Headlines

nagaraj11081993

‘ಮ್ಯಾಕ್ಸ್’ ಸಿನಿಮಾ ವಿವಾದ: ಕೆಆರ್​​ಜಿ ಅರ್ಜಿಗೆ ನಿರ್ಮಾಪಕರಿಗೆ ನೊಟೀಸ್

ನಟ ಕಿಚ್ಚ ಸುದೀಪ್ (Sudeep) ನಟನೆಯ ‘ಮ್ಯಾಕ್ಸ್’ ಸಿನಿಮಾ 2024 ರಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ದೊಡ್ಡ ಹಿಟ್ ಆಗಿತ್ತು. ಸಿನಿಮಾಕ್ಕೆ ತಮಿಳಿನ ನಿರ್ಮಾಪಕ ಕಲೈಪುಲಿ ಎಸ್ ತನು ಮತ್ತು ಕಿಚ್ಚ ಸುದೀಪ್ ಇಬ್ಬರೂ ಬಂಡವಾಳ ಹೂಡಿದ್ದರು. ಸಿನಿಮಾವನ್ನು ವಿತರಣೆ ಮಾಡಿದ್ದು ಕೆಆರ್​​ಜಿ ಸ್ಟುಡಿಯೋಸ್. ಆದರೆ ಸಿನಿಮಾ ಬಿಡುಗಡೆ ಆದ ಬಳಿಕ ನಿರ್ಮಾಪಕರು ಮತ್ತು ಕೆಆರ್​​ಜಿ ನಡುವೆ ಹಣಕಾಸಿಗೆ ಸಂಬಂಧಿಸಿದಂತೆ ವಿವಾದ ಭುಗಿಲೆದ್ದಿದ್ದು, ನಿರ್ಮಾಪಕ ಕಲೈಪುಲಿ ತನು ಅವರು ಕೆಆರ್​​​ಜಿ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದೀಗ ಪ್ರಕರಣಕ್ಕೆ…

Read More

ಮನೆಯಲ್ಲಿ ಪಿಎನ್​ಜಿ ಕನೆಕ್ಷನ್ ಇದ್ದರೂ ಬಳಸದಿದ್ದರೆ ಎಲ್​ಪಿಜಿ ಪೂರೈಕೆ ಸ್ಥಗಿತ; ಸರ್ಕಾರದಿಂದ ಎಚ್ಚರಿಕೆ

ನವದೆಹಲಿ, ಮಾರ್ಚ್ 25: ಕೇಂದ್ರ ಸರ್ಕಾರ ಅಗತ್ಯವಿರುವಷ್ಟು ಇಂಧನ ಹಾಗೂ ಎಲ್​ಪಿಜಿ ಸಂಗ್ರಹವಿದೆ ಎಂದು ಹೇಳಿಕೆ ನೀಡುತ್ತಿದ್ದರೂ ಎಲ್​ಪಿಜಿ (LPG) ಬುಕ್ ಮಾಡಿದ ಹಲವು ದಿನಗಳ ಬಳಿಕ ಸಿಲಿಂಡರ್​ಗಳು ಸಿಗುತ್ತಿವೆ. ಇದೆಲ್ಲದರ ನಡುವೆ ಸರ್ಕಾರ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಒಂದುವೇಳೆ ನಿಮ್ಮ ಮನೆಯಲ್ಲಿ ಪೈಪ್ಡ್ ಗ್ಯಾಸ್ (ಪಿಎನ್​ಜಿ) ಕನೆಕ್ಷನ್ ಇದ್ದರೂ ನೀವು ಅದನ್ನು ಬಳಸದಿದ್ದರೆ ನಿಮ್ಮ ಎಲ್​ಪಿಜಿ ಪೂರೈಕೆ ಕೂಡ ಕಟ್ ಆಗುತ್ತದೆ. ಪಿಎನ್​ಜಿ ಹಾಗೂ ಎಲ್​ಪಿಜಿ ಎರಡನ್ನೂ ಬಳಸುವಂತಿಲ್ಲ ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ನಿಮ್ಮ…

Read More

ಶಾಸಕರ ಫೋಟೋಶೂಟ್ ಬಗ್ಗೆ ಭಾರೀ ಚರ್ಚೆ: ಕಾಶಪ್ಪನವರ್ ಏನಂದ್ರು ನೋಡಿ!

