All posts by nagaraj11081993

ಸಿಲಿಕಾನ್ ಸಿಟಿಯಲ್ಲಿ ವರುಣನ ಅಬ್ಬರ, ಧೋ ಅಂತ ಸುರಿಯುತ್ತಿದೆ ಮಳೆ!: ಆಫೀಸ್ ಮುಗಿಸಿ ಬರುವ ಉದ್ಯೋಗಿಗಳೇ ಎಚ್ಚರ

ಬೆಂಗಳೂರು, ಮೇ,28: ರಾಜಧಾನಿ ಬೆಂಗಳೂರಿನ ಜನತೆಗೆ ಹವಾಮಾನ ಇಲಾಖೆ (IMD) ನೀಡಿದ್ದ ‘ಯೆಲ್ಲೋ ಅಲರ್ಟ್’ ಮುನ್ಸೂಚನೆ ಅಕ್ಷರಶಃ ನಿಜವಾಗಿದೆ. ಇದೀಗ ಸಿಲಿಕಾನ್ ಸಿಟಿಯಾದ್ಯಂತ ಹವಾಮಾನ ಸಂಪೂರ್ಣ ತಲೆಕೆಳಗಾಗಿದ್ದು, ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬೀಸಿದ ಭೀಕರ ಧೂಳಿನ ಬಿರುಗಾಳಿ (Gusty Winds) ಮತ್ತು ಗುಡುಗು-ಮಿಂಚಿನ ಆರ್ಭಟದೊಂದಿಗೆ ಧಾರಾಕಾರ ಮಳೆ ಆರಂಭವಾಗಿದೆ. ಮಧ್ಯಾಹ್ನದವರೆಗೆ ಉರಿ ಬಿಸಿಲಿನಿಂದ ಕಂಗಾಲಾಗಿದ್ದ ಬೆಂಗಳೂರಿನಲ್ಲಿ ಸಂಜೆ 6 ಗಂಟೆಯ ನಂತರ ದಿಢೀರ್ ಆಗಿ ಕಪ್ಪು ಮೋಡಗಳು ಆವರಿಸಿದವು. ಬಿರುಗಾಳಿಯ ತೀವ್ರತೆ ಎಷ್ಟಿತ್ತೆಂದರೆ ವಾಹನ ಸವಾರರಿಗೆ ರಸ್ತೆ ಸರಿಯಾಗಿ ಕಾಣಿಸದಷ್ಟು (Reduced Visibility) ಧೂಳು ಆವರಿಸಿತ್ತು. ಅದರ ಬೆನ್ನಲ್ಲೇ ಮೆಜೆಸ್ಟಿಕ್, ಕಾರ್ಪೊರೇಷನ್, ಎಂ.ಜಿ. ರಸ್ತೆ, ಯಶವಂತಪುರ, ಇಂದಿರಾನಗರ, ವೈಟ್‌ಫೀಲ್ಡ್, ಜಯನಗರ ಮತ್ತು ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ನಗರದ ಬಹುತೇಕ ಎಲ್ಲಾ ಭಾಗಗಳಲ್ಲಿ ಮಳೆ ಸುರಿಯುತ್ತಿದೆ.

ಕಛೇರಿ ಮುಗಿಸಿ ಮನೆಗೆ ಮರಳುತ್ತಿದ್ದ ಸಾರ್ವಜನಿಕರು ಮತ್ತು ದ್ವಿಚಕ್ರ ವಾಹನ ಸವಾರರು ದಿಢೀರ್ ಮಳೆಗೆ ಸಿಲುಕಿ ರಸ್ತೆ ಬದಿಯಲ್ಲಿ ಆಶ್ರಯ ಪಡೆದಿದ್ದಾರೆ. ಪ್ರಮುಖ ರಸ್ತೆಗಳಲ್ಲಿ ಮಳೆ ನೀರು ಹರಿಯುತ್ತಿರುವುದರಿಂದ ಹೆದ್ದಾರಿ ಹಾಗೂ ಫ್ಲೈಓವರ್‌ಗಳ ಮೇಲೆ ಭಾರಿ ಸಂಚಾರ ದಟ್ಟಣೆ (Traffic Jam) ಉಂಟಾಗಿದೆ. ಬಿರುಗಾಳಿಯ ರಭಸಕ್ಕೆ ನಗರದ ಕೆಲವು ಭಾಗಗಳಲ್ಲಿ ಮರದ ರೆಂಬೆಗಳು ಮುರಿದು ಬಿದ್ದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಬೆಸ್ಕಾಂ (BESCOM) ಹಲವು ಏರಿಯಾಗಳಲ್ಲಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದೆ.

ಇದನ್ನೂ ಓದಿ: ನಾಳೆಯಿಂದ 3 ದಿನ ರಾಜ್ಯಾದ್ಯಂತ ಭಾರಿ ಗುಡುಗು, ಸಿಡಿಲು ಸಹಿತ ಮಳೆ; ಈ ಜಿಲ್ಲೆಗಳಿಗೆ ಆರೆಂಜ್‌ – ಯೆಲ್ಲೋ ಅಲರ್ಟ್

ಹವಾಮಾನ ಇಲಾಖೆಯ ಪ್ರಕಾರ, ಮುಂದಿನ 2 ರಿಂದ 3 ಗಂಟೆಗಳ ಕಾಲ ಮಳೆಯ ಆರ್ಭಟ ಹೀಗೆಯೇ ಮುಂದುವರಿಯಲಿದ್ದು, ಸಾರ್ವಜನಿಕರು ಅನಗತ್ಯವಾಗಿ ರಸ್ತೆಗೆ ಇಳಿಯದಂತೆ ಮತ್ತು ಜಾಗರೂಕರಾಗಿರುವಂತೆ ಬಿಬಿಎಂಪಿ (BBMP) ಹಾಗೂ ಟ್ರಾಫಿಕ್ ಪೊಲೀಸರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ದಿ ಕೇರಳ ಸ್ಟೋರಿ 2’ ನಿರ್ದೇಶಕನ ಹೊಸ ಸಿನಿಮಾ ‘ಶ್ರೀ ರಾಮ್ ಭೂಮಿ’

ಖ್ಯಾತ ಸಿನಿಮಾ ನಿರ್ಮಾಣ ಸಂಸ್ಥೆಯಾದ ಜೀ ಸ್ಟುಡಿಯೋಸ್ (Zee Studios) ತನ್ನ ಮುಂದಿನ ಮಹತ್ವಾಕಾಂಕ್ಷೆಯ ಚಿತ್ರವನ್ನು ಅಧಿಕೃತವಾಗಿ ಘೋಷಿಸಿದೆ. ‘ಶ್ರೀ ರಾಮ್ ಭೂಮಿ’ (Shri Ram Bhoomi) ಎಂದು ಹೆಸರಿಡಲಾಗಿರುವ ಈ ಹೊಸ ಸಿನಿಮಾದ ಪ್ರಕಟಣೆಯನ್ನು ಸಂಸ್ಥೆಯು ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಶೀರ್ಷಿಕೆಯ ಕಾರಣದಿಂದಾಗಿ ಈ ಸಿನಿಮಾ ಬಗ್ಗೆ ತೀವ್ರ ಕುತೂಹಲ ಮೂಡಿದೆ. ಈ ಬಿಗ್ ಬಜೆಟ್ ಚಿತ್ರದಲ್ಲಿ ಬಾಲಿವುಡ್‌ನ ಹಿರಿಯ ನಟ ಅನುಪಮ್ ಖೇರ್ (Anupam Kher) ಅವರು ಪ್ರಮುಖ ಪಾತ್ರ ಮಾಡಲಿದ್ದಾರೆ.

