All posts by nagaraj11081993

Horoscope Today 24 March: ಇಂದು ಈ ರಾಶಿಯವರ ಸಣ್ಣ ತಪ್ಪೂ ದೊಡ್ಡದಾಗಿ ಬಿಂಬಿತವಾಗಲಿದೆ

Horoscope Today 24 March: ಇಂದು ಈ ರಾಶಿಯವರ ಸಣ್ಣ ತಪ್ಪೂ ದೊಡ್ಡದಾಗಿ ಬಿಂಬಿತವಾಗಲಿದೆ

ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸದ ಶುಕ್ಲ ಪಕ್ಷದ ಷಷ್ಠೀ ತಿಥಿಯ ಮಂಗಳವಾರ ಪ್ರಚೋದನೆ, ಉತ್ತಮರ ಸಂಗ, ಸಾಮಾಜಿಕ ಕಾರ್ಯಕ್ಕೆ ಯತ್ನ, ಪ್ರೋತ್ಸಹ, ಧಾರ್ಮಿಕ ಕಾರ್ಯ, ಅನ್ಯಾಯ, ಗೆಲುವಿನ ಸಂಭ್ರಮ ಇದೆಲ್ಲ ಇಂದಿನ ವಿಶೇಷ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ಚೈತ್ರ, ಸೌರ ಮಾಸ : ಮೀನ, ಮಹಾನಕ್ಷತ್ರ : ಉತ್ತರಾಭಾದ್ರ, ವಾರ : ಮಂಗಳ, ಪಕ್ಷ : ಶುಕ್ಲ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ಕೃತ್ತಿಕಾ, ಯೋಗ : ಪ್ರೀತಿ, ಕರಣ : ಬಾಲವ, ಸೂರ್ಯೋದಯ – 06 – 27 am, ಸೂರ್ಯಾಸ್ತ – 06 – 34 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:33 – 17:04, ಯಮಗಂಡ ಕಾಲ 09:29 – 10:59, ಗುಳಿಕ ಕಾಲ 12:31 – 14:02

ಮೇಷ ರಾಶಿ :

ನಿಮ್ಮ ಕೆಲಸವನ್ನು ಶಿಸ್ತಿನಿಂದ ಮಾಡಿ ಮುಗಿಸುವಿರಿ. ನಿಮ್ಮ ವೇಗಕ್ಕೆ ವಹಿಸಿಕೊಂಡ ಕೆಲಸವು ಆಗದೇ ಇರುವುದು ನಿಮಗೆ‌ ಬೇಸರ ತರಿಸಬಹುದು.‌ ನೌಕರರ ಮೇಲೆ ಸಿಟ್ಟಾಗಬೇಕಾಗುವುದು. ಕುಟುಂಬದ ಮರ್ಯಾದೆಗೆ ತಕ್ಕಂತೆ ವರ್ತನೆ ಇರಲಿ. ನಿಮಗೆ ಜೀವನ ಸುಮ್ಮನೆ ನಷ್ಟವಾಗುತ್ತಿದ್ದಂತೆಲ್ಲ ಭಾಸವಾಗಿ, ಏನಾದರೂ ಹೊಸತನ್ನು ಮಾಡುವ ಆಸೆಯಾಗುವುದು‌ ನಿಮ್ಮ ವಿಚಾರವನ್ನು ಇತರರ ಜೊತೆ ಹಂಚಿಕೊಳ್ಳುವಿರಿ. ಸಂತೋಷದ ದಿನಗಳ ನಿರೀಕ್ಷೆಯು ಹೆಚ್ಚಿರುವುದು.‌

ವೃಷಭ ರಾಶಿ :

ನಿಮ್ಮ ಉದ್ಯಮಕ್ಕೆ ಅನುಭವಿಗಳ ಕೊರತೆ ಅತಿಯಾದಂತೆ ಕಾಣಿಸುವುದು. ಮಕ್ಕಳು ಅಡ್ಡದಾರಿಗೆ ಹೋಗುವ ಸನ್ನಿವೇಶವು ಬರಬಹುದು. ಮಾತಿಗೆ ಸಂಬಂಧಿಸಿದಂತೆ ದೋಷವು ನಿಮಗೆ ಕಾಣಲು ಸಿಗುವುದು. ಇಂದು ನಿಮಗೆ ಭವಿಷ್ಯವು ಅನಿಶ್ಚಿತ ಎನಿಸಬಹುದು. ನಿಮ್ಮದೇ ವಸ್ತುವನ್ನು ಗುರುತಿಸಲಾರದಷ್ಟು ಮರೆವು ನಿಮ್ಮದಾಗಿದೆ. ಪ್ರವಾಸವನ್ನು ಹೆಚ್ಚು ಮಾಡುವ ವಿಚಾರದಲ್ಲಿ ಆಸಕ್ತಿಯು ಇರುವುದು.

ಮಿಥುನ ರಾಶಿ :

ಕೆಲವು ಸೂಕ್ಷ್ಮ ವಿಚಾರವನ್ನು ನೀವು ಜೋಪಾನವಾಗಿ ನಿರ್ವಹಿಸಬೇಕಾಗುವುದು. ಆಪ್ತರನ್ನು ನೀವು ಬಹಳ ಆತ್ಮೀಯವಾಗಿ ಕಾಣುವಿರಿ. ಸಂಪನ್ಮೂಲವನ್ನು ಹಿಡಿದಿಟ್ಟುಕೊಳ್ಳುವುದು ಅಗತ್ಯ. ಹಳೆಯ ರೋಗಗಳಿಂದ ನೀವು ಮುಕ್ತರಾದಂತೆ ತೋರುವುದು. ನಿಮ್ಮ ಸಿಟ್ಟನ್ನು ಇಂದು ತೋರಿಸುವುದು ಬೇಡ. ಇರುವುದರಲ್ಲಿ ಸುಖಪಡುವುದನ್ನು ಕಲಿತುಕೊಳ್ಳಬೇಕಾದೀತು. ಆಪ್ತರ ಅಗಲಿಕೆಯನ್ನು ಸಹಿಸಲಾಗದು.

