All posts by nagaraj11081993

Donald Trump: 48 ಗಂಟೆಯೊಳಗೆ ಹಾರ್ಮುಜ್ ಜಲಸಂಧಿ ತೆರೀರಿ, ಇಲ್ದಿದ್ರೆ.. ಇರಾನ್​ಗೆ ಟ್ರಂಪ್ ಬೆದರಿಕೆ

Donald Trump: 48 ಗಂಟೆಯೊಳಗೆ ಹಾರ್ಮುಜ್ ಜಲಸಂಧಿ ತೆರೀರಿ, ಇಲ್ದಿದ್ರೆ.. ಇರಾನ್​ಗೆ ಟ್ರಂಪ್ ಬೆದರಿಕೆ

ವಾಷಿಂಗ್ಟನ್, ಮಾರ್ಚ್​ 22: ವಿಶ್ವದ ತೈಲ ಪೂರೈಕೆಯ ಐದನೇ ಒಂದು ಭಾಗದಷ್ಟು ತೈಲವನ್ನು ಸಾಗಿಸುವ ಹಾರ್ಮುಜ್(Hormuz) ಜಲಸಂಧಿಯನ್ನು ಹಡಗು ಸಂಚಾರಕ್ಕಾಗಿ ಟೆಹ್ರಾನ್ ಮತ್ತೆ ತೆರೆಯದಿದ್ದರೆ ಇರಾನ್‌ನ ವಿದ್ಯುತ್ ಸ್ಥಾವರಗಳನ್ನು ನಾಶಪಡಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಮುಂದಿನ 48 ಗಂಟೆಗಳಲ್ಲಿ ಹಾರ್ಮುಜ್ ಜಲಸಂಧಿಯನ್ನು ತೆರೆಯದಿದ್ದರೆ, ಅಮೆರಿಕವು ತನ್ನ ಹಲವಾರು ವಿದ್ಯುತ್ ಸ್ಥಾವರಗಳನ್ನು ಗುರಿಯಾಗಿರಿಸಿ ಸಂಪೂರ್ಣವಾಗಿ ನಾಶಪಡಿಸುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ.

ಫೆಬ್ರವರಿ 28 ರಂದು ಟೆಹ್ರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ ನಡೆಸಿದ ನಂತರ, ಇರಾನ್ ವಿರುದ್ಧ ದಾಳಿಯಲ್ಲಿ ಭಾಗಿಯಾಗಿರುವ ದೇಶಗಳಿಗೆ, ಹೆಚ್ಚಿನ ಹಡಗು ಸಂಚಾರಕ್ಕಾಗಿ ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿತ್ತು.

ಯುಕೆ, ಫ್ರಾನ್ಸ್, ಇಟಲಿ, ಜರ್ಮನಿ, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ಯುಎಇ ಮತ್ತು ಬಹ್ರೇನ್ ಸೇರಿದಂತೆ ಹಲವು ದೇಶಗಳು ಇರಾನ್ ಪಡೆಗಳು ಹಾರ್ಮುಜ್ ಜಲಸಂಧಿಯನ್ನು ವಾಸ್ತವಿಕವಾಗಿ ಮುಚ್ಚಿರುವುದನ್ನು ಖಂಡಿಸಿವೆ.

ಹಾರ್ಮುಜ್ ಜಲಸಂಧಿಯು ಯುದ್ಧಪೂರ್ವ ಸ್ಥಿತಿಗೆ ಮರಳುವುದಿಲ್ಲ ಎಂದು ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್-ಬಾಘರ್ ಗಾಲಿಬಾಫ್ ಈ ಹಿಂದೆ ಎಚ್ಚರಿಸಿದ್ದರು. ಇರಾನ್ ಪರಮಾಣು ಸೌಲಭ್ಯವಿರುವ ಇಸ್ರೇಲಿ ಪಟ್ಟಣಗಳಾದ ಡಿಮೋನಾ ಮತ್ತು ಆರಾದ್ ಮೇಲೆ ಕ್ಷಿಪಣಿ ದಾಳಿ ನಡೆಸಿ 100 ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿತ್ತು.

ಹಾರ್ಮುಜ್ ಜಲಸಂಧಿಯಲ್ಲಿ ಹಡಗು ಸಾಗಣೆಗೆ ಇರಾನ್ ಒಡ್ಡಿರುವ ಬೆದರಿಕೆಗಳು ಜಾಗತಿಕ ತೈಲ ಬೆಲೆಗಳು ಗಣನೀಯವಾಗಿ ಏರಿಕೆಯಾಗಲು ಕಾರಣವಾಗಿವೆ. ಹಾರ್ಮುಜ್ ಜಲಸಂಧಿಯು ವಿಶ್ವದ ತೈಲ ಪೂರೈಕೆಯ ಸರಿಸುಮಾರು ಐದನೇ ಒಂದು ಭಾಗವನ್ನು ಹೊಂದಿದೆ, ಇದು ಜಾಗತಿಕ ಇಂಧನ ವ್ಯಾಪಾರಕ್ಕೆ ಅತ್ಯಂತ ಮುಖ್ಯವಾಗಿದೆ.

