All posts by nagaraj11081993

ಇರಾನ್, ಇಸ್ರೇಲ್, ಅಮೆರಿಕ ಯುದ್ಧಕ್ಕೆ ಬ್ರೇಕ್? ಟ್ರಂಪ್ ಆ ಸಂದೇಶದಲ್ಲಿದೆ ಮಹತ್ವದ ಸುಳಿವು!

ಇರಾನ್, ಇಸ್ರೇಲ್, ಅಮೆರಿಕ ಯುದ್ಧಕ್ಕೆ ಬ್ರೇಕ್? ಟ್ರಂಪ್ ಆ ಸಂದೇಶದಲ್ಲಿದೆ ಮಹತ್ವದ ಸುಳಿವು!

ನವದೆಹಲಿ, ಮಾರ್ಚ್ 21: ಕಳೆದ ಕೆಲವು ದಿನಗಳಿಂದ ಮಧ್ಯಪ್ರಾಚ್ಯದಲ್ಲಿ ಅಕ್ಷರಶಃ ಬೆಂಕಿಯುಗುಳುತ್ತಿದ್ದ ಇರಾನ್, ಇಸ್ರೇಲ್, ಅಮೆರಿಕ ಯುದ್ಧಕ್ಕೆ ಅಂತಿಮವಾಗಿ ತೆರೆ ಬೀಳುವ ಲಕ್ಷಣಗಳು ಗೋಚರಿಸುತ್ತಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ನೀಡಿರುವ ಇತ್ತೀಚಿನ ಅಧಿಕೃತ ಹೇಳಿಕೆಯು, ಇರಾನ್ ವಿರುದ್ಧದ ‘ಆಪರೇಷನ್ ಎಪಿಕ್ ಫ್ಯೂರಿ (Operation Epic Furry)’ ಶೀಘ್ರದಲ್ಲೇ ಅಂತ್ಯಗೊಳ್ಳಬಹುದು ಎಂಬ ಬಲವಾದ ಮುನ್ಸೂಚನೆ ನೀಡಿದೆ. ಅಲ್ಲದೆ, ಇರಾನ್ ವಿರುದ್ಧದ ಕಾರ್ಯಾಚರಣೆಯಲ್ಲಿ ಯಶಸ್ಸು ಸಾಧಿಸಿದ್ದೇವೆ ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ.

ಡೊನಾಲ್​ಡ್ ಟ್ರಂಪ್ ಹೇಳಿದ್ದೇನು?

ಇರಾನ್‌ನ ಕ್ಷಿಪಣಿ ಸಾಮರ್ಥ್ಯ, ಲಾಂಚರ್‌ಗಳು ಮತ್ತು ರಕ್ಷಣಾ ನೆಲೆಗಳನ್ನು ನಾವು ಯಶಸ್ವಿಯಾಗಿ ನಾಶಪಡಿಸಿದ್ದೇವೆ. ಮಧ್ಯಪ್ರಾಚ್ಯದ ಮಿತ್ರರಾಷ್ಟ್ರಗಳಾದ ಇಸ್ರೇಲ್, ಸೌದಿ ಅರೇಬಿಯಾ, ಕತಾರ್ ಮತ್ತು ಯುಎಇ ರಕ್ಷಣೆಗಾಗಿ ನಾವು ಹಾಕಿಕೊಂಡಿದ್ದ ಗುರಿಗಳು ಬಹುತೇಕ ಈಡೇರಿವೆ. ಹೀಗಾಗಿ, ಇರಾನ್ ಮೇಲಿನ ಮಿಲಿಟರಿ ಕಾರ್ಯಾಚರಣೆಯನ್ನು ಹಂತಹಂತವಾಗಿ ಕಡಿಮೆ ಮಾಡುವ ಆಲೋಚನೆಯಲ್ಲಿದ್ದೇವೆ ಎಂದು ಟ್ರಂಪ್ ಅಧಿಕೃತ ಸಂದೇಶದಲ್ಲಿ ತಿಳಿಸಿದ್ದಾರೆ.

ಡೊನಾಲ್ಡ್ ಟ್ರಂಪ್ ಸಂದೇಶ

ಅಮೆರಿಕ, ಇಸ್ರೇಲ್ ಗುರಿ ಈಡೇರಿತೇ ಅಥವಾ ಇದು ಇರಾನ್ ಜಯವೇ?

ಅಂತರರಾಷ್ಟ್ರೀಯ ವಿದ್ಯಮಾನಗಳ ವಿಶ್ಲೇಷಕರ ಪ್ರಕಾರ, ಈ ಯುದ್ಧದ ಹಿಂದೆ ಅಮೆರಿಕ ಮತ್ತು ಇಸ್ರೇಲ್ ಹೊಂದಿದ್ದ ಮುಖ್ಯ ಗುರಿ ಇರಾನ್‌ನಲ್ಲಿ ಆಡಳಿತ ಬದಲಾವಣೆ (Regime Change) ಮಾಡುವುದಾಗಿತ್ತು. ಆದರೆ, ಇಂದಿಗೂ ಇರಾನ್‌ನ ಪ್ರಬಲ ಸರ್ಕಾರ ಅಲುಗಾಡಿಲ್ಲ. ಟ್ರಂಪ್ ಹೇಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅಮೆರಿಕ ತನ್ನ ಗುರಿ ತಲುಪಿದೆ ಎಂದು ಹೇಳುತ್ತಿದ್ದರೂ, ವಾಸ್ತವದಲ್ಲಿ ಇದು ಇರಾನ್‌ಗೆ ಸಿಕ್ಕ ನೈತಿಕ ವಿಜಯ ಎಂಬಂತೆ ಭಾಸವಾಗುತ್ತಿದೆ. ಇರಾನ್ ಆಡಳಿತವನ್ನು ಪತನಗೊಳಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅಮೆರಿಕ ಈಗ ಯುದ್ಧದಿಂದ ಹೊರಬರಲು ದಾರಿ ಹುಡುಕುತ್ತಿದೆ.

ಹೊರ್ಮುಜ್ ಜಲಸಂಧಿಯ ಹೊಣೆಗಾರಿಕೆ ಯಾರಿಗೆ?

ಇನ್ನು ಮುಂದೆ ಹೊರ್ಮುಜ್ ಜಲಸಂಧಿಯನ್ನು (Hormuz Strait) ಆ ಭಾಗದ ಅಥವಾ ಅದನ್ನು ಬಳಸುವ ರಾಷ್ಟ್ರಗಳೇ ಕಾಯಬೇಕು. ಅಮೆರಿಕ ಅದಕ್ಕೆ ಹೊಣೆಯಾಗುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಒಮ್ಮೆ ಇರಾನ್ ಬೆದರಿಕೆ ಸಂಪೂರ್ಣವಾಗಿ ಕೊನೆಗೊಂಡ ನಂತರ, ಆಯಾ ರಾಷ್ಟ್ರಗಳು ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳಲಿ, ಇದು ಅವರಿಗೆ ಸುಲಭವಾದ ಮಿಲಿಟರಿ ಕಾರ್ಯಾಚರಣೆಯಾಗಲಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ನೀವು ಹೇಡಿಗಳು; ಇರಾನ್ ಮೇಲಿನ ಯುದ್ಧಕ್ಕೆ ಬೆಂಬಲ ನೀಡದ ನ್ಯಾಟೋ ವಿರುದ್ಧ ಟ್ರಂಪ್ ಆಕ್ರೋಶ

ಟ್ರಂಪ್ ಹೇಳಿಕೆ ಇದೀಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರಿ ಕುತೂಹಲ ಹುಟ್ಟುಹಾಕಿದೆ. ಯುದ್ಧ ಶೀಘ್ರದಲ್ಲೇ ಕೊನೆಗೊಳ್ಳುತ್ತಾ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಹೆಚ್ಚಿತು ‘ಲವ್ ಮಾಕ್ಟೇಲ್ 3’ ಶೋ; ಒಟ್ಟಾರೆ ಕಲೆಕ್ಷನ್ ಎಷ್ಟು?

