nagaraj11081993

‘ಶಾರುಖ್ ಖಾನ್ ಬಳಿ ನಾನು ಲಂಚ ಕೇಳಿಲ್ಲ’: ಬಾಂಬೆ ಹೈಕೋರ್ಟ್‌ನಲ್ಲಿ ಸಮೀರ್ ವಾಂಖೆಡೆ ವಾದ

ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ (Aryan Khan) ಅವರನ್ನು ಡ್ರಗ್ಸ್ ಪ್ರಕರಣದಿಂದ ಪಾರು ಮಾಡಲು 25 ಕೋಟಿ ರೂಪಾಯಿ ಲಂಚ ಕೇಳಿದ ಆರೋಪ ಎದುರಿಸುತ್ತಿರುವ ಐಆರ್‌ಎಸ್ ಅಧಿಕಾರಿ ಸಮೀರ್ ವಾಂಖೆಡೆ (Sameer Wankhede), ಸೋಮವಾರ (ಮಾರ್ಚ್ 23) ಬಾಂಬೆ ಹೈಕೋರ್ಟ್‌ನಲ್ಲಿ ತಮ್ಮ ವಾದ ಮಂಡಿಸಿದ್ದಾರೆ. ‘ನಾನು ಶಾರುಖ್ ಖಾನ್ (Shah Rukh Khan) ಅವರಿಂದ ಯಾವುದೇ ಲಂಚ ಕೇಳಿಲ್ಲ ಅಥವಾ ಸ್ವೀಕರಿಸಿಲ್ಲ’ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಸಿಬಿಐ ಬಳಿ ಯಾವುದೇ ಪುರಾವೆಯಿಲ್ಲ…

Read More

WITT Summit 2026- ಜಗತ್ತಿಗೆ ಪ್ರತಿಭೆಗಳ ಪೂರೈಕೆಗೆ ಭಾರತ ಸಿದ್ಧ: ಡಬ್ಲ್ಯುಐಟಿಟಿ ಸಮಿಟ್​ನಲ್ಲಿ ಜೂಪಲ್ಲಿ ರಾಮು ರಾವ್ ಹೇಳಿಕೆ

ನವದೆಹಲಿ, ಮಾರ್ಚ್ 23: ಗುಣಮಟ್ಟದ ಪ್ರತಿಭೆಗಳಿಗೆ ಇರವ ಬೇಡಿಕೆ ಸಾರ್ವತ್ರಿಕವಾದುದು. ಈ ಬೇಡಿಕೆ ಪೂರೈಸಲು ಶಕ್ತವಾಗಿರುವ ಏಕೈಕ ರಾಷ್ಟ್ರ ಭಾರತ ಎಂದು ಮೈ ಹೋಮ್ ಗ್ರೂಪ್​ನ ಎಕ್ಸಿಕ್ಯೂಟಿವ್ ವೈಸ್ ಛೇರ್ಮನ್ ಜೂಪಲ್ಲಿ ರಾಮು ರಾವ್ (Jupally Ramu Rao) ಹೇಳಿದರು. ಟಿವಿ9 ನೆಟ್ವರ್ಕ್ ಆಯೋಜಿಸಿರುವ 2026ರ ವಾಟ್ ಇಂಡಿಯಾ ಥಿಂಕ್ಸ್ ಟುಡೇ ಶೃಂಗಸಭೆಯಲ್ಲಿ (What India Thinks Today – WITT Summit 2026) ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿ ರಾಮು ರಾವ್ ಅವರು ಮಾತನಾಡುತ್ತಿದ್ದರು….

