CUET UG 2026: ತಾಂತ್ರಿಕ ಸಮಸ್ಯೆಯಿಂದ ಪರೀಕ್ಷೆ ಬರೆಯಲಾಗದ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ ನೀಡಿದ NTA
ದೇಶಾದ್ಯಂತ ಪದವಿ ಕೋರ್ಸ್‌ಗಳ ಪ್ರವೇಶಕ್ಕಾಗಿ ಶನಿವಾರ (ಮೇ 30) ನಡೆದ ಸಿಯುಇಟಿ-ಯುಜಿ (CUET-UG) ಪ್ರವೇಶ ಪರೀಕ್ಷೆಯ ವೇಳೆ ಕೆಲವು ಕೇಂದ್ರಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಇದರಿಂದ ಪರೀಕ್ಷೆ ಬರೆಯಲಾಗದ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮತ್ತೊಂದು ಅವಕಾಶವನ್ನು ಪ್ರಕಟಿಸಿದೆ. ಎನ್‌ಟಿಎ (NTA) ಸ್ಪಷ್ಟನೆ: ಈ ಕುರಿತು ಸಾಮಾಜಿಕ ಜಾಲತಾಣ ‘X’ ನಲ್ಲಿ ಪೋಸ್ಟ್ ಮಾಡಿರುವ NTA, “ಇಂದಿನ ತಾಂತ್ರಿಕ ಅಡಚಣೆಯು ಕೆಲವು CUET (UG)ಅಭ್ಯರ್ಥಿಗಳಿಗೆ ತೊಂದರೆ ಉಂಟುಮಾಡಿದೆ. ಶನಿವಾರ (30.05.2026) ಮೊದಲ ಶಿಫ್ಟ್‌ನಲ್ಲಿ (Shift-I) ಪರೀಕ್ಷಾ…