‘ಲವ್ ಮಾಕ್ಟೇಲ್’ (Love Mocktail) ಸರಣಿಗೆ ಅದರದ್ದೇ ಆದ ಅಭಿಮಾನಿ ಬಳಗ ಇದೆ. ಈ ಚಿತ್ರದ ಮೊದಲ ಭಾಗ ರಿಲೀಸ್ ಆಗಿದ್ದು 2020ರಲ್ಲಿ. ಆ ಬಳಿಕ ಇದಕ್ಕೆ ಪಾರ್ಟ್ 2 ಬಂತು. ಈಗ ಮೂರನೇ ಭಾಗ ತೆರೆಗೆ ಬಂದಿದೆ. ಈ ಚಿತ್ರವನ್ನು ಜನರು ಬಹುವಾಗಿ ಇಷ್ಟಪಟ್ಟಿದ್ದಾರೆ. ಸಿನಿಮಾನ ಕೊಂಡಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಭಾವನಾತ್ಮಕವಾಗಿ ಸಿನಿಮಾ ಇಷ್ಟ ಆಗುತ್ತಿದೆ. ಹಾಗಾದರೆ, ಈ ಚಿತ್ರ ಮಾಡಿದ ಒಟ್ಟಾರೆ ಕಲೆಕ್ಷನ್ ಎಷ್ಟು ಕೋಟಿ ರೂಪಾಯಿ? ಆ ಬಗ್ಗೆ ಇಲ್ಲಿದೆ ವಿವರ.

‘ಲವ್ ಮಾಕ್ಟೇಲ್’ ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ನಿರ್ದೇಶನ ಇದೆ. ಈ ಸರಣಿಯ ಕೊನೆಯ ಸಿನಿಮಾ ಇದಾಗಲಿದೆ ಎಂದು ಕೃಷ್ಣ ಹೇಳಿದ್ದರು.ಚಿತ್ರದ ಕ್ಲೈಮ್ಯಾಕ್ಸ್ ನೋಡಿದ್ರೆ ಸಿನಿಮಾ ಸರಣಿ ಇಲ್ಲಿಗೆ ಕೊನೆ ಆಗಲಿದೆ ಎಂಬುದು ಸ್ಪಷ್ಟವಾಗಿದೆ. ಈ ಚಿತ್ರ ಹಾಸ್ಯ ಹಾಗೂ ಗಂಭೀರ ವಿಷಯವನ್ನು ಹೇಳುತ್ತದೆ. ಈ ಚಿತ್ರವು ಬಾಕ್ಸ್ ಆಫೀಸ್​​ನಲ್ಲಿ ಉತ್ತಮ ಗಳಿಕೆಯನ್ನು ಮುಂದುವರಿಸಿದೆ.

‘ಲವ್ ಮಾಕ್ಟೇಲ್ 3’ ಚಿತ್ರ ಮೊದಲ ದಿನ 1.36 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು sacnilk ವರದಿ ಮಾಡಿದೆ. ಎರಡನೇ ದಿನವಾದ ಶುಕ್ರವಾರ 1.15 ಕೋಟಿ ರೂಪಾಯಿ ಗಳಿಸಿದೆ. ಚಿತ್ರದ ಒಟ್ಟಾರೆ ಗಳಿಕೆ ಎರಡೂವರೆ ಕೋಟಿ ರೂಪಾಯಿ ಆಗಿದೆ. ವಿಶೇಷ ಎಂದರೆ ಚಿತ್ರಕ್ಕೆ ಗುರುವಾರ 397 ಶೋಗಳನ್ನು ನೀಡಲಾಗಿತ್ತು. ಶುಕ್ರವಾರ ಅದನ್ನು 407ಕ್ಕೆ ಏರಿಸಲಾಗಿದೆ. ಇದು ಚಿತ್ರದ ಹೆಚ್ಚುಗಾರಿಕೆ.

‘ಲವ್ ಮಾಕ್ಟೇಲ್’ ಚಿತ್ರದಲ್ಲಿ ಬ್ರೇಕಪ್​​ಗಳು ಹೈಲೈಟ್ ಆಗಿದ್ದವು. ಎರಡನೇ ಭಾಗದಲ್ಲಿಯೂ ಇದೇ ವಿಷಯ ಇತ್ತು. ಆದರೆ, ಮೂರನೇ ಭಾಗದಲ್ಲಿ ಯಾರೂ ಊಹಿಸದ ರೀತಿಯ ಕಥೆಯೊಂದಿಗೆ ಡಾರ್ಲಿಂಗ್ ಕೃಷ್ಣ ಸಿನಿಮಾ ಮಾಡಿದರು. ಚಿತ್ರ ನೋಡಿದ ಅನೇಕರು ಹೊಗಳುತ್ತಿದ್ದಾರೆ. ‘ಸಿನಿಮಾ ಈ ರೀತಿ ಇರುತ್ತದೆ ಎಂದು ಊಹಿಸಿರಲಿಲ್ಲ’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ಧುರಂದರ್ 2’ ಚಿತ್ರದ ಎದುರು ರಿಲೀಸ್ ಆದ ‘ಲವ್ ಮಾಕ್ಟೇಲ್ 3’ ಗಳಿಸಿದ್ದೆಷ್ಟು?

ಮಿಲನಾ ನಾಗರಾಜ್ ಅವರು ಮೊದಲ ಭಾಗ, ಎರಡನೇ ಭಾಗದಲ್ಲಿ ಇದ್ದರು. ಮೂರನೇ ಭಾಗದಲ್ಲೂ ಅವರನ್ನು ಕರೆತರಲಾಗಿದೆ. ಅದು ಹೇಗೆ ಎಂಬುದನ್ನು ಸಿನಿಮಾದಲ್ಲಿಯೇ ನೋಡಬೇಕು. ಮೂರನೇ ಭಾಗದಲ್ಲಿಯೂ ಹಾಸ್ಯ ಹೈಲೈಟ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕರ್ನಾಟಕ ಹವಾಮಾನ ವರದಿ: ರಾಜ್ಯದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ, 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​!

ಬೆಂಗಳೂರು, ಮಾರ್ಚ್​ 21: ಹಲವು ದಿನಗಳಿಂದ ರಾಜ್ಯದೆಲ್ಲೆಡೆ ಒಣಹವೆಯಿತ್ತು. ಆದರೆ ಇತ್ತೀಚಿಗೆ ಕೆಲ ಜಿಲ್ಲೆಗಳಲ್ಲಿ ಮಳೆ ಸುರಿದು (Weather Forecast) ತಾಪಮಾನ ಸುಧಾರಿಸಿತ್ತು. ಇಂದೂ ಸಹ ಹಲವೆಡೆ ಗುಡುಗು-ಸಿಡಿಲು ಸಹಿತ ಸಾಧಾರಣ ಮಳೆಯಾಗಲಿದ್ದು, ಬೆಂಗಳೂರಿನಿಂದ ಬೀದರ್​ವರೆಗೆ ಒಟ್ಟೂ 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಸೂಚಿಸಲಾಗಿದೆ. ಉಳಿದೆಡೆ ಒಣ ಹವೆಯ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಯಾವೆಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​?

ಬೀದರ್, ಕಲಬುರ್ಗಿ, ಯಾದಗಿರಿ, ಬಿಜಾಪುರ, ರಾಯಚೂರು, ಬಾಗಲಕೋಟೆ, ಕೊಪ್ಪಳ, ವಿಜಯನಗರ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್​ ನೀಡಿದೆ.

ಎಲ್ಲೆಲ್ಲಿ ತುಂತುರು ಮಳೆ?

