All posts by nagaraj11081993

Chanakya Niti: ಜೀವನದಲ್ಲಿ ಈ ಮೂರು ವಿಷಯಗಳ ನಿರ್ಲಕ್ಷ್ಯ ಸಲ್ಲದು ಎನ್ನುತ್ತಾರೆ ಚಾಣಕ್ಯ

Chanakya Niti: ಜೀವನದಲ್ಲಿ ಈ ಮೂರು ವಿಷಯಗಳ ನಿರ್ಲಕ್ಷ್ಯ ಸಲ್ಲದು ಎನ್ನುತ್ತಾರೆ ಚಾಣಕ್ಯ

ಆಚಾರ್ಯ ಚಾಣಕ್ಯರು (Acharya Chanakya) ತಮ್ಮ ನೀತಿಶಾಸ್ತ್ರದಲ್ಲಿ ರಾಜಕೀಯ ವಿಷಯಗಳು ಮಾತ್ರವಲ್ಲ ಜೀವನಕ್ಕೆ ಸಂಬಂಧಿಸಿದ ಹಲವಾರು ಮೌಲ್ಯಯುತ ಸಲಹೆಗಳನ್ನು ಹಂಚಿಕೊಂಡಿದ್ದಾರೆ. ಚಾಣಕ್ಯರ ಈ ಬೋಧನೆಗಳನ್ನು  ಜೀವನದಲ್ಲಿ ಅಳವಡಿಸಿಕೊಂಡರೆ, ಯಶಸ್ವಿ ಮತ್ತು ಸಮೃದ್ಧ ಜೀವನವನ್ನು ಸಾಗಿಸಬಹುದು ಎಂದು ಹೇಳಲಾಗುತ್ತದೆ. ಇದೇ ರೀತಿ ನೀವು ಕೂಡ ಯಶಸ್ವಿ ಜೀವನವನ್ನು ನಡೆಸಬೇಕೆಂದರೆ, ಈ ಕೆಲವೊಂದು ವಿಚಾರಗಳ ಬಗ್ಗೆ ಅಸಡ್ಡೆ ತೋರುವುದನ್ನು ನಿಲ್ಲಿಸಿ. ಹೌದು ಮುಖ್ಯವಾಗಿ ಜೀವನದ ಈ ಮೂರು ವಿಷಯಗಳನ್ನು ಹಗುರವಾಗಿ ಪರಿಗಣಿಸಿದರೆ, ಮುಂದೊಂದು ದಿನ ವಿಷಾದಪಡಬೇಕಾಗುತ್ತದೆ ಅದೇ ಈ ಅಂಶಗಳ ಮಹತ್ವವನ್ನು ಸಮಯಕ್ಕೆ ಸರಿಯಾಗಿ ಅರ್ಥಮಾಡಿಕೊಂಡರೆ, ಯಶಸ್ವಿ ಜೀವನವನ್ನು ನಡೆಸಬಹುದು. ಹಾಗಿದ್ರೆ ಚಾಣಕ್ಯರು ಹೇಳಿರುವಂತೆ ಯಾವ ಮೂರು ಸಂಗತಿಗಳನ್ನು ಹಗುರವಾಗಿ ಪರಿಗಣಿಸಬಾರದು ಎಂಬುದನ್ನು ನೋಡೋಣ ಬನ್ನಿ.

ಜೀವನದಲ್ಲಿ ವಿಚಾರಗಳನ್ನು ಹಗುರವಾಗಿ ಪರಿಗಣಿಸಬೇಡಿ:

ಸಮಯವನ್ನು ಹಗುರವಾಗಿ ತೆಗೆದುಕೊಳ್ಳುವ ತಪ್ಪನ್ನು ಮಾಡಬೇಡಿ: ಆಚಾರ್ಯ ಚಾಣಕ್ಯರ ಪ್ರಕಾರ,  ಸಮಯವು ನಿಮ್ಮಲ್ಲಿರುವ ಅತ್ಯಂತ ಅಮೂಲ್ಯ ವಸ್ತುಗಳಲ್ಲಿ ಒಂದಾಗಿದೆ. ಒಮ್ಮೆ ಕಳೆದುಹೋದ ಸಮಯವನ್ನು ಎಂದಿಗೂ ಮರಳಿ ಪಡೆಯಲು ಸಾಧ್ಯವಿಲ್ಲ. ಅನೇಕ ಜನರು ಸಮಯವನ್ನು ನಿರ್ಲಕ್ಷಿಸುತ್ತಾರೆ. ಆಗಬೇಕಾದ ಕೆಲಸಗಳನ್ನು ಮುಂದೂಡುತ್ತಲೇ ಇರುತ್ತಾರೆ. ಈ ತಪ್ಪಿನ ಕಾರಣದಿಂದಾಗಿ ಯಶಸ್ಸು ಲಭಿಸುವುದಿಲ್ಲ. ಯಾರು ಸಮಯವನ್ನು ಬುದ್ಧಿವಂತಿಕೆಯಿಂದ ಬಳಸಿದರೆ ಮತ್ತು ಎಲ್ಲಾ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವ ಅಭ್ಯಾಸವನ್ನು ಬೆಳೆಸಿಕೊಂಡರೆ ಮಾತ್ರ ಅವರು ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು ಎನ್ನುತ್ತಾರೆ ಚಾಣಕ್ಯ.

