All posts by nagaraj11081993

ಎಐ ಮೂಲಕ ಬದಲಾಯ್ತು ‘ಧುರಂಧರ್ 2’ ಕ್ಲೈಮಾಕ್ಸ್; ಪ್ರೇಕ್ಷಕರ ಬಯಕೆಯಂತೆ ಕಥೆ ಅಂತ್ಯ

ಎಐ ಮೂಲಕ ಬದಲಾಯ್ತು ‘ಧುರಂಧರ್ 2’ ಕ್ಲೈಮಾಕ್ಸ್; ಪ್ರೇಕ್ಷಕರ ಬಯಕೆಯಂತೆ ಕಥೆ ಅಂತ್ಯ

ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಅಭಿನಯ ಮತ್ತು ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2’ (Dhurandhar 2) ಸಿನಿಮಾ ದೇಶಾದ್ಯಂತ ಭಾರಿ ಸದ್ದು ಮಾಡುತ್ತಿದೆ. ಸಿನಿಮಾ ನೋಡಿದ ಪ್ರೇಕ್ಷಕರು ರಣವೀರ್ (Ranveer Singh) ನಟನೆ ಮತ್ತು ಆದಿತ್ಯ ಧರ್ ಅವರ ನಿರ್ದೇಶನಕ್ಕೆ ಫಿದಾ ಆಗಿದ್ದಾರೆ. ಆದರೆ, ಚಿತ್ರದ ಕ್ಲೈಮ್ಯಾಕ್ಸ್ ಬಗ್ಗೆ ಅಭಿಮಾನಿಗಳಲ್ಲಿ ಸಣ್ಣದೊಂದು ಬೇಸರವಿತ್ತು. ಈಗ ಆ ಬೇಸರವನ್ನು ಕೃತಕ ಬುದ್ಧಿಮತ್ತೆ (AI) ದೂರ ಮಾಡಿದೆ. ಪ್ರೇಕ್ಷಕರ ಬಯಕೆಯಂತೆ ಒಂದು ಎಐ ವಿಡಿಯೋ ಮಾಡಲಾಗಿದ್ದು, ಅದನ್ನು ನೋಡಿದ ನೆಟ್ಟಿಗರು ಖುಷಿಯಾಗಿದ್ದಾರೆ.

ಸ್ಪಾಯ್ಲರ್ ಇದೆ ಎಚ್ಚರಿಕೆ: ‘ಧುರಂಧರ್ 2’ ಸಿನಿಮಾದ ಅಂತ್ಯದಲ್ಲಿ ಕಥಾನಾಯಕ ತನ್ನ ಊರಿಗೆ ಮರಳುತ್ತಾನೆ. ಅಲ್ಲಿ ತಾನಿಲ್ಲದೆಯೂ ತಾಯಿ ಮತ್ತು ತಂಗಿ ನೆಮ್ಮದಿಯ ಜೀವನ ನಡೆಸುತ್ತಿರುವುದನ್ನು ದೂರದಿಂದಲೇ ನೋಡಿ ಮರುಗುತ್ತಾನೆ. ತನ್ನ ಉಪಸ್ಥಿತಿಯು ಅವರ ಶಾಂತಿಯನ್ನು ಕೆಡಿಸಬಹುದು ಎಂದು ಭಾವಿಸುವ ಆತ, ಭಾರವಾದ ಹೃದಯದಿಂದ ಅಲ್ಲಿಂದ ಗುಟ್ಟಾಗಿ ನಿರ್ಗಮಿಸುತ್ತಾನೆ. ಈ ದೃಶ್ಯವು ಭಾವುಕವಾಗಿದ್ದರೂ, ಅಭಿಮಾನಿಗಳಿಗೆ ಇದು ಸಮಾಧಾನ ನೀಡಿರಲಿಲ್ಲ.

ಅಭಿಮಾನಿಗಳ ಆಸೆಯಂತೆ ಈಗ ಸೋಷಿಯಲ್ ಮೀಡಿಯಾದಲ್ಲಿ ಎಐ ಮೂಲಕ ಸೃಷ್ಟಿಸಲಾದ ಪರ್ಯಾಯ ಕ್ಲೈಮ್ಯಾಕ್ಸ್ ವೈರಲ್ ಆಗಿದೆ. ಈ ಹೊಸ ವಿಡಿಯೋದಲ್ಲಿ ಕಥಾನಾಯಕ ತನ್ನ ತಾಯಿಯನ್ನು ಭೇಟಿಯಾಗುತ್ತಾನೆ. ವರ್ಷಗಳ ನಂತರ ಮಗನನ್ನು ಕಂಡ ತಾಯಿ ಭಾವುಕಳಾಗಿ ತಬ್ಬಿಕೊಳ್ಳುತ್ತಾಳೆ. ನಂತರ ಇಡೀ ಕುಟುಂಬ ಒಂದಾಗಿ ಗ್ರೂಪ್ ಫೋಟೋ ತೆಗೆಸಿಕೊಳ್ಳುವ ಮೂಲಕ ಸುಖಾಂತ್ಯ ಕಾಣುತ್ತದೆ.

ಎಐ ವಿಡಿಯೋ:

ಅಭಿಮಾನಿಗಳು ಈ ವಿಡಿಯೋ ನೋಡಿ, ‘ನಮಗೆ ಬೇಕಾಗಿದ್ದ ಕ್ಲೈಮ್ಯಾಕ್ಸ್ ಇದೇ. AI ತಂತ್ರಜ್ಞಾನದ ಅತ್ಯುತ್ತಮ ಬಳಕೆ ಎಂದರೆ ಇದು’ ಎಂದು ಕಮೆಂಟ್ ಮಾಡಿದ್ದಾರೆ. ಸಿನಿಮಾದಲ್ಲಿ ತೋರಿಸಿರುವ ಮೂಲ ಕ್ಲೈಮ್ಯಾಕ್ಸ್ ಚೆನ್ನಾಗಿದೆ. ಆದರೆ ಪ್ರೇಕ್ಷಕರಿಗೆ ಈ ಕ್ಲೈಮ್ಯಾಕ್ಸ್​ನಿಂದ ಭಾವುಕವಾದ ಸಮಾಧಾನ ಸಿಕ್ಕಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: ‘ನಾನು ಮೋದಿಯ ಹೆಮ್ಮೆಯ ಅಂಧಭಕ್ತೆ’: ‘ಧುರಂಧರ್ 2’ ನೋಡಿ ಹೇಳಿಕೆ ನೀಡಿದ ನಟಿ ರೇಣು ದೇಸಾಯಿ