ಕರ್ಕಾಟಕ ರಾಶಿ :

ಕಳೆದುದನ್ನು ಚಿಂತಿಸಿ ಸಮಯ ವ್ಯರ್ಥ ಮಾಡಿಕೊಳ್ಳುವಿರಿ‌. ಬೇಕಾದವರನ್ನು ದೂರ ಮಾಡಿಕೊಂಡು ಏನನ್ನೂ ಸಾಧಿಸಲಾರಿರಿ. ಯಾರ ಬೆಂಬಲವನ್ನೂ ನಿರೀಕ್ಷಿಸದೇ ನಿಮ್ಮ ಕಾರ್ಯವನ್ನು ಮಾಡುವಿರಿ. ಸ್ತ್ರೀಯರಿಗೆ ಆತ್ಮರಕ್ಷಣೆಯ ಆತಂಕ ಉಂಟಾಗುವುದು. ಮನೋಬಲವನ್ನು ಹೆಚ್ಚಿಸಿಕೊಳ್ಳಬೇಕಾಗವುದು. ಯಾರ ಸಲಹೆ ಪಡೆಯದೇ ಮನಸ್ಸಿಗೆ ಬಂದಂತೆ ವ್ಯವಹರಿಸುವುದನ್ನು ಬಿಡಿ. ಸಂಗಾತಿಯ ಆರೋಗ್ಯದ ಬಗ್ಗೆ ಅಧಿಕ ಲಕ್ಷ್ಯ ಅವಶ್ಯಕ.

ಸಿಂಹ ರಾಶಿ :

ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ತಡೆಗಟ್ಟಲು ಕೆಲಸದಲ್ಲಿ ಅತಿಯಾದ ದೃಢತೆಯನ್ನು ಸ್ಥಾಪಿಸಿ. ಸಣ್ಣ ವ್ಯಾಪಾರವು ಅಧಿಕಫಲವನ್ನು ಕೊಡುವುದು. ಕೆಟ್ಟ ಅಭ್ಯಾಸಕ್ಕೆ ಹಣವನ್ನು ಖರ್ಚು ಮಾಡುವಿರಿ. ನಿಮ್ಮ ಸರಳ ಉಪಾಯವನ್ನು ಕಾರ್ಯದಲ್ಲಿ ಹಾಕುವಿರಿ. ಅತಿಯಾದ ಮಾತಿನಿಂದ ಇತರರಿಗೆ ಕಷ್ಟವಾದೀತು. ಮನೆಯ ಕಾರ್ಯವು ನಿಮಗೆ ತೃಪ್ತಿ ಕೊಡುವುದು. ಉಪಕಾರದ ಸ್ಮರಣೆಯನ್ನು ನೀವು ಇಟ್ಟುಕೊಳ್ಳುವುದು ಅನಿವಾರ್ಯ. ನಿಮ್ಮ ಬಗ್ಗೆ ನಿಮಗೆ ಇರಲೇಬೇಕಾದ ಕೆಲವು ವಿಚಾರಗಳನ್ನು ರೂಢಿಸಿಕೊಳ್ಳಿ.

ಕನ್ಯಾ ರಾಶಿ :

ಯಾರಿಗೆ ಎಷ್ಟು ಪ್ರಾಮುಖ್ಯ ಕೊಡಬೇಕು ಎನ್ನುವುದನ್ನು ತಿಳಿದುಕೊಳ್ಳುವ ಅವಶ್ಯಕತೆ ಇದೆ‌. ಮುನ್ನುಗ್ಗಿ ನಡೆಯುವುದು ಸರಿಯಾದರೂ, ದಾರಿ ಹೇಗಿದೆ ಎಂಬುದನ್ನು ಗಮನಿಸಬೇಕಾಗುವುದು‌. ಪುಣ್ಯಸ್ಥಳಕ್ಕೆ ಏಕಾಂಗಿಯಾಗಿ ಹೋಗುವುದು ಬೇಡ. ಇನ್ನೊಬ್ಬರನ್ನು ಕಂಡು ಕೊರಗುವುದು ಬೇಡ. ಚಾಂಚಲ್ಯದ ಕಾರಣ ಉದ್ಯೋಗದಲ್ಲಿಯೂ ಸರಿಯಾದ ಏಕಾಗ್ರತೆಯಿಂದ ಕೆಲಸವನ್ನು ಮಾಡಲಾಗದು. ಸಾಮಾಜಿಕವಾಗಿ ಕಾರ್ಯಗಳಿಗೆ ನಿಮ್ಮ ಹಣವನ್ನೇ ಬಳಸುವಿರಿ. ಯಾವ ವಿರೋಧವನ್ನು ಸಹಿಸುವ ಮನಃಸ್ಥಿತಿ ಇಂದು ನಿಮಗೆ ಇರದು.

ತುಲಾ ರಾಶಿ :

ಶತ್ರುಗಳ ಬಗೆಗೆ ನಿಮಗೆ ಸರಿಯಾದ ಮಾಹಿತಿ ಇರದು. ದಾಂಪತ್ಯದಲ್ಲಿ ಇನ್ನೊಬ್ಬರ ಕಾರಣದಿಂದ ಕಲಹವಾಗಬಹುದು. ರಾಜಕೀಯದಲ್ಲಿ ತೃಪ್ತಿ ಸಿಗದೇ ತೊಳಲಾಟ ಇರಲಿದೆ. ಪರರ ಜೀವನಕ್ಕೆ ಸಣ್ಣ ಉಪಕಾರವಾಗಲಿದೆ‌. ಕಿರಿಯರಿಂದ ಆಕಸ್ಮಿಕವಾಗಿ ಗೌರವಕ್ಕೆ ಪಾತ್ರರಾಗುವಿರಿ. ಎಂದೋ ಆದ ಬೇಸರವನ್ನು ಸ್ನೇಹಿತನ ಮುಂದೆ ಇಂದು ಪ್ರಕಟಿಸುವಿರಿ. ಅಸಹಜ ಮಾತುಗಳಿಗೆ ಸ್ಪಂದನೆ ಸಿಗದು. ಪ್ರತ್ಯೇಕತೆಯನ್ನು ನೀವು ಬಯಸುತ್ತಿರುವಿರಿ. ಹೂಡಿಕೆಯಿಂದ ಆರ್ಥಿಕ ಅಭಿವೃದ್ಧಿಯಾಗಲಿದೆ ಎಂಬ ನೆಮ್ಮದಿ ಇರುವುದು.

