All posts by nagaraj11081993

ಸಂಗೀತಾ ಮೊಬೈಲ್ಸ್​ನ 52ನೇ ವಾರ್ಷಿಕೋತ್ಸವ ಮಾರಾಟ ಮೇಳ: ದಕ್ಷಿಣ ಭಾರತೀಯರಿಗೆ ಭರ್ಜರಿ ಬಹುಮಾನಗಳ ಸುರಿಮಳೆ, ಸಾಟಿ ಇಲ್ಲದ ಆಫರ್ಸ್

ಭಾರತದ ಪ್ರಮುಖ ಎಲೆಕ್ಟ್ರಾನಿಕ್ಸ್ ಮತ್ತು ಮೊಬೈಲ್ ರಿಟೇಲ್ ಚೇನ್ ಆದ ‘ಸಂಗೀತಾ’ (sangeetha mobiles), ಮೇ 31 ರಿಂದ ತನ್ನ ಭವ್ಯವಾದ 52ನೇ ವರ್ಷದ ವಾರ್ಷಿಕೋತ್ಸವದ (52 years anniversary) ಮಾರಾಟ ಮೇಳವನ್ನು (52nd Anniversary Sale) ಘೋಷಿಸಿದೆ. ಇದನ್ನು ತನ್ನ “ಇತಿಹಾಸದಲ್ಲೇ ಅತ್ಯಂತ ದೊಡ್ಡ ಮತ್ತು ಹೆಚ್ಚು ಕೊಡುಗೆಗಳಿರುವ ಮಾರಾಟ ಮೇಳ” ಎಂದು ಈ ಸಂಸ್ಥೆ ಬಣ್ಣಿಸಿದೆ. ಕೇವಲ ಸ್ಟೋರ್‌ಗೆ ಭೇಟಿ ನೀಡಿದರೂ ಸಾಕು, ಗ್ರಾಹಕರು 6,000 ರೂವರೆಗೆ ಪ್ರಯೋಜನಗಳನ್ನು ಪಡೆಯಬಹುದು. ಅಷ್ಟು ಮಾತ್ರವಲ್ಲ, ಡ್ಯಾಮೇಜ್ ಪ್ರೊಟೆಕ್ಷನ್, ಥೆಫ್ಟ್ ಪ್ರೊಟೆಕ್ಷನ್, ಸೈಬರ್ ಇನ್ಶೂರೆನ್ಸ್, ಡೋರ್‌ಸ್ಟೆಪ್ ಸರ್ವಿಸ್ ಮತ್ತು ಭರ್ಜರಿ ಬಹುಮಾನಗಳೂ ಗ್ರಾಹಕರಿಗೆ ಲಭ್ಯ ಇರುತ್ತವೆ.

ಸಂಗೀತಾದ ಈ ವಾರ್ಷಿಕೋತ್ಸವದ ಸಂಭ್ರಮಾಚರಣೆಯು ಗ್ರಾಹಕರಿಗೆ ಅಭೂತಪೂರ್ವ ಕೊಡುಗೆಗಳು, ರಕ್ಷಣಾ ಯೋಜನೆಗಳು, ಆಕರ್ಷಕ ಉಡುಗೊರೆಗಳು ಮತ್ತು ಸುಲಭ ಹಣಕಾಸು (Finance) ಆಯ್ಕೆಗಳನ್ನು ಒಟ್ಟುಗೂಡಿಸಿದೆ. ಇದು ದೇಶದಲ್ಲೇ ಅತ್ಯಂತ ಗ್ರಾಹಕ-ಸ್ನೇಹಿ ರಿಟೇಲ್ ಹಬ್ಬಗಳಲ್ಲಿ ಒಂದಾಗಿದ್ದು, ಪ್ರತಿಯೊಂದು ಸಂಗೀತಾ ಸ್ಟೋರ್​ನಲ್ಲೂ ಇಡೀ ತಿಂಗಳ ಕಾಲ ಲಭ್ಯ ಇರುತ್ತದೆ. ಈ ಸಂಭ್ರಮಾಚರಣೆಯ ಭಾಗವಾಗಿ, ಗ್ರಾಹಕರು ಸಂಗೀತಾದ ಯಾವುದೇ ಸ್ಟೋರ್‌ಗೆ ಭೇಟಿ ನೀಡುವ ಮೂಲಕ 6,000 ರೂವರೆಗಿನ ಪ್ರಯೋಜನಗಳನ್ನು ಪಡೆಯಬಹುದು. ಇದರ ಜೊತೆಗೆ, ಮೊಬೈಲ್‌ಗಳು, ಗ್ಯಾಜೆಟ್‌ಗಳು, ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ಉಪಕರಣಗಳ ಖರೀದಿಗಳ ಮೇಲೆ ಇನ್ನೂ ಹೆಚ್ಚಿನ ಬಹುಮಾನಗಳು ಮತ್ತು ಮೌಲ್ಯವರ್ಧಿತ ಕೊಡುಗೆಗಳೂ ಲಭ್ಯವಿವೆ.

ವಾರ್ಷಿಕೋತ್ಸವದ ಪ್ರಮುಖ ಆಫರ್‌ಗಳು

  • ಸಂಗೀತಾದ ಸ್ಟೋರ್‌ಗಳಿಗೆ ಭೇಟಿ ನೀಡುವ ಗ್ರಾಹಕರಿಗೆ 6,000 ರೂವರೆಗಿನ ಪ್ರಯೋಜನಗಳು.
  • ಸಂಗೀತಾದಲ್ಲಿ ಖರೀದಿಸುವ ಮೊಬೈಲ್ ಫೋನ್‌ಗಳ ಮೇಲೆ 24 ತಿಂಗಳ ಡ್ಯಾಮೇಜ್ ಪ್ರೊಟೆಕ್ಷನ್ (ಹಾನಿ ರಕ್ಷಣೆ).
  • ಮೊಬೈಲ್ ಫೋನ್‌ಗಳಿಗೆ 365 ದಿನಗಳ ಕಳ್ಳತನ ಮತ್ತು ನಷ್ಟದ ವಿರುದ್ಧ ರಕ್ಷಣೆ (Theft & Loss Protection).
  • 50,000 ರೂವರೆಗಿನ ಸೈಬರ್ ಕಳ್ಳತನ ವಿಮಾ ರಕ್ಷಣೆ (Cyber Theft Insurance Cover).
  • ಸಂಗೀತಾದಲ್ಲಿ ಖರೀದಿಸಿದ ಎಲೆಕ್ಟ್ರಾನಿಕ್ಸ್ ವಸ್ತುಗಳಿಗೆ 365 ದಿನಗಳ ಡೋರ್‌ಸ್ಟೆಪ್ ಸರ್ವಿಸ್ (ಮನೆಬಾಗಿಲಿಗೆ ಸೇವೆ).
  • ಚಿನ್ನದ ನಾಣ್ಯಗಳು, ಗಿಫ್ಟ್ ವೋಚರ್‌ಗಳು, ಸ್ಕೂಟರ್‌ಗಳು ಮತ್ತು ಇನ್ನಿತರ ಆಕರ್ಷಕ ಉಡುಗೊರೆಗಳು ಹಾಗೂ ಲಕ್ಕಿ ಡ್ರಾ ಅವಕಾಶಗಳು.
  • ಅರ್ಹ ಹಳೆಯ ಫೋನ್‌ಗಳಿಗೆ 5,000 ರೂವರೆಗಿನ ಎಕ್ಸ್‌ಚೇಂಜ್ ಮೌಲ್ಯ.
  • ಅರ್ಹ ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ 24 ತಿಂಗಳ 0% ಇಎಂಐ (EMI) ಸೌಲಭ್ಯ.

