All posts by nagaraj11081993

Purple Day For Epilepsy 2026: ಮಾರ್ಚ್‌ 26 ರಂದು ನೇರಳೆ ದಿನವನ್ನು ಆಚರಿಸುವುದೇಕೆ ಗೊತ್ತಾ?

Purple Day For Epilepsy 2026: ಮಾರ್ಚ್‌ 26 ರಂದು ನೇರಳೆ ದಿನವನ್ನು ಆಚರಿಸುವುದೇಕೆ ಗೊತ್ತಾ?

ಅಪಸ್ಮಾರ ಅಥವಾ ಎಪಿಲೆಪ್ಸಿ (Epilepsy) ದೀರ್ಘಕಾಲದ ಮೆದುಳಿನ ಅಸ್ವಸ್ಥತೆಯಾಗಿದೆ. ನರಕೋಶಗಳು ಅಥವಾ ಮೆದುಳಿನ ಕೋಶಗಳಲ್ಲಿ ಉಂಟಾಗುವ ಹಠಾತ್‌ ಬದಲಾವಣೆಯಿಂದ ಅಪಸ್ಮಾರ ಸಂಭವಿಸುತ್ತದೆ. ಇದೊಂದು ನರವೈಜ್ಞಾನಿಕ ಕಾಯಿಲೆಯಾಗಿದ್ದು, ಸಕಾಲದಲ್ಲಿ ರೋಗ ನಿರ್ಣಯವನ್ನು ನೀಡುವ ಮೂಲಕ ಈ ಕಾಯಿಲೆಯನ್ನು ಗುಣಪಡಿಸಬಹುದು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಜಗತ್ತಿನಲ್ಲಿ ಬರೋಬ್ಬರಿ 50 ಮಿಲಿಯನ್‌ ಜನರು ಈ ಮೂರ್ಛೆ ರೋಗವನ್ನು ಹೊಂದಿದ್ದಾರೆ. ಇಂದಿಗೂ ಕೂಡ ಹೆಚ್ಚಿನವರು ಈ ರೋಗವನ್ನು ಶಾಪವೆಂದು ನಂಬುತ್ತಾರೆ. ಈ ನಿಟ್ಟಿನಲ್ಲಿ ಈ ರೋಗದ ಬಗ್ಗೆ ಇರುವ ಜನರ ತಪ್ಪು ಕಲ್ಪನೆಗಳನ್ನು ತೊಡೆದು ಹಾಕಲು, ಮೂರ್ಛೆ ರೋಗ ಹಾಗೂ ಅದರ ಚಿಕಿತ್ಸಾ ವಿಧಾದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು, ಅಪಸ್ಮಾರ ರೋಗಿಗಳಲ್ಲಿನ ಕೀಳರಿಮೆಯನ್ನು ಹೋಗಲಾಡಿಸಿ ಅವರಿಗೆ ಧೈರ್ಯವನ್ನು ತುಂಬಲು ಪ್ರತಿವರ್ಷ ಮಾರ್ಚ್‌ 26 ರಂದು ಪರ್ಪಲ್‌ ಡೇ ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ನೇರಳೆ ದಿನದ ಇತಿಹಾಸವೇನು?

ಪ್ರತಿ ವರ್ಷ ಮಾರ್ಚ್ 26 ರಂದು ನೇರಳೆ ಅಪಸ್ಮಾರ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ವಿಶೇಷ ರೀತಿಯಲ್ಲಿ ಆಚರಿಸಲು, ಜನರು ಅಪಸ್ಮಾರದ ಬಗ್ಗೆ ಜಾಗೃತಿ ಮೂಡಿಸಲು ನೇರಳೆ ಬಟ್ಟೆಗಳನ್ನು ಧರಿಸುತ್ತಾರೆ. ಈ ರೋಗವು ಲ್ಯಾವೆಂಡರ್ ಹೂವಿನಿಂದ ಪ್ರೇರಿತವಾಗಿದೆ ಮತ್ತು ಒಂಟಿತನವನ್ನು ಪ್ರತಿನಿಧಿಸುತ್ತದೆ. ಇದನ್ನು ಮೊದಲು 2008 ರಲ್ಲಿ ಅಪಸ್ಮಾರದಿಂದ ಬಳಲುತ್ತಿರುವ 9 ವರ್ಷದ ಹುಡುಗಿ ಕ್ಯಾಸಿಡಿ ಮೇಗನ್ ಪ್ರಾರಂಭಿಸಿದಳು.

ಕೆನಡಾದ ಒಂಬತ್ತು ವರ್ಷದ ಕ್ಯಾಸಿಡಿ ಮೇಗನ್, ಅಪಸ್ಮಾರ ಕಾಯಿಲೆಯಿಂದ ಬಳಲುತ್ತಿದ್ದಳು.  ಆಕೆ ತನ್ನ ಈ ಕಾಯಿಲೆಯೊಂದಿಗಿನ ಹೋರಾಟದಿಂದ ಪ್ರೇರಿತರಾಗಿ 2008 ರಲ್ಲಿ ಪರ್ಪಲ್ ಡೇ ಅನ್ನು ಸ್ಥಾಪಿಸಿದಳು. ಕ್ಯಾಸಿಡಿಯ ಈ ಪ್ರಯತ್ನಗಳನ್ನು ಕೆನಡಾದ ಎಪಿಲೆಪ್ಸಿ ಅಸೋಸಿಯೇಷನ್ ​​ಆಫ್ ದಿ ಮ್ಯಾರಿಟೈಮ್ಸ್ (EAM) ಹಾಗೂ ನ್ಯೂಯಾರ್ಕ್‌ನ ಅನಿತಾ ಕೌಫ್‌ಮನ್ ಫೌಂಡೇಶನ್ ಬೆಂಬಲಿಸಿದವು ಮತ್ತು ಅಂತಿಮವಾಗಿ ಆ ದಿನವು ಅಂತರರಾಷ್ಟ್ರೀಯ ಕಾರ್ಯಕ್ರಮವಾಯಿತು. ಅಂದಿನಿಂದ ಪ್ರತಿವರ್ಷ ಮಾರ್ಚ್‌ 26 ರಂದು ಪರ್ಪಲ್‌ ಡೇ ಅನ್ನು ಆಚರಿಸುತ್ತಾ ಬರಲಾಗುತ್ತಿದೆ.

ಇದನ್ನೂ ಓದಿ: ಟಿಬಿ ರೋಗದ ಲಕ್ಷಣಗಳೇನು? ಅದನ್ನು ತಡೆಗಟ್ಟುವುದು ಹೇಗೆ?

