All posts by nagaraj11081993

ಪತಿಯ ಸಿನಿಮಾ ದೊಡ್ಡ ಸಕಸ್ಸ್ ಕಂಡರೂ ತುಟಿಪಿಟಿಕ್ ಎನ್ನದ ದೀಪಿಕಾ ಪಡುಕೋಣೆ

ಪತಿಯ ಸಿನಿಮಾ ದೊಡ್ಡ ಸಕಸ್ಸ್ ಕಂಡರೂ ತುಟಿಪಿಟಿಕ್ ಎನ್ನದ ದೀಪಿಕಾ ಪಡುಕೋಣೆ

ಬಾಲಿವುಡ್​ ಸಿನಿಮಾ ‘ಧುರಂಧರ್ 2’ (Dhurandhar 2) ಸೂಪರ್ ಹಿಟ್ ಆಗಿದೆ. ರಣವೀರ್ ಸಿಂಗ್ ನಟನೆಯ ಈ ಚಿತ್ರ ಗಮನ ಸೆಳೆಯುತ್ತಿದೆ. ಸಿನಿಮಾ ಬಾಕ್ಸ್ ಆಫೀಸ್​​​ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ರಣವೀರ್ ವೃತ್ತಿ ಜೀವನದ ಅತ್ಯಂತ ದೊಡ್ಡ ಯಶಸ್ಸು ಇದು. ಆದಾಗ್ಯೂ ಅವರ ಪತ್ನಿ ದೀಪಿಕಾ ಪಡುಕೋಣೆ ಅವರು ಈ ಬಗ್ಗೆ ಯಾವುದೇ ಪೋಸ್ಟ್ ಮಾಡಿಲ್ಲ. ಇದಕ್ಕೆ ಕಾರಣ ಏನು ಎಂಬ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.

‘ಧುರಂಧರ್ 2’ ಸಿನಿಮಾ ಮಾರ್ಚ್ 19ರಂದು ರಿಲೀಸ್ ಆಯಿತು. ಈದ್ ಪ್ರಯುಕ್ತ ಈ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರ ಭರ್ಜರಿ ಸಕಸ್ಸ್​ ಕಂಡಿದೆ. ಸಿನಿಮಾ ಎರಡನೇ ದಿನಕ್ಕೆ ಭಾರತದಲ್ಲಿ 269 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಈ ಚಿತ್ರವನ್ನು ನೋಡಿದವರೆಲ್ಲರೂ ಹಾಡಿ ಹೊಗಳುತ್ತಿದ್ದಾರೆ. ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಸಿನಿಮಾ ಇಷ್ಟ ಆಗಿದೆ.

ಆದರೆ, ದೀಪಿಕಾ ಪಡುಕೋಣೆ ಮಾತ್ರ ಈ ವಿಷಯದಲ್ಲಿ ಇನ್ನೂ ಮೌನವಾಗಿದ್ದಾರೆ. ಈ ಬಗ್ಗೆ ರಣವೀರ್ ಸಿಂಗ್ ಅವರ ಪತ್ನಿ ದೀಪಿಕಾ ಏಕೆ ಮೌನವಾಗಿದ್ದಾರೆ ಎಂದು ಎಲ್ಲರೂ ಕೇಳುತ್ತಿದ್ದಾರೆ. ಈ ಬಗ್ಗೆ ಅವರು ಯಾವುದೇ ಪೋಸ್ಟ್ ಹಾಕಿಲ್ಲ. ಅವರು ಪ್ರೀಮಿಯರ್ ಶೋಗಳಲ್ಲೂ ಕಾಣಿಸಿಕೊಂಡಿಲ್ಲ. ಇದು ಏಕೆ ಎಂಬ ಚರ್ಚೆ ನಡೆಯುತ್ತಿದೆ.

ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ದೀಪಿಕಾ ಪಡುಕೋಣೆ ಅವರು ಎಡಪಂಥೀಯ ಆಲೋಚನೆಗಳಿಂದ ಪ್ರಭಾವಿತರಾದವರು ಎಂದು ಹೇಳಲಾಗುತ್ತಾ ಇದೆ. ‘ಧುರಂಧರ್ 2’ ಸಿನಿಮಾ ಬಲ ಪಂಥೀಯ ಚಿಂತನೆಗಳನ್ನು ಹೊಂದಿದೆ. ಈ ಕಾರಣದಿಂದ ದೀಪಿಕಾ ಪಡುಕೋಣೆ ಅವರು ಮೌನ ತಾಳಿರಬಹುದು ಎಂಬ ಚರ್ಚೆ ನಡೆದಿದೆ.