ಬೆಂಗಳೂರು, (ಮಾರ್ಚ್ 25): ರಾಜ್ಯ ಸರ್ಕಾರದ ಅವಧಿ ಇನ್ನೂ ಎರಡು ವರ್ಷ ಬಾಕಿ ಇರುವಾಗಲೇ ವಿಧಾನಸೌಧದಲ್ಲಿ ಶಾಸಕರ ಫೋಟೋ ಶೂಟ್ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಅನಿರೀಕ್ಷಿತ ಬೆಳವಣಿಗೆಯು ಸಿಎಂ ಬದಲಾವಣೆ, ಸ್ಪೀಕರ್ ಬದಲಾವಣೆ ಅಥವಾ ಸಂಪುಟ ಪುನರ್‌ರಚನೆಯ ಮುನ್ಸೂಚನೆಯೇ ಎಂಬ ಗೊಂದಲ ಮತ್ತು ಅನುಮಾನಗಳನ್ನು ಶಾಸಕರಲ್ಲಿ ಹುಟ್ಟುಹಾಕಿದೆ. ಇನ್ನು ಈ ಬಗ್ಗೆ ಕಾಂಗ್ರೆಸ್ ಶಾಸಕ ವಿಜಯನಂದ ಕಾಶಪ್ಪನವರ್ ಪ್ರತಿಕ್ರಿಯಿಸಿದ್ದು, ಸಂಪುಟ ಪುನರ್​ ರಚನೆಯಾಗುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅವಧಿಗೂ ಮುನ್ನವೇ…

Read More

ಲ್ಯಾಂಬೋರ್ಗಿನಿ ಕಾರು ಜಪ್ತಿ ಮಾಡಿದ ಸಾರಿಗೆ ಅಧಿಕಾರಿಗಳಿಗೆ ಹೈಕೋರ್ಟ್ ಶಾಕ್: 1 ವಾರದಲ್ಲಿ ಕಾರು ಹಿಂದಿರುಗಿಸಿ

ಬೆಂಗಳೂರು, ಮಾ.24: ಮನೆಯ ಕಾರಿನ ಶೆಡ್​​​​ನಲ್ಲಿದ್ದ ವಿಲಾಸಿ ಲ್ಯಾಂಬೋರ್ಗಿನಿ ಕಾರನ್ನು ಕಾನೂನು ಬಾಹಿರವಾಗಿ ಜಪ್ತಿ ಮಾಡಿದ್ದ ಸಾರಿಗೆ ಇಲಾಖೆಯ ಕ್ರಮಕ್ಕೆ ಕರ್ನಾಟಕ ಹೈಕೋರ್ಟ್ (Karnataka High Court) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಎಫ್‌ಐಆರ್ ಅನ್ನು ರದ್ದುಗೊಳಿಸಿರುವ ನ್ಯಾಯಾಲಯ, ಒಂದು ವಾರದಲ್ಲಿ ಕಾರನ್ನು ಮಾಲೀಕರಿಗೆ ಹಿಂದಿರುಗಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದೆ. ರಾತ್ರಿ ವೇಳೆಯಲ್ಲಿ ಅರ್ಜಿದಾರರ ಮನೆಯ ಕಾರಿನ ಶೆಡ್​​​ಗೆ ನುಗ್ಗಿ ಕಾರನ್ನು ಸೀಜ್ ಮಾಡಿದ ವಿಧಾನವನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು…

