ಹಿಂದೂ ಸನಾತನ ಸಂಪ್ರದಾಯಗಳಲ್ಲಿ ಅನೇಕ ವಿಧಿ ವಿಧಾನಗಳಿವೆ. ಅವುಗಳ ಸಾಮಾಜಿಕ, ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಹಿನ್ನೆಲೆಯನ್ನು ಅರಿತಾಗ ಅವುಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತದೆ. ವಿವಾಹದ ಸಂದರ್ಭದಲ್ಲಿ ವಧು ವರರ ತಲೆಯ ಮೇಲೆ ಜೀರಿಗೆ ಬೆಲ್ಲ ಇಡುವ ವಿಧಿ ಅಂತಹ ಒಂದು ವಿಶಿಷ್ಟ ಆಚರಣೆಯಾಗಿದೆ. ಈ ಆಚರಣೆಯ ವೈಶಿಷ್ಟ್ಯವೆಂದರೆ, ತಲೆಯ ಮೇಲಿರುವ ಸಹಸ್ರಾರ ಚಕ್ರವನ್ನು ಜಾಗೃತಿಗೊಳಿಸುವುದು. ಮದುವೆಯ ನಂತರ ಜೀವನದಲ್ಲಿ ಜವಾಬ್ದಾರಿಗಳು ಹೆಚ್ಚಾಗುವುದರಿಂದ, ಈ ವಿಧಿಯು ನಾನು ಮದುವೆಯಾಗುತ್ತಿದ್ದೇನೆ, ನನಗೆ ಜವಾಬ್ದಾರಿಗಳು ಬರುತ್ತಿವೆ ಎಂಬ ಪ್ರಜ್ಞೆಯನ್ನು ಮೂಡಿಸುತ್ತದೆ. ಇದರಿಂದ ಸಂಪಾದನೆ, ಆದಾಯ, ಖರ್ಚುಗಳನ್ನು ನಿಭಾಯಿಸುವ ಅರಿವು ಮೂಡುತ್ತದೆ. ಮೆದುಳಿನಲ್ಲಿ ಧನಾತ್ಮಕ ಶಕ್ತಿಗಳು ಜಾಗೃತಗೊಳ್ಳುತ್ತವೆ.
ಜೀರಿಗೆಯು ದೇಹದಲ್ಲಿರುವ ಋಣಾತ್ಮಕ ಶಕ್ತಿಗಳನ್ನು ಹೊರಹಾಕುತ್ತದೆ ಎಂದು ನಂಬಲಾಗಿದೆ. ಬೆಲ್ಲವು ಉಷ್ಣತೆಯನ್ನು ಪ್ರಚೋದಿಸಿ ಶಕ್ತಿಯನ್ನು ನೀಡುತ್ತದೆ. ಆದರೆ ಇಲ್ಲಿ ಜೀರಿಗೆ ಬೆಲ್ಲವನ್ನು ಸೇವಿಸಲು ನೀಡುವುದಿಲ್ಲ, ಬದಲಿಗೆ ತಲೆಯ ಮೇಲೆ ಇಡಲಾಗುತ್ತದೆ. ಇದು ದಂಪತಿಗಳಲ್ಲಿ ಅನ್ಯೋನ್ಯತೆಯನ್ನು ಹೆಚ್ಚಿಸಿ, ಮನಸ್ಸಿನ ಭಾವನೆಗಳಿಗೆ ವಿಶೇಷ ಶಕ್ತಿಯನ್ನು ನೀಡುತ್ತದೆ. ಮಾನಸಿಕವಾಗಿ ಪರಿವರ್ತನೆ ಮಾಡುವಂತಹ ಈ ವಿಧಿಯು ಪ್ರಾಚೀನ ಸಂಪ್ರದಾಯಗಳ ಸಕಾರಾತ್ಮಕ ಪ್ರಭಾವಕ್ಕೆ ಸಾಕ್ಷಿ ಎಂಬುದು ಡಾ. ಬಸವರಾಜ ಗುರೂಜಿ ಅವರ ಅಭಿಪ್ರಾಯ.
ಈ ದಿನ ಪರಾಭವ ನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಶುಕ್ಲ ಪಕ್ಷದ ಅಷ್ಟಮಿ, ಶೋಭನ ಯೋಗ, ಆರಿದ್ರಾ ನಕ್ಷತ್ರ ಮತ್ತು ಭವಕರಣ ಇರಲಿದೆ. ರವಿ ಮೀನ ರಾಶಿಯಲ್ಲೂ, ಚಂದ್ರ ಮಿಥುನ ರಾಶಿಯಲ್ಲೂ ಸಂಚಾರ ಮಾಡಲಿದ್ದಾರೆ. ಇಂದು ಗುರುವಾರವಾದ್ದರಿಂದ ಗುರುಗಳ ಸ್ಮರಣೆಗೆ ವಿಶೇಷ ಮಹತ್ವವಿದೆ. ಅಶೋಕಾಷ್ಟಮಿ ಆಚರಣೆ, ಅಲಂಕಾರು ಯಾತ್ರೆ, ಮದ್ದೂರಿನ ಮಹೋತ್ಸವ, ಕಿಗ್ಗಾ ಋಷ್ಯಶೃಂಗ ಪರ್ವತದ ರಥೋತ್ಸವಗಳು ನಡೆಯುವ ಪರ್ವಕಾಲ ಇದಾಗಿದೆ. ಪ್ರತಿ ರಾಶಿಯ ಆರ್ಥಿಕ ಪರಿಸ್ಥಿತಿ, ಉದ್ಯೋಗ, ಕುಟುಂಬ ಸಂಬಂಧಗಳು, ಆರೋಗ್ಯ ಮತ್ತು ಇತರ ಪ್ರಮುಖ ಅಂಶಗಳ ಬಗ್ಗೆ ಡಾ. ಬಸವರಾಜ ಗುರೂಜಿ ಅವರು ನೀಡಿರುವ ಸಂಪೂರ್ಣ ಮಾಹಿತಿ ವಿಡಿಯೋದಲ್ಲಿದೆ.
ಬೆಂಗಳೂರು, ಮಾರ್ಚ್ 26: ಕರ್ನಾಟಕದಲ್ಲಿ ಉಪಚುನಾವಣೆ (By Election) ಕಾವು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಬೈಎಲೆಕ್ಷನ್ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಭರ್ಜರಿ ರಣತಂತ್ರ ರೂಪಿಸುತ್ತಿದ್ದು, ಆಡಳಿತಾರೂಢ ಕಾಂಗ್ರೆಸ್ (Congress) ಪಕ್ಷ ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ರಾಜಭವನ ರಸ್ತೆಯ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಸಂಜೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷ (CLP) ಸಭೆಯಲ್ಲಿ ಉಪಚುನಾವಣೆ ಕುರಿತಂತೆ ಮಹತ್ವದ ಚರ್ಚೆಗಳು ನಡೆದವು. ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವರು ಮತ್ತು ಶಾಸಕರು ಭಾಗವಹಿಸಿದರು.
ಸಭೆಯಲ್ಲಿ ಮಾತನಾಡಿದ ಸುರ್ಜೇವಾಲ, ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬಾರದು, ಗೆಲ್ಲಲೇಬೇಕು ಎಂದು ಸೂಚನೆ ನೀಡಿದರು. ಎಲ್ಲಾ ಸಚಿವರು, ಶಾಸಕರು ಹಾಗೂ ಪಕ್ಷದ ಪದಾಧಿಕಾರಿಗಳು ಕಡ್ಡಾಯವಾಗಿ ಕನಿಷ್ಠ 10 ದಿನ ಕ್ಷೇತ್ರದಲ್ಲೇ ತಂಗಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ.
ಮುಸ್ಲಿಮರ ಅಸಮಾಧಾನ ಶಮನ ಹೊಣೆ ಜಮೀರ್, ತನ್ವೀರ್ಗೆ!
