All posts by nagaraj11081993

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಯೋಗ್ಯತೆಯನ್ನು ಪರರ ಪರಿಚಯಿಸುವರು

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಯೋಗ್ಯತೆಯನ್ನು ಪರರ ಪರಿಚಯಿಸುವರು

ಮೇಷ ರಾಶಿ:

ಕೆಲವು ಜನರು ಸವಾಲಿನ ಕಾರ್ಯಗಳನ್ನು ನಿಭಾಯಿಸಲು ತೊಂದರೆಗಳನ್ನು ಎದುರಿಸಬಹುದು. ಇಂದು ನೀವು ಅಗತ್ಯ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಯೋಚಿಸುವಿರಿ. ಒಳ್ಳೆಯದನ್ನು ಸಾಧಿಸುವ ನಿಮಗೆ ಇಂದಿನ ನಿಮ್ಮ ಪ್ರಯತ್ನವು ಸಂಪೂರ್ಣವಾಗಿ ಇರಲಿ. ಉದ್ಯೋಗಕ್ಕೆ ಸೇರುವಾಗ ಅಲ್ಪದೂರದ ದೃಷ್ಟಿಯಾದರೂ ಬೇಕು. ಹೂಡಿಕೆಯತ್ತ ಗಮನಹರಿಸುವುದು ಸದ್ತಕ್ಕೆ ಬೇಡ. ದುರ್ಬಲರಿಗೆ ಅಲ್ಪ ಸಹಾಯವನ್ನು ಮಾಡುವಿರಿ. ರೂಪವು ನಿಮ್ಮ ಕೆಲವು ಕಾರ್ಯಕ್ಕೆ ಅಡ್ಡಿಯಾದೀತು.

ವೃಷಭ ರಾಶಿ :

ಸಂತೋಷಕ್ಕೆ ಅಡ್ಡಿಯಾಗುವ ಕೆಲಸವನ್ನು ಮಾಡಲಾರಿರಿ. ವ್ಯಾಪಾರ ಸಂಬಂಧಿತ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನೀವು ಗೊಂದಲಕ್ಕೆ ಒಳಗಾಗಬಹುದು. ಉದ್ಯೋಗವನ್ನು ಹುಡುಕುತ್ತಿರುವ ಜನರು ಅನಧಿಕೃತ ಜನರ ಸಂಪರ್ಕದಿಂದ ತೊಂದರೆಗಳನ್ನು ಎದುರಿಸಬೇಕಾಗಬಹುದು. ಆಪತ್ತಿಗಾಗಿ ಇಟ್ಟ ಸಂಪತ್ತಿನ ವಿನಿಯೋಗ ಮಾಡುವ ಸ್ಥಿತಿಯು ಬರುವುದು. ಏಕಾಂಗಿಯಾಗಿ ಇರುವುದನ್ನು ಇಷ್ಟಪಡುವುದು ಅನಿವಾರ್ಯವಾಗಲಿದೆ. ನಿಮ್ಮನ್ನು ಪ್ರಕಟಪಡಿಸಿಕೊಳ್ಳುವುದು ಇಷ್ಟವಿದ್ದರೂ ಸಾಧಿಸಲಾಗದು.

ಮಿಥುನ ರಾಶಿ:

ಇಂದು ಹಣಕಾಸಿನಿಂದ ಆಗುವ ಯಾವುದೇ ಅಪಾಯವನ್ನು ತೆಗೆದುಕೊಳ್ಳುವ ಮನಸ್ಸು ಮಾಡುವುದು ಬೇಡ. ಸಂಬಂಧದ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿ. ಮಕ್ಕಳ ಆರೋಗ್ಯದ ಬಗ್ಗೆ ಮನಸ್ಸು ಚಿಂತಿಸಲಿದೆ. ಅಪರಿತರು ನಿಮ್ಮನ್ನು ಪರಿಚಯ ಮಾಡಿಕೊಳ್ಳಬಹುದು. ಇಬ್ಬರ ನಡುವಿನ ಜಗಳದಲ್ಲಿ ಮಧ್ಯಸ್ತಿಕೆ ವಹಿಸುವಿರಿ. ಸಮಾರಂಭಗಳಿಗೆ ಹೋಗುವ ಸಾಧ್ಯತೆ ಇದೆ. ಸಂಗಾತಿಯ ನಡುವಿನ ಸಂಬಂಧವು ದುರ್ಬಲವಾಗಲಿದ್ದು, ಗಟ್ಟಿಯಾಗಲು ತಂತ್ರವನ್ನು ಬಳಸುವಿರಿ.

ಕರ್ಕಾಟಕ ರಾಶಿ:

ನೀವು ಕುಟುಂಬದ ಜೊತೆ ಎಲ್ಲೋ ಪ್ರಯಾಣಿಸಲು ತೀರ್ಮಾನ‌ಮಾಡಿ ಹೊರಡುವಿರಿ. ಇಂದು ಸಂಬಂಧಗಳಲ್ಲಿ ತಪ್ಪು ತಿಳುವಳಿಕೆ ಹೆಚ್ಚಾಗುತ್ತದೆ. ಉಪಕಾರದ ಸ್ಮರಣೆಯು ಅಲ್ಲಗಳೆದು ಸಂತೋಷದಿಂದ ಇರುವಿರಿ. ನಿಮ್ಮಿಂದ ಕೆಲಸವಾಗಲು ನಿಮ್ಮನ್ನು ಹೊಗಳಬಹುದು. ಧಾರ್ಮಿಕ ಕಾರ್ಯದಲ್ಲಿ ಹೆಚ್ಚಿನ ಆಸಕ್ತಿಯು ಇರುವುದು. ನೀವು ಸ್ವಾರ್ಥಿಗಳಂತೆ ಕಾಣುವಿರಿ. ಎಲ್ಲವೂ ನಿಮ್ಮದಾಗಬೇಕು ಎನ್ನುವ ಬಯಕೆ ಇರಿವುದು. ಅವಿವಾಹಿತರ ವಿವಾಹಕ್ಕೆ ಸಂಬಂಧಿಸಿದಂತೆ ಶುಭ ವಾರ್ತೆಯು ಇರಲಿದೆ.

ಸಿಂಹ ರಾಶಿ:

ಸ್ನೇಹಿತರ ಜೊತೆಗೆ ಸಮಯ ಕಳೆಯುವುದು ನಿಮಗೆ ಸಂತೋಷವಾಗಲಿದೆ. ಇಂದು ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಜಾಗರೂಕರಾಗಿರಿ. ಯಾವುದೋ ಕಾರಣಕ್ಕೆ ಕೊಟ್ಟ ಹಣ ವಾಪಾಸಾಗದು. ಚರಾಸ್ತಿಯ ಸಲುವಾಗಿ ಕಾನೂನು ಹೋರಾಟ ಮಾಡಬೇಕಾದೀತು. ನಿಮ್ಮ ದುರ್ಬಲ್ಯವು ಇನ್ನೊಬ್ಬರಿಗೆ ಆಹಾರವಾಗಬಹುದು. ನೇರವಾದ ಮಾತಿನಿಂದ ತೊಂದರೆಯಾಗಬಹುದು. ಕುಶಲತೆಯಿಂದ ಕೆಲಸವನ್ನು ಮಾಡಿ. ಹೂಡಿಕೆಯ ವ್ಯವಹಾರವು ಕೆಲವರಲ್ಲಿ ಮಾತ್ರ ಇರಲಿ.

ಕನ್ಯಾ ರಾಶಿ:

ನಿಮ್ಮ ಲಾಭವನ್ನು ಗ್ರಾಹಕರಿಂದ ಹೆಚ್ಚು ಮಾಡಿಕೊಳ್ಳುವಿರಿ. ಸಂತೋಷದ ಸಮಯವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವಿರಿ. ಹರಿದು ಹೋದ ಮನಸ್ಸುಗಳನ್ನು ಕೂಡಿಸುವುದು ಕಷ್ಟವಾದೀತು. ಜೀವನದಲ್ಲಿ ಉತ್ಸಾಹ ತುಂಬಿಕೊಳ್ಳುವ ವ್ಯಕ್ತಿಯನ್ನು ಹುಡುಕಿಕೊಳ್ಳಿ. ಸಾಮಾಜಿಕ ಕೆಲಸದಲ್ಲಿ ನೀವು ಕಳೆದುಹೋಗಬಹುದು. ದೂರದ ವಾಹನ ಚಾಲನೆಯಲ್ಲಿ ಜಾಗರೂಕತೆ ಇರಲಿ. ಮಿತ್ರರಿಗೆ ಸಹಾಯ ಮಾಡಿ ನೀವು ತೊಂದರೆಯಲ್ಲಿ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ಆಕಸ್ಮಿಕ ಧನಲಾಭವು ನಿಮಗೆ ಸ್ವಲ್ಪ ಸಮಾಧಾನಿರುವುದು.