ಅನುಪಮ್ ಖೇರ್ ಜೊತೆ ರಿತ್ವಿಕ್ ಭೌಮಿಕ್, ಅಮೃತಾ ಖಾನ್ವಿಲ್ಕರ್ ಕೂಡ ‘ಶ್ರೀ ರಾಮ್ ಭೂಮಿ’ ಸಿನಿಮಾದಲ್ಲಿ ನಟಿಸಲಿದ್ದಾರೆ. ಇತ್ತೀಚೆಗಷ್ಟೇ ಸದ್ದು ಮಾಡಿದ್ದ ‘ದಿ ಕೇರಳ ಸ್ಟೋರಿ 2’ ಚಿತ್ರದ ನಿರ್ದೇಶಕ ಕಾಮಾಕ್ಯ ನಾರಾಯಣ್ ಸಿಂಗ್ ಅವರು ಈಗ ಈ ಚಿತ್ರಕ್ಕೂ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಹಲವು ನಿರ್ಮಾಪಕರು ಜೊತೆಯಾಗಿ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ.

ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಅವರಿಗೆ ‘ಶ್ರೀ ರಾಮ್ ಭೂಮಿ’ ಸಿನಿಮಾ ಮಹತ್ವ ಮಹತ್ವದ್ದಾಗಿದೆ. ಇದು ಅವರ ಚಿತ್ರಜೀವನದಲ್ಲಿ ಒಂದು ಮೈಲಿಗಲ್ಲಾಗಲಿದೆ. ಅವರು ನಟನೆ 552ನೇ ಚಿತ್ರ ಇದಾಗಿದೆ. ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿರುವ ಅನುಪಮ್ ಕೇರ್ ಅವರು ಸಿನಿಮಾ ಬಗ್ಗೆ ತಮಗೆ ಇರುವ ಉತ್ಸಾಹವನ್ನು ವ್ಯಕ್ತಪಡಿಸಿದ್ದಾರೆ.

ಈ ಚಿತ್ರದ ಕಥೆಯು ಸಾಂಸ್ಕೃತಿಕ ಮತ್ತು ಭಾವನಾತ್ಮಕವಾಗಿ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ವಿವರಿಸಿರುವ ಖೇರ್, ‘ತಲೆಮಾರುಗಳನ್ನು ದಾಟಿ ನಿಲ್ಲುವಂತಹ ಅತ್ಯಂತ ಪ್ರಮುಖವಾದ ಕಥೆಯನ್ನು ಈ ಸಿನಿಮಾ ಹೇಳುತ್ತದೆ. ಸತ್ಯ, ನಂಬಿಕೆಯ ಪರಿಕಲ್ಪನೆಯಲ್ಲಿ ಬೇರೂರಿರುವ ಈ ಅದ್ಭುತ ಚಿತ್ರದ ಭಾಗವಾಗಲು ನನಗೆ ಹೆಮ್ಮೆಯಾಗುತ್ತಿದೆ’ ಎಂದು ಅನುಪಮ್ ಖೇರ್ ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಪ್ರತಿ ಸಿನಿಮಾದ ಸಂಭಾವನೆಯಲ್ಲಿ ತಮ್ಮ ಗುರುವಿಗೆ 25 ಸಾವಿರ ಕೊಡ್ತಾರೆ ಅನುಪಮ್ ಖೇರ್

ಸದ್ಯಕ್ಕೆ ಚಿತ್ರದ ಕಥೆಯ ಸಂಪೂರ್ಣ ವಿವರಗಳನ್ನು ಚಿತ್ರತಂಡ ರಹಸ್ಯವಾಗಿಟ್ಟಿದೆ. ಆದಾಗ್ಯೂ, ಜೀ ಸ್ಟುಡಿಯೋಸ್ ಮತ್ತು ಅನುಪಮ್ ಖೇರ್ ಅವರ ಹೇಳಿಕೆಗಳನ್ನು ಗಮನಿಸಿದರೆ, ಇದೊಂದು ಆಧ್ಯಾತ್ಮಿಕ ಹಾಗೂ ಸಾಮಾಜಿಕವಾಗಿ ಅತ್ಯಂತ ಪ್ರಭಾವಶಾಲಿಯಾದ ಕಥೆಯನ್ನು ಒಳಗೊಂಡ ಸಿನಿಮಾ ಆಗಿರಲಿದೆ ಎಂಬ ಸುಳಿವು ಸಿಗುತ್ತಿದೆ. ಚಿತ್ರದ ಅಧಿಕೃತ ಪ್ರಕಟಣೆ ಹೊರಬಿದ್ದಿರುವುದರಿಂದ ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದ್ದು, ಬಿಡುಗಡೆಯ ದಿನಾಂಕ ಮತ್ತು ಉಳಿದ ತಾರಾಗಣದ ಬಗ್ಗೆ ಹೆಚ್ಚಿನ ಮಾಹಿತಿ ಹೊರಬರಲು ಸಿನಿಪ್ರೇಕ್ಷಕರು ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮುಜರಾಯಿ ದೇಗುಲಗಳ ಆದಾಯಕ್ಕೆ ಬೂಸ್ಟ್​​ ಕೊಟ್ಟ ಶಕ್ತಿ ಯೋಜನೆ: ಭಕ್ತರ ಜೊತೆ ಕಾಣಿಕೆ ಸಂಗ್ರಹವೂ ಹೆಚ್ಚಳ

ಬೆಂಗಳೂರು, ಮೇ 28: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯ ಪರಿಣಾಮ ರಾಜ್ಯದ ಮುಜರಾಯಿ ದೇಗುಲಗಳಲ್ಲಿನ ಆದಾಯದಲ್ಲಿ ಗಣನೀಯ ಹೆಚ್ಚಳ ಆಗಿರುವುದು ಕಂಡುಬಂದಿದೆ. ಈ ಯೋಜನೆಯಡಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಸಿಗುತ್ತಿರುವ ಕಾರಣ ದೇಗುಲಗಳಿಗೆ ಬರುತ್ತಿರುವ ಭಕ್ತರ ಸಂಖ್ಯೆ ಹಡೆಚ್ಚಿದೆ. ಹೀಗಾಗಿ ಆದಾಯವೂ ಏರಿಕೆ ಕಾಣುತ್ತಿದೆ ಎನ್ನಲಾಗಿದೆ.

