All posts by nagaraj11081993

ಕೇಳೋರಿಲ್ಲ ಬೀದರ್​​ ರೈತರ ಗೋಳು: ಬೆಳೆ ವಿಮೆ ಹೆಸರಲ್ಲಿ ಭಾರೀ ಮೋಸ

ಕೇಳೋರಿಲ್ಲ ಬೀದರ್​​ ರೈತರ ಗೋಳು: ಬೆಳೆ ವಿಮೆ ಹೆಸರಲ್ಲಿ ಭಾರೀ ಮೋಸ

ಬೀದರ್​, ಮಾರ್ಚ್​ 23: ತಮ್ಮ ಹೊಲದಲ್ಲಿ ಬಿತ್ತಿದ ಬೆಳೆ ಪ್ರಕೃತಿ ವಿಕೋಪಕ್ಕೆ ತುತ್ತಾದರೆ ಅನೂಕುಲವಾಗಲಿ ಅಂತಾ ನೂರಾರು ರೈತರು ತಮ್ಮ ಪೈರಿಗೆ ಬೆಳೆ ವಿಮೆ (crop insurance) ಮಾಡಿಸಿದರು. ಕೃಷಿ ಇಲಾಖೆ ಅಧಿಕಾರಿಗಳ ನಿರ್ದೇಶನದ ಮೇರೆಗೆ ಪ್ರತಿ ವರ್ಷ ಇಂತಿಷ್ಠು ಅಂತಾ ಹಣವನ್ನ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಕಟ್ಟುತ್ತಾ ಬಂದಿದ್ದರು. ಆದರೆ ಆ ರೈತರಿಗೆ ನ್ಯಾಯಯುತವಾಗಿ ಬರಬೇಕಾಗದ ಬೆಳೆ ವಿಮೆ ಮಾತ್ರ ಬರುತ್ತಿಲ್ಲ. ಹೀಗಾಗಿ ರೈತರು ಕಂಗಾಲಾಗಿದ್ದಾರೆ.

ಬೀದರ್ ಜಿಲ್ಲೆಯಲ್ಲಿ ಎರಡು ಲಕ್ಷ ನಾಲ್ಕು ಸಾವಿರ 19 ಜನ ರೈತರು ಈ ಕಳೆದ ವರ್ಷ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಿದ್ದಾರೆ. ಆದರೆ ಇಲ್ಲಿಯವರೆಗೂ ರೈತರ ಬೆಳೆ ಹಾನಿಯ ವಿಮೆ ಹಣ ಮಾತ್ರ ರೈತರ ಕೈಸೇರಿಲ್ಲ. ರೈತರ ಗೋಳನ್ನ ಯಾರು ಕೇಳೋರೆ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ: ಕಾರ್ಖಾನೆಗಳಿಗೆ ಸಿಹಿ ಕೊಟ್ಟ ಅನ್ನದಾತರ ಬಾಯಿಗೆ ಕಹಿ: ಸಂಕಷ್ಟಕ್ಕೆ ಸಿಲುಕಿದ ಬೀದರ್ ಕಬ್ಬು ಬೆಳೆಗಾರರು

ರೈತರಿಂದ ಸಾವಿರಾರು ರೂ ಬೆಳೆ ವಿಮೆ ಮಾಡಿಸಿಕೊಂಡು ಈಗ ರೈತರಿಗೆ ಹಣವನ್ನ ಕೊಡದೆ ಅಧಿಕಾರಿಗಳು ಬಡ ರೈತರ ಬದುಕಿನ ಜೊತೆಗೆ ಆಟವಾಡುತ್ತಿದ್ದಾರೆ. ಇನ್ನೂ ರೈತರು ಹಲವು ವರ್ಷದಿಂದ ತಾವು ಬೆಳೆದ ಬೆಳೆ ಪ್ರಕೃತಿ ವಿಕೋಪದಿಂದ ಬೆಳೆ ಹಾನಿಯಾದರೆ ಬೆಳೆ ವಿಮೆಯಿಂದಾದರೂ ಬೆಳೆ ನಷ್ಟಕ್ಕೆ ಪರಿಹಾರ ಸಿಗಬಹುದು ಅನ್ನೋ ದೃಷ್ಠಿಯಿಂದ ಈ ವರ್ಷ ಬೀದರ್​ನಲ್ಲಿ 2 ಲಕ್ಷ 4 ಸಾವಿರ 19 ಜನರು ವಿವಿಧ ಬೆಳೆ ಬೆಳೆ ವಿಮೆ ಮಾಡಿದ್ದು, ಬೆಳೆ ವಿಮೆ ಸಂಸ್ಥೆಗೆ 9 ಕೋಟಿ 90 ಲಕ್ಷ ರೂ ಬೀದರ್ ಜಿಲ್ಲೆಯ ರೈತರು ಕಟ್ಟಿದ್ದಾರೆ. ಆದರೆ ಈ ವರ್ಷ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ನಾಲ್ಕೂವರೆ ಲಕ್ಷ ಎಕರೆಯಷ್ಟು ಸುಮಾರು 300 ಕೋಟಿಗೂ ಅಧಿಕ ಬೆಳೆ ಹಾನಿಯಾಗಿದೆ. ಆದರೆ ಬೆಳೆ ವಿಮೆ ಮಾಡಿಸಿದ ಕೆವಲ 78 ಸಾವಿರ ರೈತರಿಗೆ 36.74 ಕೋಟಿ ರೂಪಾಯಿ ಮಾತ್ರ ಬೆಳೆ ವಿಮೆ ಹಣ ನೀಡಿದ್ದು, ಒಂದು ಲಕ್ಷ 38 ಸಾವಿರ ರೈತರಿಗೆ ಬೆಳೆ ಹಾನಿ ಪರಿಹಾರಕೊಡದೆ ವಿಮೆ ಕಂಪನಿ ಮೋಸ ಮಾಡಿದೆ ಎಂದು ರೈತರು ಹೇಳುತ್ತಿದ್ದಾರೆ.

ರೈತರ ಕೈಸೇರಿದ ಹಣ

ಜಿಲ್ಲೆಯ ಕೃಷಿ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದ ಮೇರೆಗೆ ಆಯಾ ಹೋಬಳಿ ವ್ಯಾಪ್ತಿಯಲ್ಲಿರುವ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ತಮ್ಮ ಬೆಳೆಗೆ ಬೆಳೆ ವಿಮೆಯನ್ನ ಮಾಡಿಸಿ ಅಲ್ಲಿಯೇ ಹಣವನ್ನ ತುಂಬುವಂತೆ ಕೃಷಿ ಇಲಾಖೆಯ ಅಧಿಕಾರಿ ರೈತರಿಗೆ ಸಲಹೆ ನೀಡಿದ್ದಾರೆ. ಕೃಷಿ ಇಲಾಖೆಯ ಅಧಿಕಾರಿಗಳ ಸಲಹೆಯಂತೆ ಬ್ಯಾಂಕ್​ನಲ್ಲಿ ಹಣ ಸಂದಾಯ ಮಾಡಿ ರಸೀದಿ ಪಡೆದಿದ್ದಾರೆ. ಆದರೆ ಸಂಕಷ್ಟದ ಪರಿಸ್ಥಿಯಲ್ಲಿ ಬೆಳೆ ಹಾನಿಯಾದಾಗ ಕೈಸೇರಬೇಕಾದ ಹಣವೇ ಈಗ ರೈತರಿಗೆ ಬರುತ್ತಿಲ್ಲ. ಇದು ಸಹಜವಾಗಿಯೇ ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಇದು ಒಂದೇ ಗ್ರಾಮದ ಕಥೆಯಲ್ಲ. ಬೀದರ್ ಜಿಲ್ಲೆಯಲ್ಲಿ ಸಾವಿರಾರು ರೈತರಿಗೆ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಹಣವೇ ಶೇಕಡಾ 80 ರಷ್ಟು ರೈತರಿಗೆ ಇಂದಿಗೂ ಬಂದಿಲ್ಲ. ಅವರು ಪ್ರತಿ ವರ್ಷ ಕೂಡ ಹಣ ಕಟ್ಟುತ್ತಲೇ ಇದ್ದಾರೆ. ಆದರೆ ಬೆಳೆ ವಿಮೆ ಹಣ ಬಾರದಿರುವುದು ರೈತರನ್ನ ಗಾಬರಿಗೊಳಿಸಿದೆ. ಸಾಲಾ ಸೋಲಾ ಮಾಡಿ ವಿಮೆ ಕಟ್ಟಿದ ಹಣವೂ ಇಲ್ಲಾ, ಜೊತೆಗೆ ಬೆಳೆ ನಾಶವಾಗಿರುವುದಕ್ಕೆ ಇನ್ಶೂರೆನ್ಸ್ ಹಣವೂ ಬಾರದಿರುವುದು ಅಧಿಕಾರಿಗಳ ವಿರುದ್ಧ ರೈತರು ತಿರುಗಿ ಬಿದ್ದಿದ್ದಾರೆ.