ಈ ವಾರ್ಷಿಕೋತ್ಸವದ ಅಭಿಯಾನವನ್ನು ಕೇವಲ ರಿಯಾಯಿತಿಗಳನ್ನು ನೀಡುವುದಕ್ಕಷ್ಟೇ ಸೀಮಿತಗೊಳಿಸದೆ, ಸಾಟಿಯಿಲ್ಲದ ರಕ್ಷಣೆ ಮತ್ತು ಸೇವಾ ಪ್ರಯೋಜನಗಳ ಮೂಲಕ ಗ್ರಾಹಕರಿಗೆ ಸಂಪೂರ್ಣ ನೆಮ್ಮದಿಯನ್ನು ನೀಡುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದೆ.

ಈ ಮಾರಾಟ ಮೇಳದ ಚಾಲನೆ ಕುರಿತು ಮಾತನಾಡಿದ ಸಂಗೀತಾದ ವ್ಯವಸ್ಥಾಪಕ ನಿರ್ದೇಶಕರಾದ (Managing Director) ಸುಭಾಷ್ ರೆಡ್ಡಿ ಅವರು, “ಕಳೆದ 52 ವರ್ಷಗಳಿಂದ, ಗ್ರಾಹಕರು ಸಂಗೀತಾವನ್ನು ಕೇವಲ ಅತ್ಯುತ್ತಮ ಉತ್ಪನ್ನಗಳು ಮತ್ತು ಬೆಲೆಗಳಿಗಾಗಿ ಮಾತ್ರವಲ್ಲದೆ, ಪ್ರತಿಯೊಂದು ಖರೀದಿಯೊಂದಿಗೆ ಸಿಗುವ ವಿಶ್ವಾಸ ಮತ್ತು ಸೇವಾ ಅನುಭವಕ್ಕಾಗಿ ನಂಬಿದ್ದಾರೆ. ಈ ವಾರ್ಷಿಕೋತ್ಸವದ ಸಂಭ್ರಮಾಚರಣೆಯು ನಮ್ಮ ಗ್ರಾಹಕರಿಗೆ ಸಾಧ್ಯವಾದಷ್ಟು ದೊಡ್ಡ ರೀತಿಯಲ್ಲಿ ಕೃತಜ್ಞತೆ ಸಲ್ಲಿಸುವ ನಮ್ಮ ಒಂದು ಮಾರ್ಗವಾಗಿದೆ. ಹಿಂದೆಂದೂ ಕಾಣದ ರಕ್ಷಣಾ ಪ್ರಯೋಜನಗಳಿಂದ ಹಿಡಿದು ಬಹುಮಾನಗಳು, ಎಕ್ಸ್‌ಚೇಂಜ್ ಆಫರ್‌ಗಳು, ಡೋರ್‌ಸ್ಟೆಪ್ ಸರ್ವಿಸ್ ಮತ್ತು ಆಕರ್ಷಕ ಉಡುಗೊರೆಗಳವರೆಗೆ, ನಾವು ಪ್ರತಿಯೊಂದು ಮನೆಗೂ ಸಾಟಿಯಿಲ್ಲದ ಮೌಲ್ಯವನ್ನು ತಲುಪಿಸುವ ವಾರ್ಷಿಕೋತ್ಸವದ ಹಬ್ಬವನ್ನು ಸೃಷ್ಟಿಸಲು ಬಯಸಿದ್ದೇವೆ” ಎಂದಿದ್ದಾರೆ.

“ಇಂದಿನ ದಿನಗಳಲ್ಲಿ ತಂತ್ರಜ್ಞಾನ ಎಂಬುದು ವೈಯಕ್ತಿಕ ಮತ್ತು ದೈನಂದಿನ ಜೀವನದ ಅತ್ಯಗತ್ಯ ಭಾಗವಾಗಿದೆ. ನಮ್ಮ ಉದ್ದೇಶ ಕೇವಲ ಸಾಧನಗಳನ್ನು ಮಾರಾಟ ಮಾಡುವುದಲ್ಲ, ಬದಲಿಗೆ ಗ್ರಾಹಕರು ಖರೀದಿಸಿದ ನಂತರವೂ ದೀರ್ಘಕಾಲದವರೆಗೆ ಸುರಕ್ಷಿತವಾಗಿ, ಬೆಂಬಲಿತವಾಗಿ ಮತ್ತು ಪುರಸ್ಕೃತರಾಗಿರುವಂತೆ ನೋಡಿಕೊಳ್ಳುವುದಾಗಿದೆ. ಈ ವಾರ್ಷಿಕೋತ್ಸವದ ಸಂಭ್ರಮಾಚರಣೆಯು ನಮ್ಮ ಇದೇ ತತ್ವವನ್ನು ಪ್ರತಿಬಿಂಬಿಸುತ್ತದೆ” ಎಂದು ಸುಭಾಷ್ ರೆಡ್ಡಿ ತಿಳಿಸಿದ್ದಾರೆ.

ದಕ್ಷಿಣ ಭಾರತದಾದ್ಯಂತ ಬಲವಾದ ಅಸ್ತಿತ್ವ ಹೊಂದಿರುವ ಮತ್ತು ದಶಕಗಳಿಂದ ಗ್ರಾಹಕರ ವಿಶ್ವಾಸ ಸಂಪಾದಿಸಿರುವ ಸಂಗೀತಾವನ್ನು ಗ್ರಾಹಕ-ಕೇಂದ್ರಿತ ಇನ್ನೋವೇಶನ್, ಅತ್ಯುತ್ತಮ ಸೇವೆ ಮತ್ತು ಸಾಟಿಯಿಲ್ಲದ ಮೌಲ್ಯದ ಕೊಡುಗೆಗಳ ಮೂಲಕ ಭಾರತದ ಅತ್ಯಂತ ಪ್ರೀತಿಯ ಎಲೆಕ್ಟ್ರಾನಿಕ್ಸ್ ಮತ್ತು ಮೊಬೈಲ್ ರಿಟೇಲ್ ತಾಣವಾಗಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಳ್ಳುತ್ತಾ ಮುನ್ನಡೆಯುತ್ತಿದೆ.