ಉತ್ತರ ಒಳನಾಡಿನ ಬೆಳಗಾವಿ, ಹಾವೇರಿ, ಗದಗ ಮತ್ತು ಧಾರವಾಡ ಜಿಲ್ಲೆಗಳಲ್ಲಿ 30 ರಿಂದ 40km/h ಗಾಳಿಯೊಂದಿಗೆ ಗುಡುಗು ಸಹಿತ ಸಾಧಾರಣ ಮಳೆಯಾಗಬಹುದೆಂದು ಹವಾಮಾನ ಇಲಾಖೆ ತಿಳಿಸಿದೆ. ಅದರಂತೆ ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿಯೂ ಗುಡುಗು, ಸಿಡಿಲು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಎಲ್ಲೆಲ್ಲಿ ಒಣ ಹವೆ?

ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆ ಆವರಿಸಲಿದೆ. ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಾಮರಾಜನಗರ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೀದರ್, ವಿಜಯಪುರ, ಬಾಗಲಕೋಟೆ, ಗದಗ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Horoscope Today 21st​​ March​: ಇಂದು ಈ ರಾಶಿಯವರಿಗೆ ಆಕಸ್ಮಿಕ ಧನಯೋಗ!

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮಾರ್ಚ್​ 21, ಶನಿವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ಪರಾಭವನಾಮ ಸಂವತ್ಸರ, ಉತ್ತರಾಯಣ, ಚೈತ್ರಮಾಸ, ವಸಂತಋತು, ಶುಕ್ಲಪಕ್ಷ, ತದಿಗೆ, ಅಶ್ವಿನಿ ನಕ್ಷತ್ರ, ಇಂದ್ರಯೋಗ, ತೈತಲಕರಣದ ಶುಭ ದಿನವಾಗಿದೆ. ಸೂರ್ಯನು ಮೀನ ರಾಶಿಯಲ್ಲಿ ಮತ್ತು ಚಂದ್ರನು ಮೇಷ ರಾಶಿಯಲ್ಲಿ ಅಶ್ವಿನಿ ನಕ್ಷತ್ರದಲ್ಲಿ ಸಂಚರಿಸುತ್ತಿದ್ದಾರೆ.

ಈ ದಿನದ ರಾಹುಕಾಲವು ಬೆಳಿಗ್ಗೆ 9:25 ರಿಂದ 10:56 ರವರೆಗೆ ಇರುತ್ತದೆ. ಮಧ್ಯಾಹ್ನ 1:58 ರಿಂದ 3:28 ರವರೆಗೆ ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ ಮತ್ತು ಶುಭಕಾಲ ಇರುತ್ತದೆ. ಇಂದು ಮತ್ಸ್ಯ ಜಯಂತಿ, ಶಿರಸಿಂಗಿ ಜಾತ್ರಾ ಮಹೋತ್ಸವ, ಸೌಭಾಗ್ಯ ಗೌರಿ ವ್ರತ ಮತ್ತು ಉಯ್ಯಾಲೆ ಗೌರಿ ವ್ರತಗಳನ್ನು ಆಚರಿಸಲಾಗುತ್ತದೆ. ಡಾ. ಬಸವರಾಜ ಗುರೂಜಿ ಅವರು ದ್ವಾದಶ ರಾಶಿಗಳಿಗೆ ಎದುರಾಗಬಹುದಾದ ಶುಭ ಫಲಗಳು, ಆರ್ಥಿಕ ಸ್ಥಿತಿ, ಉದ್ಯೋಗ, ಆರೋಗ್ಯ, ಕುಟುಂಬ ಸಂಬಂಧಗಳು, ಪ್ರೀತಿ-ಪ್ರೇಮದ ವಿಷಯಗಳು, ಅದೃಷ್ಟ ಸಂಖ್ಯೆಗಳು, ಶುಭ ಬಣ್ಣಗಳು ಮತ್ತು ಪಠಿಸಬೇಕಾದ ಮಂತ್ರಗಳ ಕುರಿತು ವಿವರವಾದ ಮಾಹಿತಿಯನ್ನು ನೀಡಿದ್ದಾರೆ.

 

 

 

Source link

ಶುಕ್ರವಾರವೂ ಅಬ್ಬರಿಸಿದ ‘ಧುರಂಧರ್ 2’ ಸಿನಿಮಾ; ಕನ್ನಡದಲ್ಲಿ ಗಳಿಕೆ ಎಷ್ಟು?

‘ಧುರಂಧರ್ 2’ ಸಿನಿಮಾ (Dhurandhar 2) ದಿನವೂ ಬಾಕ್ಸ್ ಆಫೀಸ್​​ನಲ್ಲಿ ಅಬ್ಬರಿಸುತ್ತಿದೆ. ಈ ಚಿತ್ರ ಸಾಕಷ್ಟು ನಿರೀಕ್ಷೆಗಳೊಂದಿಗೆ ರಿಲೀಸ್ ಆಯಿತು. ಈ ಸಿನಿಮಾ ನಿರೀಕ್ಷೆಯನ್ನು ಹುಸಿ ಮಾಡಿಲ್ಲ. ಸಿನಿಮಾ ಅಬ್ಬರಿಸುತ್ತಿದೆ. ಚಿತ್ರ ಬಾಕ್ಸ್ ಆಫೀಸ್​​ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಸಿನಿಮಾ ಒಟ್ಟಾರೆ ಎಷ್ಟು ಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತದೆ ಎಂಬ ಕುತೂಹಲ ಮೂಡಿದೆ. ಇನ್ನೂ ಎರಡು ತಿಂಗಳ ಕಾಲ ಸಿನಿಮಾ ಪ್ರಸಾರ ಕಾಣುವ ನಿರೀಕ್ಷೆ ಇದೆ. ವಿಕೇಂಡ್​​ ಶೋಗಳು ಹೌಸ್​​ಫುಲ್ ಆಗಿವೆ.

ಮಾರ್ಚ್ 19ರಂದು ‘ಧುರಂಧರ್ 2’ ರಿಲೀಸ್ ಆಯಿತು. 18ರಂದು ಸಿನಿಮಾಗೆ ಪ್ರೀಮಿಯರ್ ಶೋಗಳನ್ನು ಆಯೋಜನೆ ಮಾಡಲಾಗಿತ್ತು. ಇದರಿಂದ ಸಿನಿಮಾಗೆ 43 ಕೋಟಿ ರೂಪಾಯಿ ಹರಿದು ಬಂದಿದೆ. ಗುರುವಾರ ಸಿನಿಮಾ ಭಾರತದಲ್ಲಿ 102 ಕೋಟಿ ರೂಪಾಯಿ ಗಳಿಸಿದೆ. ಶುಕ್ರವಾರ ಸಿನಿಮಾ 80 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ಮೊದಲ ದಿನ ಈ ಚಿತ್ರಕ್ಕೆ 21,663 ಶೋಗಳನ್ನು ನೀಡಲಾಗಿತ್ತು. ಎರಡನೇ ದಿನ 20,125 ಶೋಗಳನ್ನು ಭಾರತದಾದ್ಯಂತ ನೀಡಲಾಗಿದೆ. ಸದ್ಯ ಭಾರತಾದ್ಯಂತದ ಕಲೆಕ್ಷನ್ 226 ಕೋಟಿ ರೂಪಾಯಿ ಆಗಿದೆ. ಗ್ರಾಸ್ ಕಲೆಕ್ಷನ್ 269 ಕೋಟಿ ರೂಪಾಯಿ ಆಗಿದೆ.

‘ಧುರಂಧರ್’ ಸಿನಿಮಾ ಕನ್ನಡದಲ್ಲಿ ರಿಲೀಸ್ ಆಗಿರಲಿಲ್ಲ. ಆದರೆ, ‘ಧುರಂಧರ್ 2’ ಚಿತ್ರವನ್ನು ಕನ್ನಡದಲ್ಲೂ ಬಿಡುಗಡೆ ಮಾಡಲಾಯಿತು. ಚಿತ್ರಕ್ಕೆ ಗುರುವಾರ ಕನ್ನಡದಲ್ಲಿ 20 ಶೋ ನೀಡಲಾಗಿದ್ದು, 3 ಲಕ್ಷ ರೂಪಾಯಿ ಗಳಿಕೆ ಆಗಿದೆ. ಹಿಂದಿ ಭಾಷೆಯಲ್ಲೇ ಸಿನಿಮಾ ಅಬ್ಬರಿಸುತ್ತಿದೆ.

