Headlines

nagaraj11081993

ಪ್ರಜ್ವಲ್ ರೇವಣ್ಣ ವಿಡಿಯೋ ಕೇಸ್​​: ಚಾರ್ಜ್​​ಶೀಟ್​​ ವಿರುದ್ಧ ಜೆಡಿಎಸ್ ಶಾಸಕನ​​ ಆಕ್ರೋಶ

ಹಾಸನ, ಮಾರ್ಚ್​​ 20: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಪ್ರಕರಣದ ಚಾರ್ಜ್​ಶೀಟ್​ನಲ್ಲಿ ಜೆಡಿಎಸ್ ಕಾರ್ಯಕರ್ತರ ಹೆಸರುಗಳನ್ನು ಸೇರ್ಪಡೆಗೊಳಿಸಿರುವುದಕ್ಕೆ ಹಾಸನದ ಜೆಡಿಎಸ್ ಶಾಸಕ ಸ್ವರೂಪ್ ಪ್ರಕಾಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕ್ರಮವು ಪ್ರಕರಣದ ತನಿಖೆಯ ದಿಕ್ಕನ್ನು ತಪ್ಪಿಸುವ ಯತ್ನ ಎಂದು ಅವರು ಆರೋಪಿಸಿದ್ದಾರೆ. ಪ್ರಕರಣದಲ್ಲಿ ಕೆಲ ಪ್ರಭಾವಿ ವ್ಯಕ್ತಿಗಳ ಹೆಸರುಗಳನ್ನು ಕೈಬಿಟ್ಟು, ಯಾವುದೇ ಸಂಬಂಧವಿಲ್ಲದ 10-12 ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರನ್ನು ಸಿಲುಕಿಸಲಾಗಿದೆ. ನಿಜವಾದ ಅಪರಾಧಿಗಳನ್ನು ಪತ್ತೆಹಚ್ಚುವ ಬದಲು, ಜೆಡಿಎಸ್ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡಿರುವುದನ್ನು ಖಂಡಿಸುತ್ತೇವೆ. ಉನ್ನತ…

Read More

ಮದುವೆಯಾಗಿದ್ದರೂ ಮತ್ತೊಬ್ಬ ವಿವಾಹಿತೆ ಮೇಲೆ ಲವ್​: ಮಹಿಳೆ ಇರಿದು ಕೊಂದವ ಜೈಲು ಪಾಲು

ಬೆಂಗಳೂರು, ಮಾರ್ಚ್​​ 20: ಗಂಗೊಂಡನಹಳ್ಳಿಯಲ್ಲಿ ಇಬ್ಬರು ಮಕ್ಕಳ ತಾಯಿ ಹಿಂದೆ ಬಿದ್ದ ಯುವಕನೋರ್ವ ಆಕೆಯನ್ನು ಡ್ಯಾಗರ್​ನಿಂದ ಇರಿದು ಕೊಲೆ ಮಾಡಿದ್ದ ಪ್ರಕರಣ ಸಂಬಂಧ ಆರೋಪಿ ಹಫೀಜ್​​ನ ಚಂದ್ರಾಲೇಔಟ್​ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಸಂಜೆ ಫೀರ್ದೋಸ್ ಬಾನು ಎಂಬಾಕೆಯನ್ನು ಈತ ಹತ್ಯೆಗೈದಿದ್ದು, ಕೊಲೆ ನಡೆದ ಕೆಲವೇ ಗಂಟೆಗಳಲ್ಲಿ ಹಫೀಜ್ನ ಅರೆಸ್ಟ್​​ ಮಾಡಲಾಗಿದೆ.  ಮಹಿಳೆ ಆರೋಪಿಯನ್ನು ದೂರ ಮಾಡಿದ್ದೇ ಕೊಲೆಗೆ ಕಾರಣವಾಗಿದ್ದು, ಫೀರ್ದೋಸ್ ಬಾನುಗೆ ಆರೋಪಿ ಹಫೀಜ್ ಜತೆ ಸಂಪರ್ಕ ಇತ್ತು ಎಂಬುದು ತನಿಖೆ ವೇಳೆ ಬಯಲಾಗಿದೆ. ಮೃತ ಫೀರ್ದೋಸ್…

Read More

ಆ್ಯಂಬ್ಯುಲೆನ್ಸ್ ಕಾರು ನಡುವೆ ಡಿಕ್ಕಿ; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ!

