All posts by nagaraj11081993

ಕತೆ ಕದ್ದ ಆರೋಪಕ್ಕೆ ಡಾರ್ಲಿಂಗ್ ಕೃಷ್ಣ ಸ್ಪಷ್ಟನೆ: ನಟ ಹೇಳಿದ್ದೇನು?

ಕತೆ ಕದ್ದ ಆರೋಪಕ್ಕೆ ಡಾರ್ಲಿಂಗ್ ಕೃಷ್ಣ ಸ್ಪಷ್ಟನೆ: ನಟ ಹೇಳಿದ್ದೇನು?

ಡಾರ್ಲಿಂಗ್ ಕೃಷ್ಣ (Darling Krishna) ನಟಿಸಿರುವ ‘ಲವ್ ಮಾಕ್ಟೆಲ್ 3’ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ‘ಧುರಂಧರ್ 2’ ಮತ್ತು ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಗಳ ಅಬ್ಬರದ ನಡುವೆಯೂ ಸಹ ‘ಲವ್ ಮಾಕ್ಟೆಲ್ 3’ ಯಶಸ್ಸು ಗಳಿಸುತ್ತಿದೆ. ಆದರೆ ಇತ್ತೀಚೆಗೆ ನಿರ್ದೇಶಕ ಗುರು ದೇಶಪಾಂಡೆ ಮತ್ತು ರಾಘವೆಂದ್ರ ನಾಯಕ್ ಅವರುಗಳು ಡಾರ್ಲಿಂಗ್ ಕೃಷ್ಣ ಅವರು ನಮ್ಮ ಕತೆ ಕದ್ದಿದ್ದಾರೆ ಎಂದು ಆರೋಪಿಸಿದ್ದಾರೆ. ಅಪ್ಪ-ಮಗಳ ಬಂಧದ ಬಗ್ಗೆ ಕತೆಯನ್ನು ‘ಲವ್ ಮಾಕ್ಟೆಲ್ 3’ ಸಿನಿಮಾ ಹೊಂದಿದ್ದು, ಸಿನಿಮಾದ ಕತೆಯನ್ನು ಡಾರ್ಲಿಂಗ್ ಕೃಷ್ಣ ಅವರೇ ಬರೆದಿದ್ದಾರೆ. ಆರೋಪ ಬಂದ ಬೆನ್ನಲ್ಲೆ ಇದೀಗ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಅವರುಗಳು ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಡಾರ್ಲಿಂಗ್ ಕೃಷ್ಣ ಹೇಳಿದ್ದೇನು? ವಿಡಿಯೋ ಇಲ್ಲಿದೆ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

KSRTC ಬಸ್ ಬ್ರೇಕ್ ಫೇಲ್; ಆಟೋ, ಹಣ್ಣಿನ ಅಂಗಡಿಗೆ ಡಿಕ್ಕಿ! ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ

ಬಳ್ಳಾರಿ, ಮಾ.25: ನಗರದ ಮೋತಿ ವೃತ್ತದ ಬಳಿ ಕೆಎಸ್ಆರ್ಟಿಸಿ ಸಾರಿಗೆ ಬಸ್ ಅಪಘಾತಕ್ಕೀಡಾಗಿದೆ. ಬಸ್‌ನ ಬ್ರೇಕ್ ಫೇಲ್ ಆದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ. ಬಸ್ ವೇಗವಾಗಿ ಸಾಗಿ, ರಸ್ತೆ ಬದಿಯಲ್ಲಿದ್ದ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ನಂತರ ಹಣ್ಣಿನ ಅಂಗಡಿ, ಟೀ ಅಂಗಡಿ ನುಗ್ಗಿದೆ. ಬಸ್ ಡಿಕ್ಕಿಯಾದ ರಭಸಕ್ಕೆ ಫ್ರೂಟ್ಸ್ ಅಂಗಡಿ ಸಂಪೂರ್ಣವಾಗಿ ಜಖಂಗೊಂಡಿದೆ. ಅಲ್ಲದೆ, ಅಪಘಾತಕ್ಕೆ ಸಿಲುಕಿದ ಆಟೋರಿಕ್ಷಾ ಕೂಡ ಜಖಂಗೊಂಡಿದೆ. ಘಟನೆಯಿಂದಾಗಿ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇದು ದೊಡ್ಡ ಅನಾಹುತವನ್ನು ತಪ್ಪಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಬಳ್ಳಾರಿ ನಗರ ಸಂಚಾರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ಕಾರಣವಾದ ನಿಖರ ಕಾರಣಗಳ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Gold Rates: ಇಳಿಕೆಯ ಹಾದಿ ಬಿಟ್ಟ ಚಿನ್ನದ ಬೆಲೆ; ಇಲ್ಲಿದೆ ಇವತ್ತಿನ ದರಪಟ್ಟಿ

ಬೆಂಗಳೂರು, ಮಾರ್ಚ್ 25: ಸತತವಾಗಿ ಇಳಿಯುತ್ತಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಬುಧವಾರ ಹೆಚ್ಚಳಗೊಂಡಿವೆ. ಚಿನ್ನದ ಬೆಲೆ (Gold Rates) ಗ್ರಾಮ್​ಗೆ ಸುಮಾರು 600 ರೂಗಳಷ್ಟು ಏರಿಕೆ ಪಡೆದಿದೆ. ಆಭರಣ ಚಿನ್ನದ ಬೆಲೆ ಮತ್ತೊಮ್ಮೆ 13,000 ರೂ ಗಡಿ ದಾಟಿದೆ. ಅಪರಂಜಿ ಚಿನ್ನದ ಬೆಲೆ 15,000 ರೂ ಸಮೀಪಕ್ಕೆ ದೌಡಾಯಿಸಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆ ಬೆಲೆ ಏರಿದರೆ, ಕೆಲವೆಡೆ ಇಳಿಮುಖವಾಗಿದೆ. ಬೆಳ್ಳಿ ಬೆಲೆಯೂ ಭರ್ಜರಿ ಏರಿಕೆ ಆಗಿದೆ. ಒಂದು ಗ್ರಾಮ್​ಗೆ 15-20 ರೂಗಳಷ್ಟು ಬೆಲೆ ಜಿಗಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,34,450 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,46,670 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,34,450 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 25,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 26,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮಾರ್ಚ್ 25ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,667 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,445 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,526 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 250 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,667 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,445 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 250 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,445 ರೂ
  • ಚೆನ್ನೈ: 13,600 ರೂ
  • ಮುಂಬೈ: 13,445 ರೂ
  • ದೆಹಲಿ: 13,460 ರೂ
  • ಕೋಲ್ಕತಾ: 13,445 ರೂ
  • ಕೇರಳ: 13,445 ರೂ
  • ಅಹ್ಮದಾಬಾದ್: 13,450 ರೂ
  • ಜೈಪುರ್: 13,460 ರೂ
  • ಲಕ್ನೋ: 13,460 ರೂ
  • ಭುವನೇಶ್ವರ್: 13,445 ರೂ