ಅಪಸ್ಮಾರ ಜಾಗೃತಿ ದಿನದ ಮಹತ್ವವೇನು?

  • ಅಪಸ್ಮಾರದ ನೇರಳೆ ದಿನವು ಮಹತ್ವದ್ದಾಗಿದೆ ಏಕೆಂದರೆ ಇದು ಅಪಸ್ಮಾರದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಅದಕ್ಕೆ ಸಂಬಂಧಿಸಿದ ಸಾಮಾಜಿಕ ಕಳಂಕವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.
  • ಅಪಸ್ಮಾರ ರೋಗಿಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ, ಸುಧಾರಿತ ಆರೋಗ್ಯ ಸೇವೆ, ಮಾನಸಿಕ ಆರೋಗ್ಯಕ್ಕೆ ಬೆಂಬಲವನ್ನು ನೀಡುವಲ್ಲಿ ಈ ಆಚರಣೆಯು ನಿರ್ಣಾಯಕ ಪಾತ್ರ ವಹಿಸುತ್ತದೆ. ಅಷ್ಟೇ ಅಲ್ಲದೆ ಈ ದಿನ ಅಪಸ್ಮಾರ ಕಾಯಿಲೆ, ಅದರ ರೋಗನಿರ್ಣಯ ಮತ್ತು ಚಿಕಿತ್ಸೆಯ ಬಗ್ಗೆ ಜಾಗೃತಿಯನ್ನು ಮೂಡಿಸಲಾಗುತ್ತದೆ.
  • ಮೂರ್ಛೆ ರೋಗದ ಬಗ್ಗೆ ಜನರಲ್ಲಿರುವ ತಪ್ಪು ಕಲ್ಪನೆಗಳನ್ನು ತೊಡೆದು ಹಾಕಲು ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಈ ದಿನದಂದು ಹಮ್ಮಿಕೊಳ್ಳಲಾಗುತ್ತದೆ.
  • ಈ ದಿನವನ್ನು ವಿಶೇಷ ರೀತಿಯಲ್ಲಿ ಆಚರಿಸಲು, ಜನರು ಅಪಸ್ಮಾರದ ಬಗ್ಗೆ ಜಾಗೃತಿ ಮೂಡಿಸಲು ನೇರಳೆ ಬಟ್ಟೆಗಳನ್ನು ಧರಿಸುತ್ತಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಚ್ಚಿಬಿದ್ದ ಸ್ಥಳೀಯರು: ಅಬ್ಬಬ್ಬಾ ಒಂದೆರಡಲ್ಲ… ಒಟ್ಟಿಗೆ ರಸ್ತೆ ದಾಟಿದ್ದು ಬರೋಬ್ಬರಿ 15ಕ್ಕೂ ಹೆಚ್ಚು ಆನೆಗಳು!

ಚಿಕ್ಕಮಗಳೂರು, ಮಾರ್ಚ್​​ 26: ಜಿಲ್ಲೆಯ ಹಲವೆಡೆ ಮತ್ತೆ ಕಾಡಾನೆಗಳ ಸಂಚಾರ ಜನರ ಆತಂಕಕ್ಕೆ ಕಾರಣವಾಗಿದ್ದು, ಮೂಡಿಗೆರೆ ತಾಲೂಕಿನ ಗೋಣಿಬೀಡು ವ್ಯಾಪ್ತಿಯಲ್ಲಿ 45ಕ್ಕೂ ಹೆಚ್ಚು ಕಾಡಾನೆಗಳು ಬೀಡುಬಿಟ್ಟಿವೆ. ಬೇಲೂರು ಮಾರ್ಗವಾಗಿ ಬಂದಿರುವ 15ಕ್ಕೂ ಹೆಚ್ಚು ಕಾಡಾನೆಗಳು ಕಸ್ಕೆಬೈಲು, ಚಟ್ಟನಹಳ್ಳಿ, ಹುಲಿಹಂಡ್ಲು ಸೇರಿದಂತೆ ಹಲವೆಡೆ ಸಂಚಾರ ನಡೆಸುತ್ತಿದ್ದು, ಕಾಡಾನೆಗಳ ಹಿಂಡು ರಸ್ತೆ ದಾಟುತ್ತಿರುವ ವಿಡಿಯೋ ಸಾರ್ವಜನಿಕರ ಮೊಬೈಲ್​ನಲ್ಲಿ ಸೆರೆಯಾಗಿದೆ. ಮೂಡಿಗೆರೆ ಅರಣ್ಯ ವಲಯ ವ್ಯಾಪ್ತಿಯಲ್ಲಿ ಕಾಡಾನೆಗಳ ಸಂಚಾರ ಕಂಡುಬಂದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕ್ಯಾಮರಾ ಹಿಡಿದ ಮಹಿಳೆ ಮೇಲೆ ಕೋಪಗೊಂಡ ದೈವ! ಮೈ ಜುಮ್ ಎನ್ನಿಸುವ ದೃಶ್ಯ

