All posts by nagaraj11081993

ಶಿವಮೊಗ್ಗ ಖಾಸಗಿ ಆಸ್ಪತ್ರೆ ಎಡವಟ್ಟು?: ಹರ್ನಿಯಾ ಆಪರೇಷನ್ ಬಳಿಕ ಕೋಮಾಗೆ ಜಾರಿದ ಮಹಿಳೆ

ಶಿವಮೊಗ್ಗ ಖಾಸಗಿ ಆಸ್ಪತ್ರೆ ಎಡವಟ್ಟು?: ಹರ್ನಿಯಾ ಆಪರೇಷನ್ ಬಳಿಕ ಕೋಮಾಗೆ ಜಾರಿದ ಮಹಿಳೆ

ಶಿವಮೊಗ್ಗ, ಮಾ.25: ನಗರದ ನೆಹರು ಕ್ರೀಡಾಂಗಣದ ಪಕ್ಕದಲ್ಲಿರುವ ಅಮೃತ್ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ಲೋಪ ಆಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹರ್ನಿಯಾ ಶಸ್ತ್ರಚಿಕಿತ್ಸೆಗಾಗಿ ದಾಖಲಾಗಿದ್ದ 48 ವರ್ಷದ ದೇವಿ ಬಾಯಿ ಎಂಬುವರು ಚಿಕಿತ್ಸೆಯ ನಂತರ ಕೋಮಾಗೆ ಜಾರಿದ್ದು, ಇದಕ್ಕೆ ವೈದ್ಯರು ನೀಡಿದ ‘ಹೈಡೋಸ್’ ಔಷಧಿಯೇ ಕಾರಣ ಎಂದು ಕುಟುಂಬಸ್ಥರು ಆಸ್ಪತ್ರೆಗೆ ನುಗ್ಗಿ ಪ್ರತಿಭಟನೆ ನಡೆಸಿದ್ದಾರೆ.

ಮಾದರಿ 11 ರಂದು ದೇವಿ ಬಾಯಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾದರಿ 12 ರ ರಾತ್ರಿ ಹರ್ನಿಯಾ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಶಸ್ತ್ರಚಿಕಿತ್ಸೆಯ ನಂತರ ರೋಗಿಗೆ ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿ ಅವರು ಕೋಮಾಗೆ ಜಾರಿದ್ದಾರೆ ಎಂದು ತಿಳಿದುಬಂದಿದೆ.

ಆಪರೇಷನ್ ಮಾಡುವ ಮೊದಲು ಲವಲವಿಕೆಯಿಂದಿದ್ದ ರೋಗಿ, ವೈದ್ಯರ ಎಡವಟ್ಟಿನಿಂದಾಗಿ ಇಂದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಮೂರ್ನಾಲ್ಕು ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ರೋಗಿಯ ಅಳಿಯ ಕಾಂತರಾಜ್ ಮತ್ತು ಸಂಬಂಧಿ ಉಷಾ ನಾಯ್ಕ್ ಆರೋಪಿಸಿದ್ದಾರೆ. ಘಟನೆ ನಡೆದು 12 ದಿನಗಳಾದರೂ ಆಸ್ಪತ್ರೆಯ ಮುಖ್ಯಸ್ಥರು ಯಾವುದೇ ಜವಾಬ್ದಾರಿ ವಹಿಸಿಲ್ಲ ಎಂಬುದು ಸಂಬಂಧಿಕರ ಆಕ್ರೋಶಕ್ಕೆ ಕಾರಣವಾಗಿದೆ. ಆಸ್ಪತ್ರೆಯ ಧೋರಣೆಯಿಂದ ಬೇಸತ್ತ ರೋಗಿಯ ಸಂಬಂಧಿಕರು ಇಂದು ಅಮೃತ್ ಲೈಫ್ ಲೈನ್ ಆಸ್ಪತ್ರೆಯ ಮುಂಭಾಗ ಜಮಾಯಿಸಿ ವೈದ್ಯರ ವಿರುದ್ಧ ಘೋಷಣೆ ಕೂಗಿ ಗಲಾಟೆ ನಡೆಸಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಮಳೆ: ಆಲಿಕಲ್ಲು, ಬಿರುಗಾಳಿ ಸಹಿತ ಗುಡುಗು-ಮಿಂಚು ಬರುವ ಸಾಧ್ಯತೆ

ಈ ಆರೋಪವನ್ನು ತಳ್ಳಿಹಾಕಿರುವ ಆಸ್ಪತ್ರೆಯ ಸರ್ಜನ್ ಡಾ. ಧನಂಜಯ್ ಮತ್ತು ಜನರಲ್ ಫಿಸಿಷಿಯನ್ ಡಾ. ಮಧುಸೂಧನ್, ರೋಗಿ ಕೋಮಾಗೆ ಜಾರಿದ್ದಕ್ಕೂ ಹರ್ನಿಯಾ ಆಪರೇಷನ್‌ಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಸದ್ಯ ರೋಗಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮತ್ತೊಂದು ಆಸ್ಪತ್ರೆಗೆ ವರ್ಗಾಯಿಸಲಾಗಿದ್ದು, ರೋಗಿಯ ಸ್ಥಿತಿ ಸುಧಾರಿಸುತ್ತಿದೆ ಎಂದು ವರದಿಯಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಎಚ್ಚರಿಕೆ ನೀಡಿದ 1 ಗಂಟೆಯಲ್ಲೇ ಅಮೆರಿಕದ ವಿಮಾನವಾಹಕ ನೌಕೆ ಮೇಲೆ ಇರಾನ್ ಕ್ಷಿಪಣಿ ದಾಳಿ