ವೃಶ್ಚಿಕ ರಾಶಿ :

ಸಮಚಿತ್ತವು ನಿಮ್ಮ ದುಃಖದ ನಿವಾರಣೆಗೆ ಕಾರಣವಾಗುತ್ತದೆ. ದೊಡ್ಡ ಕನಸನ್ನು ಸಾಕಾರಗೊಳಿಸಲು ಸಣ್ಣ ಪ್ರಯತ್ನವಾದರೂ ಬೇಕು. ನಕಾರಾತ್ಮಕ ವಿಚಾರಗಳ ಕಡೆ ಗಮನ ಬೇಡ. ಆದಾಯ ಮೂಲದ ಬಗ್ಗೆ ಅಸಮಾಧಾನ ಬರಬಹುದು. ಅಧಿಕ ಆದಾಯಕ್ಕಾಗಿ ಉದ್ಯೋಗವನ್ನು ನೀವು ತ್ಯಾಗಮಾಡುವಿರಿ. ಇದಕ್ಕೆ ಕಾರಣ ಹೊಸ ಉದ್ಯಮದ ಕಡೆ ಸೆಳೆತವು ಅತಿಯಾಗಿರುವುದು. ಮಾನಸಿಕ ಅಸಮತೋಲನವನ್ನು ಸರಿ ಮಾಡಿಕೊಳ್ಳುವಿರಿ.

ಧನು ರಾಶಿ :

ಮನಸ್ಸಿಗೆ ಬೇರೆ ಯಾವುದಾದರೂ ಕೆಲಸ ಕೊಡಿ. ಸಹೋದರರ ಬಗ್ಗೆ ನಿಮಗಿರುವ ಭಾವವು ಬದಲಾದೀತು. ಎಲ್ಲರ ಅನುಭವವನ್ನು ಕೇಳಿ ಸ್ವಂತ ನಿರ್ಧಾರಕ್ಕೆ ಬನ್ನಿ. ಕುಟುಂಬದ ಸಮಸ್ಯೆಗಳಿಂದಾಗಿ ನಿಮ್ಮ ಸಂಗಾತಿ ಇಂದು ಅಸಮಾಧಾನಗೊಳ್ಳಬಹುದು. ಇಂದು ಮಾಡುವ ಎಲ್ಲ ಕಾರ್ಯಗಳನ್ನೂ ಪೂರ್ಣ ಮಾಡಲಾರಿರಿ. ಇಷ್ಟವಿಲ್ಲದ ವ್ಯಕ್ತಿಗಳ ಜೊತೆ ಇರಲು ಕಸಿವಿಸಿ ಆದೀತು. ಮನೆಯವರ ಸಣ್ಣ ತಪ್ಪುಗಳನ್ನು ಸಹಿಸಲಾರಿರಿ.

ಮಕರ ರಾಶಿ :

ನಿಮ್ಮ ಚುರುಕುತನದಿಂದ ಎಲ್ಲರನ್ನೂ ಎಚ್ಚರಿಸುವಿರಿ. ಶತ್ರುಪಕ್ಷದವರು ನಿಮ್ಮ ಪಕ್ಷಕ್ಕೆ ಬರುವ ಸಾಧ್ಯತೆ ಇದೆ. ಇದ್ದಕಿದ್ದಂತೆ ಅಭ್ಯಾಸದ ಕಡೆ ಸೆಳೆತ ಹೆಚ್ಚಾಗುವುದು. ಸುಮ್ಮನಿರುವ ಶತ್ರುವನ್ನು ಕೆಣಕಿ ಮೈಮೇಲೆ ಹಾಕಿಕೊಳ್ಳುವಿರಿ. ಪ್ರೀತಿಯ ವಿಚಾರಕ್ಕೆ ನಿಮಗೆ ಬಂದರೆ ಪೂರ್ಣ ಸಮಾಧಾನ‌ ಸಿಗದು.‌ ಕೃಷಿಯಲ್ಲಿ ಉಪಯುಕ್ತ ಯೋಜನೆಯನ್ನು ಹಾಕಿಕೊಳ್ಳುವಿರಿ. ಮಕ್ಕಳ ಬಗ್ಗೆ ಇರುವ ನಿಮ್ಮ ಚಿಂತೆ ನಿವಾರಣೆ ಆಗುವುದು. ಪ್ರಯಾಣವನ್ನು ಆನಂದಿಸುವಿರಿ. ಕಡಿಮೆ ವೆಚ್ಚವನ್ನು ಹೆಚ್ಚು ಮಾಡಿಕೊಳ್ಳುವ ಸಾಧ್ಯತೆ ಇದೆ.

ಕುಂಭ ರಾಶಿ :

ನೂತನ ಗೃಹನಿರ್ಮಾಣದ ಬಗ್ಗೆ ಚಿಂತನೆ ಆರಂಭ. ನಿಮ್ಮ ಉತ್ಸಾಹಕ್ಕೆ ಯಾರಾದರೂ ಅಡ್ಡಗಾಲು ಹಾಕಿಯಾರು. ನಿಮ್ಮ ಇಚ್ಛೆಗಳು ಪೂರ್ಣವಾಗದೇ ಬೇಸರವಾಗಬಹುದು. ಪ್ರಭಾವಿಗಳ ಮನವನ್ನು ಸೋಲಿಸಿ ಅವರ ಬೆಂಬಲವನ್ನು ಪಡೆಯುವಿರಿ. ಅನಂತರ ನೀವೂ ಹಗುರಾಗಬಹುದು. ಅನಾರೋಗ್ಯದ ಕಾರಣದಿಂದ ನೀವು ಇಂದಿನ ಪ್ರಯಾಣವನ್ನು ನಿಲ್ಲಿಸುವಿರಿ. ಕಳ್ಳತನ ಮಾಡಿದ ಅಪವಾದ ಬರಬಹುದೆಂಬ ಭೀತಿ ನಿಮಗೆ ಕಾಡುವುದು.