ಇದನ್ನೂ ಓದಿ: ಮೊದಲ ದಿನವೇ 250 ಕೋಟಿ ರೂಪಾಯಿ ಕ್ಲಬ್ ಸೇರಿದ ‘ಧುರಂಧರ್ 2’ ಸಿನಿಮಾ

‘ಧುರಂಧರ್ 2’ ಚಿತ್ರಕ್ಕೆ ಇಂದು ಹಾಗೂ ನಾಳೆ ಪ್ರಮುಖವಾಗಲಿದೆ. ಶನಿವಾರ ಹಾಗೂ ಭಾನುವಾರ ಸಿನಿಮಾ ಒಳ್ಳೆಯ ಗಳಿಕೆ ಮಾಡುವ ನಿರೀಕ್ಷೆ ಇದೆ. ಚಿತ್ರದ ಒಟ್ಟಾರೆ ಕಲೆಕ್ಷನ್ 2 ಸಾವಿರ ಕೋಟಿ ರೂಪಾಯಿ ತಲುಪೋ ನಿರೀಕ್ಷೆ ಇದೆ. ರಣವೀರ್ ಸಿಂಗ್ ನಟನೆಯ ಈ ಚಿತ್ರಕ್ಕೆ, ಆದಿತ್ಯ ಧಾರ್ ನಿರ್ದೇಶನ ಇದೆ. ‘ಧುರಂಧರ್’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ 1300 ಕೋಟಿ ರೂಪಾಯಿ ಗಳಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Daily Devotional: ದುರ್ಗಾದೇವಿಗೆ ವೀಳ್ಯದೆಲೆ ಹಾರ ಅಥವಾ ಅಲಂಕಾರದ ಏಕೆ ಮಾಡಬೇಕು?

ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ದುರ್ಗಾದೇವಿಗೆ ವೀಳ್ಯದೆಲೆ ಹಾರ ಅಥವಾ ಅಲಂಕಾರದ ಏಕೆ ಮಾಡಬೇಕು ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ದುರ್ಗಾದೇವಿಗೆ ವೀಳ್ಯದೆಲೆ ಹಾರವನ್ನು ಅರ್ಪಿಸುವುದು ಭಕ್ತಿಭಾವದಿಂದ ಭಗವಂತನನ್ನು ಆರಾಧಿಸುವ ಒಂದು ಮಹತ್ವದ ವಿಧಾನವಾಗಿದೆ. ದುರ್ಗಾ ಎಂದರೆ ದುರ್ಗತಿನಾಶಿನಿ. ಅಂದರೆ ನಮ್ಮ ಎಲ್ಲಾ ದುರ್ಗತಿಗಳನ್ನು ನಾಶ ಮಾಡುವ ತಾಯಿ. ಮಹಾಲಕ್ಷ್ಮಿ, ಮಹಾಕಾಳಿ, ಮಹಾಸರಸ್ವತಿ – ಈ ತ್ರಿಶಕ್ತಿಗಳೂ ಕೂಡ ದುರ್ಗಾದೇವಿಯ ಅಂಶಗಳಾಗಿವೆ.

ಹನುಮಂತ ಮತ್ತು ಮಹಾಲಕ್ಷ್ಮಿಗೆ ವೀಳ್ಯದೆಲೆ ಹಾರ ಅರ್ಪಿಸುವ ಪದ್ಧತಿ ಇರುವಂತೆ, ದುರ್ಗಾದೇವಿಗೆ ವೀಳ್ಯದೆಲೆ ಹಾರವನ್ನು ಅರ್ಪಿಸುವುದು ನಮ್ಮ ಸಂಕಲ್ಪಗಳನ್ನು ಈಡೇರಿಸಲು, ಭಯ, ಆತಂಕ, ಒಂಟಿತನ, ಬುದ್ಧಿ ಮಂಕುತನ, ಆರೋಗ್ಯ ಸಮಸ್ಯೆಗಳು, ಹಾಗೂ ರಾಜಕೀಯ ಮತ್ತು ವೃತ್ತಿಪರ ಅವಮಾನಗಳಂತಹ ಕಷ್ಟಗಳನ್ನು ದೂರ ಮಾಡುತ್ತದೆ. ಈ ಆಚರಣೆಯನ್ನು ಒಂಬತ್ತು ಮಂಗಳವಾರಗಳಂದು ಸಂಧ್ಯಾಕಾಲದಲ್ಲಿ, 45 ಎಲೆಗಳ ವೀಳ್ಯದೆಲೆ ಹಾರ ಮತ್ತು ಬೆಲ್ಲದ ಪಾಯಸವನ್ನು ದೇವಿಗೆ ಅರ್ಪಿಸಿ, “ಓಂ ದುಂ ದುರ್ಗಾಯೈ ನಮಃ” ಮಂತ್ರ ಜಪಿಸುವ ಮೂಲಕ ಮಾಡಲಾಗುತ್ತದೆ. ಕೊನೆಯ ಮಂಗಳವಾರ ಮೂವರು ಮುತ್ತೈದೆಯರಿಗೆ ತಾಂಬೂಲವನ್ನು ನೀಡುವುದು ಈ ವಿಧಾನದ ಸಂಪೂರ್ಣತೆಯನ್ನು ಸೂಚಿಸುತ್ತದೆ ಎಂದು ಡಾ.ಬಸವರಾಜ ಗುರೂಜಿ ಹೇಳಿದ್ದಾರೆ.

 

 

 

Source link

BESCOM Power Cut: ಮಾರ್ಚ್ 22 ರಿಂದ 25 ರ ವರೆಗೆ ಬೆಸ್ಕಾಂ ವ್ಯಾಪ್ತಿಯ ವಿವಿಧೆಡೆ ವಿದ್ಯುತ್ ಕಡಿತ, ವಿವರ ಇಲ್ಲಿದೆ

ಬೆಂಗಳೂರು, ಮಾರ್ಚ್​ 21: ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಬೆಸ್ಕಾಂ (BESCOM) ವ್ಯಾಪ್ತಿಯ ಹಲವು ಕಡೆಗಳಲ್ಲಿ ಮಾರ್ಚ್ 22 ರಿಂದ 25 ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಈ ಬಗ್ಗೆ ಬೆಸ್ಕಾಂ ಅಧಿಕೃತವಾಗಿ ಪ್ರಕಟಣೆ ಹೊರಡಿಸಿದೆ. ಮಾರ್ಚ್ 22ರಂದು ಕೆಲವು ಪ್ರದೇಶಗಳಲ್ಲಿ ನಿರ್ವಹಣಾ ಮತ್ತು ಲೈನ್ ಅಪ್‌ಗ್ರೇಡ್ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಇರಲಿದೆ. ಇದರ ಪರಿಣಾಮವಾಗಿ ಅನೇಕ ಬಡಾವಣೆಗಳು ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.

ಇನ್ನು ಮಾರ್ಚ್ 23ರಿಂದ 25ರವರೆಗೆ ಹೆಚ್‌ಟಿ ರೀಕಂಡಕ್ಟರಿಂಗ್ (HT Reconductoring) ಕಾಮಗಾರಿಗಳ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಈ ದಿನಗಳಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಇರಲಿದೆ ಎಂದು ತಿಳಿಸಲಾಗಿದೆ.

ಮಾರ್ಚ್ 22ರಂದು ಎಲ್ಲೆಲ್ಲಿ ವಿದ್ಯುತ್ ಕಡಿತ?