ಸಮುದಾಯವಾರು ಮತಗಳನ್ನು ಸೆಳೆಯುವ ಉದ್ದೇಶದಿಂದ ಪ್ರತ್ಯೇಕ ನಾಯಕರಿಗೆ ಜವಾಬ್ದಾರಿಗಳನ್ನು ಹಂಚಲಾಗಿದ್ದು, ಮತ ಬ್ಯಾಂಕ್‌ಗಳನ್ನು ಗರಿಷ್ಠ ಮಟ್ಟದಲ್ಲಿ ಪರಿವರ್ತಿಸಲು ಕಾರ್ಯತಂತ್ರ ರೂಪಿಸಲಾಗಿದೆ. ಅಲ್ಪಸಂಖ್ಯಾತರ ಅಸಮಾಧಾನ ಶಮನಗೊಳಿಸುವ ಹೊಣೆಗಾರಿಕೆಯನ್ನು ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ತನ್ವೀರ್ ಸೇಠ್ ಅವರಿಗೆ ನೀಡಲಾಗಿದೆ.
ಇನ್ನೊಂದೆಡೆ, ನಾಮಪತ್ರ ವಾಪಸ್ ಪಡೆಯಲು ಇಂದು ಕೊನೆಯ ದಿನವಾಗಿದ್ದು, ವಿಶೇಷವಾಗಿ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ 20ಕ್ಕೂ ಹೆಚ್ಚು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿರುವ ಹಿನ್ನೆಲೆಯಲ್ಲಿ ಯಾರು ವಾಪಸ್ ಪಡೆಯುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ.
ಹಣ ಅಕ್ರಮ ಸಾಗಾಟದ ಮೇಲೆ ಅಧಿಕಾರಿಗಳ ಕಟ್ಟುನಿಟ್ಟಿನ ನಿಗಾ
ಚುನಾವಣಾ ಕಾವಿನ ನಡುವೆ ಅಕ್ರಮ ಹಣ ಸಾಗಣೆ ಮೇಲೂ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದ ಸುಮಾರು 6.17 ಲಕ್ಷ ರೂಪಾಯಿ ನಗದು ಜಪ್ತಿ ಮಾಡಲಾಗಿದೆ. ಬಾಗಲಕೋಟೆಯಲ್ಲಿ ಸಹ 10 ಲಕ್ಷಕ್ಕೂ ಹೆಚ್ಚು ಹಣವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಈ ದಿನ ಪರಾಭವ ನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಶುಕ್ಲ ಪಕ್ಷದ ಅಷ್ಟಮಿ, ಶೋಭನ ಯೋಗ, ಆರಿದ್ರಾ ನಕ್ಷತ್ರ ಮತ್ತು ಭವಕರಣ ಇರಲಿದೆ. ರವಿ ಮೀನ ರಾಶಿಯಲ್ಲೂ, ಚಂದ್ರ ಮಿಥುನ ರಾಶಿಯಲ್ಲೂ ಸಂಚಾರ ಮಾಡಲಿದ್ದಾರೆ. ಇಂದು ಗುರುವಾರವಾದ್ದರಿಂದ ಗುರುಗಳ ಸ್ಮರಣೆಗೆ ವಿಶೇಷ ಮಹತ್ವವಿದೆ. ಅಶೋಕಾಷ್ಟಮಿ ಆಚರಣೆ, ಅಲಂಕಾರು ಯಾತ್ರೆ, ಮದ್ದೂರಿನ ಮಹೋತ್ಸವ, ಕಿಗ್ಗಾ ಋಷ್ಯಶೃಂಗ ಪರ್ವತದ ರಥೋತ್ಸವಗಳು ನಡೆಯುವ ಪರ್ವಕಾಲ ಇದಾಗಿದೆ. ಪ್ರತಿ ರಾಶಿಯ ಆರ್ಥಿಕ ಪರಿಸ್ಥಿತಿ, ಉದ್ಯೋಗ, ಕುಟುಂಬ ಸಂಬಂಧಗಳು, ಆರೋಗ್ಯ ಮತ್ತು ಇತರ ಪ್ರಮುಖ ಅಂಶಗಳ ಬಗ್ಗೆ ಡಾ. ಬಸವರಾಜ ಗುರೂಜಿ ಅವರು ನೀಡಿರುವ ಸಂಪೂರ್ಣ ಮಾಹಿತಿ ವಿಡಿಯೋದಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮಾರ್ಚ್ 26ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನವ ವಿವಾಹಿತರ ಮಧ್ಯೆ ಅಭಿಪ್ರಾಯ ಭೇದಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಅದರಲ್ಲಿಯೂ ಹಣಕಾಸಿನ ವಿಚಾರಕ್ಕೆ ಸಣ್ಣದಾಗಿ ಆರಂಭವಾಗುವ ಕಲಹ ತೀರಾ ಮನಶ್ಶಾಂತಿ ಹಾಳು ಮಾಡುವ ಮಟ್ಟಕ್ಕೆ ಹೋಗಲಿದೆ. ನೀವು ಒಂದು ವೇಳೆ ಈಗಾಗಲೇ ಸಾಲವನ್ನು ಪಡೆದುಕೊಂಡಿದ್ದೀರಿ ಎಂದಾದಲ್ಲಿ ತಕ್ಷಣವೇ ಹಿಂತಿರುಗಿಸುವಂತೆ ಕೆಲವರು ಕುತ್ತಿಗೆ ಮೇಲೆ ಕುಳಿತಂತಹ ಅನುಭವ ನಿಮಗೆ ಆಗಲಿದೆ. ಇತರರನ್ನು ಓಲೈಕೆ ಮಾಡುವ ಸಲುವಾಗಿ ನಿಮ್ಮ ಕೈಯಿಂದ ಹಣ ಕಳೆದುಕೊಳ್ಳುವ ಸಾಧ್ಯತೆ ಈ ದಿನ ಕಾಣಿಸುತ್ತಿದೆ. ಮುಖ್ಯವಾದ ಕಾಗದ ಪತ್ರಗಳ ವಿಚಾರಗಳು ಇದ್ದಲ್ಲಿ ಈ ದಿನ ಸಾಧ್ಯವಾದಷ್ಟು ಮುಂದಕ್ಕೆ ಹಾಕುವುದು ಉತ್ತಮ.
ಒಂದು ವೇಳೆ ರಾಜೀ-ಸಂಧಾನ ಆಗುವಂಥ ಅಸಮಾಧಾನಗಳು ಈಗಾಗಲೇ ಇದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳುವುದು ಉತ್ತಮ. ಆದರೆ ನಿಮ್ಮ ಹಠಮಾರಿತನ ಧೋರಣೆಯಿಂದ ಸಮಸ್ಯೆಗಳನ್ನು ಮಾಡಿಕೊಳ್ಳಲಿದ್ದೀರಿ ಎಂಬಂತೆಯೇ ಸನ್ನಿವೇಶಗಳಿವೆ. ಆದ್ದರಿಂದ ಈ ದಿನ ಕೆಲವು ಪರಿಸ್ಥಿತಿಯಲ್ಲಿ ನಾನು ಹೇಳಿದ್ದೇ ಆಗಬೇಕು ಎಂಬ ಮೊಂಡುತನ ಬೇಡ. ಹೊಸದಾಗಿ ಪರಿಚಯವಾಗುವ ವ್ಯಕ್ತಿಗಳ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರಬೇಕು. ಸೆಕೆಂಡ್ ಹ್ಯಾಂಡ್ ಮನೆ ನಿರ್ಮಾಣ ವಸ್ತುಗಳು, ಕುರ್ಚಿ- ಸೋಫಾ ಅಥವಾ ಬೇರೆ ಯಾವುದೇ ಆದರೂ ಈ ದಿನ ಖರೀದಿ ಮಾಡದಿರುವುದು ಉತ್ತಮ.