ಮೀನ ರಾಶಿ :

ನಿವು ಮನೆ ಕೆಲಸವನ್ನು ಬೇಗ ಮುಗಿಸಿ ಸ್ವಲ್ಪ ಬಿಡುವು ಮಾಡಿಕೊಳ್ಳಲು ಪ್ರಯತ್ನಿಸುವಿರಿ. ಹೂಡಿಕೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳುವಿರಿ. ಕೌಟುಂಬಿಕ ಜೀವನವು  ಶಾಂತಿಯುತ ಮತ್ತು ಸಂತೋಷದಿಂದ ಇರುವುದು‌‌. ಎಲ್ಲದಕ್ಕೂ ಇಂದು ತಾಳ್ಮೆ ಅತ್ಯಂತ ಅವಶ್ಯಕ. ಸ್ನೇಹಿತರ ಜೊತೆ ಮನಸ್ತಾಪವು ಬರಬಹುದು. ವ್ಯಾಪಾರದ ಏರಿಳಿತಗಳು ನಿಮ್ಮ ಗಮನಕ್ಕೆ ಬಾರದೇ ಹೋಗಬಹುದು. ಆಪ್ತರು ನಿಮ್ಮಿಂದ ಕಾರಣಾಂತರಗಳಿಂದ ದೂರಾಗಬಹುದು.

– ಲೋಹಿತ ಹೆಬ್ಬಾರ್ – 8762924271 (what’s app only)

Source link

ಪ್ರಧಾನಿ ಮೋದಿ ನಾಯಕತ್ವದಿಂದ ಇಡೀ ಜಗತ್ತು ಭಾರತವನ್ನ ಗೌರವದಿಂದ ಕಾಣುತ್ತಿದೆ: ರಾಮು ರಾವ್ ಜೂಪಲ್ಲಿ

ನವದೆಹಲಿ, ಮಾರ್ಚ್​ 23: ನಾವು ಇಂದು ಇತಿಹಾಸದ ಒಂದು ಪ್ರಮುಖ ಘಟ್ಟದಲ್ಲಿದ್ದೇವೆ. ಇಡೀ ವಿಶ್ವವೇ ಆರ್ಥಿಕ ಸಂಕಷ್ಟದಿಂದ ಪರದಾಡುತ್ತಿದೆ. ನಮ್ಮ ಭಾರತ ದೇಶಕ್ಕೂ ಇದರ ಬಿಸಿ ತಟ್ಟಿದ್ದರೂ ಸಹ ಜಗತ್ತಿನಲ್ಲಿ ಭಾರತ ಇಂದು ಧೈರ್ಯ ಮತ್ತು ಸ್ಥಿರವಾಗಿ ಎದ್ದು ನಿಂತಿದೆ ಎಂದು ಎಕ್ಸಿಕ್ಯೂಟಿವ್ ವೈಸ್ ಚೇರ್ಮನ್, ಮೈ ಹೋಂ ಗ್ರೂಪ್ ರಾಮು ರಾವ್ ಜೂಪಲ್ಲಿ ಹೇಳಿದ್ದಾರೆ. ಟಿವಿ9 ವಾರ್ಷಿಕ ಶೃಂಗಸಭೆ ‘ವಾಟ್​ ಇಂಡಿಯಾ ಥಿಂಕ್ಸ್​ ಟುಡೆ’ಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ಪ್ರಜಾಪ್ರಭುತ್ವ, ಜನಸಂಖ್ಯೆ ಮತ್ತು ವೈವಿಧ್ಯತೆಯ ಶಕ್ತಿಯನ್ನು ಹೊಂದಿದೆ. ಭಾರತವು ಶೀಘ್ರದಲ್ಲೇ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿದ್ದು, ವಾರ್ಷಿಕವಾಗಿ ಶೇ. 7ರಷ್ಟು ಬೆಳವಣಿಗೆಯನ್ನು ಕಾಣುತ್ತಿದೆ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಕೊಲಂಬಿಯಾದಲ್ಲಿ ಭಾರೀ ದುರಂತ; 110 ಸೈನಿಕರಿದ್ದ ಮಿಲಿಟರಿ ವಿಮಾನ ಪತನ

ಬೊಗೋಟಾ (ಕೊಲಂಬಿಯಾ), ಮಾರ್ಚ್ 23: ಕೊಲಂಬಿಯಾದಲ್ಲಿ ಭಾರೀ ದುರಂತವೊಂದು ಸಂಭವಿಸಿದೆ. ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಕೊಲಂಬಿಯಾದ ಮಿಲಿಟರಿಯ ವಿಮಾನವೊಂದು ಅಪಘಾತಕ್ಕೀಡಾಗಿದೆ. ವಾಯುಪಡೆಯ ಈ ಹರ್ಕ್ಯುಲಸ್ ಸಿ -130 ವಿಮಾನವು 110 ಸೈನಿಕರನ್ನು ಹೊತ್ತೊಯ್ಯುತ್ತಿತ್ತು. ಈ ಘಟನೆಯಲ್ಲಿ ಕೊಲಂಬಿಯಾದ ವಿಮಾನದಲ್ಲಿದ್ದ ಎಲ್ಲ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಆದರೆ, ಕೊಲಂಬಿಯಾದ ಮಿಲಿಟರಿ ಇನ್ನೂ ಈ ಘಟನೆಯ ಸಾವಿನ ಪ್ರಮಾಣದ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