ಆದಾಯದಲ್ಲಿ ಗಮನಾರ್ಹ ಹೆಚ್ಚಳ

ವಿಶೇಷವಾಗಿ ಮಹಿಳೆಯರು ದೇವಸ್ಥಾನಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವ ಪರಿಣಾಮ, ರಾಜ್ಯದ ಪ್ರಮುಖ 15 ದೇವಸ್ಥಾನಗಳ ಆದಾಯದಲ್ಲಿ ಗಮನಾರ್ಹ ಹೆಚ್ಚಳವಾಗಿದೆ. ಬೆಂಗಳೂರಿನ ಬನಶಂಕರಿ ದೇವಸ್ಥಾನ ಹಾಗೂ ಘಾಟಿ ಸುಬ್ರಹ್ಮಣ್ಯ ದೇವಸ್ಥಾನ ಸೇರಿದಂತೆ ಹಲವು ದೇವಾಲಯಗಳಲ್ಲಿನ ಕಾಣಿಕೆ ಸಂಗ್ರಹದಲ್ಲಿ ಏರಿಕೆಯಾಗಿದೆ. 2025-26ನೇ ಸಾಲಿನಲ್ಲಿ ಈ ದೇವಸ್ಥಾನಗಳ ಒಟ್ಟು ಆದಾಯ 613.5 ಕೋಟಿಯಿಂದ 666.2 ಕೋಟಿಗೆ ಏರಿಕೆಯಾಗಿ, ಶೇಕಡಾ 8.6ರಷ್ಟು ಹೆಚ್ಚಳ ಕಂಡಿದೆ.

ಇದನ್ನೂ ಓದಿ: ಗೃಹಲಕ್ಷ್ಮಿ, ಗೃಹಜ್ಯೋತಿ ಫಲಾನುಭವಿಗಳ ಪರಿಷ್ಕರಣೆಗೆ ನಿರ್ಧರಿಸಿದ ರಾಜ್ಯ ಸರ್ಕಾರ

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಮೂರು ವರ್ಷಗಳ ಹಿಂದೆ ಆರಂಭವಾದ ಶಕ್ತಿ ಯೋಜನೆ ರಾಜ್ಯದ ಯಾತ್ರಾ ಪ್ರವಾಸೋದ್ಯಮಕ್ಕೆ ಮಹತ್ವದ ಉತ್ತೇಜನ ನೀಡಿದೆ. ಮಹಿಳೆಯರು ಪ್ರಯಾಣಿಸುವಾಗ ಕುಟುಂಬದವರನ್ನೂ ಜೊತೆ ಕರೆದುಕೊಂಡು ಬರುತ್ತಾರೆ. ಇದರಿಂದ ಭಕ್ತರ ಆಗಮನ ಹೆಚ್ಚಾಗಿದೆ. ದೇವಸ್ಥಾನಗಳಿಂದ ಬರುವ ಆದಾಯವನ್ನು ಅದೇ ದೇವಸ್ಥಾನದ ಅಭಿವೃದ್ಧಿಗೆ ಬಳಸಲಾಗುತ್ತದೆ. ಇತರೆ ಮುಜರಾಯಿ ದೇವಸ್ಥಾನಗಳಿಗೆ ಅನುದಾನ ವರ್ಗಾಯಿಸಲು ಸರ್ಕಾರದ ಅನುಮತಿ ಅಗತ್ಯ ಎಂದು ಅವರು ತಿಳಿಸಿದ್ದಾರೆ.

ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರ ಪ್ರಕಾರ, ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಪ್ರಮುಖ ದೇವಸ್ಥಾನಗಳಿರುವ ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ ಬಸ್ ಮಾರ್ಗಗಳಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಕೆಎಸ್‌ಆರ್‌ಟಿಸಿ ಬಳಿ 8,900 ಬಸ್‌ಗಳಿದ್ದು, ಅದರಲ್ಲಿ 7,000ಕ್ಕೂ ಹೆಚ್ಚು ಸಾಮಾನ್ಯ ಬಸ್‌ಗಳಲ್ಲಿ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಸೌಲಭ್ಯ ಇದೆ. ರಾಜ್ಯದ ಪ್ರಮುಖ ದೇವಾಲಯಗಳ ಮಾರ್ಗಗಳಲ್ಲಿ ಈ ಬಸ್‌ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಓಡಿಸಲಾಗುತ್ತಿದೆ. ಹಬ್ಬದ ಸಂದರ್ಭಗಳು ಹಾಗೂ ಶಾಲಾ ರಜಾದಿನಗಳಲ್ಲಿ ಹೆಚ್ಚುವರಿ ಬಸ್‌ಗಳನ್ನೂ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿರೋದಾಗಿ ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ನಾಳೆಯಿಂದ 3 ದಿನ ರಾಜ್ಯಾದ್ಯಂತ ಭಾರಿ ಗುಡುಗು, ಸಿಡಿಲು ಸಹಿತ ಮಳೆ; ಈ ಜಿಲ್ಲೆಗಳಿಗೆ ಆರೆಂಜ್‌ – ಯೆಲ್ಲೋ ಅಲರ್ಟ್

ಬೆಂಗಳೂರು, ಮೇ,28: ರಾಜ್ಯದಲ್ಲಿ ದಿನದ ಅವಧಿಯಲ್ಲಿ ಬಿಸಿಲಿನ ಬೇಗೆ ಮುಂದುವರಿದಿದ್ದರೂ, ಮಧ್ಯಾಹ್ನದ ನಂತರ ವಾತಾವರಣದಲ್ಲಿ ದಿಢೀರ್ ಬದಲಾವಣೆಯಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆ (IMD) ಇಂದು (ಮೇ 28) ನೀಡಿರುವ ವರದಿಗಳ ಪ್ರಕಾರ, ಮುಂದಿನ 7 ದಿನಗಳ ಅಧಿಕೃತ ಮುನ್ಸೂಚನೆಯ ಪ್ರಕಾರ, ರಾಜ್ಯದಾದ್ಯಂತ ಮೇ 31 ರವರೆಗೆ ಭಾರಿ ಗುಡುಗು, ಸಿಡಿಲು ಹಾಗೂ ಬಿರುಗಾಳಿ (Squall) ಸಹಿತ ಮಳೆಯಾಗುವ ಮುನ್ನೆಚ್ಚರಿಕೆ ನೀಡಲಾಗಿದೆ.