ಮಂಗಳೂರು, ಮಾ.26: ಮಂಗಳೂರು: ತುಳುನಾಡಿನ ದೈವಾರಾಧನೆ ಎಂಬುದು ಕೇವಲ ಆಚರಣೆಯಲ್ಲ, ಅದೊಂದು ಅಪಾರ ನಂಬಿಕೆ ಮತ್ತು ಶಿಸ್ತಿನ ಪದ್ಧತಿ. ಇತ್ತೀಚೆಗೆ ದೈವದ ನೇಮೋತ್ಸವಗಳ ವೇಳೆ ವಿಡಿಯೋ ಮಾಡುವ ಮತ್ತು ಫೋಟೋ ತೆಗೆಯುವ ಪ್ರವೃತ್ತಿ ಹೆಚ್ಚಾಗುತ್ತಿದ್ದು, ಇದು ದೈವದ ಅವಕೃಪೆಗೆ ಕಾರಣವಾಗುತ್ತಿದೆ ಎಂಬುದಕ್ಕೆ ಸಾಕ್ಷಿಯಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. @chasing_roadss ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಹಿಳೆಯೊಬ್ಬರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ನೇಮೋತ್ಸವ ನಡೆಯುತ್ತಿದ್ದಾಗ ದೈವವು ಹಠಾತ್ತಾಗಿ ವಿಡಿಯೋ ಮಾಡುತ್ತಿದ್ದವರತ್ತ ತಿರುಗಿ ತೀವ್ರ ಆಕ್ರೋಶದಿಂದ ಎಚ್ಚರಿಕೆ ನೀಡಿದೆ. ವಿಡಿಯೋ ಹಂಚಿಕೊಂಡಿರುವ ಮಹಿಳೆಯ ಪ್ರಕಾರ, ಕೇವಲ ವಿಡಿಯೋ ಮಾಡಿದ್ದಕ್ಕೆ ಮಾತ್ರವಲ್ಲದೆ, ತಾನು ಕೆಂಪು ಬಣ್ಣದ ಬಟ್ಟೆ ಧರಿಸಿದ್ದಕ್ಕೂ ದೈವವು ಕೋಪಗೊಂಡಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ದೈವದ ಆವೇಶ ಮತ್ತು ಆಕ್ರೋಶ ಕಂಡು ನೆರೆದಿದ್ದ ಭಕ್ತರು ಒಂದು ಕ್ಷಣ ಸ್ತಬ್ಧರಾಗಿದ್ದಾರೆ. ಕರಾವಳಿಯ ದೈವಗಳ ಮುಂದೆ ನಿಲ್ಲುವಾಗ ಬಟ್ಟೆ, ನಡವಳಿಕೆ ಮತ್ತು ಮೌನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಇತ್ತೀಚಿನ ‘ರೀಲ್ಸ್’ ಸಂಸ್ಕೃತಿಯು ಈ ಪವಿತ್ರ ಸಂಪ್ರದಾಯದ ಗಂಭೀರತೆಯನ್ನು ಹಾಳುಮಾಡುತ್ತಿದೆ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಂಗಾಲಾಗಿ ಓಡಿದ ಜನ, ಕುಟುಂಬಸ್ಥರ ಕೂಗಾಟ; ಬಾಂಗ್ಲಾದಲ್ಲಿ ಬಸ್ ನದಿಗೆ ಬಿದ್ದಿದ್ದು ಹೇಗೆ?

ಢಾಕಾ, ಮಾರ್ಚ್ 26: ನಿನ್ನೆ ಸಂಜೆ ಬಾಂಗ್ಲಾದೇಶದಲ್ಲಿ (Bangladesh Bus Accident) ಅತಿ ಭೀಕರ ಅಪಘಾತ ಸಂಭವಿಸಿದೆ. ಬಾಂಗ್ಲಾದೇಶದ ರಾಜ್ಪರಿಯಲ್ಲಿ ಒಂದು ದಡದಿಂದ ಮತ್ತೊಂದು ದಡಕ್ಕೆ ಸಾರಿಗೆ ದೋಣಿಯ ಮೂಲಕ ಬಸ್​​ನಲ್ಲಿ ಜನರು ಸಂಚರಿಸುತ್ತಾರೆ. ಇದೇ ರೀತಿ ದೋಣಿಯಲ್ಲಿದ್ದ ಖಾಸಗಿ ಬಸ್​ ಇದ್ದಕ್ಕಿದ್ದಂತೆ ಪದ್ಮಾ ನದಿಗೆ ಉರುಳಿದೆ. ಬಸ್​ನಿಂದ ಹೊರಗಿದ್ದ ಕೆಲವು ಕುಟುಂಬಸ್ಥರು ನೋಡುತ್ತಿದ್ದಂತೆ ಬಸ್​ನೊಳಗಿದ್ದ ಅವರ ಫ್ಯಾಮಿಲಿಯವರು ನೀರಿನಲ್ಲಿ ಮುಳುಗಿದ್ದಾರೆ. ದೋಣಿಯ ಮೇಲೆ ನಿಂತು ಮಕ್ಕಳು, ಕುಟುಂಬಸ್ಥರು ಜೋರಾಗಿ ಕಿರುಚಾಡುತ್ತಾ, ತಮ್ಮ ಮನೆಯವರನ್ನು ಕಾಪಾಡಿ ಎಂದು ಗೋಗರೆಯುತ್ತಿರುವ ವಿಡಿಯೋ ಇಲ್ಲಿದೆ. ಈ ಅಪಘಾತದಲ್ಲಿ 23 ಜನರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇನ್ನೂ ಹಲವರು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ. ಅವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

RCB ಅಭಿಮಾನಿಗಳೇ ಗಮನಿಸಿ: ಉದ್ಘಾಟನಾ ಪಂದ್ಯ ವೀಕ್ಷಿಸಲು ತೆರಳುವವರು ಈ ನಿಯಮ ಪಾಲಿಸಲೇ ಬೇಕು!

ಬೆಂಗಳೂರು, ಮಾರ್ಚ್​​ 26: ಐಪಿಎಲ್ 2026ರ (IPL 2026) ಉದ್ಘಾಟನಾ ಪಂದ್ಯ ಮಾರ್ಚ್ 28ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಇನ್ನೇನು ಎರಡು ದಿನವಷ್ಟೇ ಬಾಕಿ ಇರುವ ಕಾರಣ ಭರದ ಸಿದ್ಧತೆ ನಡೆದಿದೆ. ಕಳೆದ ಆವೃತ್ತಿಯ ವಿಜಯೋತ್ಸವದ ವೇಳೆ ಅವಘಡ ನಡೆದಿದ್ದ ಕಾರಣ ಈ ಬಾರಿ ಬೆಂಗಳೂರಲ್ಲಿ ಸಾಕಷ್ಟು ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಅನಾಹುತಗಳು ನಡೆಯದಂತೆ ಅಗತ್ಯ ತಯಾರಿ ಮಾಡಿಕೊಳ್ಳಲಾಗಿದ್ದು, ಉದ್ಘಾಟನಾ ಪಂದ್ಯಕ್ಕೆ ಚಿನ್ನಸ್ವಾಮಿ ಮೈದಾನ ಸಜ್ಜಾಗಿದೆ.