ಈ ಸಿನಿಮಾದಲ್ಲಿ ರಣವೀರ್ ಸಿಂಗ್ ಜೊತೆ ಸಾರಾ ಅರ್ಜುನ್, ಸಂಜಯ್ ದತ್, ರಾಕೇಶ್ ಬೇಡಿ, ಅರ್ಜುನ್ ರಾಮ್​ಪಾಲ್, ಆರ್. ಮಾಧವನ್ ಮುಂತಾದವರು ನಟಿಸಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾ 1000 ಕೋಟಿ ರೂಪಾಯಿ ಕಲೆಕ್ಷನ್ ಮಾಡಲಿದೆ. ಬಾಕ್ಸ್ ಆಫೀಸ್​​ನಲ್ಲಿ ಹೊಸ ದಾಖಲೆ ಬರೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Oil Prices: ಟ್ರಂಪ್ ವರಸೆ ಬದಲು; ಕಚ್ಛಾ ತೈಲ ಬೆಲೆ ದಿಢೀರ್ ಇಳಿಕೆ

ನವದೆಹಲಿ, ಮಾರ್ಚ್ 23: ಇರಾನ್ ಮೇಲೆ ಅಮೆರಿಕ ದಾಳಿ ಮಾಡಿದ ಪರಿಣಾಮ ಗಗನಕ್ಕೇರಿದ್ದ ತೈಲ ಬೆಲೆಗಳು (crude oil prices) ಇದೀಗ ತಗ್ಗಿವೆ. ಸೋಮವಾರ ಬ್ರೆಂಟ್ ಕ್ರೂಡ್ ಶೇ 11ರಷ್ಟು ಕಡಿಮೆ ಆಗಿದೆ. ಒಂದು ಬ್ಯಾರಲ್ ತೈಲದ ಬೆಲೆ 100 ಡಾಲರ್​ಗಿಂತ ಕಡಿಮೆಗೆ ಇಳಿದಿದೆ. ತೈಲ ಬೆಲೆ ಏರಲು ಕಾರಣವಾಗಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಟ್ರೂತ್ ಸೋಷಿಯಲ್​ನಲ್ಲಿ ಪೋಸ್ಟ್ ಹಾಕಿದ ಬಳಿಕ ತೈಲ ಬೆಲೆ ಕೆಳ ಜಾರಿದೆ.

ಬ್ರೆಂಟ್ ಮತ್ತು ಡಬ್ಲ್ಯುಟಿಐ ಕ್ರೂಡ್ ಫ್ಯೂಚರ್ ಬೆಲೆಗಳಲ್ಲಿ ಇಳಿಕೆ

ಇರಾನ್​ನ ವಿದ್ಯುತ್ ಘಟಕಗಳು ಮತ್ತು ಇಂಧನ ಘಟಕಗಳ (Energy infrastructure) ಮೇಲೆ ದಾಳಿಯನ್ನು ಐದು ದಿನ ಮುಂದೂಡಿದ್ದೇವೆ. ಎರಡು ದಿನಗಳಿಂದ ಇರಾನ್ ಜೊತೆ ಉತ್ತಮ ಮಾತುಕತೆ ನಡೆಸಿರುವುದಾಗಿ ಟ್ರಂಪ್ ಹೇಳಿಕೊಂಡಿದ್ದಾರೆ. ಇದರಿಂದ ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಸ್ಥಿತಿ ತಿಳಿಯಾಗುವ ಆಶಾಭಾವನೆ ಮೂಡಿರುವುದರಿಂದ ತೈಲ ಬೆಲೆ ಕಡಿಮೆಗೊಂಡಿರಬಹುದು. ಬ್ರೆಂಟ್ ಪ್ಯೂಚರ್ಸ್ ಮತ್ತು ಡಬ್ಲ್ಯುಟಿಐ ಫ್ಯೂಚರ್ಸ್ ಎರಡೂ ಕೂಡ ಶೇ. 10ಕ್ಕಿಂತಲೂ ಹೆಚ್ಚಿನ ಪ್ರಮಾಣದಷ್ಟು ಕುಸಿತ ಕಂಡಿವೆ.

ಇದನ್ನೂ ಓದಿ: PM Modi speech: ಸಾಧ್ಯವಿರುವೆಡೆಯೆಲ್ಲಾ ತೈಲ ಮತ್ತು ಅನಿಲ ಪಡೆಯುತ್ತಿದ್ದೇವೆ- ಪ್ರಧಾನಿ ಮೋದಿ

ಸೋಮವಾರ ಒಂದು ಹಂತದಲ್ಲಿ ಬ್ರೆಂಟ್ ಫ್ಯೂಚರ್ಸ್ ಬ್ಯಾರಲ್​ಗೆ 98 ಡಾಲರ್ ಬೆಲೆ ಹೊಂದಿತ್ತು. ಡಬ್ಲ್ಯುಟಿಐ ಕ್ರೂಡ್ ಫ್ಯೂಚರ್ಸ್ 91 ಡಾಲರ್ ಬೆಲೆ ಹೊಂದಿತ್ತು. ಟ್ರಂಪ್ ಹೇಳಿಕೆಯ ಪರಿಣಾಮ ಇದು. ಮತ್ತೊಂದು ಸಕಾರಾತ್ಮಕ ವಿಚಾರ ಎಂದರೆ, ಇರಾನ್ ಜೊತೆ ಅಮೆರಿಕ ನಡೆಸಿದ ಮಾತುಕತೆ ಎರಡು ದಿನಕ್ಕೆ ಸೀಮಿತವಾಗಿಲ್ಲ. ಈ ವಾರಾದ್ಯಂತ ಮಾತುಕತೆಗಳು ಮುಂದುವರಿಯಲಿವೆ. ಅಲ್ಲಿಯವರೆಗೆ ಇರಾನ್​ನ ವಿದ್ಯುತ್ ಮತ್ತು ಇಂಧನ ಘಟಕಗಳ ಮೇಲೆ ಮಿಲಿಟರಿ ದಾಳಿಗಳನ್ನು ನಿಲ್ಲಿಸುವಂತೆ ಟ್ರಂಪ್ ಸೂಚಿಸಿದ್ದಾರೆ.

ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಕಚ್ಛಾ ತೈಲ ಬೆಲೆಯಲ್ಲಿ ಗಣನೀಯ ಇಳಿಕೆ ಕಷ್ಟಸಾಧ್ಯ. ಗೋಲ್ಡ್​ಮ್ಯಾನ್ ಸ್ಯಾಕ್ಸ್ ಮಾಡಿರುವ ಅಂದಾಜು ಪ್ರಕಾರ 2026ರಲ್ಲಿ ಬ್ರೆಂಟ್ ಕ್ರೂಡ್​ನಲ್ಲಿ ತೈಲ ಬೆಲೆ ಸರಾಸರಿಯಾಗಿ 85 ಡಾಲರ್ ಇರಬಹುದು ಎನ್ನಲಾಗಿದೆ. ಇನ್ನು ಡಬ್ಲ್ಯುಟಿಐನಲ್ಲಿ ಸರಾಸರಿ ಬೆಲೆ 79 ಡಾಲರ್ ಇರಲಿದೆ ಎಂದು ಗೋಲ್ಡ್​ಮ್ಯಾನ್ ಸ್ಯಾಕ್ಸ್ನ ವರದಿ ಹೇಳುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಹಾರ್ಮುಜ್ ಜಲಸಂಧಿ ಮುಚ್ಚುವಿಕೆಯನ್ನು ಒಪ್ಪಲಾಗದು; ಲೋಕಸಭೆಯಲ್ಲಿ ಪ್ರಧಾನಿ ಮೋದಿ ಖಂಡನೆ