ಟೆಹ್ರಾನ್, ಮಾರ್ಚ್ 25: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಮಧ್ಯೆ ಇರಾನ್ (Iran War) ನೌಕಾಪಡೆ ಇಂದು ಅಮೆರಿಕದ ವಿಮಾನವಾಹಕ ನೌಕೆ ಯುಎಸ್ಎಸ್ ಅಬ್ರಹಾಂ ಲಿಂಕನ್ ವಿಮಾನವಾಹಕ ನೌಕೆಯನ್ನು ಹೊಡೆದುರುಳಿಸಿದೆ. ಇರಾನ್‌ಗೆ 15 ಅಂಶಗಳ ಕದನ ವಿರಾಮದ ಕಂಡೀಷನ್ ಹಾಕುವ ಮೂಲಕ ಅಮೆರಿಕ 1 ತಿಂಗಳ ಅವಧಿಯ ಕದನ ವಿರಾಮವನ್ನು ಬಯಸುತ್ತಿದೆ ಎಂದು ವರದಿಗಳು ಹರಿದಾಡುತ್ತಿರುವಾಗಲೇ ಈ ದಾಳಿ ನಡೆದಿದೆ. ಇರಾನ್ ನಡೆಸಿದ ಈ ದಾಳಿ ಯುದ್ಧದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯಿದೆ.

ಒಂದು ಗಂಟೆಯ ಹಿಂದಷ್ಟೇ ಇರಾನ್ ನೌಕಾಪಡೆಯು ಅಮೆರಿಕಕ್ಕೆ ನೇರ ಎಚ್ಚರಿಕೆ ನೀಡಿತ್ತು. ಯುಎಸ್ಎಸ್ ಅಬ್ರಹಾಂ ಲಿಂಕನ್ ನಿಕಟ ಕಣ್ಗಾವಲಿನಲ್ಲಿದೆ. ಅದು ಇರಾನ್ ಪ್ರದೇಶವನ್ನು ಸಮೀಪಿಸಿದರೆ ನಾವು ಅದನ್ನು ಹೊಡೆದುರುಳಿಸಬೇಕಾಗುತ್ತದೆ ಎಂದು ಹೇಳಿತ್ತು. ಅದಾದ ಒಂದು ಗಂಟೆಯಲ್ಲೇ ಈ ದಾಳಿ ನಡೆದಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಕತೆ ಕದ್ದ ಆರೋಪ: ಗರಂ ಆದ ನಟಿ ಮಿಲನಾ ನಾಗರಾಜ್: ವಿಡಿಯೋ

‘ಲವ್ ಮಾಕ್ಟೆಲ್ 3’ (Love Mocktail 3) ಸಿನಿಮಾ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶಿಸಿ ಬಂಡವಾಳವೂ ಹೂಡಿರುವ ಈ ಸಿನಿಮಾ ಕುಟುಂಬ ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ. ಆದರೆ ಇತ್ತೀಚೆಗೆ ನಿರ್ದೇಶಕ ಗುರು ದೇಶಪಾಂಡೆ ಮತ್ತು ಕತೆಗಾರ ರಾಘವೇಂದ್ರ ನಾಯಕ್ ಅವರು ‘ಲವ್ ಮಾಕ್ಟೆಲ್ 3’ ಸಿನಿಮಾದ ಕತೆಯನ್ನು ಕದಿಯಲಾಗಿದೆ. ನಾವು ಕೆಲ ವರ್ಷಗಳ ಹಿಂದೆ ಡಾರ್ಲಿಂಗ್ ಕೃಷ್ಣ ಅವರಿಗೆ ಹೇಳಿದ ಕತೆಯನ್ನು ಕದ್ದು ಅವರು ಸಿನಿಮಾ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದೀಗ ಡಾರ್ಲಿಂಗ್ ಕೃಷ್ಣ ಮತ್ತು ನಟಿ ಮಿಲನಾ ನಾಗರಾಜ್ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅದರಲ್ಲೂ ಮಿಲನಾ ನಾಗರಾಜ್ ಅವರು, ಕತೆ ಕದ್ದ ಆರೋಪದ ಬಗ್ಗೆ ಸಿಟ್ಟಿನಿಂದ ಉತ್ತರಿಸಿದ್ದಾರೆ. ಅಂಥಹಾ ಸಮಯ ಬಂದರೆ ಸಿನಿಮಾನೇ ಮಾಡಲ್ಲ ಎಂದಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸೋತು ಸುಸ್ತಾಗಿದ್ದ ಸ್ಟಾರ್ ನಿರ್ದೇಶಕನಿಗೆ ಹೈಕೋರ್ಟ್​​ನಿಂದ ಶಾಕ್

