All posts by nagaraj11081993

ಕೋಮು ಸೌಹಾರ್ದತೆಗೆ ಸಾಕ್ಷಿಯಾದ ಬಂಟ್ವಾಳ: ಮಸೀದಿ ಮೆಟ್ಟಿಲೇರಿ ‘ಸೀಯಾಳ’ ಸ್ವೀಕರಿಸಿದ ದೈವ

ಕೋಮು ಸೌಹಾರ್ದತೆಗೆ ಸಾಕ್ಷಿಯಾದ ಬಂಟ್ವಾಳ: ಮಸೀದಿ ಮೆಟ್ಟಿಲೇರಿ ‘ಸೀಯಾಳ’ ಸ್ವೀಕರಿಸಿದ ದೈವ

ಬಂಟ್ವಾಳ, ಮಾ. 20: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಂದಾವರದಲ್ಲಿ ಮನುಷ್ಯತ್ವ ಮತ್ತು ಧಾರ್ಮಿಕ ಸಹಬಾಳ್ವೆಯ ಸುಂದರ ದೃಶ್ಯವೊಂದು ಅನಾವರಣಗೊಂಡಿದೆ. ಅರಸರ ಕಾಲದ ಪುರಾತನ ಪರಂಪರೆಯಂತೆ, ಮಂಜದಗೋಳಿ ಜಾತ್ರೆಯ ಸಂದರ್ಭದಲ್ಲಿ ದೈವದ ಭಂಡಾರವು ಮಸೀದಿಯ ಮೆಟ್ಟಿಲೇರಿ ಸೀಯಾಳ (ಎಳನೀರು) ಸ್ವೀಕರಿಸುವ ಮೂಲಕ ಸಮಾಜಕ್ಕೆ ಸಾಮರಸ್ಯದ ಸಂದೇಶ ಸಾರಿದೆ. ಪ್ರತಿ ವರ್ಷವೂ ಈ ಆಚರಣೆಗಳು ಇಲ್ಲಿ ನಡೆಯುತ್ತ ಬಂದಿದೆ. ಮುಸ್ಲಿಂ ಧರ್ಮದ ಜನ ದೈವಗಳಿಗೆ ಈ ಮೂಲಕ ವಿಶೇಷ ಗೌರವವನ್ನು ನೀಡುತ್ತಾರೆ.

ಸಜೀಪನಡು ಮೂಲಸ್ಥಾನದಿಂದ ಮಂಜದಗೋಳಿ ಕ್ಷೇತ್ರಕ್ಕೆ ಭಂಡಾರ ಸಾಗುವ ಹಾದಿಯಲ್ಲಿ ಈ ವಿಶಿಷ್ಟ ಆಚರಣೆ ನಡೆಯುತ್ತದೆ. ನಂದಾವರ ಕೇಂದ್ರ ಜುಮಾ ಮಸೀದಿಯ ಪ್ರಮುಖರು ದೈವದ ಭಂಡಾರಕ್ಕೆ ಭಕ್ತಿಯಿಂದ ಸೀಯಾಳ ಅರ್ಪಿಸುತ್ತಾರೆ. ದೈವವು ಮಸೀದಿಯ ನಾಲ್ಕು ಮೆಟ್ಟಿಲುಗಳನ್ನು ಹತ್ತಿ ಈ ಸೇವೆಯನ್ನು ಸ್ವೀಕರಿಸುವುದು ಇಲ್ಲಿನ ವಿಶೇಷವಾಗಿದೆ.

ಇದನ್ನೂ ಓದಿ: ಒಂದು ದಿನ ಮೊದಲೇ ಕರಾವಳಿ ಭಾಗದಲ್ಲಿ ರಂಜಾನ್ ಹಬ್ಬ ಆಚರಣೆ: ಮಾ 20ರಂದು ಸಾರ್ವತ್ರಿಕ ರಜೆ ಘೋಷಣೆ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಮಂಜದಗೋಳಿ ಜಾತ್ರೆಯ ಅಂಗವಾಗಿ ನಡೆಯುವ ಈ ಸಂಪ್ರದಾಯವು ಈ ವರ್ಷವೂ (ಮಾರ್ಚ್ 17) ಅತ್ಯಂತ ಶ್ರದ್ಧೆಯಿಂದ ನೆರವೇರಿದೆ. ಇಂದಿನ ಕಾಲಘಟ್ಟದಲ್ಲಿ ಧರ್ಮಗಳ ನಡುವೆ ಗೋಡೆಗಳು ನಿರ್ಮಾಣವಾಗುತ್ತಿರುವಾಗ, ನಂದಾವರದ ಈ ಆಚರಣೆಯು ಸಹಬಾಳ್ವೆ ಮತ್ತು ಪರಸ್ಪರ ಗೌರವಕ್ಕೆ ಮಾದರಿಯಾಗಿದೆ. ಮಸೀದಿ ಹಾಗೂ ದೇವಸ್ಥಾನಗಳ ನಡುವಿನ ಈ ಅವಿನಾಭಾವ ಸಂಬಂಧ ಕರಾವಳಿಯ ಸಾಂಸ್ಕೃತಿಕ ಹೆಮ್ಮೆಯಾಗಿದೆ. ಈ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ವಿಡಿಯೋ ದೈವ ಮಸೀದಿಯ ಬಳಿ ಬಂದು, ನಿಂತು ಎಲ್ಲರಿಗೂ ಅಭಯ ನೀಡುವುದನ್ನು ಕಾಣಬಹುದು. ದೈವ ಬರುವ ಮಾರ್ಗದಲ್ಲಿ ನಿಂತು ಸಾವಿರಾರೂ ಮುಸ್ಲಿಂ ಜನರು ಭಕ್ತಿಯಿಂದ ನೋಡುವುದನ್ನು ಈ ವಿಡಿಯೋದಲ್ಲಿ ನೋಡಬಹುದು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಗ್ಯಾಸ್ ಸಿಗದೆ ಸಂಕಷ್ಟದಲ್ಲಿ ಸ್ಟೀಲ್ ವೆಲ್ಡಿಂಗ್, ಕಟ್ಟಿಂಗ್ ಉದ್ಯಮ: ಕೆಆರ್ ಮಾರುಕಟ್ಟೆಯಲ್ಲಿ ಮುಚ್ಚಿಕೊಳ್ತಿವೆ ಒಂದೊಂದೇ ಅಂಗಡಿಗಳು

ಬೆಂಗಳೂರು, ಮಾರ್ಚ್ 20: ಬೆಂಗಳೂರಿನ (Bangalore) ದಿನದಿಂದ ದಿನಕ್ಕೆ ಗ್ಯಾಸ್ ಸಿಲಿಂಡರ್ (LPG Cylinder) ಅಭಾವ ಕೈ ಮೀರುವ ಹಂತಕ್ಕೆ ಬರುತ್ತಿದೆ. ಉದ್ಯಮಗಳು ಹಳ್ಳಹಿಡಿಯುತ್ತಿವೆ. ಹೋಟೆಲ್, ಪಿಜಿ ಸೇರಿದಂತೆ ಅನೇಕ ಉದ್ಯಮಗಳಿಗೆ ಭಾರೀ ಹೊಡೆತ ಬಿದ್ದಿದೆ. ಇದೀಗ ಸ್ಟೀಲ್ ಇಂಡಸ್ಟ್ರೀಸ್​ಗೂ ಏಟು ಬಿದ್ದಿದ್ದು, ಕೆಆರ್ ಮಾರುಕಟ್ಟೆಯ ಸ್ಟೀಲ್ ವೆಲ್ಡಿಂಗ್ ಹಾಗೂ ಕಟ್ಟಿಂಗ್ ಅಂಗಡಿಗಳು ಒಂದೊಂದೇ ಆಗಿ ಮುಚ್ಚಿಕೊಳ್ಳುತ್ತಿವೆ.

ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಸಿಗದೆ ನಗರದ ಉದ್ಯಮಗಳು ಅಯೋಮಯಗೊಂಡಿವೆ. ಹೋಟೆಲ್ ಉದ್ಯಮಗಳಿಗೆ, ಗ್ಯಾಸ್ ಇಲ್ಲದಿದ್ದರೂ ಕನಿಷ್ಠ ಎಲೆಕ್ಟ್ರಿಕ್ ಅಥವಾ ಸೌದೆ‌ ಒಲೆಯಲ್ಲಾದರೂ ಆಹಾರ ತಯಾರಿಸಿ ಉದ್ಯಮ ನಡೆಸುವ ಅವಕಾಶ ಇದೆ. ಕೆಲವು ಹೋಟೆಲ್ ಮಾಲೀಕರು ಸೌದೆ ಒಲೆ, ಎಲೆಕ್ಟ್ರಿಕ್ ಒಲೆ ಮೇಲೆ ವ್ಯಾಪಾರ ನಡೆಸುತ್ತಿದ್ದಾರೆ. ಆದರೆ ಗ್ಯಾಸ್ ಸಿಗದೆ ಬೇರೆ ಪರ್ಯಾಯ ಮಾರ್ಗವೇ ಇಲ್ಲದ ಸ್ಟೀಲ್ ವೆಲ್ಡಿಂಗ್ ಹಾಗೂ ಕಟ್ಟಿಂಗ್ ಉದ್ಯಮ ಇದೀಗ ಸಂಪೂರ್ಣ ನಷ್ಟದ ಸುಳಿಗೆ ಸಿಲುಕಿದೆ.

400ಕ್ಕೂ ಅಧಿಕ ವೆಲ್ಡಿಂಗ್ ಹಾಗೂ ಕಟ್ಟಿಂಗ್ ಅಂಗಡಿಗಳಿಗೆ ಕುತ್ತು

ಕೆಆರ್ ಮಾರ್ಕೆಟ್​ನ ಬಿ ಉಸ್ಮಾನ್ ಬೀದಿ ಹಾಗೂ ಅದರ ಸುತ್ತಮುತ್ತ ಬರೋಬ್ಬರಿ 400ಕ್ಕೂ ಅಧಿಕ ವೆಲ್ಡಿಂಗ್ ಹಾಗೂ ಕಟ್ಟಿಂಗ್ ಅಂಗಡಿಗಳಿವೆ. ಲಘು ಹಾಗೂ ಭಾರೀ ವಾಹನದ ಬಿಡಿ ಭಾಗಗಳ ಜೋಡಣೆ, ಕಬ್ಬಿಣದ ಪ್ಲೇಟ್​ಗಳ‌ ಕಟ್ಟಿಂಗ್ ಸೇರಿದಂತೆ ಕಮರ್ಷಿಯಲ್ ಗ್ಯಾಸ್ ಬಳಸಿಕೊಂಡು ನಡೆಯುವ ಉದ್ಯಮವಿದು. ಇದೇ ಕಾರಣಕ್ಕೆ ಪ್ರತಿ ದಿನ ಲಕ್ಷಾಂತರ ರೂಪಾಯಿ ವಹಿವಾಟು ಇಲ್ಲಿ ನಡೆಯುತ್ತದೆ. ಆದರೆ ಕಳೆದ ಒಂದು ವಾರದಿಂದ ಕಮರ್ಷಿಯಲ್ ಗ್ಯಾಸ್ ಸಿಗದೆ ವಹಿವಾಟು ಸಂಪೂರ್ಣ ಕುಸಿದು ಹೋಗಿದೆ. ಹೋಟೆಲ್​ಗಳಿಗೆ ಗ್ಯಾಸ್ ಇಲ್ಲದಿದ್ದರೆ ಸೌದೆ ಒಲೆಯಾದರೂ ಇದೆ. ನಮಗೆ ಗ್ಯಾಸ್ ಇಲ್ಲದಿದ್ದರೆ ಜೀವನವೇ ನಡೆಯಲ್ಲ ಎನ್ನುತ್ತಿದ್​ದಾರೆ ಇಲ್ಲಿನ ಅಂಗಡಿಗಳ ಮಾಲೀಕರು.

ಇದನ್ನೂ ಓದಿ: ಎಲ್​ಪಿಜಿ ಗ್ಯಾಸ್ ಸಮಸ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ! ಪೆಟ್ರೋಲ್ ಡೀಸೆಲ್​ಗೂ ಎದುರಾಗಲಿದೆ ಅಭಾವ? ಇಲ್ಲಿದೆ ಬಲವಾದ ಕಾರಣ

ಒಟ್ಟಿನಲ್ಲಿ, ಕಮರ್ಷಿಯಲ್ ಗ್ಯಾಸ್ ಅಭಾವ ಪ್ರತಿ ದಿನ ನಗರದಲ್ಲಿ ನೂರೆಂಟು ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ನಗರದ ಆರ್ಥಿಕ ಏಳಿಗೆಗೆ ಭಾರೀ ಹೊಡೆತ ತಟ್ಟುವುದಂತೂ ಗ್ಯಾರಂಟಿ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಧುರಂದರ್ 2’ ಚಿತ್ರದ ಎದುರು ರಿಲೀಸ್ ಆದ ‘ಲವ್ ಮಾಕ್ಟೇಲ್ 3’ ಗಳಿಸಿದ್ದೆಷ್ಟು?

‘ಧುರಂಧರ್ 2’ ಸಿನಿಮಾ (Dhurandhar 2) ಎಷ್ಟು ದೊಡ್ಡ ಸಿನಿಮಾ ಎಂಬುದನ್ನು ಹೊಸದಾಗಿ ಹೇಳಬೇಕಿಲ್ಲ. ಈ ಚಿತ್ರದ ಎದುರು ರಿಲೀಸ್ ಆಗಬೇಕು ಎಂದರೆ ಚಿತ್ರದ ಬಗ್ಗೆ ಅಷ್ಟು ಕಾನ್ಫಿಡೆನ್ಸ್ ಇರಬೇಕು. ಡಾರ್ಲಿಂಗ್ ಕೃಷ್ಣ ಅವರಿಗೆ ‘ಲವ್ ಮಾಕ್ಟೇಲ್ 3’ ಚಿತ್ರದ ಬಗ್ಗೆ ಆ ವಿಶ್ವಾಸ ಇದೆ. ಈ ಕಾರಣದಿಂದಲೇ ‘ಧುರಂಧರ್ 2’ ಸಿನಿಮಾ ಎದುರು ‘ಲವ್ ಮಾಕ್ಟೇಲ್ 3’ ಚಿತ್ರವನ್ನು ರಿಲೀಸ್ ಮಾಡಿದ್ದಾರೆ. ಈ ಸಿನಿಮಾ ಮೊದಲ ದಿನ ಒಳ್ಳೆಯ ಕಲೆಕ್ಷನ್ ಮಾಡಿದೆ.

