂಟಿ ಪೊಲೀಸ್ ಆಯುಕ್ತರು, ಡಿಸಿಪಿಗಳು, ಸಂಚಾರ ವಿಭಾಗದ ಡಿಸಿಪಿಗಳ ಜೊತೆ ಸಭೆ ನಡೆಸಿ ಸಲಹೆ, ಸೂಚನೆ ನೀಡಿದ್ದಾರೆ. ಸಭೆ ಬಳಿಕ ಮಾಹಿತಿ ನೀಡಿರುವ ಪೊಲೀಸ್​​ ಆಯುಕ್ತರು, ಲೋಕಭವನಕ್ಕೆ ಆಹ್ವಾನಿತರಿಗೆ ಮಾತ್ರ ಪವೇಶವಿರಲಿದೆ. ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶವಿರುವುದಿಲ್ಲ ಎಂದು ತಿಳಿಸಿದ್ದಾರೆ.

ಮುಖ್ಯಾಂಶಗಳು

  • ನಾಳೆ ಸಿಎಂ ಪದಗ್ರಹಣ ಕಾರ್ಯಕ್ರಮಕ್ಕೆ ಬಿಗಿ ಭದ್ರತೆ
  • ಲೋಕಭವನಕ್ಕೆ ಆಹ್ವಾನಿತರಿಗೆ ಮಾತ್ರ ಇರಲಿದೆ ಪವೇಶ
  • ಕಾರ್ಯಕ್ರಮದಲ್ಲಿ ಭಾಗಿ ಸಾರ್ವಜನಿಕರಿಗಿಲ್ಲ ಅವಕಾಶ

ವಿವಿಧ ರೀತಿಯಲ್ಲಿ ಕಾರ್ಯಕ್ರಮಕ್ಕೆ ಪಾಸ್​ ಹಂಚಿಕೆ ಮಾಡಲಾಗಿದ್ದು, ಆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದೇವೆ. ಸಂಚಾರ ಮಾರ್ಗದಲ್ಲಿ ಕೆಲವೊಂದು ಬದಲಾವಣೆ ಮಾಡಿದ್ದು, ರೋಡ್ ಶೋ ನಡೆಸುವುದರ ಭಗ್ಗೆ ಯಾವುದೇ ಮಾಹಿತಿ ಇಲ್ಲ. ಹೊರ ರಾಜ್ಯದಿಂದಲೂ ವಿಐಪಿಗಳು ಕಾರ್ಯಕ್ರಮಕ್ಕೆ ಬರುತ್ತಿರುವ ಹಿನ್ನೆಲೆ ಗಣ್ಯರ ಭದ್ರತೆಗೂ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ‌ ಎಂದು ಪೊಲೀಸ್ ಕಮಿಷನರ್​ ಸೀಮಂತ್ ಕುಮಾರ್ ಸಿಂಗ್​ ತಿಳಿಸಿದ್ದಾರೆ.

ಇದನ್ನೂ ಓದಿ: ಸರ್ವ ಧರ್ಮ ಸ್ವಾಮೀಜಿಗಳ ಸಮ್ಮುಖದಲ್ಲಿ ಪೂರ್ವಾಭಿಮುಖವಾಗಿ ಪ್ರಮಾಣವಚನ ಸ್ವೀಕರಿಸಲಿರುವ ಡಿಕೆಶಿ

ಅರ್ಧದಿನ ರಜೆ

ಕರ್ನಾಟಕ ಲೋಕಭವನ ಮತ್ತು ಸುತ್ತ ಮುತ್ತ ಪ್ರದೇಶದಲ್ಲಿ ಜನಸಂದಣಿ ಸೇರುವ ಹಾಗೂ ವಾಹನ ಸಂಚಾರ ದಟ್ಟಣೆ ಉಂಟಾಗುವ ಸಂಭವನೀಯತೆ ಇರುವುದರಿಂದ, ಭದ್ರತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ವಿಧಾನ ಸೌಧ, ವಿಕಾಸ ಸೌಧ ಹಾಗೂ ಬಹುಮಹಡಿಗಳ ಕಟ್ಟಡದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ನಾಳ (ಜೂನ್​​ 03)ಮಧ್ಯಾಹ್ನ ಅರ್ಧ ದಿನ ರಜೆ ಘೋಷಣೆ ಮಾಡಲಾಗಿದೆ. ಈ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಅಧೀನ ಕಾರ್ಯದರ್ಶಿ (ಕಾರ್ಯಕಾರಿ) ಆರ್.ಯದು ಕುಮಾರ್ ಆದೇಶಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ರೈಲ್ವೆ ಉದ್ಯೋಗಾಕಾಂಕ್ಷಿಗಳ ಗಮನಕ್ಕೆ: RRB NTPC ಪರೀಕ್ಷಾ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ – Kannada News

