All posts by nagaraj11081993

ಬಾತ್‌ರೂಮ್‌ನಿಂದ ಬರುವ ಕೆಟ್ಟ ವಾಸನೆಯನ್ನು ಹೋಗಲಾಡಿಸಲು ಈ ನೈಸರ್ಗಿಕ ಪರಿಹಾರಗಳನ್ನು ಟ್ರೈ ಮಾಡಿ

ಬಾತ್‌ರೂಮ್‌ನಿಂದ ಬರುವ ಕೆಟ್ಟ ವಾಸನೆಯನ್ನು ಹೋಗಲಾಡಿಸಲು ಈ ನೈಸರ್ಗಿಕ ಪರಿಹಾರಗಳನ್ನು ಟ್ರೈ ಮಾಡಿ

ಸ್ನಾನಗೃಹವು (bathroom) ಎಷ್ಟೇ ಸ್ವಚ್ಛವಾಗಿದ್ದರೂ,  ಪ್ರತಿನಿತ್ಯ ಸ್ವಚ್ಛಗೊಳಿಸಿದರೂ ಸಹ  ಕೆಲವೊಂದು ಬಾರಿ ಬಾತ್‌ರೂಮ್‌ನಿಂದ ದುರ್ವಾಸನೆ ಬರುತ್ತದೆ. ಈ ಕೆಟ್ಟ ವಾಸನೆ ಅನಾನುಕೂಲವನ್ನುಂಟುಮಾಡುವುದಲ್ಲದೆ, ಅತಿಥಿಗಳ ಮುಂದೆ ಮುಜುಗರವನ್ನುಂಟು ಮಾಡುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ತೊಡೆದುಹಾಕಲು ಹೆಚ್ಚಿನವರು ಫಿನೈಲ್, ರೂಮ್ ಫ್ರೆಶ್ನರ್‌ಗಳು ಅಥವಾ ಪರಿಮಳಯುಕ್ತ ಕ್ಲೀನರ್‌ಗಳ ಮೊರೆ ಹೋಗ್ತಾರೆ. ಆದರೆ ಇವು ವಾಸನೆಯನ್ನು ತಾತ್ಕಾಲಿಕವಾಗಿ ಮಾತ್ರ ನಿವಾರಿಸುತ್ತವೆ. ಹೀಗಿರುವಾಗ ಈ ಸಮಸ್ಯೆಯಿಂದ ಶಾಶ್ವತ ಪರಿಹಾರವನ್ನು ಪಡೆಯಲು ಈ ಕೆಲವೊಂದಿಷ್ಟು ನೈಸರ್ಗಿಕ ಉತ್ಪನ್ನಗಳನ್ನು ಬಳಸಿ.

ಬಾತ್‌ರೂಮ್‌ ದುರ್ವಾಸನೆ ಬರದಂತೆ ನೋಡಿಕೊಳ್ಳಲು ಈ ಸಲಹೆ ಪಾಲಿಸಿ:

ಎಷ್ಟೇ ಸ್ವಚ್ಛಗೊಳಿಸಿದರೂ ಬಾತ್‌ರೂಮ್‌ ವಾಸನೆ ಬರಲು ನಿಜವಾದ ಕಾರಣವೆಂದರೆ ಕೊಳಕು, ಬ್ಯಾಕ್ಟೀರಿಯಾ, ಕೂದಲಿನ ಶೇಖರಣೆ, ಕಸ, ಸೋಪ್ ಮತ್ತು ಸಣ್ಣ ಶಾಂಪೂ ಪ್ಯಾಕೆಟ್‌ಗಳು ಸ್ನಾನಗೃಹದ ಚರಂಡಿಯಲ್ಲಿ ಸಂಗ್ರಹವಾಗಬಹುದು. ಹಾಗಾಗಿ ಬಾತ್‌ರೂಮ್‌ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸುವಂತೆ ಒಳಚರಂಡಿಯ ಸ್ವಚ್ಛತೆಗೂ ಗಮನ ನೀಡಿ.

ಅಡಿಗೆ ಸೋಡಾ ಬಳಕೆ: ಅಡುಗೆ ಸೋಡಾ ನೈಸರ್ಗಿಕ ವಾಸನೆಯನ್ನು ನಿವಾರಿಸುವಲ್ಲಿ ಪರಿಣಾಮಕಾರಿಯಾಗಿದೆ. ಹಾಗಾಗಿ ಬಾತ್‌ರೂಮ್‌ ಸ್ವಚ್ಛಗೊಳಿಸುವಂತಹ ಸಂದರ್ಭದಲ್ಲಿ ಸ್ವಲ್ಪ ಅಡುಗೆ ಸೋಡಾವನ್ನು ಸೇರಿಸಿ. ಇದು ವಾಸನೆಯನ್ನು ಪರಿಣಾಮಕಾರಿಯಾಗಿ ಹೋಗಲಾಡಿಸುತ್ತದೆ.

ಬಿಳಿ ವಿನೆಗರ್‌ ಬಳಕೆ: ಬತ್‌ರೂಮ್‌ ಎಷ್ಟೇ ಕ್ಲೀನ್‌ ಆಗಿ ಇಟ್ಟುಕೊಂಡರೂ ವಾಸನೆ ಬರುತ್ತಿದೆ ಎಂದಾದ್ರೆ ಸ್ನಾನಗೃಹ ಸ್ವಚ್ಛಗೊಳಿಸುವ ನೀರಿಗೆ ಸ್ವಲ್ಪ ಬಿಳಿ ವಿನೆಗರ್‌ ಸೇರಿಸಿ. ಇದು ಸ್ನಾನಗೃಹದಲ್ಲಿನ ವಾಸನೆಯನ್ನು ಸಂಪೂರ್ಣವಾಗಿ ನಿವಾರಿಸುತ್ತದೆ.

ಪುದೀನಾ ಎಣ್ಣೆ: ಪುದೀನಾ ಎಣ್ಣೆ ಸ್ನಾನಗೃಹದಿಂದ ಬರುವ ಕೆಟ್ಟ ವಾಸನೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಹಾಗಾಗಿ ಬಾತ್‌ರೂಮ್‌ ಸ್ವಚ್ಛಗೊಳಿಸಿದ ಬಳಿಕ ಕೆಮಿಕಲ್‌ಯುಕ್ತ ಸ್ಪ್ರೇಗಳನ್ನು ಬಳಸುವ ಬದಲು ಬಾತ್‌ರೂಮ್‌ಗೆ ಸ್ವಲ್ಪ ಪುದೀನಾ ಎಣ್ಣೆಯನ್ನು ಸಿಂಪಡಿಸಿ.

ಲ್ಯಾವೆಂಡರ್‌ ಎಣ್ಣೆ: ಬಾತ್‌ರೂಮ್‌ ಸ್ವಚ್ಛಗೊಳಿಸಿದ ಬಳಿಕವೂ ವಾಸನೆ ಬರುವುದು ಮಾತ್ರ ನಿಲ್ಲುತ್ತಿಲ್ಲವೆಂದಾದರೆ ಬಾತ್‌ರೂಮ್‌ ಕ್ಲೀನ್‌ ಮಾಡಿದ ನಂತರ ಸ್ನಾನಗೃಹದ ಮೂಲೆಗಳಿಗೆ ಲ್ಯಾವೆಂಡರ್‌ ಎಣ್ಣೆಯನ್ನು ಹಚ್ಚಿ. ಅಲ್ಲದೆ ನೀವು ಲ್ಯಾವೆಂಡರ್‌ ಡಿಫ್ಯೂಸರ್‌ ಬಳಸುವುದರಿಂದಲೂ ಸ್ನಾನಗೃಹದ ವಾಸನೆಯನ್ನು ನಿವಾರಿಸಬಹುದು.