ಶಿವಮೊಗ್ಗ, ಮಾ.20: ನಗರದ ಜನನಿಬಿಡ ಪ್ರದೇಶವಾದ ಅಕ್ಕಮಹಾದೇವಿ ವೃತ್ತದಲ್ಲಿ ಕಾರು ಮತ್ತು ಆ್ಯಂಬ್ಯುಲೆನ್ಸ್ ನಡುವೆ ಭೀಕರ ಡಿಕ್ಕಿ ಸಂಭವಿಸಿದೆ. ಅಪಘಾತದ ರಭಸಕ್ಕೆ ಕಾರು ಮೂರ್ನಾಲ್ಕು ಬಾರಿ ಪಲ್ಟಿ ಹೊಡೆದಿದ್ದು, ಸೃವದೈವವಶಾತ್ ದೊಡ್ಡ ಮಟ್ಟದ ಪ್ರಾಣಾಪಾಯ ತಪ್ಪಿದೆ. ವೇಗವಾಗಿ ಬಂದ ಬ್ರೀಜಾ ಕಾರು ಮತ್ತು ಆ್ಯಂಬ್ಯುಲೆನ್ಸ್ ನಡುವೆ ಡಿಕ್ಕಿ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಮೂರ್ನಾಲ್ಕು ಬಾರಿ ಪಲ್ಟಿ ಹೊಡೆದಿದೆ. ಈ ಮೈನವಿರೇಳಿಸುವ ದೃಶ್ಯಗಳು ಹತ್ತಿರದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ.ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ…

Read More

ಯುವ ನಟನಿಂದ ಸ್ಪೂರ್ತಿ, ಉಚಿತ ಶಿಕ್ಷಣ ಘೋಷಿಸಿದ ಮೆಗಾಸ್ಟಾರ್ ಚಿರಂಜೀವಿ

ಮೆಗಾಸ್ಟಾರ್ ಚಿರಂಜೀವಿ (Megastar Chiranjeevi), ಭಾರತದ ಸೂಪರ್ ಸ್ಟಾರ್ ನಟರಲ್ಲಿ ಒಬ್ಬರು. ಒಂದು ಸಮಯದಲ್ಲಿ ಅಮಿತಾಬ್ ಬಚ್ಚನ್​​ಗಿಂತಲೂ ದೊಡ್ಡ ಸ್ಟಾರ್ ಆಗಿದ್ದ ಚಿರಂಜೀವಿ, ಭಾರತದಲ್ಲಿ ಒಂದು ಕೋಟಿ ಸಂಭಾವನೆ ಪಡೆದಿದ್ದ ಮೊದಲ ನಟ. ಈಗಲೂ ಸಿನಿಮಾಗಳಲ್ಲಿ ಸಕ್ರಿಯವಾಗಿರುವ ಚಿರಂಜೀವಿ, ಸಿನಿಮಾ ನಟರುಗಳು ಹೇಗೆ ಅಭಿಮಾನಿ ಸಂಘಗಳ ಬಳಸಿ ಎಷ್ಟು ಸಕ್ರಿಯವಾಗಿ ಸಮಾಜ ಸೇವೆ ಮಾಡಬಹುದು ಎಂದು ತೋರಿಸಿಕೊಟ್ಟ ಕೆಲವೇ ಸ್ಟಾರ್ ನಟರುಗಳಲ್ಲಿ ಒಬ್ಬರು. ಮೆಗಾಸ್ಟಾರ್ ಅವರು ಪ್ರಾರಂಭಿಸಿದ ಬ್ಲಡ್ ಬ್ಯಾಂಕ್​​ಗಳು ಸಾವಿರಾರು ಜೀವಗಳನ್ನು ಉಳಿಸಿವೆ. ಈಗಲೂ ಸಹ…

Read More

‘ನಿನಗೆ ಸರಿಯಾಗಿ ಏಟು ಬೀಳುತ್ತೆ’; ಪಂಕಜ್ ತ್ರಿಪಾಠಿಗೆ ನಾನಾ ಪಾಟೇಕರ್ ಬೆದರಿಕೆವೊಡ್ಡಿದ್ದೇಕೆ?