‘ಲವ್ ಮಾಕ್ಟೇಲ್’, ‘ಲವ್ ಮಾಕ್ಟೇಲ್ 2’ ಹಿಟ್ ಆದ ಬಳಿಕ ‘ಲವ್ ಮಾಕ್ಟೇಲ್ 3’ ಚಿತ್ರವನ್ನು ಕೃಷ್ಣ ಕೈಗೆತ್ತಿಕೊಂಡರು. ಇದು ಬೇಕಿತ್ತಾ ಎಂದು ಪ್ರಶ್ನೆ ಮಾಡಿದವರು ಅನೇಕರಿದ್ದಾರೆ. ಈ ರೀತಿ ಪ್ರಶ್ನೆ ಮಾಡಿದವರೆಲ್ಲ ‘ಲವ್ ಮಾಕ್ಟೇಲ್ 3’ ಚಿತ್ರವನ್ನು ಇಷ್ಟಪಡುತ್ತಿದ್ದಾರೆ. ಈ ಸಿನಿಮಾ ಅಭಿಮಾನಿಗಳಿಗೆ ಇಷ್ಟ ಆಗುತ್ತಿದೆ. ‘ಧುರಂಧರ್ 2’ ಮಧ್ಯೆಯೂ ಶೋ ಪಡೆದು ಸಿನಿಮಾ ಬೀಗುತ್ತಿದೆ.

ಏಪ್ರಿಲ್ ತಿಂಗಳಲ್ಲಿ ‘ಲವ್ ಮಾಕ್ಟೇಲ್ 3’ ರಿಲೀಸ್ ಆಗಬೇಕಿತ್ತು. ಆದರೆ, ‘ಟಾಕ್ಸಿಕ್’ ಸಿನಿಮಾ ಮುಂದಕ್ಕೆ ಹೋಗಿದ್ದರಿಂದ ‘ಲವ್ ಮಾಕ್ಟೇಲ್ 3’ ಚಿತ್ರ ಈ ದಿನಾಂಕದಂದು (ಮಾರ್ಚ್ 19) ಬರಲು ಸಿದ್ಧವಾಯ್ತು.ಇದು ನಿಜಕ್ಕೂ ಒಂದು ದೊಡ್ಡ ಚಾಲೆಂಜ್. ಈ ಚಾಲೆಂಜ್​​ನ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಸ್ವೀಕರಿಸಿ ಗೆದ್ದಿದ್ದಾರೆ.

‘ಲವ್ ಮಾಕ್ಟೇಲ್ 3’ ಸಿನಿಮಾ ಮೊದಲ ದಿನ 1.52 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ನೆಟ್ ಕಲೆಕ್ಷನ್ 1.36 ಕೋಟಿ ರೂಪಾಯಿ ಆಗಿದೆ ಎಂದು sacnilk ವರದಿ ಮಾಡಿದೆ. ‘ಧುರಂಧರ್ 2’ ಅಬ್ಬರದ ಮಧ್ಯೆಯೂ ‘ಲವ್ ಮಾಕ್ಟೇಲ್ 3’ ಸಿನಿಮಾ ಬೀಗುತ್ತಿದೆ ಅನ್ನೋದು ವಿಶೇಷ. ‘ಲವ್ ಮಾಕ್ಟೇಲ್ 3’ ಚಿತ್ರದ ಬಜೆಟ್ ಕಡಿಮೆ. ಹೀಗಾಗಿ, ಇದು ಸಿನಿಮಾಗೆ ಸಹಕಾರಿ ಆಗಲಿದೆ.

ಇದನ್ನೂ ಓದಿ: ಮೊದಲ ದಿನವೇ 250 ಕೋಟಿ ರೂಪಾಯಿ ಕ್ಲಬ್ ಸೇರಿದ ‘ಧುರಂಧರ್ 2’ ಸಿನಿಮಾ

‘ಧುರಂಧರ್ 2’ ಸಿನಿಮಾ ಆ್ಯಕ್ಷನ್ ಓರಿಯೆಂಟೆಡ್ ಚಿತ್ರ. ಈ ಸಿನಿಮಾ ಎ ಪ್ರಮಾಣಪತ್ರ ಪಡೆದಿದೆ. ಹೀಗಾಗಿ, ಎಲ್ಲಾ ವಯಸ್ಸಿನವರೂ ಸಿನಿಮಾ ನೋಡಲು ಸಾಧ್ಯವಿಲ್ಲ. ಆದರೆ, ‘ಲವ್ ಮಾಕ್ಟೇಲ್ 3’ ಸಿನಿಮಾ ಆ ರೀತಿ ಅಲ್ಲ. ಈ ಕಾರಣಕ್ಕೆ ಸಿನಿಮಾ ‘ಧುರಂಧರ್ 3’ ಚಿತ್ರದ ಎದುರು ರಿಲೀಸ್ ಆದರೂ ಒಳ್ಳೆಯ ಗಳಿಕೆ ಮಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವ್ಯಕ್ತಿಗೆ ಬಲವಂತವಾಗಿ ಮೂತ್ರ ಕುಡಿಸಿದ ಹಳ್ಳಿ ಜನ

ಲಾತೇಹಾರ್, ಮಾರ್ಚ್​ 20: ವ್ಯಕ್ತಿಯೊಬ್ಬರಿಗೆ ಹಳ್ಳಿಯ ಜನರು ಬಲವಂತವಾಗಿ ಮೂತ್ರ ಕುಡಿಸಿರುವ ಘಟನೆ ಜಾರ್ಖಂಡ್​​ನ ಲಾತೇಹಾರ್​​ ಜಿಲ್ಲೆಯಲ್ಲಿ ನಡೆದಿದೆ. ವೃದ್ಧರೊಬ್ಬರು ಮಾಟಮಂತ್ರ(Witchcraft) ಮಾಡುತ್ತಿದ್ದಾರೆ ಎಂದು ಆರೋಪಿಸಿ ಅವರಿಗೆ ಮೂತ್ರ ಕುಡಿಸಿದ್ದಾರೆ. ಗ್ರಾಮದಲ್ಲಿ ಇತ್ತೀಚೆಗೆ ನಡೆದ ರಸ್ತೆ ಅಪಘಾತಕ್ಕೂ ಹಾಗೂ ಅವರಿಗೂ ಸಂಬಂಧ ಕಲ್ಪಿಸಿ ಈ ಕೃತ್ಯವೆಸಗಿದ್ದಾರೆ. ಮಗ ಬ್ರಜೇಶ್ ಮುಂಡಾ ಅವರ ಪ್ರಕಾರ, ಈ ಘಟನೆ ಮಂಗಳವಾರ ನಡೆದಿದೆ. ರಸ್ತೆ ಅಪಘಾತದಲ್ಲಿ ಮಹಿಳೆಯೊಬ್ಬರ ಸಾವಿಗೆ ವೀರೇಂದ್ರ ಸಿಂಗ್ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಅವರು ಮಾಟಮಂತ್ರದ ಮೂಲಕ ಇದನ್ನು ಮಾಡಿಸಿದ್ದಾರೆ ಎಂದು ದೂರಿದ್ದಾರೆ. ಸುಮಾರು 15 ಗ್ರಾಮಸ್ಥರು ಸಭೆ ನಡೆಸಿ, ವೃದ್ಧರೊಬ್ಬರ ಮೇಲೆ ಮಾಟಮಂತ್ರದ ಆರೋಪ ಹೊರಿಸಿ, ಮೂತ್ರ ಸೇವಿಸುವಂತೆ ಒತ್ತಾಯಿಸಿದ್ದಾರೆ.

ಗ್ರಾಮಸ್ಥರು ತನ್ನ ತಾಯಿಯ ಬಳಿ ಕೂಡ ಮೂತ್ರ ಕುಡಿಯುವಂತೆ ಒತ್ತಾಯಿಸಲು ಪ್ರಯತ್ನಿಸಿದ್ದಾರೆ, ಆದರೆ ಆಕೆಗೆ ಅವಮಾನವಾಗದಂತೆ ತಡೆಯಲು ತಾನು ಮಧ್ಯಪ್ರವೇಶಿಸಿದ್ದೇನೆ ಎಂದು ಮುಂಡಾ ಹೇಳಿದ್ದಾರೆ. ಘಟನೆಯ ಸಮಯದಲ್ಲಿ, ಸಮುದಾಯ ಆರೋಗ್ಯ ಕಾರ್ಯಕರ್ತೆ ಹೀನಾ ದೇವಿ ಗ್ರಾಮಸ್ಥರನ್ನು ತಡೆಯಲು ಪ್ರಯತ್ನಿಸಿದ್ದಾರೆ.