ರೈತರು ಆಕ್ರೋಶ

ಸಾಲ ಸೋಲಾ ಮಾಡಿ ಬಿತ್ತಿದ ಬೆಳೆ ನಾಶವಾದರೆ ಬೆಳೆ ವಿಮೆಯಲ್ಲಾದರೂ ಮರಳಿ ಹಣಬರಬಹುದೆಂದುಕೊಂಡಿದ್ದ ರೈತರು ಆಕ್ರೋಶಗೊಂಡಿದ್ದಾರೆ. ಕೂಡಲೇ ನಮ್ಮ ಬೆಳೆ ವಿಮೆ ಹಣ ಕೊಡಿ ಎಂದು ಮನವಿ ಮಾಡುತ್ತಿದ್ದಾರೆ. ಕೆಲವು ರೈತರಿಗೆ ಬೆಳೆ ವಿಮೆ ಹಣ ಹಾಕಿ, ಕೆಲವು ರೈತರಿಗೆ ಹಣ ಹಾಕದೆ ಇರೋದು ರೈತರ ಅಸಮಾಧಾನ ಹೆಚ್ಚಿಸುವಂತೆ ಮಾಡಿದೆ.

ಇದನ್ನೂ ಓದಿ; ಕಬ್ಬಿಗೆ ಗುಡ್‌ ಬೈ ಹೇಳಿ ಬಹುಬೇಡಿಕೆ ಬೆಳೆಯತ್ತ ಮುಖಮಾಡಿದ ಗಡಿ ಜಿಲ್ಲೆಯ ರೈತರು: ಕೈತುಂಬಾ ಲಾಭ

ಬೆಳೆ ವಿಮೆಯ ಹೆಸರಿನಲ್ಲಿ ರೈತರ ಹಣವನ್ನ ನುಂಗಿ ನೀರು ಕುಡಿಯುತ್ತಿರುವ ಅಧಿಕಾರಿಗಳ ವಿರುದ್ದ ಬೀದರ್ ರೈತರು ಆಕ್ರೋಶಗೊಂಡಿದ್ದಾರೆ. ಸಾವಿರಾರು ರೂಪಾಯಿ ಹಣವನ್ನ ಬ್ಯಾಂಕ್ ಖಾತೆಗೆ ಜಮಾ ಮಾಡಿದ ರೈತರಿಗೆ ಬೆಳೆವಿಮೆ ಬಾರದಿರುವುದಕ್ಕೆ ಯಾರು ಹೊಣೆ ಎಂದು ರೈತರು ಪ್ರಶ್ನಿಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

2027 ರ ಏಕದಿನ ವಿಶ್ವಕಪ್ ಸ್ವರೂಪ ಹೇಗಿರಲಿದೆ? ಭಾರತಕ್ಕೆ ಸುವರ್ಣಾವಕಾಶ

ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದ ಸಂತಸದಲ್ಲಿರುವ ಟೀಂ ಇಂಡಿಯಾದ ಮುಂದಿನ ಗುರಿ 2027 ರ ಏಕದಿನ ವಿಶ್ವಕಪ್ (2027 ODI World Cup). 2023 ರಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಫೈನಲ್​ನಲ್ಲಿ ಮುಗ್ಗರಿಸಿ ಚಾಂಪಿಯನ್ ಪಟ್ಟದಿಂದ ವಂಚಿತವಾಗಿದ್ದ ಟೀಂ ಇಂಡಿಯಾ (Team India) ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ ಗೆಲ್ಲುವ ಗುರಿ ಇಟ್ಟುಕೊಂಡಿದೆ. ಇದಕ್ಕೆ ಪೂರಕವಾಗಿ ಬಿಸಿಸಿಐ ಕೂಡ ಈ ಕ್ಯಾಲೆಂಡರ್ ವರ್ಷದಲ್ಲಿ ಏಕದಿನ ಪಂದ್ಯಗಳ ಸಂಖ್ಯೆಯನ್ನು ಹೆಚ್ಚಿಸಿದೆ. ಇದೆಲ್ಲದರ ನಡುವೆ 2027 ರ ಏಕದಿನ ವಿಶ್ವಕಪ್ ಯಾವ ಸ್ವರೂಪದಲ್ಲಿ ನಡೆಯಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಸ್ವರೂಪವನ್ನು ನೋಡಿದ ಟೀಂ ಇಂಡಿಯಾ ಅಭಿಮಾನಿಗಳ ಮನದಲ್ಲಿ ಸಂತಸ ಮನೆಮಾಡಿದೆ.

2027 ರ ಏಕದಿನ ವಿಶ್ವಕಪ್‌ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿದೆ. ಈ ಹಿಂದೆ 2003 ರಲ್ಲಿ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ಈ ಪಂದ್ಯಾವಳಿಯನ್ನು ಆಯೋಜಿಸಿತ್ತು. ಆಗ ಕೀನ್ಯಾ ಮೂರನೇ ಆತಿಥೇಯ ರಾಷ್ಟ್ರವಾಗಿತ್ತು, ಆದರೆ ಈ ಬಾರಿ ನಮೀಬಿಯಾ ಮೂರನೇ ಆತಿಥೇಯ ರಾಷ್ಟ್ರವಾಗಲಿದೆ. ಆದರೆ ಹೋಲಿಕೆಗಳು ಅಲ್ಲಿಗೆ ಕೊನೆಗೊಳ್ಳುವುದಿಲ್ಲ. ತಂಡಗಳ ಸಂಖ್ಯೆ ಮತ್ತು ಸ್ವರೂಪವು 2003 ರ ವಿಶ್ವಕಪ್‌ಗೆ ಹೋಲುತ್ತದೆ.

2003 ರಲ್ಲಿ ನಡೆದಂತೆ ನಡೆಯಲಿದೆ ಈ ವಿಶ್ವಕಪ್

ಈ ಬಾರಿ, 2003 ರ ವಿಶ್ವಕಪ್‌ನಂತೆಯೇ 14 ತಂಡಗಳು ವಿಶ್ವಕಪ್‌ನಲ್ಲಿ ಭಾಗವಹಿಸಲಿವೆ. ಆದರೆ ತಂಡಗಳ ಸಂಖ್ಯೆಗಿಂತ ವಿಶ್ವಕಪ್‌ನ ಸ್ವರೂಪ ಮುಖ್ಯವಾಗಿದೆ. ಈ 14 ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಈ 2 ಗುಂಪುಗಳಲ್ಲಿ ತಲಾ ಏಳು ತಂಡಗಳು ಇರಲಿವೆ. ಪ್ರತಿ ತಂಡವು ತನ್ನ ಗುಂಪಿನಲ್ಲಿರುವ ಇತರ ತಂಡಗಳ ವಿರುದ್ಧ ಪಂದ್ಯಗಳನ್ನು ಆಡುತ್ತವೆ. ಪ್ರತಿ ಗುಂಪಿನಿಂದ ಅಗ್ರ ಮೂರು ತಂಡಗಳು ಸೂಪರ್ 6 ಸುತ್ತಿಗೆ ಮುನ್ನಡೆಯುತ್ತವೆ, ಅಲ್ಲಿ ಪ್ರತಿ ತಂಡವು ಇನ್ನೊಂದು ಗುಂಪಿನ ಮೂರು ತಂಡಗಳ ವಿರುದ್ಧ ಒಂದು ಪಂದ್ಯವನ್ನು ಆಡುತ್ತದೆ.