ಈ 52ನೇ ವರ್ಷದ ವಾರ್ಷಿಕೋತ್ಸವದ ಬೃಹತ್ ಮಾರಾಟ ಮೇಳವು ಮೇ 31 ರಿಂದ ಪ್ರಾರಂಭವಾಗಲಿದ್ದು, ಎಲ್ಲಾ ಸಂಗೀತಾ ಸ್ಟೋರ್‌ಗಳಲ್ಲಿ ಸೀಮಿತ ಅವಧಿಗೆ ಲಭ್ಯವಿರುತ್ತದೆ.

ಸಂಗೀತಾ ಕುರಿತು

ಐದು ದಶಕಗಳ ಹಿಂದೆ ಸ್ಥಾಪನೆಯಾದ ಸಂಗೀತಾ, ದಕ್ಷಿಣ ಭಾರತದ ಪ್ರಮುಖ ಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್ ರಿಟೇಲ್ ಸರಣಿಗಳಲ್ಲಿ ಒಂದಾಗಿದೆ. ಇದು ಹಲವು ನಗರಗಳಲ್ಲಿ ಪ್ರಬಲವಾದ ಓಮ್ನಿ-ಚಾನೆಲ್ (ಬಹು ಮಾಧ್ಯಮ ಸಂಪರ್ಕ) ಅಸ್ತಿತ್ವವನ್ನು ಹೊಂದಿದೆ. ಗ್ರಾಹಕಸ್ನೇಹಿ ಧೋರಣೆ, ವಿಶ್ವಾಸಾರ್ಹ ಸೇವೆ ಮತ್ತು ನವೀನ ರಿಟೇಲ್ ಅನುಭವಗಳಿಗೆ ಹೆಸರಾಗಿರುವ ಸಂಗೀತಾ, ಜಾಗತಿಕ ಪ್ರಮುಖ ಬ್ರ್ಯಾಂಡ್‌ಗಳಿಂದ ಮೊಬೈಲ್‌ಗಳು, ಗ್ಯಾಜೆಟ್‌ಗಳು, ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್, ಗೃಹೋಪಯೋಗಿ ಉಪಕರಣಗಳು ಮತ್ತು ತಂತ್ರಜ್ಞಾನದ ಪರಿಹಾರಗಳನ್ನು ಒದಗಿಸುತ್ತದೆ.

Source link

ಹಿಜಾಬ್ ಧರಿಸಿದ್ದಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಆದ ಖ್ಯಾತ ನಟಿ ಅಂಕಿತಾ ಲೋಖಂಡೆ

ಕಿರುತೆರೆ ಹಾಗೂ ಬಾಲಿವುಡ್ ನಟಿ ಅಂಕಿತಾ ಲೋಖಂಡೆ (Ankita Lokhande) ಅವರು ಅಬುಧಾಬಿ ಪ್ರವಾಸದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಬೆನ್ನಲ್ಲೇ ಭಾರಿ ಟ್ರೋಲಿಂಗ್‌ಗೆ ಒಳಗಾಗಿದ್ದಾರೆ. ಪತಿ ವಿಕ್ಕಿ ಜೈನ್ ಜೊತೆ ದುಬೈ ಪ್ರವಾಸದಲ್ಲಿರುವ ಅಂಕಿತಾ, ಅಲ್ಲಿನ ಕೆಲವು ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸುವಾಗ ಹಿಜಾಬ್ (Hijab) ಧರಿಸಿದ್ದ ಫೋಟೋಗಳನ್ನು ಪೋಸ್ಟ್ ಮಾಡಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಆದರೆ, ನಟಿಯ ಬೆಂಬಲಕ್ಕೆ ನಿಂತಿರುವ ಅವರ ಅಭಿಮಾನಿಗಳು ಟ್ರೋಲರ್‌ಗಳಿಗೆ ತಕ್ಕ ಪ್ರತ್ಯುತ್ತರ ನೀಡುತ್ತಿದ್ದಾರೆ.

ಗುರುವಾರ (ಮೇ 28) ಅಂಕಿತಾ ಲೋಖಂಡೆ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಬುಧಾಬಿ ಪ್ರವಾಸದ ಸುಂದರ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದರು. ‘ನನ್ನ ಕ್ಯಾಮೆರಾ ರೋಲ್‌ನಿಂದ ಅಬುಧಾಬಿಯ ಸಣ್ಣ ಪ್ರೀತಿಯ ಜಲಕ್. ಹೊಸ ಜಾಗಗಳನ್ನು ಎಕ್ಸ್‌ಪ್ಲೋರ್ ಮಾಡುತ್ತಾ, ನಗುತ್ತಾ, ನೆನಪುಗಳನ್ನು ಮೂಡಿಸಿಕೊಳ್ಳುತ್ತಿರುವೆ’ ಎಂದು ಅಂಕಿತಾ ಕ್ಯಾಪ್ಷನ್ ಬರೆದುಕೊಂಡಿದ್ದರು. ಈ ಫೋಟೋಗಳ ಪೈಕಿ ಕೆಲವು ಚಿತ್ರಗಳಲ್ಲಿ ಅವರು ಹಿಜಾಬ್ ಧರಿಸಿ ಕಾಣಿಸಿಕೊಂಡಿದ್ದರು.

ಅಂಕಿತಾ ಅವರ ಈ ಪೋಸ್ಟ್ ಹೊರಬೀಳುತ್ತಿದ್ದಂತೆ ಒಂದು ವರ್ಗದ ನೆಟ್ಟಿಗರು ಅವರ ವಸ್ತ್ರ ವಿನ್ಯಾಸವನ್ನು ತೀವ್ರವಾಗಿ ಪ್ರಶ್ನಿಸಲು ಶುರು ಮಾಡಿದರು. ‘ಅವರು ಯಾಕೆ ಹಿಜಾಬ್ ಧರಿಸಿದ್ದಾರೆ? ಅವರೇನಾದರೂ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದಾರಾ?’ ಹಾಗೂ ‘ನೀವು ಜೈನ್ ತಾನೇ, ಸ್ವಲ್ಪ ಯೋಚಿಸಿ ಬಟ್ಟೆ ಧರಿಸಿ’ ಎಂಬಂತಹ ನೆಗೆಟಿವ್ ಕಮೆಂಟ್‌ಗಳು ಹರಿದುಬಂದವು.

