ಟಾಲಿವುಡ್ನಲ್ಲಿ ಉಲ್ಬಣಗೊಂಡ ನಿರ್ಮಾಪಕ vs ಪ್ರದರ್ಶಕ ವಿವಾದ: ಡಿಸಿಎಂ ಪವನ್ಗೆ ದೂರು
ತೆಲುಗು ಚಿತ್ರರಂಗದಲ್ಲಿ (Tollywood) ಸಿನಿಮಾ ನಿರ್ಮಾಪಕ ಮತ್ತು ಪ್ರದರ್ಶಕರ ನಡುವೆ ವಿವಾದ ಭುಗಿಲೆದ್ದಿದ್ದು, ಇತ್ತೀಚೆಗಷ್ಟೆ ಸಭೆ ನಡೆಸಿ ಸಂಧಾನ ನಡೆಸಿದ್ದರೂ ಸಹ ಸಮಸ್ಯೆ ಮುಗಿದಿಲ್ಲ. ನಿರ್ಮಾಪಕರು ಹಾಗೂ ಪ್ರದರ್ಶಕರು ಪರಸ್ಪರ ಬಹಿರಂಗವಾಗಿಯೇ ಪರಸ್ಪರ ಹೇಳಿಕೆ-ಪ್ರತಿಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದೀಗ ತೆಲಂಗಾಣ ಪ್ರದರ್ಶಕರು ‘ಪೆದ್ದಿ’ ಸಿನಿಮಾವನ್ನು ಬಿಡುಗಡೆ ಮಾಡುವುದಿಲ್ಲವೆಂದು ‘ಬೆದರಿಕೆ’ ಸಹ ಹಾಕಿದ್ದಾರೆ. ಇದೆಲ್ಲದರ ನಡುವೆ ಕೆಲ ನಿರ್ಮಾಪಕರು ಆಂಧ್ರ ಪ್ರದೇಶ ಡಿಸಿಎಂ ಮತ್ತು ಸ್ಟಾರ್ ನಟ ಪವನ್ ಕಲ್ಯಾಣ್ ಅವರನ್ನು ಭೇಟಿ ಮಾಡಿ ಕೆಲ ಮನವಿಗಳನ್ನು ಸಲ್ಲಿಸಿದ್ದು, ಪವನ್…