ಇದನ್ನೂ ಓದಿ: ರಷ್ಯಾದಿಂದ 60 ಮಿಲಿಯನ್ ಬ್ಯಾರಲ್ ಕಚ್ಛಾ ತೈಲ ಖರೀದಿಸಿದ ಭಾರತ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 560 ರಿಂಗಿಟ್ (13,279 ರುಪಾಯಿ)
  • ದುಬೈ: 492.75 ಡಿರಾಮ್ (12,606 ರುಪಾಯಿ)
  • ಅಮೆರಿಕ: 139.50 ಡಾಲರ್ (13,108 ರುಪಾಯಿ)
  • ಸಿಂಗಾಪುರ: 182.70 ಸಿಂಗಾಪುರ್ ಡಾಲರ್ (13,419 ರುಪಾಯಿ)
  • ಕತಾರ್: 490 ಕತಾರಿ ರಿಯಾಲ್ (12,621 ರೂ)
  • ಸೌದಿ ಅರೇಬಿಯಾ: 499 ಸೌದಿ ರಿಯಾಲ್ (12,493 ರುಪಾಯಿ)
  • ಓಮನ್: 52.30 ಒಮಾನಿ ರಿಯಾಲ್ (12,761 ರುಪಾಯಿ)
  • ಕುವೇತ್: 40.31 ಕುವೇತಿ ದಿನಾರ್ (12,350 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 250 ರೂ
  • ಚೆನ್ನೈ: 260 ರೂ
  • ಮುಂಬೈ: 250 ರೂ
  • ದೆಹಲಿ: 250 ರೂ
  • ಕೋಲ್ಕತಾ: 250 ರೂ
  • ಕೇರಳ: 260 ರೂ
  • ಅಹ್ಮದಾಬಾದ್: 250 ರೂ
  • ಜೈಪುರ್: 250 ರೂ
  • ಲಕ್ನೋ: 250 ರೂ
  • ಭುವನೇಶ್ವರ್: 260 ರೂ
  • ಪುಣೆ: 250

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ನಮ್ಮದು ಧುರಂಧರ್ ರೀತಿ ವಯಸ್ಕರ ಸಿನಿಮಾ ಅಲ್ಲ’: ಅಕ್ಷಯ್ ಕುಮಾರ್ ಹೀಗೆ ಹೇಳಿದ್ದು ಯಾಕೆ?

ಬಾಲಿವುಡ್‌ನಲ್ಲಿ ಸದ್ಯ ಆ್ಯಕ್ಷನ್ ಸಿನಿಮಾಗಳದ್ದೇ ಹವಾ. ಆದಿತ್ಯ ಧರ್ ನಿರ್ದೇಶನದ ಮತ್ತು ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಮತ್ತು ಅದರ ಸೀಕ್ವೆಲ್ ‘ಧುರಂಧರ್: ದಿ ರಿವೆಂಜ್’ (Dhurandhar 2) ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿವೆ. ಇಂತಹ ಅಬ್ಬರದ ಆ್ಯಕ್ಷನ್ ಸಿನಿಮಾಗಳ ನಡುವೆ ಅಕ್ಷಯ್ ಕುಮಾರ್ ಅಭಿನಯದ ‘ಭೂತ್ ಬಂಗ್ಲ’ (Bhooth Bangla) ಚಿತ್ರ ಯಾವ ರೀತಿ ವಿಭಿನ್ನವಾಗಿರಲಿದೆ ಎಂಬುದನ್ನು ಸ್ವತಃ ಅಕ್ಷಯ್ ವಿವರಿಸಿದ್ದಾರೆ. ‘ನಮ್ಮದು ಧುರಂಧರ್ ರೀತಿ ಅಡಲ್ಟ್ ಸಿನಿಮಾ ಅಲ್ಲ’ ಎಂದು ಅಕ್ಷಯ್ ಕುಮಾರ್ (Akshay Kumar) ಅವರು ಹೇಳಿದ್ದಾರೆ.

ಇತ್ತೀಚೆಗೆ ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಕ್ಷಯ್ ಕುಮಾರ್, ‘ಧುರಂಧರ್ ಸಿನಿಮಾ ಅದ್ಭುತವಾಗಿದೆ, ನಾನು ಅದನ್ನು ನೋಡಿದ್ದೇನೆ. ಆದರೆ ನಮ್ಮ ಸಿನಿಮಾ ಭೂತ್ ಬಂಗ್ಲ ಸಂಪೂರ್ಣವಾಗಿ ವಿಭಿನ್ನವಾಗಿದೆ. ಧುರಂಧರ್ ವಯಸ್ಕರಿಗಾಗಿ ಮಾಡಿದ ಸಿನಿಮಾ. ಆದರೆ ಭೂತ್ ಬಂಗ್ಲ ಮಕ್ಕಳು ಮತ್ತು ಕುಟುಂಬದವರಿಗಾಗಿ ಮಾಡಲ್ಪಟ್ಟಿದೆ. ನಾವು ಸಿನಿಮಾ ಮಾಡುವಾಗ ಸದ್ಯದ ಟ್ರೆಂಡ್ ಏನಿದೆ ಎಂದು ಯೋಚಿಸಲಿಲ್ಲ. ಕಥೆ ಚೆನ್ನಾಗಿದೆಯೇ ಇಲ್ಲವೇ ಎಂಬುದನ್ನಷ್ಟೇ ಗಮನಿಸಿದ್ದೇವೆ’ ಎಂದಿದ್ದಾರೆ.

ಅನೇಕ ವರ್ಷಗಳ ನಂತರ ನಿರ್ದೇಶಕ ಪ್ರಿಯದರ್ಶನ್ ಮತ್ತು ಅಕ್ಷಯ್ ಕುಮಾರ್ ‘ಭೂತ್ ಬಂಗ್ಲ’ ಸಿನಿಮಾ ಮೂಲಕ ಮತ್ತೆ ಒಂದಾಗಿದ್ದಾರೆ. ಈ ಜೋಡಿ ಈ ಹಿಂದೆ ಹಲವು ಕ್ಲಾಸಿಕ್ ಕಾಮಿಡಿ ಸಿನಿಮಾಗಳನ್ನು ನೀಡಿದೆ. ಪ್ರಿಯದರ್ಶನ್ ಕೂಡ ಅಕ್ಷಯ್ ಮಾತುಗಳಿಗೆ ಧ್ವನಿಗೂಡಿಸಿದ್ದಾರೆ. ‘ಜನರು ಧುರಂಧರ್ ಅಥವಾ ಬಾರ್ಡರ್ 2 ನಂತಹ ಆ್ಯಕ್ಷನ್ ಸಿನಿಮಾಗಳನ್ನು ಇಷ್ಟಪಡುತ್ತಾರೆ. ಆದರೆ ಆ ಗದ್ದಲದ ನಡುವೆ ಒಂದು ವಿರಾಮ ಬೇಕೆನಿಸಿದಾಗ ಭೂತ್ ಬಂಗ್ಲದಂತಹ ಕಾಮಿಡಿ ಸಿನಿಮಾ ಖುಷಿ ನೀಡುತ್ತದೆ’ ಎಂದು ಅವರು ಹೇಳಿದ್ದಾರೆ.

ಪ್ರಿಯದರ್ಶನ್ ಅವರು ತಮ್ಮ ಸಿನಿಮಾಗಳಲ್ಲಿ ಎಂದಿಗೂ ಅಶ್ಲೀಲತೆ ಅಥವಾ ದ್ವಂದ್ವಾರ್ಥದ ಸಂಭಾಷಣೆಗಳನ್ನು ಬಳಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ‘ಯಾವುದೇ ಪೋಷಕರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ನನ್ನ ಸಿನಿಮಾ ನೋಡಬಹುದು. ನಾನು ಎಂದಿಗೂ ಪೋಷಕರು ಮುಜುಗರ ಪಡುವಂತೆ ಸಿನಿಮಾ ಮಾಡುವುದಿಲ್ಲ. ಇದು ಶುದ್ಧ ಮನರಂಜನೆಯ ಚಿತ್ರ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ನೋಡಿ: ರುಂಡ ಇಲ್ಲದ ವ್ಯಕ್ತಿ ಜೊತೆ ಅಕ್ಷಯ್ ಕುಮಾರ್