ಇಲ್ಲಿ ಗಮನಿಸಬೇಕಾದ ಸಂಗತಿ ಏನೆಂದರೆ ಗುಂಪು ಹಂತದಲ್ಲಿ ತಂಡವೊಂದು ಗಳಿಸಿದ ಅಂಕಗಳು, ಸೂಪರ್ ಸಿಕ್ಸ್ ಹಂತದಲ್ಲೂ ಪರಿಗಣನೆಗೆ ಬರುತ್ತವೆ. ಇದು ಪ್ರತಿ ಪಂದ್ಯಕ್ಕೂ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ. ಈ ಹಂತದಲ್ಲಿ ಅಗ್ರಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ಗೆ ಮುನ್ನಡೆಯುತ್ತವೆ. ಅಂತಿಮವಾಗಿ, ಅಗ್ರ ಎರಡು ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗುತ್ತವೆ.

2027 ರ ಏಕದಿನ ವಿಶ್ವಕಪ್​ಗೆ ಈಗಲೇ 20 ಆಟಗಾರರ ಪಟ್ಟಿ ಸಿದ್ಧಪಡಿಸಿದ ಬಿಸಿಸಿಐ

2003 ರ ವಿಶ್ವಕಪ್ ಕೂಡ ಇದೇ ಮಾದರಿಯಲ್ಲಿ ನಡೆದಿತ್ತು. ಆ ಟೂರ್ನಿಯಲ್ಲಿಯೂ ಟೀಂ ಇಂಡಿಯಾ ಫೈನಲ್ ತಲುಪಿತ್ತು. ಆದರೆ, ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು. ಈ ಬಾರಿಯ ವಿಶ್ವಕಪ್ ಕೂಡ ಅದೇ ಮಾದರಿ ಮತ್ತು ಅದೇ ದೇಶಗಳಲ್ಲಿ ನಡೆಯಲಿದೆ. ಹೀಗಾಗಿ ಈ ಬಾರಿಯೂ ಟೀಂ ಇಂಡಿಯಾ ಫೈನಲ್ ತಲುಪಿ ಟ್ರೋಫಿ ಎತ್ತಿಹಿಡಿಯಲಿ ಎಂಬುದನ್ನು ಅಭಿಮಾನಿಗಳ ಆಶಯವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಾರ್ವಜನಿಕವಾಗಿ ಪತ್ನಿಯನ್ನ ಗಂಡ ಹತ್ಯೆ ಮಾಡಿದ್ಯಾಕೆ? ಅಂತಹ ದ್ವೇಷ ಏನಿತ್ತು?

ಬೆಳಗಾವಿ, (ಮಾರ್ಚ್ 23): ಅವರಿಬ್ಬರೂ ಹದಿನೈದು ವರ್ಷದ ಹಿಂದೆ ಪ್ರೀತಿಸಿ ಕುಟುಂಬಸ್ಥರ ವಿರೋಧದ ನಡುವೆಯೂ ಅಂತರ್ಜಾತಿ ಮದುವೆಯಾದವರು. ಮೂರು ಮುದ್ದಾದ ಮಕ್ಕಳು ಈ ದಂಪತಿ ಅನ್ಯೋನ್ಯತೆಗೆ ಸಾಕ್ಷಿಯಾಗಿದ್ದರು. ಆದರೀಗ ಅದೊಂದು ಕಾರಣಕ್ಕೆ ಪ್ರೀತಿಸಿ ಮದುವೆಯಾದ ಹೆಂಡತಿಯನ್ನೇ ಪತಿ ಮನೆಯಿಂದ ಎಳೆತಂದು ಕಲ್ಲಿನಿಂದ ಜಜ್ಜಿ ನಡು ರಸ್ತೆಯಲ್ಲೇ ಬರ್ಬರ ಹತ್ಯೆ ಮಾಡಿದ್ದಾನೆ. ಈ ಘೋರ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ನಡೆದಿದೆ. ಶಿವಕ್ಕ ಹಾಗೂ ಬಸವರಾಜ 15 ವರ್ಷಗಳ ಹಿಂದೆ ಪ್ರೀತಿಸಿ ಅಂತರ್ಜಾತಿ ವಿವಾಹ ಮಾಡಿಕೊಂಡಿದ್ದರು. ಶಿವಕ್ಕ ಮೊದಲ ಪತಿ ಅಕಾಲಿಕ ಮರಣದ ನಂತರ ತನ್ನದೇ ಗ್ರಾಮದ ಬಸವರಾಜನನ್ನ ಪ್ರೀತಿಸಿ ರಿಜಿಸ್ಟರ್ ಮದುವೆಯಾಗಿದ್ದರು. ಆದರೆ ಕಳೆದ ಐದಾರು ವರ್ಷಗಳಿಂದ ಕುಟುಂಬದಲ್ಲಿ ಸಣ್ಣಪುಟ್ಟ ವಿಚಾರಕ್ಕೆ ಗಲಾಟೆಗಳು ಹೆಚ್ಚಾಗುತ್ತಾ ಬಂದಿದ್ದವು. ಗಲಾಟೆಗಳಿಂದ ಬೇಸತ್ತ ಶಿವಕ್ಕ, ತನ್ನಿಬ್ಬರು ಮಕ್ಕಳೊಂದಿಗೆ ನರಗುಂದದ ಮಠವೊಂದರಲ್ಲಿ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು. ಅಲ್ಲಿ ಅಡುಗೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಾ ಮಕ್ಕಳಿಗೆ ಶಿಕ್ಷಣವನ್ನೂ ಕೊಡಿಸುತ್ತಿದ್ದಳು. ಮತ್ತೊಂದೆಡೆ, ಬಸವರಾಜ ಮೊದಲ ಮಗಳನ್ನು ತನ್ನ ತಾಯಿ ಬಳಿ ಇಟ್ಟುಕೊಂಡು ಡ್ರೈವರ್ ಕೆಲಸ ಮಾಡುತ್ತಿದ್ದ. ದೂರದ ಊರುಗಳಿಗೆ ಹೋಗ್ತಿದ್ದ ಬಸವರಾಜ, ಆಗಾಗ ತಾಯಿ ಮಗಳ ಕಡೆಗೆ ಬಂದು ಹೋಗುವುದನ್ನ ಮಾಡ್ತಿದ್ದ. ಮಗಳನ್ನ ನೋಡಿಕೊಳ್ಳುವ ವಿಚಾರಕ್ಕೆ ನಡೆದ ಗಲಾಟೆ ಬಳಿಕ ಪತ್ನಿ ಮೇಲೆ ಸಂಶಯಗೊಂಡು ಇಟ್ಟಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಸಾರ್ವಜನಿಕವಾಗಿ ಕಲ್ಲಿಂದ ಜಜ್ಜಿ ಪತ್ನಿ ಹತ್ಯೆ ಮಾಡಿದ್ಯಾಕೆ? ಗಂಡನಿಗೆ ಅಂತಹ ದ್ವೇಷ ಏನಿತ್ತು ಎನ್ನುವುದನ್ನು ಎಸ್ಪಿ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: ಬೆಳಗಾವಿ: ಪ್ರೀತಿಸಿ ಮದುವೆಯಾದ ಹೆಂಡತಿಗೆ ಚಟ್ಟಕಟ್ಟಿದ ಪತಿ

Source link

ಕುವೈತ್​​ನಲ್ಲಿ ಇರಾನ್​ನಿಂದ ಮತ್ತೊಂದು ಯುದ್ಧವಿಮಾನ ಪತನ; ವಿಡಿಯೋ ವೈರಲ್

ಕುವೈತ್, ಮಾರ್ಚ್ 23: ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕದ ದಾಳಿ ಮುಂದುವರೆದಂತೆ ಇರಾನ್ (Iran War) ಕೂಡ ಗಲ್ಫ್ ದೇಶಗಳಲ್ಲಿನ ಅಮೆರಿಕದ ವಾಯುನೆಲೆಗಳ ಮೇಲಿನ ದಾಳಿಯನ್ನು ಮುಂದುವರೆಸಿದೆ. ಈ ಯುದ್ಧ ಆರಂಭವಾಗಿ 24 ದಿನಗಳಾಗಿವೆ. ಇನ್ನೂ ಮಧ್ಯಪ್ರಾಚ್ಯ ಸಂಘರ್ಷ ತೀವ್ರಗೊಳ್ಳುತ್ತಲೇ ಇದೆ. ಇದರ ವಿಡಿಯೋ ವೈರಲ್ ಆಗಿದೆ. ಮಧ್ಯಪ್ರಾಚ್ಯದಲ್ಲಿ ಸಂಘರ್ಷ ನಾಲ್ಕನೇ ವಾರಕ್ಕೆ ಕಾಲಿಡುತ್ತಿದ್ದಂತೆ ಎಕ್ಸ್​ನಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ.