Read More

‘ಧುರಂಧರ್ 2’ ಅತಿ ಕೆಟ್ಟ ಸಿನಿಮಾ ಎಂದ ಪಾಕ್ ಕುಟುಂಬ; ವಿಡಿಯೋ ವೈರಲ್

ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2’ (Dhurandhar 2) ಸಿನಿಮಾ ವಿಶ್ವಾದ್ಯಂತ 750 ಕೋಟಿ ರೂಪಾಯಿ ಗಳಿಸಿ ಮುನ್ನುಗ್ಗುತ್ತಿದೆ. ಇನ್ನೊಂದೆಡೆ ವಿದೇಶದಲ್ಲಿ ಈ ಚಿತ್ರದ ವಿರುದ್ಧ ಕಿಡಿಕಾರುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಯುನೈಟೆಡ್ ಕಿಂಗ್​ಡಮ್​ನ​​ ಚಿತ್ರಮಂದಿರವೊಂದರಿಂದ ಹೊರಬಂದ ಪಾಕಿಸ್ತಾನ (Pakistan) ಮೂಲದ ಕುಟುಂಬದವರು ಈ ಸಿನಿಮಾದ ವಿರುದ್ಧ ಅತ್ಯಂತ ಕಟುವಾದ ಪದಗಳನ್ನು ಬಳಸಿ ಚಿತ್ರದ ಬಗ್ಗೆ ವಿಮರ್ಶೆ ಹಂಚಿಕೊಂಡಿದ್ದಾರೆ. ಅವರ ವಿಡಿಯೋ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ಸಿನಿಮಾ ನೋಡಿ ಹೊರಬರುತ್ತಿರುವ ಪಾಕಿಸ್ತಾನಿ ವ್ಯಕ್ತಿಯೊಬ್ಬರು, ‘ಇದು…

Read More

PM Modi in WITT Summit 2026: ಕಾಂಗ್ರೆಸ್​ನ ಪಾಪದ ಹೊರೆಯನ್ನು ನಾವು ಹೊತ್ತಿದ್ದೇವೆ; ವಿಟ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ

ನವದೆಹಲಿ, ಮಾರ್ಚ್ 23: ದೆಹಲಿಯಲ್ಲಿ ಇಂದಿನಿಂದ ಟಿವಿ9 ನೆಟ್​ವರ್ಕ್​ನ ವಾಟ್ ಇಂಡಿಯಾ ಥಿಂಕ್ಸ್ ಟುಡೇ (WITT Summit 2026) ಶೃಂಗಸಭೆ ಆರಂಭವಾಗಿದೆ. ಈ ಶೃಂಗಸಭೆಯಲ್ಲಿ ಮುಖ್ಯ ಭಾಷಣ ಮಾಡಿರುವ ಪ್ರಧಾನಿ ನರೇಂದ್ರ ಮೋದಿ (PM Modi in WITT Summit) ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸಿದ್ದಾರೆ. ಅಲ್ಲದೆ, ಕಾಂಗ್ರೆಸ್ ಮಾಡಿದ ಪಾಪದ ಹೊರೆಗಳನ್ನು ನಾವು ಹೊತ್ತಿದ್ದೇವೆ ಎಂದು ಅಸಮಾಧಾನ ಹೊರಹಾಕಿದ್ದಾರೆ. “ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್ ಬಿಕ್ಕಟ್ಟು ಉಂಟಾಗಿತ್ತು. ಆದರೆ ಕಾಂಗ್ರೆಸ್ ದೇಶದ…

Read More

IPL 2026: ಕರ್ನಾಟಕದ ಈ 2 ನಗರಗಳಲ್ಲಿ ಐಪಿಎಲ್ ಫ್ಯಾನ್ ಪಾರ್ಕ್ ಸ್ಥಾಪನೆ; ಯಾವಾಗ, ಎಲ್ಲಿ?

2026 ರ ಐಪಿಎಲ್ (IPL 2026) ಇದೇ ಮಾರ್ಚ್​ 28 ರಿಂದ ಆರಂಭವಾಗುತ್ತಿದೆ. ಈ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ನೋಡಲು ಅಭಿಮಾನಿಗಳು ಕೂಡ ಕಾದು ಕುಳಿತಿದ್ದಾರೆ. ಆದಾಗ್ಯೂ ಎಲ್ಲಾ ಅಭಿಮಾನಿಗಳಿಗೂ ಕ್ರೀಡಾಂಗಣಕ್ಕೆ ಹೋಗಿ ಪಂದ್ಯಗಳನ್ನು ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಟಿಕೆಟ್ ಸಿಗದೆ ಇರುವುದು ಅಥವಾ ಟಿಕೆಟ್ ಬೆಲೆ ಅಧಿಕವಾಗಿರುವುದು ಸೇರಿದಂತೆ ಇದಕ್ಕೆ ನಾನಾ ಕಾರಣಗಳಿರುತ್ತವೆ. ಅಂತಹ ಅಭಿಮಾನಿಗಳು ನಿರಾಶೆಗೊಳ್ಳದಂತೆ ನೋಡಿಕೊಳ್ಳುವ ಸಲುವಾಗಿ ಬಿಸಿಸಿಐ ದೇಶದ ನಾನಾ ನಗರಗಳಲ್ಲಿ ಐಪಿಎಲ್ ಫ್ಯಾನ್ ಪಾರ್ಕ್​ಗಳನ್ನು (IPL 2026 Fan Parks) ಸ್ಥಾಪಿಸಲಿದೆ….