ರೈಲ್ವೆ ಇಲಾಖೆಯಲ್ಲಿ ಉದ್ಯೋಗImage Credit source: Pinterest

ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಹುಡುಕುತ್ತಿರುವ ಯುವಜನತೆಗೆ ರೈಲ್ವೆ ನೇಮಕಾತಿ ಮಂಡಳಿ (RRB) ಪ್ರಮುಖ ಮಾಹಿತಿಯೊಂದನ್ನು ನೀಡಿದೆ. ಆರ್‌ಆರ್‌ಬಿ ತಾಂತ್ರಿಕೇತರ ಜನಪ್ರಿಯ ವರ್ಗಗಳ (RRB NTPC) ಪದವಿಪೂರ್ವ (Undergraduate – CEN 07/2025) ವಿಭಾಗದ ಮೊದಲ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆಯ (CBT 1) ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದ್ದು, ಈ ಕುರಿತು ಅಧಿಕೃತ ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಎರಡನೇ ಹಂತದ ಪರೀಕ್ಷಾ ದಿನಾಂಕಗಳಲ್ಲಿ ಬದಲಾವಣೆ:

ಈ ಹಿಂದೆ ಪ್ರಕಟಿಸಲಾಗಿದ್ದ ವೇಳಾಪಟ್ಟಿಯ ಪ್ರಕಾರ, ಮೊದಲ ಹಂತದ ಪರೀಕ್ಷೆಗಳು ಈಗಾಗಲೇ ಮೇ 7, 8 ಮತ್ತು 9 ರಂದು ಯಶಸ್ವಿಯಾಗಿ ನಡೆದಿವೆ. ಆದರೆ, ಜೂನ್ ತಿಂಗಳಿನಲ್ಲಿ ನಡೆಯಬೇಕಿದ್ದ ಎರಡನೇ ಹಂತದ ಪರೀಕ್ಷಾ ದಿನಾಂಕಗಳನ್ನು ಈಗ ಪರಿಷ್ಕರಿಸಲಾಗಿದೆ. ಹಳೆಯ ವೇಳಾಪಟ್ಟಿಯಲ್ಲಿ ಜೂನ್ 13, 14 ಮತ್ತು ಜೂನ್ 16 ರಿಂದ 20 ರವರೆಗೆ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಲಾಗಿತ್ತು (ಜೂನ್ 15 ರಂದು ಬಿಡುವು ನೀಡಲಾಗಿತ್ತು). ಆದರೆ, ಹೊಸ ಬದಲಾವಣೆಯ ಪ್ರಕಾರ ಜೂನ್ 13, 14, 15, 16 ರಿಂದ ಜೂನ್ 20 ರವರೆಗೆ ಯಾವುದೇ ಮಧ್ಯಂತರ ಬಿಡುವಿಲ್ಲದೆ ಸತತವಾಗಿ ಪರೀಕ್ಷೆಗಳು ನಡೆಯಲಿವೆ ಎಂದು ರೈಲ್ವೆ ಮಂಡಳಿ ಸ್ಪಷ್ಟಪಡಿಸಿದೆ.