ಇದನ್ನೂ ಓದಿ: ಆ ಒಂದು ವಿಷಯದ ಬಗ್ಗೆ ಕಂಪ್ಲೇಂಟ್ ಮಾಡಿದ ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ ಅವರು ಮಗುವಿನ ಆರೈಕೆಯಲ್ಲಿ ಬ್ಯುಸಿ ಇದ್ದಾರೆ. ಈ ಕಾರಣಕ್ಕೆ ಅವರು ಸಿನಿಮಾ ನೋಡೋದು ವಿಳಂಬ ಮಾಡುತ್ತಿರಬಹುದು ಎಂದು ಹೇಳಲಾಗುತ್ತಾ ಇದೆ. ಈ ಕಾರಣದಿಂದ ಅವರು ಈ ಬಗ್ಗೆ ಮೌನ ತಾಳಿರಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಆರೋಗ್ಯ ಕ್ಷೇತ್ರಕ್ಕೂ ತಟ್ಟಿದ ಯುದ್ಧದ ಬಿಸಿ; ಸಿಲಿಂಡರ್ ಇಲ್ಲದೆ ರೋಗಿಗಳಿಗೂ ಪ್ರಾಬ್ಲಮ್!

ಗದಗ, ಮಾರ್ಚ್​ 21: ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ದೇಶದಾದ್ಯಂತ ಇಂಧನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ಅದರ ಬಿಸಿ ಇದೀಗ ಗದಗ (Gadag) ಜಿಲ್ಲೆಯಲ್ಲಿ ಆರೋಗ್ಯ ಕ್ಷೇತ್ರಕ್ಕೂ ತಟ್ಟಿದೆ. ಗದಗದ ಸರ್ಕಾರಿ ಆಯುಷ್ಯ ಆಸ್ಪತ್ರೆಯಲ್ಲಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಕೊರತೆ ತೀವ್ರವಾಗಿ ಎದುರಾಗಿದ್ದು, ಚಿಕಿತ್ಸೆ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿದೆ.

ತಾತ್ಕಾಲಿಕವಾಗಿ 5ಕೆಜಿ ಸಿಲಿಂಡರ್ ಬಳಕೆ

ಪಂಚಕರ್ಮ ಚಿಕಿತ್ಸೆಗೆ ಗ್ಯಾಸ್ ಸಿಲಿಂಡರ್ ಅತ್ಯಾವಶ್ಯಕವಾಗಿದ್ದು, ಮಸಾಜ್ ಎಣ್ಣೆ ಬಿಸಿ ಮಾಡಲು ಹಾಗೂ ಸ್ಟೀಮ್ ಚಿಕಿತ್ಸೆ ನೀಡಲು ಗ್ಯಾಸ್ ಅವಶ್ಯಕವಾಗಿದೆ. ಆದರೆ 19 ಕೆಜಿ ಕಮರ್ಷಿಯಲ್ ಸಿಲಿಂಡರ್ ಲಭ್ಯವಿಲ್ಲದ ಕಾರಣ ಆಸ್ಪತ್ರೆ ಆಡಳಿತವು ಇದೀಗ 5 ಕೆಜಿ ಸಿಲಿಂಡರ್‌ಗಳನ್ನು ಬಳಸಿಕೊಂಡು ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿದೆ.

ಇದನ್ನೂ ಓದಿ ಲಕ್ಕುಂಡಿ ನಿಧಿ ರಹಸ್ಯ ಕೊನೆಗೂ ಬಯಲು, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪುರಾತತ್ವ ತಜ್ಞರು

ಎಲೆಕ್ಟ್ರಾನಿಕ್ ಸಾಧನ ಬಳಸುವಂತೆ ಯೋಜನೆ

ಆಸ್ಪತ್ರೆಗೆ ಪ್ರತಿದಿನ 10 ರಿಂದ 20 ರೋಗಿಗಳು ದಾಖಲಾಗುತ್ತಿದ್ದು, ಪಾರ್ಶ್ವವಾಯು, ಮಂಡಿ ಹಾಗೂ ಬೆನ್ನುನೋವು ಸೇರಿದಂತೆ ಹಲವು ಸಮಸ್ಯೆಗಳಿಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಸಿಲಿಂಡರ್ ಕೊರತೆಯಿಂದ ರೋಗಿಗಳಿಗೆ ನೀಡುವ ಸ್ಟೀಮ್ ಚಿಕಿತ್ಸೆ ಹಾಗೂ ಆಹಾರ ವ್ಯವಸ್ಥೆಯಲ್ಲೂ ತೊಂದರೆ ಉಂಟಾಗಿದೆ. ಸಮಸ್ಯೆ ನಿವಾರಣೆಗೆ ಪರ್ಯಾಯವಾಗಿ ಎಲೆಕ್ಟ್ರಾನಿಕ್ ಒಲೆಗಳು ಹಾಗೂ ಕುಕ್ಕರ್ ಬಳಕೆಗೆ ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ. ಯಾವುದೇ ವ್ಯತ್ಯಯ ಉಂಟಾಗದಂತೆ ಚಿಕಿತ್ಸೆ ಮುಂದುವರಿಸುತ್ತಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಆರ್​ಸಿಬಿ ಟೀಮ್​ಮೇಟ್ಸ್​ಗೆ ವಿರಾಟ್ ಬಿಗ್ ವಾರ್ನಿಂಗ್: ಈ ಬಾರಿ ಸುಲಭವಿಲ್ಲ ಎಂದ ಕಿಂಗ್ ಕೊಹ್ಲಿ!

Source link

Vastu Tips: ಮನೆಯೊಳಗೆ ಬಟ್ಟೆ ಒಣಗಿಸುವ ಅಭ್ಯಾಸ ನಿಮಗಿದ್ಯಾ? ಹಾಗಿದ್ರೆ ಈ ಸಮಸ್ಯೆ ತಪ್ಪಿದ್ದಲ್ಲ!