ದಕ್ಷಿಣ ಒಳನಾಡು: ಇಂದು ಆರೆಂಜ್ ಅಲರ್ಟ್!

ಮೇ 28 : ಅತ್ಯಂತ ಅಪಾಯಕಾರಿ ಹವಾಮಾನ ಇರಲಿದ್ದು, ಇಲಾಖೆಯು ‘ಆರೆಂಜ್ ಅಲರ್ಟ್’ ಘೋಷಿಸಿದೆ. ಭಾರಿ ಗುಡುಗು, ಮಿಂಚು ಹಾಗೂ ಚಂಡಮಾರುತದ ಮಾದರಿ ತೀವ್ರ ಗಾಳಿ ಬೀಸಲಿದೆ.

ಮೇ 29 ರಿಂದ ಮೇ 31: ಮುಂದಿನ ಮೂರು ದಿನಗಳ ಕಾಲ ಈ ವಲಯಕ್ಕೆ ‘ಯೆಲ್ಲೋ ಅಲರ್ಟ್’ ನೀಡಲಾಗಿದ್ದು, ಅಲ್ಲಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಜೂನ್ 1 ರಿಂದ ಜೂನ್ 3: ಯಾವುದೇ ಹವಾಮಾನ ಎಚ್ಚರಿಕೆಗಳು ಇರುವುದಿಲ್ಲ

ಉತ್ತರ ಒಳನಾಡು: ಮುಂದಿನ 2 ದಿನ ಹೈ ಅಲರ್ಟ್!

ಮೇ 28 ಮತ್ತು ಮೇ 29 (ಇಂದು ಮತ್ತು ನಾಳೆ): ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಹವಾಮಾನ ತೀವ್ರಗೊಳ್ಳಲಿದ್ದು, ಆರಂಭದ ಎರಡು ದಿನಗಳ ಕಾಲ ‘ಆರೆಂಜ್ ಅಲರ್ಟ್’ ಜಾರಿಯಲ್ಲಿರಲಿದೆ. ತೀವ್ರ ಸಿಡಿಲು ಮತ್ತು ಬಿರುಗಾಳಿ ಅಪ್ಪಳಿಸುವ ಸಾಧ್ಯತೆಯಿದೆ.

ಮೇ 30 ಮತ್ತು ಮೇ 31: ವಾತಾವರಣದ ತೀವ್ರತೆ ಕೊಂಚ ತಗ್ಗಲಿದ್ದು, ‘ಯೆಲ್ಲೋ ಅಲರ್ಟ್’ ಇರಲಿದೆ.

ಜೂನ್ 1 ರಿಂದ ಜೂನ್ 3: ಮಳೆಯ ಅಬ್ಬರ ಸಂಪೂರ್ಣ ಶಾಂತವಾಗಲಿದೆ.

ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಇವತ್ತು ಉಸಿರಾಡಲು ಯೋಗ್ಯವಾದ ಗಾಳಿ!

ಕರಾವಳಿ ಕರ್ನಾಟಕ : 4 ದಿನಗಳ ಕಾಲ ಯೆಲ್ಲೋ ಅಲರ್ಟ್!

ಮೇ 28 ರಿಂದ ಮೇ 31: ಕರಾವಳಿಯ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ನಿರಂತರವಾಗಿ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ. ಗುಡುಗು ಸಹಿತ ಜೋರಾದ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗಲಿದೆ.

ಜೂನ್ 1 ರಿಂದ ಜೂನ್ 3: ಹವಾಮಾನ ಸಾಮಾನ್ಯ ಸ್ಥಿತಿಗೆ ಮರಳಲಿದ್ದು, ಯಾವುದೇ ಮುನ್ನೆಚ್ಚರಿಕೆ ಇರುವುದಿಲ್ಲ.

ಮಧ್ಯಾಹ್ನದ ನಂತರ ಮೋಡ ಕವಿದ ವಾತಾವರಣ ಉಂಟಾಗಿ ಕ್ಷಣಾರ್ಧದಲ್ಲಿ ಭಾರಿ ಗಾಳಿ ಮಳೆ ಬರುವ ಸಾಧ್ಯತೆ ಇರುವುದರಿಂದ, ಸಾರ್ವಜನಿಕರು ಸಿಡಿಲಿನ ಸಮಯದಲ್ಲಿ ಸುರಕ್ಷಿತ ಕಟ್ಟಡಗಳಲ್ಲಿ ಆಶ್ರಯ ಪಡೆಯಬೇಕು. ರೈತರು ಕಟಾವು ಮಾಡಿದ ಬೆಳೆಗಳನ್ನು ಸುರಕ್ಷಿತವಾಗಿ ಮುಚ್ಚಿಡಲು ಸೂಚಿಸಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ಡಿಕೆಶಿ ಬಗ್ಗೆ ನೊಣವಿನಕೆರೆ ಸ್ವಾಮೀಜಿ ಮತ್ತೊಂದು ಸ್ಫೋಟಕ ಭವಿಷ್ಯ