ಗೌತಮ್ ವಾಸುದೇವ್ ಮೆನನ್ (Gautham Vasudev Menon), ತಮಿಳಿನಲ್ಲಿ ಸ್ಟಾರ್ ನಿರ್ದೇಶಕರಾಗಿ ಮೆರೆದವರು. ಅವರ ತಮಿಳು ನಿರ್ದೇಶಕರು ಮಾಸ್, ಮಸಾಲ, ತಲೆ-ಬುಡವಿಲ್ಲದ ಕಮರ್ಶಿಯಲ್ ಸಿನಿಮಾಗಳನ್ನು ಮಾಡುವಾಗ ಗೌತಮ್ ವಾಸುದೇವ್ ಮೆನನ್ ‘ಅಪ್ಪಟ ಸಿನಿಮಾ’ಗಳನ್ನು ಮಾಡಿ ಹಿಟ್ ಮೇಲೆ ಹಿಟ್ ಕೊಟ್ಟವರು. ತಮಿಳು ಚಿತ್ರರಂಗಕ್ಕೆ ಹೊಸ ಮಾದರಿಯನ್ನೇ ಹಾಕಿಕೊಟ್ಟವರು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಸೋಲಿನ ಮೇಲೆ ಸೋಲು ಗೌತಮ್​​ಗೆ ಎದುರಾಗಿದೆ. ತಮ್ಮ ಕಷ್ಟಗಳ ಬಗ್ಗೆ ಕೆಲವು ಸಂದರ್ಶನಗಳಲ್ಲಿ ಗೌತಮ್ ಹೇಳಿಕೊಂಡಿದ್ದಾರೆ ಸಹ. ಇದೀಗ ಹೈಕೋರ್ಟ್, ಗೌತಮ್ ಅವರಿಗೆ ಮತ್ತೊಂದು ದೊಡ್ಡ ಶಾಕ್ ನೀಡಿದೆ.

ಗೌತಮ್ ವಾಸುದೇವ್ ಮೆನನ್ ಅವರಿಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದ್ದು, 4.25 ಕೋಟಿ ಹಣವನ್ನು ಬಡ್ಡಿಯ ಸಮೇತ ಆರ್​​ಎಸ್ ಇನ್ಫೋಟೇನ್​​ಮೆಂಟ್ ಹೆಸರಿನ ಸಂಸ್ಥೆಗೆ ನಿಗದಿತ ದಿನಾಂಕದ ಒಳಗಾಗಿ ಪಾವತಿ ಮಾಡುವಂತೆ ಹೇಳಿದೆ. ಈಗಾಗಲೇ ಸಾಕಷ್ಟು ನಷ್ಟದಲ್ಲಿರುವ ಗೌತಮ್ ವಾಸುದೇವ್ ಮೆನನ್ ಅವರಿಗೆ ಇದು ದೊಡ್ಡ ಶಾಕ್ ಆಗಿದೆ.

2008ರಲ್ಲಿ ನಡೆದ ವಿವಾದ ಇದಾಗಿದೆ. 2008 ರಲ್ಲಿ ಗೌತಮ್ ವಾಸುದೇವ್ ಮೆನನ್ ಹೊಸ ಸಿನಿಮಾ ನಿರ್ದೇಶನ ಮಾಡಲಿದ್ದರು ಆ ಸಿನಿಮಾಕ್ಕೆ ಆರ್​​ಎಸ್ ಇನ್ಫೋಟೇನ್​​ಮೆಂಟ್ ನ ಎಸ್ ಎಲ್ರೆಡ್ ಕುಮಾರ್ ನಿರ್ಮಾಪಕರಾಗಿದ್ದರು. ಪ್ರಾಜೆಕ್ಟ್​ಗಾಗಿ ಅಡ್ವಾನ್ಸ್ ಮೊತ್ತವನ್ನು ಸಹ ಎಲ್ರೆಡ್ ಕುಮಾರ್ ನೀಡಿದ್ದರು. ಆದರೆ ಸಿನಿಮಾ ಪ್ರಾರಂಭವೇ ಆಗಲಿಲ್ಲ. ಆದರೆ ಗೌತಮ್ ಅವರು ಅಡ್ವಾನ್ಸ್ ಮೊತ್ತವನ್ನು ಹಿಂದಿರುಗಿಸಲಿಲ್ಲ. ಆದರೆ 2012 ರಲ್ಲಿ ಬಿಡುಗಡೆ ಆದ ‘ನೀ ದಾನೆ ಎನ್ ಪೊನ್ವಸಂತಮ್’ ಸಿನಿಮಾಕ್ಕೆ ಆ ಅಡ್ವಾನ್ಸ್ ಅನ್ನು ಬಳಸಿದ್ದಾಗಿ ಗೌತಮ್ ಹೇಳಿದ್ದಾರೆ. ಆದರೆ ಅದಕ್ಕೆ ಸೂಕ್ತ ಸಾಕ್ಷ್ಯಗಳನ್ನು ನೀಡಿಲ್ಲ. ಇದೇ ಕಾರಣಕ್ಕೆ 2013 ರಲ್ಲಿ ಎಸ್ ಎಲ್ರೆಡ್ ಕುಮಾರ್ ದೂರು ದಾಖಲಿಸಿದ್ದರು. ಇದೀಗ ಮದ್ರಾಸ್ ಹೈಕೋರ್ಟ್ ಸೂಚಿಸಿರುವಂತೆ 4.25 ಕೋಟಿ ಹಣದ ಜೊತೆಗೆ 12 ಲಕ್ಷ ರೂಪಾಯಿ ಹೆಚ್ಚುವರಿ ಹಣವನ್ನು ಸಹ ಅವರು ನೀಡಬೇಕಿದೆ.