ಆದರೆ, ಈ ಟ್ರೋಲಿಂಗ್ ವಿರುದ್ಧ ಅಂಕಿತಾ ಅವರ ಅಭಿಮಾನಿಗಳು ತಕ್ಷಣವೇ ತಿರುಗಿಬಿದ್ದಿದ್ದಾರೆ. ದುಬೈ ಮತ್ತು ಅಬುಧಾಬಿಯ ಪ್ರಸಿದ್ಧ ಮಸೀದಿಗಳಿಗೆ ಭೇಟಿ ನೀಡುವಾಗ ಅಲ್ಲಿನ ನಿಯಮಗಳ ಪ್ರಕಾರ ತಲೆ ಮುಚ್ಚಿಕೊಳ್ಳುವುದು ಕಡ್ಡಾಯವಾಗಿರುತ್ತದೆ. ಹಾಗಾಗಿಯೇ ಅಂಕಿತಾ ಹಿಜಾಬ್ ಧರಿಸಿದ್ದಾರೆ ಮತ್ತು ಮಸೀದಿಯ ಆವರಣದಿಂದ ಹೊರಬಂದ ನಂತರ ಅವರು ಹಿಜಾಬ್ ಇಲ್ಲದ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ ಎಂಬುದನ್ನು ಅಭಿಮಾನಿಗಳು ನೆಟ್ಟಿಗರಿಗೆ ನೆನಪಿಸಿದ್ದಾರೆ.

ಇದನ್ನೂ ಓದಿ: ದಕ್ಷಿಣ ಭಾರತ ಸಿನಿಮಾದ ನಿರ್ಮಾಪಕನೊಟ್ಟಿಗೆ ಮಲಗಲು ಹೇಳಿದ್ದರು: ನಟಿ ಅಂಕಿತಾ

‘ಅವರು ಯಾವುದೇ ಧರ್ಮವನ್ನು ಪ್ರಚಾರ ಮಾಡುತ್ತಿಲ್ಲ. ಬದಲಿಗೆ ಅಲ್ಲಿನ ನಿಯಮಗಳನ್ನು ಗೌರವಿಸಿ ಆ ಸುಂದರ ಸ್ಮಾರಕವನ್ನು ವೀಕ್ಷಿಸುತ್ತಿದ್ದಾರೆ. ದೇವಸ್ಥಾನಗಳಿಗೆ ಹೋಗುವಾಗ ನಿರ್ದಿಷ್ಟ ಡ್ರೆಸ್ ಕೋಡ್ ಇರುವಂತೆ, ಮಸೀದಿಗೂ ಇರುತ್ತದೆ ಎಂಬುದನ್ನು ಅರಿಯದವರು ಸುಮ್ಮನಿರಬೇಕು’ ಎಂದು ಅಭಿಮಾನಿಯೊಬ್ಬರು ಕಿಡಿಕಾರಿದ್ದಾರೆ. ಮತ್ತೊಬ್ಬರು ಕಮೆಂಟ್ ಮಾಡಿ, ‘ಇದು ಸಂಪೂರ್ಣವಾಗಿ ಅವರ ವೈಯಕ್ತಿಕ ಆಯ್ಕೆ’ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

GT vs RR: ಅತ್ಯಂತ ನಿಧಾನಗತಿಯ ಅರ್ಧಶತಕ ಬಾರಿಸಿದ ವೈಭವ್ ಸೂರ್ಯವಂಶಿ

ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ನಡೆಯುತ್ತಿರುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಎಡಗೈ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಅದ್ಭುತ ಇನ್ನಿಂಗ್ಸ್ ಆಡುವ ಮೂಲಕ ಎರಡೆರಡು ದಾಖಲೆಗಳನ್ನು ನಿರ್ಮಿಸಿದ್ದಾರೆ. ಗುಜರಾತ್ ವಿರುದ್ಧದ ಈ ಪಂದ್ಯದಲ್ಲಿ 31 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ವೈಭವ್, ಈ ಅರ್ಧಶತಕದ ಇನ್ನಿಂಗ್ಸ್ ಮೂಲಕ ಈ ಬಾರಿಯ ಐಪಿಎಲ್‌ನಲ್ಲಿ 700 ರನ್‌ಗಳ ಗಡಿ ದಾಟಿದರು. ಇದರ ಜೊತೆಗೆ ಪ್ಲೇಆಫ್‌ನಲ್ಲಿ 500 ರನ್‌ ಪೂರೈಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಪವರ್‌ಪ್ಲೇನಲ್ಲಿ 500 ರನ್‌ ಬಾರಿಸಿದ ಮೊದಲ ಬ್ಯಾಟ್ಸ್​ಮನ್ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.

Source link

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಬೆನ್ನಲ್ಲೇ ಬೆಂಗಳೂರಿನಲ್ಲಿ ಮತ್ತೊಂದು ದುರಂತ: ಮಳೆಗೆ ಆಟೋ ಚಾಲಕ ಬಲಿ

ಬೆಂಗಳೂರು, ಮೇ 29: ಇತ್ತೀಚೆಗೆ ಧಾರಾಕಾರ ಮಳೆಗೆ ಬೌರಿಂಗ್ ಆಸ್ಪತ್ರೆ ಕಾಂಪೌಂಡ್‌ ಕುಸಿದು 7 ಜನರು ಸಾವನ್ನಪ್ಪಿದ್ದರು. ಇದೀಗ ನಗರದಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಇಂದು ಸುರಿದ ಭಾರೀ ಮಳೆಗೆ  ಕ್ಲಬ್‌ ಕಾಂಪೌಂಡ್ ಕುಸಿದು ಆಟೋ ಚಾಲಕ ಸಾವನ್ನಪ್ಪಿರುವಂತಹ ಘಟನೆ ವಿಜಯನಗರದಲ್ಲಿ ನಡೆದಿದೆ. ಗಂಗೊಂಡನಹಳ್ಳಿಯ ನಿವಾಸಿ ಶಿವಬೋರಯ್ಯ(56) ಮೃತ ಆಟೋ ಚಾಲಕ. ಸದ್ಯ ಶಿವಬೋರಯ್ಯ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಮಾಹಿತಿ ಅಪ್​​ಡೇಟ್​ ಆಗಲಿದೆ.

Published On – 8:58 pm, Fri, 29 May 26

Source link

GT vs RR: ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ

ಯಶಸ್ವಿ ಜೈಸ್ವಾಲ್ ಅವರ ಸಾಮರ್ಥ್ಯ ಇಡೀ ಜಗತ್ತಿಗೆ ತಿಳಿದಿದೆ. ಆದರೆ ಈ ಬಾರಿಯ ಐಪಿಎಲ್‌ನಲ್ಲಿ ಜೈಸ್ವಾಲ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಆದಾಗ್ಯೂ ಗುಜರಾತ್ ಟೈಟಾನ್ಸ್ ವಿರುದ್ಧದ ಕ್ವಾಲಿಫೈಯರ್ 2 ಪಂದ್ಯದಲ್ಲಿ ಜೈಸ್ವಾಲ್ ಅವರಿಂದ ಒಂದೊಳ್ಳೆ ಇನ್ನಿಂಗ್ಸ್​ನ ನಿರೀಕ್ಷೆ ಇತ್ತು. ಆದರೆ ಆ ಪಂದ್ಯದಲ್ಲೂ ನಿರಾಸೆ ಮೂಡಿಸಿದ ಜೈಸ್ವಾಲ್ ಕೇವಲ ಎರಡು ಎಸೆತಗಳನ್ನು ಎದುರಿಸಿ ಒಂದು ರನ್ ಗಳಿಸಿ ಔಟಾದರು. ಮೊಹಮ್ಮದ್ ಸಿರಾಜ್ ಎಸೆದ ಬೌನ್ಸರ್ ಎಸೆತವನ್ನು ಸಿಕ್ಸರ್​ಗಟ್ಟುವ ಯತ್ನದಲ್ಲಿ ಜೈಸ್ವಾಲ್ ಕ್ಯಾಚ್ ನೀಡಿದರು. ಈ ಮೂಲಕ ಪ್ಲೇಆಫ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಯಶಸ್ವಿ ಜೈಸ್ವಾಲ್ ಅವರ ಕಳಪೆ ಪ್ರದರ್ಶನ ಸತತ ಮೂರನೇ ಪಂದ್ಯದಲ್ಲೂ ಮುಂದುವರೆಯಿತು.