ಇದನ್ನೂ ಓದಿ: ಹಣ್ಣು, ತರಕಾರಿಗಳನ್ನು ಒಟ್ಟಿಗೆ ಸಂಗ್ರಹಿಸಿಡಲೇಬಾರದು, ಯಾಕೆ ಗೊತ್ತಾ?

ನಿಂಬೆರಸದ ಬಳಕೆ: ನಿಂಬೆರಸದಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಸ್ನಾನಗೃಹದಿಂದ ಬರುವ ಕೆಟ್ಟ ವಾಸನೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ ಸ್ನಾನಗೃಹದ ಮೂಲೆಗಳಲ್ಲಿ ನಿಂಬೆ ಹೋಳನ್ನು ಇಡಬಹುದು. ಇಲ್ಲದಿದ್ದರೆ ನಿಂಬೆ ರಸವನ್ನು ಬಳಸಿ ಸ್ನಾನಗೃಹವನ್ನು ಸ್ವಚ್ಛಗೊಳಿಸಬಹುದು.

ಕಾಫಿ ಬೀಜಗಳ ಬಳಕೆ: ಕಾಫಿ ಬೀಜಗಳ ಸುವಾಸನೆಯು ಸಾಕಷ್ಟು ವಿಶಿಷ್ಟ ಮತ್ತು ಆಹ್ಲಾದಕರವಾಗಿರುತ್ತದೆ. ಹಾಗಾಗಿ ಸ್ನಾನಗೃಹದ ಕೆಟ್ಟ ವಾಸನೆಯನ್ನು ತೊಡೆದುಹಾಕಲು ನೀವು ಅವುಗಳನ್ನು ಬಳಸಬಹುದು. ಇದನ್ನು ಮಾಡಲು, ಒಂದು ಬೌಲ್‌ಗೆ ನೀರನ್ನು ತುಂಬಿಸಿ ಅದಕ್ಕೆ ಕಾಫಿ ಬೀಜಗಳನ್ನು ಸೇರಿಸಿ ಇದನ್ನು ಸ್ನಾನಗೃಹದಲ್ಲಿ ಇರಿಸಿ. ಇದು ಬಾತ್‌ರೂಮ್‌ಗೆ ಆಹ್ಲಾದಕರ ಸುವಾಸನೆಯನ್ನು ನೀಡುತ್ತದೆ.

ಎಕ್ಸಾಸ್ಟರ್‌ ಫ್ಯಾನ್‌ ಬಳಕೆ: ಸ್ನಾನಗೃಹದಲ್ಲಿ ಎಕ್ಸಾಸ್ಟ್‌ ಫ್ಯಾನ್‌ ಇರುವುದನ್ನು ಖಚಿತಪಡಿಸಿಕೊಳ್ಳಿ. ಇದು ಗಾಳಿಯ ಪ್ರಸರಣವನ್ನು ಉತ್ತಮಗೊಳಿಸುತ್ತದೆ ಮತ್ತು ಸ್ನಾನಗೃಹವು ಕೆಟ್ಟ ವಾಸನೆ ಬರದಂತೆ ತಡೆಯುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟ್ರಂಪ್ ನಮ್ಮ ಕರಾವಳಿ ಮೇಲೆ ದಾಳಿ ನಡೆಸಿದರೆ ಗಲ್ಫ್​ನಲ್ಲಿ ಸಮುದ್ರ ಗಣಿಗಳನ್ನು ಹಾಕುತ್ತೇವೆ; ಇರಾನ್ ಎಚ್ಚರಿಕೆ

ಟೆಹ್ರಾನ್, ಮಾರ್ಚ್ 23: ಇರಾನ್ ದೇಶದ ಕರಾವಳಿ ಅಥವಾ ದ್ವೀಪಗಳ ಮೇಲೆ ಯಾವುದಾದರೂ ದಾಳಿ ನಡೆದರೆ ಇಡೀ ಪರ್ಷಿಯನ್ ಕೊಲ್ಲಿಯಾದ್ಯಂತ ಸ್ಫೋಟಕ ಸಮುದ್ರ ಗಣಿಗಳನ್ನು ನಿಯೋಜಿಸಬೇಕಾಗುತ್ತದೆ ಎಂದು ಇರಾನ್‌ನ ರಕ್ಷಣಾ ಮಂಡಳಿ ಇಂದು ಎಚ್ಚರಿಸಿದೆ. ಇಂದು ರಾತ್ರಿಯೊಳಗೆ ಇರಾನ್‌ನ (Iran War) ಪ್ರಮುಖ ಜಲಮಾರ್ಗವನ್ನು ಮತ್ತೆ ತೆರೆಯಲು ವಿಫಲವಾದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಅಮೆರಿಕದ ಅಧ್ಯಕ್ಷ ಟ್ರಂಪ್ ಬೆದರಿಕೆ ಹಾಕಿದ್ದರು. ಇದರ ಬೆನ್ನಲ್ಲೇ ಇರಾನ್ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.

ಇರಾನ್‌ ಮೇಲಿನ ನಿರಂತರ ದಾಳಿಗಳಿಂದ ಈಗಾಗಲೇ ಹಾರ್ಮುಜ್ ಜಲಸಂಧಿಯನ್ನು ಮುಚ್ಚಲಾಗಿದೆ. ಇದು ಜಾಗತಿಕ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲದ ಐದನೇ ಒಂದು ಭಾಗವನ್ನು ಹೊಂದಿದೆ. ಇದು 1970ರ ದಶಕದ ನಂತರದ ಅತ್ಯಂತ ಕೆಟ್ಟ ತೈಲ ಬಿಕ್ಕಟ್ಟನ್ನು ಉಂಟುಮಾಡಿದೆ.

ಇದನ್ನೂ ಓದಿ: ಇರಾನ್​ನ 140 ಮಿಲಿಯನ್ ಬ್ಯಾರೆಲ್ ತೈಲವನ್ನು ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಂತೆ ಅಮೆರಿಕ!

“ಇರಾನ್‌ನ ಕರಾವಳಿ ಅಥವಾ ದ್ವೀಪಗಳ ಮೇಲೆ ದಾಳಿ ನಡೆಸುವ ಯಾವುದೇ ಪ್ರಯತ್ನಕ್ಕೆ ನಾವು ಸೂಕ್ತ ಉತ್ತರ ನೀಡಬೇಕಾಗುತ್ತದೆ” ಎಂದು ಇರಾನ್​ನ ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಪ್ರದೇಶಕ್ಕೆ ಯುಎಸ್ ಮೆರೀನ್‌ಗಳನ್ನು ನಿಯೋಜಿಸುವ ಸಾಧ್ಯತೆಯ ಬಗ್ಗೆ ಟೆಹ್ರಾನ್‌ನಲ್ಲಿ ಹೆಚ್ಚುತ್ತಿರುವ ಕಳವಳದ ನಡುವೆ ಇರಾನ್ ಈ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ಹಾರ್ಮುಜ್ ಜಲಸಂಧಿಯನ್ನು ಎಲ್ಲಾ ಹಡಗುಗಳಿಗೆ ಮತ್ತೆ ತೆರೆಯುವಂತೆ ಟೆಹ್ರಾನ್ ಮೇಲೆ ಒತ್ತಡ ಹೇರಲು, ದೇಶದ ಪ್ರಮುಖ ತೈಲ ರಫ್ತು ಕೇಂದ್ರವಾದ ಇರಾನ್‌ನ ಖಾರ್ಗ್ ದ್ವೀಪವನ್ನು ಆಕ್ರಮಿಸಿಕೊಳ್ಳಲು ಅಥವಾ ದಿಗ್ಬಂಧನ ಮಾಡಲು ಅಮೆರಿಕ ಪ್ಲಾನ್ ಮಾಡುತ್ತಿದೆ. ಅದಕ್ಕೆ ತಿರುಗೇಟು ನೀಡಲು ಇರಾನ್ ಕೂಡ ಸಜ್ಜಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಸಾಲ ಮಾಡಿ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಮಹತ್ವದ ಸಲಹೆ ನೀಡಿದ ಆರ್ಥಿಕ ತಜ್ಞ