ತುಲಾ ರಾಶಿ:

ಇಂದು ಸರಿಯಾಗಿ ಯೋಚಿಸದೆ ದುಡುಕಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಉದ್ಯಮಿಗಳು ಹೂಡಿಕೆ ಸಂಬಂಧಿತ ನಿರ್ಧಾರಗಳನ್ನು ಬಹಳ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಬೇಕು. ಹಿತಶತ್ರುಗಳಿಂದ ಹಲವು ತೊಂದರೆಗಳು ಬರಬಹುದು. ಕೃತಜ್ಞತೆ ಭಾವವನ್ನು ಪ್ರಕಟಿಸುವಿರಿ. ಹೊಗಳಿಕೆಯನ್ನು ಬಹಳ ಸಂಕೋಚದಿಂದ ಪಡೆಯುವಿರಿ. ಧಾರ್ಮಿಕ ಭಾವವು ನಿಮ್ಮಲ್ಲಿ ಜಾಗರೂಕವಾಗಬಹುದು. ಪ್ರೀತಿಯ ವಿಚಾರದಲ್ಲಿ ಬುದ್ಧಿವಾದವನ್ನು ಹೇಳುವರು. ಕೆಲವರನ್ನು ನೀವು ನಂಬಬೇಕಾಗುತ್ತದೆ.

ವೃಶ್ಚಿಕ ರಾಶಿ:

ಪರರ ರಹಸ್ಯವನ್ನು ಭೇದಿಸುವ ಕುತೂಹಲ ಇರಲಿದೆ. ಗಣ್ಯರ ಜೊತೆ ಮಾತುಕತೆ ನಡೆಸುವಿರಿ. ದೂರವಾಣಿಯ ಕರೆಯಿಂದ ನಿಮಗೆ ಆತಂಕ ಎದುರಾಗಬಹುದು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಪಡೆಯುವರು. ದೀರ್ಘಕಾಲ ಬಾಕಿ ಉಳಿದಿರುವ ಕಾರ್ಯಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಿ. ನೀವು ಇಷ್ಟಪಟ್ಟಿದ್ದನ್ನು ಕಳೆದುಕೊಳ್ಳುವ ಸಂದರ್ಭವು ಬರಬಹುದು. ಪತ್ನಿಯ ಕಡೆಯವರಿಂದ ಅಹಿತಕರವಾದ ಮಾತುಗಳು ಕೇಳಿಬರಬಹುದು.

ಧನು ರಾಶಿ:

ಇಂದಿನ ಕಾರ್ಯದಲ್ಲಿ ಜಯವನ್ನು ಗಳಿಸುವಿರಿ. ಒಂದ ಕಡೆ ನಿಂತಲ್ಲಿ ನಿಲ್ಲಲಾಗದು. ಆಸ್ತಿಯಲ್ಲಿ ಹೂಡಿಕೆ ಮಾಡುವ ಮೊದಲು ಸರಿಯಾಗಿ ಯೋಚಿಸಿ. ನಿಮ್ಮ ಮಾತನ್ನು ನಿಯಂತ್ರಿಸಿ. ಇಂದು ನೀವು ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸಬಹುದು. ಬಹಳ ದಿನಗಳ ಅನಂತರ ಉತ್ತಮ ಭೋಜನವು ಸಿಗವುದು. ಹಣಕಾಸಿಗೆ ಸಂಬಂಧಿಸಿದ ಆರೋಪದ ಬಗ್ಗೆ ಏನನ್ನೂ ನೀವು ಹೇಳಲಾರಿರಿ.

ಮಕರ ರಾಶಿ:

ಉದ್ಯೋಗಸ್ಥರು ಸವಾಲಿನ ಕೆಲಸಗಳನ್ನು ಬಹಳ ಎಚ್ಚರಿಕೆಯಿಂದ ನಿಭಾಯಿಸಬೇಕು. ನಿಮ್ಮ ವೃತ್ತಿಜೀವನದಲ್ಲಿ ಸಕಾರಾತ್ಮಕ ಮನಸ್ಥಿತಿಯೊಂದಿಗೆ ಮುನ್ನಡೆಯಿರಿ. ಚಂಚಲ ಮನಸ್ಸನ್ನು ನಿಯಂತ್ರಿಸಲು ಕಷ್ಟವಾದೀತು. ಇದರಿಂದ ಕೆಲಸದಲ್ಲಿ ಹಿನ್ನಡೆಯಾಗುವುದು. ಕೆಲವರಿಗೆ ನಿಮ್ಮ ಉಪಕಾರವು ಸಿಗುವುದು.‌ ಸಂಗಾತಿಯ ಅಸಹಜ ಮಾತುಗಳಿಂದ ನಿಮಗೆ ಕಷ್ಟವಾಗುವುದು. ನಿಮ್ಮನ್ನು ಕುಟುಂಬವು ನಿರ್ಲಕ್ಷ್ಯಿಸಿದಂತೆ ಕಾಣುವುದು. ಕುರುಡಾಗಿ ಯಾವುದನ್ನೂ ನಂಬುವುದು ಬೇಡ.

ಕುಂಭ ರಾಶಿ:

ಇಂದು ಪ್ರೀತಿಯ ಸಂಬಂಧಗಳಲ್ಲಿ ಮಾಧುರ್ಯವಿರಲಿದೆ. ಕೆಲಸದ ಜವಾಬ್ದಾರಿಗಳನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸಿ. ಇಂದು ಖರ್ಚುಗಳನ್ನು ನಿಯಂತ್ರಿಸಿ. ವ್ಯವಹಾರದಲ್ಲಿ ಆತ್ಮವಿಶ್ವಾಸದಿಂದ ಇರಿ.‌ ಭಯಪಡುವ ಅವಶ್ಯಕತೆ ಇರುವುದಿಲ್ಲ. ಸ್ಥಿರಾಸ್ತಿಯ ಖರೀದಿಯ ಯೋಗವಿದ್ದರೂ ಯೋಗವಿದೆ. ಸಲಹೆಯನ್ನು ಪಡೆದು ನಿಮ್ಮ ನಿರ್ಧಾರವನ್ನು ಮಾಡಿ. ಅನ್ಯ ಆಲೋಚನೆಯಲ್ಲಿ ದಿನವನ್ನು ಕಳೆಯುವಿರಿ. ಪಿತ್ರಾರ್ಜಿತ ಆಸ್ತಿಯ ವಿಚಾರದಲ್ಲಿ ಸಹೋದರನಿಂದ ವಂಚನೆಯಾದ ಅನುಮಾನ ಇರುವುದು.

ಮೀನ ರಾಶಿ:

ಇಂದು ವ್ಯಾಪಾರದಲ್ಲಿ ಆರ್ಥಿಕ ಲಾಭ ದೊರೆಯಲಿದೆ. ಶತ್ರುಗಳನ್ನು ನಿಮ್ಮ ಪ್ರಭಾವವನ್ನು ಬಳಸಿ ನಿಗ್ರಹ ಮಾಡುವಿರಿ ಬಿಡುವಿಲ್ಲದ ದುಡಿಮೆಯು ನಿಮಗೆ ಕಷ್ಟವಾಗಬಹುದು. ಕೃಷಿಯಲ್ಲಿ ಲಾಭ. ಆಸ್ತಿಯ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವುದು ಕಷ್ಟವಾದೀತು. ಸರ್ಕಾರದ ಕೆಲಸವು ವಿಳಂಬವಾಗಿ ನಿಮಗೆ ಬೇಸರವಾಗುವುದು. ಹೊಸ ವಾಹನ ಖರೀದಿ ಮಾಡುವುದನ್ನು ಕೈ ಬಿಡುವಿರಿ. ಸಹೋದರರ ಜೊತೆಗಿನ ಸಂಬಂಧವು ಒಂದು ಮಾತಿನಿಂದ ಹಾಳಾಗಲಿದೆ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ಚೈತ್ರ, ಸೌರ ಮಾಸ : ಮೀನ, ಮಹಾನಕ್ಷತ್ರ : ಉತ್ತರಾಭಾದ್ರ, ವಾರ : ಸೋಮ, ಪಕ್ಷ : ಶುಕ್ಲ, ತಿಥಿ : ಪಚಮೀ, ನಿತ್ಯನಕ್ಷತ್ರ : ಭರಣೀ, ಯೋಗ : ವಿಷ್ಕಂಭ, ಕರಣ : ಭದ್ರ, ಸೂರ್ಯೋದಯ – 06 – 27 am, ಸೂರ್ಯಾಸ್ತ – 06 – 34 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:59 – 09:29, ಯಮಗಂಡ ಕಾಲ 11:00 – 12:31, ಗುಳಿಕ ಕಾಲ 14:02 – 15:33

-ಲೋಹಿತ ಹೆಬ್ಬಾರ್-8762924271 (what’s app only)