ಮತ್ತಷ್ಟು ಓದಿ: ಇರಾನ್ ಹೊಸ ವರಸೆ; ಹಾರ್ಮುಜ್ ಜಲಸಂಧಿಯಲ್ಲಿ ಟೋಲ್ ಸಂಗ್ರಹಕ್ಕೆ ಆಲೋಚನೆ

ಹಾರ್ಮುಜ್ ಜಲಸಂಧಿಯು ವಿಶ್ವದ ಅತ್ಯಂತ ಪ್ರಮುಖ ಸಮುದ್ರ ಮಾರ್ಗವಾಗಿದೆ. ಇದು ಪರ್ಷಿಯನ್ ಕೊಲ್ಲಿಯನ್ನು ಓಮನ್ ಕೊಲ್ಲಿಗೆ ಮತ್ತು ಮುಂದೆ ಅರೇಬಿಯನ್ ಸಮುದ್ರಕ್ಕೆ ಸಂಪರ್ಕಿಸುತ್ತದೆ. ಇದನ್ನು ಜಾಗತಿಕ ತೈಲ ಪೂರೈಕೆಯ ಜೀವನಾಡಿ ಎಂದು ಕರೆಯಲಾಗುತ್ತದೆ.

ದಿ ಅರೇಬಿಯಾ, ಇರಾನ್, ಇರಾಕ್, ಕುವೈತ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನಂತಹ ದೇಶಗಳು ತಮ್ಮ ತೈಲವನ್ನು ಈ ಮಾರ್ಗದ ಮೂಲಕ ರಫ್ತು ಮಾಡುತ್ತವೆ. ಇದರ ನಿರ್ಬಂಧವು ಪ್ರಪಂಚದಾದ್ಯಂತ ಪೆಟ್ರೋಲ್-ಡೀಸೆಲ್ ಬೆಲೆಗಳು ಮತ್ತು ಅನಿಲದಲ್ಲಿ ಸಮಸ್ಯೆಗಳನ್ನು ಸೃಷ್ಟಿಸಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ಕರ್ನಾಟಕ ಹವಾಮಾನ ವರದಿ: ಕೊಡಗು, ಮೈಸೂರು ಸೇರಿದಂತೆ ಕೆಲವೆಡೆ ಸಾಧಾರಣ ಮಳೆ, 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​!

ಬೆಂಗಳೂರು, ಮಾರ್ಚ್​ 22: ಹಲವು ದಿನಗಳಿಂದ ರಾಜ್ಯದೆಲ್ಲೆಡೆ ಒಣಹವೆಯಿತ್ತು. ಆದರೆ ಇತ್ತೀಚಿಗೆ ಕೆಲ ಜಿಲ್ಲೆಗಳಲ್ಲಿ ಮಳೆ ಸುರಿದು ತಾಪಮಾನ ಸುಧಾರಿಸಿತ್ತು. ಇಂದೂ ಸಹ ಹಲವೆಡೆ ಗುಡುಗು-ಸಿಡಿಲು  (Weather Forecast) ಸಹಿತ ಸಾಧಾರಣ ಮಳೆಯಾಗಲಿದ್ದು, ಬೆಂಗಳೂರಿನಿಂದ ಬೀದರ್​ವರೆಗೆ ಒಟ್ಟೂ 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಸೂಚಿಸಲಾಗಿದೆ. ಉಳಿದೆಡೆ ಒಣ ಹವೆಯ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಯಾವೆಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​?

ಬೆಳಗಾವಿ, ಧಾರವಾಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿರುವುದರಿಂದ ಯೆಲ್ಲೋ ಅಲರ್ಟ್​ ಸೂಚಿಸಲಾಗಿದೆ. ಉತ್ತರ ಒಳನಾಡಿನ ಅದರಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿಯೂ ಗುಡುಗು, ಸಿಡಿಲು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಎಲ್ಲೆಲ್ಲಿ ಒಣ ಹವೆ?

ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆ ಆವರಿಸಲಿದೆ. ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಾಮರಾಜನಗರ, ತುಮಕೂರು, ವಿಜಯನಗರ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಹಾವೇರಿ, ಗದಗ ಮತ್ತು ಧಾರವಾಡ ಬೀದರ್, ವಿಜಯಪುರ, ಬಾಗಲಕೋಟೆ, ಗದಗ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸೇತುವೆ ಮೇಲೆ ನಿಂತಿದ್ದ ಈಚರ್​ ವಾಹನಕ್ಕೆ ಗೂಡ್ಸ್ ಆಟೋ ಡಿಕ್ಕಿ: ಮೂವರು ದಾರುಣ ಸಾವು

ಬೆಂಗಳೂರು, ಮಾರ್ಚ್​​ 22: ನಿಂತಿದ್ದ ಈಚರ್​ ವಾಹನಕ್ಕೆ ಗೂಡ್ಸ್ ಆಟೋ ಡಿಕ್ಕಿಯಾಗಿ ಮೂವರು ದಾರುಣವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರಿನ ಕೆ.ಆರ್​​.ಪುರಂ ಸಂಚಾರ ಠಾಣಾ ವ್ಯಾಪ್ತಿಯ ಮೇಡಹಳ್ಳಿ ಮೇಲ್ಸೇತುವೆ ಮೇಲೆ ನಡೆದಿದೆ. ಅಪಘಾತದ ತೀವ್ರತೆಗೆ ಗೂಡ್ಸ್ ಆಟೋದಲ್ಲಿದ್ದ ಮಣಿಕಂಠ, ಸುರೇಶ್, ಶ್ರೀನಿವಾಸ್ ಪ್ರಾಣ ಕಳೆದುಕೊಂಡಿದ್ದಾರೆ. ಮೃತರು ವೈಟ್ ಫೀಲ್ಡ್ ಮೂಲದವರು ಎಂಬ ಮಾಹಿತಿ ಲಭ್ಯವಾಗಿದೆ.

