ಮಿನಿ ಕುರುಕ್ಷೇತ್ರ: ಸುರ್ಜೇವಾಲ ಜೊತೆಗಿನ ಹೈವೋಲ್ಟೇಜ್ ಸಭೆ ಬಳಿಕ ಡಿಕೆ ಶಿವಕುಮಾರ್ ಹೇಳಿದ್ದಿಷ್ಟು
ಬೆಂಗಳೂರು, ಮಾರ್ಚ್ 20: ದಾವಣಗೆರೆ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಗೆ ಕೌಂಟ್ಡೌನ್ ಶುರುವಾಗಿದ್ದು, ಈಗಾಗಲೇ ಅಖಾಡ ರಂಗೇರಿದೆ. ಟಿಕೆಟ್ ಘೋಷಣೆಗೂ ಮುನ್ನವೇ ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಿರೋದು ಕಾಂಗ್ರೆಸ್ಗೆ ತಲೆನೋವಾಗಿದೆ. ಬಿಕ್ಕಟ್ಟು ಬಗೆಹರಿಸಲು ರಾಜ್ಯ ಉಸ್ತುವಾರಿ ಸಚಿವ ರಣದೀಪ್ ಸಿಂಗ್ ಸುರ್ಜೇವಾಲ ಅಖಾಡಕ್ಕಿಳಿದಿದ್ದು, ಸಿಎಂ, ಡಿಸಿಎಂ ಜೊತೆ ಸಭೆ ಮಾಡಿದ್ದಾರೆ. ಸದ್ಯ ಸಭೆ ಬಳಿಕ ಮಾಧ್ಯಮದವರೊಂದಿಗೆ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದ್ದು, ನಾನು, ಸಿಎಂ, ರಾಜ್ಯ ಉಸ್ತುವಾರಿ ಸಭೆ ಮಾಡಿದ್ದೇವೆ. ಸಭೆಯಲ್ಲಿ ಎಲ್ಲ ಮುಖಂಡರ ಅಭಿಪ್ರಾಯ ಹೇಳಿದ್ದೇವೆ….