ಬಾಲಿವುಡ್‌ನಲ್ಲಿ ನಾನಾ ಪಾಟೇಕರ್ ತಮ್ಮ ಅದ್ಭುತ ನಟನೆಗೆ ಮಾತ್ರವಲ್ಲದೆ ತಮ್ಮ ನೇರ ಮಾತು ಹಾಗೂ ಸ್ವಭಾವಕ್ಕೂ ಹೆಸರುವಾಸಿಯಾಗಿದ್ದಾರೆ. ನಾನಾ ತನ್ನ ಮನಸ್ಸಿಗೆ ಬಂದದ್ದನ್ನು ಹೇಳಲು ಎಂದಿಗೂ ಹಿಂಜರಿಯುವುದಿಲ್ಲ. ಅವರು ಈ ಮೊದಲು ಪಂಕಜ್ ತ್ರಿಪಾಠಿಗೆ ಹೊಡೆಯೋದಾಗಿ ಬೆದರಿಕೆ ಹಾಕಿದ್ದರು. ಅದಕ್ಕೆ ಕಾರಣವೂ ಇತ್ತು. ನಾನಾ ಪಾಟೇಕರ್ ಅವರ ಸ್ವಭಾವ ಅವರ ಹೃದಯದಷ್ಟೇ ಕಠಿಣ. ಆದರೆ, ಅವರಲ್ಲಿ ಒಳ್ಳೆಯ ಮನಸ್ಸು ಕೂಡ ಇದೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಮತ್ತು ಹೊಸ ಕಲಾವಿದರನ್ನು ಪ್ರೋತ್ಸಾಹಿಸುವುದು ಅವರ ಸ್ವಭಾವ. 2018ರಲ್ಲಿ, ನಾನಾ…

Read More

ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ: ನಿಮ್ಮ ಜೇಬಿಗೂ ಬೀಳುತ್ತಾ ಕತ್ತರಿ? ಪರಿಣಾಮಗಳೇನು ಎಂಬ ಮಾಹಿತಿ ಇಲ್ಲಿದೆ

ನವದೆಹಲಿ, ಮಾರ್ಚ್ 20: ಮಧ್ಯಪ್ರಾಚ್ಯದಲ್ಲಿ ತೀವ್ರಗೊಂಡಿರುವ ಯುದ್ಧ ಮತ್ತು ಅದರ ಆರ್ಥಿಕ ಪರಿಣಾಮಗಳಿಂದಾಗಿ ಭಾರತೀಯ ರೂಪಾಯಿ ಮೌಲ್ಯ (Rupee value) ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡಿದೆ. ಸದ್ಯದ ವಹಿವಾಟಿನಲ್ಲಿ ರೂಪಾಯಿ ಮೌಲ್ಯ 93 ರ ಗಡಿ ದಾಟಿದೆ. ಕಚ್ಚಾತೈಲ ಬೆಲೆ ಗಗನಕ್ಕೇರಿಕೆ ಮತ್ತು ಜಾಗತಿಕ ಆರ್ಥಿಕ ಅನಿಶ್ಚಿತತೆ ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಕಚ್ಚಾತೈಲ ಬೆಲೆ ಈಗಾಗಲೇ ಪ್ರತಿ ಬ್ಯಾರೆಲ್‌ಗೆ 110 ಡಾಲರ್ ದಾಟಿದ್ದು, ಯುದ್ಧ ಹೀಗೆಯೇ ಮುಂದುವರಿದರೆ 180-200 ಡಾಲರ್ ತಲುಪುವ ಸಾಧ್ಯತೆ ಇದೆ ಎಂದು…