ಇದು ಕುವೈತ್‌ನಲ್ಲಿ ಅಮೆರಿಕದ ಮಿಲಿಟರಿಯ ಮತ್ತೊಂದು F-15E ಯುದ್ಧವಿಮಾನ ಪತನವಾಗುವುದನ್ನು ತೋರಿಸುತ್ತದೆ. ಇದು ಯಾವ ದಿನ ನಡೆದಿರುವ ದಾಳಿಯೆಂಬ ಮಾಹಿತಿಯಿಲ್ಲ. ಇರಾನ್‌ನ ರಾಜ್ಯ ಮಾಧ್ಯಮಗಳು ಭಾನುವಾರ ಹಾರ್ಮುಜ್ ದ್ವೀಪದ ಬಳಿ ‘ಶತ್ರು’ದೇಶದ F-15 ಜೆಟ್ ಅನ್ನು ಹೊಡೆದುರುಳಿಸಿದೆ ಎಂದು ಹೇಳಿಕೊಂಡ ಹಿನ್ನೆಲೆಯಲ್ಲಿ ಇದೀಗ ವೈರಲ್ ಆದ ಈ ವಿಡಿಯೋ ಚರ್ಚೆಗೆ ಕಾರಣವಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

PM Modi Speech in WITT Live: ವಾಟ್ ಇಂಡಿಯಾ ಥಿಂಕ್ಸ್ ಟುಡೇ ಶೃಂಗಸಭೆ; ಪ್ರಧಾನಿ ಮೋದಿ ಭಾಷಣ

ನವದೆಹಲಿ, ಮಾರ್ಚ್​ 23: ಟಿವಿ9 ನೆಟ್ವರ್ಕ್​​​ನ ಪ್ರತಿಷ್ಠಿತ ಕಾರ್ಯಕ್ರಮ “ವಾಟ್ ಇಂಡಿಯಾ ಥಿಂಕ್ಸ್ ಟುಡೇ ಶೃಂಗಸಭೆ 2026”ರ ನಾಲ್ಕನೇ ಆವೃತ್ತಿ ನವದೆಹಲಿಯಲ್ಲಿ ಇಂದಿನ ಆರಂಭವಾಗಿದೆ. ಈ ಬಾರಿಯ ಶೃಂಗಸಭೆ ಭಾರತ ಮತ್ತು ಜಗತ್ತು ಎಂಬ ಥೀಮ್ ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು, ಗಣ್ಯರನ್ನು ಉದ್ದೇಶಿಸಿ ಮಾತನಾಡಿದರು. ಉದ್ಯಮ ಕ್ಷೇತ್ರದ ದಿಗ್ಗಜರು, ಆರ್ಥಿಕ ತಜ್ಞರು, ರಾಜಯಕೀಯ ನಾಯಕರು, ಸಿನಿಮಾ ಕ್ಷೇತ್ರದ ನಟರು, ಕ್ರೀಡಾಪಟುಗಳು ಸೇರಿದಂತೆ ಪ್ರಮುಖ ವ್ಯಕ್ತಿಗಳು ಈ ಶೃಂಗಸಭೆಯಲ್ಲಿ ಭಾಗವಹಿಸಿದ್ದಾರೆ. “ವಾಟ್ ಇಂಡಿಯಾ ಥಿಂಕ್ಸ್ ಟುಡೇ ಶೃಂಗಸಭೆ”ಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಲೈವ್​ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

IMDb ಪಟ್ಟಿಯಲ್ಲಿ ‘ಧುರಂಧರ್ 2’ ಸಿನಿಮಾ ನಿರ್ದೇಶಕ ಆದಿತ್ಯ ಧರ್ ನಂಬರ್ ಒನ್

ಭಾರತೀಯ ಚಿತ್ರರಂಗದಲ್ಲಿ ಈಗ ಎಲ್ಲಿ ಕೇಳಿದರೂ ‘ಧುರಂಧರ್: ದಿ ರಿವೆಂಜ್’ (Dhurandhar 2) ಸಿನಿಮಾದ ಬಗ್ಗೆಯೇ ಮಾತು ಕೇಳಿಬರುತ್ತಿದೆ. ಕೇವಲ ಬಾಕ್ಸ್ ಆಫೀಸ್ ಕಲೆಕ್ಷನ್ ಮಾತ್ರವಲ್ಲದೇ, ಈ ವಾರದ IMDb ಜನಪ್ರಿಯ ಭಾರತೀಯ ಸೆಲೆಬ್ರಿಟಿಗಳ ಪಟ್ಟಿಯಲ್ಲೂ (IMDb Popular Indian Celebrities list) ಈ ಚಿತ್ರದ ತಂಡವೇ ರಾರಾಜಿಸುತ್ತಿದೆ. ವಿಶೇಷ ಏನೆಂದರೆ, ಈ ಸಿನಿಮಾದ ಕಲಾವಿದರನ್ನೂ ಮೀರಿಸಿ, ನಿರ್ದೇಶಕ ಆದಿತ್ಯ ಧರ್ ಅವರು ನಂಬರ್ ಒನ್ ಸ್ಥಾನ ಪಡೆದಿದ್ದಾರೆ.

ಸಾಮಾನ್ಯವಾಗಿ ಇಂತಹ ಪಟ್ಟಿಗಳಲ್ಲಿ ಸ್ಟಾರ್ ನಟರು ಮೊದಲ ಸ್ಥಾನದಲ್ಲಿರುತ್ತಾರೆ. ಆದರೆ ಈ ಬಾರಿ ‘ಧುರಂಧರ್’ ಚಿತ್ರದ ನಿರ್ದೇಶಕ ಆದಿತ್ಯ ಧರ್ ಅವರು ನಟರನ್ನೆಲ್ಲಾ ಹಿಂದಿಕ್ಕಿ ಮೊದಲ ಸ್ಥಾನ ಅಲಂಕರಿಸಿದ್ದಾರೆ. ಚಿತ್ರದ ಕಥೆ ಮತ್ತು ಮೇಕಿಂಗ್ ಮೂಲಕ ಅವರು ಜನಮನ ಗೆದ್ದಿರುವುದಕ್ಕೆ ಇದು ಸಾಕ್ಷಿಯಾಗಿದೆ. ಅವರ ಕೆಲಸಕ್ಕೆ ಅಭಿಮಾನಿಗಳು ಭೇಷ್ ಎನ್ನುತ್ತಿದ್ದಾರೆ.

IMDb ಪಟ್ಟಿಯಲ್ಲಿರುವ ‘ಧುರಂಧರ್ 2’ ಚಿತ್ರತಂಡ:

  • ಆದಿತ್ಯ ಧರ್ (ನಿರ್ದೇಶಕ): 1ನೇ ಸ್ಥಾನ
  • ಸಾರಾ ಅರ್ಜುನ್: 2ನೇ ಸ್ಥಾನ
  • ರಣವೀರ್ ಸಿಂಗ್: 3ನೇ ಸ್ಥಾನ
  • ಉದಯ್‌ಬೀರ್ ಸಂಧು: 7ನೇ ಸ್ಥಾನ
  • ಅರ್ಜುನ್ ರಾಮ್​ಪಾಲ್: 9ನೇ ಸ್ಥಾನ
  • ಸೌಮ್ಯಾ ಟಂಡನ್: 10ನೇ ಸ್ಥಾನ
  • ಗೌರವ್ ಗೇರಾ: 12ನೇ ಸ್ಥಾನ
  • ಡ್ಯಾನಿಶ್ ಇಕ್ಬಾಲ್: 13ನೇ ಸ್ಥಾನ
  • ರಾಕೇಶ್ ಬೇಡಿ: 20ನೇ ಸ್ಥಾನ

ಇದಲ್ಲದೆ, ಮೊದಲ ಭಾಗದಲ್ಲಿ ನಟಿಸಿದ್ದ ಅಕ್ಷಯ್ ಖನ್ನಾ 16ನೇ ಸ್ಥಾನದಲ್ಲಿದ್ದಾರೆ. ಇತರ ನಟರ ಪೈಕಿ ಅನಾಸ್ವರ ರಾಜನ್ (6ನೇ ಸ್ಥಾನ) ಮತ್ತು ಜತಿನ್ ಗೋಸ್ವಾಮಿ (14ನೇ ಸ್ಥಾನ) ಕೂಡ ಪಟ್ಟಿಯಲ್ಲಿದ್ದಾರೆ.