‘ಭೂತ್ ಬಂಗ್ಲ’ ಚಿತ್ರದಲ್ಲಿ ಅಕ್ಷಯ್ ಕುಮಾರ್ ಜೊತೆಗೆ ಪರೇಶ್ ರಾವಲ್, ರಾಜ್‌ಪಾಲ್ ಯಾದವ್, ಟಬು ಮತ್ತು ವಮಿಕಾ ಗಬ್ಬಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹಳೆಯ ಕಾಮಿಡಿ ಗ್ಯಾಂಗ್ ಮತ್ತೆ ಒಂದಾಗಿರುವುದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಈ ಚಿತ್ರವು ಏಪ್ರಿಲ್ 10ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಆ್ಯಕ್ಷನ್ ಸಿನಿಮಾಗಳ ಅಬ್ಬರದ ನಡುವೆ ಈ ಹಾರರ್-ಕಾಮಿಡಿ ಸಿನಿಮಾ ಪ್ರೇಕ್ಷಕರನ್ನು ಎಷ್ಟು ನಗಿಸಲಿದೆ ಎಂದು ಕಾದು ನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಮ್ಯಾಕ್ಸ್’ ಸಿನಿಮಾ ವಿವಾದ: ಕೆಆರ್​​ಜಿ ಅರ್ಜಿಗೆ ನಿರ್ಮಾಪಕರಿಗೆ ನೊಟೀಸ್

ನಟ ಕಿಚ್ಚ ಸುದೀಪ್ (Sudeep) ನಟನೆಯ ‘ಮ್ಯಾಕ್ಸ್’ ಸಿನಿಮಾ 2024 ರಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ದೊಡ್ಡ ಹಿಟ್ ಆಗಿತ್ತು. ಸಿನಿಮಾಕ್ಕೆ ತಮಿಳಿನ ನಿರ್ಮಾಪಕ ಕಲೈಪುಲಿ ಎಸ್ ತನು ಮತ್ತು ಕಿಚ್ಚ ಸುದೀಪ್ ಇಬ್ಬರೂ ಬಂಡವಾಳ ಹೂಡಿದ್ದರು. ಸಿನಿಮಾವನ್ನು ವಿತರಣೆ ಮಾಡಿದ್ದು ಕೆಆರ್​​ಜಿ ಸ್ಟುಡಿಯೋಸ್. ಆದರೆ ಸಿನಿಮಾ ಬಿಡುಗಡೆ ಆದ ಬಳಿಕ ನಿರ್ಮಾಪಕರು ಮತ್ತು ಕೆಆರ್​​ಜಿ ನಡುವೆ ಹಣಕಾಸಿಗೆ ಸಂಬಂಧಿಸಿದಂತೆ ವಿವಾದ ಭುಗಿಲೆದ್ದಿದ್ದು, ನಿರ್ಮಾಪಕ ಕಲೈಪುಲಿ ತನು ಅವರು ಕೆಆರ್​​​ಜಿ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಆರ್​​ಜಿ ಮನವಿ ಮೇರೆಗೆ ಸಿನಿಮಾದ ನಿರ್ಮಾಪಕರಿಗೆ ಮದ್ರಾಸ್ ಹೈಕೋರ್ಟ್ ನೊಟೀಸ್ ಜಾರಿ ಮಾಡಿದೆ.

ಡಿಸೆಂಬರ್ 16, 2024 ರಂದು ಕಲೈಪುಲಿ ಎಸ್. ತನು ಅವರ ‘ವಿ ಕ್ರಿಯೇಷನ್ಸ್’ ಮತ್ತು ಬೆಂಗಳೂರಿನ ‘ಕೆಆರ್‌ಜಿ ಸ್ಟುಡಿಯೋಸ್’ ನಡುವೆ ‘ಮ್ಯಾಕ್ಸ್’ ಚಿತ್ರದ ಕರ್ನಾಟಕ ವಿತರಣಾ ಹಕ್ಕುಗಳ ಕುರಿತು ಒಪ್ಪಂದವಾಗಿತ್ತು. ಕೆಆರ್‌ಜಿ ಸ್ಟುಡಿಯೋಸ್ ಚಿತ್ರದ ಆದಾಯ ಮತ್ತು ವೆಚ್ಚದ ಸರಿಯಾದ ಲೆಕ್ಕಪತ್ರಗಳನ್ನು ನೀಡಿಲ್ಲ ಮತ್ತು ತಮಗೆ ಬರಬೇಕಾದ ಬಾಕಿ ಹಣವನ್ನು ಪಾವತಿಸಿಲ್ಲ ಎಂದು ಆರೋಪಿಸಿ ತನು ಅವರು ಮದ್ರಾಸ್ ಹೈಕೋರ್ಟ್‌ನಲ್ಲಿ ಸಿವಿಲ್ ಮೊಕದ್ದಮೆ ಹೂಡಿದ್ದರು. ಅಲ್ಲದೆ, 18% ಬಡ್ಡಿಯೊಂದಿಗೆ ಬಾಕಿ ಹಣ ಮತ್ತು 1 ಕೋಟಿ ರೂ. ನಷ್ಟಪರಿಹಾರಕ್ಕೂ ಬೇಡಿಕೆ ಇಟ್ಟಿದ್ದರು. ಅಲ್ಲದೆ, ಈ ವಿವಾದ ಸೆಟಲ್ ಆಗುವವರೆಗೆ ಕೆಆರ್​ಜಿ ಸ್ಟುಡಿಯೋಸ್ ನಿರ್ಮಿಸಿರುವ ‘ಮ್ಯಾಂಗೊ ಪಚ್ಚ’ ಸಿನಿಮಾ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಸಹ ಮನವಿ ಮಾಡಿದ್ದರು.

ಇದನ್ನೂ ಓದಿ:‘ವಾರಣಾಸಿ’ ಸೆಟ್ ಸೇರಲು ರೆಡಿ ಆದ ಸುದೀಪ್​; ಯಾವಾಗ, ಎಷ್ಟು ದಿನ?

ಕೆಆರ್‌ಜಿ ಸ್ಟುಡಿಯೋಸ್ ಈ ಮೊಕದ್ದಮೆಯನ್ನು ಮದ್ರಾಸ್ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಸುವುದನ್ನು ವಿರೋಧಿಸಿತ್ತು. ಒಪ್ಪಂದದ ಪತ್ರವನ್ನು ಬೆಂಗಳೂರಿನಲ್ಲಿ ಖರೀದಿಸಲಾಗಿತ್ತು, ಒಪ್ಪಂದ ನಡೆದಿದ್ದು ಸಹ ಕರ್ನಾಟಕದಲ್ಲಿಯೇ. ಚಿತ್ರವು ಪ್ರಮುಖವಾಗಿ ಕನ್ನಡ ಭಾಷೆಯದ್ದಾಗಿದೆ. ಒಪ್ಪಂದದ ಪ್ರಕಾರ ಯಾವುದೇ ವಿವಾದವಿದ್ದರೂ ಅದು ಬೆಂಗಳೂರಿನ ನ್ಯಾಯಾಲಯಗಳ ವ್ಯಾಪ್ತಿಗೆ ಬರಬೇಕು ಎಂದು ಕೆಆರ್​ಜಿ ಒತ್ತಾಯಿಸಿದೆ. ವಿಚಾರಣೆಯ ಸಂದರ್ಭದಲ್ಲಿ ಒಂದು ಕುತೂಹಲಕಾರಿ ಅಂಶ ಬೆಳಕಿಗೆ ಬಂದಿತು. ಒಪ್ಪಂದದ ಪತ್ರದಲ್ಲಿ ‘ಬೆಂಗಳೂರು’ ಎಂಬ ಪದವನ್ನು ಹೊಡೆದು ಹಾಕಿ ಅದರ ಜಾಗದಲ್ಲಿ ‘ಚೆನ್ನೈ’ ಎಂದು ಬರೆಯಲಾಗಿತ್ತು. ಇದರ ಪಕ್ಕದಲ್ಲಿ ಕಲೈಪುಲಿ ತನು ಅವರ ಸಹಿ ಇತ್ತಾದರೂ, ಕೆಆರ್‌ಜಿ ಸ್ಟುಡಿಯೋಸ್ ಪ್ರತಿನಿಧಿಗಳ ಸಹಿ ಇರಲಿಲ್ಲ. ಈ ಬದಲಾವಣೆಯನ್ನು ತಮಗೆ ತಿಳಿಸದೆ ಮಾಡಲಾಗಿದೆ ಎಂದು ಕೆಆರ್‌ಜಿ ಸ್ಟುಡಿಯೋಸ್ ವಾದಿಸಿತ್ತು.

