‘ಹ್ಯಾಟ್ರಿಕ್ ಹೀರೋ’ ಶಿವರಾಜ್ಕುಮಾರ್ (Shivarajkumar) ಎಂದರೆ ಅಭಿಮಾನಿಗಳಿಗೆ ಸಖತ್ ಇಷ್ಟ. ಶಿವಣ್ಣ ಕೂಡ ಅಭಿಮಾನಿಗಳನ್ನು ಪ್ರೀತಿಯಿಂದ ಕಾಣುತ್ತಾರೆ. ‘ಅಭಿಮಾನಿ ದೇವರುಗಳು’ ಎಂದು ನಂಬಿದ ಫ್ಯಾಮಿಲಿ ಅವರದ್ದು. ಆ ಮಾತಿಗೆ ಆಗಾಗ ಸಾಕ್ಷಿ ಸಿಗುತ್ತಲೇ ಇರುತ್ತದೆ. ಅಥಣಿಯಿಂದ ಶಿವಣ್ಣ ಅವರನ್ನು ನೋಡಲು ವಿಶೇಷ ಚೇತನ ಅಭಿಮಾನಿಯೊಬ್ಬರು ಬೆಂಗಳೂರಿಗೆ ಬಂದಿದ್ದಾರೆ. ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ (DKD) ರಿಯಾಲಿಟಿ ಶೋ ಚಿತ್ರೀಕರಣದ ಸೆಟ್ನಲ್ಲಿ ಅವರನ್ನು ಭೇಟಿ ಮಾಡಲಾಗಿದೆ. ಶಿವಣ್ಣ (Shivanna) ಅವರು ವಿಶೇಷ ಚೇತನ ಅಭಿಮಾನಿಗೆ ಫೋಟೋ ನೀಡಿ, ಆರ್ಥಿಕ ಸಹಾಯ ಮಾಡಿದ್ದಾರೆ. ಆ ಸಂದರ್ಭದ ವಿಡಿಯೋ ಲಭ್ಯವಾಗಿದೆ. ತಮ್ಮ ನೆಚ್ಚಿನ ನಟನನ್ನು ಭೇಟಿ ಮಾಡಿ ಫೋಟೋ ತೆಗೆದುಕೊಂಡ ಆ ಅಭಿಮಾನಿ ಸಖತ್ ಖುಷಿಪಟ್ಟಿದ್ದಾರೆ.
ಹಾಸನ, ಮಾರ್ಚ್ 23: ಕೇವಲ 7 ಸಾವಿರ ರೂ ಹಣಕ್ಕಾಗಿ ಗಾಂಜಾ ಅಮಲಿನಲ್ಲಿ ಗೆಳೆಯನ್ನೇ ಹತ್ಯೆಗೈದ (kill) ಪ್ರಕರಣವನ್ನು ಬೇಧಿಸಿರುವ ಪೊಲೀಸರು ಐವರ ಹೆಡೆಮುರಿ ಕಟ್ಟಿದ್ದಾರೆ. ವರುಣ್ನ್ನ ಸಿನಿಮೀಯ ರೀತಿಯಲ್ಲಿ ಅಪಹರಿಸಿ ಕರೆತಂದು ಕೂಡಿ ಹಾಕಿ ಸ್ನೇಹಿತರ ಗ್ಯಾಂಗ್ ಹಲ್ಲೆ ಮಾಡಿ ಬಳಿಕ ಕೊಲೆಗೈದು ಎರಡು ದಿನ ಶವದ ಜೊತೆ ಕಳೆದು ಬಳಿಕ ಸುಟ್ಟು ಎಸ್ಕೇಪ್ ಆಗಿದ್ದವರ ಬೆನ್ನಟ್ಟಿದ ಪೊಲೀಸರು, ನಾಪತ್ತೆ ಕೇಸ್ನ ಮಿಸ್ಟ್ರಿಯನ್ನ ಬಯಲು ಮಾಡಿದ್ದಾರೆ. ಕೊಟ್ಟ ಸಾಲ ವಾಪಸ್ ಕೊಟ್ಟಿಲ್ಲ ಎನ್ನುವ ಒಂದೇ ಕಾರಣಕ್ಕೆ ಅಮಾನುಷವಾಗಿ ಕೊಲೆ ಮಾಡಿದವರು ಒಬ್ಬೊಬ್ಬರಾಗಿ ಪೊಲೀಸರ ಕೈಗೆ ಸಿಗುತ್ತಿದ್ದಾರೆ. ಪ್ರಮುಖ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಐವರ ಬಂಧನ
ನಿನ್ನೆ ನಡೆದಿದ್ದ ಭೀಕರ ಕೊಲೆಗೆ ಇಡೀ ಹಾಸನ ಜಿಲ್ಲೆಯೇ ಬೆಚ್ಚಿಬಿದ್ದಿತ್ತು. ಅರಸೀಕೆರೆ ತಾಲ್ಲೂಕಿನ ಕಾಡಯ್ಯನಕೊಪ್ಪಲು ಗ್ರಾಮದ ವರುಣ್(22) ನನ್ನ ಆತನ ಸ್ನೇಹಿತ ಶಶಾಂಕ್ ಹಾಗೂ ಇತರೆ 7 ಜನರು ಸೇರಿ ಮಾರ್ಚ್ 10ರಂದು ಅಪಹರಿಸಿದ್ದಾರೆ. 7 ಸಾವಿರ ರೂ ಸಾಲದ ಹಣ ಕೊಟ್ಟಿಲ್ಲ ಎಂದು ಕರೆದೊಯ್ದು ಕಿರಣ್ ಎಂಬಾತನ ತೋಟದ ಮನೆಯಲ್ಲಿಟ್ಟು ಕೂಡಿ ಹಾಕಿ ಹಲ್ಲೆ ಮಾಡಿದ್ದಾರೆ. ಮಾರ್ಚ್ 12ರವರೆಗೆ ಎರಡು ದಿನ ಮನಸೋ ಇಚ್ಛೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಬಳಿಕ ಮಾರ್ಚ್ 13ರ ಮುಂಜಾನೆ ಅರಸೀಕೆರೆ ತಾಲ್ಲೂಕಿನ ಜೇನುಕಲ್ ಸಿದ್ದೇಶ್ವರ ಸ್ವಾಮಿ ಬೆಟ್ಟದ ಸಮೀಪ ಶವವನ್ನು ಸಂಪೂರ್ಣವಾಗಿ ಸುಟ್ಟು ಎಸ್ಕೇಪ್ ಆಗಿದ್ದಾರೆ.
ಮಾರ್ಚ್ 10ರಿಂದ ಮಗ ಕಾಣುತ್ತಿಲ್ಲ ಎಂದು ವರುಣ್ ತಾಯಿ ಕಲಾವತಿ ಮಾರ್ಚ್ 15ರಂದು ಗಂಡಸಿ ಠಾಣೆಗೆ ದೂರು ನೀಡಿದ್ದಾರೆ. ಕೇಸ್ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರಿಗೆ ಭೀಕರ ಕೊಲೆ ರಹಸ್ಯ ಬಯಲಾಗಿತ್ತು. ಮಾರ್ಚ್ 19ರಂದು ದುದ್ದಾ ಠಾಣೆಯಲ್ಲಿ ಕೊಲೆ ಕೇಸ್ ದಾಖಲು ಮಾಡಿಕೊಂಡು ತನಖೆ ನಡೆಸಿ ಸದ್ಯ ಸತೀಶ್, ಉಮರ್, ವಿಜಯ್, ಚೇತನ್ ಹಾಗೂ ಮನು ಎಂಬುವವರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿ, ಕೊಲೆಯ ಪ್ರಮುಖ ಆರೋಪಿ ಶಶಾಂಕ್ ಹಾಗೂ ಇನ್ನು ಹಲವರ ಬಂಧನಕ್ಕೆ ಬಲೆಬೀಸಲಾಗಿದೆ ಎಂದಿದ್ದಾರೆ.
ಎಸ್ಪಿ ಶುಭಾನ್ವಿತ ಹೇಳಿದ್ದಿಷ್ಟು
ವರುಣ್ನಿಂದ ಗಾಂಜಾ ಪಡೆಯಲು ಶಶಾಂಕ್ 7 ಸಾವಿರ ರೂ ಹಣ ನೀಡಿದ್ದ. ಆದರೆ ವರುಣ್ ಗಾಂಜಾ ನೀಡಿರಲಿಲ್ಲ. ಹೀಗಾಗಿ ಶಶಾಂಕ್ ತನ್ನ ಸ್ನೇಹಿತರ ಜೊತೆ ಸೇರಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗುತ್ತಿದೆ. ಈ ಬಗ್ಗೆ ಕೂಡ ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ಶುಭಾನ್ವಿತ ಹೇಳಿದ್ದಾರೆ.