ಇದನ್ನೂ ಓದಿ:‘ಮ್ಯಾಕ್ಸ್’ ಸಿನಿಮಾ ವಿವಾದ: ಕೆಆರ್​​ಜಿ ಅರ್ಜಿಗೆ ನಿರ್ಮಾಪಕರಿಗೆ ನೊಟೀಸ್

ಗೌತಮ್ ವಾಸುದೇವ್ ಮೆನನ್, ಕೆಲವು ಕಲ್ಟ್ ಕ್ಲಾಸಿಕ್ ಸಿನಿಮಾಗಳನ್ನು ನೀಡಿದ್ದಾರೆ. ‘ಮಿನ್ನಲೆ’, ‘ರೆಹನಾ ಹೇ ತೇರೆ ದಿಲ್ ಮೇ’, ‘ಕಾಕ ಕಾಕ’, ‘ವೇಟ್ಟೆಯಾಡು ವಿಲೆಯಾಡು’, ‘ವಾರನಂ ಆಯಿರುಂ’, ‘ಯೇ ಮಾಯ ಚೇಸಾವೆ’ ಇನ್ನೂ ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ. ಆದರೆ ಅವರು ನಿರ್ದೇಶಿಸಿರುವ ‘ಧ್ರುವ ನಚ್ಚತ್ತಿರಂ’ ಸಿನಿಮಾ ಹಲವು ವರ್ಷಗಳಿಂದ ಬಿಡುಗಡೆ ಆಗದೆ ನಿಂತಿದೆ. 2017 ರಲ್ಲಿ ಬಿಡುಗಡೆ ಆಗಬೇಕಿದ್ದ ಈ ಸಿನಿಮಾ ಹಣಕಾಸಿನ ಸಮಸ್ಯೆ, ಕೋರ್ಟ್ ಸಮಸ್ಯೆಗಳಿಂದಾಗಿ ಇಂದಿಗೂ ಬಿಡುಗಡೆ ಆಗಿಲ್ಲ. ಆ ಸಿನಿಮಾ ಬಿಡುಗಡೆ ಆಗದ ಹೊರತು ಹೊಸ ಸಿನಿಮಾ ಮಾಡುವುದಿಲ್ಲ ಎಂದು ಗೌತಮ್ ಹೇಳಿದ್ದಾರೆ. ‘ಧ್ರುವ ನಚ್ಚತ್ತಿರಮ್’ ಸಿನಿಮಾ ಸಮಸ್ಯೆಯಲ್ಲಿರುವಾಗ ಈಗ ಮದ್ರಾಸ್ ಹೈಕೋರ್ಟ್ ಮತ್ತೊಂದು ಹೊಸ ಶಾಕ್ ಅನ್ನು ಗೌತಮ್ ಅವರಿಗೆ ನೀಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಮಳೆ: ಆಲಿಕಲ್ಲು, ಬಿರುಗಾಳಿ ಸಹಿತ ಗುಡುಗು-ಮಿಂಚು ಬರುವ ಸಾಧ್ಯತೆ

ಬೆಂಗಳೂರು, ಮಾ.25: ಕರ್ನಾಟಕದಾದ್ಯಂತ ಮುಂದಿನ ಐದು ದಿನಗಳ ಕಾಲ ಪೂರ್ವಮುಂಗಾರು ಮಳೆ (Pre-monsoon showers) ತೀವ್ರಗೊಳ್ಳಲಿದ್ದು, ಹವಾಮಾನ ಇಲಾಖೆಯು ವಿವಿಧ ಜಿಲ್ಲೆಗಳಿಗೆ ಎಚ್ಚರಿಕೆ ನೀಡಿದೆ. ಗಾಳಿಯ ವೇಗವು ಗಂಟೆಗೆ 40-50 ಕಿ.ಮೀ. ತಲುಪುವ ಸಾಧ್ಯತೆಯಿದ್ದು, ಆಲಿಕಲ್ಲು ಮಳೆಯ ಮುನ್ಸೂಚನೆಯೂ ಇದೆ. ರಾಜ್ಯದ ದಕ್ಷಿಣ ಒಳನಾಡು, ಉತ್ತರ ಒಳನಾಡು ಮತ್ತು ಮಲೆನಾಡು ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ.

ಮಳೆಯ ಸಮಯದಲ್ಲಿ ಗಾಳಿಯ ವೇಗವು ಗಂಟೆಗೆ 40 ರಿಂದ 50 ಕಿ.ಮೀ. ಇರಲಿದ್ದು, ಮರಗಳು ಅಥವಾ ವಿದ್ಯುತ್ ಕಂಬಗಳು ಬೀಳುವ ಸಂಭವವಿದೆ. ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ವಿಶೇಷವಾಗಿ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದ್ದು, ಬೆಳೆಗಳಿಗೆ ಹಾನಿಯಾಗದಂತೆ ರೈತರು ಮುಂಜಾಗ್ರತೆ ವಹಿಸುವುದು ಉತ್ತಮ.

ಇದನ್ನೂ ಓದಿ: ಲ್ಯಾಂಬೋರ್ಗಿನಿ ಕಾರು ಜಪ್ತಿ ಮಾಡಿದ ಸಾರಿಗೆ ಅಧಿಕಾರಿಗಳಿಗೆ ಹೈಕೋರ್ಟ್ ಶಾಕ್: 1 ವಾರದಲ್ಲಿ ಕಾರು ಹಿಂದಿರುಗಿಸಿ

ಬೆಂಗಳೂರು, ಮೈಸೂರು, ಹಾಸನ, ಕೊಡಗು, ಬೆಳಗಾವಿ, ಧಾರವಾಡ ಮತ್ತು ಕಲ್ಬುರ್ಗಿ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ. ತೆರೆದ ಮೈದಾನ, ಮರಗಳ ಕೆಳಗೆ ಅಥವಾ ಜಲಮೂಲಗಳ ಹತ್ತಿರ ಇರಬೇಡಿ. ಸುಭದ್ರವಾದ ಕಟ್ಟಡಗಳ ಒಳಗೆ ಆಶ್ರಯ ಪಡೆಯಿರಿ ಎಂದು ಹವಾಮಾನ ಇಲಾಖೆ ಹೇಳಿದೆ. ವಾಹನಗಳನ್ನು ಮರಗಳ ಕೆಳಗೆ ನಿಲ್ಲಿಸಬೇಡಿ. ಮನೆಯ ಕಿಟಕಿ ಮತ್ತು ಬಾಗಿಲುಗಳನ್ನು ಭದ್ರಪಡಿಸಿಕೊಳ್ಳಿ. ಕಟಾವು ಮಾಡಿದ ಬೆಳೆಗಳನ್ನು ಸುರಕ್ಷಿತ ಸ್ಥಳಗಳಲ್ಲಿ ಸಂಗ್ರಹಿಸಿಡಿ ಎಂದು ಮುನ್ನಚ್ಚರಿಕೆಯನ್ನು ನೀಡಿದ್ದಾರೆ.

ದಿನ ಮಳೆಯ ಸಾಧ್ಯತೆ ಗುಡುಗು, ಮಿಂಚು ಬಿರುಗಾಳಿ ವೇಗ ಆಲಿಕಲ್ಲು ಮಳೆ ಮುನ್ನೆಚ್ಚರಿಕೆ ಕ್ರಮಗಳು
1 ಸಾಧಾರಣ ಹೌದು 30-40 ಕಿ.ಮೀ. ಇಲ್ಲ ತೆರೆದ ಮೈದಾನ, ಮರಗಳ ಕೆಳಗೆ ಇರಬೇಡಿ
2 ಹೆಚ್ಚಿದ ಮಳೆ ಹೌದು 40-50 ಕಿ.ಮೀ. ಕೆಲವು ಕಡೆ ಸುಭದ್ರ ಕಟ್ಟಡಗಳ ಒಳಗೆ ಆಶ್ರಯ ಪಡೆಯಿರಿ
3 ಸಾಧಾರಣ ಹೌದು 30-40 ಕಿ.ಮೀ. ಇಲ್ಲ ವಾಹನಗಳನ್ನು ಮರಗಳ ಕೆಳಗೆ ನಿಲ್ಲಿಸಬೇಡಿ
4 ಕಡಿಮೆಯಾಗುವ ಮಳೆ ಹೌದು 20-30 ಕಿ.ಮೀ. ಇಲ್ಲ ಮಳೆಯ ಸಮಯದಲ್ಲಿ ಜಲಮೂಲಗಳ ಹತ್ತಿರ ಇರಬೇಡಿ
5 ಕಡಿಮೆ ಹೌದು 10-20 ಕಿ.ಮೀ. ಇಲ್ಲ ಅನಿವಾರ್ಯವಿದ್ದರೆ ಮಾತ್ರ ಹೊರಗೆ ಹೋಗಿ

ಇನ್ನು ಇಂದು (ಮಾ.25) ಬೆಂಗಳೂರು ನಗರದಲ್ಲಿ ಸಂಜೆ ಹೊತ್ತಿಗೆ ಕೆಲವೊಂದು ಕಡೆ ಮಳೆಯಾಗುವ ಸಾಧ್ಯತೆಗಳು ಇದೆ. ಗರಿಷ್ಠ 33°C ಮತ್ತು ಕನಿಷ್ಠ 20°C ದಾಖಲಾಗುವ ಸಾಧ್ಯತೆಯಿದೆ. ಗಂಟೆಗೆ 10 ಕಿ.ಮೀ ವೇಗದಲ್ಲಿ ಪೂರ್ವ ದಿಕ್ಕಿನಿಂದ ಗಾಳಿ ಬೀಸಲಿದೆ. ರಾಜ್ಯದ ಇತರ ಭಾಗಗಳಲ್ಲಿ, ವಿಶೇಷವಾಗಿ ಉತ್ತರ ಕರ್ನಾಟಕ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಹಾಗೂ 40-50 ಕಿ.ಮೀ ವೇಗದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗುವ ಮುನ್ಸೂಚನೆ ಇರುವುದರಿಂದ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ಹೇಳಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

IPL 2026: ಆರ್​ಸಿಬಿ, ಆರ್​ಆರ್ ಮಾರಾಟದಿಂದ ಬಿಸಿಸಿಐಗೆ ಹರಿದು ಬಂತು ಸಾವಿರ ಕೋಟಿಗೂ ಅಧಿಕ ಆದಾಯ