ತುಮಕೂರು, (ಮೇ 28): ಸಿದ್ದರಾಮಯ್ಯ (Siddaramaiah) ರಾಜೀನಾಮೆ ನೀಡಿದ್ದು, ಡಿಕೆ ಶಿವಕುಮಾರ್ (DK Shivakumar) ಮುಂದಿನ ಸಿಎಂ ಎನ್ನುವುದು ಖಚಿತವಾಗಿದೆ. ಇದಕ್ಕೂ ಮೊದಲು ದೆಹಲಿಯಲ್ಲಿ ಆದ ಬೆಳವಣಿಗೆಗಳ ಬಗ್ಗೆ ಡಿಕೆ ಶಿವಕುಮಾರ್ ಬಹುವಾಗಿ ನಂಬುವ ನೊಣವಿನಕೆರೆ ಮಠದ (Nonavinakere Swamiji) ಡಾ. ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಡಿಕೆಶಿ ಸಿಎಂ ಆಗುವ ಬಗ್ಗೆ ಭವಿಷ್ಯ ನುಡಿದಿದ್ದರು.  ಅದರಂತೆ ಇದೀಗ ಸ್ವಾಮೀಜಿಯ ಭವಿಷ್ಯ ನಿಜವಾಗಿದೆ. ಇನ್ನು ಇತ್ತ ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ಸ್ವಾಮೀಜಿ, ಡಿಕೆ ಶಿವಕುಮಾರ್ ಬಗ್ಗೆ ಕೆಲ ಮಾತುಗಳನ್ನಾಡಿದ್ದು, ಶ್ರೀಮಠದ ಆಶೀರ್ವಾದ ಡಿಕೆ ಶಿವಕುಮಾರ ಅವರಿಗೆ ಇರುತ್ತದೆ. ರಾಜಾ‌ ಪ್ರತ್ಯಾಕ್ಷ ದೇವತಾ. ರಾಜ್ಯವನ್ನು ಆಳುವಂತಾ ದೊರೆ ನಾಯಕ. ರೈತರ ಪರ ,ಬಡವರ ಪರ ಇರುವ ನಾಯಕನಾಗಿ ಹೊರಹೊಮ್ಮುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಶ್ರೀ ‌ಮಠದ ಧರ್ಮದ ಧ್ವಜವನ್ನು ಕೊಟ್ಟು ಅವರಿಗೆ ಆರ್ಶಿವಾದ ಮಾಡುವ ಕಾಲ ಹತ್ತಿರ ಬಂದಿದೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸದಿಂದ ಅವರ ಬಾಳು ಬಂಗಾರವಾಗಲೆಂದು ಆರ್ಶಿವಾದ ಮಾಡುತ್ತೇನೆ. ಪ್ರಮಾಣವಚನದ ಸಮಯ ನಾವು ಹೇಳಲು ಆಗಲ್ಲ. ಅವರವರ ನಿರ್ಧಾರಕ್ಕೆ ಬಿಟ್ಟಿದ್ದು. ಅದಕ್ಕೆ ನಾನು ಅವರ ಪ್ರಮಾಣಚನ ಆಗುವ ವರೆಗೂ ನಾನು ಮಾತಾನಾಡಬಾರದು ಅಂತಾ ಇದ್ದೆ. ಶಾಸ್ತ್ರದ ಪ್ರಕಾರ ಸಕಲ ದೋಷವನ್ನು ನೋಡಿಕೊಂಡು ಡಿಕೆ ಶಿವಕುಮಾರ್ ನಡೆದು ಕೊಳ್ಳಬೇಕಾಗುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಅವರು ಸಾಧಕನಾಗಿದ್ದಾರೆ. ಎರಡು ವರ್ಷ ಅವರು ರಾಜಾ ಪ್ರತ್ಯಕ್ಷ ದೇವತಾ ಎನ್ನುವಂತೆ ಜನಸೇವೆ ಮಾಡುವ ಸದ್ಬುದ್ದಿ ಕೊಡಲಿ. ಧರ್ಮದ ಧ್ವಜಾವರಿಗೆ ಕೊಟ್ಟಿದ್ದೇವೆ.ಮುಂದೆ ಅವರಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.

ಇದನ್ನೂ ನೋಡಿ: ಆರಾಧ್ಯ ಗುರುಗಳ ಭವಿಷ್ಯದಿಂದ ಚಿಗುರೊಡೆದ ಡಿಕೆ ಶಿವಕುಮಾರ್ ಸಿಎಂ ಆಗುವ ಆಸೆ

Source link

June Festival List 2026: ಜೂನ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ

ತಿಂಗಳು ಉರುಳಿದ್ದೇ ತಿಳಿಯುತ್ತಿಲ್ಲ. ಕಣ್ಣು ಮುಚ್ಚಿ ಬಿಡುವುದರೊಳಗೆ 2026 ರ ಆರನೇ ತಿಂಗಳಿಗೆ ಕಾಲಿಡಲು ಸಜ್ಜಾಗಿದ್ದೇವೆ. ಮೇ ತಿಂಗಳಿಗೆ ಗುಡ್ ಬೈ ಹೇಳಿ ಜೂನ್ ತಿಂಗಳನ್ನು ಆಹ್ವಾನಿಸಲು ಇನ್ನೇನು ಕೆಲವೇ ಕೆಲವು ದಿನಗಳಷ್ಟೇ ಬಾಕಿಯಿವೆ. ಹಿಂದೂ ಪಂಚಾಂಗದ (Hindu Calendar) ಪ್ರಕಾರವಾಗಿ ಜೂನ್ ತಿಂಗಳು ಜ್ಯೇಷ್ಠ ಮಾಸದಿಂದ ಪ್ರಾರಂಭವಾಗುತ್ತದೆ. ಜೂನ್ ತಿಂಗಳಲ್ಲಿ ಪ್ರಮುಖವಾದ ಹಬ್ಬ ಹಾಗೂ ಆಚರಣೆಗಳಿವೆ. ಹಾಗಾದ್ರೆ ಈ ಜೂನ್ ತಿಂಗಳಿನಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಕುರಿತಾದ ಮಾಹಿತಿ ಇಲ್ಲಿದೆ.

ಜೂನ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳ ಪಟ್ಟಿ ಇಲ್ಲಿದೆ

  • ಜೂನ್ 01 – ಅಧಿಕ ಜ್ಯೇಷ್ಠ ಕೃಷ್ಣ ಪಕ್ಷ
  • ಜೂನ್ 03 – ಸಂಕಷ್ಟಹರ ಚತುರ್ಥಿ
  • ಜೂನ್ 05 – ಶ್ರವಣ ಅಹೋರಾತ್ರ
  • ಜೂನ್ 08- ಮಹಾನಕ್ಷತ್ರ ಮೃಗಾಶಿರಾ
  • ಜೂನ್ 11- ಪರಮ ಏಕಾದಶಿ
  • ಜೂನ್ 12 – ಪ್ರದೋಷ
  • ಜೂನ್ 13 – ಮಾಸಶಿವರಾತ್ರಿ
  • ಜೂನ್ 15 – ಮಿಥುನ ಸಂಕ್ರಮಣ
  • ಜೂನ್ 15 – ಕರವೀರವ್ರತ
  • ಜೂನ್ 15 – ಸೋಮಾವತಿ ಅಮಾವಾಸ್ಯಾ
  • ಜೂನ್ 16 – ನಿಜಜ್ಯೇಷ್ಠ ಶುಕ್ಲಪಕ್ಷ
  • ಜೂನ್ 17 – ಮೊಹರಂ ಪ್ರಾರಂಭ
  • ಜೂನ್ 18 – ಉಮಾಪೂಜನ ವ್ರತ
  • ಜೂನ್ 19 – ಶ್ರುತ ಪಂಚಮಿ
  • ಜೂನ್ 21 – ದಕ್ಷಿಣಾಯನ ಆರಂಭ
  • ಜೂನ್ 22 – ಮಹಾನಕ್ಷತ್ರ ಆರ್ದಾ
  • ಜೂನ್ 25 – ನಿರ್ಜಲಾ ಏಕಾದಶಿ
  • ಜೂನ್ 26 – ಮೊಹರಂ
  • ಜೂನ್ 27 – ಪ್ರದೋಷ
  • ಜೂನ್ 29 – ವಟಸಾವಿತ್ರಿ ವ್ರತ
  • ಜೂನ್ 29 – ಕಬೀರದಾಸ ಜಯಂತಿ
  • ಜೂನ್‌ 30 – ನಿಜ ಜ್ಯೇಷ್ಠ ಕೃಷ್ಣ ಪಕ್ಷ

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:26 pm, Thu, 28 May 26

Source link

ಕರುನಾಡ ಜನತೆಗೆ ಕೈ ಮುಗಿದ ಸಿದ್ದರಾಮಯ್ಯ ಪೋಸ್ಟ್ ನಲ್ಲೇನಿದೆ?