ಕೋಲಾರದಿಂದ ಬೆಂಗಳೂರಿಗೆ ಆಲೂಗಡ್ಡೆ ತುಂಬಿಸಿಕೊಂಡು ಬರ್ತಿದ್ದ ಕ್ಯಾಂಟರ್ ಮೇಡಹಳ್ಳಿ ಮೇಲ್ಸೇತುವೆ ಮೇಲೆ ಟೈರ್ ಬ್ಲ್ಯಾಸ್ಟ್​​​ ಆಗಿ ನಿಂತಿತ್ತು. ರಸ್ತೆ ಬದಿ ಕ್ಯಾಂಟರ್ ನಿಲ್ಲಿಸಿ ಚಾಲಕ ಟೈರ್ ಚೇಂಜ್ ಮಾಡುತ್ತಿದ್ದ. ಇದೇ ವೇಳೆ ನಿಂತಿದ್ದ ಕ್ಯಾಂಟರ್​​​ಗೆ ಹಿಂದೆಯಿಂದ ಗೂಡ್ಸ್ ಆಟೋ ಡಿಕ್ಕಿಯಾಗಿದೆ. ಸ್ಥಳಕ್ಕೆ ಡಿಸಿಪಿ ನೇಮಗೌಡ ಮತ್ತು ಕೆ.ಆರ್.ಪುರಂ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಕೆ.ಆರ್.ಪುರಂ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

(ಮಾಹಿತಿ ಅಪ್ಡೇಟ್​​ ಆಗುತ್ತಿದೆ)

Source link

Daily Devotional: ಸೂರ್ಯ ಭಗವಾನರಿಗೆ ಅರ್ಘ್ಯ ಕೊಡುವುದರ ಮಹತ್ವವೇನು?

ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಸೂರ್ಯ ಭಗವಾನರಿಗೆ ಅರ್ಘ್ಯ ಕೊಡುವುದರ ಮಹತ್ವವೇನು ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಸೂರ್ಯೋದಯವು ದಿನದ ಪ್ರಾರಂಭವನ್ನು ಸೂಚಿಸುತ್ತದೆ. ನಮ್ಮ ಜೀವನದಲ್ಲಿ ಎದುರಾಗುವ ಎಲ್ಲಾ ಕಷ್ಟ ಮತ್ತು ಸಂಕಷ್ಟಗಳಿಗೆ ದೇವರ ಮೊರೆ ಹೋಗುವಾಗ, ಸೂರ್ಯ ಭಗವಾನ್ ಸಾಕ್ಷಾತ್ ಕಣ್ಣಿಗೆ ಕಾಣುವ ದೇವರಾಗಿದ್ದಾರೆ. ಸೂರ್ಯನು ಗ್ರಹಗಳ ರಾಜನಾಗಿ, ಇಡೀ ಭೂಮಂಡಲವನ್ನು ಬೆಳಗುವ ಶಕ್ತಿಯಾಗಿದ್ದಾನೆ. ಬೆಳಗ್ಗೆ ಎದ್ದ ತಕ್ಷಣ ಸೂರ್ಯ ನಮಸ್ಕಾರ ಮಾಡುವ ಪದ್ಧತಿ ಹಲವರಿಗೆ ಇದ್ದರೂ, ಅದಕ್ಕಿಂತಲೂ ಸರಳವಾದ ಮತ್ತು ಪರಿಣಾಮಕಾರಿ ವಿಧಾನವೆಂದರೆ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುವುದು.

ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುವುದರಿಂದ ಅನಾರೋಗ್ಯದ ಸಮಸ್ಯೆಗಳು ನಿವಾರಣೆಯಾಗುತ್ತವೆ, ಹಿತಶತ್ರುಗಳ ಕಾಟ ಕಡಿಮೆಯಾಗುತ್ತದೆ ಮತ್ತು ಎಲ್ಲಾ ಕೆಲಸ ಕಾರ್ಯಗಳಲ್ಲಿ ಶುಭ ಫಲಗಳು ದೊರೆಯುತ್ತವೆ ಎಂದು ನಂಬಲಾಗಿದೆ. ಆದಿತ್ಯ ಸ್ತೋತ್ರ ಮತ್ತು ಆದಿತ್ಯ ಹೃದಯಂ ಪಠಿಸುವಂತೆಯೇ, ಅರ್ಘ್ಯ ಅರ್ಪಣೆ ಕೂಡ ಅಷ್ಟೇ ಶಕ್ತಿಯುತವಾದ ಸರಳ ತಂತ್ರವಾಗಿದೆ. ಈ ಆಚರಣೆಗೆ ಯಾವುದೇ ಅಗರ್‌ಬತ್ತಿ, ದೀಪ, ಅಲಂಕಾರ, ಹಣ್ಣುಗಳು ಅಥವಾ ನೈವೇದ್ಯದ ಅಗತ್ಯವಿರುವುದಿಲ್ಲ. ಕೇವಲ ಅರ್ಘ್ಯದ ಮೂಲಕವೇ ಎಲ್ಲಾ ಸಂಕಲ್ಪಗಳನ್ನು ಈಡೇರಿಸಿಕೊಳ್ಳುವ ಪ್ರಯತ್ನ ಮಾಡಬಹುದು ಎಂದು ಡಾ.ಬಸವರಾಜ ಗುರೂಜಿ ಹೇಳಿದ್ದಾರೆ.