WITT Summit 2026: ಪ್ರಧಾನಿ ನರೇಂದ್ರ ಮೋದಿಗೆ ಮೈ ಹೋಮ್ ಗ್ರೂಪ್ ಚೇರ್ಮನ್ ರಾಮೇಶ್ವರ ರಾವ್ ಸನ್ಮಾನ

ನವದೆಹಲಿ, ಮಾರ್ಚ್ 23: ಟಿವಿ9 ನೆಟ್‌ವರ್ಕ್‌ನ “ಇಂಡಿಯಾ ವಾಟ್ ಇಂಡಿಯಾ ಥಿಂಕ್ಸ್ ಟುಡೇ ಶೃಂಗಸಭೆ 2026” (WITT Summit 2026) ಇಂದಿನಿಂದ ದೆಹಲಿಯಲ್ಲಿ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಈ ಶೃಂಗಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು, ಭಾರತ ಮತ್ತು ಜಗತ್ತು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ಈ ಶೃಂಗಸಭೆಯಲ್ಲಿ ಅವರು ಸತತ ಮೂರನೇ ಬಾರಿಗೆ ಭಾಗವಹಿಸುತ್ತಿದ್ದಾರೆ. ಇಂದು ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಮೈ ಹೋಮ್ ಗ್ರೂಪ್ಸ್ ಚೇರ್ಮನ್ ರಾಮೇಶ್ವರ ರಾವ್ ಜೂಪಲ್ಲಿ ಶಾಲು ಹೊದಿಸಿ ಸನ್ಮಾನಿಸಿದರು.

ನಾಳೆಯೂ ನಡೆಯುವ ಈ ಶೃಂಗಸಭೆಯಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್, ಉತ್ತರಾಖಂಡದ ಸಿಎಂ ಪುಷ್ಕರ್ ಧಾಮಿ, ರಾಜಸ್ಥಾನದ ಸಿಎಂ ಭಜನ್‌ಲಾಲ್ ಶರ್ಮಾ, ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಪಂಜಾಬ್ ಸಿಎಂ ಭಗವಂತ್ ಮಾನ್ ಭಾಗವಹಿಸಲಿದ್ದಾರೆ. ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡ ಭಾಷಣ ಮಾಡಲಿದ್ದಾರೆ. ಲೋಕಸಭಾ ಸದಸ್ಯರಾದ ಅಖಿಲೇಶ್ ಯಾದವ್ ಮತ್ತು ಅಸಾದುದ್ದೀನ್ ಓವೈಸಿ ಕೂಡ ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರತಿಯೊಬ್ಬ ಭಾರತೀಯ ನೋಡಬೇಕಾದ ಸಿನಿಮಾ: ‘ಧುರಂಧರ್ 2’ ಬಗ್ಗೆ ರಜನಿಕಾಂತ್ ಮೆಚ್ಚುಗೆ

ಸ್ಟಾರ್ ಕಲಾವಿದ ರಣವೀರ್ ಸಿಂಗ್ ಅಭಿನಯದ, ಆದಿತ್ಯ ಧರ್ ನಿರ್ದೇಶನದ ‘ಧುರಂಧರ್: ದಿ ರಿವೆಂಜ್’ (Dhurandhar: The Revenge) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಸೃಷ್ಟಿಸಿದೆ. ಕೇವಲ ಪ್ರೇಕ್ಷಕರು ಮಾತ್ರವಲ್ಲದೆ, ಭಾರತೀಯ ಚಿತ್ರರಂಗದ ದಿಗ್ಗಜ ನಟ, ಸೂಪರ್‌ ಸ್ಟಾರ್ ರಜನಿಕಾಂತ್ (Rajinikanth) ಅವರು ಈ ಚಿತ್ರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ‘ಆದಿತ್ಯ ಧರ್ ಬಾಕ್ಸ್ ಆಫೀಸ್ ಕಾ ಬಾಪ್’ ಎಂದು ಅವರು ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ‘ಧುರಂಧರ್ 2’ (Dhurandhar 2) ಬಗ್ಗೆ ಪೋಸ್ಟ್ ಮಾಡಿದ್ದಾರೆ.

ಸಿನಿಮಾ ವೀಕ್ಷಿಸಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ರಜನಿಕಾಂತ್ ಅವರು ಚಿತ್ರತಂಡವನ್ನು ಭರ್ಜರಿಯಾಗಿ ಅಭಿನಂದಿಸಿದ್ದಾರೆ. ‘ವಾಟ್ ಎ ಫಿಲ್ಮ್. ಧುರಂಧರ್ 2! ಆದಿತ್ಯ ಧರ್ ಬಾಕ್ಸ್ ಆಫೀಸ್ ಕಾ ಬಾಪ್. ರಣವೀರ್ ಮತ್ತು ಇಡೀ ತಂಡಕ್ಕೆ ಅಭಿನಂದನೆಗಳು. ಇದು ಪ್ರತಿಯೊಬ್ಬ ಭಾರತೀಯನೂ ನೋಡಲೇಬೇಕಾದ ಸಿನಿಮಾ. ಜೈ ಹಿಂದ್’ ಎಂದು ರಜನಿ ಟ್ವೀಟ್ ಮಾಡಿದ್ದಾರೆ.

ದಕ್ಷಿಣ ಭಾರತದ ಸೂಪರ್‌ಸ್ಟಾರ್‌ನಿಂದ ಇಂತಹ ಮೆಚ್ಚುಗೆಯ ಮಾತುಗಳು ಬಂದಿರುವುದು ಚಿತ್ರದ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿದೆ. ‘ಜಿಯೋ ಸ್ಟುಡಿಯೋಸ್’ ಸಂಸ್ಥೆ ನಿರ್ಮಾಣ ಮಾಡಿರುವ ಈ ಸಿನಿಮಾ ಭಾರತೀಯ ಚಿತ್ರರಂಗದ ಎಲ್ಲಾ ಹಳೆಯ ದಾಖಲೆಗಳನ್ನು ಧೂಳೀಪಟ ಮಾಡಿದೆ. ಮೊದಲ ವಾರಾಂತ್ಯದಲ್ಲೇ ವಿಶ್ವದಾದ್ಯಂತ ಬರೋಬ್ಬರಿ 761 ಕೋಟಿ ರೂಪಾಯಿ ಗಳಿಸುವ ಮೂಲಕ ಇದು ಭಾರತದ ಸಾರ್ವಕಾಲಿಕ ಅತಿದೊಡ್ಡ ಬ್ಲಾಕ್‌ಬಸ್ಟರ್ ಆರಂಭವನ್ನು ಪಡೆದಿದೆ.