ಬೆಳ್ಳಿ ಮತ್ತು ಚಿನ್ನದ ಬೆಲೆ ಕಳೆದ ಒಂದು ವರ್ಷದಲ್ಲಿ ಸಿಕ್ಕಾಪಟ್ಟೆ ಏರಿದೆ. ಹೀಗಾಗಿ ಹಲವರು ಚಿನ್ನ ಹಾಗೂ ಬೆಳ್ಳಿ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಬಹಳಷ್ಟು ತಜ್ಞರು ಚಿನ್ನದ ಮೇಲೆ ಸ್ವಲ್ಪ ಭಾಗವಾದರೂ ಹೂಡಿಕೆ ಮಾಡಿ ಎಂದು ಸಲಹೆ ನೀಡುತ್ತಿದ್ದಾರೆ. ಹೀಗಾಗಿ ಹಲವರು ಸಾಲ ಮಾಡಿ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಚಿನ್ನ, ಬೆಳ್ಳೆ ದರ ಇನ್ನೂ ಏರಿಕೆಯಾಗುತ್ತೆ ಎಂದು ಅನೇಕ ಜನ ಸಾಲ ಮಾಡಿ ಹೂಡಿಕೆ ಮಾಡಲು ಮುಗಿಬಿದ್ದಿದ್ದಾರೆ. ಆದ್ರೆ, ಮತ್ತೊಂದೆಡೆ ಚಿನ್ನ ಬೆಳ್ಳಿ ಇಳಿಕೆಯತ್ತ ಸಾಗಿದೆ. ಇನ್ನು ಚಿನ್ನ ಬೆಳ್ಳಿ ಹೂಡಿಕೆ ಮಾಡುವವರಿಗೆ ಆರ್ಥಿಕ ತಜ್ಞ ರುದ್ರಮೂರ್ತಿ ಅವರು ಮಹತ್ವದ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Gold Rates: 10 ಗ್ರಾಮ್ ಚಿನ್ನದ ಬೆಲೆಯಲ್ಲಿ 9,450 ರೂ ಇಳಿಕೆ; ಇಲ್ಲಿದೆ ದರಪಟ್ಟಿ

 

Source link

ಚಿನ್ನ-ಬೆಳ್ಳಿ ದರ ಏರಿಳಿತ, ಹೂಡಿಕೆ ಬಗ್ಗೆ ಆರ್ಥಿಕ ತಜ್ಞ ಮಹತ್ವದ ಮಾಹಿತಿ

ಗಲ್ಫ್ ದೇಶಗಳ ಯುದ್ಧದ ಟೆನ್ಷನ್ ನಡುವೆ ಚಿನ್ನ (Gold) ಮತ್ತು ಬೆಳ್ಳಿ (Silver) ರೇಟ್ ದಿಢೀರ್ ಅಂತ ಪಾತಾಳಕ್ಕೆ ಕುಸಿದಿದೆ. ಮದುವೆ ಸೀಸನ್ (Wedding Season) ಹಾಗೂ ಸಾಲು ಸಾಲು ಹಬ್ಬಗಳ ಹೊತ್ತಲ್ಲೇ ಈ ಭಾರಿ ಬೆಲೆ ಇಳಿಕೆ (Price Drop) ಆಭರಣ ಪ್ರಿಯರಿಗೆ ಅಕ್ಷರಶಃ ಹಬ್ಬದ ವಾತಾವರಣ ಸೃಷ್ಟಿಸಿದೆ. ಇನ್ನು ಈ ಚಿನ್ನ ಬೆಳ್ಳಿ ಏರಿಳಿತ ಬಗ್ಗೆ ಆರ್ಥಿಕ ತಜ್ಞ ರುದ್ರಮೂರ್ತಿ ಅವರು ಮಾತನಾಡಿದ್ದಾರೆ. ಅಲ್ಲದೇ ಚಿನ್ನ-ಬೆಳ್ಳಿ ಮೇಲೆ ಹೂಡಿಕೆ ಮಾಡುವವರಿಗೂ ಕೆಲ ಸಲಹೆ ಸೂಚನೆಗಳನ್ನು ಸಹ ನೀಡಿದ್ದಾರೆ.

Source link

ಕನ್ನಡದಲ್ಲೂ ಬಿಡುಗಡೆ ಆಯ್ತು ‘ಧುರಂಧರ್ 2’: ಇಷ್ಟು ದಿನ ತಡವಾಗಿದ್ದು ಯಾಕೆ?

ದೇಶಾದ್ಯಂತ ಭಾರಿ ಕುತೂಹಲ ಮೂಡಿಸಿದ್ದ ಬಾಲಿವುಡ್‌ನ ಬಿಗ್ ಬಜೆಟ್ ಸಿನಿಮಾ ‘ಧುರಂಧರ್ 2’ (Dhurandhar 2) ಎಲ್ಲ ಕಡೆಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮಾರ್ಚ್ 18ರ ಸಂಜೆಯಿಂದಲೇ ಈ ಚಿತ್ರದ ಪ್ರದರ್ಶನ ಆರಂಭ ಆಯಿತು. ಆದರೆ ಕನ್ನಡ ವರ್ಷನ್ ಬಿಡುಗಡೆ ಆಗಿರಲಿಲ್ಲ. ತಾಂತ್ರಿಕ ಕಾರಣಗಳಿಂದಾಗಿ ಕನ್ನಡ ಅವತರಣಿಕೆಯ (Dhurandhar 2 Kannada Version) ಬಿಡುಗಡೆ ಕೆಲವು ದಿನಗಳ ಕಾಲ ವಿಳಂಬವಾಗಿತ್ತು. ಇದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತ್ತು. ಆದರೆ ಈಗ ಎಲ್ಲಾ ಅಡೆತಡೆಗಳು ನಿವಾರಣೆಯಾಗಿದೆ. ಕನ್ನಡದ ಪ್ರೇಕ್ಷಕರು ಕೂಡ ಈ ‘ಧುರಂಧರ್ 2’ ನೋಡಿ ಎಂಜಾಯ್ ಮಾಡುತ್ತಿದ್ದಾರೆ.

ಕನ್ನಡ ವರ್ಷನ್ ವಿಳಂಬಕ್ಕೆ ಕಾರಣವೇನು? ಮಾರ್ಚ್ 19ರಂದು ಹಿಂದಿ ಆವೃತ್ತಿಯು ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಯಿತು. ಆದರೆ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಭಾಷೆಗಳ ಡಬ್ಬಿಂಗ್ ಆವೃತ್ತಿಗಳು ಅದೇ ದಿನ ತೆರೆಗೆ ಬರಲು ಸಾಧ್ಯವಾಗಲಿಲ್ಲ. ಇದಕ್ಕೆ ಕೆಲವು ಪ್ರಮುಖ ಕಾರಣಗಳು ಇವೆ. ಪ್ರಾದೇಶಿಕ ಭಾಷೆಗಳ ಸೆನ್ಸಾರ್ ಪ್ರಮಾಣಪತ್ರ ಸಿಗುವುದು ವಿಳಂಬವಾದ ಕಾರಣ ಕೊನೆಯ ಕ್ಷಣದಲ್ಲಿ ಪ್ರದರ್ಶನಗಳನ್ನು ರದ್ದುಗೊಳಿಸಲಾಗಿತ್ತು.