ಪ್ರವೇಶ ಪತ್ರ ಮತ್ತು ನಗರ ಮಾಹಿತಿ ಸ್ಲಿಪ್ ಲಭ್ಯತೆ:

ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ರೈಲ್ವೆ ಮಂಡಳಿಯು ಪರೀಕ್ಷಾ ಕೇಂದ್ರವಿರುವ ನಗರದ ಮಾಹಿತಿ ಸ್ಲಿಪ್ (City Notification Slip) ಅನ್ನು ಪರೀಕ್ಷೆಗಿಂತ 10 ದಿನಗಳ ಮುಂಚಿತವಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಿದೆ. ಇದರೊಂದಿಗೆ, ಅಭ್ಯರ್ಥಿಗಳು ತಮ್ಮ ಅಧಿಕೃತ ಪ್ರವೇಶ ಪತ್ರಗಳನ್ನು (Admit Cards) ತಮ್ಮ ಪರೀಕ್ಷಾ ದಿನಾಂಕಕ್ಕಿಂತ ಕೇವಲ 4 ದಿನಗಳ ಮೊದಲು ಆರ್‌ಆರ್‌ಬಿಯ ಅಧಿಕೃತ ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಒಟ್ಟು 3,058 ಹುದ್ದೆಗಳ ಭರ್ತಿ:

RRB NTPC UG ನೇಮಕಾತಿ ಪ್ರಕ್ರಿಯೆಯ ಮೂಲಕ ಪದವಿಪೂರ್ವ ವಿಭಾಗದಲ್ಲಿ ಒಟ್ಟು 3,058 ವಿವಿಧ ತಾಂತ್ರಿಕೇತರ ಜನಪ್ರಿಯ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇವುಗಳಲ್ಲಿ ವಾಣಿಜ್ಯ ಕಮ್ ಟಿಕೆಟ್ ಕ್ಲರ್ಕ್ (Commercial cum Ticket Clerk) – 2,424 ಹುದ್ದೆಗಳು, ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್ (Accounts Clerk cum Typist) – 394 ಹುದ್ದೆಗಳು, ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ (Junior Clerk cum Typist) – 163 ಹುದ್ದೆಗಳು ಮತ್ತು ರೈಲು ಕ್ಲರ್ಕ್ (Trains Clerk) ವಿಭಾಗದಲ್ಲಿ 77 ಹುದ್ದೆಗಳು ಸೇರಿವೆ.

ಇದನ್ನೂ ಓದಿ: 16 ಸರ್ಕಾರಿ ಉದ್ಯೋಗ ತಿರಸ್ಕರಿಸಿ IPS ಆದ ಯುವತಿ; ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿದ ತೃಪ್ತಿ ಭಟ್ ಯಶೋಗಾಥೆ

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?

ಅಭ್ಯರ್ಥಿಗಳ ಅಂತಿಮ ಆಯ್ಕೆಯನ್ನು ಒಟ್ಟು ಐದು ಹಂತಗಳ ಕಠಿಣ ಪ್ರಕ್ರಿಯೆಯ ಮೂಲಕ ಮಾಡಲಾಗುತ್ತದೆ. ಮೊದಲಿಗೆ CBT 1 ಮತ್ತು CBT 2 ಲಿಖಿತ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಅದರಲ್ಲಿ ತೇರ್ಗಡೆಯಾದವರಿಗೆ ಕಂಪ್ಯೂಟರ್ ಆಧಾರಿತ ಟೈಪಿಂಗ್ ಕೌಶಲ್ಯ ಪರೀಕ್ಷೆ (Typing Test) ಇರಲಿದೆ. ಕೊನೆಯ ಹಂತದಲ್ಲಿ ಮೂಲ ದಾಖಲಾತಿಗಳ ಪರಿಶೀಲನೆ (Document Verification) ಮತ್ತು ವೈದ್ಯಕೀಯ ಪರೀಕ್ಷೆಯನ್ನು (Medical Examination) ನಡೆಸಿ ಅರ್ಹರನ್ನು ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಸಿಬಿಟಿ 1 ಪರೀಕ್ಷಾ ವಿಧಾನ ಮತ್ತು ನೆಗೆಟಿವ್ ಮಾರ್ಕ್​​:

