ನಾಳೆಯಿಂದ 3 ದಿನ ರಾಜ್ಯಾದ್ಯಂತ ಭಾರಿ ಗುಡುಗು, ಸಿಡಿಲು ಸಹಿತ ಮಳೆ; ಈ ಜಿಲ್ಲೆಗಳಿಗೆ ಆರೆಂಜ್ – ಯೆಲ್ಲೋ ಅಲರ್ಟ್
ಬೆಂಗಳೂರು, ಮೇ,28: ರಾಜ್ಯದಲ್ಲಿ ದಿನದ ಅವಧಿಯಲ್ಲಿ ಬಿಸಿಲಿನ ಬೇಗೆ ಮುಂದುವರಿದಿದ್ದರೂ, ಮಧ್ಯಾಹ್ನದ ನಂತರ ವಾತಾವರಣದಲ್ಲಿ ದಿಢೀರ್ ಬದಲಾವಣೆಯಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆ (IMD) ಇಂದು (ಮೇ 28) ನೀಡಿರುವ ವರದಿಗಳ ಪ್ರಕಾರ, ಮುಂದಿನ 7 ದಿನಗಳ ಅಧಿಕೃತ ಮುನ್ಸೂಚನೆಯ ಪ್ರಕಾರ, ರಾಜ್ಯದಾದ್ಯಂತ ಮೇ 31 ರವರೆಗೆ ಭಾರಿ ಗುಡುಗು, ಸಿಡಿಲು ಹಾಗೂ ಬಿರುಗಾಳಿ (Squall) ಸಹಿತ ಮಳೆಯಾಗುವ ಮುನ್ನೆಚ್ಚರಿಕೆ ನೀಡಲಾಗಿದೆ. ದಕ್ಷಿಣ ಒಳನಾಡು: ಇಂದು ಆರೆಂಜ್ ಅಲರ್ಟ್! ಮೇ 28 : ಅತ್ಯಂತ ಅಪಾಯಕಾರಿ ಹವಾಮಾನ ಇರಲಿದ್ದು,…