ಮತ್ತಷ್ಟು ಓದಿ: ಗಂಡ-ಹೆಂಡತಿಯನ್ನು ಜೀವಂತವಾಗಿ ಸುಟ್ಟುಹಾಕಿದ ಗ್ರಾಮಸ್ಥರು; ಕಾರಣ ಕೇಳಿದರೆ ಶಾಕ್ ಆಗ್ತೀರ

ಆರೋಪಗಳ ನಂತರ, ವೃದ್ಧ ವ್ಯಕ್ತಿ ದೂರು ದಾಖಲಿಸಲು ನೇತರ್ಹತ್ ಪೊಲೀಸ್ ಠಾಣೆಗೆ ಹೋಗಿದ್ದರು, ಅವರನ್ನು ವಾಪಸ್ ಕಳುಹಿಸಲಾಗಿದೆ ಎಂದು ವರದಿಯಾಗಿದೆ. ಔಪಚಾರಿಕ ದೂರು ದಾಖಲಾದ ನಂತರ ಈ ವಿಷಯವನ್ನು ತನಿಖೆ ಮಾಡಲು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಠಾಣೆಯ ಉಸ್ತುವಾರಿಗೆ ನಿರ್ದೇಶಿಸಲಾಗಿದೆ ಎಂದು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ವಿಪಿನ್ ಕುಮಾರ್ ದುಬೆ ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಗ್ರಾಮಸ್ಥರನ್ನು ವಿಚಾರಣೆ ಮಾಡಲು ಪ್ರಾರಂಭಿಸಿದ್ದಾರೆ ಎಂದು ಎಸ್ಪಿ ಕುಮಾರ್ ಗೌರವ್ ದೃಢಪಡಿಸಿದ್ದಾರೆ ಆದರೆ ಪ್ರಕರಣವನ್ನು ಇನ್ನೂ ಅಧಿಕೃತವಾಗಿ ಪರಿಶೀಲಿಸಬೇಕಾಗಿದೆ ಎಂದು ಹೇಳಿದರು.

ದೂರು ಬಂದ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಸೂಚಿಸಿದ್ದರೂ, ಇಲ್ಲಿಯವರೆಗೆ ಯಾವುದೇ ಔಪಚಾರಿಕ ದೂರು ದಾಖಲಾಗಿಲ್ಲ. ಅಧಿಕಾರಿಗಳು ಗ್ರಾಮಸ್ಥರು ತನಿಖೆಗೆ ಸಹಕರಿಸುವಂತೆ ಒತ್ತಾಯಿಸಿದ್ದಾರೆ ಮತ್ತು ಹಲ್ಲೆ ಮತ್ತು ಬೆದರಿಕೆಗೆ ಒಳಗಾದವರ ವಿರುದ್ಧ ಕಠಿಣ ಕಾನೂನು ಕ್ರಮಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ತುಮಕೂರು: ವಿಚಾರಣೆಗೆಂದು ಠಾಣೆಗೆ ಕರೆತಂದ ವ್ಯಕ್ತಿ ಲಾಕಪ್​​​ನಲ್ಲೇ ಡೆತ್? ಕೆರಳಿದ ಗ್ರಾಮಸ್ಥರು..!

ತುಮಕೂರು, ಮಾ.20: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆಂದು ಕರೆತಂದಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಪೊಲೀಸರ ಹಲ್ಲೆಯಿಂದಲೇ ಸಾವು ಸಂಭವಿಸಿದೆ ಎಂದು ಆರೋಪಿಸಿ ಗ್ರಾಮಸ್ಥರು ಠಾಣೆಯೊಳಗೆ ಶವವಿಟ್ಟು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಯುಗಾದಿ ಹಬ್ಬದ ಸಂಭ್ರಮದಲ್ಲಿದ್ದ ಯಳನಾಡು ಗ್ರಾಮದಲ್ಲಿ ನಿನ್ನೆ ಸಂಜೆ ಜೂಜಾಟ ನಡೆಯುತ್ತಿದೆ ಎಂಬ ದೂರು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾವಿಸಿದ ಹುಳಿಯಾರು ಪೊಲೀಸರು, ಸಿದ್ಧರಾಮೇಶ್ವರ ದೇವಸ್ಥಾನದ ಗುಡಿಗೌಡರಾದ ಕಾಂತರಾಜು ಸೇರಿದಂತೆ ಆರು ಮಂದಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದರು.ಪೊಲೀಸರು ವಿಚಾರಣೆ ನಡೆಸುವ ವೇಳೆ ಕಾಂತರಾಜು ಅವರ ಮೇಲೆ ಹಲ್ಲೆ ಮಾಡಿದ್ದಾರೆ, ಇದರಿಂದ ಅವರು ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂಬುದು ಮೃತನ ಗೆಳೆಯರು ಮತ್ತು ಗ್ರಾಮಸ್ಥರ ಗಂಭೀರ ಆರೋಪವಾಗಿದೆ.

ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಯಳನಾಡು ಗ್ರಾಮಸ್ಥರು ಠಾಣೆಗೆ ಮುತ್ತಿಗೆ ಹಾಕಿ, ಶವವನ್ನು ಠಾಣೆಯೊಳಗೇ ಇಟ್ಟು ಪೊಲೀಸರ ವಿರುದ್ಧ ಘೋಷಣೆ ಕೂಗಿದರು.ಘಟನಾ ಸ್ಥಳಕ್ಕೆ ಮಾಜಿ ಸಚಿವ ಮಾಧುಸ್ವಾಮಿ ಭೇಟಿ ನೀಡಿ ಗ್ರಾಮಸ್ಥರ ಅಹವಾಲು ಆಲಿಸಿದರು. ತುಮಕೂರು ಎಸ್ಪಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಕರ್ನಾಟಕ ವಾಯು ಗುಣಮಟ್ಟ: ಮಲೆನಾಡಿನಲ್ಲಿ ಶುದ್ಧ ಗಾಳಿ! ನಿಮ್ಮ ನಗರದ AQI ಎಷ್ಟಿದೆ?

ಪೊಲೀಸರ ಮಾಹಿತಿ ಪ್ರಕಾರ, ಸಂಜೆ 5 ಗಂಟೆಗೆ ಆರು ಮಂದಿಯನ್ನು ಕರೆತರಲಾಗಿತ್ತು. ರಾತ್ರಿ 8:30ಕ್ಕೆ ವಿಚಾರಣೆ ಮುಗಿಸಿ ಕಳುಹಿಸಿದ ಬಳಿಕ ಕಾಂತರಾಜು ಅವರು ಠಾಣೆಯಿಂದ ಹೊರಬಂದ ಮೇಲೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸದ್ಯ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಯುತ್ತಿದ್ದು, ಮೃತರ ಕುಟುಂಬಸ್ಥರಿಂದ ದೂರು ಪಡೆಯುವ ಪ್ರಕ್ರಿಯೆ ಮುಂದುವರಿದಿದೆ ಎಂದು ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದೇವರ ವಿಗ್ರಹ ಅಥವಾ ಫೋಟೋ ಶುಚಿಗೊಳಿಸುವ ಮುನ್ನ ಈ ವಿಷಯ ತಿಳಿದುಕೊಳ್ಳಿ