ಇಂದು ಮಾಕ್ ಡ್ರಿಲ್

ಐಪಿಎಲ್ ಭದ್ರತೆಗೆ ಸಂಬಂಧಿಸಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ಮಾಕ್​​ ಡ್ರಿಲ್​​ ನಡೆಯಲಿದೆ. ಬೆಂಗಳೂರು ಪೊಲೀಸರಿಂದ ಭದ್ರತೆ ಬಗ್ಗೆ ನಡೆಯಲಿರುವ ಅಣಕು ಪ್ರದರ್ಶನದಲ್ಲಿ NSG ಪಡೆ ಕೂಡ ಭಾಗಿಯಾಗಲಿದೆ. ಬೆಳಗ್ಗೆ 10 ಗಂಟೆಗೆ ಆರಂಭ ಆಗಲಿರುವ ಮಾಕ್ ಡ್ರಿಲ್​​ನಲ್ಲಿ, ಸ್ಟೇಡಿಯಂ ಗೇಟ್​​ಗಳಲ್ಲಿನ ಎಂಟ್ರಿ ಹಾಗೂ ಎಕ್ಸಿಟ್ ಬಳಿ ಭದ್ರತೆ ಹೇಗಿರಬೇಕು? ಸ್ಟೇಡಿಯಂ ಸುತ್ತಮುತ್ತ ಅಭಿಮಾನಿಗಳನ್ನು ಹೇಗೆ ನಿರ್ವಹಣೆ ಮಾಡಬೇಕು? ತಪಾಸಣೆ, ಪರಿಶೀಲನೆ ಹೇಗಿರಬೇಕು ಎಂಬ ಬಗ್ಗೆ ತಾಲೀಮು ನಡೆಯಲಿದೆ. ಸುಮಾರು ಒಂದು ಸಾವಿರ ಪೊಲೀಸರು ಇದರಲ್ಲಿ ಭಾಗಿಯಾಗಲಿದ್ದು, ಸ್ಟೇಡಿಯಂ ಒಳಗಡೆ, ಹೊರಗಡೆ ಸಿಬ್ಬಂದಿ ನಿಯೋಜನೆ ಮಾಡಿ ಅಣುಕು ಪ್ರದರ್ಶನ ನಡೆಯಲಿದೆ. ಇದರ ಜೊತೆಗೆ ಸಂಚಾರ ಪೊಲೀಸರಿಂದಲೂ ಸ್ಟೇಡಿಯಂ ಸುತ್ತಲೂ ಟ್ರಾಫಿಕ್​​ ನಿರ್ವಹಣೆ ಬಗ್ಗೆ ಪರಿಶೀಲನೆ ನಡೆಯಲಿದೆ.

ಇದನ್ನೂ ಓದಿ: ಆರ್​ಸಿಬಿ ತಂಡದಲ್ಲಿ ಯಶ್ ದಯಾಳ್​ನ ಬದಲಿಸುವವರ್ಯಾರು?

ಕ್ರೀಡಾಂಗಣದಲ್ಲಿ ಕಟ್ಟುನಿಟ್ಟಿನ ಕ್ರಮ

IPL ಪಂದ್ಯ ಹಿನ್ನೆಲೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಕಾಲ್ತುಳಿತ ದುರಂತ ನಂತರ ಫುಲ್ ಅಲರ್ಟ್ ಆಗಿರುವ ಕೆಎಸ್​ಸಿಎ, ಮ್ಯಾಚ್ ನೋಡಲು ಬರುವ ಕ್ರಿಕೆಟ್ ಅಭಿಮಾನಿಗಳಿಗೆ ಸಂದೇಶವೊಂದನ್ನು ನೀಡಿದೆ. ಸ್ಟೇಡಿಯಂ ಪ್ರವೇಶ ಮಾಡುವವರಿಗೆ ಕೆಲವು ವಸ್ತುಗಳನ್ನು ಕೊಂಡೊಯ್ಯುವುದನ್ನು ನಿಷೇಧ ಮಾಡಲಾಗಿದ್ದು, ಯಾವ ವಸ್ತು ತರಬಾರದೆಂದು ಬೋರ್ಡ್ KSCA ಹಾಕಿದೆ. ಪಿಸ್ತೂಲ್, ಚಾಕು, ಕತ್ತರಿ, ಆಲ್ಕೋಹಾಲ್, ಬಾಟಲ್, ಪಟಾಕಿ, ಪೆಟ್ರೋಲ್, ಡೀಸೆಲ್, ಲೈಟರ್, ಫುಡ್ ಐಟಮ್ಸ್, ಸಿಗರೇಟ್​​, ಬ್ಯಾಗ್, ಹೆಲ್ಮೆಟ್​, ಎಲೆಕ್ಟ್ರಾನಿಕ್ ವಸ್ತುಗಳು, ಕ್ಯಾಮರಾ ಸೇರಿದಂತೆ ಅಪಾಯಕಾರಿ ವಸ್ತುಗಳು ಸೇರಿ ಹಲವು ಸಾಮಗ್ರಿಗಳಿಗೆ ನಿರ್ಬಂಧ ವಿಧಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ದಾವಣಗೆರೆ ದಕ್ಷಿಣ ಬೈಎಲೆಕ್ಷನ್: ಕಾಂಗ್ರೆಸ್‌ಗೆ 1983ರ ಇತಿಹಾಸ ಮರುಕಳಿಸುವ ಭೀತಿ! ಅಂದೇನಾಗಿತ್ತು ಗೊತ್ತೇ?

ದಾವಣಗೆರೆ, ಮಾರ್ಚ್ 26: ದಾವಣಗೆರೆ ದಕ್ಷಿಣ ಉಪಚುನಾವಣೆ (Davangere South By-Poll) ಕಣ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದ್ದು, ಅಲ್ಪಸಂಖ್ಯಾತ ಮತಬ್ಯಾಂಕ್ ಈ ಬಾರಿ ರಾಜಕೀಯ ಲೆಕ್ಕಾಚಾರದಲ್ಲಿ ಪ್ರಮುಖ ಪಾತ್ರವಹಿಸುವ ಸಾಧ್ಯತೆ ಎದುರಾಗಿದೆ. ಕಾಂಗ್ರೆಸ್ (Congress) ಟಿಕೆಟ್ ವಿಚಾರದಲ್ಲಿ ಉಂಟಾದ ಅಸಮಾಧಾನದ ಹಿನ್ನೆಲೆ, ಬಂಡಾಯ ಅಭ್ಯರ್ಥಿ ಸಾಧಿಕ್ ಪೈಲ್ವಾನ್ ಕಣಕ್ಕಿಳಿದಿರುವುದು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ, ಸಾದಿಕ್ ಕಣದಿಂದ ಹಿಂದೆ ಸರಿಯಲ್ಲ ಎಂದು ಖಡಕ್ ಆಗಿ ಹೇಳಿರುವುದರಿಂದ 1983ರ ಫಲಿತಾಂಶ ಮರುಕಳಿಸಲಿದೆಯೇ ಎಂಬ ಕುತೂಹಲ ಮೂಡಿದೆ.

