All posts by nagaraj11081993

Video: ಬಾಯಾರಿದ ಮಂಗಕ್ಕೆ ನೀರು ಕುಡಿಸಿ ಮಾನವೀಯತೆ ಮೆರೆದ ಯುವಕ

Video: ಬಾಯಾರಿದ ಮಂಗಕ್ಕೆ ನೀರು ಕುಡಿಸಿ ಮಾನವೀಯತೆ ಮೆರೆದ ಯುವಕ

ಈ ಸ್ವಾರ್ಥ (selfish) ತುಂಬಿದ ಪ್ರಪಂಚದಲ್ಲಿ ಮಾನವೀಯತೆ, ಬೆಲೆಯಿಲ್ಲ ಎಂಬ ಮಾತಿದೆ. ಸ್ವಾರ್ಥ ಜನರ ನಡುವೆ ಹೃದಯವಂತ ಹಾಗೂ ಸಹಾಯ ಮಾಡುವ ಗುಣವಿರುವ ವ್ಯಕ್ತಿಗಳನ್ನು ನೋಡಿದಾಗ ನಿಜಕ್ಕೂ ಹೆಮ್ಮೆಯಾಗುತ್ತದೆ. ನಾವು ಮಾಡುವ ಸಣ್ಣ ಪುಟ್ಟ ಸಹಾಯವು ಕೂಡ ಇನ್ನೊಬ್ಬರ ಜೀವ ಉಳಿಸುತ್ತದೆ ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ. ಯುವಕನು (young man) ಮಂಗನಿಗೆ ನೀರು ಕುಡಿಸಿ ಅದರ ಬಾಯಾರಿಕೆ ನೀಗಿಸಿ ಪುಣ್ಯಾತ್ಮ ಎನಿಸಿಕೊಂಡಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಯುವಕನ ಮಾನವೀಯ ಕೆಲಸವನ್ನು ಹಾಡಿಹೊಗಳಿದ್ದಾರೆ.

Manjunath Lokapur ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಬಾಯಾರಿದ ಮಂಗವೊಂದು ನೀರಿಗಾಗಿ ಹಪತಪಿಸಿದೆ. ಇದೇ ವೇಳೆ ಯುವಕನು ನಲ್ಲಿ ನೀರು ಕುಡಿಸಿ ಮಂಗನ ಬಾಯಾರಿಕೆ ನೀಗಿಸಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

 

ಇದನ್ನೂ ಓದಿ: ಕಾಲೆರಡು ಸ್ವಾಧೀನ ಕಳೆದುಕೊಂಡ ಶ್ವಾನಕ್ಕೆ ರಸ್ತೆ ದಾಟಲು ನೆರವಾದ ವ್ಯಕ್ತಿ

ಈ ವಿಡಿಯೋ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಜೈ ಶ್ರೀರಾಮ್ ಎಂದರೆ, ಮತ್ತೊಬ್ಬರು ದೇವರು ಒಳ್ಳೆಯದು ಮಾಡಲಿ ಎಂದು ಹೇಳಿದ್ದಾರೆ. ಇನ್ನೊಬ್ಬರು, ಮೂಕ ಪ್ರಾಣಿಗಳಿಗೆ ಸಹಾಯ ಮಾಡುವ ಗುಣ ಇಷ್ಟ ಆಯ್ತು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಇರಾನ್ ಹೊಸ ವರಸೆ; ಹಾರ್ಮುಜ್ ಜಲಸಂಧಿಯಲ್ಲಿ ಟೋಲ್ ಸಂಗ್ರಹಕ್ಕೆ ಆಲೋಚನೆ

ನವದೆಹಲಿ, ಮಾರ್ಚ್ 19: ಅಮೆರಿಕ ಮತ್ತು ಇಸ್ರೇಲ್ ದಾಳಿಗಳಿಗೆ ಮತ್ತು ಬೆದರಿಕೆಗಳಿಗೆ ಬಗ್ಗೆ ಪ್ರತಿರೋಧ ವ್ಯಕ್ತಪಡಿಸುತ್ತಿರುವ ಇರಾನ್ ಇದೀಗ ಹಾರ್ಮುಜ್ ಜಲಸಂಧಿಯನ್ನು (Hormuz Strait) ಪೂರ್ಣವಾಗಿ ಹತೋಟಿಗೆ ತೆಗೆದುಕೊಂಡಿದೆ. ಜಗತ್ತಿನ ಶೇ. 20ಕ್ಕೂ ಹೆಚ್ಚು ತೈಲ ಮತ್ತು ಗ್ಯಾಸ್ ಅನ್ನು ಹಡಗುಗಳ ಮೂಲಕ ಇದೇ ಹಾರ್ಮುಜ್ ಸ್ಟ್ರೇಟ್​ನಿಂದ ಸಾಗಿಸಲಾಗುತ್ತದೆ. ಈಗ ಇದನ್ನೇ ಇರಾನ್ ತನ್ನ ಆದಾಯ ಮೂಲವಾಗಿ ಮಾಡಿಕೊಳ್ಳಲು ಆಲೋಚಿಸಿದೆ. ವರದಿಗಳ ಪ್ರಕಾರ, ಹಾರ್ಮುಜ್ ಜಲಸಂಧಿಯಿಂದ ಅರೇಬಿಯನ್ ಸಮುದ್ರ ಮುಟ್ಟಲು ಹಡಗುಗಳಿಗೆ ಸಾಗಣೆ ಅನುಮತಿ ಶುಲ್ಕ (ಟ್ರಾನ್ಸಿಟ್ ಫೀ) ವಿಧಿಸುವ ಒಂದು ಪ್ರಸ್ತಾಪವನ್ನು ಇರಾನ್ ಪರಿಗಣಿಸುತ್ತಿದೆಯಂತೆ.