ಜ್ಞಾನ ಮತ್ತು ಶಿಕ್ಷಣವನ್ನು ನಿರ್ಲಕ್ಷಿಸಬೇಡಿ: ಚಾಣಕ್ಯ ನೀತಿಯ ಪ್ರಕಾರ, ವ್ಯಕ್ತಿಯ ದೊಡ್ಡ ಶಕ್ತಿ ಆತನ ಜ್ಞಾನ. ಜ್ಞಾನವನ್ನು ಹೊಂದಿರುವ ವ್ಯಕ್ತಿಯು ಪ್ರತಿಯೊಂದು ಸಂದರ್ಭದಲ್ಲೂ ಬುದ್ಧಿವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಮತ್ತು ಬುದ್ಧಿವಂತ ವ್ಯಕ್ತಿ ಯಾವುದೇ ಕಷ್ಟದಿಂದ ಬೇಕಾದರೂ ಸುಲಭವಾಗಿ ಪಾರಾಗುತ್ತಾರೆ. ಆದರೆ ಹೊಸ ವಿಚಾರಗಳನ್ನು ಕಲಿಯುವ ಮತ್ತು ಜ್ಞಾನವನ್ನು ಪಡೆಯುವ ಬಗ್ಗೆ ಅಸಡ್ಡೆ ತೋರುವವರು ಜೀವನದಲ್ಲಿ ಮುಂದೆ ಬರಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಆಚಾರ್ಯ ಚಾಣಕ್ಯ. ನೀವು ಜೀವನದಲ್ಲಿ ಯಶಸ್ವಿಯಾಗಲು ಬಯಸಿದರೆ, ಯಾವಾಗಲೂ ಹೊಸ ವಿಚಾರಗಳನ್ನು ಕಲಿಯುವುದರಲ್ಲಿ ಆಸಕ್ತಿಯನ್ನು ಹೊಂದಿರಬೇಕು.

ಇದನ್ನೂ ಓದಿ: ಎರಡು ವೈಯಕ್ತಿಕ ವಿಚಾರಗಳನ್ನು ಸಹದ್ಯೋಗಿಗಳೊಂದಿಗೆ ತಪ್ಪಿಯೂ ಕೂಡ ಶೇರ್‌ ಮಾಡಬಾರದು

ಸಂಬಂಧಗಳ ಬಗ್ಗೆ ನಿರ್ಲಕ್ಷ್ಯ ವಹಿಸಬೇಡಿ: ಯಾವುದೇ ವ್ಯಕ್ತಿಯ ಜೀವನದಲ್ಲಿ ಸಂಬಂಧಗಳು ಪ್ರಮುಖ ಪಾತ್ರ ವಹಿಸುತ್ತವೆ. ಸ್ನೇಹಿತರು, ಅಮ್ಮ, ಅಪ್ಪ, ಹೆಂಡತಿ, ಮಕ್ಕಳು ಕುಟುಂಬ ಈ ಎಲ್ಲಾ ಸಂಬಂಧ ಪ್ರತಿಯೊಬ್ಬರ ಜೀವನದಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಅನೇಕ ಜನರು, ತಮ್ಮ ಕೆಲಸದ ಕಾರಣದಿಂದಾಗಿ ಕುಟುಂಬಕ್ಕೆ ಸಮಯ ಮೀಸಲಿಡಲು ಮರೆತು ಹೋಗುತ್ತಾರೆ ಮತ್ತು ಸಂಬಂಧಗಳ ಬಗ್ಗೆ ನಿರ್ಲಕ್ಷ್ಯ ತೋರುತ್ತಾರೆ. ಆಚಾರ್ಯ ಚಾಣಕ್ಯರ ಪ್ರಕಾರ, ಸಂಬಂಧಗಳ ಮಹತ್ವವನ್ನು ಅರ್ಥಮಾಡಿಕೊಳ್ಳದ ವ್ಯಕ್ತಿಯು ಮುಂದೆ ಜೀವನದಲ್ಲಿ ಒಂಟಿತನವನ್ನು ಅನುಭವಿಸಬೇಕಾಗುತ್ತದೆ. ಹಾಗಾಗಿ ಕೆಲಸದ ಮಧ್ಯೆಯೂ ಸ್ವಲ್ಪ ಬಿಡುವು ಮಾಡಿಕೊಂಡು ಕುಟುಂಬ, ಸ್ನೇಹಿತರೊಂದಿಗೆ ಸಮಯವನ್ನು ಕಳೆಯಿರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹುತ್ತಕ್ಕೆ ಕೈಹಾಕಿ ಹಾವನ್ನೆತ್ತಿ ಆಡಿದ ಬಾಲಕ; ಶಾಕಿಂಗ್ ವಿಡಿಯೋ ನೋಡಿ