Read More

WITT Summit 2026: ತೈಲ ಬಿಕ್ಕಟ್ಟು – ಭಾರತ ಏನು ಯೋಚಿಸುತ್ತಿದೆ ಎಂಬುದು ಜಗತ್ತಿಗೆ ಮುಖ್ಯ ಎಂದ ಟಿವಿ9 ನೆಟ್ವರ್ಕ್ ಸಿಇಒ ಬರುಣ್ ದಾಸ್

ನವದೆಹಲಿ, ಮಾರ್ಚ್ 23: ಟಿವಿ9 ವಾರ್ಷಿಕ ಶೃಂಗಸಭೆಯಾದ ವಾಟ್ ಇಂಡಿಯಾ ಥಿಂಕ್ಸ್ ಟುಡೇ ಸಮಿಟ್​ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬರಮಾಡಿಕೊಳ್ಳಲಾಯಿತು. ಟಿವಿ9 ನೆಟ್ವರ್ಕ್ ಸಿಇಒ ಮತ್ತು ಎಂಡಿ ಬರುಣ್ ದಾಸ್ ಅವರು ಪ್ರಧಾನಿ ಮೋದಿ ಅವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ತಮ್ಮ ಬಿಡುವಿಲ್ಲದ ವೇಳಾಪಟ್ಟಿಯಲ್ಲೂ ಪ್ರಧಾನಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಮಯ ಮಾಡಿಕೊಂಡಿರುವುದಕ್ಕೆ ಬರುಣ್ ದಾಸ್ ಹರ್ಷ ವ್ಯಕ್ತಪಡಿಸಿದರು. ಪ್ರಧಾನಿಯವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದ ಬಳಿಕ ಮಾತು ಮುಂದುವರಿಸಿದ ಬರುಣ್ ದಾಸ್, ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟಿನ ಪರಿಸ್ಥಿತಿ ಜಾಗತಿಕ…

Read More

ಕೇಳೋರಿಲ್ಲ ಬೀದರ್​​ ರೈತರ ಗೋಳು: ಬೆಳೆ ವಿಮೆ ಹೆಸರಲ್ಲಿ ಭಾರೀ ಮೋಸ

ಬೀದರ್​, ಮಾರ್ಚ್​ 23: ತಮ್ಮ ಹೊಲದಲ್ಲಿ ಬಿತ್ತಿದ ಬೆಳೆ ಪ್ರಕೃತಿ ವಿಕೋಪಕ್ಕೆ ತುತ್ತಾದರೆ ಅನೂಕುಲವಾಗಲಿ ಅಂತಾ ನೂರಾರು ರೈತರು ತಮ್ಮ ಪೈರಿಗೆ ಬೆಳೆ ವಿಮೆ (crop insurance) ಮಾಡಿಸಿದರು. ಕೃಷಿ ಇಲಾಖೆ ಅಧಿಕಾರಿಗಳ ನಿರ್ದೇಶನದ ಮೇರೆಗೆ ಪ್ರತಿ ವರ್ಷ ಇಂತಿಷ್ಠು ಅಂತಾ ಹಣವನ್ನ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಕಟ್ಟುತ್ತಾ ಬಂದಿದ್ದರು. ಆದರೆ ಆ ರೈತರಿಗೆ ನ್ಯಾಯಯುತವಾಗಿ ಬರಬೇಕಾಗದ ಬೆಳೆ ವಿಮೆ ಮಾತ್ರ ಬರುತ್ತಿಲ್ಲ. ಹೀಗಾಗಿ ರೈತರು ಕಂಗಾಲಾಗಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಎರಡು ಲಕ್ಷ ನಾಲ್ಕು ಸಾವಿರ…

Read More

2027 ರ ಏಕದಿನ ವಿಶ್ವಕಪ್ ಸ್ವರೂಪ ಹೇಗಿರಲಿದೆ? ಭಾರತಕ್ಕೆ ಸುವರ್ಣಾವಕಾಶ

ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದ ಸಂತಸದಲ್ಲಿರುವ ಟೀಂ ಇಂಡಿಯಾದ ಮುಂದಿನ ಗುರಿ 2027 ರ ಏಕದಿನ ವಿಶ್ವಕಪ್ (2027 ODI World Cup). 2023 ರಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಫೈನಲ್​ನಲ್ಲಿ ಮುಗ್ಗರಿಸಿ ಚಾಂಪಿಯನ್ ಪಟ್ಟದಿಂದ ವಂಚಿತವಾಗಿದ್ದ ಟೀಂ ಇಂಡಿಯಾ (Team India) ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ ಗೆಲ್ಲುವ ಗುರಿ ಇಟ್ಟುಕೊಂಡಿದೆ. ಇದಕ್ಕೆ ಪೂರಕವಾಗಿ ಬಿಸಿಸಿಐ ಕೂಡ ಈ ಕ್ಯಾಲೆಂಡರ್ ವರ್ಷದಲ್ಲಿ ಏಕದಿನ ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸಿದೆ. ಇದೆಲ್ಲದರ ನಡುವೆ 2027…