‘ಧುರಂಧರ್ 2’ ಚಿತ್ರದ ಡಬ್ಬಿಂಗ್ ಕೆಲಸಗಳು ಅಂತಿಮ ಹಂತದಲ್ಲಿ ಬಾಕಿ ಉಳಿದಿದ್ದವು ಮತ್ತು ಡಿಜಿಟಲ್ ಕಂಟೆಂಟ್ (DCP) ಚಿತ್ರಮಂದಿರಗಳಿಗೆ ತಲುಪಲು ಸಮಯ ಹಿಡಿಯಿತು ಎಂಬ ಮಾಹಿತಿ ಕೂಡ ಇದೆ. ಆ ಕಾರಣದಿಂದ ಕನ್ನಡ ವರ್ಷನ್ ಬಿಡುಗಡೆಗೆ ಸಮಸ್ಯೆ ಆಗಿತ್ತು. ಅದಕ್ಕಾಗಿ ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದರು. ನಿರ್ದೇಶಕ ಆದಿತ್ಯ ಧರ್ ಅವರು ಈ ವಿಳಂಬಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಮೆಯಾಚಿಸಿದ್ದರು. ‘ನಮ್ಮ ಚಿತ್ರವನ್ನು ಎಲ್ಲ ಭಾಷೆಗಳಲ್ಲಿ ಏಕಕಾಲಕ್ಕೆ ತೋರಿಸಬೇಕೆಂಬ ಆಸೆ ಇತ್ತು. ಆದರೆ ಅನಿವಾರ್ಯ ಕಾರಣಗಳಿಂದ ವಿಳಂಬವಾಗಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದರು.

ವಿಳಂಬದ ನಂತರ ಬಿಡುಗಡೆಯಾದರೂ ಕೂಡ ಕರ್ನಾಟಕದಲ್ಲಿ ‘ಧುರಂಧರ್ 2’ ಕನ್ನಡ ವರ್ಷನ್​​ಗೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಕನ್ನಡ ಆವೃತ್ತಿಯ ಪ್ರದರ್ಶನಗಳು ಹೌಸ್‌ಫುಲ್ ಆಗುತ್ತಿವೆ. ಸ್ಪೈ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಸಂಜಯ್ ದತ್, ಅರ್ಜುನ್ ರಾಮ್​ಪಾಲ್, ರಣವೀರ್ ಸಿಂಗ್, ಸಾರಾ ಅರ್ಜುನ್, ಆರ್. ಮಾಧವನ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ.

ಇದನ್ನೂ ಓದಿ: ‘ನಾನು ಮೋದಿಯ ಹೆಮ್ಮೆಯ ಅಂಧಭಕ್ತೆ’: ‘ಧುರಂಧರ್ 2’ ನೋಡಿ ಹೇಳಿಕೆ ನೀಡಿದ ನಟಿ ರೇಣು ದೇಸಾಯಿ

ಸಿನಿಮಾದ ಮೇಕಿಂಗ್ ಮತ್ತು ರಣವೀರ್ ಸಿಂಗ್ ಅವರ ಆ್ಯಕ್ಷನ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಆದರೆ, ಅನೇಕರಿಗೆ ಈ ಸಿನಿಮಾ ಇಷ್ಟ ಆಗಿಲ್ಲ. ಕನ್ನಡದ ಖ್ಯಾತ ನಟಿ ರಮ್ಯಾ ಅವರು ಈ ಸಿನಿಮಾವನ್ನು ಟೀಕಿಸಿದ್ದಾರೆ. ಮಿಶ್ರ ಪ್ರತಿಕ್ರಿಯೆ ನಡುವೆಯೂ ಭರ್ಜರಿ ಕಲೆಕ್ಷನ್ ಆಗುತ್ತಿದೆ. ಕೇವಲ ನಾಲ್ಕೇ ದಿನಗಳಲ್ಲಿ ಈ ಚಿತ್ರವು ವಿಶ್ವದಾದ್ಯಂತ 600 ಕೋಟಿ ರೂಪಾಯಿಗೂ ಅಧಿಕ ಹಣ ಗಳಿಸಿ ದಾಖಲೆ ಬರೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನಿಷ್ಕ್ರಿಯ ಇಪಿಎಫ್ ಅಕೌಂಟ್​ಗಳಿಗೆ ಬಡ್ಡಿ ಸಿಗುತ್ತಾ? ಯಾವುದಕ್ಕೆ ಟ್ಯಾಕ್ಸ್ ಇರುತ್ತೆ?

ಉದ್ಯೋಗಿಗಳ ಭವಿಷ್ಯ ನಿಧಿ ಅಥವಾ ಇಪಿಎಫ್ (EPF) ವಿಚಾರದಲ್ಲಿ ಬಹಳ ಜನರಿಗೆ ಗೊಂದಲಗಳಿವೆ. ಒಂದಕ್ಕಿಂತ ಹೆಚ್ಚು ಇಪಿಎಫ್ ಅಕೌಂಟ್​ಗಳಿದ್ದು, ಅವು ವಿಲೀನಗೊಂಡಿರದಿದ್ದರೆ ಅವುಗಳಿಗೆ ವಾರ್ಷಿಕ ಬಡ್ಡಿ ಜಮೆ ಆಗುವುದಿಲ್ಲ ಎಂದು ಬಹಳ ಜನರು ಭಾವಿಸಿದ್ದಾರೆ. ನಿಷ್ಕ್ರಿಯ ಇಪಿಎಫ್ ಅಕೌಂಟ್​ಗೆ ಸಂದಾಯವಾಗುವ ಬಡ್ಡಿಗೆ ಟ್ಯಾಕ್ಸ್ ಇರುತ್ತಾ ಎನ್ನುವುದು ಕೆಲವರ ಸಂದೇಹ. ಈ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.

ನಿಷ್ಕ್ರಿಯ ಇಪಿಎಫ್ ಅಕೌಂಟ್​ಗೆ ಬಡ್ಡಿ ಸಿಗುತ್ತೆ?

ಕೆಲಸ ಬಿಟ್ಟು ಬೇರೆ ಕೆಲಸಕ್ಕೆ ಸೇರಿದಾಗೆಲ್ಲಾ ಹೊಸ ಇಪಿಎಫ್ ಅಕೌಂಟ್​ಗಳನ್ನು ತೆರೆಯಲಾಗುತ್ತದೆ. ಹಳೆಯ ಅಕೌಂಟ್​ಗಳನ್ನು ಹೊಸ ಅಕೌಂಟ್​ಗೆ ವಿಲೀನ ಮಾಡದೇ ಇದ್ದರೆ ಒಬ್ಬ ಉದ್ಯೋಗಿಗೆ ಒಂದಕ್ಕಿಂತ ಹೆಚ್ಚು ಇಪಿಎಫ್ ಅಕೌಂಟ್​ಗಳು ಇರಬಹುದು.