ಮಾರ್ಚ್ 19ರಂದು ಬಿಡುಗಡೆಯಾದ ‘ಧುರಂಧರ್ 2’ ಸಿನಿಮಾ, ಕರಾಚಿಯ ಲಿಯಾರಿ ಹಿನ್ನೆಲೆಯಲ್ಲಿ ನಡೆಯುವ ಕಥೆ ಹೊಂದಿದೆ. ಭಾರತೀಯ ಸಂಸತ್ ಭವನದ ಮೇಲಿನ ದಾಳಿ, 26/11 ಮುಂಬೈ ದಾಳಿ ಮತ್ತು ಕಂದಹಾರ್ ವಿಮಾನ ಹೈಜಾಕ್‌ನಂತಹ ನೈಜ ಘಟನೆಗಳ ಎಳೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಸದ್ಯ ಈ ಚಿತ್ರವು ಭಾರತದಲ್ಲಿ 450 ಕೋಟಿ ರೂ. ಹಾಗೂ ವಿಶ್ವದಾದ್ಯಂತ ಭರ್ಜರಿ 750 ಕೋಟಿ ರೂ. ಗಳಿಕೆ ಮಾಡಿ ಮುನ್ನುಗ್ಗುತ್ತಿದೆ. ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಗುತ್ತಿದೆ.

ಇದನ್ನೂ ಓದಿ: ಎಐ ಮೂಲಕ ಬದಲಾಯ್ತು ‘ಧುರಂಧರ್ 2’ ಕ್ಲೈಮಾಕ್ಸ್; ಪ್ರೇಕ್ಷಕರ ಬಯಕೆಯಂತೆ ಕಥೆ ಅಂತ್ಯ

ಐಎಂಡಿಬಿ ಕುರಿತು:

ಐಎಂಡಿಬಿ ಒಂದು ಪ್ರಸಿದ್ಧ ಆನ್‌ಲೈನ್ ವೇದಿಕೆ ಆಗಿದ್ದು, ಸಿನಿಮಾ, ಟಿವಿ ಶೋಗಳು, ನಟರು, ನಿರ್ಮಾಪಕರ ಮತ್ತು ತಂತ್ರಜ್ಞರ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ. ಜನರು ಸಿನಿಮಾಗಳ ವಿಮರ್ಶೆಗಳನ್ನು ಓದಲು, ರೇಟಿಂಗ್ ನೀಡಲು ಮತ್ತು ಹೊಸ ಬಿಡುಗಡೆಗಳ ಬಗ್ಗೆ ಈ ವೆಬ್​ಸೈಟ್ ಮೂಲಕ ತಿಳಿದುಕೊಳ್ಳಬಹುದು. ಇದು ಚಿತ್ರರಂಗದ ಮಾಹಿತಿಗಾಗಿ ವಿಶ್ವಾಸಾರ್ಹ ಮೂಲವಾಗಿದೆ. ಇಲ್ಲಿ ಜನರು ಸಿನಿಮಾಗಳಿಗೆ ರೇಟಿಂಗ್ ಮತ್ತು ವಿಮರ್ಶೆಗಳನ್ನು ನೀಡಬಹುದು. ನಿಖರ ಮಾಹಿತಿ, ನಟರ ವಿವರಗಳು ಮತ್ತು ಟ್ರೈಲರ್‌ಗಳು ಸುಲಭವಾಗಿ ಲಭ್ಯವಾಗುತ್ತವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹೊಸ ಪ್ಯಾನ್ ನಿಯಮದಿಂದ ಹಿಡಿದು ಇನ್ಷೂರೆನ್ಸ್ ಪಾವತಿವರೆಗೆ, ಮಾರ್ಚ್ 31ಕ್ಕೆ ಡೆಡ್​ಲೈನ್ ಇರುವ ಕೆಲ ಪ್ರಮುಖ ಹಣಕಾಸು ಕಾರ್ಯಗಳು

ನವದೆಹಲಿ, ಮಾರ್ಚ್ 23: ಹೊಸ ಹಣಕಾಸು ವರ್ಷ ಆರಂಭವಾಗಲು ಒಂದು ವಾರವಷ್ಟೇ ಉಳಿದಿರುವುದು. ಹೊಸ ವಿತ್ತ ವರ್ಷ ಆರಂಭಕ್ಕೆ ಮುನ್ನ ಮಾಡಬೇಕಾದ ಕೆಲ ಹಣಕಾಸು ಕಾರ್ಯಗಳು (Financial tasks) ತಿಳಿದಿರಲಿ. ಕೆಲ ಪ್ರಮುಖ ಕಾರ್ಯಗಳಿಗೆ ಮಾರ್ಚ್ 31ರವರೆಗೆ ಕಾಲಾವಕಾಶ ಇರುತ್ತದೆ. ಅದು ತಪ್ಪಿದರೆ ಒಂದಷ್ಟು ಹಿನ್ನಡೆ ಅಥವಾ ತೊಂದರೆ ಎದುರಾಗಬಹುದು. ಆರ್ಥಿಕವಾಗಿ ಪರಿಣಾಮ ಬೀರಬಲ್ಲ ಈ ಮಾರ್ಚ್ 31ರ ಡೆಡ್​ಲೈನ್​ಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಪ್ಯಾನ್ ಕಾರ್ಡ್ ನಿಯಮ ಬದಲಾವಣೆ

ಸದ್ಯ ನೀವು ಪ್ಯಾನ್ ಕಾರ್ಡ್ ಪಡೆಯಬೇಕಾದರೆ ಆಧಾರ್ ದಾಖಲೆ ಕೊಟ್ಟರೆ ಸಾಕು. ಈ ಅವಕಾಶ 2026ರ ಮಾರ್ಚ್ 31ರವರೆಗೆ ಮಾತ್ರ. ಏಪ್ರಿಲ್ 1ರಿಂದ ಹೊಸ ನಿಯಮ ಬರುತ್ತಿದೆ. ಆಗ ನೀವು ಪ್ಯಾನ್ ಕಾರ್ಡ್​ಗೆ ಅರ್ಜಿ ಸಲ್ಲಿಸುವಾಗ ಆಧಾರ್ ಮಾತ್ರವಲ್ಲ, ವೋಟರ್ ಐಡಿ, ಪಾಸ್​ಪೋರ್ಟ್, ಡಿಎಲ್, ಬರ್ತ್ ಸರ್ಟಿಫಿಕೇಟ್, ಎಸ್ಸೆಸ್ಸೆಲ್ಸಿ ಸರ್ಟಿಫಿಕೇಟ್ ಇತ್ಯಾದಿ ಯಾವುದಾದರೂ ಹೆಚ್ಚುವರಿ ದಾಖಲೆಗಳನ್ನು ಕೊಡಬೇಕಾಗುತ್ತದೆ.

ಇದನ್ನೂ ಓದಿ: ನಿಷ್ಕ್ರಿಯ ಇಪಿಎಫ್ ಅಕೌಂಟ್​ಗಳಿಗೆ ಬಡ್ಡಿ ಸಿಗುತ್ತಾ? ಯಾವುದಕ್ಕೆ ಟ್ಯಾಕ್ಸ್ ಇರುತ್ತೆ?