ಹಿಂದಿನಿಂದಲೂ ವಾಸ್ತು ಶಾಸ್ತ್ರಕ್ಕೆ ಬಹಳ ವಿಶೇಷವಾದ ಮಹತ್ವವಿದೆ. ಮನೆಯ ದಿಕ್ಕು, ವಸ್ತುಗಳ ಜೋಡಣೆ ಮಾತ್ರವಲ್ಲದೆ, ನಾವು ಬಟ್ಟೆ ಒಣಗಿಸುವ ರೀತಿ ನೀತಿಗಳೂ ಕೂಡ ನಮ್ಮ ಅದೃಷ್ಟ ಮತ್ತು ಆರ್ಥಿಕ ಪರಿಸ್ಥಿತಿಯ ಮೇಲೆ ಪ್ರಭಾವ ಬೀರುತ್ತವೆ ಎನ್ನುತ್ತಾರೆ ತಜ್ಞರು. ಮನೆಯೊಳಗೆ ಬಟ್ಟೆ ಒಣಗಿಸುವುದರಿಂದ ಉಂಟಾಗುವ ನಕಾರಾತ್ಮಕ ಪರಿಣಾಮಗಳ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.

ವಾಸ್ತು ಶಾಸ್ತ್ರ ಮತ್ತು ನಕಾರಾತ್ಮಕ ಶಕ್ತಿ:

ವಾಸ್ತು ಶಾಸ್ತ್ರದ ಪ್ರಕಾರ, ಮನೆಯೊಳಗೆ ಒದ್ದೆಯಾದ ಬಟ್ಟೆಗಳನ್ನು ಒಣಗಿಸುವುದು ಶುಭವಲ್ಲ. ಒದ್ದೆ ಬಟ್ಟೆಗಳು ಮನೆಯಲ್ಲಿ ತೇವಾಂಶವನ್ನು ಹೆಚ್ಚಿಸುತ್ತವೆ. ಈ ತೇವಾಂಶವು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು (Negative Energy) ಆಕರ್ಷಿಸುತ್ತದೆ. ಮನೆಯ ವಾತಾವರಣವು ಯಾವಾಗಲೂ ಪ್ರಫುಲ್ಲವಾಗಿರಬೇಕು. ಸದಾ ಒದ್ದೆ ಬಟ್ಟೆಗಳ ವಾಸನೆ ಮತ್ತು ತೇವಾಂಶವಿದ್ದರೆ ಅದು ಮನೆಯವರ ಪ್ರಗತಿಗೆ ಅಡ್ಡಿಯಾಗಬಹುದು. ಇದಲ್ಲದೇ ಮನೆಯ ಆರ್ಥಿಕ ಸುಭಿಕ್ಷೆಗೂ ಮತ್ತು ಬಟ್ಟೆ ಒಣಗಿಸುವ ಜಾಗಕ್ಕೂ ನೇರ ಸಂಬಂಧವಿದೆ ಎಂದು ನಂಬಲಾಗಿದೆ.

ಶಾಸ್ತ್ರಗಳ ಪ್ರಕಾರ, ಮಹಾಲಕ್ಷ್ಮಿಯು ಸ್ವಚ್ಛ ಹಾಗೂ ಒಣಗಿದ (ಶುಚಿಯಾದ) ಪರಿಸರದಲ್ಲಿ ನೆಲೆಸುತ್ತಾಳೆ. ಸದಾ ತೇವಾಂಶವಿರುವ ಮತ್ತು ಗಬ್ಬು ವಾಸನೆಯಿರುವ ಜಾಗದಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ.ಮನೆಯೊಳಗೆ ಬಟ್ಟೆ ಒಣಗಿಸುವುದರಿಂದ ಆರ್ಥಿಕ ಮುಗ್ಗಟ್ಟು ಎದುರಾಗುವ ಸಾಧ್ಯತೆ ಇರುತ್ತದೆ ಮತ್ತು ಅನಗತ್ಯ ಖರ್ಚುಗಳು ಹೆಚ್ಚಾಗಬಹುದು ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ. ಇದು ಕೇವಲ ನಂಬಿಕೆಯಲ್ಲ, ವೈಜ್ಞಾನಿಕವಾಗಿಯೂ ಮನೆಯೊಳಗೆ ಬಟ್ಟೆ ಒಣಗಿಸುವುದು ಅಪಾಯಕಾರಿ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ವೈಜ್ಞಾನಿಕ ಕಾರಣ:

ಒದ್ದೆ ಬಟ್ಟೆಗಳಿಂದ ಗಾಳಿಯಲ್ಲಿ ತೇವಾಂಶ ಹೆಚ್ಚಾಗಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ವೇಗವಾಗಿ ಬೆಳೆಯುತ್ತವೆ. ಇದರಿಂದ ಮನೆಯಲ್ಲಿರುವವರಿಗೆ ಆಸ್ತಮಾ, ಅಲರ್ಜಿ ಮತ್ತು ವಿವಿಧ ಉಸಿರಾಟದ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಸರಿಯಾಗಿ ಗಾಳಿ-ಬೆಳಕು ಇಲ್ಲದ ಕಡೆ ಬಟ್ಟೆ ಒಣಗಿಸಿದರೆ ಬಟ್ಟೆಗಳು ಕೆಟ್ಟ ವಾಸನೆ ಬೀರುತ್ತವೆ, ಇದು ಮಾನಸಿಕ ನೆಮ್ಮದಿಯನ್ನೂ ಕೆಡಿಸುತ್ತದೆ.