RRB NTPC UG CBT 1 ಪರೀಕ್ಷೆಯು ಒಟ್ಟು 100 ಬಹು ಆಯ್ಕೆಯ (MCQ) ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಈ ಪರೀಕ್ಷೆಯನ್ನು ಬರೆಯಲು ಅಭ್ಯರ್ಥಿಗಳಿಗೆ 90 ನಿಮಿಷಗಳ (ಒಂದೂವರೆ ಗಂಟೆ) ಕಾಲಾವಕಾಶ ನೀಡಲಾಗುತ್ತದೆ. ಪ್ರಶ್ನೆ ಪತ್ರಿಕೆಯಲ್ಲಿ ಸಾಮಾನ್ಯ ಜಾಗೃತಿ (General Awareness) ವಿಷಯದಿಂದ 40 ಪ್ರಶ್ನೆಗಳು, ಗಣಿತ (Mathematics) ವಿಷಯದಿಂದ 30 ಪ್ರಶ್ನೆಗಳು ಹಾಗೂ ಸಾಮಾನ್ಯ ಬುದ್ಧಿಮತ್ತೆ ಮತ್ತು ತಾರ್ಕಿಕತೆ (General Intelligence and Reasoning) ವಿಭಾಗದಿಂದ 30 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಈ ಪರೀಕ್ಷೆಯಲ್ಲಿ ತಪ್ಪು ಉತ್ತರಗಳಿಗೆ ಋಣಾತ್ಮಕ ಅಂಕಗಳ (Negative Marking) ವ್ಯವಸ್ಥೆ ಇರಲಿದ್ದು, CBT 1 ರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಮಾತ್ರ ಮುಂದಿನ CBT 2 ಪರೀಕ್ಷೆಗೆ ಆಹ್ವಾನಿಸಲಾಗುತ್ತದೆ.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೊಳ್ಳೆಗಳ ಸಂತತಿ ಮುಗಿಸಲು ಗೂಗಲ್ ಮಾಸ್ಟರ್ ಪ್ಲಾನ್!: 3.2 ಕೋಟಿ ‘ವಿಶೇಷ’ ಸೊಳ್ಳೆಗಳನ್ನು ಸೃಷ್ಟಿಸಿದ ಆಲ್ಫಾಬೆಟ್ – Kannada News

ಅಮೆರಿಕ, ಜೂ.2: ಪ್ರಪಂಚದಾದ್ಯಂತ ಸೊಳ್ಳೆಗಳಿಂದ ಹರಡುವ ರೋಗಗಳನ್ನು ನಿಯಂತ್ರಿಸಲು ಗೂಗಲ್‌ನ ಮಾತೃಸಂಸ್ಥೆ ಆಲ್ಫಾಬೆಟ್ ಒಂದು ವಿನೂತನ ಯೋಜನೆಯನ್ನು ಕೈಗೊಂಡಿದೆ. ಡಿಬಗ್ ಎಂಬ ಈ ಯೋಜನೆಯ ಅಡಿಯಲ್ಲಿ, 3.2 ಕೋಟಿ ಗಂಡು ಸೊಳ್ಳೆಗಳನ್ನು ಪ್ರಯೋಗಾಲಯದಲ್ಲಿ ಸಿದ್ಧಪಡಿಸಿ ಪರಿಸರಕ್ಕೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿದೆ. ಈ ಸೊಳ್ಳೆಗಳು ಓಲ್ಬಾಚಿಯ ಪೈಪಿ ಎಂಬ ನೈಸರ್ಗಿಕ ಬ್ಯಾಕ್ಟೀರಿಯಾವನ್ನು ಹೊಂದಿದ್ದು, ಇವು ಹೆಣ್ಣು ಸೊಳ್ಳೆಗಳೊಂದಿಗೆ ಮಿಲನಗೊಂಡಾಗ ಇಡುವ ಮೊಟ್ಟೆಗಳು ಒಡೆಯುವುದಿಲ್ಲ. ಇದರಿಂದ ಹೊಸ ಸೊಳ್ಳೆಗಳ ಜನನವನ್ನು ತಡೆದು ಕ್ರಮೇಣ ಸೊಳ್ಳೆ ಸಂತತಿಯನ್ನೇ ನಿರ್ಮೂಲನೆ ಮಾಡುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ. ಗಂಡು ಸೊಳ್ಳೆಗಳು ರಕ್ತ ಹೀರುವುದಿಲ್ಲವಾದ್ದರಿಂದ ಅವು ಮನುಷ್ಯರಿಗೆ ಯಾವುದೇ ಅಪಾಯವನ್ನುಂಟು ಮಾಡುವುದಿಲ್ಲ. ಡೆಂಗ್ಯು, ಜಿಕಾ ಮತ್ತು ಚಿಕನ್‌ಗುನ್ಯಾದಂತಹ ರೋಗಗಳನ್ನು ಹರಡುವ ಸೊಳ್ಳೆಗಳನ್ನು ನಿಯಂತ್ರಿಸಲು ಇದು ಪರಿಣಾಮಕಾರಿ ರಾಸಾಯನಿಕ-ಮುಕ್ತ ಪರ್ಯಾಯ ಮಾರ್ಗವಾಗಿದೆ. ಪ್ರಸ್ತುತ, ಈ ಯೋಜನೆ ಅಮೆರಿಕಾದ ಪರಿಸರ ಸಂರಕ್ಷಣಾ ಸಂಸ್ಥೆ (ಇಪಿಎ) ಪರಿಶೀಲನೆಯಲ್ಲಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಜಾನ್ವಿ ಕಪೂರ್ ಮೈಮೇಲೆ ಬೀಳಲು ಬಂದ ರಾಮ್ ಚರಣ್ ಅಭಿಮಾನಿ; ವಿಡಿಯೋ ವೈರಲ್ – Kannada News