ಆರು ತಿಂಗಳ ಹಿಂದೆ ತಂದೆ ಮೃತಪಟ್ಟಿದ್ದರಿಂದ ಕೆಲಸಕ್ಕೆಂದು ಬೆಂಗಳೂರು ಸೇರಿಕೊಂಡಿದ್ದ ವರುಣ್, ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ. ಯುಗಾದಿ ಹಿನ್ನೆಲೆ ತಾಯಿ ಜೊತೆಗೆ ಊರಿಗೆ ಬಂದಿದ್ದ. ಬೈಕ್ ರಿಪೇರಿ ಮಾಡಿಸಿಕೊಂಡು ಬರುವುದಾಗಿ ಹೇಳಿ ಹೋದವನು ವಾಪಸ್ ಬರಲಿಲ್ಲ. ಎಲ್ಲೆಡೆ ಹುಡುಕಾಡಿದ್ದ ತಾಯಿ ಕಡೆಗೆ ನಾಪತ್ತೆ ಕೇಸ್ ನೀಡಿದ್ದರು. ಆದರೆ ಅಷ್ಟರಲ್ಲಿ ಶಶಾಂಕ್ ಗ್ಯಾಂಗ್ ವರುಣ್ ಹಾಗೂ ಆತನ ಸ್ನೇಹಿತ ಲೋಹಿತ್ನನ್ನ ಕಿಡ್ನ್ಯಾಪ್ ಮಾಡಿ ಬಳಿಕ ಕೊಂದೇ ಬಿಟ್ಟಿದ್ದಾರೆ.
ಶವದೊಂದಿಗೆ ಒಂದು ದಿನ ಕಳೆದ ಕಿರಾತಕರು
ವರುಣ್ ಶವವನ್ನು ಹಾಸನದ ಗುಡ್ಡೇಗೌಡನ ಕೊಪ್ಪಲಿನ ಶಶಾಂಕ್ ರೂಮ್ನಲ್ಲಿಟ್ಟು ಒಂದು ದಿನ ಶವ ಎಲ್ಲಿ ವಿಲೇವಾರಿ ಮಾಡುವುದು ಎಂದು ಹುಡುಕಾಡಿದ್ದಾರೆ. ಕಡೆಗೆ ದೂರದ ಅರಸೀಕೆರೆಗೆ ಕೊಂಡೊಯ್ದು ಶವ ಸಂಪೂರ್ಣ ಸುಟ್ಟು ಹೋಗುವವರೆಗೆ ಅಲ್ಲೆ ಇದ್ದು ಬಳಿಕ ಎಲ್ಲರೂ ಎಸ್ಕೇಪ್ ಆಗಿದ್ದಾರೆ. ಆದರೆ ಯಾವಾಗ ಮಿಸ್ಸಿಂಗ್ ಕೇಸ್ನಲ್ಲಿ ಸಿಕ್ಕ ಕೆಲ ಸಾಕ್ಷಿಗಳನ್ನ ವಿಚಾರಣೆ ಮಾಡಿದ ಪೊಲೀಸರಿಗೆ ಪ್ರಕರಣದಲ್ಲಿ ಬೇರೆಯ ಸುಳಿವು ಸಿಕ್ಕಿದೆ. ತಕ್ಷಣ ಅಲರ್ಟ್ ಆಗಿ ತನಿಖೆಗಿಳಿದಾಗ ಕೊಲೆ ರಹಸ್ಯ ಬಯಲಾಗಿದೆ.
ಸದ್ಯ ಐವರು ಆರೋಪಿಗಳ ಬಂಧನವಾಗಿದೆ. ಕೊಲೆ ಮಾಡಿ ಶವ ಸುಟ್ಟಿರು ಸಂಬಂಧ ಕೆಲ ಸಾಕ್ಷಿಗಳ ಸುಳಿವು ಸಿಕ್ಕಿದೆ. ಇದನ್ನೆ ಸಂಗ್ರಹ ಮಾಡಿ ತನಿಖೆ ನಡೆಸಲಾಗುತ್ತಿದೆ. ಕೊಲೆ ಎಲ್ಲಿ ಮಾಡಲಾಯ್ತು, ಕೊಲೆಗೆ ಬೇರೆ ಏನಾದರು ಕಾರಣ ಇದೆಯಾ ಎಲ್ಲವೂ ಪ್ರಮುಖ ಆರೋಪಿ ಶಶಾಂಕ್ ಬಂಧನದ ಬಳಿಕ ತಿಳಿಯಲಿದ್ದು, ಸದ್ಯ 8 ಜನರ ಮೇಲೆ ಎಫ್‌ಐಆರ್ ದಾಖಲಾಗಿದೆ. ಬೇರೆ ಯಾರಾದರೂ ಕೊಲೆಯಲ್ಲಿ ಭಾಗಿಯಾಗಿದ್ದರೆ ಅವರ ವಿರುದ್ದವೂ ಕಠಿಣ ಕ್ರಮ ಎಂದು ಎಸ್ಪಿ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಹಲ್ಲೆ ಮಾಡಿ ಕೊಲೆಗೈಯಲಾಗಿದೆಯೋ, ಇಲ್ಲಾ ಗಾಂಜಾ ವ್ಯವಹಾರದ ಸಲುವಾಗಿ ಶುರುವಾದ ಕಿತ್ತಾಟ ಕೊಲೆಯಲ್ಲಿ ಕೊನೆಯಾಗಿದೆಯೋ ತನಿಖೆಯಲ್ಲೇ ಬಯಲಾಗಬೇಕಿದೆ. ಸದ್ಯ ಪೊಲೀಸರು ಎಲ್ಲಾ ಆಯಾಮದಲ್ಲಿ ತನಿಖೆ ನಡೆಸಿದ್ದಾರೆ.
ನವದೆಹಲಿ, ಮಾರ್ಚ್ 23: ಟಿವಿ9 ನೆಟ್ವರ್ಕ್ ಆಯೋಜಿಸಿರುವ ವಾಟ್ ಇಂಡಿಯಾ ಥಿಂಕ್ಸ್ ಟುಡೇ (WITT Summit- 2026) ಶೃಂಗಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಅಂತಾರಾಷ್ಟ್ರೀಯ ಬೆಳವಣಿಗೆಗಳ ಕುರಿತು ಪ್ರಮುಖ ಹೇಳಿಕೆಗಳನ್ನು ನೀಡಿದರು. ಈ ಬಾರಿಯ ಶೃಂಗಸಭೆಯ ವಿಷಯ ಭಾರತ ಮತ್ತು ಜಗತ್ತು ಎಂಬುದಾಗಿರುವುದರಿಂದ ಜಾಗತಿಕ ವಿಚಾರಗಳ ಬಗ್ಗೆಯೂ ಪ್ರಧಾನಿ ಮೋದಿ ಬೆಳಕು ಚೆಲ್ಲಿದರು. “ಜಾಗತಿಕ ಸಂಘರ್ಷದಲ್ಲಿ ನಾವು ಯಾರ ಪರವಾಗಿರುತ್ತೇವೆ?” ಎಂದು ಕೇಳುವವರಿಗೆ ನಮ್ಮ ಉತ್ತರ ಒಂದೇ. ನಾವು ದೇಶದ ಪರವಾಗಿರುತ್ತೇವೆ, ನಮಗೆ ಭಾರತೀಯರ ಅಭಿವೃದ್ಧಿಯೊಂದೇ ಮುಖ್ಯ” ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದರು.
“ಯುದ್ಧದಿಂದಾಗಿ ವಿಶ್ವದ ಹಲವು ಏಳುಬೀಳುಗಳ ನಡುವೆಯೂ ಭಾರತ ಅಭಿವೃದ್ಧಿ ಹೊಂದುತ್ತಿದೆ. ದೇಶದಲ್ಲಿ ಹೊಸ ಏರ್‌ಪೋರ್ಟ್ ಸೇರಿ ಹಲವು ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಯುವಕರಿಗೆ ಉದ್ಯೋಗ ಸೃಷ್ಟಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ 18 ಸಾವಿರ ಕೋಟಿ ರೂ. ಸಂದಾಯವಾಗಿದೆ. 2014ರ ಹಿಂದಿನ 10 ವರ್ಷಗಳು ಹಾಗೂ 2014ರ ನಂತರ 10 ವರ್ಷಗಳ ಅಭಿವೃದ್ಧಿ ಕೆಲಸಗಳನ್ನು ಹೋಲಿಕೆ ಮಾಡಿ ನೋಡಿ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಪ್ರತಿ ಯಶಸ್ಸನ್ನು ಪ್ರಶ್ನಿಸುವುದು ಕಾಂಗ್ರೆಸ್ಸಿನ ಕೆಲಸ ಎಂದು ಪ್ರಧಾನಿ ಮೋದಿ ಹೇಳಿದರು. “ಕೋವಿಡ್ ಲಸಿಕೆ ಬಗ್ಗೆಯೂ ಪ್ರಶ್ನೆಗಳು ಎದ್ದವು. ಭಾರತವು ಸವಾಲನ್ನು ಯಶಸ್ಸಾಗಿ ಪರಿವರ್ತಿಸಿದ್ದು ಕಾಂಗ್ರೆಸ್ಸಿನ ದುರದೃಷ್ಟ ಮತ್ತು ಭಾರತದ ಅದೃಷ್ಟ. ಡಿಜಿಟಲ್ ಪಾವತಿಗಳಲ್ಲಿ ಭಾರತವು ಮುಂಚೂಣಿಯಲ್ಲಿರುವ ದೇಶ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಅಗತ್ಯ. ಆದರೆ ಪ್ರತಿಭಟನೆ ಮತ್ತು ದ್ವೇಷದ ನಡುವೆ ಒಂದು ಗೆರೆ ಇದೆ. ದೇಶವನ್ನು ಕೆಣಕುವುದು ಕಾಂಗ್ರೆಸ್ಸಿನ ಉದ್ದೇಶಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ” ಎಂದು ಪ್ರಧಾನಿ ಮೋದಿ ಬೇಸರ ವ್ಯಕ್ತಪಡಿಸಿದರು.