ಹಾರ್ಮುಜ್ ಜಲಸಂಧಿಯು ಬಹಳ ಕಿರಿದಾದ ಜಲಮಾರ್ಗವಾಗಿದೆ. ಪರ್ಷಿಯನ್ ಗಲ್ಫ್ ಮತ್ತು ಅರಬ್ಬಿ ಸಮುದ್ರವನ್ನು ಸಂಪರ್ಕಿಸುವ ಜಲಮಾರ್ಗ ಅದು. ಸೌದಿ, ಕತಾರ್ ಇತ್ಯಾದಿ ಗಲ್ಫ್ ರಾಷ್ಟ್ರಗಳಿಂದ ತೈಲ, ಗ್ಯಾಸ್, ಹಾಗೂ ಇತರ ಸರಕುಗಳನ್ನು ಹಡಗುಗಳ ಮೂಲಕ ಇದೇ ಜಲಮಾರ್ಗದಿಂದ ಸಾಗಿಸಲಾಗುತ್ತದೆ. ಇಲ್ಲಿಂದ ಪೂರೈಕೆಯಾಗುವ ತೈಲ ಮತ್ತು ಅನಿಲದ ಮೇಲೆ ಹೆಚ್ಚಿನ ಏಷ್ಯನ್ ದೇಶಗಳು ಅವಲಂಬಿತವಾಗಿವೆ. ಗಲ್ಫ್ ರಾಷ್ಟ್ರಗಳಿಗೂ ಇದು ಪ್ರಮುಖ ಆದಾಯ ಮೂಲವಾಗಿದೆ. ಹೀಗಾಗಿ, ಇರಾನ್ ದೇಶ ಹಾರ್ಮುಜ್ ಜಲಸಂಧಿಯನ್ನು ಇಟ್ಟುಕೊಂಡು ಅಮೆರಿಕ ಹಾಗೂ ಗಲ್ಫ್ ರಾಷ್ಟ್ರಗಳಿಗೆ ಮರ್ಮಾಘಾತ ಕೊಡಲು ಅಣಿಗೊಂಡಂತಿದೆ.

ಇದನ್ನೂ ಓದಿ: ಇಂಧನ ದತ್ತಾಂಶವನ್ನು ರಾಷ್ಟ್ರೀಯ ಭದ್ರತಾ ವಿಚಾರವೆಂದು ವರ್ಗೀಕರಿಸಿದ ಸರ್ಕಾರ; ತೈಲ, ಅನಿಲ ಕ್ಷೇತ್ರದ ಸಂಸ್ಥೆಗಳಿಗೆ ಹೊಸ ಜವಾಬ್ದಾರಿ

ಒಂದು ಮಾಹಿತಿ ಪ್ರಕಾರ ಹಾರ್ಮುಜ್ ಜಲಮಾರ್ಗದಲ್ಲಿ ಒಂದು ದಿನಕ್ಕೆ 100ರಿಂದ 135 ಹಡಗುಗಳು ಹಾದು ಹೋಗುತ್ತವೆ. ಇದರಲ್ಲಿ 15-20 ತೈಲ ಟ್ಯಾಂಕರ್​ಗಳಿವೆ. ವಿಶ್ವದ ಶೇ. 20ರಷ್ಟು ತೈಲ ಸಾಗಣೆ ಇದೇ ಮಾರ್ಗದಲ್ಲಿ ಆಗುವುದು. ಹೀಗಾಗಿ, ಇರಾನ್​ಗೆ ತನ್ನ ಪ್ರಭಾವ ಮತ್ತು ಶಕ್ತಿ ಹೆಚ್ಚಿಸಿಕೊಳ್ಳಲು ಅವಕಾಶ ಸಿಕ್ಕಂತಾಗಿದೆ.

ಹಾರ್ಮುಜ್ ಜಲಸಂಧಿಯಲ್ಲಿ ತೈಲ ಅಷ್ಟೇ ಅಲ್ಲದೆ ಆಹಾರ ಮತ್ತಿತರೆ ವಸ್ತುವನ್ನು ಹೊತ್ತು ಸಾಗುವ ಎಲ್ಲಾ ದೇಶಗಳ ಹಡಗುಗಳು ಇರಾನ್​ಗೆ ಟೋಲ್ ಮತ್ತು ತೆರಿಗೆ ಪಾವತಿಸುವಂತೆ ಕಾನೂನು ತರುವಂತಹ ಮಸೂದೆಯನ್ನು ರಚಿಸಲಾಗುತ್ತಿದೆ. ಯುದ್ಧ ಮುಗಿದ ಬಳಿಕ ಹಾರ್ಮುಜ್ ಜಲಸಂಧಿಯಲ್ಲಿ ಹೊಸ ನಿಬಂಧನೆಗಳ ವ್ಯವಸ್ಥೆ ತರಲಾಗುತ್ತದೆ. ತನ್ನ ಮೇಲೆ ನಿಷೇಧ ಹೇರಿದ ದೇಶಗಳಿಗೆ ಜಲನಿರ್ಬಂಧಗಳನ್ನು ಹಾಕಲು ಇರಾನ್​ಗೆ ಅವಕಾಶ ಕೊಡುವಂತಹ ಕಾನೂನು ಇದಾಗಿರುತ್ತದೆ ಎಂದು ಇರಾನ್​ನ ಸರ್ವೋಚ್ಚ ನಾಯಕರಿಗೆ ಸಲಹೆಗಾರರಾದವರೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿರುವ ಭಾರತದ ಎಲ್​ಪಿಜಿ ಟ್ಯಾಂಕರ್​ಗಳಲ್ಲಿ ಗ್ಯಾಸ್ ಎಷ್ಟು ದಿನಕ್ಕಾಗುವಷ್ಟಿದೆ ಗೊತ್ತಾ?