2026 ರ ಐಪಿಎಲ್ (IPL 2026) ಆರಂಭಕ್ಕೂ ಮುನ್ನ ಲೀಗ್​ನ ಎರಡು ಚಾಂಪಿಯನ್‌ ತಂಡಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ರಾಜಸ್ಥಾನ್ ರಾಯಲ್ಸ್ (RR) ತಂಡವನ್ನು ದಾಖಲೆಯ ಮೊತ್ತಕ್ಕೆ ಮಾರಾಟ ಮಾಡಲಾಗಿದೆ. ರಾಜಸ್ಥಾನ್ ರಾಯಲ್ಸ್ ತಂಡವನ್ನು ಕಾಲ್ ಸೊಮಾನಿ ನೇತೃತ್ವದ ಕನ್ಸಾರ್ಟಿಯಂ 15000 ಸಾವಿರ ಕೋಟಿ ರೂ.ಗೆ ಖರೀದಿ ಮಾಡಿದೆ. ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಆದಿತ್ಯ ಬಿರ್ಲಾ ಗ್ರೂಪ್, ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಬೋಲ್ಟ್ ವೆಂಚರ್ಸ್ ಮತ್ತು ಅಮೆರಿಕದ ಖಾಸಗಿ ಇಕ್ವಿಟಿ ದೈತ್ಯ ಬ್ಲ್ಯಾಕ್‌ಸ್ಟೋನ್ ಜಂಟಿಯಾಗಿ 16,660 ಕೋಟಿ ರೂ.ಗೆ ಖರೀದಿ ಮಾಡಿವೆ. ಈ ಎರಡು ತಂಡಗಳ ಮಾರಾಟದಿಂದ ಬಿಸಿಸಿಐಗೂ (BCCI) ಸಾವಿರ ಕೋಟಿಗೂ ಅಧಿಕ ಮೊತ್ತದ ಲಾಭ ಬಂದಿದೆ.

ಬಿಸಿಸಿಐಗೆ 1,583 ಕೋಟಿ

ಐಪಿಎಲ್‌ ನಿಯಮಗಳ ಪ್ರಕಾರ, ಒಂದು ತಂಡದ ಮಾಲೀಕರು ಬದಲಾದಾಗ, ತಂಡವನ್ನು ಖರೀದಿಸಿದ ಮೊತ್ತದ ಶೇಕಡಾ 5 ರಷ್ಟು ಮೊತ್ತವನ್ನು ಶುಲ್ಕವಾಗಿ ಬಿಸಿಸಿಐ ಮಂಡಳಿಯಲ್ಲಿ ಠೇವಣಿ ಇಡಬೇಕು. ಈ ನಿಯಮದ ಪ್ರಕಾರ, 16,660 ಕೋಟಿ ರೂಪಾಯಿಗಳಿಗೆ ಮಾರಾಟವಾದ ಆರ್​ಸಿಬಿ ಶುಲ್ಕದ ರೂಪದಲ್ಲಿ 833 ಕೋಟಿ ರೂಪಾಯಿಗಳನ್ನು ಬಿಸಿಸಿಐನಲ್ಲಿ ಠೇವಣಿ ಇಡಬೇಕಾಗಿದೆ. ಹಾಗೆಯೇ 15,000 ಕೋಟಿ ರೂಪಾಯಿಗಳಿಗೆ ಮಾರಾಟವಾದ ರಾಜಸ್ಥಾನ ರಾಯಲ್ಸ್ ಕೂಡ 750 ಕೋಟಿ ರೂಪಾಯಿಗಳನ್ನು ಠೇವಣಿ ರೂಪದಲ್ಲಿ ಇಡಬೇಕಾಗಿದೆ. ಇದರರ್ಥ ಈ ಎರಡು ತಂಡಗಳ ಮಾರಾಟದಿಂದ ಬಿಸಿಸಿಐ 1,583 ಕೋಟಿ ರೂಪಾಯಿಗಳನ್ನು ಪಡೆದಿದೆ.

ಅತ್ಯಂತ ದುಬಾರಿ ತಂಡ ಆರ್‌ಸಿಬಿ

ಮಾರ್ಚ್ 24, ಭಾರತೀಯ ಕ್ರಿಕೆಟ್ ಮತ್ತು ಐಪಿಎಲ್‌ಗೆ ಐತಿಹಾಸಿಕ ದಿನವಾಗಿತ್ತು. ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸರಿಸುಮಾರು ₹31,000 ಕೋಟಿಗೆ ಮಾರಾಟವಾದವು. 16,660 ಕೋಟಿಗೆ ಮಾರಾಟವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಕ್ರಿಕೆಟ್ ತಂಡ ಎನಿಸಿಕೊಂಡಿತು. ಇತ್ತ 15000 ಕೋಟಿಗೆ ಮಾರಾಟವಾದ ರಾಜಸ್ಥಾನ ರಾಯಲ್ಸ್ ಎರಡನೇ ಅತ್ಯಂತ ದುಬಾರಿ ತಂಡ ಎನಿಸಿಕೊಂಡಿದೆ.

456 ಕೋಟಿಯಿಂದ 16,600 ಕೋಟಿವರೆಗೆ; 18 ವರ್ಷಗಳಲ್ಲಿ ಆರ್​ಸಿಬಿಯನ್ನು ಆಳಿದವರಿವರು

2 ತಂಡಗಳ ಹೊಸ ಮಾಲೀಕರು ಯಾರು?