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 23ರ ದಿನಭವಿಷ್ಯ

ಮದುವೆ- ಪ್ರೀತಿ, ಪ್ರೇಮದ ವಿಚಾರಗಳನ್ನು ಮಾತನಾಡುತ್ತೀರಿ ಎಂದಾದಲ್ಲಿ ಈ ದಿನ ಹಳದಿ ಬಣ್ಣದ ಬಟ್ಟೆ ಧರಿಸಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ಯಾರು ಉದ್ಯೋಗಕ್ಕೆ ಸಂಬಂಧಿಸಿದಂಥ ಪರೀಕ್ಷೆಗಳನ್ನು ಬರೆದಿರುತ್ತಾರೋ ಅಂಥವರಿಗೆ ಶುಭ ಸುದ್ದಿ ಕೇಳುವಂಥ ಯೋಗ ಇದೆ. ಮದುವೆಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಸಂಬಂಧಿಕರ ಮುಖಾಂತರ ರೆಫರೆನ್ಸ್ ಗಳು ಬರಬಹುದು. ಇದು ನಿಮ್ಮ ಮನಸ್ಸಿಗೆ ಒಪ್ಪುವ ಸಾಧ‌್ಯತೆಗಳು ಸಹ ಹೆಚ್ಚಿವೆ. ಕೊನೆ ಕ್ಷಣದಲ್ಲಿ ನಿರ್ಧಾರಗಳಲ್ಲಿ ಬಹಳ ಏರುಪೇರು ಮಾಡಲಿದ್ದೀರಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಪ್ರೀತಿ- ಪ್ರೇಮದಲ್ಲಿ ಅಂದುಕೊಳ್ಳದ ಕೆಲವು ಬೆಳವಣಿಗೆಗಳು ನಡೆಯಲಿವೆ. ಈ ಹಿಂದೆ ಆಗಿದ್ದ ಕೆಲವು ಘಟನೆಗಳಿಂದಾಗಿ ಯಾರದೋ ಮಾತು, ಟೀಕೆ, ಆಕ್ಷೇಪಗಳಿಗೆ ಇಡೀ ದಿನ ತಲೆ ಕೆಡಿಸಿಕೊಳ್ಳುವಂತಾಗುತ್ತದೆ. ಯಾರೇ ನಿಮ್ಮ ಕೆಲಸದ ಬಗ್ಗೆ ಆಕ್ಷೇಪ ಹೇಳಿದರೂ ಅದನ್ನು ತೋರಿಸುವಂತೆ ನಯವಾಗಿಯೇ ಕೇಳಿ. ಹಾಗೂ ಅವರು ನಿಜವಾಗಿಯೂ ತಪ್ಪುಗಳನ್ನು ತೋರಿಸಿದ್ದೇ ಆದಲ್ಲಿ ತಿದ್ದುಕೊಳ್ಳುವುದಕ್ಕೆ ಪ್ರಯತ್ನಿಸಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ತಂದೆ- ತಾಯಿಯ ಆರೋಗ್ಯದಲ್ಲಿ ಏನಾದರೂ ಸಮಸ್ಯೆಗಳು ಏನಾದರೂ ಇದ್ದಲ್ಲಿ ಪರಿಣತ- ತಜ್ಞ ವೈದ್ಯರ ನೆರವು ನಿಮ್ಮ ಪಾಲಿಗೆ ದೊರೆಯಲಿದೆ. ಆತಂಕಗಳು ದೂರವಾಗುವುದಕ್ಕೆ ಹಿರಿಯರು ಸಹಕಾರ ನೀಡಲಿದ್ದಾರೆ. ನಿಮ್ಮ ಅದೃಷ್ಟವು ಈ ದಿನ ಅಚ್ಚರಿಯ ರೀತಿಯಲ್ಲಿ ಕೆಲಸ ಮಾಡುತ್ತದೆ. ಈ ಹಿಂದೆ ಯಾವಾಗಲೋ ಮಾಡಿದ ಕೆಲಸಕ್ಕೆ ಮೆಚ್ಚುಗೆ ಎಂಬಂತೆ ಅದೇ ಕೆಲಸಕ್ಕೆ ಸಂಬಂಧಿಸಿದವರು ಹುಡುಕಿಕೊಂಡು ಬಂದು, ನಿಮಗೆ ಕೆಲಸಗಳನ್ನು ಒಪ್ಪಿಸುವ ಸಾಧ್ಯತೆ ಇದೆ.

ಲೇಖನ- ಸ್ವಾತಿ ಎನ್.ಕೆ.

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 23ರ ದಿನಭವಿಷ್ಯ

ಮನೆಯಲ್ಲಿ ಹಿರಿಯರು ಅನಾರೋಗ್ಯದಿಂದ ಇದ್ದಲ್ಲಿ ಅವರ ಆರೋಗ್ಯ ಚೇತರಿಕೆಗಾಗಿ ಧನ್ವಂತರಿ ಮಂತ್ರ ಪಠಿಸಿ ಅಥವಾ ಶಿವಲಿಂಗಕ್ಕೆ ಜಲಾಭಿಷೇಕ ಮಾಡಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಸಣ್ಣ- ಪುಟ್ಟದಾದರೂ ಮನೆ ಮಟ್ಟಿಗೆ ಕಾರ್ಯಕ್ರಮ ಆಯೋಜಿಸುವಂಥ ಸಾಧ್ಯತೆ ಇದೆ. ತಂದೆ ಅಥವಾ ತಂದೆ ಸಮಾನರಾದವರ ಆರೋಗ್ಯ ಸ್ಥಿತಿ ಸ್ವಲ್ಪ ಆತಂಕಕ್ಕೆ ಕಾರಣ ಆಗಬಹುದು. ನಿಮ್ಮೆಲ್ಲ ಪ್ರಯತ್ನವನ್ನು ಮಾಡಿದ ನಂತರದಲ್ಲಿಯೂ ಒಬ್ಬರೇ ವ್ಯಕ್ತಿ, ಒಂದೇ ವಿಷಯ, ಒಂದು ವಸ್ತು ನಿಮ್ಮನ್ನು ಈ ದಿನ ಬಹುವಾಗಿ ಕಾಡಬಹುದು.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಒಂದು ವೇಳೆ ಆಸ್ತಿ ಅಥವಾ ವಾಹನ ಮಾರಾಟಕ್ಕೆ ಇಟ್ಟಿದ್ದಲ್ಲಿ ಇವುಗಳಿಗೆ ಸಂಬಂಧಿಸಿದಂತೆ ಯಾವುದೇ ಮಾತುಕತೆಯನ್ನು ಇದೊಂದು ದಿನದ ಮಟ್ಟಿಗೆ ಮಾಡಬೇಡಿ. ನಿಮ್ಮ ಬಳಿ ಇರುವ ಹಣಕ್ಕೆ ತಕ್ಕಂತೆ ಪ್ರಾಜೆಕ್ಟ್ ವೊಂದು ಹುಡುಕಿಕೊಂಡು ಬರುವಂಥ ಸಾಧ್ಯತೆಗಳಿವೆ. ಉದಾಹರಣೆಗೆ, ಇಷ್ಟೇ ಮೊತ್ತಕ್ಕೆ ಅಪಾರ್ಟ್ ಮೆಂಟ್ ಅಥವಾ ಸೈಟು ಅಥವಾ ವಾಹನ ಹೀಗೆ ನಿಮಗೆ ದೊರೆಯುವ ಸಾಧ್ಯತೆಗಳಿವೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಮನ ಮುಟ್ಟುವಂತೆ ಎಲ್ಲ ವಿಚಾರಗಳನ್ನು ಇತರರಿಗೆ ದಾಟಿಸುವುದಕ್ಕೆ ಸಫಲರಾಗಲಿದ್ದೀರಿ. ಮುಂದಾಲೋಚನೆಯಿಂದ ಲೆಕ್ಕ ಹಾಕಿಕೊಂಡು ಇಟ್ಟ ಹೆಜ್ಜೆಗಳು ಫಲ ನೀಡಲಿವೆ. ಯಾರು ಬದ್ಧತೆಯಿಂದ ನಿಮ್ಮ ಸಲಹೆ- ಸೂಚನೆಯನ್ನು ಅನುಸರಿಸಿದವರಿಗೆ ದೊಡ್ಡ ಲಾಭವಾಗುವ ಸಾಧ್ಯತೆಗಳಿವೆ. ಇತರರು ತಮ್ಮಿಂದ ಪೂರ್ತಿ ಮಾಡಲು ಸಾಧ್ಯವಿಲ್ಲ ಎಂದು ಅರ್ಧಕ್ಕೇ ನಿಲ್ಲಿಸಿದ ಕೆಲಸವೊಂದನ್ನು ಪೂರ್ತಿ ಮಾಡಬೇಕಾದ ಜವಾಬ್ದಾರಿ ನಿಮಗೆ ಬರಲಿದೆ.

ಲೇಖನ- ಸ್ವಾತಿ ಎನ್.ಕೆ.