ಹಾರ್ಮುಜ್ ಜಲಸಂಧಿಯ ಅಗಲ ಕೇವಲ 33 ಕಿಮೀ ಮಾತ್ರವೇ ಇರುವುದು. ಹೀಗಾಗಿ, ಹಡಗುಗಳ ಸಾಗಣೆ ಇಲ್ಲಿ ಅಷ್ಟು ಸುಗಮವಿಲ್ಲ. ಈ ಜಲಸಂಧಿಯನ್ನು ಇರಾನ್ ಮತ್ತು ಓಮನ್ ನಿಯಂತ್ರಿಸುತ್ತವೆ. ಇರಾನ್ ಅನುಮತಿ ಇಲ್ಲದೇ ಯಾವ ಹಡಗುಗಳು ಇಲ್ಲಿ ಸಾಗುವುದು ಕಷ್ಟ. ಸದ್ಯದ ಯುದ್ಧ ಬಿಕ್ಕಟ್ಟಿನಲ್ಲಿ ಇಲ್ಲಿ ಹೊರಹೋಗಲಾಗದೆ ಸ್ಥಗಿತಗೊಂಡಿರುವ ಹಡಗುಗಳ ಸಂಖ್ಯೆ ಸಾವಿರಕ್ಕೂ ಹೆಚ್ಚಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಹೀಗಿತ್ತು ಸ್ಯಾಂಡಲ್​​ವುಡ್ ಸೆಲೆಬ್ರಿಟಿಗಳ ಯುಗಾದಿ: ಚಿತ್ರಗಳ ನೋಡಿ

Source link

IPL 2026: ವೃತ್ತಿಜೀವನಕ್ಕಾಗಿ ಮಹಾ ತ್ಯಾಗ ಮಾಡಿದ ಯುಜ್ವೇಂದ್ರ ಚಾಹಲ್

Source link

ಯುಗಾದಿಯಂದೇ ಕಾಲಭೈರವೇಶ್ವರ ದೇಗುಲ ಮುಂದೆ ಮಾಟ ಮಂತ್ರ: ಬೆಚ್ಚಿಬಿದ್ದ ಜನರು

ಚಿಕ್ಕಮಗಳೂರು, ಮಾರ್ಚ್​ 19: ಭದ್ರಾ ನದಿಯ ದಡದಲ್ಲಿ ನಿರಂತರ ವಾಮಾಚಾರಗಳು (black magic) ನಡೆಯುತ್ತಲೇ ಇರುತ್ತದೆ. ಆದರೆ ಈಗ ನದಿಯ ಸಮೀಪವಿರುವ ದೇವಸ್ಥಾನದ (temple) ಮುಂಭಾಗದಲ್ಲಿಯೇ ವಾಮಾಚಾರ ಮಾಡಲಾಗಿದೆ. ಅದರಲ್ಲೂ ಯುಗಾದಿಯ ಹಬ್ಬದ ದಿನವೇ ಕಿಡಿಗೇಡಿಗಳ ಕೃತ್ಯ ಕಂಡು ಸ್ಥಳೀಯರು ಆತಂಕಗೊಂಡಿದ್ದಾರೆ. ಜಿಲ್ಲೆಯ ಕಳಸ ತಾಲೂಕಿನ ಕಂಚಿನಕೆರೆ ಗ್ರಾಮದಲ್ಲಿರವ ಕಾಲಭೈರವೇಶ್ವರ ದೇಗುಲದ ಎದುರು ಘಟನೆ ನಡೆದಿದೆ.

ಯುಗಾದಿ ಹಬ್ಬದ ದಿನವೇ ದೇವಾಲಯದ ಮುಂದೆ ವಾಮಾಚಾರ

ಕಾಫಿನಾಡು ಚಿಕ್ಕಮಗಳೂರಿನ ದಕ್ಷಿಣ ಕಾಶಿ ಎಂದು ಕರೆಸಿಕೊಳ್ಳುವ ಕಳಸೇಶ್ವರ ದೇವರಿಗೆ ಹಲವು ದೇವಸ್ಥಾನಗಳು ಸೇರುತ್ತೆ. ಅದರಲ್ಲಿಯೂ ಗಿರಿಜಾ ಕಲ್ಯಾಣದ ಮೆರವಣಿಗೆ ನಡೆಯುವ ಮಾರ್ಗದಲ್ಲಿರುವ ಕಳಸ ಪಟ್ಟಣದ ಕಂಚಿಕೆರೆ ಗ್ರಾಮದ ಕಾಲಭೈರವನ ದೇವಸ್ಥಾನದ ಮುಂಭಾಗದಲ್ಲಿ ವಾಮಾಚಾರ ಮಾಡಲಾಗಿದೆ ಅದು ಹಿಂದೂಗಳ ಹೊಸ ವರ್ಷದ ಸಂಭ್ರಮದ ಯುಗಾದಿ ಹಬ್ಬದ ದಿನವೇ.