 

 

 

Source link

ಬಾಕ್ಸ್ ಆಫೀಸ್​ನಲ್ಲಿ ‘ಧುರಂಧರ್ 2’ ಸುನಾಮಿ: 3 ದಿನಕ್ಕೆ 300 ಕೋಟಿ ರೂಪಾಯಿ ಮೀರಿದ ಗಳಿಕೆ

ನಟ ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ (Dhurandhar 2) ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಮೋಡಿ ಮಾಡುತ್ತಿದೆ. ಪ್ರೇಕ್ಷಕರು ಈ ಸಿನಿಮಾವನ್ನು ಮುಗಿಬಿದ್ದು ನೋಡುತ್ತಿದ್ದಾರೆ. ಪರಿಣಾಮವಾಗಿ ಭರ್ಜರಿ ಕಲೆಕ್ಷನ್ ಆಗುತ್ತಿದೆ. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅದರ ನಡುವೆಯೂ ಗಳಿಕೆ ಜೋರಾಗಿದೆ. ಪ್ರೀಮಿಯರ್ ಶೋ ಸೇರಿಸಿ ಕೇವಲ ಮೂರೇ ದಿನಕ್ಕೆ ‘ಧುರಂಧರ್ 2’ ಸಿನಿಮಾದ ಕಲೆಕ್ಷನ್ (Dhurandhar 2 Box Office Collection) 300 ಕೋಟಿ ರೂಪಾಯಿ ಮೀರಿದೆ. ಆ ಬಗ್ಗೆ ಇಲ್ಲಿದೆ ವಿವರ..

ಮಾರ್ಚ್ 18ರ ಸಂಜೆಯಿಂದ ‘ಧುರಂಧರ್ 2’ ಸಿನಿಮಾಗೆ ಪ್ರೀಮಿಯರ್ ಶೋ ಆರಂಭ ಆಯಿತು. ಅಂದು ಈ ಚಿತ್ರಕ್ಕೆ 43 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. ಮಾರ್ಚ್ 19ರಂದು ಎಲ್ಲ ಕಡೆಗಳಲ್ಲಿ ಈ ಸಿನಿಮಾ ಅದ್ದೂರಿಯಾಗಿ ಬಿಡುಗಡೆ ಆಯಿತು. ಆ ದಿನ 102.55 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಶುಕ್ರವಾರ (ಮಾರ್ಚ್ 20) 80.72 ಕೋಟಿ ರೂಪಾಯಿ ಕಮಾಯಿ ಮಾಡಿತು. ಶನಿವಾರ (ಮಾರ್ಚ್ 21) ಬರೋಬ್ಬರಿ 113 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು Sacnilk ವರದಿ ಮಾಡಿದೆ.

ಒಂದು ಸಿನಿಮಾ ಒಂದೇ ದಿನದಲ್ಲಿ ನೂರು ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವುದು ಎಂದರೆ ತಮಾಷೆಯೇ ಅಲ್ಲ. ಟಿಕೆಟ್ ಬೆಲೆ ಏರಿಕೆ ಆಗಿದೆ. ಹಾಗಿದ್ದರೂ ಕೂಡ ಜನರು ಈ ಸಿನಿಮಾವನ್ನು ವೀಕ್ಷಿಸುತ್ತಿದ್ದಾರೆ. ಅನೇಕರಿಗೆ ಈ ಸಿನಿಮಾ ಇಷ್ಟ ಆಗಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ವಿಮರ್ಶೆಗಳು ಕೂಡ ಹೆಚ್ಚಾಗಿವೆ. ಅದರ ನಡುವೆಯೂ ಈ ಸಿನಿಮಾ ಪ್ರತಿ ದಿನ ನೂರಾರು ಕೋಟಿ ರೂಪಾಯಿ ಗಳಿಸುತ್ತಿದೆ.

ರಣವೀರ್ ಸಿಂಗ್, ಸಂಜಯ್ ದತ್, ಅರ್ಜುನ್ ರಾಮ್​ಪಾಲ್, ರಾಕೇಶ್ ಬೇಡಿ, ಸಾರಾ ಅರ್ಜುನ್ ಮುಂತಾದವರು ‘ಧುರಂಧರ್ 2’ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ನಿರ್ದೇಶಕ ಆದಿತ್ಯ ಧಾರ್ ಅವರು ಈ ಸಿನಿಮಾದಿಂದ ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ. ಅನುಪಮ್ ಖೇರ್, ರಿಷಬ್ ಶೆಟ್ಟಿ, ಜೂನಿಯರ್ ಎನ್​ಟಿಆರ್, ರವಿತೇಜ ಮುಂತಾದ ಸೆಲೆಬ್ರಿಟಿಗಳು ಈ ಸಿನಿಮಾವನ್ನು ಹೊಗಳಿದ್ದಾರೆ.