“ಭಾರತವು ಪ್ರತಿಯೊಂದು ವಲಯವನ್ನೂ ಪರಿವರ್ತಿಸಿದೆ. ಇಂದು ಭಾರತ ದೇಶವು 160ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳನ್ನು ಹೊಂದಿದೆ. ಈ ಹಿಂದಿನ ಸರ್ಕಾರಗಳ ಅವಧಿಯಲ್ಲಿ ವೇಗ ನಿಧಾನವಾಗಿತ್ತು, ಆದರೆ ಇಂದು ಭಾರತವು ವೇಗದ ಹಾದಿಯಲ್ಲಿದೆ. ಇಂದು, ನಿರ್ಣಯಗಳು ಸಾಧನೆಗಳಾಗಿ ಬದಲಾಗುತ್ತಿವೆ. ಇದು ಹೊಸ ಭಾರತ ಎಂಬ ಸಂದೇಶವನ್ನು ಜಗತ್ತಿಗೆ ನೀಡಲಾಗುತ್ತಿದೆ. ಈ ಭಾರತವು ತನ್ನ ಅಭಿವೃದ್ಧಿಗಾಗಿ ಯಾವುದೇ ಅವಕಾಶವನ್ನು ಬಿಡುವುದಿಲ್ಲ ಎಂದು ಜಗತ್ತಿಗೆ ತಿಳಿದಿದೆ” ಎಂದು ಪ್ರಧಾನಿ ಮೋದಿ ಹೇಳಿದರು.
“ಜಗತ್ತಿನ ಯಾವುದೇ ಭಾಗದಲ್ಲಿ ಯುದ್ಧ ನಡೆದರೂ ಅದು ಎಲ್ಲರ ಮೇಲೆ ಪರಿಣಾಮ ಬೀರುತ್ತದೆ. ಆದರೆ ರಾಜಕೀಯ ಹಿತಾಸಕ್ತಿಗಳಿಂದ ಪ್ರೇರಿತರಾದ ಕೆಲವರು ತಮಗಾಗಿ ರಾಜಕೀಯ ಅವಕಾಶಗಳನ್ನು ಹುಡುಕುತ್ತಿದ್ದಾರೆ. ಆದ್ದರಿಂದ, ಇದು ಸಂಯಮ ಮತ್ತು ಸೂಕ್ಷ್ಮತೆಯ ಸಮಯ ಎಂದು ನಾನು ಟಿವಿ9 ವೇದಿಕೆಯಿಂದ ಪುನರುಚ್ಚರಿಸುತ್ತೇನೆ. COVID-19 ಸಾಂಕ್ರಾಮಿಕ ಸಮಯದಲ್ಲಿಯೂ ಸಹ ಇಡೀ ರಾಷ್ಟ್ರವು ಒಟ್ಟಾಗಿ ಕೆಲಸ ಮಾಡಿದಾಗ ಫಲಿತಾಂಶಗಳು ಸಕಾರಾತ್ಮಕವಾಗಿತ್ತು. ನಾವು ಈಗಿನ ಪರಿಸ್ಥಿತಿಯನ್ನು ಅದೇ ರೀತಿಯಲ್ಲಿ ಸವಾಲನ್ನು ಎದುರಿಸಬೇಕು” ಎಂದು ಪ್ರಧಾನಿ ಮೋದಿ ಕರೆ ನೀಡಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ (Aryan Khan) ಅವರನ್ನು ಡ್ರಗ್ಸ್ ಪ್ರಕರಣದಿಂದ ಪಾರು ಮಾಡಲು 25 ಕೋಟಿ ರೂಪಾಯಿ ಲಂಚ ಕೇಳಿದ ಆರೋಪ ಎದುರಿಸುತ್ತಿರುವ ಐಆರ್‌ಎಸ್ ಅಧಿಕಾರಿ ಸಮೀರ್ ವಾಂಖೆಡೆ (Sameer Wankhede), ಸೋಮವಾರ (ಮಾರ್ಚ್ 23) ಬಾಂಬೆ ಹೈಕೋರ್ಟ್‌ನಲ್ಲಿ ತಮ್ಮ ವಾದ ಮಂಡಿಸಿದ್ದಾರೆ. ‘ನಾನು ಶಾರುಖ್ ಖಾನ್ (Shah Rukh Khan) ಅವರಿಂದ ಯಾವುದೇ ಲಂಚ ಕೇಳಿಲ್ಲ ಅಥವಾ ಸ್ವೀಕರಿಸಿಲ್ಲ’ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಸಿಬಿಐ ಬಳಿ ಯಾವುದೇ ಪುರಾವೆಯಿಲ್ಲ ಎಂದು ಸಮೀರ್ ಪರ ವಕೀಲರು ವಾದ ಮಾಡಿದ್ದಾರೆ.
ಸಮೀರ್ ವಾಂಖೆಡೆ ಪರ ವಾದ ಮಂಡಿಸಿದ ಹಿರಿಯ ವಕೀಲ ಅಬಾದ್ ಪೋಂಡಾ ಅವರು ಸಿಬಿಐ ದಾಖಲಿಸಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಮನವಿ ಮಾಡಿದರು. ‘ವಾಂಖೆಡೆ ಅವರು ಲಂಚ ಕೇಳಿದ್ದಾರೆ ಅಥವಾ ಪಡೆದಿದ್ದಾರೆ ಎನ್ನುವುದಕ್ಕೆ ಸಿಬಿಐ ಬಳಿ ಯಾವುದೇ ಬಲವಾದ ಪುರಾವೆಗಳಿಲ್ಲ. ಅಂದು ಮಾಹಿತಿ ಬಂದ ಹಿನ್ನೆಲೆಯಲ್ಲಿ ಕಾರ್ಡೆಲಿಯಾ ಕ್ರೂಸ್ ಹಡಗಿನ ಮೇಲೆ ಕಾನೂನುಬದ್ಧವಾಗಿ ದಾಳಿ ನಡೆಸಲಾಗಿತ್ತು. ಆರ್ಯನ್ ಖಾನ್ ಸೇರಿದಂತೆ ಕೆಲವರನ್ನು ಬಂಧಿಸಲಾಗಿತ್ತು’ ಎಂದು ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.
ಏನಿದು 25 ಕೋಟಿ ರೂ. ಲಂಚದ ಹಗರಣ?
2023ರ ಮೇ 11ರಂದು ಸಿಬಿಐ ದಾಖಲಿಸಿದ ಎಫ್‌ಐಆರ್ ಪ್ರಕಾರ, ಅಕ್ಟೋಬರ್ 2021ರ ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ ಅವರನ್ನು ಸಿಲುಕಿಸದಿರಲು ಶಾರುಖ್ ಖಾನ್ ಅವರಿಗೆ 25 ಕೋಟಿ ರೂಪಾಯಿ ಬೇಡಿಕೆ ಇಡಲಾಗಿತ್ತು. ನಂತರ ಈ ಲಂಚದ ಮೊತ್ತವನ್ನು 18 ಕೋಟಿ ರೂಪಾಯಿಗೆ ಇಳಿಕೆ ಮಾಡಲಾಗಿತ್ತು ಎಂಬ ಗಂಭೀರ ಆರೋಪವಿದೆ. ಇದರಲ್ಲಿ ವಾಂಖೆಡೆ ಮಾತ್ರವಲ್ಲದೆ, ಆಗಿನ ಎನ್‌ಸಿಬಿ ಎಸ್‌ಪಿ ವಿಶ್ವ ವಿಜಯ್ ಸಿಂಗ್, ಕಿರಣ್ ಗೋಸಾವಿ ಸೇರಿದಂತೆ ಹಲವರ ಹೆಸರಿದೆ.