ಇದನ್ನೂ ಓದಿ: ಬೆಂಗಳೂರಿನ ಏರ್​ಪೋರ್ಟ್​ಗೆ ಬಂತು ಬೆತ್ತಲೆ ಫೋಟೋಗಳ ಪಾರ್ಸೆಲ್! ವಾಮಾಚಾರದ ಬಾಕ್ಸ್​ ನೋಡಿ ಸಿಬ್ಬಂದಿ ಶಾಕ್

ತೆಂಗಿನಕಾಯಿ, ಅರಿಶಿನ, ಕುಂಕುಮ, ನಾಣ್ಯ, ನಿಂಬೆ ಹಣ್ಣು ಸೇರಿದಂತೆ ಹಲವು ವಸ್ತುಗಳನ್ನ ಬಳಕೆ ಮಾಡಲಾಗಿದೆ. ದೇವಾಲಯದ ಮುಂಭಾಗದಲ್ಲಿ ನಾಲ್ಕು ಕಲ್ಲುಗಳನ್ನ ಇಟ್ಟು ಪೂಜೆ ಮಾಡಲಾಗಿದೆ. ಹಬ್ಬದ ದಿನ ಪೂಜಾ ಕೈಂಕರ್ಯ ಮುಗಿಸಿ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡೋಣ ಅಂತಾ ಮುಂಜಾನೆ ಬಂದ ಅರ್ಚಕರು ವಾಮಾಚಾರ ಕಂಡು ಬೆಚ್ಚಿಬಿದ್ದಿದ್ದಾರೆ.

ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಸ್ಥಳೀಯರು ಆಗ್ರಹ

ಇನ್ನು ಕಳಸ ಸಮೀಪದ ಕಂಚಿಕೆರೆ ಕಾಲಭೈರವ ದೇವಸ್ಥಾನಕ್ಕೆ ಸಹಸ್ರ ಸಹಸ್ರ ಭಕ್ತರಿದ್ದಾರೆ. ಹೊರ ಜಿಲ್ಲೆ ಸೇರಿದಂತೆ ಸ್ಥಳೀಯರು ಕಾಲಭೈರವನನ್ನ ನಂಬಿ ಪೂಜಿಸುತ್ತಾರೆ. ದೇವಸ್ಥಾನದ ಮುಂದೆಯೇ ವಾಮಾಚಾರ ಮಾಡಿರುವುದರಿಂದ ಆಕ್ರೋಶ ವ್ಯಕ್ತವಾಗಿದೆ. ಕಳೆದ ವರ್ಷವೂ ವಾಮಾಚಾರ ನಡೆದ ಕಾಲಭೈರವ ದೇವಾಲಯದಲ್ಲಿ ಕಳ್ಳತನ ನಡೆದಿತ್ತು. ಇಂದು ವಾಮಾಚಾರ ಮಾಡಲಾಗಿದೆ. ಕಳಸ ಭಾಗದಲ್ಲಿ ಹರಿಯುವ ಭದ್ರಾ ನದಿಯ ತಟದಲ್ಲಿ ವಾಮಾಚಾರದ ಪ್ರಕರಣ ನಡೆಯುತ್ತಲೇ ಇತ್ತು. ಈಗ ದೇವಸ್ಥಾನದ ಮುಂದೆಯೇ ಮಾಡಿದ್ದಾರೆ. ಅದು ಬಹುತೇಕ ತಡರಾತ್ರಿ ಎರಡರಿಂದ ಮೂರುಗಂಟೆಯೊಳಗೆ ನಡೆದಿರಬಹುದು ಎನ್ನಲಾಗುತ್ತಿದೆ. ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಕಳಸ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಇದನ್ನೂ ಓದಿ: ಹುಡುಗಿಗಾಗಿ ಮುಂಡರಗಿ ಬಸ್ ನಿಲ್ದಾಣದಲ್ಲಿ ವಾಮಾಚಾರ: ಇನ್ನೂ ಈ ಕಣ್ಣಲ್ಲಿ ಏನೇನ್ ನೋಡ್ಬೇಕೋ ಮಿತ್ರೋ.

ದೇವಾಲಯದ ಮುಂಭಾಗದಲ್ಲಿ ವಾಮಾಚಾರ ಮಾಡಿರುವ ಕಿಡಿಗೇಡಿಗಳ ಕೃತ್ಯಕ್ಕೆ ಆಕ್ರೋಶ ವ್ಯಕ್ತವಾಗಿದೆ. ಇಲ್ಲಿಯವರಾ? ಅಥವಾ ಹೊರ ಭಾಗದವರಾ? ಅನ್ನೋ ಅನುಮಾನ ಸ್ಥಳೀಯರು ಮುಂದಿಟ್ಟಿದ್ದಾರೆ. ಪವಿತ್ರ ಭದ್ರಾ ನದಿ ಹಾಗೂ ಸುತ್ತಮುತ್ತ ಇರುವ ದೇವಸ್ಥಾನಗಳಲ್ಲಿ ಇತ್ತೀಚಿನ ದಿನದಲ್ಲಿ ವಾಮಾಚಾರ ಹೆಚ್ಚಾಗಿದ್ದು, ಪೊಲೀಸ್ ಇಲಾಖೆ ಕಿಡಿಗೇಡಿಗಳ ಹೆಡೆಮುರಿ ಕಟ್ಟುವಂತೆ ಕಳಸದ ಜನರು ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಪ್ರಜ್ವಲ್ ಅಶ್ಲೀಲ ವಿಡಿಯೋ ಕೇಸ್: JDS ಕಟ್ಟರ್ ಕಾರ್ಯಕರ್ತರೇ ಆರೋಪಿಗಳು

ಹಾಸನ (ಮಾರ್ಚ್ 19): ಪ್ರಜ್ವಲ್‌ ರೇವಣ್ಣ ಅವರ ಅಶ್ಲೀಲ ವಿಡಿಯೋ ಹಂಚಿಕೆ (Prajwal Revanna Pend rive Case) ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ (ಎಸ್‌ಐಟಿ) ಹಾಸನದ ಸಿವಿಲ್‌ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದೆ. ಬರೋಬ್ಬರಿ 13 ಸಾವಿರಕ್ಕೂ ಅಧಿಕ ಪುಟಗಳಿದ್ದು, ಬಿಜೆಪಿ ಮುಖಂಡ ದೇವರಾಜೇಗೌಡ ಸೇರಿ 39 ಮಂದಿಯ ವಿರುದ್ಧ ಆರೋಪ ದೃಢಪಡಿಸಿ ಸಾಕ್ಷಿ ಒದಗಿಸಲಾಗಿದೆ. ಇನ್ನು ಎಸ್​​ಐಟಿ ತನಿಖೆಯಲ್ಲಿ ಸ್ಫೋಟಕ ಅಂಶ ಬಯಲಾಗಿದೆ.