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 23ರ ದಿನಭವಿಷ್ಯ

ನಿಮ್ಮಲ್ಲಿ ಯಾರು ಆಸ್ತ೦- ಮನೆ ಮೊದಲಾದ ಖರೀದಿಗೆ ಪ್ರಯತ್ನ ಮಾಡುತ್ತಾ ಇದ್ದೀರಿ ಅಂಥವರು ಬೆಲ್ಲವನ್ನು ದಾನ ಮಾಡಿ. ಇದರಿಂದ ನಿಮ್ಮ ಮನಸಿಗೆ ಒಪ್ಪುವಂಥದ್ದು ಆಸ್ತಿ- ಮನೆ ದೊರೆಯಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಜತೆಗೆ ಕೆಲಸ ಮಾಡುವವರು ನಿಮ್ಮ ಸಾಮರ್ಥ್ಯದ ಬಗ್ಗೆ ಅಚ್ಚರಿ ವ್ಯಕ್ತಪಡಿಸಲಿದ್ದಾರೆ. ನಿಮ್ಮಲ್ಲಿ ಯಾರು ಸೈಟು, ಮನೆ ಅಥವಾ ಅಪಾರ್ಟ್ ಮೆಂಟ್ ಖರೀದಿ ಮಾಡುವ ಸಲುವಾಗಿ ಪ್ರಯತ್ನವನ್ನು ಮಾಡುತ್ತಿದ್ದೀರಿ ಅಂಥವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯುವ ಯೋಗ ಇದೆ. ಯಾವುದೇ ಮುಖ್ಯ ಕೆಲಸದ ಮೇಲೆ ಮನೆಯಿಂದ ಹೊರಗೆ ಹೋಗುವಾಗ ಮನೆ ದೇವರನ್ನು ಮನಸ್ಸಲ್ಲಿ ಸ್ಮರಿಸಿಕೊಳ್ಳಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಬಜೆಟ್ ನಲ್ಲಿಯೇ ಕೆಲಸ- ಕಾರ್ಯಗಳನ್ನು ಮುಗಿಸಿಕೊಳ್ಳಬೇಕು ಎಂಬ ಲೆಕ್ಕಾಚಾರ ನಿಮ್ಮಲ್ಲಿ ಇರಲಿದೆ. ಕುಟುಂಬ ಸದಸ್ಯರ ಅಗತ್ಯಗಳಿಗೆ ಕೆಲಬು ವಸ್ತುಗಳನ್ನು ಕೊಳ್ಳಬೇಕು ಎಂಬ ತೀರ್ಮಾನ ಮಾಡಲಿದ್ದೀರಿ. ಹೊಸ ವಾಹನ ಖರೀದಿಗೆ ನಿರ್ಧಾರ ಮಾಡುವ ಸಾಧ್ಯತೆ ಇದೆ. ಇನ್ನು ನಿಮ್ಮಲ್ಲಿ ಕೆಲವರು ಅಚ್ಚರಿಯ ರೀತಿಯಲ್ಲಿ ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಖರೀದಿಯೇ ಮಾಡಿಬಿಡುವ ಅವಕಾಶಗಳು ಸಹ ಹೆಚ್ಚಿವೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಈ ದಿನ ನಿಮ್ಮ ಸಾಮಾಜಿಕ ಸ್ಥಾನ- ಮಾನಗಳು ವೃದ್ಧಿಯಾಗುವ ಸಾಧ್ಯತೆಗಳು ಹೆಚ್ಚಿವೆ. ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ಮನೆಯಿಂದ ದೂರ ಇದ್ದು, ವ್ಯಾಸಂಗ ಮಾಡಬೇಕಾದ ಸನ್ನಿವೇಶ ಸೃಷ್ಟಿ ಆಗಬಹುದು. ಆದರೆ ಇದರಿಂದ ನಿಮಗೆ ಅನುಕೂಲವೇ ಆಗಲಿದೆ. ಲ್ಯಾಪ್ ಟಾಪ್, ಟ್ಯಾಬ್ಲೆಟ್ ಇಂಥವನ್ನು ಖರೀದಿ ಮಾಡುವಂಥ ಯೋಗ ನಿಮ್ಮ ಪಾಲಿಗೆ ಇದೆ.

ಲೇಖನ- ಸ್ವಾತಿ ಎನ್.ಕೆ.

Source link

ಬೆಂಗಳೂರಿಗೆ ತೆರಳುತ್ತಿದ್ದ ಮಾರ್ಗ ಮಧ್ಯೆ ಸಚಿವ ಶಿವರಾಜ್ ತಂಗಡಗಿಗೆ ಎದೆ ನೋವು, ಆಸ್ಪತ್ರೆಗೆ ದಾಖಲು

ತುಮಕೂರು, (ಮಾರ್ಚ್ 22): ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ (Shivaraj Tangadagi) ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು (ಮಾರ್ಚ್ 22) ಉಸ್ತುವಾರಿ ಜಿಲ್ಲೆ ಕೊಪ್ಪಳದಿಂದ ಬೆಂಗಳೂರಿಗೆ ತೆರಳುತ್ತಿದ್ದಾಗ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದೆ. ಶಿರಾ ದಾಟಿ ಕೋರ ಬಳಿ ಬರುವಾಗ ಎದೆನೋವು ಶುರುವಾಗಿದೆ. ಹೀಗಾಗಿ ಕೂಡಲೇ ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ಸಚಿವ ಶಿವರಾಜ್ ತಂಗಡಗಿ ಅವರನ್ನು ದಾಖಲಿಸಲಾಗಿದೆ.

ಕನಕಗಿರಿ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಮುಗಿಸಿ ಇಂದು (ಮಾರ್ಚ್ 22) ವಾಪಸ್ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಸಿದ್ದಗಂಗಾ ಆಸ್ಪತ್ರೆಗೆ ದಾಖಲಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಇಕೋ ಟೆಸ್ಟ್ ಸೇರಿದಂತೆ ಹೃದಯ ಸಂಬಂಧಿತ ತಪಾಸಣೆ ಮಾಡಲಾಗಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಆಸ್ಪತ್ರೆಗೆ ತುಮಕೂರು ಎಸ್ಪಿ ಅಶೋಕ್, ಡಿವೈಎಸ್ಪಿ ಚಂದ್ರಶೇಖರ್ ದೌಡಾಯಿಸಿದ್ದು, ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದ ವೈದ್ಯರು ತಿಳಿಸಿದ್ದಾರೆ.

ಶಿವರಾಜ್ ತಂಗಡಗಿ ಹೊಸಪೇಟೆಯಿಂದ ಬೆಂಗಳೂರಿಗೆ ತಮ್ಮ ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ತುಮಕೂರಿನ ಬಳಿ ಮಾರ್ಗ ಮಧ್ಯೆ ಅವರು ದಿಢೀರ್ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ತಕ್ಷಣವೇ ಅವರನ್ನು ತುಮಕೂರಿನ ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಯ್ತು. ಈ ವೇಳೆ ತಪಾಸಣೆ ಮಾಡಿದ ವೈದ್ಯರು, ಇದು ಗ್ಯಾಸ್ಟ್ರಿಕ್ ಎಂದು ಹೇಳಿದ್ದಾರೆ. ಹೀಗಾಗಿ ಎಲ್ಲಾ ಪರೀಕ್ಷೆ ಮುಗಿಸಿಕೊಂಡು ಬೆಂಗಳೂರಿನತ್ತ ಹೊರಟರು.

Source link

‘ಧುರಂಧರ್ 2’ ವಿರುದ್ಧ ‘ಉಸ್ತಾದ್ ಭಗತ್ ಸಿಂಗ್’ ಬಾಕ್ಸ್ ಆಫೀಸ್ ಹರಸಾಹಸ

ಧುರಂಧರ್ 2’ (Dhurandhar 2 ಸಿನಿಮಾ ಬಿಡುಗಡೆ ಆದ ಮೂರೇ ದಿನಕ್ಕೆ 300 ಕೋಟಿಗೂ ಹೆಚ್ಚು ಮೊತ್ತ ಗಳಿಸಿದ್ದು, ಬಾಕ್ಸ್ ಆಫೀಸ್​​ನಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಾ ಸಾಗುತ್ತಿದೆ. ಇದನ್ನು ಮೊದಲೇ ಊಹಿಸಿದ್ದ ಕೆಲ ಸಿನಿಮಾಗಳು ‘ಧುರಂಧರ್ 2’ ಸಿನಿಮಾ ಜೊತೆಗಿನ ಸ್ಪರ್ಧೆಯನ್ನು ತಪ್ಪಿಸಿಕೊಂಡವು. ಆದರೆ ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಚಿತ್ರತಂಡ ‘ಧುರಂಧರ್ 2’ ಸಿನಿಮಾವನ್ನು ಸರಿಯಾಗಿ ಅಂದಾಜಿಸದೆ ಅದರ ಎದುರು ಬಿಡುಗಡೆ ಮಾಡಿತು. ಆದರೆ ಈಗ ಬಾಕ್ಸ್ ಆಫೀಸ್​​ನಲ್ಲಿ ಏದುಸಿರು ಬಿಡುತ್ತಿದೆ. ಆದರೆ ಸಂಪೂರ್ಣ ಸೋಲೊಪ್ಪಿಕೊಂಡಿಲ್ಲ.

ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ನಿರ್ದೇಶಕ ಹರೀಶ್ ಶಂಕರ್ ಕಾಂಬಿನೇಷನ್‌ನ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಮಾರ್ಚ್ 26ಕ್ಕೆ ಬಿಡುಗಡೆ ಆಗಬೇಕಿತ್ತು. ಆದರೆ ‘ಟಾಕ್ಸಿಕ್’ ರಿಲೀಸ್ ಪೋಸ್ಟ್ ಪೋನ್ ಆದ ಕಾರಣ ಆ ಸ್ಥಾನಕ್ಕೆ ಮುಂಬಡ್ತಿ ಪಡೆದುಕೊಂಡು ‘ಧುರಂಧರ್ 2’ ಸಿನಿಮಾದ ಎದುರು ಮಾರ್ಚ್ 19ರಂದೇ ಬಿಡುಗಡೆ ಆಯ್ತು. ಆದರೆ ಇದರಿಂದ ಮೊದಲ ದಿನದಿಂದಲೂ ಸಿನಿಮಾಕ್ಕೆ ನಷ್ಟ ಆಗುತ್ತಲೇ ಇದೆ. ‘ಧುರಂಧರ್ 2’ ಸಿನಿಮಾದಿಂದಾಗಿ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಕ್ಕೆ ಪ್ರೀಮಿಯರ್ ಶೋಗಳು ಸಿಗಲಿಲ್ಲ. ಇದರಿಂದ ಭಾರಿ ನಷ್ಟವಾಯ್ತು. ಬಿಡುಗಡೆಯ ಬಳಿಕೆ ಬಾಕ್ಸ್ ಆಫೀಸ್​​ನಲ್ಲೂ ಸಹ ಹಿನ್ನಡೆ ಉಂಟಾಗಿದೆ.

ಈ ಭಾನುವಾರಕ್ಕೆ ಸಿನಿಮಾ ಬಿಡುಗಡೆ ಆಗಿ ನಾಲ್ಕು ದಿನಗಳಾಗಿದೆ. ಭಾನುವಾರ ಭಾರತದ ಬಾಕ್ಸ್ ಆಫೀಸ್​​ನಲ್ಲಿ ‘ಉಸ್ತಾದ್ ಭಗತ್ ಸಿಂಗ್’ ಗಳಿಸಿದ್ದು 6.59 ಕೋಟಿ ರೂಪಾಯಿ ಮಾತ್ರ. ಇದರೊಂದಿಗೆ ನಾಲ್ಕು ದಿನಗಳ ಒಟ್ಟು ಭಾರತದ ನೆಟ್ ಕಲೆಕ್ಷನ್ 59.39 ಕೋಟಿ ರೂಪಾಯಿಗೆ ತಲುಪಿದೆ. ಪವನ್ ಸಿನಿಮಾಕ್ಕೆ ಇದು ದೊಡ್ಡ ಮೊತ್ತವಲ್ಲ. ವಾರದ ರಜೆ ಇದ್ದರೂ ಚಿತ್ರದ ಗಳಿಕೆಯಲ್ಲಿ ಹೆಚ್ಚಿನ ಏರಿಕೆ ಕಂಡುಬಂದಿಲ್ಲದಿರುವುದು ‘ಧುರಂಧರ್ 2’ ಎಫೆಕ್ಟ್ ಅನ್ನು ತೋರಿಸುತ್ತಿದೆ.

ಇದನ್ನೂ ಓದಿ:‘ಧುರಂಧರ್ 2’ ಕತೆ ನಡೆಯುವುದು ಪಾಕಿಸ್ತಾನದಲ್ಲಿ, ಆದರೆ ಚಿತ್ರೀಕರಣ ಆಗಿದ್ದೆಲ್ಲಿ?

ಪವನ್ ಕಲ್ಯಾಣ್ ಅವರ ಕಳೆದ ವರ್ಷದ ಹಿಟ್ ಚಿತ್ರಗಳಾದ ‘OG’ ಮೊದಲ ದಿನವೇ 60 ಕೋಟಿಗೂ ಅಧಿಕ ಮೊತ್ತ ಕಲೆ ಹಾಕಿತ್ತು. ಅದಕ್ಕೂ ಮುಂಚೆ ಬಿಡುಗಡೆ ಆಗಿದ್ದ ಬಹಳ ಸಾಧಾರಣ ಸಿನಿಮಾ ಆಗಿದ್ದ ‘ಹರಿ ಹರ ವೀರ ಮಲ್ಲು’ ಕಲೆಕ್ಷನ್ ಸಹ ಇದಕ್ಕಿಂತ ಉತ್ತಮವಾಗಿತ್ತು. ಆ ಎರಡು ಸಿನಿಮಾಗಳಿಗೆ ಹೋಲಿಸಿದರೆ ‘ಉಸ್ತಾದ್ ಭಗತ್ ಸಿಂಗ್’ ಅತ್ಯಂತ ನಿಧಾನಗತಿಯಲ್ಲಿ ಸಾಗುತ್ತಿದೆ.

ಮೂರು ದಿನಗಳ ಅಂತ್ಯಕ್ಕೆ ಚಿತ್ರವು ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ 71.67 ಕೋಟಿ ರೂ. ಕಲೆಕ್ಷನ್ ಮಾಡಿದೆ. ಇದರಲ್ಲಿ ವಿದೇಶಿ ಮಾರುಕಟ್ಟೆಯಿಂದ ಸುಮಾರು 9.25 ಕೋಟಿ ರೂ. ಬಂದಿದೆ. ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2’ ಸಿನಿಮಾ ತೆಲುಗು ರಾಜ್ಯಗಳಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ವಿಶೇಷವೆಂದರೆ, ಹೈದರಾಬಾದ್‌ನಂತಹ ನಗರ ಪ್ರದೇಶಗಳಲ್ಲಿ ‘ಉಸ್ತಾದ್ ಭಗತ್ ಸಿಂಗ್’ಗಿಂತ ‘ಧುರಂಧರ್ 2’ ಚಿತ್ರಕ್ಕೇ ಹೆಚ್ಚಿನ ಜನರು ಆಕರ್ಷಿತರಾಗುತ್ತಿದ್ದಾರೆ.

‘ಉಸ್ತಾದ್ ಭಗತ ಸಿಂಗ್’ ಸಿನಿಮಾದ ಒಟ್ಟು ಬಜೆಟ್ ಸುಮಾರು 150 ಕೋಟಿ ರೂ. ಎನ್ನಲಾಗಿದ್ದು, ಚಿತ್ರವು ಲಾಭದಾಯಕ ಎನಿಸಿಕೊಳ್ಳಲು ಕನಿಷ್ಠ 200 ಕೋಟಿ ರೂ. ಕಲೆಕ್ಷನ್ ಮಾಡಬೇಕಿದೆ. ಪ್ರಸ್ತುತ ಇರುವ ಮಿಶ್ರ ಪ್ರತಿಕ್ರಿಯೆ ಮತ್ತು ‘ಧುರಂಧರ್ 2’ ಹವಾ ನೋಡಿದರೆ, ಈ ಗುರಿಯನ್ನು ಮುಟ್ಟುವುದು ಚಿತ್ರತಂಡಕ್ಕೆ ದೊಡ್ಡ ಸವಾಲಾಗಿದೆ. ನಿರ್ದೇಶಕ ಹರೀಶ್ ಶಂಕರ್ ಅವರು ಈ ಹಿಂದೆ ‘ಗಬ್ಬರ್ ಸಿಂಗ್’ ಮೂಲಕ ನೀಡಿದ್ದ ಮ್ಯಾಜಿಕ್ ಈ ಬಾರಿ ಮರುಕಳಿಸಿಲ್ಲ ಎಂಬುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IPL: ಸತತ ಗೆಲುವು.. ಆರ್​ಸಿಬಿಯ ಈ ಐತಿಹಾಸಿಕ ದಾಖಲೆಯನ್ನು ಮುರಿಯುವವರ್ಯಾರು?

ಸತತ 18 ವರ್ಷಗಳ ಕಾಯುವಿಕೆಯ ಬಳಿಕ 2025 ರ ಐಪಿಎಲ್‌ನಲ್ಲಿ (IPL 2025) ಫೈನಲ್ ಪಂದ್ಯವನ್ನು ಗೆದ್ದು ಮೊದಲ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಕಳೆದ ಆವೃತ್ತಿಯ ಯಶಸ್ಸನ್ನು ಪುನರಾವರ್ತಿಸುವ ಇರಾದೆಯಲ್ಲಿದೆ. ರಜತ್ ಪಾಟಿದಾರ್ ನಾಯಕತ್ವದಲ್ಲಿ ಹೆಚ್ಚು ಸಮತೋಲನದಿಂದ ಕೂಡಿರುವ ಆರ್​ಸಿಬಿ ಈ ಬಾರಿಯೂ ಕಪ್ ಗೆಲ್ಲುವ ಫೆವರೇಟ್ ತಂಡ ಎನಿಸಿಕೊಂಡಿದೆ. ಅದರಲ್ಲೂ ಕಳೆದ ಬಾರಿಯಂತೆ ಈ ಬಾರಿಯೂ ಆರ್​ಸಿಬಿ ತಂಡ ತವರಿನ ಹೊರಗೆ ತನ್ನ ವಿಕ್ರಮವನ್ನು ಮುಂದುವರೆಸಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.