ನವದೆಹಲಿ, ಮಾರ್ಚ್ 23: ಇಂದು ಲೋಕಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಬಗ್ಗೆ ಪ್ರಸ್ತಾಪಿಸಿದರು. “ಇರಾನ್ ಮತ್ತು ಅಮೆರಿಕ-ಇಸ್ರೇಲ್ ಮೈತ್ರಿಕೂಟದ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವುದರಿಂದ ಪರಿಸ್ಥಿತಿ ಚಿಂತಾಜನಕವಾಗಿದೆ. ಬಿಕ್ಕಟ್ಟು ಈ ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ, ಇಡೀ ಪ್ರಪಂಚದ ಮೇಲೆ ಪರಿಣಾಮ ಬೀರುತ್ತಿದೆ. ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟು ವಿಶ್ವದ ಜನರು ಮತ್ತು ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ” ಎಂದು ಅವರು ಹೇಳಿದರು.

ಸಂಸತ್ತಿನ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ವಾಣಿಜ್ಯ ಹಡಗುಗಳ ಮೇಲಿನ ದಾಳಿಗಳು ಮತ್ತು ಹಾರ್ಮುಜ್ ಜಲಸಂಧಿಯಂತಹ ಅಂತಾರಾಷ್ಟ್ರೀಯ ಜಲಮಾರ್ಗಗಳಲ್ಲಿನ ಅಡಚಣೆಗಳು ಸ್ವೀಕಾರಾರ್ಹವಲ್ಲ. ರಾಜತಾಂತ್ರಿಕತೆಯ ಮೂಲಕ ಈ ಯುದ್ಧದ ವಾತಾವರಣದಲ್ಲಿಯೂ ಸಹ ಭಾರತೀಯ ಹಡಗುಗಳ ಸುರಕ್ಷಿತ ಸಾಗಣೆಗೆ ಭಾರತ ನಿರಂತರವಾಗಿ ಪ್ರಯತ್ನಗಳನ್ನು ಮಾಡುತ್ತಿದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: PM Modi speech: ಸಾಧ್ಯವಿರುವೆಡೆಯೆಲ್ಲಾ ತೈಲ ಮತ್ತು ಅನಿಲ ಪಡೆಯುತ್ತಿದ್ದೇವೆ- ಪ್ರಧಾನಿ ಮೋದಿ

“ಹಾರ್ಮುಜ್ ಜಲಸಂಧಿ ಭಾರತದ ಆರ್ಥಿಕತೆಗೆ ಅಗತ್ಯವಾದ ಕಚ್ಚಾ ತೈಲ, ಅನಿಲ ಮತ್ತು ರಸಗೊಬ್ಬರ ಪೂರೈಕೆಗೆ ಪ್ರಮುಖ ಪಾತ್ರ ವಹಿಸುತ್ತದೆ. ಭಾರತದ ಕಚ್ಚಾ ತೈಲ, ಅನಿಲ ಮತ್ತು ರಸಗೊಬ್ಬರ ಪೂರೈಕೆಯ ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಈ ಜಲಸಂಧಿಯ ಮೂಲಕ ಹಡಗುಗಳ ಸಂಚಾರ ತುಂಬಾ ಸವಾಲಿನದ್ದಾಗಿದೆ” ಎಂದು ಮೋದಿ ಹೇಳಿದ್ದಾರೆ.

ಈ ಪ್ರದೇಶದಲ್ಲಿನ ಬೆಳವಣಿಗೆಗಳು ಪಶ್ಚಿಮ ಏಷ್ಯಾ ಸಂಘರ್ಷದಿಂದ ಎದುರಾಗಿರುವ ಸವಾಲುಗಳಿಗೆ ಅದರಲ್ಲೂ ವಿಶೇಷವಾಗಿ ವಾಣಿಜ್ಯ ಸರಕುಗಳ ಸಂಚಾರಕ್ಕೆ ಮತ್ತಷ್ಟು ಸವಾಲುಗಳನ್ನು ಹೆಚ್ಚಿಸಿವೆ ಎಂದು ಮೋದಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮುತ್ತಪ್ಪ ರೈ ಪುತ್ರ ರಿಕ್ಕಿ ರೈನಿಂದಲೇ ಕಾರ್ ಡ್ರೈವಿಂಗ್, ಸಿಸಿಟಿವಿ ದೃಶ್ಯದಲ್ಲಿ ಸೆರೆ

ಬೆಂಗಳೂರು, (ಮಾರ್ಚ್ 23): ಇದೇ ಮಾರ್ಚ್ 21ರ ಮಧ್ಯರಾತ್ರಿ 3ರ ಸುಮಾರಿಗೆ ಬೆಂಗಳೂರಿನ ಅನಿಲ್ ಕುಂಬ್ಳೆ ಸರ್ಕಲ್ ಬಳಿ ಲ್ಯಾಂಬೋರ್ಗಿನಿ ಕಾರು ಡ್ರಿಫ್ಟಿಂಗ್ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಿವಂಗತ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಹೆಸರು ಕೇಳಿಬಂದಿತ್ತು. ಬಳಿಕ ಪೊಲೀಸರು ಕಾರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿದಾಗ ಕಾರು ಡ್ರಿಫ್ಟಿಂಗ್‌ ಮಾಡಿರುವುದು ರಿಕ್ಕಿ ರೈ ಎನ್ನುವುದು ಪತ್ತೆಯಾಗಿದೆ. ಹೀಗಾಗಿ ರಿಕ್ಕಿ ರೈ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ಸಹ ಜಾರಿ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕಾರು ಡ್ರಿಫ್ಟಿಂಗ್ ಕೇಸ್: ಮಾಜಿ ಡಾನ್ ಪುತ್ರನಿಗೆ ಬಿಗ್ ರಿಲೀಫ್!