Read More

‘ಸರ್ಸೆ ಸೆರಗು’ ಹಾಡಿಗೆ ಅಶ್ಲೀಲ ನೃತ್ಯ, ನೋರಾ ಫತೇಹಿ ವಿರುದ್ಧ ಫತ್ವಾ

ಪ್ರೇಮ್ (Prem) ನಿರ್ದೇಶಿಸಿ, ಧ್ರುವ ಸರ್ಜಾ ನಟಿಸಿರುವ ‘ಕೆಡಿ: ದಿ ಡೆವಿಲ್’ ಸಿನಿಮಾದ ‘ಸರ್ಸೆ ಸೆರಗು’ ಹಾಡು ಭಾರಿ ವಿವಾದ ಹುಟ್ಟುಹಾಕಿದೆ. ಹಾಡಿನ ಹಿಂದಿ ಆವೃತ್ತಿಯಾದ ‘ಸರ್ಕೆ ಚುನರಿ’ ಹಾಡಿನ ವಿರುದ್ಧ ತೀವ್ರ ಟೀಕೆ ಮತ್ತು ವಿರೋಧ ವ್ಯಕ್ತವಾಗಿದ್ದು, ಈಗಾಗಲೇ ಸಿಬಿಎಫ್​​ಸಿ, ಸೈಬರ್ ಪೊಲೀಸರಿಗೆ ದೂರು ದಾಖಲಾಗಿದೆ. ರಾಷ್ಟ್ರೀಯ ಮಹಿಳಾ ಆಯೋಗ ಸಹ ಹಾಡಿನ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದು, ನಿರ್ದೇಶಕ ಮತ್ತು ಗೀತರಚನೆಕಾರ ಪ್ರೇಮ್ ಸೇರಿದಂತೆ ನೋರಾ ಫತೇಹಿ, ಸಂಜಯ್ ದತ್ ಇನ್ನೂ ಹಲವರಿಗೆ ನೊಡೀಸ್…

Read More

Video: ತಂದೆಯ ಕನಸಿಗೆ ಮಕ್ಕಳೇ ರೂವಾರಿ; ತರಕಾರಿ ಅಂಗಡಿ ಕೆಳಗೆ ಕುಳಿತು ಪುಸ್ತಕ ಹಿಡಿದು ಓದುತ್ತಿರುವ ಮಕ್ಕಳು

ಬಡತನ, ಹಸಿವು ಸಣ್ಣ ವಯಸ್ಸಿನಲ್ಲಿ ಜೀವನ ಪಾಠವನ್ನು (life lesson) ಚೆನ್ನಾಗಿ ಕಲಿಸಿ ಬಿಡುತ್ತದೆ. ಹೀಗಾಗಿ ಕೆಲ ಪುಟಾಣಿಗಳದ್ದು ಓದುವ ವಯಸ್ಸಿನಲ್ಲಿ ಹೆತ್ತವರಿಗೆ ಹೆಗಲಾಗುವ ಕನಸು. ಶಿಕ್ಷಣದ ಸಮಯದಲ್ಲಿ ಸಾಕಷ್ಟು ಆರ್ಥಿಕ ಅಡೆತಡೆಗಳು ಎದುರಾಗುವುದು ಸಹಜ. ಮನೆಯಲ್ಲಿ ಸೌಲಭ್ಯವಿಲ್ಲದಿದ್ದರೂ ಓದಬೇಕೆನ್ನುವ ಛಲ. ಸಾಧಿಸುವ ಮುಖ್ಯ ಛಲ ಮುಖ್ಯ ಎನ್ನುವುದಕ್ಕೆ ಈ ವಿಡಿಯೋ ನೈಜ ಉದಾಹರಣೆ. ತನ್ನ ತಂದೆಯ ತರಕಾರಿ ಅಂಗಡಿಯ ಕೆಳಗೆ ಕುಳಿತು ಓದುತ್ತಿರುವ ಮಕ್ಕಳ (children) ವಿಡಿಯೋ ನೆಟ್ಟಿಗರ ಕಣ್ಣಂಚಲಿ ನೀರು ತರಿಸಿದೆ. ಸೌಲಭ್ಯ ಕೊರತೆ…

Read More

‘ಡಿಕೆಡಿ 5’ ಕ್ವಾಟರ್​ ಫಿನಾಲೆ; ಫಿನಾಲೆ ಟಿಕೆಟ್​ ಸಿಗೋದು ಯಾರಿಗೆ?