ಇದನ್ನೂ ಓದಿ: ಬ್ಯಾಂಕು, ಷೇರು, ಮ್ಯೂಚುವಲ್ ಫಂಡ್ ಸಂಸ್ಥೆಗಳು ದಿವಾಳಿ ಎದ್ದರೆ ಹೂಡಿಕೆದಾರರ ಹಣ ಏನಾಗುತ್ತೆ? ಇಲ್ಲಿದೆ ಡೀಟೇಲ್ಸ್

ಮೂರು ವರ್ಷ ಇಪಿಎಫ್ ಅಕೌಂಟ್​ಗೆ ಕೊಡುಗೆ ಬರದೇ ಹೋದರೆ ಅದು ನಿಷ್ಕ್ರಿಯ ಅಕೌಂಟ್ ಎನಿಸುತ್ತದಾ? ಹಿಂದೆ ಇದ್ದ ನಿಯಮದಲ್ಲಿ ಹಾಗಿತ್ತು. ಆದರೆ, ಈಗ ಬದಲಾಗಿದೆ. ಉದ್ಯೋಗಿಯಿಂದಾಗಲೀ, ಕಂಪನಿ ವತಿಯಿಂದಾಗಲೇ ಕೊಡುಗೆ ಬರುವುದು ನಿಂತು ಹೋದರೂ ಆ ಅಕೌಂಟ್​ನಲ್ಲಿರುವ ಹಣಕ್ಕೆ ಸರ್ಕಾರದಿಂದ ಬಡ್ಡಿ ಸಂದಾಯವಾಗುವುದು ಮುಂದುವರಿಯುತ್ತಿರುತ್ತದೆ.

ನೀವು ನಿವೃತ್ತರಾಗುವವರೆಗೂ, ಅಥವಾ 58 ವರ್ಷ ವಯಸ್ಸು ಪೂರ್ಣಗೊಳ್ಳುವವರೆಗೂ ನಿಮ್ಮ ಎಲ್ಲಾ ಇಪಿಎಫ್ ಅಕೌಂಟ್​ಗಳಲ್ಲಿರುವ ಹಣಕ್ಕೆ ಬಡ್ಡಿ ಸಂದಾಯ ನಿಲ್ಲುವುದಿಲ್ಲ. ಇಪಿಎಫ್ ಸದಸ್ಯರ ವಯಸ್ಸು 58 ವರ್ಷವಾದ ಬಳಿಕ ಅವರ ಇಪಿಎಫ್ ಅಕೌಂಟ್​ಗಳಿಗೆ ಬಡ್ಡಿ ಸಂದಾಯವಾಗುವುದು ನಿಲ್ಲುತ್ತದೆ.

ಇದನ್ನೂ ಓದಿ: ಒಂದಕ್ಕಿಂತ ಹೆಚ್ಚು ಇಪಿಎಫ್ ಅಕೌಂಟ್​ಗಳನ್ನು ವಿಲೀನಗೊಳಿಸುವ ಸುಲಭ ಕ್ರಮಗಳು

ನಿಷ್ಕ್ರಿಯ ಅಕೌಂಟ್​ಗೆ ಸಿಗುವ ಬಡ್ಡಿಗೆ ತೆರಿಗೆ?

ಒಂದು ವೇಳೆ ನೀವು ಮಧ್ಯದಲ್ಲೇ ಕೆಲಸ ಬಿಟ್ಟು ಹೊಸ ಕೆಲಸಕ್ಕೆ ಸೇರಿದಂತೆ ಅರ್ಲಿ ರಿಟೈರ್ಮೆಂಟ್ ಆಗಿದ್ದೀರಿ ಎಂದಿಟ್ಟುಕೊಳ್ಳಿ. ನೀವು ಇಪಿಎಫ್ ಸರಪಳಿಯಿಂದ ಕತ್ತರಿಸಿಕೊಂಡಂತೆ ಆಗುತ್ತದೆ. ನಿಮಗೆ 58 ವರ್ಷ ಆಗುವವರೆಗೂ ಇಪಿಎಫ್ ಅಕೌಂಟ್​ಗೆ ಬಡ್ಡಿ ಜಮೆ ಆಗುವುದು ತಪ್ಪುವುದಿಲ್ಲ. ಆದರೆ, ಕೊನೆಯ ಇಪಿಎಫ್ ಕೊಡುಗೆಯ ದಿನದಿಂದ ಹಿಡಿದು ನಿವೃತ್ತಿಯವರೆಗಿನ ದಿನದವರೆಗೆ ನಿಮ್ಮ ಇಪಿಎಫ್ ಹಣಕ್ಕೆ ಸಂದಾಯವಾಗುವ ಬಡ್ಡಿ ಹಣಕ್ಕೆ ಟ್ಯಾಕ್ಸ್ ಅನ್ವಯ ಆಗುತ್ತದೆ. ಇದು ಗಮನದಲ್ಲಿರಲಿ. ಇಪಿಎಫ್ ಹಣಕ್ಕೆ ಟ್ಯಾಕ್ಸ್ ಹಾಕಲಾಗುವುದಿಲ್ಲ. ಬದಲಾಗಿ, ಬಡ್ಡಿ ಹಣಕ್ಕೆ ಟ್ಯಾಕ್ಸ್ ಇರುತ್ತೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಯುದ್ಧ ನಿಲ್ಲಿಸುವ ಸುಳಿವು ನೀಡಿದ ಟ್ರಂಪ್; ಕದನವಿರಾಮಕ್ಕೆ ಇರಾನ್ ಜೊತೆ ಅಮೆರಿಕ ಮಾತುಕತೆ

ವಾಷಿಂಗ್ಟನ್, ಮಾರ್ಚ್ 23: ಇರಾನ್ ಜೊತೆಗಿನ ಯುದ್ಧದ ಕಾರ್ಮೋಡ ಸರಿಯುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳಿವು ನೀಡಿದ್ದಾರೆ. ಇರಾನ್, ಇಸ್ರೇಲ್ ಮತ್ತು ಅಮೆರಿಕದ ನಡುವಿನ ಯುದ್ಧದ ಪರಿಣಾಮವನ್ನು ಗಲ್ಫ್ ರಾಷ್ಟ್ರಗಳೂ ಅನುಭವಿಸಿದ್ದವು. ಇದರ ಪರೋಕ್ಷ ಪರಿಣಾಮವನ್ನು ಭಾರತ ಸೇರಿದಂತೆ ಇತರೆ ದೇಶಗಳೂ ಅನುಭವಿಸಿದ್ದವು. ಜಗತ್ತಿನಾದ್ಯಂತ ತೈಲ, ಇಂಧನದ ಬಿಕ್ಕಟ್ಟು ಎದುರಾಗಿದೆ. ಯುದ್ಧ ಶುರುವಾಗಿ 24 ದಿನಗಳ ನಂತರ ಇದೀಗ ಈ ಯುದ್ಧಕ್ಕೆ ತೆರೆ ಬೀಳುವ ಲಕ್ಷಣಗಳೂ ಗೋಚರಿಸುತ್ತಿವೆ.

Source link

ನ್ಯೂಜಿಲೆಂಡ್​ನಲ್ಲಿ ಐಪಿಎಲ್​ ಮಾದರಿಯ ಟಿ20 ಲೀಗ್ ಆರಂಭ; ಎಷ್ಟು ತಂಡಗಳು ಕಣಕ್ಕೆ?