ಕಂಪನಿ ಎಚ್​ಆರ್​ಗೆ ನಿಮ್ಮ ಹೂಡಿಕೆಗಳ ದಾಖಲೆ ಸಲ್ಲಿಸಿ

ಉದ್ಯೋಗಿಯ ಸಂಬಳದ ಹಣಕ್ಕೆ ಟಿಡಿಎಸ್ ಮುರಿದುಕೊಳ್ಳುವುದನ್ನು ತಪ್ಪಿಸಲು ಕಂಪನಿಗಳು ಉದ್ಯೋಗಿಗಳಿಂದ ಇನ್ವೆಸ್ಟ್​ಮೆಂಟ್ ಪ್ರೂಫ್ ಕೇಳುತ್ತವೆ. ಇನ್ಷೂರೆನ್ಸ್ ಪ್ರೀಮಿಯಮ್ ಪೇಮೆಂಟ್​ನ ರೆಸಿಪ್ಟ್​ಗಳು, ಪಿಪಿಎಫ್​ನಲ್ಲಿ ಹೂಡಿಕೆ ಮಾಡಿದ್ದರೆ ಅದರ ರೆಸಿಪ್ಟ್​ಗಳು; ಎಚ್​ಆರ್​ಎ ಕ್ಲೇಮ್ ಮಾಡಬೇಕೆಂದಿದ್ದರೆ ರೆಂಟ್ ರೆಸಿಪ್ಟ್​ಗಳು ಮತ್ತು ರೆಂಟಲ್ ಅಗ್ರೀಮೆಂಟ್; ಇಎಲ್​ಎಸ್​ಎಸ್ ಇನ್ವೆಸ್ಟ್​ಮೆಂಟ್ ಸ್ಟೇಟ್ಮೆಂಟ್ ಇತ್ಯಾದಿ ದಾಖಲೆಗಳನ್ನು ಉದ್ಯೋಗಿಗಳು ತಮ್ಮ ಕಂಪನಿಯ ಎಚ್​ಆರ್ ವಿಭಾಗಕ್ಕೆ ಸಲ್ಲಿಸಬೇಕಾಗುತ್ತದೆ. ಇದಕ್ಕೆ ಡೆಡ್​ಲೈನ್ ಮಾರ್ಚ್ 31. ನೀವು ದಾಖಲೆ ಸಲ್ಲಿಸದಿದ್ದರೆ ಸಂಬಳದಿಂದ ಟಿಡಿಎಸ್ ಕಡಿತ ಆಗಬಹುದು.

ಪಿಪಿಎಫ್, ಎಸ್​ಎಸ್​ವೈ, ಎನ್​ಪಿಎಸ್ ಸ್ಕೀಮ್​ಗಳಿಗೆ ಪ್ರೀಮಿಯಮ್ ಪಾವತಿಸಿ

ಹಳೆಯ ಟ್ಯಾಕ್ಸ್ ರಿಜೀಮ್​ನಲ್ಲಿ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ಸಿ ಅಡಿಯಲ್ಲಿ ಟ್ಯಾಕ್ಸ್ ಲಾಭಕ್ಕೆ ಅವಕಾಶ ಇದೆ. ಪಿಪಿಎಫ್, ಸುಕನ್ಯಾ ಸಮೃದ್ದಿ, ಎನ್​ಪಿಎಸ್ ಇತ್ಯಾದಿ ಸೇವಿಂಗ್ಸ್ ಸ್ಕೀಮ್​ಗಳಿಗೆ ಮಾಡುವ ಹೂಡಿಕೆಗಳಿಗೆ ಟ್ಯಾಕ್ಸ್ ಡಿಡಕ್ಷನ್ ಕ್ಲೇಮ್ ಮಾಡಬಹುದು. ಮಾರ್ಚ್ 31ರೊಳಗೆ ನೀವು ಹೂಡಿಕೆ ಮಾಡಬೇಕು. ಇಲ್ಲದಿದ್ದರೆ ಅದು ಮುಂದಿನ ಹಣಕಾಸು ವರ್ಷದ ಲೆಕ್ಕಕ್ಕೆ ಹೋಗುತ್ತದೆ.

ಇದನ್ನೂ ಓದಿ: ಬ್ಯಾಂಕು, ಷೇರು, ಮ್ಯೂಚುವಲ್ ಫಂಡ್ ಸಂಸ್ಥೆಗಳು ದಿವಾಳಿ ಎದ್ದರೆ ಹೂಡಿಕೆದಾರರ ಹಣ ಏನಾಗುತ್ತೆ? ಇಲ್ಲಿದೆ ಡೀಟೇಲ್ಸ್

ಹೆಲ್ತ್ ಇನ್ಷೂರೆನ್ಸ್, ಹೋಮ್ ಲೋನ್ ಇತ್ಯಾದಿ

ಸೆಕ್ಷನ್ 80ಡಿ ಅಡಿಯಲ್ಲಿ ಹೆಲ್ತ್ ಇನ್ಷೂರೆನ್ಸ್ ಪ್ರೀಮಿಯಮ್ ಹಣ ಪಾವತಿಗೆ ಡಿಡಕ್ಷನ್ ಸಿಗುತ್ತದೆ. 25,000 ರೂವರೆಗಿನ ಪಾವತಿಗೆ ಡಿಡಕ್ಷನ್ ಕ್ಲೇಮ್ ಮಾಡಬಹುದು. ಮಾರ್ಚ್ 31ರೊಳಗೆ ಇನ್ಷೂರೆನ್ಸ್ ಪ್ರೀಮಿಯಮ್ ಪಾವತಿಸಿರಿ.

ಹೋಮ್ ಲೋನ್ ಪಡೆದಿದ್ದರೆ ಪ್ರಿನ್ಸಿಪಾಲ್ ಮೊತ್ತ ಹಾಗೂ ಬಡ್ಡಿ ಎರಡಕ್ಕೂ ಡಿಡಕ್ಷನ್ ಸೌಲಭ್ಯ ಇದೆ. ತೆರಿಗೆ ಪಾವತಿದಾರರು ತಮ್ಮ ಬ್ಯಾಂಕಿಂದ ಹೋಮ್ ಲೋನ್ ಇಂಟರೆಸ್ಟ್ ಸರ್ಟಿಫಿಕೇಟ್ ಪಡೆದುಕೊಳ್ಳಬೇಕು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಹಿಂದೂ ಶಾಸಕ ಏಕೆ ಆಯ್ಕೆಯಾಗಿಲ್ಲ? ಎಂದ ಕೇರಳದ ಬಿಜೆಪಿ ಅಭ್ಯರ್ಥಿ ವಿರುದ್ಧ ಕೇಸ್ ದಾಖಲು

ತಿರುವನಂತಪುರಂ, ಮಾರ್ಚ್ 23: ಕೇರಳದ ವಿಧಾನಸಭಾ ಚುನಾವಣೆಗೂ (Kerala Assembly Elections) ಕೆಲವೇ ದಿನಗಳ ಮೊದಲು, ಕೇರಳದ ಬಿಜೆಪಿ ನಾಯಕ ಮತ್ತು ಗುರುವಾಯೂರಿನ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ವಿರುದ್ಧ ಕೇಸ್ ದಾಖಲಾಗಿದೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕೋಮುವಾದಿ ಹೇಳಿಕೆ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಕೇರಳದಲ್ಲಿ ಏಪ್ರಿಲ್ 9ರಂದು ವಿಧಾನಸಭಾ ಚುನಾವಣೆ ನಡೆಯಲಿದ್ದು, ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ.

ಬಿಜೆಪಿ ಅಭ್ಯರ್ಥಿ ಗೋಪಾಲಕೃಷ್ಣನ್ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 192 ಮತ್ತು ಜನಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 125 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅವರ ಹೇಳಿಕೆಯ ವಿರುದ್ಧ ಕೇರಳ ರಾಜ್ಯದಲ್ಲಿ ಗಲಾಟೆ ಭುಗಿಲೆದ್ದ ನಂತರ ಈ ಬೆಳವಣಿಗೆ ನಡೆದಿದೆ. ಆಡಳಿತಾರೂಢ ಸಿಪಿಐ(ಎಂ) ಮತ್ತು ಕಾಂಗ್ರೆಸ್ ಈ ಹೇಳಿಕೆಗಳ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದವು.