1983 ರಲ್ಲಿಯೂ ಇಂಥದ್ದೇ ಪರಿಸ್ಥಿತಿ!

1983ರ ವಿಧಾನಸಭಾ ಚುನಾವಣೆಯ ಇತಿಹಾಸ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಆ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಅಸಮಾಧಾನ ಕಾಂಗ್ರೆಸ್ ವಿರುದ್ಧ ತಿರುಗಿಬಿದ್ದಿತ್ತು. ಆಗಿನ ಗುಂಡೂರಾವ್ ಸರ್ಕಾರದಲ್ಲಿ ಶಿಕ್ಷಣ ಸಚಿವೆ ಆಗಿದ್ದ ನಾಗಮ್ಮ ಕೇಶಮೂರ್ತಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರೆ, ಪಕ್ಷೇತರ ಅಭ್ಯರ್ಥಿ ಮಹಮ್ಮದ್ ಇಕ್ಬಾಲ್ ಸಾಬ್ ಗಮನಾರ್ಹ ಮತಗಳನ್ನು ಪಡೆದು ಎರಡನೇ ಸ್ಥಾನ ಗಳಿಸಿದ್ದರು. ಆ ಚುನಾವಣೆಯಲ್ಲಿ ಸಿಪಿಐ ಅಭ್ಯರ್ಥಿ ಪಂಪಾಪತಿ ಗೆಲುವು ಸಾಧಿಸಿದ್ದರು.

ಆ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸ್ಥಾನ ನೀಡದ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯ ಕಾಂಗ್ರೆಸ್ ವಿರುದ್ಧ ಮತ ಹಾಕಿದರೆಂದು ವಿಶ್ಲೇಷಣೆ ನಡೆಯಿತ್ತು. ಇದೀಗ ಮತ್ತೆ ಟಿಕೆಟ್ ನೀಡದ ವಿಚಾರದಲ್ಲಿ ಅಲ್ಪಸಂಖ್ಯಾತರ ಅಸಮಾಧಾನ ವ್ಯಕ್ತವಾಗುತ್ತಿರುವುದರಿಂದ, ಅದೇ ಇತಿಹಾಸ ಮರುಕಳಿಸಬಹುದೇ ಎಂಬ ಪ್ರಶ್ನೆ ಎದ್ದಿದೆ.

ಮುಸ್ಲಿಂ ಅಭ್ಯರ್ಥಿಗಳು ಯಾರೂ ಈವರೆಗೆ ಗೆದ್ದಿಲ್ಲ

ದಾವಣಗೆರೆ ಕ್ಷೇತ್ರದ ಚುನಾವಣಾ ಇತಿಹಾಸ ಗಮನಿಸಿದರೆ, 15 ಚುನಾವಣೆಯಲ್ಲಿ ಒಟ್ಟು 45ಕ್ಕೂ ಹೆಚ್ಚು ಮುಸ್ಲಿಂ ಅಭ್ಯರ್ಥಿಗಳು ಸ್ಪರ್ಧಿಸಿದ್ದರೂ, ಯಾರೂ ಗೆಲುವು ಸಾಧಿಸಿಲ್ಲ. ಆದರೂ ಮತಪ್ರಮಾಣ ದೃಷ್ಟಿಯಿಂದ ಮುಸ್ಲಿಮರು ಗಮನಾರ್ಹರಾಗಿದ್ದಾರೆ. 1983ರಲ್ಲಿ ಮಹಮ್ಮದ್ ಇಕ್ಬಾಲ್ ಸಾಬ್ ಸುಮಾರು ಶೇ 23.67 ಮತಗಳನ್ನು ಪಡೆದಿದ್ದರು. 2013ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸೈಯದ್ ಸೈಪುಲ್ಲಾ ಸುಮಾರು ಶೇ 21 ಮತ ಗಳಿಸಿದ್ದರು.

ಇನ್ನಷ್ಟು ಗಮನಿಸಿದರೆ, 2013ರಲ್ಲಿ 15 ಅಭ್ಯರ್ಥಿಗಳಲ್ಲಿ 9 ಮಂದಿ ಮುಸ್ಲಿಂ ಅಭ್ಯರ್ಥಿಗಳಾಗಿದ್ದರೆ, 2018ರಲ್ಲಿ 11ರಲ್ಲಿ 7 ಮಂದಿ, 2023ರಲ್ಲಿ 16ರಲ್ಲಿ 8 ಮಂದಿ ಮುಸ್ಲಿಂ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಆದಾಗ್ಯೂ, ಅಂತಿಮವಾಗಿ ಕಾಂಗ್ರೆಸ್ ಅಭ್ಯರ್ಥಿಯೇ ಗೆಲುವು ಸಾಧಿಸಿದ್ದರು.

ಈ ಬಾರಿ ಸಹ ಅಲ್ಪಸಂಖ್ಯಾತ ಅಭ್ಯರ್ಥಿಗಳ ಸಂಖ್ಯೆಯೇ ಕಾಂಗ್ರೆಸ್‌ಗೆ ಸವಾಲಾಗಿ ಪರಿಣಮಿಸಿದೆ. ವಿಶೇಷವಾಗಿ ಸಾಧಿಕ್ ಪೈಲ್ವಾನ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು, ಮತ ವಿಭಜನೆಗೆ ಕಾರಣವಾಗಬಹುದು ಎಂಬ ಆತಂಕ ಕಾಂಗ್ರೆಸ್ ವಲಯದಲ್ಲಿ ಇದೆ.

ಇದನ್ನೂ ಓದಿ: ದಾವಣಗೆರೆ ಉಪಚುನಾವಣೆ: 23 ಮುಸ್ಲಿಂ ಅಭ್ಯರ್ಥಿಗಳು ಕಣಕ್ಕೆ, ಕಾಂಗ್ರೆಸ್​ಗೆ ಟೆನ್ಷನ್!