ಹಿಂದಿನ ನಿಮ್ಮ ಅನುಭವಗಳು ಹಾಗೂ ಘಟನಾವಳಿಗಳ ಕಾರಣದಿಂದಾಗಿ ಬಹಳಷ್ಟು ಬದಲಾವಣೆಗಳು ನಿಮ್ಮಲ್ಲಿ ಆಗಲಿದೆ. ಈ ದಿನ ಪ್ರತಿ ವಿಚಾರದಲ್ಲೂ ವಿಷಯದಲ್ಲೂ ವ್ಯವಹಾರದಲ್ಲೂ ಹಣಕಾಸಿನ ಲೆಕ್ಕಾಚಾರವನ್ನೇ ಹಾಕಲಿದ್ದೀರಿ. ಇದನ್ನು ಮಾಡುವುದರಿಂದ ನನಗೇನು ಲಾಭ ಎಂಬ ಧೋರಣೆ ಇರಲಿದೆ. ನಿಮ್ಮ ಈ ಸ್ವಭಾವ ಸ್ನೇಹಿತರು ಅಥವಾ ಸಂಬಂಧಿಕರನ್ನು ಗೊಂದಲಕ್ಕೆ ಸಿಲುಕಿಸಲಿದೆ. ನಿಮ್ಮಲ್ಲಿ ಕೆಲವರಿಗೆ ಐಷಾರಾಮಿ ಕಾರು ಖರೀದಿ ಮಾಡುವಂಥ ಯೋಗ ಇದೆ. ಕೆಲವರು ಈ ದಿನ ಅಡ್ವಾನ್ಸ್ ನೀಡಿ ಬುಕ್ ಸಹ ಮಾಡುವ ಸಾಧ್ಯತೆಗಳಿವೆ.
ವಿದೇಶಗಳಲ್ಲಿನ ಪ್ರತಿಷ್ಠಿತ ಸಂಘ- ಸಂಸ್ಥೆಗಳಿಂದ ನಿಮ್ಮಲ್ಲಿ ಕೆಲವರಿಗೆ ಸನ್ಮಾನ- ಗೌರವ ಅಥವಾ ಹಣಕಾಸಿನ ಅನುದಾನಗಳು ದೊರೆಯುವ ಮಾಹಿತಿ ದೊರೆಯಲಿದೆ. ನಿಮ್ಮ ಸ್ಥಿರಾಸ್ತಿ ಪೈಕಿ ಕೆಲವನ್ನು ಮಾಡುವುದಕ್ಕೆ ಪ್ರಯತ್ನಿಸಲಿದ್ದೀರಿ. ಪರಿಸರ ಪ್ರೇಮಿಗಳು, ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವವರು, ಪ್ರಾಣಿ ದಯಾ ಸಂಘಗಳಲ್ಲಿ ಇರುವಂಥವರಿಗೆ ಪ್ರಮುಖವಾದ ದಿನ ಇದಾಗಿರುತ್ತದೆ. ಅದೆಷ್ಟೇ ಸಣ್ಣ ಕೆಲಸ ಅಂತಾದರೂ ಹೆಚ್ಚಿನ ಗಮನ ಇಟ್ಟು, ಮಾಡುವುದಕ್ಕೆ ಪ್ರಯತ್ನಿಸಿ. ಇತರರ ಪ್ರಭಾವಕ್ಕೆ ನೀವು ಒಳಗಾಗುವ ಸಾಧ್ಯತೆಗಳಿವೆ.
ನೀವು ನಂಬಿಕೆ ಇಟ್ಟುಕೊಂಡ ವ್ಯಕ್ತಿಗಳಿಂದ ದೊಡ್ಡ ಮಟ್ಟದ ಸಹಾಯಗಳು ಆಗಲಿವೆ. ಕೆಲವು ಹೊಸ ಪರಿಚಯಗಳಿಂದ ಪ್ರಭಾವದ ವ್ಯಾಪ್ತಿ ವಿಸ್ತರಣೆ ಆಗುವುದಕ್ಕೂ ಅನುಕೂಲ ಒದಗಿ ಬರಲಿದೆ. ನಿಮ್ಮಲ್ಲಿ ಕೆಲವರಿಗೆ ಈ ದಿನ ಆಭರಣಗಳನ್ನು ಖರೀದಿಸುವಂತಹ ಯೋಗ ಇದೆ. ಅದರಲ್ಲೂ ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಮೊತ್ತದ ಚಿನ್ನಾಭರಣ ಅಥವಾ ವಜ್ರಾಭರಣಗಳನ್ನು ಖರೀದಿ ಮಾಡಲಿದ್ದೀರಿ. ಚಿನ್ನದ ಚೀಟಿಯನ್ನು ಕಟ್ಟುವುದಕ್ಕೆ ಆರಂಭ ಮಾಡುವ ಅಥವಾ ಈಗಾಗಲೇ ಕಟ್ಟುತ್ತಿದ್ದಲ್ಲಿ ಇನ್ನೂ ಒಂದು ಹೆಚ್ಚುವರಿಯಾಗಿ ಆರಂಭಿಸುವ ಸಾಧ್ಯತೆಗಳಿವೆ.
ಬೇರೆಯವರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ಬಹಳ ಮುಖ್ಯವಾಗಲಿದೆ. ಇನ್ನೊಂದು ಕಡೆ ನಿಮ್ಮ ಆರ್ಥಿಕ ಪರಿಸ್ಥಿತಿ ಚಿಂತೆಗೆ ಕಾರಣವಾಗಲಿದೆ. ಆದಾಯ ಹೆಚ್ಚಳ ಮಾಡಿಕೊಳ್ಳಬೇಕು ಎಂಬ ನಿಮ್ಮ ಪ್ರಯತ್ನಗಳು ಅಂದುಕೊಂಡಂತೆ ಫಲ ನೀಡದೆ ಗೊಂದಲಕ್ಕೆ ಗುರಿಯಾಗಲಿದ್ದೀರಿ. ಇತರರು ನಿಮಗೆ ಸಹಾಯ ಮಾಡುತ್ತಾರೆ ಎಂದುಕೊಂಡು ಯಾವುದೇ ದೊಡ್ಡ ಪ್ರಾಜೆಕ್ಟ್ ಗಳನ್ನು ಕೈಗೆತ್ತಿಕೊಳ್ಳಬೇಡಿ. ಇನ್ನೂ ನಿಮ್ಮ ಕೈಗೆ ಸೇರದ ಹಣವನ್ನು ನೆಚ್ಚಿಕೊಂಡು ಯಾರಿಗೂ ಮಾತು ಕೊಡಲು ಹೋಗಬೇಡಿ. ಸಂಗಾತಿಯ ಸಲಹೆಯನ್ನು ಗಂಭೀರವಾಗಿ ತೆಗೆದುಕೊಳ್ಳಿ.