ಇದನ್ನೂ ಓದಿ: ರಾಹುಲ್ ಗಾಂಧಿ ಬಿಜೆಪಿಯ ಬಿ-ಟೀಮ್; ಕಾಂಗ್ರೆಸ್ ವಿರುದ್ಧ ಕೇರಳ ಸಿಎಂ ಪಿಣರಾಯಿ ವಿಜಯನ್ ವಾಗ್ದಾಳಿ

ಕಾಂಗ್ರೆಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆಯಾದ ಕೇರಳ ವಿದ್ಯಾರ್ಥಿ ಸಂಘ (ಕೆಎಸ್‌ಯು) ಕೂಡ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಬಿಜೆಪಿ ನಾಯಕನ ಈ ಹೇಳಿಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಿದೆ. ಈ ಹೇಳಿಕೆ ಕೋಮುವಾದವನ್ನು ಹರಡುತ್ತಿದೆ ಎಂದು ಆರೋಪಿಸಲಾಗಿದೆ. ಈ ವಿಷಯದ ಬಗ್ಗೆ ಜಿಲ್ಲಾಧಿಕಾರಿಯಿಂದ ವರದಿ ಕೇಳಲಾಗಿದೆ.

ಚುನಾವಣಾ ಪ್ರಚಾರದ ವೀಡಿಯೊ ವೈರಲ್ ಆದ ನಂತರ ವಿವಾದ ಪ್ರಾರಂಭವಾಯಿತು. ಇದರಲ್ಲಿ ಬಿ. ಗೋಪಾಲಕೃಷ್ಣನ್ ಅವರು ಗುರುವಾಯೂರು ಕ್ಷೇತ್ರವು ಸುಮಾರು 5 ದಶಕಗಳಿಂದ “ಹಿಂದೂ ಶಾಸಕ”ನನ್ನು ಆಯ್ಕೆ ಮಾಡಿಲ್ಲ ಎಂದು ಹೇಳಿಕೊಂಡಿದ್ದಾರೆ. ಎಡಪಂಥೀಯರು ಮತ್ತು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಎರಡೂ ಸಮುದಾಯದ ಹಿಂದೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ ಎಂದು ಅವರು ಆರೋಪಿಸಿದ್ದರು. “ಗುರುವಾಯೂರ್‌ನಲ್ಲಿ ಇಲ್ಲಿಯವರೆಗೆ ಹಿಂದೂ ಶಾಸಕರು ಏಕೆ ಆಯ್ಕೆಯಾಗಲಿಲ್ಲ?” ಎಂದು ಅವರು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಮತ್ತು ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಗುರುವಾಯೂರು ದೇವಸ್ಥಾನ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: ಕೇರಳ ಚುನಾವಣೆಗೆ ಬಿಜೆಪಿಯ 47 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ; ನೇಮಮ್​ನಿಂದ ರಾಜೀವ್ ಚಂದ್ರಶೇಖರ್ ಕಣಕ್ಕೆ

ಗೋಪಾಲಕೃಷ್ಣನ್ ಅವರ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಲಾದ ವೀಡಿಯೊವನ್ನು ಗುರುವಾಯೂರು ದೇವಸ್ಥಾನದ ಪೂರ್ವ ಪ್ರವೇಶದ್ವಾರವಾದ ನಾಡವಾಳಿಯಲ್ಲಿ ಚಿತ್ರೀಕರಿಸಲಾಗಿದೆ ಎಂದು ಆರೋಪಿಸಲಾಗಿದೆ. ಮುಖ್ಯ ಚುನಾವಣಾ ಅಧಿಕಾರಿ ರಥನ್ ಯು ಕೇಳ್ಕರ್ ಈ ಹೇಳಿಕೆಗಳ ಕುರಿತು ಜಿಲ್ಲಾಧಿಕಾರಿಯಿಂದ ವರದಿ ಕೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತುಂಗಭದ್ರಾ ಎಡದಂಡೆ ಕಾಲುವೆ ಭಾಗದ ರೈತರಿಗೆ ಗುಡ್​ನ್ಯೂಸ್: ಸಚಿವರಿಂದ ಮಹತ್ವದ ಭರವಸೆ

ಕೊಪ್ಪಳ, ಮಾರ್ಚ್​ 23: ತುಂಗಭದ್ರಾ ಎಡದಂಡೆ ಕಾಲುವೆ (tungabhadra left bank canal) ಒಡೆದ ಘಟನೆಗೆ ಸಂಬಂಧಿಸಿದಂತೆ ಬೆಳೆ ಹಾಗೂ ಜಮೀನು ಹಾಳು ಮಾಡಿಕೊಂಡ ರೈತರಿಗೆ, ಸರ್ಕಾರದಿಂದ ಪರಿಹಾರದ ಭರವಸೆ ನೀಡುವ ಮೂಲಕ ದುರಸ್ಥಿ ಕಾರ್ಯ ಶುರುವಾಗಿದೆ. ರಾಯಚೂರು ಜಿಲ್ಲೆಗೆ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ದುರಸ್ಥಿ ಕಾರ್ಯ ಜೋರಾಗಿದ್ದು, ಎರಡು ದಿನದಲ್ಲಿ ನೀರು ಪೊರೈಕೆ ಮಾಡುವ ಭರವಸೆ ನೀಡಲಾಗಿದೆ.

ಕಳೆದ ವಾರ, ಕೊಪ್ಪಳ ತಾಲೂಕಿನ ಬಸ್ಸಾಪುರ ಗ್ರಾಮದ ಬಳಿ ತುಂಗಭದ್ರಾ ಎಡದಂಡೆ ಕಾಲುವೆ ಒಡೆದು ಅಪಾರ ಪ್ರಮಾಣ ನಷ್ಟ ಉಂಟಾಗಿತ್ತು. ಜೊತೆಗೆ ರಾಯಚೂರು ಜಿಲ್ಲೆಗೆ ಕುಡಿಯುವ ನೀರು ಪೂರೈಕೆ ಸ್ಥಗಿತವಾಗಿತ್ತು. ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಮಾಡಿದ್ದ ನಿರ್ಲಕ್ಷದಿಂದ ಇಡೀ ರಾಯಚೂರು ಜಿಲ್ಲೆಗೆ ಕುಡಿಯುವ ನೀರಿಗೆ ಕಂಟಕ ಬಂದಿದೆ.

ಇಂದಿನಿಂದ ಕಾಮಗಾರಿ ಕೆಲಸ ಆರಂಭ 

ಕೊಪ್ಪಳ ತಾಲೂಕಿನ ಬಸ್ಸಾಪುರ ಗ್ರಾಮದ ರೈತರು ಬೆಳೆದ ಭತ್ತದ ಬೆಳೆ ನಾಶವಾಗಿದೆ. ಜಮೀನಿನ ತುಂಬು ಮರಳು, ಕಲ್ಲು ಸೇರಿಕೊಂಡು ಭತ್ತದ ಗದ್ದೆಗಳೆಲ್ಲಾ ನಾಶವಾಗಿ ಹೋಗಿದೆ. ಇದರಿಂದ ರೊಚ್ಚಿಗೆದ್ದ ರೈತರು, ಕಾಲುವೆ ದುರಸ್ಥಿಗೆ ಬಂದಾಗ ವಾಹನಗಳನ್ನ ತಡೆದು ಕೆಲಸಕ್ಕೆ ಅಡ್ಡಿ ಪಡಿಸಿ ಆಕ್ರೋಶ ಹೊರಹಾಕಿದ್ದರು. ಪರಿಹಾರ ನೀಡದೆ ಕಾಮಗಾರಿ ಮಾಡಲು ಬಿಡಲ್ಲ ಎಂದು ಪಟ್ಟು ಹಿಡಿದಿದ್ದರು. ಆದರೆ ಎರಡು ದಿನಗಳಿಂದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಭೆ ನಡೆಸಿ ರೈತರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಇಂದಿನಿಂದ ಕಾಮಗಾರಿ ಕೆಲಸ ಆರಂಭ ಮಾಡಿದ್ದಾರೆ. ಸದ್ಯ ತಾತ್ಕಾಲಿಕವಾಗಿ ಸ್ಯಾಂಡ್ ಬ್ಯಾಗ್​ಗಳನ್ನ ಹಾಕಿ ರಿಪೇರಿ ಕಾರ್ಯ ಶುರು ಮಾಡಲಾಗುತ್ತಿದೆ. ಎರಡು ದಿನಗಳಲ್ಲಿ ತಾತ್ಕಾಲಿಕವಾಗಿ ಕಾಲುವೆ ದುರಸ್ತಿ ಮಾಡಿ, 5 ರಿಂದ 6 ಅಡಿಗಳಷ್ಟು ನೀರನ್ನ ಹರಿಸಿ, ಕುಡಿಯುವ ನೀರಿನ ವ್ಯವಸ್ಥೆ ಮಾಡೋದಾಗಿ ಸಣ್ಣ ನೀರಾವರಿ ಸಚಿವ ಎನ್​ಎಸ್ ಬೋಸರಾಜು ತಿಳಿಸಿದ್ದಾರೆ.