ಭಾರತದ ಮಾರುಕಟ್ಟೆಯಲ್ಲಿ ಅತಿ ವೇಗವಾಗಿ 300 ಕೋಟಿ ರೂಪಾಯಿ ಕ್ಲಬ್ ಸೇರಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬುಕ್‌ ಮೈ ಶೋನಲ್ಲಿ ಒಂದು ಗಂಟೆಯಲ್ಲಿ ಅತಿ ಹೆಚ್ಚು ಟಿಕೆಟ್‌ಗಳು ಮಾರಾಟವಾದ ದಾಖಲೆಯೂ ಈ ಚಿತ್ರದ ಹೆಸರಿಗೆ ಸೇರಿದೆ. ವಿದೇಶಗಳಲ್ಲಿ ಮೊದಲ ವಾರಾಂತ್ಯದಲ್ಲಿ ಸುಮಾರು 210 ಕೋಟಿ ರೂಪಾಯಿ ಗಳಿಸಿ ಅತಿ ದೊಡ್ಡ ಓವರ್‌ಸೀಸ್ ಓಪನಿಂಗ್ ಕಂಡ ಭಾರತೀಯ ಚಿತ್ರ ಎನಿಸಿಕೊಂಡಿದೆ.

ಇದನ್ನೂ ಓದಿ: ‘ಧುರಂಧರ್ 2’ ಅತಿ ಕೆಟ್ಟ ಸಿನಿಮಾ ಎಂದ ಪಾಕ್ ಕುಟುಂಬ; ವಿಡಿಯೋ ವೈರಲ್

ಆದಿತ್ಯ ಧರ್ ಅವರ ನಿರ್ದೇಶನ ಮತ್ತು ರಣವೀರ್ ಸಿಂಗ್ ಅವರ ಪವರ್‌ಫುಲ್ ಅಭಿನಯದಿಂದ ಈ ಮಟ್ಟದ ಯಶಸ್ಸು ಸಿಕ್ಕಿದೆ. ದೇಶಪ್ರೇಮದ ಕಥಾಹಂದರ ಹೊಂದಿರುವ ಈ ಸಿನಿಮಾ ಈಗ ಜಾಗತಿಕ ಮಟ್ಟದಲ್ಲಿ ಭಾರತೀಯ ಚಿತ್ರರಂಗದ ಕೀರ್ತಿ ಪತಾಕೆಯನ್ನು ಹಾರಿಸುತ್ತಿದೆ. ಈ ನಡುವೆ ಅನೇಕ ಸೆಲೆಬ್ರಿಟಿಗಳಿಗೆ ಈ ಸಿನಿಮಾ ಇಷ್ಟ ಆಗಿಲ್ಲ. ಇದೊಂದು ಪ್ರೊಪಗಾಂಡ ಸಿನಿಮಾ ಎಂಬ ಟೀಕೆ ಕೂಡ ವ್ಯಕ್ತವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

PM Modi in WITT Summit 2026: ಯುದ್ಧದ ಸಮಯದಲ್ಲೂ ಭಾರತದ ಆರ್ಥಿಕ ಸ್ಥಿರತೆ ಕಂಡು ಜಗತ್ತು ಬೆರಗಾಗಿದೆ; ಟಿವಿ9 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಬಣ್ಣನೆ

ನವದೆಹಲಿ, ಮಾರ್ಚ್ 23: ಇರಾನ್, ಇಸ್ರೇಲ್-ಅಮೆರಿಕದ ನಡುವೆ ಯುದ್ಧ ನಡೆಯುತ್ತಿರುವುದರಿಂದ ಅದರ ಪರಿಣಾಮಗಳನ್ನು ಬೇರೆ ದೇಶಗಳೂ ಅನುಭವಿಸುತ್ತಿವೆ. ಮಧ್ಯ ಏಷ್ಯಾದ ಈ ಸಂಘರ್ಷದ ಕುರಿತು ಇಂದು ಟಿವಿ9ನ ವಾಟ್ ಇಂಡಿಯಾ ಥಿಂಕ್ಸ್ ಟುಡೇ (WITT Summit 2026) ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. “2014ರ ನೀರಸತೆಯನ್ನು ಬಿಟ್ಟು ಭಾರತವು ಹೊಸ ಆತ್ಮವಿಶ್ವಾಸದೊಂದಿಗೆ ಹೊರಹೊಮ್ಮುತ್ತಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಇಂದಿನ ಯುದ್ಧ ವಾತಾವರಣದವರೆಗೆ ಭಾರತೀಯರು ಪ್ರತಿ ವರ್ಷವೂ ಪರೀಕ್ಷೆಗಳನ್ನು ಎದುರಿಸುತ್ತಲೇ ಇದ್ದಾರೆ. 140 ಕೋಟಿ ಭಾರತೀಯರ ಸಾಮೂಹಿಕ ಪ್ರಯತ್ನದಿಂದ ಮಾತ್ರ ನಾವು ಪ್ರತಿಯೊಂದು ವಿಪತ್ತನ್ನು, ಸವಾಲನ್ನು ಎದುರಿಸಲು ಸಾಧ್ಯವಾಗಿದೆ. ಯುದ್ಧದ ಸಮಯದಲ್ಲೂ ಭಾರತ ಅನುಸರಿಸುತ್ತಿರುವ ತಂತ್ರಗಳು ಮತ್ತು ಆರ್ಥಿಕ ಸ್ಥಿರತೆಯಿಂದ ಜಗತ್ತು ಬೆರಗುಗೊಂಡಿದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