ಬಟ್ಟೆಗಳನ್ನು ಯಾವಾಗಲೂ ಮನೆಯ ಹೊರಗೆ, ಸೂರ್ಯನ ಬೆಳಕು ಬೀಳುವ ಜಾಗದಲ್ಲಿ ಒಣಗಿಸಿ. ಸೂರ್ಯನ ಕಿರಣಗಳು ಬಟ್ಟೆಯಲ್ಲಿರುವ ಕ್ರಿಮಿಗಳನ್ನು ನಾಶಪಡಿಸುತ್ತವೆ.ಅನಿವಾರ್ಯ ಸಂದರ್ಭದಲ್ಲಿ (ಮಳೆಗಾಲದಲ್ಲಿ) ಮನೆಯೊಳಗೆ ಒಣಗಿಸಬೇಕಾಗಿ ಬಂದರೆ, ಸರಿಯಾದ ಗಾಳಿ ಸಂಚಾರವಿರುವ (Ventilation) ಪ್ರತ್ಯೇಕ ಕೊಠಡಿಯನ್ನು ಬಳಸಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಇದು ಲವ್ ಜಿಹಾದ್’; ಮೊನಾಲಿಸಾ ನಟನೆಯ ಸಿನಿಮಾ ನಿರ್ದೇಶಕನ ಗಂಭೀರ ಆರೋಪ

ಪ್ರಯಾಗ್ರಾಜ್ ಕುಂಭಮೇಳದಿಂದ ರಾತ್ರೋರಾತ್ರಿ ಖ್ಯಾತಿ ಪಡೆದ ಮೊನಾಲಿಸಾ ಭೋಸ್ಲೆ (Monalisa Bhosle) ಈಗ ತಮ್ಮ ಖಾಸಗಿ ಜೀವನದ ಬಗ್ಗೆ ಸುದ್ದಿಯಲ್ಲಿದ್ದಾರೆ. ಎಲ್ಲರ ಇಚ್ಛೆಗೆ ವಿರುದ್ಧವಾಗಿ ಮೊನಾಲಿಸಾ, ಪೊಲೀಸ್ ರಕ್ಷಣೆಯಲ್ಲಿ ತನ್ನ ಮುಸ್ಲಿಂ ಗೆಳೆಯ ಫರ್ಮಾನ್ ಖಾನ್ ಅವರನ್ನು ವಿವಾಹವಾದರು. ಇದರಿಂದಾಗಿ ಮೊನಾಲಿಸಾ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಒಂದೆಡೆ, ಮೊನಾಲಿಸಾ ಅವರ ಕುಟುಂಬವು ಮದುವೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದೆ. ಈ ಮಧ್ಯೆ, ಮೊನಾಲಿಸಾ ಅವರ ಚೊಚ್ಚಲ ಚಿತ್ರ ‘ದಿ ಡೈರಿ ಆಫ್ ಮಣಿಪುರ’ದ ನಿರ್ದೇಶಕ ಸನೋಜ್ ಮಿಶ್ರಾ ಅವರ ಹೇಳಿಕೆ ಬೆಳಕಿಗೆ ಬಂದಿದ್ದು, ಇದು ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ.

ನಿರ್ದೇಶಕ ಸನೋಜ್ ಮಿಶ್ರಾ ಅವರು ಮೊನಾಲಿಸಾ ಮತ್ತು ಫರ್ಮಾನ್ ಅವರ ವಿವಾಹದ ಬಗ್ಗೆ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ ಮತ್ತು ಮೊನಾಲಿಸಾ ಮತ್ತು ಫರ್ಮಾನ್ ಅವರ ವಿವಾಹವನ್ನು ‘ಲವ್ ಜಿಹಾದ್’ ಎಂದು ಹೆಸರಿಸಿದ್ದಾರೆ. ಈ ವಿಷಯವು ಇನ್ನು ಮುಂದೆ ಮದುವೆಗೆ ಸೀಮಿತವಾಗಿಲ್ಲ. ಇದರ ಹಿಂದೆ ದೊಡ್ಡ ಜಾಲದ ಪಿತೂರಿ ಇರಬಹುದು ಎಂದಿದ್ದಾರೆ.