ಆರ್‌ಸಿಬಿ ಹೆಸರಿನಲ್ಲಿದೆ ಅಪರೂಪದ ದಾಖಲೆ

ಕಳೆದ ಆವೃತ್ತಿಯಲ್ಲಿ ಆರ್​ಸಿಬಿ ಮಾಡಿದ ಕೆಲಸವನ್ನು ಕಳೆದ 18 ಆವೃತ್ತಿಗಳಲ್ಲಿ ಬೇರೆ ಯಾವ ತಂಡಕ್ಕೂ ಮಾಡಲು ಸಾಧ್ಯವಾಗಿಲ್ಲ. ಐದು ಬಾರಿ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್‌ನಂತಹ ತಂಡಗಳಿಗೂ ಸಹ ಈ ಮೈಲಿಗಲ್ಲನ್ನು ಸಾಧಿಸಲು ಸಾಧ್ಯವಾಗಿಲ್ಲ. ವಾಸ್ತವವಾಗಿ ಕಳೆದ ಆವೃತ್ತಿಯಲ್ಲಿ ಲೀಗ್ ಹಂತದಲ್ಲಿ ತವರಿನ ಹೊರಗೆ ಆಡಿದ ಎಲ್ಲಾ ಏಳು ಪಂದ್ಯಗಳನ್ನು ಗೆದ್ದ ಸಾಧನೆಯನ್ನು ಆರ್​ಸಿಬಿ ಮಾಡಿತ್ತು. ಇದು ಐಪಿಎಲ್ ಇತಿಹಾಸದಲ್ಲಿ ಯಾವುದೇ ತಂಡವು ಸಾಧಿಸದ ವಿಶೇಷ ದಾಖಲೆಯಾಗಿದೆ.

ಸತತ 7 ಗೆಲುವು

ಕೆಕೆಆರ್ ವಿರುದ್ಧದ ಮೊದಲ ತವರಿನ ಹೊರಗಿನ ಪಂದ್ಯವನ್ನು 7 ವಿಕೆಟ್​ಗಳಿಂದ ಗೆದ್ದಿದ್ದ ಆರ್​ಸಿಬಿ, ಆ ನಂತರ ಸಿಎಸ್​ಕೆ ತಂಡವನ್ನು 50 ರನ್​ಗಳಿಂದ ಸೋಲಿಸಿತ್ತು. ತವರಿನ ಹೊರಗಿನ ಮೂರನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 12 ರನ್​ಗಳಿಂದ ಗೆದ್ದಿದ್ದ ಆರ್​ಸಿಬಿ, 4 ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು 9 ವಿಕೆಟ್​ಗಳಿಂದ ಸೋಲಿಸಿತ್ತು. ಆ ನಂತರ ಐದನೇ ಪಂದ್ಯದಲ್ಲಿ 7 ವಿಕೆಟ್​ಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿದ್ದ ಆರ್​ಸಿಬಿ, 6ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 6 ವಿಕೆಟ್​ಗಳಿಂದ ಸೋಲಿಸಿತ್ತು. ಅಂತಿಮವಾಗಿ 7ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು 6 ವಿಕೆಟ್​ಗಳಿಂದ ಮಣಿಸಿತ್ತು.

ಐಪಿಎಲ್ ಟ್ರೋಫಿ ಗೆಲುವಿನ ಬಗ್ಗೆ ಮನದಾಳ ತೆರೆದಿಟ್ಟ ವಿರಾಟ್ ಕೊಹ್ಲಿ

ಈ ಸತತ 7 ಗೆಲುವುಗಳು ಆರ್‌ಸಿಬಿ ಪ್ಲೇಆಫ್‌ಗೆ ಅರ್ಹತೆ ಪಡೆಯಲು ಮತ್ತು ಪಾಯಿಂಟ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆಯಲು ಸಹಾಯ ಮಾಡಿತು. ಒಟ್ಟಾರೆಯಾಗಿ, ಆರ್‌ಸಿಬಿ ಐಪಿಎಲ್ 2025 ರಲ್ಲಿ ತಮ್ಮ ತವರು ಮೈದಾನವಾದ ಎಂ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಹೊರಗೆ ಒಂಬತ್ತು ಪಂದ್ಯಗಳನ್ನು ಗೆದ್ದಿತು, ಇದರಲ್ಲಿ ಏಳು ಲೀಗ್ ಪಂದ್ಯಗಳು, ಒಂದು ಅರ್ಹತಾ ಸುತ್ತಿನ ಪಂದ್ಯ ಮತ್ತು ಫೈನಲ್ ಕೂಡ ಸೇರಿದೆ. ಇದು ಐಪಿಎಲ್ ಇತಿಹಾಸದಲ್ಲಿ ಒಂದು ದಾಖಲೆಯಾಗಿದೆ. ಆರ್‌ಸಿಬಿ ಅಥವಾ ಯಾವುದೇ ಇತರ ತಂಡವು ಈ ಆವೃತ್ತಿಯಲ್ಲಿ ಈ ದಾಖಲೆಯನ್ನು ಪುನರಾವರ್ತಿಸಬಹುದೇ ಎಂದು ಕಾದು ನೋಡಬೇಕಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೋದಿ ನೇತೃತ್ವದಲ್ಲಿ ಮಹತ್ವದ ಸಭೆಯಲ್ಲಿ ನಾಗರಿಕರ ಹಿತರಕ್ಷಣೆ ಮೊದಲ ಆದ್ಯತೆ

ನವದೆಹಲಿ, (ಮಾರ್ಚ್ 22): ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಯುದ್ಧ ಸದೃಶ್ಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಮಾರ್ಚ್ 22)  ಭದ್ರತಾ ಸಂಪುಟ ಸಮಿತಿಯ ಮಹತ್ವದ ಸಭೆ ನಡೆಸಿದರು. ಅಲ್ಪಾವಧಿ ಹಾಗೂ ದೀರ್ಘಾವಧಿ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಿದ್ದು, ಸಚಿವರು, ಕಾರ್ಯದರ್ಶಿಗಳ ಸಮಿತಿ ರಚನೆಗೆ ಮೋದಿ ಸೂಚನೆ ನೀಡಿದ್ದಾರೆ. ಅಲ್ಲದೇ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರಿಕೆ ನೀಡಿದ್ದಾರೆ. ಹಾಗೇ ಮುಂಗಾರು ಹಂಗಾಮಿನ ರಸಗೊಬ್ಬರದ ಲಭ್ಯತೆ ಬಗ್ಗೆ ಪ್ರಧಾನಿ ಚರ್ಚೆ ಮಾಡಿದ್ದು, ರೈತರಿಗೆ ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯವಾಗಬಾರದು. ತೈಲ, ಇಂಧನ ಹಾಗೂ ವಿದ್ಯುತ್ ಸುರಕ್ಷತೆಯ ಬಗ್ಗೆ ತೀವ್ರ ನಿಗಾ ವಹಿಸುವಂತೆ ಸೂಚಿಸಿದ್ದಾರೆ.

ದೇಶದಲ್ಲಿ ವಿದ್ಯುತ್ ಅಭಾವ ಉಂಟಾಗದಂತೆ ನೋಡಿಕೊಳ್ಳಲು ಎಲ್ಲ ವಿದ್ಯುತ್ ಸ್ಥಾವರಗಳಲ್ಲಿ ಪೂರೈಕೆಗೆ ಅಗತ್ಯವಿರುವಷ್ಟು ಕಲ್ಲಿದ್ದಲು ದಾಸ್ತಾನು ಇರುವುದನ್ನು ಖಚಿತಪಡಿಸಿಕೊಳ್ಳಲು ನಿರ್ಧರಿಸಲಾಗಿದೆ. ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಸರ್ಕಾರ ಸರ್ವ ಸನ್ನದ್ಧವಾಗಿದೆ. ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ಸ್ ಸೇರಿದಂತೆ ವಿವಿಧ ಕೈಗಾರಿಕಾ ವಲಯಗಳಿಗೆ ಅಗತ್ಯವಿರುವ ಕಚ್ಚಾ ವಸ್ತುಗಳ ಆಮದನ್ನು ಕೇವಲ ಒಂದು ಪ್ರದೇಶಕ್ಕೆ ಸೀಮಿತಗೊಳಿಸದೆ, ಪರ್ಯಾಯ ದೇಶಗಳಿಂದ ಆಮದು ಮಾಡಿಕೊಳ್ಳುವ ಬಗ್ಗೆ ಚರ್ಚಿಸಲಾಗಿದೆ. ಹಾಗೆಯೇ ಭಾರತೀಯ ಉತ್ಪನ್ನಗಳ ರಫ್ತಿಗೆ ಹೊಸ ಮಾರುಕಟ್ಟೆಗಳನ್ನು ಕಂಡುಕೊಳ್ಳಲು ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ.