ವಿಡಿಯೋ ವೈರಲ್ ಪ್ರಕರಣದಲ್ಲಿ ಒಟ್ಟು 52 ಮಂದಿ ಹೆಸರು ಉಲ್ಲೇಖಿಸಲಾಗಿದ್ದು, 39 ಮಂದಿ ವಿರುದ್ಧ ಆರೋಪ ಸಾಬೀತಾಗಿದೆ. ಲೋಕಸಭೆ ಚುನಾವಣೆ (Lok Sabha Election) ವೇಳೆ 70 ಪೆನ್‌ಡ್ರೈವ್‌ (Pendrive) ಖರೀದಿಸಿ ವಿಡಿಯೋ ವೈರಲ್ (Video Viral) ಮಾಡಿದ್ದು ತನಿಖೆ ವೇಳೆ ಬಯಲಾಗಿದೆ. ಇನ್ನು ಜೆಡಿಎಸ್ ಕಾರ್ಯಕರ್ತರನ್ನೇ ಆರೋಪಿಗಳನ್ನಾಗಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪಶ್ಚಿಮ ಏಷ್ಯಾ ಸಂಘರ್ಷದ ಕುರಿತು ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಜೊತೆ ಪ್ರಧಾನಿ ಮೋದಿ ಮಾತುಕತೆ

ನವದೆಹಲಿ, ಮಾರ್ಚ್ 19: ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಉಲ್ಬಣವನ್ನು ಶಮನಗೊಳಿಸುವಲ್ಲಿ ಸಂವಾದ ಮತ್ತು ರಾಜತಾಂತ್ರಿಕತೆಯ ತುರ್ತು ಅವಶ್ಯಕತೆಯಿದೆ ಎಂದು ಹೇಳಿದ್ದಾರೆ. ಈ ಪ್ರದೇಶದ ಶಾಂತಿ ಮತ್ತು ಸ್ಥಿರತೆಗಾಗಿ ಮ್ಯಾಕ್ರನ್ ಜೊತೆ ಸಮನ್ವಯವನ್ನು ಸಾಧಿಸಲು ಸಿದ್ಧ ಎಂದು ಮೋದಿ ಹೇಳಿದ್ದಾರೆ.

“ನನ್ನ ಆತ್ಮೀಯ ಸ್ನೇಹಿತರಾದ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಪಶ್ಚಿಮ ಏಷ್ಯಾದ ಪರಿಸ್ಥಿತಿ ಮತ್ತು ಉದ್ವಿಗ್ನತೆಯನ್ನು ಶಮನಗೊಳಿಸುವ ತುರ್ತು ಅಗತ್ಯದ ಕುರಿತು ಹಾಗೂ ಸಂವಾದ, ರಾಜತಾಂತ್ರಿಕತೆಯ ಮೂಲಕ ಪರಿಹಾರ ಕಂಡುಕೊಳ್ಳುವ ಕುರಿತು ಮಾತನಾಡಿದ್ದೇನೆ” ಎಂದು ಪ್ರಧಾನಿ ಮೋದಿ ಎಕ್ಸ್​​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಸರಿಯಾಗೇ ಮಾಡುತ್ತಿದೆ; ಮೋದಿ ಸರ್ಕಾರವನ್ನು ಸಮರ್ಥಿಸಿಕೊಂಡ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ!

ಇದಕ್ಕೂ ಮೊದಲು, ಪಶ್ಚಿಮ ಏಷ್ಯಾದ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಪ್ರಧಾನಿ ಮೋದಿ ಒಮಾನ್‌ನ ಸುಲ್ತಾನ್ ಹೈತಮ್ ಬಿನ್ ತಾರಿಕ್ ಮತ್ತು ಮಲೇಷ್ಯಾದ ಪ್ರಧಾನಿ ಅನ್ವರ್ ಇಬ್ರಾಹಿಂ ಅವರೊಂದಿಗೆ ಮಾತನಾಡಿದ್ದರು. ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದ ಉಲ್ಬಣವನ್ನು ಕಡಿಮೆ ಮಾಡಲು, ಶಾಂತಿ ಮತ್ತು ಸ್ಥಿರತೆಯನ್ನು ಪುನಃಸ್ಥಾಪಿಸುವ ಬಗ್ಗೆ ಅವರು ಚರ್ಚಿಸಿದ್ದರು.

“ನನ್ನ ಸಹೋದರ ಸುಲ್ತಾನ್ ಹೈತಮ್ ಬಿನ್ ತಾರಿಕ್ ಅವರೊಂದಿಗೆ ಫಲಪ್ರದ ಸಂಭಾಷಣೆ ನಡೆಸಿದೆ. ಹಾಗೇ, ಒಮಾನ್ ಜನರಿಗೆ ಈದ್ ಶುಭಾಶಯಗಳನ್ನು ತಿಳಿಸಿದೆ. ಉದ್ವಿಗ್ನತೆಯನ್ನು ಶಮನಗೊಳಿಸಲು ಮತ್ತು ಶಾಂತಿ, ಸ್ಥಿರತೆಯನ್ನು ಪುನಃಸ್ಥಾಪಿಸಲು ಸಂವಾದ ಮತ್ತು ರಾಜತಾಂತ್ರಿಕತೆಗೆ ಆದ್ಯತೆ ನೀಡುವ ಅಗತ್ಯವನ್ನು ನಾವು ಒಪ್ಪಿಕೊಂಡಿದ್ದೇವೆ” ಎಂದು ಮೋದಿ ಎಕ್ಸ್​ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎದೆ ಭಾಗ ಕತ್ತರಿಸಿ, ಗುಪ್ತಾಂಗಕ್ಕೆ ಇರಿದು ಭೀಕರವಾಗಿ ಕೊಲೆ: ಭಾವಿ ಪತಿ ಅನುಮಾಕ್ಕೆ ಅಪ್ರಾಪ್ತೆ ಬಲಿ