ಆರ್ಯನ್ ಖಾನ್‌ಗೆ ಸಿಕ್ಕ ‘ಕ್ಲೀನ್ ಚಿಟ್’
2021ರ ಅಕ್ಟೋಬರ್ 3ರಂದು ಆರ್ಯನ್ ಖಾನ್ ಬಂಧನವಾಗಿತ್ತು. ಆದರೆ, ಎನ್‌ಸಿಬಿಯ ವಿಶೇಷ ತನಿಖಾ ತಂಡ ನಡೆಸಿದ ಆಂತರಿಕ ತನಿಖೆಯಲ್ಲಿ ಆರ್ಯನ್ ಖಾನ್ ಯಾವುದೇ ದೊಡ್ಡ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿಲ್ಲ ಎಂದು ತಿಳಿದುಬಂದಿತ್ತು. ವಾಂಖೆಡೆ ತಂಡವು ತನಿಖೆಯ ಸಮಯದಲ್ಲಿ ಫೋನ್ ವಶಪಡಿಸಿಕೊಳ್ಳುವಿಕೆ ಮತ್ತು ಹೇಳಿಕೆ ದಾಖಲಿಸುವಲ್ಲಿ ಸರಿಯಾದ ಪ್ರಕ್ರಿಯೆ ಅನುಸರಿಸಿಲ್ಲ ಎಂಬುದು ಸಾಬೀತಾದ ಹಿನ್ನೆಲೆಯಲ್ಲಿ ಆರ್ಯನ್ ಖಾನ್‌ಗೆ ಕ್ಲೀನ್ ಚಿಟ್ ನೀಡಲಾಗಿತ್ತು.
ಸದ್ಯ ಸಮೀರ್ ವಾಂಖೆಡೆ ವಿರುದ್ಧ ಜಾರಿ ನಿರ್ದೇಶನಾಲಯ (ED) ಕೂಡ ಮನಿ ಲಾಂಡರಿಂಗ್ ಪ್ರಕರಣ ದಾಖಲಿಸಿದ್ದು, ನ್ಯಾಯಾಲಯದ ಮುಂದಿನ ತೀರ್ಪಿನ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಸದ್ಯ ಆರ್ಯನ್ ಖಾನ್ ಅವರು ಬಾಲಿವುಡ್ನಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ.
ನವದೆಹಲಿ, ಮಾರ್ಚ್ 23: ಗುಣಮಟ್ಟದ ಪ್ರತಿಭೆಗಳಿಗೆ ಇರವ ಬೇಡಿಕೆ ಸಾರ್ವತ್ರಿಕವಾದುದು. ಈ ಬೇಡಿಕೆ ಪೂರೈಸಲು ಶಕ್ತವಾಗಿರುವ ಏಕೈಕ ರಾಷ್ಟ್ರ ಭಾರತ ಎಂದು ಮೈ ಹೋಮ್ ಗ್ರೂಪ್ನ ಎಕ್ಸಿಕ್ಯೂಟಿವ್ ವೈಸ್ ಛೇರ್ಮನ್ ಜೂಪಲ್ಲಿ ರಾಮು ರಾವ್ (Jupally Ramu Rao) ಹೇಳಿದರು. ಟಿವಿ9 ನೆಟ್ವರ್ಕ್ ಆಯೋಜಿಸಿರುವ 2026ರ ವಾಟ್ ಇಂಡಿಯಾ ಥಿಂಕ್ಸ್ ಟುಡೇ ಶೃಂಗಸಭೆಯಲ್ಲಿ (What India Thinks Today – WITT Summit 2026) ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿ ರಾಮು ರಾವ್ ಅವರು ಮಾತನಾಡುತ್ತಿದ್ದರು.
ಟಿವಿ9 ನೆಟ್ವರ್ಕ್ನ ಈ ವಾರ್ಷಿಕ ಸಮಿಟ್ನ ಈ ಆವೃತ್ತಿಯ ಥೀಮ್ ‘ಭಾರತ ಹಾಗೂ ವಿಶ್ವ’ ಎಂದಿದೆ. ಹಿಂದಿನ ಆವೃತ್ತಿಗಳಂತೆ ಈ ಬಾರಿಯೂ ಟಿವಿ9ನ ಈ ಡಬ್ಲ್ಯುಐಟಿಟಿ ಸಮಿಟ್ನಲ್ಲಿ ಉದ್ಯಮ ಮುಖಂಡರು, ನೀತಿ ರೂಪಕರು, ಜಾಗತಿಕ ಚಿಂತಕರು ಸೇರಿ ಭಾರತದ ಜಾಗತಿಕ ಪ್ರಭಾವ ಹಾಗೂ ಬೆಳವಣಿಗೆ ಕುರಿತು ವಿಚಾರ ವಿನಿಮಯ ಮಾಡಲಿದ್ದಾರೆ.
ಸದ್ಯ ಜಾಗತಿಕವಾಗಿ ಬಹು ಬಿಕ್ಕಟ್ಟುಗಳು ಎಲ್ಲೆಡೆ ಆರ್ಥಿಕತೆಗಳಿಗೆ ಹೊಡೆತ ಕೊಡುತ್ತಿವೆ. ಇವುಗಳ ಮಧ್ಯೆ ಭಾರತವು ಕ್ಷಮತೆ, ಪ್ರತಿರೋಧ ಶಕ್ತಿಯಾಗಿ ತೋರ್ಪಡಿಸುತ್ತಿದೆ. ಡೆಮಾಕ್ರಸಿ, ಡೆಮಾಗ್ರಫಿ ಮತ್ತು ಡೈವರ್ಸಿಟಿ ಹೊಂದಿರುವ ಭಾರತದ ಬಗ್ಗೆ ವಿಶ್ವಕ್ಕೆ ವಿಶ್ವಾಸ ಮೂಡಿದೆ. ಭಾರತದ ಯುವ ಸಮುದಾಯದ ಬಗ್ಗೆ ವಿಶ್ವವು ಭರವಸೆ ಮತ್ತು ವಿಶ್ವಾಸ ಕಣ್ಣುಗಳಿಂದ ನೋಡುತ್ತಿದೆ ಎಂದು ಮೈ ಹೋಮ್ ಗ್ರೂಪ್ನ ವೈಸ್ ಛೇರ್ಮನ್ ಹೇಳಿದರು.
ದೊಡ್ಡ ಆರ್ಥಿಕತೆಯ ದೇಶಗಳು ನಿಧಾನ ಬೆಳವಣಿಗೆ ಹೊಂದುತ್ತಿರುವ ಹೊತ್ತಲ್ಲಿ ಭಾರತ ಸ್ಥಿರ ಬೆಳವಣಿಗೆ ಸಾಧಿಸುತ್ತಿದೆ. ವಾರ್ಷಿಕವಾಗಿ ಶೇ. 7ರಷ್ಟು ಬೆಳವಣಿಗೆ ಹೊಂದುತ್ತಿದೆ. ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವೆನಿಸುವ ನಿಟ್ಟಿನಲ್ಲಿ ಭಾರತ ಸಾಗುತ್ತಿದೆ ಎಂದು ಹೇಳಿದ ರಾಮು ರಾವ್ ಜೂಪಲ್ಲಿ, ಸರ್ಕಾರದಿಂದ ಪೂರಕವಾದ ನೀತಿಗಳು ಜಾರಿಯಾಗುತ್ತಿರುವುದನ್ನು ಉಲ್ಲೇಖಿಸಿದರು.
ಭಾರತವು ಜಾಗತಿಕ ಪ್ರತಿಭಾ ಕೇಂದ್ರವಾಗಿ ಬೆಳೆಯುತ್ತಿದೆ. ಜರ್ಮನಿಯಿಂದ ಕೆನಡಾವರೆಗೆ ವಿವಿಧ ದೇಶಗಳು ಹಾಗೂ ಗಲ್ಫ್ನ ದೇಶಗಳು ಕೌಶಲ್ಯವಂತ ಮಾನವ ಸಂಪನ್ಮೂಲಗಳ ಕೊರತೆ ಎದುರಿಸುತ್ತಿವೆ. ಇದನ್ನು ಭಾರತ ನೀಗಬಲ್ಲುದು. ಗುಣಮಟ್ಟದ ಪ್ರತಿಭೆಯನ್ನು ದೊಡ್ಡ ಮಟ್ಟದಲ್ಲಿ ನಿರ್ಮಿಸಲು ಸಮರ್ಥವಾಗಿರುವ ಏಕೈಕ ದೇಶ ಭಾರತವಾಗಿದೆ ಎಂದು ಜೂಪಲ್ಲಿ ರಾಮು ರಾವ್ ಈ ಸಂದರ್ಭದಲ್ಲಿ ತಿಳಿಸಿದರು.