ನವದೆಹಲಿ, ಮಾರ್ಚ್ 19: ಈಗಿನ ಮಕ್ಕಳು ಸದಾ ಮೊಬೈಲ್ ಫೋನ್​ನಲ್ಲೇ ಮುಳುಗಿರುತ್ತಾರೆ. ಆದರೆ, ಹಳ್ಳಿಗಳಲ್ಲಿ ಇನ್ನೂ ಮಕ್ಕಳು ಪ್ರಕೃತಿಯ ಜೊತೆ ಹೆಚ್ಚು ಒಡನಾಡುತ್ತಾರೆ. ಇಲ್ಲೊಬ್ಬ ಪುಟ್ಟ ಬಾಲಕ ಬರಿಗೈಯಲ್ಲಿ ಹುತ್ತದೊಳಗೆ ಕೈಹಾಕಿ ಹಾವಿನ ಬಾಲ ಹಿಡಿದು ಹೊರಗೆ ಎಳೆದಿದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗುತ್ತಿದೆ. ಆ ಬಾಲಕನ ಆತ್ಮವಿಶ್ವಾಸ ಎಲ್ಲರನ್ನೂ ಬೆರಗುಗೊಳಿಸಿದೆ. ಆ ಬಾಲಕನ ಬಲ ಎಷ್ಟು ಗಟ್ಟಿಯಾಗಿತ್ತೆಂದರೆ ಆ ಹಾವಿಗೆ ಮಿಸುಕಾಡಲೂ ಆಗಲಿಲ್ಲ. ಈ ಆಘಾತಕಾರಿ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟರ್‌ನಲ್ಲಿ @TheVibeBandit ಎಂಬ ಖಾತೆ ಹಂಚಿಕೊಂಡಿದೆ. 23 ಸೆಕೆಂಡುಗಳ ಈ ವಿಡಿಯೋವನ್ನು ಈಗಾಗಲೇ ಎಂಟೂವರೆ ಲಕ್ಷ ಜನರು ವೀಕ್ಷಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಸಿಎಸ್​ಕೆಗೆ ಬಿಗ್ ಶಾಕ್; ಸ್ಟಾರ್ ವೇಗಿ ಟೂರ್ನಿಯಿಂದಲೇ ಔಟ್

Source link

Video: ಬಾಯಾರಿದ ಮಂಗಕ್ಕೆ ನೀರು ಕುಡಿಸಿ ಮಾನವೀಯತೆ ಮೆರೆದ ಯುವಕ

ಈ ಸ್ವಾರ್ಥ (selfish) ತುಂಬಿದ ಪ್ರಪಂಚದಲ್ಲಿ ಮಾನವೀಯತೆ, ಬೆಲೆಯಿಲ್ಲ ಎಂಬ ಮಾತಿದೆ. ಸ್ವಾರ್ಥ ಜನರ ನಡುವೆ ಹೃದಯವಂತ ಹಾಗೂ ಸಹಾಯ ಮಾಡುವ ಗುಣವಿರುವ ವ್ಯಕ್ತಿಗಳನ್ನು ನೋಡಿದಾಗ ನಿಜಕ್ಕೂ ಹೆಮ್ಮೆಯಾಗುತ್ತದೆ. ನಾವು ಮಾಡುವ ಸಣ್ಣ ಪುಟ್ಟ ಸಹಾಯವು ಕೂಡ ಇನ್ನೊಬ್ಬರ ಜೀವ ಉಳಿಸುತ್ತದೆ ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ. ಯುವಕನು (young man) ಮಂಗನಿಗೆ ನೀರು ಕುಡಿಸಿ ಅದರ ಬಾಯಾರಿಕೆ ನೀಗಿಸಿ ಪುಣ್ಯಾತ್ಮ ಎನಿಸಿಕೊಂಡಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಯುವಕನ ಮಾನವೀಯ ಕೆಲಸವನ್ನು ಹಾಡಿಹೊಗಳಿದ್ದಾರೆ.

Manjunath Lokapur ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಬಾಯಾರಿದ ಮಂಗವೊಂದು ನೀರಿಗಾಗಿ ಹಪತಪಿಸಿದೆ. ಇದೇ ವೇಳೆ ಯುವಕನು ನಲ್ಲಿ ನೀರು ಕುಡಿಸಿ ಮಂಗನ ಬಾಯಾರಿಕೆ ನೀಗಿಸಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

 

ಇದನ್ನೂ ಓದಿ: ಕಾಲೆರಡು ಸ್ವಾಧೀನ ಕಳೆದುಕೊಂಡ ಶ್ವಾನಕ್ಕೆ ರಸ್ತೆ ದಾಟಲು ನೆರವಾದ ವ್ಯಕ್ತಿ

ಈ ವಿಡಿಯೋ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಜೈ ಶ್ರೀರಾಮ್ ಎಂದರೆ, ಮತ್ತೊಬ್ಬರು ದೇವರು ಒಳ್ಳೆಯದು ಮಾಡಲಿ ಎಂದು ಹೇಳಿದ್ದಾರೆ. ಇನ್ನೊಬ್ಬರು, ಮೂಕ ಪ್ರಾಣಿಗಳಿಗೆ ಸಹಾಯ ಮಾಡುವ ಗುಣ ಇಷ್ಟ ಆಯ್ತು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಇರಾನ್ ಹೊಸ ವರಸೆ; ಹಾರ್ಮುಜ್ ಜಲಸಂಧಿಯಲ್ಲಿ ಟೋಲ್ ಸಂಗ್ರಹಕ್ಕೆ ಆಲೋಚನೆ