ಒಟ್ಟಾರೆ, 1983ರ ಇತಿಹಾಸದಂತೆ ಈ ಬಾರಿ ಕೂಡ ಅಲ್ಪಸಂಖ್ಯಾತ ಮತದಾರರು ಕಾಂಗ್ರೆಸ್‌ಗೆ ಪಾಠ ಕಲಿಸುತ್ತಾರೆಯೇ ಅಥವಾ ಪಕ್ಷದ ಪರ ನಿಲ್ಲುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಂಧ್ರದ ಮಾರ್ಕಪುರಂನಲ್ಲಿ ಹೊತ್ತಿ ಉರಿದ ಬಸ್; 10 ಜನ ಸಜೀವದಹನ

ಮಾರ್ಕಪುರಂ, ಮಾರ್ಚ್ 26: ಇತ್ತೀಚೆಗೆ ಖಾಸಗಿ ಬಸ್​​ಗಳಿಗೆ ಬೆಂಕಿ ಹೊತ್ತಿಕೊಳ್ಳುವ ಪ್ರಕರಣಗಳು ಹೆಚ್ಚಾಗಿದ್ದು, ಆಂಧ್ರಪ್ರದೇಶದಲ್ಲಿ (Andhra Pradesh Bus Accident) ಅದೇ ರೀತಿಯ ಮತ್ತೊಂದು ಪ್ರಕರಣ ನಡೆದಿದೆ. ಆಂಧ್ರದ ಮಾರ್ಕಪುರಂ ಜಿಲ್ಲೆಯಲ್ಲಿ ಟಿಪ್ಪರ್ ಟ್ರಕ್ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದ ಬಸ್ ಇದ್ದಕ್ಕಿದ್ದಂತೆ ಬೆಂಕಿಗೆ ಆಹುತಿಯಾಗಿ ಸಂಪೂರ್ಣವಾಗಿ ಸುಟ್ಟುಹೋಗಿದೆ. ಈ ಘಟನೆಯಲ್ಲಿ ಬಸ್​ನೊಳಗಿದ್ದ 10 ಜನರು ಜೀವಂತವಾಗಿ ಸುಟ್ಟು ಕರಕಲಾಗಿದ್ದಾರೆ. ಇನ್ನುಳಿದವರನ್ನು ರಕ್ಷಿಸಲಾಗಿದ್ದು, ತೀವ್ರವಾಗಿ ಗಾಯಗಳಾಗಿರುವ 18 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಮಾಹಿತಿ ಪಡೆದ ನಂತರ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಮಾರ್ಕಪುರಂ ಜಿಲ್ಲೆಯ ರಾಯವರಂ ಬಳಿಯ ಹಲಗೆ ಕ್ವಾರಿಗಳ ಬಳಿ ಈ ಭೀಕರ ಅಪಘಾತ ಸಂಭವಿಸಿದೆ. 18 ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ನದಿಗೆ ಬಸ್ ಉರುಳಿ 23 ಜನ ಸಾವು; ತನಿಖೆಗೆ ಪ್ರಧಾನಿ ಆದೇಶ

ಹೈದರಾಬಾದ್‌ನಿಂದ ಪಾಮೂರ್‌ಗೆ ಹೋಗುತ್ತಿದ್ದ ಖಾಸಗಿ ಟ್ರಾವೆಲ್ ಬಸ್ ಮತ್ತು ಚಿಮಕುರ್ತಿಯಿಂದ ಜಲ್ಲಿಕಲ್ಲು ಸಾಗಿಸುತ್ತಿದ್ದ ಟಿಪ್ಪರ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮವಾಗಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಇದರಿಂದಾಗಿ ಬೆಂಕಿ ಹೊತ್ತಿಕೊಂಡು ಎರಡೂ ವಾಹನಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ. ಹರಿಕೃಷ್ಣ ಖಾಸಗಿ ಟ್ರಾವೆಲ್ ಬಸ್‌ನಲ್ಲಿ ಸುಮಾರು 40 ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ. ಅವರಲ್ಲಿ 10 ಮಂದಿ ಸುಟ್ಟು ಕರಕಲಾಗಿದ್ದಾರೆ. 18 ಜನರನ್ನು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಇದನ್ನೂ ಓದಿ: ಆಂಧ್ರದ ಕಾಕಿನಾಡ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 21 ಜನರ ಸಜೀವದಹನ

ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದರು. ಆದರೆ ವಾಹನಗಳು ನಿಯಂತ್ರಣಕ್ಕೆ ಬರುವ ಮೊದಲೇ ವಾಹನಗಳು ಸಂಪೂರ್ಣವಾಗಿ ಸುಟ್ಟುಹೋಗಿದ್ದವು. ಅಪಘಾತದಲ್ಲಿ ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ಕಣಿಗಿರಿ ಮತ್ತು ಪಾಮೂರ್ ಪ್ರದೇಶದ ನಿವಾಸಿಗಳು ಎಂದು ತಿಳಿದುಬಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಧುರಂಧರ್ 2‘, ‘ಕೆಜಿಎಫ್ 2’ ಚಿತ್ರ ಟೀಕಿಸಿದ ಬಾಲಿವುಡ್ ನಟ

ಯಾವುದೇ ಸಿನಿಮಾ ರಿಲೀಸ್ ಆದರೂ ಪರ ವಿರೋಧ ಚರ್ಚೆ ಇದ್ದೇ ಇರುತ್ತದೆ. ಅದೇ ರೀತಿ ‘ಅನಿಮಲ್’, ‘ಕೆಜಿಎಫ್’ ಹಾಗೂ ‘ಧುರಂಧರ್ 2’ (Dhurandhar 2) ರೀತಿಯ ಚಿತ್ರಗಳನ್ನು ಟೀಕೆ ಮಾಡಿದವರು ಅನೇಕರಿದ್ದಾರೆ. ಈಗ ಬಾಲಿವುಡ್ ನಟ ಇಮ್ರಾನ್ ಖಾನ್ ಕೂಡ ಈ ಸಾಲಿಗೆ ಸೇರಿದ್ದಾರೆ. ‘ಉದ್ದ ಕೂದಲು ಬಿಟ್ಟುಕೊಂಡು, ಕೋಪ ಮಾಡಿಕೊಂಡು, ಮುಖವೆಲ್ಲ ರಕ್ತ ಮಾಡಿಕೊಳ್ಳುವ ಪಾತ್ರ ನನಗೆ ಇಷ್ಟ ಇಲ್ಲ’ ಎಂದು ಅವರು ನೇರವಾಗಿ ಹೇಳಿದ್ದಾರೆ. ಅಲ್ಲದೆ, ಅವರು ಈ ರೀತಿಯ ಪಾತ್ರಗಳನ್ನು ವೈಭವೀಕರಿಸುತ್ತಿರುವ ವಿಷಯದ ಬಗ್ಗೆ ಆತಂಕ ಹೊರಹಾಕಿದ್ದಾರೆ.