ಜೂಪಲ್ಲಿ ರಾಮು ರಾವ್ ಸ್ವಾಗತ ಭಾಷಣದ ಬಳಿಕ ಟಿವಿ9 ನೆಟ್ವರ್ಕ್ನ ಎಂಡಿ ಮತ್ತು ಸಿಇಒ ಬರುಣ್ ದಾಸ್ ಅವರು ಮಾತನಾಡಿದರು. ಆ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಶೃಂಗಸಭೆ ಉದ್ದೇಶಿಸಿ ಭಾಷಣ ಮಾಡಿದರು. ಪ್ರಧಾನಿಗಳು ಹಿಂದಿನ ಎರಡು ಶೃಂಗಸಭೆಗಳಲ್ಲೂ ಭಾಗವಹಿಸಿದ್ದರು.
ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2’ (Dhurandhar 2) ಸಿನಿಮಾ ವಿಶ್ವಾದ್ಯಂತ 750 ಕೋಟಿ ರೂಪಾಯಿ ಗಳಿಸಿ ಮುನ್ನುಗ್ಗುತ್ತಿದೆ. ಇನ್ನೊಂದೆಡೆ ವಿದೇಶದಲ್ಲಿ ಈ ಚಿತ್ರದ ವಿರುದ್ಧ ಕಿಡಿಕಾರುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಯುನೈಟೆಡ್ ಕಿಂಗ್ಡಮ್ನ ಚಿತ್ರಮಂದಿರವೊಂದರಿಂದ ಹೊರಬಂದ ಪಾಕಿಸ್ತಾನ (Pakistan) ಮೂಲದ ಕುಟುಂಬದವರು ಈ ಸಿನಿಮಾದ ವಿರುದ್ಧ ಅತ್ಯಂತ ಕಟುವಾದ ಪದಗಳನ್ನು ಬಳಸಿ ಚಿತ್ರದ ಬಗ್ಗೆ ವಿಮರ್ಶೆ ಹಂಚಿಕೊಂಡಿದ್ದಾರೆ. ಅವರ ವಿಡಿಯೋ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಸಿನಿಮಾ ನೋಡಿ ಹೊರಬರುತ್ತಿರುವ ಪಾಕಿಸ್ತಾನಿ ವ್ಯಕ್ತಿಯೊಬ್ಬರು, ‘ಇದು ಥರ್ಡ್ ಕ್ಲಾಸ್ ಸಿನಿಮಾ. ನನ್ನ ಇಡೀ ಜೀವನದಲ್ಲಿ ಇಂತಹ ಕಳಪೆ ಚಿತ್ರವನ್ನು ನಾನು ನೋಡಿಲ್ಲ’ ಎಂದು ಕಿಡಿಕಾರಿದ್ದಾರೆ. ಅವರ ಜೊತೆಗಿದ್ದ ಮಹಿಳೆಯೊಬ್ಬರು, ‘ಕಳಪೆ ಎಂಬ ಪದಕ್ಕಿಂತಲೂ ಕೆಟ್ಟ ಪದ ಯಾವುದಾದರೂ ಇದ್ದರೆ ಅದು ಈ ಸಿನಿಮಾಗೆ ಒಪ್ಪುತ್ತದೆ’ ಎಂದು ಹೇಳಿದ್ದಾರೆ. ಇಡೀ ಗುಂಪು ಈ ಚಿತ್ರವನ್ನು ‘ಅಸಂಬದ್ಧ’ ಎಂದು ಕರೆದಿದೆ.
ಕೇವಲ ‘ಧುರಂಧರ್ 2’ ಸಿನಿಮಾವನ್ನು ಟೀಕಿಸುವುದು ಮಾತ್ರವಲ್ಲದೆ, ಚಿತ್ರಮಂದಿರದ ಹೊರಗೆ ಈ ಗುಂಪು ‘ಮೇಜರ್ ಇಕ್ಬಾಲ್ ಜಿಂದಾಬಾದ್’ ಮತ್ತು ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆಗಳನ್ನು ಕೂಗಿರುವುದು ವಿಡಿಯೋದಲ್ಲಿದೆ. ಒಟ್ಟಿನಲ್ಲಿ ಈ ಸಿನಿಮಾ ನೋಡಿದ ಪಾಕಿಸ್ತಾನಿ ಕುಟುಂಬದವರಿಗೆ ಕಿಂಚಿತ್ತೂ ಇಷ್ಟ ಆಗಿಲ್ಲ ಎಂಬುದು ಈ ವಿಡಿಯೋ ಮೂಲಕ ಸ್ಪಷ್ಟವಾಗಿದೆ.
ವೈರಲ್ ವಿಡಿಯೋ:
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ಕುಟುಂಬವನ್ನು ಭಾರತೀಯ ಭರ್ಜರಿಯಾಗಿ ಟ್ರೋಲ್ ಮಾಡುತ್ತಿದ್ದಾರೆ. ‘ಪಾಕಿಸ್ತಾನಿಗಳಿಗೆ ಈ ಸಿನಿಮಾ ಇಷ್ಟವಾಗಿಲ್ಲ ಎಂದರೆ, ನಿರ್ದೇಶಕ ಆದಿತ್ಯ ಧರ್ ಸರಿಯಾದ ಹಾದಿಯಲ್ಲಿದ್ದಾರೆ ಎಂದೇ ಅರ್ಥ. ಅವರು ಭಯೋತ್ಪಾದನೆಯ ಸತ್ಯವನ್ನು ಬಯಲಿಗೆಳೆದಿದ್ದಾರೆ ಎಂಬುದು ಈ ಆಕ್ರೋಶದಿಂದಲೇ ತಿಳಿಯುತ್ತದೆ’ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
‘ISI ಮಾಡುವ ತಪ್ಪುಗಳನ್ನು ಸಿನಿಮಾದಲ್ಲಿ ತೋರಿಸಿದಾಗ ಅವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ’ ಎಂದು ಇನ್ನೊಬ್ಬರು ಕಿಡಿಕಾರಿದ್ದಾರೆ. ಒಟ್ಟಾರೆಯಾಗಿ, ಈ ಚಿತ್ರದಲ್ಲಿ ತೋರಿಸಲಾಗಿರುವ ಘಟನೆಗಳು ಮತ್ತು ಪಾಕಿಸ್ತಾನಿ ಪ್ರಾಯೋಜಿತ ಭಯೋತ್ಪಾದನೆಯ ವಿವರಗಳು ಅಲ್ಲಿನ ಜನರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದಂತಿದೆ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.
ನವದೆಹಲಿ, ಮಾರ್ಚ್ 23: ದೆಹಲಿಯಲ್ಲಿ ಇಂದಿನಿಂದ ಟಿವಿ9 ನೆಟ್ವರ್ಕ್ನ ವಾಟ್ ಇಂಡಿಯಾ ಥಿಂಕ್ಸ್ ಟುಡೇ (WITT Summit 2026) ಶೃಂಗಸಭೆ ಆರಂಭವಾಗಿದೆ. ಈ ಶೃಂಗಸಭೆಯಲ್ಲಿ ಮುಖ್ಯ ಭಾಷಣ ಮಾಡಿರುವ ಪ್ರಧಾನಿ ನರೇಂದ್ರ ಮೋದಿ (PM Modi in WITT Summit) ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸಿದ್ದಾರೆ. ಅಲ್ಲದೆ, ಕಾಂಗ್ರೆಸ್ ಮಾಡಿದ ಪಾಪದ ಹೊರೆಗಳನ್ನು ನಾವು ಹೊತ್ತಿದ್ದೇವೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
“ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್ ಬಿಕ್ಕಟ್ಟು ಉಂಟಾಗಿತ್ತು. ಆದರೆ ಕಾಂಗ್ರೆಸ್ ದೇಶದ ಬಗ್ಗೆ ಯೋಚಿಸುವ ಬದಲು ಅಧಿಕಾರದ ಬಗ್ಗೆ ಮಾತ್ರ ಚಿಂತಿಸುತ್ತಿತ್ತು. ಕಾಂಗ್ರೆಸ್ ತೈಲ ಬಾಂಡ್‌ಗಳನ್ನು ಬಿಡುಗಡೆ ಮಾಡಿತು. ವಿದ್ಯುತ್ ಉಳಿಸಲು ಅವರು ತಪ್ಪು ನಿರ್ಧಾರ ತೆಗೆದುಕೊಂಡರು. ಆ ತೈಲ ಬಾಂಡ್ಗಳ ಹೊರೆಯನ್ನು ನಮ್ಮ ಸರ್ಕಾರ ಇನ್ನೂ ಹೊರುತ್ತಲೇ ಇದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
“ಕಳೆದ 5ರಿಂದ 6 ವರ್ಷಗಳಲ್ಲಿ ನಮ್ಮ ಸರ್ಕಾರವು ಕಾಂಗ್ರೆಸ್ಸಿನ ಪಾಪದ ಹೊರೆಯನ್ನು ನಮ್ಮ ಸರ್ಕಾರ ಹೊತ್ತುಕೊಂಡಿದೆ. ತೈಲ ಬಾಂಡ್ಗಳಿಂದ ಸಾಕಷ್ಟು ಸಮಸ್ಯೆಯಾಯಿತು. 1,48,000 ಕೋಟಿ ರೂ. ಬದಲಿಗೆ, ನಾವು 3 ಲಕ್ಷ ಕೋಟಿಗೂ ಹೆಚ್ಚು ಪಾವತಿಸಬೇಕಾಯಿತು. ಇತ್ತೀಚಿನ ದಿನಗಳಲ್ಲಿ, ಕಾಂಗ್ರೆಸ್ ನಾಯಕರು ನಮ್ಮ ಸರ್ಕಾರದ ವಿರುದ್ಧ ಹೇಳಿಕೆಗಳ ಸುರಿಮಳೆಗೈಯುತ್ತಿದ್ದಾರೆ. ಆದರೆ ಅವರು ಈ ಬಗ್ಗೆ ಮಾತ್ರ ಮೌನವಾಗಿದ್ದಾರೆ” ಎಂದು ಮೋದಿ ಟೀಕಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
2026 ರ ಐಪಿಎಲ್ (IPL 2026) ಇದೇ ಮಾರ್ಚ್ 28 ರಿಂದ ಆರಂಭವಾಗುತ್ತಿದೆ. ಈ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ನೋಡಲು ಅಭಿಮಾನಿಗಳು ಕೂಡ ಕಾದು ಕುಳಿತಿದ್ದಾರೆ. ಆದಾಗ್ಯೂ ಎಲ್ಲಾ ಅಭಿಮಾನಿಗಳಿಗೂ ಕ್ರೀಡಾಂಗಣಕ್ಕೆ ಹೋಗಿ ಪಂದ್ಯಗಳನ್ನು ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಟಿಕೆಟ್ ಸಿಗದೆ ಇರುವುದು ಅಥವಾ ಟಿಕೆಟ್ ಬೆಲೆ ಅಧಿಕವಾಗಿರುವುದು ಸೇರಿದಂತೆ ಇದಕ್ಕೆ ನಾನಾ ಕಾರಣಗಳಿರುತ್ತವೆ. ಅಂತಹ ಅಭಿಮಾನಿಗಳು ನಿರಾಶೆಗೊಳ್ಳದಂತೆ ನೋಡಿಕೊಳ್ಳುವ ಸಲುವಾಗಿ ಬಿಸಿಸಿಐ ದೇಶದ ನಾನಾ ನಗರಗಳಲ್ಲಿ ಐಪಿಎಲ್ ಫ್ಯಾನ್ ಪಾರ್ಕ್ಗಳನ್ನು (IPL 2026 Fan Parks) ಸ್ಥಾಪಿಸಲಿದೆ. ಬಿಸಿಸಿಐ ಒಟ್ಟು 11 ರಾಜ್ಯಗಳ 15 ನಗರಗಳನ್ನು ಈ ಫ್ಯಾನ್ ಪಾರ್ಕ್ ಸ್ಥಾಪನೆಗೆ ಆಯ್ಕೆ ಮಾಡಿಕೊಂಡಿದೆ.
ಫ್ಯಾನ್ ಪಾರ್ಕ್ ವೇಳಾಪಟ್ಟಿ:
ಮೊದಲ ವಾರ: ಮಾರ್ಚ್ 28, 29, 2026.
ಎರಡನೇ ವಾರ: ಏಪ್ರಿಲ್ 4, 5, 2026.
ಮೂರನೇ ವಾರ: ಏಪ್ರಿಲ್ 11, 12, 2026.
ಯಾವ ನಗರಗಳಲ್ಲಿ ಎಲ್ಲಿ?
ಮೊದಲ ವಾರ (ಮಾರ್ಚ್ 28-29):
ರೋಹ್ಟಕ್ (ಹರಿಯಾಣ – ಛೋಟು ರಾಮ್ ಪಾಲಿಟೆಕ್ನಿಕ್ ಮೈದಾನ), ಭೋಪಾಲ್ (ಮಧ್ಯಪ್ರದೇಶ – ಸರ್ಕಾರಿ ಎಂವಿಎಂ ಕಾಲೇಜು ಮೈದಾನ), ನಾಗ್ಪುರ (ಮಹಾರಾಷ್ಟ್ರ – ಮೆಕೋಸಾಬಾಗ್ ಮೆಥೋಡಿಸ್ಟ್ ಹೈಸ್ಕೂಲ್ ಆಟದ ಮೈದಾನ), ತುಮಕೂರು (ಕರ್ನಾಟಕ – ಸರ್ಕಾರಿ ಜೂನಿಯರ್ ಕಾಲೇಜು ಮೈದಾನ), ಕೃಷ್ಣನಗರ (ಪಶ್ಚಿಮ ಬಂಗಾಳ – ಡಿಎಲ್ ರಾಯ್ ಕ್ರೀಡಾಂಗಣ).
ಎರಡನೇ ವಾರ (ಏಪ್ರಿಲ್ 4-5):
ಮಥುರಾ (ಉತ್ತರ ಪ್ರದೇಶ – ಅಮರನಾಥ ವಿದ್ಯಾ ಆಶ್ರಮ), ಜೋಧಪುರ (ರಾಜಸ್ಥಾನ – ಬರ್ಕತುಲ್ಲಾ ಖಾನ್ ಕ್ರೀಡಾಂಗಣ), ನಿಜಾಮಾಬಾದ್ (ತೆಲಂಗಾಣ – ಮಹಿಳಾ ಶಿಕ್ಷಣ ಸಂಸ್ಥೆಗಳ ಮೈದಾನ), ಮೈಸೂರು (ಕರ್ನಾಟಕ – ಎಸ್‌ಬಿಆರ್‌ಆರ್ ಮಹಾಜನ್ ಪ್ರಥಮ ದರ್ಜೆ ಕಾಲೇಜು), ಭುವನೇಶ್ವರ (ಒಡಿಶಾ – ಕಿಟ್ಸ್ ವಿಶ್ವವಿದ್ಯಾಲಯ ಕ್ರೀಡಾಂಗಣ).
ಮೂರನೇ ವಾರ (ಏಪ್ರಿಲ್ 11-12):
ಮೀರತ್ (ಉತ್ತರ ಪ್ರದೇಶ – ಭೈನಸಾಲಿ ಮೈದಾನ), ನಾಡಿಯಾಡ್ (ಗುಜರಾತ್ – ರಾಧೆ ಫಾರ್ಮ್), ರತ್ನಗಿರಿ (ಮಹಾರಾಷ್ಟ್ರ – ಲೇಟ್ ಪ್ರಮೋದ್ ಮಹಾಜನ್ ಕ್ರೀಡಾ ಸಂಕೀರ್ಣ), ಕೊಯಮತ್ತೂರು (ತಮಿಳುನಾಡು – ಹಿಂದೂಸ್ತಾನ್ ಕಾಲೇಜ್ ಆಫ್ ಆರ್ಟ್ಸ್ ಅಂಡ್ ಸೈನ್ಸ್), ರೂರ್ಕೆಲಾ (ಒಡಿಶಾ – ಸೆಕ್ಟರ್ 17 ಗ್ರೌಂಡ್).
ಫ್ಯಾನ್ ಪಾರ್ಕ್ ವಿಶೇಷತೆಗಳು
ಫ್ಯಾನ್ ಪಾರ್ಕ್ ಕೇವಲ ಪಂದ್ಯ ನೋಡುವುದಕ್ಕಲ್ಲ, ಇದು ಒಂದು ಮಿನಿ ಕಾರ್ನೀವಲ್‌ನಂತಿರಲಿದೆ. ನೇರ ಪಂದ್ಯ ವೀಕ್ಷಣೆಯ ಜೊತೆಗೆ, ಸಂಗೀತ, ಮನರಂಜನಾ ಕಾರ್ಯಕ್ರಮಗಳು ಮತ್ತು ಫುಡ್ ಕೋರ್ಟ್‌ಗಳು ಇರುತ್ತವೆ. ವಿಶೇಷವಾಗಿ ಮಕ್ಕಳಿಗಾಗಿ, ವಿಶೇಷ ಆಟದ ಪ್ರದೇಶಗಳು, ವರ್ಚುವಲ್ ಬ್ಯಾಟಿಂಗ್ ಅನುಭವ, ಬೌಲಿಂಗ್ ನೆಟ್‌ಗಳು ಮತ್ತು ಫೇಸ್ ಪೇಂಟಿಂಗ್ ಕೂಡ ಇರುತ್ತದೆ.