Read More

ಸಾರ್ವಜನಿಕವಾಗಿ ಪತ್ನಿಯನ್ನ ಗಂಡ ಹತ್ಯೆ ಮಾಡಿದ್ಯಾಕೆ? ಅಂತಹ ದ್ವೇಷ ಏನಿತ್ತು?

ಬೆಳಗಾವಿ, (ಮಾರ್ಚ್ 23): ಅವರಿಬ್ಬರೂ ಹದಿನೈದು ವರ್ಷದ ಹಿಂದೆ ಪ್ರೀತಿಸಿ ಕುಟುಂಬಸ್ಥರ ವಿರೋಧದ ನಡುವೆಯೂ ಅಂತರ್ಜಾತಿ ಮದುವೆಯಾದವರು. ಮೂರು ಮುದ್ದಾದ ಮಕ್ಕಳು ಈ ದಂಪತಿ ಅನ್ಯೋನ್ಯತೆಗೆ ಸಾಕ್ಷಿಯಾಗಿದ್ದರು. ಆದರೀಗ ಅದೊಂದು ಕಾರಣಕ್ಕೆ ಪ್ರೀತಿಸಿ ಮದುವೆಯಾದ ಹೆಂಡತಿಯನ್ನೇ ಪತಿ ಮನೆಯಿಂದ ಎಳೆತಂದು ಕಲ್ಲಿನಿಂದ ಜಜ್ಜಿ ನಡು ರಸ್ತೆಯಲ್ಲೇ ಬರ್ಬರ ಹತ್ಯೆ ಮಾಡಿದ್ದಾನೆ. ಈ ಘೋರ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ನಡೆದಿದೆ. ಶಿವಕ್ಕ ಹಾಗೂ ಬಸವರಾಜ 15 ವರ್ಷಗಳ ಹಿಂದೆ ಪ್ರೀತಿಸಿ ಅಂತರ್ಜಾತಿ ವಿವಾಹ…

Read More

ಕುವೈತ್​​ನಲ್ಲಿ ಇರಾನ್​ನಿಂದ ಮತ್ತೊಂದು ಯುದ್ಧವಿಮಾನ ಪತನ; ವಿಡಿಯೋ ವೈರಲ್

ಕುವೈತ್, ಮಾರ್ಚ್ 23: ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕದ ದಾಳಿ ಮುಂದುವರೆದಂತೆ ಇರಾನ್ (Iran War) ಕೂಡ ಗಲ್ಫ್ ದೇಶಗಳಲ್ಲಿನ ಅಮೆರಿಕದ ವಾಯುನೆಲೆಗಳ ಮೇಲಿನ ದಾಳಿಯನ್ನು ಮುಂದುವರೆಸಿದೆ. ಈ ಯುದ್ಧ ಆರಂಭವಾಗಿ 24 ದಿನಗಳಾಗಿವೆ. ಇನ್ನೂ ಮಧ್ಯಪ್ರಾಚ್ಯ ಸಂಘರ್ಷ ತೀವ್ರಗೊಳ್ಳುತ್ತಲೇ ಇದೆ. ಇದರ ವಿಡಿಯೋ ವೈರಲ್ ಆಗಿದೆ. ಮಧ್ಯಪ್ರಾಚ್ಯದಲ್ಲಿ ಸಂಘರ್ಷ ನಾಲ್ಕನೇ ವಾರಕ್ಕೆ ಕಾಲಿಡುತ್ತಿದ್ದಂತೆ ಎಕ್ಸ್​ನಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ಇದು ಕುವೈತ್‌ನಲ್ಲಿ ಅಮೆರಿಕದ ಮಿಲಿಟರಿಯ ಮತ್ತೊಂದು F-15E ಯುದ್ಧವಿಮಾನ ಪತನವಾಗುವುದನ್ನು ತೋರಿಸುತ್ತದೆ. ಇದು…

Read More