ಇದನ್ನೂ ಓದಿ: ಕಂಗನಾ ಮಾಡಿದ ‘ಎಮರ್ಜೆನ್ಸಿ’ ಸಿನಿಮಾ 2 ದಿನ ಓಡಲಿಲ್ಲ: ಖಾರವಾಗಿ ಹೇಳಿದ ‘ಧುರಂಧರ್ 2’ ನಟ

ಬಿಡುಗಡೆಗೂ ಮುನ್ನವೇ ‘ಧುರಂಧರ್ 2’ ಸಿನಿಮಾ ಬಗ್ಗೆ ವಿವಾದ ಶುರುವಾಗಿತ್ತು. ಇದೊಂದು ಪ್ರೊಪೊಗಾಂಡ ಸಿನಿಮಾ ಎಂದು ಟೀಕಿಸಲಾಗುತ್ತಿದೆ. ಬಿಜೆಪಿ ಸರ್ಕಾರದ ಲೋಪಗಳನ್ನು ಮುಚ್ಚಿ ಹಾಕುವ ಪ್ರಯತ್ನ ಈ ಸಿನಿಮಾದಲ್ಲಿ ಮಾಡಲಾಗಿದೆ ಎಂಬ ಆರೋಪ ಎದುರಾಗಿದೆ. ಮುಂದಿನ ದಿನಗಳಲ್ಲಿ ‘ಧರಂಧರ್ 2’ ಸಿನಿಮಾ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Horoscope Today 22nd​​ March​: ಇಂದು ಈ ರಾಶಿಯವರ ವಿವಾಹದಲ್ಲಿ ಅಡ್ಡಿ!

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮಾರ್ಚ್​ 22, ಭಾನುವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ಪರಾಭವನಾಮ ಸಂವತ್ಸರ, ಉತ್ತರಾಯಣ, ಚೈತ್ರಮಾಸ, ವಸಂತಋತು, ಶುಕ್ಲಪಕ್ಷದ ಶುಭ ದಿನವಾಗಿದೆ. ಮೇಷ ರಾಶಿಯವರಿಗೆ ಆರು ಗ್ರಹಗಳ ಶುಭ ಫಲವಿದ್ದು, ಆರ್ಥಿಕವಾಗಿ ಉತ್ತಮವಾಗಿರುತ್ತದೆ. ಯೋಜನೆಗಳು ಯಶಸ್ವಿಯಾಗುತ್ತವೆ ಮತ್ತು ಹಳೆಯ ಉಳಿತಾಯದಿಂದ ಲಾಭವಿರುತ್ತದೆ. ವೃಷಭ ರಾಶಿಯವರಿಗೆ ಮಾನಸಿಕ ನೆಮ್ಮದಿ, ಹೊಸ ಯೋಜನೆಗಳಿಗೆ ಮನ್ನಣೆ ಮತ್ತು ಗೃಹ ನಿರ್ಮಾಣ ಯೋಗವಿದೆ. ಆದಾಗ್ಯೂ, ವಾಹನ ಸಂಚಾರದಲ್ಲಿ ಜಾಗ್ರತೆ ವಹಿಸಬೇಕು. ಮಿಥುನ ರಾಶಿಯವರಿಗೆ ಆರ್ಥಿಕವಾಗಿ ಉತ್ತಮವಾಗಿದ್ದು, ಉದ್ಯೋಗದಲ್ಲಿ ಬಡ್ತಿ ಮತ್ತು ಅವಿವಾಹಿತರಿಗೆ ವಿವಾಹ ಯೋಗವಿದೆ ಎಂದು ಡಾ.ಬಸವರಾಜ ಗುರೂಜಿ ಹೇಳಿದ್ದಾರೆ.

 

 

 

Source link

ಡಿಆರ್​ಐನಿಂದ ಭರ್ಜರಿ ಕಾರ್ಯಾಚರಣೆ: ರೈಲಿನಲ್ಲಿ ಸಾಗಿಸುತ್ತಿದ್ದ 9 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ

ಬೆಂಗಳೂರು, ಮಾರ್ಚ್​​ 22: ದೆಹಲಿಯಿಂದ ಬೆಂಗಳೂರಿಗೆ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಸಾಗಾಟ ಮಾಡುತ್ತಿದ್ದ 9 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುವನ್ನು ಜಪ್ತಿ ಮಾಡಲಾಗಿದೆ. DRI ಅಧಿಕಾರಿಗಳು ಯಶಸ್ವಿ ಕಾರ್ಯಾಚರಣೆ ನಡೆಸಿ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ನಾಯಿಗೆ ನೀಡುವ ಆಹಾರದ ಪ್ಯಾಕೆಟ್‌ಗಳಲ್ಲಿ ಅಡಗಿಸಿ, ಯಾರಿಗೂ ಅನುಮಾನ ಬಾರದಂತೆ ಇವನ್ನು ಸಾಗಿಸಲು ಪ್ರಯತ್ನಿಸಲಾಗಿತ್ತು. ಮಾಹಿತಿ ಆಧರಿಸಿ ಕಾರ್ಯಪ್ರವೃತ್ತರಾದ ಡಿಆರ್​ಐ ಅಧಿಕಾರಿಗಳು ರೈಲಿನಲ್ಲಿಯೇ ಈ ದಂಧೆಯನ್ನು ಪತ್ತೆ ಹಚ್ಚಿ, ಡ್ರಗ್ಸ್ ಸಹಿತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ವ್ಯಕ್ತಿಯ ಜೊತೆ ಸಂಪರ್ಕದಲ್ಲಿದ್ದ ಮತ್ತಿಬ್ಬರನ್ನೂ ಕೂಡ ಅಧಿಕಾರಿಗಳು ಅರೆಸ್ಟ್​​ ಪಡೆದಿದ್ದಾರೆ.  ಬಂಧಿತ ಆರೋಪಿಯ ಬೆಂಗಳೂರಿನ ಮನೆಯಲ್ಲಿ ಶೋಧ ನಡೆಸಿದಾಗ 40 ಡೆಬಿಟ್ ಕಾರ್ಡ್‌ಗಳು ಮತ್ತು 70ಕ್ಕೂ ಹೆಚ್ಚು ಸಿಮ್ ಕಾರ್ಡ್‌ಗಳು ಪತ್ತೆಯಾಗಿವೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಮಧ್ಯರಾತ್ರಿ ಜವರಾಯನ ಅಟ್ಟಹಾಸ: ಕಾಶಿಗೆಂದು ಹೊರಟಿದ್ದ ಮೂವರು ಮಹಿಳೆಯರು ಭೀಕರ ಅಪಘಾತಕ್ಕೆ ಬಲಿ