ಐಪಿಎಲ್ ನಾಕೌಟ್ ಪಂದ್ಯಗಳಲ್ಲಿ, ಯಶಸ್ವಿ ಜೈಸ್ವಾಲ್ ಮೂರು ಪಂದ್ಯಗಳಲ್ಲಿ ಕೇವಲ 26 ರನ್ ಗಳಿಸಿದ್ದಾರೆ. 2022 ರಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ವಿರುದ್ಧ ಕೇವಲ ಮೂರು ರನ್ ಗಳಿಸಿದ್ದ ಜೈಸ್ವಾಲ್, ಆ ಬಳಿಕ ನಡೆದಿದ್ದ ಫೈನಲ್ ಪಂದ್ಯದಲ್ಲಿಯೂ 22 ರನ್ ಬಾರಿಸಿದ್ದರು. ಈಗ ಕೇವಲ ಒಂದು ರನ್ ಗಳಿಸಿ ಔಟಾಗಿದ್ದಾರೆ. ಪ್ಲೇಆಫ್ ಸುತ್ತಿನಲ್ಲಿ ಜೈಸ್ವಾಲ್ ಇದುವರೆಗೆ ಒಂದೇ ಒಂದು ಅರ್ಧಶತಕ ಬಾರಿಸಿಲ್ಲ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ.

Source link

ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ

ಬೆಂಗಳೂರು, ಮೇ 29: ರಾಜಗುರು ದ್ವಾರಕಾನಾಥ್ ಗುರೂಜಿ ಅವರು ಡಿಕೆ ಶಿವಕುಮಾರ್ ಅವರ ರಾಜಕೀಯ ಜೀವನದ ಬಗ್ಗೆ ಮಹತ್ವದ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಗುರೂಜಿ ಪ್ರಕಾರ, ಡಿಕೆ ಶಿವಕುಮಾರ್ ಅವರ ಜಾತಕದಲ್ಲಿ ಬುಧಾದಿತ್ಯ ಯೋಗವಿದ್ದು, ಇದು ಅವರಿಗೆ ಉನ್ನತ ಸ್ಥಾನಗಳನ್ನು ತಂದುಕೊಡುತ್ತದೆ. ಬಂಗಾರಪ್ಪನವರ ಕಾಲದಿಂದಲೂ ಶಿವಕುಮಾರ್ ಅವರೊಂದಿಗೆ ಸಂಪರ್ಕದಲ್ಲಿರುವ ಗುರೂಜಿ, 40 ವರ್ಷಗಳ ಹಿಂದೆಯೇ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾಗಿ ತಿಳಿಸಿದ್ದಾರೆ. ಡಿಕೆ ಶಿವಕುಮಾರ್​ಗೆ ಅಧಿಕಾರ ಸ್ವಲ್ಪ ತಡವಾಗಿ ಸಿಕ್ಕಿದ್ದು, ಈ ಹಾದಿಯು ಸವಾಲುಗಳಿಂದ ಕೂಡಿದೆ ಎಂದು ಗುರೂಜಿ ಹೇಳಿದ್ದಾರೆ. ಪಕ್ಷವನ್ನು ನಿರ್ವಹಿಸುವುದು, ಬೆಂಗಳೂರು ಸಮಸ್ಯೆಗಳನ್ನು ನಿಭಾಯಿಸುವುದು, ಎಲ್ಲರನ್ನು ಒಟ್ಟಾಗಿ ಕರೆದುಕೊಂಡು ಹೋಗುವುದು ಮತ್ತು ಮಹಿಳಾ ಮೀಸಲಾತಿ ಮಸೂದೆಯಂತಹ ವಿಷಯಗಳನ್ನು ಎದುರಿಸಬೇಕಾಗಿದೆ. ಡಿಕೆ ಶಿವಕುಮಾರ್ ಚಂಡಿಹೋಮ ಮಾಡಿದ ನಂತರ ಮಂತ್ರಿಯಾದ ಘಟನೆಯನ್ನೂ ನೆನಪಿಸಿಕೊಂಡಿದ್ದಾರೆ. ತಮ್ಮ ಆರಾಧ್ಯ ದೇವರುಗಳಾದ ಸುಬ್ರಹ್ಮಣ್ಯ, ದತ್ತಾತ್ರೇಯ ಮತ್ತು ಶೃಂಗೇರಿ ಜಗದ್ಗುರು ಭಾರತೀ ಮಹಾಸ್ವಾಮಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ವರದಿ: ಈರಣ್ಣ ಬಸವ

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಐಟಿ ದಾಳಿ ಕೇಸ್: ಸಿಎಂ ನಿರೀಕ್ಷೆಯಲ್ಲಿರುವ ಡಿಕೆ ಶಿವಕುಮಾರ್​​​​ಗೆ ಕೋರ್ಟ್​​​ ಬಿಗ್ ರಿಲೀಫ್