“ಫೆಬ್ರವರಿ 28ರಿಂದ ಜಗತ್ತು ಪ್ರಕ್ಷುಬ್ಧತೆಯಿಂದ ಕೂಡಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷಗಳಿಂದ ಯಾವುದೇ ದೇಶವು ಪ್ರಭಾವಿತವಾಗದೆ ಇರುವುದು ಅಸಾಧ್ಯ. ಯುದ್ಧಗಳು ನಮ್ಮ ಗಡಿಗಳಿಂದ ದೂರದಲ್ಲಿ ನಡೆಯುತ್ತಿದ್ದರೂ ಅವುಗಳ ಅಡ್ಡಪರಿಣಾಮಗಳನ್ನು ಪ್ರಪಂಚದಾದ್ಯಂತ ದೇಶಗಳು ಅನುಭವಿಸುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಇಂತಹ ಭೀಕರ ಪರಿಸ್ಥಿತಿಯಲ್ಲೂ ಭಾರತ ತನ್ನ ಅಭಿವೃದ್ಧಿಯ ವೇಗವನ್ನು ನಿಧಾನಗೊಳಿಸಿಲ್ಲ” ಎಂದು ಅವರು ಹೆಮ್ಮೆಯಿಂದ ಘೋಷಿಸಿದರು.

ಇದನ್ನೂ ಓದಿ: PM Modi in WITT Summit 2026: ಕಾಂಗ್ರೆಸ್​ನ ಪಾಪದ ಹೊರೆಯನ್ನು ನಾವು ಹೊತ್ತಿದ್ದೇವೆ; ವಿಟ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ

“ಜಗತ್ತು ವಿಭಿನ್ನ ಬಣಗಳಾಗಿ ವಿಭಜನೆಯಾಗುತ್ತಿದ್ದರೆ ಭಾರತ ದೇಶಗಳ ನಡುವೆ ಅಭೂತಪೂರ್ವ ಸೇತುವೆಗಳನ್ನು ನಿರ್ಮಿಸುತ್ತಿದೆ. ಜಾಗತಿಕ ದಕ್ಷಿಣದಿಂದ ನಮ್ಮ ನೆರೆಹೊರೆಯವರವರೆಗೆ ಭಾರತವು ವಿಶ್ವಾಸಾರ್ಹ ಪಾಲುದಾರನಾಗಿ ಮಾರ್ಪಟ್ಟಿದೆ. ನಾವು ಶಾಂತಿ ಮತ್ತು ಸಂವಾದಕ್ಕಾಗಿ ಮಾತ್ರ ನಿಲ್ಲುತ್ತೇವೆ. ಅದು ಬಿಟ್ಟು ನಾವು ಯಾವ ದೇಶದ ಪರವಾಗಿಯೂ ಅಲ್ಲ” ಎಂದು ಮೋದಿ ವಿವರಿಸಿದರು.

“ಯುದ್ಧದ ಪರಿಣಾಮದ ಹೊರತಾಗಿಯೂ, ಭಾರತವು ತನ್ನ ಅಭಿವೃದ್ಧಿಯ ವೇಗವನ್ನು ನಿಲ್ಲಿಸಿಲ್ಲ. ಕಳೆದ 23 ದಿನಗಳಲ್ಲಿ ಸರ್ಕಾರ ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. ಯುದ್ಧದ ನಡುವೆಯೂ ಭಾರತ ಪ್ರಗತಿಯನ್ನು ಕಾಯ್ದುಕೊಂಡಿದೆ” ಎಂದು ಪ್ರಧಾನಿ ಮೋದಿ ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

PM Modi Speech in WITT 2026: ಟಿವಿ9 ವಾರ್ಷಿಕ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಸ್ಫೂರ್ತಿದಾಯಕ ಭಾಷಣ

ನವದೆಹಲಿ, (ಮಾರ್ಚ್ 23): ದೆಹಲಿಯಲ್ಲಿ ನಡೆಯುತ್ತಿರುವ ಟಿವಿ9 ವಾರ್ಷಿಕ ಶೃಂಗಸಭೆ  ‘ವಾಟ್​ ಇಂಡಿಯಾ ಥಿಂಕ್ಸ್​ ಟುಡೆ’ ಸಮಿಟ್​​ನಲ್ಲಿ (‘TV9 What India Thinks Today Summit- 2026’) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಇದರೊಂದಿಗೆ ಪ್ರಧಾನಿ ಮೋದಿಯವರು ಟಿವಿ9ನ ನಾಲ್ಕು ಶೃಂಗಸಭೆಗಳ ಪೈಕಿ ಸತತ ಮೂರನೇ ಬಾರಿಗೆ ಟಿವಿ9 ಶೃಂಗಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುರುವುದು ವಿಶೇಷವಾಗಿದೆ. ಇನ್ನು ಈ ಟಿವಿ9 ವಾರ್ಷಿಕ ಶೃಂಗಸಭೆ  ‘ವಾಟ್​ ಇಂಡಿಯಾ ಥಿಂಕ್ಸ್​ ಟುಡೆ’ ಸಮಿಟ್​​ನಲ್ಲಿ ಮೋದಿ ಮಾತನಾಡಿ, ಭಾರತದ ಆರ್ಥಿಕತೆ, ಭಾರತದ ಸಾಧನೆಗಳ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟರು.