2015 ರಲ್ಲಿ ಪ್ರಾರಂಭ
ಬಿಸಿಸಿಐ ಈ ಫ್ಯಾನ್ ಪಾರ್ಕ್‌ಗಳ ಸಂಪ್ರದಾಯವನ್ನು 2015 ರಲ್ಲಿ ಪ್ರಾರಂಭಿಸಿತು. ಕ್ರೀಡಾಂಗಣಗಳಿಂದ ದೂರವಿರುವ ನಗರಗಳಲ್ಲಿ ಐಪಿಎಲ್ ಕ್ರೇಜ್ ಅನ್ನು ಹೆಚ್ಚಿಸುವಲ್ಲಿ ಅವು ಪ್ರಮುಖ ಪಾತ್ರ ವಹಿಸಿವೆ. 2026 ರ ಋತುವಿನಲ್ಲಿಯೂ ಅದೇ ಉತ್ಸಾಹವನ್ನು ಮುಂದುವರೆಸುತ್ತಾ, ಹೆಚ್ಚು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಅಭಿಮಾನಿಗಳಿಗಾಗಿ ಈ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನವದೆಹಲಿ, ಮಾರ್ಚ್ 23: ಟಿವಿ9 ವಾರ್ಷಿಕ ಶೃಂಗಸಭೆಯಾದ ವಾಟ್ ಇಂಡಿಯಾ ಥಿಂಕ್ಸ್ ಟುಡೇ ಸಮಿಟ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬರಮಾಡಿಕೊಳ್ಳಲಾಯಿತು. ಟಿವಿ9 ನೆಟ್ವರ್ಕ್ ಸಿಇಒ ಮತ್ತು ಎಂಡಿ ಬರುಣ್ ದಾಸ್ ಅವರು ಪ್ರಧಾನಿ ಮೋದಿ ಅವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ತಮ್ಮ ಬಿಡುವಿಲ್ಲದ ವೇಳಾಪಟ್ಟಿಯಲ್ಲೂ ಪ್ರಧಾನಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಮಯ ಮಾಡಿಕೊಂಡಿರುವುದಕ್ಕೆ ಬರುಣ್ ದಾಸ್ ಹರ್ಷ ವ್ಯಕ್ತಪಡಿಸಿದರು.
ಪ್ರಧಾನಿಯವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದ ಬಳಿಕ ಮಾತು ಮುಂದುವರಿಸಿದ ಬರುಣ್ ದಾಸ್, ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟಿನ ಪರಿಸ್ಥಿತಿ ಜಾಗತಿಕ ಆರ್ಥಿಕತೆಗೆ ಎಷ್ಟು ಮಾರಕವಾಗಿದೆ ಎಂಬುದನ್ನು ಸ್ಮರಿಸಿ ಆತಂಕ ವ್ಯಕ್ತಪಡಿಸಿದರು.
ಜಾಗತಿಕ ಆರ್ಥಿಕತೆ ನಾಡಿಮಿಡಿತಗಳಾದ ಫುಯಲ್ (ಇಂಧನ), ಫುಡ್ (ಆಹಾರ), ಫಿನಾನ್ಸ್ (ಹಣಕಾಸು), ಈ ಮೂರು ಎಫ್ಗಳ ಮೇಲೆ ಯುದ್ಧದ ಅಪಾಯ ನೆಟ್ಟಿದೆ. ಇಡೀ ಜಗತ್ತು ಇಂಧನ ಬಿಕ್ಕಟ್ಟು ಎದುರಿಸುತ್ತಿದೆ. 1973ರ ಅರಬ್ ತೈಲ ಬಿಕ್ಕಟ್ಟು, 1979ರ ಇರಾನ್ ಕ್ರಾಂತಿ, 1990ರ ಗಲ್ಫ್ ಯುದ್ಧಕ್ಕಿಂತಲೂ ಇದು ತೀವ್ರತೆಯ ಪರಿಸ್ಥಿತಿ ಹೊಂದಿದೆ. ಇಂಥ ಹೊತ್ತಲ್ಲಿ ಜಗತ್ತು ಏನು ಯೋಚಿಸುತ್ತಿದೆ ಎಂಬುದಕ್ಕಿಂತ ಭಾರತ ಏನು ಯೋಚಿಸುತ್ತಿದೆ ಎನ್ನೋದಿ ಜಗತ್ತಿಗೆ ಮುಖ್ಯ ಎಂದು ಟಿವಿ9 ನೆಟ್ವರ್ಕ್ ಸಿಇಒ ಹೇಳಿದರು.
ದೆಹಲಿಯ ಅಶೋಕಾ ಹೋಟೆಲ್ನಲ್ಲಿ ಆಯೋಜಿಸಲಾಗಿರುವ ಈ ಡಬ್ಲ್ಯುಐಟಿಟಿ ಸಮಿಟ್ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಬರುಣ್ ದಾಸ್, ಪ್ರಧಾನಿಗಳ ಮೂರು ಮಂತ್ರಗಳನ್ನು ಪ್ರಸ್ತಾಪಿಸಿದರು.
ರಿಟರ್ನ್ ಆನ್ ಗವರ್ನೆನ್ಸ್, ಮೋದಿ ಮಲ್ಟಿಪ್ಲೈಯರ್ ಎಫೆಕ್ಟ್, ಸಿಡಿಆರ್ ಈ ಮೂರು ಮಂತ್ರಗಳ ಜೊತೆಗೆ ಮೋದಿ ಅವರ ಹೊಸ ಮಂತ್ರ ‘ಸ್ಥಿತ ಪ್ರಜ್ಞೆ’ ತಮಗೆ ಕಾಣುತ್ತಿದೆ. ಕುರುಕ್ಷೇತ್ರ ಯುದ್ಧದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಪ್ರಮುಖ ಸಲಹೆಯೇ ‘ಸ್ಥಿತ ಪ್ರಜ್ಞೆ’ ಆಗಿತ್ತು. ಸ್ಥಿತಪ್ರಜ್ಞೆ ಎಂದರೆ ಎಲ್ಲರನ್ನೂ ನ್ಯಾಯಯುತವಾಗಿ ನಡೆಸಿಕೊಳ್ಳುವುದು ಎಂದರ್ಥ ಎಂದು ಬರುಣ್ ದಾಸ್ ಹೇಳಿದರು.
‘ನಾವು ಇಂದು ಅತ್ಯಂತ ಅಸ್ಥಿರವಾದ ದಿನಗಳಲ್ಲಿ ಬದುಕುತ್ತಿದ್ದೇವೆ. ಪಶ್ಚಿಮ ಏಷ್ಯಾದ ಯುದ್ಧಕ್ಕೂ ಮೊದಲು ಸುಂಕದ ಸಮರವು ವಿಶ್ವದ ಆರ್ಥಿಕತೆಯನ್ನು ನಡುಗಿಸಿತ್ತು. ಸೇನಾ ಬಲದ ಯುದ್ಧ ಒಂದಾದರೆ, ಆರ್ಥಿಕ ಯುದ್ಧ ಮತ್ತೊಂದು. ಜಗತ್ತಿನ 830 ಕೋಟಿ ಜನರು ಬಾಧಿತರಾಗಿದ್ದಾರೆ. ಈ ಜಾಗತಿಕ ಅಸ್ಥಿರತೆ ನಡುವೆ ಭಾರತ ಅಭಿವೃದ್ದಿ ಹೊಂದುತ್ತಿರುವುದು ಮಾತ್ರವಲ್ಲ, ಜಾಗತಿಕ ವ್ಯವಸ್ಥೆ ಸ್ಥಿರಗೊಳಿಸಲು ನೆರವಾಗಿದೆ ಎಂದು ಟಿವಿ9 ನೆಟ್ವರ್ಕ್ನ ಎಂಡಿಯೂ ಆದ ಬರುಣ್ ದಾಸ್ ಹೇಳಿದರು.
ಬರುಣ್ ದಾಸ್ ಅವರ ಭಾಷಣಕ್ಕೂ ಮುನ್ನ, ಮೈ ಹೋಮ್ ಗ್ರೂಪ್ನ ಛೇರ್ಮನ್ ಜುಪಲ್ಲಿ ರಾಮೇಶ್ವರ್ ರಾವ್ ಅವರೂ ಮಾತನಾಡಿದರು.
ಬೀದರ್, ಮಾರ್ಚ್ 23: ತಮ್ಮ ಹೊಲದಲ್ಲಿ ಬಿತ್ತಿದ ಬೆಳೆ ಪ್ರಕೃತಿ ವಿಕೋಪಕ್ಕೆ ತುತ್ತಾದರೆ ಅನೂಕುಲವಾಗಲಿ ಅಂತಾ ನೂರಾರು ರೈತರು ತಮ್ಮ ಪೈರಿಗೆ ಬೆಳೆ ವಿಮೆ (crop insurance) ಮಾಡಿಸಿದರು. ಕೃಷಿ ಇಲಾಖೆ ಅಧಿಕಾರಿಗಳ ನಿರ್ದೇಶನದ ಮೇರೆಗೆ ಪ್ರತಿ ವರ್ಷ ಇಂತಿಷ್ಠು ಅಂತಾ ಹಣವನ್ನ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಕಟ್ಟುತ್ತಾ ಬಂದಿದ್ದರು. ಆದರೆ ಆ ರೈತರಿಗೆ ನ್ಯಾಯಯುತವಾಗಿ ಬರಬೇಕಾಗದ ಬೆಳೆ ವಿಮೆ ಮಾತ್ರ ಬರುತ್ತಿಲ್ಲ. ಹೀಗಾಗಿ ರೈತರು ಕಂಗಾಲಾಗಿದ್ದಾರೆ.