ನ್ಯಾಯಮೂರ್ತಿ ಸೆಂಥಿಲ್‌ಕುಮಾರ್ ರಾಮಮೂರ್ತಿ ಅವರು ಕೆಆರ್‌ಜಿ ಸ್ಟುಡಿಯೋಸ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದರು. ಒಪ್ಪಂದದ ಪ್ರಕಾರ ಹಣವನ್ನು ಚೆನ್ನೈನಲ್ಲಿರುವ ಕಲೈಪುಲಿ ಎಸ್ ತನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕಿರುವುದರಿಂದ, ವಿವಾದದ ಒಂದು ಭಾಗ ಚೆನ್ನೈನಲ್ಲಿ ನಡೆದಂತಾಗುತ್ತದೆ. ಹೀಗಾಗಿ ಮದ್ರಾಸ್ ಹೈಕೋರ್ಟ್‌ನಲ್ಲಿ ಈ ಕೇಸ್ ನಡೆಸಲು ಅವಕಾಶ ನೀಡಿದರು. ಆದರೆ ಇದನ್ನು ವಿರೋಧಿಸಿ ಕೆಆರ್​​ಜಿ ಈಗ ಅರ್ಜಿ ಹಾಕಿದ್ದು, ಇದಕ್ಕೆ ಸಂಬಂಧಿಸಿದಂತೆ ಕಲೈಪುಲಿ ಅವರಿಗೆ ನೊಟೀಸ್ ನೀಡಲಾಗಿದೆ. ಮುಂದಿನ ವಿಚಾರಣೆಯನ್ನು ಏಪ್ರಿಲ್ 6ಕ್ಕೆ ನಿಗದಿಪಡಿಸಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮನೆಯಲ್ಲಿ ಪಿಎನ್​ಜಿ ಕನೆಕ್ಷನ್ ಇದ್ದರೂ ಬಳಸದಿದ್ದರೆ ಎಲ್​ಪಿಜಿ ಪೂರೈಕೆ ಸ್ಥಗಿತ; ಸರ್ಕಾರದಿಂದ ಎಚ್ಚರಿಕೆ

ನವದೆಹಲಿ, ಮಾರ್ಚ್ 25: ಕೇಂದ್ರ ಸರ್ಕಾರ ಅಗತ್ಯವಿರುವಷ್ಟು ಇಂಧನ ಹಾಗೂ ಎಲ್​ಪಿಜಿ ಸಂಗ್ರಹವಿದೆ ಎಂದು ಹೇಳಿಕೆ ನೀಡುತ್ತಿದ್ದರೂ ಎಲ್​ಪಿಜಿ (LPG) ಬುಕ್ ಮಾಡಿದ ಹಲವು ದಿನಗಳ ಬಳಿಕ ಸಿಲಿಂಡರ್​ಗಳು ಸಿಗುತ್ತಿವೆ. ಇದೆಲ್ಲದರ ನಡುವೆ ಸರ್ಕಾರ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಒಂದುವೇಳೆ ನಿಮ್ಮ ಮನೆಯಲ್ಲಿ ಪೈಪ್ಡ್ ಗ್ಯಾಸ್ (ಪಿಎನ್​ಜಿ) ಕನೆಕ್ಷನ್ ಇದ್ದರೂ ನೀವು ಅದನ್ನು ಬಳಸದಿದ್ದರೆ ನಿಮ್ಮ ಎಲ್​ಪಿಜಿ ಪೂರೈಕೆ ಕೂಡ ಕಟ್ ಆಗುತ್ತದೆ. ಪಿಎನ್​ಜಿ ಹಾಗೂ ಎಲ್​ಪಿಜಿ ಎರಡನ್ನೂ ಬಳಸುವಂತಿಲ್ಲ ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ನಿಮ್ಮ ಏರಿಯಾದಲ್ಲಿ ಪೈಪ್​ಲೈನ್ ಇದ್ದರೂ ನೀವು ಸಂಪರ್ಕ ಪಡೆಯದಿದ್ದರೆ 3 ತಿಂಗಳೊಳಗೆ ಸಂಪರ್ಕ ಪಡೆಯಲು ಗಡುವು ನೀಡಲಾಗಿದೆ. ಈ ಕುರಿತು ನೋಟಿಸ್ ಮೂಲಕ ಆ ಮನೆಯ ಗಮನಕ್ಕೆ ತಂದ 3 ತಿಂಗಳ ನಂತರ ಆ ಮನೆಗಳಿಗೆ ಎಲ್​ಪಿಜಿ ಪೂರೈಕೆಯನ್ನು ನಿಲ್ಲಿಸಲಾಗುತ್ತದೆ.

ಗ್ರಾಹಕರು ಪೈಪ್ಡ್ ನೈಸರ್ಗಿಕ ಅನಿಲ (PNG)ದ ಕನೆಕ್ಷನ್ ಇದ್ದರೂ ಬಳಸದಿದ್ದರೆ 3 ತಿಂಗಳ ನಂತರ ಆ ಮನೆಗಳಿಗೆ LPG ಸಿಲಿಂಡರ್‌ಗಳ ಪೂರೈಕೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಸರ್ಕಾರಿ ಆದೇಶದಲ್ಲಿ ತಿಳಿಸಲಾಗಿದೆ. ಪೈಪ್‌ಲೈನ್ ಗ್ಯಾಸ್ ಜಾಲದ ವಿಸ್ತರಣೆಯನ್ನು ವೇಗಗೊಳಿಸಲು ಮತ್ತು ಒಂದೇ ಇಂಧನ ಮೂಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ: ಪ್ರವಾಸೋದ್ಯಮಕ್ಕೂ ತಟ್ಟಿದ LPG ಅಭಾವ: ಕರಾವಳಿ ಖಾದ್ಯಗಳಿಗೆ ಬ್ರೇಕ್; ಪ್ರವಾಸಿಗರಿಗೆ ನಿರಾಶೆ​

ಮನೆಗಳು ಮತ್ತು ವಾಣಿಜ್ಯ ಸಂಸ್ಥೆಗಳು PNG ಅನ್ನು ಅಳವಡಿಸಿಕೊಳ್ಳಲು ಸರ್ಕಾರ ಪ್ರೋತ್ಸಾಹಿಸುತ್ತಿದೆ. ಇದನ್ನು ಪೈಪ್‌ಲೈನ್‌ಗಳ ಮೂಲಕ ಅಡುಗೆಮನೆಯ ಬರ್ನರ್‌ಗಳಿಗೆ ನೇರವಾಗಿ ಸರಬರಾಜು ಮಾಡಲಾಗುತ್ತದೆ. ಇದು ಗ್ಯಾಸ್ ಬುಕಿಂಗ್ ರೀಫಿಲ್ಲಿಂಗ್ ಅಗತ್ಯವನ್ನು ನಿವಾರಿಸುತ್ತದೆ. ಪೈಪ್‌ಲೈನ್‌ಗಳಿಲ್ಲದ ಪ್ರದೇಶಗಳಿಗೆ LPG ಅನ್ನು ಪೂರೈಕೆ ಮಾಡಲಾಗುತ್ತದೆ.