ದೇವನಹಳ್ಳಿ, ಮಾರ್ಚ್​​ 22: ದೇವನಹಳ್ಳಿ ಹೊರವಲಯದ ರಾಣಿ ಕ್ರಾಸ್ ಬಳಿ ಮಧ್ಯರಾತ್ರಿ ನಡೆದ ಭೀಕರ ಅಪಘಾತದಲ್ಲಿ ಮೂವರು ಮಹಿಳೆಯರು ದಾರುಣವಾಗಿ ಮೃತಪಟ್ಟಿದ್ದಾರೆ. ಹೈವೆಯಿಂದ ಸರ್ವೀಸ್ ರಸ್ತೆಗೆ‌ ಬರುತ್ತಿದ್ದ ಟಿಟಿಗೆ ಲಾರಿ ಡಿಕ್ಕಿಯಾದ ಪರಿಣಾಮ ಟಿಟಿ ವಾಹನದಲ್ಲಿದ್ದ ಮೂವರು ಮಹಿಳೆಯರು ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ. ಜಯಮ್ಮ(60), ಯಶೋದಮ್ಮ(60), ಗಂಗಾ(38) ಮೃತರು. ಟಿಟಿ ವಾಹನ ಚಾಲಕ ಸೇರಿದಂತೆ 8 ಜನರಿಗೆ ಅಪಘಾತದಲ್ಲಿ ಗಾಯಗಳಾಗಿವೆ. ದೇವನಹಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಕೆಂಪಮ್ಮ‌ ಎಂಬುವವರಿಗೆ ಗಂಭೀರ ಗಾಯಗೊಂಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

15 ದಿನಗಳ ಪ್ರವಾಸಕ್ಕೆಂದು ಒಂದೇ ಏರಿಯಾದ ಜನರು ಹೊರಟಿದ್ದರು. ಸ್ತ್ರೀ ಶಕ್ತಿ ಸಂಘಟನೆ ಚೀಟಿ ಮೂಲಕ‌ ಪ್ರವಾಸದ ಪ್ಲಾನ್ ಮಾಡಿದ್ದ 12 ಜನರ ತಂಡ ಇಂದು ಬೆಳಗ್ಗೆ 6 ಗಂಟೆಯ ಪ್ಲೈಟ್ ನಲ್ಲಿ ಕಾಶಿಗೆ ಟಿಕೆಟ್ ಬುಕ್ ಮಾಡಿತ್ತು. ಹೀಗಾಗಿ ತಿಪಟೂರಿನಿಂದ ಕೆಂಪೇಗೌಡ ಏರ್ಪೋರ್ಟ್​​ಗೆ ಟಿಟಿ ವಾಹನದ ಮೂಲಕ ರಾತ್ರಿ 10 ಗಂಟೆ ಸುಮಾರಿಗೆ ಹೊರಟಿದ್ದರು. ಏರ್​​ಪೋರ್ಟ್​​ನ ಟರ್ಮಿನಲ್​​ ದಾರಿಯ ಬಗ್ಗೆ ಸರಿಯಾಗಿ ತಿಳಿದಿರದ ಕಾರಣ ಗೂಗಲ್ ಮ್ಯಾಪ್ ಹಾಕಿಕೊಂಡು ಟಿಟಿ ಚಾಲಕ ವಾಹನ ಚಾಲನೆ ಮಾಡುತ್ತಿದ್ದ. ಅಪಘಾತ ನಡೆದ ಸ್ಥಳಕ್ಕೂ ಹಿಂದೆಯೇ ಸರ್ವೀಸ್​​ ರಸ್ತೆಗೆ ಮೊದಲ ಟರ್ನಿಂಗ್ ಇತ್ತು. ಆದರೆ ಅದು ಗೊತ್ತಾಗದೆ ಮುಂದೆ ಪಾಸ್ ಆಗಿದ್ದ ಟಿಟಿ ವಾಹನ ಮುಂದಿನ ಟರ್ನಿಂಗ್​​ನಲ್ಲಿ ಯೂಟರ್ನ್​​ ಪಡೆಯುವ ವೇಳೆ ಲಾರಿ ಟಿಟಿಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಟಿಟಿಯ ಎಡಭಾಗ ಸಂಪೂರ್ಣ ಜಖಂ ಆಗಿದ್ದು, ಸಿಂಗಲ್ ಸೀಟ್ಗಳಲ್ಲಿ ಕುಳಿತಿದ್ದ ಮೂವರು ಮಹಿಳೆಯರ ದುರ್ಮರಣ ಹೊಂದಿದ್ದಾರೆ.

ಇದನ್ನೂ ಓದಿ:  ಡಿಜಿಟಲ್ ಅರೆಸ್ಟ್ ಎಂದು ಯಾಮಾರಿಸಿ ವೃದ್ಧ ಉದ್ಯಮಿಯ 15 ಕೋಟಿ ರೂ. ಎಗರಿಸಿದ್ರು!