‘ದೆಹಲಿ ಮತ್ತು ಮಧ್ಯಪ್ರದೇಶದಿಂದ ಹುಡುಗಿಯರು ಕಣ್ಮರೆಯಾಗುವ ಸುದ್ದಿಗಳು ಬರುತ್ತಲೇ ಇರುತ್ತವೆ. ಇದನ್ನು ಸಂಪೂರ್ಣವಾಗಿ ತನಿಖೆ ಮಾಡಬೇಕು. ಸಂಪೂರ್ಣವಾಗಿ ತನಿಖೆ ಮಾಡಿದರೆ, ಕೇರಳ ಸರ್ಕಾರ ಇದರಲ್ಲಿ ಪ್ರಮುಖ ಪಾತ್ರ ವಹಿಸಿರಬೇಕು. ಸನಾತನ ಧರ್ಮವನ್ನು ಕೆಣಕುವಲ್ಲಿ ಕೇರಳ ಸರ್ಕಾರ ಯಾವಾಗಲೂ ಮುಂಚೂಣಿಯಲ್ಲಿದೆ. ಸಿಎಎ ವಿರೋಧಿ ಪ್ರತಿಭಟನೆಯ ಸಮಯದಲ್ಲಿ ಫರ್ಮಾನ್ ಖಾನ್ ಶಾರ್ಜೀಲ್ ಇಮಾಮ್ ಅವರೊಂದಿಗೆ ಹಲವು ಬಾರಿ ಕಾಣಿಸಿಕೊಂಡಿದ್ದರು’ ಎಂದಿದ್ದಾರೆ ಸನೋಜ್.

‘ಫರ್ಮಾನ್ ಒಬ್ಬ ನಟನಲ್ಲ. ಅವರ ಯಾವುದೇ ಚಿತ್ರಗಳು ಬಿಡುಗಡೆಯಾಗಿಲ್ಲ’ ಎಂದು ಸನೋಜ್ ಹೇಳಿದ್ದಾರೆ. ಈ ವಿಷಯವನ್ನು ತನಿಖೆ ಮಾಡುವಂತೆ ಸನೋಜ್ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರಿಗೆ ಮನವಿ ಮಾಡಿದ್ದಾರೆ, ಏಕೆಂದರೆ ಇದು ಭಾರತದ ಪ್ರತಿಯೊಬ್ಬ ಹುಡುಗಿಯ ಸುರಕ್ಷತೆಯ ವಿಷಯವಾಗಿದೆ.’ ಪ್ರಸ್ತುತ, ಸನೋಜ್ ಮಾಡಿದ ಹೇಳಿಕೆ ಎಲ್ಲೆಡೆ ಚರ್ಚೆಯಾಗುತ್ತಿದೆ.

ಇದನ್ನೂ ಓದಿ: ಮೊನಾಲಿಸಾ ಭೋಸ್ಲೆ ಇಸ್ಲಾಂ ಧರ್ಮಕ್ಕೆ ಮತಾಂತರ ಆಗ್ತಾರಾ? ಪತಿ ಫರ್ಮಾನ್ ಖಾನ್ ಸ್ಪಷ್ಟನೆ

ಮೊನಾಲಿಸಾ ಮತ್ತು ಫರ್ಮಾನ್ ಅವರ ವಿವಾಹವು ಈಗಾಗಲೇ ಕುಟುಂಬ ಮತ್ತು ಸಮಾಜದಲ್ಲಿ ವಿವಾದದ ವಿಷಯವಾಗಿದೆ. ಭಾರತವು ಈ ಹಿಂದೆಯೂ ಇಂತಹ ವಿಷಯಗಳಲ್ಲಿ ಚರ್ಚೆ ಹುಟ್ಟುಹಾಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕೆಎಸ್​ಆರ್​ಟಿಸಿ ಬಸ್ ಪಲ್ಟಿ! 40ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

ಚಿಕ್ಕಮಗಳೂರು, ಮಾರ್ಚ್​ 21: ತಾಲೂಕಿನ ಕೊಡಾಳ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ (KSRTC) ಬಸ್ ಪಲ್ಟಿಯಾದ ಘಟನೆ ನಡೆದಿದೆ. ಕುಕನೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಈ ಸರ್ಕಾರಿ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಬಸ್‌ನಲ್ಲಿ 40ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು ಎನ್ನಲಾಗಿದ್ದು, ಘಟನೆಯಲ್ಲಿ 8 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ತಕ್ಷಣವೇ ಚಿಕ್ಕಮಗಳೂರು ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಘಟನೆ ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಅಸಲಿ ಏಕಮುಖಿ ರುದ್ರಾಕ್ಷಿ ಗುರುತಿಸುವುದು ಹೇಗೆ? ಖರೀದಿಸುವ ಮುನ್ನ ಈ ಅಂಶ ತಿಳಿದಿರಲಿ!

ಇಂದಿನ ದಿನಗಳಲ್ಲಿ ಆಧ್ಯಾತ್ಮಿಕ ಮತ್ತು ಆರೋಗ್ಯದ ದೃಷ್ಟಿಯಿಂದ ರುದ್ರಾಕ್ಷಿಗೆ ಬೇಡಿಕೆ ಹೆಚ್ಚುತ್ತಿದೆ. ಆದರೆ, ಇದೇ ಸಂದರ್ಭವನ್ನು ಬಳಸಿಕೊಂಡು ಮಾರುಕಟ್ಟೆಯಲ್ಲಿ ನಕಲಿ ರುದ್ರಾಕ್ಷಿಗಳ ಮಾರಾಟವೂ ಜೋರಾಗಿದೆ. ವಿಶೇಷವಾಗಿ ಏಕಮುಖಿ ರುದ್ರಾಕ್ಷಿ ಅತ್ಯಂತ ಅಪರೂಪ ಮತ್ತು ಬೆಲೆಬಾಳುವಂತದ್ದು, ಹಾಗಾಗಿ ಇದನ್ನು ಖರೀದಿಸುವಾಗ ಮೋಸಹೋಗುವ ಸಾಧ್ಯತೆ ಹೆಚ್ಚು.