ಬೆಂಗಳೂರು, ಮಾರ್ಚ್​​ 19: ನಿಶ್ಚಿತಾರ್ಥ ಮಾಡಿಕೊಂಡಿದ್ದ ಅಪ್ರಾಪ್ತೆಯನ್ನು ಬೆಂಗಳೂರಿನ ಡಿ.ಜೆ.ಹಳ್ಳಿ ಸಕ್ಕರೆ ಮಂಡಿಯ ಪಾಳುಮನೆಯಲ್ಲಿ ವ್ಯಕ್ತಿಯೋರ್ವ ಭೀಕರವಾಗಿ ಕೊಲೆ ಮಾಡಿರುವ ಪ್ರಕರಣದ ತನಿಖೆ ವೇಳೆ ಶಾಕಿಂಗ್​​ ವಿಚಾರಗಳು ಬೆಳಕಿಗೆ ಬಂದಿವೆ. ಯುವತಿ ಮೇಲೆ ಆರೋಪಿ ಸೈಯದ್ ಶಬೀಲ್​​ಗಿದ್ದ ಅನುಮಾನವೇ ಕೊಲೆಗೆ ಕಾರಣ ಎಂಬುದು ಗೊತ್ತಾಗಿದೆ. ಆಕೆಯನ್ನು ಭೇಟಿಯ ನೆಪದಲ್ಲಿ ಕರೆದಿದ್ದ ಈತ ಎದೆ ಭಾಗ ಕತ್ತರಿಸಿ, ಗುಪ್ತಾಂಗಕ್ಕೆ ಚಾಕುವಿನಿಂದ ಇರಿದು ಮತ್ತು ಕುತ್ತಿಗೆ ಕೊಯ್ದು ಹತ್ಯೆ ಮಾಡಿರೋದು ತನಿಖೆ ವೇಳೆ ಬಯಲಾಗಿದೆ. ಘಟನೆ ಬಳಿಕ ನಾಪತ್ತೆಯಾಗಿರುವ ಆರೋಪಿಗಾಗಿ ಪೊಲೀಸರಿಂದ ಶೋಧ ಮುಂದುವರಿದಿದೆ.

ಕೋಲಾರ ಮೂಲದ ಅಪ್ರಾಪ್ತ ಬಾಲಕಿ ಆಗಾಗ ಬೆಂಗಳೂರಿನ ಸಂಬಂಧಿಕರ ಮನೆಗೆ ಬರುತ್ತಿದ್ದಳು. ಈ ನಡುವೆ ಡಿಜೆ ಹಳ್ಳಿಯ ಈರುಳ್ಳಿ ಮಾರ್ಕೆಟ್​​ನಲ್ಲಿ ಕೆಲಸ ಮಾಡ್ತಿದ್ದ ಸೈಯದ್ ಶಬೀಲ್ ಎಂಬ ಯುವಕನ ಜೊತೆ ಆಕೆಗೆ ಪ್ರೀತಿ ಶುರುವಾಗಿತ್ತು. ಆಗಾಗ ಫೋನ್​​ನಲ್ಲಿಇವರು ಮಾತಾನಾಡುತ್ತಿರೋದನ್ನು ಗಮನಿಸಿದ ಸಂಬಂಧಿಕರು, ಪೋಷಕರಿಗೆ ವಿಚಾರ ತಿಳಿಸಿದ್ದರು. ಬಳಿಕ ಆಕೆ ಪ್ರೀತಿಸುತ್ತಿದ್ದವನ ಜೊತೆಯೇ ಮದುವೆ ಮಾಡಲು ಮನೆಯವರು ಮುಂದಾಗಿದ್ದರು. ಅದರಂತೆ ಕಳೆದ 2025ರ ಜೂನ್​​ನಲ್ಲಿ ಇವರಿಬ್ಬರ ಎಂಗೇಜ್ಮೆಂಟ್ ಕೂಡ ನಡೆದಿತ್ತು. ಕೆಲ ಸಮಯದ ಬಳಿಕ ಮದುವೆಯ ತಯಾರಿಯಲ್ಲೂ ಮನೆಯವರಿದ್ದರು. ಆದರೆ ಇತ್ತೀಚೆಗೆ ಅಪ್ರಾಪ್ತಳ ಮೇಲೆ ಅನುಮಾನ ಪಡಲು ಶುರು ಮಾಡಿದ ಶಬೀಲ್, ವಿವಾಹಕ್ಕೂ ಮೊದಲೇ ಅಟ್ಟಹಾಸ ಮೆರೆದಿದ್ದಾನೆ.

ಇದನ್ನೂ ಓದಿ: ಪಾಳು ಮನೆಯಲ್ಲಿ ಅಪ್ರಾಪ್ತೆಯ ಭೀಕರ ಕೊಲೆ: ಭಾವಿ ಪತಿಯಿಂದಲೇ ನಡೀತು ಹತ್ಯೆ!