ಆರ್‌ಸಿಬಿ ಫ್ರಾಂಚೈಸಿಯನ್ನು ಆದಿತ್ಯ ಬಿರ್ಲಾ ಗ್ರೂಪ್, ಅಮೇರಿಕನ್ ಕ್ರೀಡಾ ಹೂಡಿಕೆದಾರ ಡೇವಿಡ್ ಬ್ಲಿಟ್ಜರ್ ಮತ್ತು ಅಮೇರಿಕನ್ ಖಾಸಗಿ ಇಕ್ವಿಟಿ ಸಂಸ್ಥೆ ಬ್ಲಾಕ್‌ಸ್ಟೋನ್ ಜಂಟಿಯಾಗಿ ಖರೀದಿಸಿವೆ. ಕಳೆದ ವರ್ಷ ಐಪಿಎಲ್ 2025 ಪ್ರಶಸ್ತಿಯನ್ನು ಗೆದ್ದ ಕೆಲವೇ ತಿಂಗಳುಗಳ ನಂತರ ಆರ್‌ಸಿಬಿಯ ಹಿಂದಿನ ಮಾಲೀಕರಾದ ಯುನೈಟೆಡ್ ಸ್ಪಿರಿಟ್ಸ್ ಫ್ರಾಂಚೈಸಿಯನ್ನು ಮಾರಾಟಕ್ಕೆ ಇಟ್ಟಿತು. ರಾಜಸ್ಥಾನ್ ರಾಯಲ್ಸ್‌ಗೆ ಸಂಬಂಧಿಸಿದಂತೆ, ಕಲ್ ಸೋಮಾನಿ ಅವರ ಗುಂಪು ತಂಡವನ್ನು 15,000 ಕೋಟಿಗೆ ಖರೀದಿಸಿದೆ. ಈ ಒಪ್ಪಂದವು ಐಪಿಎಲ್ 2026 ರ ನಂತರ ಜಾರಿಗೆ ಬರಲಿದೆ ಮತ್ತು ಮುಂಬರುವ ಆವೃತ್ತಿಯ ಅಂತ್ಯದವರೆಗೆ ಮನೋಜ್ ಬಾಜಪೇಯಿ ತಂಡದ ಮಾಲೀಕರಾಗಿ ಉಳಿಯಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇರಾನ್‌ನ ಬುಶೆಹ್ರ್ ಪರಮಾಣು ಸ್ಥಾವರದ ಮೇಲೆ ಕ್ಷಿಪಣಿ ದಾಳಿ

ಟೆಹ್ರಾನ್, ಮಾರ್ಚ್ 25: ಇರಾನ್ ಮೇಲೆ ಇಸ್ರೇಲ್ ದಾಳಿ (Israel Attack) ನಿಂತಿಲ್ಲ. ಇಂದು ಇರಾನ್​ನ ಬುಶೆಹ್ರ್ ಪರಮಾಣು ಸ್ಥಾವರದ ಬಳಿಯ ದಾಳಿ ಇರುವ ರಿಯಾಕ್ಟರ್ ಘಟಕದ ಬಳಿಗೆ ಇಸ್ರೇಲ್​ನ ಕ್ಷಿಪಣಿ ಬಂದು ಅಪ್ಪಳಿಸಿದೆ. ಈ ಹಿನ್ನೆಲೆಯಲ್ಲಿ ಇರಾನ್ ಕೂಡ ಇಸ್ರೇಲ್​ನ ಪವರ್ ಪ್ಲಾಂಟ್ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದೆ ಎನ್ನಲಾಗಿದೆ. ಇರಾನ್‌ನ ಬುಶೆಹ್ರ್ ಪರಮಾಣು ವಿದ್ಯುತ್ ಸ್ಥಾವರದ ಬಳಿ ಇತ್ತೀಚೆಗೆ ನಡೆದ ದಾಳಿಯು ಕಾರ್ಯಾಚರಣಾ ರಿಯಾಕ್ಟರ್ ಘಟಕದ ಬಳಿಗೆ ಅಪ್ಪಳಿಸಿದೆ ಎಂದು ರಷ್ಯಾದ ರಾಜ್ಯ ಪರಮಾಣು ಸಂಸ್ಥೆ ರೊಸಾಟಮ್ ತಿಳಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ದಾವಣಗೆರೆಯಲ್ಲಿ ಕಾಂಗ್ರೆಸ್​​ಗೆ ಮತ್ತಷ್ಟು ಬಿಸಿ ತುಪ್ಪವಾದ ಬಂಡಾಯ: ಶಾಮನೂರು ಕುಟುಂಬಕ್ಕೆ ಪೈಲ್ವಾನ್ ಸಡ್ಡು

ದಾವಣಗೆರೆ, (ಮಾರ್ಚ್ 25): ಶಾಮನೂರು ಶಿವಶಂಕರಪ್ಪ ಅವರ ನಿಧನದ ಬಳಿಕ ತೆರವಾದ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ (Davanagere Byelection ) ಕಾವು ರಂಗೇರಿದೆ. ಬಿಜೆಪಿ ಒಗ್ಗಟ್ಟಿನಿಂದ ಭರ್ಜರಿ ನಡೆಸಿದೆ. ಆದ್ರೆ, ಕಾಂಗ್ರೆಸ್‍ಗೆ(Congress) ಬಂಡಾಯದ ಬಿಸಿ ತಟ್ಟಿದ್ದು, ಶಾಮನೂರು ಆಪ್ತ ಸಾಧಿಕ್ ಪೈಲ್ವಾನ್ (Sadiq Pailwan) ಕಣಕ್ಕಿಳಿದಿದ್ದು, ಯಾವುದೇ ಕಾರಣಕ್ಕೂ ಕಣದಿಂದ ಹಿಂದೆ ಸರಿಯುವುದೇ ಇಲ್ಲ ಎಂದು ಸವಾಲ್ ಹಾಕಿದ್ದಾರೆ. ಹೀಗಾಗಿ ಪೈಲ್ವಾನ್ ಸ್ಪರ್ಧೆ ಕಾಂಗ್ರೆಸ್‍ಗೆ ತಲೆನೋವಾಗಿ ಪರಿಣಮಿಸಿದೆ. ಇನ್ನು ಈ ಬಗ್ಗೆ ಸಾಧಿಕ್ ಪೈಲ್ವಾನ್ ಏನೆಲ್ಲಾ ಮಾತನಾಡಿದ್ದಾರೆ ಕೇಳಿ.