Source link

ಹೆಚ್ಚು ಕಮ್ಮಿಯಾದ್ರೆ ನಮ್ಮನ್ನು ದೂಷಿಸಬೇಡಿ; ವಿದೇಶಿ ಆಟಗಾರರಾಗಿ ಪಾಕ್ ಉಗ್ರ ಸಂಘಟನೆಯಿಂದ ಎಚ್ಚರಿಕೆ

11ನೇ ಆವೃತ್ತಿಯ ಪಾಕಿಸ್ತಾನ ಸೂಪರ್ ಲೀಗ್ (PSL 2026) ಆರಂಭಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (PCB) ಸಮಸ್ಯೆಗಳು ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಒಂದೆಡೆ ಪಿಸಿಬಿಗೆ, ವಿದೇಶಿ ಆಟಗಾರರ ಅಲಭ್ಯತೆ ದೊಡ್ಡ ತಲೆನೋವಾಗಿದ್ದರೆ, ಮತ್ತೊಂದೆಡೆ ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ದೇಶದಲ್ಲಿ ಉಂಟಾಗಿರುವ ಅನಿಲ ಬಿಕ್ಕಟ್ಟು ಹಾಗೂ ಅಪ್ಘಾನಿಸ್ತಾನ ದಾಳಿ ಮಾಡುವ ಆತಂಕ ಮತ್ತೊಂದು ಸವಾಲಾಗಿದೆ. ಇದೀಗ ಇದೆಲ್ಲದರ ನಡುವೆ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಯೊಂದು ವಿದೇಶಿ ಆಟಗಾರರು ಈ ಲೀಗ್​ನಲ್ಲಿ ಪಾಲ್ಗೊಳ್ಳದಂತೆ ಎಚ್ಚರಿಕೆ ನೀಡಿದೆ. ಮಾತ್ರವಲ್ಲದೆ ಲೀಗ್ ನಡೆಯುವ ವೇಳೆ ವಿದೇಶಿ ಆಟಗಾರರಿಗೆ ಪ್ರಾಣಾಪಾಯ ಎದುರಾದರೆ ಅದಕ್ಕೆ ನಾವು ಜವಾಬ್ದಾರರಲ್ಲ ಎಂಬ ಬೆದರಿಕೆಯೊಡ್ಡಿದೆ.

ಜಮಾತ್-ಉಲ್-ಅಹ್ರಾರ್ ಬೆದರಿಕೆ

ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದಿಂದಾಗಿ ಉಂಟಾಗಿರುವ ಇಂಧನ ಕೊರತೆಯಿಂದಾಗಿ ಪಿಎಸ್​ಎಲ್ ಪಂದ್ಯಾವಳಿಯನ್ನು ಕೇವಲ 2 ಕ್ರೀಡಾಂಗಣಗಳಲ್ಲಿ ಪ್ರೇಕ್ಷಕರಿಲ್ಲದೆ ನಡೆಸಲು ಪಿಸಿಬಿ ತೀರ್ಮಾನಿಸಿದೆ. ಇದೆಲ್ಲದರ ನಡುವೆ ಜಮಾತ್-ಉಲ್-ಅಹ್ರಾರ್ ಎಂಬ ಪಾಕಿಸ್ತಾನದ ಉಗ್ರ ಸಂಘಟನೆಯೊಂದು, ‘ವಿಶ್ವಾದ್ಯಂತದ ಎಲ್ಲಾ ಕ್ರಿಕೆಟ್ ಮಂಡಳಿಗಳು ತಮ್ಮ ಆಟಗಾರರನ್ನು ಪಾಕಿಸ್ತಾನಕ್ಕೆ ಕಳುಹಿಸದಂತೆ ನಾವು ಸಲಹೆ ನೀಡುತ್ತೇವೆ.

ಈ ಸಲಹೆಯನ್ನು ಮೀರಿ ವಿದೇಶಿ ಆಟಗಾರರು ಪಾಕಿಸ್ತಾನಕ್ಕೆ ಬಂದು ಪಂದ್ಯಾವಳಿಯಲ್ಲಿ ಭಾಗವಹಿಸಿದರೆ, ಅವರಿಗೆ ಇಲ್ಲಿ ಏನಾದರೂ ಸಂಭವಿಸಿದರೆ, ನಾವು ಜವಾಬ್ದಾರರಾಗಿರುವುದಿಲ್ಲ. ನಾವು ಈಗಾಗಲೇ ಎಚ್ಚರಿಕೆ ನೀಡಿದ್ದೇವೆ. ಇದರ ಹೊರತಾಗಿಯೂ ಆಟಗಾರರು ಪಂದ್ಯಾವಳಿಯಿಂದ ಹಿಂದೆ ಸರಿಯದಿದ್ದರೆ, ಪಂದ್ಯಗಳು ನಡೆಯದಂತೆ ತಡೆಯಲು ನಾವು ಏನು ಬೇಕಾದರೂ ಮಾಡುತ್ತೇವೆ. ಆಟಗಾರರು ಮೈದಾನಕ್ಕೆ ಪ್ರವೇಶಿಸುವುದನ್ನು ತಡೆಯಲು ನಾವು ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ’ ಎಂಬ ಬೆದರಿಕೆಯನ್ನು ಹಾಕಿದೆ.

ಬೆದರಿಕೆಗೂ ಬಗ್ಗದ ಬಾಂಗ್ಲಾದೇಶ

ಭಯೋತ್ಪಾದಕ ಸಂಘಟನೆಗಳು ಆಟಗಾರರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರೂ ಸಹ, ಬಾಂಗ್ಲಾದೇಶ ತನ್ನ ಆಟಗಾರರಿಗೆ ಪಾಕಿಸ್ತಾನಕ್ಕೆ ಪ್ರಯಾಣಿಸಲು ಅನುಮತಿ ನೀಡಿದೆ. ಬಾಂಗ್ಲಾದೇಶದ ಆಟಗಾರರು ಪಿಎಸ್‌ಎಲ್‌ನಲ್ಲಿ ಭಾಗವಹಿಸುತ್ತಾರೆ ಎಂದು ಬಾಂಗ್ಲಾದೇಶದ ಆಟಗಾರ ವ್ಯವಸ್ಥಾಪಕರು ತಿಳಿಸಿದ್ದಾರೆ. ಬಾಂಗ್ಲಾದೇಶದ ವೇಗದ ಬೌಲರ್ ನಹಿದ್ ರಾಣಾ ಕೂಡ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸುತ್ತಿರುವ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಮುಸ್ತಾಫಿಜುರ್ ರೆಹಮಾನ್, ಶೋರಿಫುಲ್ ಇಸ್ಲಾಂ ಮತ್ತು ಪರ್ವೇಜ್ ಹುಸೇನ್ ಎಮನ್ ಪಿಎಸ್‌ಎಲ್‌ನಲ್ಲಿ ಭಾಗವಹಿಸಲಿದ್ದಾರೆ. ಮುಸ್ತಾಫಿಜುರ್ ರೆಹಮಾನ್ ಮತ್ತು ಪರ್ವೇಜ್ ಹುಸೇನ್ ಲಾಹೋರ್ ಖಲಂದರ್‌ ತಂಡದ ಭಾಗವಾಗಿದ್ದಾರೆ. ಶೋರಿಫುಲ್ ಇಸ್ಲಾಂ, ನಹಿದ್ ರಾಣಾ ಮತ್ತು ತಂಜಿದ್ ಹಸನ್ ತಮೀಮ್ ಪೇಶಾವರ್ ಜಲ್ಮಿ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಉಳಿದಂತೆ ರಿಯಾದ್ ಹುಸೇನ್ ರಾವಲ್ಪಿಂಡಿ ತಂಡದಲ್ಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೂಡಬಿದ್ರೆ ಇನ್ಸ್​ಪೆಕ್ಟರ್​​​ ಕಾಮಕಾಂಡ ಕೇಸ್​ ಸಿಐಡಿಗೆ ಹಸ್ತಾಂತರ: ‘ಪೋಲಿ’ಸಪ್ಪಗೆ ಮತ್ತೆ ಸಂಕಷ್ಟ