ಶಬೀಲ್ ಮನೆಯಿಂದ ಸ್ವಲ್ಪ ದೂರದಲ್ಲಿ ಇರುವ ಸಕ್ಕರೆ ಮಂಡಿ ಪಾಳು ಬಿದ್ದ ಜಾಗದಲ್ಲಿ ಆರೋಪಿ ಶಬೀಲ್ ಮತ್ತು ಅಪ್ರಾಪ್ತ ಯುವತಿ ಇಬ್ಬರೂ ಆಗಾಗ ಭೇಟಿ ಮಾಡುತ್ತಿದ್ದರು. ಅದೇ ಜಾಗಕ್ಕೆ ಯುವತಿಯನ್ನು ಈತ ಕರೆದಿದ್ದ. ಹೀಗಾಗಿ ಮನೆಯಲ್ಲೇ ಮೊಬೈಲ್​​ ಬಿಟ್ಟು ಆಕೆ ಶಬೀಲ್​​ನ ಭೇಟಿಗಾಗಿ ತೆರಳಿದ್ದಳು. ಬೆಳಗ್ಗೆ 6 ಗಂಟೆಗೆ ಮನೆಯಿಂದ ಹೋದ ಯುವತಿ 10.30 ಆದರೂ ಬಾರದ ಕಾರಣ ಸಂಬಂಧಿಕರ ಮನೆಯವರು ಹುಡುಕಾಟ ಆರಂಭಿಸಿದ್ದರು. ಶಬೀಲ್​​ಗೆ ಕರೆ ಮಾಡಿದರೂಆತ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಹೀಗಾಗಿ ಆತನ ಮನೆಯವರ ಬಳಿ ವಿಚಾರಿಸಿದಾಗ ಅವರಿಬ್ಬರು ಭೇಟಿ ಆಗ್ತಿದ್ದ ಜಾಗದ ಬಗ್ಗೆ ಮಾಹಿತಿ ಸಿಕ್ಕಿತ್ತು. ಅಲ್ಲಿಗೆ ತೆರಳಿ ಪರಿಶೀಲನೆ ನಡೆಸಿದಾಗ ರಕ್ತದ ಮಡುವಿನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಅಪ್ರಾಪ್ತಳ ಶವ ಪತ್ತೆಯಾಗಿತ್ತು. ಒಟ್ಟಿನಲ್ಲಿ ಮದುವೆಯಾಗಿ ಸುಂದರ ಜೀವನ ನಡೆಸುವ ಕನಸು ಕಂಡಿದ್ದ ಯುವತಿಯನ್ನು ತನ್ನ ಅನುಮಾನದ ಭೂತಕ್ಕೆ ಆರೋಪಿ ಶಬೀಲ್​​ ಬಲಿ ಪಡೆದಿರೋದು ಕುಟುಂಬಸ್ಥರನ್ನು ಬೆಚ್ಚಿ ಬೀಳಿಸಿರೋದಂತೂ ಸತ್ಯ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

TTD Tirumala: ತಿರುಪತಿ ಭಕ್ತರಿಗೆ ಗುಡ್ ನ್ಯೂಸ್; ಇನ್ಮುಂದೆ 24 ಗಂಟೆ ಲಗೇಜ್ ಕೌಂಟರ್ ಸೇವೆ ಲಭ್ಯ!

ತಿರುಮಲ ಶ್ರೀವಾರಿಯ ದರ್ಶನಕ್ಕೆ ಬರುವ ಭಕ್ತರಿಗಾಗಿ ತಿರುಮಲ ತಿರುಪತಿ ದೇವಸ್ಥಾನಂ (TTD) ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಭಕ್ತರ ಲಗೇಜ್‌ಗಳ ಸುರಕ್ಷತೆ ಮತ್ತು ಸುಲಭ ನಿರ್ವಹಣೆಗಾಗಿ ಒಟ್ಟು 80 ಲಗೇಜ್ ಕೌಂಟರ್‌ಗಳನ್ನು ಲಭ್ಯವಾಗುವಂತೆ ಮಾಡಲಾಗಿದೆ. ಈ ಕೇಂದ್ರಗಳಲ್ಲಿ ಒಟ್ಟು 394 ಸಿಬ್ಬಂದಿ ಮೂರು ಪಾಳಿಗಳಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದು, ಇಂದಿನಿಂದ ಈ ಎಲ್ಲಾ ಲಗೇಜ್ ಕೇಂದ್ರಗಳು ದಿನದ 24 ಗಂಟೆಯೂ ಭಕ್ತರ ಸೇವೆಗೆ ಮುಕ್ತವಾಗಿರಲಿವೆ. ವಿಶೇಷವಾಗಿ ಹಬ್ಬಗಳು ಮತ್ತು ರಜಾ ದಿನಗಳಲ್ಲಿ ಉಂಟಾಗುವ ಭಕ್ತರ ದಟ್ಟಣೆಯನ್ನು ನಿಯಂತ್ರಿಸಲು ಈ ನಿರಂತರ ಸೇವೆಯು ಸಹಕಾರಿಯಾಗಲಿದೆ.

ಪಾದಚಾರಿ ಮಾರ್ಗದ ಭಕ್ತರಿಗೆ ವರ:

ಅಲಿಪಿರಿ ಮತ್ತು ಶ್ರೀವರಿ ಮೆಟ್ಟು ಮಾರ್ಗಗಳ ಮೂಲಕ ಕಾಲ್ನಡಿಗೆಯಲ್ಲಿ ಬೆಟ್ಟ ಹತ್ತುವ ಭಕ್ತರ ಅನುಕೂಲಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಭಾರವಾದ ಸಾಮಾನುಗಳನ್ನು ಹೊತ್ತು ನಡೆಯುವುದು ಕಷ್ಟಕರವಾದ್ದರಿಂದ, ಅಲಿಪಿರಿ ಮಾರ್ಗದಲ್ಲಿ 7 ಕೌಂಟರ್‌ಗಳನ್ನು (46 ಸಿಬ್ಬಂದಿ) ಮತ್ತು ಶ್ರೀವರಿ ಮೆಟ್ಟು ಮಾರ್ಗದಲ್ಲಿ 2 ಕೌಂಟರ್‌ಗಳನ್ನು (10 ಸಿಬ್ಬಂದಿ) ಸ್ಥಾಪಿಸಲಾಗಿದೆ. ಭಕ್ತರು ತಮ್ಮ ಲಗೇಜ್‌ಗಳನ್ನು ಈ ಆರಂಭಿಕ ಕೇಂದ್ರಗಳಲ್ಲಿ ಠೇವಣಿ ಇರಿಸಿ, ಬೆಟ್ಟ ಹತ್ತಿದ ನಂತರ ತಿರುಮಲದಲ್ಲಿರುವ ನಿಗದಿತ ವಿತರಣಾ ಕೇಂದ್ರಗಳಲ್ಲಿ ಅವುಗಳನ್ನು ಸುಲಭವಾಗಿ ಮರಳಿ ಪಡೆಯಬಹುದಾಗಿದೆ.

ತಿರುಮಲದ ಪ್ರಮುಖ ಕೇಂದ್ರಗಳಲ್ಲಿ ವಿಸ್ತರಣೆ:

ಕೇವಲ ಪಾದಚಾರಿ ಮಾರ್ಗಗಳಲ್ಲಷ್ಟೇ ಅಲ್ಲದೆ, ತಿರುಮಲದ ಪ್ರಮುಖ ಸ್ಥಳಗಳಲ್ಲೂ ಲಗೇಜ್ ಕೇಂದ್ರಗಳನ್ನು ವಿಸ್ತರಿಸಲಾಗಿದೆ. ತಿರುಮಲದ ಉಚಿತ ಸಭಾಂಗಣದಲ್ಲಿ 10 ಕೌಂಟರ್‌ಗಳು, ನಾರಾಯಣಗಿರಿ ಶೆಡ್‌ನಲ್ಲಿ 8, ವೈಕುಂಠಂ ಕ್ಯೂ ಕಾಂಪ್ಲೆಕ್ಸ್‌ನಲ್ಲಿ 2 ಮತ್ತು 300 ರೂಪಾಯಿ ದರ್ಶನ ಟಿಕೆಟ್ ಹಾಲ್‌ನಲ್ಲಿ 5 ಕೌಂಟರ್‌ಗಳನ್ನು ತೆರೆಯಲಾಗಿದೆ. ಇದರೊಂದಿಗೆ ಡಿಡಿ ಹಾಲ್ ಮತ್ತು ಸ್ಕ್ಯಾನಿಂಗ್ ಕಂಪಾರ್ಟ್‌ಮೆಂಟ್‌ಗಳಲ್ಲೂ ಹೆಚ್ಚುವರಿ ಕೌಂಟರ್‌ಗಳನ್ನು ನೀಡಲಾಗಿದೆ. ಭಕ್ತರು ಕಲ್ಯಾಣ ಕಟ್ಟಾ ಮತ್ತು ಇತರ ಪ್ರಮುಖ ಪ್ರದೇಶಗಳಲ್ಲಿಯೂ ತಮ್ಮ ಸಾಮಾನುಗಳನ್ನು ಸುರಕ್ಷಿತವಾಗಿ ಇರಿಸಲು ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಲಡ್ಡು ಗುಣಮಟ್ಟಕ್ಕೆ ವಿಶೇಷ ಪ್ರಯೋಗಾಲಯ:

ಲಡ್ಡು ಪ್ರಸಾದದ ಪವಿತ್ರತೆ ಮತ್ತು ಗುಣಮಟ್ಟವನ್ನು ಕಾಪಾಡಲು ಟಿಟಿಡಿ ಮತ್ತೊಂದು ಐತಿಹಾಸಿಕ ಹೆಜ್ಜೆ ಇಟ್ಟಿದೆ. ಕೇಂದ್ರ ಸರ್ಕಾರದ ಆರ್ಥಿಕ ನೆರವಿನೊಂದಿಗೆ ತಿರುಮಲದಲ್ಲಿ ಅತ್ಯಾಧುನಿಕ ‘ಎಫ್‌ಎಸ್‌ಎಸ್‌ಎಐ’ (FSSAI) ಪ್ರಯೋಗಾಲಯವನ್ನು ಸ್ಥಾಪಿಸಲಾಗುತ್ತಿದೆ. ಆಂಧ್ರಪ್ರದೇಶ ಆಹಾರ ಸುರಕ್ಷತಾ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಿದ್ಧವಾಗಿರುವ ಈ ಪ್ರಯೋಗಾಲಯವನ್ನು ಈ ತಿಂಗಳ 21 ರಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಉದ್ಘಾಟಿಸಲಿದ್ದಾರೆ. ಈ ಮೂಲಕ ಲಡ್ಡು ತಯಾರಿಕೆಯಲ್ಲಿ ಬಳಸುವ ಪದಾರ್ಥಗಳ ಗುಣಮಟ್ಟವನ್ನು ನಿರಂತರವಾಗಿ ಪರೀಕ್ಷಿಸಿ, ಭಕ್ತರಿಗೆ ಕಲಬೆರಕೆ ರಹಿತ ಪ್ರಸಾದ ಸಿಗುವಂತೆ ಖಚಿತಪಡಿಸಿಕೊಳ್ಳಲಾಗುವುದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL: ಬುಮ್ರಾ ವಿರುದ್ಧ ಅತಿ ಹೆಚ್ಚು ಸಿಕ್ಸರ್ ಬಾರಿಸಿದವರಿವರು: ಪಟ್ಟಿಯಲ್ಲಿ ಬೌಲರ್ ಹೆಸರು

Source link