ಬೆಂಗಳೂರು, (ಮೇ 28): ಬಡವರಿಗೆ ಭಾಗ್ಯಗಳ ಕೊಟ್ಟ ಸರದಾರ.. ಹಸಿದವರಿಗೆ ಅನ್ನ ನೀಡಿದ ಅನ್ನರಾಮಯ್ಯ.. ರೈತರ ಧ್ವನಿಯಾಗಿದ್ದ ರೈತರಾಮಯ್ಯ, ಕನ್ನಡ ನಾಡು ನುಡಿಗಾಗಿ ದಿಟ್ಟ ಹೆಜ್ಜೆ ಇಟ್ಟ ಕನ್ನಡ ರಾಮಯ್ಯ.. ದಾಖಲೆ ಬಜೆಟ್ ಮಂಡಿಸಿದ ಬಜೆಟ್ ರಾಮಯ್ಯ. ವಿಧಾನಸಭೆಯಲ್ಲಿ ಎದುರಾಳಿಗಳನ್ನ ಮಾತಿನಲ್ಲೇ ಕಟ್ಟಿಹಾಕುತ್ತಿದ್ದ ಸಿದ್ದರಾಮಯ್ಯ, ತಮ್ಮ ಕೆಲಸಗಳಿಂದಲೇ ನಾನಾ ಹೆಸರಿನಿಂದ ಕರೆಸಿಕೊಂಡವರು. ಇಂತಹ ಸಿದ್ದರಾಮಯ್ಯ (Siddaramaiah) ಇವತ್ತು ಮುಖ್ಯಮಂತ್ರಿ ಪದವಿಯನ್ನೇ ತ್ಯಾಗ ಮಾಡಿ ತ್ಯಾಗರಾಮಯ್ಯರಾಗಿದ್ದಾರೆ. ಎದೆಭಾರ ಮಾಡಿಕೊಂಡೇ ತನ್ನ ಆಪ್ತ ಭೈರತಿ ಸುರೇಶ್ ಕಾರು ಹತ್ತಿದ ಸಿದ್ದರಾಮಯ್ಯ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆ ಮೂಲಕ ಹೋರಾಟಗಾರನ ಆಡಳಿತ ಅಂತ್ಯವಾಗಿದೆ.

ಇನ್ನೊಂದೆಡೆ ಸಿದ್ದರಾಮಯ್ಯನವರ ಅಭಿಮಾನಿಗಳು, ಆಪ್ತರು ಕಣ್ಣೀರ ಕಟ್ಟೆ ಹೊಡೆದಿದೆ. ಸಿದ್ದರಾಮಯ್ಯನವರ ರಾಜೀನಾಮೆಯಿಂದಾಗಿ ಹಲವು ಜಿಲ್ಲೆಗಳಲ್ಲಿ ಅವರ ಅಭಿಮಾನಿಗಳು ಕಣ್ಣೀರಿಟ್ಟಿದ್ದಾರೆ. ಅಲ್ಲದೇ ಕಾಂಗ್ರೆಸ್ ಹೈಕಮಾಂಡ್ ನಡೆಗೆ ಆಕ್ರೋಶ ಹೊರಕಿದ್ದಾರೆ. ಹೀಗೆ ಅಪಾರ ಅಭಿಮಾನಿಗಳು ಹೊಂದಿದ ಜನಪ್ರಿಯ ರಾಜಕಾರಣಿ ಸಿದ್ದರಾಮಯ್ಯನವರ ರಾಜೀನಾಮೆ ನೀಡದ ಬಳಿಕ ಒಂದು ಪೋಸ್ಟ್ ಮಾಡಿದ್ದು, ಕರುನಾಡಿನ ಜನತೆಗೆ ಧನ್ಯವಾದಗಳನ್ನ ತಿಳಿಸಿದ್ದಾರೆ. ಪಕ್ಷ ಭೇದ,ಭಾವ ಇಲ್ಲದೇ ಜಾತಿ-ಧರ್ಮವಿಲ್ಲದೇ ಪ್ರತಿಯೊಬ್ಬ ಕನ್ನಡಿಗನಿಗೆ ಕೈಮುಗಿದು ಧನ್ಯವಾದ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕೊನೆಯುಸಿರಿರುವವರೆಗೂ ನೀನೇ ನನ್ನವಳು!: ಆಸ್ಪತ್ರೆ ಹಾಸಿಗೆಯಲ್ಲೇ ಹೆಂಡತಿಗೆ ಸಿಂಧೂರ ಇಟ್ಟು ಪತಿ ಧರ್ಮ ಮೆರೆದ ಪತಿ