ಚಿತ್ರದುರ್ಗ ವ್ಯಾಪ್ತಿಯ ಎಚ್.ಡಿ.ಪುರ, ತಾಳ್ಯ ಕಾವಲು, ಉಪ್ಪರಿಗೇನಹಳ್ಳಿ, ಬೂದಿಪುರ, ನಲ್ಲಿಕಟ್ಟೆ, ತಾಳ್ಯ, ಮತ್ತಿಘಟ್ಟ, ಕೆರೆಯಾಗಲಹಳ್ಳಿ, ಚೌಡಗೊಂಡನಹಳ್ಳಿ, ತೇಕಲವಟ್ಟಿ, ಬಿ.ಆ‌ರ್.ಗುಡಿ, ಚಾಮುಂಡೇಶ್ವರಿ, ಮಹದೇವನಕಟ್ಟೆ, ದೊಡ್ಡಾಪುರ, ಕಕ್ಕೇರು, ಹೋಸೂರು, ಜುಂಜಪ್ಪ ಮಾರ್ಗ, ಗೊಡಬನಹಾಳ್, ಅನ್ನೆಹಾಳು, ವಜ್ರ ಮಾರ್ಗ, ಈಚಘಟ್ಟ, ಟಿ.ನುಲೆನೂರು, ಬಿ.ಜಿಹಳ್ಳಿ, ಚಿತ್ರಹಳ್ಳಿ, ಮದ್ದೇರು, ಶಿವಗಂಗ, ಲಿಂಗದಹಳ್ಳಿ, ಕೇಶವಪುರ, ದಾಸಯ್ಯನಹಟ್ಟಿ, ಕೊಂಡಾಪುರ, ಆ೦ನೇಯ ದೇವಸ್ಥಾನ ಪ್ರದೇಶ, ಬಸವೇಶ್ವರ ದೇವಸ್ಥಾನ ಪ್ರದೇಶ, ಮೇಕೇನಹಟ್ಟಿ, ಕಾಟಯ್ಯನಕೆರೆ ಪ್ರದೇಶ, ನರಸಿಂಹಸ್ವಾಮಿ ದೇವಸ್ಥಾನ(ಗರಗ), ಅರಸನಘಟ್ಟ, ಗರಗ ಕಾವಲು, ಸಾದರಹಳ್ಳಿ, ಚಿಕ್ಕಂದವಾಡಿ, ಕರೀಮಟ್ಟಿ, ಚಿಕ್ಕನಕಟ್ಟೆ, ಚಿಕ್ಕಹೆಮ್ಮಿಗನೂರು, ಕೆ.ಎನ್.ಹಳ್ಳಿ, ತನಿಗೆಹಳ್ಳಿ, ಹರೇಕಂದವಾಡಿ, ಗುಂಜಿಗನೂರು, ರಂಗವ್ವನಹಳ್ಳಿ, ಬಿ.ದುರ್ಗ, ಐಯನಹಳ್ಳಿ, ಕಡೂರು, ಕೋಟೇಹಾಳು, ಎಸ್.ಹೆಚ್.ಹಳ್ಳಿ, ಚಿಕ್ಕಂದವಾಡಿ, ಚಿಕ್ಕಜಾಜೂರು, ಕವಲಹಟ್ಟಿ, ಹೋಸಹಳ್ಳಿ, ಸಾವೇರಮ್ಮ, ಗುಂಜಿಗನೂರು, ಗಾಳಿಮಾರಮ್ಮ ದೇವಸ್ಥಾನ ಪ್ರದೇಶ, ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಾರ್ಚ್ 22ರಂದು ಪವರ್ ಕಟ್ ಇರಲಿದೆ.

ಮಾರ್ಚ್ 23 ರಿಂದ 25 ರ ವರೆಗೆ ಎಲ್ಲೆಲ್ಲಿ ಪವರ್ ಕಟ್?

ಕೋಲಾರ ವ್ಯಾಪ್ತಿಯ ಕ್ಯಾಸಂಬಳ್ಳಿ 2-02, 2-0325-04, 2-11 ಮತ್ತು ಎಫ್-12 ಫೀಡರ್‌ಗಳಿಗೆ ಸೇರಿರುವ ಗ್ರಾಮಗಳಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜು ವ್ಯತ್ಯಯವಾಗಲಿದೆ.

ವಿವಿಧ ಫೀಡರ್‌ಗಳು ಮತ್ತು ಎಲೆಕ್ಟ್ರಿಕಲ್ ಸೆಕ್ಷನ್‌ಗಳ ವ್ಯಾಪ್ತಿಯಲ್ಲಿರುವ ಪ್ರದೇಶಗಳು ಈ ವಿದ್ಯುತ್ ವ್ಯತ್ಯಯಕ್ಕೆ ಒಳಪಡಲಿವೆ. ನಿರ್ವಹಣಾ ಕಾಮಗಾರಿಗಳು ಪೂರ್ಣಗೊಂಡ ನಂತರ ವಿದ್ಯುತ್ ಸರಬರಾಜು ಪುನಃಸ್ಥಾಪನೆಗೊಳ್ಳಲಿವೆ.

ಇದನ್ನೂ ಓದಿ: ಫುಟ್​ಪಾತ್ ಮೇಲೆಯೇ ಟ್ರಾನ್ಸ್​ಫಾರ್ಮರ್​​ಗಳ ಸ್ಥಾಪನೆ; ಜನರ ಜೀವದ ಜೊತೆ ಆಟ ಆಡುತ್ತಿದೆಯಾ ಬೆಸ್ಕಾಂ?

ಸಾರ್ವಜನಿಕರು ಮುಂಚಿತವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಬೆಸ್ಕಾಂ ಅಧಿಕಾರಿಗಳು ಮನವಿ ಮಾಡಿದ್ದಾರೆ. ವಿಶೇಷವಾಗಿ ವ್ಯಾಪಾರಿಗಳು, ಐಟಿ ಕಂಪನಿಗಳು ಮತ್ತು ಗೃಹ ಬಳಕೆದಾರರು ವಿದ್ಯುತ್ ವ್ಯತ್ಯಯ ಸಮಯದಲ್ಲಿ ತೊಂದರೆ ತಪ್ಪಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ವಿದ್ಯುತ್ ವ್ಯತ್ಯಯಕ್ಕೆ ಒಳಪಡುವ ಪ್ರದೇಶಗಳ ಹೆಚ್ಚಿನ ವಿವರಗಳನ್ನು ಬೆಸ್ಕಾಂ ವೆಬ್‌ಸೈಟ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿಯೂ ಪ್ರಕಟಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿನ ಭವಿಷ್ಯ: ಇಂದು ಈ ರಾಶಿಯವರ ಚರಾಸ್ತಿಯ ಸಂಪತ್ತಿಗೆ ತೊಂದರೆ ಒದಗಲಿದೆ

ಮೇಷ ರಾಶಿ:

ಯಾರನ್ನೂ ನಿಮ್ಮ ದೃಷ್ಟಿಯಿಂದ ಅಳೆಯಲು ಆಗದು. ಅದಕ್ಕಾಗಿ ಸಮಯವನ್ನೂ ವ್ಯರ್ಥ ಮಾಡುವುದು ಬೇಡ. ಸಮಯದ ಹೊಂದಾಣಿಕೆ ಅವಶ್ಯಕ. ಪ್ರೇಯಸಿಯ ನೆನಪನ್ನು ನಿಯಂತ್ರಿಸುವುದು ಕಷ್ಟವಾಗಬಹುದು. ವಾಹನದಲ್ಲಿ ಸಂಚಾರಕ್ಕೆ ತೊಂದರೆ ಬರಬಹುದು. ಕಾರಣವಿಲ್ಲದೇ ಕೋಪವು ಬರುವುದು. ಅತಿಯಾದ ಮೋಹದಿಂದ ಹೊರಬರುವಿರಿ. ಶಿಕ್ಷಣಕ್ಕೆ ಸಂಬಂಧಿಸಿದಂತೆ ನಿಮಗೆ ಸಮಾರಂಭಗಳಿಗೆ ಆಹ್ವಾನವು ಬರಬಹುದು.