ಮಂಗಳೂರು, ಮಾರ್ಚ್​ 23: ಮೂಡಬಿದ್ರೆ ಪೊಲೀಸ್ ಇನ್ಸ್​ಪೆಕ್ಟರ್​​ ಸಂದೇಶ್ (Inspector Sandesh) ಕಾಮಕಾಂಡದ ಸುದ್ದಿ ಹೊರಬೀಳುತ್ತಲೇ ಅಮಾನತು ಮಾಡಲಾಗಿತ್ತು. ಅವರ ವಿರುದ್ಧ ಆರೋಪ ಮಾಡಿದ್ದ ಸುಮತಿ ನಾಯಕ್ ಮತ್ತು ಅವಿತಾ ಮಿನೇಜಸ್​ ಮಾಡಿದ್ದ ಆರೋಪಗಳು ಸುಳ್ಳು ಅಂತಾ ಪೊಲೀಸ್ ತನಿಖೆ ಹೇಳಿತ್ತು. ಇದೆಲ್ಲದರ ಮಧ್ಯೆ ಇದೀಗ ರಾಜ್ಯ ಸರ್ಕಾರ ಸಿಐಡಿಗೆ ವರ್ಗಾಯಿಸಿ ಸೋಮವಾರ ಆದೇಶ ಹೊರಡಿಸಿದೆ. ಆ ಮೂಲಕ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸರ್ಕಾರ ಆದೇಶ ಬೆನ್ನಲ್ಲೇ ಸದ್ಯ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಿದ್ದಾರೆ.

ಏನಿದು ಪ್ರಕರಣ?

2018ರಲ್ಲಿ ವೇಣೂರು ಠಾಣೆಯಲ್ಲಿ ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಅಕ್ಕನ ವಿರುದ್ಧ ತಂಗಿ ದೂರು ನೀಡಿದ್ದರು. ಆ ಮಹಿಳೆ ಮತ್ತು ಆತನ ಪತಿ ವಿರುದ್ಧ ದೂರು ದಾಖಲಾಗಿತ್ತು. ಅದೇ ವೇಳೆ ಸರ್ಕಲ್ ಇನ್ಸ್​ಪೆಕ್ಟರ್​​ಆಗಿದ್ದ ಸಂದೇಶ್, ಈ ಕೇಸ್ ವಿಚಾರವಾಗಿ ಬ್ಲ್ಯಾಕ್ ​ಮೇಲ್ ಮಾಡಿದ್ದರಂತೆ. ಆಕೆಗೆ ನಿರಂತರ ಅತ್ಯಾಚಾರ ಮಾಡಿದ್ದಾಗಿ, ಆ ಮಹಿಳೆ ದೂರು ನೀಡಿದ್ದು ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ಮೂಡಬಿದ್ರೆ ಇನ್ಸ್​ಪೆಕ್ಟರ್ ಕಾಮಕಾಂಡ ಪ್ರಕರಣ: ಸಂತ್ರಸ್ತೆಗೆ ಜೀವ ಬೆದರಿಕೆ ಹಾಕಿಸಿದ್ರಾ ಸಂದೇಶ್​​​​​?

ಮುಖ್ಯ ಶಿಕ್ಷಕಿಯಾಗಿರುವ ಸಂತ್ರಸ್ತೆ ತನ್ನ ದೂರಿನಲ್ಲಿ ಸಾಕಷ್ಟು ಆರೋಪ ಮಾಡಿದ್ದರು. ಕೇಸ್ ವಿಚಾರದಲ್ಲಿ ಬ್ಲ್ಯಾಕ್ ​ಮೇಲ್ ಮಾಡುತ್ತಾ 2020 ರಿಂದ 2023ರವರೆಗೂ ನಿರಂತರವಾಗಿ ಅತ್ಯಾಚಾರ ಮಾಡಿದ್ದಾಗಿ ಆರೋಪಿಸಿದ್ದರು. ಕೆಲ ಸಮಯದ ಬಳಿಕ ಪ್ರತಿರೋಧ ಒಡ್ಡಿದ್ದಕ್ಕೆ ಕೇಸ್ ರಿ ಓಪನ್ ಮಾಡುವುದಾಗಿ ಬೆದರಿಸಿ ನಿರಂತರವಾಗಿ ಅತ್ಯಾಚಾರ ಮಾಡಿದ್ದಾರೆಂದು ಆರೋಪಿಸಿದ್ದರು.

ಇನ್ನು ಸಂದೇಶ್ ಸೇರಿ ಒಟ್ಟು 4 ಜನರ ಮೇಲೆ ಪ್ರಕರಣ ದಾಖಲಾಗಿತ್ತು. ಸಂದೇಶ್ ಖಾಸಗಿ ಚಾಲಕ ಅಕ್ಬರ್, ಸ್ಮಿತಾ ಮತ್ತು ಸುನೀತಾ ಲೋಬೊ ಎಂಬುವವರ ಮೇಲೆ ದೂರು ದಾಖಲಾಗಿತ್ತು. ಸಂದೇಶ್ ಅತ್ಯಾಚಾರ ಮಾಡಿದ್ದಲ್ಲದೇ 13 ಲಕ್ಷ ರೂ ನಗದು, 3.62 ಲಕ್ಷ ರೂ ಹಣ ಲಪಟಾಯಿಸಿದ್ದಾನಂತೆ. ಅಲ್ಲದೇ ಚಿನ್ನವನ್ನು ಲಪಟಾಯಿಸಿ ಅಕ್ಬರ್ ಹೆಸರಿನಲ್ಲಿ ಫೆಡರಲ್ ಬ್ಯಾಂಕ್​ನಲ್ಲಿ ಅಡವಿಟ್ಟಿದ್ದ.