ದೆಹಲಿ, ಮೇ.28: “ಪ್ರೀತಿ ಅಂದರೆ ಹೀಗಿರಬೇಕು, ಕೊನೆಯುಸಿರಿರುವವರೆಗೂ ಜೊತೆಯಾಗಿ ಬಾಳಬೇಕು” ಎಂಬ ಮಾತಿಗೆ ಇಲ್ಲೊಂದು ಅತ್ಯಂತ ಭಾವುಕ ಹಾಗೂ ಕಣ್ಣೀರು ತರಿಸುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆಸ್ಪತ್ರೆಯ ಐಸಿಯು (ICU) ಹಾಸಿಗೆಯ ಮೇಲೆ ಸಾವು-ಬದುಕಿನ ನಡುವೆ ಹೋರಾಡುತ್ತಿರುವ ತನ್ನ ಪ್ರೀತಿಯ ಪತ್ನಿಗೆ, ಪತಿ ಸಾಂಪ್ರದಾಯಿಕ ಚುಮರಿ (Chunari) ಹೊದಿಸಿ, ಹಣೆಗೆ ಸಿಂಧೂರ ಇಟ್ಟು ತನ್ನ ಪತಿ ಧರ್ಮ ಹಾಗೂ ಜೀವಮಾನದ ಒಡನಾಟದ ಭಾಷೆಯನ್ನು ಅತ್ಯಂತ ಭಕ್ತಿ-ಪ್ರೀತಿಯಿಂದ ನಿಭಾಯಿಸಿದ್ದಾನೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಪತ್ನಿ ಆಸ್ಪತ್ರೆಯ ಹಾಸಿಗೆಯ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಳೆ. ವೈದ್ಯರು ಆಕೆಯ ಜೀವ ಉಳಿಸಲು ಹೋರಾಡುತ್ತಿದ್ದಾರೆ. ಪತ್ನಿಯ ಆಸೆಯಂತೆ ಆಕೆಗೆ ಹೊಸ ಮದುಮಗಳಂತೆ ಸುಂದರವಾದ ಶಾಲು (Chunari) ಹೊದಿಸಿ, ಮುತ್ತೈದೆಯ ಸಂಕೇತವಾದ ಸಿಂಧೂರವನ್ನು ಆಕೆಯ ಹಣೆಗೆ ಇಟ್ಟು, “ನೀನು ಎಷ್ಟೇ ಕಷ್ಟದಲ್ಲಿದ್ದರೂ ನಾನು ನಿನ್ನ ಜೊತೆಯೇ ಇರುತ್ತೇನೆ” ಎಂಬ ಭರವಸೆ ನೀಡಿದ್ದಾನೆ. ಎಕ್ಸ್​​​ ಖಾತೆಯಲ್ಲಿ ಈ ಭಾವುಕ ಕ್ಷಣದ ವಿಡಿಯೋ ಭಾರಿ ವೈರಲ್ ಆಗುತ್ತಿದ್ದು, “ಹಣ ಮತ್ತು ಆಸ್ತಿಯನ್ನು ಪ್ರೀತಿಸುವ ಇಂದಿನ ಜಗತ್ತಿನಲ್ಲಿ, ನಿಜವಾದ ಪ್ರೀತಿ ಅಂದರೆ ಏನು ಎಂಬುದನ್ನು ಈ ದಂಪತಿ ತೋರಿಸಿಕೊಟ್ಟಿದ್ದಾರೆ” ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ನನ್ನ ತಲೆ ಪೂರ್ತಿ ಬೋಳಾಗಿದೆ, ವಿಗ್ ಧರಿಸಿದ್ದೇನೆ’: ಡ್ರಗ್ಸ್ ದುಷ್ಪರಿಣಾಮದ ಬಗ್ಗೆ ಬಾಯ್ಬಿಟ್ಟ ಹನಿ ಸಿಂಗ್

ಖ್ಯಾತ ರ‍್ಯಾಪರ್ ಹಾಗೂ ಗಾಯಕ ಯೋ ಯೋ ಹನಿ ಸಿಂಗ್ (Yo Yo Honey Singh) ತಮ್ಮ ವೈಯಕ್ತಿಕ ಜೀವನದ ಕುರಿತು ಅತ್ಯಂತ ಆಘಾತಕಾರಿ ಮತ್ತು ಭಾವುಕ ಸತ್ಯವೊಂದನ್ನು ಬಹಿರಂಗಪಡಿಸಿದ್ದಾರೆ. ತಮಗೆ ಸಂಪೂರ್ಣವಾಗಿ ಬೋಳು ತಲೆಯಾಗಿದ್ದು, ಸದ್ಯ ತಾವು ವಿಗ್ (Wig) ಧರಿಸುತ್ತಿರುವುದಾಗಿ ಅವರು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ಡ್ರಗ್ಸ್ (Drugs) ಸೇವನೆ ಬಳಿಕ ಉಂಟಾದ ಬೈಪೋಲಾರ್ ಡಿಸಾರ್ಡರ್ ಎಂಬ ಮಾನಸಿಕ ಆರೋಗ್ಯ ಸಮಸ್ಯೆಯಿಂದಾಗಿ ತೆಗೆದುಕೊಂಡ ಭಾರಿ ಪ್ರಮಾಣದ ಔಷಧಿಗಳೇ ತಮ್ಮ ಈ ಸ್ಥಿತಿಗೆ ಕಾರಣ ಎಂದು ಅವರು ಹೇಳಿದ್ದಾರೆ.

ದೇಶದ ಅತ್ಯಂತ ಯಶಸ್ವಿ ಮ್ಯೂಸಿಕ್ ಐಕಾನ್‌ಗಳಲ್ಲಿ ಒಬ್ಬರಾಗಿದ್ದರೂ, ತಮ್ಮ ಜೀವನದ ಅತ್ಯಂತ ಕರಾಳ ದಿನಗಳಲ್ಲಿ ತೀವ್ರವಾದ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದಾಗಿ ಹನಿ ಸಿಂಗ್ ತಿಳಿಸಿದ್ದಾರೆ. ಇತ್ತೀಚೆಗೆ ‘ABtalks’ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ್ದ ಅವರು, ವರ್ಷಗಟ್ಟಲೆ ತೆಗೆದುಕೊಂಡ ಮೆಡಿಕೇಶನ್ ತಮ್ಮ ದೇಹದ ಮೇಲೆ ಬೀರಿದ ಭೀಕರ ಪರಿಣಾಮಗಳ ಬಗ್ಗೆ ಮಾತನಾಡಿದ್ದಾರೆ.

ಯೋ ಯೋ ಹನಿ ಸಿಂಗ್ ಸಂದರ್ಶನದ ವಿಡಿಯೋ ತುಣುಕು:

‘ನಾನು ಸತತ ಏಳು ವರ್ಷಗಳ ಕಾಲ ಭಾರಿ ಪ್ರಮಾಣದ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದೆ. ಅದರ ಪರಿಣಾಮವಾಗಿ ನನ್ನ ತೂಕ 105 ಕೆಜಿಗೆ ಏರಿತು ಮತ್ತು ನಾನು ನನ್ನ ತಲೆ ಕೂದಲನ್ನು ಸಂಪೂರ್ಣವಾಗಿ ಕಳೆದುಕೊಂಡೆ. ಈಗ ನನ್ನ ತಲೆಯ ಮೇಲಿರುವುದು ನಕಲಿ ಕೂದಲು. ನನಗೆ ಸಂಪೂರ್ಣವಾಗಿ ಬೋಳು ತಲೆಯಾಗಿದೆ. ನಾನು ವಿಗ್ ಧರಿಸುತ್ತಿದ್ದೇನೆ’ ಎಂದು ಹನಿ ಸಿಂಗ್ ಹೇಳಿದ್ದಾರೆ.