ವೃಷಭ ರಾಶಿ:

ಇಂದಿನ ಕಾರ್ಯಗಳಲ್ಲಿ ವಿಳಂಬವಾದರೂ ಪೂರ್ಣಗೊಳಿಸುವಿರಿ. ಪ್ರಮುಖ ವಿಚಾರಗಳಲ್ಲಿ ಸಹೋದರರ ಸಲಹೆ ಪಡೆದು ಮುನ್ನಡೆಯುವುದು ಉತ್ತಮ. ಭೂಮಿಯ ವ್ಯವಹಾರದಲ್ಲಿ ಅಧಿಕ ಒತ್ತಡ. ಸಂಗಾತಿಯ ಸ್ವಭಾವವನ್ನು ಸುಲಭದಿಂದ ತಿಳಿಯಲು ಸಾಧ್ಯವಾಗದು. ಅತಿಯಾದ ಬಂಧನವೂ ನಿಮಗೆ ಕಿರಿಕಿರಿ ಎನಿಸಬಹುದು. ನೀವು ಬಯಸಿದ ವಸ್ತುವು ಯಾವುದೋ ರೂಪದಲ್ಲಿ ನಿಮ್ಮನ್ನು ಬಂದು ಸೇರಬಹುದು.

ಮಿಥುನ ರಾಶಿ:

ನಿಮ್ಮ ಮಾತುಗಳಿಂದ ಹಿತಶತ್ರುಗಳ ನಿರ್ಮಾಣವಾಗಲಿದೆ. ಉದ್ಯೋಗಗಳಲ್ಲಿ ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಿರಿ. ದೂರದ ಪ್ರಯಾಣದ ಸೂಚನೆಗಳು. ಇಂದು ಹಿರಿಯರಿಂದ ಯಾವುದೇ ವಿಶೇಷ ಬೆಂಬಲವನ್ನು ಪಡೆಯುವುದಿಲ್ಲ. ವಿವಾಹದಲ್ಲಿ ನಿರಾಸಕ್ತಿಯನ್ನು ತೋರಿಸುವಿರಿ. ಹಿರಿಯರ ಕೋಪಕ್ಕೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ಇಂದು ಸ್ವತಂತ್ರವಾಗಿರುವುದು ನಿಮಗೆ ಇಷ್ಟದ ಸಂಗತಿಯಾಗಲಿದೆ.

ಕರ್ಕಾಟಕ ರಾಶಿ:

ನಿಗದಿತ ಸಮಯದಲ್ಲಿ ಕೆಲಸಗಳು ಪೂರ್ಣಗೊಳ್ಳಲಾರದು. ಬಂಧು ಮಿತ್ರರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಉಂಟಾಗುತ್ತವೆ. ನೀವು ದೀರ್ಘಕಾಲದವರೆಗೆ ಕೆಲಸದಲ್ಲಿ ಹೆಚ್ಚಿನ ಯಶಸ್ಸನ್ನು ಗಳಿಸಲಿಲ್ಲ, ಆದರೆ ಇಂದು ನೀವು ನಿಮ್ಮ ಅತ್ಯುತ್ತಮವಾದದನ್ನು ನೀಡುವ ಮೂಲಕ ಎಲ್ಲರನ್ನು ಆಶ್ಚರ್ಯಗೊಳಿಸುತ್ತೀರಿ. ಕುಟುಂಬದ ಕೆಲವು ವಿಚಾರವು ನಿಮಗೆ ಹಿಡಿಸದೇಹೋದೀತು. ಸಂಬಂಧವನ್ನು ಆತ್ಮೀಯಗೊಳಿಸಿಕೊಳ್ಳಲು ಪ್ರಯತ್ನಪಡುವಿರಿ.

ಸಿಂಹ ರಾಶಿ:

ಕುಟುಂಬದ ಸದಸ್ಯರ ಜೊತೆ ಧಾರ್ಮಿಕ ಸೇವಯಲ್ಲಿ ಭಾಗವಹಿಸುವಿರಿ. ನಿಮ್ಮ ಮಾತಿನಿಂದ ಹಿತಶತ್ರುಗಳ ಉತ್ಪಾದನೆ ಆಗಲಿದೆ. ಇಂದು ಸಂಪತ್ತಿನ ಹೆಚ್ಚಳವಾಗಲಿದೆ. ನಿಮಗೆ ಗೊತ್ತಿಲ್ಲದೇ ಚರಾಸ್ತಿಯು ಇಲ್ಲವಾಗಬಹುದು. ಇಷ್ಟವಿಲ್ಲದಿದ್ದರೂ ಕೆಲಸವನ್ನು ಮಾಡಬೇಕಾದೀತು. ಉದ್ವಿಗ್ನತೆಗೆ ದಾರಿ ಮಾಡಿಕೊಡದೇ ಸಮಚಿತ್ತದಲ್ಲಿ ಇರುವಂತೆ ನೋಡಿಕೊಳ್ಳಿ. ನಿಮ್ಮ ಇರುವಿಕೆಯನ್ನು ತೋರಿಸುವ ಪ್ರಯತ್ನ ಮಾಡುವಿರಿ.

ಕನ್ಯಾ ರಾಶಿ:

ದೂರದ ಕನಸನ್ನು ನನಸಾಗಿಸಲು ಪ್ರಯತ್ನ ಆರಂಭ. ಮಕ್ಕಳಲ್ಲಿ ಪಕ್ಷಪಾತದಿಂದ ಕಲಹವಾಗುವುದು. ನೌಕರರ ವಿಚಾರದಲ್ಲಿ ನಿಮ್ಮ ವರ್ತನೆಯು ಸರಿಯಾಗಿರಲಿ. ನಿಮ್ಮದೇ ಆದ ಚಿಂತನೆಯಿಂದ ಕಾರ್ಯವನ್ನು ಮಾಡುವಿರಿ. ಬೌದ್ಧಿಕ ಕಸರತ್ತನ್ನು ಪ್ರದರ್ಶಿಸುವಿರಿ. ಒಂದೇ ರೀತಿಯಲ್ಲಿ ಜೀವನ ಸಾಗುವುದು ನಿಮಗೆ ಇಷ್ಟವಾಗದು. ಯಾವುದಕ್ಕೆ ಎಷ್ಟು ಸಮಯವನ್ನು ಕೊಡಬೇಕು ಎನ್ನುವುದನ್ನು ಪರೀಕ್ಷೆಯ ವಿದ್ಯಾರ್ಥಿಗಳು ನಿರ್ಧರಿಸಿ.

ತುಲಾ ರಾಶಿ:

ಇಂದು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ನೆರವಿನಿಂದ ಕೆಲವು ಕೆಲಸಗಳು ಪೂರ್ಣಗೊಳ್ಳುತ್ತವೆ. ವೃತ್ತಿ ಮತ್ತು ಉದ್ಯೋಗಗಳಲ್ಲಿ ಉನ್ನತ ಸ್ಥಾನಗಳನ್ನು ಪಡೆಯುತ್ತೀರಿ. ನೀವು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದರೆ ಹಣವನ್ನೂ ಖರ್ಚು ಮಾಡಬೇಕಾದೀತು. ನೀರಿನಿಂದ ಭೀತಿ ಉಂಟಾಗುವುದು. ವಾಹನದ ಮೇಲಿನ ಪ್ರೀತಿ ವ್ಯಾಮೋಹವಾದೀತು. ನಿಮ್ಮ ಮಾತುಗಳಲ್ಲಿ ನಂಬಿಕೆ ಇಲ್ಲವಾದೀತು.