ಇದನ್ನೂ ಓದಿ: ಮೂಡಬಿದ್ರೆ ಇನ್ಸ್​ಪೆಕ್ಟರ್​ ಸಂದೇಶ್​​ಗೆ ಬಿಗ್​​ ಶಾಕ್​​: ಅತ್ಯಾಚಾರ ಪ್ರಕರಣ ದಾಖಲು

ಹೊಸ ಮನೆ ಕಟ್ಟುವಾಗ ಸಂತ್ರಸ್ತೆ ತೋಟದಿಂದ 2.5 ಲಕ್ಷ ರೂ ಮೌಲ್ಯದ ಸಾಗುವಾನಿ ಮರವನ್ನು ಲಪಟಾಯಿಸಿದ್ದ. ಇನ್ನು ಈತನ ಕರ್ಮಕಾಂಡ ಬಯಲಾಗುತ್ತಿದ್ದಂತೆ ಸ್ಮಿತಾ ಮತ್ತು ಸುನಿತಾ ಲೋಬೊರನ್ನು ಸಂತ್ರಸ್ತೆ ಮನೆಗೆ ಕಳುಹಿಸಿ ನಡೆದ ವಿಚಾರ ಹೊರಗಡೆ ಬಾಯಿ ಬಿಟ್ಟರೆ ಕೇಸ್ ಹಾಕುತ್ತೇನೆ. ಜೀವಂತವಾಗಿ ಬಿಡೋದಿಲ್ಲ ಅಂತಾ ಬೆದರಿಕೆ ಕೂಡ ಹಾಕಿದ್ದ ಅಂತಾ ಆರೋಪಿಸಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬಾತ್‌ರೂಮ್‌ನಿಂದ ಬರುವ ಕೆಟ್ಟ ವಾಸನೆಯನ್ನು ಹೋಗಲಾಡಿಸಲು ಈ ನೈಸರ್ಗಿಕ ಪರಿಹಾರಗಳನ್ನು ಟ್ರೈ ಮಾಡಿ

ಸ್ನಾನಗೃಹವು (bathroom) ಎಷ್ಟೇ ಸ್ವಚ್ಛವಾಗಿದ್ದರೂ,  ಪ್ರತಿನಿತ್ಯ ಸ್ವಚ್ಛಗೊಳಿಸಿದರೂ ಸಹ  ಕೆಲವೊಂದು ಬಾರಿ ಬಾತ್‌ರೂಮ್‌ನಿಂದ ದುರ್ವಾಸನೆ ಬರುತ್ತದೆ. ಈ ಕೆಟ್ಟ ವಾಸನೆ ಅನಾನುಕೂಲವನ್ನುಂಟುಮಾಡುವುದಲ್ಲದೆ, ಅತಿಥಿಗಳ ಮುಂದೆ ಮುಜುಗರವನ್ನುಂಟು ಮಾಡುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ತೊಡೆದುಹಾಕಲು ಹೆಚ್ಚಿನವರು ಫಿನೈಲ್, ರೂಮ್ ಫ್ರೆಶ್ನರ್‌ಗಳು ಅಥವಾ ಪರಿಮಳಯುಕ್ತ ಕ್ಲೀನರ್‌ಗಳ ಮೊರೆ ಹೋಗ್ತಾರೆ. ಆದರೆ ಇವು ವಾಸನೆಯನ್ನು ತಾತ್ಕಾಲಿಕವಾಗಿ ಮಾತ್ರ ನಿವಾರಿಸುತ್ತವೆ. ಹೀಗಿರುವಾಗ ಈ ಸಮಸ್ಯೆಯಿಂದ ಶಾಶ್ವತ ಪರಿಹಾರವನ್ನು ಪಡೆಯಲು ಈ ಕೆಲವೊಂದಿಷ್ಟು ನೈಸರ್ಗಿಕ ಉತ್ಪನ್ನಗಳನ್ನು ಬಳಸಿ.

ಬಾತ್‌ರೂಮ್‌ ದುರ್ವಾಸನೆ ಬರದಂತೆ ನೋಡಿಕೊಳ್ಳಲು ಈ ಸಲಹೆ ಪಾಲಿಸಿ:

ಎಷ್ಟೇ ಸ್ವಚ್ಛಗೊಳಿಸಿದರೂ ಬಾತ್‌ರೂಮ್‌ ವಾಸನೆ ಬರಲು ನಿಜವಾದ ಕಾರಣವೆಂದರೆ ಕೊಳಕು, ಬ್ಯಾಕ್ಟೀರಿಯಾ, ಕೂದಲಿನ ಶೇಖರಣೆ, ಕಸ, ಸೋಪ್ ಮತ್ತು ಸಣ್ಣ ಶಾಂಪೂ ಪ್ಯಾಕೆಟ್‌ಗಳು ಸ್ನಾನಗೃಹದ ಚರಂಡಿಯಲ್ಲಿ ಸಂಗ್ರಹವಾಗಬಹುದು. ಹಾಗಾಗಿ ಬಾತ್‌ರೂಮ್‌ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸುವಂತೆ ಒಳಚರಂಡಿಯ ಸ್ವಚ್ಛತೆಗೂ ಗಮನ ನೀಡಿ.

ಅಡಿಗೆ ಸೋಡಾ ಬಳಕೆ: ಅಡುಗೆ ಸೋಡಾ ನೈಸರ್ಗಿಕ ವಾಸನೆಯನ್ನು ನಿವಾರಿಸುವಲ್ಲಿ ಪರಿಣಾಮಕಾರಿಯಾಗಿದೆ. ಹಾಗಾಗಿ ಬಾತ್‌ರೂಮ್‌ ಸ್ವಚ್ಛಗೊಳಿಸುವಂತಹ ಸಂದರ್ಭದಲ್ಲಿ ಸ್ವಲ್ಪ ಅಡುಗೆ ಸೋಡಾವನ್ನು ಸೇರಿಸಿ. ಇದು ವಾಸನೆಯನ್ನು ಪರಿಣಾಮಕಾರಿಯಾಗಿ ಹೋಗಲಾಡಿಸುತ್ತದೆ.

ಬಿಳಿ ವಿನೆಗರ್‌ ಬಳಕೆ: ಬತ್‌ರೂಮ್‌ ಎಷ್ಟೇ ಕ್ಲೀನ್‌ ಆಗಿ ಇಟ್ಟುಕೊಂಡರೂ ವಾಸನೆ ಬರುತ್ತಿದೆ ಎಂದಾದ್ರೆ ಸ್ನಾನಗೃಹ ಸ್ವಚ್ಛಗೊಳಿಸುವ ನೀರಿಗೆ ಸ್ವಲ್ಪ ಬಿಳಿ ವಿನೆಗರ್‌ ಸೇರಿಸಿ. ಇದು ಸ್ನಾನಗೃಹದಲ್ಲಿನ ವಾಸನೆಯನ್ನು ಸಂಪೂರ್ಣವಾಗಿ ನಿವಾರಿಸುತ್ತದೆ.

ಪುದೀನಾ ಎಣ್ಣೆ: ಪುದೀನಾ ಎಣ್ಣೆ ಸ್ನಾನಗೃಹದಿಂದ ಬರುವ ಕೆಟ್ಟ ವಾಸನೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಹಾಗಾಗಿ ಬಾತ್‌ರೂಮ್‌ ಸ್ವಚ್ಛಗೊಳಿಸಿದ ಬಳಿಕ ಕೆಮಿಕಲ್‌ಯುಕ್ತ ಸ್ಪ್ರೇಗಳನ್ನು ಬಳಸುವ ಬದಲು ಬಾತ್‌ರೂಮ್‌ಗೆ ಸ್ವಲ್ಪ ಪುದೀನಾ ಎಣ್ಣೆಯನ್ನು ಸಿಂಪಡಿಸಿ.