ಯುದ್ಧದ ನೆಪದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಅಥವಾ ಕಾಳಸಂತೆ ನಡೆಯದಂತೆ ರಾಜ್ಯ ಸರ್ಕಾರಗಳೊಂದಿಗೆ ಸಮನ್ವಯ ಸಾಧಿಸಲು ಪ್ರಧಾನಿ ತಿಳಿಸಿದ್ದು, ಅಕ್ರಮ ದಾಸ್ತಾನು ಮಾಡಿಕೊಳ್ಳುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಈ ಪರಿಸ್ಥಿತಿಯನ್ನು ನಿಭಾಯಿಸಲು ‘ಹೋಲ್ ಆಫ್ ಗವರ್ನಮೆಂಟ್’ ಮಾದರಿಯಲ್ಲಿ ಸಚಿವರು ಮತ್ತು ಕಾರ್ಯದರ್ಶಿಗಳ ವಿಶೇಷ ಸಮಿತಿಯನ್ನು ರಚಿಸಲು ಪ್ರಧಾನಿ ಆದೇಶಿಸಿದ್ದಾರೆ. ಈ ಸಮಿತಿ ಎಲ್ಲ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ಜನಸಾಮಾನ್ಯರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಿದೆ.

Source link

ರೀಲ್ಸ್ ಹುಚ್ಚಾಟಕ್ಕೆ ಬಾಲಕ ಸಾವು: ಮಗನ ತಪ್ಪಿನಿಂದ ಜೈಲು ಸೇರಿದ ತಂದೆ

ಹುಬ್ಬಳ್ಳಿ, ಮಾರ್ಚ್​ 22: ಪಾಲಕರೇ ಅಪ್ರಾಪ್ತ ವಯಸ್ಸಿನ ನಿಮ್ಮ ಮಕ್ಕಳಿಗೆ ನೀವು ಓಡಿಸಲು ಕಾರು, ಬೈಕ್​​, ಸ್ಕೂಟಿ ನೀಡ್ತಿದ್ದರೆ ಎಚ್ಚರ. ಏಕೆಂದರೆ ಅಪಘಾತಗಳಾದರೆ ನಿಮ್ಮ ಮಕ್ಕಳು ಮಾತ್ರವಲ್ಲ, ನೀವು ಜೈಲು ಪಾಲಾಗುತ್ತೀರಾ ಹುಷಾರ್. ಹುಬ್ಬಳ್ಳಿಯಲ್ಲಿ ರೀಲ್ಸ್ ಮಾಡುವಾಗ ನಡೆದ ಅಪಘಾತದಲ್ಲಿ (accident) ಬಾಲಕನ ಸಾವಿಗೆ (death) ಸಂಬಂಧಿಸಿದಂತೆ ಅಪಘಾತ ಮಾಡಿದ ಬಾಲಕ ಮಾತ್ರವಲ್ಲ, ಆತನ ತಂದೆಯನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.

ರೀಲ್ಸ್ ತಂದ ಆಪತ್ತು

ಇದು ಸೋಶಿಯಲ್ ಮೀಡಿಯಾ ಜಮಾನಾ. ನಾಲ್ಕು ವರ್ಷದ ಮಕ್ಕಳಿಂದ ವೃದ್ದರವರಗೆ ಎಲ್ಲರ ಕೈಯಲ್ಲಿ ಮೊಬೈಲ್​​ಗಳಿವೆ. ರೀಲ್ಸ್ ನೋಡೋದು, ರೀಲ್ಸ್ ಮಾಡೋದು ಇಂದಿನ ಗೀಳಾಗಿದೆ. ಅದರಲ್ಲೂ ಬಾಲಕರು, ಹದಿಹರೆಯದ ಯುವಕರು ವಾಹನಗಳನ್ನು ಕ್ರ್ಯಾಶ್ ಮಾಡೋದು ಸೇರಿದಂತೆ ಅನೇಕ ಸ್ಟಂಟ್​ಗಳ ವಿಡಿಯೋ ನೋಡುವುದು, ಅದೇ ರೀತಿ ಮಾಡೋದನ್ನು ಹೆಚ್ಚಾಗಿ ಮಾಡ್ತಿದ್ದಾರೆ. ಇದೇ ರೀತಿ ವಾಹನಗಳ ಕ್ರ್ಯಾಶ್ ಮಾಡೋ‌ ವಿಡಿಯೋ ಮಾಡಲು ಹೋದಾಗ ನಡೆಯಬಾರದ ಘಟನೆಯೊಂದು ಹುಬ್ಬಳ್ಳಿಯಲ್ಲಿ ಮಾರ್ಚ್ 19 ರಂದು ನಡೆದಿತ್ತು.‌

ನಡೆದಿದ್ದೇನು?

ರೀಲ್ಸ್ ಮಾಡಲು ಹೋದಾಗ ಆಡಿ ಕಾರು ಮತ್ತು ಸ್ಕೂಟಿ ನಡುವೆ ಅಪಘಾತವಾಗಿದ್ದು, ಬಾಲಕನೋರ್ವ ಮೃತಪಟ್ಟಿದ್ದ. ಹುಬ್ಬಳ್ಳಿ ನಗರದ ಲಕ್ಷ್ಮಿ ನಗರದ ನಮೀಷ್ ಸಂಗಳದ ಮೃತ ಬಾಲಕ. ಹುಬ್ಬಳ್ಳಿಯ ಬಿಜೆಪಿ ಮುಖಂಡ ವಿರೇಶ್ ಸಂಗಳದ ಪುತ್ರನಾಗಿದ್ದ ನಮೀಷ್, ಯುಗಾದಿ ಹಬ್ಬದ ದಿನ ಶೇಜವಾಡ್ಕರ್ ಪ್ಲಾಟ್​ನಲ್ಲಿ ಸ್ನೇಹಿತರ ಜೊತೆ ರೀಲ್ಸ್ ಮಾಡಲು ಹೋಗಿದ್ದ. ನಮೀಷ್ ಇದ್ದ ಸ್ಕೂಟಿಗೆ 17ನೇ ವರ್ಷದ ಅಪ್ರಾಪ್ತ ಬಾಲಕ ಓಡಿಸುತ್ತಿದ್ದ ಆಡಿ ಕಾರು ಗುದ್ದಿದ ಪರಿಣಾಮ ನಮೀಷ್ ಸ್ಥಳದಲ್ಲೇ ಮೃತಪಟ್ಟಿದ್ದ. ಈ ಬಗ್ಗೆ ಹುಬ್ಬಳ್ಳಿ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಹುಬ್ಬಳ್ಳಿ: ಆಡಿ ಕಾರು-ಬೈಕ್ ಸ್ಟಂಟ್ ರೀಲ್ಸ್ ಘೋರ ದುರಂತ, ಬಿಜೆಪಿ ಮುಖಂಡನ ಪುತ್ರ ಬಲಿ

ಇನ್ನು ನಮೀಷ್ ಸಂಗಳದ್ ಹಾಗೂ ಕಾರು ಓಡಿಸುತ್ತಿದ್ದ ಬಾಲಕ ಮತ್ತು ಇನ್ನಿಬ್ಬರು ಬಾಲಕರು ಸೇರಿ ಒಟ್ಟು‌ ನಾಲ್ವರು ಬಾಲಕರು ಕ್ರ್ಯಾಶ್ ರೀಲ್ಸ್ ಮಾಡಲು ಹೋಗಿದ್ದರಂತೆ. ನಮೀಷ್ ಸಂಗಳದ ಸ್ಕೂಟಿ ಓಡಿಸಿಕೊಂಡು ಬರ್ತಿದ್ದರೆ ಎದುರಿನಿಂದ ಅಪ್ರಾಪ್ತ ಬಾಲಕ ಕಾರು ಓಡಿಸಿಕೊಂಡು ಬರ್ತಿದ್ದ. ಅವು ಎರಡು ಕ್ರ್ಯಾಶ್ ಆಗುವ ವಿಡಿಯೋವನ್ನು ಇನ್ನಿಬ್ಬರು ಬಾಲಕರು ಮಾಡಲು ಮುಂದಾಗಿದ್ದರಂತೆ. ಆದರೆ 17ನೇ ವರ್ಷದ ಅಪ್ರಾಪ್ತ ಬಾಲಕ ಓಡಿಸುತ್ತಿದ್ದ ಕಾರು ಹಾಗೂ ಸ್ಕೂಟಿ ತೀರಾವೇಗವಾಗಿದ್ದರಿಂದ ನಿಯಂತ್ರಣ ತಪ್ಪಿ ಸ್ಕೂಟಿ ಮತ್ತು ಕಾರ್ ನಡುವೆ ಅಪಘಾತವಾಗಿತ್ತು. ಹೀಗಾಗಿ ಸ್ಥಳದಲ್ಲೇ ಬಾಲಕ ಮೃತ ಪಟ್ಟಿದ್ದ.