ವೃಶ್ಚಿಕ ರಾಶಿ:

ಶ್ರಮಕ್ಕೆ ಸರಿಯಾದ ಮನ್ನಣೆ ಸಿಗುವುದಿಲ್ಲ. ಹಣಕಾಸಿನ ವ್ಯವಹಾರಗಳಲ್ಲಿ ಸ್ವಂತ ಆಲೋಚನೆಗಳು ಕೂಡಿ ಬರುವುದಿಲ್ಲ. ಪಾಲುದಾರಿಕೆ ವ್ಯವಹಾರಗಳು ನಿಧಾನವಾಗಿ ಸಾಗುತ್ತವೆ. ನೀವು ಇಂದು ಹಣಕ್ಕೆ ಸಂಬಂಧಿಸಿದ ಕಾಳಜಿಗಳನ್ನು ತೊಡೆದುಹಾಕಲು ಸಾಧ್ಯವಾಗುತ್ತದೆ. ನಿಮಗೆ ಸಪ್ಪೆ ಎನಿಸಿದ ವಿಷಯವನ್ನು ಮುಂದುವರಿಸುವುದಿಲ್ಲ. ಉದ್ಯೋಗದ ಒತ್ತಡದಿಂದ ನಿಮಗೆ ಅನಾರೋಗ್ಯದಿಂದ ಬಳಲುವಿರಿ. ಆದಾಯವನ್ನು ಹೆಚ್ಚಿಸಿಕೊಳ್ಳುವುದು ಅನಿವಾರ್ಯವಾದೀತು.

ಧನು ರಾಶಿ:

ವೃತ್ತಿಪರ ವ್ಯವಹಾರದಲ್ಲಿ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ಸಿಗುತ್ತವೆ. ಇಂದು ಯಾವುದೇ ಪ್ರಮುಖ ವ್ಯವಹಾರ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸಂಗಾತಿಯ ಕಡೆಯನ್ನೂ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಮೇಲಧಿಕಾರಿಹಳ ಜೊತೆ ಯೋಜನೆಯ ಕುರಿತು ಚರ್ಚೆ ನಡೆಸುವಿರಿ. ಉದ್ಯೋಗದ ಕಿರಿಕಿರಿಯನ್ನು ನೀವು ಸಹಿಸಲಾರಿರಿ. ಯಂತ್ರಗಳ ಮಾರಾಟ ಮಾಡುವವರಿಗೆ ಉತ್ತಮ ಲಾಭವಿರಲಿದೆ.

ಮಕರ ರಾಶಿ:

ಆತುರದ ಆಲೋಚನೆಗಳಿಂದ ತೊಂದರೆ ಉಂಟಾಗುತ್ತದೆ. ವೃತ್ತಿಪರ ವ್ಯವಹಾರಗಳು ನಿಧಾನವಾಗಿ ಸಾಗುತ್ತವೆ. ಇತರರೊಂದಿಗೆ ವಿವಾದಗಳಿಂದ ದೂರವುದು ಉತ್ತಮ. ವ್ಯರ್ಥವಾಗಲಿರುವ ಖರ್ಚುಗಳೇ ಹೆಚ್ಚಾಗುತ್ತವೆ. ನಿಮ್ಮ ವೃತ್ತಿಜೀವನವು ಹೊಸ ತಿರುವು ಪಡೆಯಬಹುದು. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ವ್ಯವಹಾರದಲ್ಲಿ ಪಾರದರ್ಶಕತೆಯನ್ನು ತೋರಿಸಬೇಕಾಗುವುದು. ಸಹೋದರಿಯರಿಗೆ ಉಡುಗೊರೆ ನೀಡಿ ಸಂತೋಷಪಡಿಸುವಿರಿ.

ಕುಂಭ ರಾಶಿ:

ಮಕ್ಕಳು ಶಿಕ್ಷಣ ಮತ್ತು ಉದ್ಯೋಗ ವಿಷಯಗಳಲ್ಲಿ ಅಪೇಕ್ಷಿತ ಫಲವನ್ನು ,ಪಡೆಯುತ್ತಾರೆ. ಎಲ್ಲಾ ಕಡೆಯಿಂದ ಆದಾಯ ಬರುತ್ತದೆ. ವೃತ್ತಿಪರ ಉದ್ಯೋಗಗಳು ತೃಪ್ತಿಕರವಾಗಿ ಸಾಗುತ್ತವೆ. ಸಣ್ಣ ವಿಷಯವೂ ನಿಮ್ಮನ್ನು ನೋಯಿಸಬಹುದು. ನೀವು ತುಂಬಾ ಅಸಮಾಧಾನಗೊಂಡಿದ್ದರೂ ಕೆಲವು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಕುಟುಂಬದ ಜವಾಬ್ದಾರಿಯು ನಿಮಗೆ ಸಿಗಬಹುದು. ಚಂಚಲವಾದ ಮನಸ್ಸನ್ನು ನಿಶ್ಚಲಗೊಳಿಸಲು ಪ್ರಯತ್ನಿಸುವಿರಿ.

ಮೀನ ರಾಶಿ:

ಹೊಸ ವಾಹನ ಖರೀದಿಯ ಪ್ರಯತ್ನಗಳು ಮುಂದೂಡಲ್ಪಡುತ್ತವೆ. ನಿರುದ್ಯೋಗಿಗಳಿಗೆ ಸಿಗಬೇಕಾದ ಅವಕಾಶಗಳು ಸಿಗದೇ ಹತಾಶೆ ಹೆಚ್ಚಾಗುತ್ತದೆ. ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಪ್ರೀತಿಪಾತ್ರರ ಜೊತೆ ಸಂಬಂಧ ಉತ್ತಮವಾಗಿರುತ್ತದೆ. ಗೊಂದಲದ ತೀರ್ಮಾನವು ಬೇಡ. ಎಲ್ಲವೂ ಅಂದುಕೊಂಡಂತೆ ಆಗದು ಎಂಬುದು ನಿಮ್ಮ ವಿಚಾರದಲ್ಲಿ ಸತ್ಯವಾಗುವುದು. ನಿಮ್ಮ ಕಾರ್ಯದ ಆರಂಭವೇ ಸರಿಯಾಗಿ ಇರುವುದರಿಂದ ಗುರಿಯೂ ತಪ್ಪಬಹುದು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ಚೈತ್ರ, ಸೌರ ಮಾಸ : ಮೀನ, ಮಹಾನಕ್ಷತ್ರ : ಉತ್ತರಾಭಾದ್ರ, ವಾರ : ಶನಿ, ಪಕ್ಷ : ಶುಕ್ಲ, ತಿಥಿ : ತೃತೀಯಾ ನಿತ್ಯನಕ್ಷತ್ರ : ರೇವತೀ, ಯೋಗ : ಐಂದ್ರ, ಕರಣ : ಕೌಲವ, ಸೂರ್ಯೋದಯ – 06 – 29 am, ಸೂರ್ಯಾಸ್ತ – 06 – 34 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:30 – 11:01, ಯಮಗಂಡ ಕಾಲ 14:02 – 15:33, ಗುಳಿಕ ಕಾಲ 06:29 – 07:59

-ಲೋಹಿತ ಹೆಬ್ಬಾರ್-8762924271 (what’s app only)

