ಮಂತ್ರಾಲಯದ ಬಳಿ ಘೋರ ದುರಂತ: ತುಂಗಭದ್ರಾ ನದಿಗೆ ಈಜಲು ಹೋದ ಐವರು ನೀರುಪಾಲು
ಮೃತದೇಹಗಳಿಗಾಗಿ ಶೋಧImage Credit source: Tv9 Kannada ರಾಯಚೂರು, ಮೇ 31: ರಾಜ್ಯದಲ್ಲಿ ಜಲ ದುರಂತಗಳು ಮುಂದುವರಿದಿದ್ದು, ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಐವರು ನೀರುಪಾಲಾಗಿರುವ ಘಟನೆ ಮಂತ್ರಾಲಯ ಬಳಿಯ ತುಂಗಭದ್ರಾ ನದಿಯಲ್ಲಿ ನಡೆದಿದೆ. ಮೃತರನ್ನು ಹೈದರಾಬಾದ್ ಮೂಲದ ಯುವನ ಚಂದ್ರ(5), ಸತೀಶ್(35), ಮಂತ್ರಾಲಯ ಗ್ರಾಮದ ರಾಘವೇಂದ್ರ(25), ಧನುಷ್(23) ಉರವಕೊಂಡದ ಸಂಧ್ಯಾ(22) ಎಂದು ಗುರುತಿಸಲಾಗಿದೆ. ಮತ್ತೋರ್ವ ಯುವತಿ ಅಪರ್ಣಾ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮುಖ್ಯಾಂಶಗಳು ಮಂತ್ರಾಲಯ ಬಳಿಯ ನದಿಯಲ್ಲಿ ಘೋರ ದುರಂತ ಈಜಲು ತೆರಳಿದ್ದ ಐವರು ತುಂಗಭದ್ರಾ…