ಬಾಲಕನ ತಂದೆ ಅರೆಸ್ಟ್​​

ಅಪಘಾತ ಮಾಡಿರುವ 17ನೇ ವರ್ಷದ ಅಪ್ರಾಪ್ತ ಬಾಲಕನನ್ನು ಬಂಧಿಸಿ ಬಾಲಕರ ಬಾಲ ಮಂದಿರಕ್ಕೆ ಕಳುಹಿಸಿದರೆ, ಅಪ್ರಾಪ್ತ ಮಗನಿಗೆ ಕಾರು ನೀಡಿದ್ದ ಬಾಲಕನ ತಂದೆ ನಾಗರಾಜ್ ರಾಯ್ಕರ್​ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ರೀಲ್ಸ್ ಹುಚ್ಚಾಟವಾಡಬಾರದು. ಹೆತ್ತವರು ಮಕ್ಕಳಿಗೆ ತಮ್ಮ ವಾಹನ ನೀಡಬಾರದು ಅಂತ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಜನರಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಸೇತುವೆ ಮೇಲೆ ನಿಂತಿದ್ದ ಈಚರ್​ ವಾಹನಕ್ಕೆ ಗೂಡ್ಸ್ ವ್ಯಾನ್ ಡಿಕ್ಕಿ: ಮೂವರು ದಾರುಣ ಸಾವು

ಮಕ್ಕಳ ರೀಲ್ಸ್ ಹುಚ್ಚಾಟಕ್ಕೆ ಓರ್ವ ತಂದೆ ತನ್ನ ಮಗನನ್ನು ಕಳೆದುಕೊಂಡರೆ ಅಪಘಾತ ಮಾಡಿದ ಬಾಲಕ ಮತ್ತು ಆತನ ತಂದೆಗೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಹೆತ್ತವರು ತಮ್ಮ ಮಕ್ಕಳ ಆಟೋಟೋಪಕ್ಕೆ ಬ್ರೇಕ್ ಹಾಕುವ ಕೆಲಸ ಮಾಡುವುದು ಅನಿವಾರ್ಯವಾಗಿದೆ. ಜೊತೆಗೆ ಅಪ್ರಾಪ್ತ ಮಕ್ಕಳಿಗೆ ವಾಹನ ನೀಡಿದರೆ ಹೆತ್ತವರು ಕಂಬಿ ಹಿಂದೆ‌ ಹೋಗಬೇಕಾಗುತ್ತದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಹೈದರಾಬಾದ್‌: ‘ಧುರಂಧರ್ 2’ ಶೋನಲ್ಲಿ ಭಾಷಾ ವಿವಾದ, ಪೊಲೀಸರ ಎಂಟ್ರಿ

ರಣವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್ 2: ದಿ ರಿವೇಂಜ್’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಹಿಂದಿ ಮಾತ್ರವಲ್ಲದೆ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲೂ ಬಿಡುಗಡೆ ಆಗಿದೆ. ಎಲ್ಲೆಡೆ ಸಿನಿಮಾ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಕೆಲವೆಡೆ ಸಿನಿಮಾದ ಪ್ರದರ್ಶನದ ವೇಳೆ ಕೆಲವೆಡೆ ಕಿರಿಕ್ ಸಹ ಆಗಿದೆ. ಕೆನಡಾದಲ್ಲಿ ಸಿನಿಮಾ ಪ್ರದರ್ಶನದ ವೇಳೆ ನಡೆದ ಗಲಾಟೆಯಲ್ಲಿ ಸಿನಿಮಾ ಪರದೆಯನ್ನೇ ಹರಿದ ಘಟನೆ ನಿನ್ನೆ ವರದಿ ಆಗಿತ್ತು. ಇದೀಗ ಹೈದರಾಬಾದ್​​ನಲ್ಲಿ ಸಹ ಸಿನಿಮಾ ಪ್ರದರ್ಶನದ ವೇಳೆ ಕಿರಿಕ್ ಆಗಿದೆ. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಹೈದರಾಬಾದ್‌ನ ಮಲ್ಟಿಪ್ಲೆಕ್ಸ್ ಒಂದರಲ್ಲಿ ‘ಧುರಂಧರ್ 2’ ಚಿತ್ರದ ಪ್ರದರ್ಶನ ನಡೆಯುತ್ತಿತ್ತು. ಆದರೆ ತಾಂತ್ರಿಕ ದೋಷವೋ ಅಥವಾ ವಿಭಿನ್ನ ಪ್ರಯೋಗವೋ ಏನೋ ಹಿಂದಿ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಸಂಭಾಷಣೆ ಕೇಳಲು ಆರಂಭಿಸಿದೆ. ಇದು ಪ್ರೇಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಮತ್ತೊಂದು ವಿಚಿತ್ರವೆಂದರೆ ಆ ನಿರ್ದಿಷ್ಟ ಶೋನ ಟಿಕೆಟ್​​ಗಳು ತೆಲುಗು ಮತ್ತು ಹಿಂದಿ ಎರಡೂ ಆವೃತ್ತಿಗೆ ಮಾರಾಟ ಆಗಿವೆ. ಕೆಲವರು ತೆಲುಗು ಆವೃತ್ತಿಯ ಟಿಕೆಟ್ ಖರೀದಿಸಿದ್ದರೆ ಇನ್ನು ಕೆಲವರು ಹಿಂದಿ ಆವೃತ್ತಿಯ ಟಿಕೆಟ್ ಖರೀದಿ ಮಾಡಿದ್ದಾರೆ.

ಇದನ್ನೂ ಓದಿ:‘ಧುರಂಧರ್ 2’ ಕನ್ನಡ ಟ್ರೇಲರ್: ಕರ್ನಾಟಕದಲ್ಲಿ ಮೋಡಿ ಮಾಡುತ್ತಾ ರಣವೀರ್ ಸಿಂಗ್ ಸಿನಿಮಾ?

ಸಿನಿಮಾ ಪ್ರದರ್ಶನದ ವೇಳೆ ಒಂದು ಗುಂಪು ಚಿತ್ರವನ್ನು ಪೂರ್ತಿ ಹಿಂದಿಯಲ್ಲೇ ನೋಡಬೇಕು ಎಂದು ಪಟ್ಟು ಹಿಡಿದರೆ, ಸ್ಥಳೀಯ ಪ್ರೇಕ್ಷಕರು ತೆಲುಗು ಆವೃತ್ತಿಯನ್ನೇ ಪ್ರದರ್ಶಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಭಾಷಾ ವಿವಾದ ಜೋರಾಗಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಮಲ್ಟಿಪ್ಲೆಕ್ಸ್​ನ ಮಾಲೀಕರು ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪ್ರೇಕ್ಷಕರನ್ನು ಸಮಾಧಾನಪಡಿಸಿ ಚಿತ್ರದ ಪ್ರದರ್ಶನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ಬಳಿಕ ಬೇರೆ ಬೇರೆ ಶೋಗಳನ್ನು ಆಯೋಜನೆ ಮಾಡುವಂತೆ ಮಲ್ಟಿಪ್ಲೆಕ್ಸ್​​ನವರಿಗೆ ನಿರ್ದೇಶಿಸಿದ್ದಾರೆ.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ‘ಸಿನಿಮಾದಲ್ಲಿರೋ ಆಕ್ಷನ್‌ಗಿಂತ ಥಿಯೇಟರ್ ಒಳಗಡೆ ಇರೋ ಆಕ್ಷನ್ ಚೆನ್ನಾಗಿದೆ” ಎಂದು ಕೆಲವರು ಕಾಮೆಂಟ್ ಮಾಡಿದರೆ, ಇನ್ನು ಕೆಲವರು ‘ರಣವೀರ್ ಸಿಂಗ್ ಎನರ್ಜಿಯೇ ಹಾಗೆ, ಪ್ರೇಕ್ಷಕರಿಗೂ ಹತ್ತಿಕೊಂಡಿದೆ’ ಎಂದು ಕಾಲೆಳೆದಿದ್ದಾರೆ. ‘ಧುರಂಧರ್ 2’ ಸಿನಿಮಾ ಆಂಧ್ರ ಮತ್ತು ತೆಲಂಗಾಣಗಳಲ್ಲಿ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಗೂಢಚಾರಿಯ ಕತೆಯನ್ನು ಹೊಂದಿರುವ ಸಿನಿಮಾ ಇದಾಗಿದ್ದು, ಸಿನಿಮಾನಲ್ಲಿ ರಣ್ವೀರ್ ಸಿಂಗ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಅನ್ನು ಆದಿತ್ಯ ಧರ್ ನಿರ್ದೇಶನ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link