ಏಕಮುಖಿ ರುದ್ರಾಕ್ಷಿಯ ಮಹತ್ವ:

ಜ್ಯೋತಿಷ್ಯ ಮತ್ತು ಪುರಾಣಗಳ ಪ್ರಕಾರ, ಏಕಮುಖಿ ರುದ್ರಾಕ್ಷಿಯು ಸಾಕ್ಷಾತ್ ಶಿವನ ಸ್ವರೂಪವೆಂದು ಪರಿಗಣಿಸಲಾಗಿದೆ. ಇದು ಮೋಕ್ಷವನ್ನು ಪಡೆಯಲು ಅತ್ಯುತ್ತಮ ಮಾರ್ಗವೆಂದು ಹೇಳಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ, ಈ ರುದ್ರಾಕ್ಷಿಯು ಸೂರ್ಯ ಗ್ರಹದೊಂದಿಗೆ ಸಂಬಂಧ ಹೊಂದಿದೆ. ಜಾತಕದಲ್ಲಿ ಸೂರ್ಯ ದುರ್ಬಲವಾಗಿರುವವರು ಇದನ್ನು ಧರಿಸುವುದರಿಂದ ಶುಭ ಫಲ ಪಡೆಯಬಹುದು. ವಿಶೇಷವಾಗಿ ಸಿಂಹ ರಾಶಿಯವರು ಇದನ್ನು ಧರಿಸುವುದು ಹೆಚ್ಚು ಪ್ರಯೋಜನಕಾರಿ.

ಆರೋಗ್ಯ ಮತ್ತು ಮಾನಸಿಕ ಲಾಭಗಳು:

ಏಕಮುಖಿ ರುದ್ರಾಕ್ಷಿಯು ರಕ್ತದೊತ್ತಡ (Blood Pressure) ಮತ್ತು ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಪೂರಕವಾಗಿದೆ. ಇದನ್ನು ಧರಿಸುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ಮಾನಸಿಕ ಶಾಂತಿ ಸಿಗುತ್ತದೆ. ಇದಲ್ಲದೇ ವಿದ್ಯಾರ್ಥಿಗಳು ಏಕಮುಖಿ ರುದ್ರಾಕ್ಷಿ ಧರಿಸುವುದರಿಂದ ಅವರ ಏಕಾಗ್ರತೆ ಮತ್ತು ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಅಸಲಿ ರುದ್ರಾಕ್ಷಿಯನ್ನು ಗುರುತಿಸುವುದು ಹೇಗೆ?

ನೀವು ಖರೀದಿಸುತ್ತಿರುವ ರುದ್ರಾಕ್ಷಿ ಅಸಲಿಯೇ ಎಂದು ಪರೀಕ್ಷಿಸಲು ಈ ಸರಳ ಕ್ರಮಗಳನ್ನು ಅನುಸರಿಸಿ:

  • ಆಕಾರ ಮತ್ತು ರೇಖೆ: ನಿಜವಾದ ಏಕಮುಖಿ ರುದ್ರಾಕ್ಷಿಯು ಸಾಮಾನ್ಯವಾಗಿ ಅರ್ಧಚಂದ್ರಾಕೃತಿ ಅಥವಾ ಗೋಳಾಕಾರದಲ್ಲಿ ಇರುತ್ತದೆ. ಇದರ ಮೇಲೆ ಮೇಲಿನಿಂದ ಕೆಳಕ್ಕೆ ಕೇವಲ ಒಂದು ಸ್ಪಷ್ಟವಾದ ರೇಖೆ ಇರುತ್ತದೆ.
  • ನೀರಿನ ಪರೀಕ್ಷೆ: ರುದ್ರಾಕ್ಷಿಯನ್ನು ನೀರಿನಲ್ಲಿ ಹಾಕಿದಾಗ ಅದು ಮುಳುಗಬೇಕು. ಅಲ್ಲದೆ, ನೀರಿನಲ್ಲಿ ಕುದಿಸಿದಾಗ ಅದು ಬಣ್ಣವನ್ನು ಬಿಡಬಾರದು. ಒಂದು ವೇಳೆ ಬಣ್ಣ ಮಸುಕಾದರೆ ಅದು ನಕಲಿ ಎಂದು ತಿಳಿಯಿರಿ.
  • ಹರಳೆಣ್ಣೆ ಪರೀಕ್ಷೆ: ರುದ್ರಾಕ್ಷಿಯನ್ನು ಹರಳೆಣ್ಣೆಯಲ್ಲಿ ಹಾಕಿದಾಗ ಅದು ಮೊದಲಿಗಿಂತ ಹೆಚ್ಚು ಪ್ರಕಾಶಮಾನವಾಗಿ ಕಂಡರೆ ಅದು ಅಸಲಿ ರುದ್ರಾಕ್ಷಿಯ ಲಕ್ಷಣ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪೆಟ್ರೋಲ್, ಡೀಸೆಲ್​ಗಾಗಿ ರಿಪ್ಪನ್‌ಪೇಟೆ ಬಂಕ್ ಮುಂದೆ ಮುಗಿಬಿದ್ರು ಜನ!