ಬೆಂಗಳೂರು, (ಮೇ 29): ತೆರಿಗೆ ವಂಚನೆ ಸಂಬಂಧ ಐಟಿ ದಾಳಿ ಪ್ರಕರಣದಲ್ಲಿ (IT Raid Case) ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar)  ಅವರಿಗೆ ವಿಧಿಸಲಾಗಿದ್ದ ಜಾಮೀನು ಷರತ್ತನ್ನು ಬೆಂಗಳೂರಿನ 42ನೇ ಎಸಿಜೆಎಂ ನ್ಯಾಯಾಲಯ ಸಡಿಲಿಸಿದೆ. ಕೋರ್ಟ್ ಅನುಮತಿ ಇಲ್ಲದೇ ದೇಶ ಬಿಟ್ಟು ತೆರಳುವಂತಿಲ್ಲವೆಂದು ವಿಧಿಸಲಾಗಿದ್ದ ಷರತ್ತು ಸಡಿಲಿಕೆ ಮಾಡಿದೆ. ಸಚಿವರಾಗಿ ಅಧಿಕೃತ ಕೆಲಸ ಹಾಗೂ ವೈಯಕ್ತಿಕ ಉದ್ಯಮದ ನಿಮಿತ್ತ ಮುಂದಿನ ಎರಡು ವರ್ಷಗಳ ಕಾಲ ವಿವಿಧ ದೇಶಗಳಿಗೆ ಪ್ರವಾಸ ಕೈಗೊಳ್ಳಲು ಅನುಮತಿ ನೀಡಿದೆ. ಆದರೆ, ಪ್ರತಿ ಬಾರಿಯೂ ಪ್ರವಾಸದ ಸಂಪೂರ್ಣ ವಿವರವನ್ನು ತನಿಖಾ ಸಂಸ್ಥೆಗೆ ಕಡ್ಡಾಯವಾಗಿ ಸಲ್ಲಿಸುವಂತೆ ಕೋರ್ಟ್ ಷರತ್ತು ವಿಧಿಸಿದೆ. ಈ ಮೂಲಕ ಸಿಎಂ ಆಗುತ್ತಿರುವ ಡಿಕೆ ಶಿವಕುಮಾರ್‌ ಅವರಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಂತಾಗಿದೆ.

ಮುಖ್ಯಾಂಶಗಳು

  • ತೆರಿಗೆ ವಂಚನೆ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಗೆ ಬಿಗ್ ರಿಲೀಫ್
  • ತೆರಿಗೆ ವಂಚನೆ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ಡಿಕೆಶಿ ಜಾಮೀನು ಷರತ್ತು ಸಡಿಲಿಕೆ
  • 2 ವರ್ಷ ವಿದೇಶ ಪ್ರವಾಸ ಕೈಗೊಳ್ಳಲು ಬೆಂಗಳೂರು 42ನೇ ಎಸಿಜೆಎಂ ಕೋರ್ಟ್ ಅನುಮತಿ

ಡಿಕೆ ಶಿವಕುಮಾರ್ ಮನವಿ ಪುರಸ್ಕರಿಸಿದ ಕೋರ್ಟ್

ದೆಹಲಿಯ ನಿವಾಸಗಳ ಮೇಲೆ ಐಟಿ ದಾಳಿ ಪ್ರಕರಣ ಸಂಬಂಧ ಕೋರ್ಟ್ ಅನುಮತಿ ಇಲ್ಲದೇ ದೇಶಬಿಟ್ಟು ತೆರಳದಂತೆ ಕೋರ್ಟ್ ಷರತ್ತು ವಿಧಿಸಿ ಜಾಮೀನು ನೀಡಿತ್ತು. ಬಳಿಕ ಡಿಕೆ ಶಿವಕುಮಾರ್, ಜಾಮೀನು ಷರತ್ತು ಸಡಿಲಿಕೆ ಕೋರಿ ಡಿ.ಕೆ.ಶಿವಕುಮಾರ್ ಅರ್ಜಿ ಸಲ್ಲಿಸಿದ್ದರು. ವ್ಯವಹಾರ, ಅಧಿಕೃತ ಕೆಲಸಗಳ ಹಿನ್ನೆಲೆಯಲ್ಲಿ ವಿದೇಶ ಪ್ರಯಾಣಿಸಬೇಕಿದೆ. ಅಮೆರಿಕ ಸಂಯುಕ್ತ ಸಂಸ್ಥಾನ, ಯುರೋಪ್, ಇಂಗ್ಲೆಂಡ್, ಆಸ್ಟ್ರೇಲಿಯಾ, ರಷ್ಯಾ, ಅರಬ್ ದೇಶಗಳಿಗೆ ಕಾರ್ಯಕ್ರಮ ನಿಮಿತ್ತ ಪ್ರಯಾಣಿಸಬೇಕಿದೆ. ಪ್ರತಿ ಬಾರಿ ವಿದೇಶಕ್ಕೆ ತೆರಳುವಾಗ ಕೋರ್ಟ್​ಗೆ ಈ ಬಗ್ಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಬೇಕಿದೆ. ಹೀಗಾಗಿ 2 ವರ್ಷಗಳ ಅವಧಿಗೆ ಜಾಮೀನು ಷರತ್ತು ಸಡಿಲಿಸುವಂತೆ ಕೋರಿದ್ದರು. ಇದನ್ನು ವಿಚಾರಣೆ ನಡೆಸಿದ ಕೋರ್ಟ್, ಡಿಕೆ ಶಿವಕುಮಾರ್ ಮನವಿಯನ್ನು ಪುರಸ್ಕರಿಸಿದ್ದು, ವಿದೇಶ ಪ್ರವಾಸ ಷರತ್ತನ್ನು ಸಡಿಲಗೊಳಿಸಿ ಆದೇಶಿಸಿದೆ. ಆದ್ರೆ, ವಿದೇಶಕ್ಕೆ ತೆರಳುವಾಗ ತನಿಖಾಧಿಕಾರಿಗೆ ಮಾಹಿತಿ ನೀಡಲು ಸೂಚಿಸಿದೆ.

ಇದನ್ನೂ ಓದಿ: ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ 3 ದಿನಾಂಕ ನೀಡಿದ ದ್ವಾರಕನಾಥ್ ಗುರೂಜಿ

ಪ್ರಕರಣದ ಹಿನ್ನೆಲೆ

ತೆರಿಗೆ ವಂಚನೆ ಆರೋಪದ ಮೇಲೆ ನವದೆಹಲಿಯ ವಿವಿಧ ನಿವಾಸ ಹಾಗೂ ಕಚೇರಿಗಳ ಮೇಲೆ ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳು ಏಕಾಏಕಿ ಬೃಹತ್ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದರು. ಈಗಲ್ಟನ್‌ ರೆಸಾರ್ಟ್‌ನಲ್ಲಿ ಐಟಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾಗ ಶಿವಕುಮಾರ್‌ ಅವರು ಪ್ರಮುಖ ಸಾಕ್ಷಿಯನ್ನು ನಾಶಪಡಿಸಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿತ್ತು.

