ಕೋಲ್ಕತ್ತಾದ ಆರ್ಜಿಕರ್ ಆಸ್ಪತ್ರೆಯ ಲಿಫ್ಟ್ನಲ್ಲಿ ಸಿಲುಕಿ ವ್ಯಕ್ತಿ ಸಾವು, ಮಗ ಆಸ್ಪತ್ರೆಗೆ ದಾಖಲು
ಕೋಲ್ಕತ್ತಾ, ಮಾರ್ಚ್ 20: ಸದಾ ಒಂದಲ್ಲಾ ಒಂದು ಘಟನೆಯಿಂದ ಸುದ್ದಿಯಲ್ಲಿರುವ ಕೋಲ್ಕತ್ತಾ ಆರ್ಜಿಕರ್ ಆಸ್ಪತ್ರೆಯ ಲಿಫ್ಟ್(Lift) ನಲ್ಲಿ ಸಿಲುಕಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಮಗನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ಅರೂಪ್ ಬಂಡೋಪಾಧ್ಯಾಯ ಎಂದು ಗುರುತಿಸಲಾಗಿದೆ. ಇಂಡಿಯನ್ ಎಕ್ಸ್ಪ್ರೆಸ್ ವರದಿ ಪ್ರಕಾರ, ಮೃತರ ಮಗನ ಕಾಲಿನ ಮೂಳೆ ಮುರಿದಿದ್ದು, ಆರ್ಜಿ ಕರ್ ಕಾಲೇಜು, ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅರೂಪ್ ಬಂಡೋಪಾಧ್ಯಾಯ ಶಸ್ತ್ರಚಿಕಿತ್ಸಾ ಕೊಠಡಿಯಿಂದ ಹಿಂದಿರುಗುತ್ತಿದ್ದಾಗ ಲಿಫ್ಟ್ನಿಂದ ಕೆಳಗೆ ಹೋಗುತ್ತಿದ್ದರು. ಲಿಫ್ಟ್ ಇದ್ದಕ್ಕಿದ್ದಂತೆ ನಿಂತಿತ್ತು, ಒಳಗೆ ಮೂವರು ಸಿಲುಕಿಕೊಂಡಿದ್ದರು. ಅರೂಪ್ ಬಹಳ…