ಇದನ್ನೂ ಓದಿ: ಗ್ಯಾಸ್​ ಬುಕಿಂಗ್ ಆಗುತ್ತಿಲ್ಲವೇ? ವಾಟ್ಸಾಪ್ ಮೂಲಕ ಸುಲಭವಾಗಿ LPG ಬುಕ್ ಮಾಡುವುದು ಹೇಗೆ?

ಪೈಪ್‌ಲೈನ್‌ಗಳನ್ನು ಹಾಕಲು ಅನುಮತಿಗಳನ್ನು ಇನ್ನು ನಿಗದಿತ ಸಮಯದೊಳಗೆ ನೀಡಬೇಕು. ಒಂದುವೇಳೆ ನೀವು ಅನುಮತಿ ನೀಡದಿದ್ದರೆ ಅವುಗಳನ್ನು ಅನುಮೋದಿಸಲಾಗಿದೆ ಎಂದೇ ಪರಿಗಣಿಸಲಾಗುತ್ತದೆ. ಅಧಿಕಾರಿಗಳು ಸೂಚಿಸಿದ ಶುಲ್ಕಗಳನ್ನು ಮೀರಿ ಹೆಚ್ಚುವರಿ ಶುಲ್ಕಗಳನ್ನು ವಿಧಿಸುವುದನ್ನು ನಿಷೇಧಿಸಲಾಗಿದೆ. ವಸತಿ ಸಂಕೀರ್ಣಗಳಲ್ಲಿ 3 ಕೆಲಸದ ದಿನಗಳಲ್ಲಿ ಒಳಗೆ ಪ್ರವೇಶವನ್ನು ನೀಡಬೇಕು, ಪಿಎನ್​ಜಿಗೆ ಸಂಬಂಧಿಸಿದ ಯಾವುದೇ ಅರ್ಜಿಗಳನ್ನು ತಿರಸ್ಕರಿಸುವಂತಿಲ್ಲ ಎಂದು ಕೂಡ ಸರ್ಕಾರ ಆದೇಶಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಾಸಕರ ಫೋಟೋಶೂಟ್ ಬಗ್ಗೆ ಭಾರೀ ಚರ್ಚೆ: ಕಾಶಪ್ಪನವರ್ ಏನಂದ್ರು ನೋಡಿ!

ಬೆಂಗಳೂರು, (ಮಾರ್ಚ್ 25): ರಾಜ್ಯ ಸರ್ಕಾರದ ಅವಧಿ ಇನ್ನೂ ಎರಡು ವರ್ಷ ಬಾಕಿ ಇರುವಾಗಲೇ ವಿಧಾನಸೌಧದಲ್ಲಿ ಶಾಸಕರ ಫೋಟೋ ಶೂಟ್ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಅನಿರೀಕ್ಷಿತ ಬೆಳವಣಿಗೆಯು ಸಿಎಂ ಬದಲಾವಣೆ, ಸ್ಪೀಕರ್ ಬದಲಾವಣೆ ಅಥವಾ ಸಂಪುಟ ಪುನರ್‌ರಚನೆಯ ಮುನ್ಸೂಚನೆಯೇ ಎಂಬ ಗೊಂದಲ ಮತ್ತು ಅನುಮಾನಗಳನ್ನು ಶಾಸಕರಲ್ಲಿ ಹುಟ್ಟುಹಾಕಿದೆ. ಇನ್ನು ಈ ಬಗ್ಗೆ ಕಾಂಗ್ರೆಸ್ ಶಾಸಕ ವಿಜಯನಂದ ಕಾಶಪ್ಪನವರ್ ಪ್ರತಿಕ್ರಿಯಿಸಿದ್ದು, ಸಂಪುಟ ಪುನರ್​ ರಚನೆಯಾಗುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಅವಧಿಗೂ ಮುನ್ನವೇ ಫೋಟೋ ಶೂಟ್ ಬಗ್ಗೆ ಭಾರೀ ಚರ್ಚೆ: ಸಿಎಂ ಬದಲಾವಣೆಯೋ? ಸ್ಪೀಕರ್ ಚೇಂಜ್? ಸಂಪುಟ ಪುನರ್ ರಚನೆಯೋ?

Source link

ಲ್ಯಾಂಬೋರ್ಗಿನಿ ಕಾರು ಜಪ್ತಿ ಮಾಡಿದ ಸಾರಿಗೆ ಅಧಿಕಾರಿಗಳಿಗೆ ಹೈಕೋರ್ಟ್ ಶಾಕ್: 1 ವಾರದಲ್ಲಿ ಕಾರು ಹಿಂದಿರುಗಿಸಿ

ಬೆಂಗಳೂರು, ಮಾ.24: ಮನೆಯ ಕಾರಿನ ಶೆಡ್​​​​ನಲ್ಲಿದ್ದ ವಿಲಾಸಿ ಲ್ಯಾಂಬೋರ್ಗಿನಿ ಕಾರನ್ನು ಕಾನೂನು ಬಾಹಿರವಾಗಿ ಜಪ್ತಿ ಮಾಡಿದ್ದ ಸಾರಿಗೆ ಇಲಾಖೆಯ ಕ್ರಮಕ್ಕೆ ಕರ್ನಾಟಕ ಹೈಕೋರ್ಟ್ (Karnataka High Court) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಎಫ್‌ಐಆರ್ ಅನ್ನು ರದ್ದುಗೊಳಿಸಿರುವ ನ್ಯಾಯಾಲಯ, ಒಂದು ವಾರದಲ್ಲಿ ಕಾರನ್ನು ಮಾಲೀಕರಿಗೆ ಹಿಂದಿರುಗಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದೆ.

ರಾತ್ರಿ ವೇಳೆಯಲ್ಲಿ ಅರ್ಜಿದಾರರ ಮನೆಯ ಕಾರಿನ ಶೆಡ್​​​ಗೆ ನುಗ್ಗಿ ಕಾರನ್ನು ಸೀಜ್ ಮಾಡಿದ ವಿಧಾನವನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ತರಾಟೆಗೆ ತೆಗೆದುಕೊಂಡಿದೆ. ಇದು ಕಾನೂನಿನ ಉಲ್ಲಂಘನೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಹೈ ಕಾರ್ ಕೇರ್’ ಮಾಲೀಕ ಜೆ. ರಾಮಕೃಷ್ಣಯ್ಯ ವಿರುದ್ಧ ಕಾರು ನೋಂದಣಿ ಸಂಬಂಧ ದಾಖಲಾಗಿದ್ದ ಎಫ್‌ಐಆರ್ ಅನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಇದನ್ನೂ ಓದಿ: ಅಪ್ರಾಪ್ತರ ಮದ್ಯಪಾನಕ್ಕೆ ಹೈಕೋರ್ಟ್ ಬ್ರೇಕ್! ವಯಸ್ಸಿನ ಪರೀಕ್ಷೆ ಕಡ್ಡಾಯ, ನಿಯಮ ಉಲ್ಲಂಘಿಸಿದ್ರೆ ಯಾರಿಗೆ ಶಿಕ್ಷೆ?