ವಿಶ್ವದಾದ್ಯಂತ ಟಿ20 ಲೀಗ್​ನ (T20 League) ಜನಪ್ರಿಯತೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದನ್ನು ಗಮನಿಸಿರುವ ನಾನಾ ದೇಶಗಳು ತಮ್ಮ ದೇಶದಲ್ಲೂ ಟಿ20 ಲೀಗ್​ಗಳನ್ನು ಆರಂಭಿಸಿವೆ. ಅಂತಹ ದೇಶಗಳ ಸಾಲಿಗೆ ಇದೀಗ ನ್ಯೂಜಿಲೆಂಡ್ ದೇಶವೂ ಸೇರ್ಪಡೆಯಾಗುತ್ತಿದೆ. ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್‌, ವೆಸ್ಟ್ ಇಂಡೀಸ್, ಯುನೈಟೆಡ್ ಸ್ಟೇಟ್ಸ್ ಮತ್ತು ದುಬೈ ಈಗಾಗಲೇ ಟಿ20 ಲೀಗ್‌ಗಳನ್ನು ಪ್ರಾರಂಭಿಸಿ ಸಾಕಷ್ಟು ಯಶಸ್ಸು ಗಳಿಸಿವೆ. ಇದನ್ನು ಗಮನಿಸಿರುವ ನ್ಯೂಜಿಲೆಂಡ್ ತನ್ನದೇ ಆದ ಟಿ20 ಲೀಗ್ ಪ್ರಾರಂಭಿಸಲು ನಿರ್ಧರಿಸಿದೆ. ಈ ಲೀಗ್​ನಲ್ಲಿ 6 ತಂಡಗಳು ಭಾಗವಹಿಸಲಿದ್ದು, ಈ ಆರು ತಂಡಗಳು ಐಪಿಎಲ್‌ನಂತೆಯೇ ಪ್ರತ್ಯೇಕ ಮಾಲೀಕರನ್ನು ಹೊಂದಿರುತ್ತವೆ ಎಂದು ವರದಿಯಾಗಿದೆ. ಹಾಗೆಯೇ ಈ ಲೀಗ್ 2027 ರ ಜನವರಿಯಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. ಪುರುಷರಿಗೆ ಮಾತ್ರವಲ್ಲದೆ ಮಹಿಳೆಯರಿಗೂ ಈ ಪಂದ್ಯಾವಳಿಯನ್ನು ಪ್ರಾರಂಭಿಸುವುದಾಗಿ ನ್ಯೂಜಿಲೆಂಡ್ ಕ್ರಿಕೆಟ್ ಹೇಳಿದೆ.

ನ್ಯೂಜಿಲೆಂಡ್ ಕ್ರಿಕೆಟ್ ಪ್ರಮುಖ ಘೋಷಣೆ

ಈ ಬಗ್ಗೆ ಮಾಹಿತಿ ನೀಡಿರುವ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಲಿಂಡನ್, ‘NZ20 ಲೀಗ್ ಪ್ರಸ್ತಾವನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ಮಂಡಳಿ ಚಿಂತಿಸಿದೆ. ಈ ಲೀಗ್ ಕೇವಲ ಮನರಂಜನೆಯ ಬಗ್ಗೆ ಮಾತ್ರವಲ್ಲ, ಯುವ ಸ್ಥಳೀಯ ಕ್ರಿಕೆಟಿಗರಿಗೆ ಉತ್ತಮ ವೇದಿಕೆಯಾಗಲಿದೆ. ಪ್ರತಿ ತಂಡವು ಸ್ಥಳೀಯ ಸ್ಟಾರ್ ಕ್ರಿಕೆಟಿಗರನ್ನು ಹೊಂದಿರಬೇಕು, ಇದರಿಂದ ಯುವ ಆಟಗಾರರು ಹೆಚ್ಚು ಕಲಿಯಬಹುದು ಎಂದಿದ್ದಾರೆ. ಇನ್ನು ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್‌ನಲ್ಲಿ ನ್ಯೂಜಿಲೆಂಡ್ ತಂಡಗಳನ್ನು ಸೇರಿಸುವ ಬಗ್ಗೆ ಆರಂಭದಲ್ಲಿ ಚರ್ಚೆಗಳು ನಡೆದಿದ್ದರೂ, ಮಂಡಳಿಯು ಅಂತಿಮವಾಗಿ ತಮ್ಮದೇ ಆದ ಲೀಗ್ ಪ್ರಾರಂಭ ಮಾಡುವುದು ಉತ್ತಮ ಎಂದು ನಿರ್ಧರಿಸಿದೆ’ ಎಂದು ಅವರು ಹೇಳಿದ್ದಾರೆ.

ನ್ಯೂಜಿಲೆಂಡ್ ಕ್ರಿಕೆಟ್‌ಗೆ ಏನು ಲಾಭ?

ನ್ಯೂಜಿಲೆಂಡ್ ಕ್ರಿಕೆಟ್ ಟಿ20 ಫ್ರಾಂಚೈಸ್ ಲೀಗ್ ಪ್ರಾರಂಭಿಸುವುದರಿಂದ ಸಾಕಷ್ಟು ಪ್ರಯೋಜನ ಪಡೆಯಲಿದೆ. ಖಾಸಗಿ ಉದ್ಯಮಿಗಳು ಈ ಲೀಗ್‌ನಲ್ಲಿ ಹೂಡಿಕೆ ಮಾಡಿದರೆ, ಅದು ಸ್ಪಷ್ಟವಾಗಿ ನ್ಯೂಜಿಲೆಂಡ್ ಮಂಡಳಿಗೆ ಆರ್ಥಿಕವಾಗಿ ಪ್ರಯೋಜನವನ್ನು ನೀಡುತ್ತದೆ ಮತ್ತು ಕಿವಿ ತಂಡಕ್ಕೆ ಯುವ ಆಟಗಾರರ ಆಗಮನ ಹೆಚ್ಚಾಗಲಿದೆ. ನ್ಯೂಜಿಲೆಂಡ್ ಕ್ರಿಕೆಟ್‌ಗೆ ಹೆಚ್ಚಿನ ಹಣ ಬರುವುದರಿಂದ, ಜನರು ಕ್ರಿಕೆಟ್‌ನಲ್ಲಿ ಹೆಚ್ಚು ಆಸಕ್ತಿ ಹೊಂದುತ್ತಾರೆ. ನ್ಯೂಜಿಲೆಂಡ್‌ನಲ್ಲಿ ಕ್ರಿಕೆಟ್‌ಗಿಂತ ರಗ್ಬಿಗೆ ಆದ್ಯತೆ ನೀಡಲಾಗುತ್ತದೆ. ಕ್ರಿಕೆಟ್ ಆರ್ಥಿಕವಾಗಿ ಬಲಗೊಂಡರೆ, ಅದರ ಅನುಯಾಯಿಗಳು ಮತ್ತಷ್ಟು ಹೆಚ್ಚಾಗುತ್ತಾರೆ.

ಟಿ20 ಲೀಗ್ ಆಯೋಜಿಸುತ್ತಿರುವ ದೇಶಗಳು

ಪ್ರಸ್ತುತ, ಭಾರತ (ಐಪಿಎಲ್) ದಕ್ಷಿಣ ಆಫ್ರಿಕಾ (ಎಸ್​ಎ20), ಪಾಕಿಸ್ತಾನ (ಪಿಎಸ್​ಎಲ್), ಬಾಂಗ್ಲಾದೇಶ (ಬಿಪಿಎಲ್), ವೆಸ್ಟ್ ಇಂಡೀಸ್ (ಸಿಪಿಎಲ್)ನಲ್ಲಿ ಆಯೋಜನೆಗೊಳ್ಳುತ್ತಿರುವ ಲೀಗ್‌ಗಳು ಈಗಾಗಲೇ ಯಶಸ್ವಿಯಾಗಿವೆ. ಈ ಲೀಗ್‌ಗಳು ಹೊಸ ಪ್ರತಿಭೆಗಳನ್ನು ಮುನ್ನೆಲೆಗೆ ತರುತ್ತಿವೆ, ಇದರಿಂದ ಜಾಗತಿಕ ಕ್ರಿಕೆಟ್ ಮಾರುಕಟ್ಟೆಯೂ ಬೆಳೆಯುತ್ತಿದೆ. ಈ ಹೊಸ ಲೀಗ್‌ನೊಂದಿಗೆ ಜಾಗತಿಕ ಕ್ರಿಕೆಟ್ ನಕ್ಷೆಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಲು ನ್ಯೂಜಿಲೆಂಡ್ ಆಶಿಸುತ್ತಿದೆ.ಇದೀಗ ಕಿವೀಸ್ ಲೀಗ್‌ನಲ್ಲಿ ಯಾವ ಐಪಿಎಲ್ ತಂಡದ ಮಾಲೀಕರು ತಂಡಗಳನ್ನು ಖರೀದಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ.