ಶಿವಮೊಗ್ಗ, ಮಾರ್ಚ್​ 21: ಮಧ್ಯಪ್ರಾಚ್ಯ ಯುದ್ಧದ ಪರಿಣಾಮವಾಗಿ ಇಂಧನ ಕೊರತೆ ಭೀತಿ ಮೂಡಿದ ಹಿನ್ನೆಲೆ, ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ಗೆ ಜನ ಮುಗಿಬಿದ್ದಿದ್ದಾರೆ. ರಿಪ್ಪನ್‌ಪೇಟೆಯಲ್ಲಿ ಒಟ್ಟು 4 ಪೆಟ್ರೋಲ್ ಬಂಕ್‌ಗಳಿವೆ. ಮೂರು ಬಂಕ್‌ಗಳಲ್ಲಿ ಪೆಟ್ರೋಲ್, ಡೀಸೆಲ್ ಖಾಲಿಯಾದ ಹಿನ್ನೆಲೆ ಶಿವಮೊಗ್ಗ ರಸ್ತೆಯ ಹೆಚ್‌ಪಿ ಬಂಕ್‌ನಲ್ಲಿ ವಾಹನ ಸವಾರರು ಸಾಲುಗಟ್ಟಿ ನಿಂತು ಇಂಧನ ಪಡೆದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

World Down Syndrome Day 2026: ವಿಶ್ವ ಡೌನ್ ಸಿಂಡ್ರೋಮ್ ದಿನವನ್ನು ಆಚರಿಸುವುದೇಕೆ? ಇಲ್ಲಿದೆ ಮಾಹಿತಿ

ಮಗುವು ಹೇಗೆಯೇ ಇರಲಿ, ತಾಯಿಗೆ ಅದುವೇ ಪ್ರಪಂಚ. ಆದರೆ ಕೆಲವೊಮ್ಮೆ ಹುಟ್ಟಿದ ಮಗು ಡೌನ್ ಸಿಂಡ್ರೋಮ್ ಸಮಸ್ಯೆಗೆ ಒಳಗಾಗುತ್ತದೆ. ಇದು ಮಗುವಿನ ಬೌದ್ಧಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗುವ ಸ್ಥಿತಿಯಾಗಿದ್ದು, ಚಿಕಿತ್ಸೆಯಿಂದ ಗುಣಪಡಿಸಲಾಗದು. ಈ ಡೌನ್​ ಸಿಂಡ್ರೋಮ್​ ಬಗೆಗೆ ಜಾಗೃತಿ ಮೂಡಿಸುವುದು ಬಹಳ ಮುಖ್ಯ. ಈ ನಿಟ್ಟಿನಲ್ಲಿ ಮಾರ್ಚ್ 21 ರಂದು ವಿಶ್ವ ಡೌನ್ ಸಿಂಡ್ರೋಮ್ ದಿನವನ್ನು (World Down Syndrome Day) ಆಚರಿಸಲಾಗುತ್ತಿದೆ.

ವಿಶ್ವ ಡೌನ್‌ ಸಿಂಡ್ರೋಮ್‌ ದಿನದ ಇತಿಹಾಸವೇನು?

2005ರಲ್ಲಿ ವರ್ಲ್ಡ್‌ ಕಾಂಗ್ರೆಸ್‌ನಲ್ಲಿ ಡೌನ್‌ ಸಿಂಡ್ರೋಮ್‌ ಇಂಟರ್‌ನ್ಯಾಷನಲ್‌ ಅನ್ನು ಸ್ಥಾಪಿಸಲಾಯಿತು. 2006ರಲ್ಲಿ ಮೊದಲ ಬಾರಿಗೆ ವಿಶ್ವ ಡೌನ್‌ ಸಿಂಡ್ರೋಮ್‌ ದಿನವನ್ನು ಆಚರಿಸಲಾಯಿತು. ಈ ದಿನದ ಆಚರಣೆಯ ಬಳಿಕ ಬ್ರೆಜಿಲಿಯನ್‌ ಫೆಡರೇಶನ್‌ ಅಸೋಸಿಯೇಷನ್‌ ಆಫ್‌ ಡೌನ್‌ ಸಿಂಡ್ರೋಮ್‌ ಇದಕ್ಕೆ ಕೈ ಜೋಡಿಸಿತು. ಅದರೊಂದಿಗೆ ಡಿಎಸ್‌ಐ ಜೊತೆ ಕೆಲಸ ಮಾಡಲು ಮುಂದಾಯಿತು. ಸದಸ್ಯರು ಕೂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಬಲವನ್ನು ಪಡೆಯುವ ಸಲುವಾಗಿ ಕೆಲಸ ಮಾಡಲು ಕೈ ಹಾಕಿದರು. 2011ರ ನವೆಂಬರ್‌ ತಿಂಗಳಿನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರತಿವರ್ಷ ಡೌನ್‌ ಸಿಂಡ್ರೋಮ್‌ ದಿನವನ್ನು ಆಚರಿಸಲು ಒಪ್ಪಿಗೆ ಸಿಕ್ಕಿತು. ಅಂದಿನಿಂದ ವಿಶ್ವ ಡೌನ್ ಸಿಂಡ್ರೋಮ್ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ಇದನ್ನೂ ಓದಿ: ರಾಷ್ಟ್ರೀಯ ಲಸಿಕೆ ದಿನವನ್ನು ಆಚರಿಸುವ ಹಿಂದಿನ ಉದ್ದೇಶವೇನು ತಿಳಿಯಿರಿ