ಇದನ್ನೂ ಓದಿ: ಮುಸ್ಲಿಮರೂ ನಮ್ಮ ಜತೆಗಿದ್ದಾರೆ: ದಾವಣಗೆರೆಯಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದ ಸಿದ್ದರಾಮಯ್ಯ, ಡಿಕೆಶಿ

Source link

ಕತೆ ಕದ್ದ ಆರೋಪಕ್ಕೆ ಡಾರ್ಲಿಂಗ್ ಕೃಷ್ಣ ಸ್ಪಷ್ಟನೆ: ನಟ ಹೇಳಿದ್ದೇನು?

ಡಾರ್ಲಿಂಗ್ ಕೃಷ್ಣ (Darling Krishna) ನಟಿಸಿರುವ ‘ಲವ್ ಮಾಕ್ಟೆಲ್ 3’ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ‘ಧುರಂಧರ್ 2’ ಮತ್ತು ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಗಳ ಅಬ್ಬರದ ನಡುವೆಯೂ ಸಹ ‘ಲವ್ ಮಾಕ್ಟೆಲ್ 3’ ಯಶಸ್ಸು ಗಳಿಸುತ್ತಿದೆ. ಆದರೆ ಇತ್ತೀಚೆಗೆ ನಿರ್ದೇಶಕ ಗುರು ದೇಶಪಾಂಡೆ ಮತ್ತು ರಾಘವೆಂದ್ರ ನಾಯಕ್ ಅವರುಗಳು ಡಾರ್ಲಿಂಗ್ ಕೃಷ್ಣ ಅವರು ನಮ್ಮ ಕತೆ ಕದ್ದಿದ್ದಾರೆ ಎಂದು ಆರೋಪಿಸಿದ್ದಾರೆ. ಅಪ್ಪ-ಮಗಳ ಬಂಧದ ಬಗ್ಗೆ ಕತೆಯನ್ನು ‘ಲವ್ ಮಾಕ್ಟೆಲ್ 3’ ಸಿನಿಮಾ ಹೊಂದಿದ್ದು, ಸಿನಿಮಾದ ಕತೆಯನ್ನು ಡಾರ್ಲಿಂಗ್ ಕೃಷ್ಣ ಅವರೇ ಬರೆದಿದ್ದಾರೆ. ಆರೋಪ ಬಂದ ಬೆನ್ನಲ್ಲೆ ಇದೀಗ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಅವರುಗಳು ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಡಾರ್ಲಿಂಗ್ ಕೃಷ್ಣ ಹೇಳಿದ್ದೇನು? ವಿಡಿಯೋ ಇಲ್ಲಿದೆ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

KSRTC ಬಸ್ ಬ್ರೇಕ್ ಫೇಲ್; ಆಟೋ, ಹಣ್ಣಿನ ಅಂಗಡಿಗೆ ಡಿಕ್ಕಿ! ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ

ಬಳ್ಳಾರಿ, ಮಾ.25: ನಗರದ ಮೋತಿ ವೃತ್ತದ ಬಳಿ ಕೆಎಸ್ಆರ್ಟಿಸಿ ಸಾರಿಗೆ ಬಸ್ ಅಪಘಾತಕ್ಕೀಡಾಗಿದೆ. ಬಸ್‌ನ ಬ್ರೇಕ್ ಫೇಲ್ ಆದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ. ಬಸ್ ವೇಗವಾಗಿ ಸಾಗಿ, ರಸ್ತೆ ಬದಿಯಲ್ಲಿದ್ದ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ನಂತರ ಹಣ್ಣಿನ ಅಂಗಡಿ, ಟೀ ಅಂಗಡಿ ನುಗ್ಗಿದೆ. ಬಸ್ ಡಿಕ್ಕಿಯಾದ ರಭಸಕ್ಕೆ ಫ್ರೂಟ್ಸ್ ಅಂಗಡಿ ಸಂಪೂರ್ಣವಾಗಿ ಜಖಂಗೊಂಡಿದೆ. ಅಲ್ಲದೆ, ಅಪಘಾತಕ್ಕೆ ಸಿಲುಕಿದ ಆಟೋರಿಕ್ಷಾ ಕೂಡ ಜಖಂಗೊಂಡಿದೆ. ಘಟನೆಯಿಂದಾಗಿ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇದು ದೊಡ್ಡ ಅನಾಹುತವನ್ನು ತಪ್ಪಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಬಳ್ಳಾರಿ ನಗರ ಸಂಚಾರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ಕಾರಣವಾದ ನಿಖರ ಕಾರಣಗಳ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link