ಜೀ ಕನ್ನಡದಲ್ಲಿ ಡ್ಯಾನ್ಸ್ ಕರ್ನಾಟ ಡ್ಯಾನ್ಸ್ ಮೂಲಕ ಅನೇಕ ಪ್ರತಿಭೆಗಳಿಗೆ ವೇದಿಕೆ ಆಗಿದೆ. ಈಗ ಐದನೇ ಸೀಸನ್ ಪ್ರಸಾರ ಕಂಡಿದೆ. ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 5’ ಕ್ವಾಟರ್ ಫಿನಾಲೆಗೆ ದಿನಗಣನೆ ಶುರುವಾಗಿದೆ. ಶನಿವಾರ ಹಾಗೂ ಭಾನುವಾರ ಪ್ರಸಾರ ಕಾಣಲಿದೆ. ಅಲ್ಲದೆ, ಒಬ್ಬರಿಗೆ ಫಿನಾಲೆ ಟಿಕೆಟ್ ಸಿಗಲಿದೆ. ಅದು ಯಾರಿಗೆ ಎಂಬ ಕುತೂಹಲ ಮೂಡಿದೆ. ಆ ಸಂದರ್ಭದ ವಿಡಿಯೋ ಇಲ್ಲಿದೆ.  ಶಿವಣ್ಣ ಅವರು ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.   Source link

Read More

‘ನನಗೆ 3BHK ಮನೆ ಹುಡುಕಿ ಕೊಡಿ, ಅರ್ಧ ತಿಂಗಳ ಬಾಡಿಗೆ ಕೊಡುತ್ತೇನೆ’: ಬೆಂಗಳೂರಿನಲ್ಲಿ ಮನೆ ಹುಡುಕಾಟದಿಂದ ಬೇಸತ್ತ ಯುವಕ

ಬೆಂಗಳೂರು, ಮಾ.20: ಬೆಂಗಳೂರಿನಲ್ಲಿ ಮನೆ ಹುಡುಕುವುದು ಒಂದು ದೊಡ್ಡ ತಲೆ ನೋವು. ಪ್ರತಿದಿನ ಈ ಬಗ್ಗೆ ಒಂದಾದರೂ ಪೋಸ್ಟ್​​ ವೈರಲ್​​ ಆಗುತ್ತ ಇರುತ್ತದೆ. ಇದೀಗ ಮತ್ತೊಂದು ನಿರಾಸೆ ಪೋಸ್ಟ್ವೊಂದು​​​ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​​ ಆಗಿದೆ. ಈ ಬಗ್ಗೆ ರೆಡ್ಡಿಟ್​​ನಲ್ಲಿ ಯುವಕನೊಬ್ಬ ಹಂಚಿಕೊಂಡಿದ್ದಾನೆ. ಕೋರಮಂಗಲ ಅಥವಾ HSR ಲೇಔಟ್‌ನಂತಹ ಪ್ರದೇಶಗಳಲ್ಲಿ 3BHK ಫ್ಲಾಟ್ ಪಡೆಯಲು ಸಹಾಯ ಮಾಡುವವರಿಗೆ ಅರ್ಧ ತಿಂಗಳ ಬಾಡಿಗೆಯನ್ನು ನೀಡುತ್ತೇನೆ ಎಂದು ಪೋಸ್ಟ್​​​ವೊಂದನ್ನು ಹಂಚಿಕೊಂಡಿದ್ದಾರೆ. ಪೋಸ್ಟ್​​ನಲ್ಲಿ “ನನಗೆ 3bhk ಮನೆ ಹುಡುಕಿ, ನಾನು ನಿಮಗೆ ಅರ್ಧ…

Read More