ಸಚಿವ ಎನ್​ಎಸ್ ಬೋಸರಾಜು ಹೇಳಿದ್ದಿಷ್ಟು 

ಇಂದು ಬಸ್ಸಾಪುರ ಗ್ರಾಮದ ಬಳ ಕಾಲುವೆ ಒಡೆದ ಸ್ಥಳಕ್ಕೆ ಬಂದು ವೀಕ್ಷಣೆ ಮಾಡಿದ ಸಚಿವ ಬೋಸರಾಜು, ಅಧಿಕಾರಿಗಳು ಹಾಗೂ ರೈತರ ಬಳಿ ಮಾಹಿತಿ ಪಡೆದುಕೊಂಡರು. ಸಚಿವರ ಎದುರು ರೈತರು, ಕಳೆದ ನಾಲ್ಕು ತಿಂಗಳಿನಿಂದ ಗುದ್ದು ಬಿದ್ದಿರೋದನ್ನ ಅಧಿಕಾರಿಗಳ ಗಮನಕ್ಕೆ ತಂದರು. ಸರಿಯಾಗಿ ನಿರ್ವಹಣೆ ಮಾಡದ ಕಾರಣ ದೊಡ್ಡ ದುರಂತ ಸಂಭವಿಸಿದೆ ಎಂದು ಆಕ್ರೋಶ ಹೊರಹಾಕಿದರು. ಬಳಿಕ ಮಾತಮಾಡಿದ ಸಚಿವ, ರೈತರಿಗೆ ಪರಿಹಾರ ನೀಡಬೇಕು. ಈಗಾಗಲೇ ನಾವು ರೈತರ ಜೊತೆ ಮಾತನಾಡಿದ್ದೇವೆ. ಸದ್ಯ ಬೆಳೆ ಕಳೆದುಕೊಂಡ ರೈತರಿಗೆ ಸಣ್ಣ ನೀರಾವರಿ ಇಲಾಖೆಯಿಂದಲೇ ಪರಿಹಾರ ನೀಡಲಾಗತ್ತೆ‌. 92 ರೈತರ ಬೆಳೆಗಳು ಹಾಳಾಗಿವೆ. ಸಚಿವರು ಹಾಗೂ ನಾವು ಎಲ್ಲರೂ ಸೇರಿ ಪರಿಹಾರದ ಪ್ರಮಾಣ ತೀರ್ಮಾನ ಮಾಡಿ ಪರಿಹಾರ ಒದಗಿಸಲಾಗತ್ತುದೆ. ನಿರ್ಲಕ್ಷ ತೋರಿದ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಸಚಿವ ಎನ್​ಎಸ್ ಬೋಸರಾಜು ಹೇಳಿದ್ದಾರೆ.

ಇದನ್ನೂ ಓದಿ: ಒಡೆದ ತುಂಗಭದ್ರಾ ಎಡದಂಡೆ ಕಾಲುವೆ, ಸಿಕ್ತು ಬೃಹತ್ ಗಾತ್ರದ​ ಮೀನು

ಪರಿಹಾರ ನೀಡದೇ ಕೆಲಸ ಮಾಡಲು ಬಿಡಲ್ಲ ಎಂದು ಪಟ್ಟುಹಿಡಿದಿದ್ದ ರೈತರನ್ನ ಮನವೊಲಿಸಿ, ದುರಸ್ಥಿ ಕಾರ್ಯ ಆರಂಭವಾಗಿದೆ. ಸದ್ಯ ತಾತ್ಕಾಲಿಕವಾಗಿ ಸ್ಯಾಂಡ್ ಬ್ಯಾಗ್​ಗಳನ್ನ ಹಾಕಿ, ನೀರು ಪೊರೈಕೆ ಮಾಡಲಾಗತ್ತೆ ಎಂದಿದ್ದಾರೆ. ಎರಡು ಮೂರು ದಿನಗಳ ಅವಧಿಯಲ್ಲಿ 2 ಸಾವಿರ ಕ್ಯೂಸೆಕ್ ನೀರು ಕುಡಿಯುವ ನೀರಿನ ಉದ್ದೇಶಕ್ಕೆ ನೀಡಲಾಗತ್ತೆ. ಬಳಿಕ ಶಾಶ್ವತವಾಗಿ ಕಾಲುವೆ ನಿರ್ಮಾಣ ಮಾಡಲಾಗತ್ತೆ. ಆದರೆ ಈ ಕೆಲಸ ಆದಷ್ಟು ಬೇಗ ಆಗಬೇಕಿದೆ. ಜೊತೆಗೆ ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರವು ಬೇಗನೆ ಸಿಗಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬಾಗಲಕೋಟೆ ಬೈ ಎಲೆಕ್ಷನ್ ಟಿಕೆಟ್ ಮೇಟಿ ಕುಟುಂಬಕ್ಕೆ ಕೊಟ್ಟಿರುವ ಹಿಂದಿನ ಕಾರಣ ಬಿಚ್ಚಿಟ್ಟ ಸಿಎಂ

ಬಾಗಲಕೋಟೆ (ಮಾರ್ಚ್ 23): ದಾವಣಗೆರೆ ದಕ್ಷಿಣ (Davanagere South By Election) ಹಾಗೂ ಬಾಗಲಕೋಟೆ (Bagalkot) ಉಪ ಚುನಾವಣೆ ಕಾಂಗ್ರೆಸ್‌ ಅಧಿಕೃತ ಟಿಕೆಟ್‌ ಘೋಷಣೆಯಾಗಿದೆ. ಸಮರ್ಥ್ ಶಾಮನೂರು, ಉಮೇಶ್‌ ಮೇಟಿಯನ್ನು ಅಭ್ಯರ್ಥಿ ಎಂದು ಎಐಸಿಸಿ ಪ್ರಕಟಣೆ ಹೊರಡಿಸಿದ್ದು, ಇಂದು (ಮಾರ್ಚ್ 23) ಸಮರ್ಥ್ ಹಾಗೂ ಉಮೇಶ್ ಮೇಟಿ ನಾಮಪತ್ರ ಸಲ್ಲಿಸಿದರು. ಇದರೊಂದಿಗೆ ಕಾಂಗ್ರೆಸ್‌ ಕುಟುಂಬಕ್ಕೆ ಅನುಕಂಪದ ಆಧಾರದಲ್ಲಿ ಟಿಕೆಟ್‌ ನೀಡಿದೆ. ಶಮನೂರು ಶಿವಶಂಕರಪ್ಪ ನಿಧನದಿಂದಾಗಿ ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಅವರ ಮೊಮ್ಮಗ ಸಮರ್ಥ್​​ಗೆ ನೀಡಿದ್ದರೆ, ಇತ್ತ ಎಚ್​​ವೈ ಮೇಟಿ ನಿಧನದಿಂದ ತೆರವಾದ ಬಾಗಲಕೋಟೆ ಉಪಚುನಾವಣೆಗೆ ಅವರ ಪುತ್ರ ಉಮೇಶ್ ಅವರಿಗೆ ಮಣೆ ಹಾಕಲಾಗಿದೆ. ಇನ್ನು ಬಾಗಲಕೋಟೆಯಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ,  ಮೇಟಿ ಕುಟುಂಬಕ್ಕೆ  ಟಿಕೆಟ್ ನೀಡಿರುವ ಹಿಂದಿನ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.

Source link