ಲೈಂಗಿಕ ಕಿರುಕುಳ ಆರೋಪದ ಮೇಲೆ ‘ಸ್ಪಿರಿಟ್’ ನಿರ್ದೇಶಕ ಅರೆಸ್ಟ್
ಮಲಯಾಳಂ ನಿರ್ದೇಶಕ ಹಾಗೂ ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರು ಲೈಂಗಿಕ ಕಿರಕುಳ ನೀಡಿದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದಾರೆ. ಹೇಮಾ ಕಮಿಟಿ ವರದಿಯಲ್ಲಿ ಇವರ ಬಗ್ಗೆ ಈ ರೀತಿಯ ಸಾಕಷ್ಟು ಆರೋಪಗಳು ಎದುರಾಗಿದ್ದವು. ಈಗ ಎರ್ನಾಕುಲಮ್ ಸೆಂಟ್ರಲ್ ಪೊಲೀಸರು ಅವರನ್ನು ಬಂಧಿಸಿದ್ದಾರೆ. ನಟಿಯರಿಗೆ ಇವರು ಸಾಕಷ್ಟು ಕಿರುಕುಳ ನೀಡಿದ್ದರು ಎನ್ನಲಾಗಿದೆ. ಯುವ ನಟಿಯೊಬ್ಬರು ರಂಜಿತ್ ಮೇಲೆ ಕೊಚ್ಚಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಸೆಟ್ನಲ್ಲಿ ರಂಜಿತ್ ಸರಿಯಾಗಿ ನಡೆದುಕೊಳ್ಳುತ್ತಿರಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ…