All posts by nagaraj11081993

‘ನಾನು ಅವರ ತೊಡೆಯ ಮೇಲೆ ಕುಳಿತು ಬೆಳದವನು, ಅದಕ್ಕೆ ಅದೃಷ್ಟವಂತ’; ರವಿಚಂದ್ರನ್

‘ನಾನು ಅವರ ತೊಡೆಯ ಮೇಲೆ ಕುಳಿತು ಬೆಳದವನು, ಅದಕ್ಕೆ ಅದೃಷ್ಟವಂತ’; ರವಿಚಂದ್ರನ್

ನಟ ರವಿಚಂದ್ರನ್ ಅವರು ‘ಕ್ರೇಜಿ ಬ್ರಹ್ಮ’ ಈವೆಂಟ್ ಮಾಡಿದ್ದಾರೆ. ಈ ಚಿತ್ರದ ಬಗ್ಗೆ ಮಾತನಾಡುವಾಗ ಅವರು ಹಳೆದ ದಿನಗಳನ್ನು ನೆನಪಿಸಿಕೊಂಡರು. ರವಿಚಂದ್ರನ್ ಅವರು ರಾಜ್​​ಕುಮಾರ್, ಅಂಬರೀಷ್ ಮೊದಲಾದವರ ಜೊತೆ ಬೆಳೆದವರು. ಹೀಗಾಗಿ, ಅವರು ತಮ್ಮನ್ನು ತಾವು ಲಕ್ಕಿ ಎಂದು ಕರೆದುಕೊಂಡಿದ್ದಾರೆ. ಅವರಿಂದಾಗಿಯೇ ಇಲ್ಲಿರೋದಾಗಿ ಹೇಳಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇರಾನ್​ನ 140 ಮಿಲಿಯನ್ ಬ್ಯಾರೆಲ್ ತೈಲವನ್ನು ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಂತೆ ಅಮೆರಿಕ!

ವಾಷಿಂಗ್ಟನ್, ಮಾರ್ಚ್ 21: ಮಧ್ಯಪ್ರಾಚ್ಯ ಯುದ್ಧದಿಂದ ಜಗತ್ತಿನಾದ್ಯಂತ ಕಚ್ಚಾ ತೈಲ, ಅಡುಗೆ ಅನಿಲ ಸೇರಿದಂತೆ ತೀವ್ರ ಇಂಧನ ಬಿಕ್ಕಟ್ಟು ಎದುರಾಗಿದೆ. ಇಂಥ ಸನ್ನಿವೇಶದಲ್ಲಿ ಇದೀಗ ಅಮೆರಿಕ ಮಹತ್ವದ ಹೇಳಿಕೆ ನೀಡಿದೆ. ಸಮುದ್ರದಲ್ಲಿ ಸಿಲುಕಿರುವ, ಇರಾನ್‌ಗೆ ಸೇರಿದ 140 ಮಿಲಿಯನ್ ಬ್ಯಾರೆಲ್ ಬ್ಯಾರೆಲ್ ತೈಲವನ್ನು ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡಿ ಇಂಧನ ಪೂರೈಕೆಯನ್ನು ಸುಗಮಗೊಳಿಸುವುದಾಗಿ ಅಮೆರಿಕದ ಖಜಾನೆ ಸಚಿವ ಸ್ಕಾಟ್ ಬೆಸೆಂಟ್ (Scott Bessent) ತಿಳಿಸಿದ್ದಾರೆ. ಈ ಬಗ್ಗೆ ಎಕ್ಸ್ ಸಂದೇಶದಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ ಅಷ್ಟೇ ಅಲ್ಲದೆ ಡೊನಾಲ್ಡ್ ಟ್ರಂಪ್ (Donald Trump) ನೇತೃತ್ವದ ಅಮೆರಿಕ ಆಡಳಿತ, ಇರಾನ್ ವಿರುದ್ಧದ ಒತ್ತಡವನ್ನು ಮತ್ತಷ್ಟು ಹೆಚ್ಚಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

ಬೆಸೆಂಟ್ ಹೇಳಿಕೆಯ ಪ್ರಕಾರ, ಜಾಗತಿಕ ಉಗ್ರ ಚಟುವಟಿಕೆಗಳಿಗೆ ಇರಾನ್ ಪ್ರಮುಖ ಕಾರಣವಾಗಿದ್ದು, ಅದನ್ನು ನಿಯಂತ್ರಿಸಲು ‘ಆಪರೇಷನ್ ಎಪಿಕ್ ಫ್ಯೂರಿ’ ಹೆಸರಿನ ಕ್ರಮಗಳನ್ನು ಅಮೆರಿಕ ವೇಗವಾಗಿ ಮುಂದುವರೆಸುತ್ತಿದೆ. ಇರಾನ್ ನಡೆಸಿದ ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿಗಳಿಗೆ ಪ್ರತಿಯಾಗಿ ಅಮೆರಿಕ ತನ್ನ ಆರ್ಥಿಕ ಹಾಗೂ ಸೈನಿಕ ಶಕ್ತಿಯನ್ನು ಬಳಸುತ್ತಿದೆ.

ಜಾಗತಿಕ ಮಾರುಕಟ್ಟೆಗೆ 140 ಮಿಲಿಯನ್ ಬ್ಯಾರೆಲ್ ತೈಲ

ಇದಕ್ಕೂ ಮಧ್ಯೆ, ಸಮುದ್ರದಲ್ಲಿ ಸಿಲುಕಿರುವ ಇರಾನ್ ತೈಲವನ್ನು ತಾತ್ಕಾಲಿಕವಾಗಿ ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡಲು ಅಮೆರಿಕ ನಿರ್ಧರಿಸಿದೆ. ಸುಮಾರು 140 ಮಿಲಿಯನ್ ಬ್ಯಾರೆಲ್ ತೈಲವನ್ನು ಮಾರುಕಟ್ಟೆಗೆ ತರಲು ಈ ಕ್ರಮ ನೆರವಾಗಲಿದೆ. ಇದರಿಂದ ಜಾಗತಿಕ ತೈಲ ಸರಬರಾಜು ಹೆಚ್ಚಾಗಿ ಬೆಲೆ ಸ್ಥಿರತೆ ಸಾಧಿಸಲು ಸಹಾಯವಾಗಲಿದೆ ಎಂದು ಬೆಸೆಂಟ್ ತಿಳಿಸಿದ್ದಾರೆ.

ಇರಾನ್ ತೈಲವನ್ನು ಕಡಿಮೆ ದರದಲ್ಲಿ ಚೀನಾ ಸಂಗ್ರಹಿಸುತ್ತಿದೆ ಎಂಬ ಆರೋಪವನ್ನೂ ಬೆಸೆಂಟ್ ಮಾಡಿದ್ದಾರೆ. ಈ ತೈಲವನ್ನು ಮಾರುಕಟ್ಟೆಗೆ ಬಿಡುವುದರಿಂದ ಇರಾನ್‌ನ ಆರ್ಥಿಕ ಪ್ರಭಾವ ಕಡಿಮೆಯಾಗಲಿದೆ ಎಂಬುದು ಅಮೆರಿಕದ ಲೆಕ್ಕಾಚಾರ.

ಸ್ಕಾಟ್ ಬೆಸೆಂಟ್ ಎಕ್ಸ್ ಪೋಸ್ಟ್

ಈ ತಾತ್ಕಾಲಿಕ ಅನುಮತಿ ಈಗಾಗಲೇ ಸಾಗಾಟ ಹಂತದಲ್ಲಿರುವ ತೈಲಕ್ಕೆ ಮಾತ್ರ ಅನ್ವಯವಾಗುತ್ತದೆ. ಹೊಸ ಉತ್ಪಾದನೆ ಅಥವಾ ಖರೀದಿಗೆ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಜೊತೆಗೆ, ಈ ಮಾರಾಟದಿಂದ ಇರಾನ್‌ಗೆ ಹಣ ತಲುಪುವುದು ಕಷ್ಟವಾಗುವಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಈ ಕ್ರಮ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್, ಇಸ್ರೇಲ್, ಅಮೆರಿಕ ಸಂಘರ್ಷದಲ್ಲಿ ಹೊಸ ರಾಜಕೀಯ ಮತ್ತು ಆರ್ಥಿಕ ಬೆಳವಣಿಗೆಗಳಿಗೆ ಕಾರಣವಾಗಲಿದೆ. ಅಮೆರಿಕದ ಈ ನಿಲುವು ಯುದ್ಧದ ದಿಕ್ಕು ಹಾಗೂ ಜಾಗತಿಕ ಇಂಧನ ಮಾರುಕಟ್ಟೆ ಮೇಲೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ.

ಇದನ್ನೂ ಓದಿ: ಇರಾನ್, ಇಸ್ರೇಲ್, ಅಮೆರಿಕ ಯುದ್ಧಕ್ಕೆ ಬ್ರೇಕ್? ಟ್ರಂಪ್ ಆ ಸಂದೇಶದಲ್ಲಿದೆ ಮಹತ್ವದ ಸುಳಿವು!

ಒಟ್ಟಿನಲ್ಲಿ, ಇರಾನ್ ವಿರುದ್ಧದ ಒತ್ತಡ ಮುಂದುವರಿಯುವ ಸೂಚನೆಗಳ ನಡುವೆ, ಜಾಗತಿಕ ತೈಲ ಮಾರುಕಟ್ಟೆಯನ್ನು ಸಮತೋಲನದಲ್ಲಿಡಲು ಅಮೆರಿಕ ತೆಗೆದುಕೊಂಡಿರುವ ಈ ಕ್ರಮ ಗಮನ ಸೆಳೆಯುತ್ತಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Daily Devotional: ಪೂಜೆಯ ಫಲ ಸಿಗಬೇಕೆ? ಹಾಗಾದರೆ ಮಡಿ ಮತ್ತು ಶಿಸ್ತಿನ ಈ ರಹಸ್ಯಗಳನ್ನು ತಿಳಿಯಿರಿ

ನಮ್ಮ ಜೀವನ ನಿರ್ವಹಣೆಯಲ್ಲಿ ಭಗವಂತನ ಆಶ್ರಯವನ್ನು ಪಡೆಯುವುದು ಅತ್ಯಗತ್ಯ. ಇದಕ್ಕಾಗಿ ಪೂಜೆ, ಪುನಸ್ಕಾರ, ಹವನ, ಯಜ್ಞ, ಯಾಗಾದಿಗಳು, ಮತ್ತು ಜಪ-ತಪಗಳಂತಹ ವಿವಿಧ ಪೂಜಾ ವಿಧಾನಗಳನ್ನು ಅನುಸರಿಸುತ್ತೇವೆ. ಯದ್ಭಾವಂ ತದ್ಭವತಿ ಎಂಬಂತೆ ನಮ್ಮ ಭಾವನೆಗಳಿಗೆ ಅನುಗುಣವಾಗಿ ಭಗವಂತನನ್ನು ಆರಾಧಿಸುತ್ತೇವೆ. ಭಗವಂತನು ಸರ್ವಾಂತರ್ಯಾಮಿ, ಸರ್ವವ್ಯಾಪಿ ಮತ್ತು ಸರ್ವಶಕ್ತನಾಗಿರುತ್ತಾನೆ. ಆದರೆ, ಇಂತಹ ಆರಾಧನೆಯಲ್ಲಿ ಮಡಿಯ ಅಗತ್ಯವಿದೆಯೇ ಎಂಬ ಪ್ರಶ್ನೆ ಹಲವು ಬಾರಿ ಉದ್ಭವಿಸುತ್ತದೆ. ಮಡಿಯಿಂದಲೇ ಪೂಜೆ ಮಾಡಬೇಕಾ ಎಂಬುದು ಹಲವರ ಅನುಮಾನ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಮಡಿ ಎಂದರೆ ಕೇವಲ ಸ್ವಚ್ಛತೆ ಮತ್ತು ಶುಭ್ರತೆ. ಇದು ಭಯಾನಕವಾದ ಪದವಲ್ಲ, ಬದಲಾಗಿ ಶುಚಿತ್ವದ ಪ್ರತೀಕ. ದೇವರು ಸ್ವತಃ ಮಡಿಯನ್ನು ಕೇಳಿಲ್ಲ, ಆದರೆ ಶುಭ್ರತೆಯಿಂದ, ಶುದ್ಧ ಮನಸ್ಸಿನಿಂದ ಮತ್ತು ಒಳ್ಳೆಯ ಭಾವನೆಗಳಿಂದ ಆರಾಧಿಸಲು ಮಡಿಯನ್ನು ಅನುಸರಿಸಲಾಗುತ್ತದೆ. ಹಿಂದೂ ಸಂಪ್ರದಾಯದಲ್ಲಿ ಮಡಿಯು ಶುಚಿತ್ವದ ಸಂಕೇತವಾಗಿದೆ. ಹಿರಿಯರು, ಆಚಾರ್ಯರು ಮತ್ತು ಗುರುಗಳು ಇದನ್ನು ಒಂದು ಸಂಪ್ರದಾಯವಾಗಿ ರೂಪಿಸಿಕೊಂಡು ಬಂದಿದ್ದಾರೆಯೇ ಹೊರತು, ಮಡಿಗೆ ಯಾವುದೇ ಕಟ್ಟುಪಾಡುಗಳಿಲ್ಲ.

ದೇವರ ಪೂಜೆಯಲ್ಲಿ, ಭಜನೆಗಳಲ್ಲಿ, ಯಜ್ಞ-ಯಾಗಾದಿಗಳಲ್ಲಿ ಎಲ್ಲರೂ ಒಟ್ಟಾಗಿ ಸೇರುವಾಗ, ಎಲ್ಲರೂ ಶುಚೀರ್ಭೂತರಾಗಿ ಭಗವಂತನಿಗೆ ಏಕಾಗ್ರತೆಯಿಂದ ಮತ್ತು ಶ್ರದ್ಧೆಯಿಂದ ಆರಾಧನೆ ಸಲ್ಲಿಸಲಿ ಎಂಬ ಉದ್ದೇಶದಿಂದ ಮಡಿಯನ್ನು ರೂಪಿಸಲಾಗಿದೆ. ಇದು ಶುಭ್ರತೆ, ಶ್ರದ್ಧೆ ಮತ್ತು ಭಕ್ತಿಗೆ ಒಂದು ಪ್ರತೀಕವಾಗಿದೆ. ಹೇಗೆ ಜೀವನದ ಪ್ರತಿ ವಿಷಯದಲ್ಲೂ ಸಿಸ್ತು ಇರುತ್ತದೆಯೋ, ಹಾಗೆಯೇ ಮಡಿಯೂ ಒಂದು ಸಿಸ್ತಿನ ಪ್ರತೀಕವಾಗಿದೆ. ಉದಾಹರಣೆಗೆ, ರೈತರು ಬೆಳೆಯನ್ನು ಬಿತ್ತುವ ಮೊದಲು ಭೂಮಿಗೆ ನಮಸ್ಕರಿಸಿ ತೆಂಗಿನಕಾಯಿ ಒಡೆಯುತ್ತಾರೆ. ಇದು ನಂಬಿಕೆಯ ಪ್ರತೀಕ. ಅದೇ ರೀತಿ ಮಡಿಯೂ ಸಿಸ್ತು ಮತ್ತು ನಂಬಿಕೆಯ ಒಂದು ರೂಪವಾಗಿದೆ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಮಡಿಯಲ್ಲಿ ಅಂತರಂಗ ಶುದ್ಧಿ ಮತ್ತು ಬಹಿರಂಗ ಶುದ್ಧಿ ಎರಡೂ ಮುಖ್ಯ. ಅಂತರಂಗ ಶುದ್ಧಿಯಿಂದ ಭಗವಂತನನ್ನು ಒಲಿಸಿಕೊಳ್ಳಬಹುದು. ಇದರ ಜೊತೆಗೆ, ಬಾಹ್ಯ ಶುದ್ಧಿಯನ್ನೂ ಕಾಪಾಡಿಕೊಂಡಾಗ ಭಗವಂತನ ದೈವೀಕ ಶಕ್ತಿಗಳು ಅಲ್ಲಿ ನೆಲೆಸುತ್ತವೆ. ಅಯ್ಯಪ್ಪ ದೀಕ್ಷೆ, ಸತ್ಯನಾರಾಯಣ ಸ್ವಾಮಿ ವ್ರತ, ದುರ್ಗಾಪರಮೇಶ್ವರಿ ವ್ರತ, ಚಾಮುಂಡೇಶ್ವರಿ ವ್ರತಗಳಂತಹ ಅನೇಕ ವ್ರತಗಳಲ್ಲಿ ಕೆಲವು ಕಟ್ಟುಪಾಡುಗಳು ಮತ್ತು ಸಿಸ್ತಿನ ಕ್ರಮಗಳನ್ನು ಪಾಲಿಸಲಾಗುತ್ತದೆ. ಮಡಿಯೂ ಇದೇ ರೀತಿ ಒಂದು ಕ್ರಮ. ಕರಗ ಮಹೋತ್ಸವದಂತಹ ಸಂದರ್ಭಗಳಲ್ಲಿ ಉಪವಾಸ ಮಾಡಿ ಕರಗವನ್ನು ಹೊರಲಾಗುತ್ತದೆ; ಇದು ನಂಬಿಕೆಯ ಪ್ರತೀಕ. ಮೌನವಾಗಿ ಭಗವಂತನನ್ನು ಆರಾಧಿಸುವುದು, ಜಪ ಮಾಡುವಾಗ ಯಾರೊಂದಿಗೂ ಮಾತನಾಡದೆ ಇರುವುದು, ಇವೆಲ್ಲವೂ ಸಿಸ್ತಿನ ಒಂದು ರೂಪವಾಗಿದೆ.

ಒಟ್ಟಾರೆಯಾಗಿ, ಮಡಿಯು ನಮ್ಮ ಭಾವನೆಗಳಿಗೆ, ಭಗವಂತನ ಜೊತೆ ಉತ್ತಮ ಸಂಕಲ್ಪವಿಟ್ಟುಕೊಂಡು, ಭಗವಂತನೊಂದಿಗೆ ಬಾಂಧವ್ಯವನ್ನು ಬೆಳೆಸುವ ಒಂದು ಪ್ರಕ್ರಿಯೆ. ಇದು ಯಾವುದೇ ರೀತಿಯಿಂದಲೂ ಕೆಟ್ಟದ್ದಲ್ಲ, ಬದಲಾಗಿ ಒಂದು ಪವಿತ್ರವಾದ ನಿಯಮ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಧುರಂಧರ್ 2’ ಸಿನಿಮಾ ತಿರಸ್ಕರಿಸಿದ ಆ ಸ್ಟಾರ್ ನಟನಿಗೆ ಈಗ ಬೇಸರ

ಧುರಂಧರ್ 2 ಚಿತ್ರದ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಮೊದಲ ಎರಡು ದಿನಗಳಲ್ಲಿ, ಈ ಚಿತ್ರವು ವಿಶ್ವಾದ್ಯಂತ 240 ಕೋಟಿ ಗಳಿಸಿದೆ. ಭಾರತದಲ್ಲಿ, ಈ ಚಿತ್ರವು 100 ಕೋಟಿ ಗಡಿ ದಾಟಿದೆ. ಮುಂದಿನ ಕೆಲವು ದಿನಗಳಲ್ಲಿ, ಧುರಂಧರ್ 2 ಭಾರತೀಯ ಚಿತ್ರರಂಗದಲ್ಲಿ ಹೊಸ ಗಳಿಕೆಯ ಇತಿಹಾಸವನ್ನು ಸೃಷ್ಟಿಸುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಈ ಚಿತ್ರವನ್ನು ನೋಡಿದ ನಂತರ ಚಿತ್ರಮಂದಿರದಿಂದ ಹೊರಬರುವ ಪ್ರತಿಯೊಬ್ಬರೂ ಈ ಚಿತ್ರವನ್ನು ಹೊಗಳುತ್ತಿದ್ದಾರೆ. ಏಕೆಂದರೆ ಧುರಂಧರ್‌ನ ಮೊದಲ ಭಾಗವು ಕೊನೆಗೊಂಡ ತಿರುವು ಅನೇಕ ಪ್ರಶ್ನೆಗಳಿಗೆ ಉತ್ತರಿಸದೆ ಬಿಟ್ಟಿತು. ಅವುಗಳಿಗೆ ಉತ್ತರಗಳು ಎರಡನೇ ಭಾಗದಲ್ಲಿವೆ. ಪ್ರೇಕ್ಷಕರು ಒಂದು ಉತ್ತಮ ಸಿನಿಮಾ ನೋಡಿದ ಅನುಭವವನ್ನು ಹೊಂದಿದ್ದಾರೆ. ಧುರಂಧರ್‌ನಲ್ಲಿ, ಹಮ್ಜಾ ಅಲಿ ಮಜಾರಿ ಪಾತ್ರವನ್ನು ನಿರ್ವಹಿಸುವ ರಣವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿದ್ದಾರೆ. ಈ ಚಿತ್ರದ ಆಫರ್ ಈ ಮೊದಲು ಅನಿಲ್ ಕಪೂರ್​​ಗೆ ಹೋಗಿತ್ತು.

‘ಧುರಂಧರ್‌’ ಮೊದಲ ಭಾಗ ಹಿಟ್ ಆದ ನಂತರ, ಈ ಚಿತ್ರವನ್ನು ನಿರಾಕರಿಸಿದ ಕೆಲವು ನಟರ ಹೆಸರುಗಳು ಮುನ್ನೆಲೆಗೆ ಬಂದವು. ಈಗ ಎರಡನೇ ಭಾಗ ಬಿಡುಗಡೆಯಾದ ನಂತರವೂ, ಅಂತಹ ಒಬ್ಬ ದೊಡ್ಡ ನಟನ ಹೆಸರು ಮುನ್ನೆಲೆಗೆ ಬಂದಿದೆ. ಅವರೇ ಅನಿಲ್ ಕಪೂರ್. ಅವರು ಧುರಂಧರ್ 2 ಅನ್ನು ನಿರಾಕರಿಸಿದರು . ಅವರು ಇದನ್ನು ಒಂದು ಕಾರ್ಯಕ್ರಮದಲ್ಲಿ ಬಹಿರಂಗಪಡಿಸಿದರು. ನಿರಾಕರಣೆಯ ಹಿಂದಿನ ಕಾರಣ ಅವರು ಹೇಳಿದ್ದಾರೆ.

‘ಧುರಂಧರ್ 2 ರಲ್ಲಿ ಒಂದು ಸಣ್ಣ ಪಾತ್ರಕ್ಕಾಗಿ ಆದಿತ್ಯ ಧರ್ ನನ್ನನ್ನು ಸಂಪರ್ಕಿಸಿದರು. ಆದರೆ ನಾನು ನಿರಾಕರಿಸಿದೆ. ನಾನು ಇಂದು ಏನಾಗಿದ್ದೇನೋ ಅದು ನನ್ನ ವೃತ್ತಿಪರತೆ ಮತ್ತು ನನ್ನ ಮಾತನ್ನು ಉಳಿಸಿಕೊಳ್ಳುವ ಬದ್ಧತೆಯಿಂದಾಗಿ. ಅದು ಹೆಚ್ಚು ಮುಖ್ಯ. ಪ್ರತಿಭೆಯೇ ಎಲ್ಲವೂ ಅಲ್ಲ. ನಾನು ಈ ಪಾತ್ರವನ್ನು ಮಾಡಲು ನಿಜವಾಗಿಯೂ ಇಷ್ಟಪಡುತ್ತಿದ್ದೆ ಎಂದು ಆದಿತ್ಯಗೆ ಹೇಳಿದೆ. ಆದರೆ ನಾನು ಆ ಡೇಟ್ಸ್​​ನ ಬೇರೆಯವರಿಗೆ ನೀಡಿದ್ದೆ’ ಎಂದು ಅನಿಲ್ ಕಪೂರ್ ಹೇಳಿದರು.

ಇದನ್ನೂ ಓದಿ: ಶುಕ್ರವಾರವೂ ಅಬ್ಬರಿಸಿದ ‘ಧುರಂಧರ್ 2’ ಸಿನಿಮಾ; ಕನ್ನಡದಲ್ಲಿ ಗಳಿಕೆ ಎಷ್ಟು?

‘ನಾನು ಆದಿತ್ಯ ಅವರ ಚಿತ್ರವನ್ನು ಮಾಡುತ್ತಿರುವಾಗ ಅದೇ ಸಮಯದಲ್ಲಿ ಮತ್ತೊಂದು ಬ್ಲಾಕ್‌ಬಸ್ಟರ್ ಚಿತ್ರದ ನಿರ್ದೇಶಕರು ನನಗೆ ಕರೆ ಮಾಡಿ ಆಫರ್ ಕೊಟ್ಟರೆ, ಆದಿತ್ಯ ಅವರ ಚಿತ್ರವನ್ನು ತಿರಸ್ಕರಿಸಿದರೆ ಆ ಸಮಯದಲ್ಲಿ ಅವರ ಚಿತ್ರವನ್ನು ಮಾಡಿದರೆ ಅದು ವೃತ್ತಿಪರತೆಯ ಕೊರತೆಯಾಗುತ್ತದೆ ಎಂದು ನಾನು ಭಾವಿಸಿದೆ. ಆದ್ದರಿಂದ ‘ನಾವು ಭವಿಷ್ಯದಲ್ಲಿ ಅವರ ಜೊತೆ ಕೆಲಸ ಮಾಡುತ್ತೇವೆ’ ಎಂದು ಅನಿಲ್ ಕಪೂರ್ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Bengaluru Air Quality: ಮೈಸೂರು ಸೇರಿದಂತೆ ಬೆಂಗಳೂರು, ಬೆಳಗಾವಿಯ ವಾಯು ಗುಣಮಟ್ಟದಲ್ಲಿ ಸುಧಾರಣೆ

ಬೆಂಗಳೂರು, ಮಾರ್ಚ್​ 21: ಹಲವಾರು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ವಾಯು ಗುಣಮಟ್ಟ (Bengaluru Air Quality) ಕುಸಿತ ಕಂಡಿತ್ತು. ಆದರೆ ಇಂದು ಹಲವು ಭಾಗಗಳಲ್ಲಿ ವಾಯು ಗುಣಮಟ್ಟ ಸ್ವಲ್ಪ ಮಟ್ಟಿಗೆ ಸುಧಾರಿಸಿದಂತಿದೆ. ಬೆಂಗಳೂರು, ಬೆಳಗಾವಿ ಮತ್ತು ಮೈಸೂರು ಸೇರಿದಂತೆ ಹಲವೆಡೆ ಇಂದು ವಾಯು ಗುಣಮಟ್ಟ 150ಕ್ಕಿಂತ ಕಡಿಮೆ ಇರುವುದು ಕಂಡು ಬಂದಿದೆ.

ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 140ಕ್ಕೆ ತಲುಪಿದೆ. ಕೆಲ ದಿನಗಳಿಂದ ಉಡುಪಿ, ಮಂಗಳೂರು ಸೇರಿದಂತೆ ಹಲವು ಜಿಲ್ಲೆಗಳ ಏರ್ ಕ್ವಾಲಿಟಿ ತೀರಾ ಕಳಪೆ ಮಟ್ಟಕ್ಕೆ ಇಳಿದಿತ್ತು. ಆದರೆ ಇಂದು ಉಡುಪಿ, ಮಂಗಳೂರು ಸೇರಿ ಹಲವೆಡೆ ಏರ್ ಕ್ವಾಲಿಟಿ 150ಕ್ಕಿಂತ ಕಡಿಮೆ ಇದೆ. ಆದರೆ ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –140
  • ಮಂಗಳೂರು-130
  • ಮೈಸೂರು –117
  • ಬೆಳಗಾವಿ – 78
  • ಕಲಬುರ್ಗಿ-104
  • ಶಿವಮೊಗ್ಗ – 138
  • ಬಳ್ಳಾರಿ – 156
  • ಹುಬ್ಬಳ್ಳಿ- 108
  • ಉಡುಪಿ –120
  • ವಿಜಯಪುರ –99

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಧುರಂಧರ್ 2’ ಚಿತ್ರದಲ್ಲಿ ಸಂಜಯ್ ದತ್ ಮಾಡಿರೋ ಚೌಧರಿ ಅಸ್ಲಾಂ ಪಾತ್ರ ಯಾರಿಂದ ಸ್ಫೂರ್ತಿ ಪಡೆದಿದೆ ಗೊತ್ತಾ?

ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ‘ಧುರಂಧರ್ 2’ ಚಿತ್ರದ ಯಶಸ್ಸು ದೊಡ್ಡದಾಗಿದೆ. ಈ ಚಿತ್ರದಲ್ಲಿ ಸಂಜಯ್ ದತ್ ನಿರ್ವಹಿಸಿದ ಪಾತ್ರ ಗಮನ ಸೆಳೆದಿದೆ. ಮೊದಲ ಭಾಗಕ್ಕೆ ಹೋಲಿಸಿದರೆ ‘ಧುರಂಧರ್ ದಿ ರಿವೆಂಜ್’ ಚಿತ್ರದ ಅವಧಿ ಹೆಚ್ಚಿದೆ. ಪಾಕಿಸ್ತಾನದ ಕರಾಚಿ ನಗರದಲ್ಲಿ ಭೂಗತ ಜಗತ್ತನ್ನು ಬೆಚ್ಚಿಬೀಳಿಸಿದ ನಿಜ ಜೀವನದ ಎನ್‌ಕೌಂಟರ್ ಸ್ಪೆಷಲಿಸ್ಟ್ ‘ಚೌಧರಿ ಅಸ್ಲಾಂ ಖಾನ್’ ಅವರ ಜೀವನವು ಸಂಜಯ್ ದತ್ ಪಾತ್ರ ಸ್ಫೂರ್ತಿ. 1984ರಲ್ಲಿ ಸಹಾಯಕ ಸಬ್-ಇನ್‌ಸ್ಪೆಕ್ಟರ್ ಆಗಿ ಕರ್ತವ್ಯ ವಹಿಸಿಕೊಂಡ ಅಸ್ಲಾಂ, ಕರಾಚಿಯ ಅತ್ಯಂತ ಅಪಾಯಕಾರಿ ಪ್ರದೇಶಗಳಲ್ಲಿ ಕೆಲಸ ಮಾಡುವ ಮೂಲಕ ಗಮನ ಸೆಳೆದರು. 1990ರ ದಶಕದಲ್ಲಿ, ಕರಾಚಿ ಗ್ಯಾಂಗ್ ವಾರ್‌ಗಳಿಂದ ಛಿದ್ರಗೊಂಡಾಗ, ರೌಡಿ ಶೀಟರ್‌ಗಳು ಮತ್ತು ಮೋಸ್ಟ್ ವಾಂಟೆಡ್ ಕ್ರಿಮಿನಲ್‌ಗಳನ್ನು ನಿರ್ಮೂಲನೆ ಮಾಡುವಲ್ಲಿ ಚೌಧರಿ ಅಸ್ಲಾಂ ಪ್ರಮುಖ ಪಾತ್ರ ವಹಿಸಿದರು.

ಬಿಳಿ ಸಲ್ವಾರ್ ಕಮೀಜ್ ಧರಿಸಿ, ಕೈಯಲ್ಲಿ ಸಿಗರೇಟು ಹಿಡಿದು, ನಿರ್ಭೀತ ಮುಖಭಾವ ಹೊಂದಿದ್ದ ಅವರ ಸ್ಟೈಲ್ ಆ ಕಾಲದಲ್ಲಿ ಬ್ರ್ಯಾಂಡ್ ಆಗಿತ್ತು. ಭಯೋತ್ಪಾದಕರು ಮತ್ತು ಮಾಫಿಯಾ ಡಾನ್‌ಗಳು ಅವರ ಹೆಸರನ್ನು ಕೇಳಿದ ತಕ್ಷಣ ನಡುಗುವಂತೆ ಅವರು ತಮ್ಮ ಇಮೇಜ್ ಅನ್ನು ನಿರ್ಮಿಸಿಕೊಂಡರು. ಅದಕ್ಕಾಗಿಯೇ ಸ್ಥಳೀಯ ಮಾಧ್ಯಮಗಳು ಅವರಿಗೆ ಪಾಕಿಸ್ತಾನದ ‘ಕಠಿಣ ಪೊಲೀಸ್’ ಎಂಬ ಬಿರುದನ್ನು ನೀಡಿವೆ.

ತಮ್ಮ ಸೇವಾ ಅವಧಿಯಲ್ಲಿ ನೂರಕ್ಕೂ ಹೆಚ್ಚು ಎನ್‌ಕೌಂಟರ್ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದ ಈ ಧೈರ್ಯಶಾಲಿ ಅಧಿಕಾರಿ, ಲಿಯಾರಿ ಪ್ರದೇಶದಲ್ಲಿ ಭುಗಿಲೆದ್ದ ಗ್ಯಾಂಗ್ ವಾರ್‌ಗಳನ್ನು ಮತ್ತು ಪಾಕಿಸ್ತಾನಿ ತಾಲಿಬಾನ್‌ನ ಅರಾಜಕತೆಯನ್ನು ಕಬ್ಬಿಣದ ಮುಷ್ಟಿಯಿಂದ ಹತ್ತಿಕ್ಕಿದರು. ಅಪರಾಧಿಗಳನ್ನು ನ್ಯಾಯಾಲಯಗಳಿಗೆ ಎಳೆಯುವ ಬದಲು ಸ್ಥಳದಲ್ಲೇ ಮುಗಿಸೋದು ಬೆಸ್ಟ್ ಎಂಬುದು ಅಸ್ಲಾಂ ಖಾನ್ ಅವರ ನಿಯಮ ಆಗಿತ್ತು. ನಿರ್ದೇಶಕ ಆದಿತ್ಯ ಧರ್ ‘ಧುರಂಧರ್’ ಚಿತ್ರದಲ್ಲಿ ಸಂಜಯ್ ದತ್ ಪಾತ್ರಕ್ಕೆ ಅಸ್ಲಾಂ ಖಾನ್ ಸ್ಫೂರ್ತಿ ಎನ್ನಲಾಗಿದೆ.

ಇದನ್ನೂ ಓದಿ: ಶುಕ್ರವಾರವೂ ಅಬ್ಬರಿಸಿದ ‘ಧುರಂಧರ್ 2’ ಸಿನಿಮಾ; ಕನ್ನಡದಲ್ಲಿ ಗಳಿಕೆ ಎಷ್ಟು?

ಅಸ್ಲಾಂ ಅವರ ಸುತ್ತಲೂ ಅನೇಕ ವಿವಾದಗಳಿವೆ. ಮಾನವ ಹಕ್ಕುಗಳು ಅವರ ಕೃತ್ಯಗಳನ್ನು ತೀವ್ರವಾಗಿ ಟೀಕಿಸಿವೆ. ಅವುಗಳಲ್ಲಿ ಹೆಚ್ಚಿನವು ನಕಲಿ ಎನ್‌ಕೌಂಟರ್‌ಗಳು ಮತ್ತು ಅವರು ಅಮಾಯಕರ ಜೀವಗಳನ್ನು ಸಹ ತೆಗೆದುಕೊಂಡಿದ್ದಾರೆ ಎಂದು ಹೇಳಿವೆ. ಈ ಆರೋಪಗಳಿಗಾಗಿ ಅವರಿಗೆ 2006ರಲ್ಲಿ ಜೈಲು ಶಿಕ್ಷೆ ವಿಧಿಸಲಾಯಿತು. ನಂತರ ಅವರನ್ನು ಕ್ಲೀನ್ ಚಿಟ್‌ನೊಂದಿಗೆ ಬಿಡುಗಡೆ ಮಾಡಲಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇರಾನ್, ಇಸ್ರೇಲ್, ಅಮೆರಿಕ ಯುದ್ಧಕ್ಕೆ ಬ್ರೇಕ್? ಟ್ರಂಪ್ ಆ ಸಂದೇಶದಲ್ಲಿದೆ ಮಹತ್ವದ ಸುಳಿವು!

ನವದೆಹಲಿ, ಮಾರ್ಚ್ 21: ಕಳೆದ ಕೆಲವು ದಿನಗಳಿಂದ ಮಧ್ಯಪ್ರಾಚ್ಯದಲ್ಲಿ ಅಕ್ಷರಶಃ ಬೆಂಕಿಯುಗುಳುತ್ತಿದ್ದ ಇರಾನ್, ಇಸ್ರೇಲ್, ಅಮೆರಿಕ ಯುದ್ಧಕ್ಕೆ ಅಂತಿಮವಾಗಿ ತೆರೆ ಬೀಳುವ ಲಕ್ಷಣಗಳು ಗೋಚರಿಸುತ್ತಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ನೀಡಿರುವ ಇತ್ತೀಚಿನ ಅಧಿಕೃತ ಹೇಳಿಕೆಯು, ಇರಾನ್ ವಿರುದ್ಧದ ‘ಆಪರೇಷನ್ ಎಪಿಕ್ ಫ್ಯೂರಿ (Operation Epic Furry)’ ಶೀಘ್ರದಲ್ಲೇ ಅಂತ್ಯಗೊಳ್ಳಬಹುದು ಎಂಬ ಬಲವಾದ ಮುನ್ಸೂಚನೆ ನೀಡಿದೆ. ಅಲ್ಲದೆ, ಇರಾನ್ ವಿರುದ್ಧದ ಕಾರ್ಯಾಚರಣೆಯಲ್ಲಿ ಯಶಸ್ಸು ಸಾಧಿಸಿದ್ದೇವೆ ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ.

ಡೊನಾಲ್​ಡ್ ಟ್ರಂಪ್ ಹೇಳಿದ್ದೇನು?

ಇರಾನ್‌ನ ಕ್ಷಿಪಣಿ ಸಾಮರ್ಥ್ಯ, ಲಾಂಚರ್‌ಗಳು ಮತ್ತು ರಕ್ಷಣಾ ನೆಲೆಗಳನ್ನು ನಾವು ಯಶಸ್ವಿಯಾಗಿ ನಾಶಪಡಿಸಿದ್ದೇವೆ. ಮಧ್ಯಪ್ರಾಚ್ಯದ ಮಿತ್ರರಾಷ್ಟ್ರಗಳಾದ ಇಸ್ರೇಲ್, ಸೌದಿ ಅರೇಬಿಯಾ, ಕತಾರ್ ಮತ್ತು ಯುಎಇ ರಕ್ಷಣೆಗಾಗಿ ನಾವು ಹಾಕಿಕೊಂಡಿದ್ದ ಗುರಿಗಳು ಬಹುತೇಕ ಈಡೇರಿವೆ. ಹೀಗಾಗಿ, ಇರಾನ್ ಮೇಲಿನ ಮಿಲಿಟರಿ ಕಾರ್ಯಾಚರಣೆಯನ್ನು ಹಂತಹಂತವಾಗಿ ಕಡಿಮೆ ಮಾಡುವ ಆಲೋಚನೆಯಲ್ಲಿದ್ದೇವೆ ಎಂದು ಟ್ರಂಪ್ ಅಧಿಕೃತ ಸಂದೇಶದಲ್ಲಿ ತಿಳಿಸಿದ್ದಾರೆ.

ಡೊನಾಲ್ಡ್ ಟ್ರಂಪ್ ಸಂದೇಶ

ಅಮೆರಿಕ, ಇಸ್ರೇಲ್ ಗುರಿ ಈಡೇರಿತೇ ಅಥವಾ ಇದು ಇರಾನ್ ಜಯವೇ?

ಅಂತರರಾಷ್ಟ್ರೀಯ ವಿದ್ಯಮಾನಗಳ ವಿಶ್ಲೇಷಕರ ಪ್ರಕಾರ, ಈ ಯುದ್ಧದ ಹಿಂದೆ ಅಮೆರಿಕ ಮತ್ತು ಇಸ್ರೇಲ್ ಹೊಂದಿದ್ದ ಮುಖ್ಯ ಗುರಿ ಇರಾನ್‌ನಲ್ಲಿ ಆಡಳಿತ ಬದಲಾವಣೆ (Regime Change) ಮಾಡುವುದಾಗಿತ್ತು. ಆದರೆ, ಇಂದಿಗೂ ಇರಾನ್‌ನ ಪ್ರಬಲ ಸರ್ಕಾರ ಅಲುಗಾಡಿಲ್ಲ. ಟ್ರಂಪ್ ಹೇಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅಮೆರಿಕ ತನ್ನ ಗುರಿ ತಲುಪಿದೆ ಎಂದು ಹೇಳುತ್ತಿದ್ದರೂ, ವಾಸ್ತವದಲ್ಲಿ ಇದು ಇರಾನ್‌ಗೆ ಸಿಕ್ಕ ನೈತಿಕ ವಿಜಯ ಎಂಬಂತೆ ಭಾಸವಾಗುತ್ತಿದೆ. ಇರಾನ್ ಆಡಳಿತವನ್ನು ಪತನಗೊಳಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅಮೆರಿಕ ಈಗ ಯುದ್ಧದಿಂದ ಹೊರಬರಲು ದಾರಿ ಹುಡುಕುತ್ತಿದೆ.

ಹೊರ್ಮುಜ್ ಜಲಸಂಧಿಯ ಹೊಣೆಗಾರಿಕೆ ಯಾರಿಗೆ?

ಇನ್ನು ಮುಂದೆ ಹೊರ್ಮುಜ್ ಜಲಸಂಧಿಯನ್ನು (Hormuz Strait) ಆ ಭಾಗದ ಅಥವಾ ಅದನ್ನು ಬಳಸುವ ರಾಷ್ಟ್ರಗಳೇ ಕಾಯಬೇಕು. ಅಮೆರಿಕ ಅದಕ್ಕೆ ಹೊಣೆಯಾಗುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಒಮ್ಮೆ ಇರಾನ್ ಬೆದರಿಕೆ ಸಂಪೂರ್ಣವಾಗಿ ಕೊನೆಗೊಂಡ ನಂತರ, ಆಯಾ ರಾಷ್ಟ್ರಗಳು ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳಲಿ, ಇದು ಅವರಿಗೆ ಸುಲಭವಾದ ಮಿಲಿಟರಿ ಕಾರ್ಯಾಚರಣೆಯಾಗಲಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ನೀವು ಹೇಡಿಗಳು; ಇರಾನ್ ಮೇಲಿನ ಯುದ್ಧಕ್ಕೆ ಬೆಂಬಲ ನೀಡದ ನ್ಯಾಟೋ ವಿರುದ್ಧ ಟ್ರಂಪ್ ಆಕ್ರೋಶ

ಟ್ರಂಪ್ ಹೇಳಿಕೆ ಇದೀಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರಿ ಕುತೂಹಲ ಹುಟ್ಟುಹಾಕಿದೆ. ಯುದ್ಧ ಶೀಘ್ರದಲ್ಲೇ ಕೊನೆಗೊಳ್ಳುತ್ತಾ ಎಂಬ ಪ್ರಶ್ನೆಯನ್ನೂ ಹುಟ್ಟುಹಾಕಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಹೆಚ್ಚಿತು ‘ಲವ್ ಮಾಕ್ಟೇಲ್ 3’ ಶೋ; ಒಟ್ಟಾರೆ ಕಲೆಕ್ಷನ್ ಎಷ್ಟು?

‘ಲವ್ ಮಾಕ್ಟೇಲ್’ (Love Mocktail) ಸರಣಿಗೆ ಅದರದ್ದೇ ಆದ ಅಭಿಮಾನಿ ಬಳಗ ಇದೆ. ಈ ಚಿತ್ರದ ಮೊದಲ ಭಾಗ ರಿಲೀಸ್ ಆಗಿದ್ದು 2020ರಲ್ಲಿ. ಆ ಬಳಿಕ ಇದಕ್ಕೆ ಪಾರ್ಟ್ 2 ಬಂತು. ಈಗ ಮೂರನೇ ಭಾಗ ತೆರೆಗೆ ಬಂದಿದೆ. ಈ ಚಿತ್ರವನ್ನು ಜನರು ಬಹುವಾಗಿ ಇಷ್ಟಪಟ್ಟಿದ್ದಾರೆ. ಸಿನಿಮಾನ ಕೊಂಡಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಭಾವನಾತ್ಮಕವಾಗಿ ಸಿನಿಮಾ ಇಷ್ಟ ಆಗುತ್ತಿದೆ. ಹಾಗಾದರೆ, ಈ ಚಿತ್ರ ಮಾಡಿದ ಒಟ್ಟಾರೆ ಕಲೆಕ್ಷನ್ ಎಷ್ಟು ಕೋಟಿ ರೂಪಾಯಿ? ಆ ಬಗ್ಗೆ ಇಲ್ಲಿದೆ ವಿವರ.

‘ಲವ್ ಮಾಕ್ಟೇಲ್’ ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ನಿರ್ದೇಶನ ಇದೆ. ಈ ಸರಣಿಯ ಕೊನೆಯ ಸಿನಿಮಾ ಇದಾಗಲಿದೆ ಎಂದು ಕೃಷ್ಣ ಹೇಳಿದ್ದರು.ಚಿತ್ರದ ಕ್ಲೈಮ್ಯಾಕ್ಸ್ ನೋಡಿದ್ರೆ ಸಿನಿಮಾ ಸರಣಿ ಇಲ್ಲಿಗೆ ಕೊನೆ ಆಗಲಿದೆ ಎಂಬುದು ಸ್ಪಷ್ಟವಾಗಿದೆ. ಈ ಚಿತ್ರ ಹಾಸ್ಯ ಹಾಗೂ ಗಂಭೀರ ವಿಷಯವನ್ನು ಹೇಳುತ್ತದೆ. ಈ ಚಿತ್ರವು ಬಾಕ್ಸ್ ಆಫೀಸ್​​ನಲ್ಲಿ ಉತ್ತಮ ಗಳಿಕೆಯನ್ನು ಮುಂದುವರಿಸಿದೆ.

‘ಲವ್ ಮಾಕ್ಟೇಲ್ 3’ ಚಿತ್ರ ಮೊದಲ ದಿನ 1.36 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು sacnilk ವರದಿ ಮಾಡಿದೆ. ಎರಡನೇ ದಿನವಾದ ಶುಕ್ರವಾರ 1.15 ಕೋಟಿ ರೂಪಾಯಿ ಗಳಿಸಿದೆ. ಚಿತ್ರದ ಒಟ್ಟಾರೆ ಗಳಿಕೆ ಎರಡೂವರೆ ಕೋಟಿ ರೂಪಾಯಿ ಆಗಿದೆ. ವಿಶೇಷ ಎಂದರೆ ಚಿತ್ರಕ್ಕೆ ಗುರುವಾರ 397 ಶೋಗಳನ್ನು ನೀಡಲಾಗಿತ್ತು. ಶುಕ್ರವಾರ ಅದನ್ನು 407ಕ್ಕೆ ಏರಿಸಲಾಗಿದೆ. ಇದು ಚಿತ್ರದ ಹೆಚ್ಚುಗಾರಿಕೆ.

‘ಲವ್ ಮಾಕ್ಟೇಲ್’ ಚಿತ್ರದಲ್ಲಿ ಬ್ರೇಕಪ್​​ಗಳು ಹೈಲೈಟ್ ಆಗಿದ್ದವು. ಎರಡನೇ ಭಾಗದಲ್ಲಿಯೂ ಇದೇ ವಿಷಯ ಇತ್ತು. ಆದರೆ, ಮೂರನೇ ಭಾಗದಲ್ಲಿ ಯಾರೂ ಊಹಿಸದ ರೀತಿಯ ಕಥೆಯೊಂದಿಗೆ ಡಾರ್ಲಿಂಗ್ ಕೃಷ್ಣ ಸಿನಿಮಾ ಮಾಡಿದರು. ಚಿತ್ರ ನೋಡಿದ ಅನೇಕರು ಹೊಗಳುತ್ತಿದ್ದಾರೆ. ‘ಸಿನಿಮಾ ಈ ರೀತಿ ಇರುತ್ತದೆ ಎಂದು ಊಹಿಸಿರಲಿಲ್ಲ’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ಧುರಂದರ್ 2’ ಚಿತ್ರದ ಎದುರು ರಿಲೀಸ್ ಆದ ‘ಲವ್ ಮಾಕ್ಟೇಲ್ 3’ ಗಳಿಸಿದ್ದೆಷ್ಟು?

ಮಿಲನಾ ನಾಗರಾಜ್ ಅವರು ಮೊದಲ ಭಾಗ, ಎರಡನೇ ಭಾಗದಲ್ಲಿ ಇದ್ದರು. ಮೂರನೇ ಭಾಗದಲ್ಲೂ ಅವರನ್ನು ಕರೆತರಲಾಗಿದೆ. ಅದು ಹೇಗೆ ಎಂಬುದನ್ನು ಸಿನಿಮಾದಲ್ಲಿಯೇ ನೋಡಬೇಕು. ಮೂರನೇ ಭಾಗದಲ್ಲಿಯೂ ಹಾಸ್ಯ ಹೈಲೈಟ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕರ್ನಾಟಕ ಹವಾಮಾನ ವರದಿ: ರಾಜ್ಯದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ, 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​!

ಬೆಂಗಳೂರು, ಮಾರ್ಚ್​ 21: ಹಲವು ದಿನಗಳಿಂದ ರಾಜ್ಯದೆಲ್ಲೆಡೆ ಒಣಹವೆಯಿತ್ತು. ಆದರೆ ಇತ್ತೀಚಿಗೆ ಕೆಲ ಜಿಲ್ಲೆಗಳಲ್ಲಿ ಮಳೆ ಸುರಿದು (Weather Forecast) ತಾಪಮಾನ ಸುಧಾರಿಸಿತ್ತು. ಇಂದೂ ಸಹ ಹಲವೆಡೆ ಗುಡುಗು-ಸಿಡಿಲು ಸಹಿತ ಸಾಧಾರಣ ಮಳೆಯಾಗಲಿದ್ದು, ಬೆಂಗಳೂರಿನಿಂದ ಬೀದರ್​ವರೆಗೆ ಒಟ್ಟೂ 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಸೂಚಿಸಲಾಗಿದೆ. ಉಳಿದೆಡೆ ಒಣ ಹವೆಯ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಯಾವೆಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​?

ಬೀದರ್, ಕಲಬುರ್ಗಿ, ಯಾದಗಿರಿ, ಬಿಜಾಪುರ, ರಾಯಚೂರು, ಬಾಗಲಕೋಟೆ, ಕೊಪ್ಪಳ, ವಿಜಯನಗರ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್​ ನೀಡಿದೆ.

ಎಲ್ಲೆಲ್ಲಿ ತುಂತುರು ಮಳೆ?

ಉತ್ತರ ಒಳನಾಡಿನ ಬೆಳಗಾವಿ, ಹಾವೇರಿ, ಗದಗ ಮತ್ತು ಧಾರವಾಡ ಜಿಲ್ಲೆಗಳಲ್ಲಿ 30 ರಿಂದ 40km/h ಗಾಳಿಯೊಂದಿಗೆ ಗುಡುಗು ಸಹಿತ ಸಾಧಾರಣ ಮಳೆಯಾಗಬಹುದೆಂದು ಹವಾಮಾನ ಇಲಾಖೆ ತಿಳಿಸಿದೆ. ಅದರಂತೆ ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿಯೂ ಗುಡುಗು, ಸಿಡಿಲು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಎಲ್ಲೆಲ್ಲಿ ಒಣ ಹವೆ?

ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆ ಆವರಿಸಲಿದೆ. ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಾಮರಾಜನಗರ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೀದರ್, ವಿಜಯಪುರ, ಬಾಗಲಕೋಟೆ, ಗದಗ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Horoscope Today 21st​​ March​: ಇಂದು ಈ ರಾಶಿಯವರಿಗೆ ಆಕಸ್ಮಿಕ ಧನಯೋಗ!

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮಾರ್ಚ್​ 21, ಶನಿವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ಪರಾಭವನಾಮ ಸಂವತ್ಸರ, ಉತ್ತರಾಯಣ, ಚೈತ್ರಮಾಸ, ವಸಂತಋತು, ಶುಕ್ಲಪಕ್ಷ, ತದಿಗೆ, ಅಶ್ವಿನಿ ನಕ್ಷತ್ರ, ಇಂದ್ರಯೋಗ, ತೈತಲಕರಣದ ಶುಭ ದಿನವಾಗಿದೆ. ಸೂರ್ಯನು ಮೀನ ರಾಶಿಯಲ್ಲಿ ಮತ್ತು ಚಂದ್ರನು ಮೇಷ ರಾಶಿಯಲ್ಲಿ ಅಶ್ವಿನಿ ನಕ್ಷತ್ರದಲ್ಲಿ ಸಂಚರಿಸುತ್ತಿದ್ದಾರೆ.

ಈ ದಿನದ ರಾಹುಕಾಲವು ಬೆಳಿಗ್ಗೆ 9:25 ರಿಂದ 10:56 ರವರೆಗೆ ಇರುತ್ತದೆ. ಮಧ್ಯಾಹ್ನ 1:58 ರಿಂದ 3:28 ರವರೆಗೆ ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ ಮತ್ತು ಶುಭಕಾಲ ಇರುತ್ತದೆ. ಇಂದು ಮತ್ಸ್ಯ ಜಯಂತಿ, ಶಿರಸಿಂಗಿ ಜಾತ್ರಾ ಮಹೋತ್ಸವ, ಸೌಭಾಗ್ಯ ಗೌರಿ ವ್ರತ ಮತ್ತು ಉಯ್ಯಾಲೆ ಗೌರಿ ವ್ರತಗಳನ್ನು ಆಚರಿಸಲಾಗುತ್ತದೆ. ಡಾ. ಬಸವರಾಜ ಗುರೂಜಿ ಅವರು ದ್ವಾದಶ ರಾಶಿಗಳಿಗೆ ಎದುರಾಗಬಹುದಾದ ಶುಭ ಫಲಗಳು, ಆರ್ಥಿಕ ಸ್ಥಿತಿ, ಉದ್ಯೋಗ, ಆರೋಗ್ಯ, ಕುಟುಂಬ ಸಂಬಂಧಗಳು, ಪ್ರೀತಿ-ಪ್ರೇಮದ ವಿಷಯಗಳು, ಅದೃಷ್ಟ ಸಂಖ್ಯೆಗಳು, ಶುಭ ಬಣ್ಣಗಳು ಮತ್ತು ಪಠಿಸಬೇಕಾದ ಮಂತ್ರಗಳ ಕುರಿತು ವಿವರವಾದ ಮಾಹಿತಿಯನ್ನು ನೀಡಿದ್ದಾರೆ.

 

 

 

Source link