ತೆರಿಗೆ ವಂಚನೆ ಆರೋಪದ ಮೇಲೆ ಡಿ.ಕೆ. ಶಿವಕುಮಾರ್‌ (A1), ಶರ್ಮಾ ಟ್ರಾನ್ಸ್‌ಪೋರ್ಟ್‌ನ ಸುನೀಲ್‌ ಕುಮಾರ್‌ ಶರ್ಮಾ, ಅವರ ಸಹೋದರ ಸಚಿನ್‌ ನಾರಾಯಣ್‌, ಆಂಜನೇಯ ಹನುಮಂತಯ್ಯ ಮತ್ತು ಎನ್‌ ರಾಜೇಂದ್ರ ವಿರುದ್ಧ ಆದಾಯ ತೆರಿಗೆ ಕಾಯಿದೆ ಸೆಕ್ಷನ್‌ಗಳಾದ 276C(1), 277, 278 ಹಾಗೂ ಐಪಿಸಿ ಸೆಕ್ಷನ್‌ಗಳಾದ 193, 199 ಮತ್ತು 120ಬಿ ಅಡಿ ಪ್ರಕರಣ ದಾಖಲಾಗಿತ್ತು. ಬಳಿಕ ಡಿಕೆ ಶಿವಕುಮಾರ್ ಮನವಿ ಮೇರೆಗೆ ಕೋರ್ಟ್, ಜಾಮೀನು ಮಂಜೂರು ಮಾಡಿತ್ತು. ಆದ್ರೆ, ನ್ಯಾಯಾಲಯದ ಪೂರ್ವಾನುಮತಿ ಇಲ್ಲದೇ ದೇಶ ತೊರೆಯುವಂತಿಲ್ಲ ಎಂಬ ಕಠಿಣ ಷರತ್ತು ವಿಧಿಸಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ

ಬೆಂಗಳೂರು, ಮೇ 29: ಕೇವಲ ಅರ್ಧ ಗಂಟೆ ಸುರಿದ ಮಳೆಗೆ ನಗರದ ಹಲವೆಡೆ ರಸ್ತೆಗಳು ಕೆರೆಯಂತಾಗಿವೆ. ಶಿವಾನಂದ ವೃತ್ತದ ರೈಲ್ವೆ ಅಂಡರ್​ಪಾಸ್​ನಲ್ಲಿ ನೀರು ನಿಂತಿವೆ. ಈ ವೇಳೆ ಕಾರು ಒಂದು ಅಂಡರ್​ಪಾಸ್​ನಲ್ಲಿ ಸಿಲುಕಿಕೊಂಡಿದೆ. ಕಾರು ತೆಗೆಯಲು ಚಾಲಕ ಪರದಾಡಿದ್ದಾರೆ. ಇನ್ನು ಯುಬಿ ಸಿಟಿ ಮುಂದಿನ ರಸ್ತೆಯಲ್ಲಿ 2 ಅಡಿಯಷ್ಟು ನೀರು ನಿಂತಿದೆ. ನೀರು ನುಗಿದ್ದ ಪರಿಣಾಮ ಬೈಕ್ ಕೈಕೊಟ್ಟಿದ್ದು, ಫುಡ್ ಡೆಲಿವರಿ ಬಾಯ್ ಪರದಾಡಿದ್ದಾರೆ. ಇನ್ನು ರಿಚ್ಮಂಡ್ ವೃತ್ತ, ಶಾಂತಿನಗರದಲ್ಲಿ ರಸ್ತೆಗಳು ಜಲಾವೃತಗೊಂಡಿದೆ. ಕೆ.ಆರ್.ಪುರಂನಲ್ಲಿ ಆಲಿಕಲ್ಲು ಸಹಿತ ಸುರಿದ ಮಳೆಗೆ ಜನರ ಪರದಾಡಿದರು. ಮಹಾಲಕ್ಷ್ಮೀ ಲೇಔಟ್, ಯಶವಂತಪುರದಲ್ಲಿ ರಸ್ತೆ ಮೇಲೆ ನೀರು ನಿಂತಿದೆ. ಇನ್ನು ಇತ್ತ ಕೋರಮಂಗಲದ ಸೋನಿ ಸಿಗ್ನಲ್, ಕನ್ನಿಂಗ್​ಹ್ಯಾಮ್ ರಸ್ತೆಗಳು ಹೊಳೆಯಂತಾಗಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ. 

Source link

ಹೈ ಬಿಪಿಯಿಂದ ಮರೆವು ಹೆಚ್ಚಾಗುತ್ತಾ? ಮೆದುಳಿನ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ?

ಇತ್ತೀಚಿನ ದಿನಗಳಲ್ಲಿ ಹೈ ಬಿಪಿ (High BP) ಸಮಸ್ಯೆ ಯುವಕರಲ್ಲೂ ಹೆಚ್ಚಾಗಿ ಕಾಣಿಸುತ್ತಿದೆ. ಇದನ್ನು ಹಲವರು ಹೃದಯ ಸಂಬಂಧಿತ ಸಮಸ್ಯೆ ಎಂದು ಭಾವಿಸುತ್ತಾರೆ. ಆದರೆ ತಜ್ಞರ ಪ್ರಕಾರ, ಹೈ ಬಿಪಿ ದೇಹದ ಹಲವು ಅಂಗಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ವಿಶೇಷವಾಗಿ, ಇದು ಮೆದುಳಿನ ಆರೋಗ್ಯ ಮತ್ತು ನೆನಪಿನ ಶಕ್ತಿಯ ಮೇಲೂ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತಿದೆ. ಆರೋಗ್ಯ ತಜ್ಞರ ಪ್ರಕಾರ, ದೀರ್ಘಕಾಲ ಹೈ ಬಿಪಿ ಇದ್ದವರಿಗೆ ಮೆದುಳಿಗೆ ರಕ್ತವನ್ನು ಸಾಗಿಸುವ ರಕ್ತನಾಳಗಳು ಹಾನಿಗೊಳಗಾಗಬಹುದು. ಇದರಿಂದ ಗಮನ ಕೇಂದ್ರೀಕರಿಸುವುದು, ವಿಚಾರಗಳನ್ನು ನೆನಪಿಟ್ಟುಕೊಳ್ಳುವುದು ಮತ್ತು ಯೋಚನೆ ಮಾಡುವ ಸಾಮರ್ಥ್ಯ ಕುಗ್ಗುವ ಸಾಧ್ಯತೆ ಇದೆ. ಕೆಲವರಲ್ಲಿ ಮರೆವು, ಮಾನಸಿಕ ದೌರ್ಬಲ್ಯ ಮತ್ತು ಏಕಾಗ್ರತೆ ಸಮಸ್ಯೆಗಳು ಕಾಣಿಸಬಹುದು. ಆದರೆ ಜನ ಇವುಗಳನ್ನು ತಲೆನೋವು, ದಣಿವು ಅಥವಾ ಒತ್ತಡ ಎಂದು ಭಾವಿಸಿ ಈ ರೀತಿಯ ಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ. ಆದರೆ ದೀರ್ಘಕಾಲ ಬಿಪಿ ನಿಯಂತ್ರಣದಲ್ಲಿಲ್ಲದಿದ್ದರೆ ಅದು ಬ್ರೇನ್ ಹೆಲ್ತ್ ಮೇಲೆ ನಿಧಾನವಾಗಿ ಪರಿಣಾಮ ಬೀರುತ್ತದೆ ಎಂದು ವೈದ್ಯರು ಎಚ್ಚರಿಸುತ್ತಾರೆ. ಹಾಗಾದರೆ ಯಾವ ರೀತಿಯ ಲಕ್ಷಣಗಳನ್ನು ನಿರ್ಲಕ್ಷಿಸಬಾರದು, ಈ ಸಮಸ್ಯೆಯನ್ನು ನಿಯಂತ್ರಿಸಲು ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಯಾವ ಲಕ್ಷಣಗಳನ್ನು ನಿರ್ಲಕ್ಷಿಸಬಾರದು?