ನವದೆಹಲಿ, ಮಾರ್ಚ್ 19: ಅಮೆರಿಕ ಮತ್ತು ಇಸ್ರೇಲ್ ದಾಳಿಗಳಿಗೆ ಮತ್ತು ಬೆದರಿಕೆಗಳಿಗೆ ಬಗ್ಗೆ ಪ್ರತಿರೋಧ ವ್ಯಕ್ತಪಡಿಸುತ್ತಿರುವ ಇರಾನ್ ಇದೀಗ ಹಾರ್ಮುಜ್ ಜಲಸಂಧಿಯನ್ನು (Hormuz Strait) ಪೂರ್ಣವಾಗಿ ಹತೋಟಿಗೆ ತೆಗೆದುಕೊಂಡಿದೆ. ಜಗತ್ತಿನ ಶೇ. 20ಕ್ಕೂ ಹೆಚ್ಚು ತೈಲ ಮತ್ತು ಗ್ಯಾಸ್ ಅನ್ನು ಹಡಗುಗಳ ಮೂಲಕ ಇದೇ ಹಾರ್ಮುಜ್ ಸ್ಟ್ರೇಟ್​ನಿಂದ ಸಾಗಿಸಲಾಗುತ್ತದೆ. ಈಗ ಇದನ್ನೇ ಇರಾನ್ ತನ್ನ ಆದಾಯ ಮೂಲವಾಗಿ ಮಾಡಿಕೊಳ್ಳಲು ಆಲೋಚಿಸಿದೆ. ವರದಿಗಳ ಪ್ರಕಾರ, ಹಾರ್ಮುಜ್ ಜಲಸಂಧಿಯಿಂದ ಅರೇಬಿಯನ್ ಸಮುದ್ರ ಮುಟ್ಟಲು ಹಡಗುಗಳಿಗೆ ಸಾಗಣೆ ಅನುಮತಿ ಶುಲ್ಕ (ಟ್ರಾನ್ಸಿಟ್ ಫೀ) ವಿಧಿಸುವ ಒಂದು ಪ್ರಸ್ತಾಪವನ್ನು ಇರಾನ್ ಪರಿಗಣಿಸುತ್ತಿದೆಯಂತೆ.

ಹಾರ್ಮುಜ್ ಜಲಸಂಧಿಯು ಬಹಳ ಕಿರಿದಾದ ಜಲಮಾರ್ಗವಾಗಿದೆ. ಪರ್ಷಿಯನ್ ಗಲ್ಫ್ ಮತ್ತು ಅರಬ್ಬಿ ಸಮುದ್ರವನ್ನು ಸಂಪರ್ಕಿಸುವ ಜಲಮಾರ್ಗ ಅದು. ಸೌದಿ, ಕತಾರ್ ಇತ್ಯಾದಿ ಗಲ್ಫ್ ರಾಷ್ಟ್ರಗಳಿಂದ ತೈಲ, ಗ್ಯಾಸ್, ಹಾಗೂ ಇತರ ಸರಕುಗಳನ್ನು ಹಡಗುಗಳ ಮೂಲಕ ಇದೇ ಜಲಮಾರ್ಗದಿಂದ ಸಾಗಿಸಲಾಗುತ್ತದೆ. ಇಲ್ಲಿಂದ ಪೂರೈಕೆಯಾಗುವ ತೈಲ ಮತ್ತು ಅನಿಲದ ಮೇಲೆ ಹೆಚ್ಚಿನ ಏಷ್ಯನ್ ದೇಶಗಳು ಅವಲಂಬಿತವಾಗಿವೆ. ಗಲ್ಫ್ ರಾಷ್ಟ್ರಗಳಿಗೂ ಇದು ಪ್ರಮುಖ ಆದಾಯ ಮೂಲವಾಗಿದೆ. ಹೀಗಾಗಿ, ಇರಾನ್ ದೇಶ ಹಾರ್ಮುಜ್ ಜಲಸಂಧಿಯನ್ನು ಇಟ್ಟುಕೊಂಡು ಅಮೆರಿಕ ಹಾಗೂ ಗಲ್ಫ್ ರಾಷ್ಟ್ರಗಳಿಗೆ ಮರ್ಮಾಘಾತ ಕೊಡಲು ಅಣಿಗೊಂಡಂತಿದೆ.