ನಿಮಗೆ ಎಷ್ಟೇ ಆಪ್ತರು ಅಥವಾ ಹತ್ತಿರದವರೇ ಆದರೂ ಇತರರ ವೈಯಕ್ತಿಕ ವಿಚಾರಗಳಿಗೆ, ಪ್ರೀತಿ- ಪ್ರೇಮದ ಸಂಗತಿಗಳಿಗೆ ನೀವು ತಲೆ ಹಾಕಲು ಹೋಗಬೇಡಿ. ಒಂದು ವೇಳೆ ಮಧ್ಯಸ್ಥರಾಗಿ ನಿಮಗೆ ಆಹ್ವಾನ ನೀಡಿದರು ಸಹ ಅದನ್ನು ಒಪ್ಪಿಕೊಳ್ಳದೇ ಇರುವುದು ಒಳ್ಳೆಯದು. ಒಂದು ವೇಳೆ ನೀವೇ ಅತ್ಯುತ್ಸಾಹದಿಂದ ಯಾವುದಾದರೂ ಇಂಥ ವಿಚಾರಗಳಲ್ಲಿ ತೊಡಗಿಕೊಂಡಿರೋ ನಿಂದೆ ಆರೋಪಗಳಿಗೆ ಗುರಿಯಾಗುವುದು ನಿಶ್ಚಿತ. ಈ ಹಿಂದೆ ಯಾವಾಗಲೂ ಮಾಡಿದ್ದ ಹೂಡಿಕೆ, ಅದರಲ್ಲೂ ಭೂಮಿಗೆ ಸಂಬಂಧಪಟ್ಟಂತಹ ಹೂಡಿಕೆ ಇದ್ದಲ್ಲಿ ಅದನ್ನು ವಾಪಸ್ ತೆಗೆದುಕೊಳ್ಳುವ ಬಗ್ಗೆ ಆಲೋಚನೆ ಮಾಡಲಿದ್ದೀರಿ.
ನಿಮ್ಮ ಬಹು ದಿನಗಳ ಕನಸು ಸಾಕಾರ ಆಗುವಂಥ ಸುಳುಹು ನಿಮಗೆ ದೊರೆಯಲಿದೆ. ಇನ್ನು ವ್ಯಾಪಾರ, ವ್ಯವಹಾರ ಅಥವಾ ಉದ್ಯಮವನ್ನು ಆರಂಭಿಸುವ ಉದ್ದೇಶದಿಂದ ಹಣಕಾಸನ್ನು ಹೊಂದಾಣಿಕೆ ಮಾಡಲು ಪ್ರಯತ್ನ ಪಡುತ್ತಿರುವವರಿಗೆ ಈ ದಿನ ಒಳ್ಳೆ ಸುದ್ದಿ ಇದೆ. ಇಷ್ಟು ಸಮಯ ಒಂದು ವೇಳೆ ಕುಟುಂಬದ ಒಳಗಿಂದ ಏನಾದರೂ ವಿರೋಧಗಳು ಬರುತ್ತಿದ್ದಲ್ಲಿ ಅದಕ್ಕೆ ಈಗ ಅವರ ಸಹಕಾರ ದೊರೆಯಲಿದೆ. ವಿದೇಶಗಳಲ್ಲಿ ಉದ್ಯೋಗಕ್ಕೋ ಅಥವಾ ವ್ಯಾಸಂಗಕ್ಕೋ ಪ್ರಯತ್ನ ಪಡುತ್ತಾ ಇರುವವರಿಗೆ ನಿರೀಕ್ಷೆಯೇ ಮಾಡದ ರೀತಿಯಲ್ಲಿ ಸಹಾಯಗಳು ದೊರೆಯಲಿವೆ.
ಈ ದಿನ ನಿಮ್ಮ ಏಕಾಗ್ರತೆ- ಗಮನವೇ ಒಂದು ಬಗೆಯಲ್ಲಿ ವಿಚಿತ್ರವಾಗಿ ಇರಲಿದೆ. ಇತರರನ್ನು ಮೆಚ್ಚಿಸುವ ಪ್ರಯತ್ನದಲ್ಲಿ ಒತ್ತಡಕ್ಕೆ ಸಿಲುಕಿಕೊಳ್ಳಲಿದ್ದೀರಿ. ನಿಮ್ಮ ಬಳಿ ಇರುವ ಹಣಕ್ಕೆ ಮಾತ್ರ ಖರ್ಚನ್ನು ಪ್ಲಾನ್ ಮಾಡುವುದು ಉತ್ತಮ. ನೆನಪಿನಲ್ಲಿ ಇರಬೇಕಾದದ್ದು ಏನೆಂದರೆ, ಅದೆಷ್ಟೇ ಸಣ್ಣ ಕೆಲಸ ಅಂತಾದರೂ ನಿರೀಕ್ಷೆ ಮಾಡಿದ್ದಕ್ಕಿಂತ ಜಾಸ್ತಿ ಖರ್ಚು ಆಗಲಿದೆ. ಮನೆಯ ದುರಸ್ತಿ, ಕಚೇರಿ ನವೀಕರಣ, ವಾಹನಗಳನ್ನು ಸರ್ವೀಸ್ ಗೆ ಬಿಡುವುದು ಇಂಥ ಯಾವುದೇ ಕೆಲಸ ಆದರೂ ಎಷ್ಟು ಖರ್ಚು ಬರಬಹುದು ಎಂಬುದನ್ನು ಮೊದಲಿಗೇ ಲೆಕ್ಕ ಹಾಕಿಟ್ಟುಕೊಳ್ಳುವುದು ಮುಖ್ಯ.
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ಚೈತ್ರ, ಸೌರ ಮಾಸ : ಮೀನ, ಮಹಾನಕ್ಷತ್ರ : ಉತ್ತರಾಭಾದ್ರ, ವಾರ : ಬುಧ, ಪಕ್ಷ : ಶುಕ್ಲ, ತಿಥಿ : ಅಷ್ಟಮೀ, ನಿತ್ಯನಕ್ಷತ್ರ : ಮೃಗಶಿರಾ, ಯೋಗ : ಸೌಭಾಗ್ಯ, ಕರಣ : ವಣಿಜ, ಸೂರ್ಯೋದಯ – 06 – 25 am, ಸೂರ್ಯಾಸ್ತ – 06 – 34 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 14:01 – 15:32 ಯಮಗಂಡ ಕಾಲ 09:26 – 07:57, ಗುಳಿಕ ಕಾಲ 09:28 – 10:59
ಮೇಷ ರಾಶಿ :
ನೀವು ತೆಗೆದುಕೊಳ್ಳುವ ನಿರ್ಣಯವು ಪೂರ್ಣ ಬೆಂಬಲದಿಂದ ಕೂಡಿರದು. ನಕಾರಾತ್ಮಕ ಆಲೋಚನೆಗಳು ನಿಮ್ಮ ಮನಸ್ಸನ್ನು ಕೆಡಿಸುವುದು. ಅಸಾಧ್ಯವಾದುದನ್ನು ಸಾಧಿಸುವ ಭ್ರಮೆಯಿಂದ ಹೊರಬನ್ನಿ. ಅಹಂಕಾರ ಸುಳಿಯುವ ಸಾಧ್ಯತೆ ಇದೆ. ನೀವು ಇಂದು ಅಸಹಾಯಕರಂತೆ ತೋರುವಿರಿ. ಆರ್ಥಿಕವಾಗಿ ಸಬಲರಾಗಲು ವಿವಿಧ ಆರ್ಥಿಕ ಮೂಲವನ್ನು ಅನ್ವೇಷಿಸಬೇಕಾದೀತು. ಮಕ್ಕಳ ವಿವಾಹ ಕಾರ್ಯದಲ್ಲಿ ನೀವು ಮಗ್ನರಾಗುವಿರಿ. ಮಾತನ್ನು ಚೆನ್ನಾಗಿ ಇಟ್ಟುಕೊಂಡು ವ್ಯವಹಾರವನ್ನು ಮುನ್ನಡೆಸುವಿರಿ.