ಪ್ರತಿಯೊಂದು ಮನೆಯ ಪೂಜಾ ಕೊಠಡಿಯು ಅತ್ಯಂತ ಪವಿತ್ರವಾದ ಸ್ಥಳವಾಗಿದೆ. ಆದರೆ ದೇವರ ವಿಗ್ರಹಗಳು ಮತ್ತು ಫೋಟೋಗಳನ್ನು ಯಾವಾಗ ಬೇಕೆಂದರೆ ಆಗ ಸ್ವಚ್ಛಗೊಳಿಸಬಾರದು ಎಂದು ಶಾಸ್ತ್ರಗಳು ಮತ್ತು ಹಿರಿಯರು ಹೇಳುತ್ತಾರೆ. ಸಾಮಾನ್ಯವಾಗಿ ತಿಂಗಳಿಗೊಮ್ಮೆ ದೇವರ ವಿಗ್ರಹಗಳನ್ನು ಸ್ವಚ್ಛಗೊಳಿಸುವುದು ಶುಭಕರ. ಆದರೆ ಈ ಕಾರ್ಯವನ್ನು ಮಂಗಳವಾರ ಮತ್ತು ಶುಕ್ರವಾರದಂದು ಮಾಡಬಾರದು. ಅದರಂತೆ ಅಮಾವಾಸ್ಯೆ, ಏಕಾದಶಿ ಮತ್ತು ದ್ವಾದಶಿ ತಿಥಿಗಳಂದು ಕೂಡ ವಿಗ್ರಹಗಳನ್ನು ಸ್ಥಳಾಂತರಿಸುವುದು ಅಥವಾ ಶುಚಿಗೊಳಿಸುವುದು ನಿಷಿದ್ಧ. ಈ ಐದು ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಪಂಚಾಂಗವನ್ನು ಗಮನಿಸಿ ಶುಚಿಗೊಳಿಸುವ ಕಾರ್ಯ ಕೈಗೊಳ್ಳುವುದು ಸೂಕ್ತ ಎಂದು ಆಧ್ಯಾತ್ಮಿಕ ವಿದ್ವಾಂಸರು ಸಲಹೆ ನೀಡುತ್ತಾರೆ.

ವಿಗ್ರಹಗಳು ಹೊಳೆಯುವಂತೆ ಮಾಡುವ ಸುಲಭ ವಿಧಾನಗಳು:

ಪೂಜಾ ಸಮಯದಲ್ಲಿ ನಿರಂತರವಾಗಿ ಧೂಪ, ದೀಪ ಮತ್ತು ಕರ್ಪೂರ ಬಳಸುವುದರಿಂದ ವಿಗ್ರಹಗಳು ಹಾಗೂ ಫೋಟೋಗಳು ಜಿಗುಟಾಗುವುದು ಸಹಜ. ಇವುಗಳನ್ನು ಮತ್ತೆ ಹೊಳೆಯುವಂತೆ ಮಾಡಲು ನೈಸರ್ಗಿಕ ವಿಧಾನಗಳು ಅತ್ಯುತ್ತಮ. ಹುಣಸೆಹಣ್ಣಿನ ತಿರುಳು ಅಥವಾ ಹುಣಸೆಹಣ್ಣಿಗೆ ಸ್ವಲ್ಪ ಉಪ್ಪು ಸೇರಿಸಿ ವಿಗ್ರಹಗಳನ್ನು ಉಜ್ಜುವುದರಿಂದ ಅವು ಹೊಸದರಂತೆ ಕಂಗೊಳಿಸುತ್ತವೆ. ಹಿಂದೆ ಸುಟ್ಟ ಹುಲ್ಲಿನ ಬೂದಿಯನ್ನು ಕೂಡ ಬಳಸಲಾಗುತ್ತಿತ್ತು. ದೇವರ ಫೋಟೋಗಳನ್ನು ಮೊದಲು ಒದ್ದೆ ಬಟ್ಟೆಯಿಂದ ಒರೆಸಿ, ನಂತರ ಒಣಗಿದ ಮೇಲೆ ಸ್ವಲ್ಪ ಶ್ರೀಗಂಧದ ಪುಡಿಯನ್ನು ಉಜ್ಜಿದರೆ ಅವುಗಳಿಗೆ ವಿಶೇಷ ಕಳೆ ಬರುತ್ತದೆ. ಇನ್ನು ಅರಿಶಿನ-ಕುಂಕುಮ ಉದುರಿ ಹೋಗದಂತೆ ಇರಲು, ಅದಕ್ಕೆ ಸ್ವಲ್ಪ ಹಸುವಿನ ತುಪ್ಪ ಅಥವಾ ಎಳ್ಳೆಣ್ಣೆಯನ್ನು ಬೆರೆಸಿ ಹಚ್ಚುವುದು ಒಂದು ಉತ್ತಮ ತಂತ್ರವಾಗಿದೆ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಪೂಜೆಗೆ ಬಳಸಿದ ಹೂವುಗಳನ್ನು ಏನು ಮಾಡಬೇಕು?

ಪೂಜೆಗೆ ಬಳಸಿದ ಹೂವುಗಳನ್ನು ಏನು ಮಾಡಬೇಕು ಎಂಬ ಗೊಂದಲ ಅನೇಕರಲ್ಲಿ ಇರುತ್ತದೆ. ಹೂವುಗಳು ಬಾಡದಿದ್ದರೂ ಸಹ, ನಿನ್ನೆಯ ಹೂವುಗಳನ್ನು ಇಂದಿನ ಪೂಜೆಗೆ ಬಳಸಬಾರದು. ಬಳಸಿದ ಹೂವುಗಳು ಮತ್ತು ಮಾವಿನ ಎಲೆಗಳನ್ನು ಎಲ್ಲೆಂದರಲ್ಲಿ ಎಸೆಯುವುದು ಅಥವಾ ಕಾಲು ಬೀಳುವ ಜಾಗದಲ್ಲಿ ಹಾಕುವುದು ತಪ್ಪು. ಇವುಗಳನ್ನು ಗಿಡಗಳ ಬುಡದಲ್ಲಿ ಅಥವಾ ಅಂಗಳದ ಒಂದು ಮೂಲೆಯಲ್ಲಿ ಮಣ್ಣಿನಡಿ ಹೂತು ಹಾಕಬೇಕು. ಇದು ಕಾಲಕ್ರಮೇಣ ಅತ್ಯುತ್ತಮ ಸಾವಯವ ಗೊಬ್ಬರವಾಗಿ ಬದಲಾಗುತ್ತದೆ, ಜೊತೆಗೆ ಪರಿಸರಕ್ಕೂ ಪೂರಕವಾಗಿರುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೊದಲ ದಿನವೇ 250 ಕೋಟಿ ರೂಪಾಯಿ ಕ್ಲಬ್ ಸೇರಿದ ‘ಧುರಂಧರ್ 2’ ಸಿನಿಮಾ

‘ಧುರಂಧರ್ 2’ ಸಿನಿಮಾ (Dhurandhar 2 Movie) ದಾಖಲೆಯ ಮೇಲೆ ದಾಖಲೆ ಬರೆದಿದೆ. ಮೊದಲ ದಿನವೇ ಚಿತ್ರ ಅದ್ಭುತ ಯಶಸ್ಸು ಕಂಡಿದೆ. ಈ ಚಿತ್ರದ ಒಟ್ಟಾರೆ ಕಲೆಕ್ಷನ್ 250 ಕೋಟಿ ರೂಪಾಯಿ ಸಮೀಪಿಸಿದೆ. ಇದು ಚಿತ್ರದ ಅಬ್ಬರವನ್ನು ತೋರಿಸುತ್ತದೆ. ಸಿನಿಮಾದ ಒಟ್ಟಾರೆ ಕಲೆಕ್ಷನ್ ಎಷ್ಟಾಗಲಿದೆ ಎಂಬ ಕುತೂಹಲ ಮೂಡಿದೆ. ಭಾರತ ಚಿತ್ರರಂಗದ ಇತಿಹಾಸದಲ್ಲೇ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಆಗಿ ಇದು ಬದಲಾಗಲಿದೆಯೇ ಎಂಬ ಕುತೂಹಲ ಮೂಡಿದೆ.