ಇಮ್ರಾನ್ ಖಾನ್ ಅವರು ‘ಆಸ್ಕ್​ ಮಿ ಎನಿಥಿಂಗ್’ ಸೆಷನ್ ನಡೆಸಿದ್ದಾರೆ. ಈ ವೇಳೆ ಅವರಿಗೆ ‘ಮ್ಯಾಚೋ   ಪಾತ್ರಗಳನ್ನು ಮಾಡಬೇಡಿ’ ಎಂದು ಕೋರಿದರು. ಇದಕ್ಕೆ ಉತ್ತರಿಸಿದ ಇಮ್ರಾನ್ ಖಾನ್, ‘ಉದ್ದ ಕೂದಲು ಬಿಟ್ಟುಕೊಂಡು, ಸಿಟ್ಟಾಗಿ ಕಾಣಿಸಿಕೊಳ್ಳುವುದು, ದೇಹವೆಲ್ಲ ರಕ್ತ ಮಾಡಿಕೊಳ್ಳುವ ಪಾತ್ರದ ಬಗ್ಗೆ ಆಸಕ್ತಿ ಇಲ್ಲ’ ಎಂದು ಅವರು ಹೇಳಿದ್ದಾರೆ.

ಆಲ್ಫಾ ಮೇಲ್ ಅಂದರೆ ಪುರುಷರೇ ಗ್ರೇಟ್ ಎಂಬ ರೀತಿಯ ಸಿನಿಮಾಗಳು ಕೆಲವು ಬರುತ್ತಿವೆ. ಈ ಸಂದರ್ಭದಲ್ಲಿ ಪುರುಷತ್ವವನ್ನು ಹೇಗೆ ವ್ಯಾಖ್ಯಾನಿಸುತ್ತೀರಿ ಎಂದು ಅವರಿಗೆ ಕೇಳಲಾಯಿತು. ‘ನಮ್ಮ ಚಲನಚಿತ್ರಗಳಲ್ಲಿ ಮತ್ತು ಒಟ್ಟಾರೆಯಾಗಿ ಪ್ರಪಂಚದಲ್ಲಿ ಸ್ತ್ರೀದ್ವೇಷ ಮತ್ತು ವಿಷಕಾರಿ ಪುರುಷತ್ವವನ್ನು ಹೇಗೆ ಪ್ರಚಾರ ಮಾಡಲಾಗುತ್ತದೆ ಎಂಬುದನ್ನು ನೋಡಿ ನಾನು ವಿಚಲಿತನಾಗಿದ್ದೇನೆ’ ಎಂದು ಅವರು ಹೇಳಿದರು.

ಅನೇಕರು ಇಮ್ರಾನ್ ಹೇಳಿಕೆಯನ್ನು ನಾನಾ ಸಿನಿಮಾಗಳಿಗೆ ಕನೆಕ್ಟ್ ಮಾಡುತ್ತಿದ್ದಾರೆ. ಕೆಲವರು ‘ಕೆಜಿಎಫ್ 2’ ಎಂದು ಹೇಳಿದ್ದಾರೆ. ಇದರಲ್ಲಿ ಯಶ್ ಉದ್ದ ಕೂದಲು ಬಿಟ್ಟಿದ್ದಾರೆ. ಅವರ ಮುಖ ರಕ್ತಸಿಕ್ತವಾಗಿದೆ. ‘ಅನಿಮಲ್’, ‘ಧುರಂಧರ್, ‘ಧುರಂಧರ್ 2’ ಸಿನಿಮಾಗಳು ಕೂಡ ಇದೇ ರೀತಿಯಲ್ಲಿ ಇವೆ ಅನ್ನೋದು ಇಲ್ಲಿ ಗಮನಿಸಬೇಕಾದ ವಿಷಯ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅಮೆರಿಕದ ಎಫ್-18 ಯುದ್ಧವಿಮಾನವನ್ನು ಹೊಡೆದುರುಳಿಸಿದ ವಿಡಿಯೋ ಬಿಡುಗಡೆ ಮಾಡಿದ ಇರಾನ್

ನವದೆಹಲಿ, ಮಾರ್ಚ್ 26: ಇರಾನ್ ಅಮೆರಿಕದ (Iran-US War) ಎಫ್-35 ಲೈಟ್ನಿಂಗ್ II ಫೈಟರ್ ಜೆಟ್ ಅನ್ನು ಯಶಸ್ವಿಯಾಗಿ ಹೊಡೆದುರುಳಿಸಿರುವುದಾಗಿ ಹೇಳಿತ್ತು. ಅದಾದ ಕೆಲವು ದಿನಗಳ ನಂತರ ಇರಾನ್ ಈಗ ಚಾಬಹಾರ್ ಬಳಿ ಎಫ್-18 ಯುದ್ಧವಿಮಾನಗಳನ್ನು ಗುರಿಯಾಗಿಸಿಕೊಂಡಿರುವುದಾಗಿ ಹೇಳಿಕೊಂಡಿದೆ. ಅಲ್ಲದೆ, ತಮ್ಮ ಕಾರ್ಯಾಚರಣೆಯ ವಿಡಿಯೋವನ್ನು ಕೂಡ ಇರಾನ್ ಹಂಚಿಕೊಂಡಿದೆ. ರಕ್ಷಣಾ ಖರೀದಿ ಮಾತುಕತೆಯ ಭಾಗವಾಗಿ ಭಾರತಕ್ಕೆ ಈ ಹಿಂದೆ ನೀಡಲಾಗಿದ್ದ ಜೆಟ್‌ಗಳಲ್ಲಿ ಎಫ್​ಎ-18 ಕೂಡ ಒಂದು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಪ್ರತಿ 3 ತಿಂಗಳಿಗೊಮ್ಮೆ ಆಗ್ತಿದೆ ನೀರಿನ ದರ ಏರಿಕೆ: 2 ವರ್ಷಗಳಿಂದ‌ ಹಗಲು ದರೋಡೆ ಮಾಡ್ತಿದ್ಯಾ BWSSB?