Read More

ವಾರಣಾಸಿಯನ್ನೇ ಮರುಸೃಷ್ಟಿಸಿದ ರಾಜಮೌಳಿ; ಫೋಟೋ ವೈರಲ್

ಮಹೇಶ್ ಬಾಬು ಹಾಗೂ ಎಸ್​​ಎಸ್​ ರಾಜಮೌಳಿ ಒಟ್ಟಾಗಿ ‘ವಾರಣಾಸಿ’ (Varanasi) ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರ್ದೇಶಕರು ಬಿಟ್ಟುಕೊಟ್ಟಿಲ್ಲ. ಈಗ ಹೈದರಾಬಾದ್​ ಅಲ್ಲಿ ಅವರು ವಾರಣಾಸಿ ನಗರವನ್ನೇ ಧರೆಗಿಳಿಸಿದ್ದಾರೆ. ಅಲ್ಲಿ ಸಿನಿಮಾದ ಶೂಟ್ ಮಾಡಲಾಗುತ್ತಿದೆ. ತುಂಬಾನೇ ಕಟ್ಟುನಿಟ್ಟಾಗಿ ಸಿನಿಮಾ ಮಾಡಲಾಗುತ್ತಿದೆ. ಕಠಿಣ ನಿಯಮಕ್ಕೆ ಈ ಹಿಂದೆ ರಾಜಮೌಳಿ ಮಾಡಿದ ತಪ್ಪೇ ಕಾರಣ ಎಂದು ಹೇಳಲಾಗುತ್ತಿದೆ. ರಾಜಮೌಳಿ ಅವರು ಎಲ್ಲಾ ವಿಷಯಗಳನ್ನು ಗುಟ್ಟಾಗಿ ಇಡಲು ಇಷ್ಟಪಡುತ್ತಾರೆ. ಯಾವುದೇ ಘೋಷಣೆ ಇದ್ದರೂ ಅದನ್ನು ಸರಿಯಾದ…

Read More

ಅವಧಿಗೂ ಮುನ್ನವೇ ಫೋಟೋ ಶೂಟ್ ಬಗ್ಗೆ ಭಾರೀ ಚರ್ಚೆ: ಸಿಎಂ ಬದಲಾವಣೆಯೋ? ಸ್ಪೀಕರ್ ಚೇಂಜ್? ಸಂಪುಟ ಪುನರ್ ರಚನೆಯೋ?

ಬೆಂಗಳೂರು, (ಮಾರ್ಚ್ 25): ಸರ್ಕಾರದ (Karnataka Government) ಅವಧಿ ಇನ್ನೂ ಎರಡು ವರ್ಷ ಬಾಕಿ ಇರುವಾಗಲೇ ವಿಧಾನಸೌಧದಲ್ಲಿ ಶಾಸಕರ ಗ್ರೂಪ್ ಫೋಟೋ ಶೂಟ್ (MLAs Group photoshoot) ನಡೆದಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಯಾಕಂದ್ರೆ, ಸಾಮಾನ್ಯವಾಗಿ ವಿಧಾನಸಭೆ ಅವಧಿ ಮುಕ್ತಾಯಗೊಳ್ಳುವ ಸಂದರ್ಭದಲ್ಲಿ ಸ್ಪೀಕರ್ ಸಮ್ಮುಖದಲ್ಲಿ ಶಾಸಕರ ಗ್ರೂಪ್ ಫೋಟೋ ತೆಗೆದುಕೊಳ್ಳುವುದು ಸಂಪ್ರದಾಯವಾಗಿದೆ. ಆದ್ರೆ, ಅವಧಿಗೂ ಮುನ್ನವೇ ಸ್ಫೀಕರ್ ಯುಟಿ ಖಾದರ್,  (UT Khader)ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಮುಂಭಾಗದಲ್ಲಿ ಶಾಸಕರ ಫೋಟೋ ಶೂಟ್ ಮಾಡಿಸಿರುವುದು ಅನುಮಾನಗಳಿಗೆ…