‘ಧುರಂಧರ್ 2’ ಸಿನಿಮಾದಲ್ಲಿ ರಣವೀರ್ ಸಿಂಗ್ ನಟಿಸಿದ್ದಾರೆ. ಈ ಚಿತ್ರದುದ್ದಕ್ಕೂ ಅವರೇ ಹೈಲೈಟ್ ಆಗುತ್ತಾರೆ. ಸಂಜಯ್ ದತ್ ಅರ್ಜುನ್ ರಾಮ್​​ಪಾಲ್ ಸೇರಿದಂತೆ ಅನೇಕರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಗಳಿಕ ವಿವರ ಸಿಕ್ಕಿದೆ.

‘ಧುರಂಧರ್ 2’ ಸಿನಿಮಾ ಪ್ರೀಮಿಯರ್ ಹಾಗೂ ಮೊದಲ ದಿನದ ಕಲೆಕ್ಷನ್ ಸೇರಿದರೆ 236 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಇದರಲ್ಲಿ ಭಾರತದಿಂದ 172 ಕೋಟಿ ರೂಪಾಯಿ ಹಾಗೂ ವಿದೇಶದಿಂದ 64 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಭಾರತದ ನೆಟ್ ಕಲೆಕ್ಷನ್ 140 ಕೋಟಿ ರೂಪಾಯಿ ಇದೆ ಎಂದು sacnilk ವರದಿ ಮಾಡಿದೆ.

ಈ ಸಿನಿಮಾ ಮಾರ್ಚ್ 19ರಂದು ಸಿನಿಮಾ ಹಿಂದಿಯಲ್ಲಿ 103 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ಅತಿ ದೊಡ್ಡ ಓಪನಿಂಗ್ ಪಡೆದ ಹಿಂದಿ ಚಿತ್ರ ಎಂಬ ಹೆಗ್ಗಳಿಕೆ ಈ ಸಿನಿಮಾಗೆ ಬಂದಿದೆ. ‘ಧುರಂಧರ್ 2’ ಪ್ರೀಮಿಯರ್ ಶೋನಿಂದ 40 ಕೋಟಿ ರೂಪಾಯಿ ಗಳಿಸುತ್ತು. ಈ ಸಿನಿಮಾ ಅನಾಯಾಸವಾಗಿ 2000 ಕೋಟಿ ರೂಪಾಯಿ ಕ್ಲಬ್ ಸೇರುವ ಎಲ್ಲಾ ಲಲಕ್ಷಣ ಗೋಚರವಾಗಿದೆ. ಈ ಸಿನಿಮಾಗೆ ಬರೋಬ್ಬರಿ 34 ಸಾವಿರ ಶೋಗಳು ಸಿಕ್ಕಿದ್ದವು ಎಂಬುದು ವಿಶೇಷ.

ಇದನ್ನೂ ಓದಿ: ಅಬ್ಬಬ್ಬಾ, ಪೇಯ್ಡ್​ ಪ್ರೀಮೀಯರ್​ನಿಂದ ‘ಧುರಂಧರ್ 2’ ಸಿನಿಮಾ ಗಳಿಸಿದ್ದು ಇಷ್ಟೊಂದಾ?

‘ಧುರಂಧರ್’ ಸಿನಿಮಾ ಹಲವು ದಾಖಲೆಗಳನ್ನು ಮಾಡಿತ್ತು. ಇದು ಸೀಕ್ವಲ್​​ಗೆ ಸಹಕಾರಿ ಆಗುತ್ತಿದೆ. ಈ ಕಾರಣದಿಂದಲೇ ಚಿತ್ರದ ಕಲೆಕ್ಷನ್ ಜೋರಾಗಿದೆ. ಈ ಚಿತ್ರದ ಮೂಲಕ ನಿರ್ಮಾಪಕರು ದೊಡ್ಡ ಮಟ್ಟದಲ್ಲಿ ಲಾಭ ಮಾಡುವ ಸೂಚನೆ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕರ್ನಾಟಕ ವಾಯು ಗುಣಮಟ್ಟ: ಮಲೆನಾಡಿನಲ್ಲಿ ಶುದ್ಧ ಗಾಳಿ! ನಿಮ್ಮ ನಗರದ AQI ಎಷ್ಟಿದೆ?

ಬೆಂಗಳೂರು, ಮಾ.20: ಬೇಸಿಗೆಯ ಬಿಸಿಲಿನ ತೀವ್ರತೆ ಹೆಚ್ಚಾಗುತ್ತಿದ್ದಂತೆ ಕರ್ನಾಟಕದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟದಲ್ಲಿ ಏರುಪೇರು ಕಂಡುಬರುತ್ತಿದೆ. ವಾಹನ ಸಂಚಾರ ಮತ್ತು ಧೂಳಿನ ಪ್ರಮಾಣ ಹೆಚ್ಚಾಗಿರುವುದರಿಂದ ರಾಜಧಾನಿ ಬೆಂಗಳೂರಿನ ಕೆಲವು ಭಾಗಗಳಲ್ಲಿ ಗಾಳಿಯ ಗುಣಮಟ್ಟ ‘ಸಾಧಾರಣ’ ಮಟ್ಟಕ್ಕೆ ಕುಸಿದಿದೆ. ಸಿಲ್ಕ್ ಬೋರ್ಡ್, ಪೀಣ್ಯ ಮತ್ತು ವೈಟ್‌ಫೀಲ್ಡ್ ಭಾಗಗಳಲ್ಲಿ ಮಾಲಿನ್ಯದ ಮಟ್ಟ ಕೊಂಚ ಹೆಚ್ಚಾಗಿದೆ. ಉಸಿರಾಟದ ತೊಂದರೆ ಇರುವವರು ಹೊರಬರುವಾಗ ಮಾಸ್ಕ್ ಧರಿಸುವುದು ಸೂಕ್ತ.

ಮೈಸೂರಿನಲ್ಲಿ ಇಂದು AQI ಮಟ್ಟ 55 – 75 ಇದೆ. ಇದು ಉತ್ತಮ ಗಾಳಿಯ ಮಟ್ಟವಾಗಿದೆ. ಸಾಂಸ್ಕೃತಿಕ ನಗರಿಯ ಗಾಳಿಯ ಗುಣಮಟ್ಟ ತೃಪ್ತಿದಾಯಕವಾಗಿದೆ. ಹುಬ್ಬಳ್ಳಿ-ಧಾರವಾಡ ಗಾಳಿಯ ಮಟ್ಟ 85 – 105 ಇದೆ. ರಸ್ತೆ ಕಾಮಗಾರಿ ಮತ್ತು ಒಣ ಹವಾಮಾನದಿಂದಾಗಿ ಧೂಳಿನ ಕಣಗಳ ಪ್ರಮಾಣ ಹೆಚ್ಚಿದೆ. ಮಂಗಳೂರಿನಲ್ಲಿ ಇಂದು ಗಾಳಿಯ ಮಟ್ಟ 45 – 60 ಉತ್ತಮವಾಗಿದೆ. ಸಮುದ್ರ ತೀರದ ಗಾಳಿಯು ಶುದ್ಧವಾಗಿದ್ದು, ಆರೋಗ್ಯಕ್ಕೆ ಪೂರಕವಾಗಿದೆ.