ಸಾರಿಗೆ ಅಧಿಕಾರಿಗಳು ಎಷ್ಟೇ ಉತ್ತಮರಾಗಿದ್ದರೂ ತಮ್ಮ ಕರ್ತವ್ಯವನ್ನು ಕಾನೂನಿನ ಚೌಕಟ್ಟಿನಲ್ಲೇ ನಿರ್ವಹಿಸಬೇಕು. ಈ ಪ್ರಕರಣದಲ್ಲಿ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಇಲಾಖಾ ತನಿಖೆ ನಡೆಸುವಂತೆ ನ್ಯಾಯಾಲಯ ಸೂಚನೆ ನೀಡಿದೆ. ಮುಟ್ಟುಗೋಲು ಹಾಕಿಕೊಳ್ಳಲಾದ ಲ್ಯಾಂಬೋರ್ಗಿನಿ ಕಾರನ್ನು ಮುಂದಿನ ಒಂದು ವಾರದೊಳಗೆ ಮಾಲೀಕರಿಗೆ ಹಸ್ತಾಂತರಿಸಬೇಕು ಎಂದು ಆದೇಶಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಾರಣಾಸಿಯನ್ನೇ ಮರುಸೃಷ್ಟಿಸಿದ ರಾಜಮೌಳಿ; ಫೋಟೋ ವೈರಲ್

ಮಹೇಶ್ ಬಾಬು ಹಾಗೂ ಎಸ್​​ಎಸ್​ ರಾಜಮೌಳಿ ಒಟ್ಟಾಗಿ ‘ವಾರಣಾಸಿ’ (Varanasi) ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರ್ದೇಶಕರು ಬಿಟ್ಟುಕೊಟ್ಟಿಲ್ಲ. ಈಗ ಹೈದರಾಬಾದ್​ ಅಲ್ಲಿ ಅವರು ವಾರಣಾಸಿ ನಗರವನ್ನೇ ಧರೆಗಿಳಿಸಿದ್ದಾರೆ. ಅಲ್ಲಿ ಸಿನಿಮಾದ ಶೂಟ್ ಮಾಡಲಾಗುತ್ತಿದೆ. ತುಂಬಾನೇ ಕಟ್ಟುನಿಟ್ಟಾಗಿ ಸಿನಿಮಾ ಮಾಡಲಾಗುತ್ತಿದೆ. ಕಠಿಣ ನಿಯಮಕ್ಕೆ ಈ ಹಿಂದೆ ರಾಜಮೌಳಿ ಮಾಡಿದ ತಪ್ಪೇ ಕಾರಣ ಎಂದು ಹೇಳಲಾಗುತ್ತಿದೆ.

ರಾಜಮೌಳಿ ಅವರು ಎಲ್ಲಾ ವಿಷಯಗಳನ್ನು ಗುಟ್ಟಾಗಿ ಇಡಲು ಇಷ್ಟಪಡುತ್ತಾರೆ. ಯಾವುದೇ ಘೋಷಣೆ ಇದ್ದರೂ ಅದನ್ನು ಸರಿಯಾದ ಸಮಯಕ್ಕೆ, ಅದ್​ದೂರಿಯಾಗಿ ಮಾಡಬೇಕು ಎಂಬುದು ಅವರ ಉದ್ದೇಶ. ‘ವಾರಣಾಸಿ’ ವಿಷಯದಲ್ಲೂ ಹಾಗೆಯೇ ಮಾಡಬೇಕು ಎಂದುಕೊಂಡಿದ್ದರು. ಆದರೆ, ಹಾಗಾಗಿಲ್ಲ. ಮೊದಲ ಹಂತದ ಶೂಟ್ ವೇಳೆ ಮಹೇಶ್​ ಬಾಬು, ಪೃಥ್ವಿರಾಜ್​ ಸುಕುಮಾರ್ ವಿಡಿಯೋಗಳು ಲೀಕ್ ಆದವು. ಆ ಬಳಿಕ ಎಚ್ಚೆತ್ತುಕೊಂಡಿರೋ ಅವರು, ತುಂಬಾನೇ ಸ್ಟ್ರಿಕ್ಟ್ ಆಗಿ ನಡೆದುಕೊಳ್ಳುತ್ತಿದ್ದಾರೆ. ಆದರೂ ಫೋಟೋ ಲೀಕ್ ಆಗಿದೆ.

ಟೀಸರ್ ಲಾಂಚ್ ವೇಳೆ ಅನೇಕ ಅಂತಾರಾಷ್ಟ್ರೀಯ ಪತ್ರಕರ್ತನ್ನು ಕರೆಸಲಾಗಿತ್ತು. ಅವರೆಲ್ಲರಿಗೂ ಸಿನಿಮಾ ಸೆಟ್​​​ಗೆ ಭೇಟಿ ಕೊಡಿಸಲಾಗಿತ್ತು. ಆದರೆ, ಅಲ್ಲಿ ಯಾವುದೇ ಲೀಕ್ ಆಗದಂತೆ ಕಠಿಣ ಕ್ರಮ ಕೈಗೊಂಡಿತ್ತು. ಈ ಅವಧಿಯಲ್ಲಿ ಯಾವುದೇ ಟೀಸರ್​ ಆಗಲೀ, ವಿಡಿಯೋ ಆಗಲಿ ಲೀಕ್ ಆಗಿರಲಿಲ್ಲ. ಈಗ ಸೋಶಿಯಲ್ ಮೀಡಿಯಾದಲ್ಲಿ ‘ವಾರಣಾಸಿ’ ಸೆಟ್ ಫೋಟೋ ಎಂದು ಕೆಲವು ಫೋಟೋಗಳು ಲೀಕ್ ಆಗಿವೆ.

ಇದನ್ನೂ ಓದಿ: ‘ವಾರಣಾಸಿ’ ಸೆಟ್ ಸೇರಲು ರೆಡಿ ಆದ ಸುದೀಪ್​; ಯಾವಾಗ, ಎಷ್ಟು ದಿನ?

ಸದ್ಯ ವಾರಣಾಸಿಯ ದೇವಸ್ಥಾನ, ಸೆಟ್​​​ನ ಮ್ಯಾಪ್ ಎಲ್ಲವೂ ಲೀಕ್ ಆಗಿವೆ. ವಾರಣಾಸಿಯಲ್ಲೇ ಹೋಗಿ ಶೂಟ್ ಮಾಡಬೇಕು ಎಂದರೆ ಅದು ಅಸಾಧ್ಯವಾದ ಮಾತು. ಈ ಕಾರಣದಿಂದ ವಾರಣಾಸಿ ನಗರವನ್ನು ರೀಕ್ರಿಯೇಟ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅವಧಿಗೂ ಮುನ್ನವೇ ಫೋಟೋ ಶೂಟ್ ಬಗ್ಗೆ ಭಾರೀ ಚರ್ಚೆ: ಸಿಎಂ ಬದಲಾವಣೆಯೋ? ಸ್ಪೀಕರ್ ಚೇಂಜ್? ಸಂಪುಟ ಪುನರ್ ರಚನೆಯೋ?