ಇದನ್ನೂ ಓದಿ: ಇಂಧನ ದತ್ತಾಂಶವನ್ನು ರಾಷ್ಟ್ರೀಯ ಭದ್ರತಾ ವಿಚಾರವೆಂದು ವರ್ಗೀಕರಿಸಿದ ಸರ್ಕಾರ; ತೈಲ, ಅನಿಲ ಕ್ಷೇತ್ರದ ಸಂಸ್ಥೆಗಳಿಗೆ ಹೊಸ ಜವಾಬ್ದಾರಿ

ಒಂದು ಮಾಹಿತಿ ಪ್ರಕಾರ ಹಾರ್ಮುಜ್ ಜಲಮಾರ್ಗದಲ್ಲಿ ಒಂದು ದಿನಕ್ಕೆ 100ರಿಂದ 135 ಹಡಗುಗಳು ಹಾದು ಹೋಗುತ್ತವೆ. ಇದರಲ್ಲಿ 15-20 ತೈಲ ಟ್ಯಾಂಕರ್​ಗಳಿವೆ. ವಿಶ್ವದ ಶೇ. 20ರಷ್ಟು ತೈಲ ಸಾಗಣೆ ಇದೇ ಮಾರ್ಗದಲ್ಲಿ ಆಗುವುದು. ಹೀಗಾಗಿ, ಇರಾನ್​ಗೆ ತನ್ನ ಪ್ರಭಾವ ಮತ್ತು ಶಕ್ತಿ ಹೆಚ್ಚಿಸಿಕೊಳ್ಳಲು ಅವಕಾಶ ಸಿಕ್ಕಂತಾಗಿದೆ.

ಹಾರ್ಮುಜ್ ಜಲಸಂಧಿಯಲ್ಲಿ ತೈಲ ಅಷ್ಟೇ ಅಲ್ಲದೆ ಆಹಾರ ಮತ್ತಿತರೆ ವಸ್ತುವನ್ನು ಹೊತ್ತು ಸಾಗುವ ಎಲ್ಲಾ ದೇಶಗಳ ಹಡಗುಗಳು ಇರಾನ್​ಗೆ ಟೋಲ್ ಮತ್ತು ತೆರಿಗೆ ಪಾವತಿಸುವಂತೆ ಕಾನೂನು ತರುವಂತಹ ಮಸೂದೆಯನ್ನು ರಚಿಸಲಾಗುತ್ತಿದೆ. ಯುದ್ಧ ಮುಗಿದ ಬಳಿಕ ಹಾರ್ಮುಜ್ ಜಲಸಂಧಿಯಲ್ಲಿ ಹೊಸ ನಿಬಂಧನೆಗಳ ವ್ಯವಸ್ಥೆ ತರಲಾಗುತ್ತದೆ. ತನ್ನ ಮೇಲೆ ನಿಷೇಧ ಹೇರಿದ ದೇಶಗಳಿಗೆ ಜಲನಿರ್ಬಂಧಗಳನ್ನು ಹಾಕಲು ಇರಾನ್​ಗೆ ಅವಕಾಶ ಕೊಡುವಂತಹ ಕಾನೂನು ಇದಾಗಿರುತ್ತದೆ ಎಂದು ಇರಾನ್​ನ ಸರ್ವೋಚ್ಚ ನಾಯಕರಿಗೆ ಸಲಹೆಗಾರರಾದವರೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿರುವ ಭಾರತದ ಎಲ್​ಪಿಜಿ ಟ್ಯಾಂಕರ್​ಗಳಲ್ಲಿ ಗ್ಯಾಸ್ ಎಷ್ಟು ದಿನಕ್ಕಾಗುವಷ್ಟಿದೆ ಗೊತ್ತಾ?

ಹಾರ್ಮುಜ್ ಜಲಸಂಧಿಯ ಅಗಲ ಕೇವಲ 33 ಕಿಮೀ ಮಾತ್ರವೇ ಇರುವುದು. ಹೀಗಾಗಿ, ಹಡಗುಗಳ ಸಾಗಣೆ ಇಲ್ಲಿ ಅಷ್ಟು ಸುಗಮವಿಲ್ಲ. ಈ ಜಲಸಂಧಿಯನ್ನು ಇರಾನ್ ಮತ್ತು ಓಮನ್ ನಿಯಂತ್ರಿಸುತ್ತವೆ. ಇರಾನ್ ಅನುಮತಿ ಇಲ್ಲದೇ ಯಾವ ಹಡಗುಗಳು ಇಲ್ಲಿ ಸಾಗುವುದು ಕಷ್ಟ. ಸದ್ಯದ ಯುದ್ಧ ಬಿಕ್ಕಟ್ಟಿನಲ್ಲಿ ಇಲ್ಲಿ ಹೊರಹೋಗಲಾಗದೆ ಸ್ಥಗಿತಗೊಂಡಿರುವ ಹಡಗುಗಳ ಸಂಖ್ಯೆ ಸಾವಿರಕ್ಕೂ ಹೆಚ್ಚಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಹೀಗಿತ್ತು ಸ್ಯಾಂಡಲ್​​ವುಡ್ ಸೆಲೆಬ್ರಿಟಿಗಳ ಯುಗಾದಿ: ಚಿತ್ರಗಳ ನೋಡಿ