ವೃಷಭ ರಾಶಿ :
ಕೃತಜ್ಞತೆಯನ್ನು ಬೆಳೆಸಿಕೊಳ್ಳುವುದು ನಿಮ್ಮ ವ್ಯಕ್ತಿತ್ವವನ್ನು ಬದಲಿಸಬಹುದು. ಪ್ರೇಮದಲ್ಲಿ ಹಿನ್ನಡೆಯಾಗಲಿದೆ. ತಾಳ್ಮೆಯಿಂದ ಮುಖ್ಯ ಆಯುಧವಾಗಿರಲಿ. ವಿದೇಶದ ಕನಸು ಸದ್ಯ ಸಾಕಾರವಾಗದು. ವ್ಯಾಪಾರಸ್ಥರಿಗೆ ಸ್ವಲ್ಪ ಆಲಸ್ಯವು ಇರುವುದು. ಉನ್ನತ ಅಭ್ಯಾಸದಿಂದ ಹಿಂದೇಟುಹಾಕುವ ಸ್ಥಿತಿ ಬರಬಹುದು. ನಿಮ್ಮ ಆಸೆಗಳನ್ನು ಇನ್ನೊಬ್ಬರ ಜೊತೆ ಹೇಳಿಕೊಂಡು ಸಮಾಧಾನ ಪಡುವಿರಿ. ತುರ್ತು ಅವಶ್ಯಕತೆ ಇರುವುದು. ಇನ್ನೊಬ್ಬರ ಯೋಜನೆಯನ್ನು ನಿಮ್ಮದೆಂದು ಸಾಧಿಸುವಿರಿ.
ಮಿಥುನ ರಾಶಿ :
ಸಂಗಾತಿಯ ಆರೋಗ್ಯದ ಬಗ್ಗೆ ಚಿಂತೆ ಇರುವುದು. ವಿದ್ಯಾರ್ಥಿಗಳು ಅನಾರೋಗ್ಯದಿಂದ ವಿಶ್ರಾಂತಿ ಪಡೆಯಬೇಕಾಗಬಹುದು. ಅಧಿಕಾರಕ್ಕಾಗಿ ಯಾರನ್ನೂ ವಂಚಿಸಬಹುದು. ಸರಿಯಾದ ಹಂಚಿಕೊಂಡು ಕೆಲಸವನ್ನು ಮಾಡುವುದು ಸೂಕ್ತ. ಕಛೇರಿಯ ಕೆಲಸವನ್ನು ಮನೆಗೂ ತಂದುಕೊಳ್ಳುವಿರಿ. ವೇತನವನ್ನು ಹೆಚ್ಚಿಸಿಕೊಳ್ಳಲು ಅನ್ಯ ಮಾರ್ಗವನ್ನು ಹುಡುಕುವ ಅವಶ್ಯಕತೆ ಬರಬಹುದು. ಅಪರಿಚಿತರ ಜೊತೆ ಮಾತನಾಡಲು ಬಹಳ ಹಿಂಜರಿಕೆ ಇರುವುದು.
ಕರ್ಕಾಟಕ ರಾಶಿ :
ಅವಶ್ಯಕತೆ ಇರುವವರಿಗೆ ಬೇಕಾದ ಸಹಾಯವನ್ನು ಮಾಡಿ. ಇಂದಿನ ಕೆಲವು ಮಾತುಗಳು ನಿಮಗೆ ಇಷ್ಟವಾಗದೇ ಹೋಗುವುದು. ಕೆಲವು ವಿಚಾರದಲ್ಲಿ ನೀವು ಆತುರರಾಗುವಿರಿ. ಮನೆಯ ಖರೀದಿಯ ಬಗ್ಗೆ ಉತ್ಸಾಹ ತೋರುವಿರಿ. ಬೇಡದ ವಸ್ತುಗಳನ್ನು ಇನ್ನೊಬ್ಬರಿಗೆ ಕೊಡುವಿರಿ. ಮನೆಯ ವಾತಾರಣದಲ್ಲಿ ಇರಲು ಖುಷಿಯಾಗುವುದು. ನಿಮ್ಮ ರಹಸ್ಯವನ್ನು ನೀವು ಗೊತ್ತಿಲ್ಲದೇ ಬೇರೆಯವರ ಜೊತೆ ಹಂಚಿಕೊಳ್ಳುವಿರಿ.
ಸಿಂಹ ರಾಶಿ :
ಊಹಿಸದೇ ಇರುವ ಕಡೆಯಿಂದ ನಿಮಗೆ ಬೇಕು ಎನಿಸಿದ ಸಂಪತ್ತು ದೊರೆಯುವುದು. ಸರ್ಕಾರೀ ಮೂಲದ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಇದು ನಿಮಗೆ ಇಂದಿನ ಅಚ್ಚರಿಯ ವಿಚಾರವೇ ಆಗಲಿದೆ. ಉದ್ಯೋಗದಲ್ಲಿ ಹೆಚ್ಚುಗಾರಿಕೆ ಇರುವುದು. ತಾಳ್ಮೆಯಿಂದ ಕಾರ್ಯವನ್ನು ಮಾಡಿ. ನೂತನ ಸ್ನೇಹವನ್ನು ಬೆಳೆಸಿಕೊಳ್ಳುವಿರಿ. ಆಕರ್ಷಕ ಮಾತಿಗೆ ಮನಸೋತು ಪ್ರೀತಿಯಲ್ಲಿ ಬೀಳುವಿರಿ. ನಿಮ್ಮನ್ನು ಅಧಿಕಾರದಲ್ಲಿ ಕುಳ್ಳಿರಿಸಲು ಮೇಲಧಿಕಾರಿಗಳು ಕಾಯುವರು.
ಕನ್ಯಾ ರಾಶಿ :
ಮುಖವನ್ನು ಗಂಟು ಹಾಕಿಕೊಂಡು ಇರುವುದರಿಂದ ನಿಮ್ಮಿಂದ ಜನರನ್ನು ದೂರವಿರಿಸುವುದು. ಅತಿಯಾದ ಆಡಂಬರವು ನಿಮಗೆ ಇಷ್ಟವಾಗದು. ಬೇಡವೆನಿಸಿದವರನ್ನು ನಿಧಾನವಾಗಿ ಗೊತ್ತಾಗದಂತೆ ಪಕ್ಕಕ್ಕೆ ಸರಿಸುವಿರಿ. ನಿಮ್ಮಲ್ಲಿರುವ ಅಲ್ಪ ಹಣವನ್ನು ಸೇರಿಸಿ ಕೊಡಬೇಕಾದವರಿಗೆ ಹಣವನ್ನು ಕೊಡುವಿರಿ. ಉದ್ಯೋಗಕ್ಕೆ ವಿರಾಮ ಹೇಳಿ ಹೊರಗೆ ಸುತ್ತಾಟವನ್ನು ಮಾಡುವಿರಿ. ಎಲ್ಲ ಕಾರ್ಯವನ್ನೂ ನೀವೇ ಮಾಡಬೇಕು ಎಂಬ ಹೆಬ್ಬಯಕೆ ಬೇಡ. ಸಂತೋಷಕೂಟಕ್ಕೆ ಹಣವನ್ನು ಖರ್ಚು ಮಾಡಬೇಕಾದೀತು.
ತುಲಾ ರಾಶಿ :
ಇಂದು ನೀವು ತೋರಿಕೆಗೆ ಬಹಳ ಶಾಂತರಂತೆ ಕಂಡರೂ ಒಳಗೇ ಜ್ವಾಲಗ್ನಿಯಂತೆ ಕುದಿಯುವಿರಿ. ಎಲ್ಲ ವಿಚಾರದಲ್ಲಿಯೂ ಅಸಮಾಧನವು ಇರಲಿದೆ. ಪರರ ಅವಕಾಶವನ್ನು ನೋಡಿ ಮನಸ್ಸಿನಲ್ಲಿ ಸಂಕಟ. ಅತಿಯಾದ ಒತ್ತಡವು ನಿಮ್ಮ ದಕ್ಷತೆಯನ್ನು ಕಡಿಮೆ ಮಾಡುವುದು. ಒಂದೇ ಕೆಲಸದಲ್ಲಿ ಮಗ್ನರಾಗಿ ಮಾಡಬೇಕಾದ ಕೆಲವು ಕೆಲಸವನ್ನು ಮರೆಯುವಿರಿ. ಇಂದು ಖರೀದಿಸಿದ ಹೊಸ ವಸ್ತುಗಳು ನಿಮಗೆ ಬಹಳ ಖುಷಿಯನ್ನು ಕೊಡುವುದು. ವೃತ್ತಿಯಲ್ಲಿ ನಿಮ್ಮನ್ನು ಗುರುತಿಸಿರುವುದು ಮನಸ್ಸನ್ನು ಹಿಗ್ಗಿಸಿರುವುದು.