ಬೆಂಗಳೂರು, (ಮಾರ್ಚ್ 25): ಸರ್ಕಾರದ (Karnataka Government) ಅವಧಿ ಇನ್ನೂ ಎರಡು ವರ್ಷ ಬಾಕಿ ಇರುವಾಗಲೇ ವಿಧಾನಸೌಧದಲ್ಲಿ ಶಾಸಕರ ಗ್ರೂಪ್ ಫೋಟೋ ಶೂಟ್ (MLAs Group photoshoot) ನಡೆದಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಯಾಕಂದ್ರೆ, ಸಾಮಾನ್ಯವಾಗಿ ವಿಧಾನಸಭೆ ಅವಧಿ ಮುಕ್ತಾಯಗೊಳ್ಳುವ ಸಂದರ್ಭದಲ್ಲಿ ಸ್ಪೀಕರ್ ಸಮ್ಮುಖದಲ್ಲಿ ಶಾಸಕರ ಗ್ರೂಪ್ ಫೋಟೋ ತೆಗೆದುಕೊಳ್ಳುವುದು ಸಂಪ್ರದಾಯವಾಗಿದೆ. ಆದ್ರೆ, ಅವಧಿಗೂ ಮುನ್ನವೇ ಸ್ಫೀಕರ್ ಯುಟಿ ಖಾದರ್,  (UT Khader)ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಮುಂಭಾಗದಲ್ಲಿ ಶಾಸಕರ ಫೋಟೋ ಶೂಟ್ ಮಾಡಿಸಿರುವುದು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ. ಈ ಅನಿರೀಕ್ಷಿತ ಬೆಳವಣಿಗೆಯು ಸಿಎಂ ಬದಲಾವಣೆ, ಸ್ಪೀಕರ್ ಬದಲಾವಣೆ ಅಥವಾ ಸಂಪುಟ ಪುನರ್‌ರಚನೆಯ ಮುನ್ಸೂಚನೆಯೇ ಎಂಬ ಗೊಂದಲ ಮತ್ತು ಅನುಮಾನಗಳನ್ನು ಶಾಸಕರಲ್ಲಿ ಹುಟ್ಟುಹಾಕಿದೆ. ಹೌದು.. ಶೀಘ್ರದಲ್ಲೇ ಸಂಪುಟಕ್ಕೆ ಸರ್ಜರಿಯಾಗಲಿದ್ದು, ಸ್ಪೀಕರ್ ಖಾದರ್‌ ಅವರು ಸಹ ಸಂಪುಟ ಸೇರುವ ಸಾಧ್ಯತೆಯಿದ ಹೀಗಾಗಿಯೇ ವಿಧಾನಸಭೆ ಮುಕ್ತಾಯಕ್ಕೂ ಮೊದಲೇ ಫೋಟೋ ಶೂಟ್‌ ಮಾಡಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಅವಧಿಗೂ ಮುನ್ನವೇ 16 ವಿಧಾನಸಭೆಯ ಸದಸ್ಯರ ಗ್ರೂಪ್ ಫೋಟೋ ಹಿಂದಿನ ಮರ್ಮ ಏನು ಎನ್ನುವ ಬಗ್ಗೆ ಶಾಸಕರಲ್ಲಿಯೂ ಗೊಂದಲ ಉಂಟಾಗಿದೆ. ವಿಧಾನಸೌಧದ ಪಡಸಾಲೆಗಳಲ್ಲಿ ಕೂಡ ಇದೇ ವಿಚಾರ ಚರ್ಚೆಗೆ ಗ್ರಾಸವಾಗಿದ್ದು, ಪರಸ್ಪರ ಶಾಸಕರು ಕಾರಣಗಳನ್ನು ಊಹಿಸುತ್ತಿದ್ದಾರೆ. ಫೋಟೋ ಶೂಟ್ ಹಿಂದೆ ಏನಾದರೂ ರಾಜಕೀಯ ಸಂದೇಶವಿದೆಯೇ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.

ಇದನ್ನೂ ನೋಡಿ: ಸಿಎಂ, ಡಿಸಿಎಂ ಜೊತೆ ಸಚಿವರ ಜೊತೆ ಶಾಸಕರ ಫೋಟೋಶೂಟ್ ಹೇಗಿತ್ತು ನೋಡಿ!

ಫೋಟೋ ಶೂಟ್ ಬಗ್ಗೆ ಬಿಸಿಬಿಸಿ ಚರ್ಚೆ

ವಿಧಾನಸೌಧದ ಒಳಗಡೆ, ವಿಶೇಷವಾಗಿ ಪಡಸಾಲೆಗಳಲ್ಲಿ, ಈ ವಿಷಯವೇ ಪ್ರಮುಖ ಚರ್ಚೆಯಾಗಿದ್ದು, ಶಾಸಕರು ಪರಸ್ಪರ ತಮ್ಮದೇ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಧಿಕೃತವಾಗಿ ಯಾವುದೇ ಸ್ಪಷ್ಟನೆ ಸಿಗದಿರುವುದರಿಂದ ಈ ಎಲ್ಲಾ ಪ್ರಶ್ನೆ ಗೊಂದಲ ಅನುಮಾನಗಳು ಹೆಚ್ಚುತ್ತಿದೆ

ಕೆಲವರು ಈ ಬೆಳವಣಿಗೆಯನ್ನು ಮುಖ್ಯಮಂತ್ರಿ ಬದಲಾವಣೆಯ ಮುನ್ಸೂಚನೆ ಎಂದು ವ್ಯಾಖ್ಯಾನಿಸುತ್ತಿದ್ದಾರೆ. ಸಿಎಂ ಬದಲಾವಣೆ ಸಂಭವಿಸಿದರೆ, ಸಂಪುಟದಲ್ಲಿ ಹಾಗೂ ವಿವಿಧ ಹುದ್ದೆಗಳಲ್ಲಿ ಮಹತ್ತರ ಬದಲಾವಣೆಗಳು ಸಂಭವಿಸಬಹುದು. ಇದೇ ಕಾರಣಕ್ಕಾಗಿ ಮುಂಚಿತವಾಗಿ ನೆನಪಿಗಾಗಿ ಫೋಟೋ ಶೂಟ್ ನಡೆಸಲಾಗಿದೆಯೇ ಎಂಬ ಪ್ರಶ್ನೆಗಳು ಉದ್ಭವಿಸಿವೆ.

ಇನ್ನೂ ಕೆಲವರು ಇದು ಸ್ಪೀಕರ್ ಬದಲಾವಣೆ ಅಥವಾ ಸಂಪುಟ ಪುನರ್‌ರಚನೆಗೆ ಮುನ್ನ ನಡೆಯುವ ಸಿದ್ಧತೆಯಾಗಿರಬಹುದೇ ಎಂಬ ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಸಂಪುಟ ಪುನಾರಚನೆಯಲ್ಲಿ ಸ್ಪೀಕರ್ ಯುಟಿ ಖಾದರ್​​ಗೆ ಸಚಿವ ಸ್ಥಾನ ನೀಡುವ ಬಗ್ಗೆ ಹೈಕಮಾಂಡ್ ಸಹ ಗ್ರೀನ್ ಸಿಗ್ನಲ್ ಕೊಟ್ಟಿರುವ ಸಾಧ್ಯತೆಗಳಿವೆ. ಹೀಗಾಗಿ ಸಚಿವ ಸಂಪುಟ ಪುನರ್‌ರಚನೆ ಬಗ್ಗೆ ಸ್ಪೀಕರ್‌ಗೆ ಮುನ್ಸೂಚನೆ ಸಿಕ್ಕಿರುವುದರಿಂದಲೇ ಈ ಫೋಟೋ ಶೂಟ್ ಮಾಡಿಸಿದ್ದಾರೆಯೇ ಎಂಬ ಮಾತುಗಳು ಸಹ ಕೇಳಿಬರುತ್ತಿವೆ.

ಸಂಪುಟ ಪುನಾರಚನೆಗೆ ತೀವ್ರ ಒತ್ತಡ

ರಾಜ್ಯ ಸರ್ಕಾರದ ಸಂಪುಟ ಪುನರ್‌ರಚನೆ ಚರ್ಚೆ ನಡೆಯುತ್ತಿದೆ. ಈಗಾಗಲೇ ಆಕಾಂಕ್ಷಿಗಳು ಸಭೆಗಳನ್ನು ನಡೆಸಿ ಸಂಪುಟ ಪುನರ್‌ರಚನೆಗೆ ಒತ್ತಡ ಹೇರುತ್ತಿದ್ದಾರೆ. ಹೈಕಮಾಂಡ್ ನಾಯಕರಿಗೆ ಪತ್ರವನ್ನು ಬರೆದಿದ್ದು, ಮೊದಲ ಬಾರಿ ಶಾಸಕರಾಗಿರುವವರು ನಮಗೆ ಸಂಪುಟದಲ್ಲಿ ಅವಕಾಶ ನೀಡಬೇಕು ಎಂದು ಕೇಳಿಕೊಂಡಿದ್ದಾರೆ‌. ಅಲ್ಲದೇ ಎರಡು ವರ್ಷ ಪೂರ್ಣಗೊಳಿಸಿರುವ ಸಚಿವರನ್ನು ಬಿಟ್ಟು ಇನ್ನುಳಿದ ಎರಡುವರೆ ವರ್ಷ ಅವಧಿಗೆ ಬೇರೆಯವರನ್ನ ಸಚಿವರನ್ನಾಗಿ ಮಾಡಬೇಕೆನ್ನುವುದು ಆಕಾಂಕ್ಷಿಗಳು ಪಟ್ಟು ಹಿಡಿದಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆಯೇ ಸ್ಪೀಕರ್ ಯು.ಟಿ ಖಾದರ್ ಅವರು ಶಾಸಕರ ಫೋಟೋಶೂಟ್ ನಡೆಸಿದ್ದಾರೆ.