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 21ರ ದಿನಭವಿಷ್ಯ

ಜೇಬಿನಲ್ಲಿ ಯಾವಾಗಲೂ ಒಂದು ಬೆಳ್ಳಿಯ ನಾಣ್ಯ ಅಥವಾ ಹಸಿರು ಬಣ್ಣದ ಕರವಸ್ತ್ರ ಇಟ್ಟುಕೊಳ್ಳಿ. ಇದು ಆರ್ಥಿಕ ಸ್ಥಿರತೆಗೆ ಸಹಕಾರಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ನಿಮ್ಮಲ್ಲಿ ಯಾರು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಸಾಲಕ್ಕಾಗಿ ಪ್ರಯತ್ನವನ್ನು ಮಾಡುತ್ತಿದ್ದೀರಿ ಅಂಥವರಿಗೆ ಇತರರ ಸಹಾಯದ ಅಥವಾ ಶಿಫಾರಸಿನ ಮೂಲಕ ಸುಲಭವಾಗಿ ಕೆಲಸಗಳು ಆಗಬಹುದು. ಇನ್ನು ಯಾರು ಮನೆಯಲ್ಲಿ ಕೆಲವು ಸಿವಿಲ್ ಕೆಲಸಗಳನ್ನು ಮಾಡಿಸಬೇಕು ಅಂದುಕೊಳ್ಳುತ್ತೀರೋ ಅಂಥವರಿಗೆ ಉತ್ತಮ ಕೆಲಸಗಾರರ ಪರಿಚಯವಾಗಿ, ನೀವು ಅಂದುಕೊಂಡಿದ್ದಕ್ಕಿಂತ ಕಡಿಮೆ ಮೊತ್ತದಲ್ಲಿ ಕೆಲಸ ಮುಗಿಯಲಿಕ್ಕೆ ಮಾರ್ಗ ಗೋಚರ ಆಗಲಿದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಈ ಹಿಂದಿನ ಕೆಲವು ಅನುಭವಗಳಿಂದಾಗಿ ಹಲ್ಲು ಕಚ್ಚಿಕೊಂಡು ಇರಬೇಕಾಗುತ್ತದೆ. ನಿಮಗೆ ಕುತ್ತಿಗೆ ತನಕ ಬಂದ ಕೋಪವನ್ನು ತಡೆದುಕೊಂಡು, ಕೆಲವು ಕೆಲಸಗಳನ್ನು ಮಾಡಲೇಬೇಕಾಗುತ್ತದೆ. ಒಂದೋ ವಿಷಯವನ್ನು ಅರ್ಥ ಮಾಡಿಕೊಳ್ಳದ ಅಥವಾ ಸನ್ನಿವೇಶಕ್ಕೆ ಸರಿಯಾಗಿ ಸ್ಪಂದಿಸದ ಕೆಲವರ ಜತೆಗೆ ವ್ಯವಹರಿಸಲೇ ಬೇಕಾದ ಒತ್ತಡಕ್ಕೆ ನೀವು ಸಿಲುಕಿಕೊಳ್ಳಲಿದ್ದೀರಿ. ನಿಮ್ಮ ಮೇಲೆ ವಿಪರೀತ ಅವಲಂಬಿತರಾದ ಕೆಲವು ಸ್ನೇಹಿತರ ನಿರೀಕ್ಷೆಗಳಿಗೆ ತಕ್ಕಂತೆ ನಡೆದುಕೊಳ್ಳುವುದು ಶ್ರಮವಾಗಿ ಪರಿಣಮಿಸಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ಯಾರು ಸ್ವಂತ ವೃತ್ತಿ, ವ್ಯವಹಾರ ಅಥವಾ ವ್ಯಾಪಾರವನ್ನು ಮಾಡುತ್ತಿರುವಿರೋ ಅಂಥವರಿಗೆ ದೊಡ್ಡ ದೊಡ್ಡ ಅವಕಾಶಗಳು ಕಾಣಿಸುವಂತಾಗುತ್ತದೆ. ಅದೇ ವೇಳೆ ಆ ಕಡೆಗೆ ಗಮನವಿಟ್ಟು ಕಾರ್ಯ ನಿರ್ವಹಿಸುವುದು ಸವಾಲಾಗಿ ಪರಿಣಮಿಸುತ್ತದೆ. ಈ ದಿನ ನೀವು ನೋ ಪಾರ್ಕಿಂಗ್, ಒನ್ ವೇ ಅಥವಾ ಸಿಗ್ನಲ್ ಜಂಪ್ ಇಂಥ ಕಾರಣಗಳಿಗಾಗಿ ದಂಡ ಕಟ್ಟಬೇಕಾಗುತ್ತದೆ, ಎಚ್ಚರಿಕೆಯಿಂದ ಇರಿ.

ಲೇಖನ- ಸ್ವಾತಿ ಎನ್.ಕೆ.

Source link

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 21ರ ದಿನಭವಿಷ್ಯ

ಮನೆಯ ಬಾಲ್ಕನಿ ಅಥವಾ ಟೆರೇಸ್ ಮೇಲೆ ಪಕ್ಷಿಗಳಿಗೆ ನೀರು ಮತ್ತು ಧಾನ್ಯವನ್ನು ಇಡಿ. ಇದು ವೃತ್ತಿಜೀವನದ ಅಡೆತಡೆಗಳನ್ನು ದೂರ ಮಾಡುತ್ತದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಏನು ಅಂದುಕೊಂಡಿದ್ದರೂ ಚರ್ಚಿಸಿದ್ದರೂ ಅದು ಎಲ್ಲರಿಗೂ ಗೊತ್ತಾಗುತ್ತಿದೆ ಎಂದು ನಿಮಗೆ ಸಮಸ್ಯೆ ಮಾಡುತ್ತಿರುವವರು ಯಾರು, ವ್ಯವಹಾರಗಳಲ್ಲಿ ಅಡೆತಡೆಗಳನ್ನು ಒಡ್ಡುತ್ತಿರುವವರು ಯಾರು ಎಂಬುದನ್ನು ಪತ್ತೆ ಹಚ್ಚುವುದು ಹೇಗೆ ಎಂದು ಆಲೋಚಿಸುವುದಕ್ಕೇ ಅಂತ ಬಹಳ ಸಮಯ ಹೋಗಿಬಿಡುತ್ತದೆ. ನಿಮ್ಮ ಜತೆಗಿರುವವರು ಹಾಗೂ ಆಪ್ತರಾಗಿರುವವರು, ಕಡೆಗೆ ಕುಟುಂಬ ಸದಸ್ಯರ ಬಗ್ಗೆಯೇ ನಾನಾ ರೀತಿಯಲ್ಲಿ ಆಲೋಚನೆಗಳು ಮೂಡಲಿವೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ನಿಮಗೆ ಬರುವಂಥ ಕೆಲಸಗಳು, ಜವಾಬ್ದಾರಿಗಳನ್ನು ವಹಿಸಿಕೊಳ್ಳುವ ಮುನ್ನ ಒಂದಕ್ಕೆ ನಾಲ್ಕು ಬಾರಿಗೆ ಆಲೋಚನೆ ಮಾಡುವುದು ಉತ್ತಮ. ಒಮ್ಮೆ ಹೂಂ ಎಂದು ಒಪ್ಪಿಕೊಂಡ ಮೇಲೆ ಹಲವು ಬದಲಾವಣೆಗಳನ್ನು ಹೇಳುವ ಮೂಲಕ ಒತ್ತಡವನ್ನು ಹೇರಬಹುದು. ದಿನಂಪ್ರತಿ ನೋಡುವಂಥ ಹಾಗೂ ವ್ಯವಹರಿಸುವಂಥ ವ್ಯಕ್ತಿಗಳಲ್ಲೇ ದೊಡ್ಡ ಬದಲಾವಣೆಗಳನ್ನು ನೋಡುವಂತಾಗುತ್ತದೆ. ಹಣಕಾಸಿನ ವ್ಯವಹಾರ ಎಂದಾದರೆ ಮೈ ತುಂಬ ಎಚ್ಚರಿಕೆ ಇರಲಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಯಾವುದನ್ನು ಹೊಂದಾಣಿಕೆ ಮಾಡಬೇಕಿರುತ್ತದೆ ಅದು ಸಾಧ್ಯವಾಗಲಿದೆ ಎಂಬುದು ನಿಮಗೆ ಈ ದಿನ ಬಹಳ ಸಮಾಧಾನ ದೊರೆಯುವಂಥ ದಿನವಾಗಿರುತ್ತದೆ. ಒಂದು ವೇಳೆ ಉದ್ಯೋಗ ಬದಲಾವಣೆಗಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ನಿಮಗೆ ತೃಪ್ತಿ ದೊರೆಯುವಂಥ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಅವಕಾಶಗಳು ಹುಡುಕಿಕೊಂಡು ಬರಬಹುದು. ಇತರರು ಬಹಳ ಕಷ್ಟಪಟ್ಟು ಮಾಡುತ್ತಿರುವ ಅಥವಾ ಮಾಡುವಂಥ ಕೆಲಸಗಳನ್ನು ಸುಲಭವಾಗಿ ಮಾಡಿ ಮುಗಿಸಲಿದ್ದೀರಿ.

ಲೇಖನ- ಸ್ವಾತಿ ಎನ್.ಕೆ.

Source link