ಲ್ಯಾವೆಂಡರ್‌ ಎಣ್ಣೆ: ಬಾತ್‌ರೂಮ್‌ ಸ್ವಚ್ಛಗೊಳಿಸಿದ ಬಳಿಕವೂ ವಾಸನೆ ಬರುವುದು ಮಾತ್ರ ನಿಲ್ಲುತ್ತಿಲ್ಲವೆಂದಾದರೆ ಬಾತ್‌ರೂಮ್‌ ಕ್ಲೀನ್‌ ಮಾಡಿದ ನಂತರ ಸ್ನಾನಗೃಹದ ಮೂಲೆಗಳಿಗೆ ಲ್ಯಾವೆಂಡರ್‌ ಎಣ್ಣೆಯನ್ನು ಹಚ್ಚಿ. ಅಲ್ಲದೆ ನೀವು ಲ್ಯಾವೆಂಡರ್‌ ಡಿಫ್ಯೂಸರ್‌ ಬಳಸುವುದರಿಂದಲೂ ಸ್ನಾನಗೃಹದ ವಾಸನೆಯನ್ನು ನಿವಾರಿಸಬಹುದು.

ಇದನ್ನೂ ಓದಿ: ಹಣ್ಣು, ತರಕಾರಿಗಳನ್ನು ಒಟ್ಟಿಗೆ ಸಂಗ್ರಹಿಸಿಡಲೇಬಾರದು, ಯಾಕೆ ಗೊತ್ತಾ?

ನಿಂಬೆರಸದ ಬಳಕೆ: ನಿಂಬೆರಸದಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಸ್ನಾನಗೃಹದಿಂದ ಬರುವ ಕೆಟ್ಟ ವಾಸನೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ ಸ್ನಾನಗೃಹದ ಮೂಲೆಗಳಲ್ಲಿ ನಿಂಬೆ ಹೋಳನ್ನು ಇಡಬಹುದು. ಇಲ್ಲದಿದ್ದರೆ ನಿಂಬೆ ರಸವನ್ನು ಬಳಸಿ ಸ್ನಾನಗೃಹವನ್ನು ಸ್ವಚ್ಛಗೊಳಿಸಬಹುದು.

ಕಾಫಿ ಬೀಜಗಳ ಬಳಕೆ: ಕಾಫಿ ಬೀಜಗಳ ಸುವಾಸನೆಯು ಸಾಕಷ್ಟು ವಿಶಿಷ್ಟ ಮತ್ತು ಆಹ್ಲಾದಕರವಾಗಿರುತ್ತದೆ. ಹಾಗಾಗಿ ಸ್ನಾನಗೃಹದ ಕೆಟ್ಟ ವಾಸನೆಯನ್ನು ತೊಡೆದುಹಾಕಲು ನೀವು ಅವುಗಳನ್ನು ಬಳಸಬಹುದು. ಇದನ್ನು ಮಾಡಲು, ಒಂದು ಬೌಲ್‌ಗೆ ನೀರನ್ನು ತುಂಬಿಸಿ ಅದಕ್ಕೆ ಕಾಫಿ ಬೀಜಗಳನ್ನು ಸೇರಿಸಿ ಇದನ್ನು ಸ್ನಾನಗೃಹದಲ್ಲಿ ಇರಿಸಿ. ಇದು ಬಾತ್‌ರೂಮ್‌ಗೆ ಆಹ್ಲಾದಕರ ಸುವಾಸನೆಯನ್ನು ನೀಡುತ್ತದೆ.

ಎಕ್ಸಾಸ್ಟರ್‌ ಫ್ಯಾನ್‌ ಬಳಕೆ: ಸ್ನಾನಗೃಹದಲ್ಲಿ ಎಕ್ಸಾಸ್ಟ್‌ ಫ್ಯಾನ್‌ ಇರುವುದನ್ನು ಖಚಿತಪಡಿಸಿಕೊಳ್ಳಿ. ಇದು ಗಾಳಿಯ ಪ್ರಸರಣವನ್ನು ಉತ್ತಮಗೊಳಿಸುತ್ತದೆ ಮತ್ತು ಸ್ನಾನಗೃಹವು ಕೆಟ್ಟ ವಾಸನೆ ಬರದಂತೆ ತಡೆಯುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟ್ರಂಪ್ ನಮ್ಮ ಕರಾವಳಿ ಮೇಲೆ ದಾಳಿ ನಡೆಸಿದರೆ ಗಲ್ಫ್​ನಲ್ಲಿ ಸಮುದ್ರ ಗಣಿಗಳನ್ನು ಹಾಕುತ್ತೇವೆ; ಇರಾನ್ ಎಚ್ಚರಿಕೆ

ಟೆಹ್ರಾನ್, ಮಾರ್ಚ್ 23: ಇರಾನ್ ದೇಶದ ಕರಾವಳಿ ಅಥವಾ ದ್ವೀಪಗಳ ಮೇಲೆ ಯಾವುದಾದರೂ ದಾಳಿ ನಡೆದರೆ ಇಡೀ ಪರ್ಷಿಯನ್ ಕೊಲ್ಲಿಯಾದ್ಯಂತ ಸ್ಫೋಟಕ ಸಮುದ್ರ ಗಣಿಗಳನ್ನು ನಿಯೋಜಿಸಬೇಕಾಗುತ್ತದೆ ಎಂದು ಇರಾನ್‌ನ ರಕ್ಷಣಾ ಮಂಡಳಿ ಇಂದು ಎಚ್ಚರಿಸಿದೆ. ಇಂದು ರಾತ್ರಿಯೊಳಗೆ ಇರಾನ್‌ನ (Iran War) ಪ್ರಮುಖ ಜಲಮಾರ್ಗವನ್ನು ಮತ್ತೆ ತೆರೆಯಲು ವಿಫಲವಾದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಅಮೆರಿಕದ ಅಧ್ಯಕ್ಷ ಟ್ರಂಪ್ ಬೆದರಿಕೆ ಹಾಕಿದ್ದರು. ಇದರ ಬೆನ್ನಲ್ಲೇ ಇರಾನ್ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.

ಇರಾನ್‌ ಮೇಲಿನ ನಿರಂತರ ದಾಳಿಗಳಿಂದ ಈಗಾಗಲೇ ಹಾರ್ಮುಜ್ ಜಲಸಂಧಿಯನ್ನು ಮುಚ್ಚಲಾಗಿದೆ. ಇದು ಜಾಗತಿಕ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲದ ಐದನೇ ಒಂದು ಭಾಗವನ್ನು ಹೊಂದಿದೆ. ಇದು 1970ರ ದಶಕದ ನಂತರದ ಅತ್ಯಂತ ಕೆಟ್ಟ ತೈಲ ಬಿಕ್ಕಟ್ಟನ್ನು ಉಂಟುಮಾಡಿದೆ.