ಅಪಘಾತದ ಬಗ್ಗೆ ಟಿವಿ9ಗೆ ಸಂಚಾರಿ ವಿಭಾಗ ಎಸಿಪಿ ಪ್ರದೀಪ್‌‌‌ ಪ್ರತಿಕ್ರಿಯಿಸಿದ್ದು, ಟಿಟಿ ವಾಹನ ಏರ್ಪೋರ್ಟ್​​ಗೆ ಡ್ರಾಪ್ ಕೊಡುವುದಕ್ಕೆಂದು ತೆರಳುತ್ತಿತ್ತು. ಗೂಗಲ್ ಮ್ಯಾಪ್ ನೋಡಿಕೊಂಡು ಬರ್ತಿದ್ದ ಚಾಲಕ ವೇಳೆ ರೋಡ್ ಮಿಸ್ ಆಗಿ ಮುಂದೆ ಬಂದಿದ್ದಾನೆ. ರೈಟ್ ಸೈಡ್ ಅಲ್ಲಿ ಇದ್ದ ಟಿಟಿ ಸೆಂಟರ್ ಲೈನ್​​ಗೆ ಸಡನ್ ಆಗಿ ಬಂದಿದೆ. ಈ ವೇಳೆ ಪಕ್ಕದಲ್ಲಿದ್ದ ಲಾರಿ ಡಿಕ್ಕಿ ಹೊಡೆದಿದೆ. ಒವರ್ ಸ್ಪೀಡ್ ಇದ್ದ ಕಾರಣ ಇಷ್ಟು ದೊಡ್ಡ ಅಪಘಾತವಾಗಿರುವ ಶಂಕೆ ಇದೆ. ಅಪಘಾತದ ನಂತರ ಚಾಲಕ ಲಾರಿ ಬಿಟ್ಟು ಎಸ್ಕೇಪ್ ಆಗಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 22ರ ದಿನಭವಿಷ್ಯ

ಈ ದಿನ ಹಳದಿ ಬಣ್ಣದ ಕರವಸ್ತ್ರವನ್ನು ನಿಮ್ಮ ಬಳಿ ಇಟ್ಟುಕೊಳ್ಳಿ, ಹೀಗೆ ಮಾಡುವುದರಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ಮಕ್ಕಳ ಶಿಕ್ಷಣಕ್ಕೆ ಅಗತ್ಯವಾದ ಹಣಕಾಸನ್ನು ಹೊಂದಾಣಿಕೆ ಮಾಡುವ ಬಗ್ಗೆ ಸಂಗಾತಿ ಜೊತೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಈ ದಿನ ಭಾರವಾದ ವಸ್ತುಗಳನ್ನು ಎತ್ತುವಾಗ ಎಚ್ಚರಿಕೆಯನ್ನು ವಹಿಸಿ. ಇಲ್ಲದಿದ್ದರೆ ಬೆನ್ನು ಹಿಡಿದುಕೊಳ್ಳುವಂತೆ ಆಗುವುದು ಅಥವಾ ಉಳುಕುವುದು ಈ ರೀತಿಯ ತೊಂದರೆಗಳು ಕಾಣಿಸಿಕೊಳ್ಳಬಹುದು. ಬಾಡಿಗೆ ಮನೆಯಲ್ಲಿದ್ದು, ಅದರ ಬದಲಾವಣೆಗಾಗಿ ಪ್ರಯತ್ನಿಸುತ್ತಾ ಇರುವವರಿಗೆ ಮನಸ್ಸಿಗೆ ಹಿಡಿಸುವಂಥ ಮನೆ ದೊರೆಯಲಿದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ನಿತ್ಯವೂ ಕಾಣುವ ವಿಚಾರಗಳಲ್ಲಿಯೇ ಏನೋ ಬದಲಾವಣೆಗಳು ಆಗುತ್ತಿವೆ ಎಂಬುದು ಗಟ್ಟಿಯಾಗಿ ನಿಮ್ಮ ಮನಸ್ಸಿನಲ್ಲಿ ಬೇರೂರಲಿದೆ. ಮದುವೆಗೆ ಪ್ರಯತ್ನ ಮಾಡುತ್ತಿರುವ ವಿವಾಹ ವಯಸ್ಕರಿಗೆ ಸೂಕ್ತ ಸಂಬಂಧ ದೊರೆಯುವ ಸಾಧ್ಯತೆಗಳು ಇವೆ. ದೂರದ ಊರುಗಳಲ್ಲಿ ಇರುವ ಸಂಬಂಧಿಕರು ಕೆಲವು ವಿಚಾರಗಳಲ್ಲಿ ಸಹಾಯ ಮಾಡುವಂತೆ ನಿಮ್ಮನ್ನು ಕೇಳಿಕೊಳ್ಳಬಹುದು.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ನಿಮ್ಮಿಂದ ಅದು ಮಾಡಲಿಕ್ಕೆ ಸಾಧ್ಯವೇ ಎಂಬುದರ ಬಗ್ಗೆ ಆಲೋಚಿಸಿದ ನಂತರವಷ್ಟೇ ಉತ್ತರವನ್ನು ಹೇಳಿ. ಸರ್ಕಾರಿ ಕೆಲಸ ಮಾಡುತ್ತಿರುವವರಿಗೆ ನಿಯೋಜನೆ ಮೇಲೆ ಹೆಚ್ಚುವರಿಯಾಗಿ ಜವಾಬ್ದಾರಿಗಳನ್ನು ವಹಿಸುವ ಬಗ್ಗೆ ನಿಮಗೆ ಸೂಚನೆ ಬರಬಹುದು. ಆಹಾರ ಪಥ್ಯವನ್ನು ಪಾಲನೆ ಮಾಡುವ ವಿಚಾರದಲ್ಲಿ ಯಾವುದೇ ರಾಜೀ ಮಾಡಿಕೊಳ್ಳಬೇಡಿ. ಮನೆಗೆ ಪೀಠೋಪಕರಣಗಳನ್ನು ಖರೀದಿಸಿ ತರುವುದಕ್ಕೆ ನಿಮ್ಮಲ್ಲಿ ಕೆಲವರು ಕ್ರೆಡಿಟ್ ಕಾರ್ಡ್ ಬಳಸುವ ಯೋಗ ಇದೆ.