Source link

IPL 2026: ವೃತ್ತಿಜೀವನಕ್ಕಾಗಿ ಮಹಾ ತ್ಯಾಗ ಮಾಡಿದ ಯುಜ್ವೇಂದ್ರ ಚಾಹಲ್

Source link

ಯುಗಾದಿಯಂದೇ ಕಾಲಭೈರವೇಶ್ವರ ದೇಗುಲ ಮುಂದೆ ಮಾಟ ಮಂತ್ರ: ಬೆಚ್ಚಿಬಿದ್ದ ಜನರು

ಚಿಕ್ಕಮಗಳೂರು, ಮಾರ್ಚ್​ 19: ಭದ್ರಾ ನದಿಯ ದಡದಲ್ಲಿ ನಿರಂತರ ವಾಮಾಚಾರಗಳು (black magic) ನಡೆಯುತ್ತಲೇ ಇರುತ್ತದೆ. ಆದರೆ ಈಗ ನದಿಯ ಸಮೀಪವಿರುವ ದೇವಸ್ಥಾನದ (temple) ಮುಂಭಾಗದಲ್ಲಿಯೇ ವಾಮಾಚಾರ ಮಾಡಲಾಗಿದೆ. ಅದರಲ್ಲೂ ಯುಗಾದಿಯ ಹಬ್ಬದ ದಿನವೇ ಕಿಡಿಗೇಡಿಗಳ ಕೃತ್ಯ ಕಂಡು ಸ್ಥಳೀಯರು ಆತಂಕಗೊಂಡಿದ್ದಾರೆ. ಜಿಲ್ಲೆಯ ಕಳಸ ತಾಲೂಕಿನ ಕಂಚಿನಕೆರೆ ಗ್ರಾಮದಲ್ಲಿರವ ಕಾಲಭೈರವೇಶ್ವರ ದೇಗುಲದ ಎದುರು ಘಟನೆ ನಡೆದಿದೆ.

ಯುಗಾದಿ ಹಬ್ಬದ ದಿನವೇ ದೇವಾಲಯದ ಮುಂದೆ ವಾಮಾಚಾರ

ಕಾಫಿನಾಡು ಚಿಕ್ಕಮಗಳೂರಿನ ದಕ್ಷಿಣ ಕಾಶಿ ಎಂದು ಕರೆಸಿಕೊಳ್ಳುವ ಕಳಸೇಶ್ವರ ದೇವರಿಗೆ ಹಲವು ದೇವಸ್ಥಾನಗಳು ಸೇರುತ್ತೆ. ಅದರಲ್ಲಿಯೂ ಗಿರಿಜಾ ಕಲ್ಯಾಣದ ಮೆರವಣಿಗೆ ನಡೆಯುವ ಮಾರ್ಗದಲ್ಲಿರುವ ಕಳಸ ಪಟ್ಟಣದ ಕಂಚಿಕೆರೆ ಗ್ರಾಮದ ಕಾಲಭೈರವನ ದೇವಸ್ಥಾನದ ಮುಂಭಾಗದಲ್ಲಿ ವಾಮಾಚಾರ ಮಾಡಲಾಗಿದೆ ಅದು ಹಿಂದೂಗಳ ಹೊಸ ವರ್ಷದ ಸಂಭ್ರಮದ ಯುಗಾದಿ ಹಬ್ಬದ ದಿನವೇ.

ಇದನ್ನೂ ಓದಿ: ಬೆಂಗಳೂರಿನ ಏರ್​ಪೋರ್ಟ್​ಗೆ ಬಂತು ಬೆತ್ತಲೆ ಫೋಟೋಗಳ ಪಾರ್ಸೆಲ್! ವಾಮಾಚಾರದ ಬಾಕ್ಸ್​ ನೋಡಿ ಸಿಬ್ಬಂದಿ ಶಾಕ್

ತೆಂಗಿನಕಾಯಿ, ಅರಿಶಿನ, ಕುಂಕುಮ, ನಾಣ್ಯ, ನಿಂಬೆ ಹಣ್ಣು ಸೇರಿದಂತೆ ಹಲವು ವಸ್ತುಗಳನ್ನ ಬಳಕೆ ಮಾಡಲಾಗಿದೆ. ದೇವಾಲಯದ ಮುಂಭಾಗದಲ್ಲಿ ನಾಲ್ಕು ಕಲ್ಲುಗಳನ್ನ ಇಟ್ಟು ಪೂಜೆ ಮಾಡಲಾಗಿದೆ. ಹಬ್ಬದ ದಿನ ಪೂಜಾ ಕೈಂಕರ್ಯ ಮುಗಿಸಿ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡೋಣ ಅಂತಾ ಮುಂಜಾನೆ ಬಂದ ಅರ್ಚಕರು ವಾಮಾಚಾರ ಕಂಡು ಬೆಚ್ಚಿಬಿದ್ದಿದ್ದಾರೆ.

ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಸ್ಥಳೀಯರು ಆಗ್ರಹ

ಇನ್ನು ಕಳಸ ಸಮೀಪದ ಕಂಚಿಕೆರೆ ಕಾಲಭೈರವ ದೇವಸ್ಥಾನಕ್ಕೆ ಸಹಸ್ರ ಸಹಸ್ರ ಭಕ್ತರಿದ್ದಾರೆ. ಹೊರ ಜಿಲ್ಲೆ ಸೇರಿದಂತೆ ಸ್ಥಳೀಯರು ಕಾಲಭೈರವನನ್ನ ನಂಬಿ ಪೂಜಿಸುತ್ತಾರೆ. ದೇವಸ್ಥಾನದ ಮುಂದೆಯೇ ವಾಮಾಚಾರ ಮಾಡಿರುವುದರಿಂದ ಆಕ್ರೋಶ ವ್ಯಕ್ತವಾಗಿದೆ. ಕಳೆದ ವರ್ಷವೂ ವಾಮಾಚಾರ ನಡೆದ ಕಾಲಭೈರವ ದೇವಾಲಯದಲ್ಲಿ ಕಳ್ಳತನ ನಡೆದಿತ್ತು. ಇಂದು ವಾಮಾಚಾರ ಮಾಡಲಾಗಿದೆ. ಕಳಸ ಭಾಗದಲ್ಲಿ ಹರಿಯುವ ಭದ್ರಾ ನದಿಯ ತಟದಲ್ಲಿ ವಾಮಾಚಾರದ ಪ್ರಕರಣ ನಡೆಯುತ್ತಲೇ ಇತ್ತು. ಈಗ ದೇವಸ್ಥಾನದ ಮುಂದೆಯೇ ಮಾಡಿದ್ದಾರೆ. ಅದು ಬಹುತೇಕ ತಡರಾತ್ರಿ ಎರಡರಿಂದ ಮೂರುಗಂಟೆಯೊಳಗೆ ನಡೆದಿರಬಹುದು ಎನ್ನಲಾಗುತ್ತಿದೆ. ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಕಳಸ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಇದನ್ನೂ ಓದಿ: ಹುಡುಗಿಗಾಗಿ ಮುಂಡರಗಿ ಬಸ್ ನಿಲ್ದಾಣದಲ್ಲಿ ವಾಮಾಚಾರ: ಇನ್ನೂ ಈ ಕಣ್ಣಲ್ಲಿ ಏನೇನ್ ನೋಡ್ಬೇಕೋ ಮಿತ್ರೋ.

ದೇವಾಲಯದ ಮುಂಭಾಗದಲ್ಲಿ ವಾಮಾಚಾರ ಮಾಡಿರುವ ಕಿಡಿಗೇಡಿಗಳ ಕೃತ್ಯಕ್ಕೆ ಆಕ್ರೋಶ ವ್ಯಕ್ತವಾಗಿದೆ. ಇಲ್ಲಿಯವರಾ? ಅಥವಾ ಹೊರ ಭಾಗದವರಾ? ಅನ್ನೋ ಅನುಮಾನ ಸ್ಥಳೀಯರು ಮುಂದಿಟ್ಟಿದ್ದಾರೆ. ಪವಿತ್ರ ಭದ್ರಾ ನದಿ ಹಾಗೂ ಸುತ್ತಮುತ್ತ ಇರುವ ದೇವಸ್ಥಾನಗಳಲ್ಲಿ ಇತ್ತೀಚಿನ ದಿನದಲ್ಲಿ ವಾಮಾಚಾರ ಹೆಚ್ಚಾಗಿದ್ದು, ಪೊಲೀಸ್ ಇಲಾಖೆ ಕಿಡಿಗೇಡಿಗಳ ಹೆಡೆಮುರಿ ಕಟ್ಟುವಂತೆ ಕಳಸದ ಜನರು ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಪ್ರಜ್ವಲ್ ಅಶ್ಲೀಲ ವಿಡಿಯೋ ಕೇಸ್: JDS ಕಟ್ಟರ್ ಕಾರ್ಯಕರ್ತರೇ ಆರೋಪಿಗಳು

ಹಾಸನ (ಮಾರ್ಚ್ 19): ಪ್ರಜ್ವಲ್‌ ರೇವಣ್ಣ ಅವರ ಅಶ್ಲೀಲ ವಿಡಿಯೋ ಹಂಚಿಕೆ (Prajwal Revanna Pend rive Case) ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ (ಎಸ್‌ಐಟಿ) ಹಾಸನದ ಸಿವಿಲ್‌ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದೆ. ಬರೋಬ್ಬರಿ 13 ಸಾವಿರಕ್ಕೂ ಅಧಿಕ ಪುಟಗಳಿದ್ದು, ಬಿಜೆಪಿ ಮುಖಂಡ ದೇವರಾಜೇಗೌಡ ಸೇರಿ 39 ಮಂದಿಯ ವಿರುದ್ಧ ಆರೋಪ ದೃಢಪಡಿಸಿ ಸಾಕ್ಷಿ ಒದಗಿಸಲಾಗಿದೆ. ಇನ್ನು ಎಸ್​​ಐಟಿ ತನಿಖೆಯಲ್ಲಿ ಸ್ಫೋಟಕ ಅಂಶ ಬಯಲಾಗಿದೆ.