ವೃಶ್ಚಿಕ ರಾಶಿ :
ನಿಮ್ಮ ಕಾರ್ಯಕ್ಷಮತೆ ಕಡಿಮೆಯಾದಂತೆ ತೋರುವುದು. ಯಾವ ಹೊಸತನ್ನೂ ಸ್ವೀಕರಿಸುವ ಮಾನಸಿಕತೆ ಇಂದು ಇರದು. ಎಲ್ಲ ವಿಚಾರಕ್ಕೂ ನಿಮ್ಮ ಮೌನಮುದ್ರೆಯು ಒತ್ತಿರುವುದು. ಹೂಡಿಕೆಯನ್ನು ಹಿಂಪಡೆಯುವ ಸಾಧಿಸುವಿರಿ ಇದೆ. ವೈಯಕ್ತಿಕ ವಿಚಾರಕ್ಕೆ ಯಾರನ್ನೂ ಸೇರಿಸಿಕೊಳ್ಳಲು ಬಯಸುವುದಿಲ್ಲ. ವಿವಾಹಕ್ಕೆ ಸಂಬಂಧಿಸಿದಂತೆ ಮಾತುಕತೆ ಸ್ಪಂದನ ಇರದು. ಅಶುಭವಾದ ಕೆಲಸಕ್ಕೆ ಗೊತ್ತಿಲ್ಲದೇ ನೀವು ಹಣವನ್ನು ನೀಡುವಿರಿ.
ಧನು ರಾಶಿ :
ದುಡುಕಿನಿಂದ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು. ಉದ್ಯಮಕ್ಕೆ ಸಂಬಂಧಿಸಿದ ಸರಿಯಾದ ನಿರ್ಧಾರವನ್ನು ಯಾರಿಂದಲಾದರೂ ಪಡಡಸುಕೊಳ್ಳಿ. ನಿಮ್ಮ ಚಾಂಚಲ್ಯದ ಸ್ಥಿತಿಗೆ ಸಿಟ್ಟಾಗಬಹುದು. ಸ್ವತಂತ್ರವಾದ ಆಲೋಚನೆಯು ಇಲ್ಲದೇ ಹೋದರೆ ಕಷ್ಟವಾದೀತು. ಕಛೇರಿಯಲ್ಲಿ ನಿಮ್ಮ ಶ್ರಮಕ್ಕೆ ಮೆಚ್ಚುಗೆ ಉಂಟಾಗಲಿದೆ. ಹಣಕಾಸಿನ ವ್ಯವಹಾರದಲ್ಲಿ ಹಿನ್ನಡೆ ಉಂಟಾಗಬಹುದು.
ಮಕರ ರಾಶಿ :
ಪತ್ರವ್ಯವಹಾರವು ಸಂಪೂರ್ಣ ಪ್ರಾಮಾಣಿಕವಾಗಿ ಇರದು ಎಂಬುದು ಗಮನದಲ್ಲಿ ಇರಲಿ. ನಿಮ್ಮ ಉದ್ಯೋಗವನ್ನು ನೀವು ಪ್ರೀತಿಸುವಿರಿ. ಕೇಳಿಕೊಂಡು ಬಂದವರಿಗೆ ನಿಮ್ಮಿಂದ ಅಲ್ಪ ಸಹಾಯ ಸಿಗುವುದು. ಕುಟುಂಬದ ಜವಾಬ್ದಾರಿಯನ್ನು ಸಂಗಾತಿ ನೋಡಿಕೊಳ್ಳುವಂತೆ ಮಾಡುವಿರಿ. ಭೋಗವಸ್ತುಗಳನ್ನು ಖರೀದಿ ಮಾಡುವಿರಿ. ಇವತ್ತಿಗೆ ತುರ್ತಾಗಿ ಬೇಕಾದುದನ್ನು ಸ್ನೇಹಿತರಿಂದ ಪಡೆದುಕೊಳ್ಳುವಿರಿ. ಪಕ್ಷಪಾತ ಮಾಡದೇ ಎಲ್ಲರನ್ನೂ ಸಮಾನ ಭಾವನೆಯಿಂದ ಕಾಣುವ ಪ್ರಯತ್ನ ಮಾಡಿ.
ಕುಂಭ ರಾಶಿ :
ಇಂದು ಬಂಧುಗಳಿಂದ ನೀವು ದೂರವಾಗುವಿರಿ. ಸದಾ ಅನ್ಯರ ಬಗ್ಗೆ ಆಲೋಚನೆ ಮಾಡುವುದನ್ನು ಬಿಡಿ. ನೆರೆ ಹೊರೆಯವರ ವಿಚಾರದಲ್ಲಿ ಸಣ್ಣ ಅಸಮಾಧಾನ ಇರಲಿದೆ. ದೇಹಕ್ಕೆ ತೊಂದರೆ ಮಾಡಿಕೊಳ್ಳುವ ಸನ್ನಿವೇಶವಿರಲಿದೆ. ಮನೆಯ ಬದಲಾವಣೆಯನ್ನು ಮಾಡುವಿರಿ. ನಿಮ್ಮ ನಡಿಗೆಯೇ ವಿಶ್ವಾಸದಿಂದ ಇರುವುದನ್ನು ಹೇಳುತ್ತದೆ. ಇದರಿಂದ ಅಪಮಾನವು ಆಗುವುದು. ನಿಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಸಮಸ್ಯೆಯಾಗಬಹುದು. ಇಂದು ಭಯವು ಕಾಡಲಿದ್ದು ಮನೆಯನ್ನು ಬಿಟ್ಟು ಹೋಗಲಾರಿರಿ.
ಮೀನ ರಾಶಿ :
ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ತೊಂದರೆ ಆಗಲಿದ್ದು ಮನಸ್ಸು ಪ್ರೇಮದ ಕಾರಣಕ್ಕೆ ವಿಚಲಿತವಾಗಬಹುದು. ಮಿತ್ರರು ನಿಮಗೆ ಸಹಕಾರ ನೀಡಲಾರರು. ಸಾಲ ಮಾಡುವ ಸಂದರ್ಭವನ್ನು ತಂದುಕೊಳ್ಳುವುದು ಬೇಡ. ವಿದ್ಯಾರ್ಥಿಗಳ ಕ್ರಿಯಾಶೀಲ ವ್ಯಕ್ತಿತ್ವದಿಂದ ಎಲ್ಲರ ಗಮನವನ್ನು ಸೆಳೆಯುವರು. ಇಂದಿನ ಹೂಡಕೆಯು ಲಾಭದಾಯಕವಾಗಿರುವುದು. ನಿಮ್ಮ ಕೆಲಸವನ್ನು ಸರಿ ಮಾಡಿಕೊಂಡು ಹೋಗುವಿರಿ. ಅತಿಯಾದ ಕಾರ್ಯಗಳಿಂದ ಏಕಾಂಗಿಯಾಗಿ ಇರಬೇಕು ಎಂದು ಅನ್ನಿಸಬಹುದು.