ತಮ್ಮ ಅನಾರೋಗ್ಯದ ದಿನಗಳಲ್ಲಿ ಅನುಭವಿಸಿದ ನರಕಯಾತನೆ ಮತ್ತು ಹೊರಜಗತ್ತಿನಿಂದ ಸಂಪೂರ್ಣವಾಗಿ ದೂರ ಸರಿದಿದ್ದ ದಿನಗಳನ್ನು ನೆನಸಿಕೊಂಡ ಹನಿ ಸಿಂಗ್, ‘ಒಮ್ಮೆ ಲೈವ್ ಶೋ ನಡೆಸಿಕೊಡುತ್ತಿದ್ದಾಗ ಸ್ಟೇಜ್ ಮೇಲೆಯೇ ನನಗೆ ಏನೋ ತೊಂದರೆ ಆಗುತ್ತಿರುವುದು ತಿಳಿಯಿತು. ನನ್ನ ತಂಗಿಗೆ ಕರೆ ಮಾಡಿ ವಿಷಯ ತಿಳಿಸಿದಾಗ, ಶೋ ಮುಗಿಸುವಂತೆ ಆಕೆ ಹೇಳಿದಳು. ಆದರೆ ನನಗೆ ಸಾಧ್ಯವಾಗದೆ ಕೇವಲ ಎರಡು ಹಾಡುಗಳನ್ನು ಹಾಡಿ ಅರ್ಧದಲ್ಲೇ ವೇದಿಕೆ ಬಿಟ್ಟು ಬಂದೆ’ ಎಂದಿದ್ದಾರೆ.

ಇದನ್ನೂ ಓದಿ: ‘ನನಗೆ ಡ್ರಗ್ಸ್ ಚಟ ಹಿಡಿಸಿದ್ದು ಬಾಲಿವುಡ್​ನ ದೊಡ್ಡ ಸೆಲೆಬ್ರಿಟಿಗಳು’; ಹನಿ ಸಿಂಗ್​ ಶಾಕಿಂಗ್ ವಿಚಾರ ರಿವೀಲ್  

‘ಆ ಘಟನೆಯ ನಂತರ, ನಾನು ಸತತ ಏಳು ವರ್ಷಗಳ ಕಾಲ ನನ್ನ ಮನೆಯೊಳಗೇ ಉಳಿದುಕೊಂಡೆ. ನನ್ನ ಅಭಿಮಾನಿಗಳು ನನ್ನನ್ನು ಆ ಸ್ಥಿತಿಯಲ್ಲಿ ನೋಡುವುದು ನನಗೆ ಇಷ್ಟವಿರಲಿಲ್ಲ. ನನ್ನನ್ನು ನಾನೇ ಕೋಣೆಯೊಳಗೆ ಲಾಕ್ ಮಾಡಿಕೊಂಡಿದ್ದೆ. ನನ್ನ ಬಾಲ್ಯದ ಸ್ನೇಹಿತರನ್ನೂ ಭೇಟಿಯಾಗಲಿಲ್ಲ. ಯಾವುದೇ ಸಂವಹನ, ಫೋನ್ ಕರೆಗಳು, ಟಿವಿ ಅಥವಾ ಇಂಟರ್ನೆಟ್ ಸಂಪರ್ಕ ನನಗಿರಲಿಲ್ಲ. ಜನರು ನನ್ನೊಂದಿಗೆ ದೆವ್ವ ಮಾತನಾಡುತ್ತಿದೆ ಎಂದೆಲ್ಲ ಅಂದುಕೊಳ್ಳುತ್ತಿದ್ದರು’ ಎಂದು ಅವರು ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

RR vs SRH: ವೈಭವ್ ಔಟಾದಾಗ ಕಾವ್ಯ ಮಾರನ್ ಏನು ಮಾಡಿದ್ರು ನೋಡಿ

ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಸಿಕ್ಸರ್‌ಗಳ ಮಳೆ ಸುರಿಸಿ 29 ಎಸೆತಗಳಲ್ಲಿ 97 ರನ್‌ಗಳ ಇನ್ನಿಂಗ್ಸ್ ಆಡಿದರು. ತಮ್ಮ ಇನ್ನಿಂಗ್ಸ್‌ನಲ್ಲಿ 12 ಸಿಕ್ಸರ್‌ಗಳು ಮತ್ತು 5 ಬೌಂಡರಿಗಳನ್ನು ಬಾರಿಸಿದರು, ಆದರೆ ಸೂರ್ಯವಂಶಿ ಕೇವಲ 3 ರನ್​ಗಳಿಂದ ಶತಕ ವಂಚಿತರಾದರು. ಅಬ್ಬರದ ಬ್ಯಾಟಿಂಗ್‌ ಮಾಡಿ ಸನ್​ರೈಸರ್ಸ್​ ಬೌಲರ್​ಗಳನ್ನು ಹೈರಾಣಾಗಿಸಿದ ವೈಭವ್ ಔಟಾದ ಕೂಡಲೇ ಒಂದೆಡೆ ಸನ್​ರೈಸರ್ಸ್​ ಪಾಳಯದಲ್ಲಿ ಸಂತಸ ಮನೆ ಮಾಡಿದರೆ, ಇತ್ತ ರಾಜಸ್ಥಾನ್ ತಂಡದ ಅಭಿಮಾನಿಗಳ ಮುಖದಲ್ಲಿ ಬೇಸರ ಎದ್ದು ಕಾಣಿಸುತ್ತಿತ್ತು.

ವೈಭವ್ ಸೂರ್ಯವಂಶಿ 97 ರನ್ ಗಳಿಸಿ ಪ್ರಫುಲ್ ಹಿಂಗೇಗೆ ವಿಕೆಟ್ ಒಪ್ಪಿಸಿದಾಗ ಇಡೇ ಕ್ರೀಡಾಂಗಣವೇ ನಿರಾಶೆಗೊಂಡಿತು. ಇತ್ತ ಅಭಿಷೇಕ್ ಶರ್ಮಾ ಸೇರಿದಂತೆ ಕೆಲವು ಸನ್‌ರೈಸರ್ಸ್ ಹೈದರಾಬಾದ್ ಆಟಗಾರರು ವೈಭವ್ ಅವರ ಉತ್ತಮ ಇನ್ನಿಂಗ್ಸ್‌ಗಾಗಿ ಅವರನ್ನು ಅಭಿನಂದಿಸಿದರು. ಹಾಗೆಯೇ ಸ್ಟ್ಯಾಂಡ್‌ನಲ್ಲಿ ಕುಳಿತಿದ್ದ ಸನ್​ರೈಸರ್ಸ್​ ತಂಡದ ಮಾಲೀಕಿ ಕಾವ್ಯ ಮಾರನ್ ಕೂಡ ತಮ್ಮ ಆಸನದಿಂದಲೇ ಬೇಸರದ ಮುಖದಲ್ಲಿ ಚಪ್ಪಾಳೆ ತಟ್ಟಿ ಅಭಿನಂದನೆ ಸಲ್ಲಿಸಿದರು. ಅದರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.

Source link