Read More

ಮ್ಯೂಚುವಲ್ ಫಂಡ್​ಗಳನ್ನು ಉಡುಗೊರೆಯಾಗಿ ನೀಡಬೇಕಾ? ಸೆಬಿ ಮುಂದಿದೆ ಹೊಸ ಪ್ಲಾನ್

ನವದೆಹಲಿ, ಮಾರ್ಚ್ 25: ಮ್ಯೂಚುವಲ್ ಫಂಡ್​ಗಳಲ್ಲಿ (Mutual Funds) ಹೂಡಿಕೆ ಮಾಡಬಹುದಾದಂತಹ ಗಿಫ್ಟ್ ಕಾರ್ಡ್ ಅಥವಾ ಗಿಫ್ಟ್ ಪಿಪಿಐ (PPI- Pre Paid Instrument) ಅನ್ನು ಹೊರತರಲು ಸೆಬಿ ಯೋಜಿಸಿದೆ. ಪಿಪಿಐ ಎಂಬುದು ಒಂದು ರೀತಿಯಲ್ಲಿ ಪ್ರೀಪೇಡ್ ಕಾರ್ಡ್. ಈ ಪ್ರೀಪೇಡ್ ಕಾರ್ಡ್ ಬಳಸಿ ಮ್ಯುಚುವಲ್ ಫಂಡ್​ನಲ್ಲಿ ಹೂಡಿಕೆ ಮಾಡಲು ಅವಕಾಶ ಇರುತ್ತದೆ. ಯಾರು, ಯಾರಿಗೆ ಬೇಕಾದರೂ ಈ ಮ್ಯೂಚುವಲ್ ಫಂಡ್ ಗಿಫ್ಟ್ ಕಾರ್ಡ್ ಕೊಡಬಹುದು. ಮ್ಯೂಚುವಲ್ ಫಂಡ್ ಗಿಫ್ಟ್ ಕಾರ್ಡ್ ಹೇಗೆ ಕೆಲಸ ಮಾಡುತ್ತದೆ? ಯಾವುದೇ…

Read More

ಐಪಿಎಲ್​ನಲ್ಲಿ 30 ಲಕ್ಷಕ್ಕೆ ಮಾರಾಟವಾಗಿದ್ದವ ಈಗ 16 ಸಾವಿರ ಕೋಟಿ ಮೌಲ್ಯದ ಆರ್​ಸಿಬಿಗೆ ಅಧ್ಯಕ್ಷ

2026 ರ ಐಪಿಎಲ್ ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಹೊಸ ಮಾಲೀಕರ ಕೈಸೇರಿದೆ. 2008 ರಿಂದ ಐಪಿಎಲ್‌ನಲ್ಲಿ ಆಡುತ್ತ ಬಂದಿರುವ ಆರ್​ಸಿಬಿ ಇದುವರೆಗೆ ಒಮ್ಮೆ ಮಾತ್ರ ಚಾಂಪಿಯನ್ ಆಗಿದೆ, ಅದು ಕಳೆದ ಆವೃತ್ತಿಯಲ್ಲಿ. ಅಂದರೆ ಸತತ 18 ವರ್ಷಗಳ ಕಾಯುವಿಕೆಯ ಬಳಿಕ ಏಕೈಕ ಟ್ರೋಫಿ ಗೆದ್ದಿರುವ ಆರ್​ಸಿಬಿ, ಇದೀಗ ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ. ಇಲ್ಲಿ ಅಚ್ಚರಿಯ ಸಂಗತಿ ಏನೆಂದರೆ ಒಂದು ಕಾಲದಲ್ಲಿ ಇದೇ ಐಪಿಎಲ್ ಹರಾಜಿನಲ್ಲಿ ಭಾಗವಹಿಸಿ ಕೇವಲ 30 ಲಕ್ಷ ರೂ. ಮೂಲ…

Read More

ಅಪ್ರಾಪ್ತರ ಮದ್ಯಪಾನಕ್ಕೆ ಹೈಕೋರ್ಟ್ ಬ್ರೇಕ್! ವಯಸ್ಸಿನ ಪರೀಕ್ಷೆ ಕಡ್ಡಾಯ, ನಿಯಮ ಉಲ್ಲಂಘಿಸಿದ್ರೆ ಯಾರಿಗೆ ಶಿಕ್ಷೆ?