Source link

ಈ ರಾಶಿಯವರು ಎಪ್ರಿಲ್​​​ನಲ್ಲಿ ಯಾವ ಕಾರಣಕ್ಕೂ ಪ್ರವಾಸ ಮಾಡಬೇಡಿ: ನಿಮ್ಮ ಆರ್ಥಿಕತೆಗೆ ಬೀಳಲಿದೆ ದೊಡ್ಡ ಪೆಟ್ಟು

ಕಾಲಜ್ಞಾನ ಶಾಸ್ತ್ರದ ಪ್ರಕಾರ 2026ರ ಏಪ್ರಿಲ್ ತಿಂಗಳಲ್ಲಿ ಗ್ರಹಗತಿಗಳ ಬದಲಾವಣೆ ಹಾಗೂ ಗೋಚಾರ ಫಲಗಳ ಆಧಾರದ ಮೇಲೆ ಮೇಷ ರಾಶಿಯವರ ಭವಿಷ್ಯದ ಸಮೀಕ್ಷೆ ಇಲ್ಲಿದೆ. ಈ ತಿಂಗಳು ನಿಮಗೆ ಮಿಶ್ರ ಫಲಿತಾಂಶಗಳನ್ನು ನೀಡಲಿದ್ದು, ಕೆಲವು ಕ್ಷೇತ್ರಗಳಲ್ಲಿ ಹೆಚ್ಚಿನ ಜಾಗರೂಕತೆ ಅಗತ್ಯವಾಗಿ ಬೇಕು.

​ಉದ್ಯೋಗ ಮತ್ತು ವೃತ್ತಿ ಜೀವನ

​ಉದ್ಯೋಗ ಕ್ಷೇತ್ರದಲ್ಲಿ ಈ ತಿಂಗಳು ಸಮಾಧಾನಕರವಾದ ಪರಿಸ್ಥಿತಿ ಇರಲಿದೆ. ಶನಿಯ ಪ್ರಭಾವದಿಂದ ಕೆಲಸದಲ್ಲಿ ಹೆಚ್ಚಿನ ಒತ್ತಡ ಅಥವಾ ಜವಾಬ್ದಾರಿಗಳು ಹೆಗಲಿಗೆ ಬೀಳಬಹುದು. ಸಹೋದ್ಯೋಗಿಗಳೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡುವ ಸಾಧ್ಯತೆ ಇರುವುದರಿಂದ ತಾಳ್ಮೆಯಿಂದ ವರ್ತಿಸುವುದು ಒಳಿತು. ಹೊಸ ಉದ್ಯೋಗಕ್ಕಾಗಿ ಹುಡುಕುತ್ತಿರುವವರಿಗೆ ತಿಂಗಳ ದ್ವಿತೀಯಾರ್ಧದಲ್ಲಿ ಉತ್ತಮ ಅವಕಾಶಗಳು ದೊರೆಯಬಹುದು.

ವಿದ್ಯಾಭ್ಯಾಸ

​ವಿದ್ಯಾರ್ಥಿಗಳಿಗೆ ಈ ಸಮಯವು ಬಹಳ ಅನುಕೂಲಕರವಾಗಿದೆ. ಬುಧನ ಶುಭ ದೃಷ್ಟಿಯಿಂದ ಏಕಾಗ್ರತೆ ಹೆಚ್ಚಾಗಲಿದೆ. ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವವರಿಗೆ ಹಿರಿಯರ ಮಾರ್ಗದರ್ಶನ ಮತ್ತು ಉತ್ತಮ ಫಲಿತಾಂಶದ ಸೂಚನೆಗಳಿವೆ. ಸಂಶೋಧನೆ ಅಥವಾ ಶಾಸ್ತ್ರೀಯ ಅಧ್ಯಯನದಲ್ಲಿ ತೊಡಗಿರುವವರಿಗೆ ಹೊಸ ಆಯಾಮಗಳು ಗೋಚರಿಸಲಿವೆ.

ಹಣಕಾಸು ಮತ್ತು ಆರ್ಥಿಕ ಸ್ಥಿತಿ

​ಆರ್ಥಿಕವಾಗಿ ಈ ತಿಂಗಳು ಏರಿಳಿತಗಳಿಂದ ಕೂಡಿರುತ್ತದೆ. ಆದಾಯದ ಮೂಲಗಳು ಉತ್ತಮವಾಗಿದ್ದರೂ, ಅನಿರೀಕ್ಷಿತ ಖರ್ಚುಗಳು ಎದುರಾಗಬಹುದು. ಕೃಷಿ ಭೂಮಿ ಅಥವಾ ಆಸ್ತಿಯಿಂದ ಬರಬೇಕಾದ ಲಾಭಗಳು ಸ್ವಲ್ಪ ವಿಳಂಬವಾಗಬಹುದು. ಹೂಡಿಕೆ ಮಾಡುವ ಮುನ್ನ ಅನುಭವೀ ವ್ಯಕ್ತಿಗಳ ಸಲಹೆ ಪಡೆಯುವುದು ಉತ್ತಮ. ಲಾಟರಿ ಅಥವಾ ಶೇರ್ ಮಾರ್ಕೆಟ್‌ನಂತಹ ಸಾಹಸಗಳಿಗೆ ಕೈಹಾಕದಿರುವುದು ಸೂಕ್ತ.

ವಿವಾಹ ಮತ್ತು ಕೌಟುಂಬಿಕ ಜೀವನ

​ಕುಟುಂಬದಲ್ಲಿ ಮಂಗಳ ಕಾರ್ಯಗಳ ಬಗ್ಗೆ ಚರ್ಚೆಗಳು ನಡೆಯಲಿವೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರುವ ಸಾಧ್ಯತೆ ಹೆಚ್ಚಿದೆ. ದಾಂಪತ್ಯ ಜೀವನದಲ್ಲಿ ಪರಸ್ಪರ ಅರ್ಥೈಸಿಕೊಳ್ಳುವಿಕೆ ಹೆಚ್ಚಾಗಲಿದ್ದು, ಪತ್ನಿಯ ಬೆಂಬಲವು ನಿಮ್ಮ ಕೆಲಸ ಕಾರ್ಯಗಳಲ್ಲಿ ಸ್ಫೂರ್ತಿ ನೀಡಲಿದೆ. ಸಂಬಂಧಿಕರ ಭೇಟಿಯಿಂದ ಮನೆಯಲ್ಲಿ ಹಬ್ಬದ ವಾತಾವರಣ ಇರಲಿದೆ.