ಬೀದರ್ ಜಿಲ್ಲೆಯಲ್ಲಿ ಎರಡು ಲಕ್ಷ ನಾಲ್ಕು ಸಾವಿರ 19 ಜನ ರೈತರು ಈ ಕಳೆದ ವರ್ಷ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಿದ್ದಾರೆ. ಆದರೆ ಇಲ್ಲಿಯವರೆಗೂ ರೈತರ ಬೆಳೆ ಹಾನಿಯ ವಿಮೆ ಹಣ ಮಾತ್ರ ರೈತರ ಕೈಸೇರಿಲ್ಲ. ರೈತರ ಗೋಳನ್ನ ಯಾರು ಕೇಳೋರೆ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ರೈತರಿಂದ ಸಾವಿರಾರು ರೂ ಬೆಳೆ ವಿಮೆ ಮಾಡಿಸಿಕೊಂಡು ಈಗ ರೈತರಿಗೆ ಹಣವನ್ನ ಕೊಡದೆ ಅಧಿಕಾರಿಗಳು ಬಡ ರೈತರ ಬದುಕಿನ ಜೊತೆಗೆ ಆಟವಾಡುತ್ತಿದ್ದಾರೆ. ಇನ್ನೂ ರೈತರು ಹಲವು ವರ್ಷದಿಂದ ತಾವು ಬೆಳೆದ ಬೆಳೆ ಪ್ರಕೃತಿ ವಿಕೋಪದಿಂದ ಬೆಳೆ ಹಾನಿಯಾದರೆ ಬೆಳೆ ವಿಮೆಯಿಂದಾದರೂ ಬೆಳೆ ನಷ್ಟಕ್ಕೆ ಪರಿಹಾರ ಸಿಗಬಹುದು ಅನ್ನೋ ದೃಷ್ಠಿಯಿಂದ ಈ ವರ್ಷ ಬೀದರ್ನಲ್ಲಿ 2 ಲಕ್ಷ 4 ಸಾವಿರ 19 ಜನರು ವಿವಿಧ ಬೆಳೆ ಬೆಳೆ ವಿಮೆ ಮಾಡಿದ್ದು, ಬೆಳೆ ವಿಮೆ ಸಂಸ್ಥೆಗೆ 9 ಕೋಟಿ 90 ಲಕ್ಷ ರೂ ಬೀದರ್ ಜಿಲ್ಲೆಯ ರೈತರು ಕಟ್ಟಿದ್ದಾರೆ. ಆದರೆ ಈ ವರ್ಷ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ನಾಲ್ಕೂವರೆ ಲಕ್ಷ ಎಕರೆಯಷ್ಟು ಸುಮಾರು 300 ಕೋಟಿಗೂ ಅಧಿಕ ಬೆಳೆ ಹಾನಿಯಾಗಿದೆ. ಆದರೆ ಬೆಳೆ ವಿಮೆ ಮಾಡಿಸಿದ ಕೆವಲ 78 ಸಾವಿರ ರೈತರಿಗೆ 36.74 ಕೋಟಿ ರೂಪಾಯಿ ಮಾತ್ರ ಬೆಳೆ ವಿಮೆ ಹಣ ನೀಡಿದ್ದು, ಒಂದು ಲಕ್ಷ 38 ಸಾವಿರ ರೈತರಿಗೆ ಬೆಳೆ ಹಾನಿ ಪರಿಹಾರಕೊಡದೆ ವಿಮೆ ಕಂಪನಿ ಮೋಸ ಮಾಡಿದೆ ಎಂದು ರೈತರು ಹೇಳುತ್ತಿದ್ದಾರೆ.
ರೈತರ ಕೈಸೇರಿದ ಹಣ
ಜಿಲ್ಲೆಯ ಕೃಷಿ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದ ಮೇರೆಗೆ ಆಯಾ ಹೋಬಳಿ ವ್ಯಾಪ್ತಿಯಲ್ಲಿರುವ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ತಮ್ಮ ಬೆಳೆಗೆ ಬೆಳೆ ವಿಮೆಯನ್ನ ಮಾಡಿಸಿ ಅಲ್ಲಿಯೇ ಹಣವನ್ನ ತುಂಬುವಂತೆ ಕೃಷಿ ಇಲಾಖೆಯ ಅಧಿಕಾರಿ ರೈತರಿಗೆ ಸಲಹೆ ನೀಡಿದ್ದಾರೆ. ಕೃಷಿ ಇಲಾಖೆಯ ಅಧಿಕಾರಿಗಳ ಸಲಹೆಯಂತೆ ಬ್ಯಾಂಕ್ನಲ್ಲಿ ಹಣ ಸಂದಾಯ ಮಾಡಿ ರಸೀದಿ ಪಡೆದಿದ್ದಾರೆ. ಆದರೆ ಸಂಕಷ್ಟದ ಪರಿಸ್ಥಿಯಲ್ಲಿ ಬೆಳೆ ಹಾನಿಯಾದಾಗ ಕೈಸೇರಬೇಕಾದ ಹಣವೇ ಈಗ ರೈತರಿಗೆ ಬರುತ್ತಿಲ್ಲ. ಇದು ಸಹಜವಾಗಿಯೇ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಇದು ಒಂದೇ ಗ್ರಾಮದ ಕಥೆಯಲ್ಲ. ಬೀದರ್ ಜಿಲ್ಲೆಯಲ್ಲಿ ಸಾವಿರಾರು ರೈತರಿಗೆ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಹಣವೇ ಶೇಕಡಾ 80 ರಷ್ಟು ರೈತರಿಗೆ ಇಂದಿಗೂ ಬಂದಿಲ್ಲ. ಅವರು ಪ್ರತಿ ವರ್ಷ ಕೂಡ ಹಣ ಕಟ್ಟುತ್ತಲೇ ಇದ್ದಾರೆ. ಆದರೆ ಬೆಳೆ ವಿಮೆ ಹಣ ಬಾರದಿರುವುದು ರೈತರನ್ನ ಗಾಬರಿಗೊಳಿಸಿದೆ. ಸಾಲಾ ಸೋಲಾ ಮಾಡಿ ವಿಮೆ ಕಟ್ಟಿದ ಹಣವೂ ಇಲ್ಲಾ, ಜೊತೆಗೆ ಬೆಳೆ ನಾಶವಾಗಿರುವುದಕ್ಕೆ ಇನ್ಶೂರೆನ್ಸ್ ಹಣವೂ ಬಾರದಿರುವುದು ಅಧಿಕಾರಿಗಳ ವಿರುದ್ಧ ರೈತರು ತಿರುಗಿ ಬಿದ್ದಿದ್ದಾರೆ.
ರೈತರು ಆಕ್ರೋಶ
ಸಾಲ ಸೋಲಾ ಮಾಡಿ ಬಿತ್ತಿದ ಬೆಳೆ ನಾಶವಾದರೆ ಬೆಳೆ ವಿಮೆಯಲ್ಲಾದರೂ ಮರಳಿ ಹಣಬರಬಹುದೆಂದುಕೊಂಡಿದ್ದ ರೈತರು ಆಕ್ರೋಶಗೊಂಡಿದ್ದಾರೆ. ಕೂಡಲೇ ನಮ್ಮ ಬೆಳೆ ವಿಮೆ ಹಣ ಕೊಡಿ ಎಂದು ಮನವಿ ಮಾಡುತ್ತಿದ್ದಾರೆ. ಕೆಲವು ರೈತರಿಗೆ ಬೆಳೆ ವಿಮೆ ಹಣ ಹಾಕಿ, ಕೆಲವು ರೈತರಿಗೆ ಹಣ ಹಾಕದೆ ಇರೋದು ರೈತರ ಅಸಮಾಧಾನ ಹೆಚ್ಚಿಸುವಂತೆ ಮಾಡಿದೆ.
ಬೆಳೆ ವಿಮೆಯ ಹೆಸರಿನಲ್ಲಿ ರೈತರ ಹಣವನ್ನ ನುಂಗಿ ನೀರು ಕುಡಿಯುತ್ತಿರುವ ಅಧಿಕಾರಿಗಳ ವಿರುದ್ದ ಬೀದರ್ ರೈತರು ಆಕ್ರೋಶಗೊಂಡಿದ್ದಾರೆ. ಸಾವಿರಾರು ರೂಪಾಯಿ ಹಣವನ್ನ ಬ್ಯಾಂಕ್ ಖಾತೆಗೆ ಜಮಾ ಮಾಡಿದ ರೈತರಿಗೆ ಬೆಳೆವಿಮೆ ಬಾರದಿರುವುದಕ್ಕೆ ಯಾರು ಹೊಣೆ ಎಂದು ರೈತರು ಪ್ರಶ್ನಿಸುತ್ತಿದ್ದಾರೆ.