ಇದನ್ನೂ ಓದಿ: ಇರಾನ್​ನ 140 ಮಿಲಿಯನ್ ಬ್ಯಾರೆಲ್ ತೈಲವನ್ನು ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಂತೆ ಅಮೆರಿಕ!

“ಇರಾನ್‌ನ ಕರಾವಳಿ ಅಥವಾ ದ್ವೀಪಗಳ ಮೇಲೆ ದಾಳಿ ನಡೆಸುವ ಯಾವುದೇ ಪ್ರಯತ್ನಕ್ಕೆ ನಾವು ಸೂಕ್ತ ಉತ್ತರ ನೀಡಬೇಕಾಗುತ್ತದೆ” ಎಂದು ಇರಾನ್​ನ ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಪ್ರದೇಶಕ್ಕೆ ಯುಎಸ್ ಮೆರೀನ್‌ಗಳನ್ನು ನಿಯೋಜಿಸುವ ಸಾಧ್ಯತೆಯ ಬಗ್ಗೆ ಟೆಹ್ರಾನ್‌ನಲ್ಲಿ ಹೆಚ್ಚುತ್ತಿರುವ ಕಳವಳದ ನಡುವೆ ಇರಾನ್ ಈ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ಹಾರ್ಮುಜ್ ಜಲಸಂಧಿಯನ್ನು ಎಲ್ಲಾ ಹಡಗುಗಳಿಗೆ ಮತ್ತೆ ತೆರೆಯುವಂತೆ ಟೆಹ್ರಾನ್ ಮೇಲೆ ಒತ್ತಡ ಹೇರಲು, ದೇಶದ ಪ್ರಮುಖ ತೈಲ ರಫ್ತು ಕೇಂದ್ರವಾದ ಇರಾನ್‌ನ ಖಾರ್ಗ್ ದ್ವೀಪವನ್ನು ಆಕ್ರಮಿಸಿಕೊಳ್ಳಲು ಅಥವಾ ದಿಗ್ಬಂಧನ ಮಾಡಲು ಅಮೆರಿಕ ಪ್ಲಾನ್ ಮಾಡುತ್ತಿದೆ. ಅದಕ್ಕೆ ತಿರುಗೇಟು ನೀಡಲು ಇರಾನ್ ಕೂಡ ಸಜ್ಜಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಸಾಲ ಮಾಡಿ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಮಹತ್ವದ ಸಲಹೆ ನೀಡಿದ ಆರ್ಥಿಕ ತಜ್ಞ

ಬೆಳ್ಳಿ ಮತ್ತು ಚಿನ್ನದ ಬೆಲೆ ಕಳೆದ ಒಂದು ವರ್ಷದಲ್ಲಿ ಸಿಕ್ಕಾಪಟ್ಟೆ ಏರಿದೆ. ಹೀಗಾಗಿ ಹಲವರು ಚಿನ್ನ ಹಾಗೂ ಬೆಳ್ಳಿ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಬಹಳಷ್ಟು ತಜ್ಞರು ಚಿನ್ನದ ಮೇಲೆ ಸ್ವಲ್ಪ ಭಾಗವಾದರೂ ಹೂಡಿಕೆ ಮಾಡಿ ಎಂದು ಸಲಹೆ ನೀಡುತ್ತಿದ್ದಾರೆ. ಹೀಗಾಗಿ ಹಲವರು ಸಾಲ ಮಾಡಿ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಚಿನ್ನ, ಬೆಳ್ಳೆ ದರ ಇನ್ನೂ ಏರಿಕೆಯಾಗುತ್ತೆ ಎಂದು ಅನೇಕ ಜನ ಸಾಲ ಮಾಡಿ ಹೂಡಿಕೆ ಮಾಡಲು ಮುಗಿಬಿದ್ದಿದ್ದಾರೆ. ಆದ್ರೆ, ಮತ್ತೊಂದೆಡೆ ಚಿನ್ನ ಬೆಳ್ಳಿ ಇಳಿಕೆಯತ್ತ ಸಾಗಿದೆ. ಇನ್ನು ಚಿನ್ನ ಬೆಳ್ಳಿ ಹೂಡಿಕೆ ಮಾಡುವವರಿಗೆ ಆರ್ಥಿಕ ತಜ್ಞ ರುದ್ರಮೂರ್ತಿ ಅವರು ಮಹತ್ವದ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Gold Rates: 10 ಗ್ರಾಮ್ ಚಿನ್ನದ ಬೆಲೆಯಲ್ಲಿ 9,450 ರೂ ಇಳಿಕೆ; ಇಲ್ಲಿದೆ ದರಪಟ್ಟಿ

 

Source link

ಚಿನ್ನ-ಬೆಳ್ಳಿ ದರ ಏರಿಳಿತ, ಹೂಡಿಕೆ ಬಗ್ಗೆ ಆರ್ಥಿಕ ತಜ್ಞ ಮಹತ್ವದ ಮಾಹಿತಿ

ಗಲ್ಫ್ ದೇಶಗಳ ಯುದ್ಧದ ಟೆನ್ಷನ್ ನಡುವೆ ಚಿನ್ನ (Gold) ಮತ್ತು ಬೆಳ್ಳಿ (Silver) ರೇಟ್ ದಿಢೀರ್ ಅಂತ ಪಾತಾಳಕ್ಕೆ ಕುಸಿದಿದೆ. ಮದುವೆ ಸೀಸನ್ (Wedding Season) ಹಾಗೂ ಸಾಲು ಸಾಲು ಹಬ್ಬಗಳ ಹೊತ್ತಲ್ಲೇ ಈ ಭಾರಿ ಬೆಲೆ ಇಳಿಕೆ (Price Drop) ಆಭರಣ ಪ್ರಿಯರಿಗೆ ಅಕ್ಷರಶಃ ಹಬ್ಬದ ವಾತಾವರಣ ಸೃಷ್ಟಿಸಿದೆ. ಇನ್ನು ಈ ಚಿನ್ನ ಬೆಳ್ಳಿ ಏರಿಳಿತ ಬಗ್ಗೆ ಆರ್ಥಿಕ ತಜ್ಞ ರುದ್ರಮೂರ್ತಿ ಅವರು ಮಾತನಾಡಿದ್ದಾರೆ. ಅಲ್ಲದೇ ಚಿನ್ನ-ಬೆಳ್ಳಿ ಮೇಲೆ ಹೂಡಿಕೆ ಮಾಡುವವರಿಗೂ ಕೆಲ ಸಲಹೆ ಸೂಚನೆಗಳನ್ನು ಸಹ ನೀಡಿದ್ದಾರೆ.

Source link