ವಿಡಿಯೋ ವೈರಲ್ ಪ್ರಕರಣದಲ್ಲಿ ಒಟ್ಟು 52 ಮಂದಿ ಹೆಸರು ಉಲ್ಲೇಖಿಸಲಾಗಿದ್ದು, 39 ಮಂದಿ ವಿರುದ್ಧ ಆರೋಪ ಸಾಬೀತಾಗಿದೆ. ಲೋಕಸಭೆ ಚುನಾವಣೆ (Lok Sabha Election) ವೇಳೆ 70 ಪೆನ್‌ಡ್ರೈವ್‌ (Pendrive) ಖರೀದಿಸಿ ವಿಡಿಯೋ ವೈರಲ್ (Video Viral) ಮಾಡಿದ್ದು ತನಿಖೆ ವೇಳೆ ಬಯಲಾಗಿದೆ. ಇನ್ನು ಜೆಡಿಎಸ್ ಕಾರ್ಯಕರ್ತರನ್ನೇ ಆರೋಪಿಗಳನ್ನಾಗಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪಶ್ಚಿಮ ಏಷ್ಯಾ ಸಂಘರ್ಷದ ಕುರಿತು ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಜೊತೆ ಪ್ರಧಾನಿ ಮೋದಿ ಮಾತುಕತೆ

ನವದೆಹಲಿ, ಮಾರ್ಚ್ 19: ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಉಲ್ಬಣವನ್ನು ಶಮನಗೊಳಿಸುವಲ್ಲಿ ಸಂವಾದ ಮತ್ತು ರಾಜತಾಂತ್ರಿಕತೆಯ ತುರ್ತು ಅವಶ್ಯಕತೆಯಿದೆ ಎಂದು ಹೇಳಿದ್ದಾರೆ. ಈ ಪ್ರದೇಶದ ಶಾಂತಿ ಮತ್ತು ಸ್ಥಿರತೆಗಾಗಿ ಮ್ಯಾಕ್ರನ್ ಜೊತೆ ಸಮನ್ವಯವನ್ನು ಸಾಧಿಸಲು ಸಿದ್ಧ ಎಂದು ಮೋದಿ ಹೇಳಿದ್ದಾರೆ.

“ನನ್ನ ಆತ್ಮೀಯ ಸ್ನೇಹಿತರಾದ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಪಶ್ಚಿಮ ಏಷ್ಯಾದ ಪರಿಸ್ಥಿತಿ ಮತ್ತು ಉದ್ವಿಗ್ನತೆಯನ್ನು ಶಮನಗೊಳಿಸುವ ತುರ್ತು ಅಗತ್ಯದ ಕುರಿತು ಹಾಗೂ ಸಂವಾದ, ರಾಜತಾಂತ್ರಿಕತೆಯ ಮೂಲಕ ಪರಿಹಾರ ಕಂಡುಕೊಳ್ಳುವ ಕುರಿತು ಮಾತನಾಡಿದ್ದೇನೆ” ಎಂದು ಪ್ರಧಾನಿ ಮೋದಿ ಎಕ್ಸ್​​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಸರಿಯಾಗೇ ಮಾಡುತ್ತಿದೆ; ಮೋದಿ ಸರ್ಕಾರವನ್ನು ಸಮರ್ಥಿಸಿಕೊಂಡ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ!

ಇದಕ್ಕೂ ಮೊದಲು, ಪಶ್ಚಿಮ ಏಷ್ಯಾದ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಪ್ರಧಾನಿ ಮೋದಿ ಒಮಾನ್‌ನ ಸುಲ್ತಾನ್ ಹೈತಮ್ ಬಿನ್ ತಾರಿಕ್ ಮತ್ತು ಮಲೇಷ್ಯಾದ ಪ್ರಧಾನಿ ಅನ್ವರ್ ಇಬ್ರಾಹಿಂ ಅವರೊಂದಿಗೆ ಮಾತನಾಡಿದ್ದರು. ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದ ಉಲ್ಬಣವನ್ನು ಕಡಿಮೆ ಮಾಡಲು, ಶಾಂತಿ ಮತ್ತು ಸ್ಥಿರತೆಯನ್ನು ಪುನಃಸ್ಥಾಪಿಸುವ ಬಗ್ಗೆ ಅವರು ಚರ್ಚಿಸಿದ್ದರು.

“ನನ್ನ ಸಹೋದರ ಸುಲ್ತಾನ್ ಹೈತಮ್ ಬಿನ್ ತಾರಿಕ್ ಅವರೊಂದಿಗೆ ಫಲಪ್ರದ ಸಂಭಾಷಣೆ ನಡೆಸಿದೆ. ಹಾಗೇ, ಒಮಾನ್ ಜನರಿಗೆ ಈದ್ ಶುಭಾಶಯಗಳನ್ನು ತಿಳಿಸಿದೆ. ಉದ್ವಿಗ್ನತೆಯನ್ನು ಶಮನಗೊಳಿಸಲು ಮತ್ತು ಶಾಂತಿ, ಸ್ಥಿರತೆಯನ್ನು ಪುನಃಸ್ಥಾಪಿಸಲು ಸಂವಾದ ಮತ್ತು ರಾಜತಾಂತ್ರಿಕತೆಗೆ ಆದ್ಯತೆ ನೀಡುವ ಅಗತ್ಯವನ್ನು ನಾವು ಒಪ್ಪಿಕೊಂಡಿದ್ದೇವೆ” ಎಂದು ಮೋದಿ ಎಕ್ಸ್​ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link