ಶಿವಮೊಗ್ಗ ಮತ್ತು ಕೊಡಗಿನಲ್ಲಿ ಇಂದು ಗಾಳಿಯ ಮಟ್ಟ 30 – 50 ಉತ್ತಮವಾಗಿದೆ. ಮಲೆನಾಡು ಭಾಗದಲ್ಲಿ ವಾಯು ಮಾಲಿನ್ಯ ಅತ್ಯಂತ ಕನಿಷ್ಠ ಮಟ್ಟದಲ್ಲಿದೆ. ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ವಾಯು ಗುಣಮಟ್ಟ ಅತ್ಯಂತ ಉತ್ತಮವಾಗಿದ್ದು, ಆರೋಗ್ಯಕ್ಕೆ ಪೂರಕವಾಗಿದೆ.AQI 100 ದಾಟಿದ ನಗರಗಳಲ್ಲಿ ಹಿರಿಯ ನಾಗರಿಕರು ಮತ್ತು ಮಕ್ಕಳು ಬೆಳಗಿನ ಜಾವ ಹೊರಾಂಗಣ ವ್ಯಾಯಾಮ ಮಾಡುವಾಗ ಎಚ್ಚರಿಕೆ ವಹಿಸುವುದು ಉತ್ತಮ.

ಇದನ್ನೂ ಓದಿ: ಕರ್ನಾಟಕ ಹವಾಮಾನ: ಬೆಂಗಳೂರಿನಲ್ಲಿ ಹೆಚ್ಚಿದ ಸೆಕೆ; ಉತ್ತರ ಕರ್ನಾಟಕದಲ್ಲಿ ಸೂರ್ಯನ ಪ್ರತಾಪ! ಮಳೆಯ ಮುನ್ಸೂಚನೆ ಇದೆಯೇ?

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

ಉತ್ತಮ- 0-50

ಮಧ್ಯಮ – 50-100

ಕಳಪೆ – 100-150

ಅನಾರೋಗ್ಯಕರ – 150-200

ಗಂಭೀರ – 200 – 300

ಅಪಾಯಕಾರಿ – 300 -500+

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಲ್​ಪಿಜಿ ಗ್ಯಾಸ್ ಸಮಸ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ! ಪೆಟ್ರೋಲ್ ಡೀಸೆಲ್​ಗೂ ಎದುರಾಗಲಿದೆ ಅಭಾವ? ಇಲ್ಲಿದೆ ಬಲವಾದ ಕಾರಣ

ನವದೆಹಲಿ/ಬೆಂಗಳೂರು, ಮಾರ್ಚ್ 20: ಮಧ್ಯಪ್ರಾಚ್ಯದಲ್ಲಿ ತೀವ್ರಗೊಳ್ಳುತ್ತಿರುವ ಯುದ್ಧದ ಪರಿಣಾಮ ಭಾರತದಲ್ಲಿ (India) ಎಲ್‌ಪಿಜಿ (LPG) ಗ್ಯಾಸ್ ಕೊರತೆ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಎದುರಾಗಿದೆ. ಇದುವರೆಗೆ ಹೊರ್ಮುಝ್ ಜಲಸಂಧಿ ಸಮಸ್ಯೆಯಿಂದ ಅಡಚಣೆ ಉಂಟಾಗಿದೆ ಎನ್ನಲಾಗುತ್ತಿತ್ತು. ಆ ಮಾರ್ಗದ ಮೂಲಕ ಗ್ಯಾಸ್ ತುಂಬಿದ ಹಡಗುಗಳು ಬರುವಂತೆ ಮಾಡಲು ಕೇಂದ್ರ ಸರ್ಕಾರ ಹೇಗೋ ವ್ಯವಸ್ಥೆ ಮಾಡಿದೆ. ಆದರೆ ಇದೀಗ ಗಲ್ಫ್ ರಾಷ್ಟ್ರಗಳ ತೈಲ ಹಾಗೂ ಅನಿಲ ಉತ್ಪಾದನಾ ಘಟಕಗಳ ಮೇಲಿನ ದಾಳಿಗಳಿಂದ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ.

ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿದ್ದಂತೆಯೇ ಗಲ್ಫ್ ಪ್ರದೇಶದ ಅನೇಕ ತೈಲ ಹಾಗೂ ಗ್ಯಾಸ್ ಘಟಕಗಳು ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸಿರುವ ಬಗ್ಗೆ ವರದಿಗಳಾಗಿವೆ. ಸೌದಿ ಅರೇಬಿಯಾದ ಅರಾಮ್ಕೋ, ಕತಾರ್‌ನ ರಾಸ್ ಲಫಾನ್ ಅನಿಲ ಘಟಕ ಸೇರಿದಂತೆ ಪ್ರಮುಖ ಉತ್ಪಾದನಾ ಕೇಂದ್ರಗಳು ಹಾನಿಗೊಳಗಾಗಿದ್ದು, ಉತ್ಪಾದನೆ ಮತ್ತು ಪೂರೈಕೆಗೆ ದೊಡ್ಡ ಹೊಡೆತ ಬಿದ್ದಿದೆ.

ಕತಾರ್‌ನ ‘ಪರ್ಲ್ ಜಿಟಿಎಲ್’ ಘಟಕ ಸ್ಥಗಿತ

ವಿಶೇಷವಾಗಿ, ಜಗತ್ತಿನ ಅತಿದೊಡ್ಡ ಗ್ಯಾಸ್ ಟು ಲಿಕ್ವಿಡ್ ಘಟಕಗಳಲ್ಲಿ ಒಂದಾದ ಕತಾರ್‌ನ ‘ಪರ್ಲ್ ಜಿಟಿಎಲ್’ ಘಟಕ ಸ್ಥಗಿತಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಭಾರತಕ್ಕೆ ಕತಾರ್ ಪ್ರಮುಖ ಎಲ್‌ಪಿಜಿ ಮತ್ತು ಎಲ್‌ಎನ್‌ಜಿ ಪೂರೈಕೆದಾರ ರಾಷ್ಟ್ರವಾಗಿದ್ದು, ಭಾರತದ ಒಟ್ಟು ಗ್ಯಾಸ್ ಅವಶ್ಯಕತೆಯ ಶೇ 50ರಷ್ಟು ಭಾಗವನ್ನು ಆಮದು ಮಾಡಿಕೊಳ್ಳುತ್ತದೆ.

ಕತಾರ್-ಭಾರತ ಮಧ್ಯೆ ಹೆಚ್ಚಿನ ವಹಿವಾಟು

ಪೆಟ್ರೋನೆಟ್ LNG ಮತ್ತು ಸರ್ಕಾರಿ ಸ್ವಾಮ್ಯದ GAIL ಕಂಪನಿಗಳು ಕತಾರ್ ಜತೆ ದೀರ್ಘಾವಧಿಯ ಒಪ್ಪಂದಗಳನ್ನು ಹೊಂದಿವೆ. ಪೆಟ್ರೋನೆಟ್‌ಗೆ ವರ್ಷಕ್ಕೆ 7.5 ಮಿಲಿಯನ್ ಟನ್ LNG ಪೂರೈಕೆ ಆಗುತ್ತಿದ್ದು, ಆಯಿಲ್ ಮಾರ್ಕೆಟಿಂಗ್ ಕಂಪನಿಗಳಿಗೆ 5 ಮಿಲಿಯನ್ ಮೆಟ್ರಿಕ್ ಟನ್ LPG ನೀಡಲಾಗುತ್ತದೆ. 2024-25ರಲ್ಲಿ ಕತಾರ್ ಭಾರತಕ್ಕೆ 6.39 ಬಿಲಿಯನ್ ಡಾಲರ್ ಮೌಲ್ಯದ LNG ಹಾಗೂ 3.21 ಬಿಲಿಯನ್ ಡಾಲರ್ ಮೌಲ್ಯದ LPG ರಫ್ತು ಮಾಡಿತ್ತು.

