ಶುಕ್ರವಾರ ಮಾಂಸ ಮಾರಾಟಕ್ಕೆ ಬ್ರೇಕ್! ಜಿಬಿಎಯಿಂದ ಬಂತು ಆರ್ಡರ್
ಬೆಂಗಳೂರು, ಮಾರ್ಚ್ 25: ಶ್ರೀರಾಮನವಮಿ (Ram Navami) ಹಬ್ಬದ ಅಂಗವಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮಹತ್ವದ ಸಾರ್ವಜನಿಕ ಸೂಚನೆಯನ್ನು ಹೊರಡಿಸಿದೆ. ಮಾರ್ಚ್ 27, ಶುಕ್ರವಾರದಂದು ನಗರಾದ್ಯಂತ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಕುರಿತು ಪ್ರಾಧಿಕಾರದ ಪಶುಸಂಗೋಪನಾ ಇಲಾಖೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಜಿಬಿಎ ಹೊರಡಿಸಿದ ಆದೇಶದಲ್ಲೇನಿದೆ? ಎಲ್ಲಾ ಕಸಾಯಿಖಾನೆಗಳನ್ನು ಆ ದಿನ ಮುಚ್ಚುವಂತೆ ಜಿಬಿಎ ಆದೇಶ ಹೊರಡಿಸಿದ್ದು, ಮಾಂಸ ಮಾರಾಟ ಮಾಡುವ ಅಂಗಡಿಗಳು ಹಾಗೂ ಔಟ್‌ಲೆಟ್‌ಗಳಲ್ಲಿ ಯಾವುದೇ ರೀತಿಯ ಮಾರಾಟಕ್ಕೆ ಅವಕಾಶ ಇರುವುದಿಲ್ಲ ಎನ್ನಲಾಗಿದೆ….