​ವಿದೇಶ ಪ್ರವಾಸ

​ವಿದೇಶ ಪ್ರವಾಸದ ಆಕಾಂಕ್ಷೆ ಹೊಂದಿರುವವರಿಗೆ ಈ ತಿಂಗಳು ಅಡೆತಡೆಗಳು ಎದುರಾಗಬಹುದು. ವೀಸಾ ಸಂಬಂಧಿತ ಕೆಲಸಗಳಲ್ಲಿ ವಿಳಂಬ ಅಥವಾ ತಾಂತ್ರಿಕ ತೊಂದರೆಗಳು ಕಾಣಿಸಿಕೊಳ್ಳಬಹುದು. ಪ್ರವಾಸಕ್ಕೆ ಯೋಜನೆ ಹಾಕಿದ್ದಲ್ಲಿ, ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿಕೊಳ್ಳಿ. ಸದ್ಯಕ್ಕೆ ದೂರದ ಪ್ರಯಾಣಕ್ಕಿಂತ ಸ್ಥಳೀಯ ಪ್ರವಾಸಗಳು ಹೆಚ್ಚು ಸುಖಕರವಾಗಿರುತ್ತವೆ.

ಸಾಲ ಮತ್ತು ಋಣ ಬಾಧೆ

​ಹಳೆಯ ಸಾಲಗಳನ್ನು ತೀರಿಸಲು ನೀವು ಪ್ರಯತ್ನ ನಡೆಸಲಿದ್ದೀರಿ. ಆದರೆ ಹೊಸದಾಗಿ ಯಾರಿಗೂ ಸಾಲ ನೀಡಬೇಡಿ ಅಥವಾ ದೊಡ್ಡ ಮೊತ್ತದ ಸಾಲಕ್ಕೆ ಸಹಿ ಹಾಕಬೇಡಿ. ಶತ್ರುಗಳ ಕಾಟ ಕಡಿಮೆಯಾಗಿದ್ದರೂ, ಹಣಕಾಸಿನ ವಿಚಾರದಲ್ಲಿ ಯಾರನ್ನೂ ಅತಿಯಾಗಿ ನಂಬುವುದು ಬೇಡ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವುದರಿಂದ ಸಾಲದ ಸುಳಿಗೆ ಸಿಲುಕುವುದನ್ನು ತಪ್ಪಿಸಬಹುದು.

​ಪ್ರತಿದಿನ ಸುಬ್ರಹ್ಮಣ್ಯ ಸ್ವಾಮಿಯ ಸ್ತೋತ್ರ ಪಠಣ, ದರ್ಶನ, ಸೇವೆ, ಆರಾಧನೆ ಮಾಡುವುದು ಹಾಗೂ ಮಂಗಳವಾರದಂದು ದೀಪ ಹಚ್ಚುವುದು ಶ್ರೇಯಸ್ಕರ.

– ಲೋಹಿತ ಹೆಬ್ಬಾರ್

Source link

ಖುಷಿಯಿಂದ ಪತ್ನಿ-ಮಗು ನೋಡಲು ತೆರಳಿದ್ದ ಗಂಡ: ವಾಪಸ್ ಮನೆಗೆ ಬಂದಾಗ ಖುಷಿಯೇ ಮಾಯ! ಆಗಿದ್ದೇನು?

ನೆಲಮಂಗಲ, ಮಾರ್ಚ್​ 23: ಬೆಂಗಳೂರು ಉತ್ತರ ತಾಲೂಕಿನ ಮಾಚೋಹಳ್ಳಿಯಲ್ಲಿ ಮನೆ ಕಳ್ಳತನವಾಗಿದ್ದು (house theft), 5 ಲಕ್ಷ ರೂ ಬೆಲೆ ಬಾಳುವ ಗ್ರಾಂ ಚಿನ್ನ, 5 ಲಕ್ಷ ರೂ ಬೆಲೆ ಬಾಳುವ 2 ಕೆಜಿ ಬೆಳ್ಳಿ ವಸ್ತು ಹಾಗೂ ನಗದು ಸೇರಿದಂತೆ 10 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಖತರ್ನಾಕ್ ಕಳ್ಳರು ದೋಚಿದ್ದಾರೆ. ನವೀನ್ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಸದ್ಯ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ಮಾಚೋಹಳ್ಳಿಯಲ್ಲಿ ನವೀನ್ ಎಂಬುವವರು ತಮ್ಮ ಪತ್ನಿ ಹಾಗೂ ತಾಯಿಯೊಂದಿಗೆ ವಾಸವಿದ್ದಾರೆ. ಪತ್ನಿ ಬಾಣಂತಿ ಆಗಿದ್ದರಿಂದ  ಕಳೆದ ಎರಡು ದಿನದ ಹಿಂದೆ ತವರು ಮನೆಗೆ ತೆರಳಿದ್ದರು. ಈ ಮಧ್ಯೆ ಮಗುವಾಗಿದೆ. ಹೀಗಾಗಿ ಹೆಂಡತಿ ಹಾಗೂ ಮಗುವನ್ನ ನೊಡಿ ಬರಲು ನವೀನ್ ತಮ್ಮ ತಾಯಿ ಜೊತೆಗೆ ತೆರಳಿದ್ದಾರೆ.

ಬರೋಬ್ಬರಿ 10 ಲಕ್ಷ ರೂ ಬೆಲೆಬಾಳುವ ಚಿನ್ನಾಭರಣ ಕಳ್ಳತನ

ಅತ್ತ ನವೀನ್​​ ಹೋಗುತ್ತಿದ್ದಂತೆ ಹೊಂಚು ಹಾಕಿ ಕುಳಿತ್ತಿದ್ದ ಖದೀಮರು ತಮ್ಮ ಕೈಚಳಕ ತೋರಿದ್ದಾರೆ. ಮನೆ ಬಾಗಿಲು ಮುರಿದು ಒಳಹೊಕ್ಕ ಕಳ್ಳರು ನಗದು ಸೇರಿದಂತೆ ಬರೋಬ್ಬರಿ 10 ಲಕ್ಷ ರೂ ಬೆಲೆಬಾಳುವ ಚಿನ್ನಾಭರಣ ಎಗರಿಸಿ ಪರಾರಿ ಆಗಿದ್ದಾರೆ. ನವೀನ್​ ತಮ್ಮ ಹೆಂಡತಿ ಊರಿಗೆ ತೆರಳಿದ 24 ಗಂಟೆಯೊಳಗೆ ಅನಾಹುತ ನಡೆದಿದೆ.

ಇದನ್ನೂ ಓದಿ: ಈಗ ಗ್ಯಾಸ್ ಸಿಲಿಂಡರ್​​ ಮೇಲೆ ಖದೀಮರ ಕಣ್ಣು: ಶಾಲೆಯಲ್ಲಿದ್ದ 6 ಸಿಲಿಂಡರ್ ಹೊತ್ತೊಯ್ದ ಕಳ್ಳರು

ಇನ್ನು ಮನೆ ಎದುರಿನ ನಿವಾಸಿ ಸಿಸಿಟಿವಿ ಮುರಿದು ಹೋಗಿರುವುದನ್ನ ಗಮನಿಸಿ ನವೀನ್​ಗೆ ಕರೆ ಮಾಡಿದ್ದಾರೆ. ಈ ವೇಳೆ ವಿಡಿಯೋಕಾಲ್ ಮೂಲಕ ನೋಡಿದಾಗ ಮನೆ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಇನ್ನು ಘಟನೆ ಸಂಬಂಧ ಅಪರಿಚಿತ ವ್ಯಕ್ತಿಗಳು ಮನೆ ಮುಂದೆ ಓಡಾಡಿರುವ ಪತ್ತೆ ಆಗಿದೆ. ಬೆಳಿಗ್ಗೆ ಮನೆ ಮುಂದೆ ಮೂವರು ಅಪರಿಚಿತ ಓಡಾಡಿದ್ದು, ರಾತ್ರಿ ಕಳ್ಳತನ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಸದ್ಯ ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲಿಸರು ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ.

ವರದಿ: ಮಂಜುನಾಥ್ ಟಿವಿನೈನ್ ನೆಲಮಂಗಲ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link