ಬೆಂಗಳೂರು, ಮಾರ್ಚ್​​ 26: ಬೆಲೆ ಏರಿಕೆ ಎಂಬ ಪದ ಕೇಳಿದರೆ ಸಾಕು ಜನ ಸಾಮಾನ್ಯರು ಹೆದರಬೇಕಾದ ಸ್ಥಿತಿ ಸದ್ಯ ಕರ್ನಾಟಕದಲ್ಲಿದೆ. ನಾನಾ ಕಾರಣಗಳಿಂದಾಗಿ ಪ್ರತಿ ವಸ್ತುವಿನ ದರವೂ ಗಗನಕ್ಕೇರಿದೆ. ಈ ನಡುವೆ ಜನರಿಗೆ ಸೌಕರ್ಯಗಳನ್ನು ನೀಡಬೇಕಿದ್ದ ಇಲಾಖೆಗಳೇ ಜನರಿಂದ ಸುಲಿಗೆ ಮಾಡುತ್ತಿರುವ ಆತಂಕಕಾರಿ ವಿಷಯವೊಂದು ಬಹಿರಂಗಗೊಂಡಿದ್ದು, ನಾಗರಿಕರ ಗಮನಕ್ಕೇ ಬಾರದಂತೆ ಜೇಬಿಗೆ ಕತ್ತರಿ ಹಾಕುತ್ತಿರುವ ವಿಚಾರ ಶಾಕ್​​ ನೀಡಿದೆ. ಕಳೆದ ಎರಡು ವರ್ಷಗಳಿಂದ‌ ಬೆಂಗಳೂರಿನ ಜಲ ಮಂಡಳಿ ಸತತವಾಗಿ ನೀರಿನ ದರ ಏರಿಕೆ ಮಾಡುತ್ತಾ ಬಂದಿದ್ದರೂ, ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿಯೇ ಇಲ್ಲ ಎಂಬುದು ವಿಪರ್ಯಾಸ.

BWSSB ಕಳೆದ ಎರಡು ವರ್ಷಗಳಿಂದ‌ ಪ್ರತಿ‌ ಮೂರು ತಿಂಗಳಿಗೊಮ್ಮೆ ನೀರಿನ ದರ ಏರಿಕೆ ಮಾಡುತ್ತಿದ್ದು, ವರ್ಷದಲ್ಲಿ ನಾಲ್ಕು ಬಾರಿ ದರ ಏರಿಕೆ ಬರೆ ಹಾಕಿ ಜನರಿಂದ ವಸೂಲಿ ಮಾಡುತ್ತಿದೆ. ಪ್ರತಿ ಮೂರು ತಿಂಗಳಿಗೆ ಶೇಕಡಾ 3ರಷ್ಟು ಬೆಲೆ ಹೆಚ್ಚಳದಂತೆ ವರ್ಷಕ್ಕೆ ಶೇಕಡಾ 12ರಷ್ಟು ಹೆಚ್ಚುವರಿ ಹೊರೆ ಜನರ ಮೇಲೆ ಹಾಕಲಾಗ್ತಿದೆ. ಹೀಗಿದ್ದರೂ ಈ ಬಗ್ಗೆ ಯಾವುದೇ ಪ್ರಕಟಣೆ ನೀಡದೆ, ಸಾರ್ವಜನಿಕರ ಗಮನಕ್ಕೂ ತರದೆ ನಾಗರಿಕೆ ಸುಲಿಗೆ ಮಾಡುವ ಕೆಲಸ BWSSB ಕಡೆಯಿಂದ ಆಗ್ತಿದೆ ಎಂದು ಬಿಜೆಪಿ ಮುಖಂಡ ಎನ್. ಆರ್. ರಮೇಶ್ ಆರೋಪಿಸಿದ್ದಾರೆ.

ಇದನ್ನೂ ಓದಿ: ಚಿನ್ನದ ಚಿನ್ನದ ದರ ಹಾವು-ಏಣಿ ಆಟದ ಮಧ್ಯೆ ಬೆಂಗಳೂರಿನಲ್ಲಿ ಅಕ್ಷಯ ತೃತೀಯಕ್ಕೆ ಈಗಲೇ ಗೋಲ್ಡ್ ಬುಕ್ಕಿಂಗ್ ಜೋರು! ಜ್ಯುವೆಲ್ಲರಿಗಳಲ್ಲಿ ಕ್ಯೂ

ಇನ್ನು ಒಳಚರಂಡಿ ಉಪಕರವನ್ನು ಆಯಾ ತಿಂಗಳ ಕುಡಿಯುವ ನೀರಿನ ಶುಲ್ಕದಲ್ಲಿ ಶೇ. 31.25ರಷ್ಟು ಏರಿಕೆ ಮಾಡಲಾಗಿದೆ. ಜಲಮಂಡಳಿ ಸಂಸ್ಥೆಯ ಆರ್ಥಿಕ ಸ್ಥಿತಿ ಸುಧಾರಿಸಲು ಕುಡಿಯುವ ನೀರಿನ ಶುಲ್ಕದ ಏರಿಕೆ ಮತ್ತು ಒಳಚರಂಡಿ ಉಪಕರದ ಹೆಚ್ಚಳ ಅನಿವಾರ್ಯ ಎಂಬ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರದ ಮುಂದಿಡಲಾಗಿತ್ತು. ಈಗ ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಶಿಫಾರಸ್ಸಿನಂತೆ BWSSB ಆಡಳಿತ ಮಂಡಳಿಯು ಪ್ರತಿ ಮೂರು ತಿಂಗಳಿಗೊಮ್ಮೆ ಒಳಚರಂಡಿ ಉಪಕರದ ಪ್ರಮಾಣವನ್ನು ಏರಿಕೆ ಮಾಡುತ್ತಿದೆ ಎನ್ನಲಾಗಿದೆ.

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಜನ ತತ್ತರಿಸಿರುವ ನಡುವೆ ಅವರ ಜೊತೆ ನಿಲ್ಲಬೇಕಿದ್ದ ಸರ್ಕಾರ ಎಲ್ಲವನ್ನೂ ನೋಡಿ ಕಣ್ಮುಚ್ಚಿ ಕುಳಿತಿದೆ. ಜನರಿಗೆ ಮೂಲಸೌಕರ್ಯಗಳನ್ನು ನೀಡಬೇಕಿದ್ದ ಇಲಾಖೆಗಳು, ಅರಿವಿಲ್ಲದಂತೆ ಅವರ ಜೇಬಿಗೇ ಕತ್ತರಿ ಹಾಕುವ ಕೆಲಸಕ್ಕೆ ಮುಂದಾಗಿವೆ. ತಮ್ಮ ಗಮನಕ್ಕೆ ಬಾರದೇ ಜನರು ಅದಾಗಲೇ ಬೆಲೆ ಏರಿಕೆ ಹೊರೆ ಭರಿಸುತ್ತಿದ್ದು, ಇದಕ್ಕೆ ಹೊಣೆ ಯಾರು ಎಂಬ ಪ್ರಶ್ನೆಗಳೀಗ ಕೇಳಿಬಂದಿವೆ.

ವರದಿ: ಅರುಣ್ ಕುಮಾರ್, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link