ಮೆಗಾ ಪವರ್ ಸ್ಟಾರ್ ರಾಮ್ ಚರಣ್ (Ram Charan) ಮತ್ತು ಬಾಲಿವುಡ್ ನಟಿ ಜಾನ್ವಿ ಕಪೂರ್ (Janhvi Kapoor) ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ತೆಲುಗು ಚಿತ್ರ ‘ಪೆದ್ದಿ’ (Peddi) ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಈ ಕ್ರೀಡಾ ಆಧಾರಿತ ಆ್ಯಕ್ಷನ್ ಡ್ರಾಮಾ ಸಿನಿಮಾದ ಪ್ರಚಾರಕ್ಕಾಗಿ ಚಿತ್ರತಂಡ ಸೋಮವಾರ (ಜೂನ್ 1) ಆಂಧ್ರಪ್ರದೇಶದ ವಿಜಯವಾಡದಲ್ಲಿ ಭರ್ಜರಿ ಪ್ರಚಾರ ಕಾರ್ಯಕ್ರಮವನ್ನು ಆಯೋಜಿಸಿತ್ತು. ಆದರೆ, ಈ ಈವೆಂಟ್‌ನಲ್ಲಿ ನಡೆದ ಒಂದು ಅನಿರೀಕ್ಷಿತ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಕಾರ್ಯಕ್ರಮದಲ್ಲಿ ರಾಮ್ ಚರಣ್, ಜಾನ್ವಿ ಕಪೂರ್ ಮತ್ತು ನಿರ್ದೇಶಕ ಬುಚ್ಚಿ ಬಾಬು ಸನಾ ವೇದಿಕೆಯ ಮೇಲಿದ್ದಾಗ, ಅಭಿಮಾನಿಯೊಬ್ಬ ಭದ್ರತಾ ವಲಯವನ್ನು ದಾಟಿ ಒಮ್ಮೆಗೆ ವೇದಿಕೆಯತ್ತ ನುಗ್ಗಿದ್ದಾನೆ. ರಾಮ್ ಚರಣ್ ಅವರಂತೆಯೇ ಹೇರ್‌ಸ್ಟೈಲ್ ಮಾಡಿಕೊಂಡಿದ್ದ ಈ ಅಭಿಮಾನಿ, ನೇರವಾಗಿ ನಟನ ಬಳಿಗೆ ಓಡಿ ಬಂದಿದ್ದಾನೆ. ಅವನು ವೇದಿಕೆಗೆ ನುಗ್ಗಿದ ರಭಸಕ್ಕೆ ರಾಮ್ ಚರಣ್ ಪಕ್ಕದಲ್ಲೇ ಕುಳಿತಿದ್ದ ಜಾನ್ವಿ ಕಪೂರ್ ಒಂದು ಕ್ಷಣ ತೀವ್ರವಾಗಿ ಬೆಚ್ಚಿಬಿದ್ದಿದ್ದಾರೆ.

