‘ಡಾನ್ 3’ ಮಾತ್ರವಲ್ಲ, ನಿಂತು ಹೋದ ರಣ್ವೀರ್ ಸಿಂಗ್ ಸಿನಿಮಾಗಳಿವು
‘ಧುರಂಧರ್’ (Dhurandar) ಮತ್ತು ‘ಧುರಂಧರ್ 2’ ಸಿನಿಮಾಗಳ ಮೂಲಕ ಇಂಡಸ್ಟ್ರಿ ಹಿಟ್ ನೀಡಿರುವ ರಣ್ವೀರ್ ಸಿಂಗ್ ಈಗ ಅದೇ ಇಂಡಸ್ಟ್ರಿಯಿಂದ ನಿಷೇಧಕ್ಕೆ ಒಳಗಾಗಿದ್ದಾರೆ. ರಣ್ವೀರ್ ಸಿಂಗ್ ಒಪ್ಪಿಕೊಂಡಿದ್ದ ‘ಡಾನ್ 3’ ಸಿನಿಮಾದಿಂದ ಹೊರಬಂದಿದ್ದಕ್ಕಾಗಿ ಇದೀಗ ಫೆಡರೇಷನ್ ಆಫ್ ಇಂಡಿಯನ್ ಸಿನಿ ಎಂಪ್ಲಾಯಿಸ್ (ಎಫ್ಡಬ್ಲುಐಸಿಇ) ರಣ್ವೀರ್ ಸಿಂಗ್ ವಿರುದ್ಧ ಅಸಹಕಾರಕ್ಕೆ ಕರೆ ನೀಡಿದ್ದು, ರಣ್ವೀರ್ ಸಿಂಗ್ ನಟಿಸುವ ಯಾವುದೇ ಸಿನಿಮಾನಲ್ಲಿ ಕೆಲಸ ಮಾಡುವುದಿಲ್ಲ ಎಂದು ಘೋಷಿಸಿದೆ. ‘ಡಾನ್ 3’ ಸಿನಿಮಾದಿಂದ ರಣ್ವೀರ್ ಸಿಂಗ್ ಅವರು ಹೊರಬಂದಿದ್ದೇ ಇದಕ್ಕೆ ಕಾರಣವಾಗಿದೆ….