ಗುರು ದೇಶಪಾಂಡೆ ಮತ್ತು ರಾಘವೇಂದ್ರ ನಾಯ್ಕ್ ಅವರು ‘ಲವ್ ಮಾಕ್ಟೇಲ್ 3’ (Love Mocktail 3) ಸಿನಿಮಾ ತಂಡದ ಮೇಲೆ ಕೃತಿಚೌರ್ಯದ ಆರೋಪ ಹೊರಿಸಿದ್ದಾರೆ. ಅದರಿಂದಾಗಿ ಡಾರ್ಲಿಂಗ್ ಕೃಷ್ಣ ಗರಂ ಆಗಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಹಲವು ವಿಷಯಗಳಿಗೆ ಪ್ರತಿಕ್ರಿಯಿಸಿದರು. ‘ಗುರು ದೇಶಪಾಂಡೆ, ರಾಘವೇಂದ್ರ ನಾಯ್ಕ್ ಆರೋಪದಲ್ಲಿ ಲಾಜಿಕ್ ಇಲ್ಲ. ಚಿತ್ರಕತೆ, ಡೈಲಾಗ್ ಅಥವಾ ಯಾವುದೇ ಸೀನ್ ಕೂಡ ಕಾಪಿ ಆಗಿಲ್ಲ ಅಂತ ಅವರೇ ಹೇಳಿದ್ದಾರೆ. ಮತ್ತೆ ಯಾಕೆ ಬಂದಿದ್ದಾರೆ? ಸೋಶಿಯಲ್ ಮೀಡಿಯಾದಲ್ಲಿ, ಗೂಗಲ್ನಲ್ಲಿ ಸಿಗುವ ಕಥೆಯನ್ನು ಇಟ್ಟುಕೊಂಡು ಬಂದು ಇದು ತಮ್ಮ ಕಥೆ ಅಂತ ಹೇಳುತ್ತಿದ್ದಾರಲ್ಲ. ಇವರಿಗೆ ಕಾಮನ್ ಸೆನ್ಸ್ ಏನಾದರೂ ಇದೆಯಾ?’ ಎಂದು ಡಾರ್ಲಿಂಗ್ ಕೃಷ್ಣ (Darling Krishna) ಅವರು ಖಡಕ್ ಆಗಿ ಪ್ರಶ್ನಿಸಿದ್ದಾರೆ.
ಮುಂಬೈ, ಮಾರ್ಚ್ 25: ಮಹಾರಾಷ್ಟ್ರದ ಜಲ್ನಾದಲ್ಲಿ ಟೊಮ್ಯಾಟೊ ಬೆಲೆ (Tomato Price) ಕುಸಿತವಾಗಿದೆ. ಇದರಿಂದ ಕೋಪಗೊಂಡ ರೈತರು 25 ಕ್ವಿಂಟಾಲ್ ಟೊಮ್ಯಾಟೊ ಹಣ್ಣನ್ನು ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದರು. ರೈತರು ಮಾರುಕಟ್ಟೆಯಲ್ಲಿ ನ್ಯಾಯಯುತ ಬೆಲೆ ಸಿಗದ ಕಾರಣದಿಂದಾಗಿ ತಮ್ಮ ಬೆಳೆಯನ್ನು ನಾಶಪಡಿಸಿ ಪ್ರತಿಭಟಿಸಿದ ಘಟನೆ ನಡೆದಿದೆ. ಆ ರೈತ ಸುಮಾರು 1 ಎಕರೆ ಭೂಮಿಯಲ್ಲಿ ಟೊಮ್ಯಾಟೊ ಕೃಷಿ ಮಾಡಿದ್ದರು. ಅದಕ್ಕಾಗಿ ಸುಮಾರು 40,000 ರಿಂದ 45,000 ರೂ.ಗಳನ್ನು ಖರ್ಚು ಮಾಡಿದ್ದರು. ಆದರೆ, ಖರ್ಚು ಮಾಡಿದಷ್ಟು ಹಣ ವಾಪಾಸ್ ಸಿಗಲಿಲ್ಲ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
2026 ರ ಐಪಿಎಲ್ (IPL 2026) ಮಾರ್ಚ್ 28 ರಂದು ಆರ್‌ಸಿಬಿ ಮತ್ತು ಸನ್‌ರೈಸರ್ಸ್ ಹೈದರಾಬಾದ್ (RCB vs SRH) ನಡುವಿನ ಪಂದ್ಯದೊಂದಿಗೆ ಪ್ರಾರಂಭವಾಗಲಿದೆ. ಈ ಪಂದ್ಯ ಮುಗಿದ ಒಂದು ದಿನದ ನಂತರ ಅಂದರೆ ಮಾರ್ಚ್ 30 ರಂದು ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ (CSK vs RR) ತಂಡಗಳು ಮುಖಾಮುಖಿಯಾಗಲಿವೆ. ಆದರೆ ಈ ಪಂದ್ಯಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್ ತಂಡದ ಯುವ ಆರಂಭಿಕ ಆಟಗಾರ 14 ವರ್ಷದ ವೈಭವ್ ಸೂರ್ಯವಂಶಿ (Vaibhav Suryavanshi), ಧೋನಿ ತಂಡ ಸಿಎಸ್‌ಕೆಗೆ ಮುಕ್ತ ಸವಾಲು ಹಾಕಿದ್ದು, ಈ ಆವೃತ್ತಿಯಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸುವುದಾಗಿ ಭರವಸೆ ನೀಡಿದ್ದಾರೆ.
ಸಿಎಸ್‌ಕೆಗೆ ಸವಾಲು ಹಾಕಿದ ವೈಭವ್
ವಾಸ್ತವವಾಗಿ ಕೆಲವು ದಿನಗಳ ಹಿಂದೆ ನಡೆದಿದ್ದ ಬಿಸಿಸಿಐ ನಮನ್ ಪ್ರಶಸ್ತಿ ಸಮಾರಂಭದಲ್ಲಿ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡುವ ವೈಭವ್ ಸೂರ್ಯವಂಶಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವ ಆಯುಷ್ ಮ್ಹಾತ್ರೆ ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮವೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಇಬ್ಬರು ಅಂಡರ್ 19 ಕ್ರಿಕೆಟ್‌ನಲ್ಲಿ ಒಟ್ಟಿಗೆ ಆಡಿದ್ದರಿಂದ ಇಬ್ಬರ ಮಧ್ಯೆ ಆತ್ಮೀಯತೆ ಹೆಚ್ಚಿದೆ. ಹೀಗಾಗಿ ಆ ಕಾರ್ಯಕ್ರಮದಲ್ಲಿ, ವೈಭವ್ ಸೂರ್ಯವಂಶಿ, ಸಿಎಸ್‌ಕೆ ಪರ ಆಡುವ ಆಯುಷ್ ಮ್ಹಾತ್ರೆಗೆ ಸವಾಲೊಂದನ್ನು ಹಾಕಿದ್ದರು.
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸೇರಿದಾಗಿನಿಂದ ಸಿಎಸ್‌ಕೆ ಎರಡು ಬಾರಿ ಸೋತಿದೆ. ಈ ಬಾರಿ ಅದು 4-0 ಅಂತರಕ್ಕೇರಲಿದೆ ಎಂದು ವೈಭವ್ ಸೂರ್ಯವಂಶಿ, ಆಯುಷ್ ಮ್ಹಾತ್ರೆ ಅವರಿಗೆ ತಿಳಿಸಿದರು. ಸೂರ್ಯವಂಶಿ ಹೇಳಿಕೆಯ ಅರ್ಥ, ಐಪಿಎಲ್ 2025 ರಲ್ಲಿ ಸಿಎಸ್‌ಕೆ, ಆರ್‌ಆರ್ ವಿರುದ್ಧ ಆಡಿದ್ದ ಎರಡೂ ಪಂದ್ಯಗಳನ್ನು ಸೋತಂತೆ, ಈ ಬಾರಿಯೂ ಸೋಲಲಿದೆ ಎಂದಿದ್ದಾರೆ. ಐಪಿಎಲ್ ಗುಂಪು ಹಂತದಲ್ಲಿ ಪ್ರತಿಯೊಂದು ತಂಡವು ಪರಸ್ಪರ ಎರಡು ಬಾರಿ ಮುಖಾಮುಖಿಯಾಗಲಿದ್ದು, ಈ ಎರಡೂ ಪಂದ್ಯಗಳಲ್ಲಿ ಸಿಎಸ್‌ಕೆ ತಂಡವನ್ನು ಸೋಲಿಸುವುದಾಗಿ ವೈಭವ್ ಸೂರ್ಯವಂಶಿ ತಮಾಷೆಯಾಗಿ ಹೇಳಿದ್ದಾರೆ.