ವಿಶ್ವ ಡೌನ್‌ ಸಿಂಡ್ರೋಮ್‌ ದಿನದ ಮಹತ್ವ ಏನು?

ಡೌನ್‌ ಸಿಂಡ್ರೋಮ್‌ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸುವುದು, ಈ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗಳ ಸಾಧನೆ ಹಾಗೂ ಕೊಡುಗೆಗಳನ್ನು ಗೌರವಿಸುವುದಾಗಿದೆ. ಈ ಜನರನ್ನು ಬೇಧಭಾವವನ್ನು ಮಾಡದೇ ನಮ್ಮಂತೆಯೇ ನೋಡಿಕೊಳ್ಳುವುದು ಬಹಳ ಮುಖ್ಯ. ಹೀಗಾಗಿ ಈ ವಿಶೇಷ ದಿನದಂದು ಜಗತ್ತಿನಾದಂತ್ಯ ಮಾಹಿತಿ ಕಾರ್ಯಾಗಾರಗಳು ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಚಾಲಾಕಿ ಚಾಲಕ! ಊರಿಗೆ ಹೋಗಲು ವಾಹನಗಳು ಸಿಕ್ಕಿಲ್ಲವೆಂದು ಬಸ್ಸನ್ನೇ ಕದ್ದೊಯ್ದ: ಸಿಸಿಟಿವಿ ವಿಡಿಯೋ ನೋಡಿ

ಯಾದಗಿರಿ, ಮಾರ್ಚ್: ಊರಿಗೆ ಹೋಗಲು ವಾಹನ ಸಿಗದಿದ್ದ ಕಾರಣ ಚಾಲಕನೊಬ್ಬ ಬಸ್ಸನ್ನೇ ಕದ್ದೊಯ್ದ ವಿಲಕ್ಷಣ ಘಟನೆಗೆ ಯಾದಗಿರಿ ಜಿಲ್ಲೆ ಸಾಕ್ಷಿಯಾಗಿದೆ. ಯಾದಗಿರಿಯ ಸೈದಾಪುರ ಪಟ್ಟಣದಿಂದ ಬಸ್ ಕದ್ದೊಯ್ಯಲಾಗಿದ್ದು, ಘಟನೆಯ ಸಿಸಿಟಿವಿ ದೃಶ್ಯಗಳು ಇದೀಗ ಬಯಲಾಗಿವೆ. ಕೆಕೆಆರ್​ಟಿಸಿಗೆ (KKRTC) ಸೇರಿದ ಬಸ್‌ ಅನ್ನು ಅದೇ ಸಂಸ್ಥೆಯಲ್ಲಿ ಚಾಲಕ ಕಂ ನಿರ್ವಾಹಕರಾಗಿದ್ದ ಮಹಿಪಾಲರೆಡ್ಡಿ ಕದ್ದೊಯ್ದಿದ್ದಾರೆ. ಕರ್ತವ್ಯ ಲೋಪದ ಹಿನ್ನೆಲೆ ಮಹಿಪಾಲರೆಡ್ಡಿಯನ್ನು ವಜಾಗೊಳಿಸಲಾಗಿತ್ತು.

ಮಾರ್ಚ್ 19ರಂದು ಸೈದಾಪುರ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್‌ ಅನ್ನು ಮಹಿಪಾಲರೆಡ್ಡಿ ತೆಗೆದುಕೊಂಡು ಹೋಗಿದ್ದಾರೆ. ಸ್ವಗ್ರಾಮ ರಾಚನಳ್ಳಿಗೆ ತೆರಳಲು ಯಾವುದೇ ವಾಹನ ಸಿಗದಿದ್ದರಿಂದ ಈ ಕೃತ್ಯ ಎಸಗಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಬಸ್ ಕದ್ದೊಯ್ದ ಬಳಿಕ ಗ್ರಾಮದಲ್ಲಿರುವ ದೇವಸ್ಥಾನದ ಬಳಿ ನಿಲ್ಲಿಸಿ, ಅಲ್ಲಿಂದ ತೆರಳಿದ್ದರು. ಬಳಿಕ ಪ್ರಕರಣ ಬೆಳಕಿಗೆ ಬಂದಂತೆ ಪೊಲೀಸರು ತನಿಖೆ ನಡೆಸಿ ಬಸ್‌ ಅನ್ನು ವಾಪಸ್ ಪಡೆದಿದ್ದಾರೆ. ಈ ಸಂಬಂಧ ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ಘಟನೆಯ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link