Source link

IPL 2026: ಬುಮ್ರಾಗೆ ಇಂಜುರಿ? ತಂಡ ತೊರೆದು ಬೆಂಗಳೂರಿಗೆ ಬಂದ ಯಾರ್ಕರ್ ಕಿಂಗ್

Source link

ಒಂದು ಕ್ಷಿಪಣಿ ಜಾಗತಿಕ ಮಾರುಕಟ್ಟೆಗಳನ್ನೇ ಅಸ್ತವ್ಯಸ್ತಗೊಳಿಸುತ್ತಿದೆ: ಬರುಣ್ ದಾಸ್

ನವದೆಹಲಿ, (ಮಾರ್ಚ್ 23): ದೆಹಲಿಯಲ್ಲಿ ನಡೆಯುತ್ತಿರುವ ಟಿವಿ9 ವಾರ್ಷಿಕ ಶೃಂಗಸಭೆ  ‘ವಾಟ್​ ಇಂಡಿಯಾ ಥಿಂಕ್ಸ್​ ಟುಡೆ’ ಸಮಿಟ್​​ನಲ್ಲಿ (‘TV9 What India Thinks Today Summit- 2026’) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಇನ್ನು  ಟಿವಿ9 ನೆಟ್ವರ್ಕ್ ಸಿಇಒ ಮತ್ತು ಎಂಡಿ ಬರುಣ್ ದಾಸ್ ಅವರು ಪ್ರಧಾನಿ ಮೋದಿ ಅವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು.  ಇದರೊಂದಿಗೆ ಪ್ರಧಾನಿ ಮೋದಿ ಟಿವಿ9ನ ನಾಲ್ಕು ಶೃಂಗಸಭೆಗಳ ಪೈಕಿ ಸತತ ಮೂರನೇ ಬಾರಿಗೆ ಟಿವಿ9 ಶೃಂಗಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುರುವುದು ವಿಶೇಷವಾಗಿದೆ.

ಇದೇ ವೇಳೆ ಮಾತನಾಡಿದ ಬರುಣ್ ದಾಸ್,  ನಾವು ಇಂದು ಅತ್ಯಂತ ಅಸ್ಥಿರವಾದ ದಿನಗಳಲ್ಲಿ ಬದುಕುತ್ತಿದ್ದೇವೆ. ಪಶ್ಚಿಮ ಏಷ್ಯಾದ ಯುದ್ಧಕ್ಕೂ ಮೊದಲು ಸುಂಕದ ಸಮರವು ವಿಶ್ವದ ಆರ್ಥಿಕತೆಯನ್ನು ನಡುಗಿಸಿತ್ತು. ಸೇನಾ ಬಲದ ಯುದ್ಧ ಒಂದಾದರೆ, ಆರ್ಥಿಕ ಯುದ್ಧ ಮತ್ತೊಂದು. ಜಗತ್ತಿನ 830 ಕೋಟಿ ಜನರು ಬಾಧಿತರಾಗಿದ್ದಾರೆ. ಈ ಜಾಗತಿಕ ಅಸ್ಥಿರತೆ ನಡುವೆ ಭಾರತ ಅಭಿವೃದ್ದಿ ಹೊಂದುತ್ತಿರುವುದು ಮಾತ್ರವಲ್ಲ, ಜಾಗತಿಕ ವ್ಯವಸ್ಥೆ ಸ್ಥಿರಗೊಳಿಸಲು ನೆರವಾಗಿದೆ ಎಂದರು.

ಇದನ್ನೂ ಓದಿ: PM Modi in WITT Summit 2026: ಕಾಂಗ್ರೆಸ್​ನ ಪಾಪದ ಹೊರೆಯನ್ನು ನಾವು ಹೊತ್ತಿದ್ದೇವೆ; ವಿಟ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ

Source link

ಅಥಣಿಯಿಂದ ಶಿವಣ್ಣನ ನೋಡಲು ಬೆಂಗಳೂರಿಗೆ ಬಂದ ವಿಶೇಷ ಚೇತನ ಅಭಿಮಾನಿ

‘ಹ್ಯಾಟ್ರಿಕ್ ಹೀರೋ’ ಶಿವರಾಜ್​ಕುಮಾರ್ (Shivarajkumar) ಎಂದರೆ ಅಭಿಮಾನಿಗಳಿಗೆ ಸಖತ್ ಇಷ್ಟ. ಶಿವಣ್ಣ ಕೂಡ ಅಭಿಮಾನಿಗಳನ್ನು ಪ್ರೀತಿಯಿಂದ ಕಾಣುತ್ತಾರೆ. ‘ಅಭಿಮಾನಿ ದೇವರುಗಳು’ ಎಂದು ನಂಬಿದ ಫ್ಯಾಮಿಲಿ ಅವರದ್ದು. ಆ ಮಾತಿಗೆ ಆಗಾಗ ಸಾಕ್ಷಿ ಸಿಗುತ್ತಲೇ ಇರುತ್ತದೆ. ಅಥಣಿಯಿಂದ ಶಿವಣ್ಣ ಅವರನ್ನು ನೋಡಲು ವಿಶೇಷ ಚೇತನ ಅಭಿಮಾನಿಯೊಬ್ಬರು ಬೆಂಗಳೂರಿಗೆ ಬಂದಿದ್ದಾರೆ. ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ (DKD) ರಿಯಾಲಿಟಿ ಶೋ ಚಿತ್ರೀಕರಣದ ಸೆಟ್​​ನಲ್ಲಿ ಅವರನ್ನು ಭೇಟಿ ಮಾಡಲಾಗಿದೆ. ಶಿವಣ್ಣ (Shivanna) ಅವರು ವಿಶೇಷ ಚೇತನ ಅಭಿಮಾನಿಗೆ ಫೋಟೋ ನೀಡಿ, ಆರ್ಥಿಕ ಸಹಾಯ ಮಾಡಿದ್ದಾರೆ. ಆ ಸಂದರ್ಭದ ವಿಡಿಯೋ ಲಭ್ಯವಾಗಿದೆ. ತಮ್ಮ ನೆಚ್ಚಿನ ನಟನನ್ನು ಭೇಟಿ ಮಾಡಿ ಫೋಟೋ ತೆಗೆದುಕೊಂಡ ಆ ಅಭಿಮಾನಿ ಸಖತ್ ಖುಷಿಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link