ಐಪಿಎಲ್ 2025 ರಲ್ಲಿ ಆರ್‌ಆರ್ ಮತ್ತು ಸಿಎಸ್‌ಕೆ ನಡುವಿನ ಮೊದಲ ಮುಖಾಮುಖಿ ಮಾರ್ಚ್ 30 ರಂದು ನಡೆದಿತ್ತು ಇದರಲ್ಲಿ ರಾಜಸ್ಥಾನ್, ಚೆನ್ನೈ ತಂಡವನ್ನು 6 ರನ್‌ಗಳಿಂದ ಸೋಲಿಸಿತ್ತು. ವೈಭವ್ ಸೂರ್ಯವಂಶಿ ಆ ಪಂದ್ಯದಲ್ಲಿ ಆಡದಿದ್ದರೂ, ರಾಜಸ್ಥಾನ ತಂಡದ ಭಾಗವಾಗಿದ್ದರು. ಉಭಯ ತಂಡಗಳ ಎರಡನೇ ಮುಖಾಮುಖಿ ಮೇ 20 ರಂದು ನಡೆದಿತ್ತು. ಈ ಪಂದ್ಯದಲ್ಲೂ ರಾಜಸ್ಥಾನ್, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿತ್ತು. ಈ ಪಂದ್ಯದಲ್ಲಿ, ವೈಭವ್ ಸೂರ್ಯವಂಶಿ 33 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 57 ರನ್ಗಳ ಇನ್ನಿಂಗ್ಸ್ ಆಡಿದ್ದರು. ಇದೀಗ ಲೀಗ್ ಆರಂಭಕ್ಕೂ ಮುನ್ನ ಈ ರೀತಿಯ ಹೇಳಿಕೆ ನೀಡಿರುವ ವೈಭವ್, ಪಂದ್ಯದ ದಿನ ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಾಣಿಪೇಟೆ, ಮಾರ್ಚ್ 25: ಶಾಲೆಗೆ ಹೋಗದೆ ಗೆಳೆಯರ ಜೊತೆ ಓಡಾಡಿಕೊಂಡಿದ್ದಕ್ಕಾಗಿ ಮಹಿಳೆಯೊಬ್ಬರು 11ನೇ ತರಗತಿ ವಿದ್ಯಾರ್ಥಿಗೆ ಗದರಿದ್ದರು. ಇದೇ ಕಾರಣದಿಂದ ಆತ ಆ ಮಹಿಳೆಯ ಮೇಲೆ ಚಾಕುವಿನಿಂದ ಹಿಂಸಾತ್ಮಕವಾಗಿ ಹಲ್ಲೆ ಮಾಡಿದ್ದಾನೆ. 16 ವರ್ಷದ ಆ ವಿದ್ಯಾರ್ಥಿಯನ್ನು ಅರಕ್ಕೋಣಂ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆ ಊರಿನಲ್ಲಿ ಆಘಾತ ಸೃಷ್ಟಿಸಿದೆ. ರಾಣಿಪೇಟೆ ಜಿಲ್ಲೆಯ ಅರಕ್ಕೋಣಂನ ಓಥವಡೈ ಬೀದಿಯಲ್ಲಿ ವಾಸಿಸುವ ಸರವಣನ್ ಮತ್ತು ಸತ್ಯ ದಂಪತಿಗೂ ಆ ಬಾಲಕನ ಕುಟುಂಬಕ್ಕೂ ಬಹಳ ಪರಿಚಯವಿತ್ತು. ಸರವಣನ್ ವಿಮಾ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಸ್ನೇಹಿತ ಲಕ್ಷ್ಮಿಪತಿ ಕೂಡ ಅದೇ ವೃತ್ತಿಯಲ್ಲಿದ್ದರು. ಈ ಇಬ್ಬರೂ ಪರಸ್ಪರರ ಮನೆಗೆ ಬಂದು ಹೋಗುತ್ತಿದ್ದುದರಿಂದ ಅವರ ಕುಟುಂಬಕ್ಕೂ ಅವರಿಬ್ಬರ ಗೆಳೆತನ ಗೊತ್ತಿತ್ತು.
ಲಕ್ಷ್ಮಿಪತಿಯ 16 ವರ್ಷದ ಮಗ ಸತ್ಯ ಅವರ ಮನೆಗೆ ಆಗಾಗ ಭೇಟಿ ನೀಡುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದ. ಆತ ಕಳೆದ ಮೂರ್ನಾಲ್ಕು ದಿನಗಳಿಂದ ಶಾಲೆಗೆ ಹೋಗಿಲ್ಲ ಎಂಬ ವಿಷಯ ಸತ್ಯ ಅವರಿಗೆ ಗೊತ್ತಾಗಿತ್ತು. ಅವನು ತನ್ನ ಗಂಡನ ಸ್ನೇಹಿತನ ಮಗನಾಗಿದ್ದರಿಂದ ಸತ್ಯ ಆತನನ್ನು ಕರೆದು ಅಪ್ಪ-ಅಮ್ಮ ಹೇಳಿದ್ದನ್ನು ಕೇಳಬೇಕು, ದಿನವೂ ಶಾಲೆಗೆ ಹೋಗಬೇಕೆಂದು ಸಲಹೆ ನೀಡಿದ್ದರು. ಈ ವೇಳೆ ಕೋಪದಿಂದ ಆತ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ.
ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಸತ್ಯ ಅವರ ಮನೆಯಿಂದ ಕಿರುಚಾಟಗಳು ಕೇಳಿಬಂದವು. ನೆರೆಹೊರೆಯವರು ಸ್ಥಳಕ್ಕೆ ಧಾವಿಸಿದಾಗ ಚಾಕು ಹಿಡಿದು ನಿಂತಿದ್ದ ವಿದ್ಯಾರ್ಥಿಯನ್ನು ನೋಡಿದರು. ಅವನು “ಯಾರಾದರೂ ಹತ್ತಿರ ಬಂದರೆ, ನಾನು ನಿಮ್ಮನ್ನು ಇರಿದು ಹಾಕುತ್ತೇನೆ” ಎಂದು ಬೆದರಿಸುತ್ತಾ ಓಡಿಹೋದ. ಅವರೆಲ್ಲ ಮನೆಯೊಳಗೆ ಹೋಗಿ ನೋಡಿದಾಗ ಇಡೀ ರೂಂ ರಕ್ತದಲ್ಲಿ ಮುಳುಗಿರುವುದನ್ನು ನೋಡಿ ಗಾಬರಿಗೊಂಡರು. ಸತ್ಯಾಳ ದೇಹದಾದ್ಯಂತ ಹಲವು ಕಡೆ ಇರಿತದ ಗಾಯಗಳಿದ್ದವು.
ಈ ಘಟನೆಯ ಬಗ್ಗೆ ಅರಕ್ಕೋಣಂ ಪೊಲೀಸರಿಗೆ ತಕ್ಷಣ ಮಾಹಿತಿ ನೀಡಲಾಯಿತು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸತ್ಯಾಳನ್ನು ಪೊಲೀಸ್ ಸಿಬ್ಬಂದಿ ರಕ್ಷಿಸಿ ತಿರುವಳ್ಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಆಕೆ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಆ ವಿದ್ಯಾರ್ಥಿಯನ್ನು ಬಂಧಿಸಿ ತನಿಖೆ ನಡೆಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