ಇದಲ್ಲದೆ, ಸೌದಿ ಅರೇಬಿಯಾದ ಯಾನ್ಬು ಪ್ರದೇಶದಲ್ಲಿರುವ SAMREF ತೈಲ ಸಂಸ್ಕರಣಾ ಘಟಕದ ಮೇಲಿನ ದಾಳಿಯಿಂದ ತೈಲ ಪೂರೈಕೆಯ ಮೇಲೂ ಪರಿಣಾಮ ಬಿದ್ದಿದೆ. ಹೊರ್ಮುಝ್ ಜಲಸಂಧಿ ಭಾಗಶಃ ಅಸ್ತವ್ಯಸ್ತವಾಗಿರುವ ಹಿನ್ನೆಲೆ, ಪರ್ಯಾಯ ಮಾರ್ಗಗಳಿಂದ ಸಾಗುತ್ತಿದ್ದ ತೈಲ ಪೂರೈಕೆಯೂ ಈಗ ಅಡಚಣೆಗೆ ಒಳಗಾಗಿದೆ.

ಪೆಟ್ರೋಲ್, ಡೀಸೆಲ್ ದರ ಏರಿಕೆ?

ಈ ಬೆಳವಣಿಗೆಗಳ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 119 ಡಾಲರ್‌ವರೆಗೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಭಾರತದಲ್ಲಿಯೂ ಪೆಟ್ರೋಲ್, ಡೀಸೆಲ್ ದರ ಏರಿಕೆಯ ಭೀತಿ ಎದುರಾಗಿದೆ.

ಈಗಾಗಲೇ ಕರ್ನಾಟಕದಲ್ಲಿ ಎಲ್‌ಪಿಜಿ ಕೊರತೆಯಿಂದ ಹೋಟೆಲ್ ಉದ್ಯಮ ತತ್ತರಿಸಿ ಹೋಗಿದ್ದು, ಹಲವೆಡೆ ಹೋಟೆಲ್‌ಗಳು ಬಾಗಿಲು ಮುಚ್ಚಿವೆ. ಕೈಗಾರಿಕೆಗಳು ಮತ್ತು ಸಣ್ಣ ಉದ್ಯಮಗಳ ಮೇಲೂ ಪರಿಣಾಮ ಬೀಳುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.

1973 ರಲ್ಲಿ ಏನಾಗಿತ್ತು ಗೊತ್ತಾ?

ತಜ್ಞರ ಪ್ರಕಾರ, ಇಂದಿನ ಪರಿಸ್ಥಿತಿ 1973ರ ಜಾಗತಿಕ ತೈಲ ಬಿಕ್ಕಟ್ಟನ್ನು ನೆನಪಿಸುವಂತಿದ್ದು, ಆಗಿನಂತೆಯೇ ತೈಲ ಪೂರೈಕೆ ಸಂಪೂರ್ಣ ಸ್ಥಗಿತಗೊಂಡರೆ ಜಗತ್ತಿನ ಆರ್ಥಿಕ ವ್ಯವಸ್ಥೆಯ ಮೇಲೂ ಗಂಭೀರ ಪರಿಣಾಮ ಬೀಳಬಹುದು.

ಇದನ್ನೂ ಓದಿ: ಒಮಾನ್‌ ಗಲ್ಫ್‌ನತ್ತ ಭಾರತದ 6ಕ್ಕೂ ಹೆಚ್ಚು ಯುದ್ಧನೌಕೆ ರವಾನೆ: ಕೇಂದ್ರದ ದಿಢೀರ್ ನಿರ್ಧಾರಕ್ಕೆ ಇಲ್ಲಿದೆ ಕಾರಣ

ಒಟ್ಟಿನಲ್ಲಿ, ಗಲ್ಫ್ ಪ್ರದೇಶದ ಯುದ್ಧ ತೀವ್ರತೆ ಕಡಿಮೆಯಾಗದಿದ್ದರೆ ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳು ಮತ್ತೊಂದು ದೊಡ್ಡ ಇಂಧನ ಸಂಕಷ್ಟವನ್ನು ಎದುರಿಸಬೇಕಾಗುವ ಸಾಧ್ಯತೆ ತಲೆದೋರಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ದೈವಾರಾಧನೆಯಲ್ಲಿ ‘ಮಡಿ’ ಎಂದರೆ ಭಯವಲ್ಲ, ಅದು ಪರಮ ಶುಚಿತ್ವದ ಸಂಕೇತ!

ಬೆಂಗಳೂರು, ಮಾ.20: ಭಗವಂತನ ಆರಾಧನೆಯಲ್ಲಿ ಮಡಿಯ ಮಹತ್ವದ ಕುರಿತು ಅನೇಕ ಪ್ರಶ್ನೆಗಳು ಮೂಡುತ್ತವೆ. ಮಡಿ ಎಂದರೆ ಕೇವಲ ಸ್ವಚ್ಛತೆ ಮತ್ತು ಶುಭ್ರತೆ ಎಂದು ಅರ್ಥೈಸಬಹುದು. ಇದು ಯಾವುದೇ ಭಯಾನಕ ಪದವಲ್ಲ, ಬದಲಾಗಿ ಶುಚಿತ್ವದ ಪ್ರತೀಕವಾಗಿದೆ. ದೇವರು ಮಡಿಯನ್ನು ಕೇಳಿಲ್ಲವಾದರೂ, ಶುಭ್ರತೆ, ಸ್ವಚ್ಛ ಮನಸ್ಸು ಮತ್ತು ಒಳ್ಳೆಯ ಭಾವನೆಗಳೊಂದಿಗೆ ಭಗವಂತನನ್ನು ಆರಾಧಿಸಲು ಮಡಿಯನ್ನು ಅನುಸರಿಸಲಾಗುತ್ತದೆ. ಮಡಿಯು ಹಿಂದೂ ಸಂಪ್ರದಾಯದಲ್ಲಿ ಶುಚಿತ್ವದ ಸಂಕೇತವಾಗಿದೆ. ಹಿರಿಯರು ಮತ್ತು ಗುರುಗಳು ಇದನ್ನು ಸಂಪ್ರದಾಯವಾಗಿ ರೂಢಿಸಿಕೊಂಡು ಬಂದಿದ್ದಾರೆ. ಇದು ಭಗವಂತನಿಗೆ ಏಕಾಗ್ರತೆಯಿಂದ ಮತ್ತು ಶ್ರದ್ಧೆಯಿಂದ ಪೂಜೆ ಸಲ್ಲಿಸಲು ಎಲ್ಲರೂ ಶುಚೀರ್ಭೂತರಾಗಿರುವಂತೆ ಮಾಡುವ ಒಂದು ಪದ್ಧತಿಯಾಗಿದೆ. ಮಡಿಯು ಶ್ರದ್ಧೆ, ಭಕ್ತಿ ಮತ್ತು ಸಿಸ್ತಿನ ಪ್ರತೀಕವಾಗಿದೆ. ಇದು ಆಂತರಿಕ ಹಾಗೂ ಬಾಹ್ಯ ಶುದ್ಧತೆಗೆ ಒತ್ತು ನೀಡುತ್ತದೆ, ಭಗವಂತನೊಂದಿಗೆ ಭಕ್ತಿಯ ಬಾಂಧವ್ಯವನ್ನು ಬಲಪಡಿಸಲು ಸಹಕಾರಿಯಾಗಿದೆ. ಒಟ್ಟಾರೆ, ಮಡಿಯು ಪವಿತ್ರವಾದ ನಿಯಮ ಮತ್ತು ನಂಬಿಕೆಯ ಆಧಾರವಾಗಿದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link