  • ಪದೇಪದೇ ಮರೆತು ಹೋಗುವುದು
  • ಗಮನ ಕೇಂದ್ರೀಕರಿಸಲು ಕಷ್ಟವಾಗುವುದು
  • ತಲೆ ಸುತ್ತುವುದು
  • ನಿರಂತರ ತಲೆನೋವು
  • ಗೊಂದಲ ಅಥವಾ ಮಾನಸಿಕ ದಣಿವು

ಈ ರೀತಿಯ ಲಕ್ಷಣಗಳು ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸಿ ಬಿಪಿ ಮತ್ತು ಮೆದುಳಿನ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.

ಇದನ್ನೂ ಓದಿ: ನಿಮಗೆ ಹೈ ಬಿಪಿ ಇದ್ಯಾ? ಹಾಗಿದ್ರೆ ಸ್ಟ್ರೋಕ್ ಆಗದಂತೆ ತಡೆಯಲು ಈ ರೀತಿ ಮಾಡಿ

ಹೈ ಬಿಪಿ ನಿಯಂತ್ರಣಕ್ಕೆ ಏನು ಮಾಡಬೇಕು?

ತಜ್ಞರ ಸಲಹೆಯಂತೆ ನಿಯಮಿತವಾಗಿ ಬಿಪಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಉಪ್ಪಿನ ಸೇವನೆಯನ್ನು ಕಡಿಮೆ ಮಾಡುವುದು, ಪೌಷ್ಟಿಕ ಆಹಾರ ಸೇವಿಸುವುದು ಮತ್ತು ಪ್ರತಿದಿನ ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ಸಹಕಾರಿ. ಜೊತೆಗೆ ಉತ್ತಮ ನಿದ್ರೆ, ಒತ್ತಡ ನಿಯಂತ್ರಣ ಮತ್ತು ಧೂಮಪಾನ- ಮದ್ಯಪಾನದಿಂದ ದೂರ ಇರುವುದು ಕೂಡ ಮೆದುಳಿನ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ಹೈ ಬಿಪಿಯನ್ನು ನಿರ್ಲಕ್ಷಿಸದೆ ಆರಂಭದಲ್ಲೇ ನಿಯಂತ್ರಣದಲ್ಲಿಟ್ಟರೆ ಹೃದಯ ಮತ್ತು ಮೆದುಳಿನ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

GT vs RR: ಟಾಸ್ ವೇಳೆ ಗೊಂದಲ; ಟಾಸ್ ಗೆದ್ದ ಗಿಲ್, ಬ್ಯಾಟಿಂಗ್‌ ಆಯ್ದುಕೊಂಡ ಪರಾಗ್

ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಎರಡನೇ ಕ್ವಾಲಿಫೈಯರ್ ಪಂದ್ಯ ಆರಂಭಕ್ಕೂ ಮುನ್ನವೇ ವಿವಾದವೊಂದು ಹುಟ್ಟಿಕೊಂಡಿದೆ. ವಾಸ್ತವವಾಗಿ ಈ ಪಂದ್ಯದ ಟಾಸ್ ಅನ್ನು ಎರಡು ಬಾರಿ ನಡೆಸಬೇಕಾಯಿತು. ಮ್ಯಾಚ್ ರೆಫರಿ ಪ್ರಕಾಶ್ ಭಟ್ ಅವರ ಈ ನಿರ್ಧಾರ ಶುಭ್​ಮನ್ ಗಿಲ್ ಅವರ ಅಸಮಾಧಾನಕ್ಕೆ ಕಾರಣವಾಯಿತು. ಏಕೆಂದರೆ ಮೊದಲ ಬಾರಿಗೆ ನಡೆದ ಟಾಸ್‌ನಲ್ಲಿ ಶುಭಮನ್ ಗಿಲ್ ಟಾಸ್ ಗೆದ್ದಿದ್ದರು. ಆದರೆ ಮ್ಯಾಚ್ ರೆಫರಿ ಈ ಟಾಸ್ ಪ್ರಕ್ರಿಯೆಯನ್ನು ತಿರಸ್ಕರಿಸಿದರು. ಇದರಿಂದಾಗಿ ಎರಡನೇ ಬಾರಿಗೆ ನಡೆದ ಟಾಸ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ನಾಯಕ ರಿಯಾನ್ ಪರಾಗ್ ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡರು. ಅಷ್ಟಕ್ಕೂ ಈ ಪಂದ್ಯದಲ್ಲಿ ಎರಡೆರಡು ಬಾರಿ ಟಾಸ್ ನಡೆಯಲು ಕಾರಣವೇನು ಎಂಬುದನ್ನು ನೋಡುವುದಾದರೆ..

ಈ ಪಂದ್ಯಕ್ಕೆ ಪ್ರಕಾಶ್ ಭಟ್ ಮ್ಯಾಚ್ ರೆಫರಿ ಆಗಿದ್ದರು. ಇತ್ತ ಶುಭ್​ಮನ್ ಗಿಲ್ ನಾಣ್ಯ ಚಿಮ್ಮಿಸಿದರೆ, ರಿಯಾನ್ ಪರಾಗ್ ತಮ್ಮ ನಿರ್ಧಾರ ಹೇಳಿದರು. ಆದರೆ ಪರಾಗ್ ಯಾವ ನಿರ್ಧಾರ ಹೇಳಿದರು ಎಂಬುದು ಮ್ಯಾಚ್ ರೆಫರಿಗೆ ಸರಿಯಾಗಿ ಕೇಳಿಸಲಿಲ್ಲ. ಹೀಗಾಗಿ ರೆಫರಿ ಮೊದಲ ಟಾಸ್ ಅನ್ನು ರದ್ದುಗೊಳಿಸಿದರು. ಆದಾಗ್ಯೂ ಟಾಸ್ ಶುಭ್​ಮನ್ ಗಿಲ್ ಪರವಾಗಿ ಹೋಗಿತ್ತಾದರೂ ರೆಫರಿ ಅದನ್ನು ರದ್ದುಗೊಳಿಸಿದರು. ಹೀಗಾಗಿ ಎರಡನೇ ಬಾರಿಗೆ ಟಾಸ್ ನಡೆಸಬೇಕಾಯಿತು. ಎರಡನೇ ಬಾರಿಗೆ ನಡೆದ ಟಾಸ್​ನಲ್ಲಿ ರಿಯಾನ್ ಪರಾಗ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಈ ವೇಳೆ ಗಿಲ್ ಸ್ವಲ್ಪ ಅಸಮಾಧಾನಗೊಂಡವರಂತೆ ಕಾಣುತ್ತಿದ್ದರು. ಇದೀಗ ಅದರ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link