ಲೇಖನ- ಸ್ವಾತಿ ಎನ್.ಕೆ.

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 22ರ ದಿನಭವಿಷ್ಯ

ಈ ದಿನ ಯಾವುದೇ ಮುಖ್ಯ ಕೆಲಸ- ಕಾರ್ಯ, ಹಣಕಾಸಿನ ಮಾತುಕತೆ ಮಾಡಬೇಕು ಎಂದಿದ್ದಲ್ಲಿ ರಾಘವೇಂದ್ರ ಸ್ವಾಮಿಗಳು ಅಥವಾ ಸಾಯಿಬಾಬಾರವರನ್ನು ಸ್ಮರಿಸಿ ಮುಂದುವರಿಯಿರಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಮೇಲಿಂದ ಮೇಲೆ ಭಾವನಾತ್ಮಕವಾಗಿ ಭಾರವಾದ ಮಾತುಗಳನ್ನು ಕೇಳಿಸಿಕೊಳ್ಳುವ ಸನ್ನಿವೇಶಗಳು ಉದ್ಭವ ಆಗಲಿವೆ. ನಾಲ್ಕು ಗೋಡೆಯ ಮಧ್ಯೆ ಮಾತನಾಡಿ ಮುಗಿಸಿಕೊಳ್ಳಬೇಕಾದ ವಿಷಯಗಳನ್ನು ಅದೇ ರೀತಿ ಮಾತಾಡಿ ಮುಗಿಸಿಕೊಳ್ಳಿ. ಹೆಚ್ಚು ಕಷ್ಟ ಆಗಬಹುದಾದಂಥ ವಿಷಯಗಳು ಅಥವಾ ವಿಚಾರಗಳನ್ನು ಪ್ರಭಾವ ಬಳಸಿಕೊಂಡು ಪೂರ್ಣ ಮಾಡುವ ಕುರಿತು ತೀರ್ಮಾನ ಮಾಡಲಿದ್ದೀರಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಉದ್ಯೋಗ ಬದಲಾವಣೆ ಮಾಡಬೇಕು ಎಂದೇನಾದರೂ ಪ್ರಯತ್ನ ಮಾಡುತ್ತಾ ಇರುವವರಿಗೆ ನಿರೀಕ್ಷೆ ಕೂಡ ಮಾಡಿರದಂಥ ವ್ಯಕ್ತಿಗಳಿಂದ ನೆರವು ದೊರೆಯಲಿದೆ. ಈ ಹಿಂದೆ ಹೂಡಿಕೆ ಮಾಡಿದಂಥ ಹಣದ ಪೈಕಿ ಸ್ವಲ್ಪ ಮೊತ್ತವನ್ನು ಹಿಂತೆಗೆದುಕೊಳ್ಳಬೇಕು ಎಂದು ಆಲೋಚನೆ ಶುರು ಆಗಲಿದೆ. ನಿಮ್ಮಲ್ಲಿ ಕೆಲವರು ದ್ವಿಚಕ್ರ ವಾಹನ ಅಥವಾ ಕಾರು ಖರೀದಿ ಮಾಡುವ ಬಗ್ಗೆ ಆಲೋಚನೆ ಮಾಡಲಿದ್ದೀರಿ, ಇದಕ್ಕಾಗಿ ಹಣವನ್ನು ಅಡ್ವಾನ್ಸ್ ನೀಡುವ ಸಾಧ್ಯತೆ ಸಹ ಇದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಗೆಳೆತನದಲ್ಲಿ ಯಾವುದೆಲ್ಲ ಸಹಜ ಎಂದು ಭಾವಿಸಿದ್ದಿರೋ ಅದು ಹಾಗಲ್ಲ ಎಂದೆನಿಸಲಿದೆ. ಅಂತರಂಗದ ವಿಚಾರಗಳನ್ನು ಸಲುಗೆಯ ಕಾರಣಕ್ಕೆ ಹಂಚಿಕೊಳ್ಳಬಾರದು ಎಂಬ ಸಲಹೆಯನ್ನು ಕುಟುಂಬ ಸದಸ್ಯರು ನೀಡಲಿದ್ದು, ಇದು ನಿಮಗೂ ಸರಿ ಎನಿಸಲಿದೆ. ವ್ಯಾಪಾರ- ವ್ಯವಹಾರ ಮಾಡುತ್ತಿರುವವರು ಆದಾಯದ ಮೂಲಗಳನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ಆಲೋಚನೆ ಮಾಡಲಿದ್ದೀರಿ.

ಲೇಖನ- ಸ್ವಾತಿ ಎನ್.ಕೆ.

Source link