ಬೆಂಗಳೂರು, ಮಾ.25: ಪಬ್ ಮತ್ತು ಬ್ರೀವರಿಗಳಲ್ಲಿ ಅಪ್ರಾಪ್ತರು ಮದ್ಯಪಾನ ಮಾಡುವ ಪ್ರವೃತ್ತಿಗೆ ಕರ್ನಾಟಕ ಹೈಕೋರ್ಟ್ ಗಂಭೀರ ಕಡಿವಾಣ ಹಾಕಿದೆ. ಅಪ್ರಾಪ್ತರನ್ನು ಮದ್ಯಪಾನದ ವ್ಯಸನದಿಂದ ರಕ್ಷಿಸುವುದು ಆಡಳಿತ ಮಂಡಳಿಯ ನೈತಿಕ ಮತ್ತು ಶಾಸನಾತ್ಮಕ ಕರ್ತವ್ಯ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಬ್ರೀವರಿಗಳಿಗೆ ಗ್ರಾಹಕರು ಪ್ರವೇಶಿಸುವಾಗಲೇ ಅವರ ವಯಸ್ಸನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಮದ್ಯ ಸರಬರಾಜು ಮಾಡುವ ಸಂದರ್ಭದಲ್ಲೂ ಸಿಬ್ಬಂದಿಗಳು ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಆದೇಶಿಸಿದೆ. “ಅಪ್ರಾಪ್ತರಿಗೆ ಮದ್ಯ ನೀಡಲಾಗುವುದಿಲ್ಲ” ಎಂಬ ಎಚ್ಚರಿಕೆ…

Read More

‘ಧುರಂಧರ್ 2’ ಡಿಜಿಟಲ್ ಹಕ್ಕಿದೆ ಜಿದ್ದಾಜಿದ್ದಿ: ಅಂತಿಮ ಗೆಲುವು ಯಾರಿಗೆ?

ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2′ (Dhuandhar 2) ಸಿನಿಮಾ ಬಿಡುಗಡೆಯಾದ ಕೇವಲ ಆರು ದಿನಗಳಲ್ಲಿ ವಿಶ್ವದಾದ್ಯಂತ ಸುಮಾರು 800 ಕೋಟಿ ರೂಪಾಯಿಗೂ ಅಧಿಕ ಹಣ ಗಳಿಕೆ ಮಾಡಿ ಇತಿಹಾಸ ಸೃಷ್ಟಿಸುತ್ತಿದೆ. ಈಗಾಗಲೇ ‘ಜವಾನ್’, ‘ಪುಷ್ಪ 2’ ಇನ್ನೂ ಕೆಲವು ಸಿನಿಮಾಗಳ ದಾಖಲೆಗಳನ್ನು ಮುರಿದು ಹಾಕಿದೆ ಈ ಸಿನಿಮಾ. ಚಿತ್ರಮಂದಿರದಲ್ಲಿ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ವೀಕೆಂಡ್ ಮಾತ್ರವಲ್ಲ, ವಾರದ ದಿನಗಳಲ್ಲಿಯೂ ಸಹ ಶೋಗಳು ಭರ್ತಿ ಆಗುತ್ತಿವೆ. ಚಿತ್ರಮಂದಿರದಲ್ಲಿ ಅಬ್ಬರಿಸುತ್ತಿರುವ ಈ ಸಿನಿಮಾ ಒಟಿಟಿಯಲ್ಲಿಯೂ ದೊಡ್ಡ ಮ್ಯಾಜಿಕ್…

Read More