ವಿಪಕ್ಷದ ಶಾಸಕರಿಂದ ನಾನಾ ವ್ಯಾಖ್ಯಾನ

ವಿಪಕ್ಷದ ಕೆಲವು ಶಾಸಕರು ಫೋಟೋ ಶೂಟ್ ಬಗ್ಗೆ ನಾನಾ ವ್ಯಾಖ್ಯಾನ ನೀಡುತ್ತಿದ್ದಾರೆ. ಹೌದು..ಅವಧಿ ದಿಢೀರ್ ಆಗಿ ಸ್ಪೀಕರ್ ಫೋಟೋ ಶೂಟ್ ಮಾಡಿಸಿಕೊಂಡ ಉದ್ದೇಶ ಏನು ಎಂಬುವುದು ಕುತೂಹಲವಾಗಿದೆ. ಇದು ಸಂಪುಟ ಪುನಾರಚನೆ ಆಗಲಿದೆ ಎಂಬ ಸುಳಿವು ಆಗಿರಬಹುದು ಎನ್ನುತ್ತಾರೆ.ಇನ್ನು ಈ ಬಗ್ಗೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.  ಈ ಕುರಿತು ವಿಪಕ್ಷ ಬಿಜೆಪಿ ಸಹ ಟ್ವೀಟ್ ಮಾಡಿದ್ದು, ಇದು ಸಿಎಂ ಸಿದ್ದರಾಮಯ್ಯ ಔಟ್​ಗೋಯಿಂಗ್ ಫೋಟೋಶೂಟ್ ಅಲ್ವಾ? ಎಂದು ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸಿ ಪೋಸ್ಟ್ ಮಾಡಿದೆ.

ಗ್ರೂಪ್ ಫೋಟೋಗೆ 3 ಕಾರಣ ಕೊಟ್ಟ ಬಿಜೆಪಿ ಶಾಸಕ

ಕರ್ನಾ ಟಕ ವಿಧಾನಸಭೆಯ ಸಭಾಧ್ಯಕ್ಷರು  ಯು. ಟಿ.ಖಾದರ್ ತಮ್ಮ ಅವಧಿಯಲ್ಲಿ ವಿಶಿಷ್ಟ ಕೆಲಸಗಳನ್ನು ಮಾಡುವುದರಲ್ಲಿ ಇವರಿಗೆ ವಿಪರೀತ ಉಮೇದು. ರಾಜ್ಯದ ಮಾಜಿ ಧೀಮಂತ ಮುಖ್ಯಮಂತ್ರಿ ದಿವಂಗತ ಕೆಂಗಲ್ ಹನುಮಂತಯ್ಯನವರು 50 ರ ದಶಕದಲ್ಲಿ ಕೇವಲ  1.50 ಕೋಟಿ ಹಣದಲ್ಲಿ ನಿರ್ಮಿಸಿದ ಭವ್ಯ ವಿಧಾನಸೌಧಕ್ಕೆ 84 ಲಕ್ಷ ರೂ. ವೆಚ್ಚದಲ್ಲಿ ಹೊಸ ಬಾಗಿಲನ್ನು ನಿರ್ಮಿಸಿದ ಹೆಗ್ಗಳಿಕೆ ನಮ್ಮ ಈ ಸಭಾಧ್ಯಕ್ಷರದ್ದು. ಹಳೆಯ ಬಾಗಿಲು ಹಾಳಾಗಿ ಹೋಗಿತ್ತೇ? ಶಿಥಿಲವಾಗಿತ್ತೇ? ಗೆದ್ದಲು ತಿಂದಿತ್ತೇ? ಅಥವಾ ಯಾರಾದರೂ ಬಾಗಿಲು ಹಳೆದಾಗಿದೆ, ಬದಲಾಯಿಸಿ ಎಂದು ಕೇಳಿದ್ದರೇ?. ಹೊಸ ಬಾಗಿಲು ಹಾಕಿಸುವುದಕ್ಕೆ ಕಾರಣ ಯಾರಿಗೂ ಗೊತ್ತಿಲ್ಲ. ಈಗ ಮತ್ತೊಂದು ಹೊಸ ಕಾರ್ಯ ಮಾಡಲು ನಮ್ಮ ಸಭಾಧ್ಯಕ್ಷರು ಇಳಿದಿದ್ದಾರೆ. ವಿಧಾನ ಸಭೆಯ ಎಲ್ಲಾ ಸದಸ್ಯರ ಗ್ರೂಪ್ ಫೋಟೋ ಯೋಜಿಸಲಾಗಿದೆ. ಸಾಮಾನ್ಯವಾಗಿ ಶಾಸಕರ ಗ್ರೂಪ್ ಫೋಟೋ ತೆಗೆಯುವುದು ಐದು ವರ್ಷ ಅವಧಿಯ ಕೊನೆಯಲ್ಲಿ. ಅಂದರೆ 2028 ಮಾರ್ಚ್- ಏಪ್ರಿಲ್ ತಿಂಗಳಲ್ಲಿ. ಹೀಗಿದ್ದಾಗ ಈ ಗ್ರೂಪ್ ಫೋಟೋ ಅಗತ್ಯವೇನಿತ್ತು? ಹಾಗೆ ಯೋಚಿಸಿದಾಗ ಕಾರಣಗಳು ಈ ಕೆಳಕಂಡಂತಿರಬಹುದು.

  1. A) ಈ ಅಧಿವೇಶನದ ನಂತರ  ಖಾದರ್ ರವರು ಸಭಾಧ್ಯಕ್ಷರ ಸ್ಥಾನದಿಂದ ಸಚಿವ ಸ್ಥಾನಕ್ಕೆ ಹೋಗುವ ಇರಾದೆ ಹೊಂದಿರಬಹುದು. ಮತ್ತು ಅದಕ್ಕೆ ಹಸಿರು ನಿಶಾನೆಯೂ ದೊರಕಿರಬಹುದು.
  2.  ಇಲ್ಲವೇ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಬದಲಾಗುತ್ತಾರೆಯೇ? ಅವರು ಮುಖ್ಯಮಂತ್ರಿ ಆಗಿರುವಾಗ ಒಂದು ಫೋಟೋ ಇರಲಿ ಎಂದೇ? ಅಥವಾ
  3. ಮಧ್ಯಂತರ ಚುನಾವಣೆ ನಡೆಯುತ್ತದೆಯೇ?
    ಈ ಮೇಲಿನ ಮೂರು ಕಾರಣಗಳಲ್ಲಿ ಯಾವುದು ಈ ಮಧ್ಯಂತರ ಗ್ರೂಪ್ ಫೋಟೋಗೆ ಕಾರಣ?

ಒಟ್ಟಿನಲ್ಲಿ ಅವಧಿಗೂ ಮುನ್ನವೇ 16ನೇ ವಿಧಾನಸಭೆ ಸದಸ್ಯರ ಗ್ರೂಫ್​ ಫೋಟೋ ಶೂಟ್ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು, ರಾಜ್ಯ ರಾಜಕಾರಣದಲ್ಲಿ ಏನೆಲ್ಲಾ ಬದಲಾವಣೆಯಾಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link