ಜಾನ್ವಿ ಕಪೂರ್ ಅವರ ಮುಖದಲ್ಲಿ ಅಸಹಜತೆ ಎದ್ದು ಕಾಣುತ್ತಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ ಹಾಗೂ ರಾಮ್ ಚರಣ್ ಅವರ ವೈಯಕ್ತಿಕ ಬಾಡಿಗಾರ್ಡ್, ಅಂತಾರಾಷ್ಟ್ರೀಯ ಎಂಎಂಎ ಫೈಟರ್ ಆಗಿರುವ ಕೆವಿನ್ ಕುಂಟ, ಆ ಅಭಿಮಾನಿಯನ್ನು ಹಿಡಿದು ಹಿಂದಕ್ಕೆ ಎಳೆದಿದ್ದಾರೆ. ಈ ವೇಳೆ ವೇದಿಕೆಯ ಮೇಲೆ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಆದಾಗ್ಯೂ, ಪರಿಸ್ಥಿತಿ ತಿಳಿಯಾದ ನಂತರ ಆ ಅಭಿಮಾನಿಗೆ ರಾಮ್ ಚರಣ್ ಅವರನ್ನು ಭೇಟಿ ಮಾಡಲು ಅವಕಾಶ ನೀಡಲಾಯಿತು. ಮತ್ತೊಂದು ವಿಡಿಯೋದಲ್ಲಿ, ಆತ ರಾಮ್ ಚರಣ್ ಕಾಲಿಗೆ ಬಿದ್ದು ಕೃತಜ್ಞತೆ ಸಲ್ಲಿಸುತ್ತಿರುವುದು ಕಂಡುಬಂದಿದೆ. ಇಷ್ಟು ದೊಡ್ಡ ಜನಸಂದಣಿಯ ನಡುವೆಯೂ ಪರಿಸ್ಥಿತಿಯನ್ನು ಅತ್ಯಂತ ಜಾಣ್ಮೆಯಿಂದ ನಿಭಾಯಿಸಿದ ಬಾಡಿಗಾರ್ಡ್ ಕೆವಿನ್ ಕುಂಟ ಅವರ ಸಮಯಪ್ರಜ್ಞೆಯನ್ನು ನೆಟ್ಟಿಗರು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.

ಇದನ್ನೂ ಓದಿ: ‘ಪೆದ್ದಿ’ ಸಿನಿಮಾ ಐಟಂ ಹಾಡಿಗೆ ಶ್ರುತಿ ಹಾಸನ್ ಪಡೆದ ಸಂಭಾವನೆ ಎಷ್ಟು?

ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ತಮ್ಮ ಬಾಡಿಗಾರ್ಡ್ ಕೆವಿನ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸ್ಟಾರ್ ಆಗುತ್ತಿರುವ ಬಗ್ಗೆ ರಾಮ್ ಚರಣ್ ತಮಾಷೆಯಾಗಿ ಮಾತನಾಡಿದ್ದರು. ‘ನೀವೆಲ್ಲರೂ ಸೇರಿ ಅವನನ್ನು ತುಂಬಾ ಫೇಮಸ್ ಮಾಡಿಬಿಟ್ಟಿದ್ದೀರಿ. ಅದಕ್ಕೇ ನಾನು ಈಗ ಅವನನ್ನು ಜಾಸ್ತಿ ಹೊರಗಡೆ ಬಿಡುತ್ತಿಲ್ಲ. ಯಾರಾದರೂ ಅವನಿಗೆ ಚಾಕೊಲೇಟ್ ಅಥವಾ ಬಿಸ್ಕೆಟ್ ಆಮಿಷ ಒಡ್ಡಿ ನನ್ನ ಬಗ್ಗೆ ಸೀಕ್ರೆಟ್ಸ್ ತಿಳಿದುಕೊಳ್ಳಬಹುದು’ ಎಂದು ಹಾಸ್ಯ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 3:09 pm, Tue, 2 June 26

Source link